ಪಠಾಣ್ ಕೋಟ್ ನಲ್ಲಿ ರೆಕ್ಕೆ ಬಿಚ್ಚಿದ ಅಮೆರಿಕದ ‘ಅಪಾಚೆ’: ಪಾಕ್ ಎದೆಯಲ್ಲಿ ‘ಬಾಹುಬಲಿ’ ಭಯ!

ಪಂಜಾಬ್: ಯುದ್ಧಭೂಮಿಯಲ್ಲಿ ಹಗಲು-ರಾತ್ರಿ ನಿರಂತರವಾಗಿ ಕಾದಾಡುವ ಸಾಮರ್ಥ್ಯ ಹೊಂದಿರುವ ಬಲಿಷ್ಟ ಹೆಲಿಕಾಪ್ಟರ್ ‘ಅಪಾಚೆ’, ಭಾರತೀಯ ವಾಯು ಪಡೆ ಸೇರಿದೆ. ನಿರ್ಮಿತ ‘ಅಪಾಚೆ’, ಪಂಜಾಬ್ ನ ವಾಯುನೆಲೆಯಲ್ಲಿ ಅಧಿಕೃತವಾಗಿ ಭಾರತೀಯ ವಾಯುಪಡೆಯ ಸೇವೆಗೆ ನಿಯುಕ್ತವಾಯ್ತು. ದೇಶಾದ್ಯಂತ ಒಟ್ಟು 22 ಗಳು ಭಾರತೀಯ ವಾಯುಪಡೆ ಸೇರಲಿದ್ದು, ಯುದ್ಧೋನ್ಮಾದಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡುವ ಮುನ್ನ, ಅಪಾಚೆ ಹೆಲಿಕಾಪ್ಟರ್ ಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯ್ತು. ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ. ಎಸ್. ಧನೋವಾ ಸೇರಿದಂತೆ ವಾಯುಪಡೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು. ಭಾರತೀಯ ವಾಯುಪಡೆಯ ಅಗತ್ಯಕ್ಕೆ ತಕ್ಕಂತೆ ಈ ಹೆಲಿಕಾಪ್ಟರ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದು, ಏರ್ ಫೋರ್ಸ್‌ ಗೆ ಅಪಾಚೆ ಹೊಸ ಚೈತನ್ಯ ತುಂಬಿದೆ. ಈ ಹೆಲಿಕಾಪ್ಟರ್ ನ ವಿಶೇಷತೆಗಳು ಒಂದೆರಡಲ್ಲ.
  • ರಾಕೆಟ್‌ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ
  • ನಿಖರವಾಗಿ ಹಾಗೂ ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯ
  • ಬಿರುಗಾಳಿ ಹಾಗೂ ಭಾರೀ ಮಳೆಯಲ್ಲೂ ಅಡೆತಡೆಯಿಲ್ಲದೆ ಕಾರ್ಯಾಚರಣೆ
  • ಪರ್ವತದಿಂದ ಆವೃತವಾದ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ
  • ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ
  • ಭೂಮಿಯ ಮೇಲ್ಬಾಗದಿಂದ ಎದುರಾಗುವ ದಾಳಿಯನ್ನೂ ಎದುರಿಸುವ ಸಾಮರ್ಥ್ಯ
  • ಯುದ್ಧದ ಸಂದರ್ಭದಲ್ಲಿ ಭೂ ಸೇನೆಗೆ ಪೂರಕವಾಗಿ ಕಾರ್ಯಾಚರಣೆಗೆ ನೆರವು
  • ಯುದ್ಧ ಭೂಮಿಯಿಂದ ಛಾಯಾಚಿತ್ರ ರವಾನೆ, ವಿನಿಮಯ
  • ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಬಳಕೆ ಮಾಡಬಹುದು
ಇಷ್ಟೆಲ್ಲಾ ವಿಶೇಷತೆಗಳಿರುವ ಈ ಹೆಲಿಕಾಪ್ಟರ್ ಹಾರಾಟ ಕೂಡಾ ಸುಲಭದ ಕೆಲಸವಲ್ಲ. ಅಮೆರಿಕ ನಿರ್ಮಿತ ಹೆಲಿಕಾಪ್ಟರ್ ಆದ ಕಾರಣ, ಸಿಬ್ಬಂದಿಗೆ ತರಬೇತಿಯನ್ನೂ ಅಮೆರಿಕದಲ್ಲೇ ನೀಡಲಾಗಿದೆ. ಭಾರತೀಯ ವಾಯುಪಡೆಯ ಪೈಲಟ್ ಹಾಗೂ ಸಹ ಸಿಬ್ಬಂದಿಗೆ ಅಮೆರಿಕದ ಅಲಬಾಮಾದಲ್ಲಿ ಅಪಾಚೆ ಕಾರ್ಯಾಚರಣೆಯ ತರಬೇತಿ ನೀಡಲಾಗಿದೆ. ಅಪಾಚೆ ಹೆಲಿಕಾಪ್ಟರ್ ಹೊಂದಿರುವ ವಿಶ್ವದ 16ನೇ ದೇಶವಾಗಿ ಇದೀಗ ಭಾರತ ಹೊರಹೊಮ್ಮಿದೆ. ಒಟ್ಟಿನಲ್ಲಿ ಭಾರತೀಯ ವಾಯುಪಡೆಯ ಬಲವರ್ಧನೆಗೆ ಅಪಾಚೆ ಮೊದಲ ಹೆಜ್ಜೆಯಾಗಿದೆ.


from India & World News in Kannada | VK Polls https://ift.tt/2ZsyAdI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...