
ಮುಂಬಯಿ: ನವಿ ಮುಂಬಯಿನ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ () ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಮೂವರು ವ್ಯಕ್ತಿಗಳು ಮೃತಪಪಟ್ಟಿದ್ದಾರೆ. ನವಿ ಮುಂಬಯಿಗೆ ಸಮೀಪದಲ್ಲಿರುವ ಉರಾನ್ ಪ್ರದೇಶದ ಒಎನ್‌ಜಿಸಿ ಗ್ಯಾಸ್ ಸಂಸ್ಕರಣಾ ಘಟಕದಲ್ಲಿ ಬೆಳಗ್ಗೆ ಸುಮಾರು 7 ಗಂಟೆಗೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅವಘಡದಲ್ಲಿ ಮೂವರು ಮೃತಪಟ್ಟಿರುವುದಾಗಿ ನವಿ ಮುಂಬಯಿನ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಘಟಕದ ಸುತ್ತ ಮುತ್ತಲಿನ ಒಂದು ಕಿಲೋಮೀಟರ್ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಘಟನೆ ಬೆನ್ನಿಗೆ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಅಗ್ನಿ ಅವಘಡದಿಂದ ತೈಲ ಸಂಸ್ಕರಣೆಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಕಂಪನಿ ಟ್ಟೀಟ್ ಮಾಡಿದ್ದು, ಗ್ಯಾಸನ್ನು ಗುಜರಾತ್‌ನ ಹಝಾರಿಯಾ ಘಟಕಕ್ಕೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದೆ. ಓಎನ್‌ಜಿಸಿ ದೇಶದ ಅತೀ ದೊಡ್ಡ ಕಚ್ಛಾ ತೈಲ ಮತ್ತು ಗ್ಯಾಸ್ ಕಂಪನಿಯಾಗಿದ್ದು ದೇಶಿಯ ಉತ್ಪಾದನೆಯ ಶೇಕಡಾ 70ರಷ್ಟು ಇದೇ ಕಂಪನಿ ಸಂಸ್ಕರಿಸುತ್ತದೆ.
from India & World News in Kannada | VK Polls https://ift.tt/34hkE53