Karnataka Assembly Election 2023: ವಿಧಾನಸಭೆ ಚುನಾವಣೆ: ಟಿಕೆಟ್‌ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ಕಸರತ್ತು, ಗುರುವಾರ ಚುನಾವಣಾ ಸಮಿತಿ ಸಭೆ

Karnataka Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಆಕಾಂಕ್ಷಿಗಳ ಪಯಪೋಟಿ ಹೆಚ್ಚಾಗಿದೆ. ಇದೇ ಗುರುವಾರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದೆ.

from India & World News in Kannada | VK Polls https://ift.tt/vzTKdaq

ಫೈಬರ್ ಅಂಶ ಹೆಚ್ಚಾಗಿರುವ ಈ ಹುರುಳಿಯ ಬೆಲೆ ಕೆಜಿಗೆ 80 ರೂಪಾಯಿ!

ಸಾಮಾನ್ಯವಾಗಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜಮೀನಿನಲ್ಲಿ ಏನೂ ಬಿತ್ತದೇ ಇದ್ದರೆ ಅಥವಾ ಇನ್ಯಾವುದೋ ಕಾರಣಕ್ಕೆ ಕೃಷಿ ಭೂಮಿಯನ್ನು ಬೀಳು ಬಿಟ್ಟಿದ್ದರೆ, ಆಗ ಹುರುಳಿಯನ್ನು ಬಿತ್ತಿ ಬೆಳೆಯುವ ಸಂಪ್ರದಾಯ ನಮ್ಮಲ್ಲಿದೆ. ಇದು ದೇಹಕ್ಕೆ ಶಕ್ತಿದಾಯಕ ಆಹಾರ. ಸಾಕು ಪ್ರಾಣಿಗಳಾದ ಹಸು, ಕುರಿ ಮತ್ತು ಮೇಕೆಗಳಿಗೂ ಇದು ಔಷಧ ರೂಪದಲ್ಲಿ ಬಳಕೆಯಾಗುತ್ತದೆ. ಅವುಗಳಲ್ಲಿ ಹಾಲಿನ ಕೊರತೆ ಉಂಟಾದ ಸಂದರ್ಭದಲ್ಲಿ ಹುರುಳಿ ಕಾಳುಗಳನ್ನು ರಾತ್ರಿ ನೆನಸಿ ಬೆಳಗ್ಗೆ ರುಬ್ಬಿ ಕುಡಿಸಲಾಗುತ್ತದೆ.

from India & World News in Kannada | VK Polls https://ift.tt/OnHL2zw

ಏಳೂವರೆ ಅಡಿ ಎತ್ತರದ ಈ ಅಜಾನುಬಾಹು ಒಬ್ಬ ಕೂಲಿಯಾಳು! ಹೃದಯ ಸಂಬಂಧಿ ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿರುವ ಕಾರ್ಮಿಕ!

ಬೆಂಗಳೂರಿನ ವೈದ್ಯರಾದ ಡಾ. ಮಹಾಂತೇಶ್ ಚರಂತಿಮಠ ಅವರು ಇತ್ತೀಚೆಗೆ ಟ್ವಿಟರ್ ನಲ್ಲಿ ಫೋಟೋವೊಂದನ್ನು ಹಾಕಿದ್ದು, ಅದರಲ್ಲಿ ತಾವು ಈವರೆಗೆ ಕಂಡಿರದ ಅತಿ ಎತ್ತರದ ವ್ಯಕ್ತಿಯೊಬ್ಬನನ್ನು ಕಂಡಿರುವುದಾಗಿ ಹೇಳಿದ್ದಾರೆ. ತತಾಘಟ್ ಆಸ್ಪತ್ರೆಗೆ ದಾಖಲಾಗಿರುವ ಈತ ಏಳೂವರೆ ಅಡಿ ಎತ್ತರವಿದ್ದಾನೆ. ಈತ ಬೆಂಗಳೂರು ರೈಲು ನಿಲ್ದಾಣದಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದು ಇಂಥ ಅಸಂಘಟಿತ ವಲಯದ ಕಾರ್ಮಿಕರಾಗಿ ಇರುವ ಯಾವುದೇ ಸರ್ಕಾರಿ ಯೋಜನೆಗಳಲ್ಲಿ ಈತ ನೋಂದಾಯಿಸಿಕೊಂಡಿಲ್ಲ. ಹಾಗಾಗಿ, ಸಂಬಂಧಪಟ್ಟವರು ಈತನಿಗೆ ಸಹಾಯ ಮಾಡಬಹುದೇ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

from India & World News in Kannada | VK Polls https://ift.tt/nwbmIaD

Jharkhand Fire Accident | ಧನಬಾದ್‌ನ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: 14 ಮಂದಿ ಸಜೀವ ದಹನ

Fire at a multi-storey building in Jharkhand: ಜಾರ್ಖಂಡ್‌ನಲ್ಲಿ ಮಂಗಳವಾರ ಸಂಜೆ ಮನಕಲಕುವ ಘಟನೆ ನಡೆದಿದೆ. ಮದುವೆ ಸಮಾರಂಭಕ್ಕೆ ಹೋಗಲು ಸೇರಿದ್ದ ಜನರು ದುರಂತಕ್ಕೆ ಸಾಕ್ಷಿಯಾಗಿದ್ದಾರೆ. ಆವರಿಸಿಕೊಂಡ ಬೆಂಕಿಯಿಂದ ಹೊರಬರಲು ಸಾಧ್ಯವಾಗದೆ ಹದಿನಾಲ್ಕು ಮಂದಿ ಸುಟ್ಟು ಕರಕಲಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

from India & World News in Kannada | VK Polls https://ift.tt/50lmvRN

Health Card To Hotel Employees- ಸೋಂಕಿದ್ದವರು ಕುಕ್ ಮಾಡೋ ಹಾಗಿಲ್ಲ!: ಹೋಟೆಲ್‌ ಸಿಬ್ಬಂದಿಗೆ ಹೆಲ್ತ್‌ ಕಾರ್ಡ್‌ ಕಡ್ಡಾಯಗೊಳಿಸಿದೆ ಕೇರಳ ಸರಕಾರ

ಕೇರಳದ ಹೋಟೆಲ್‌ಗಳಲ್ಲಿ ಅಡುಗೆ ಮಾಡುವ ಮತ್ತು ಆಹಾರ ಪೂರೈಕೆ ಮಾಡುವ ಸಿಬ್ಬಂದಿಯು ಫೆ.1ರಿಂದ 'ನೋ ಇನ್‌ಫೆಕ್ಷನ್‌ ಸರ್ಟಿಫಿಕೇಟ್‌' ಹೊಂದಿರಲೇಬೇಕು ಎಂದು ಕೇರಳ ಸರಕಾರ ನಿಯಮ ತಂದಿದೆ. ಇದರ ಪ್ರಕಾರ ಹೋಟೆಲ್‌ನ ಪ್ರತಿಯೊಬ್ಬ ಸಿಬ್ಬಂದಿಯೂ ತಮಗೆ ಯಾವುದೇ ಸಾಂಕ್ರಾಮಿಕ ರೋಗದ ಸೋಂಕಿಲ್ಲ, ಗಾಯಗಳಿಲ್ಲ ಎಂದು ನೋಂದಾಯಿತ ವೈದ್ಯರಿಂದ ಪ್ರಮಾಣ ಪತ್ರ ಪಡೆಯಬೇಕು. ಹೀಗೆ ಪಡೆದ ಹೆಲ್ತ್ ಕಾರ್ಡ್ ಅನ್ನು ಆಹಾರ ಇಲಾಖೆಯ ತಪಾಸಣಾ ಅಧಿಕಾರಿಗಳು ಬಂದಾಗ ತೋರಿಸಲೇಕು ಎಂದು ತಿಳಿಸಲಾಗಿದೆ. ಹೆಲ್ತ್ ಕಾರ್ಡ್ ಅನ್ನು ಫೆ.1ರಿಂದಲೇ ಕಡ್ಡಾಯಗೊಳಿಸಲಾಗಿದೆ.

from India & World News in Kannada | VK Polls https://ift.tt/kXjGO9J

Ajinkya Rahane: ಕೌಂಟಿ ಕ್ರಿಕೆಟ್‌ನಲ್ಲಿ ಲೈಸ್ಟರ್‌ಶೈರ್‌ ಪರ ಬ್ಯಾಟ್‌ ಬೀಸಲಿರುವ ಅಜಿಂಕ್ಯ ರಹಾನೆ!

Ajinkya Rahane To Play For Leicestershire: ಭಾರತ ಟೆಸ್ಟ್‌ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಟ್‌ ಮಾಡುವುದನ್ನು ಎದುರು ನೋಡುತ್ತಿರುವ ಅನುಭವಿ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ, 2023ರ ಸಾಲಿನ ಕೌಂಟಿ ಕ್ರಿಕೆಟ್‌ನಲ್ಲಿ ಲೈಸ್ಟರ್‌ಶೈರ್‌ ತಂಡದ ಪರ ಬ್ಯಾಟ್‌ ಬೀಸಲಿದ್ದಾರೆ. ಜೂನ್‌ನಲ್ಲಿ ಭಾರತ ತಂಡ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಪೈಪೋಟಿ ನಡೆಸುವ ಸಾಧ್ಯತೆ ಇದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ಬಳಗದಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿ ರಹಾನೆ ಕೌಂಟಿ ಕ್ರಿಕೆಟ್‌ ಮೊರೆ ಹೋಗಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/MTpeBuk

IND vs NZ: ಶುಭಮನ್ ಗಿಲ್ ಔಟ್‌? 3ನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

India's Probable Playing XI for 3rd T20I: ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿರುವ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ನಾಳೆ(ಬುಧವಾರ) ಮೂರನೇ ಹಾಗೂ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸೆಣಸಲು ಸಜ್ಜಾಗುತ್ತಿವೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡ 20 ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳ ನಡುವೆ ಈ ಪಂದ್ಯ ಅತ್ಯಂತ ಕುತೂಹಲ ಕೆರಳಿಸಿದೆ. ಈ ಪಂದ್ಯಕ್ಕೆ ಎರಡೂ ತಂಡಗಳ ಸಂಭಾವ್ಯ ಇಲೆವೆನ್‌ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/1mcyIMK

ಫೆ.3ಕ್ಕೆ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು; ಪ್ರಸಕ್ತ ವರ್ಷ 3 ಬಾರಿ ನೀರು ಹರಿಸಲು ನಿರ್ಧಾರ

ಹಿರಿಯೂರು ತಾಲೂಕಿನ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಹತ್ತಿ, ಅಡಕೆ, ತೆಂಗು, ಬಾಳೆ, ದಾಳಿಂಬೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ನೀರಿನ ಅವಶ್ಯಕತೆ ಇರುವುದನ್ನು ರೈತರು ಒತ್ತಿ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಜ.27ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ಇದೇ ವರ್ಷದಲ್ಲಿ ಮೂರು ಬಾರಿ ನೀರು ಹರಿಸಲು ತೀರ್ಮಾನಿಸಲಾಗಿದೆ.

from India & World News in Kannada | VK Polls https://ift.tt/1n9rdQP

Teachers recruitment 2022 - ಶಿಕ್ಷಕರ ನೇಮಕಕ್ಕೆ ಬ್ರೇಕ್‌: ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿದ ಹೈಕೋರ್ಟ್‌

ಶಿಕ್ಷಕರ ನೇಮಕಾತಿ - 2022ರ ಅಡಿಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಶಿಕ್ಷಣ ಇಲಾಖೆಯು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳು ತಮ್ಮ ಪತಿಯ ಆದಾಯ ಪ್ರಮಾಣ ಪತ್ರ ಸಲ್ಲಿಸುವ ಬದಲಿಗೆ ತಮ್ಮ ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದರು. ಇದರ ವಿರುದ್ಧ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

from India & World News in Kannada | VK Polls https://ift.tt/9jSb8EU

Jagadish Shettar- ಕೆಎಸ್ಆರ್ ಟಿಸಿ ನೌಕರರ ವೇತನ ಪರಿಷ್ಕರಣೆಗೆ ಸಿಎಂ ಜತೆ ಚರ್ಚೆ: ಜಗದೀಶ್ ಶೆಟ್ಟರ್

ಕೆಎಸ್ ಆರ್ ಟಿಸಿ ನೌಕರರ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಒಪ್ಪಂದ ಮುಗಿದು ಮೂರು ವರ್ಷ ಕಳೆದರೂ ಹೊಸ ಒಪ್ಪಂದ ಮಾಡದಿರುವುದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಹಾಗೂ ನಿಗಮಗಳ ಹಿತದೃಷ್ಟಿಯಿಂದ ವೇತನ ಪರಿಷ್ಕರಣೆ ಕುರಿತು ಹೊಸ ಒಪ್ಪಂದ ಆಗುವುದು ಅವಶ್ಯವಿದೆ. ಇದನ್ನು ಶೀಘ್ರ ಮಾಡಿಕೊಡುವಂತೆ ಮುಖ್ಯಮಂತ್ರಿಗೆ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

from India & World News in Kannada | VK Polls https://ift.tt/ZrlkHw2

IND vs WI: ವೆಸ್ಟ್‌ ಇಂಡೀಸ್‌ ಎದುರು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಭಾರತ!

India Women vs West Indies Women Highlights: ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಫೆಬ್ರವರಿ 10ರಂದು ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಶುರುವಾಗಲಿದೆ. ಈ ಸಲುವಾಗಿ ಭರದ ಸಿದ್ಧತೆಯಲ್ಲಿ ತೊಡಗಿರುವ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ಎದುರು ತ್ರಿಕೋನ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸುತ್ತಿದೆ. ಸರಣಿಯಲ್ಲಿ ಈಗಾಗಗಲೇ ಫೈನಲ್‌ ತಲುಪಿದ್ದ ಭಾರತ ತಂಡ ಸೋಮವಾರ ನಡೆದ ಅಂತಿಮ ರೌಂಡ್‌ ರಾಬಿನ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎದುರು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/VW9vd64

Karnataka Highcourt- ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಅಪರಾಧವಲ್ಲ, ಉದ್ದೇಶಪೂರ್ವಕ ಅಪಮಾನಕ್ಕಾಗಿದ್ದರೆ ಮಾತ್ರ ದೌರ್ಜನ್ಯ ಕಾಯದೆ ಅನ್ವಯ: ಹೈಕೋರ್ಟ್‌ ಆದೇಶ

ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರೆ ಅಪರಾಧವೇ ಹೊರತು, ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಕಾಯಿದೆಯಡಿ ಅಪರಾಧವಾಗದು ಎಂದು ಆದೇಶಿಸಿದೆ. ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಕಾಯಿದೆ ಅನ್ವಯಸುತ್ತದೆ ಎಂದು ಕೋರ್ಟ್ ಹೇಳಿದೆ.

from India & World News in Kannada | VK Polls https://ift.tt/T7k8bHW

IND vs NZ: ಎರಡನೇ ಟಿ20 ಪಂದ್ಯದಲ್ಲಿ ಮೂಡಿಬಂದ ಪ್ರಮುಖ 5 ದಾಖಲೆಗಳು!

five records that were broken in the second T20I: ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲನೇ ಟಿ20ಐ ಪಂದ್ಯದಲ್ಲಿ 21ರನ್‌ಗಳಿಂದ ಸೋಲು ಕಂಡಿದ್ದ ಭಾರತ ತಂಡ, ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕನಾ ಅಂಗಳದಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಸರಣಿಯಲ್ಲಿ 1-1 ಸಮಬಲಗೊಳಿಸಿತು. ಬ್ಯಾಟಿಂಗ್ ನಡೆಸಲು ಕಠಿಣವಾಗಿದ್ದ ಲೋ- ಸ್ಕೋರಿಂಗ್ ಪಂದ್ಯದಲ್ಲಿ ದಾಖಲಾದ ಪ್ರಮುಖ 5 ದಾಖಲೆಗಳ ಬಗ್ಗೆ ಇಲ್ಲಿ ಗಮನ ಸೆಳೆಯಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/dFjm6AQ

Pakistan Crisis - 16 ಲಕ್ಷ ಕೋಟಿ ರೂ. ಸಾಲದ ಹೊರೆಯನ್ನು ತನ್ನ ಜನತೆ ಮೇಲೆ ಹೇರಲಿದೆ ಪಾಕ್ ಸರ್ಕಾರ

ತನ್ನ ಆರ್ಥಿಕ ದುಸ್ಥಿತಿಯಿಂದ ಮೇಲೇಳಲು ಪಾಕಿಸ್ತಾನ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಮತ್ತಷ್ಟು ಸಾಲ ಕೇಳಲು ಮುಂದಾಗಿದೆ. ಆದರೆ, ಅತ್ತ ಐಎಂಎಫ್, ಈಗಾಗಲೇ ಇರುವ 200 ಬಿಲಿಯನ್ ಡಾಲರ್ (ಅಂದಾಜು 16 ಲಕ್ಷ ಕೋಟಿ ರೂ.) ಸಾಲವನ್ನು ತೀರಿಸುವಂತೆ ಸೂಚಿಸಿದೆ. ಅದಕ್ಕೆ ಒಪ್ಪಿರುವ ಪಾಕಿಸ್ತಾನ ಸರ್ಕಾರ, ಆ ಸಾಲದ ಹಣವನ್ನು ತನ್ನ ಜನರಿಂದಲೇ ವಸೂಲಿ ಮಾಡಲು ತೀರ್ಮಾನಿಸಿದೆ. ಈಗಾಗಲೇ ಅನೇಕ ತೆರಿಗೆಗಳ ಹೆಚ್ಚಳದಿಂದ ಬಸವಳಿದಿರುವ ಪಾಕಿಸ್ತಾನದ ಜನತೆಗೆ ಈ ಮೂಲಕ ಮತ್ತೊಂದು ತೆರಿಗೆ ಬರೆ ಬೀಳಲಿದೆ.

from India & World News in Kannada | VK Polls https://ift.tt/GQW0p8B

ಸಾಕಾರಗೊಳ್ಳದ ಕೊೖಲ ಪಶು ವೈದ್ಯಕೀಯ ಕಾಲೇಜು: 8 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ ಯೋಜನೆ

2012-13ನೇ ಸಾಲಿನಲ್ಲಿ ಡಿ ವಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಬಜೆಟ್‌ನಲ್ಲಿ ಪಶು ವೈದ್ಯಕೀಯ ಕಾಲೇಜು ಘೋಷಿಸಿ 145 ಕೋಟಿ ರೂ. ಮೀಸಲಿರಿಸಿದ್ದರು. 2016ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು. ಅಂದಿನಿಂದ ಇಂದಿನ ತನಕ ಕಾಮಗಾರಿ ಕುಂಟುತ್ತಾ ಸಾಗಿ ಇನ್ನೂ ಅಂತಿಮ ಕಾಮಗಾರಿ ಮುಗಿದಿಲ್ಲ. ಮುಖ್ಯ ಕಟ್ಟಡಗಳ ಕಾಮಗಾರಿ ಮುಗಿದರೂ ಮೂಲಭೂತ ವ್ಯವಸ್ಥೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಇನ್ನೂ ಬಾಕಿ ಇದೆ. ಅಧಿಕಾರಿಗಳ ಪ್ರಕಾರ ಶೇ.75 ಕಾಮಗಾರಿ ಮುಗಿದಿದೆ. ಮೂಲಭೂತ ವ್ಯವಸ್ಥೆಗಳ ಕಾಮಗಾರಿ ಇನ್ನಷ್ಟೇ ಟೆಂಡರ್‌ ಕರೆದು ಅಂತಿಮ ಹಂತಕ್ಕೆ ಬರಬೇಕಿದೆ.

from India & World News in Kannada | VK Polls https://ift.tt/dVbZU8R

ಚಿಕ್ಕಬಳ್ಳಾಪುರ | ಆದಿಯೋಗಿ ಮೂರ್ತಿ ನೆಪದಲ್ಲಿ ವಸೂಲಿ: ದರ್ಶನಕ್ಕೆ ಬರುತ್ತಿರುವ ಭಕ್ತರ ಆರೋಪ

Chikkaballapur Adiyogi statue: ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ ಚಿಕ್ಕಬಳ್ಳಾಪುರ ಬಳಿಯ ಆದಿಯೋಗಿ ಮೂರ್ತಿ ವೀಕ್ಷಣೆಗಾಗಿ ಬರುವ ಜನರ ಸಂಖ್ಯೆ ಹೆಚ್ಚಿದೆ. ಅವಲಗುರ್ಕಿ ಗ್ರಾಮ ಪಂಚಾಯಿತಿ ಹೆಸರಿನಲ್ಲಿ ವಾಹನ ಸವಾರರಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸರಿಯಾದ ರಸ್ತೆ ಇಲ್ಲದಿದ್ದರೂ, ಗ್ರಾಮ ಪಂಚಾಯಿತಿ ಹಣ ವಸೂಲಿಗೆ ಇಳಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

from India & World News in Kannada | VK Polls https://ift.tt/Qai4DJU

ಮಾಧ್ಯಮ ಕ್ಷೇತ್ರದ ಮೇಲೂ ಸಂಶಯವಿದೆ, ಅರ್ಥಪೂರ್ಣ ಕಾರ್ಯಾಚರಣೆ ಮೂಲಕ ನಿವಾರಣೆ ಅಗತ್ಯ: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

Suvarna Karnataka Digital Media Association: ಮಾಧ್ಯಮ ಸೇವಾ ರತ್ನ ಮತ್ತು ಪೋಷಕ ಕಲಾ ಸೇವಾ ರತ್ನ ಪ್ರಶಸ್ತಿಗಳನ್ನು ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸರಕಾರಿ ಬ್ಯಾಗ್‌ ಹಾಗೂ ನೋಟ್‌ ಬುಕ್‌ಗಳನ್ನು ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾಧ್ಯಮಗಳ ಪಾತ್ರದ ಕುರಿತು ಮಾತನಾಡಿದರು.

from India & World News in Kannada | VK Polls https://ift.tt/MkKPN8a

IND vs AUS: ಭಾರತ ವಿರುದ್ಧ ಟೆಸ್ಟ್‌ ಸರಣಿಗೂ ಮುನ್ನ ಅಚ್ಚರಿ ಹೇಳಿಕೆ ನೀಡಿದ ಡೇವಿಡ್‌ ವಾರ್ನರ್‌!

David Warner quite tired ahead of Test series against India: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೆಬ್ರವರಿ 9 ರಿಂದ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಬೇಸಿಗೆಯಲ್ಲಿ ಬುಡುವಿಲ್ಲದ ವೇಳಾಪಟ್ಟಿಯಿಂದ ನಾನು ತುಂಬಾ ದಣಿದಿದ್ದೇನೆ. ಆದರೆ, ಈ ವೇಳೆ ಉತ್ತಮ ಹಾಗೂ ತಾಜಾತನದಿಂದ ಇರಲು ಪ್ರಯತ್ನಿಸುತ್ತಿದ್ದೇನೆಂದು ಸಿಡ್ನಿ ಥಂಡರ್ಸ್‌ ತಂಡದ ಆಟಗಾರ ತಿಳಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/eilQkN0

ಹಾಸನ ಕಾರಾಗೃಹದೊಳಗೆ ಗಾಂಜಾ ಘಮಲು: ದಾಳಿ ವೇಳೆ ನಾಲ್ವರ ಬಂಧನ, ಹೆಚ್ಚಿದ ಕೈದಿಗಳ ಒತ್ತಡ

ಹಾಸನ ಜೈಲಿನಲ್ಲಿ ರಾಜಾರೋಷವಾಗಿ ಕೈದಿಗಳ ಕೈ ಸೇರುತ್ತಿದೆ ಗಾಂಜಾ. ಕಾಂಪೌಂಡ್‌ಗೆ ಅಣತಿ ದೂರದಲ್ಲಿ ಶ್ರೀನಗರ ಕೊಳಚೆಪ್ರದೇಶ, ವರ್ಕ್‌ಶಾಪ್‌ ಹಾಗೂ ವಸತಿ, ವಾಣಿಜ್ಯ ಪ್ರದೇಶವಿದ್ದು, ಈ ಭಾಗದಿಂದ ಗಾಂಜಾ ಜೈಲಿನ ಒಳಭಾಗಕ್ಕೆ ತೂರಿ ಬರುತ್ತಿದೆ. ಒಂದಿಷ್ಟು ಸಿಬ್ಬಂದಿ ಕೈಗೆ ಸಿಕ್ಕರೆ ಬಹಳಷ್ಟು ಕೈದಿಗಳ ಪಾಲಾಗುತ್ತಿದೆ. ಇದನ್ನು ತಡೆಯಲು ನಡೆಯುತ್ತಿರುವ ಪ್ರಯತ್ನದಲ್ಲಿ ಸಕ್ಸಸ್ ಕಂಡಿಲ್ಲ. ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತ ಕಾರಾಗೃಹ ಕಟ್ಟಡ ನಿರ್ಮಿಸಬೇಕೆಂಬ ಕನಸು ಕನಸಾಗಿಯೇ ಉಳಿದಿದೆ. ಆದರೆ ಕಾರಾಗೃಹದ ಸಮಸ್ಯೆ ಮಾತ್ರ ತಪ್ಪುತ್ತಿಲ್ಲ.

from India & World News in Kannada | VK Polls https://ift.tt/ZiVpdXf

ಜೋಡಿ ಮಾರ್ಗಕ್ಕೆ ಶೀಘ್ರ ಮುಕ್ತಿ: ಶಿಕಾರಿಪುರ-ರಾಣೆಬೆನ್ನೂರು ಸ್ವಾತಂತ್ರ್ಯ ಬಳಿಕ ಶಿವಮೊಗ್ಗಕ್ಕೆ ಚೊಚ್ಚಲ ರೈಲ್ವೆ ಹಳಿ

ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರಿಗೆ ಹೊಸ ರೈಲ್ವೆ ಈಗಾಗಲೇ ಮಂಜೂರಾಗಿದ್ದು, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ನಡುವೆ ಸಂಪರ್ಕದ ಕೊಂಡಿಯಾಗಲಿದೆ. ಸ್ವಾತಂತ್ರ್ಯ ಬಂದ ನಂತರ ಹೊಸ ರೈಲ್ವೆ ಹಳಿಗಳು ಶಿವಮೊಗ್ಗದಲ್ಲಿ ಇದುವರೆಗೆ ನಿರ್ಮಾಣವಾಗಿಲ್ಲ. ಬ್ರಿಟಿಷರು ತಮ್ಮ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ರೈಲ್ವೆ ಹಳಿಯನ್ನು ನಿರ್ಮಿಸಿದ್ದು ಬಿಟ್ಟರೆ ಹೊಸ ರೈಲ್ವೆ ಹಳಿಗಳನ್ನು ನಿರ್ಮಿಸಿಲ್ಲ. ಕೋಚಿಂಗ್‌ ಡಿಪೋ ಕಾಮಗಾರಿ ಪೂರ್ಣಗೊಂಡ ಬಳಿಕ ನೆರೆಯ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿನ ರೈಲುಗಳು ಸರ್ವಿಸಿಂಗ್‌ಗೋಸ್ಕರ ಶಿವಮೊಗ್ಗಕ್ಕೆ ಆಗಮಿಸಲಿವೆ. ಬೀರೂರು- ಶಿವಮೊಗ್ಗ ನಡುವೆ ಜೋಡಿ ರೈಲ್ವೆ ಮಾರ್ಗ ನಿರ್ಮಾಣ ಅತ್ಯಂತ ಪ್ರಸ್ತುತ.

from India & World News in Kannada | VK Polls https://ift.tt/zRnsKuc

ಕೊಟ್ಟೂರು ಬಳಿ ಬೈಕ್ ರ‍್ಯಾಲಿ ವೇಳೆ ಸಿರಿಗೆರೆ- ಉಜ್ಜಿನಿ ಪೀಠದ ಭಕ್ತರ ನಡುವೆ ಮಾರಾಮಾರಿ: ವೃದ್ಧೆ ಗಂಭೀರ, ಗ್ರಾಮದಲ್ಲಿ ನಿಶೇಧಾಜ್ಞೆ

ಕೊಟ್ಟೂರು ತಾಲೂಕಿನಲ್ಲಿ ತರಳಬಾಳು ಹುಣ್ಣಿಮೆ ಪ್ರಯುಕ್ತ ಸಿರಿಗೆರೆ ಮಠದ ಭಕ್ತರು ನಡೆಸುತ್ತಿದ್ದ ಬೈಕ್ ರ‍್ಯಾಲಿ ವೇಳೆ ಸಂಘರ್ಷ ನಡೆದಿದೆ. ಬೈಕ್ ರ‍್ಯಾಲಿ ಕಾಳಾಪುರ ಗ್ರಾಮದಲ್ಲಿ ಹಾದುಹೋಗುವಾಗ ಕೆಲ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದು ಒಬ್ಬ ವೃದ್ಧೆಯ ಸ್ಥಿತಿ ಚಿಂತಾಜನಕ ಎಂದು ಹೇಳಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಗಲಾಟೆ ನಡೆದ ಪ್ರದೇಶದಲ್ಲಿ 144 ಕಲಂ ಜಾರಿ‌ ಮಾಡಲಾಗಿದೆ‌ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

from India & World News in Kannada | VK Polls https://ift.tt/CR1oZpX

IND vs NZ: 'ಹಾರ್ದಿಕ್‌ ಮಾಡಿದ ದೊಡ್ಡ ಎಡವಟ್ಟು'-ಭಾರತ ತಂಡದ ಸೋಲಿಗೆ ಪ್ರಮುಖ 5 ಕಾರಣಗಳು!

Top 5 Reasons For India's loss against New zealand: ಶುಕ್ರವಾರ ರಾತ್ರಿ ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಭಾರತ ತಂಡ ಎದುರಾಳಿ ನ್ಯೂಜಿಲೆಂಡ್‌ ವಿರುದ್ಧ 21 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಅಂದಹಾಗೆ ಟಾಸ್‌ ಗೆದ್ದಿದ್ದರೂ ಹಾರ್ದಿಕ್‌ ಪಾಂಡ್ಯ ಅವರ ಯೋಜನೆ ಪಂದ್ಯದಲ್ಲಿ ಸಕರವಾಗಲಿಲ್ಲ. ಇದರಿಂದಾಗಿ ಭಾರತ ತಂಡ ಸೋಲು ಅನುಭವಿಸಿತು. ಭಾರತದ ಸೋಲಿಗೆ ಪ್ರಮುಖ 5 ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/vWhFzD2

5 ವರ್ಷವಾದರೂ ಕುಂಟುತ್ತಿದೆ ಮಂಗಳೂರಿನ ಪಡೀಲು ಡಿಸಿ ಸಂಕೀರ್ಣ ಕಾಮಗಾರಿ: ಅನುದಾನಕ್ಕಾಗಿ ಪರದಾಟ

5 ವರ್ಷದ ಹಿಂದೆ ಮಂಗಳೂರಿನ ಪಡೀಲು ಡಿಸಿ ಸಂಕೀರ್ಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ಇನ್ನೂ ಮುಗಿದಿಲ್ಲ. ಆಕರ್ಷಕ ಪಾರಂಪರಿಕ ಕಟ್ಟಡ ಶೈಲಿ ಕಟ್ಟಡ ನಿರ್ಮಿಸಲು ಆರಂಭದಲ್ಲಿ 41 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿತ್ತು. ನಂತರ 55 ಕೋಟಿ ರೂ. ಮೊತ್ತಕ್ಕೆ ಹೆಚ್ಚಿಸಲಾಯಿತು. 2019ರ ಸೆ.16ಕ್ಕೆ ಪ್ರಥಮ ಹಂತದ ಕಾಮಗಾರಿ ಮುಗಿಯಬೇಕಿತ್ತು. ಎರಡನೇ ಹಂತದಲ್ಲಿ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, ಸರಕಾರಕ್ಕೆ ಸಲ್ಲಿಸಿ ಒಂದೂವರೆ ವರ್ಷವಾದರೂ ಅನುಮೋದನೆ ಸಿಕ್ಕಿಲ್ಲ.

from India & World News in Kannada | VK Polls https://ift.tt/nNWjI0s

ತುಮಕೂರು: ರಾಗಿ ಮಾರಲು ಕಾದು ಕಾದು ಹೈರಾಣ, ಕೇಂದ್ರದಲ್ಲಿ ದಿನಗಟ್ಟಲೇ ರೈತರ ಉಪವಾಸ

Ragi msp selling: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿರುವ ರೈತರು ತುಮಕೂರಿನಲ್ಲಿ ಖರೀದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ತಮ್ಮ ಸರದಿಗಾಗಿ ಕಾಯುತ್ತ ರಾತ್ರಿ ಇಡೀ ಕಾವಲು ಕಾಯುವ ಸ್ಥಿತಿ ಎದುರಾಗಿದ್ದು, ಇದೊಂದಿಗೆ ಹೊಟ್ಟೆಗೆ ಊಟವಿಲ್ಲದೆ ಪರದಾಡುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ಕುಡಿಯುವ ನೀರು ಸಿಗದೆ, ಶೌಚಕ್ಕೂ ವ್ಯವಸ್ಥೆ ಇಲ್ಲದೆ ರೈತರು ಹೈರಾಣಾಗಿದ್ದಾರೆ. ಕ್ವಿಂಟಲ್‌ ರಾಗಿಗೆ 3,578 ರೂಪಾಯಿ ನಿಗದಿ ಪಡಿಸಲಾಗಿದೆ.

from India & World News in Kannada | VK Polls https://ift.tt/qMdleRv

Aero India 2023: ಫೆಬ್ರವರಿ 13ರಿಂದ ಏರ್ ಶೋ, ಯಲಹಂಕ ವಲಯದಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ

Non-veg food prohibited around Yelahanka: ಬೆಂಗಳೂರಿನ ಯಲಹಂಕದಲ್ಲಿರುವ ಏರ್‌ಫೋರ್ಸ್‌ ಸ್ಟೇಷನ್‌ (Airforce station) ಸುತ್ತಮುತ್ತಿನ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡದಂತೆ ಬಿಬಿಎಂಪಿ ನಿಷೇಧಿಸಿದೆ. ಮಾಂಸ ಮಾರಾಟ ಹಾಗೂ ಹೋಟೆಲ್‌, ರೆಸ್ಟೊರೆಂಟ್‌ಗಳು ಸಹ ಮಾಂಸಾಹಾರ ಮಾರಾಟವನ್ನು ನಿಷೇಧಿಸಲಾಗಿದೆ. ಜನವರಿ 30ರಿಂದ ಈ ಆದೇಶ ಜಾರಿಯಾಗಲಿದ್ದು, ಆದೇಶ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವುದಾಗಿ ಬಿಬಿಎಂಪಿ ಎಚ್ಚರಿಸಿದೆ. ಫೆಬ್ರವರಿ 17ರವರೆಗೂ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ.

from India & World News in Kannada | VK Polls https://ift.tt/xm5ObDG

Amit Shah in Hubballi | ಹುಬ್ಬಳ್ಳಿಗೆ ಬಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ: ಹೋಟೆಲ್‌ನಲ್ಲಿ ರಾತ್ರಿ ವಾಸ್ತವ್ಯ

Amit Shah arrived to Hubballi: ಅಮಿತ್‌ ಶಾ ಅವರು ಶುಕ್ರವಾರ ರಾತ್ರಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ತಲುಪಿದರು. ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮುಖಂಡರು ಸ್ವಾಗತ ಕೋರಿದರು. ಖಾಸಗಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲಿರುವ ಅವರು, ಶನಿವಾರ ಬೆಳಿಗ್ಗೆ ಧಾರವಾಡ, ಹುಬ್ಬಳ್ಳಿ ಕುಂದಗೋಳ ಹಾಗೂ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

from India & World News in Kannada | VK Polls https://ift.tt/LeJXEsF

ಮಗನ ಚಿಕಿತ್ಸೆಗೆಂದು ತಂದ 1.20 ಲಕ್ಷ ರೂ. ಹಣ ಬಸ್‌ನಲ್ಲೇ ಬಿಟ್ಟರು: ನಗದು ಇದ್ದ ಬ್ಯಾಗ್‌ ವಾಪಸ್‌ ಕೊಟ್ಟ ನಿರ್ವಾಹಕ, ಚಾಲಕ

Huvina Hadagali: ಹಂಪಿ ಉತ್ಸವಕ್ಕೆಂದು ಹಾಕಿದ್ದ ವಿಶೇಷ ಬಸ್‌ನಲ್ಲಿ ಹೊಸಪೇಟೆಗೆ ಬಂದಿಳಿದಿದ್ದ ಪ್ರಯಾಣಿಕರೊಬ್ಬರು ನಗದು ಹಣವಿದ್ದ ಬ್ಯಾಗ್‌ನ್ನು ಬಸ್‌ನಲ್ಲೇ ಬಿಟ್ಟು ತೆರಳಿದ್ದರು. ಹಣದ ಬ್ಯಾಗ್‌ ಬಸ್‌ನ ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ಬಸ್‌ ನಿಲ್ದಾಣದಲ್ಲಿದ್ದ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಬ್ಯಾಗ್‌ ಹುಡುಕಿಕೊಂಡು ಬರುವವರೆಗೂ ಬಸ್‌ನ್ನು ಅಲ್ಲಿಯೇ ನಿಲ್ಲಿಸಿಕೊಂಡು ಸಿಬ್ಬಂದಿ ಕಾದಿದ್ದರು. ಹಣ ಕಳೆದುಕೊಂಡಿದ್ದ ವ್ಯಕ್ತಿಯು ಅಲ್ಲಿಗೆ ಬಂದು ವಿಚಾರಿಸಿ, ತಮ್ಮ ಹಣ ವಾಪಸ್‌ ಪಡೆದಿದ್ದಾರೆ. ಬಸ್‌ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

from India & World News in Kannada | VK Polls https://ift.tt/vgUQNPo

IND vs NZ: ಹೀನಾಯ ಸೋಲಿಗೆ ಅರ್ಷದೀಪ್ ಕೊಡುಗೆ ಬಗ್ಗೆ ಬೆಳಕು ಚೆಲ್ಲಿದ ಸಂಜಯ್ ಮಾಂಜ್ರೇಕರ್‌!

India vs New Zealand 1st T20I Highlights: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ್ದ ಭಾರತ ತಂಡ ಇದೀಗ ಟಿ20 ಸರಣಿಯ ಮೊದಲ ಹಣಾಹಣಿಯಲ್ಲಿ ತನ್ನದೇ ತಪ್ಪುಗಳಿಗೆ ಭಾರಿ ಬೆಲೆ ತೆತ್ತಿತು. ಅದರೂ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಕಿವೀಸ್‌ ತಂಡ 176/6 ರನ್‌ಗಳ ಸವಾಲಿನ ಮೊತ್ತ ದಾಖಲಿಸುವ ಅವಕಾಶ ಮಾಡಿಕೊಟ್ಟು ಬೆಪ್ಪಾಯಿತು. ಅರ್ಷದೀಪ್‌ ಸಿಂಗ್‌ ಒಬ್ಬರೇ 51 ರನ್‌ ಹೊಡೆಸಿಕೊಂಡರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/jEOFlyV

ಬೇಲೂರಿನಲ್ಲಿ ರಾಗಿ, ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ; ರೈತರನ್ನು ಅಲೆದಾಡಿಸದಿರುವಂತೆ ಸೂಚನೆ

ಬೇಲೂರು ಪಟ್ಟಣದ ಎಪಿಎಂಸಿ ಯಾರ್ಡ್ ನ ಆವರಣದಲ್ಲಿ ರಾಗಿ, ಭತ್ತ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಶಾಸಕ ಕೆ.ಎಸ್. ಲಿಂಗೇಶ್ ಅವರು ಈ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಹಲವಾರು ಖರೀದಿ ಕೇಂದ್ರಗಳಲ್ಲಿ ರೈತರನ್ನು ಅನವಶ್ಯಕವಾಗಿ ಓಡಾಡಿಸಿರುವ ಉದಾಹರಣೆಗಳಿವೆ. ಈ ಕೇಂದ್ರದಲ್ಲಿ ಅಂಥ ಸಂದರ್ಭಗಳು ಬರಬಾರದು. ವಿದ್ಯುತ್ ಇಲ್ಲ, ಸರ್ವರ್ ಡೌನ್ ಇಂಬಿತ್ಯಾದಿ ಕಾರಣಗಳನ್ನು ಹೇಳಿ ರೈತರನ್ನು ತಿರುಗಾಡಿಸುವಂತಿಲ್ಲ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

from India & World News in Kannada | VK Polls https://ift.tt/GVSXw1y

Mood of the Nation - ಇಂದೇ ಲೋಕಸಭೆ ಚುನಾವಣೆ ನಡೆದರೆ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ

ಕಳೆದ ಚುನಾವಣೆಯಲ್ಲಿ 352 ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಎನ್ ಡಿಎ ಸರ್ಕಾರ, ಕೇಂದ್ರದಲ್ಲಿ ಪುನಃ ಅಧಿಕಾರಕ್ಕೆ ಬರುವುದು ಬಹುತೇಕ ಸ್ಪಷ್ಟವಾಗಿದೆ. ಖಾಸಗಿ ಸುದ್ದಿ ವಾಹಿನಿಯೊಂದು ನಡೆಸುತ್ತಿರುವ ಮೂಡ್ ಆಫ್ ದ ನೇಷನ್ ಸಮೀಕ್ಷೆಯ ಅಡಿಯಲ್ಲಿ 2023ರ ಜನವರಿಯಲ್ಲಿ ನಡೆಸಲಾಗಿರುವ ಸಮೀಕ್ಷೆಯ ವರದಿಯೊಂದು ಪ್ರಕಟವಾಗಿದ್ದು, ಅದರಲ್ಲಿ ಇಂದೇ ಚುನಾವಣೆ ನಡೆದರೆ ಎನ್ ಡಿಎ ಒಕ್ಕೂಟ 298 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ.

from India & World News in Kannada | VK Polls https://ift.tt/yfbYGdK

ಮಾಗಡಿ ತಾಲೂಕಿನ ಮನೆಗಳಿಗೆ ಕಾವೇರಿ ನೀರು, ಯೋಜನೆಗೆ ಫೆಬ್ರವರಿಯಲ್ಲಿ ಚಾಲನೆ: ಶಾಸಕ ಮಂಜುನಾಥ್‌

Cauvery Water to Magadi: ಮಾಗಡಿ ತಾಲೂಕಿನಲ್ಲಿ ಮನೆ ಮನೆಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಫೆಬ್ರವರಿಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಮಂಜುನಾಥ್‌ ತಿಳಿಸಿದ್ದಾರೆ. ಯೋಜನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕೋಟೆ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

from India & World News in Kannada | VK Polls https://ift.tt/wroX8jp

Tejaswini Gowda On DK Shivakumar-ತನ್ನ ಜಮೀನನ್ನೇ ಹಾಳುಮಾಡಿಕೊಂಡಿರುವ ಡಿಕೆ ಶಿವಕುಮಾರ್ ಸಿಎಂ ಆಗಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿರುವ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ತನ್ನ ಜಮೀನನ್ನು ಹಾಳುಮಾಡಿಕೊಂಡಿರುವ ಡಿ.ಕೆ.ಶಿವಕುಮಾರ್‌ ಹೇಗೆ ಫಸಲನ್ನು ಪಡೆಯಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ವಿವಿಧೆಡೆ ವಿಜಯ ಸಂಕಲ್ಪ ಅಭಿಯಾನ ನಡೆಸಿದ ಅವರು ಹಳೇ ಮೈಸೂರು ಭಾಗಗಳಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

from India & World News in Kannada | VK Polls https://ift.tt/XZL80YW

ನಿವೇಶನ ಉಚಿತ ಎಂದು 5 ಲಕ್ಷ ಹಣ ಕೇಳಿದರು: ಪದ್ಮಶ್ರೀ ಪುರಸ್ಕೃತ ಮುನಿವೆಂಕಟಪ್ಪ‌



from India & World News in Kannada | VK Polls https://ift.tt/IL2tq6B

ಮೊದಲನೇ ಟಿ20 ಪಂದ್ಯಕ್ಕೆ ಭಾರತ-ಕಿವೀಸ್‌ ಸಂಭಾವ್ಯ XI



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/hRO0XHx

Republic Day 2023 : ನವಭಾರತಕ್ಕಾಗಿ ನವ ಕರ್ನಾಟಕ, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಮ್ಮದು ಅಗ್ರಸ್ಥಾನ: ಥಾವರ್ ಚಂದ್ ಗೆಹ್ಲೋಟ್

Thawar Chand Gehlot On Republic Day Speech ನವಭಾರತಕ್ಕಾಗಿ ನವ ಕರ್ನಾಟಕ ಘೋಷಾವಾಕ್ಯದಲ್ಲಿ, ಸರ್ವರನ್ನು ಒಳಗೊಂಡ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಮ್ಮದು ಅಗ್ರಸ್ಥಾನ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತಾದ ವಿವರ ಇಲ್ಲಿದೆ.

from India & World News in Kannada | VK Polls https://ift.tt/5Txpywg

BDA Site: ಬೆಂಗಳೂರು ಕಾರಂತ ಬಡಾವಣೆಯಲ್ಲಿ ಬಡವರಿಗೂ ನಿವೇಶನ: 30-40 ಅಳತೆಯ ಶೇ.60ರಷ್ಟು ಸೈಟ್‌ಗಳ ರಚನೆ

BDA Site: ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆಯ ಬಿಡಿಎ ಯೋಜನೆ ಚುರುಕುಗೊಂಡಿದ್ದು, ಬಡವರಿಗೆ ಅನುಕೂಲವಾಗಲು ಹೆಚ್ಚು 30-40 ಚದರಡಿಯ ಸೈಟ್ ನಿರ್ಮಿಸಲು ಬಿಡಿಎ ನಿರ್ಧರಿಸಿದೆ . ಬೆಂಗಳೂರು ಉತ್ತರ ಭಾಗದಲ್ಲಿರುವ ಈ ಲೇಔಟ್ ನಲ್ಲಿ ಸುಮಾರು 35-40 ಲಕ್ಷಕ್ಕೆ ಈ ಸೈಟ್ ಸಿಗಲಿದೆ.

from India & World News in Kannada | VK Polls https://ift.tt/RCDJ6gh

ಮತದಾರರ ನೆರವಿಗಾಗಿ 'ವೋಟರ್ ಹೆಲ್ಪ್ ಲೈನ್ ಆ್ಯಪ್'

ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕರ್ಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದೇವರಾಜ ಭೂತೆ. ಜನಪ್ರತಿನಿಧಿಗಳಿಗೆ ಯಾವುದೇ ಪರೀಕ್ಷೆಯಿಲ್ಲ. ಆದರೆ, ಮತದಾರರಿಗೆ ತಮಗೆ ಬೇಕಾದ ಉತ್ತಮ ನಾಯಕರನ್ನು ಆಯ್ದುಕೊಳ್ಳಲು ಮತದಾನ ಪರೀಕ್ಷೆಗಳಿವೆ. ಅವನ್ನು ಸೂಕ್ತವಾಗಿ ಬಳಸಿಕೊಂಡು, ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು. ಇದು ಪ್ರತಿಯೊಬ್ಬ ಮತದಾರರ ಜವಾಬ್ದಾರಿಯೂ ಆಗಿರುತ್ತದೆ ಎಂದು ಅವರು ತಿಳಿಸಿದರು. ಮತದಾರರು ಈಗಾಗಲೇ ಬಿಡುಗಡೆ ಮಾಡಲಾಗಿರುವ ಹೆಲ್ಪ್ ಲೈನ್ ಆ್ಯಪ್ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

from India & World News in Kannada | VK Polls https://ift.tt/KMdZSAb

Republic Day 2023: ಸಶಸ್ತ್ರ ಪಡೆಗಳ 412 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ, 6 ಜನರಿಗೆ ಕೀರ್ತಿ ಚಕ್ರ

Gallantry awards: 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಮೂರು ವಿಭಾಗಗಳಲ್ಲಿ ರಾಜ್ಯ ಪೊಲೀಸ್‌ ಪಡೆ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗಳ 901 ಸಿಬ್ಬಂದಿಗೆ ಪೊಲೀಸ್‌ ಪದಕಗಳನ್ನು ಘೋಷಿಸಲಾಗಿದೆ. ಹದಿನೈದು ಜನರಿಗೆ ಶೌರ್ಯ ಚಕ್ರ ಹಾಗೂ ಆರು ಜನರಿಗೆ ಕೀರ್ತಿ ಚಕ್ರ ಪ್ರಕಟಿಸಲಾಗಿದೆ. ಕರ್ನಾಟಕದ ಇಪ್ಪತ್ತು ಪೊಲೀಸರೂ ಪದಕ ಪಟ್ಟಿಯಲ್ಲಿದ್ದಾರೆ.

from India & World News in Kannada | VK Polls https://ift.tt/iZrjoeR

Bengaluru–Mysuru Expressway: ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತ, ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ

Mandya Bypass: ಈಗಾಗಲೇ ರಾಮನಗರ ಮತ್ತು ಚನ್ನಪಟ್ಟಣದ ಬೈಪಾಸ್‌ಗಳು ಸಂಚಾರಕ್ಕೆ ಮುಕ್ತವಾಗಿವೆ. ಇದೀಗ ಮಂಡ್ಯ ಬೈಪಾಸ್‌ ಸಂಚಾರಕ್ಕೆ ಮುಕ್ತವಾಗಿದ್ದು, ಮಂಡ್ಯ ನಗರದೊಳಗೆ ಟ್ರಾಫಿಕ್‌ ಕಡಿಮೆಯಾಗಲಿದೆ. ಸುಮಾರು ಆರು ಕಿ.ಮೀ. ದೂರದವರೆಗೂ ಬೈಪಾಸ್‌ ನಿರ್ಮಾಣವಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯು (Bengaluru–Mysuru Expressway) ಮಾರ್ಚ್‌ನಲ್ಲಿ ಉದ್ಘಾಟನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆಗೆ ಬರಲಿದ್ದಾರೆ. ಮಂಡ್ಯದಲ್ಲಿಯೇ ಆ ಕಾರ್ಯಕ್ರಮವು ನಡೆಯಲಿದೆ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

from India & World News in Kannada | VK Polls https://ift.tt/qZhHeLP

HD Kumaraswamy in Raichur- ದೇವದುರ್ಗದಲ್ಲಿ ಕುಮಾರಸ್ವಾಮಿ ಮಿಂಚಿನ ಸಂಚಾರ: ಸರ್ವ ಸಮಸ್ಯೆಗಳಿಗೂ ಪಂಚರತ್ನದಲ್ಲಿ ಪರಿಹಾರ ಎಂದು ಮಾಜಿ ಸಿಎಂ ಭರವಸೆ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಬುಧವಾರ ದೇವದುರ್ಗದಲ್ಲಿ ಸಂಚರಿಸಿದೆ. ಈ ವೇಳೆ ಜಾಲಹಳ್ಳಿಯ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಡವರು, ರೈತರು, ಕೂಲಿಕಾರರು, ಮಹಿಳೆರ ಸಮಗ್ರ ಅಭಿವೃದ್ಧಿಗಾಗಿ ನಮಗೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಟ್ಟು ನೋಡಿ ಎಂದು ಮನವಿ ಮಾಡಿದರು. ಪಂಚರತ್ನದಲ್ಲಿ ರೈತರು, ಆರೋಗ್ಯ, ಶಿಕ್ಷಣ, ವಸತಿ ಸೇರಿ ಸರ್ವ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಒಗಿಸಲಾಗುವುದು ಎಂದು ಭರವಸೆ ನೀಡಿದರು.

from India & World News in Kannada | VK Polls https://ift.tt/vbkWQh3

ಜೆಡಿಎಸ್‌ ಕೋಟೆಯಲ್ಲಿ ಮೋದಿ ಅಸ್ತ್ರ:ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಆಹ್ವಾನಿಸಲು ಯತ್ನ: ಹಾಸನದಲ್ಲಿ ರಾಜಕೀಯ ಲೆಕ್ಕಾಚಾರ ಜೋರು

ಹಾಸನ ಜಿಲ್ಲೆಯ ಏಳು ಕ್ಷೇತಗಳಲ್ಲಿ ಕನಿಷ್ಠ ನಾಲ್ಕು ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಚಾಣಕ್ಷ ಅಮಿತ್‌ ಷಾ ಅವರನ್ನು ಕರೆತರಲು ಬಿಜೆಪಿ ವರಿಷ್ಠರು ಪ್ರಯತ್ನದಲ್ಲಿದ್ದಾರೆ ಎಂಬ ವಿಚಾರ ಕುತೂಹಲ ಕೆರಳಿಸಿದೆ. ವರಿಷ್ಠರ ಮಟ್ಟದಲ್ಲಿ ಈಗಾಗಲೇ ಪ್ರಮುಖ ನಾಯಕರು ಯಾವ ಜಿಲ್ಲೆಗೆ ಭೇಟಿ ನೀಡಬೇಕು ಎನ್ನುವ ಬ್ಲೂಪ್ರಿಂಟ್‌ ಸರೆಡಿಯಾಗಿದೆ.. ಈ ಪಟ್ಟಿ ಅತ್ಯಂತ ರಹಸ್ಯವಾಗಿದ್ದು, ಸ್ಥಳೀಯ ಮುಖಂಡರಿಗೂ ಈವರೆಗೆ ಯಾವುದೇ ಮಾಹಿತಿ ಇಲ್ಲ.

from India & World News in Kannada | VK Polls https://ift.tt/Jt8DAFd

ಸೆರೆ ಸಿಗದಿದ್ದರೆ ದಾಳಿಕೋರ ಚಿರತೆಗೆ ಗುಂಡಿಕ್ಕಲು ಸಿಎಂ ಸೂಚನೆ: ತಿ.ನರಸೀಪುರದಲ್ಲಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿಕೆ

ST Somashekar in T Narasipura: ತಿ.ನರಸೀಪುರದ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಚಿರತೆ ದಾಳಿ (Leopard Attack) ನಡೆಸಿರುವ ಪ್ರಕರಣಗಳು ದಾಖಲಾಗುತ್ತಿವೆ. ಈವರೆಗೂ ಚಿರತೆ ದಾಳಿಯಿಂದಾಗಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿರುವ ಸಚಿವ ಎಸ್‌.ಟಿ.ಸೋಮಶೇಖರ್‌, ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್‌ ವಿರತಿಸಿದ್ದಾರೆ. ಚಿರತೆ ಸೆರೆ ಹಿಡಿಯಲು ಅಥವಾ ಗುಂಡಿಕ್ಕಿ ಕೊಲ್ಲಲು ಮುಖ್ಯಮಂತ್ರಿಯವರು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

from India & World News in Kannada | VK Polls https://ift.tt/nqYj7T6

ನೆಟೆ ರೋಗದಿಂದ ತೊಗರಿ ಬೆಳೆ ಹಾನಿ: ಪ್ರತಿ ಹೆಕ್ಟೇರ್‌ಗೆ 10,000 ರೂ. ಪರಿಹಾರ ಘೋಷಣೆ

Toor Dal Crop: ಕಲಬುರಗಿ ಜಿಲ್ಲೆಯ ಹಲವು ಭಾಗಗಳಲ್ಲಿ ತೊಗರಿ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡಿತ್ತು. ಇದರಿಂದ ಬೆಳೆ ಸಂಪೂರ್ಣ ಹಾಳಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಳಂದ ಮತ್ತು ಅಫಜಲಪುರ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆ ಹಾನಿಗೀಡಾಗಿದ್ದು, ಮೂರು ತಿಂಗಳಿಂದ ರೈತರು ಪರಿಹಾರಕ್ಕಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಪರಿಹಾರ ಘೋಷಿಸಿದ್ದಾರೆ.

from India & World News in Kannada | VK Polls https://ift.tt/LN2WxDA

IND vs NZ: 'ಟೀಮ್ ಇಂಡಿಯಾದ ಜಾದುಗಾರ', ಸ್ಟಾರ್‌ ಆಟಗಾರನ ಗುಣಗಾನ ಮಾಡಿದ ರೋಹಿತ್‌ ಶರ್ಮಾ!

India vs New Zealand ODI Series 2023: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್‌ ಸ್ವೀಪ್‌ ಸಾಧನೆ ಮೆರೆದಿದೆ. ಸರಣಿಯ ಮೂರೂ ಪಂದ್ಯಗಳಲ್ಲಿ ಅಧಿಕಾರಯುತ ಆಟವಾಡಿದ ಭಾರತ ತಂಡದ ಕಿವೀಸ್‌ ಪಡೆಯ ಸವಾಲನ್ನು ಸುಲಭವಾಗಿ ಮೆಟ್ಟಿನಿಂತಿತು. ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 90 ರನ್‌ಗಳ ಜಯ ದಾಖಲಿ ಅಬ್ಬರಿಸಿದ ಭಾರತ ತಂಡ, 2023ರಲ್ಲಿ ಸತತ ಎರಡು ಏಕದಿನ ಕ್ರಿಕೆಟ್‌ ಸರಣಿಗಳನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OPzJiQX

IND vs NZ: ನ್ಯೂಜಿಲೆಂಡ್‌ನ ಬಗ್ಗುಬಡಿದು ಒಡಿಐನಲ್ಲಿ ನಂ.1 ಪಟ್ಟ ಪಡೆದ ಟೀಮ್ ಇಂಡಿಯಾ!

India vs New Zealand 3rd ODI Highlights: ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ನಂ.1 ಸ್ಥಾನ ಮರಳಿ ಪಡೆದಿದೆ. ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೂ ಮುನ್ನ ಕಿವೀಸ್‌ ಪಡೆ ಒಡಿಐನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ತಂಡವಾಗಿತ್ತು. 3ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಇದೀಗ 3-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ನಂ.1 ಪಟ್ಟ ತನ್ನದಾಗಿಸಿಕೊಂಡಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 90 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/fDcymUo

ಕುಮದ್ವತಿ ನದಿ ತಟದಲ್ಲಿ ಮೊಸಳೆ ಸಂಚಾರ: ರಟ್ಟಿಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಆತಂಕದ ಕಾರ್ಮೋಡ

Crocodile scare in Kumudvathi river: ಇಲ್ಲಿನ ಹಳ್ಳಿಗಳಲ್ಲಿ ನಿತ್ಯ ಹಲವು ಕೆಲಸ ಕಾರ್ಯಗಳಿಗೆ ನದಿಯನ್ನು ಅವಲಂಬಿಸಿದ್ದಾರೆ. ದನಕರುಗಳಿಗೆ ನೀರು ಕುಡಿಸುವುದು, ಜಮೀನಿಗೆ ನೀರು ಹಾಯಿಸಲು ಕುಮದ್ವತಿಯ ನೀರು ಬಳಕೆಯಾಗುತ್ತಿದೆ. ಮೂಲ ಸೌಕರ್ಯಗಳಿರುವ ಸಮೀಪದ ಹಳ್ಳಿಗೆ ತೆರಳಲು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳು ನದಿ ದಾಟಿ ಸಾಗಬೇಕಿದೆ. ಆದರೆ, ಕೆಲವು ದಿನಗಳಲ್ಲಿ ಇಲ್ಲಿ ಮೊಸಳೆಯ ಸಂಚಾರ ಶುರುವಾಗಿದೆ. ಬೃಹತ್ ಗಾತ್ರದ ಮೊಸಳೆಯನ್ನು ಕಂಡಿರುವ ಗ್ರಾಮಸ್ಥರು ಭಯದಲ್ಲಿ ದಿನ ದೂಡುತ್ತಿದ್ದಾರೆ. ಆದಷ್ಟು ಬೇಗ ಆ ಮೊಸಳೆಯನ್ನು ಬೇರೆಡೆಗೆ ಸಾಗಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

from India & World News in Kannada | VK Polls https://ift.tt/yTVx9Cq

Siddaramaiah-ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಾಸಕ್ಕೆ ವಾಸ್ತುಪ್ರಕಾರವೇ ಮನೆ ಹುಡುಕಿಯಾಗಿದೆ, ಗೃಹ ಪ್ರವೇಶ ಬಾಕಿಯಿದೆ

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಅವರ ವಾಸಕ್ಕೆ ಕೋಲಾರದಲ್ಲಿ ಸಕಲ ಸೌಕರ್ಯಗಳುಳ್ಳ ಒಂದು ದೊಡ್ಡ ಮನೆ ನಿಗದಿಯಾಗಿದೆ. ಸಿದ್ದರಾಮಯ್ಯ ಅವರ ಸೂಚನೆಯಂತೆ ಕೋಲಾರದ ಸ್ಥಳೀಯ ಮುಖಂಡರು ಮನೆ ಹುಡುಕಾಡಿದ್ದು ಕುರುಬರಪೇಟೆಯಲ್ಲಿ ಒಂದು ಎಕರೆಯಷ್ಟು ವಿಶಾಲ ಜಾಗದಲ್ಲಿ ಕಟ್ಟಲಾಗಿರುವ 56 ಅಡಿ ಉದ್ದ, 46 ಅಗಲ ವಿಸ್ತೀರ್ಣದ ಮನೆಯನ್ನು ಅಂತಿಮಗೊಳಿಸಲಾಗಿದ್ದು ಸಿದ್ದರಾಮಯ್ಯ ಒಪ್ಪಿಗೆ ನೀಡಲು ಬಾಕಿಯಿದೆ. ಒಪ್ಪಿಗೆ ನೀಡಿದಲ್ಲಿ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರ ಗೃಹ ಪ್ರವೇಶ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

from India & World News in Kannada | VK Polls https://ift.tt/0I3X9s8

US Shooting: ಅಮೆರಿಕದಲ್ಲಿ ದುರಂತದ ಮೇಲೆ ದುರಂತ: ಮತ್ತೆ 3 ಗುಂಡಿನ ದಾಳಿಗಳಲ್ಲಿ 9 ಸಾವು

Using Gun Shooting Incident: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ 11 ಮಂದಿಯನ್ನು ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ, ಮತ್ತೆ ಮೂರು ಭೀಕರ ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕನಿಷ್ಠ 9 ಮಂದಿ ಬಲಿಯಾಗಿದ್ದಾರೆ.

from India & World News in Kannada | VK Polls https://ift.tt/r9hjicN

ಸೀಬರ್ಡ್‌ 2ನೇ ಹಂತದ ವಿಸ್ತಾರ; ಹೊಸ ಸಮಸ್ಯೆಗಳ ಅವಾಂತರ: ಕಾರವಾರದ ಬೈತಖೋಲ ಗುಡ್ಡದ ನಿವಾಸಿಗಳಿಗೆ ಎತ್ತಂಗಡಿ ಆತಂಕ

ಸೀಬರ್ಡ್‌ 2ನೇ ಹಂತದ ಯೋಜನೆ ವಿಸ್ತಾರಗೊಳ್ಳುತ್ತಿದ್ದಂತೆ ಸಮಸ್ಯೆಗಳು ಜಟಿಲಗೊಳ್ಳುತ್ತಿದೆ. ಗುಡ್ಡದ ಅಂಚಿನ ನಿರಾಶ್ರಿತರಲ್ಲಿ ಎತ್ತಂಗಡಿ ಆತಂಕ ಕಾಡುತ್ತಿದೆ. ಬೈತಖೋಲ ಗುಡ್ಡದ ಅಂಚಿನಲ್ಲಿ ನೂರಾರು ಕುಟುಂಬಗಳು ನೆಲೆಸಿವೆ. ಈ ಗುಡ್ಡವೂ ಸೇರಿ 2259 ಎಕರೆ ಅರಣ್ಯ ಪ್ರದೇಶವನ್ನು ನೌಕಾನೆಲೆಗಾಗಿ ರಕ್ಷಣಾ ಇಲಾಖೆಗೆ ನೀಡಲಾಗಿದೆ. ಅದರಲ್ಲಿ 200 ಎಕರೆ ಅರಣ್ಯೇತರ ಉದ್ದೇಶಕ್ಕೆ ಬಳಸಲು ಅನುಮತಿ ಇದೆ. ಗುಡ್ಡದ ಅಂಚಿನಲ್ಲಿ ಜನವಸತಿ ಮುಂದುವರಿದಿತ್ತು. ಈಗ ಸೀಬರ್ಡ್‌ 2ನೇ ಹಂತದ ಯೋಜನೆಯಲ್ಲಿ ಆ ಗುಡ್ಡವನ್ನು ಅಪಾಯಕಾರಿ ವಿನ್ಯಾಸದಲ್ಲಿ ಕೊರೆದು ರಸ್ತೆ ನಿರ್ಮಿಸಲಾಗುತ್ತಿದೆ.

from India & World News in Kannada | VK Polls https://ift.tt/p12NlCo

ಪ್ರವಾಸಿ ತಾಣವಾದ ಶಿವಮೊಗ್ಗ ವಿಮಾನ ನಿಲ್ದಾಣ: ರಾಜ್ಯದ ಎರಡನೇ ಅತಿ ದೊಡ್ಡ ರನ್‌ ವೇ ಖ್ಯಾತಿ: ಫೆ.27ಕ್ಕೆ ಉದ್ಘಾಟನೆ

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ಕಮಲಾಕೃತಿಯ ಏರ್‌ ಪೋರ್ಟ್‌ ಕಟ್ಟಡ ಕಣ್ತುಂಬಿಕೊಳ್ಳೋದಕ್ಕೆ ಜನಸ್ತೋಮವೇ ಹರಿದು ಬರುತ್ತಿದೆ. ರಾಜ್ಯದ ಎರಡನೇ ಅತಿ ಉದ್ದದ ರನ್‌ ವೇ ಖ್ಯಾತಿಯ ವಿಮಾನ ನಿಲ್ದಾಣ ಇದಾಗಿದ್ದು, ಫೆ.27ರಂದು ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ರನ್‌ ವೇನಲ್ಲಿಓಡಾಡಿ ಸಂಭ್ರಮಿಸುತ್ತಿದ್ದಾರೆ. ಕಟ್ಟಡ ಮುಂಭಾಗದಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದರಲ್ಲಿ ತನ್ಮಯರಾಗಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಹಕ್ಕೊತ್ತಾಯವೂ ಕೇಳಿಬರುತ್ತಿದೆ.

from India & World News in Kannada | VK Polls https://ift.tt/m5y2znv

ವೇತನ ಪರಿಷ್ಕರಣೆಗೆ ಆಗ್ರಹ, ರಾಜ್ಯಾದ್ಯಂತ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ; ಎಂದಿನಂತೆ ಬಸ್‌ ಸಂಚಾರ

karnataka Transport employees protest: ರಾಜ್ಯದ ಸಾರಿಗೆ ಸಂಸ್ಥೆಗಳ ನೌಕರರು ಸಾರಿಗೆ ನಿಗಮಗಳ ಎದುರು ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಆದರೆ, ಇದರಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ಸಂಚಾರದಲ್ಲಿ ಯಾವುದೇ ತೊಡಕುಂಟಾಗುವುದಿಲ್ಲ ಎಂದು ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ. ಹದಿನಾರು ಬೇಡಿಕೆಗಳ ಈಡೇರಿಕೆಗಾಗಿ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಬೇಡಿಕೆಗಳು ಈಡೇರದಿದ್ದರೆ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್‌.ವಿ.ಅನಂತಸುಬ್ಬರಾವ್‌ ಎಚ್ಚರಿಕೆ ನೀಡಿದ್ದಾರೆ.

from India & World News in Kannada | VK Polls https://ift.tt/Xcmz1Ma

Siddaramaiah-ಸಿಎಂಗೆ ತಾಕತ್ತು ಇದ್ದರೆ ಬಿಜೆಪಿ ಸರಕಾರದ ಕೊಡುಗೆಗಳ ಬಗ್ಗೆ ಚರ್ಚೆಗೆ ಬರಲಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತದ್ದರೆ ಬಿಜೆಪಿ ಸರಕಾರದ ಕೊಡುಗೆಗಳ ಬಗ್ಗೆ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ಮಾಡಿದ್ದಾರೆ ಸಿದ್ದರಾಮಯ್ಯ. ಜೊತೆಗೆ ಬಿಜೆಪಿ ಶೇ.40ರಷ್ಟು ಸರಕಾರ ಎಂದು ಜನಜನಿತವಾಗಿದೆ. ಧಮ್ಮು ತಕಾತ್ತು ಇದ್ದರೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಸಮಿತಿಯ ಮೂಲಕ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಸಚಿವ ಸುಧಾಕರ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ನೀವು ಹೇಳುವ ವ್ಯಕ್ತಿಗೆ ನಾವು ಟಿಕೆಟ್‌ ಕೊಡುತ್ತೇವೆ. ಎಲ್ಲರು ಒಟ್ಟಾಗಿ ಸುಧಾಕರ್‌ನ್ನು ಸೋಲಿಸಲೇ ಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

from India & World News in Kannada | VK Polls https://ift.tt/vXwnx1q

IND vs NZ 3rd ODI: ಕಿವೀಸ್‌ ವಿರುದ್ದ 3ನೇ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

Indis vs New Zealand 3rd ODI Match preview: ನ್ಯೂಜಿಲೆಂಡ್‌ ವಿರುದ್ದ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಈಗಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮಂಗಳವಾರ ಇಂದೋರ್‌ನ ಹೋಲ್ಕರ್‌ ಸ್ಟೇಡಿಯಂನಲ್ಲಿ ನಡೆಯುವ ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರತ ತಂಡ, ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸಬರಿಗೆ ಮಣೆ ಹಾಕುವ ಸಾಧ್ಯತೆ ಇದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/aMP7y4u

ಹಾಕಿದ ಒಂದು ವರ್ಷದಲ್ಲೇ ವಾಲಿವೆ ಹೈಮಾಸ್ಟ್‌ ದೀಪ ಕಂಬಗಳು!

ಜಗಳೂರು ಪಟ್ಟಣದ ಚಳ್ಳಕೆರೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ನಗರದ ಅಂದ ಹೆಚ್ಚಿಸುವ ಸಲುವಾಗಿ ವರ್ಷದ ಹಿಂದೆ ಸ್ಥಳೀಯ ಆಡಳಿತ ರಸ್ತೆಯ ವಿಭಜಕಗಳಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಿತ್ತು. ಆದರೆ, ಹೈಮಾಸ್ಟ್‌ ದೀಪದ ಕಂಬಗಳು ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿ ಗೆ ಬಂದು ತಲುಪಿವೆ. ಕಳೆದ ವರ್ಷ ಜು. 13ರಂದು ಶಾಸಕ ಎಸ್‌.ವಿ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಇವು ಉದ್ಘಾಟನೆಗೊಂಡಿದ್ದವು. ಅದಾಗಿ, ಕೇವಲ ಒಂದೂವರೆ ವರ್ಷದಲ್ಲೇ ಅನೇಕ ಕಂಬಗಳಲ್ಗೆ ಇರುವ ನಟ್‌, ಬೋಲ್ಡ್‌ ಕಳಚುವ ಹಂತದಲ್ಲಿವೆ.

from India & World News in Kannada | VK Polls https://ift.tt/JDe1kM0

ಶಾಲೆಗೆ ತೆರಳೋಕೆ ಊರಿಗೊಂದು ಬಸ್‌ ಬಿಡಿ: ಬೆಳ್ಳಾವರ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳ ಪರದಾಟ

ಹಾಸನ ಜಿಲ್ಲೆಯ ಬೆಳ್ಳಾವರ ಗ್ರಾಮದ ಸುತ್ತಮುತ್ತಲ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಅಂದರೆ ನಿತ್ಯ ಪರದಾಡುವಂತಾಗಿದೆ. ಸಮರ್ಪಕ ರಸ್ತೆ ಇಲ್ಲದಿದ್ದರೂ ಕಲ್ಲುಗುಂಡಿಗಳಲ್ಲಿಅದೊಂದು ಬಸ್‌ ಮಾತ್ರ ಗ್ರಾಮಕ್ಕೆ ಬರುತ್ತಿತ್ತು. ಆದರೆ, ಈಗ ಉತ್ತಮ ರಸ್ತೆ ಇದ್ದರೂ, ಸಾಕಷ್ಟು ಪ್ರಯಾಣಿಕರಿದ್ದರೂ ಬಸ್‌ ವ್ಯವಸ್ಥೆ ಮಾತ್ರ ಇಲ್ಲ. ​ಬಸ್‌ ಬಾರದೆ ನಗರಕ್ಕೆ ವಿದ್ಯಾಭ್ಯಾಸಕ್ಕೆಂದು ತೆರಳುವ ನೂರಾರು ವಿದ್ಯಾರ್ಥಿಗಳು, ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ರೈತರು, ರೋಗಿಗಳು, ವೃದ್ಧರು ಸೇರಿದಂತೆ ಹತ್ತಳ್ಳಿ ಗ್ರಾಮದ ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.

from India & World News in Kannada | VK Polls https://ift.tt/WZGwReD

Kolar to Bengaluru Train: ಕೋಲಾರ-ಬೆಂಗಳೂರು ನಡುವೆ ಭಾಗಶಃ ರೈಲು ಸಂಚಾರ ಬಂದ್‌

Bangalore-Kolar Train service: ಕುಪ್ಪಂನಿಂದ ಬೆಂಗಳೂರಿಗೆ ಸಂಚರಿಸುವ ರೈಲು ಭಾಗಶಃ ರದ್ದುಗೊಳ್ಳಲಿದೆ. ಮೆಮು ರೈಲು (memu train) ಹಾಗೂ ಡೆಮು ರೈಲುಗಳ (demu train) ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಕುರಿತು ನೈಋತ್ಯ ರೈಲ್ವೆ ಇಲಾಖೆಯು ತಿಳಿಸಿದ್ದು, ಫೆಬ್ರುವರಿ ನಾಲ್ಕರವರೆಗೂ ಹಲವು ಕಡೆ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

from India & World News in Kannada | VK Polls https://ift.tt/6SgFasL

Ediga Conference-ಶಿವಮೊಗ್ಗದಲ್ಲಿ‌ ಈಡಿಗರ ಶಕ್ತಿ ಪ್ರದರ್ಶನ: 2ಎ ಮೀಸಲಾತಿಗೆ ಕತ್ತರಿ ಹಾಕದಂತೆ ಹಕ್ಕೊತ್ತಾಯ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಭಾನುವಾರ ಈಡಿಗ ಸಮುದಾಯದಿಂದ ಬೃಹತ್ ಜಾಥಾ ಹಾಗೂ ಸಮಾವೇಶ ನಡೆಯಿತು. ಜಾಥಾದಲ್ಲಿ ಐದು ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಮೊದಲೇ ತಿಳಿಸಿದಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಸಮಾವೇಶದಲ್ಲಿ ಭಾಗವಹಿಸಲಿಲ್ಲ. ಬೇಳೂರು ಗೋಪಾಲಕೃಷ್ಣ ಮತ್ತು ಮಧು ಬಂಗಾರಪ್ಪ ಅವರು ಸಹ ಗೈರಾಗಿದ್ದರು.

from India & World News in Kannada | VK Polls https://ift.tt/pBmnQVt

Hockey World Cup: ನ್ಯೂಜಿಲೆಂಡ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಭಾರತ!

India vs New Zealand Hockey Match Highlights: ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ನಡೆದಿದ್ದ ಕ್ರಾಸ್‌ ಓವರ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ ಪುರುಷರ ಹಾಕಿ ತಂಡ ಸೋಲು ಅನುಭವಿಸಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ನಡೆದಿದ್ದ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ತಂಡ 4-5 ಅಂತರದಲ್ಲಿ ನ್ಯೂಜಿಲೆಂಡ್‌ ತಂಡದ ವಿರುದ್ಧ ಸೋಲು ಒಪ್ಪಿಕೊಂಡಿತು. ಆ ಮೂಲಕ 48 ವರ್ಷಗಳ ಬಳಿಕ ಎಫ್‌ಐಎಎಚ್‌ ಪುರುಷರ ಹಾಕಿ ವಿಶ್ವಕಪ್‌ ಗೆಲ್ಲುವ ಭಾರತ ತಂಡದ ಕನಸು ಭಗ್ನವಾಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4L1o3eU

IND vs NZ: 'ಟೆನಿಸ್‌ ಬಾಲ್‌ ರೀತಿ ಬೌನ್ಸ್‌ ಇತ್ತು'- ನ್ಯೂಜಿಲೆಂಡ್‌ ಸೋಲಿಗೆ ಕಾರಣ ತಿಳಿಸಿದ ಟಾಮ್‌ ಲೇಥಮ್!

Tom Latham on New zealand loss In Raipur Match: ಶನಿವಾರ ರಾಯ್ಪುರ್‌ನಲ್ಲಿ ಭಾರತ ತಂಡದ ವಿರುದ್ಧ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯದಿಂದಾಗಿ ನ್ಯೂಜಿಲೆಂಡ್‌ ತಂಡ ಎಂಟು ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಪ್ರವಾಸಿಗರು 0-2 ಅಂತರದಲ್ಲಿ ಏಕದಿನ ಸರಣಿಯನ್ನು ಕೈಚೆಲ್ಲಿಕೊಂಡರು. ಸೋಲಿನ ಬಳಿಕ ಮಾತನಾಡಿದ ಕಿವೀಸ್‌ ನಾಯಕ ಟಾಮ್‌ ಲೇಥಮ್‌, ಭಾರತ ತಂಡಕ್ಕೆ ಎಲ್ಲಾ ಸಂಗತಿಗಳು ವರ್ಕ್‌ಔಟ್‌ ಆಗಿವೆ. ಆದರೆ, ನಮಗೆ ನಮ್ಮ ಯೋಜನೆಗಳು ಸಕಾರವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gLWEXmQ

ಉಡುಪಿಯ 3 ಎಂಎಲ್‌ಸಿಗಳ ಸಾಧನೆ ಕೇವಲ ಶೇ. 45.79:​​ 5 ವರ್ಷಗಳಲ್ಲಿ 7.84ಕೋಟಿ ರೂ. ವೆಚ್ಚದ 338 ಕಾಮಗಾರಿಯಷ್ಟೇ ಪೂರ್ಣ

ಉಡುಪಿ ಜಿಲ್ಲೆಯಲ್ಲಿ ವಿಧಾನಪರಿಷತ್ತಿನ ಮೂವರು ಸದಸ್ಯರಲ್ಲಿ ಒಬ್ಬರು ಮಾಜಿಯಾಗಿ, ಮತ್ತೊಬ್ಬರು ಆಯ್ಕೆಯಾಗಿದ್ದರೂ ಐದು ವರ್ಷಗಳಿಂದ ಬಾಕಿ ಇರುವ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದೆ. 5 ವರ್ಷವಾದರೂ ಕಾಮಗಾರಿಗಳಿಗೆ ಇನ್ನೂ ಮುಕ್ತಿ ದೊರೆತಿಲ್ಲ. 2018, 19ರಿಂದ 2022, 23ನೇ ಸಾಲಿನ ತನಕ ಮೂವರು ವಿಧಾನಪರಿಷತ್‌ ಸದಸ್ಯರಿಗೆ ರಾಜ್ಯ ಸರಕಾರದಿಂದ ಒಟ್ಟು 22.69 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಒಟ್ಟು 22.89 ಕೋಟಿ ರೂ. ವೆಚ್ಚದ 738 ಕಾಮಗಾರಿ ಪ್ರಸ್ತಾವನೆ ಸಲ್ಲಿಸಿದ್ದು ಇದರಲ್ಲಿ7.84 ಕೋಟಿ ರೂ. ವೆಚ್ಚದ 338 ಕಾಮಗಾರಿಯಷ್ಟೇ ಪೂರ್ಣವಾಗಿದೆ.

from India & World News in Kannada | VK Polls https://ift.tt/iFQEXMf

IND vs NZ: ಭಾರತ ತಂಡದ ಗೆಲುವಿನ ಶ್ರೇಯ ಇವರಿಗೇ ಸಲ್ಲಬೇಕೆಂದ ರೋಹಿತ್‌ ಶರ್ಮಾ!

Rohit Sharma lauds bowlers: ನ್ಯೂಜಿಲೆಂಡ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್‌ ಇಂಡಿಯಾ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, ತಮ್ಮ ತಂಡದ ಬೌಲರ್‌ಗಳನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದರು. ಕಳೆದ ಐದು ಪಂದ್ಯಗಳಿಂದ ತಂಡದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೇ ಪ್ರದರ್ಶನವನ್ನು ವಿದೇಶಿ ನೆಲಗಳಲ್ಲಿಯೂ ಮುಂದುವರಿಸಬೇಕೆಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/VG9FZl4

ನಟ ದರ್ಶನ್‌ ಫಾರ್ಮ್ ಹೌಸ್‌ ಮೇಲೆ ದಾಳಿ, 4 ವಿದೇಶಿ ಹಕ್ಕಿಗಳ ರಕ್ಷಣೆ

ಇತ್ತೀಚೆಗೆ, ರೇಡಿಯೋ ಜಾಕಿಯೊಬ್ಬರು ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮಕ್ಕಾಗಿ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು. ಅದರಲ್ಲಿ ಫಾರ್ಮ್ ಹೌಸ್ ನಲ್ಲಿದ್ದ ಪಕ್ಷಿಗಳನ್ನು ಚಿತ್ರೀಕರಣಗೊಳಿಸಲಾಗಿತ್ತು. ಆ ವಿಡಿಯೋ ಪ್ರಸಾರವಾಗತ್ತಲೇ ಅರಣ್ಯಾಧಿಕಾರಿಗಳು ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ನಾಲ್ಕು ವಿದೇಶಿ ಹಕ್ಕುಗಳಿರುವುದನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ರೈಡ್ ಮಾಡಿರುವ ಅಧಿಕಾರಿಗಳು ಬಾರ್‌ ಹೆಡ್ಡೆಡ್‌ ಗೂಸ್‌ ಎಂಬ ಹೆಸರಿನ 4 ಹಕ್ಕಿಗಳನ್ನು ವಶಕ್ಕೆ ಪಡೆದಿದ್ದಾರೆ. ದರ್ಶನ್, ಫಾರ್ಮ್ ಹೌಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

from India & World News in Kannada | VK Polls https://ift.tt/dHisO5w

ಮಾಲೂರಿನಲ್ಲಿ ಈ ವರ್ಷ ಶೇ.75ರಷ್ಟು ರಾಗಿ ಇಳುವರಿ: ಬೆಂಬಲ ಬೆಲೆಯಲ್ಲಿ ಮಾರಲು ಮಾ.31ರವರೆಗೂ ಅವಕಾಶ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ವರ್ಷ ಶೇಕಡಾ 75ರಷ್ಟು ರಾಗಿ ಇಳುವರಿಯಾಗಿದೆ. ಮುಂಗಾರು ಹಂಗಾಮಿನಲ್ಲಿಉತ್ತಮ ಇಳುವರಿ ಕಂಡುಬಂದಿದೆ. ಹಿಂಗಾರಿನಲ್ಲಿ ಇಳುವರಿ ಕುಸಿತವಾಗಿತ್ತು. ಡಿಸೆಂಬರ್‌ ತಿಂಗಳಲ್ಲಿ ಹವಾಮಾನ ವೈಪರೀತ್ಯದಿಂದ ಕಟಾವು ಹಂತಕ್ಕೆ ಬಂದಿದ್ದ ರಾಗಿ ಬೆಳೆಗೆ ತೊಂದರೆಯಾಗಿತ್ತು. ಜಡಿಮಳೆಯಿಂದ 25 ಹೆಕ್ಟೇರ್‌ ಭೂ ಪ್ರದೇಶದಲ್ಲಿ ರಾಗಿ ಬೆಳೆ ಸಂಪೂರ್ಣ ನಾಶವಾಗಿತ್ತು. ಪ್ರಸ್ತುತ ವರ್ಷದಲ್ಲಿ ಶೇ.75ರಷ್ಟು ಉತ್ತಮ ಇಳುವರಿ ಸಿಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ​ತಾಲೂಕಿನಾದ್ಯಂತ ರಾಗಿ ಕಟಾವು ಕಾರ್ಯ ಬಹುತೇಕ ಪೂರ್ಣಗೊಂಡಿದೆ.

from India & World News in Kannada | VK Polls https://ift.tt/iFeqmZj

ಕೋಡಿಕನ್ಯಾಣ-ಗುಂಡ್ಮಿ ಸಂಪರ್ಕ ಸೇತುವೆ ರೆಡಿ: ಬಹುಕಾಲದ ಬೇಡಿಕೆ ಈಡೇರಿಕೆ ಸೇತುವೆ ಜತೆ ಸಂಪರ್ಕ ರಸ್ತೆ ಕಾಮಗಾರಿಯೂ ಸಿದ್ಧ

ಕೋಡಿಕನ್ಯಾಣ-ಗುಂಡ್ಮಿ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಜನರ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಕಡಲ ತೀರದ ಮೀನುಗಾರಿಕೆ ವಲಯ ಕೋಡಿಕನ್ಯಾಣ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ಸಾಸ್ತಾನ ಅಥವಾ ಕೋಟದತ್ತ ಪಯಣಿಸಬೇಕಿತ್ತು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಡ್ಮಿಯಲ್ಲಿನ ಕೃಷಿ ಭೂಮಿ ಹೊಂದಿದ್ದ ಇಲ್ಲಿಯ ಜನರಿಗೆ ಸೀತಾ ನದಿ ದಾಟಿಕೊಂಡು ಕೃಷಿ ಮಾಡಬೇಕಾದ ಅನಿವಾರ್ಯತೆ ದಶಕಗಳಿಂದ ಇತ್ತು. ಬೇಡಿಕೆಗೆ ಸ್ಪಂದಿಸಿ ಸ್ಥಳೀಯ ಶಾಸಕರು, ಸ್ಥಳೀಯಾಡಳಿತ ಪ್ರಯತ್ನದ ಫಲವೆಂಬಂತೆ ಇದೀಗ ಲೋಕಾರ್ಪಣೆಗೆ ರೆಡಿಯಾಗಿದೆ.

from India & World News in Kannada | VK Polls https://ift.tt/DK7UJkn

Jds-Bjp Coilation | ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಶೀಘ್ರ ಇತಿಶ್ರೀ:ಹರೀಶ್ ಗೌಡ

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ಜೊತೆಯಲ್ಲಿನ ಮೈತ್ರಿಗೆ ಶೀಘ್ರವೇ ತಿಲಾಂಜಲಿ ಹಾಡಲಾಗುವುದೆಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹರೀಶ್‌ ಗೌಡ ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದ್ದರೂ ದೊಡ್ಡಬಳ್ಳಾಪುರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಂಪೂರ್ಣ ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ​​ಜೆಡಿಎಸ್‌ ಬೆಂಬಲ ನೀಡಿ ಅಧಿಕಾರದಲ್ಲಿ ಭಾಗಿಯಾಗಿದ್ದರೂ ಬಿಜೆಪಿಯವರ ಜನ ವಿರೋಧಿ ನಿಲುವನ್ನು ಪ್ರಶ್ನಿಸದೆ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/Uas8COe

WTC Final 2023: ಜೂನ್‌ 8-12ರವರೆಗೆ ಓವಲ್‌ನಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌!

ICC World Test Championship Final 2023: ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ರೇಸ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಂಚೂಣಿಯಲ್ಲಿದ್ದರೆ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಅದೃಷ್ಟ ಪರೀಕ್ಷೆ ನಡೆಸುತ್ತಿವೆ. ಅಂದಹಾಗೆ ಮೊದಲ ಆವೃತ್ತಿಯ ಫೈನಲ್‌ ಪಂದ್ಯದ ಆತಿಥ್ಯ ಕೂಡ ಇಂಗ್ಲೆಂಡ್‌ಗೆ ಸಿಕ್ಕಿತ್ತು. ಈಗ ಎರಡನೇ ಆವೃತ್ತಿಯ ಫೈನಲ್‌ ಕೂಡ ಕ್ರಿಕೆಟ್‌ ಜನಕರ ನಾಡಲ್ಲೇ ನಡೆಯಲಿದೆ. ಇದೇ ವರ್ಷ ಜೂನ್‌ 8-12ರವರೆಗೆ ದಿ ಓವಲ್‌ ಕ್ರೀಡಾಂಗಣದಲ್ಲಿ ಫೈನಲ್‌ ನಡೆಯಲಿದೆ ಎಂದು ವರದಿಯಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/eGEqy1l

BSY In BJP: ಬಿಜೆಪಿಯಲ್ಲಿ ಬಿಎಸ್‌ವೈ ಕಡೆಗಣನೆ: ರಾಜ್ಯದಲ್ಲಿ ಕಮಲ ಕಟ್ಟಿದ ನಾಯಕನಿಗೆ ಇದೆಂತಹ ಸ್ಥಿತಿ!

BSY In BJP: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದೊಳಗೇ ಕಡೆಗಣಿಸಲಾಗ್ತಿದೆ ಎಂಬುದು ಪದೇಪದೇ ಬಿಜೆಪಿ ನಾಯಕರ ನಡೆಯಿಂದ ಸ್ಪಷ್ಟವಾಗುತ್ತಿದೆ. ಪಕ್ಷದ ಬಹುಮುಖ್ಯ ಸಭೆಗಳಿಗೆ ಯಡಿಯೂರಪ್ಪ ಅವರಿಗೆ ಆಹ್ವಾನ ಕೊಡದೇ ಇರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

from India & World News in Kannada | VK Polls https://ift.tt/ndpoIwu

Dharwad:ಧಾರವಾಡ ಮುರುಘಾಮಠ ಜಾತ್ರಾ ಮಹೋತ್ಸವ ಭಾನುವಾರದಿಂದ: ಜ. 26ರಂದು ರಥೋತ್ಸವ

Dharwad: ಭಾನುವಾರದಿಂದ ಧಾರವಾಡ ಮುರುಘಾಮಠದ ಜಾತ್ರಾ ಮಹೋತ್ಸವ ಆರಂಭ ಆಗಲಿದ್ದು, ಜ.26 ರವರೆಗೂ ನಡೆಯಲಿದೆ. ಮುರುಘಾಮಠ ನೀಡುವ ಮೃತ್ಯುಂಜಯ ಮಹಾಂಥ ಶ್ರೀಗಳ ಪ್ರಶಸ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

from India & World News in Kannada | VK Polls https://ift.tt/KW4Gtqv

Tirthahalli constituency: ತೀರ್ಥಹಳ್ಳಿ ಕ್ಷೇತ್ರದಲ್ಲಿ ಪರಸ್ಪರ ಗಾಳ ರಾಜಕಾರಣದ ಲೆಕ್ಕಾಚಾರ: ಪಕ್ಷಾಂತರ ‘ಫಲಯಾನ’ ಶುರು

2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಲು ಮೂರು ಪಕ್ಷಗಳು ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಮೂರು ಪಕ್ಷಗಳು ಮೇಲಿಂದ ಮೇಲೆ ಸಮಾವೇಶ, ಱಲಿ ನಡೆಸುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪರಸ್ಪರ ಗಾಳ ರಾಜಕಾರಣದ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ಸುಧಾಕರ್‌, ಬಿದರಗೋಡು ಗ್ರಾಮ ಪಂಚಾಯತ್‌ ಅಧ್ಯಕ್ಷ ವೆಂಕಟೇಶ್‌ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದು ಪಕ್ಷಾಂತರ ರಾಜಕಾರಣದ ಲೆಕ್ಕಾಚಾರಕ್ಕೆ ಚಾಲನೆ ನೀಡಿದ್ದಾರೆ. ಪರಸ್ಪರ ಭಿನ್ನಾಭಿಪ್ರಾಯ, ಕ್ಷೇತ್ರದ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಹೆಚ್ಚಾಗಿಯೇ ಇದೆ.

from India & World News in Kannada | VK Polls https://ift.tt/clySjzJ

ಹಾಸನ ನಗರಸಭೆಯಲ್ಲಿ ಅಭಿವೃದ್ಧಿಗೆ ಗ್ರಹಣ: ಬಿಜೆಪಿ-ಜೆಡಿಎಸ್‌ ರಾಜಕೀಯ ಮೇಲಾಟ

ಹಾಸನ ನಗರಸಭೆಯಲ್ಲಿ ಅಭಿವೃದ್ಧಿಯೇ ಮರಿಚೀಕೆಯಾಗಿದೆ. ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರು ಆರೋಪ, ಪ್ರತ್ಯಾರೋಪ, ಧರಣಿಯಲ್ಲೇ ಕಾಲಹರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಗರಸಭೆ ಕೇವಲ ಕುಡಿಯುವ ನೀರು, ವಿದ್ಯುತ್‌, ಸ್ವಚ್ಛತೆಯಷ್ಟೇ ತನ್ನ ಕಾಯಕ ಎಂದು ಭಾವಿಸಿದಂತಿದ್ದು, ಬೆಳೆಯುತ್ತಿರುವ ನಗರದಲ್ಲಿ ದೂರದೃಷ್ಟಿ ಇಟ್ಟುಕೊಂಡು ಮಾಡಬೇಕಿರುವ ಕೆಲಸದತ್ತ ಗಮನ ನೀಡುತ್ತಿಲ್ಲ. ಮತ್ತೊಂದೆಡೆ ನಗರಸಭೆಯಲ್ಲಿ ಅಧಿಕಾರಿಗಳು ಜನಸಾಮಾನ್ಯರ ಕೈಗೆ ಸಿಗುವುದು ಕಷ್ಟ. ಕಚೇರಿಗೆ ಹೋಗಿ ಕೇಳಿದಾಗಲೆಲ್ಲ ಸಭೆಗೆ ಹೋಗಿದ್ದಾರೆ, ಸ್ಪಾಟ್‌ ವಿಸಿಟ್‌ ಅನ್ನೋ ಕಾರಣ ಹೇಳಿ ಕಳ್ಳಾಟವಾಡುತ್ತಿದ್ದಾರೆ.

from India & World News in Kannada | VK Polls https://ift.tt/GtpwFrL

e-Khata | ಗುಡಿಬಂಡೆ ಪ.ಪಂ: ಖಾಸಗಿ ವ್ಯಕ್ತಿಗಳ ಹೆಸರಿಗೆ ಸರಕಾರಿ ಸ್ವತ್ತಿನ ಅಕ್ರಮ ಇ-ಖಾತೆ

Gudibande town panchayat: ಗುಡಿಬಂಟೆ ಪಟ್ಟಣ ಪಂಚಾಯಿತಿಯಲ್ಲಿ ಮಧ್ಯವರ್ತಿಗಳ ದರ್ಬಾರು ಜೋರಾಗಿರುವ ಜೊತೆಗೆ ಸರಕಾರಿ ಸಿಬ್ಬಂದಿಯೇ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರಕಾರಿ ಜಾಗವನ್ನು ಖಾಸಗಿಯವರಿಗೆ ಇ-ಖಾತೆ (e-Khata) ಮಾಡಿಕೊಡುತ್ತಿರುವ ಆರೋಪವಿದೆ. ನಿಗದಿತ ಮೊತ್ತ ಕೊಟ್ಟರೆ ಸಾಕು, ಯಾವುದೇ ಜಾಗಕ್ಕೆ ಕೆಲವೇ ದಿನಗಳಲ್ಲಿ ಇ-ಖಾತೆ ರೆಡಿಯಾಗಿರುತ್ತದೆ ಎಂದು ಸ್ಥಳೀಯ ಆರೋಪಿಸಿದ್ದಾರೆ. ಈ ಅಕ್ರಮಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ. ಈ ನಡುವೆ ಸಾರ್ವಜನಿಕರಿಗೆ ಸಣ್ಣ ಕೆಲಸಕ್ಕೂ ಅಲೆದಾಟ ತಪ್ಪಿಲ್ಲ.

from India & World News in Kannada | VK Polls https://ift.tt/B19UNzl

IND vs WAL: ವೇಲ್ಸ್‌ ಸದ್ದಡಗಿಸಿ ನಾಕ್‌ಔಟ್‌ ಹಂತಕ್ಕೆ ಮುನ್ನಡೆದ ಟೀಮ್ ಇಂಡಿಯಾ!

India vs Wales Hockey World Cup Match Highlights 2023: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 2023ರ ಸಾಲಿನ ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ನಾಕ್‌ ಔಟ್‌ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಗ್ರೂಪ್‌ ಹಂತದಲ್ಲಿ ಭಾರತ ತಂಡ ಅಗ್ರ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್ಸ್‌ ತಲುಪುವ ಲೆಕ್ಕಾಚಾರ ಮಾಡಿತ್ತು. ಆದರೆ, 'ಡಿ' ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಕಾರಣ ಭಾರತ ತಂಡ ಅಂತಿಮ 16ರ ಘಟ್ಟಕ್ಕೆ ಅರ್ಹತೆ ಪಡೆಯಲಷ್ಟೇ ಶಕ್ತವಾಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/nAcdWom

ಹಾಸನ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್‌ ವಶ; ಮುಂದುವರಿದ ಕೈದಿಗಳ ವಿಚಾರಣೆ

ಹಾಸನ ಜಿಲ್ಲೆಯ ಎಎಸ್‌ಪಿ ತಮ್ಮಯ್ಯ ಅವರ ಮುಂದಾಳತ್ವದಲ್ಲಿ ಡಿವೈಎಸ್ಪಿ ಉದಯ್‌ ಭಾಸ್ಕರ್‌ ಜೊತೆಯಲ್ಲಿ 14 ಮಂದಿ ಪೊಲೀಸ್‌ ಇನ್ಸ್‌ಪೆಕ್ಟರ್‌, ನೂರು ಮಂದಿ ಪೊಲೀಸರ ಜತೆ ಏಕಕಾಲದಲ್ಲಿ ಕಾರಾಗೃಹದಲ್ಲಿರುವ 6 ಸೆಲ್‌ಗಳ ಮೇಲೆ ದಾಳಿ ಮಾಡಿ 2 ಮೊಬೈಲ್‌, 5 ಪ್ಯಾಕೆಟ್‌ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣಾಧೀನ ಕೈದಿಗಳಾದ ಮಣಿಕಂಠ, ನವೀನ್‌ ಕುಮಾರ್‌, ಅಬ್ದುಲ್‌ ಕರೀಂ ಮತ್ತು ಗುರುಮೂರ್ತಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

from India & World News in Kannada | VK Polls https://ift.tt/VNw7fq5

Belthangady: ಸಂಗಮ ಕ್ಷೇತ್ರ ಪ್ರಸಿದ್ಧಿಯ ಪಜಿರಡ್ಕಕ್ಕೆ ಅಭಿವೃದ್ಧಿ ಯೋಗ: ಜ.31ರಿಂದ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪ್ರಸಿದ್ಧ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ಅಭಿವೃದ್ಧಿ ಅಂತಿಮ ಹಂತದಲ್ಲಿದ್ದು ಕೆಲವು ಹೊಸ ಯೋಜನೆಗಳು ಬರದಿಂದ ಸಾಗುತ್ತಿದೆ. ಜನವರಿ 31ರಿಂದ ಫೆಬ್ರವರಿ 6ರ ರತನಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ​​ನಡೆಯಲಿದೆ. 1.25 ಕೋಟಿ ರೂ. ವೆಚ್ಚದಲ್ಲಿ ಇದೀಗ ದೇವಸ್ಥಾನ ಸಂಪರ್ಕದ ರಸ್ತೆ ಡಾಮಾರಿಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ದೇವಸ್ಥಾನ ಸಂಪರ್ಕದ ರಸ್ತೆಯ ಅಭಿವೃದ್ಧಿ ಬಹು ವರ್ಷದ ಬೇಡಿಕೆಯಾಗಿದ್ದು ಈಗ ಈಡೇರಿದೆ. ​ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಲ್ಲಿ ದೇವಸ್ಥಾನದ ಹಲವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ.

from India & World News in Kannada | VK Polls https://ift.tt/DCEnrk9

PUC Exam 2023: ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ತಯಾರಿ ಜಿಲ್ಲೆಗೆ ಶಿಫ್ಟ್‌: ಈ ಬಾರಿ ಬಹು ಆಯ್ಕೆ ಮಾದರಿಯ ಪ್ರಶ್ನೆ, ವಿದ್ಯಾರ್ಥಿಗಳಿಗೆ ಪೂರಕವಾಗಲು ಈ ಕ್ರಮ

ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಯು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರ ಕಚೇರಿಯಲ್ಲಿ ಸಿದ್ಧಪಡಿಸಿಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಱಂಡಮ್‌ ಮಾದರಿಯಲ್ಲಿ ಕಳುಹಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇದಕ್ಕೆ ಭಿನ್ನವಾಗಿ ಜಿಲ್ಲಾ ಮಟ್ಟದಲ್ಲಿ ಪಿಯು ಉಪನಿರ್ದೇಶಕರ ನೇತೃತ್ವದಲ್ಲಿ ಪ್ರಶ್ನಾ ಪತ್ರಿಕೆ ತಯಾರಿ ಸಮಿತಿಯೊಂದನ್ನು ರಚನೆ ಮಾಡಿ ಈ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಂಡು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಕೈಗೆ ಈ ಪ್ರಶ್ನೆ ಪತ್ರಿಕೆ ತಲುಪುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದೊಂದು ಹೊಸ ಬೆಳವಣಿಗೆಯಾಗಿರುವುದರಿಂದ ಇದಕ್ಕಾಗಿ ಸಿದ್ಧತೆಗಳು ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದೆ.

from India & World News in Kannada | VK Polls https://ift.tt/lMyDS6W

ಜ.20ಕ್ಕೆ 500 ವರ್ಷಗಳ ಇತಿಹಾಸವಿರುವ ಮುರುಡೇಶ್ವರ ರಥೋತ್ಸವ: ಇಲ್ಲಿಯ ಲಿಂಗ ರಾವಣ ಎಸೆದ ಆತ್ಮಲಿಂಗದ ವಸ್ತ್ರ

ಸುಮಾರು 500 ವರ್ಷಗಳ ಇತಿಹಾಸವಿರುವ ಮುರುಡೇಶ್ವರ ರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನೇರವೇರಲಿದೆ. ಮುರುಡೇಶ್ವರ ರಥೋತ್ಸವ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ದೇವತೆಗಳೇ ಬಂದು ರಥೋತ್ಸವವನ್ನು ನಡೆಸುತ್ತಿದ್ದರು ಎಂಬ ಪ್ರತೀತಿ ಇದೆ. ಓಲಗ ಮಂಟಪ ದೇವತೆಗಳ ಒಡ್ಡೋಲಗದ ಕೇಂದ್ರವಾಗಿತ್ತು. ಮಾಡಿದ ಪಾಪಗಳೆಲ್ಲವೂ ಶಿವನ ಸಾನ್ನಿಧ್ಯದಲ್ಲಿ ತೊಳೆದು ಹೋಗಲಿ ಎನ್ನುವುದು ಭಕ್ತರ ನಂಬಿಕೆಯಾಗಿದೆ. ​ಮೊದಲು ವೀರಮಾಸ್ತಿಗೆ ಮೊದಲ ಪೂಜೆ ನೆರವೇರಲಿದೆ. ಮುರುಡೇಶ್ವರ ರಥೋತ್ಸವಕ್ಕೆ ಮುನ್ನ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮುರುಡೇಶ್ವರ ರಥೋತ್ಸವದಲ್ಲಿ ಮುರುಡೇಶ್ವರ ಮಾತ್ರವಲ್ಲ ಅಕ್ಕಪಕ್ಕದ ಗ್ರಾಮಗಳ ಜನರು ಪಾಲ್ಗೊಂಡು ಶಿವನ ಸ್ಮರಣೆ ಮಾಡುತ್ತಾರೆ.

from India & World News in Kannada | VK Polls https://ift.tt/Bae1Nnb

Magadi Tahsildar Missing | ಮಾಗಡಿ ತಹಸೀಲ್ದಾರ್‌ 15 ದಿನಗಳಿಂದ ನಾಪತ್ತೆ: ಲಂಚ ಪಕ್ರಣದಲ್ಲಿ ಎ2 ಆರೋಪಿ

Corruption case: ಪ್ರಕರಣ ಒಂದರ ಇತ್ಯರ್ಥಕ್ಕೆ ಮಧ್ಯವರ್ತಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಮಾಗಡಿ ತಹಸೀಲ್ದಾರ್‌ ಮೇಲಿದೆ. ಮಧ್ಯವರ್ತಿಯಾಗಿದ್ದ ಮಂಜುನಾಥ್‌ ಎಂಬಾತನ ಹಣ ಪಡೆಯುವಾಗ ತಾಲೂಕು ಕಚೇರಿ ಆವರಣದಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲಂಚ ಪ್ರಕರಣದಲ್ಲಿ ಎ2 ಆರೋಪಿಯಾದ ತಹಸೀಲ್ದಾರ್‌ ಶ್ರೀನಿವಾಸ್‌ ಪ್ರಸಾದ್‌ ಅನಂತರದಲ್ಲಿ ನಾಪತ್ತೆಯಾಗಿದ್ದಾರೆ. ಅವರ ಸಂಪರ್ಕ ಸಂಖ್ಯೆಗಳೆಲ್ಲವೂ ಕಾರ್ಯಾಚರಣೆಯಲ್ಲಿ ಇಲ್ಲದಾಗಿದೆ. ಜಿಲ್ಲಾಧಿಕಾರಿಗೆ ರಜೆ ಮಂಜೂರು ಮಾಡುವಂತೆ ಮಾಡಿದ್ದ ಸಂದೇಶವೇ ಕೊನೆಯಾಗಿದ್ದು, ಅನಂತರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

from India & World News in Kannada | VK Polls https://ift.tt/XPaJNsc

ಮಂಗಳೂರಿನ ಕದ್ರಿ ದೇವಸ್ಥಾನದಲ್ಲೂ ಬ್ಯಾನರ್‌ ವಿವಾದ!: ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ

ದಕ್ಷಿಣ ಕನ್ನಡ ಜಿಲ್ಲೆಯ ಜಾತ್ರೋತ್ಸವಗಳಲ್ಲಿ ಮತ್ತೆ ಬ್ಯಾನರ್ ವಿವಾದ ಮುಂದುವರಿದಿದೆ. ಮಂಗಳೂರು ನಗರ ವಲಯದಲ್ಲಿರುವ ಕಾವೂರು ದೇವಸ್ಥಾನದ ಬಳಿಕ ಇದೀಗ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸಹ ಈ ವಿವಾದ ಕಾಣಿಸಿಕೊಂಡಿದೆ. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆ ಉಲ್ಲೇಖಿಸಿ ಹಿಂದೂಪರ ಸಂಘಟನೆಗಳು ದೇವಸ್ಥಾನದ ಪ್ರವೇಶದಲ್ಲೇ ಬ್ಯಾನರ್‌ ಅಳವಡಿಸಲಾಗಿದೆ.

from India & World News in Kannada | VK Polls https://ift.tt/7EP1OMV

5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ವಿರೋಧ; ವಿದ್ಯಾರ್ಥಿಗಳ ಆತಂಕ ದೂರಾಗಿಸಲು ಮನವಿ

ಹಾಸನದ ಖಾಸಗಿ ಹೋಟೆಲ್ ನಲ್ಲಿ ಹಾಸನ ಜಿಲ್ಲೆಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಭೆ ನಡೆಯಿತು. ಆ ಸಭೆಯಲ್ಲಿ ಹಲವಾರು ಶಾಲೆಯ ಪ್ರತಿನಿಧಿಗಳು ಭಾಗವಹಿಸಿ, 5ನೇ ಹಾಗೂ 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಡಿಸೆಂಬರ್ ನಲ್ಲಿ ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ಅದು ಮಕ್ಕಳ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಪೋಷಕರೂ ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

from India & World News in Kannada | VK Polls https://ift.tt/0fcOVKN

ಸುತ್ತೂರು ಜಾತ್ರೆ: 21ರಂದು ಸಿರಿಧಾನ್ಯ ತಿನಿಸು ಸ್ಪರ್ಧೆ; ಮನೆಯಲ್ಲೇ ತಯಾರಿಸಿ ತರುವ ಉತ್ತಮ ಖಾದ್ಯಕ್ಕೆ ಬಹುಮಾನ

ವಿಸ್ವಸಂಸ್ಥೆಯ ವತಿಯಿಂದ 2023ರ ವರ್ಷವನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸುತ್ತೂರು ಮಠದ ಜಾತ್ರೆಯಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಅಲ್ಲಿ ರೈತರಿಗೆ, ಸಾರ್ವಜನಿಕರಿಗೆ ಸಿರಿಧಾನ್ಯಗಳ ಮಹತ್ವ, ಸಿರಿಧಾನ್ಯ ಬೆಳೆಗಳ ಪ್ರದರ್ಶನ, ವಿಚಾರ ಸಂಕಿರಣ, ಮಾರುಕಟ್ಟೆ ಬಗ್ಗೆ ಪರಿಚಯ ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಿರಿಧಾನ್ಯಗಳ ಕುಕ್ಕೀಸ್‌, ಕ್ರಂಚೀಸ್‌ ಹಾಗೂ ಚಿಕ್ಕೀಸ್‌ ಖಾದ್ಯಗಳನ್ನು ಜನರು ಖರೀದಿಸುತ್ತಿದ್ದಾರೆ. ಇದೇ ವೇಳೆ, ಜ. 21ರಂದು ಸಿರಿಧಾನ್ಯ ಖಾದ್ಯ ಸ್ಪರ್ಧೆ ಏರ್ಪಡಿಸಲಾಗಿದೆ.

from India & World News in Kannada | VK Polls https://ift.tt/YSpAcLE

IND vs NZ: ಬ್ರೇಸ್‌ವೆಲ್ ವಿಕೆಟ್‌ ಪಡೆಯಲು ಕೊಹ್ಲಿ ಹೇಳಿಕೊಟ್ಟಿದ್ದ ರಣತಂತ್ರ ಬಹಿರಂಗಪಡಿಸಿದ ಶಾರ್ದುಲ್‌!

Shardul Thakur REVEALS Virat Kohli's advice: ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ನ್ಯೂಜಿಲೆಂಡ್‌ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿ ಸಾಗುತ್ತಿದ್ದ ಮೈಕಲ್‌ ಬ್ರೇಸ್‌ವೆಲ್‌ ವಿಕೆಟ್‌ ಪಡೆಯಲು ವಿರಾಟ್‌ ಕೊಹ್ಲಿ ಹೇಳಿಕೊಟ್ಟಿದ್ದ ರಣತಂತ್ರವನ್ನು ವೇಗಿ ಶಾರ್ದುಲ್‌ ಠಾಕೂರ್‌ ಬಹಿರಂಗಪಡಿಸಿದ್ದಾರೆ. ಮೈಕಲ್‌ ಬ್ರೇಸ್‌ವೆಲ್‌ ಅವರನ್ನು ಔಟ್‌ ಮಾಡಲು ಯಾರ್ಕರ್‌ ಹಾಕಿ ಎಂದು ವಿರಾಟ್‌ ಕೊಹ್ಲಿ ಹೇಳಿದ್ದರು. ಇದು ನನಗೆ ತುಂಬಾ ನೆರವಾಯಿತು ಎಂದು ಶಾರ್ದುಲ್‌ ಠಾಕೂರ್‌ ಹೇಳಿಕೊಂಡಿದ್ದಾರೆ. ಅಂತಿಮವಾಗಿ ಭಾರತ ತಂಡ 12 ರನ್‌ಗಳಿಂದ ಗೆಲುವು ಪಡೆಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4dEJMnF

ಎಲೆಚುಕ್ಕಿ ತಡೆಗೆ ಡ್ರೋನ್‌ ಔಷಧ ಸಿಂಪಡಣೆ ಸುಳ್ಯದಲ್ಲಿ ಮೊದಲ ಪ್ರಯೋಗ: ಬೆಳೆಗಾರರಲ್ಲಿ ಹೊಸ ಭರವಸೆ

ಅಡಕೆ ಕೃಷಿಕರು ಅಡಕಗೆ ಹಳದಿ ರೋಗ, ಎಲೆಚುಕ್ಕಿ ರೋಗಗಳಿಗೆ ಕಂಗಾಲಾಗಿದ್ದಾರೆ. ಮತ್ತೊಂದಡೆ ಕಾರ್ಮಿಕರ ಕೊರತೆಯಿಂದ ಸೂಕ್ತ ಸಮಯದಲ್ಲಿ ಅಡಕೆಗೆ ಔಷಧ ಸಿಂಪಡಣೆ ಸಾಧ್ಯವಾಗುತ್ತಿಲ್ಲ. ಸದ್ಯ ಎಲೆಚುಕ್ಕಿ ತಡೆಗೆ ಡ್ರೋನ್ ಮೂಲಕ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆಯ ಮೊರೆ ಹೋಗಿದ್ದಾರೆ. ಡ್ರೋನ್‌ ಮೂಲಕ ಔಷಧ ಸಿಂಪಡಣೆ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿಆಗುವ ಕಾರಣ ಬೇಡಿಕೆ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮೊದಲ ಪ್ರಯೋಗ ನಡೆಯಸಲಾಗಿದ್ದು, ಬೆಳಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

from India & World News in Kannada | VK Polls https://ift.tt/xDVCmL2

ED summons KGF Babu: ಕೋಟಿ ಕುಬೇರ ಕೆಜಿಎಫ್‌ ಬಾಬುಗೆ ಇ.ಡಿ. ಸಮನ್ಸ್‌

Money Laundering Case: ಕೆಜಿಎಫ್‌ ಬಾಬು ಮಾಲೀಕತ್ವ ಕಚೇರಿ, ಕಟ್ಟಡಗಳು, ಬಂಗಲೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಅವರ ಕುಟುಂಬದವರ ಹೆಸರಿನಲ್ಲಿ ಹಲವು ಬ್ಯಾಂಕ್‌ ಖಾತೆಗಳಿರುವುದು ಹಾಗೂ ಕೋಟ್ಯಂತರ ರೂಪಾಯಿ ಠೇವಣಿ ಇರುವುದನ್ನು ಪತ್ತೆ ಮಾಡಲಾಗಿದೆ. ಗುರುವಾರ ಬೆಳಿಗ್ಗೆ ಹೊಸದಿಲ್ಲಿಯಲ್ಲಿರುವ ಇ.ಡಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

from India & World News in Kannada | VK Polls https://ift.tt/AsjFIod

ವಿಎಚ್‌ಪಿ, ಭಜರಂಗದಳದ ನಿರ್ಧಾರಕ್ಕೆ ಬೆಂಬಲವಿದೆ: ಪ್ರಮೋದ್ ಮುತಾಲಿಕ್

Sri Ram Sena Pramod Muthalik: ಅಖಿಲ ಭಾರತೀಯ ಮಟ್ಟದಲ್ಲಿ ವಿಎಚ್‌ಪಿ, ಭಜರಂಗದಳವು ಪ್ರತಿಭಟನೆಗೆ ಕರೆ ನೀಡಿರುವುದನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಸ್ವಾಗತಿಸಿದ್ದಾರೆ. ಮುಸ್ಲಿಂ ಸಮುದಾಯದ ಕೆಲವು ಗೂಂಡಾಗಳು ಹಿಂದೂ ಕಾರ್ಯಕರ್ತರ ಹಲ್ಲೆ ಮಾಡುವುದನ್ನು ನಡೆಸಿದ್ದಾರೆ. ಹಿಂದೂ ಪ್ರಮುಖರ ವಿರುದ್ಧ ವ್ಯವಸ್ಥಿತವಾಗಿ ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ. ಹಿಂದೂಗಳ ಮೇಲೆ ಹಲ್ಲೆ ನಡೆಸುವವರ ಮೇಲೆ ಕಠಿಣ ಕಾನೂನು ರೂಪಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

from India & World News in Kannada | VK Polls https://ift.tt/N2vTjXY

Vinesh Phogat: 'ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ', ಕುಸ್ತಿ ಒಕ್ಕೂಟದ ವಿರುದ್ಧ ಧರಣಿ ಕುಳಿತ ವಿನೇಶ್ ಫೋಗಾಟ್!

Vinesh Phogat Protest Against Wrestling Federation of India: ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಕುಸ್ತಿಪಟು ವಿನೇಶ್‌ ಫೋಗಾಟ್‌, ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಬಳಿಕ ತಮಗೆ ಒಕ್ಕೂಟ ಕಿರುಕುಳ ನೀಡುತ್ತಿದ್ದು, ಒಕ್ಕೂಟದ ಅಧ್ಯಕ್ಷರಿಂದ ಕೊಲೆ ಬೆದರಿಕೆ ಕೂಡ ಬಂದಿವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್ ಸಿಂಗ್‌ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/r53Tqfm

IND vs NZ: 3ನೇ ಬ್ಯಾಟಿಂಗ್‌ ಕ್ರಮಾಂಕವನ್ನು ವಿರಾಟ್‌ ಕೊಹ್ಲಿ ತ್ಯಾಗ ಮಾಡಬೇಕೆಂದ ಮಾಂಜ್ರೇಕರ್‌!

Manjrekar wants big sacrifice from Kohli: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಬುಧವಾರದಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಆದರೆ, ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ಗೆ ಅಗ್ರ ಕ್ರಮಾಂಕದಲ್ಲಿ ಅವಕಾಶ ಸಿಗಲು ಮಾಜಿ ನಾಯಕ ವಿರಾಟ್‌ ಕೊಹ್ಲಿ ತಮ್ಮ ಮೂರನೇ ಬ್ಯಾಟಿಂಗ್ ಕ್ರಮಾಂಕವವನ್ನು ಶುಭಮನ್‌ ಗಿಲ್‌ಗೆ ತ್ಯಾಗ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಸಲಹೆ ನೀಡಿದ್ದಾರೆ. ಆ ಮೂಲಕ ವಿರಾಟ್‌ ಕೊಹ್ಲಿ ಮೂರನೇ ಕ್ರಮಾಂಕದಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/VOPyZWX

Suttur Jathra Mahotsav 2023 (Day 1): ಸುತ್ತೂರು ಜಾತ್ರೆಯ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿ ನಿಮಗಾಗಿ...

ಹಳೇ ಮೈಸೂರಿನ ಪ್ರಮುಖ ಮಠಗಳಲ್ಲೊಂದಾದ ಸುತ್ತೂರು ಜಾತ್ರಾ ಮಹೋತ್ಸವವವು ಇದೇ 18ರಿಂದ 23ರವರೆಗೆ ನಡೆಯಲಿದೆ. ಜ. 18ರ ಸಂಜೆ 4 ಗಂಟೆಗೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಆರು ದಿನಗಳ ಈ ಜಾತ್ರೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಜಾತ್ರೆಯಲ್ಲಿ ಕೃಷಿ ಮೇಳ, ಸಿರಿಧಾನ್ಯ ಮೇಳ ಹಾಗೂ ಇನ್ನಿತರ ಮೇಳಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಮಂಗಳವಾರ ಬೆಳಗಿನಿಂದಲೇ ಸುತ್ತೂರಿಗೆ ಆಗಮಿಸಿ ಜಾತ್ರಾ ಮಹೋತ್ಸವದ ಸಿದ್ಧತೆಗೆ ನೆರವಾಗುತ್ತಿರುವುದು ವಿಶೇಷ.

from India & World News in Kannada | VK Polls https://ift.tt/UbO54lp

HD Kumaraswamy-ಸಂಕ್ರಾಂತಿ ಬಳಿಕ ಮತ್ತೆ ಶುರುವಾದ ಪಂಚರತ್ನ ರಥಯಾತ್ರೆ: ವಿಜಯಪುರದಲ್ಲಿ ಕುಮಾರಸ್ವಾಮಿ ಮಿಂಚಿನ ಸಂಚಾರ

ಸಂಕ್ರಾಂತಿ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ನೇತೃತ್ವದ ಪಂಚರತ್ನ ರಥಯಾತ್ರೆ ಮತ್ತೆ ಪ್ರಾರಂಭವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ 3ನೇ ಸುತ್ತಿನ ರಥಯಾತ್ರೆ ಪ್ರಾರಂಭಿಸಿದ ಕುಮಾರಸ್ವಾಮಿ ಅವರು ಅಗರಖೇಡ ಮತ್ತು ಲಚ್ಚಾಣದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸಿದರು. ಸಂಜೆ ಇಂಡಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು.

from India & World News in Kannada | VK Polls https://ift.tt/lKUAqOg

ಅವರ ಸಂಸ್ಕೃತಿ ಬೇರೆ, ನಮ್ಮ ಸಂಸ್ಕತಿ ಬೇರೆ, ನಾನಂತಹ ಪದಪ್ರಯೋಗ ಮಾಡೊಲ್ಲ: ಹರಿಪ್ರಸಾದ್ ವಿರುದ್ಧ ಹರಿಹಾಯ್ದ ಬಿಸಿಪಾ

ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಅವಹೇಳನಕಾರಿ ಹೇಳಿಕೆ ವಿರುದ್ಧ ತಿರುಗಿಬಿದ್ದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ನಾನಂತಹ ಪದಪ್ರಯೋಗ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ನಾನು ಜನರಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಹರಿಪ್ರಸಾದ ಎಲ್ಲಿ ಆಯ್ಕೆಯಾಗಿದ್ದಾರೆ ಎಂದು ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನವರು ಮಾಡಿದ ದ್ರೋಹದಿಂದ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದವರು ನಾವು. ಆತ್ಮಗೌರವ ಇರುವಂಥವರು ಮತ್ತೆ ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

from India & World News in Kannada | VK Polls https://ift.tt/pXYzAHi

ಅಧಿಕಾರಕ್ಕಾಗಿ ಶಾಸಕರ ಸ್ವಾಭಿಮಾನವನ್ನು ಎಚ್‌ಡಿಕೆ ಬಳಿ ಅಡವಿಟ್ಟ ಕಾಂಗ್ರೆಸ್ಸಿಗರೇ ನಿಜವಾದ ವೇಶ್ಯೆಯರು: ಸಚಿವ ಮುನಿರತ್ನ

Munirathna slams BK Hariprasad: ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ ಶಾಸಕರನ್ನು ಬಿ.ಕೆ.ಹರಿಪ್ರಸಾದ್‌ ಅವರು ವೇಶ್ಯೆಯರಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಮುನಿರತ್ನ, ಅಧಿಕಾರಕ್ಕಾಗಿ ಕಾಂಗ್ರೆಸ್‌ ಪಕ್ಷ ಮತ್ತು ಬಿ.ಕೆ.ಹರಿಪ್ರಸಾದ್‌ ಎಚ್‌.ಡಿ.ಕುಮಾರಸ್ವಾಮಿ ಬಳಿ ಶಾಸಕರನ್ನು ಅಡವಿಟ್ಟು ಸಮ್ಮಿಶ್ರ ಸರಕಾರ ನಡೆಸಲು ಮುಂದಾದರು. ಇವರಿಗೂ ಸ್ಯಾಂಟ್ರೋ ರವಿಗೂ ಏನು ವ್ಯತ್ಯಾಸವಿದೆ ಎಂದು ಟೀಕಿಸಿದ್ದಾರೆ.

from India & World News in Kannada | VK Polls https://ift.tt/IOgwpeC

Steve Smith: ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಸ್ಟೀವ್ ಸ್ಮಿತ್‌!

Steve Smith Hundred in Big Bash League 2022-23: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಜನಪ್ರಿಯ ಟಿ20 ಲೀಗ್‌ ಆಗಿರುವ ಬಿಗ್ ಬ್ಯಾಷ್‌ ಲೀಗ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ್ದಾರೆ. 2022-23ರ ಸಾಲಿನ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್‌ ಪರ ಆಡುತ್ತಿರುವ ಸ್ಟೀವ್‌ ಸ್ಮಿತ್‌, ಮಂಗಳವಾರ (ಜ.17) ನಡೆದ ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌ ಎದುರು ಸ್ಪೋಟಕ ಶತಕ ಬಾರಿಸಿದರು. ತಮ್ಮ ಮನಮೋಹಕ ಇನಿಂಗ್ಸ್‌ನಲ್ಲಿ ಸ್ಮಿತ್‌ 5 ಫೋರ್‌ ಮತ್ತು ಬರೋಬ್ಬರಿ 7 ಸಿಕ್ಸರ್‌ಗಳನ್ನು ಸಿಡಿಸಿದರು. ಪಂದ್ಯದಲ್ಲಿ ಸಿಕ್ಸರ್ಸ್‌ 59 ರನ್‌ಗಳ ಜಯ ದಾಖಲಿಸಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/5wzkSAa

IND vs SL: 'ವಿರಾಟ್ ಕೊಹ್ಲಿ ಬ್ಯಾಟಿಂಗ್‌ನ ಬಾಸ್ ಎಂದು ಬಣ್ಣಿಸಿದ ಕಮ್ರಾನ್ ಅಕ್ಮಲ್!

Kamran Akmal hailed Virat Kohli: ಕಳೆದ 6 ತಿಂಗಳ ಅಂತರದಲ್ಲಿ ವಿರಾಟ್ ಕೊಹ್ಲಿ 4 ಶತಕ ಗಳಿಸಿ ಮಿಂಚಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಕೊಹ್ಲಿ ತಮ್ಮ ಬ್ಯಾಟಿಂಗ್ ವೈಭವ ಮೆರೆದು, 2 ಶತಕ ಸಿಡಿಸಿದ್ದಾರೆ. ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಅಜೇಯ 166 ರನ್ ಗಳಿಸಿದ್ದಲ್ಲದೆ, ತಮ್ಮ ವೃತ್ತಿ ಜೀವನದ 74 ನೇ ಶತಕ ಸಿಡಿಸಿದರು. ವಿರಾಟ್ ಕೊಹ್ಲಿಯ ಈ ಸ್ಫೋಟಕ ಆಟವನ್ನು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ZabxDHy

Hanagal Constituency Election 2023: ಹೈವೋಲ್ಟೇಜ್‌ ಕ್ಷೇತ್ರ ಹಾನಗಲ್‌ನಲ್ಲಿ ಸ್ಪರ್ಧೆಗೆ ಹೊರಗಿನವರೋ, ಒಳಗಿನವರೋ ?

Hanagal Constituency Election 2023: ಈ ಬಾರಿ ಹಾನಗಲ್ ಕ್ಷೇತ್ರಕ್ಕೆ ವಲಸಿಗ ಅಭ್ಯರ್ಥಿಯೋ, ಸ್ಥಳೀಯ ಅಭ್ಯರ್ಥಿಯೋ ಎಂಬ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಸಿಎಂ ಉದಾಸಿ ಗೆದ್ದು ಬಂದ ನಂತರ ಬಿಜೆಪಿ ಪ್ರಬಲ್ಯವೂ ಹೆಚ್ಚಿದೆ. ಜೆಡಿಎಸ್‌ನಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ.

from India & World News in Kannada | VK Polls https://ift.tt/xblORKP

ಮೈಸೂರಲ್ಲಿ ಸೃಷ್ಟಿಯಾಗಲಿದೆ ಹೊಸ ಲೇಔಟ್; ಬೊಮ್ಮೇನಹಳ್ಳಿ ಬಡಾವಣೆಗೆ ರೈತರ ಒಪ್ಪಿಗೆ

ಹೊಸದಾಗಿ ರೂಪುಗೊಳ್ಳಲಿರುವ ಬೊಮ್ಮೇನಹಳ್ಳಿ ಬಡಾವಣೆ ಕುರಿತಾದ ದೂರುದುಮ್ಮಾನುಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸೀಗೇಹಳ್ಳಿಯ ದೇವಸ್ಥಾನದ ಆವರಣದಲ್ಲಿ ರೈತರು ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಸಿಕ್ಕಿದ್ದರಿಂದಾಗಿ ರೈತರು ಬಡಾವಣೆ ನಿರ್ಮಾಣಕ್ಕೆ ಒಪ್ಪಿದ್ದಾರೆ. ಇದರಿಂದ ಅನೇಕ ದಿನಗಳಿಂದ ಭುಗಿಲೆದ್ದಿದ್ದ ವಿವಾದ ಅಂತ್ಯಗೊಂಡಂತಾಗಿದೆ. ಮುಂದಿನ ಎರಡು ತಿಂಗಳಲ್ಲಿ ಬೊಮ್ಮೇನಹಳ್ಳಿ ಬಡಾವಣೆಯನ್ನು ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಮುಡಾ ಅಧಿಕಾರಿಗಳು ತಿಳಿಸಿದ್ದಾರೆ.

from India & World News in Kannada | VK Polls https://ift.tt/LQFlYEz

Lalbagh Flower Show | ಹೂಗಳಲ್ಲಿ ಅರಳಲಿದೆ 1500 ವರ್ಷಗಳ ಬೆಂಗಳೂರು ಇತಿಹಾಸ: ಜ.20ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ

Republic Day flower show in Bengaluru: ಜನವರಿ 20ರಂದು ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಕಾಡುಮಲ್ಲೇಶ್ವರ, ಲಾಲ್‌ಬಾಗ್‌ ಬಂಡೆ, ಟಿಪ್ಪು ಕಾಲದ ಬೇಸಿಗೆ ಅರಮನೆ,..ಹೀಗೆ ಬೆಂಗಳೂರಿನ 1500 ವರ್ಷಗಳ ಇತಿಹಾಸವು ಹೂವುಗಳಲ್ಲೇ ಪ್ರದರ್ಶನಗೊಳ್ಳಲಿದೆ. ಇದು 213ನೇ ಫಲಪುಷ್ಪ ಪ್ರದರ್ಶನವಾಗಿದೆ. ಗ್ಲಾಸ್‌ ಹೌಸ್‌ನಲ್ಲಿ ವಿವಿಧ ಕಲೆಗಳ ಕಲಾಕೃತಿಗಳ ಪ್ರದರ್ಶನ ಇರಲಿದೆ. ಲಾಲ್‌ಬಾಗ್‌ನಲ್ಲಿ ಸುಮಾರು ನೂರು ಸಿಸಿಟಿವಿ ಕ್ಯಾಮೆರಾಗಳು, ಆಂಬ್ಯುಲೆನ್ಸ್‌ ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆಗಳನ್ನು ಮಾಡಲಾಗಿದೆ.

from India & World News in Kannada | VK Polls https://ift.tt/CM9vgi2

BJP National Executive Meeting | ಬಿಜೆಪಿಗೆ 2023 ಮಹತ್ವದ ವರ್ಷ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಗೆಲುವಿಗೆ ನಡ್ಡಾ ಟಾರ್ಗೆಟ್

Karnataka Assembly Elections 2023: ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಒಂಭತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲು ಅಗತ್ಯವಿರುವ ಕಾರ್ಯತಂತ್ರಗಳ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎಂಸಿ ಕೇಂದ್ರ ಕಚೇರಿವರೆಗೆ ಸುಮಾರು ಒಂದು ಕಿ.ಮೀ. ರೋಡ್‌ ಶೋ ನಡೆಸಿದರು. ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಭಾಗಿಯಾಗಿದ್ದಾರೆ.

from India & World News in Kannada | VK Polls https://ift.tt/fYQ1qOG

Cardamom Garland-ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ಏಲಕ್ಕಿ ಹಾರ, ಏಲಕ್ಕಿ ಪೇಟಕ್ಕೆ ಡಿಮ್ಯಾಂಡೋ ಡಿಮ್ಯಾಂಡು...

ಒಂದು ದೊಡ್ಡ ಕಾರ್ಯಕ್ರಮ ಉದ್ಯಮವೊಂದರ ದೆಸೆಯನ್ನು ಹೇಗೆ ಬದಲಿಸುತ್ತದೆ ಎಂಬುದಕ್ಕೆ ಇದೇ ಉದಾಹರಣೆ. ಏಲಕ್ಕಿ ಕಂಪಿನ ನಾಡಾದ ಹಾವೇರಿಯಲ್ಲಿ ತಯಾರಾಗುವ ಏಲಕ್ಕಿ ಹಾರ ಮತ್ತು ಪೇಟಕ್ಕೆ ಸಾಹಿತ್ಯ ಸಮ್ಮೇಳನ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಮೋದಿ ಕಾರ್ಯಕ್ರಮದ ಬಳಿಕ ಬೇಡಿಕೆ ಹೆಚ್ಚಿದೆ. ಇದೀಗ ಎಲಕ್ಕಿ ಯ ಹಾರ, ಪೇಟಗಳನ್ನು ತಯಾರಿಸಿಕೊಡುವಂತೆ ಬರುವ ಆರ್ಡರ್ ಗಳ ಸಂಖ್ಯೆ ಹೆಚ್ಚಾಗಿದೆ.

from India & World News in Kannada | VK Polls https://ift.tt/cg6lv3B

IND vs SL: ವಿರಾಟ್‌ ಕೊಹ್ಲಿ ಜೊತೆಗೆ ಈ ಆಟಗಾರನಿಗೂ 'ಪಂದ್ಯ ಶ್ರೇಷ್ಠ ಪ್ರಶಸ್ತಿ' ನೀಡಬೇಕಿತ್ತೆಂದ ಗಂಭೀರ್‌!

Gautam Gambhir on mohammed siraj Bowling performance: ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಭಾರತ ತಂಡದ ಮೊಹಮ್ಮದ್‌ ಸಿರಾಜ್‌ 32 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಪಂದ್ಯದಲ್ಲಿ 110 ಎಸೆತಗಳಲ್ಲಿ ಅಜೇಯ 166 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ಮಾಜಿ ಆರಂಭಿಕ ಗೌತಮ್‌ ಗಂಭೀರ್‌, ವಿರಾಟ್‌ ಕೊಹ್ಲಿ ಜೊತೆಗೆ ಮೊಹಮ್ಮದ್‌ ಸಿರಾಜ್ ಅವರಿಗೂ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/8gZ1eTw

IND vs SL: 'ಮೈಲುಗಲ್ಲು ತಲುಪುವ ಹತಾಶೆ ನನಗಿಲ್ಲ'-ತಮ್ಮ ಯಶಸ್ಸಿಗೆ ಕಾರಣ ತಿಳಿಸಿದ ವಿರಾಟ್‌ ಕೊಹ್ಲಿ!

Virat Kohli on his century against Sri lanka: ಭಾನುವಾರ ಶ್ರೀಲಂಕಾ ವಿರುದ್ಧ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಬಲದಿಂದ ಭಾರತ ತಂಡ 317 ರನ್‌ಗಳ ದಾಖಲೆಯ ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ನೂತನ ಮೈಲುಗಲ್ಲು ಸ್ಥಾಪಿಸಿತು. ಅಂದಹಾಗೆ ಪಂದ್ಯದಲ್ಲಿ ಅದ್ಭುತ ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ 110 ಎಸೆತಗಳಿಗೆ 8 ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ ಅಜೇಯ 166 ರನ್ ಗಳಿಸಿದರು. ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣವೇನೆಂದು ಬಹಿರಂಗಪಡಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/t5xPldS

Auto Passengers: ಆಟೋ ದುಪ್ಪಟ್ಟು ದರ ವಸೂಲಿ ಕಡಿವಾಣಕ್ಕೆ ಕ್ಯೂಆರ್‌ ಕೋಡ್‌: ಪ್ರಯಾಣಿಕರಿಗೆ ದೂರು ಸಲ್ಲಿಸಲು ಅನುಕೂಲ

Auto Passengers: ಎಷ್ಟೋ ಬಾರಿ, ಆಟೋ ಚಾಲಕರು ಮೀಟರ್ ಬಳಸದೆಯೇ, ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಾರೆ. ಅಲ್ಲದೆ ದಾರಿ ಮಧ್ಯೆ ಅನುಚಿತ ವರ್ತನೆ, ಕಿರಿಕಿರಿ ಉಂಟುಮಾಡಿದರೆ, ಸಾರ್ವಜನಿಕರಿಗೆ ದೂರು ನೀಡಲು ಸಹಾಯವಾಗುವ ಕ್ಯೂಆರ್ ಕೋಡ್ ಅನ್ನು ತರಲು ನಗರ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ.

from India & World News in Kannada | VK Polls https://ift.tt/TjzNvpH

Viral fever: ಶೀತಗಾಳಿಗೆ ಕರಾವಳಿಯಲ್ಲಿ ವೈರಲ್‌ ಜ್ವರದ ಅಬ್ಬರ ದಿಢೀರ್ ಏರಿಕೆ: ಹಿರಿಯರು, ಮಕ್ಕಳ ಕಾಳಜಿಗೆ ಆರೋಗ್ಯ ಇಲಾಖೆ ಸೂಚನೆ

ಶಟರ್, ಟೋಪಿ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡೋಕೂ ಆಗುತ್ತಿಲ್ಲ. ಮೈಕೊರೆಯುವ ಚಳಿ ಜನರನ್ನು ಕಂಗೆಟಿಸಿದೆ. ವಿಪರೀತ ಚಳಿಯಿಂದಾಗಿ ಜನರಲ್ಲಿ ವೈರಲ್ ಜ್ವರ, ಶೀತ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ತಪ್ಪಲು ಭಾಗದಲ್ಲಿ ಜ.19ರ ಹೊತ್ತಿಗಾಗಲೇ ಕನಿಷ್ಠ ತಾಪಮಾನ 16 ಡಿಗ್ರಿಗೆ ಬರುವ ಸಾಧ್ಯಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಇದರ ಪ್ರಭಾವ ಕೊಂಚ ಜಾಸ್ತಿಯಾಗುವ ಸಾಧ್ಯತೆಯನ್ನು ಇಲಾಖೆ ಒತ್ತಿ ಹೇಳಿದೆ.

from India & World News in Kannada | VK Polls https://ift.tt/UZFEa8C

Araga Jnanendra-ನನ್ನ ಮನೆಗೆ ಬಂದು ದುಡ್ಡು ಎಣಿಸೋ ತಾಕತ್ತು ಯಾವನಿಗಿದೆ? ಬಡತನದಲ್ಲಿ ಹುಟ್ಟಿದ್ದೇನೆಂದು ಚಾರಿತ್ರ್ಯವಧೆ ಮಾಡಿದರೆ ಜನ ಸುಮ್ಮನಿರಲ್ಲ

ತನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೆಸರು ಹೇಳದೆ ಹರಿಹಾಯ್ದಿರುವ ಅವರು ಸಚ್ಚಾರಿತ್ರ್ಯದ ಬದುಕು ನನ್ನದಾಗಿದ್ದು ನನ್ನ ಮನೆಗೆ ಬಂದು ದುಡ್ಡು ಎಣಿಸೋ ತಾಕತ್ತು ಯಾವನಿಗೂ ಇಲ್ಲ. ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಮಾಜಿ ಸಚಿವ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಸುಮ್ಮನಿರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

from India & World News in Kannada | VK Polls https://ift.tt/iatsvWD

Mangaluru Crime-ಕದ್ದ 9 ಲಕ್ಷವನ್ನು ಮಣ್ಣಿನಲ್ಲಿ ಹೂತಿಟ್ಟಿದ್ದ ಆರೋಪಿ: ಮಣ್ಣು ಅಗೆಯುತ್ತಿದ್ದ ಜೆಸಿಬಿ ಚಾಲಕನ ಪಾಲಾಯ್ತು ಅಷ್ಟೂ ಹಣ!

ಕಳ್ಳ ತಾನು ಕದ್ದ 9 ಲಕ್ಷ ರೂಪಾಯಿಯನ್ನು ಯಾರಿಗೂ ತಿಳಿಯಬಾರದೆಂದು ಮಣ್ಣಿನೊಳಗೆ ಬಚ್ಚಿಟ್ಟಿದ್ದ. ಆ ಹಣ ಅಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜೆಸಿಬಿ ಚಾಲಕನ ಪಾಲಾಯ್ತು. ಇಂತಹದ್ದೊಂದು ಘಟನೆ ಮಂಗಳೂರಿನಿಂದ ವರದಿಯಾಗಿದೆ. ಕಳ್ಳನನ್ನು ಬಂಧಿಸಿದ ಬಳಿಕ ಘಟನೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಜೆಸಿಬಿ ಚಾಲಕನಿಗೆ ಹಣ ಸಿಕ್ಕಿದ ಸಂಗತಿ ಬೆಳಕಿಗೆ ಬಂತು. ಆದರೆ ಅದಾಗಲೇ ಜೆಸಿಬಿ ಚಾಲಕ ಆ ಹಣದಲ್ಲಿ ಸುಮಾರು ಹಣವನ್ನು ಖರ್ಚು ಮಾಡಿ ಆಗಿದೆ. ಉಳಿದ ಹಣವನ್ನು ಹೊಂದಿಸಿಕೊಡುವಂತೆ ತಿಳಿಸಿ ಪೊಲೀಸರು ಆತನನ್ನು ಕಳುಹಿಸಿಕೊಟ್ಟಿದ್ದಾರೆ.

from India & World News in Kannada | VK Polls https://ift.tt/9x2fNgG

Tamil Nadu Governor: ಉಗ್ರರಿಂದ ಕೊಲ್ಲಿಸುತ್ತೇವೆ: ತ.ನಾಡು ರಾಜ್ಯಪಾಲರಿಗೆ ಡಿಎಂಕೆ ಮುಖಂಡನ ಬೆದರಿಕೆ

Tamil Nadu Governor RN Ravi: ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರನ್ನು ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಹಾಕುವ ಮೂಲಕ ಡಿಎಂಕೆ ಮುಖಂಡ ವಿವಾದ ಸೃಷ್ಟಿಸಿದ್ದಾರೆ. ವ್ಯಾಪಕ ಆಕ್ರೋಶದ ಬಳಿಕ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

from India & World News in Kannada | VK Polls https://ift.tt/hfamPyK

ಮಹಿಳಾ ಆರೋಗ್ಯಕ್ಕಾಗಿ ಸ್ಥಾಪಿಸಲಾಗುವ 'ಸ್ವಾಸ್ಥ್ಯ ಕ್ಲಿನಿಕ್‌'ನಲ್ಲಿ ತಜ್ಞ ವೈದ್ಯರ ಸೇವೆಯೂ ಲಭ್ಯ

ಮಹಿಳೆಯರ ಆರೋಗ್ಯಕ್ಕಾಗಿ ಸ್ವಾಸ್ಥ್ಯ ಕ್ಲಿನಿಕ್ ಎಂಬ ಯೋಜನೆಯನ್ನು ಮೈಸೂರಿನಲ್ಲಿ ಜಾರಿಗೊಳಿಸಲಾಗಿದೆ. ಪ್ರಾಯೋಗಿಕ ಯೋಜನೆಯಡಿ ಎರಡು ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಈ ಕ್ಲಿನಿಕ್ ಗಳಲ್ಲಿ ಈಗ ತಜ್ಞ ವೈದ್ಯರ ಸೇವೆಯನ್ನು ಆರಂಭಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ ರಾಜ್ಯದೆಲ್ಲೆಡೆ ಈ ಸೇವೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಮೈಸೂರು ನಗರದಲ್ಲಿ ಒಟ್ಟು 21 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೊಂದರಂತೆ 10 ನಗರ ಪಿಎಚ್‌ಸಿಗಳಲ್ಲಿ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ ತೆರೆಯಲಾಗಿದೆ.

from India & World News in Kannada | VK Polls https://ift.tt/QWeBcS3

ಶಿರಾಡಿಯಲ್ಲಿ ಸುರಂಗ ಮಾರ್ಗಕ್ಕೆ ಅಸ್ತು: 1976 ಕೋಟಿ ರೂ. ವೆಚ್ಚದಲ್ಲಿ23 ಕಿ.ಮೀ ಕಾಮಗಾರಿ: ಪರಿಸರಕ್ಕೆ ಹಾನಿಯೇ, ಅವಶ್ಯವೇ ಚರ್ಚೆ

ಮಳೆಗಾಲದಲ್ಲಿ ಪದೇ ಪದೆ ಕುಸಿಯುತ್ತಿದ್ದ ಶಿರಾಡಿ ಸುರಂಗ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೆ ಸುರಂಗ ಮಾರ್ಗದ ಅವಶ್ಯಕತೆ ಇದೆಯಾ? ಇದರಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ ಅನ್ನೋದು ಪರಿಸರವಾದಿಗಳ ಮಾತು. ಶಿರಾಡಿ ಘಾಟ್‌ನಲ್ಲಿ ನಿತ್ಯ ನೂರಾರು ಟ್ಯಾಂಕರ್‌, ಟ್ರಕ್‌, ಬಸ್‌ ಮತ್ತಿತರ ವಾಹನಗಳು ಸಂಚರಿಸುತ್ತವೆ. ವಾಹನ ದಟ್ಟಣೆಗೆ ಬೇಕಾದಂತೆ ರಸ್ತೆ ವ್ಯವಸ್ಥೆ ಇಲ್ಲದೆ ಪದೇ ಪದೆ ಅಪಘಾತಗಳು ಸಂಭವಿಸುತ್ತಿರುತ್ತದೆ. ಅಷ್ಟೇ ಅಲ್ಲದೆ 12ರಿಂದ 16 ಗಂಟೆ ಸಂಚಾರ ಸ್ಥಗಿತಗೊಂಡಿರೋದು ಇದೆ.

from India & World News in Kannada | VK Polls https://ift.tt/vKdhlo2

ಗರಿಗೆದರಿದ ಅಭಿವೃದ್ಧಿ ನಿರೀಕ್ಷೆ: ಜ.15ಕ್ಕೆ ಶಿರಸಿಗೆ ಸಿಎಂ: ಪ್ರಮುಖ ಬೇಡಿಕೆಗಳಿಗೆ ಸಿಕ್ಕೀತೆ ಸ್ಪಂದನೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹತ್ತಾರು ಸಚಿವರು ಹಾಗೂ ಗಣ್ಯರ ದಂಡು ಜ.15ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಲಿದ್ದು, ನೂರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ನೆರವೇರಲಿದೆ. ಮಧ್ಯಾಹ್ನ 3ಕ್ಕೆ ಸ್ಪೀಕರ್‌ ಕಾಗೇರಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. 250 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ ಶಿರಸಿ ಜನರಲ್ಲಿ ಅಭಿವೃದ್ಧಿಯ ಹೊಸ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.

from India & World News in Kannada | VK Polls https://ift.tt/c0jopdf

Panchamasali 2a Reservation-ಅಂತಿಮ ವರದಿ ಪಡೆಯಲು ಒತ್ತಾಯಿಸಿ ಜಯಮೃತ್ಯುಂಜಯಶ್ರೀ ಅನಿರ್ದಿಷ್ಟಾವಧಿ ಧರಣಿ

ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸಲು ಸರಕಾರ ಶೀಘ್ರ ಹಿಂದುಳಿದ ವರ್ಗಗಳ ಆಯೋಗದಿಂದ ಅಂತಿಮ ವರದಿ ಪಡೆಯಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ ಜಯ ಮೃತ್ಯುಂಜಯ ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶನಿವಾರದಿಂದ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೇ ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳಗಾವಿ ಅಧಿವೇಶನದ ವೇಳೆ ಸದನಕ್ಕೆ ಮುತ್ತಿಗೆ ಹಾಕಲು ಸಿದ್ಧವಾಗಿದ್ದಾಗ ಸಿಎಂ ಬೊಮ್ಮಾಯಿ ಅವರು 2 ಎಗೆ ಸೇರಿಸುವುದಾಗಿ ತಮ್ಮ ತಾಯಿ ಮೇಲೆ ಪ್ರಮಾಣ ಮಾಡಿದ್ದರು. ಆದರೆ ಈಗ ಮಾತಿಗೆ ತಪ್ಪುವ ಮೂಲಕ ತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದದರು.

from India & World News in Kannada | VK Polls https://ift.tt/2CGRbYv

Sankranthi Festival- ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾತಿ ಸಡಗರ: ದೇವರಾಜ ಮಾರ್ಕೆಟ್ ನಲ್ಲಿ ಖರೀದಿ ಭರಾಟೆ ಜೋರು

ಎರಡು ವರ್ಷಗಳ ಕೋವಿಡ್ ಭೀತಿಯ ಬಳಿಕ ಇದೀಗ ಸಂಕ್ರಾಂತಿ ಹಬ್ಬವನ್ನು ಆಚರಿಸಲು ಜನ ಎಲ್ಲೆಡೆ ಸಜ್ಜಾಗಿದ್ದಾರೆ. ಮೈಸೂರು ನಗರದಲ್ಲೂ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು ಹಬ್ಬದ ಮುನ್ನಾ ದಿನವಾದ ಶನಿವಾರ ಉತ್ಸಾಹದಿಂದ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಮೈಸೂರಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದರೂ ಜನ ಲೆಕ್ಕಿಸದೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂತು. ಹೀಗಾಗಿ ಮಾರುಕಟ್ಟೆಯಲ್ಲಿ ಜನವೋ ಜನ. ವೀಕೆಂಡ್ ಆದದ್ದರಿಂದ ಪ್ರವಾಸಿ ತಾಣಗಳೂ ಭರ್ತಿ.

from India & World News in Kannada | VK Polls https://ift.tt/ZSlbWLG

CM lashed out at Congress : ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ ಆರೋಪ

CM lashed out at Congress : ಎಲ್ಲಾ ಸಮುದಾಯವನ್ನು ಸಮನಾಗಿ ನೋಡಬೇಕು ಹಾಗೂ ನ್ಯಾಯ ನೀಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ವಾಗಬಾರದು. ನಾನು ಕಾಲಮಿತಿ ನೀಡಿಲ್ಲ. 2ಎ ನೀಡಲಾಗುವುದಿಲ್ಲ 3ಬಿ ನಲ್ಲಿಯೇ ಇರಬೇಕು ಎಂದು ಆದೇಶವಾಗಿದೆ. 2016 ರಿಂದ 18 ರವಗೆ ಅವರದ್ದೇ ಸರ್ಕಾರವಿತ್ತು. ಆಗ ಪ್ರಶ್ನೆ ಕೇಳದವರು ಈಗ ಏಕೆ ಕೇಳುತ್ತಾರೆ. ಅವರಿಗೆ ಯಾವ ನೈತಿಕ ಹಕ್ಕಿದೆ.

from India & World News in Kannada | VK Polls https://ift.tt/Tjr7uNS

ಮಂಗಳೂರಲ್ಲಿ ಮುಂದುವರಿದ ಡ್ರಗ್ಸ್‌ ಬೇಟೆ.. 3 ದಿನದಲ್ಲಿ19 ಮಂದಿ ಅರೆಸ್ಟ್‌: 15 ಮಂದಿಯಲ್ಲಿ 13 ಮಂದಿ ವೈದ್ಯರು!

ಮಂಗಳೂರು ನಗರದಲ್ಲಿ ಡ್ರಗ್ಸ್, ಗಾಂಜಾ ಬೇಟೆ ಮುಂದುವರಿದಿದೆ. ಕೇವಲ ಮೂರು ದಿನದಲ್ಲಿ ಮಂಗಳೂರು ನಗರ ಪೊಲೀಸರು 19 ಮಂದಿಯನ್ನು ಬಂಧಿಸಿದ್ದಾರೆ. ​ಆಘಾತಕಾರಿ ವಿಷ್ಯ ಅಂದರೆ ಡ್ರಗ್ಸ್‌ ಜಾಲದಲ್ಲಿ ಪತ್ತೆಯಾದ 15 ಮಂದಿಯಲ್ಲಿ 13 ಮಂದಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳೇ ಆಗಿದ್ದಾರೆ. ಇನ್ನು ಬಂಧಿತರಾಗಿರುವ ಮತ್ತಿಬ್ಬರು ಆರೋಪಿಗಳು ಕೂಡಾ ಒಬ್ಬರು ನಗರದಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದ ವೈದ್ಯರು ಹಾಗೂ ಮತ್ತೊಬ್ಬ ಸ್ನಾತಕೋತ್ತರ ವಿದ್ಯಾರ್ಥಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

from India & World News in Kannada | VK Polls https://ift.tt/vs0kVhM

IND vs ESP: ಸ್ಪೇನ್‌ ವಿರುದ್ಧ ಗೆದ್ದು ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ!

India vs Spain Hockey World Cup Match Highlights: ಒಡಿಶಾದಲ್ಲಿ ನಡೆಯುತ್ತಿರುವ 2023ರ ಸಾಲಿನ ಎಫ್‌ಐಎಸ್‌ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಸ್ಟಾರ್‌ ಫಾರ್ವರ್ಡ್‌ ಆಟಗಾರ ಅಮಿತ್‌ ರೋಹಿದಾಸ್‌ ಅವರ ಅಮೋಘ ಆಟದ ಫಲವಾಗಿ ಭಾರತ ತಂಡ 2-0 ಅಂತರದಲ್ಲಿ ಬಲಿಷ್ಠ ಸ್ಪೇನ್‌ ತಂಡಕ್ಕೆ ಮರ್ಮಾಘಾತ ನೀಡುವಲ್ಲಿ ಯಶಸ್ವಿಯಾಯಿತು. ಟೂರ್ನಿಯಲ್ಲಿ ಆತಿಥೇಯ ಭಾರತ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸ್ಪೇನ್‌ ಹೊರತಾಗಿ ಇಂಗ್ಲೆಂಡ್ ಮತ್ತು ವೇಲ್ಸ್‌ ತಂಡಗಳ ವಿರುದ್ಧವೂ ಪೈಪೋಟಿ ನಡೆಸಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/e6oCJsx

Spark against Modi, Amit Shah :ಪ್ರಧಾನಿ ಮೋದಿ - ಅಮಿತ್‌ ಶಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರ್ತಾರೆ, ಅಭಿವೃದ್ಧಿ ಬೇಕಾಗಿಲ್ಲ : ಆರ್. ಧ್ರುವನಾರಾಯಣ ಕಿಡಿ

ಬಿಜೆಪಿ ಸರ್ಕಾರಕ್ಕೆ ಜನರ ಹಿತದೃಷ್ಟಿ ಬೇಕಾಗಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಎಲ್ಲಿ ನೋಡಿದರು 40% ಆರೋಪವೇ ಹೆಚ್ಚಾಗಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಬಿಜೆಪಿ ನಾಯಕರಿಗೆ ನಮ್ಮನ್ನ ಪ್ರಶ್ನೆ ಮಾಡುವಂತಹ ನೈತಿಕತೆ ಇಲ್ಲ. ಎಲ್ಲೆಡೆ ಜಾತಿ ಧರ್ಮದ ಬಗ್ಗೆ ವಿಷ ಬೀಜ ಬಿತ್ತುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಕಿಡಿ

from India & World News in Kannada | VK Polls https://ift.tt/2oeir8z

IND vs AUS: ಆಸೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಇಶಾನ್ ಕಿಶನ್‌!

India Squad For Australia Test Series 2023: ನಿರೀಕ್ಷೆಯಂತೆ ಭಾರತ ಟೆಸ್ಟ್‌ ತಂಡದಲ್ಲಿ ಯುವ ಬ್ಯಾಟರ್‌ ಇಶಾನ್‌ ಕಿಶನ್‌ಗೆ ಸ್ಥಾನ ಸಿಕ್ಕಿದೆ. ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕಾರಣ ಅವರ ಸ್ಥಾನದಲ್ಲಿ ಭಾರತ ಟೆಸ್ಟ್‌ ತಂಡದಲ್ಲಿ ಇಶಾನ್‌ ಕಿಶನ್‌ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿ ಸಲುವಾಗಿ ಬಿಸಿಸಿಐ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಶುಕ್ರವಾರ (ಜ.13) ಪ್ರಕಟ ಮಾಡಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ejSPN8n

IND vs NZ: ಸಂಜು ಸ್ಯಾಮ್ಸನ್‌ ಔಟ್‌, ಕಿವೀಸ್‌ ವಿರುದ್ಧದ ಸರಣಿಗಳಿಗೆ ಭಾರತದ ಒಡಿಐ-ಟಿ20 ತಂಡ ಪ್ರಕಟ!

Team India Squads For Upcoming T20I And ODI Series Against New Zealand: ಜನವರಿ 18ರಂದು ಶುರುವಾಗಲಿರುವ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗೆ ಭಾರತ ತಂಡಗಳನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಪ್ರಕಟ ಮಾಡಿದೆ. ಅಚ್ಚರಿಯ ನಿರ್ಧಾರ ಎಂಬಂತೆ ಭಾರತದ ಒಡಿಐ ಮತ್ತು ಟಿ20-ಐ ತಂಡಗಳಿಂದ ಅನುಭವಿ ಆಟಗಾರ ಸಂಜು ಸ್ಯಾಮ್ಸನ್‌ ಅವರನ್ನು ಹೊರಗಿಡಲಾಗಿದೆ. ಟಿ20 ಸರಣಿಗೆ ಯುವ ಓಪನರ್‌ ಪೃಥ್ವಿ ಶಾ ಅವರನ್ನು ತೆಗೆದುಕೊಳ್ಳಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/SlnpEDH

Pakistan High Commission: ವೀಸಾ ಪಡೆಯಲು ಬಂದ ಮಹಿಳೆಗೆ ಪಾಕ್ ರಾಯಭಾರ ಕಚೇರಿಯಲ್ಲಿ ಲೈಂಗಿಕ ಕಿರುಕುಳ

Woman Allegation Against Pakistan High Commission Staffer: ದಿಲ್ಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪಂಜಾಬ್‌ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪಾಕಿಸ್ತಾನಕ್ಕೆ ವೀಸಾ ಪಡೆಯಲು ಹೋದ ಅವರಿಗೆ ಲೈಂಗಿಕ ಸುಖ ನೀಡುವಂತೆ ಆತ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

from India & World News in Kannada | VK Polls https://ift.tt/c4E9i5G

ಕರ್ನಾಟಕದ ಹೆಮ್ಮೆ ಬಳ್ಳಾರಿ ಜಿಲ್ಲೆ: ಶಿಲಾಯುಗದ ಕಾಲದಲ್ಲೇ ಅಲ್ಲಿತ್ತು ಕಬ್ಬಿಣ ತಯಾರಿಕೆ ಕೌಶಲ್ಯ!

ಬಳ್ಳಾರಿಯಲ್ಲಿ ಶಿಲಾಯುಗದ ಕಾಲದಲ್ಲೇ ಕಬ್ಬಿಣದ ಅದಿರಿನಿಂದ ಕಬ್ಬಿಣ ಹೊರತಗೆಯುವ ಕೌಶಲ್ಯವನ್ನು ರೂಢಿಸಿಕೊಂಡಿದ್ದರು ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಅವರು ಹೊಸಪೇಟೆಯ ಪ್ರಾಂತ್ಯದಲ್ಲಿ ಸಿಗುವ ಕಬ್ಬಿಣದ ಅದಿರುಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ. ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವನ್ಸ್‌ಡ್‌ ಸ್ಟಡೀಸ್‌ ಸಂಸ್ಥೆಯ ವಿಜ್ಞಾನಿಗಳಾದ ಡಾ.ಶಾರದಾ ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಇತರ ಸಂಶೋಧಕರಾದ ಡಾ.ಉದಯ, ಡಾ.ದೀಯಾ ಜತೆಗೆ ದೇವೇಂದ್ರಸಿಂಗ್‌ಚೌದ್ರಿ ಹಳೇ ಶಿಲಾಯುಗದ ಶೈಲಿಯಲ್ಲೇ ಕಬ್ಬಿಣ ಉತ್ಪಾದಿಸುವ ಕಲೆಯನ್ನು ಮತ್ತೆ ಆರಂಭಿಸಿದ್ದಾರೆ.

from India & World News in Kannada | VK Polls https://ift.tt/cEr2lN5

ಜಿಲ್ಲೆಯ 3 ರೈತರಿಗೆ ರಾಜ್ಯಮಟ್ಟದ ತೊಗರಿ ಬೆಳೆ ಕೃಷಿ ಪ್ರಶಸ್ತಿ

ಅತ್ಯುತ್ತಮ ತೊಗರಿ ಇಳುವರಿಯನ್ನು ಸಾಧಿಸಿರುವ ರಾಜ್ಯದ ಮೂವರು ರೈತರಿಗೆ ಪ್ರತಿ ವರ್ಷ ರಾಜ್ಯಮಟ್ಟದ ತೊಗರಿ ಬೆಳೆ ಕೃಷಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಈ ಮೂರೂ ಪ್ರಶಸ್ತಿಗಳು ದಾವಣಗೆರೆಯ ರೈತರಿಗೇ ಸಂದಿರುವುದು ಜಿಲ್ಲೆಯ ಸಮಸ್ತ ನಾಗರಿಕರಿಗೆ ಹೆಮ್ಮೆಯ ವಿಚಾರ. ಚನ್ನಗಿರಿ ತಾಲೂಕು ಮಾದಾಪುರ ಗ್ರಾಮದ ವಿರೂಪಾಕ್ಷಪ್ಪ ಪ್ರಥಮ, ಇದೇ ತಾಲೂಕಿನ ನೀತಿಗೆರೆ ಗ್ರಾಮದ ವೀರಾಚಾರಿ ದ್ವಿತೀಯ ಹಾಗೂ ಹರಿಹರ ತಾಲೂಕು ರಾಮತೀರ್ಥ ಗ್ರಾಮದ ಎಸ್‌. ಸೋಮಪ್ಪ ತೃತೀಯ ಸ್ಥಾನ ಪಡೆದಿರುವ ರೈತರು.

from India & World News in Kannada | VK Polls https://ift.tt/sJehHtj

Mangaluru: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಜಲಪಾತಗಳು: ವೀಕ್ಷಣೆಗೆ ಈಗ ಸಕಾಲ: ನಿರ್ಬಂಧ ವಾಪಸ್ ಪಡೆದ ಇಲಾಖೆ

ಮಳೆಗಾಲ ಮುಗಿದು, ಚಳಿಗಾಲ ಕಾಲಿಟ್ಟಿದೆ. ಜಲಪಾತಗಳು ಯಥಾಸ್ಥಿತಿಗೆ ತಲುಪಿವೆ. ಈಗ ಜಲಪಾತಗಳ ವೀಕ್ಷಣೆಗೆ ಇದು ಸಕಾಲವಾಗಿದೆ. ಕಡಿದಾದ ಕಾಡು.. ಜೊತೆಗೆ ಧುಮ್ಮಿಕ್ಕಿ ಹರಿಯುವ ಜಲಧಾರೆಯನ್ನು ನೋಡುವುದೇ ಕಣ್ಣಿಗೆ ಸ್ಪರ್ಗ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳ ವೀಕ್ಷಣೆಗೆ ಹೇರಲಾಗಿದ್ದ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಜಲಪಾತಗಳ ಊರು. ಇಲ್ಲಿ ಎರ್ಮಾಯಿ, ಕಡಮಗುಂಡಿ, ಎಳನೀರು, ಬಂಗಾರಪಲ್ಕೆ ಜತೆಗೆ ಅನೇಕ ಸಣ್ಣ ಜಲಪಾತಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತೆ. ಇನ್ನು ಜಲಪಾತಗಳ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಟಿಕೆಟ್‌ ವ್ಯವಸ್ಥೆ ಕಲ್ಪಿಸಲಾಗಿದೆ.

from India & World News in Kannada | VK Polls https://ift.tt/rdEzJbq

ಮಂಗಳೂರಿನಲ್ಲಿ ಡ್ರಗ್ಸ್‌ ಜೀವಂತ, ಸ್ಕಿಲ್‌ಗೇಮ್‌ ಅವ್ಯಾಹತ: ಸುಶಿಕ್ಷಿತರೇ ಮಾದಕಕ್ಕೆ ಬಲಿ!

ಮಾರಕ ಡ್ರಗ್ಸ್ ಪೀಡೆಗೆ ಯುವ ಸಮೂಹವೇ ದಾಸರಾಗುತ್ತಿದ್ದು, ಡ್ರಗ್ಸ್‌ ಮಹಾ ಪೀಡೆಗೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೇಸ್‌ಗಳು ದಾಖಲಾಗುತ್ತಿದ್ದು ಆತಂಕ ಹೆಚ್ಚಿಸಿದೆ. ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಡ್ರಗ್ಸ್‌ ಪೂರೈಕೆ, ಸೇವನೆ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿಪರ, ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಡ್ರಗ್ಸ್‌ ದಂಧೆಗೆ ಬಲಿಯಾಗುತ್ತಿದ್ದಾರೆ. ನಗರದ ಕಮಿಷನರೇಟ್ ವ್ಯಾಪ್ತಿಯಲ್ಲೇ ಇದಕ್ಕೆ ಕಡಿವಾಣ ಬೀಳಬೇಕಿದೆ. ಅಲ್ಲದೆ ಶೇಕಡಾ 93ರಷ್ಟು ಯುವಸಮೂಹವೇ ಇದರಲ್ಲಿ ಭಾಗಿಯಾಗುತ್ತಿದೆ.

from India & World News in Kannada | VK Polls https://ift.tt/GgTpBEv

IND vs SL: ಕ್ರಿಕೆಟ್‌ ವಿಚಾರದಲ್ಲಿ ಕೊನೇ ಬಾರಿ ಕಣ್ಣೀರಿಟ್ಟ ಘಟನೆ ಸ್ಮರಿಸಿದ ಗೌತಮ್ ಗಂಭೀರ್‌!

India vs Sri Lanka ODI Series 2023: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಕ್ರಿಕೆಟ್‌ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌, ಈ ಸಂದರ್ಭದಲ್ಲಿ ತಮ್ಮ ನೆನಪಿನಾಳ ಕೆದಕಿ ಅಚ್ಚರಿಯ ಸಂಗತಿ ಒಂದನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟ್‌ ವಿಚಾರದಲ್ಲಿ ತಾವು ಕೊನೇ ಬಾರಿ ಕಣ್ಣೀರಿಟ್ಟ ಘಟನೆ ಯಾವುದು ಎಂಬುದನ್ನು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಗಂಭೀರ್‌ 2018ರಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ZYcaL21

Supreme Court: ನ್ಯಾಯಾಂಗದಲ್ಲಿ ಸರ್ವಾಧಿಕಾರ ಧೋರಣೆ: ಸುಪ್ರೀಂ ವಿರುದ್ಧ ಮತ್ತೆ ಧನಕರ್‌ ಅಸಮಾಧಾನ

Vice President Jagdeep Dhankhar: 1973ರ ಕೇಶವನಾಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಸ್ತಾಪಿಸುವ ಮೂಲಕ ನ್ಯಾಯಾಂಗದ ವಿರುದ್ಧ ಹರಿಹಾಯ್ದಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ತೀರ್ಪು ಎಂದಿದ್ದಾರೆ.

from India & World News in Kannada | VK Polls https://ift.tt/e14rWC5

RSS Chief Mohan Bhagwat: ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ: ಮೋಹನ್ ಭಾಗವತ್ ಅಭಯ

RSS Chief Mohan Bhagwaton Muslims: ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಆದರೆ ಅವರು ತಮ್ಮಲ್ಲಿ ಹೊಂದಿರುವ ಶ್ರೇಷ್ಠತೆಯ ಭಾವನೆಯನ್ನು ಬಿಟ್ಟುಬಿಡಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

from India & World News in Kannada | VK Polls https://ift.tt/se3twFk

26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಧಾರವಾಡ ಸಜ್ಜು: ಜನವರಿ 16ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

ಹುಬ್ಬಳ್ಳಿೃ ಧಾರವಾಡ ಅವಳಿ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಗುರುವಾರದಿಂದ ಜ. 16ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಅನಾವರಣಗೊಳ್ಳಲಿದೆ. ಧಾರವಾಡದಲ್ಲಿ 5 ದಿನವೂ ಪುಟ್ಟ ಯುವ ಭಾರತವೇ ಸೃಷ್ಟಿಯಾಗಲಿದ್ದು, ಯುವಕರಲ್ಲಿ ಆನಂದದಾಯಕ ಕಲಿಕೆ ಅನುಭವ ನೀಡುವ ಗುರಿ ಹೊಂದಲಾಗಿದೆ. ಪ್ರತಿದಿನವೂ ಭಾರತದ ನಾನಾ ರಾಜ್ಯಗಳ ವಿಶಿಷ್ಟ ಜಾನಪದ ನೃತ್ಯ, ಸಂಗೀತ ಮನತಣಿಸಲಿವೆ. ಏಳು ತರಹದ ದೇಸಿಯ ಕ್ರೀಡೆಗಳನ್ನು ಆಡಿಸಲಾಗಿದ್ದು, ಏಳು ಕ್ರೀಡೆಗಳು ಏಳು ರಾಜ್ಯದ ರಾಜ್ಯದ ಆಟಗಳು ಎಂಬುದು ಮತ್ತಷ್ಟು ವಿಶೇಷ.

from India & World News in Kannada | VK Polls https://ift.tt/qVL8jyx

Adiyogi statue | ಆವಲಗುರ್ಕಿಯಲ್ಲಿ ಆದಿ ಯೋಗಿ ಪ್ರತಿಮೆ: ಯಥಾಸ್ಥಿತಿಗೆ ಹೈಕೋರ್ಟ್‌ ನಿರ್ದೇಶನ, ಆದೇಶ ತೆರವಿಗೆ 'ಇಶಾ' ಕೋರಿಕೆ

Isha Foundation Yoga Center Chikkaballapur: ಜನವರಿ 15ರಂದು ಸಂಕ್ರಾಂತಿಯ ದಿನ ಆದಿ ಯೋಗಿ ಪ್ರತಿಮೆ ಅನಾವರಣಗೊಳಿಸಲು ಇಶಾ ಯೋಗ ಕೇಂದ್ರವು ಸಿದ್ಧತೆ ನಡೆಸಿದೆ. ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿ ಮಂಜೂರಾಗಿರುವ ಜಾಗವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಗ್ರೀನ್‌ ಬೆಲ್ಟ್‌ ಆಗಿದೆ. ಈಗ ಅಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆಗಳು ನಡೆಯುತ್ತಿರುವುದಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸದಂತೆ ಕೋರ್ಟ್‌ ನಿರ್ದೇಶನ ನೀಡಿದೆ.

from India & World News in Kannada | VK Polls https://ift.tt/Z2IGEH1

Metro Pillar Collapse | 'ನಮ್ಮ ಮೆಟ್ರೊ' ಪಿಲ್ಲರ್‌ ಕುಸಿದು ಅವಘಡ: ಮೂವರ ತಲೆದಂಡ, ಎನ್‌ಸಿಸಿ ಮೇಲೆ ಶಿಸ್ತುಕ್ರಮದ ತೂಗುಗತ್ತಿ

Police FIR against NCC: ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ಸಾವಿಗೀಡಾದ ದುರ್ಘಟನೆಯ ಬೆನ್ನಲ್ಲೇ ಕಾಮಗಾರಿ ಗುತ್ತಿಗೆ, ಗುಣಮಟ್ಟ ಹಾಗೂ ಕಮಿಷನ್‌ ಬಗ್ಗೆ ಚರ್ಚೆ ಜೋರಾಗಿದೆ. ದೇಶದಾದ್ಯಂತ ಸುದ್ದಿಯಾಗಿರುವ ಈ ಘಟನೆಯ ಬಗ್ಗೆ ವರದಿ ನೀಡುವಂತೆ ಕೇಂದ್ರದಿಂದಲೂ ಬಿಎಂಆರ್‌ಸಿಎಲ್‌ಗೆ ಕರೆ ಬಂದಿದೆ. ಸಂತ್ರಸ್ತರ ದೂರನ್ನು ಆಧರಿಸಿ ಪೊಲೀಸರು ಈಗಾಗಲೇ ಕಾಮಗಾರಿ ಗುತ್ತಿಗೆ ಪಡೆದಿರುವ ಎನ್‌ಸಿಸಿ ಸಂಸ್ಥೆ ಹಾಗೂ ಎಂಜಿನಿಯರ್‌ಗಳು, ಮೇಲ್ವಿಚಾರಕರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಸರಕಾರದ ಸೂಚನೆಯ ಹಿನ್ನೆಲೆ ಬಿಎಂಆರ್‌ಸಿಎಲ್‌ ಕೂಡ ಕಠಿಣ ಕ್ರಮಕ್ಕೆ ಮುಂದಾಗಿದೆ.

from India & World News in Kannada | VK Polls https://ift.tt/BrYjmKS

ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಆಗಂತುಕ; ವಿದ್ಯಾರ್ಥಿನಿ ಕಿರುಚಿದೊಡನೆ ಟಾಯ್ಲೆಟ್ ನಲ್ಲಿ ಕೂಡಿ ಹಾಕಿ ಪರಾರಿ

ಕಾಲೇಜು ಟಾಯ್ಲೆಟ್ ಒಂದರಲ್ಲಿ ವ್ಯಕ್ತಿಯೊಬ್ಬ ಪ್ರವೇಶಿಸಿ ವಿದ್ಯಾರ್ಥಿನಿಯನ್ನು ಟಾಯ್ಲೆಟ್ ನೊಳಗೆ ಕೂಡಿಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜಯನಗರದ ವಿಜಯಾ ಕಾಲೇಜಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ವಿದ್ಯಾರ್ಥಿನಿಯರ ಕಿರುಚಾಟ ಕೇಳಿ ಉಳಿದ ವಿದ್ಯಾರ್ಥಿನಿಯರು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ. ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ತಲಾಶೆ ನಡೆಸಿದ್ದಾರೆ. ಇದೇವೇಳೆ ವಿಷಯ ತಿಳಿದು ಕಾಲೇಜಿಗೆ ಧಾವಿಸಿರುವ ಶಾಸಕಿ ಸೌಮ್ಯ ರೆಡ್ಡಿ ಘಟನೆಯ ಮಾಹಿತಿ ಪಡೆದು ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿದ್ದಾರೆ.

from India & World News in Kannada | VK Polls https://ift.tt/3cTsI04

Ram Mandir: 2024ರ ಲೋಕಸಭೆ ಚುನಾವಣೆಗೂ ಮುನ್ನ ರಾಮಮಂದಿರದ ಮೇಲೆ ದಾಳಿ!: ಪಾಕ್ ಐಎಸ್‌ಐ ಟಾರ್ಗೆಟ್

Terror Attack on Ram Mandir: ಅಯೋಧ್ಯಾದಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ಗುರಿಯಾಗಿಸಿ ದಾಳಿ ನಡೆಸಲು ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳು ಸಂಚು ನಡೆಸಿವೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

from India & World News in Kannada | VK Polls https://ift.tt/byjKmR9

Mankading: ಮಂಕಡಿಂಗ್‌ ಮೂಲಕ ಶನಕ ವಿಕೆಟ್‌ ಪಡೆಯದೇ ಇರಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

India vs Sri Lanka 1st ODI Highlights: ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕ್ರೀಡಾ ಸ್ಫೂರ್ತಿ ಮೆರೆದು ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ. ಪಂದ್ಯದಲ್ಲಿ 374 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ್ದ ಶ್ರೀಲಂಕಾ ತಂಡ ಒಂದು ಹಂತದಲ್ಲಿ 250ರ ಗಡಿ ದಾಟುವುದು ಅನುಮಾನ ಎಂಬಂತ್ತಿತ್ತು. ಆದರೆ, ಲಂಕಾ ನಾಯಕ ದಸುನ್‌ ಶನಕ ಅಮನಮೋಹಕ ಶತಕ ಬಾರಿಸಿ ತಂಡವನ್ನು 300ರ ಗಡಿ ದಾಟಿಸಿ ಸೋಲಿನ ಅಂತರ ತಗ್ಗಿಸಿದರು. ಆದರೆ, ಶತಕಕ್ಕೂ ಮೊದಲೇ ಶನಕ ಮಂಕಡಿಂಗ್‌ಗೆ ಬಲಿಯಾಗಬೇಕಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Q4CYLb9

ಕಸದಿಂದ ವಿದ್ಯುತ್‌ ಉತ್ಪಾದನೆ ರಾಜ್ಯಕ್ಕೆ ವಿಸ್ತರಿಸಲು ಯೋಚನೆ: ಸುಳ್ಯದಲ್ಲಿ ಗ್ಯಾಸಿಫಿಕೇಶನ್‌ ಯಂತ್ರ ಉದ್ಘಾಟನೆ

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ತ್ಯಾಜ್ಯ ಅತೀ ಹೆಚ್ಚು ಉತ್ಪಾದನೆಯಾಗುತ್ತದೆ. ಈ ರೀತಿ ಉತ್ಪಾದನೆಯಾದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಮತ್ತು ಸವಾಲು. ಒಣ ಕಸದಿಂದ ವಿದ್ಯುತ್‌ ಉತ್ಪಾದಿಸುವುದು ಉತ್ತಮ ಬೆಳವಣಿಗೆ. ಯಾವ ರೀತಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಆದಷ್ಟು ಬೇಗ ಈ ಸಮೃಸ್ಯೆೆ ಮುಕ್ತಿ ಕಾಣಿ್ಸಲು ಇದು ಅತ್ಯಂತ , ಸಹಾಯಕಾರಿ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

from India & World News in Kannada | VK Polls https://ift.tt/vkG5Qo1

ದಕ್ಷಿಣ ಕನ್ನಡದಲ್ಲಿ 110 ಕೆವಿಯ 11 ವಿದ್ಯುತ್‌ ಸಬ್‌ಸ್ಟೇಷನ್‌ಗೆ ಅನುಮೋದನೆ: ಸುಳ್ಯದಲ್ಲಿ ಶಂಕುಸ್ಥಾಪನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಹತ್ತು ವರ್ಷಗಳ ವಿದ್ಯುತ್ ಬೇಡಿಕೆ ಮುಂದಿರಿಸಿ 110 ಕೆವಿ ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡಲಾಗಿದೆ. ಒಂದೂಕಾಲು ವರ್ಷದ ಹಿಂದೆ ಇಂಧನ ಸಚಿವರಾಗಿ ಸುಳ್ಯಕ್ಕೆ ಬಂದಾಗ ಸುಳ್ಯದ 110 ಕೆವಿ ಸಬ್‌ಸ್ಟೇಷನ್‌ ನಿರ್ಮಾಣ ದೊಡ್ಡ ಬೇಡಿಕೆಯಾಗಿತ್ತು. ಈ ಬಗ್ಗೆ ಹಲವಾರು ಬೇಡಿಕೆಗಳು, ಟೀಕೆಗಳು ಇತ್ತು. 110 ಕೆವಿ ಸಬ್‌ ಸ್ಟೇಷನ್‌ ಮಾಡಿಯೇ ಮಾಡುತ್ತೇವೆ ಎಂದು ಅಂದು ಮಾತು ಕೊಟ್ಟಿದ್ದೆ. ಸುಳ್ಯದ ಜನತೆಗೆ ಕೊಟ್ಟ ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಸಚಿವ ಮತ್ತು ಜಿಲ್ಲಾಉಸ್ತುವಾರಿ ಸಚಿವ ವಿ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

from India & World News in Kannada | VK Polls https://ift.tt/Tqtf6gj

Karinjeswara Temple-ಪುರಾಣ ಪ್ರಸಿದ್ಧ ಕಾರಿಂಜೇಶ್ವರ ಕ್ಷೇತ್ರ ಶೀಘ್ರ ಸೂಕ್ಷ್ಮ ವಲಯ ಘೋಷಣೆ: ಸಚಿವ ಸುನಿಲ್‌

ಕಾರಿಂಜೇಶ್ವರ ದೇವಸ್ಥಾನವನ್ನು ಸೂಕ್ಷ್ಮ ವಲಯವನ್ನಾಗಿ ಘೋಷಿಸುವ ಬಗ್ಗೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದು, ಜಿಲ್ಲಾಧಿಕಾರಿ ವರದಿ ಬಳಿಕ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. ಅಕ್ರಮ ಕಲ್ಲುಗಣಿಗಾರಿಕೆಯಿಂದ ಸಾನ್ನಿಧ್ಯಕ್ಕೆ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಭಕ್ತರು ಶಾಸಕರು ಹಾಗೂ ನನ್ನ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

from India & World News in Kannada | VK Polls https://ift.tt/UfMHZue

Raibag Chinchali Jatra: ಫೆ.5 ರಿಂದ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ: ಜಾನುವಾರು ಸಂತೆ, ಎತ್ತುಗಳ ಮಾರಾಟ ನಿಷೇಧ

ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಫೆ.5ರಿಂದ ನಡೆಯುಲಿದೆ. ಜಾನುವಾರುಗಳಿಗೆ ಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ವರ್ಷ ಜಾತ್ರೆ ಸಂದರ್ಭದಲ್ಲಿ ಜಾನುವಾರು ಜಾತ್ರೆ ರದ್ದುಗೊಳಿಸಲಾಗಿದೆ. ಚಿಂಚಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು,'' ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

from India & World News in Kannada | VK Polls https://ift.tt/OqsDF75

BMTC Drivers: ಬಿಎಂಟಿಸಿಗೆ ಡ್ರೈವರ್ ಕೊರತೆ: ಹೊರಗುತ್ತಿಗೆಯಡಿ 1000 ಚಾಲಕರ ನೇಮಕಕ್ಕೆ ಟೆಂಡರ್‌ ಆಹ್ವಾನ

ಬಿಎಂಟಿಸಿಗೆ ಡ್ರೈವರ್ ಕೊರತೆ ಕಾಡುತ್ತಿದೆ. ನಿಗಮವು 6800 ಬಸ್‌ಗಳನ್ನು ಹೊಂದಿದ್ದು, ಚಾಲಕರ ಅಭಾವದಿಂದಾಗಿ ನಿತ್ಯ 5565 ಬಸ್‌ಗಳನ್ನಷ್ಟೇ ಓಡಿಸುತ್ತಿದೆ. ಹೀಗಾಗಿ ಟೆಂಡರ್ ಕರೆಯಲಾಗಿದ್ದು, ಭಾರಿ ವಾಹನ, ಸರಕು ಸಾಗಣೆ ವಾಹನ ಚಲಾಯಿಸಿದ ಅನುಭವ ಕಡ್ಡಾಯ ಎಂದು ಷರತ್ತು ವಿಧಿಸಲಾಗಿದೆ. ಕೋಟ್ಯಂತರ ರೂ. ನಷ್ಟದಿಂದ ನಲುಗಿ ಹೋಗಿರುವ ಬಿಎಂಟಿಸಿಯ ಆರ್ಥಿಕ ಪರಿಸ್ಥಿತಿಯು ಕೋವಿಡ್‌ ಬಳಿಕ ಮತ್ತಷ್ಟು ಹದಗೆಟ್ಟಿದೆ.

from India & World News in Kannada | VK Polls https://ift.tt/pHAWrzx

Karnataka Assembly Election 2023: ಯಲಬುರ್ಗಾದಲ್ಲಿ ನೀರಾವರಿಯೇ ವರಿ: ಹೊಸಬರಿಗೆ ಸಿಗುತ್ತಾ ಅವಕಾಶ?

ಯಲಬುರ್ಗಾದಲ್ಲಿ ಪ್ರತಿ ಬಾರಿಯೂ ಕಾಂಗ್ರೆಸ್‌, ಬಿಜೆಪಿ ಗೆಲುವಿಗೆ ನೀರಾವರಿ ವಿಚಾರವೇ ಟಾನಿಕ್‌. ​ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧೆಗೆ ಹಾಲಪ್ಪ ಆಚಾರ್‌ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ,ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಚುರುಕಾಗಿರುವ ರಾಯರಡ್ಡಿ , ಹಾಲಪ್ಪ ಆಚಾರ್‌ ಮತ್ತವರ ಸಹಚರರ ಲೋಪದೋಷ ಎತ್ತಿ ತೋರಿಸುವ ಮೂಲಕ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ದಳಪತಿಗಳು ಪ್ರಬಲವಾಗಿರದಿದ್ದರೂ ಸೋಲು- ಗೆಲುವಿನ ಮೇಲೆ ಪ್ರಭಾವ ಬೀರುತ್ತಿದ್ದಾರೆ.

from India & World News in Kannada | VK Polls https://ift.tt/V9Hiu1E

Siddaramaiah to contest from Kolar | ಪರಸ್ಪರ ಹಿತಕ್ಕಾಗಿ ಶತ್ರುತ್ವ ಬದಿಗೆ: ಒಂದಾದ ಸಿದ್ದರಾಮಯ್ಯ-ಮುನಿಯಪ್ಪ

Karnataka assembly elections 2023: ಸಂಸದ ಜಿ.ಸಿ.ಚಂದ್ರಶೇಖರ್‌, ಶಾಸಕ ಕೃಷ್ಣ ಬೈರೇಗೌಡ ಮತ್ತಿತರರು ಇಬ್ಬರೂ ನಾಯಕರ ನಡುವೆ ಸಮನ್ವಯದ ವೇದಿಕೆ ಅಣಿಗೊಳಿಸಿದ್ದರು. ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲೂಮೂರ್ನಾಲ್ಕು ಸುತ್ತಿನ ಪರಸ್ಪರರ ಮನವೊಲಿಕೆ ಸಭೆಗಳು ನಡೆದಿದ್ದವು. ಅಂತಿಮವಾಗಿ, ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ನಜೀರ್‌ ಅಹ್ಮದ್‌ ಅವರನ್ನು ಅತಿಯಾಗಿ ಓಲೈಸಬಾರದು ಎಂಬ ಷರತ್ತಿನೊಂದಿಗೆ ಮುನಿಯಪ್ಪ ಅವರು ಸಿದ್ದರಾಮಯ್ಯ ಜತೆಗಿನ ಶತ್ರುತ್ವ ಮರೆಯಲು ಒಪ್ಪಿದ್ದಾರೆ.

from India & World News in Kannada | VK Polls https://ift.tt/m6U53iD

ಕಾಡುಗೊಲ್ಲರ ವಿಶೇಷ ಜಾತ್ರೆ: ಮುಳ್ಳಿನಿಂದ ದೇವರ ಗುಡಿ, ಬರಿ ಕಾಲಲ್ಲೇ ಏರಿ ಕಳಸ ಕೀಳುವ ಈರಗಾರರು

Kadugolla jatre in challakere: ಈ ಜಾತ್ರೆಯು ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಟ್ಟರೆ ಬೇರೆಲ್ಲಿ ನಡೆಯುವುದಿಲ್ಲ ಎನ್ನಬಹುದಾಗಿದೆ. ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ನರಕಯಾತನೆ ಅನುಭವಿಸುವ ಸನ್ನಿವೇಶದಲ್ಲಿ ಜನರು ಮುಳ್ಳಿನ ಗುಡಿಯ ಮೇಲೆ ಬರಿಗಾಲಲ್ಲಿ ಕುಣಿದು ಕುಪ್ಪಳಿಸುವ ಈರಗಾರರನ್ನು ಕಂಡು ಒಂದು ಕ್ಷಣ ಭಕ್ತ ಸಮೂಹ ಬೆರಗಾಗುವಂತೆ ಮಾಡುತ್ತದೆ. ಇಂತಹ ಸಾಂಪ್ರದಾಯಿಕ ಬುಡಕಟ್ಟು ಆಚರಣೆಗಳು ಕಾಡುಗೊಲ್ಲ ಸಮುದಾಯದಲ್ಲಿ ಮಾತ್ರ ಕಾಣಬಹುದಾಗಿದೆ.

from India & World News in Kannada | VK Polls https://ift.tt/eFzq1oT

Mass Wedding in Kukke Subrahmanya-ಮಾ.12ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

ನಾಗಾರಾಧನೆಯ ಶ್ರದ್ಧಾ ಕೇಂದ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.12ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದ್ದು ಸಾಮೂಹಿಕ ವಿವಾಹವಾಗಲು ಬಯಸುವವರು ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ತಮ್ಮ ಅರ್ಜಿಯನ್ನು ದೇವಳಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಅಥವಾ ದೂರವಾಣಿ ಕರೆ (08257- 281224) ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

from India & World News in Kannada | VK Polls https://ift.tt/yKudzUN

ಕರಾವಳಿಯಲ್ಲಿಆರ್ದ್ರತೆ, ಧೂಳು ಮಿಶ್ರಿತ ಗಾಳಿ: ಉಸಿರಾಟಕ್ಕೆ ಸಮಸ್ಯೆ: ನಿರ್ಲಕ್ಷಿಸಿದ್ರೆ ನಿಮೋನಿಯಾ ಫಿಕ್ಸ್?

ಕರಾವಳಿಯ ಕಾರವಾರದಲ್ಲಿ ಧೂಳು ಮಿಶ್ರಿತ ಗಾಳಿ ಹೆಚ್ಚಾಗಿದೆ. ಈ ಗಾಳಿಯು 4 ನಾಟ್ಸ್‌ ಹಾಗೂ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ವೇಗದಲ್ಲಿ ಬೀಸುತ್ತಿದೆ. ಬೆಳಗ್ಗೆ ಗಾಳಿಯಲ್ಲಿ ಶೇ.70ರಿಂದ 80 ಹಾಗೂ ಸಂಜೆಯ ವೇಳೆ ಶೇ.50ರಷ್ಟು ತೇವಾಂಶ ಇರುತ್ತದೆ. ಇದರಿಂದಾಗಿ ಮಕ್ಕಳು ಹಾಗೂ ವೃದ್ಧರಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಳೆದ ಐದು ದಿನಗಳಲ್ಲಿ ಹವಾಮಾನದ ವೈಪರೀತ್ಯದಿಂದಾಗಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ತಾಲೂಕಿನ 20 ವೃದ್ಧರು ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

from India & World News in Kannada | VK Polls https://ift.tt/OM4c7GX

ನೀರು ಪೂರೈಕೆ ನಿರ್ವಹಣೆ ದುಬಾರಿ.. ಅಂಜನಾಪುರದಿಂದ ಶಿಕಾರಿಪುರಕ್ಕೆ ಕುಡಿಯುವ ನೀರು ಸಗಟು ಪೂರೈಕೆಗೆ ಲಕ್ಷಾಂತರ ರೂ. ವ್ಯಯ

​ಅಂಜನಾಪುರದಿಂದ ಶಿಕಾರಿಪುರಕ್ಕೆ ಕುಡಿಯುವ ನೀರು ಸಗಟು ಪೂರೈಕೆಗೆ ದುಬಾರಿ ಹಣ ಪೋಲು ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಜನತೆ ಹಣ ಪೋಲು ಮಾಡುತ್ತಿದೆ ಎನ್ನುವುದು ಜನಸಾಮಾನ್ಯರ ಆರೋಪವಾಗಿದೆ. ಅಂಜನಾಪುರ ಜಲಾಶಯದಿಂದ ಶಿಕಾರಿಪುರ ಪಟ್ಟಣ ಮತ್ತು ಮಾರ್ಗಮಧ್ಯದ 18 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಯೋಜನೆ 2012ರಲ್ಲಿ ಜಾರಿಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಅಂಜನಾಪುರ ಜಲಾಶಯದಿಂದ ಪಟ್ಟಣದ ನೀರು ಶುದ್ಧೀಕರಣ ಘಟಕದವರೆಗೆ ಸಗಟು ನೀರನ್ನು ತಲುಪಿಸುವ ನಿರ್ವಹಣೆ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಮಾಡುತ್ತಿದೆ.

from India & World News in Kannada | VK Polls https://ift.tt/xStRYqM

18ರಿಂದ ಮಾನಸ ಗಂಗೋತ್ರಿಯಲ್ಲಿ ಬುಡಕಟ್ಟು ಸಂಸ್ಕೃತಿ ವಿನಿಮಯ ಕಾರ್ಯಕ್ರಮ

​​​ಮಾನಸ ಗಂಗೋತ್ರಿಯ ಲಲಿತ ಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಛತ್ತೀಸ್‌ಗಢ, ಜಾರ್ಖಂಡ್‌, ಮಹಾರಾಷ್ಟ್ರ, ಒಡಿಸಾ, ತೆಲಂಗಾಣ ಹಾಗೂ ಬಿಹಾರ ರಾಜ್ಯಗಳ ಆಯ್ದ ಬುಡಕಟ್ಟು ಯುವಜನರು ಭಾಗವಹಿಸಲಿದ್ದಾರೆ. ಜ.18ರ ಬೆಳಗ್ಗೆ 11ಕ್ಕೆ ರಾಜ್ಯಪಾಲರಾದ ತಾವರ್‌ ಚಂದ್‌ ಗೆಹಲೋಟ್‌ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ಎಸ್‌.ಟಿ. ಸೋಮಶೇಖರ್‌, ಕೆ.ಸಿ.ನಾರಾಯಣಗೌಡ, ಸಂಸದರಾದ ವಿ.ಶ್ರೀನಿವಾಸ್‌ಪ್ರಸಾದ್‌, ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‌ ಸೇಠ್‌, ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ, ಮೈಸೂರು ವಿವಿ ಕುಲಪತಿ,ಕುಲಸಚಿವರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

from India & World News in Kannada | VK Polls https://ift.tt/BSiZIJM

ಧೂಳು ತಿನ್ನುತ್ತಿವೆ 5.45 ಕೋಟಿ ರೂ. ವೆಚ್ಚದ ನಿರ್ಮಾಣದ ಮಳಿಗೆಗಳು: ಬೆಳಗಾವಿಯ ಮಳಿಗೆಗಳಿಗಿಲ್ಲಾ ಉದ್ಘಾಟನಾ ಭಾಗ್ಯ

ಬೆಳಗಾವಿಯ ತರಕಾರಿ ಮಳಿಗೆಗಳು ಫಲಾನುಭವಿಗಳಿಗೆ ದೊರೆಯದೆ ಧೂಳು ತಿನ್ನುತ್ತಿವೆ. 5.45 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಫುಟ್ಪಾತ್‌, ಚರಂಡಿ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ತರಕಾರಿ ಮಳಿಗೆಗಳು ಸೇರಿ ಇನ್ನಿತರ ಅಭಿವೃದ್ಧಿ ಕೈಗೊಳ್ಳಲಾಗಿದೆ. ಬಸವೇಶ್ವರ ವೃತ್ತದ ಬಳಿ ಸುಸಜ್ಜಿತವಾದ 140 ತರಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಾಮಗಾರಿ ಪೂರ್ಣವಾಗಿ ಐದು ತಿಂಗಳಾಗಿದ್ದರೂ ಫಲಾನುಭವಿಗಳಿಗೆ ದೊರೆಯದಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತರಕಾರಿ ಮಳಿಗೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಪತ್ರ ರವಾನಿಸಲಾಗಿದೆ. ಆದರೆ, ಪಾಲಿಕೆಯಿಂದ ಯಾವುದೇ ಉತ್ತರ ಬಂದಿಲ್ಲವೆಂಬುದು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಆರೋಪ.

from India & World News in Kannada | VK Polls https://ift.tt/KxJFqP7

Bengaluru Crime - ಶವದ ಜತೆ ಟ್ರಿಪಲ್ ರೈಡ್!: ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಕೊಂದು ಬೈಕಿನಲ್ಲಿ ಆರು ಕಿ.ಮೀ. ಸಾಗಿಸಿದರು

ಕೆಲ ವರ್ಷದ ಹಿಂದೆ ಶವವನ್ನು ಟ್ರಿಪಲ್ ರೈಡ್ ಮೂಲಕ ಬೈಕ್ ನಲ್ಲಿ ಸಾಗಿಸಿದ ಪ್ರಕರಣವೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ವರದಿಯಾಗಿದೆ. ನಿರಂತರ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ದಂಪತಿ ಸ್ನೇಹಿತನ ಸಹಾಯ ಪಡೆದು ಬೈಕಿನಲ್ಲಿ 6 ಕಿ.ಮೀ. ದೂರದ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ದೊರಕಿರುವುದು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಯಿತು.

from India & World News in Kannada | VK Polls https://ift.tt/x9OSwBu

SA20 2023: ಭವಿಷ್ಯದ ಸೂಪರ್‌ ಸ್ಟಾರ್‌ ಆಟಗಾರನ ಸಾಮರ್ಥ್ಯ ಕಾಣುವ ತುಡಿತ ವ್ಯಕ್ತಪಡಿಸಿದ ಎಬಿ ಡಿ'ವಿಲಿಯರ್ಸ್‌!

Inaugural Edition Of SA20 2023: ಚೊಚ್ಚಲ ಆವೃತ್ತಿಯ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಟೂರ್ನಿ ಜನವರಿ 10ರಂದು ಶುರುವಾಗಲಿದೆ. ಟೂರ್ನಿಯ ತಂಡಗಳನ್ನು ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಫ್ರಾಂಚೈಸಿಗಳೇ ಖರೀದಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ'ವಿಲಿಯರ್ಸ್‌, ಈ ಬಾರಿ ಯುವ ಬ್ಯಾಟರ್‌ ಡೆವಾಲ್ಡ್‌ ಬ್ರೆವಿಸ್‌ ಅವರ ಆಟ ಕಾಣಲು ಬಹಳಾ ಕುತೂಹಲದಿಂದ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. 19 ವರ್ಷದ ಯುವ ಬ್ಯಾಟರ್‌ ಎಂಐ ಕೇಪ್‌ ಟೌನ್ ತಂಡದ ಪರ ಬ್ಯಾಟ್‌ ಬೀಸಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/cuE4XnA

Drug Peddlers In Mangalu- ಮಂಗಳೂರಿನಲ್ಲೇಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಮೂವರ ಸೆರೆ

ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ನಾನಾ ಕಡೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಮೂವರು ಬಂಧಿತರಲ್ಲಿ ಇಬ್ಬರು ಹೊರರಾಜ್ಯದವರು ಎಂಬುದು ಗಮನಾರ್ಹ ಅಂಶವಾಗಿದೆ.

from India & World News in Kannada | VK Polls https://ift.tt/Ylsn0KA

Farmers in Loss: ಆರಂಭವಾಗದ ಭತ್ತ ಖರೀದಿ ಕೇಂದ್ರ, ಅನ್ನದಾತರಿಗೆ ನಷ್ಟ ತಪ್ಪಿದ್ದಲ್ಲ

ಮಧ್ಯವರ್ತಿಗಳು ರೈತರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರು, ಬಾಡಿಗೆ ವಾಹನ, ಭತ್ತ ದಾಸ್ತಾನು ಇಟ್ಟುಕೊಳ್ಳಲು ಜಾಗದ ಕೊರತೆಯಿಂದ ರೈತರು ಜಮೀನಿನ ಬಳಿಯೇ ಸರಕಾರ ನಿಗದಿ ಮಾಡಿರುವ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ.

from India & World News in Kannada | VK Polls https://ift.tt/V8GyhNb

ಚನ್ನರಾಯಪಟ್ಟಣದಲ್ಲಿ ಜ.9ರಿಂದ ಮಕ್ಕಳ ಸಾಹಿತ್ಯ ಸಮ್ಮೇಳನ: ಮಕ್ಕಳೇ ಸಮ್ಮೇಳನಾಧ್ಯಕ್ಷರು

ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಚನ್ನರಾಯಪಟ್ಟಣದಲ್ಲಿ ವೇದಿಕೆ ಸಜ್ಜಾಗಿದೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ, ಸಂಸ್ಕಾರವನ್ನು ಮೂಡಿಸುವ ನಿಟ್ಟಿನಲ್ಲಿ ರೂಪುಗೊಂಡ ಪರಿಷತ್ತು, ಇದುವರೆಗೆ ಸರಕಾರದ ಯಾವುದೇ ನೆರವಿಲ್ಲದೆ ಅನೇಕ ಮಹತ್ವ ಪೂರ್ಣ ಕಾರ್ಯಕ್ರಮಗಳನ್ನು ನಡೆಸಿ ಸೈ ಎನಿಸಿಕೊಂಡಿದೆ. ​ಜ.9 ಮತ್ತು 10ರಂದು ಪಟ್ಟಣದ ಸರಕಾರಿ ಮಾಧ್ಯಮಿಕ ಶಾಲೆ ಆವರಣದಲ್ಲಿ ತಾಲೂಕು ಮಟ್ಟದ ದ್ವಿತೀಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಸಮ್ಮೇಳನದ ತೇರು ಎಳೆಯಲು ಕ್ಷಣಗಣನೆ ಆರಂಭವಾಗಿದೆ. ಮಕ್ಕಳ ನುಡಿ ಜಾತ್ರೆ ಆಯೋಜಿಸಲಾಗಿದ್ದು, ಸಂಭ್ರಮಕ್ಕೆ ಪಟ್ಟಣ ಸಜ್ಜಾಗಿದೆ.

from India & World News in Kannada | VK Polls https://ift.tt/OHiLsRW

ಬಾಂಬ್‌ ಬೆದರಿಕೆ ಮೇಲ್‌ ಮಾಡಿ- ಡೂಯಿಂಗ್ ಫಾರ್ ಫನ್ ಎಂದ ವಿದ್ಯಾರ್ಥಿ

ನ್ಯಾಷನಲ್‌ ಅಕಾಡೆಮಿ ಫಾರ್‌ ಲರ್ನಿಂಗ್‌ (ಎನ್‌ಎಎಫ್‌ಎಲ್‌) ಶಾಲೆಗೆ ಬಾಂಬ್‌ ಸ್ಫೋಟದ ಬೆದರಿಕೆ ಸುದ್ದಿ ಸಂಚಕನ ಸೃಷ್ಟಿಸಿತ್ತು. 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯು ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದರೆ ಶಾಲೆಯವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಕುಚೇಷ್ಟೆಯಿಂದ ಇ-ಮೇಲ್‌ ಮಾಡಿದ್ದ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ.

from India & World News in Kannada | VK Polls https://ift.tt/fBeyRSA

Karnataka Assembly Election 2023: ಬಿಜೆಪಿಯ 'ಪಂಚ' ಭಾವತಂತ್ರ, ಹಳೆ ಮೈಸೂರು ಗೆಲ್ಲಲು ಭಾವನಾತ್ಮಕ ಬಾಣ ಪ್ರಯೋಗ

2023 ರ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಸೀಟು ಗೆಲ್ಲಲು ಬಿಜೆಪಿ, ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ಸೆಳೆದು ಸದೃಢ ಕಾರ್ಯಕರ್ತರ ಪಡೆ, ನಾಯಕರ ತಂಡವನ್ನು ರೂಪಿಸಲು ಕಾರ್ಯತಂತ್ರ ಹೆಣೆದಿದೆ. ರೈಲಿಗೆ ಒಡೆಯರ್ ನಾಮಕರಣ, ಕೆಂಪೇಗೌಡ ಪ್ರತಿಮೆ, ರಾಮನಗರದಲ್ಲಿ ಮಂದಿರ ಹೀಗೆ ಐದು ಭಾವನಾತ್ಮಕ ತಂತ್ರಗಳ ವಿವರ ಇಲ್ಲಿದೆ.

from India & World News in Kannada | VK Polls https://ift.tt/5QeslUa

ಕಾಂಗ್ರೆಸ್‌ ಬಸ್‌ ಯಾತ್ರೆಗೆ ಭರದ ಸಿದ್ಧತೆ: ಜನವರಿ 11ರಂದು ಬೆಳಗಾವಿಯ ವೀರಸೌಧದಲ್ಲಿ ಚಾಲನೆ

2023ರ ಚುನಾವಣೆಯಲ್ಲಿ ಗೆದ್ದು ರಾಜ್ಯದ ಗದ್ದುಗೆ ಏರಲು ಪಣತೊಟ್ಟಿರುವ ಕಾಂಗ್ರೆಸ್‌ ಮೇಲಿಂದ ಮೇಲೆ ಸಮಾವೇಶ, ಯಾತ್ರೆಗಳನ್ನು ನಡೆಸುತ್ತಲ್ಲೇ ಇದೆ. ಜ.11 ರಿಂದ ಬಸ್‌ ಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆ ಕೈಗೊಂಡಿದೆ. ಈ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಲು ಕೆಪಿಸಿಸಿ ತಯಾರಿ ನಡೆಸುತ್ತಿದೆ. ​ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲ ನಾಯಕರು ಒಂದೇ ಬಸ್‌ ಹತ್ತಲಿದ್ದು, ಯಾತ್ರೆಯುದ್ದಕ್ಕೂ ಆಯೋಜಿಸಲಾಗುತ್ತಿರುವ ಸಮಾವೇಶಗಳಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ.

from India & World News in Kannada | VK Polls https://ift.tt/Uj7uXK8

Republic Day Parade Tableau | ಸ್ತಬ್ಧಚಿತ್ರ ಆಯ್ಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ: ವಾಸ್ತವಕ್ಕೆ ದೂರ, ಸಿಎಂ ಹೇಳಿದ್ದೇನು?

Tableau from Karnataka: ಕಳೆದ 2022ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನಗೊಂಡಿದ್ದ ಕರ್ನಾಟಕದ 'ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು' ಸ್ತಬ್ಧಚಿತ್ರವು ಎರಡನೇ ಅತ್ಯುತ್ತಮ ಪ್ರಶಸ್ತಿಗೆ ಭಾಜನವಾಗಿತ್ತು. ಪ್ರಥಮ ಪ್ರಶಸ್ತಿಗೆ ಉತ್ತರ ಪ್ರದೇಶ ಹಾಗೂ ಮೂರನೇ ಪ್ರಶಸ್ತಿಗೆ ಮೇಘಾಲಯ ಆಯ್ಕೆಯಾಗಿತ್ತು. ಕಳೆದ ಬಾರಿ ಪ್ರಶಸ್ತಿ ಪಡೆದಿದ್ದ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ಸ್ತಬ್ಧಚಿತ್ರಗಳು ಈ ಬಾರಿ ಆಯ್ಕೆಯಾಗಿಲ್ಲ. ಹಾಗಾಗಿ ಕರ್ನಾಟಕಕ್ಕೆ ತಾರತಮ್ಯವಾಗಿದೆ ಎಂಬುದು ಸತ್ಯಕ್ಕೆ ದೂರ ಎಂದು ವಾರ್ತಾ ಇಲಾಖೆ ತಿಳಿಸಿದೆ.

from India & World News in Kannada | VK Polls https://ift.tt/W72OKUc

ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ? ಆತಿಥ್ಯಕ್ಕೆ ಹಲವು ಜಿಲ್ಲೆಗಳ ಬೇಡಿಕೆ

ಆರೋಗ್ಯ ಸರಿಯಿಲ್ಲದ ಕಾರಣ ಸಭೆ ಅರ್ಧಕ್ಕೆ ಮುಗಿದಿದ್ದು ರವಿವಾರ ಮುಂಜಾನೆ ಮತ್ತೆ ಸಭೆ ಸೇರಿ ಮುಂದಿನ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದನ್ನ ತೀರ್ಮಾನಿಸುತ್ತೇವೆ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ತಿಳಿಸಿದರು. ಈ ಮಧ್ಯೆ ಸಭೆಯಲ್ಲಿ ಸರಿಯಾದ ಚರ್ಚೆಯಾಗಲಿಲ್ಲಾ ನಮಗೆ ಅವಕಾಶ ನೀಡಲಿಲ್ಲಾ ಎಂದು ಕೆಲ ಜಿಲ್ಲೆಗಳ ಸದಸ್ಯರು ದೂರಿದರು. ನಾಳೆಯ ಸಭೆಯಲ್ಲಾದರೂ ಸರಿಯಾಗಿ ಚರ್ಚಿಸಿ 87 ನೇ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಆಯ್ಕೆಮಾಡಬೇಕಿದೆ ಎಂದು ಜಿಲ್ಲೆಯ ಸದಸ್ಯರು ಮನವಿ ಮಾಡಿದರು.

from India & World News in Kannada | VK Polls https://ift.tt/6K4Rtgd

ದಾವಣಗೆರೆಯ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ಕೇಂದ್ರಕ್ಕೆ ರೈತರ ಮುತ್ತಿಗೆ!

ಬಿದರಕೆರೆ, ನಿಬಗೂರು, ಮಠದ ದ್ಯಾಮೇನಹಳ್ಲಿ, ಕ್ಯಾಸೇನಹಳ್ಳಿ, ಮುಸ್ಟೂರು, ಚಿಕ್ಕಮ್ಮನಹಟ್ಟಿ, ಬಿಸ್ತುವಳ್ಳಿ, ಎಚ್‌.ಎಂ.ಹೊಳೆ, ಪಲ್ಲಾಗಟ್ಟೆ ಗ್ರಾಮಸ್ಥರು ಸೇರಿದಂತೆ ಅನೇಕ ಹಳ್ಳಿಗಳಿಂದ ಬಂದ ನೂರಾರು ಗ್ರಾಮಸ್ಥರು ದಾವಣಗೆರೆ ರಸ್ತೆಯಲ್ಲಿರುವ ವಿದ್ಯುತ್‌ ಪರಿವರ್ತಕ ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು. ದಿಬ್ಬದಹಟ್ಟಿ ಗ್ರಾಮದ ಟಿಸಿ ಸುಟ್ಟು ಎರಡು ತಿಂಗಳಾಗಿವೆ ನೀರಿಗೆ ಹಾಹಾಕಾರ ಉಂಟಾಗಿದೆ. ಟಿಸಿ ಕೇಳಿದರೆ ಅಧಿಕಾರಿಗಳು ತುಟಿಬಿಚ್ಚುತ್ತಿಲ್ಲಎಂದು ಗ್ರಾಮಸ್ಥ ಪಾಲಯ್ಯ ಆಕ್ರೋಶ ವ್ಯಕ್ತಪಡಿಸಿದರು.

from India & World News in Kannada | VK Polls https://ift.tt/5A1sBth

ODI World cup: ಗಂಭೀರ್‌ ರೀತಿ ವಿರಾಟ್‌ಕೊಹ್ಲಿ ಈ ಬಾರಿ ವಿಶ್ವಕಪ್‌ ಗೆದ್ದು ಕೊಡುತ್ತಾರೆಂದ ಶ್ರೀಕಾಂತ್!

Krishnamachari Srikkanth on Virat Kohli: ಭಾರತ ತಂಡ 2011ರ ಬಳಿಕ ಇಲ್ಲಿಯವರೆಗೂ ಒಮ್ಮೆಯೂ ಒಂದೇ ಒಂದು ವಿಶ್ವಕಪ್‌ ಗೆದ್ದಿಲ್ಲ. ಎಂಎಸ್‌ ಧೋನಿ ನಾಯಕತ್ವದಲ್ಲಿ ಕೊನೆಯ ಏಕದಿನ ವಿಶ್ವಕಪ್‌ ಗೆದ್ದಿದ್ದ ಭಾರತ ತಂಡ, ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಭಾರತದ ಆತಿಥ್ಯದಲ್ಲಿ ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರಲಿದ್ದಾರೆಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ಭವಿಷ್ಯ ನುಡಿದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/vKsfW62

ಕಾಫಿನಾಡಿನಲ್ಲಿ ಗಾಂಜಾ ಘಮಲು: ಚಿಕ್ಕಮಗಳೂರು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕಿ

ಕರ್ನಾಟಕ ಪ್ರವಾಸಿಗರ ಪಾಲಿನ ಸ್ವರ್ಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಾಂಜಾ ಘಾಟು ಹೊಗೆಯಾಡುತ್ತಿದೆ. ನಗರದ ನಿರ್ಜನ ಪ್ರದೇಶಗಳು, ಬಡಾವಣೆ, ನಿವೇಶನಗಳು ಸೇರಿದಂತೆ ಹಳೆಯ ಕಟ್ಟಡಗಳಲ್ಲಿ ರಾಶಿ ರಾಶಿ ಸೆಲ್ಯುಶನ್ ಪತ್ತೆಯಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಹೋಂಸ್ಟೇ, ರೆಸಾರ್ಟ್‌ಗಳಿಗೆ ಗಾಂಜಾ ಜಾಲದ ನಂಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಹೋಂ ಸ್ಟೇ, ರೆಸಾರ್ಟ್‌ಗಳು ಅಡ್ಡದಾರಿ ಹಿಡಿದಿರುವ ಅನುಮಾನ ವ್ಯಕ್ತವಾಗಿದೆ. ಕೇವಲ ಎರಡು ದಿನದಲ್ಲಿ 11 ಪ್ರಕರಣಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ.

from India & World News in Kannada | VK Polls https://ift.tt/qCzrwsV

ರಾಹುಲ್‌, ಸೋನಿಯಾ ಮುಂದೆ ಸಿದ್ದರಾಮಯ್ಯ ಎಂದಾದರೂ ವೀರಾವೇಶದಿಂದ ಮಾತಾಡಿದ್ದಾರಾ?

ಕೋವಿಡ್‌ ಬಂದ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವಾಗ ಏನು ಮಾತನಾಡುತ್ತಾರೆ ಗೊತ್ತಾಗುತ್ತಿಲ್ಲ. ಅವರಿಗೆ ಮಾತಿನಲ್ಲಿ ಹಿಡಿತವಿಲ್ಲ. ಸಿಎಂ ಬೊಮ್ಮಾಯಿ ಅವರು ಇದಕ್ಕೆಲ್ಲಾಹೆದರಿಕೊಳ್ಳುವ ಅವಶ್ಯಕತೆಯೇ ಇಲ್ಲ. ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳನ್ನು ಕೇಂದ್ರದಿಂದ ತರುತ್ತಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರು ವಿಶ್ವ ಮೆಚ್ಚಿದ ನಾಯಕ. ಸಾಮಾನ್ಯ ಕಾರ್ಯಕರ್ತನೊಂದಿಗೂ ಬೆರೆಯುವ ಸರಳ ಜೀವಿ. ಅವರ ಹುದ್ದೆಗೆ ಏನು ಬೆಲೆ, ಗೌರವ ಕೊಡಬೇಕು ಅದನ್ನು ಬೊಮ್ಮಾಯಿ ಕೊಡುತ್ತಿದ್ದಾರೆ. ಅದರಲ್ಲಿ ತಪ್ಪೇನು'' ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

from India & World News in Kannada | VK Polls https://ift.tt/opLjP3S

9ರಿಂದ 13ರವರೆಗೆ ಮೈಸೂರಿನಲ್ಲಿ ಮಕ್ಕಳ ನಾಟಕ ಪ್ರದರ್ಶನ, ಜನಪದೋತ್ಸವ

ಜ. 9ರಂದು ಸಂಜೆ 6ಕ್ಕೆ ರಾಜ್ಯಮಟ್ಟದ ಸಂಚಲನ ಮಕ್ಕಳ ನಾಟಕೋತ್ಸವ ಸಮಾರಂಭವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಮೇಯರ್‌ ಶಿವಕುಮಾರ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್‌ ರಾಯಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ, ಹಿರಿಯ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್‌, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆಗವರ್ನರ್‌ ಪ್ರಕಾಶ್‌ ಕಾರಂತ್‌ ಭಾಗವಹಿಸಲಿದಾರೆ. ಜ. 13ರ ಸಂಜೆ 6ಕ್ಕೆ ನಡೆಯಲ್ಲಿರುವ ಸಮಾರಂಭದಲ್ಲಿಮುಡಾ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥ ಸ್ವಾಮಿ ಭಾಗವಹಿಸಲಿದ್ದಾರೆ.

from India & World News in Kannada | VK Polls https://ift.tt/o2S6ajW

ಚಾಮುಂಡೇಶ್ವರಿ ಕ್ಷೇತ್ರದ ಆಸ್ತಿ ಮಾಲೀಕರಿಗೆ ಶುಭ ಸುದ್ದಿ; ನಗರಸಭೆ, ಪಟ್ಟಣ ಪಂಚಾಯ್ತಿ ಆಸ್ತಿಗಳಿಗೆ ಖಾತೆ ಭಾಗ್ಯ!

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ 10 ಗ್ರಾಮ ಪಂಚಾಯಿತಿಯ ವ್ಯಾಪ್ತಿಯನ್ನು (ಪೂರ್ಣ ಪ್ರಮಾಣ ಮತ್ತು ಭಾಗಶಃ) ಮೇಲ್ದರ್ಜೆಗೇರಿಸಿ ಒಂದು ನಗರಸಭೆ (ಹೂಟಗಳ್ಳಿ ನಗರಸಭೆ), 04 ಪಟ್ಟಣ ಪಂಚಾಯಿತಿಗಳನ್ನು (ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ) ರಚಿಸಲಾಯಿತು. 2021ರ ಆ.1 ರಿಂದ ಅಧಿಕೃತವಾಗಿ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಕಾರ್ಯ ಆರಂಭಿಸಿವೆ. ಇದಲ್ಲದೇ ಪ.ಪಂ ಹಾಗೂ ನಗರ ಸಭೆ ವ್ಯಾಪ್ತಿಯ ಭೂ ಪರಿವರ್ತನೆಯಾಗಿ ಬಡಾವಣೆ ಅನುಮೋದನೆಯಾಗದೆ ಹಾಗೂ ಮೂಲಸೌಲಭ್ಯಗಳನ್ನು ಕಲ್ಪಿಸದ ರೆವಿನ್ಯೂ ಬಡಾವಣೆಯ ಆಸ್ತಿಗಳಿಗೆ (ನಮೂನೆ-3) ಖಾತೆ ಮಾಡಿಕೊಡಲಾಗುತ್ತದೆ

from India & World News in Kannada | VK Polls https://ift.tt/rwobPRG

ದಕ್ಷಿಣ ಕನ್ನಡದಲ್ಲಿ 47,174 ಮಂದಿ ಹೊಸ ಮತದಾರರ ಸೇರ್ಪಡೆ: ಮನೆಗೆ ಬರುತ್ತೆ ವೋಟರ್ ಐಡಿ

ದಕ್ಷಿಣ ಕನ್ನ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 47, 174 ಮಂದಿಯನ್ನು ಹೊಸ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮತದಾರರ ಪಟ್ಟಿಗಳನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದು, ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ವಿಶೇಷ ಪರಿಷ್ಕರಣೆ ಮುಕ್ತಾಯಗೊಂಡಿದ್ದರೂ ನಿರಂತರ ಪರಿಷ್ಕರಣೆ ಎಂದಿನಂತೆ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ ಆರ್‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದಿನ ಪಟ್ಟಿ ಪ್ರಕಾರ 9,845 ಯುವ ಮತದಾರರಿದ್ದು ಈಗ 15,414 ಮಂದಿ ಸೇರ್ಪಡೆಗೊಳಿಸಲಾಗಿದೆ.

from India & World News in Kannada | VK Polls https://ift.tt/HtLihW8

Mysuru Bengaluru Express Way - ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ವೇ ಫೆಬ್ರವರಿಗೆ ಉದ್ಘಾಟನೆ; ದ್ವಿಚಕ್ರ ವಾಹನ ಸವಾರರಿಗೆ ನೋ ಎಂಟ್ರಿ:ಪ್ರತಾಪ್ ಸಿಂಹ

ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯನ್ನು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ ಅಂತ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಜನರ ಓಡಾಟದ ದೃಷ್ಟಿಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ. ಉತ್ತಮ ಗುಣಮಟ್ಟದ ಹೈವೇ ನಿರ್ಮಿಸಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಹ ಮೈಸೂರು-ಬೆಂಗಳೂರು ದಶಪಥ ಕಾಮಗಾರಿಯನ್ನು ವೀಕ್ಷಿಸಿ ಉತ್ತಮವಾಗಿದೆ ಎಂದು ಹೇಳಿದ್ದಾರ. ಇಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಸಂಚರಿಸಲು ಅವಕಾಶ ಇಲ್ಲ ಎಂದಿದ್ದಾರೆ.

from India & World News in Kannada | VK Polls https://ift.tt/U4PkIMR

IND vs SL: 31 ಎಸೆತಗಳಲ್ಲಿ 65 ರನ್ ಸಿಡಿಸಿ ಪ್ರಮುಖ 3 ದಾಖಲೆ ಬರೆದ ಅಕ್ಷರ್ ಪಟೇಲ್!

Axar Patel Creates 3 major Records: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ ರೋಚಕ ಗೆಲುವು ಸಾಧಿಸಿತ್ತು. ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರವನ್ನು ನಾಯಕ ಹಾರ್ದಿಕ್ ಪಾಂಡ್ಯ ಹಾಕಿಕೊಂಡಿದ್ದರು. ಆದರೆ 16 ರನ್‌ಗಳಿಂದ ಗೆದ್ದು ಶ್ರೀಲಂಕಾ ತಂಡ, ಭಾರತ ತಂಡಕ್ಕೆ ತಿರುಗೇಟು ನೀಡಿತು. ಪಂದ್ಯದಲ್ಲಿ 31 ಎಸೆತಗಳಲ್ಲಿ 65 ರನ್ ಗಳಿಸಿದ ಆಲ್‌ರೌಂಡರ್‌ ಅಕ್ಷರ್ ಪಟೇಲ್ ಪ್ರಮುಖ ಮೂರು ದಾಖಲೆಗಳನ್ನು ನಿರ್ಮಿಸದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/5SvloWs

ಮೈಸೂರು ಮತದಾರರ ಪಟ್ಟಿಗೆ 30 ಸಾವಿರ ಮಂದಿ ಸೇರ್ಪಡೆ; ನಿಮ್ಮ ಹೆಸರು ಪರೀಕ್ಷಿಸಲು ಇಲ್ಲಿದೆ ಸಹಾಯವಾಣಿ ಸಂಖ್ಯೆಗಳು!

ಪರಿಷ್ಕೃತ ಪಟ್ಟಿಯ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಮತದಾರರು ತಮ್ಮ ಹೆಸರುಗಳನ್ನು ಪರಿಷ್ಕೃತ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಇದನ್ನು ಹೊರತುಪಡಿಸಿಯೂ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿಕೃತ ಜಾಲತಾಣದಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಹಾಗೂ ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿ ಕೊಳ್ಳಬಹುದು''ಎಂದು ತಿಳಿಸಿದರು.

from India & World News in Kannada | VK Polls https://ift.tt/XUfe8L1

ಜನರ ನಿದ್ದೆಗೆಡಿಸಿದ ಚಿರತೆ ಸಂತತಿ ವೃದ್ಧಿ: ರಾಮನಗರ ಕಾಡಂಚಿನ ಹಳ್ಳಿಯವರಲ್ಲಿ ಭೀತಿ

ರಾಮನಗರ ಜಿಲ್ಲೆಯ ಗ್ರಾಮೀಣ ಭಾಗ, ಕಾಡಂಚಿನ ಹಳ್ಳಿಗಳಲ್ಲಿ ಜನರು ನಿದ್ದೆಗೆಡುವಂತಾಗಿದೆ. ಚಿರತೆ ಸಂತತಿ ವೃದ್ಧಿಸಿದ್ದು, ಕತ್ತಲು ಕವಿದಂತೆ ಬೀದಿನಾಯಿ, ಕುರಿ, ಮೇಕೆ, ದನಕರುಗಳು ಸೇರಿದಂತೆ ಜಾನುವಾರುಗಳನ್ನು ಹೊತ್ತೊಯ್ಯುತ್ತಿವೆ. ಅರಣ್ಯ ಪ್ರದೇಶದ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿ ಚಿರತೆ ಸೇರಿದಂತೆ ವನ್ಯ ಮೃಗಗಳ ಕಾಟ ನಿತ್ಯ ನಿರಂತರವಾಗಿದೆ. ಹಳ್ಳಿಗಾಡಿನ ಬೆಟ್ಟಗುಡ್ಡಗಳು, ತೋಟಗಳಲ್ಲಿನ ಗಿಡಗಳು, ಪೊದೆಗಳಲ್ಲಿ ಅಡಗಿಕೊಳ್ಳುವ ಚಿರತೆಗಳು ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿಯೂ ಜನ-ಜಾನುವಾರುಗಳ ಮೇಲೆರಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಮನೆಯ ಹಿತ್ತಲು, ಹೊಲಗಳಲ್ಲಿ ಬಚ್ಚಿಟ್ಟುಕೊಂಡು ಜನರಲ್ಲಿ ಭಯ-ಭೀತಿ ಹುಟ್ಟಿಸಿವೆ.

from India & World News in Kannada | VK Polls https://ift.tt/B9Wy4FA

Chamarajanagar: ಹೊಸ ಬಡಾವಣೆಗಳಿಗೆ ಕಾವೇರಿ ನಿರೀಕ್ಷೆ.. ಅಮೃತ್‌ ಯೋಜನೆಯಡಿ ಸಿಗಲಿದೆಯೇ ಪರಿಹಾರ ?

ಕಾವೇರಿ ನೀರು ಪೂರೈಕೆ ಆಗದೆ ಚಾಮರಾಜನಗರ ಜಿಲ್ಲೆಯ ಹೊಸ ಬಡಾವಣೆ ಹಾಗೂ ಹಳೇ ಜನ ವಸತಿ ಪ್ರದೇಶಗಳ ಜನರು ಪರದಾಡುವಂತಾಗಿದೆ. ಆದರೆ ಈಗ ಜಿಲ್ಲೆಯ ಜನರು ಅಮೃತ್‌ ಯೋಜನೆಯಡಿ ಪರಿಹಾರ ಸಿಗಲಿದೆಯೇ ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ. ನಗರದಲ್ಲಿ ಸದ್ಯ ಕಾವೇರಿ ನೀರು ಪೂರೈಕೆ ಆಗುತ್ತಿರುವ ಬಡಾವಣೆಗಳಿಗೂ ನಿತ್ಯ ನೀರು ಸಿಗುತ್ತಿಲ್ಲ. ಈ ಹಿಂದೆ ವಾರಕ್ಕೊಮ್ಮೆ ಬಂದರೆ ಹೆಚ್ಚು ಎಂಬ ಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಹೀಗಿದ್ದರೂ ಹೊಸ ಬಡಾವಣೆಗಳ ಜನತೆ ಸಿಹಿ ನೀರು ಕಂಡಿಲ್ಲ ಎಂಬುದು ದುರದೃಷ್ಟಕರ ಸಂಗತಿ.

from India & World News in Kannada | VK Polls https://ift.tt/KsVrd5T

Wheeling In Bengaluru- ವ್ಹೀಲಿಂಗ್ ಪುಂಡರಿಗೆ ಬ್ರೇಕ್ ಹಾಕಲು ಬೆಂಗಳೂರಲ್ಲಿ ವಿಶೇಷ ಟಾಸ್ಕ್‌ಪೋರ್ಸ್‌ ರಚನೆ: ಈಗಾಗಲೇ ಐವರ ಸೆರೆ, ಬೈಕ್ ಜಪ್ತಿ

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ವ್ಹೀಲಿಂಗ್ ನಡೆಸುತ್ತಿರುವ ಪುಂಡರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಕಳೆದ ವರ್ಷ ವ್ಹೀಲಿಂಗ್ ಕೇಸ್‌ಗಳಲ್ಲಿ ಗಣನೀಯ ಏರಿಕೆ ಕಂಡ ಬೆನ್ನಲ್ಲೇ ವ್ಹೀಲಿಂಗ್ ನಡೆಸುವ ಪುಂಡರ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಟಾಸ್ಕ್‌ಪೋರ್ಸ್‌ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು ಒಟ್ಟು ಐವರನ್ನು ಬಂಧಿಸಿ ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

from India & World News in Kannada | VK Polls https://ift.tt/dwFH6Lq

IND vs SL: ಟಿ20 ಕ್ರಿಕೆಟ್‌ಗೆ ಶುಭಮನ್ ಗಿಲ್‌ ನಾಲಾಯಕ್‌ ಎಂದ ಆಕಾಶ್‌ ಚೋಪ್ರಾ!

India vs Sri Lanka T20I Series 2023: ಈಗಾಗಲೇ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿನಲ್ಲಿ ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿರುವ ಶುಭಮನ್‌ ಗಿಲ್‌, ಇತ್ತೀಚೆಗಷ್ಟೇ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದರು. ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಮೂಲಕ ಭಾರತ ಟಿ20 ತಂಡಕ್ಕೆ ಕಾಲಿಟ್ಟ ಗಿಲ್‌ ಸತತ ಎರಡು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್‌ ಆಕಾಶ್‌ ಚೋಪ್ರಾ, ಟಿ20 ಕ್ರಿಕೆಟ್‌ ಗಿಲ್‌ಗೆ ಸೂಕ್ತವಲ್ಲ ಎಂದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/cuCnJYW

H Vishwanath-ಸಮ್ಮಿಶ್ರ ಸರ್ಕಾರ ಪತನಕ್ಕೆ ಕುಮಾರಸ್ವಾಮಿ ದುರಹಂಕಾರ ಕಾರಣ; ಬಾಂಬೆಗೆ ನಮ್ಮ ಜತೆ ಸ್ಯಾಂಟ್ರೋ ರವಿ ಬಂದಿಲ್ಲ

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರೊಂದಿಗೆ ಸ್ಯಾಂಟ್ರೋ ರವಿ ಮುಂಬೈಗೆ ಬಂದಿಲ್ಲ ಎಂದು ಹೇಳುವ ಮೂಲಕ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೇವೇಳೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕುಮಾರಸ್ವಾಮಿ ದುರಹಂಕಾರ ಕಾರಣ ಎಂದು ಆರೋಪಿಸಿದ್ದಾರೆ.

from India & World News in Kannada | VK Polls https://ift.tt/PEzW6Uk

ಬೆಂಗಳೂರಿನ 9 ಕಡೆ ಪ್ರಯಾಣ ಸಲೀಸು: ಫಲಕೊಟ್ಟ ಸಂಚಾರ ಪೊಲೀಸರ ಕ್ರಮ

ಹೆಬ್ಬಾಳ ಮೇಲ್ಸೇತುವೆ, ಮೈಸೂರು ರಸ್ತೆ, ರಿಚ್ಮಂಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಕೆ ಆರ್‌ ಪುರ, ಬಳ್ಳಾರಿ ರಸ್ತೆ, ಬೆಂಗಳೂರು ಪೂರ್ವ, ಯಶವಂತಪುರ ಹಾಗೂ ಹೊರ ವರ್ತುಲ ರಸ್ತೆಯಲ್ಲಿ ಪ್ರಯಾಣದ ಅವಧಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡ ಕ್ರಮ ಫಲ ಕೊಟ್ಟಿದೆ. ಬೆಳಗ್ಗೆ ಮತ್ತು ಸಂಜೆ ಪೀಕ್‌ ಅವರ್‌ನಲ್ಲಿ ಸರಕು ಸಾಗಣೆ ವಾಹನಗಳು ಹಾಗೂ ಅಧಿಕ ಭಾರ ಮಿತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮುಖ್ಯ ರಸ್ತೆಗಳ ಬದಲು ಪರ್ಯಾಯ ಮಾರ್ಗಗಳಲ್ಲಿಅವಕಾಶ ಕಲ್ಪಿಸಲಾಗಿದೆ.

from India & World News in Kannada | VK Polls https://ift.tt/1oLYh6w

IND vs AUS: 'ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಪಂತ್‌ ಸ್ಥಾನಕ್ಕೆ ಸರ್ಫರಾಝ್‌ ಖಾನ್‌ ಆಯ್ಕೆ ಮಾಡಿ'-ಫ್ಯಾನ್ಸ್‌ ಆಗ್ರಹ!

Fans bats for Sarfaraz Khan Includes for test team: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಝ್‌ ಖಾನ್‌ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇತ್ತೀಚೆಗೆ ರಿಷಭ್‌ ಪಂತ್‌ ಅವರು ಭೀಕರ ಕಾರು ಅಪಘಾತದಲ್ಲಿ ತೀವ್ರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಲಭ್ಯರಾಗುವುದು ಅನುಮಾನ. ಹಾಗಾಗಿ ಅವರ ಸ್ಥಾನಕ್ಕೆ ಸರ್ಫರಾಝ್ ಖಾನ್‌ಗೆ ಚಾನ್ಸ್‌ ಕೊಡಿ ಎಂದು ಫ್ಯಾನ್ಸ್‌ ಆಗ್ರಹಿಸುತ್ತಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/KGwOJ8a

Namma Metro: ಮೆಟ್ರೊದಿಂದ ಪ್ರಿಪೇಯ್ಡ್‌ ಆಟೋ ಕೌಂಟರ್‌ ಆರಂಭ

ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬೆಂಗಳೂರಿನಲ್ಲಿ ಮತ್ತೆ ಪ್ರಿಪೇಯ್ಡ್ ಆಟೋ ರಿಕ್ಷಾ ಕೌಂಟರ್‌ ಸ್ಥಾಪಿಸಿದೆ. ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಟ್ರಾಫಿಕ್ ಪೊಲೀಸರು ಗಂಟೆಗೆ ಒಮ್ಮೆ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಸಂಜೆ 5 ರಿಂದ ಮಧ್ಯರಾತ್ರಿಯವರೆಗೆ, ಒಬ್ಬ ಟ್ರಾಫಿಕ್ ಪೋಲೀಸ್ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ಜತೆ ಕಾರ್ಯ ನಿರ್ವಹಿಸಲಿದ್ದಾರೆ. 2 ಕಿಲೋ ಮೀಟರ್‌ಗೆ ಕನಿಷ್ಠ 30 ರೂಪಾಯಿ ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ 15 ರೂ. ದರ ನಿಗದಿಪಡಿಸಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿರುತ್ತದೆ.

from India & World News in Kannada | VK Polls https://ift.tt/KZChT0X

ಜೆಡಿಎಸ್‌ 'ಪಂಚರತ್ನ' ಯೋಜನೆಯಿಂದ ಬಿಜೆಪಿ, ಕಾಂಗ್ರೆಸ್‌ಗೆ ನಡುಕ: ನಿಖಿಲ್‌ ಕುಮಾರಸ್ವಾಮಿ

ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಭುವನಹಳ್ಳಿ ಟೋಲ್‌ ಗೇಟ್‌ ಬಳಿ ಹೂ ಮಳೆ ಚೆಲ್ಲಿಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಬೈಕ್ ರ‍್ಯಾಲಿಯಲ್ಲಿ ಬೆಟ್ಟದಪುರ, ಗೊರಹಳ್ಳಿ, ಚಪ್ಪರದಹಳ್ಳಿ, ಹಾರನಹಳ್ಳಿ ಗ್ರಾಮಗಳ ಮಾರ್ಗವಾಗಿ ಮೂಲಕ ಅಂಬಲಾರೆ ಗ್ರಾಮಕ್ಕೆ ಬರಮಾಡಿಕೊಂಡರು. ಮಾರ್ಗದ ಗ್ರಾಮಗಳಲ್ಲಿಹಸಿರು ತೋರಣಗಳು, ಸ್ವಾಗತಕೋರುವ ಪಕ್ಷದ ಬ್ಯಾನರ್‌ ಗಳು ರಾರಾಜಿಸಿದವು. ಇದೆ ವೇಳೆ ಗ್ರಾಮಗಳಲ್ಲಿ ವಿಶೇಷವಾದ ತೆನೆ, ಜೋಳದ ಹಾಗೂ ವಿವಿಧ ಪುಷ್ಪಗಳ ಬೃಹತ್‌ ಹಾರವನ್ನು ಹಾಕಿ ಸ್ವಾಗತಕೋರಿದರು. ಪಕ್ಷದ ಕಾರ್ಯಕರ್ತರು ಪಟಾಕಿ ಸಂಭ್ರಮಿಸಿದರು

from India & World News in Kannada | VK Polls https://ift.tt/Sh6FlTE

ODI WC 2023: ಭಾರತ-ಪಾಕಿಸ್ತಾನ ಏಕದಿನ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ಅಲ್ಲವೆಂದ ಕುಮಾರ ಸಂಗಕ್ಕಾರ!

ICC T20 World Cup 2023: ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ಪೂರ್ಣ ಪ್ರಮಾಣದ ಆತಿಥ್ಯ ವಹಿಸಿಕೊಂಡಿದೆ. 2023ರ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಟೂರ್ನಿ ಆಯೋಜನೆ ಆಗಲಿದ್ದು, ಟೀಮ್ ಇಂಡಿಯಾ ಟ್ರೋಫಿ ಗೆಲುವನ್ನು ಎದುರು ನೋಡುತ್ತಿದೆ. 2011ರಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆದ್ದಿತ್ತು. ಆದರೆ, ಈ ವರ್ಷ ಏಷ್ಯಾದ ದೈತ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳು ಟ್ರೋಫಿ ಗೆಲ್ಲುವ ಫೇವರಿಟ್‌ಗಳಲ್ಲ ಎಂದು ಸಂಗಕ್ಕಾರ ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/1PWarwk

ಹಾವೇರಿ ಕನ್ನಡ ನುಡಿಜಾತ್ರೆಯಲ್ಲಿ ರಂಗೇರಲಿದೆ ಸಾಂಸ್ಕೃತಿಕ ವೈಭವ: ಸಮ್ಮೇಳನದ ಮೂರೂ ದಿನ ಹತ್ತು ಹಲವು ಮನರಂಜನಾ ಕಾರ್ಯಕ್ರಮ

ಹಾವೇರಿ ಸಾಹಿತ್ಯ ಸತ್ರದಲ್ಲಿ ಮೂರೂ ದಿನಗಳ ಕಾಲ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಗ್ಗೆ ಹಾವೇರಿಯಲ್ಲಿ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಅವರು, ಸಾಹಿತ್ಯ ಸಮ್ಮೇಳನ ನಡೆಯುವ 6,7 ಮತ್ತು 8 ರಂದು ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜೋಶಿ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅದ್ಯತೆ ನೀಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/pEJY7CA

ಧಾರವಾಡದಲ್ಲಿ ಕುಡಿಯುವ ನೀರಿಗೂ ತತ್ವಾರ; ಉಳ್ಳವರು ಬಾಟಲ್ ನೀರಿಗೆ ಮೊರೆ, ಬಡವರು ಬಾಯಾರಿಕೆಯೇ ಗತಿ!

ಸಿಬಿಟಿ, ಹಳೇ ತರಕಾರಿ ಮಾರುಕಟ್ಟೆ, ಗಾಂಧಿಚೌಕ್‌, ಜುಬ್ಲಿ ಸರ್ಕಲ್‌, ಸಪ್ತಾಪೂರ, ಕೋರ್ಟ್‌ ಸರ್ಕಲ್‌, ಕೆಸಿಡಿ ವೃತ್ತ, ಪಾಲಿಕೆ ಸರ್ಕಲ್‌, ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ಇತರ ಪ್ರದೇಶಗಳಲ್ಲಿಶುದ್ಧ ಕುಡಿಯುವ ನೀರು ಲಭ್ಯವೇ ಇಲ್ಲ. ಹಳೇ ಹಾಗೂ ಹೊಸ ಎಪಿಎಂಸಿ ಆವರಣದಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ತೆರೆಯುವಂತೆ ಮನವಿ ಮಾಡಲಾಗುತ್ತಿದೆಯಾದರೂ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಕಾರ್ಮಿಕರು, ರೈತರು, ವರ್ತಕರು ಹಾಗೂ ವಾಹನಗಳ ಚಾಲಕರು ತಮ್ಮ ದಾಹ ತಣಿಸಿಕೊಳ್ಳಲು ಮತ್ತೊಬ್ಬರನ್ನು ಬೇಡಿಕೊಳ್ಳಬೇಕಾಗಿದೆ.

from India & World News in Kannada | VK Polls https://ift.tt/8r0NbLE

ವಿಶೇಷಚೇತನರಿಗೆ ಉದ್ಯಮಶೀಲತೆ: ದೇಶದಲ್ಲೇ ಮೊದಲ ಬಾರಿಗೆ ಸ್ವ-ಉದ್ಯೋಗಕ್ಕೆ ತರಬೇತಿ

ರಾಜ್ಯದಲ್ಲಿ 25 ವರ್ಷ ಪೂರೈಸಿದ ಬುದ್ಧಿಮಾಂದ್ಯ ವಿಶೇಷಚೇತನರಿಗೆ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸಲಾಗಿದ್ದು, ಸಿದ್ಧತೆ ಅಂತಿಮ ಹಂತದಲ್ಲಿದೆ. ಈವರೆಗೆ 25 ವರ್ಷದವರೆಗೆ ಮಾತ್ರ ಸರಕಾರದಿಂದ ವಸತಿ ಸಹಿತ ಶೈಕ್ಷಣಿಕ ತರಬೇತಿಗೆ ಅವಕಾಶವಿತ್ತು. ಆದರೆ ಇದೇ ಮೊದಲ ಬಾರಿ ಆ ಬಳಿಕವೂ ಔದ್ಯೋಗಿಕ ತರಬೇತಿ ನೀಡುವ ಯೋಜನೆ ಸಿದ್ಧಗೊಳ್ಳುತ್ತಿದೆ. ವರ್ಕ್‌ಶೆಡ್‌ ಕಾರ್ಯಕ್ರಮದ ಮೂಲಕ ಕೌಟುಂಬಿಕ ಹೊರೆಗಳು ಇಳಿಕೆಯಾಗಲಿವೆ. ಜತೆಗೆ, ಬುದ್ಧಿಮಾಂದ್ಯರು ಸಹ ಸ್ವಾವಲಂಬನೆಯ ಬದುಕು ನಿರ್ವಹಿಸಲು ಇದರಿಂದ ಸಾಧ್ಯವಾಗಲಿದೆ. ಬುದ್ಧಿಮಾಂದ್ಯರಲ್ಲಿ ಚುರುಕಾಗಿ ತರಬೇತಿ ಪಡೆದು, ಪ್ರಗತಿ ಸಾಧಿಸಿದವರಿಗೆ ಸ್ವತಂತ್ರವಾಗಿ ಉದ್ಯಮ ಆರಂಭಿಸಲು ಲಿಂಕಿಂಗ್‌ ವ್ಯವಸ್ಥೆಯನ್ನು ಒದಗಿಸಿಕೊಡಲಾಗುತ್ತದೆ.

from India & World News in Kannada | VK Polls https://ift.tt/C9vXYV6

ಚಾಮರಾಜ ನಗರ: ಜಿಲ್ಲಾ ಕೇಂದ್ರದಲ್ಲೇ ಸರಿಯಾದ ಬಸ್ ವ್ಯವಸ್ಥೆಯಿಲ್ಲ!

ಕೊಳ್ಳೇಗಾಲ- ಚಾ.ನಗರ ಮಾರ್ಗದಲ್ಲಿಬೆಳಗಿನ ವೇಳೆ ಬಸ್‌ ಸಮಸ್ಯೆ ಇಲ್ಲ. ಆದರೆ, ಸಂಜೆ 6.30ರ ಬಳಿಕ ಕೊಳ್ಳೇಗಾಲದಿಂದ ಚಾ.ನಗರಕ್ಕೆ ಬರಬೇಕಾದರೆ ಸಾಕಷ್ಟು ಕಾಯಬೇಕು. ಏಕೆಂದರೆ 6.30ಕ್ಕೆ ಚಾ.ನಗರ-ಕೊಳ್ಳೇಗಾಲ ಮಾರ್ಗದ ಬಸ್‌ ಸಂಚಾರ ಕೊನೆಗೊಳ್ಳಲಿದೆ. ಹಾಗಾಗಿ ಬೆಂಗಳೂರಿನಿಂದ ಕೊಳ್ಳೇಗಾಲ ಮಾರ್ಗವಾಗಿ ಚಾ.ನಗರಕ್ಕೆ ಬರುವ ಬಸ್‌ಗಳನ್ನೇ ಅವಲಂಬಿಸುವಂತಾಗಿದೆ. ಕೆಲವೊಮ್ಮೆ ಒಂದು, ಒಂದೂವರೆ ತಾಸು ಕಾದರೂ ಬಸ್‌ಗಳು ಬರುವುದಿಲ್ಲಎಂಬ ಆರೋಪ ತೀವ್ರವಾಗಿದೆ.ಈ ಸಮಸ್ಯೆ ಚಾ.ನಗರದಿಂದ ಮೈಸೂರಿಗೆ ತೆರಳುವ ಪ್ರಯಾಣಿಕರು ಹಾಗೂ ಎದುರಿಸುವಂತಾಗಿದೆ.

from India & World News in Kannada | VK Polls https://ift.tt/07SzVPe

Siddeshwara Swamiji last rites | ಸರಕಾರಿ ಗೌರವಗಳೊಂದಿಗೆ ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರ

Vijayapura Jnana Yogashram: ಶ್ರೀಗಳ ಪ್ರವಚನ ನೆನಪಿಸಿಕೊಳ್ಳುತ್ತಾ ಸಾಗಿ ಹಿರಿಯರು, ಯುವಕರು, ವಿಶೇಷಚೇತನರು ಸರತಿ ಸಾಲಿನಲ್ಲಿನಿಂತು ಶ್ರೀಗಳ ಅಂತಿಮ ದರ್ಶನವನ್ನು ಪಡೆದು ಪುನೀತರಾದರು. ಸರತಿ ಸಾಲಿನಲ್ಲಿನಿಂತು ಶ್ರೀಗಳ ಪವಿತ್ರ ಪಾರ್ಥಿವ ಶರೀರದ ಮುಂದೆ ಬಂದಾಗಲಂತೂ ಭಕ್ತರ ಕಣ್ಣೀರು ಹಾಕಿದರು. ‘ಶಿವಾಯ ನಮಃ ಓಂ, ಶಿವಾಯ ನಮಹಃ’ ಎಂಬ ರುದ್ರಮಂತ್ರದ ಜಪವನ್ನು ಜಪಿಸುತ್ತಾ ಕಣ್ಣೀರು ಹಾಕುತ್ತಾ ಒಲ್ಲದ ಮನಸ್ಸಿನಿಂದ ಮುಂದೆ ನಡೆದರು.

from India & World News in Kannada | VK Polls https://ift.tt/uLHDef7

IND vs SL: 2011ರ ವಿಶ್ವಕಪ್ ಫೈನಲ್‌ನ ರಿಯಲ್‌ ಹೀರೊ ಧೋನಿ ಅಲ್ಲ ಎಂದ ಗೌತಮ್‌ ಗಂಭೀರ್‌!

India vs Sri Lanka: ಪ್ರವಾಸಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಮೂಲಕ ಟೀಮ್ ಇಂಡಿಯಾ 2023ರ ಸಾಲಿನ ತನ್ನ ಕ್ರಿಕೆಟ್‌ ಚಟುವಟಿಕೆಗಳನ್ನು ಆರಂಭಿಸಿದೆ. ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 2 ರನ್‌ಗಳಿಂದ ಗೆದ್ದು ಶುಭಾರಂಭ ಕೂಡ ಮಾಡಿದೆ. ಈ ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌, ಶ್ರೀಲಂಕಾ ವಿರುದ್ಧದ 2011ರ ವಿಶ್ವಕಪ್‌ ಫೈನಲ್‌ ಸ್ಮರಿಸಿದ್ದಾರೆ. ಅಷ್ಟೇ ಅಲ್ಲದೆ ಆ ಫೈನಲ್‌ನಲ್ಲಿ ಭಾರತ ತಂಡದ ಪರ ಹೀರೊ ಆಗಿದ್ದು ಎಂ.ಎಸ್‌ ಧೋನಿ ಅಲ್ಲ ಎಂದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/fKzo1dD

ಸರಕಾರಿ ಕಾಲೇಜುಗಳಲ್ಲಿಉಪನ್ಯಾಸಕರ ಕೊರತೆ, 3,941 ಪಿಯು ಉಪನ್ಯಾಸಕ ಹುದ್ದೆ ಖಾಲಿ

​ ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಅತೀ ಹೆಚ್ಚು ಉಪನ್ಯಾಸಕರ ಕೊರತೆ ಬಿಸಿನೆಸ್‌ ಸ್ಟಡೀಸ್‌ ವಿಷಯಕ್ಕೆ ಸಂಬಂಧಿಸಿದ್ದು. ಇಲ್ಲಿ 501 ಹುದ್ದೆಗಳು ಖಾಲಿಯಾಗಿ ಸುಮಾರು ನಾಲ್ಕೈದು ವರ್ಷಗಳೇ ಸಂದಿವೆ. ಅರ್ಥಶಾಸ್ತ್ರ 487, ಇಂಗ್ಲಿಷ್‌ 431, ಕನ್ನಡ 418, ಸಮಾಜಶಾಸ್ತ್ರ 410 ಹುದ್ದೆಗಳು ಖಾಲಿಯಾಗಿ ವರ್ಷಗಳೇ ಸಂದಿವೆ.

from India & World News in Kannada | VK Polls https://ift.tt/aXoUNJO

ಮೈಸೂರಿಗೆ ಶೀಘ್ರ ಬರಲಿವೆ 1 ಸಾವಿರ ಪೆಡಲ್‌ ಅಸಿಸ್ಟ್‌ ಬೈಸಿಕಲ್‌

5 ವರ್ಷದ ಹಿಂದೆ ವಾಹನಗಳ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಮೈಸೂರಿನಲ್ಲಿ'ಟ್ರಿಣ್‌ ಟ್ರಿಣ್‌' ಸೈಕಲ್‌ ಯೋಜನೆಯನ್ನು ಜಾರಿಗೆ ತರಲಾಗಿತ್ತು. ​​​​​ನಗರದಲ್ಲಿ 450 ಟ್ರಿಣ್‌ ಟ್ರಿಣ್‌ ಸೈಕಲ್‌ಗಳಿದ್ದರೂ ಅದನ್ನು ಸಾರ್ವಜನಿಕರು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರಲಿಲ್ಲ. ಸೈಕಲ್‌ಗಳ ನಿರ್ವಹಣೆ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿತ್ತು. ಹಾಗಾಗಿ ಹೆಚ್ಚು ಮಂದಿ ಸೈಕಲ್‌ಗಳಿಂದ ವಿಮುಖರಾಗಿದ್ದರು. 250ರಿಂದ 300 ಸೈಕಲ್‌ಗಳಷ್ಟೇ ಬಳಕೆಯಾಗುತ್ತಿದ್ದವು. ಹೀಗಾಗಿ ನಗರಪಾಲಿಕೆ, ಇದೀಗ ಬ್ಯಾಟರಿ ಆಧರಿತ ಸೈಕಲ್‌ಗಳನ್ನು ಖರೀದಿಸಲು ಮುಂದಾಗಿದೆ.

from India & World News in Kannada | VK Polls https://ift.tt/HFoiZvT

Siddeshwara Swamiji Passes Away: ಸಿದ್ದೇಶ್ವರ ಸ್ವಾಮೀಜಿ ಮನೆ ಮಂದಿ, ಗೆಳೆಯರಿಗೆ ಪ್ರೀತಿಯ ಸಿದ್ದು

ಸಿದ್ದೇಶ್ವರ ಸ್ವಾಮೀಜಿ, ಶಾಲೆಯಲ್ಲಿಒಳ್ಳೆಯ ಹುಡುಗರೊಂದಿಗೆ ಮಾತ್ರ ಬೆರೆಯುತ್ತಿದ್ದರು. ಓದಿನಲ್ಲಿ ಚುರುಕು, ಕೆಲವು ಸಲ ನಮ್ಮೂರಿನ ಗುಡ್ಡದ ಮೇಲೆ ಒಬ್ಬರೇ ಕುಳಿತು ಧ್ಯಾನ ಮಾಡುತ್ತಿದ್ದರು. ಬಾಲ್ಯದಲ್ಲೇ ಅಧ್ಯಾತ್ಮದ ಒಲವಿನ ಸುಳಿವು ಅವರಲ್ಲಿತ್ತು,''..

from India & World News in Kannada | VK Polls https://ift.tt/wk3eBdx

Siddeshwara Swamiji Passes Away: ಕಲಬುರಗಿಯಲ್ಲಿದ್ದಾಗಲೇ 'ಪದ್ಮಶ್ರೀ' ತಿರಸ್ಕರಿಸಿದ್ದ 'ಜ್ಞಾನಯೋಗಿ' ಸಿದ್ದೇಶ್ವರ ಸ್ವಾಮೀಜಿ

ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಲಬುರಗಿಯಲ್ಲಿ2018 ರಲ್ಲಿ ಪ್ರವಚನಕ್ಕೆ ಆಗಮಿಸಿದಾಗಲೇ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಆದರೆ, ಈ ಪ್ರಶಸ್ತಿಯನ್ನು ಅಂದು ಅತ್ಯಂತ ನಯವಾಗಿ, ಗೌರವಯುತವಾಗಿ ತಿರಸ್ಕರಿಸಿದ್ದರು.

from India & World News in Kannada | VK Polls https://ift.tt/zQ4S2CV

Siddeshwara Swamiji's Letter | 'ಬದುಕು ಅನುಭವಗಳ ಪ್ರವಾಹ...'- ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರ ಇಲ್ಲಿದೆ...

Last wish, Last Rites of Siddeshwara Sri: ಬದುಕು ಮುಗಿಯುತ್ತಿದೆ. ದೀಪ ಆರಿದಂತೆ. ತೆರೆ ಅಡಗಿದಂತೆ. ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು. ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಂದನ ಪತ್ರ.

from India & World News in Kannada | VK Polls https://ift.tt/bhQ0764

Siddeshwar Swamiji Death: ವಿಜಯಪುರ ಜ್ಞಾನಯೋಗಾಶ್ರಮದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಇನ್ನಿಲ್ಲ

Jnana Yogashram Vijayapura: ಸಂಜೆ 6 ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ನಸುಕಿನ ಜಾವ 4 ಗಂಟೆಯವರೆಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ನಾಳೆ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 5ರ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

from India & World News in Kannada | VK Polls https://ift.tt/YulAZC0

ಒತ್ತುವರಿ ಕಾಫಿ ಭೂಮಿಗೆ 30 ವರ್ಷ ಗುತ್ತಿಗೆ ಭಾಗ್ಯ; ಕಾಫಿ ಬೆಳೆಗಾರರಲ್ಲಿ ಸಂತಸ

25 ಎಕರೆವರೆಗಿನ ಸರಕಾರಿ ಒತ್ತುವರಿ ಭೂಮಿಯನ್ನು 30 ವರ್ಷಗಳ ಕಾಲ ಗುತ್ತಿಗೆ ನೀಡಲು ಬೆಳಗಾವಿ ಅಧಿವೇಶನದಲ್ಲಿ ಕಾಯಿದೆ ಅಂಗೀಕರಿಸಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕಿನಲ್ಲಿ40,750 ಸಾವಿರ ಹೆಕ್ಟೇರ್‌ ಕಾಫಿ ತೋಟವಿದೆ. 25 ಸಾವಿರಕ್ಕೂ ಹೆಚ್ಚು ಬೆಳೆಗಾರರು ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸರಕಾರದ ನಿರ್ಧಾರದಿಂದ 25 ಎಕರೆವರೆಗಿನ ಒತ್ತುವರಿ ಭೂಮಿ ದೀರ್ಘಕಾಲ ಗುತ್ತಿಗೆ ನೀಡಲು ಕೈಗೊಂಡ ನಿರ್ಣಯದಿಂದ 40 ಸಾವಿರದೊಂದಿಗೆ ಬಹುತೇಕ ಅಷ್ಟೇ ಪ್ರಮಾಣದ ಒತ್ತುವರಿ ಭೂಮಿಯೂ ಬೆಳೆಗಾರರಿಗೆ ವರವಾಗಿ ಪರಿಣಮಿಸಲಿದೆ.

from India & World News in Kannada | VK Polls https://ift.tt/Zc6f7w8

New Year 2023: ನ್ಯೂಇಯರ್‌ ಪಾರ್ಟಿ.. ಸ್ವಿಗ್ಗಿ- ಜೊಮಾಟೊಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.. ಕಾಂಡೋಮ್‌ ಕೂಡ ಬೇಡಿದ ಕಿಲಾಡಿಗಳು

2023ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾಯ್ತು. ಫುಡ್‌ ಡೆಲಿವರಿ ಅಪ್ಲಿಕೇಶನ್‌ಗಳಿಗೆ ಮೊರೆ ಹೋದ ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಸ್ವಿಗ್ಗಿ ಮತ್ತು ಜೊಮಾಟೊ ಕಂಪನಿ ಭಾರಿ ವಹಿವಾಟು ನಡೆಸಿವೆ. ವರ್ಷಾಂತ್ಯದ ಆಚರಣೆಗೆ ಜೊಮಾಟೊ ಆ್ಯಪ್‌ಗೆ ಆರ್ಡರ್‌ಗಳ ಪ್ರಮಾಣ ಶೇ.45ರಷ್ಟು ಹೆಚ್ಚಳವಾಗಿದೆ. ಜೊಮಾಟೊ ಪ್ರತಿಸ್ಪರ್ಧಿ ಕಂಪನಿಯಾದ ಸ್ವಿಗ್ಗಿ ಕೂಡ ಭಾರಿ ಪ್ರಮಾಣದ ವಹಿವಾಟು ನಡೆಸಿದ್ದು, ಡಿ.31ರ ಸಂಜೆ 6.33ರ ವೇಳೆಗೆ 1.3 ದಶಲಕ್ಷ ಆರ್ಡರ್‌ಗಳನ್ನು ಪಡೆದಿರುವುದಾಗಿ ಟ್ವೀಟ್‌ ಮಾಡಿದ್ದಾರೆ. 16,514 ಬಿರಿಯಾನಿಗಳನ್ನು ಅಂದರೆ, ಸರಿಸುಮಾರು 15 ಟನ್‌ ಬಿರಿಯಾನಿ ಡೆಲಿವರಿ ಆಗಿದೆ.

from India & World News in Kannada | VK Polls https://ift.tt/IvcJrZA

2022ರಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತ; ವೈಜ್ಞಾನಿಕ ಸಂಚಾರ ನಿಯಂತ್ರಣ ಅವಶ್ಯಕ

2020ರಲ್ಲಿ ರಸ್ತೆ ಅಪಘಾತದಿಂದ 122 ಮಂದಿ ಮೃತಪಟ್ಟಿದ್ದರೆ, 2021ರಲ್ಲಿ 121 ಮೃತಪಟ್ಟಿದ್ದರು. ಆದರೆ, 2022ರ ಸಮಯದಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಏಕಾಏಕಿ 169 ದಾಟಿದೆ. ಜತೆಗೆ ರಸ್ತೆ ಅಪಘಾತ ಕೂಡ 2020ರಲ್ಲಿ633, 2021ರಲ್ಲಿ 651 ಇದ್ದರೆ 2022ರಲ್ಲಿ 766ಕ್ಕೆ ಹೆಚ್ಚಳವಾಗಿದೆ. ಹೆಲ್ಮೆಟ್‌ ಧರಿಸುವುದು ಸೇರಿದಂತೆ ಸಂಚಾರ ನಿಯಮ ಪಾಲನೆ ಮಾಡುತ್ತ ವಾಹನ ಚಾಲನೆ ಮಾಡಿದರೆ ಸಾಕಷ್ಟು ಅಪಘಾತ ನಿಯಂತ್ರಿಸಬಹುದು ಎನ್ನುತ್ತಾರೆ ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್‌.ಗೀತಾ ಪ್ರಸನ್ನ.

from India & World News in Kannada | VK Polls https://ift.tt/ER3MeWt

CM Bommai- ಕಳಸಾ-ಬಂಡೂರಿ ಯೋಜನೆ ಕಾಮಗಾರಿಗೆ ಶೀಘ್ರ ಟೆಂಡರ್ ಕರೆದು ಚಾಲನೆ ನೀಡ್ತೇವೆ:ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಕೇಂದ್ರ ಸರಕಾರ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸೂಚನೆ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿತಿಳಿಸಿದ್ದಾರೆ. ರೈತರು ಕಳೆದ 20 ವರ್ಷದಿಂದ ನಡೆಸುತ್ತಾ ಬಂದಿರುವ ಹೋರಾಟಕ್ಕೆ ಸಂದ ಫಲವಿದು. ಈ ಸಾಧನೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನ ದೊಡ್ಡದು. ​​ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕೂಡ ಪ್ರತಿ ಹಂತದಲ್ಲಿ ಕಾನೂನು ತೊಡಕುಗಳನ್ನು ನಿರಂತರವಾಗಿ ನಿವಾರಣೆ ಮಾಡಿ ಯೋಜನೆ ಸಾಕಾರಗೊಳಿಸಲು ಸಹಾಯ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

from India & World News in Kannada | VK Polls https://ift.tt/PvjE5fV

Wild Elephant Attack-ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ರಕ್ಷಕ ಕಾಡಾನೆ ದಾಳಿಗೆ ಬಲಿ

ರಾಜ್ಯದಲ್ಲಿ ಕಾಡಾನೆ ದಾಳಿಗೆ ಒಂದೇ ದಿನ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಪುತ್ತೂರು ತಾಲೂಕಿನ ನೆಲ್ಯಾಡಿ ಬಳಿ ರಕ್ಷಿತಾರಣ್ಯ ಪ್ರದೇಶದ ಹೊಳೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಮೃತಪಟ್ಟಿದ್ದರೆ, ಮೈಸೂರು ಜಿಲ್ಲೆಯ ಎಚ್ ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿಕಾರ್ಯನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ಕಾಡಾನೆ ದಾಳಿಗೆ ಸಾವಿಗೀಡಾಗಿದ್ದಾರೆ.

from India & World News in Kannada | VK Polls https://ift.tt/8pvAOU3

IND vs SL: ಟೀಮ್ ಇಂಡಿಯಾಗೆ ಕಾಟ ಕೊಡಬಲ್ಲ ಶ್ರೀಲಂಕಾದ ಸ್ಟಾರ್ಸ್‌ ಹೆಸರಿಸಿದ ಇರ್ಫಾನ್‌ ಫಠಾಣ್!

India vs Sri Lanka Series 2023: ಪ್ರವಾಸಿ ಶ್ರೀಲಂಕಾ ವಿರುದ್ಧ ತಲಾ 3 ಪಂದ್ಯಗಳ ಟಿ20 ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿ ಮೂಲಕ ಟೀಮ್ ಇಂಡಿಯಾ 2023ರ ಸಾಲಿನ ಕ್ರಿಕೆಟ್‌ ಅಭಿಯಾನ ಆರಂಭಿಸಲಿದೆ. ಮೊದಲಿಗೆ ಟಿ20 ಕ್ರಿಕೆಟ್‌ ಸರಣಿ ಜನವರಿ 3ರಂದು ಆರಂಭವಾಗಲಿದೆ. ನಂತರ ಜನವರಿ 10ರಂದು ಒಡಿಐ ಸರಣಿ ಶುರುವಾಗಲಿದೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌, ಪ್ರವಾಸಿ ಶ್ರೀಲಂಕಾ ತಂಡದಲ್ಲಿ ಆತಿಥೇಯರಿಗೆ ಶಾಕ್‌ ಕೊಡಬಲ್ಲ ಸಮರ್ಥ ಆಟಗಾರರು ಇದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/PUhKaBi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...