Hasanamba Temple: ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪೂರ್ವ ತಯಾರಿ ಕುರಿತು ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಅರ್ಚನಾ ಹಾಗೂ ಎಸ್‌ಪಿ ಹರಿರಾಂ ಶಂಕರ್ ಹಾಗೂ ಅಧಿಕಾರಿಗಳು ಶನಿವಾರ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದರು. ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ‘‘ಅ.13ರಿಂದ 27ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಅ.13 ಮೊದಲ ದಿನ, ಅ.27 ಕೊನೆಯ ದಿನ ಹಾಗೂ ಅ.25 ರಂದು ಸೂರ್ಯ ಗ್ರಹಣದ ಪ್ರಯುಕ್ತ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ,’’ ಎಂದು ತಿಳಿಸಿದರು.
from India & World News in Kannada | VK Polls https://ift.tt/QWgUVpc