ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲೇ 12 ಮಂದಿ ಬ್ಯಾಟಿಂಗ್ ಮಾಡಿರುವುದು ಇದೇ ಮೊದಲು!

ಕಿಂಗ್‌ಸ್ಟನ್: ಭಾರತ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲೂ ವೆಸ್ಟ್‌ಇಂಡೀಸ್ 257 ರನ್ ಅಂತರದ ಸೋಲಿಗೆ ಶರಣಾಗಿದೆ. ಹಾಗಿದ್ದರೂ ವಿಶಿಷ್ಟ ದಾಖಲೆ ಬರೆಯುವ ಮೂಲಕ ಗಮನ ಸೆಳೆದಿದೆ. ಭಾರತ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ಪರ 12 ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮಾಡಿದ್ದರು. ಹ್ಹಾಂ ಅದೇಗೆ ಸಾಧ್ಯ ಅಂತೀರಾ? ಐಸಿಸಿ ನೂತನ ನಿಯಮ ಪ್ರಕಾರ ಬ್ಯಾಟ್ಸ್‌ಮನ್ ಗಾಯಗೊಂಡಲ್ಲಿ ಅದೇ ಪಂದ್ಯದಲ್ಲಿ ಬದಲಿ ಆಟಗಾರನನ್ನು ಹೆಸರಿಸುವ ಅವಕಾಶವಿರುತ್ತದೆ. ಭಾರತ ವಿರುದ್ಧ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವೇಳೆ ಜಸ್ಪ್ರೀತ್ ಬುಮ್ರಾ ಎಸೆದ ಚೆಂಡು ತಲೆಗೆ ಬಡಿದಿತ್ತು. ಪರಿಣಾಮ ಪಂದ್ಯ ಮುಂದುವರಿಸಲಾಗದೇ ನಿವೃತ್ತಿಯನ್ನು ಪಡೆದರು. ಬಳಿಕ ಬ್ರಾವೋ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕ್ರೀಸ್‌ಗೆ ಪ್ರವೇಶಿಸಿದರು. ಅಲ್ಲದೆ 38 ರನ್‌ಗಳ ಅಮೂಲ್ಯ ಕೊಡುಗೆಯನ್ನು ನೀಡಿದರು. ಇದರೊಂದಿಗೆ ಇದೇ ಮೊದಲ ಬಾರಿಗೆ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ 12 ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮಾಡಿರುವ ವಿಶಿಷ್ಟ ದಾಖಲೆಗೆ ವಿಂಡೀಸ್ ಪಾತ್ರವಾಗಿದೆ. ಇತ್ತೀಚೆಗಷ್ಟೇ ನಡೆದ ಆ್ಯಶಸ್ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗಾಯಗೊಂಡಾಗ ಬದಲಿ ಆಟಗಾರನಾಗಿ ಮರ್ನಸ್ ಲ್ಯಾಬುಚಾಗ್ನೆ ತಂಡವನ್ನು ಸೇರಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZFARSb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...