ಚಿಕ್ಕಬಳ್ಳಾಪುರ: ಸೂರಿಲ್ಲದವರಿಗೆ ನಿವೇಶನ ಒದಗಿಸುವುದೇ ಸವಾಲು..!

ಆಶ್ರಯ ಯೋಜನೆಯಡಿ ಸೂರಿಲ್ಲದವರಿಗೆ ನಿವೇಶನ ಒದಗಿಸುವುದೇ ಈಗ ದೊಡ್ಡ ಸವಾಲಾಗಿದೆ. ನಗರ ಪ್ರದೇಶಗಳಲ್ಲಿ ಜಮೀನು ಸಿಗುವುದೇ ಕಷ್ಟವಾಗಿದೆ. ಜಮೀನು ಸಿಕ್ಕರೂ ನಾನಾ ತಗಾದೆಗಳಿಂದ ಸೈಟ್‌ಗಳನ್ನು ಹಂಚುವುದಕ್ಕೆ ತೀವ್ರ ಸಮಸ್ಯೆಯಾಗಿದೆ. ಜಿಲ್ಲಾದ್ಯಂತ ನಿವೇಶನ ಒದಗಿಸಲು ಒಟ್ಟು 438 ಎಕರೆ ಅವಶ್ಯಕತೆ ಇದೆ. ಆದರೆ ಮಂಜೂರಾಗಿರುವುದು 167.22 ಎಕರೆ ಮಾತ್ರ. ಇನ್ನು 270 ಎಕರೆ ಜಮೀನಿನ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಒಟ್ಟು 14,623 ಫಲಾನುಭವಿಗಳಿದ್ದು ಇದುವರೆಗೂ 303 ಮಂದಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಉಳಿದಂತೆ ನಿವೇಶನ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

from India & World News in Kannada | VK Polls https://ift.tt/6rUiEtu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...