370ನೇ ವಿಧಿ ರದ್ದತಿ ಪ್ರತೀಕಾರವಾಗಿ ಮೋದಿ, ದೋವಲ್ ಹತ್ಯೆಗೆ ಜೈಷೆ ಉಗ್ರ ಸಂಘಟನೆ ಸಂಚು

ಹೊಸದಿಲ್ಲಿ: ಪ್ರಧಾನಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅವರನ್ನು ಗುರಿಯಾಗಿಸಿಕೊಂಡ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ವಿಶೇಷ ತಂಡ ಸಿದ್ಧಪಡಿಸುತ್ತಿದೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿಗೆ ಪ್ರತೀಕಾರವಾಗಿ ಜೈಷೆ ಮಹಮ್ಮದ್ ಭಯೋತ್ಪಾದಕ ಸಂಘಟನೆ ಭಾರೀ ಸಂಚು ರೂಪಿಸುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ) ಪ್ರಮುಖ ಅಧಿಕಾರಿಯೊಬ್ಬರು ಈ ದಾಳಿ ಕುರಿತು ಸಿದ್ಧತೆ ನಡೆಸಲು ಜೈಷೆ ಉಗ್ರ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಈ ಸಂಬಂಧ ಜಮ್ಮು, ಅಮೃತಸರ, ಪಠಾಣ್‌ಕೋಟ್, ಜೈಪುರ, ಗಾಂಧಿನಗರ, ಕಾನ್‌ಪುರ್, ಮತ್ತು ಲಖನೌ ಸೇರಿದಂತೆ ದೇಶದ 30 ಸೂಕ್ಷ್ಮ ನಗರಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.


from India & World News in Kannada | VK Polls https://ift.tt/2mu8Wmk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...