ಮೂಗಿನ ಆಪರೇಷನ್‌ಗೆ ಹೋದ ಗೃಹಿಣಿ ಆಸ್ಪತ್ರೆಯಲ್ಲೇ ಸಾವು: ಬೈಲಹೊಂಗಲ ಸರಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ

ಬೈಲಹೊಂಗಲ(): ತಾಲ್ಲೂಕಿನ ತುರಮರಿ ಗ್ರಾಮದ ಗೃಹಿಣಿ ರಾಜಶ್ರೀ ಬಸವರಾಜ ಹದ್ದನ್ನವರ (26) ಮೂಗಿನಲ್ಲಿ ಮಾಂಸ ಬೆಳೆದಿದ್ದಕ್ಕೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ವೈದ್ಯರು ಮೂಗಿನಲ್ಲಿ ಬೆಳೆದಿರುವ ಮಾಂಸ ತೆಗೆಯಲು ಆಪರೇಷನ್ ಮಾಡುವ ಸಲುವಾಗಿ ಚಿಕಿತ್ಸಾ ಘಟಕಕ್ಕೆ ಸೇರಿಸಿದ್ದರು. ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ಗೃಹಿಣಿ ಸಾವಿಗೀಡಾಗಿದ್ದಾರೆ ಎಂದು ಮೃತ ಪತಿ, ತಂದೆ, ತಾಯಿ, ಕುಟುಂಬಸ್ಥರು ಆರೋಪಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರು ಆಸ್ಪತ್ರೆ ಆವರಣದಿಂದ ಪಾರಾಗಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮೃತ ಗೃಹಿಣಿ ಕುಟುಂಬಸ್ಥರು ಆಕ್ರಂದಿಸುತ್ತಿದ್ದಾರೆ.. ಮೃತ ಗೃಹಿಣಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.


from India & World News in Kannada | VK Polls https://ift.tt/2lcxWy5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...