ವೈದ್ಯರ ಮೇಲೆ ಹಲ್ಲೆ ನಡೆಸಿದರೆ 10 ವರ್ಷ ಜೈಲು, 10 ಲಕ್ಷ ದಂಡ

ಹೊಸದಿಲ್ಲಿ: ಹುಷಾರ್! ಇನ್ನು ಮುಂದೆ ಕರ್ತವ್ಯ ನಿರತ ಅಥವಾ ಆರೋಗ್ಯ ವೃತ್ತಿಪರರ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದರೆ 10 ವರ್ಷ ಶಿಕ್ಷೆ ಅಥವಾ 10 ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ. ವೈದ್ಯರ ಮೇಲಿನ ದಾಳಿ , ಹಲ್ಲೆಯಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂಥ ಘಟನೆಗಳ ತಡೆಗೆ ಕಠಿಣ ಕೇಂದ್ರೀಯ ಕಾನೂನು ರೂಪಿಸಲು ಮುಂದಾಗಿದೆ. ಆರೋಗ್ಯ ವೃತ್ತಿಪರರನ್ನು ಹಿಂಸಾಚಾರದಿಂದ ರಕ್ಷಿಸುವ ಪ್ರಯತ್ನದಲ್ಲಿ , ಅವರ ವಿರುದ್ಧದ ಅಪರಾಧ ಕೃತ್ಯವನ್ನು ಅರಿವಿದ್ದೇ ಮಾಡಿದ ಮತ್ತು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲು ಹೊಸ ಕಾನೂನನ್ನು ಪ್ರಸ್ತಾಪಿಸಿದೆ. ಇದು ಜಾರಿಯಾದಲ್ಲಿ ಅಪರಾಧಿಗೆ 10 ವರ್ಷ ಜೈಲು ಅಥವಾ 10 ಲಕ್ಷ ರೂಪಾಯಿ ದಂಡದ ಶಿಕ್ಷೆಯಾಗಬಹುದು. ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಕ್ಕಾಗಿ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ವಿಧೇಯಕ-2019ದ ಕರಡು ಶಾಸನದ ನಿಯಮಗಳನ್ನು ತೆರೆದಿಟ್ಟಿದೆ. ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ. ಕರಡು ಮಸೂದೆಯು ಹೀಗೆ ಹೇಳುತ್ತದೆ, ಭಾರತೀಯ ದಂಡ ಸಂಹಿತೆ 320ನೇ ವಿಧಿ ಆಧಾರದ ಮೇಲೆ ರಚಿಸಲಾಗಿರುವ ಈ ಮಸೂದೆಯಲ್ಲಿ, ಸೇವಾವಧಿ ವೇಳೆ ರೋಗಿಗಳ ಕಡೆಯವರಿಂದ ಅಥವಾ ಇನ್ನಿತರರಿಂದ ಆರೋಗ್ಯ ವೃತ್ತಿಪರರ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ಅಥವಾ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ ದಂಡವನ್ನು ಹೇರಬಹುದು.


from India & World News in Kannada | VK Polls https://ift.tt/2Uoqyg2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...