ಇಸ್ಲಾಮಾಬಾದ್: ಅಮೆರಿಕದ ಹೂಸ್ಟನ್‌ನಲ್ಲಿ ನಡೆದ '' ಕಾರ್ಯಕ್ರಮ ಯಶಸ್ಸು ಕಂಡು ನೆರೆಯ ದೇಶ ಪಾಕ್ ಹತಾಸೆ ವ್ಯಕ್ತಪಡಿಸಿದೆ. ಹೌದು, ಭಾರತದ ಪ್ರಧಾನಿ ಜನಪ್ರಿಯತೆ ಹಾಗೂ 'ಹೌಡಿ ಮೋದಿ' ಎಂಬ ಯಶಸ್ವಿ ಕಾರ್ಯಕ್ರಮದಂದ ಹೊಟ್ಟೆ ಉರಿದುಕೊಳ್ಳುತ್ತಿರುವ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ , ಇದೊಂದು ಫ್ಲಾಪ್ ಶೋ ಎಂದು ಕರೆದಿದ್ದಾರೆ. 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಮೋದಿಯ ಪ್ರದರ್ಶನ ನಿರಾಶಾದಾಯಕವಾಗಿದೆ. ಬಿಲಿಯನ್‌ಗಳಷ್ಟು ಹಣ ಚೆಲ್ಲಿ ಅಮೆರಿಕಾ, ಕೆನಡಾ ಮತ್ತು ಇತರ ಹಲವು ದೇಶಗಳಿಂದ ಜನರನ್ನು ಒಟ್ಟುಗೂಡಿಸಲಾಗಿದ್ದು ಇಷ್ಟೇ. ಹಣದಿಂದ ಎಲ್ಲವನ್ನು ಕೊಂಡು ಕೊಳ್ಳಲಾಗದು ಎಂಬುದನ್ನು ತೋರಿಸಿದೆ' ಎಂದು ಫವಾದ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಚಂದ್ರಯಾನ್-2 ಕುರಿತು ಇಮ್ರಾನ್ ಖಾನ್ ಸಂಪುಟದ ಸಚಿವ ಫವಾದ್ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಹತಾಸೆ ವ್ಯಕ್ತಪಡಿಸುವ ಮೂಲಕ ನೆಟ್ಟಿಗರ ಕಡೆಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಪಾಕಿಸ್ತಾನದ ಆರ್ಥಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಾ ಪ್ರವಾಸಕ್ಕೆ ಸೌದಿ ಅರೇಬಿಯಾದ ರಾಜ ನೆರವಾಗಿದ್ದಾರೆ. ಪಾಕ್ ಪ್ರಧಾನಿಯನ್ನು ತಮ್ಮ ವಿಶೇಷ ವಿಮಾನದಲ್ಲಿ ಸೌದಿ ದೊರೆ ಅಮೆರಿಕಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಅಮೆರಿಕಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕ ಗೌರವ, ಪಾಕ್ ಪ್ರಧಾನಿಗೆ ಸಿಗುತ್ತಿಲ್ಲ ಎನ್ನುವುದು ಪಾಕಿಸ್ತಾನದ ಹತಾಶೆಗೆ ಕಾರಣವಾಗಿದೆ.
from India & World News in Kannada | VK Polls https://ift.tt/2McVKvn