ಧೋನಿ, ದಾದಾ, ಅಜರ್ ಇವರ‍್ಯಾರು ಅಲ್ಲ; ಕಿಂಗ್ ಕೊಹ್ಲಿಯೇ ಭಾರತದ ಯಶಸ್ವಿ ಟೆಸ್ಟ್ ನಾಯಕ

ಕಿಂಗ್‌ಸ್ಟನ್: ಇದೀಗ ಅಧಿಕೃತವಾಗಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯೇ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಪಟ್ಟ ಆಲಂಕರಿಸಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ 257 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ಗೈದಿತ್ತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವದಲ್ಲಿ ಭಾರತಕ್ಕೆ ಒಲಿದ 28ನೇ ಗೆಲವುವಾಗಿದೆ. ಈ ಮೂಲಕ ಅವರ 27 ಟೆಸ್ಟ್ ನಾಯಕತ್ವದ ಗೆಲುವನ್ನು ಮುರಿದಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರ ಪಟ್ಟಿ ಇಂತಿದೆ: ವಿರಾಟ್ ಕೊಹ್ಲಿ: 28 ಗೆಲುವು (48 ಟೆಸ್ಟ್) ಮಹೇಂದ್ರ ಸಿಂಗ್ ಧೋನಿ: 27 ಗೆಲುವು (60 ಟೆಸ್ಟ್) ಸೌರವ್ ಗಂಗೂಲಿ: 21 ಗೆಲುವು (49 ಟೆಸ್ಟ್) ಮೊಹಮ್ಮದ್ ಅಜರುದ್ದೀನ್: 14 ಗೆಲುವು (47 ಟೆಸ್ಟ್)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZLosrE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...