Ramanagara City Muncipal Council Meeting: ಇತ್ತೀಚಿಗೆ ಸುರಿದ ಮಳೆಯಿಂದಾಗಿ ರಾಮನಗರ (Ramanagara) ನಗರ ವ್ಯಾಪ್ತಿಯ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿತ್ತು (Flood). ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿ ಭಾರಿ ಹಾನಿ ಮಾಡಿತ್ತು. ಕೆಲವರು ಜೀವನ ಕಟ್ಟಿಕೊಳ್ಳಲು ಇನ್ನು ಒದ್ದಾಡುತ್ತಿದ್ದಾರೆ. ಇಂಥ ಗಂಭೀರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು, ಪರಿಹಾರ ಸಂಬಂಧ ಚರ್ಚೆಯಾಗಬೇಕಿದ್ದ ಸಭೆಯಲ್ಲಿಅಧ್ಯಕ್ಷರ ಕೊಠಡಿಗೆ ಭೇಟಿ ನೀಡುವ ಅತಿಥಿಗಳು ಮತ್ತು ಸಾರ್ವಜನಿಕರಿಗೆ ಕಾಫಿ-ಟೀ ನೀಡಲು ನಿಗದಿಪಡಿಸಿರುವ ಮಾಸಿಕ 15 ಸಾವಿರ ರೂ. ಅನುದಾನ ರದ್ದುಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಪುರಪಿತೃಗಳು ಸಭಾತ್ಯಾಗ ಮಾಡಿದರು.
from India & World News in Kannada | VK Polls https://ift.tt/eARFyli