Ragi msp selling: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿರುವ ರೈತರು ತುಮಕೂರಿನಲ್ಲಿ ಖರೀದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ತಮ್ಮ ಸರದಿಗಾಗಿ ಕಾಯುತ್ತ ರಾತ್ರಿ ಇಡೀ ಕಾವಲು ಕಾಯುವ ಸ್ಥಿತಿ ಎದುರಾಗಿದ್ದು, ಇದೊಂದಿಗೆ ಹೊಟ್ಟೆಗೆ ಊಟವಿಲ್ಲದೆ ಪರದಾಡುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ಕುಡಿಯುವ ನೀರು ಸಿಗದೆ, ಶೌಚಕ್ಕೂ ವ್ಯವಸ್ಥೆ ಇಲ್ಲದೆ ರೈತರು ಹೈರಾಣಾಗಿದ್ದಾರೆ. ಕ್ವಿಂಟಲ್ ರಾಗಿಗೆ 3,578 ರೂಪಾಯಿ ನಿಗದಿ ಪಡಿಸಲಾಗಿದೆ.
from India & World News in Kannada | VK Polls https://ift.tt/qMdleRv