IPL 2021: ನಾವು ಮಾಡಿದ ಈ ತಪ್ಪಿನಿಂದ ಸೋಲಬೇಕಾಯಿತು ಎಂದ ಮಾರ್ಗನ್‌!

ದುಬೈ: ಪಂಜಾಬ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ ಸೋಲು ಅನುಭವಿಸಿದ ಬಳಿಕ ಬೇಸರ ಹೊರಹಾಕಿದ ತಂಡದ ನಾಯಕ , ಹಲವು ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರಿಂದ ನಮ್ಮ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಒಟ್ಟು ಐದು ಕ್ಯಾಚ್‌ಗಳನ್ನು ಕೈ ಚೆಲ್ಲಿತ್ತು. ಈ ಕಾರಣದಿಂದಾಗಿ ಕೆಕೆಆರ್‌, 165 ರನ್‌ಗಳಿಗೆ ಕೆ.ಎಲ್‌ ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್ ತಂಡವನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಐಯಾನ್‌ ಮಾರ್ಗನ್‌, ಮಯಾಂಕ್‌ ಅಗರ್ವಾಲ್‌ ಅವರ ಕ್ಯಾಚ್‌ ಅನ್ನು ಕೈಚೆಲ್ಲಿದ್ದರು. 10ನೇ ಓವರ್‌ನಲ್ಲಿ ನಿಕೋಲಸ್‌ ಪೂರನ್‌ ಅವರ ಕ್ಯಾಚ್‌ ಅನ್ನು ರಾಹುಲ್‌ ತ್ರಿಪಾಠಿ ಬಿಟ್ಟಿದ್ದರು ಹಾಗೂ ಡೀಪ್‌ನಲ್ಲಿ ವೆಂಕಟೇಶ್‌ ಅಯ್ಯರ್‌ ಕೂಡ ಒಂದು ಕ್ಯಾಚ್‌ ಅನ್ನು ಕೈ ಚೆಲ್ಲಿದ್ದರು. ನಂತರ, ರಾಹುಲ್‌ ತ್ರಿಪಾಠಿ ಅವರ ಅದ್ಭುತವಾದ ಕ್ಯಾಚ್‌ ಅನ್ನು ಟಿವಿ ಅಂಪೈರ್ ನಾಟೌಟ್‌ ನೀಡಿದ್ದರು. ನಂತರ ಫೈನಲ್‌ ಓವರ್‌ನಲ್ಲಿ ಶಾರೂಖ್‌ ಖಾನ್‌ ಅವರ ಕ್ಯಾಚ್‌ ಅನ್ನು ರಾಹುಲ್‌ ತ್ರಿಪಾಠಿ ಕೂದಲೆಳೆಯ ಅಂತರದಲ್ಲಿ ಬಿಟ್ಟಿದ್ದರು ಹಾಗೂ ಚೆಂಡು ಬೌಂಡರಿ ಗೆರೆ ದಾಟಿತ್ತು. ಅಷ್ಟೇ ಅಲ್ಲದೆ, ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಕೂಡ ಶಾರ್ಟ್‌ ಫೈನ್‌ ಲೆಗ್‌ನಲ್ಲಿ ಕೆ.ಎಲ್‌ ರಾಹುಲ್‌ಗೆ ಜೀವದಾನ ನೀಡಿದ್ದರು. ಈ ಎಲ್ಲಾ ಕ್ಯಾಚ್‌ಗಳನ್ನು ಬಿಟ್ಟಿದ್ದರಿಂದ ಕೆಕೆಆರ್‌ ಪಂದ್ಯದಲ್ಲಿ ಸೋಲಬೇಕಾಯಿತು. ಪಂದ್ಯದ ಬಳಿಕ ಮಾತನಾಡಿದ ಐಯಾನ್‌ ಮಾರ್ಗನ್‌ ನಾವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ. "ಆರಂಭದಲ್ಲಿ ಉತ್ತಮ ಫೀಲ್ಡಿಂಗ್‌ ನಮ್ಮದಾಗಿತ್ತು. ಆದರೆ, ಕೆಲ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದೇವೆ. ಆರಂಭದಲ್ಲಿ ನಾನು ಹಾಗೂ ನಂತರ ಹಲವರು ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ. ಇದು ನಮ್ಮ ಪಾಲಿಗೆ ದುಬಾರಿಯಾಯಿತು," ಎಂದು ಬೇಸರ ಹೊರಹಾಕಿದರು. "ಅಂತ್ಯದಲ್ಲಿ ನಾವು ಪಂದ್ಯವನ್ನು ಇನ್ನಷ್ಟು ಟೈಟ್‌ ಮಾಡಿದ್ದರೆ, ಕೆಲ ವಿಕೆಟ್‌ಗಳನ್ನು ಪಡೆದುಕೊಳ್ಳುತ್ತಿದ್ದೆವು ಹಾಗೂ ಇದು ನಮ್ಮ ಗೆಲುವಿಗೆ ಸಹಾಯವಾಗುತ್ತಿತ್ತು. ಇದರ ಹೊರತಾಗಿಯೂ ನಾವು ಕಠಿಣ ಹೋರಾಟ ನಡೆಸಿದ್ದೇವೆ ಹಾಗೂ ಅದರಲ್ಲೂ ನಮ್ಮ ಬ್ಯಾಟಿಂಗ್‌ ಉತ್ತಮವಾಗಿತ್ತು.ಅಷ್ಟೇ ಅಲ್ಲದೆ, ನಮ್ಮ ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ. ಮತ್ತೊಂದೆಡೆ ಪಂಜಾಬ್‌ ಕಿಂಗ್ಸ್ ಕೂಡ ಉತ್ತಮ ಹೋರಾಟ ನಡೆಸಿದೆ. ಆದರೆ, ನಾವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ನಮ್ಮ ಪಾಲಿಗೆ ದುಬಾರಿಯಾಯಿತು," ಎಂದು ಹೇಳಿದರು. ರಾಹುಲ್‌ ತ್ರಿಪಾಠಿ ಪಡೆದಿದ್ದ ಕೆಎಲ್‌ ರಾಹುಲ್ ಅವರ ಕಠಿಣ ಕ್ಯಾಚ್‌ ಅನ್ನು ಮೂರನೇ ಅಂಪೈರ್‌ ನಾಟೌಟ್‌ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಮಾರ್ಗನ್‌, "ನೈಜ ಸಮಯದಲ್ಲಿ ಇದು ಔಟ್‌ ಎಂದು ನನಗೆ ಅನಿಸುತ್ತಿತ್ತು. ನಿಸ್ಸಂಶಯವಾಗಿ ಸಂಗತಿಗಳನ್ನು ನಿಧಾನಗೊಳಿಸಿದಾಗ ಮತ್ತು ಅದನ್ನು ವಿಶ್ಲೇಷಿಸಿದಾಗ ಮೂರನೇ ಅಂಪೈರ್ ಬೇರೆ ರೀತಿಯಲ್ಲಿ ಯೋಚಿಸಿದ್ದರು ಹಾಗೂ ಅವರ ನಿರ್ಧಾರವನ್ನೇ ಅಂತಿಮಗೊಳಿಸಲಾಗಿದೆ. ಆದರೆ, ಈ ವಿಕೆಟ್‌ ನಮಗೆ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು," ಎಂದು ತಿಳಿಸಿದರು. ಪಂಜಾಬ್‌ ಕಿಂಗ್ಸ್ ವಿರುದ್ಧ ಕೆಕೆಆರ್‌ ಸೋಲು ಅನುಭವಿಸಿದ ಹೊರತಾಗಿಯೂ ಪ್ಲೇ ಆಫ್ಸ್‌ ಆಸೆಯನ್ನು ಜೀವಂತವಾಗಿದೆ. ಆದರೆ, ಇನ್ನುಳಿದ ಎಲ್ಲಾ ಎರಡೂ ಪಂದ್ಯಗಳಲ್ಲಿ ಜಯ ಗಳಿಸಬೇಕಷ್ಟೆ. "ಯುಎಇ ಚರಣದಲ್ಲಿ ನಾವು ಶ್ರೇಷ್ಠ ಪ್ರದರ್ಶನವನ್ನು ತೋರಿದ್ದೇವೆ ಹಾಗೂ ಶುಕ್ರವಾರ ರಾತ್ರಿಯ ಪಂದ್ಯದಿಂದಲೂ ನಾವು ಪಾಸಿಟಿವ್‌ ಅನ್ನು ಪಡೆಯುವ ಅಗತ್ಯವಿದೆ. ನಮಗೆ ಇನ್ನೂ ಎರಡು ಪಂದ್ಯಗಳಿದ್ದು, ಕಠಿಣ ಹೋರಾಟ ನಡೆಸುತ್ತೇವೆ ಹಾಗೂ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದುಕೊಳ್ಳುತ್ತೇವೆ," ಎಂದು ಐಯಾನ್‌ ಮಾರ್ಗನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3iqxhn6

ಗಣಿ ನಾಡಿಗೆ ಮುಖ್ಯಮಂತ್ರಿ, ಸಂಪುಟ ಸಚಿವರ ಆಗಮನ; ತೇಪೆ ಹಾಕಲು ರೋಡಿಗಿಳಿದ ಪಾಲಿಕೆ!

ಮಾರುತಿ ಸುಣಗಾರ ಬಳ್ಳಾರಿ: ನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತಗ್ಗು, ಗುಂಡಿಗಳು ಬಿದ್ದ ರಸ್ತೆಗಳಿಗೆ ಮುಕ್ತಿ ಸಿಕ್ಕಿದೆ. ಮೇಲ್ನೋಟಕ್ಕೆ ರಸ್ತೆಗಳು ಹೊಳೆಯುತ್ತಿದ್ದರೆ, ನಗರದ ಒಳ ರಸ್ತೆಗಳು ಕೊಳಕಿನಿಂದ ಕೂಡಿವೆ. ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿರುವ, ಸಚಿವರ ತವರೂರು ಹಾಗೂ ಜಿಲ್ಲಾ ಕೇಂದ್ರವಾದ ಬಳ್ಳಾರಿ ನಗರದ ತೆಗ್ಗು-ಗುಂಡಿಗಳಿಂದ ತುಂಬಿದ್ದ ರಸ್ತೆಗಳಿಗೆ ಡಾಂಬರ್‌ ಕಾಣದಷ್ಟು ಮಣ್ಣಿನಿಂದ ಕೂಡಿದ , ಆರಂಭದಲ್ಲಿ ಉತ್ತಮವಾಗಿ ಕಂಡರೂ ಮುಂದೆ ತೆರಳುತ್ತಿದ್ದಂತೆ ತೆಗ್ಗು ಗುಂಡಿಗಳು ಸ್ವಾಗತಿಸುತ್ತಿವೆ. ಓಡಾಟಕ್ಕೆ ಸರ್ಕಸ್‌ ಜನರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆಗಿಳಿಯುವ ವಾಹನ ಸವಾರರು ನಿತ್ಯ ಸರ್ಕಸ್‌ ನಡೆಸುವಂತ ಸ್ಥಿತಿ ಜಿಲ್ಲಾಕೇಂದ್ರ ಬಳ್ಳಾರಿ ನಗರದಲ್ಲಿ ಸೃಷ್ಟಿಯಾಗಿದೆ. ನಾಡಿನ ದೊರೆ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರಕ್ಕೆ ಭೇಟಿ ನೀಡಲಿರುವುದರಿಂದ ನಗರ ಸೌಂದರ್ಯೀಕರಣಕ್ಕೆ ಮಹಾನಗರ ಪಾಲಿಕೆ 15 ಲಕ್ಷ ರೂ.ಕಾಯ್ದಿರಿಸಿ ತರಾತುರಿಯ ಸ್ವಚ್ಛತೆಗೆ ಮುಂದಾಗಿದೆ. ನಗರದ ಗಾಂಧಿನಗರ, ಎಸ್ಪಿ ಸರ್ಕಲ್‌, ಕೌಲ್‌ ಬಜಾರ್‌, ಬೆಂಗಳೂರು ರಸ್ತೆ ಸೇರಿ ವಿವಿಧ ಕಡೆ ಸಂಚರಿಸುವ ಪ್ರಯಾಣಿಕರಿಗೆ ಅಪಘಾತದ ಸನ್ನಿವೇಶಗಳು ನಿತ್ಯನೂತನವಾಗಿವೆ. ರಸ್ತೆಗಳಲ್ಲಿ ಸಂಚರಿಸುತ್ತಿದ್ದಂತೆ ನಿತ್ಯ ವಾಹನ ಸವಾರರು ಇನ್ನಿಲ್ಲದ ಸರ್ಕಸ್‌ ನಡೆಸಲು ಸಿದ್ಧರಾಗಿ ರೋಡ್‌ಗೆ ಇಳಿಯಬೇಕಿದೆ. ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣ ತಗ್ಗು ಗುಂಡಿಗಳಿಂದ ಕೂಡಿವೆ. ಅನೇಕ ಬಾರಿ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಇದರಿಂದ ಸ್ಥಳೀಯ ಆಡಳಿತಕ್ಕೆ ದಿನವಿಡೀ ಶಾಪ ಹಾಕುತ್ತಿದ್ದ ಜನತೆ ಈಗ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ನಗರದ ಕೆಲ ಪ್ರಮುಖ ರಸ್ತೆಗಳ ದುರಸ್ತಿಗೆ ಸ್ಥಳೀಯ ಪಾಲಿಕೆ ಆಡಳಿತ ಮುಂದಾಗಿದ್ದು, ತಗ್ಗು-ಗುಂಡಿಗಳಿಗೆ ಮುಕ್ತಿ ದೊರಕಿದಂತಾಗಿದೆ. ರಸ್ತೆಗೆ ದುರಸ್ತಿ ಭಾಗ್ಯ ಬಳ್ಳಾರಿಯ ವೀವಿ ಸಂಘದ ಎಸ್‌ಕೆ ಮೋದಿ ಸ್ಕೂಲ್‌ ಕಟ್ಟಡ ಉದ್ಘಾಟನೆಗೆ ಅ.3ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸುಮಾರು 6ಕ್ಕೂ ಅಧಿಕ ಸಚಿವರು ನಗರಕ್ಕೆ ಭೇಟಿ ನೀಡಲಿದ್ದಾರೆ. ಇದರಿಂದ ಎಚ್ಚೆತು ಮಹಾನಗರ ಪಾಲಿಕೆ ಅಧಿಕಾರಿಗಳು, ಜಿಲ್ಲಾಡಳಿತ ನಗರದ ರಸ್ತೆಗಳ ದುರಸ್ತಿಗೆ ಮುಂದಾಗಿದೆ. ಅನೇಕ ತಿಂಗಳಿಂದ ರಸ್ತೆಗಳಲ್ಲಿ ತಗ್ಗು-ಗುಂಡಿಗಳು, ಧೂಳಿನಿಂದ ಬೇಸತ್ತಿದ್ದ ನಗರದ ಜನತೆ ಅನೇಕ ಬಾರಿ ಪ್ರತಿಭಟನೆಗಳು, ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗದ ಪಾಲಿಕೆ ಈಗ ಸಿಎಂ ಆಗಮನದಿಂದ ರಸ್ತೆ ದುರಸ್ತಿಗೆ ಮುಂದಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಲ್ಲಿ ದುರಸ್ತಿ? ಸಿಎಂ ಬರುವ ಮುಖ್ಯ ಹಾದಿಗಳು ದುರಸ್ತಿ ಭಾಗ್ಯ ಕಾಣಲಿದ್ದು, ಬಳ್ಳಾರಿ ನಗರದ ಮುಖ್ಯ ರಸ್ತೆಗಳಲ್ಲಿರುವ ತೆಗ್ಗು-ಗುಂಡಿಗಳನ್ನು ಮುಚ್ಚಲು ಪಾಲಿಕೆ 15ಲಕ್ಷ ರೂ. ಮೀಸಲಿಟ್ಟು ಕೆಲಸ ನಿರ್ವಹಿಸಲು ಮುಂದಾಗಿದೆ. ಅ.3ಕ್ಕೆ ಸಿಎಂ ಬರುವ ನಗರದ ಎಸ್ಪಿ ಸರ್ಕಲ್‌, ಕುಮಾರ ಸ್ವಾಮಿ ದೇವಸ್ಥಾನ ರಸ್ತೆ, ಕನಕ ದುರ್ಗಮ್ಮ ರಸ್ತೆ ಸೇರಿದಂತೆ ನಾನಾ ಮುಖ್ಯ ರಸ್ತೆಗಳ ದುರಸ್ತಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಡೈವರ್ಷನ್‌ ನಾಮಫಲಕವಿಲ್ಲ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ರಸ್ತೆ, ಕುಡಿವ ನೀರು, ಒಳಚರಂಡಿ ಸೇರಿ ನಾನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ರಸ್ತೆ ಬದಿ, ಮಧ್ಯೆ ಗುಂಡಿಗಳನ್ನು ಅಗೆಯಲಾಗುತ್ತಿದೆ. ಕಾಮಗಾರಿ ಆರಂಭ ವೇಳೆ ನಾನಾ ನಿಯಮ ಸಹ ರೂಪಿಸಲಾಗಿರುತ್ತದೆ. ಆದರೆ, ಇಲ್ಲಿ ಕಾಮಗಾರಿ ಪೂರ್ಣಗೊಂಡರೂ ಅಗೆದಿದ್ದ ರಸ್ತೆಯನ್ನು ಪುನಃ ದುರಸ್ತಿಗೊಳಿಸುವ ಗೋಜಿಗೆ ಮುಂದಾಗುತ್ತಿಲ್ಲ. ಇದಲ್ಲದೆ, ಕಾಮಗಾರಿ ನಿರ್ವಹಣೆ ವೇಳೆ ಡೈವರ್ಷನ್‌ ನಾಮಫಲಕ ಸಹ ಹಾಕಿಲ್ಲ. ಇದರಿಂದ ವಾಹನ ಸವಾರರು, ಪಾದಚಾರಿಗಳು ಅನೇಕ ಬಾರಿ ತಿಳಿಯದೇ ತೆರಳಿ ಯಡವಟ್ಟಿಗೆ ಸಿಲುಕಿಕೊಂಡ ಪ್ರಸಂಗಗಳು ನಡೆದಿವೆ. ಮಣ್ಣಿನ ರಸ್ತೆಗಳಿಂದ ಧೂಳು ನಗರದ ಬಹುತೇಕ ಸಿಮೆಂಟ್‌, ಡಾಂಬರ್‌ ರಸ್ತೆಗಳು ಈಗ ಮಣ್ಣಿನ ರಸ್ತೆಗಳಾಗಿ ಪರಿವರ್ತನೆಯಾಗಿವೆ. ಇದರಿಂದ ವಾಹನ ಸಂಚರಿಸಿದ ವೇಳೆ ಧೂಳು ವಿಪರೀತವಾಗಿದ್ದು ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಧೂಳಿನ ಮಧ್ಯೆ ಸಂಚಾರ ರಸ್ತೆ ಬದಿಯಲ್ಲಿ ಆಗಾಗ ಕೈಗೆತ್ತಿಕೊಳ್ಳುವ ಕಾಮಗಾರಿಯಿಂದ ಹೊರ ತೆಗೆದ ಮಣ್ಣನ್ನು ಹಾಗೇ ಬಿಡುವುದರಿಂದ ಧೂಳಿಗೆ ಕಾರಣವಾಗುತ್ತಿದೆ. ಹೀಗಾಗಿ ಅನಿವಾರ್ಯದ ನಡುವೆ ಜನತೆ, ವಾಹನ ಸವಾರರು ಧೂಳಿನ ಮಧ್ಯೆದಲ್ಲಿ ಸಂಚರಿಸುವಂತಾಗಿದೆ. ಇನ್ನುಳಿದ ರಸ್ತೆಗಳಿಗೆ ಮುಕ್ತಿ ಯಾವಾಗ? ನಗರದಲ್ಲಿ ಬಹುತೇಕ ರಸ್ತೆಗಳು ತಗ್ಗು, ಗುಂಡಿಗಳಿಂದ ಕೂಡಿವೆ. ರಸ್ತೆಯಲ್ಲಿಯೇ ರಾಶಿ ರಾಶಿ ಮಣ್ಣು ಸಂಗ್ರಹಗೊಂಡಿದೆ. ಮಳೆಗಾಲ ಬಂತೆಂದರೆ ಸಾಕು ರಸ್ತೆಗಳಲ್ಲಿನ ಓಡಾಟ ದೇವರಿಗೆ ಪ್ರೀತಿ ಎಂಬಂತಾಗಿದೆ. ಜಿಲ್ಲಾ ಕೇಂದ್ರಕ್ಕೆ ರಾಜ್ಯ ಮಟ್ಟದ ಗಣ್ಯ ವ್ಯಕ್ತಿಗಳು ಬಂದರಷ್ಟೇ ರಸ್ತೆಗಳ ದುರಸ್ತಿ, ನಗರ ಸ್ವಚ್ಛತೆ ಎಂಬಂತಾಗಿದೆ. ಇದು ಕೆಲವೇ ದಿನಗಳಿಗೆ ಮಾತ್ರ ಸೀಮಿತವಾಗಿದ್ದು, ನಂತರ ಮತ್ತದೆ ಗೋಳು ಜನರಿಗೆ ತಪ್ಪಿದಲ್ಲ. ಅಸ್ತವ್ಯಸ್ತ ರಸ್ತೆಗಳ ಕಥೆ ನಗರದ ಬಹುತೇಕ ಕಡೆಗಳಲ್ಲಿ ಇಂದಿಗೂ ಕಸ ವಿಲೇವಾರಿ, ಸಿಸಿ ರಸ್ತೆಗಳ ದುರಸ್ತಿ, ರಸ್ತೆಗಳಲ್ಲಿ ಚರಂಡಿ ನೀರು ಹರಿಯುವುದು, ಮನೆಗಳಿಗೆ ಚರಂಡಿ ನೀರು ನುಗ್ಗುವುದು ಸೇರಿ ನಾನಾ ಸಮಸ್ಯೆಗಳಿಗೆ ಈವರೆಗೂ ಮುಕ್ತಿಯಿಲ್ಲದಂತಾಗಿದೆ. ಈ ಬಗ್ಗೆ ಅನೇಕ ಬಾರಿ ನಾನಾ ಸಂಘಟನೆಗಳು ಹೋರಾಟ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಂತಾಗಿದೆ. ನಗರ ಸ್ವಚ್ಛತೆ, ಸೌಂದರ್ಯೀಕರಣಕ್ಕೆ ಮತ್ತೆ ನಗರಕ್ಕೆ ಅದ್ಯಾವ ನಾಯಕರು ಬರುತ್ತಾರೋ ಎಂದು ನಗರದ ಜನತೆ ಎದುರು ನೋಡುವಂತಾಗಿದೆ.


from India & World News in Kannada | VK Polls https://ift.tt/3B2wvUw

ಬಿಜೆಪಿಯನ್ನು 'ತುಕ್ಡೆ ತುಕ್ಡೆ' ಮಾಡುತ್ತೇನೆ: ಕಾಂಗ್ರೆಸ್ ಮುಖಂಡ ಕನ್ನಯ್ಯ ಕುಮಾರ್

ಹೊಸದಿಲ್ಲಿ: ತಮ್ಮ ವಿರುದ್ಧ ದೇಶದ್ರೋಹದ ಆರೋಪದ ಮಾಡಿದ್ದ ಬಿಜೆಪಿಯನ್ನು '' ಮಾಡುವುದಾಗಿ ಕೆಲವು ದಿನಗಳ ಹಿಂದಷ್ಟೇ ಸೇರ್ಪಡೆಯಾದ ಹೇಳಿದ್ದಾರೆ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬಹುದು ಎಂದು ಅವರು ದೃಢ ನಂಬಿಕೆ ವ್ಯಕ್ತಪಡಿಸಿದ್ದಾರೆ. "ಬಿಜೆಪಿ ನನ್ನನ್ನು 'ತುಕ್ಡೆ ತುಕ್ಡೆ ಗ್ಯಾಂಗ್' ಎಂದು ಕರೆಯುತ್ತದೆ. ನಾನು ಪಾಲಿಗೆ ತುಕ್ಡೆ ತುಕ್ಡೆ. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ. ಈ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸಿದೆಯೇ ಹೊರತು ಗಾಂಧಿಯನ್ನಲ್ಲ. ಅವರು ಅಮೆರಿಕ ಅಧ್ಯಕ್ಷರ ಮುಂದೆ ಮಾತ್ರವೇ ಗಾಂಧಿಯನ್ನು ಹೊಗಳುತ್ತಾರೆ" ಎಂದು ಕನ್ನಯ್ಯ ಕುಮಾರ್ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು 'ನಾಥೂರಾಮ್-ವಿನಾಶದ ಜೋಡಿ' ಎಂದು ವ್ಯಂಗ್ಯವಾಡಿರುವ ಕನ್ನಯ್ಯ, ಬಿಜೆಪಿ ಸಿದ್ಧಾಂತವು ದೇಶದ ಪಿತಾಮಹನ ಆಶಯಗಳಿಗೆ ಬಹಿರಂಗವಾಗಿಯೇ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. 'ಅನೇಕ ಯುವಜನರಂತೆ, ಈಗ ತಡವಾಗುತ್ತಿದೆ ಎಂದು ನನಗೂ ಅನಿಸುತ್ತಿದೆ. ದೇಶದ ಸ್ವಾತಂತ್ರ್ಯವನ್ನು ಪಡೆಯಲು, ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಡಿದ ಪರಂಪರೆಯುಳ್ಳ ಪಕ್ಷವು ಅತಿ ಹೆಚ್ಚು ಶಕ್ತಿಶಾಲಿಯಾಗಿರಬೇಕು. ಇಂದು ರಾಜಕೀಯ ಬೆಳವಣಿಗೆಯ ಮೇಲೆ ಗಮನಹರಿಸುವ ಜನರು ಮಾತ್ರವೇ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ ಪಕ್ಷದಲ್ಲಿನ ಬಿಕ್ಕಟ್ಟಿನ ವಿಚಾರವಾಗಿ ಟೀಕೆಗಳಿಗೆ ಒಳಗಾಗುತ್ತಿರುವ ಪಕ್ಷದ ನಾಯಕತ್ವದ ಸಮರ್ಥನೆಗೆ ಕನ್ನಯ್ಯ ಧಾವಿಸಿದ್ದಾರೆ. 'ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುವುದು ಬಿಜೆಪಿಗೆ ಸಹಾಯ ಮಾಡುತ್ತದೆ. ದೇಶದ ಅತಿ ದೊಡ್ಡ ವಿರೋಧಪಕ್ಷ ಕಾಂಗ್ರೆಸ್ ಆಗಿರುವಾಗ, ಕಾಂಗ್ರೆಸ್ ಹೆಚ್ಚು ಯಶಸ್ವಿಯಾಗುತ್ತದೆಯೋ, ಬಿಜೆಪಿ ಅಷ್ಟು ದೊಡ್ಡ ಸೋಲು ಕಾಣುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ' ಎಂದು ಹೇಳಿದ್ದಾರೆ. 'ಇತರೆ ಎಲ್ಲ ವಿರೋಧಪಕ್ಷಗಳೂ ಪ್ರಾದೇಶಿಕ ಪಕ್ಷಗಳಾಗಿವೆ. ರಾಷ್ಟ್ರೀಯ ಅಸ್ತಿತ್ವವುಳ್ಳ ಏಕೈಕ ದೇಶವೆಂದರೆ ಕಾಂಗ್ರೆಸ್ ಮಾತ್ರ. ಅದಕ್ಕೆ ಎಲ್ಲ ಸಾಮರ್ಥ್ಯವೂ ಇದೆ. ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬಹುದು. ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ನೀವು ಭಾವಿಸಿದರೆ, ನಾನು ಹೋರಾಟ ಮಾಡುವುದನ್ನೇ ಬಿಟ್ಟುಬಿಡುತ್ತೇನೆ' ಎಂದಿದ್ದಾರೆ. ' ಒಬ್ಬ ಸಹಾನುಭೂತಿಯ ನಾಯಕ ಎನ್ನುವುದು ಅವರೊಂದಿಗೆ ಮಾತನಾಡುವಾಗ ನನಗೆ ಅನಿಸಿದೆ. ಅವರು ನನ್ನ ತಾಯಿಯ ಯೋಗ ಕ್ಷೇಮ ಮತ್ತು ತಂದೆಯ ಆರೋಗ್ಯದ ಬಗ್ಗೆ ಯಾವಾಗಲೂ ಕೇಳುತ್ತಾರೆ. ಆ ಬಗ್ಗೆ ಅವರನ್ನು ನಾನು ಶ್ಲಾಘಿಸುತ್ತೇನೆ. ಅವರ ಈ ಗುಣಗಳು ನನ್ನನ್ನು ಆಕರ್ಷಿಸಿವೆ. ಅವರು ಪ್ರಾಮಾಣಿಕ. ಅವರ ಹೋರಾಟದಲ್ಲಿ ಪ್ರಾಮಾಣಿಕತೆ ಇರುತ್ತದೆ. ಸತ್ಯ ಹೊರಬರಬೇಕು ಎಂದು ಬಯಸುವ ನಿರ್ಭೀತ ನಾಯಕ' ಎಂದು ಕೊಂಡಾಡಿದ್ದಾರೆ. ಸುಮಾರು ಎರಡು ದಶಕಗಳ ಕಾಲ ವಿದ್ಯಾರ್ಥಿ ದೆಸೆಯಿಂದಲೂ ಎಡಪಕ್ಷಗಳೊಂದಿಗೆ ಒಡನಾಟ ಹೊಂದಿದ್ದ ಕನ್ನಯ್ಯ ಕುಮಾರ್, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಪಿಐ ಸೇರ್ಪಡೆಯಾಗಿದ್ದರು. ಬಿಹಾರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಗ ಸಿಪಿಎಂ ತೊರೆದು ಮಂಗಳವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.


from India & World News in Kannada | VK Polls https://ift.tt/3D3pLq7

ದೈವಸ್ಥಾನಗಳನ್ನು ಧಾರ್ಮಿಕ ಪರಿಷತ್‌ನಿಂದ ಹೊರಗಿಡಬೇಕು; ಬಿ ರಮಾನಾಥ ರೈ ಆಗ್ರಹ

ಮಂಗಳೂರು: ದೈವಸ್ಥಾನವನ್ನು ಎಂಡೋಮೆಂಟ್‌ನಿಂದ ಹೊರಗಿಡಬೇಕು. ಧಾರ್ಮಿಕ ಪರಿಷತ್‌ ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ. ಸಂಪ್ರದಾಯವನ್ನು ಮುರಿಯುವುದು ದೈವಾರಾಧನೆಯ ಕಟ್ಟುಪಾಡಿಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಬಿ. ಹೇಳಿದರು. ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ದೈವಾರಾಧನೆ ಪ್ರವಾಸೋದ್ಯಮ ಕೇಂದ್ರವಲ್ಲ. ಅದೊಂದು ಭಕ್ತಿಯ ಕೇಂದ್ರ. ಕರಾವಳಿ ಭಾಗದಲ್ಲಿ ದೈವದ ಭಂಡಾರವನ್ನು ದೈವಸ್ಥಾನದಲ್ಲಿ ಇಡೋದಿಲ್ಲ. ಸಾಮಾನ್ಯವಾಗಿ ಭಂಡಾರ ಮನೆಯಲ್ಲಿಡುವುದು ಸಂಪ್ರದಾಯ, ಯಾವುದೇ ಕಾರಣಕ್ಕೂ ದೈವಸ್ಥಾನದಲ್ಲಿ ಇಡುವ ಸಂಪ್ರದಾಯವಿಲ್ಲ. ಆದರೆ ಧಾರ್ಮಿಕ ಪರಿಷತ್‌ನವರು ದೈವಜ್ಞ ಪ್ರಶ್ನೆ ಇಟ್ಟು ಬಂಟ್ವಾಳ ತಾಲೂಕಿನ ಮೊಗರ್ನಾಡು ಸೀಮೆಯ ದೈವಗಳ ಭಂಡಾರವನ್ನು ದೈವಸ್ಥಾನದಲ್ಲಿ ಇರಿಸಲು ಹೊರಟಿರುವುದು ಧಾರ್ಮಿಕ ನಂಬಿಕೆಗೆ ಅಪಚಾರ ಎಂದು ಹೇಳಿದರು. ಕರಾವಳಿಯಲ್ಲಿ ದೈವಾರಾಧನೆ ಅನಾದಿ ಕಾಲದಿಂದಲೂ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಕಟ್ಟು ಕಟ್ಟಳೆ. ದೈವಸ್ಥಾನದಲ್ಲಿ ಭಂಡಾರ ಇಡುವುದು ಕಟ್ಟುಪಾಡಿಗೆ ವಿರೋಧವಾಗಿದ್ದು, ಎಲ್ಲರೂ ಅದನ್ನು ವಿರೋಧಿಸಬೇಕು. ದೈವಸ್ಥಾನದ ಭಂಡಾರದಲ್ಲಿ ಚಿನ್ನಾಭರಣಗಳಿರುತ್ತವೆ. ಅಮೂಲ್ಯ ವಸ್ತುಗಳಿರುತ್ತವೆ. ಅದನ್ನು ರಕ್ಷಣೆ ಮಾಡಬೇಕಾದರೆ ಅದು ಸಂಬಂಧಪಟ್ಟ ಭಂಡಾರ ಮನೆ, ಬೀಡುವಿನಲ್ಲಿಇರಬೇಕು. ದೈವಸ್ಥಾನದಲ್ಲಿ ಕಳ್ಳತನ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಹರಿನಾಥ್‌, ಎಪಿಎಂಸಿ ಮಾಜಿ ಸದಸ್ಯ ಜಯಶೀಲ ಅಡ್ಯಂತಾಯ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಶೋಕ್‌ ಡಿ.ಕೆ., ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಪದ್ಮನಾಭ ಉಪಸ್ಥಿತರಿದ್ದರು. ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ ಟೀಕೆ ಮೂರ್ಖತನದ್ದು; ದ. ಕ ಬಿಜೆಪಿ ಅಧ್ಯಕ್ಷ : ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಸಂಕಲ್ಪದಿಂದ ಸೇವಾಕಾರ್ಯ ಮಾಡುತ್ತಿರುವ ಆರೆಸ್ಸೆಸ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಟೀಕೆ ಮೂರ್ಖತನದ ಪರಮಾವಧಿಯದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದ್ದಾರೆ. ಆರೆಸ್ಸೆಸ್‌ ಸಂಘಟನೆ ಯಾವುದೇ ತೆಗಳಿಕೆಗೆ, ಬೆದರಿಕೆಗೆ, ಆರೋಪಗಳಿಗೆ ಜಗ್ಗದೆ ಹಿಂದು ಸಮಾಜವನ್ನು ಸಂಘಟನೆ ಮಾಡುವ ಕಾರ್ಯವನ್ನು ಮಾಡುತ್ತ, ರಾಷ್ಟ್ರ ಭಕ್ತರನ್ನು ನಿರ್ಮಿಸಿ ಸಮಾಜಕ್ಕೆ ನೀಡುತ್ತಾ ಬಂದಿದೆ. ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರ ಧಾರೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುದರಿಂದ ದೇಶದಲ್ಲಿ ಸಮಾಜದಲ್ಲಿ ಪರಿವರ್ತನೆ ಆಗಿದೆ. ಸಂಘದ ರಾಷ್ಟ್ರೀಯ ವಿಚಾರವನ್ನು ಕಾಂಗ್ರೆಸ್‌ ಒಪ್ಪುವ ಅಗತ್ಯ ಇಲ್ಲ. ದೇಶದ ಪ್ರಜೆಗಳು ಒಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಂಘದ ಸ್ವಯಂಸೇವಕರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು ಆಗಿದ್ದಾರೆ. ಕಾಂಗ್ರೆಸ್‌ನ ವಿದೇಶಿ ಚಿಂತನೆ, ಮತೀಯ ತುಷ್ಟಿಕರಣ, ನಕಲಿ ಜಾತ್ಯತೀತವಾದ ಜನ ತಿರಸ್ಕರಿಸಿದ್ದಾರೆ. ದೇಶದಲ್ಲಿ ಭಯೋತ್ಪಾದನೆಗೆ, ಎಲ್‌ಟಿಟಿಇಗೆ, ಮಾವೋವಾದಿಗಳಿಗೆ, ನಕ್ಸಲೈಟರಿಗೆ ರಕ್ಷಣೆ, ಬೆಂಬಲ ನೀಡಿದ್ದ ಕಾಂಗ್ರೆಸ್‌ನದ್ದು ತಾಲಿಬಾನ್‌ ಸಂಸ್ಕೃತಿ ಎಂದು ಸುದರ್ಶನ ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3uxbkaI

ಬಾದಾಮಿ ಗೆಳೆಯರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ; 15 ರೂ.ನಲ್ಲಿ 120 ಕಿ.ಮೀ ಪಯಣ!

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ಅದೆಷ್ಟೋ ಜನರ ಜೀವನ ಕಸಿದುಕೊಂಡಿದೆ. ಲಾಕ್ ಡೌನ್ ಟೈಮ್ ನಲ್ಲಿ ಉದ್ಯೋಗ ಇಲ್ಲದೇ ಜನರ ಜೇಬು ಖಾಲಿ ಆಗಿತ್ತು. ಈ ಮಧ್ಯೆ ಪೆಟ್ರೋಲ್ ರೇಟ್ ಕೂಡ ಗಗನಕ್ಕೆ ಏರಿದೆ. ಆದರೇ ಇದೇ ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತಿದ್ದ ಬಾಗಲಕೋಟೆ ಜಿಲ್ಲೆಯ ಪಟ್ಟಣದ ಇಬ್ಬರು ಸ್ನೇಹಿತರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಹೌದು ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಜುನಾಥ ಜಲಗೇರಿ ಎಂಬುವರು ತಯಾರು ಮಾಡಿದ್ದಾರೆ. ಹೀಗೆ ವಿಶೇಷವಾಗಿ ತಯಾರಾಗಿರುವ ಬೈಕ್ ಗೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ. ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಜುನಾಥ ಜಲಗೇರಿ ರೂವಾರಿಯ ವಿಶೇಷ ಬೈಕ್ ಗೆ ಕೇವಲ ಬ್ಯಾಟರಿ ಅಷ್ಟೇ ಸಾಕು. ಅದು ಕೇವಲ ಮೂರು ಗಂಟೆಗಳ ಕಾಲ ಚಾರ್ಜ್ ಮಾಡಿದ್ರೆ ಸಾಕು 120 ಕಿ.ಮೀ ವರೆಗೆ ಸಂಚಾರ ಮಾಡುತ್ತದೆ. ಹಾಗಾಗಿ 15 ರೂಪಾಯಿ ಖರ್ಚಿನಲ್ಲಿ 120 ಕಿ.ಮೀ ಸಂಚರಿಸಬಹುದಾಗಿದೆ. ಇನ್ನು ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್‌ ಎಲೆಕ್ಟ್ರಿಕ್ ಅಂಗಡಿ ಹೊಂದಿದ್ದಾರೆ. ಹಾಗೇ ಮಂಜುನಾಥ ಜಲಗೇರಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ. ಲಾಕ್ ಡೌನ್ ವೇಳೆ ಇಬ್ಬರ ಅಂಗಡಿಗಳು ಗ್ರಾಹಕರಿಲ್ಲದೇ ಬಂದ್‌ ಆಗಿದ್ದವು. ಈ ವೇಳೆ ಇಬ್ಬರೂ ಸೇರಿ ಎಲೆಕ್ಟ್ರಿಕ್ ಬೈಕ್ ತಯಾರಿಸುವ ಫ್ಲ್ಯಾನ್ ಮಾಡುತ್ತಾರೆ. ಹಾಗೆ ಸುಮಾರು 3-4 ತಿಂಗಳ ಕಾಲ ಸಮಯ ತೆಗೆದುಕೊಂಡು ಕೊನೆಗೂ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ.‌ ಈ ಬೈಕ್ ಗೆ ಒಟ್ಟು ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದೇ ಬ್ಯಾಟರಿಗಳ‌ ಮೂಲಕ ಬೈಕ್ ಸಂಚಾರ ಮಾಡುತ್ತದೆ. ಈ ಬೈಕ್ ಕೇವಲ ಸಿಟಿಯಲ್ಲಿ ಓಡಾಟಕ್ಕೆ ಬಳಸಬಹುದಾಗಿದೆ. ಅಂಗಡಿ, ಮನೆ, ಮಾರುಕಟ್ಟೆ ಸೇರಿ ಸ್ಥಳೀಯ ಓಡಾಟಕ್ಕೆ ಹೆಚ್ಚು ಅನುಕೂಲಕರವಾಗಿದೆ. ಒಟ್ಟು 40ರಿಂದ 50 ಸಾವಿರ ರೂಪಾಯಿ ಖರ್ಚಿನಲ್ಲಿ ಈ ಬೈಕ್ ರೂಪಗೊಂಡಿದೆ. ಈ ಬೈಕ್ ಪರಿಸರ ಸ್ನೇಹಿಯಾಗಿದೆ. ವೇಗಮಿತಿ 30 ಕಿ.ಮೀ ಇರುವುದರಿಂದ ಬೈಕ್ ಗೆ ಯಾವುದೇ ನೋಂದಣಿ ಅಥವಾ ಪರವಾನಗಿ ಬೇಕಾಗಿಲ್ಲ. ಒಟ್ಟಿನಲ್ಲಿ ಈ ಲಾಕ್‌ಡೌನ್ ಟೈಮ್ ನಲ್ಲಿ ಖಾಲಿ ಕುಳಿತ ಇಬ್ಬರೂ ಸ್ನೇಹಿತರು ಸೇರಿ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸ್ನೇಹಿತರ ಈ ಎಲೆಕ್ಟ್ರಿಕ್ ಬೈಕ್ ಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.


from India & World News in Kannada | VK Polls https://ift.tt/3l2QWLz

ಗಾಂಧಿ ಜಯಂತಿ: ಮಹಾತ್ಮ ಗಾಂಧಿ ಸತ್ಯಾಗ್ರಹಕ್ಕೆ ರೈತರ ಪ್ರತಿಭಟನೆ ಹೋಲಿಕೆ ಮಾಡಿದ ರಾಹುಲ್ ಗಾಂಧಿ

ಹೊಸದಿಲ್ಲಿ: ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ , ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಒಂದೇ ಒಂದು ಸತ್ಯಾಗ್ರಹ ದಿಗ್ವಿಜಯಕ್ಕೆ ಸಾಕು' ಎಂಬ ನುಡಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಮಹಾತ್ಮ ಗಾಂಧಿ ಅವರಿಗೆ ವಿನಮ್ರ ಶ್ರದ್ಧಾಂಜಲಿಗಳು ಎಂದು ಹೇಳಿದ್ದಾರೆ. ಜತೆಗೆ ಅವರು ಮಹಾತ್ಮ ಗಾಂಧಿ ಅವರ ಸತ್ಯಾಗ್ರಹದ ಚಿತ್ರಗಳು ಹಾಗೂ ರೈತರ ಪ್ರತಿಭಟನೆಯ ಚಿತ್ರಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿರುವ ಅವರು, ಎರಡನ್ನೂ ಹೋಲಿಕೆ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸತ್ಯಾಗ್ರಹದ ಪರಿಣಾಮದ ಕುರಿತಾದ ಎಚ್ಚರಿಕೆ ನೀಡಿದ್ದಾರೆ. 'ಸತ್ಯಾಗ್ರಹ ಆಗ ಮತ್ತು ಈಗ' ಎಂದು ಶೀರ್ಷಿಕೆಯ ಬರಹದಲ್ಲಿ ಅವರು, ಅಸತ್ಯ ಮತ್ತು ಅನ್ಯಾಯದ ವಿರುದ್ಧ ಬಾಪು ಸತ್ಯಾಗ್ರಹ ನಡೆಸಿದ್ದರು. ಇಂದು ಅನ್ನದಾತ ಸತ್ಯಾಗ್ರಹ ನಡೆಸುತ್ತಿದ್ದಾನೆ ಎಂದಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಲಾಠಿ ಪ್ರಹಾರ ನಡೆಸುವ ತುಣುಕನ್ನು ವಿಡಿಯೋದಲ್ಲಿ ಅಳವಡಿಸಲಾಗಿದೆ. 'ಬಾಪು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ನೀವು ಎಷ್ಟು ಮಂದಿ ಗೋಡ್ಸೆಗಳನ್ನು ತರುತ್ತೀರಿ? ನಾವು ನಿಮ್ಮ ದಬ್ಬಾಳಿಕೆಗೆ ಹೆದರಿಲ್ಲ. ನಿಮ್ಮ ಅನ್ಯಾಯಕ್ಕೆ ತಲೆಬಾಗುವುದಿಲ್ಲ. ನಾವು ಭಾರತದ ಜನರು. ಸತ್ಯದ ಹಾದಿಯಲ್ಲಿ ನಡೆಯುವುದನ್ನು ನಿಲ್ಲಿಸುವುದಿಲ್ಲ' ಎಂದು ಅದರಲ್ಲಿ ಬರೆಯಲಾಗಿದೆ. ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಆ ಕಾಲದಲ್ಲಿ ನಡೆಸಿದ್ದ ಸತ್ಯಾಗ್ರಹದಂತೆಯೇ, ಈ ಕಾಲದಲ್ಲಿ ಕೇಂದ್ರ ಸರ್ಕಾರದ ಅನ್ಯಾಯಗಳ ವಿರುದ್ಧ ರೈತರ ಹೋರಾಟ ನಡೆಯುತ್ತಿದೆ. ಎರಡೂ ಆಡಳಿತಗಳು ಸರ್ವಾಧಿಕಾರಿ ಧೋರಣೆ ಹೊಂದಿದ್ದವು. ಆಗ ಸತ್ಯಾಗ್ರಹ ಗೆದ್ದಂತೆ, ಈಗಲೂ ಹೋರಾಟಕ್ಕೆ ಗೆಲುವು ಸಿಗಲಿದೆ ಎಂದು ಅನೇಕರು ಹೇಳಿದ್ದಾರೆ. ಗಾಂಧೀಜಿ ಅವರ ಜನ್ಮದಿನದಂದು ಅವರನ್ನು ಯೋಗ್ಯ ರೀತಿಯಲ್ಲಿ ಸ್ಮರಿಸುವ ಬದಲು, ಅವರ ತತ್ವ ಆದರ್ಶಗಳನ್ನು ಮೂಲೆಗುಂಪು ಮಾಡಿದ ಕಾಂಗ್ರೆಸ್ ಪಕ್ಷದ ನಾಯಕ, ಈ ಸಂದರ್ಭದಲ್ಲಿಯೂ ತನ್ನ ರಾಜಕೀಯ ಲಾಭಕ್ಕಾಗಿ ರೈತರ ಪ್ರತಿಭಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅನೇಕರು ಟೀಕಿಸಿದ್ದಾರೆ. ಪಕ್ಷದಲ್ಲಿ ನಾಯಕತ್ವವೇ ಇಲ್ಲ ಎಂದು ಹೇಳಿದ್ದಕ್ಕೆ ಕಪಿಲ್ ಸಿಬಲ್ ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ. ಇದರ ಬಗ್ಗೆ ರಾಹುಲ್ ಗಾಂಧಿ ಚಕಾರವೆತ್ತಿಲ್ಲ. ಪಕ್ಷದೊಳಗಿನ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸಾಧ್ಯವಾಗಿಲ್ಲ. ಇನ್ನು ದೇಶಕ್ಕೆ ಯಾವ ರೀತಿ ಕೊಡುಗೆ ನೀಡುತ್ತಾರೆ? ಪಕ್ಷದಲ್ಲಿನ ಭಿನ್ನಾಭಿಪ್ರಾಯವನ್ನೇ ಸಹಿಸದ ಅವರು, ಮಹಾತ್ಮ ಗಾಂಧಿ ಅವರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.


from India & World News in Kannada | VK Polls https://ift.tt/3or0PVB

'ಚೆಂಡು ಸ್ಟ್ಯಾಂಡ್ಸ್‌ಗೆ ಹೋಗಬಹುದೆಂದು ಭಾವಿಸಿದ್ದೆ' ಗೇಮ್‌ ಪ್ಲಾನ್‌ ತಿಳಿಸಿದ ಶಾರೂಖ್‌!

ದುಬೈ: ವಿರುದ್ಧದ ಪಂದ್ಯದ ನಿರ್ಣಾಯಕ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡದ 5 ವಿಕೆಟ್‌ಗಳ ಗೆಲುವಿಗೆ ನೆರವಾದರು. ಪಂದ್ಯದ ಗೆಲುವಿನ ಬಳಿಕ 26ರ ಪ್ರಾಯದ ಯುವ ಬ್ಯಾಟ್ಸ್‌ಮನ್‌ ತಮ್ಮ ಗೇಮ್‌ ಪ್ಲಾನ್‌ ಬಹಿರಂಗಪಡಿಸಿದರು. ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ 166 ರನ್‌ ಗುರಿ ಹಿಂಬಾಲಿಸಿದ್ದ ತಂಡಕ್ಕೆ ಗೆಲುವು ಸಾಧಿಸಲು ಕೋಲ್ಕತಾ ನೈಟ್‌ ರೈಡರ್ಸ್ ಕೊನೆಯ ಓವರ್‌ವರೆಗೂ ಅವಕಾಶ ಮಾಡಿಕೊಡಲಿಲ್ಲ. ಪ್ರಸಕ್ತ ಟೂರ್ನಿಯಲ್ಲಿ ನಾಯಕ ಅವರ 5ನೇ ಅರ್ಧಶತಕ ಹಾಗೂ ಮಯಾಂಕ್‌ ಅಗರ್ವಾಲ್‌ ಅವರ 40 ರನ್‌ ಗಳಿಸಿದ ಹೊರತಾಗಿಯೂ ಪಂಜಾಬ್‌ ಕೊನೆಯ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ಮೂರು ಓವರ್‌ಗಳಲ್ಲಿ ಪಂಜಾಬ್‌ ಕಿಂಗ್ಸ್‌ಗೆ 24 ರನ್‌ ಅಗತ್ಯವಿತ್ತು. ಈ ವೇಳೆ ಕೇವಲ 9 ಎಸೆತಗಳಲ್ಲಿ ಶಾರೂಖ್‌ ಖಾನ್‌ ಎರಡು ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅದರಲ್ಲೂ ಕೆ.ಎಲ್‌ ರಾಹುಲ್ ವಿಕೆಟ್‌ ಒಪ್ಪಿಸಿದ ಬಳಿಕ ಪಂಜಾಬ್‌ಗೆ 4 ಎಸೆತಗಳಿಗೆ 4 ರನ್‌ ಅಗತ್ಯವಿತ್ತು. ಈ ವೇಳೆ ಶಾರೂಖ್‌ ಖಾನ್‌ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡು ಬ್ಯಾಟ್ಸ್‌ಮನ್‌ ನಿರೀಕ್ಷೆ ಮಾಡಿದಷ್ಟು ದೂರ ಹೋಗಲಿಲ್ಲ. ಬೌಂಡರಿ ಲೈನ್‌ ಬಳಿ ರಾಹುಲ್‌ ತ್ರಿಪಾಠಿ ಕ್ಯಾಚ್‌ ಪಡೆಯಲು ಪ್ರಯತ್ನಿಸಿದರು. ಆದರೆ, ಕೊದಲೆಳೆಯ ಅಂತರದಲ್ಲಿ ತ್ರಿಪಾಠಿ ಎಡವಿದ್ದರಿಂದ ಚೆಂಡು ನಿಯಂತ್ರಣಕ್ಕೆ ಸಿಗದೆ ಬೌಂಡರಿ ಲೈನ್‌ ದಾಟಿತು, ಪಂಜಾಬ್‌ಗೆ ಅದೃಷ್ಟದ ಸಿಕ್ಸರ್‌ ಆಗುವ ಮೂಲಕ ರಾಹುಲ್‌ ಪಡೆಗೆ ಪ್ಲೇ ಆಫ್ಸ್‌ ಆಸೆ ಜೀವಂತವಾಯಿತು. ರೋಚಕ ಪಂದ್ಯದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಶಾರೂಖ್‌ ಖಾನ್‌, "ನಾನು ಕ್ರೀಸ್‌ಗೆ ತೆರಳಿದಾಗ ಪಂದ್ಯದ ಸನ್ನಿವೇಶ ನಿರ್ಣಾಯಕವಾಗಿತ್ತು ಹಾಗೂ ಮತ್ತೊಂದು ತುದಿಯಲ್ಲಿ ಕೆ.ಎಲ್‌ ರಾಹುಲ್‌ ಇದ್ದರು. ನಾಯಕ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಕಾರಣ ನಾನು ಮೊದಲನೇ ಎಸೆತದಿಂದಲೇ ಬಿರುಸಿನ ಆಟಕ್ಕೆ ಕೈ ಹಾಕಿದೆ," ಎಂದರು. "ಅಂದಹಾಗೆ ಕೊನೆಯ ಎಸೆತವನ್ನು ನಾನು ಅತ್ಯುತ್ತಮವಾಗಿಯೇ ಆಡಿದ್ದೆ ಹಾಗೂ ಚೆಂಡು ಸ್ಟ್ಯಾಂಡ್ಸ್‌ಗೆ ತಲುಪಬಹುದು ಎಂದೇ ಭಾವಿಸಿದ್ದೆ. ಆದರೆ, ಅನಿರೀಕ್ಷಿತವಾಗಿ ಅದು ಸಂಭವಿಸಲಿಲ್ಲ. ಆದರೂ, ಅವಕಾಶ ಪಡೆದುಕೊಳ್ಳುವಷ್ಟು ಧೈರ್ಯಶಾಲಿಯಾಗಿದ್ದೇನೆಂದು ನಾನು ಭಾವಿಸಿದೆ, ಅದರಂತೆ ಅದೃಷ್ಟ ನಮ್ಮ ಕೈ ಹಿಡಿಯಿತು," ಎಂದು ಹೇಳಿದರು. ಪಂದ್ಯವನ್ನು ಯಶಸ್ವಿಯಾಗಿ ಫಿನಿಷ್‌ ಮಾಡಿದ ಬಗ್ಗೆ ಬೆಳಕು ಚೆಲ್ಲಿದ ಶಾರೂಖ್‌ ಖಾನ್‌, ಪಂದ್ಯದ ಪ್ರಕ್ರಿಯೆಗೆ ಅಂಟಿಕೊಂಡು ಗ್ಯಾಪ್‌ಗಳಲ್ಲಿ ರನ್‌ಗಳಿಸಲು ಪ್ರಯತ್ನಿಸಿದೆ. ಇದೇ ಲಯವನ್ನು ಮುಂದಿನ ನಿರ್ಣಾಯಕ ಪಂದ್ಯಗಳಲ್ಲಿಯೂ ಮುಂದುವರಿಸುತ್ತೇನೆಂದು ಯುವ ಬ್ಯಾಟ್ಸ್‌ಮನ್‌ ಭರವಸೆ ನೀಡಿದ್ದಾರೆ. "ಇಂತಹ ಸನ್ನಿವೇಶಗಳಲ್ಲಿ ನಾನು ಕ್ರೀಸ್‌ಗೆ ಹೋದಾಗ ರನ್‌ ಗಳಿಸಲು ಗ್ಯಾಪ್‌ಗಳನ್ನು ಹುಡುಕುತ್ತೇನೆ. ಅಂದಹಾಗೆ ನಮಗೆ ಮೂರು ಗೆಲುವು ಅಗತ್ಯವಿತ್ತು. ಇದರಲ್ಲಿ ಒಂದರಲ್ಲಿ ಗೆಲುವು ಪಡೆದಿದ್ದೇವೆ. ಇನ್ನು ಮುಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸುವ ಕಡೆಗೆ ಗಮನ ಹರಿಸಲಿದ್ದು, ಈ ಪ್ರಕ್ರಿಯೆಯ ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ," ಎಂದು ಶಾರೂಖ್‌ ಖಾನ್‌ ತಿಳಿಸಿದ್ದಾರೆ. ಕೆ.ಎಲ್‌ ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್ ತಂಡ, ಭಾನುವಾರ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಟ ನಡೆಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3isHtLX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...