ಸೀಬರ್ಡ್ 2ನೇ ಹಂತದ ಯೋಜನೆ ವಿಸ್ತಾರಗೊಳ್ಳುತ್ತಿದ್ದಂತೆ ಸಮಸ್ಯೆಗಳು ಜಟಿಲಗೊಳ್ಳುತ್ತಿದೆ. ಗುಡ್ಡದ ಅಂಚಿನ ನಿರಾಶ್ರಿತರಲ್ಲಿ ಎತ್ತಂಗಡಿ ಆತಂಕ ಕಾಡುತ್ತಿದೆ. ಬೈತಖೋಲ ಗುಡ್ಡದ ಅಂಚಿನಲ್ಲಿ ನೂರಾರು ಕುಟುಂಬಗಳು ನೆಲೆಸಿವೆ. ಈ ಗುಡ್ಡವೂ ಸೇರಿ 2259 ಎಕರೆ ಅರಣ್ಯ ಪ್ರದೇಶವನ್ನು ನೌಕಾನೆಲೆಗಾಗಿ ರಕ್ಷಣಾ ಇಲಾಖೆಗೆ ನೀಡಲಾಗಿದೆ. ಅದರಲ್ಲಿ 200 ಎಕರೆ ಅರಣ್ಯೇತರ ಉದ್ದೇಶಕ್ಕೆ ಬಳಸಲು ಅನುಮತಿ ಇದೆ. ಗುಡ್ಡದ ಅಂಚಿನಲ್ಲಿ ಜನವಸತಿ ಮುಂದುವರಿದಿತ್ತು. ಈಗ ಸೀಬರ್ಡ್ 2ನೇ ಹಂತದ ಯೋಜನೆಯಲ್ಲಿ ಆ ಗುಡ್ಡವನ್ನು ಅಪಾಯಕಾರಿ ವಿನ್ಯಾಸದಲ್ಲಿ ಕೊರೆದು ರಸ್ತೆ ನಿರ್ಮಿಸಲಾಗುತ್ತಿದೆ.
from India & World News in Kannada | VK Polls https://ift.tt/p12NlCo