ಈ ಶಾಲೆಯಲ್ಲಿ ಮಕ್ಕಳಿಗೆ ಇರುವುದೊಂದೇ ಕೊಠಡಿ, ಬಯಲಿನಲ್ಲೇ ಪಾಠ ಮಾಡಬೇಕಾದ ದುಸ್ಥಿತಿ

ಸರಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಯಾಕಂದ್ರೆ ಇಲ್ಲಿ ಶಿಕ್ಷಕರಿಂದ ಹಿಡಿದು ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿರುತ್ತದೆ. ಹಾಗೆಯೇ ಹಾನಗಲ್ ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕೊಠಡಿ ಇದ್ದು, ಅದರಲ್ಲೇ 1 ರಿಂದ 5ನೇ ತರಗತಿ ಪಾಠ ನಡೆಯುತ್ತಿದೆ. ಅಜಗುಂಡಿಕೊಪ್ಪ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಜನರು ಹೆಚ್ಚಾಗಿ ವಾಸಿಸುತ್ತಾರೆ. ಇಲ್ಲಿನ ಶಾಲೆಗೆ ಮೂರು ಶಿಕ್ಷಕರಿದ್ದು, 80 ವಿದ್ಯಾರ್ಥಿಗಳಿದ್ದಾರೆ. ಈಗಿರುವ ಒಂದು ಕೊಠಡಿ 16 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಆರ್‌ಸಿಸಿ ಕಟ್ಟಡದ ಈ ಕೊಠಡಿ ಅಲ್ಲಲ್ಲಿ ಬಿರುಕು ಬಿಟ್ಟಿದೆ.

from India & World News in Kannada | VK Polls https://ift.tt/QRi7JVx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...