ಅಖಂಡ ಬಳ್ಳಾರಿ ಜಿಲ್ಲೆಗೆ ವಿರೋಧ: ಪ್ರತ್ಯೇಕ ಜಿಲ್ಲೆ ರಚನೆ ಪರ ಎಂಎಲ್‌ಸಿ ಕೊಂಡಯ್ಯ ಬ್ಯಾಟಿಂಗ್

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಗೆ ಆಗ್ರಹಿಸಿ ‌ಗೆ ಕರೆ ನೀಡಿರುವ ಕನ್ನಡ ಪರ ಹಾಗೂ ರೈತ ಸಂಘಟನೆಗಳ ನಡೆಗೆ ವಿಧಾನ ಪರಿಷತ್ ಸದಸ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ರಚನೆಗೆ ನನ್ನ ಸಹ ಮತವಿದೆ. ಕೆಲವರು ಪ್ರತ್ಯೇಕ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿದ್ದು, ಅದು ಅವರವರ ವೈಯಕ್ತಿಕ ಅಭಿಪ್ರಾಯವಾಗಿದೆ. ಬಹಿರಂಗವಾಗಿಯೇ ಅಭಿಪ್ರಾಯ ವ್ಯಕ್ತಪಡಿಸುವುದಲ್ಲ. ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದರು. ವಿಜಯನಗರ ಜಿಲ್ಲೆ ರಚನೆ ಕುರಿತು ಚರ್ಚಿಸುವ ಸಲುವಾಗಿ ನಾಳೆ (ಬುಧವಾರ) ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜನ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು ಎಂದು ಹೇಳಿದರು. ವಿಜಯನಗರ ಪ್ರತ್ಯೇಕ ಜಿಲ್ಲೆಯಾದರೆ ಒಳ್ಳೆಯದು. ಕೆಲವರು ಪ್ರತ್ಯೇಕ ಜಿಲ್ಲೆ ವಿರೋಧಿಸುತ್ತಿರುವುದು ಅವರವರ ವೈಯಕ್ತಿಕ ಅಭಿಪ್ರಾಯ. ಎರಡು ಜಿಲ್ಲೆ ಪ್ರತ್ಯೇಕವಾದರೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎಂದು ಪರೋಕ್ಷವಾಗಿ ಶಾಸಕ ಕರುಣಾಕರ ರೆಡ್ಡಿ ಅವರಿಗೆ ಟಾಂಗ್ ನೀಡಿದರು. ಹರಪ್ಪನಹಳ್ಳಿ ಜಿಲ್ಲೆಯಾಗಲು ಅಲ್ಲಿ ಅಗತ್ಯ ಸೌಕರ್ಯಗಳಿಲ್ಲ ಎಂದರು. ವಿಜಯನಗರ ಜಿಲ್ಲೆ ವಿರೋಧಿಸಿ ಬಳ್ಳಾರಿ ಬಂದ್ ಅಖಂಡ ಬಳ್ಳಾರಿ ಹಾಗೂ ನೂತನ ಜಿಲ್ಲೆ ರಚನೆ ವಿರೋಧಿಸಿ ಇಂದು (ಮಂಗಳವಾರ) ಬಳ್ಳಾರಿ ಬಂದ್‌ಗೆ ಕರೆ ನೀಡಲಾಗಿದ್ದು, ನಗರದ ರಾಯಲ್ ಸರ್ಕಲ್ ವೃತ್ತದಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ರಾಯಲ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಿರುವ ವಿವಿಧ ಸಂಘಟನೆಯ ಪದಾಧಿಕಾರಿಗಳು, ಅನರ್ಹ ಶಾಸಕ ಆನಂದ್ ಸಿಂಗ್, ಎಂಎಲ್‌ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಸೇರಿದಂತೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/2oQZ0o5

ರಾಮನಗರ ಜಿಲ್ಲೆಯ 4 ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ !

ದ.ಕ. ಪದವಿ ಕಾಲೇಜುಗಳಿಗೆ ಅ.1 ರಿಂದ ಅ. 8ರವರೆಗೆ ದಸರಾ ರಜೆ

ಅಬ್ಬಬ್ಬಾ...ವಿರಾಟ್ ಕೊಹ್ಲಿ ದಾಖಲೆಯನ್ನೇ ಮುರಿದ ಪಾಕಿಸ್ತಾನದ ಬಾಬರ್ ಅಜಾಮ್!

ಕರಾಚಿ: 24ರ ಹರೆಯದ ಯುವ ಭರವಸೆಯ ಬ್ಯಾಟ್ಸ್‌ಮನ್ ಬಾಬರ್ ಅಜಾಮ್‌ರನ್ನು ಪಾಕಿಸ್ತಾನದ 'ವಿರಾಟ್ ಕೊಹ್ಲಿ' ಎಂದೇ ವ್ಯಾಖ್ಯಾನಿಸಲಾಗಿದೆ. ಇದಕ್ಕೆ ತಕ್ಕುದಾಗಿ ಅಮೋಘ ಬ್ಯಾಟಿಂಗ್ ಫಾರ್ಮ್ ಕಾಯ್ದುಕೊಂಡಿರುವ ಬಾಬರ್, ಭಾರತದ ನಾಯಕ ದಾಖಲೆಯನ್ನೇ ಮುರಿದಿದ್ದಾರೆ. ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಾಧನೆ ಮಾಡಿದ್ದಾರೆ. ಇದು ಬಾಬರ್ ಬ್ಯಾಟ್‌ನಿಂದ ಸಿಡಿದ 11ನೇ ಶತಕವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಹಿಂದಿಕ್ಕಿರುವ ಬಾಬರ್, ಏಕದಿನದಲ್ಲಿ ಅತಿ ವೇಗದಲ್ಲಿ 11 ಶತಕಗಳನ್ನು ಬಾರಿಸಿದ ಮೂರನೇ ಅತಿ ವೇಗದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಬಾಬರ್ 71ನೇ ಇನ್ನಿಂಗ್ಸ್‌ನಲ್ಲಿ 11ನೇ ಶತಕ ಗಳಿಸಿದ್ದಾರೆ. ಅಷ್ಟೇ ಶತಕ ಗಳಿಸಲು ಕಿಂಗ್ ಕೊಹ್ಲಿ 82 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇನ್ನು ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಹಾಗೂ ಕ್ವಿಂಟನ್ ಡಿ ಕಾಕ್ ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. 11 ಶತಕಗಳನ್ನು ಗಳಿಸಲು ಇವರಿಬ್ಬರು ಅನುಕ್ರಮವಾಗಿ 64 ಹಾಗೂ 65 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಶ್ರೀಲಂಕಾ ವಿರುದ್ಧ ನಡೆದ ಕರಾಚಿ ಏಕದಿನ ಪಂದ್ಯದಲ್ಲಿ ಬಾಬರ್ 105 ಎಸೆತಗಳಲ್ಲಿ 115 ರನ್ ಚಚ್ಚಿದ್ದರು. ಇದರಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಪರಿಣಾಮ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 305 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಲಂಕಾ ಶೆಹನ್ ಜಯಸೂರ್ಯ (96) ಹೋರಾಟದ ಹೊರತಾಗಿಯೂ 46.5 ಓವರ್‌ಗಳಲ್ಲಿ 238 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಪಾಕ್ ಪರ ಉಸ್ಮಾನ್ ಶಿನ್ವಾರಿ 51 ರನ್ ತೆತ್ತು ಐದು ವಿಕೆಟ್ ಕಬಳಿಸಿದ್ದರು. ಏಕದಿನದಲ್ಲಿ ಅತಿ ವೇಗದಲ್ಲಿ 11 ಶತಕಗಳ ಸಾಧನೆ (ಇನ್ನಿಂಗ್ಸ್): ಹಾಶೀಮ್ ಆಮ್ಲಾ (ದ. ಆಫ್ರಿಕಾ): 64 ಕ್ವಿಂಟನ್ ಡಿ ಕಾಕ್ (ದ.ಆಫ್ರಿಕಾ): 65 ಬಾಬರ್ ಅಜಾಮ್ (ಪಾಕಿಸ್ತಾನ): 71ವಿರಾಟ್ ಕೊಹ್ಲಿ (ಭಾರತ): 82 ಬಾಬರ್ ಅಜಾಮ್ ಏಕದಿನ ಕೆರಿಯರ್: ಪಂದ್ಯ: 73ಇನ್ನಿಂಗ್ಸ್: 71ಅಜೇಯ: 10ರನ್: 3328ಗರಿಷ್ಠ: 125*ಸರಾಸರಿ: 54.55ಸ್ಟ್ರೇಕ್‌ರೇಟ್: 86.87ಶತಕ: 11ಅರ್ಧಶತಕ: 15


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2o60cTY

ನಾಳೆ ದಸರಾ ಏರ್‌ಶೋನಲ್ಲಿ ವಾಯುದಳದಿಂದ ಅಣಕು ಕಾರ್ಯಾಚರಣೆಯ ಸಾಹಸ

ಪಿಂಚಣಿ ವೇತನ ಪಾವತಿಗೆ 15 ದಿನ ಗಡುವು

ಎರಡು ದಿನಗಳ ಮಕ್ಕಳ ದಸರಾಕ್ಕೆ ಚಾಲನೆ: ವಿವಿಧ ವೇಷ ತೊಟ್ಟು ರಂಜಿಸಿದ ಚಿಣ್ಣರು

ಬಾಬರ್ ಶತಕ; ಜಯಸೂರ್ಯ ಹೋರಾಟ ವ್ಯರ್ಥ; ಲಂಕಾ ವಿರುದ್ಧ ಪಾಕ್ ಜಯಭೇರಿ

ಕರಾಚಿ: ಯುವ ಭರವಸೆಯ ಬ್ಯಾಟ್ಸ್‌ಮನ್ ಬಾರಿಸಿದ ಭರ್ಜರಿ ಶತಕದ(115) ನೆರವಿನಿಂದ ತಂಡವು ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 67 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಈ ಮೊದಲು ನಡೆಯಬೇಕಾಗಿದ್ದ ಪ್ರಥಮ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಪಾಕಿಸ್ತಾನದಲ್ಲಿ ಕ್ರಿಕೆಟ್ ಪುನರಾರಂಭಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಈ ಸರಣಿಯನ್ನು ಆಯೋಜಿಸಲಾಗಿದೆ. ಆದರೆ ಶ್ರೀಲಂಕಾದ ಪ್ರಮುಖ ಆಟಗಾರರು ಪಾಕ್‌ಗೆ ತೆರಳಲು ಹಿಂದೇಟು ಹಾಕಿದ್ದಾರೆ. ಈ ಮಧ್ಯೆ ಸಾಕಷ್ಟು ಗೊಂದಲಗಳ ಬಳಿಕ ಸರಣಿ ಆಯೋಜಿಸಲಾಗಿದೆ. ಇದರೊಂದಿಗೆ ಅನೇಕ ವರ್ಷಗಳ ಬಳಿಕ ಕರಾಚಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಯಾಗುತ್ತಿದೆ. ಬಾಬರ್ ಅಜಾಮ್ ಗಳಿಸಿದ ಭರ್ಜರಿ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 305 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 105 ಎಸೆತಗಳನ್ನು ಎದುರಿಸಿದ ಬಾಬರ್ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿಂದ 115 ರನ್ ಗಳಿಸಿದ್ದರು. ಆರಂಭಿಕ ಫಖಾರ್ ಜಮಾನ್ (54) ಹಾಗೂ ಹ್ಯಾರಿಸ್ ಸೊಹೈಲ್ (40) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಬಳಿಕ ಗುರಿ ಬೆನ್ನಟ್ಟಿದ ಲಂಕಾ, ಶೆಹನ್ ಜಯಸೂರ್ಯ (96) ಹಾಗೂ ದಸುನ್ ಶನಕ (68) ಹೋರಾಟದ ಹೊರತಾಗಿಯೂ 46.5 ಓವರ್‌ಗಳಲ್ಲಿ 238 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಪಾಕ್ ಪರ ಉಸ್ಮಾನ್ ಶಿನ್ವಾರಿ ಐದು ವಿಕೆಟ್ ಕಿತ್ತು ಮಿಂಚಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2oQZYkf

ಹಿಂದೆಂದೂ ಯಾವ ತಂಡ ಮಾಡಿರದ ದಾಖಲೆಯ ಹೊಸ್ತಿಲಲ್ಲಿ ಟೀಮ್ ಇಂಡಿಯಾ

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮಗದೊಂದು ಮೈಲಿಗಲ್ಲಿನ ಸನಿಹದಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಹಿಂದೆಂದೂ ಯಾವ ತಂಡವು ಮಾಡಿರದ ಸಾಧನೆಯನ್ನು ಮಾಡಲು ಪಡೆ ಸಜ್ಜಾಗಿದೆ. ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನೆಚ್ಚಿನ ತಂಡವೆನಿಸಿದೆ. ಹಾಗೊಂದು ವೇಳೆ ಗೆದ್ದರೆ, ತವರು ನೆಲದಲ್ಲಿ ಸತತ 11ನೇ ಟೆಸ್ಟ್ ಸರಣಿ ಗೆದ್ದ ವಿಶ್ವದ ಏಕಮಾತ್ರ ತಂಡವೆಂಬ ಹಿರಿಮೆಗೆ ಪಾತ್ರವಾಗಲಿದೆ. ಸದ್ಯ ಆಸ್ಟ್ರೇಲಿಯಾ ಜತೆಗೆ ಟೀಮ್ ಇಂಡಿಯಾ 10 ಸತತ ಹೋಮ್ ಟೆಸ್ಟ್ ಸಿರೀಸ್ ಗೆಲುವುಗಳ ದಾಖಲೆಯನ್ನು ಸರಿಗಟ್ಟಿದೆ. 1994 ನವೆಂಬರ್‌ನಿಂದ 2000ನೇ ಇಸವಿಯ ವರೆಗೆ ಮಾಜಿ ನಾಯಕರಾದ ಸ್ಟೀವ್ ವ್ಹಾ ಹಾಗೂ ಮಾರ್ಕ್ ಟೇಲರ್ ಮುಂದಾಳತ್ವದಲ್ಲಿ ಆಸೀಸ್ ದಾಖಲೆ ಬರೆದಿತ್ತು. ಹಾಗೆಯೇ ರಿಕಿ ಪಾಂಟಿಂಗ್ ನೇತೃತ್ವದಲ್ಲಿ 2004 ಜುಲೈನಿಂದ 2008 ನವೆಂಬರ್ ವರೆಗೂ ತವರು ನೆಲದಲ್ಲಿ ಸತತ ಗೆಲುವುಗಳನ್ನು ದಾಖಲಿಸಿತ್ತು. ಭಾರತ 2012-13ನೇ ಸಾಲಿನಲ್ಲಿ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಮುಖಭಂಗ ಅನುಭವಿಸಿತ್ತು. ಅಲ್ಲಿಂದ ಬಳಿಕ ಹೋಮ್ ಲ್ಯಾಂಡ್‌ನಲ್ಲಿ ಸೋಲಿನ ಸರಣಿ ಸೋಲನ್ನು ಅನುಭವಿಸಿಲ್ಲ. ವೆಸ್ಟ್‌ಇಂಡೀಸ್ ವಿರುದ್ಧ ಗೆಲುವಿನ ಮೂಲಕ ಭಾರತ ತನ್ನ ಪಯಣವನ್ನು ಆರಂಭಿಸಿತ್ತು. ವಿಶೇಷವೆಂದರೆ ಇದು ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಟೆಸ್ಟ್ ಸರಣಿಯಾಗಿತ್ತು. ಅಲ್ಲಿಂದ ಬಳಿಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆತ ಕಂಡಿರುವ ಟೀಮ್ ಇಂಡಿಯಾ ಬಳಿಕ ಹಿಂತಿರುಗಿಯೇ ನೋಡಿಲ್ಲ. ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಕಪ್ತಾನಗಿರಿ ವಹಿಸಿರುವ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಟೀಮ್ ಇಂಡಿಯಾ 120 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ದ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಅಂದ ಹಾಗೆ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಗೆಲುವುಗಳನ್ನು ದಾಖಲಿಸಿದ ಪಟ್ಟಿಯಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಜತೆಗೆ ಭಾರತ ಜಂಟಿ ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಭಾರತ 2015ರಿಂದ 2017-18ರ ಅವಧಿಯಲ್ಲಿ ಒಟ್ಟು ಒಂಬತ್ತು ಟೆಸ್ಟ್ ಸರಣಿಗಳಲ್ಲಿ ಗೆಲುವು ಬಾರಿಸಿತ್ತು. ಹಾಗೆಯೇ ಆಸೀಸ್ 2005/06ರಿಂದ 2008 ಮತ್ತು ಇಂಗ್ಲೆಂಡ್ ತಂಡವು 1884ರಿಂದ 1891/92ರ ಅವಧಿಯಲ್ಲಿ ಸತತವಾಗಿ ಒಂಬತ್ತು ಸರಣಿ ಗೆಲುವುಗಳನ್ನು ದಾಖಲಿಸಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2msWmnx

ಬಿಬಿಎಂಪಿ ಮೇಯರ್ ಚುನಾವಣೆ: ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರು: ಬಿಬಿಎಂಪಿ ಮೇಯರ್‌ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನಡುವಿನ ಶೀತಲ ಸಮರದ ನಡುವೆಯೂ ಬಿಎಂಪಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಬಿಜೆಪಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಪದ್ಮನಾಭ ರೆಡ್ಡಿ, ಗೌತಮ್ ಕುಮಾರ್ ಬಿಜೆಪಿಯ ಕಡೆಯಿಂದ ಮೇಯರ್ ಸ್ಥಾನದ ಅಭ್ಯರ್ಥಿಗಳಾಗಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಮೂವರು ನಾಮಪತ್ರ ಸಲ್ಲಿಸಿದ್ದು, ಹೊಸಹಳ್ಳಿ ವಾರ್ಡ್ ಸದಸ್ಯೆ ಮಹಾಲಕ್ಷ್ಮಿ ರವೀಂದ್ರ, ಗುರುಮೂರ್ತಿ ರೆಡ್ಡಿ ಮತ್ತು ರಾಮ ಮೋಹನ್ ರಾಜು ಕಣಕ್ಕಿಳಿದಿದ್ದಾರೆ. ಉಪಮೇಯರ್ ಸ್ಥಾನಕ್ಕೆದ್ದಿರುವ ಗೊಂದಲ ನಿವಾರಿಸಲು ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದಾರೆ. ಸೋಮವಾರದಿಂದಲೇ ಆರಂಭವಾಗಿತ್ತು ಶೀತಲ ಸಮರ, ಚುನಾವಣೆ ಮುಂದೂಡುವ ಆದೇಶ ಧಿಕ್ಕರಿಸಿದ ಪ್ರಾದೇಶಿಕ ಆಯುಕ್ತ ಸೋಮವಾರ ಸಂಜೆವರೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸದೆ, ಚುನಾವಣೆಯನ್ನು ಮುಂದೂಡಲು ಸರಕಾರ ತೀರ್ಮಾನಿಸಿತ್ತು. ಅದರಂತೆ ನಗರಾಭಿವೃದ್ಧಿ ಇಲಾಖೆಯು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿತ್ತು. ಆದರೆ, ಹರ್ಷ ಗುಪ್ತ ಇದಕ್ಕೆ ಕಿಮ್ಮತ್ತು ನೀಡದೆ ಚುನಾವಣೆ ನಡೆಸುತ್ತಿದ್ದಾರೆ. ಪ್ರಾದೇಶಿಕ ಆಯುಕ್ತರ ತೀರ್ಮಾನವು ಬಿಜೆಪಿ ಪಾಳಯಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತು. ಹೀಗಾಗಿ, ಸಂಜೆ ತರಾತುರಿಯಲ್ಲಿಬಿಜೆಪಿ ಮುಖಂಡರು ಮೇಯರ್‌, ಉಪ ಮೇಯರ್‌ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ನಗರದ ಶಾಸಕರು ಮತ್ತು ಕಾರ್ಪೋರೇಟರ್‌ಗಳ ಸಭೆ ನಡೆಸಿದರು. ಕೋರ್ಟ್‌ ಆದೇಶ: ಮೇಯರ್‌, ಉಪ ಮೇಯರ್‌ ಚುನಾವಣೆ ಬಳಿಕ ತೆರಿಗೆ ಮತ್ತು ಆರ್ಥಿಕ, ಮಾರುಕಟ್ಟೆ, ಆರೋಗ್ಯ, ಲೆಕ್ಕಪತ್ರ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ನಡೆಯಲಿದೆ. ಉಳಿದ 8 ಸ್ಥಾಯಿ ಸಮಿತಿಗಳ ಅಧಿಕಾರವಧಿಯು ಡಿ. 4ಕ್ಕೆ ಮುಗಿಯಲಿದೆ. ಹೈಕೋರ್ಟ್‌ ಆದೇಶದಂತೆ ಆ ತಿಂಗಳಲ್ಲೇ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆ ಸೆ. 27ರಂದು ಮೇಯರ್‌, ಉಪ ಮೇಯರ್‌ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಮೇಯರ್‌ ಚುನಾವಣಾ ದಿನದಂದೇ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿಅ. 1ಕ್ಕೆ ಮುಂದೂಡಲಾಯಿತು. ಬಳಿಕ 8 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ ಮೊರೆ ಹೋಗಿದ್ದರು. ಸ್ಥಾಯಿ ಸಮಿತಿಗಳ ಅಧಿಕಾರವಧಿಯು ಇನ್ನು 2 ತಿಂಗಳು ಇರುವುದರಿಂದ ಹೈಕೋರ್ಟ್‌ ಚುನಾವಣೆ ನಡೆಸದಂತೆ ಆದೇಶಿಸಿತ್ತು.


from India & World News in Kannada | VK Polls https://ift.tt/2nk2dvP

ಪಂಜಾಬ್ ಮಾಜಿ ಸಿಎಂ ಬಿಯಾಂತ್‌ ಸಿಂಗ್‌ ಹಂತಕನ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆಯ ಭೀತಿ!

ವಿಶಾಖಪಟ್ಟಣ: ಭಾರತ ಹಾಗೂ ಪ್ರವಾಸಿ ನಡುವಣ ಮೂರು ಟೆಸ್ಟ್ ಪಂದ್ಯಗಳ ಮೊದಲ ಪಂದ್ಯವು ವಿಶಾಖಪಟ್ಟಣದಲ್ಲಿ ಅಕ್ಟೋಬರ್ 2 ಬುಧವಾರದಿಂದ ಆರಂಭವಾಗಲಿದೆ. ಇದೀಗ ಭಾರತ ಹಾಗೂ ಹರಿಣಗಳ ನಡುವಣ ಕದನಕ್ಕೆ ಮಳೆಯ ಭೀತಿ ಕಾಡುತ್ತಿದೆ. ಇನ್ನು ಗಮನಾರ್ಹ ಅಂಶವೆಂದರೆ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಎಲ್ಲ ಐದು ದಿನಗಳಲ್ಲೂ ಮಳೆಯಾಗುವ ಸಂಭವವಿದೆ ಎಂಬ ಮುನ್ಸೂಚನೆ ನೀಡಿದೆ. ಇದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಇನ್ನು ನಿರಾಸೆಯ ಸಂಗತಿಯೆಂದರೆ ಮೊದಲ ದಿನದಲ್ಲಿ ಶೇ.80ರಷ್ಟು ಮಳೆಯಾಗುವ ಭೀತಿಯಿದೆ. ಇದರಿಂದಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಕದನಕ್ಕೆ ಕಾರ್ಮೋಡ ಕವಿದಿದೆ. ಎರಡು ಹಾಗೂ ಮೂರನೇ ದಿನಗಳಲ್ಲಿ ಅನುಕ್ರಮವಾಗಿ ಶೇ. 50 ಹಾಗೂ 40ರಷ್ಟು ಮಳೆಯಾಗುವ ಸಂಭವವಿದೆ. ಅಂತೆಯೇ ಅಂತಿಮ ಎರಡು ದಿಗಳಲ್ಲೂ ಮಳೆಯಾಗುವ ಭೀತಿಯಿದೆ. ಟೆಸ್ಟ್ ಸರಣಿಗೂ ಮೊದಲು ನಡೆದ ಅಭ್ಯಾಸ ಪಂದ್ಯವು ವಿಶಾಖಪಟ್ಟಣದಿಂದ 50 ಕೀ.ಮೀ. ದೂರದಲ್ಲಿ ನಡೆದಿತ್ತು. ಈ ಪಂದ್ಯಕ್ಕೂ ಮಳೆ ಅಡಚಣೆಯಾಗಿತ್ತು. ಇದರಿಂದಾಗಿ ಮೊದಲ ದಿನದ ಪಂದ್ಯ ಸಂಪೂರ್ಣವಾಗಿ ನಷ್ಟವಾಗಿತ್ತು. ಸುದೀರ್ಘ ವಿದೇಶ ಪ್ರವಾಸದ ಬಳಿಕ ಪ್ರಸಕ್ತ ಸಾಲಿನಲ್ಲಿ ತವರಿನಲ್ಲಿ ಸೀಸನ್ ಅನ್ನು ಭಾರತ ಆರಂಭಿಸುತ್ತಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಬಳಿಕ ಬಾಂಗ್ಲಾದೇಶ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ತವರಿನಲ್ಲೇ ಸರಣಿಗಳಲ್ಲಿ ಭಾಗವಹಿಸಲಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಗೆಲುವಿನ ಓಟ ಮುಂದುವರಿಸುವ ತವಕ... ವೆಸ್ಟ್‌ಇಂಡೀಸ್ ನೆಲದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಕಾಲಿಟ್ಟಿರುವ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇದೇ ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದೆ. ವೆಸ್ಟ್‌ಇಂಡೀಸ್ ವಿರುದ್ಧ ಸರಣಿ ಗೆಲುವು ದಾಖಲಿಸಿರುವ ವಿರಾಟ್ ಕೊಹ್ಲಿ ಪಡೆ, ಒಟ್ಟು 120 ಅಂಕಗಳನ್ನು ಸಂಪಾದಿಸಿದೆ. ರೋಹಿತ್‌ ಓಪನರ್... ಅಭ್ಯಾಸ ಪಂದ್ಯದಲ್ಲಿ ಫೇಲ್ ಆದರೂ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ರೋಹಿತ್ ಶರ್ಮಾ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಹೊಸ ಪ್ರಯೋಗಕ್ಕಿಳಿಯುತ್ತಿದೆ. ಪಂತ್ ಬದಲು ಸಹಾ... ಹಾಗೆಯೇ ಉದಯೋನ್ಮುಖ ರಿಷಬ್ ಪಂತ್ ಸ್ಥಾನಕ್ಕೆ ವೃದ್ಧಿಮಾನ್ ಸಹಾ ಆಯ್ಕೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಟೀಮ್ ಇಂಡಿಯಾ ಸಂಯೋಜನೆ ಅತಿ ನಿರ್ಣಾಯಕವೆನಿಸಲಿದೆ. ಯುವ ಆಟಗಾರ ಶುಭಮನ್ ಗಿಲ್‌ಗೆ ಅವಕಾಶ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2mxjAsQ

ಶಿಕ್ಷಣ ಗುಣಮಟ್ಟದಲ್ಲಿ ಕೇರಳ ನಂಬರ್ 1, ಕರ್ನಾಟಕದ ಸ್ಥಾನವೆಷ್ಟು?

'ವಿಜಯನಗರ' ಜಿಲ್ಲೆ ವಿರೋಧಿಸಿ ಬಳ್ಳಾರಿ ಬಂದ್: ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಬಳ್ಳಾರಿ: ಅಖಂಡ ಬಳ್ಳಾರಿ ಹಾಗೂ ನೂತನ ಜಿಲ್ಲೆ ರಚನೆ ವಿರೋಧಿಸಿ ಇಂದು (ಮಂಗಳವಾರ) ಬಳ್ಳಾರಿ ಬಂದ್‌ಗೆ ಕರೆ ನೀಡಲಾಗಿದ್ದು, ನಗರದ ರಾಯಲ್ ಸರ್ಕಲ್ ವೃತ್ತದಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರು, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇಂದು (ಮಂಗಳವಾರ) ಬೆಳಿಗ್ಗೆ 6 ರಿಂದ ಸಂಜೆ 6ರವರೆಗೂ ಬಂದ್ ನಡೆಯಲಿದ್ದು, ಕೆಲವು ಖಾಸಗಿ ಶಾಲಾ, ಕಾಲೇಜ್‌ಗಳು ಸ್ವಯಂ ಘೋಷಿತ ರಜೆ ಘೋಷಿಸಲಾಗಿದೆ. ಬಂದ್‌ ತೀವ್ರತೆಯ ಮೇಲೆ ಸರಕಾರಿ ಶಾಲಾ, ಕಾಲೇಜ್‌ಗಳು, ಸರಕಾರಿ ಬಸ್‌ಗಳ ಸಂಚಾರ ಕುರಿತು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಗಣಿ ನಾಡು ಬಳ್ಳಾರಿ ಜಿಲ್ಲೆ ವಿಭಜಿಸಿ ಹೊಸಪೇಟೆ ಕೇಂದ್ರವಾಗಿಟ್ಟಕೊಂಡು ನೂತನ ರಚನೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ವಿಜಯನಗರ ನೂತನ ಜಿಲ್ಲೆ ರಚನೆ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಿಜೆಪಿ ಶಾಸಕರ ನಡುವೆ ಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿವೆ.


from India & World News in Kannada | VK Polls https://ift.tt/2ms50mf

ಆತ್ಮಹತ್ಯೆಗೆ ಪ್ರೇರೇಪಣೆ, ಪತ್ನಿಗೆ ಸಜೆ (ಬೆಂಗಳೂರು ಮೂಲದವರು)

ವಿಷ ಕುಡಿದಿದ್ದರೆ ಕುಮಾರಸ್ವಾಮಿ ಉಳಿಯುತ್ತಿದ್ದರೇ?: ವಿ. ಸೋಮಣ್ಣ

ಮೈತ್ರಿಯಲ್ಲಿ ಗಂಡ ಹೆಂಡತಿಯನ್ನು ನಂಬಲಿಲ್ಲ, ಹೆಂಡತಿ ಗಂಡನನ್ನು ನಂಬಲಿಲ್ಲ!: ಶಾಸಕ ಡಾ ಕೆ. ಸುಧಾಕರ್‌ ವ್ಯಂಗ್ಯ

ನಾಯಿಯೊಂದಿಗೆ ಕುಟುಂಬ ನದಿಗೆ ಹಾರಿದ ಪ್ರಕರಣ: ಮೂರನೇ ದಿನವೂ ಯುವಕನ ಸುಳಿವಿಲ್ಲ

ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಬಳಸಿದರೆ 1 ಸಾವಿರ ರೂ. ದಂಡ

ಬಿರುಗಾಳಿ ತಂದ ‘ತಂತಿ’ ನಡಿಗೆ: ಬಿಎಸ್‌ವೈ ಅಸಹಾಯಕ ಮಾತುಗಳಿಗೆ ನಾನಾ ವ್ಯಾಖ್ಯಾನ

ಗ್ರೀನ್‌ ಟೀ ಬಳಿಕ ಈಗ ಗ್ರೀನ್‌ ಕಾಫಿ! ಡಯಾಬಿಟಿಸ್‌, ಬಿಪಿ, ಕ್ಯಾನ್ಸರ್‌ ರಿಸ್ಕ್‌ ತಗ್ಗಿಸಲೂ ಪರಿಣಾಮಕಾರಿ

ಐಸಿಯುನಲ್ಲಿ ಐಸಿಯು ಘಟಕ : ರಾಜ್ಯದ ನಾನಾ ತಾಲೂಕು ಆಸ್ಪತ್ರೆಗಳ ಅವ್ಯವಸ್ಥೆಯ ಕಥೆ ಇದು

ಫೋನ್‌ ಕದ್ದಾಲಿಕೆ ಪ್ರಕರಣ: ಸಂಘ ಪರಿವಾರದ ನಾಯಕರ ಮೊರೆ ಹೋದ ಅಲೋಕ್‌ಕುಮಾರ್‌

ಸಿದ್ದರಾಮಯ್ಯ ಹೇಳಿಕೊಟ್ಟ ಗಿಣಿಯಂತೆ ಪ್ರಶ್ನಿಸಬೇಡಿ: ಪತ್ರಕರ್ತರ ಮೇಲೆ ಮಾಧುಸ್ವಾಮಿ ಗರಂ

ಹುಬ್ಬಳ್ಳಿ: ಕೇಂದ್ರ ಸರಕಾರದಿಂದ ನೆರೆ ಪರಿಹಾರ ಬಿಡುಗಡೆ ವಿಳಂಬ ಕುರಿತು ಪತ್ರಕರ್ತರು ಕೇಳಿದ ಪಶ್ನೆಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಗರಂ ಆದ ಪ್ರಸಂಗ ನಡೆಯಿತು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಸಂಬಂಧ ಈಗಾಗಲೇ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ನಿರಾಶ್ರಿತರಿಗೆ ಮನೆ ನಿರ್ಮಾಣ, ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕೇಂದ್ರ ಸರಕಾರದಿಂದ ನೆರೆ ಪರಿಹಾರ ಬಿಡುಗಡೆ ವಿಳಂಬ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಸಚಿವರು, ಸಿದ್ದರಾಮಯ್ಯ ಅವರು ಹೇಳಿಕೊಟ್ಟ ಗಿಣಿಯಂತೆ ಪ್ರಶ್ನಿಸಬೇಡಿ ಎಂದರು. ಕೇವಲ ಕರ್ನಾಟಕದಲ್ಲಿ ಅಷ್ಟೆಯಲ್ಲ, ನಾಲ್ಕೈದು ರಾಜ್ಯಗಳಲ್ಲಿ ನೆರೆ ಹಾವಳಿ ಬಂದಿದೆ. ಏಕಕಾಲಕ್ಕೆ ಎಲ್ಲ ರಾಜ್ಯಗಳಿಗೂ ಪರಿಹಾರ ಬಿಡುಗಡೆಯಾಗಲಿದೆ. ಈ ಸಂಬಂಧ ರಾಜ್ಯ ಸರಕಾರ ಗಮನ ಹರಿಸಿದೆ. ತಾಳ್ಮೆ ಇರಲಿ, ಮನಸ್ಸಿಗೆ ಬಂದಂತೆ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಪತ್ರಕರ್ತರ ವಿರುದ್ಧ ಹರಿಹಾಯ್ದರು. 'ನಾನು ಒಂದು ರೀತಿಯಲ್ಲಿ ತಂತಿ ಮೇಲೆ ನಡೆಯುತ್ತಿದ್ದೇನೆ' ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಈ ಪ್ರಶ್ನೆಯನ್ನು ಅವರಿಗೆ ಕೇಳಬೇಕು ಎಂದು ಹೇಳಿದರು. ಮಹದಾಯಿ ಸೇರಿದಂತೆ ಅಂತರ್ ರಾಜ್ಯ ಜಲ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಸಚಿವ , ನಮಗೆ ಸಿಕ್ಕ ಪಾಲನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ. ಈ ಕುರಿತು ನೋಟಿಫಿಕೇಶನ್ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಬಾಕಿ ಉಳಿದ ಪ್ರಕರಣಗಳನ್ನು ಸಮರ್ಥವಾಗಿ ವಾದಿಸಿ, ರಾಜ್ಯದ ಹಿತ ಕಾಪಾಡಲಾಗುವುದು ಎಂದು ಹೇಳಿದರು.


from India & World News in Kannada | VK Polls https://ift.tt/2owhA4J

ರಾಜಸ್ಥಾನದ ಅಳ್ವಾರ್‌ನಲ್ಲಿ 24 ಗಂಟೆಗಳಲ್ಲಿ ಮೂರು ಗ್ಯಾಂಗ್ ರೇಪ್

ಜೈಪುರ್/ಅಳ್ವಾರ್: 24 ಗಂಟೆಗಳಲ್ಲಿ ಮೂರು ಗ್ಯಾಂಗ್ ರೇಪ್- ದೇಶವೇ ಬೆಚ್ಚಿ ಬೀಳುವಂತಹ ಸುದ್ದಿ ಬಂದಿದ್ದು ರಾಜಸ್ಥಾನದಿಂದ. ಅಷ್ಟೇ ಅಲ್ಲ ಸಂತ್ರಸ್ತರಲ್ಲಿ ಇಬ್ಬರು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಅಲ್ವಾರ್‌ನ ಥಂಗಾಜಿಯಲ್ಲಿ ಶನಿವಾರ ರಾತ್ರಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಅರಣ್ಯ ಪ್ರದೇಶದಲ್ಲಿ ಎಸಗಲಾಗಿದೆ. ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನಾನೊಂದು ಸಣ್ಣ ಬಾವಿಯಲ್ಲಿ ಬಿದ್ದೆ. ಗ್ರಾಮಸ್ಥರು ನನ್ನನ್ನು ಮೇಲಕ್ಕೆತ್ತಿದರು ಎಂದು ಬಾಲಕಿ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ. ಪೋಕ್ಸೋ ಮತ್ತು ಐಪಿಸಿ ಸೆಕ್ಷನ್ 376 ಡಿ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ವೈದ್ಯಕೀಯ ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಗಿದೆ. ಆರೋಪಿಗಳನ್ನು ಹಿಡಿಯುವಲ್ಲಿ ಸಫಲರಾಗಿರುವ ಗ್ರಾಮಸ್ಥರು ಅವರನ್ನು ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು 20 ವರ್ಷ ಪ್ರಾಯದವರಾಗಿದ್ದು, ಮತ್ತೊಬ್ಬ ಅಪ್ರಾಪ್ತನಾಗಿದ್ದಾನೆ ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಸಹ ಅಳ್ವಾರ್‌ನ ಡಬ್ಲಾದಲ್ಲಿ 16 ವರ್ಷದ ಬಾಲಕಿಯನ್ನು ನಾಲ್ಕು ಜನ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ವೀಡಿಯೋವನ್ನಿಟ್ಟುಕೊಂಡು ಬೆದರಿಕೆಯನ್ನು ಸಹ ಒಡ್ಡಲಾಗಿತ್ತು ಎಂದು ಆಕೆ ಪೊಲೀಸರಲ್ಲಿ ದೂರಿದ್ದು, ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ರೈನಿಯಲ್ಲಿ 35 ವರ್ಷದ ಮಹಿಳೆಯೊಬ್ಬರ ಮನೆಗೆ ನುಗ್ಗಿದ ಇಬ್ಬರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆಕೆ ಕೂಗಿಕೊಂಡಾಗ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


from India & World News in Kannada | VK Polls https://ift.tt/2mOZnPt

ವಿದ್ಯಾಕಾಶಿ ಧಾರವಾಡದಲ್ಲಿ ಮುಂದುವರೆದ ಚಾಕು ಇರಿತ ಪ್ರಕರಣ: ಯುವಕನ ಬರ್ಬರ ಹತ್ಯೆ

ಧಾರವಾಡ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಚೂರಿ ಇರಿತ ಪ್ರಕರಣಗಳು ಮುಂದುವರೆದಿದ್ದು, ಭಾನುವಾರ ರಾತ್ರಿ ಧಾರವಾಡದ ನಿಜಾಮುದ್ದೀನ್ ಕಾಲನಿಯಲ್ಲಿ ದುಷ್ಕರ್ಮಿಗಳು ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಮಾಡಿ ಪರಾರಿಯಾಗಿದ್ದಾರೆ. ಮಣಕಿಲ್ಲಾ ನಿವಾಸಿ ಮಹಮ್ಮದ್ ಜುಬೇರ್ (18) ಕೊಲೆಯಾದ ಯುವಕ. ಭಾನುವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಮಹಮ್ಮದ್ ಜುಬೇರ್ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಆತ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ್ ಪೊಲೀಸ್ ಆಯುಕ್ತ ಆರ್ ದಿಲೀಪ್, ಡಿಸಿಪಿಗಳಾದ ಡಿ ಎಲ್ ನಾಗೇಶ್, ಶಿವಕುಮಾರ್ ಗುಣಾರೆ, ಎಸಿಪಿ ಎಂ.ಎನ್ ರುದ್ರಪ್ಪ, ಉಪನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹಾಂತೇಶ ಬಸಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರವಷ್ಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.


from India & World News in Kannada | VK Polls https://ift.tt/2owVf7f

ರಾಷ್ಟ್ರೀಯ ದಿನ ಸಂಭ್ರಮದಲ್ಲಿರುವ ಚೀನಾಕ್ಕೆ ಆಘಾತ, ಬೆಂಕಿ ದುರಂತದಲ್ಲಿ 19 ಮಂದಿ ದಹನ

ಪೂರ್ವ ಚೀನಾದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ದುರಂತದಲ್ಲಿ 19 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದೈನಂದಿನ ಅವಶ್ಯಕತೆಗಳನ್ನು ತಯಾರಿಸುವ ಸ್ಥಾವರದಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, 19 ಮಂದಿ ಸಜೀವ ದಹನವಾಗಿ ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ. ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನವರ ಸ್ಥಿತಿ ಶೋಚನೀಯವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸಿದ್ದು, ಈ ಅವಘಡಕ್ಕೆ ನಿಜವಾದ ಕಾರಣವೇನೆಂದು ತಿಳಿದುಬಂದಿಲ್ಲ. ಹೀಗಾಗಿ ತನಿಖೆ ಪ್ರಗತಿಯಲ್ಲಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಚೀನಾದ ಕೈಗಾರಿಕಾ ವಲಯಗಳಲ್ಲಿ ಈ ರೀತಿಯ ದರ್ಘಟನೆಗಳು ಇದೇ ಮೊದಲೇನಲ್ಲ. ವರ್ಷದ ಹಲವು ದಿನ ಇದೇ ರೀತಿಯ ದುರಂತ ನಡೆಯುತ್ತಿರುತ್ತದೆ. ನಿನ್ನೆ ನಿಂಗೈ ಗ್ರಾಮದ ಕಾರ್ಖಾನೆಯೊಂದರಲ್ಲಿ ಈ ದುರಂತ ನಡೆದಿದ್ದು, ಇದು ರುಯಿಕಿ ಡೈಲಿ ನೆಸೆಸ್ಸಿಟೀಸ್ ಕಂಪನಿ ಒಡೆತನದ ಸಂಸ್ಥೆ ಎಂದು ತಿಳಿದುಬಂದಿದೆ. ನಾಯಕತ್ವದ 70ನೇ ಆಚರಣೆಯ ಸಂಭ್ರಮದಲ್ಲಿರುವಾಗಲೇ ಈ ದುರಂತ ನಡೆದಿದ್ದು, ಕಮ್ಯೂನಿಸ್ಟ್ ರ ಸಂಭ್ರಮಕ್ಕೆ ಕಹಿ ಎನಿಸಿದೆ.


from India & World News in Kannada | VK Polls https://ift.tt/2mcK1Ux

ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್: ಡಿಕೆಶಿಗೆ ಕೊಂಚ ನಿರಾಳ

ಹೊಸದಿಲ್ಲಿ: ಮಾಜಿ ಸಚಿವ ಡಿಕೆ ಶಿವಕುಮಾರ್‌ ಅವರ ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕ್ಕೆ (ಇಡಿ) ನೋಟಿಸ್‌ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 14ಕ್ಕೆ ಮುಂದೂಡಿದೆ. ದೆಹಲಿಯ ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ಇಡಿ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ನಂತರ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್‌ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.


from India & World News in Kannada | VK Polls https://ift.tt/2masXOQ

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ಪುತ್ತೂರು: ರಾಜ್ಯದಲ್ಲಿ ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ವಿ. ಜೋಶಿ ಹೇಳಿದರು. ಸೋಮವಾರ ಪುತ್ತೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಒಂದೂವರೆ ತಿಂಗಳಲ್ಲಿ ಉಪ ಚುನಾವಣೆ ನಡೆಯಲಿದೆ. 15ರಲ್ಲಿ 13ಕ್ಕಿಂತಲೂ ಅಧಿಕ ಸ್ಥಾನಗಳಲ್ಲಿ‌ ಪಕ್ಷ ಗೆಲ್ಲಲಿದೆ. ಅಭ್ಯರ್ಥಿಗಳ ಆಯ್ಲೆಯಲ್ಲಿ ಬಿಜೆಪಿಯಲ್ಲಿ ಗೊಂದಲವಿಲ್ಲ. ಪಕ್ಷ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ನಡೆಸಲಿದೆ, ನನಗೆ ಶಿರಸಿ ಕ್ಷೇತ್ರದ ಹೊಣೆಗಾರಿಕೆ ಇದೆ ಎಂದರು. ತಂತಿಯ ಮೇಲೆ ನಡೆಯುತ್ತಿರುವುದಾಗಿ ಸಿಎಂ ಯಡಿಯೂರಪ್ಪ ನೀಡಿದ್ದ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ನಮ್ಮ ಸರಕಾರವೀಗ ಬಹುಮತಕ್ಕಿಂತ ಕೇವಲ ನಾಲ್ಕು ಸ್ಥಾನ ಹೆಚ್ಚಿಗೆ ಪಡೆದಿದೆ. ಈ ಅರ್ಥದಲ್ಲಿ ಅವರು ಈ ಮಾತು ಹೇಳಿರಬಹುದು ಎಂದು ಉತ್ತರಿಸಿದರು.


from India & World News in Kannada | VK Polls https://ift.tt/2mbdoX9

ತಂತಿ ಮೇಲೆ ನಡೆಯಲು ಹೋದ್ರೆ, ಬಿದ್ದು ಹೋಗ್ತೀರಿ: ಬಿಎಸ್‌ವೈಗೆ ಸಿದ್ದರಾಮಯ್ಯ ಎಚ್ಚರಿಕೆ

ರಾಯಚೂರು: ''ನಾನು ಒಂದು ರೀತಿಯಲ್ಲಿ ತಂತಿ ಮೇಲೆ ನಡೆಯುತ್ತಿದ್ದೇನೆ' ಎಂಬ ಮುಖ್ಯಮಂತ್ರಿ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು ನೀಡಿದ್ದಾರೆ. ನೆರೆ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಡಿಯೂರಪ್ಪ ಅವರೇ, ತಂತಿ ಮೇಲೇಕೆ ನಡೆಯುತ್ತೀರಿ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ. ತಂತಿ ಮೇಲೆ ನಡೆಯಲು ಹೋದರೆ, ಬಿದ್ದು ಹೋಗುತ್ತೀರಿ' ಎಂದು ಗೇಲಿ ಮಾಡಿದರು. ಕೇಂದ್ರ ಸರಕಾರದ ಬಳಿ ನೆರೆ ಪರಿಹಾರ ಹಣ ಕೇಳಲು ಸಹ ಧೈರ್ಯವಿಲ್ಲ. ಕೇಂದ್ರ ಸರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೆಕ್ಕೆ-ಪುಕ್ಕ ಕತ್ತರಿಸಿದೆ. ಮುಕ್ತ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಅವರನ್ನು ಕಂಡರೆ, ಅಯ್ಯೋ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಅಲ್ಪಮತದ ಸರಕಾರವಾಗಿದ್ದು, ಅನೈತಿಕವಾಗಿ ರಚನೆಗೊಂಡಿದೆ. ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದು, ಬಿಜೆಪಿ ಸರಕಾರ ಪತನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಲೆಕ್ಕಾಚಾರವಿದೆ ಎಂದ ಅವರು, ಭವಿಷ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಗೆ ಮಾಡಿಕೊಳ್ಳಲ್ಲ ಎಂದರು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ನೆರೆ ಸಂತ್ರಸ್ತರ ನೆರವಿಗೆ ಬರುತ್ತಿಲ್ಲ. ದಪ್ಪ ಚರ್ಮದ ಈ ಸರಕಾರಗಳಿಗೆ ಕಣ್ಣು, ಮೂಗು, ಕಿವಿ ಇಲ್ಲ. ಹೀಗಾಗಿ ಯಾರ ಒತ್ತಾಯಕ್ಕೂ ಸರಕಾರ ಕಿವಿಗೊಡುತ್ತಿಲ್ಲ ಎಂದು ಕಿಡಿಕಾರಿದರು. ಮಳೆಯಿಂದ ರಾಜ್ಯದ ಬಹುತೇಕ ಭಾಗದಲ್ಲಿ ನೆರೆ ಬಂದಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯಾದರೂ, ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಈ ಹಿಂದೆ ನೆರೆ ಬಂದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಬಂದು ಮಧ್ಯಂತರ ಪರಿಹಾರ ಘೋಷಿಸಿದ್ದರು ಎಂದರು. ಪ್ರಧಾನಿ ಬಳಿ ಪರಿಹಾರ ಕೇಳಲು ನಿಮಗೆ ಧೈರ್ಯ ಇಲ್ಲದಿದ್ದರೆ, ನಿಯೋಗ ಕರೆದುಕೊಂಡು ಹೋಗಿ ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು. ತಮ್ಮ ವಿರುದ್ಧ ಕಾಂಗ್ರೆಸ್ ನಾಯಕ ಮುನಿಯಪ್ಪ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸದ ಅವರು, ಇದು ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.


from India & World News in Kannada | VK Polls https://ift.tt/2nJwIeC

ವಿಸ್ತೃತ ರೈಲು ಸೇವೆ, ಮುಖ್ಯಮಂತ್ರಿಯಿಂದ ಚಾಲನೆ

ದಸರಾ ಪ್ರವಾಸಿಗರಿಗೆಂದೇ ಸಿದ್ದವಾಯ್ತು ಆಹಾರಮೇಳ: ರೆಡಿಯಾಗಿದೆ ರುಚಿರುಚಿ ತಿಂಡಿ

ನೆರೆ ಸಂತ್ರಸ್ತರ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ಕನ್ನಡಿಗರ ಪ್ರತಿಭಟನೆ

ಬೆಂಗಳೂರು: ನೆರೆ ಸಂತ್ರಸ್ತರ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ಟೌನಹಾಲ್ ಮುಂದೆ ನಡೆದ ಪ್ರತಿಭಟನೆ ಯಶಸ್ವಿಯಾಗಿ ನಡೆದಿದ್ದು, ಜಾತಿ ಪಕ್ಷ ಅಥವಾ ಯಾವುದೆ ಸಂಘಟನೆ ಎನ್ನದೆ ಎಲ್ಲರೂ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು. ಪ್ರತಿ ವರ್ಷ ಕರ್ನಾಟಕದಿಂದ 4 ಲಕ್ಷ ಕೋಟಿಯಷ್ಟು ಹಣ ತೆರೆಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತದೆ. ಆದರೆ, ನಮಗೆ ಕಷ್ಟಕಾಲದಲ್ಲಿ ಸ್ವಲ್ಪ ಮಟ್ಟದಲ್ಲಿ ಸಹಾಯ ಮಾಡಲು ಹಿಂದೇಟು ಹಾಕುತ್ತಿರುವುದನ್ನು ಕನ್ನಡಿಗರು ಖಂಡಿಸಿದರು. ಪ್ರತಿಭಟನೆ ಉದ್ದಕ್ಕೂ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರ ಬೇಜವಾಬ್ದಾರಿತನವನ್ನು ಹಾಗೂ ಕೇಂದ್ರ ಸರಕಾರದ ಮಲತಾಯಿ ದೋರಣೆತನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ನೆರೆ ಹೊಡೆತಕ್ಕೆ ಬೆಳಗಾವಿ, ಬಾಗಲಕೋಟ, ಉತ್ತರ ಕನ್ನಡ, ರಾಯಚೂರ ಸೇರಿದಂತೆ 20 ಜಿಲ್ಲೆಗಳು ತತ್ತರಿಸಿದ್ದು, ಆ ಜನರ ಬದಕು 20 ವರ್ಷಕ್ಕೆ ಹಿಂದಕ್ಕೆ ಹೋಗಿದೆ. ಜೊತೆಗೆ ಒಂದು ಹೊತ್ತಿನ ಅನ್ನಕ್ಕೂ ತಾತ್ವಾರ ಪಡುವಂತಾಗಿದೆ. ಆಯಾ ಜಿಲ್ಲೆಗಳಿಗೆ ಭೇಟಿ ಕೊಟ್ಟು ಬಂದಿದ್ದ ಕೆಲ ಕನ್ನಡಿಗರು ಅಲ್ಲಿಯ ವಸ್ತು ಸ್ಥಿತಿಯನ್ನ ವಿವರಿಸಿದರು. ಸರಕಾರ ಕನಿಷ್ಠ ಪಕ್ಷ ಅಲ್ಲಿಯ ಜನಗಳಿಗೆ ಶೆಡ್ ನಿರ್ಮಿಸುವ ಕನಿಕರ ತೋರಿಲ್ಲ. ಎಲ್ಲ‌ಜನ ಇನ್ನು ದೇವಸ್ಥಾನಗಳಲ್ಲಿಯೆ ಆಶ್ರಯ ಪಡೆದಿದ್ದಾರೆಂದು ತಿಳಿಸಿದರು. ಪ್ರತಿಭಟನೆಗೆ ಕೂತ ಜನರು ಅಲ್ಲಿಯೇ ಟ್ವಟರ್ ಮತ್ತು ಫೇಸಬುಕ್ ಅಲ್ಲಿ #Karnatakaflood #Pariharkodi_illaokkutadindabidi ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮತ್ತು ಪೋಸ್ಟ್‌ಗಳನ್ನು ಮಾಡಿದರು. ಈ ಕೂಡಲೇ ಸರಕಾರ ಪರಿಹಾರ ಕೊಡದೇ ಹೋದಲ್ಲಿ ಹೋರಾಟವನ್ನು ಆಂದೋಲನದ ರೀತಿಯಲ್ಲಿ ಮಾಡಬೇಕೆಂದು ಎಲ್ಲ ಕನ್ನಡಿಗರು ಒಕ್ಕೂರಲಿಂದ ತಿರ್ಮಾನಿಸಿದರು. ಸಾಮಾಜಿಕ ಜಾಲತಾಣದ ಕನ್ನಡಿಗರು ಮತ್ತು ಕನ್ನಡಪರ ಮನಸ್ಸುಗಳ ಗುಂಪಿನ ನೂರಾರು ಯುವಕ ಯುವತಿಯರು ಭಾಗವಹಿಸಿದ್ದರು. ಶಿವಾನಂದ ಗುಂಡಾನವರ, ಪವನ ಹೆಗ್ಡೆ, ಅಕ್ಕ ಅನು, ಮಂಜುನಾಥ, ಹನುಮಂತ ಮತ್ತು ಬನವಾಸಿ ಬಳಗದ ಆನಂದ, ಅರುಣ ಜಾವಗಲ್ ಹೀಗೆ ಅನೇಕ ಸಂಘಟನೆ ಕನ್ನಡಿಗರು ಭಾಗವಹಿಸಿದ್ದರು.


from India & World News in Kannada | VK Polls https://ift.tt/2n07EA3

ಕೆಆರ್‌ಎಸ್‌ ಹಿನ್ನೀರಿನಲ್ಲಿ ಜಲಕ್ರೀಡೋತ್ಸವ ಶುರು : ಅ.8ರವರೆಗೂ ಸಾಹಸಿಗರಿಗೆ ಸುಗ್ಗಿ

ಹೆತ್ತವರನ್ನು ನಿರ್ಲಕ್ಷಿಸಿದರೆ ಹುಷಾರ್‌: ಹೊಸ ತಿದ್ದುಪಡಿಗಳು ಏನೇನು?

ಸೌದಿ ಪ್ರವಾಸಕ್ಕೆ ಹೋಗಲಿರುವಿರಾ? ಸಾರ್ವಜನಿಕವಾಗಿ ಚುಂಬಿಸುವ ದುಸ್ಸಾಹಸಕ್ಕೆ ಮಾತ್ರ ಇಳಿಯದಿರಿ!

ಅಮೆರಿಕದ ಚಿಲಿ ಕರಾವಳಿಯಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪನದಲ್ಲಿ 6.8 ತೀವ್ರತೆ ದಾಖಲು

ವಾಷಿಂಗ್ಟನ್: ದಕ್ಷಿಣ ಅಮೆರಿಕದ ಚಿಲಿ ಕರಾವಳಿಯಲ್ಲಿ 6.8 ತೀವ್ರತೆಯ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೆ ತಿಳಿಸಿದೆ. ತಾಲ್ಕಾದ ಪಶ್ಚಿಮದಿಂದ ಸುಮಾರು 83 ಮೈಲಿ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಸದ್ಯ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ತುರ್ತು ಸಂಸ್ಥೆ ತಿಳಿಸಿದೆ. ವಿಶ್ವದ ಅತಿ ಹೆಚ್ಚು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಚಿಲಿ ಕೂಡ ಒಂದಾಗಿದೆ. ಗುರುವಾರ ಪೂರ್ವ ಇಂಡೋನೇಷ್ಯಾದ ಮಾಲುಕು ದ್ವೀಪದ ಸೆರಾಮ್‌ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.5 ತೀವ್ರತೆ ದಾಖಲಾಗಿತ್ತು. ಇಂಡೋನೇಷ್ಯಾದ ಮಾಲುಕು ಪ್ರಾಂತ್ಯದ ಅಂಬೊನ್‌ನಿಂದ ಈಶಾನ್ಯಕ್ಕೆ ಸುಮಾರು 37 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿತ್ತು. ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಂಗಳವಾರ (24-9-2019) ಸಂಜೆ ಭೂಕಂಪ ಸಂಭವಿಸಿದ್ದು, ಇಲ್ಲಿಯವರೆಗೂ 37 ಜನ ಸಾವನ್ನಪ್ಪಿದ್ದು, 452 ಜನ ಗಾಯಗೊಂಡಿದ್ದಾರೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 5.8ರಷ್ಟಿತ್ತು. ಪಾಕಿಸ್ತಾನದ ಲಾಹೋರ್‌ ಸಮೀಪದ ಜಾಟ್ಲಾನ್‌ ಎಂಬಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಭೂ ವಿಜ್ಞಾನ ಇಲಾಖೆ ತಿಳಿಸಿತ್ತು.


from India & World News in Kannada | VK Polls https://ift.tt/2mUMx1S

ಬಸವ ಕಲ್ಯಾಣ: ಸಾವಿನಲ್ಲೂ ಒಂದಾದ ಅವಳಿ ಮಕ್ಕಳು

ಎಟಿಎಂಗೆ ತುಂಬಬೇಕಿದ್ದ 99 ಲಕ್ಷ ಎತ್ತಿಕೊಂಡು ಚಾಲಕ ಪರಾರಿ

ಲಕ್ಷ ರೂ ಬೆಳೆ ನಷ್ಟಕ್ಕೆ ಕೇವಲ 3 ಸಾವಿರ ರೂ ಪರಿಹಾರ: ಸಂತ್ರಸ್ತರು ಕಂಗಾಲು

ಪ್ರಮೋದ ಹರಿಕಾಂತ ಬೆಳಗಾವಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾಗುವ ಕೃಷಿ ಬೆಳೆಗೆ ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನ) ನಿಯಮದಂತೆ ಪ್ರತಿ ಎಕರೆಗೆ ಕೇವಲ 2750 ರೂ. ನಿಗದಿಪಡಿಸಿ ಸಮೀಕ್ಷೆ ನಡೆಸುತ್ತಿರುವುದು ಸಂತ್ರಸ್ತ ರೈತರಲ್ಲಿ ಆತಂಕ ಮೂಡಿಸಿದೆ. ಇದು ‘ಮೂರು ಕಾಸಿನ ಪರಿಹಾರ’ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಎಕರೆಗೆ 2ರಿಂದ 4 ಲಕ್ಷ ರೂ.ವರೆಗೂ ಲಾಭ ತರಬಹುದಾಗಿದ್ದ ಬೆಳೆಗೆ ಕೇವಲ ಸಾವಿರ ರೂ. ಲೆಕ್ಕದಲ್ಲಿ ಪರಿಹಾರ ನೀಡಲು ಮುಂದಾಗಿರುವುದು, ನೆರೆ ಬಂದು ಎಲ್ಲವನ್ನೂ ಕಳೆದುಕೊಂಡಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮನೆ ಹಾನಿಗೆ ಎನ್‌ಡಿಆರ್‌ಎಫ್‌ ನಿಯಮಕ್ಕಿಂತ ಹೆಚ್ಚುವರಿ ಹಣ ಘೋಷಣೆ ಮಾಡಲಾಗಿದೆ ಎಂದಿರುವ ರಾಜ್ಯ ಸರಕಾರ, ಕೃಷಿ ಬೆಳೆ ಹಾನಿ ಪರಿಹಾರಕ್ಕೆ ಯಾವುದೇ ಹೊಸ ಮಾನದಂಡ ಅಥವಾ ಹೆಚ್ಚುವರಿ ಹಣ ಘೋಷಿಸಿಲ್ಲ. ಹಾಗಾಗಿ 2015ರ ಎನ್‌ಡಿಆರ್‌ಎಫ್‌ ಮಾನದಂಡವನ್ನೇ ಈಗಿನ ಬೆಳೆ ಹಾನಿ ಪರಿಹಾರಕ್ಕೆ ಪರಿಗಣಿಸಲಾಗಿದೆ. ಅದೇ ಪ್ರಕಾರ, ಜಿಲ್ಲಾಡಳಿತಗಳು ಪರಿಹಾರ ಅಂದಾಜು ನಡೆಸಿವೆ. ಅದರ ಪ್ರಕಾರ ಕಬ್ಬು, ಭತ್ತ, ಹೆಸರು ಸೇರಿ ಏಕವಾರ್ಷಿಕ ಬೆಳೆಯ ಹಾನಿ ಪರಿಹಾರ ಒಂದು ಎಕರೆಗೆ 2720 ರೂಪಾಯಿ, ಅಂದರೆ ಒಂದು ಗುಂಟೆಗೆ 68 ರೂ. ಮಾತ್ರ! ಬಹುವಾರ್ಷಿಕ ಬೆಳೆಗೆ ಒಂದು ಎಕರೆಗೆ 7200 ರೂ. (ಗುಂಟೆಗೆ 180 ರೂ.) ಅದೂ ಗರಿಷ್ಠ ಐದು ಎಕರೆವರೆಗೆ ಮಾತ್ರ. ಇಷ್ಟು ಕಡಿಮೆ ಹಣದಲ್ಲಿ ಹೊಸ ಬಿತ್ತನೆ ಬೀಜ ಖರೀದಿಸುವುದಿರಲಿ, ಹೊಲದಲ್ಲಿ ಬಿದ್ದಿರುವ ಕಸ ತೆಗೆಯುವುದಕ್ಕೂ ಸಾಲುವುದಿಲ್ಲ ಎಂಬುದು ರೈತರ ಚಿಂತೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಎಕರೆ ಕಬ್ಬು ಬಿತ್ತನೆಗೆ 60ರಿಂದ 70 ಸಾವಿರ ರೂ. ತಗಲುತ್ತದೆ. ಬೆಳೆ ಚೆನ್ನಾಗಿ ಬಂದರೆ ಗರಿಷ್ಠ 4 ಲಕ್ಷ ರೂ.ವರೆಗೆ ಉತ್ಪನ್ನ ಬರುತ್ತದೆ. ಕಬ್ಬು ಸೇರಿದಂತೆ ದ್ರಾಕ್ಷಿ, ದಾಳಿಂಬೆ, ಹೆಸರು ಹೀಗೆ ಎಲ್ಲ ರೀತಿಯ ಬೆಳೆಗಳು ಹಾನಿಗೊಳಗಾಗಿ ಹೊಲದಲ್ಲಿ ಕಸ ತುಂಬಿವೆ. ಅವುಗಳನ್ನು ತೆಗೆಯಲು ಒಂದು ಎಕರೆಗೆ ಕನಿಷ್ಠ ಐದು ಸಾವಿರ ರೂ. ಗಳಾದರೂ ಬೇಕು. ‘‘ಒಂದು ಚೀಲ ಕಬ್ಬು ಬಿತ್ತನೆ ಬೀಜ 3500 ರೂ. ಆಗಿದೆ. ಹಾಗಿರುವಾಗ ಎಕರೆಗೆ 2000, 2500ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅಂಥ ಪರಿಹಾರವೂ ಬೇಕಿಲ್ಲ,’’ ಎನ್ನುವುದು ಬೆಳಗಾವಿಯ ರೈತ ಶಿವು ಮುನ್ಯಾಳ ಆಕ್ರೋಶ. ಬೆಳೆಹಾನಿಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಮುಕ್ತಾಯ ಹಂತದಲ್ಲಿದೆ. ನೆರೆ ಸಂತ್ರಸ್ತರ ತಾತ್ಸಾರ, ಕೇಂದ್ರ-ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರನೆರೆ ಸಂತ್ರಸ್ತರ ತಾತ್ಸಾರ, ಕೇಂದ್ರ-ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಕೇರಳ ಹೆಚ್ಚಿಸಿತ್ತು: ಕಳೆದ ವರ್ಷ ಕೇರಳ ರಾಜ್ಯವೂ ಪ್ರವಾಹದಿಂದ ಭೀಕರ ಹಾನಿಗೆ ಒಳಗಾಗಿತ್ತು. 56 ಸಾವಿರ ಹೆಕ್ಟೇರ್‌ ಕೃಷಿ ಪ್ರದೇಶದ ಬೆಳೆ ನಾಶವಾಗಿತ್ತು. ಆಗ ಅಲ್ಲಿನ ಸರಕಾರ ಪ್ರವಾಹ ಬಾಧಿತ ಎಲ್ಲ ಕುಟುಂಬಗಳಿಗೆ ತಲಾ 10 ಸಾವಿರ ರೂ. ತಾತ್ಕಾಲಿಕ ನೆರವು ಕೊಟ್ಟಿತ್ತು. ಜತೆಗೆ ಬೆಳೆ ವಿಮೆ ಇರುವ ರೈತರಿಗೆ ಒಂದು ಹೆಕ್ಟೇರ್‌ಗೆ 35 ಸಾವಿರ ರೂ. ಹಾಗೂ ವಿಮೆ ಇಲ್ಲದ ಬೆಳೆಗೆ 13,500 ರೂ. ಕೊಟ್ಟಿದೆ.


from India & World News in Kannada | VK Polls https://ift.tt/2mM4ekq

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ರಾಹುಲ್‌ ಲಾಬಿ: ಕೇರಳ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಸಂಸದ

ನನ್ನದು ತಂತಿಯ ಮೇಲಿನ ನಡಿಗೆ: ಬಿಎಸ್‌ವೈ

ನೆಹರು ಎಸಗಿದ ‘ಹಿಮಾಲಯನ್‌ ಬ್ಲಂಡರ್‌’: ಅಮಿತ್‌ ಶಾ

ಭಾಷಣಕ್ಕೆ ಐಐಟಿಗರ ಸಲಹೆ ಕೋರಿದ ಪ್ರಧಾನಿ

ಬಿಹಾರ, ಉ.ಪ್ರದೇಶದಲ್ಲಿ ಕುಂಭದ್ರೋಣ ಮಳೆ: 4 ದಿನದಲ್ಲಿ100 ಜನ ಸಾವು!

ತೇಜ್‌ಪ್ರತಾಪ್‌ ದಾಂಪತ್ಯ ಬದುಕು ಹಾಳಾಗಲು ಅಕ್ಕ ಮೀಸಾ ಕಾರಣ!: ಐಶ್ವರ್ಯ ಆರೋಪ

ಪ್ರೊ ಕಬಡ್ಡಿ ಲೀಗ್‌: ದಬಾಂಗ್‌ ಡೆಲ್ಲಿ ಎದುರು ಪಲ್ಟಿ ಹೊಡೆದ ಪುಣೇರಿ ಪಲ್ಟನ್‌

ಪಂಚಕುಲ (ಹರಿಯಾಣ): ಹೈಸ್ಕೋರಿಂಗ್‌ನಿಂದ ಕೂಡಿದ್ದ ಹೈ ವೋಲ್ಟೇಜ್‌ ಕದನದಲ್ಲಿ ಯುವ ರೇಡರ್‌ ನವೀನ್‌ ಕುಮಾರ್‌ ನೀಡಿದ ಭರ್ಜರಿ ಪ್ರದರ್ಶನದ ಬಲಿಂದ ಅಬ್ಬರಿಸಿದ ತಂಡ ಅಪಾಯಕಾರಿ ಪಡೆಯನ್ನು ಬಗ್ಗುಬಡಿದು ಸೀಸನ್‌ 7ರಲ್ಲಿನ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು. ಇಲ್ಲಿನ ತಾವ್‌ ದೇವಿ ಲಾಲ್‌ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್‌ ಡೆಲ್ಲಿ ತಂಡ 60-40 ಅಂಕಗಳಿಂದ ಪಲ್ಟನ್‌ ಪಡೆಯನ್ನು ಪಲ್ಟಿ ಹೊಡೆಯುವಂತೆ ಮಾಡಿತು. ಈಗಾಗಲೇ ರಲ್ಲಿ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಪಡೆದುಕೊಂಡಿರುವ ಡೆಲ್ಲಿ ತಂಡ, ಈ ಜಯದೊಂದಿಗೆ ಆಡಿದ 19 ಪಂದ್ಯಗಳಿಂದ 15 ಗೆಲುವು ತಲಾ 2 ಡ್ರಾ ಮತ್ತು ಸೋಲಿನೊಂದಿಗೆ 82 ಅಂಕಗಳನ್ನು ದಾಖಲಿಸಿದೆ. ಪಂದ್ಯದಲ್ಲಿ ಮಿಂಚಿನ ದಾಳಿಗಳೊಂದಿಗೆ ಕಂಗೊಳಿಸಿದ ಯುವ ರೇಡರ್‌ ನವೀನ್‌ ಕುಮಾರ್‌, 15 ಟಚ್‌ ಮತ್ತು 4 ಬೋನಸ್‌ ಅಂಕಗಳೊಂದಿಗೆ ಒಟ್ಟು 19 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಮತ್ತೊಬ್ಬ ರೇಡರ್‌ ಚಂದ್ರನ್‌ ರಂಜಿತ್‌ 12 ಅಂಕಗಳ ಅತ್ಯಮೂಲ್ಯ ಕೊಡುಗೆ ನೀಡಿದರು. ಡಿಫೆನ್ಸ್‌ ವಿಭಾಗದಲ್ಲೂ ಎದುರಾಳಿ ರೇಡರ್‌ಗಳ ಪ್ರಯತ್ನವನ್ನು ವಿಫಲವನ್ನಾಗಿಸಿದ ಅನುಭವಿ ಡಿಫೆಂಡರ್‌ ರವೀಂದ್ರ ಪಹಲ್‌ 6 ಅಂಕಗಳನ್ನು ಗಳಿಸಿದರೆ, ಅವರಿಗೆ ಅಮಿತ್‌ ಕುಮಾರ್‌ (3 ಅಂಕ) ಅವರಿಂದ ಉತ್ತಮ ಜೊತೆಗಾರಿಕೆ ಲಭ್ಯವಾಯಿತು. ದಬಾಂಗ್‌ ತನ್ನ ಮುಂದಿನ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ ಸ್ಟಾರ್‌ ಆಟಗಾರರನ್ನೇ ಹೊಂದಿರುವ ಪುಣೇರಿ ಪಲ್ಟನ್‌ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದು, ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ ನಾಕ್‌ಔಟ್‌ ರೇಸ್‌ನಿಂದ ಬಹುತೇಕ ಹೊರಬಿದ್ದಾಗಿದೆ. ಆಡಿದ 20 ಪಂದ್ಯಗಳಲ್ಲಿ 11 ಸೋಲು, 6 ಗೆಲುವು ಮತ್ತು 3 ಸೋಲಿನೊಂದಿಗೆ 42 ಅಂಕಗಳನ್ನು ಗಳಿಸಿದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಪಂದ್ಯದಲ್ಲಿ ರೇಡರ್‌ಗಳಾದ ನಿತಿನ್‌ ಥೋಮರ್‌ (7) ಮತ್ತು ಮಂಜೀತ್‌ (5) ಹೆಚ್ಚೇನು ಗಮನ ಸೆಳೆಯದ ಪರಿಣಾಮ ತಂಡ ಸೋಲಿನ ಸುಳಿಯಲ್ಲಿ ಮುಳುಗುವಂತಾಯಿತು. ಆದರೆ, ಡಿಫೆನ್ಸ್‌ ವಿಭಾಗದಲ್ಲಿ ಬಾಲಾಸಾಹೇಬ್‌ ಜಾಧವ್‌ 6 ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆಯಲಷ್ಟೇ ಶಕ್ತರಾದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2nKqg6X

ಟೀಮ್‌ ಇಂಡಿಯಾ ಪ್ರವಾಸಕ್ಕೂ ಮುನ್ನ ಎಚ್ಚರಿಕೆ ರವಾನಿಸಿದ ಬಾಂಗ್ಲಾ ನಾಯಕ!

ಢಾಕಾ: ಇತ್ತೀಚೆಗಷ್ಟೇ ತವರು ನೆಲದಲ್ಲಿ ಕ್ರಿಕೆಟ್‌ ಕೂಸು ಅಫಘಾನಿಸ್ತಾನ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ತಂಡ ಹೀನಾಯ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ತಂಡದ ನಾಯಕ ತಮ್ಮ ಟೆಸ್ಟ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದರು. ಬಾಂಗ್ಲಾ ವಿರುದ್ಧದ ಟೆಸ್ಟ್‌ ಸೋಲಿಗೂ ಮುನ್ನ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಬಾಂಗ್ಲಾ ಹುಲಿಗಳಿಗೆ ವೈಟ್‌ವಾಷ್‌ ಸೋಲಿನ ಮುಖಭಂಗ ಎದುರಾಗಿತ್ತು. ಬಳಿಕ ತ್ರಿಕೋನ ಟಿ20 ಕ್ರಿಕೆಟ್‌ ಸರಣಿಯಲ್ಲಿ ಫೈನಲ್‌ ತಲುಪಿದರೂ, ಮಳೆಯಿಂದಾಗಿ ಫೈನಲ್‌ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಟ್ರೋಫಿ ಹಂಚಿಕೊಂಡಿತ್ತು. ಇದೀಗ ಶಕಿಬ್‌ ಅಲ್‌ ಹಸನ್‌ ಸಾರಥ್ಯದ ಬಾಂಗ್ಲಾದೇಶ ತಂಡ ನವೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ20 ಮತ್ತು ಭಾಗವಾಗಿ 2 ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಕುರಿತಾಗಿ ಮಾತನಾಡಿರುವ ಕ್ಯಾಪ್ಟನ್‌ ಶಕಿಬ್‌, ತಮ್ಮ ತಂಡ ತನ್ನ ಈಹಿಂದಿನ ಛಪನ್ನು ಮರಳಿ ಕಂಡುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. "ನಮ್ಮದು ಅತ್ಯುತ್ತಮ ತಂಡವೆಂದು ನಂಬಿದ್ದೇವೆ. ಜಗತ್ತಿನ ಎಲ್ಲಾ ತಂಡಗಳು ಕೂಡ ಬದಲಾವಣೆಯ ಹಂತವನ್ನು ಹಾದು ಹೋಗಬೇಕಾಗುತ್ತದೆ, ಇದೀಗ ನಮ್ಮ ತಂಡದ ಸರದಿ. ಬದಲಾವಣೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಹಿಂದೆ ನೀಡುತ್ತಿದ್ದ ಭರ್ಜರಿ ಪ್ರದರ್ಶನವನ್ನು ಮರಳಿಕಂಡುಕೊಳ್ಳಲಿದ್ದೇವೆ. ನಮ್ಮ ದೇಶಕ್ಕೆ ಮತ್ತೆ ಹೆಮ್ಮೆ ತಂದುಕೊಡುತ್ತೇವೆಂಬ ಭರವಸೆ ಇದೆ," ಎಂದು ಬಾಂಗ್ಲಾದೇಶ ಟೆಸ್ಟ್‌ ಮತ್ತು ಟಿ20 ತಂಡದ ನಾಯಕ ಭಾರತ ವಿರುದ್ಧದ ಸರಣಿಗೂ ಮುನ್ನ ಎಚ್ಚರಿಕೆ ರವಾನಿಸಿದ್ದಾರೆ. ಇದೇ ವರ್ಷ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಬಾಂಗ್ಲಾದೇಶ ನಿರಾಸೆ ಅನುಭವಿಸಿತ್ತು. ಟೂರ್ನಿಯಲ್ಲಿ ಸೆಮಿಫೈನಲ್ಸ್‌ ತಲುಪುವ ಆತ್ಮವಿಶ್ವಾಸದಲ್ಲಿದ್ದ ಬಾಂಗ್ಲಾ ಪಡೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಆದರೆ, ತಂಡದ ಸ್ಟಾರ್‌ ಆಲ್‌ರೌಂಡರ್‌ ಶಾಕಿಬ್‌ ತಂಡದ ಪರ ವಿಶ್ವಕಪ್‌ನಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡಿದ್ದರು. ಆಡಿದ 8 ಪಂದ್ಯಗಳಿಂದ ಶಾಕಿಬ್‌ 600+ ರನ್‌ಗಳನ್ನು ಗಳಿಸಿದರೆ, ಬೌಲಿಂಗ್‌ನಲ್ಲೂ ಮಿಂಚುವ ಮೂಲಕ 10+ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿ ಟೂರ್ನಿಯ ಶ್ರೇಷ್ಠ ಆಲ್‌ರೌಂಡರ್‌ ಆಗಿ ಹೊರಹೊಮ್ಮಿದ್ದರು. ಶಾಕಿಬ್‌ ಹೊರತಾಗಿ ಉಳಿದಾವ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದಕಾರಣ ನಾಕ್‌ಔಟ್‌ ಅರ್ಹತೆ ಪಡೆಯುವಲ್ಲಿ ವಿಫಲಗೊಂಡಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2m7HNpt

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಗೊಳ್ಳಲಿ- ಡಿಸಿಎಂ ಅಶ್ವಥ್ ನಾರಾಯಣ

ಚಿಕ್ಕಬಳ್ಳಾಪುರ: ಬಿಜೆಪಿ ಸೇರ್ಪಡೆ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಮಾತನಾಡಿದ ಅವರು ಅನರ್ಹ ಶಾಸಕರು ಇನ್ನೂ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ಧಾರೆ. ಇದೇ ವೇಳೆ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಕುರಿತಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, 15 ವಿಧಾಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲುವನ್ನು ಸಾಧಿಸುತ್ತದೆ ಎಂದಿದ್ದಾರೆ. ಇನ್ನು ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ಪ್ರತ್ಯೇಕವಾಗಿ ವಿಜಯನಗರ ಜಿಲ್ಲೆ ರಚಿಸುವ ರಾಜ್ಯ ಬಿಜೆಪಿ ಸರ್ಕಾರದ ಪ್ರಸ್ತಾಪವನ್ನು ಸಮರ್ಥಿಸಿಕೊಂಡ ,ವಿಜಯನಗರ ಇತಿಹಾಸ ಪ್ರಸಿದ್ದ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ. ಈ ಕಾರಣಕ್ಕಾಗಿ ವಿಜಯನಗರ ಒಂದು ಜಿಲ್ಲೆಯಾಗಿ ಬೆಳೆಯುವ ನಿಟ್ಟಿನಲ್ಲಿ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಬೇಕು ಎಂದಿದ್ದಾರೆ. ವಿಜಯನಗರ ಜಿಲ್ಲೆಯಾಗಿ ಮಾಡೋ ಕಾರ್ಯಕ್ಕೆ ನಾವು ಸಜ್ಜಾಗಿದ್ದೇವೆ, ಆ ದಾರಿಯಲ್ಲಿ ಮುಂದೆ ಸಾಗುತ್ತೇವೆ. ವಿರೋಧ ವ್ಯಕ್ತಪಡಿಸುವುದು ಅವರವರ ಭಾವನೆಯಾಗಿದೆ. ಮುಖ್ಯಮಂತ್ರಿಗಳು ಒಳ್ಳೆ ನಿಲುವು ತೆಗೆದುಕೊಳ್ಳಲಿದ್ದಾರೆ. ಒಳ್ಳೆ ಕಾರ್ಯಗಳು ಆಗಬೇಕಿದೆ ಎಂಬುವುದು ಆ ಭಾಗದ ಜನರ ಬೇಡಿಕೆ ಆಗಿದೆ. ಜನರ ಬೇಡಿಕೆ ಈಡೇರಿಸೋದು ಸರಕಾರದ ಕರ್ತವ್ಯವಾಗಿದ್ದು ಮುಖ್ಯಮಂತ್ರಿ ಗಳ ನಿಲುವಿನಂತೆ ಅನುಷ್ಠಾನ ಮಾಡೋ ಕೆಲಸ ಮಾಡುತ್ತೇವೆ ಎಂದರು. ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ಪ್ರತ್ಯೇಕವಾಗಿ ವಿಜಯನಗರ ಜಿಲ್ಲೆ ರಚಿಸುವ ರಾಜ್ಯ ಬಿಜೆಪಿ ಸರಕಾರದ ಪ್ರಸ್ತಾಪಕ್ಕೆ, ಬಳ್ಳಾರಿ ಭಾಗದ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮಶೇಖರ ರೆಡ್ಡಿ ಬಳಿಕ ಇದೀಗ ಅವರ ಸಹೋದರ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಕೂಡಾ ಮುಖ್ಯಮಂತ್ರಿ ಯಡಿಯೂರಪ್ಪ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೂತನ ಜಿಲ್ಲೆ ರಚನೆ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/2nIJutD

ಅನಗತ್ಯವಾಗಿ ಕ್ಯಾತೆ ತೆಗೆಯೊ ಪಾಕಿಸ್ತಾನಕ್ಕೆ ಮಾತಿನ ಚಾಟಿಯೇಟು ನೀಡಿದ ಗಬ್ಬರ್‌!

ಹೊಸದಿಲ್ಲಿ: ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಸಲಹೆ ನೀಡಿರುವ ಕುರಿತಾಗಿ ಮಾತನಾಡಿರುವ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ , ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಖಡಕ್‌ ಉತ್ತರ ನೀಡಿದ್ದಾರೆ. ಟೆಲಿವಿಷನ್‌ ಕಾರ್ಯಕ್ರಮ 'ಆಪ್‌ ಕಿ ಅದಾಲತ್‌'ನಲ್ಲಿ ಪಾಲ್ಗೊಂಡಿದ್ದ 'ಗಬ್ಬರ್‌' ಖ್ಯಾತಿಯ ಎಡಗೈ ಬ್ಯಾಟ್ಸ್‌ಮನ್‌ ಧವನ್‌, ತಾಯ್ನಾಡಿನ ಕುರಿತಾಗಿ ವಿದೇಶಿಗರು ಮಾತನಾಡಿದರೆ ಖಂಡಿತವಾಗಿಯೂ ತಾವು ಅದನ್ನು ವಿರೋಧಿಸುವುದಾಗಿ ಹೇಳಿಕೊಂಡಿದ್ದಾರೆ. "ಯಾರೋ ಒಬ್ಬರು ನಮ್ಮ ದೇಶದ ಕುರಿತಾಗಿ ಇಲ್ಲಸಲ್ಲದನ್ನು ಮಾತನಾಡಿದರೆ ಖಂಡಿತವಾಗಿಯೂ ಅವರ ವಿರುದ್ಧವಾಗಿ ನಿಲ್ಲುತ್ತೇನೆ. ಬೇರೊಬ್ಬರು ನಮಗೆ ಸಲಹೆ ನೀಡುವ ಅಗತ್ಯ ಖಂಡಿತವಾಗಿಯೂ ಇಲ್ಲ. ಮೊದಲು ನಿಮ್ಮ ದೇಶದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ ಬಳಿಕ ಬೇರೆಯವರ ಬಗ್ಗೆ ಮಾತನಾಡಿ. ಒಂದು ಗಾದೆ ಮಾತಿದೆ, ಯಾರ ಮನೆ ಗಾಜಿನಿಂದ ಮಾಡಿರುವುದ್ದಾಗಿರುತ್ತೋ ಅವರು ಬೇರೆಯವರ ಮನೆಯ ಮೇಲೆ ಕಲ್ಲೆಸೆಯುವುದಿಲ್ಲ," ಎಂದು ಪಾಕಿಸ್ತಾನಕ್ಕೆ ಗಬ್ಬರ್‌ ಮಾತಿನ ಚಾಟಿಯೇಟು ನಿಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರ ಕುರಿತಾಗಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಧವನ್‌, ಭಾರತದ ವಿಚಾರದಲ್ಲಿ ಬೇರೆಯವರು ಸಲಹೆ ನೀಡುವ ಅಗತ್ಯವಿಲ್ಲ ಎಂದು ಗುಡುಗಿದ್ದರು. ಈ ಮಧ್ಯೆ ಸತತ ವೈಫಲ್ಯಗಳಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿರುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಪರವಾಗಿಯೂ ಧವನ್‌ ಬ್ಯಾಟ್‌ ಬೀಸಿದ್ದಾರೆ. ಕಳಪೆ ಶಾಟ್‌ ಸೆಲೆಕ್ಷನ್‌ ಮತ್ತು ಪಂದ್ಯವನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ಮಾತ್ರವೇ ಅವರು ಟೀಕೆ ಎದುರಿಸುವಂತಾಗಿದೆ ಎಂದು ವಿವರಿಸಿದ್ದಾರೆ. "ಪಂತ್‌ ಪ್ರತಿಭಾನ್ವಿತ ಆಟಗಾರ. ಭಾರತ ತಂಡದಲ್ಲಿ ಅವರು ದೀರ್ಘಕಾಲದ ವರೆಗೆ ಉಳಿಯಲಿದ್ದಾರೆ ಎಂಬ ವಿಶ್ವಾಸ ನನ್ನಲ್ಲಿದೆ. ಇದಕ್ಕಾಗಿ ಅವರು ಕಷ್ಟಪಡುತ್ತಿದ್ದಾರೆ ಕೂಡ. ಕೆಲ ಸಂದರ್ಭಗಳಲ್ಲಿ ನೀವು ರನ್‌ ಗಳಿಸದೇ ಇದ್ದರೂ ಅದರಿಂದ ಕಲಿಯುವ ಪಾಠ ಬಹಳಷ್ಟಿರುತ್ತದೆ. ಇದು ಪ್ರತಿಯೊಬ್ಬರನ್ನೂ ಎದುರಾಗುತ್ತದೆ. ಇದರಿಂದ ಪಂತ್‌ ಕೂಡ ಪಾಠ ಕಲಿಯುತ್ತಾರೆ ಎಂಬ ವಿಶ್ವಾಸವಿದೆ," ಎಂದು ಪಂತ್‌ ಪರವಾಗಿ ವಿಶ್ವಾದ ಮಾತುಗಳನ್ನಾಡಿದ್ದಾರೆ. ಸೀಮಿತ ಓವರ್ಗಳಲ್ಲಿ ಭಾರತ ತಣಡದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಶಿಖರ್‌ ಧವನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಇದೀಗ ಭಾರತ ತಂಡ ಅಕ್ಟೋಬರ್‌ 2ರಿಂದು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದ್ದು, ತಂಡದಿಂದ ಹೊರಬಿದ್ದಿರುವ ಧವನ್‌ ದಿಲ್ಲಿ ಪರ ವಿಜಯ್‌ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2onl3CJ

ಜಸ್‌ಪ್ರೀತ್‌ ಬುಮ್ರಾ ಗಾಯದ ಸಮಸ್ಯೆಗೆ ನೈಜ ಕಾರಣ ಕೊಟ್ಟ ಮಾಜಿ ವೇಗಿ ಆಶೀಶ್‌ ನೆಹ್ರಾ!

ಹೊಸದಿಲ್ಲಿ: ಭಾರತ ತಂಡ ತವರು ನೆಲದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್‌ಗಳ ಸರಣಿಯನ್ನಾಡಲು ಸಜ್ಜಾಗುತ್ತಿದೆ. ಆದರೆ, ಸರಣಿ ಆರಂಭಕ್ಕೂ ಮೊದಲೇ ಪ್ರಮುಖ ವೇಗದ ಬೌಲರ್‌ ಗಾಯದ ಸಮಸ್ಯೆ ಕಾರಣ ಸರಣಿಯಿಂದ ಹೊರಗುಳಿಯುವಂತಾದ ಸುದ್ದಿ ಬರ ಸಿಡಿಲಿನಂತೆ ಅಬ್ಬರಿಸಿತ್ತು. ಆಟಗಾರರ ಸಾಮಾನ್ಯ ತಪಾಸಣೆ ವೇಳೆ ಬುಮ್ರಾ ಅವರ ಬೆನ್ನಿನ ಕೆಳ ಭಾಗದಲ್ಲಿ ಸ್ಟ್ರೆಸ್‌ ಫ್ರ್ಯಾಕ್ಚರ್‌ ಆಗಿರುವುದು ಬೆಳಕಿಗೆ ಬಂದಿತ್ತು. ಅಂದಹಾಗೆ ಬುಮ್ರಾ ಅವರ ಈ ಗಾಯದ ಸಮಸ್ಯೆಗೂ ಅವರ ವಿಭಿನ್ನ ಬೌಲಿಂಗ್‌ ಶೈಲಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಟೀಮ್‌ ಇಂಡಿಯಾದ ಮಾಜಿ ವೇಗದ ಬೌಲರ್‌ ಸ್ಪಷ್ಟಪಡಿಸಿದ್ದಾರೆ. ಬುಮ್ರಾ ಕೊಂಚ ಗಂಭೀರವಾಗಿರುವ ಕಾರಣ ಕನಿಷ್ಠ ಎರಡು ತಿಂಗಳ ವಿಶ್ರಾಂತಿ ಪಡೆಯಲಿದ್ದಾರೆ. ಇದರೊಂದಿಗೆ 2019ರಲ್ಲಿ ನಡೆಯಲಿರುವ ಎಲ್ಲಾ ಟೆಸ್ಟ್‌ ಸರಣಿಗಳಿಂದಲೂ ಬುಮ್ರಾ ಹೊರಗುಳಿಯುವಂತಾಗಿದೆ. ಆದರೂ, ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿ ಹೊತ್ತಿಗೆ ಬುಮ್ರಾ ತಂಡಕ್ಕೆ ಮರಳುವ ಸಾಧ್ಯತೆ ಇದೆ. "ಬೌಲಿಂಗ್‌ ಶೈಲಿಗೂ ಸ್ಟ್ರೆಸ್‌ ಫ್ರ್ಯಾಕ್ಚರ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಈ ಸಲುವಾಗಿ ಅವರು ತಮ್ಮ ಬೌಲಿಂಗ್‌ ಶೈಲಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವೇ ಇಲ್ಲ. ಅವರು ಈ ರೀತಿ ಮಾಡಿದ್ದೇ ಆದರೆ ಅವರಿಗೇ ನಷ್ಟವಾಗುತ್ತದೆ. ಅವರು ಗಾಯದ ಸಮಸ್ಯೆಯಿಂದ ಹೊರ ಬಂದ ಬಳಿಕವೂ ತಮ್ಮ ಎಂದಿನ ಶೈಲಿಯಲ್ಲೇ ಭರ್ಜರಿ ವೇಗದೊಂದಿಗೆ ಬೌಲಿಂಗ್‌ ಮುಂದುವರಿಸುತ್ತಾರೆ ಎಂದು ಭರವಸೆ ನೀಡಬಲ್ಲೆ," ಎಂದು ಬುಮ್ರಾ ಗಾಯದ ಸಮಸ್ಯೆ ಕುರಿತಾಗಿ ನೆಹ್ರಾ ಮಾತನಾಡಿದ್ದಾರೆ. "ಅವರ ಬೌಲಿಂಗ್‌ ಶೈಲಿ ವಿಭಿನ್ನವಾಗಿದೆ. ಆದರೆ, ಚೆಂಡನ್ನು ಎಸೆಯುವ ಸಂದರ್ಭದಲ್ಲಿ ಅವರ ದೇಹದ ವಿನ್ಯಾಸ ಅತ್ಯುತ್ತಮ ರೀತಿಯಲ್ಲಿದೆ. ಜಾವೆಲಿನ್‌ ಎಸೆತಗಾರನಂತಿರುವ ಲಸಿತ್‌ ಮಾಲಿಂಗ ಅವರ ಶೈಲಿಗಿಂತಲೂ ಬುಮ್ರಾ ಶೈಲಿ 10 ಪಟ್ಟು ಉತ್ತಮವಾಗಿದೆ.. ಇನ್ನು ಸ್ಟ್ರೆಸ್‌ ಫ್ರ್ಯಾಕ್ಚರ್‌ ಕುರಿತಾಗಿ ಮಾತನಾಡುವುದಾದರೆ ಇಂತಿಷ್ಟೇ ಅವಧಿಯಲ್ಲಿ ಅದು ಗುಣವಾಗುತ್ತದೆ ಎಂದು ಹೇಳಲಾಗದು. ಇನ್ನೆರಡು ತಿಂಗಳಲ್ಲಿ ಜಸ್‌ಪ್ರೀತ್‌ ಉತ್ತಮ ಅನುಭವ ಪಡೆಯಬಹುದು. ಅಥವಾ ಇನ್ನು 6 ತಿಂಗಳಾದರೂ ನೋವು ಉಳಿಯಬಹುದು. ಅಂದಹಾಗೆ ತಾನು ಶೇ.100ರಷ್ಟು ಸಜ್ಜಾಗಿದ್ದೇನೆ ಎಂಬುದು ಬೌಲರ್‌ಗಷ್ಟೇ ತಿಳಿಯುತ್ತದೆ," ಎಂದು ವಿವರಿಸಿದ್ದಾರೆ. ಈ ಈತಿಯ ಬೆನ್ನು ನೋವಿನ ಸಮಸ್ಯೆಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ನೀಡಲಾಗುವುದಿಲ್ಲ. ಹೀಗಾಗಿ ಪುನಶ್ಚೇತನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿ ಅತ್ಯಂತ ಪ್ರಮುಖವಾಗುತ್ತದೆ ಎಂದು ನೆಹ್ರಾ ಹೇಳಿದ್ದಾರೆ. "ಸ್ಟ್ರೆಸ್‌ ಫ್ರ್ಯಾಕ್ಚರ್‌ಗೆ ಇಂಥದ್ದೇ ಔಷಧವೆಂದು ಇಲ್ಲ. ವಿಶ್ರಾಂತಿ ಮತ್ತು ಪುನಶ್ಚೇತನವೇ ಇದಕ್ಕೆ ಮದ್ದು," ಎಂದಿದ್ದಾರೆ. "ವಿಶ್ವಕಪ್‌ ಬಳಿಕ ಬುಮ್ರಾ ವಿಶ್ರಾಂತಿ ಪಡೆದಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ವೈಟ್‌ಬಾಲ್‌ ಕ್ರಿಕೆಟ್‌ನಿಂದ ದೂರ ಉಳಿದು ಟೆಸ್ಟ್‌ ಕ್ರಿಕೆಟ್‌ಗೆ ಮರಳಿದ್ದರು. ಇದರರ್ಥ ಅವರ ಮೇಲಿನ ಹೊರೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಆದರೂ ಈ ರೀತಿಯ ಸಮಸ್ಯೆ ಎದುರಾಗಿದೆ. ಇದಕ್ಕೆ ಕಾರಣ ಏನೆಂದು ವಿವರಿಸಲು ಸಾಧ್ಯವೇ?," ಎಂದು ನೆಹ್ರಾ ಪ್ರಶ್ನಿಸಿದ್ದಾರೆ. "ಸ್ಕ್ಯಾನ್‌ಗಳಿಗೆ ಆಟಗಾರರನ್ನು ಒಳಪಡಿಸಲಾಗಿರಲಿಲ್ಲವೆ? ಏಕೆಂದರೆ ಆಟಗಾರರಿಗೆ ಆರಂಭದಲ್ಲಿ ಈ ರೀತಿಯ ಗಾಯದ ಸಮಸ್ಯೆ ಅರಿವಿಗೆ ಬಂದಿರುವುದಿಲ್ಲ. ಮೂಳೆಗಳ ಸ್ಕ್ಯಾನ್‌ ಮಾಡಿದ ಬಳಿಕವಷ್ಟೇ ಅದನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಕೇವಲ ಎಂಆರ್‌ಐನಿಂದ ಇದು ಸಾಧ್ಯವಿಲ್ಲ. ವೇಗದ ಬೌಲಿಂಗ್‌ ಅತ್ಯಂತ ದಣಿವಿನ ಕೆಲಸ. ಹೀಗಾಗಿ ವೇಗಿಗಳ ಮೂಳೆಗಳ ಸ್ಕ್ಯಾನ್‌ ಮಾಡಿಸಿದರೆ ಎಲ್ಲಿ ಗಾಯದ ಸಮಸ್ಯೆ ಉದ್ಭವಿಸುತ್ತಿದೆ ಎಂಬುದನ್ನು ಪತ್ತೆ ಮಾಡಬಹುದು. ಅಂತಹ ಸಂದರ್ಭದಲ್ಲಿ ವಿಶ್ರಾಂತಿ ತೆಗೆದುಕೊಂಡು ಗಾಯದ ಸಮಸ್ಯೆ ನಿರ್ವಹಿಸುವ ಅಗತ್ಯವಿರುತ್ತದೆ," ಎಂದು ವಿವರಣೆ ನೀಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2m3RXaB

ಯಾವುದೇ 'ಸನ್ನಿವೇಶ' ಎದುರಾದರೂ ಭಾರತೀಯ ನೌಕಾಪಡೆ ಸನ್ನದ್ಧ: ರಾಜನಾಥ್ ಸಿಂಗ್

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಿಂದ: ಯಾವುದೇ ರೀತಿಯ ಭದ್ರತಾ ಸವಾಲನ್ನೂ ಎದುರಿಸಲು ಭಾರತೀಯ ನೌಕಾಪಡೆ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ಹೇಳಿದ್ದಾರೆ. ದೇಶದ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ನೌಕಾಪಡೆ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎಂದು ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳಬಲ್ಲೆ ಎಂದು ರಕ್ಷಣಾ ಸಚಿವರು ಭರವಸೆ ವ್ಯಕ್ತಪಡಿಸಿದ್ಧಾರೆ. ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಕುಳಿತು ಮಾತನಾಡಿದ ರಾಜನಾಥ್ ಸಿಂಗ್, ಯಾವುದೇ ಅನುಮಾನ, ಗೊಂದಲಗಳಿಗೆ ನೌಕಾಪಡೆಯಲ್ಲಿ ಜಾಗವೇ ಇಲ್ಲ ಎಂದಿದ್ದಾರೆ. ದೇಶದೊಳಗೆ ಅಸ್ಥಿರತೆ ಸೃಷ್ಟಿಸಲು, ದೇಶವನ್ನು ವಿಭಜಿಸಲು ಸದಾ ಪ್ರಯತ್ನಿಸುತ್ತಿದೆ. ಆದರೆ, ಭಾರತೀಯ ನೌಕಾಪಡೆ ಹಾಗೂ ತಟರಕ್ಷಣಾ ಪಡೆಗಳು ಸಾಗರ ತೀರದ ಎಲ್ಲಾ ಅಪಾಯಸಾಧ್ಯತೆಗಳನ್ನೂ ಹಿಮ್ಮೆಟ್ಟಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು 26/11ರ ಮುಂಬೈ ಮೇಲಿನ ದಾಳಿಯನ್ನು ಮರೆತಿಲ್ಲ ಎಂದು ನೆನಪಿಸಿಕೊಂಡ ರಕ್ಷಣಾ ಸಚಿವ ಸಿಂಗ್, ಆಗ ನೌಕಾಪಡೆ ವೈಫಲ್ಯದಿಂದಲೇ ಉಗ್ರರು ದೇಶದೊಳಗೆ ನುಗ್ಗಿದ್ದರು. ಮತ್ತೆ ಅದು ಪುನರಾವರ್ತನೆ ಆಗಬಾರದು. ಹೀಗಾಗಿ, ನೌಕಾಪಡೆ ಹಾಗೂ ತಟರಕ್ಷಣಾ ಪಡೆ ಸದಾ ಎಚ್ಚರವಾಗಿರಬೇಕೆಂದು ರಾಜನಾಥ್ ಸೂಚನೆ ನೀಡಿದರು.


from India & World News in Kannada | VK Polls https://ift.tt/2mMCJqE

ಯಾವ ಪುರುಷಾರ್ಥಕ್ಕೆ ವಿಜಯನಗರ ಜಿಲ್ಲೆ? ಬಿಎಸ್‌ವೈ ವಿರುದ್ಧ ಸಿಡಿದೆದ್ದ ಮತ್ತೊಬ್ಬ ಬಿಜೆಪಿ ಶಾಸಕ!

ಬಳ್ಳಾರಿ: ಜಿಲ್ಲೆಯನ್ನು ವಿಭಜನೆ ಮಾಡಿ ಪ್ರತ್ಯೇಕವಾಗಿ ಜಿಲ್ಲೆ ರಚಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ, ಮತ್ತೊಬ್ಬ ಬಿಜೆಪಿ ಶಾಸಕ ಸಿಡಿದೆದ್ದಿದ್ದಾರೆ. ಸೋಮಶೇಖರ ರೆಡ್ಡಿ ಬಳಿಕ ಇದೀಗ ಅವರ ಸಹೋದರ ಕೂಡಾ ಮುಖ್ಯಮಂತ್ರಿ ಯಡಿಯೂರಪ್ಪ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಹರಪನಹಳ್ಳಿ ಶಾಸಕ ಜಿ‌.ಕರುಣಾಕರ್ ರೆಡ್ಡಿ, ನೂತನ ಜಿಲ್ಲೆ ರಚನೆ ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಸೆಪ್ಟೆಂಬರ್ 19ರಂದು ವಿಜಯನಗರ ಜಿಲ್ಲೆ ಮಾಡ್ಬೇಕು ಅಂತ ಪತ್ರ ಬರೆದು, ಹೊಸ ಜಿಲ್ಲೆ ರಚನೆಗೆ ಮುಂದಾಗಿದ್ದಾರೆ. ಆ ಸಮಯದಲ್ಲಿ ನಾವು ಬಿಜೆಪಿಯಿಂದ ಗೆದ್ದಿದ್ದಿವೋ ಇಲ್ಲವೋ ಅನಿಸಿತ್ತು. ನಾವು ನಾಲ್ಕು ಜನ ಶಾಸಕರಿದ್ದೇವೆ, ನಮ್ಮ ಅಭಿಪ್ರಾಯ ಪಡೆಯಬೇಕಿತ್ತು. ಸಿಎಂ ಯಡಿಯೂರಪ್ಪ ಮೇಲೆ ನಮಗೆ ಅಪಾರ ಗೌರವ ಇದೆ, ಆದರೆ ಆತುರದ ನಿರ್ಧಾರ ಮಾಡ್ತಿದ್ದಾರೆ. ಕೆಲವರ ಹಿತಾಸಕ್ತಿಗೆ ಮಣಿದಿದ್ದಾರೆ. ಅದು ಸರಿಯಲ್ಲ ಎಂದು ಕರುಣಾಕರ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹಡಗಲಿ, ಹಗರಿಬೊಮ್ಮನ ಹಳ್ಳಿ, ಕೊಟ್ಟೂರು, ಹರಪನಹಳ್ಳಿ ಎಲ್ಲ ಕಡೆಗಳಲ್ಲೂ ಪ್ರತ್ಯೇಕ ಜಿಲ್ಲೆ ಆಗಬೇಕೆಂದು ಹೋರಾಟ ಆಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗುತ್ತಿದೆ. ಹಂಪಿ, ಟಿಬಿ ಡ್ಯಾಂ ನಮ್ಮ ಹೆಮ್ಮೆ. ಹೊಸಪೇಟೆ ಬಳ್ಳಾರಿಯಿಂದ ಕೇವಲ, 60 ಕಿಮೀ ದೂರದಲ್ಲಿದೆ. ಯಡಿಯೂರಪ್ಪ ಸಿಎಂ ಆಗಬೇಕಾದರೆ ನಾವು ಬೆಂಬಲ ಕೊಟ್ಟಿದ್ದೇವೆ. ಈಗ ನಮ್ಮನ್ನು ಪರಿಗಣಿಸಬೇಕಿದೆ ಎಂದು ಕರುಣಾಕರ ರೆಡ್ಡಿ ಆಗ್ರಹಿಸಿದ್ಧಾರೆ. ಬೆಳಗಾವಿ, ಶಿರಸಿಯಲ್ಲೂ ಜಿಲ್ಲೆ ಒಡೆಯುವ ಹೋರಾಟಗಳು ನಡೆಯುತ್ತಿವೆ, ದಯವಿಟ್ಟು ಜಿಲ್ಲೆ ಒಡೆಯಬೇಡಿ, ನಾವು ಒಗ್ಗಟ್ಟಾಗಿ ಇರಲು ಬಿಡಿ ಎಂದು ಕರುಣಾಕರ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ. ಹೊಸಪೇಟೆ ಬಿಟ್ಟು ಬೇರಾವುದಾದರೂ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಿ ಎಂದು ಕೇಳಿಕೊಂಡಿರುವ ಶಾಸಕ ಕರುಣಾಕರ ರೆಡ್ಡಿ, ಹರಪನಹಳ್ಳಿಯನ್ನೇ ಜಿಲ್ಲೆಯನ್ನಾಗಿ ಮಾಡುವಂತೆ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ಅಖಂಡವಾಗಿರಬೇಕು ಅನ್ನೋದೇ ನಮ್ಮ ಮೊದಲ ಆದ್ಯತೆ ಎಂದಿರುವ ಕರುಣಾಕರ ರೆಡ್ಡಿ, ಜಿಲ್ಲೆ ಮಾಡಲೇಬೇಕು ಎಂದಾದರೆ ಹರಪನಹಳ್ಳಿಯನ್ನು ಪರಿಗಣಿಸಿ ಎಂದು ಹೇಳಿದ್ದಾರೆ. ಆನಂದ್ ಸಿಂಗ್ ಮನವಿ ಪತ್ರ ಸಲ್ಲಿಸಿದ ಮರುದಿನವೇ ನೀವು ಪ್ರತಿಕ್ರಿಸಿದ್ದೀರಿ. ಆಗ ನಮ್ಮನ್ನು ಕರೆದು ಮಾತನಾಡಬೇಕಿತ್ತು. ಅವಸರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಆಗ್ರಹಿಸಿರುವ ಕರುಣಾಕರ ರೆಡ್ಡಿ, ವೈಜ್ಞಾನಿಕವಾಗಿ ಇದು ಸರಿಯಲ್ಲ. ಮೊದಲು ಕರೆದು ಮಾತನಾಡಲಿ ಎಂದಿದ್ದಾರೆ. ಇದೇ ವೇಳೆ ಜಿಲ್ಲೆ ಒಡೆಯೋದನ್ನು ವಿರೋಧಿಸಿ ಬಳ್ಳಾರಿ ಬಂದ್ ನಡೆಸಿದರೆ ನನ್ನ ಬೆಂಬಲ ಇದೆ ಎಂದು ಕರುಣಾಕರ ರೆಡ್ಡಿ ಹೇಳಿದ್ದಾರೆ.


from India & World News in Kannada | VK Polls https://ift.tt/2ok1Bqk

ಹಿತಾಸಕ್ತಿ ಸಂಘರ್ಷದ ತಲೆಬಿಸಿ, ಟೀಮ್‌ ಇಂಡಿಯಾ ಕೋಚ್‌ ರವಿಶಾಸ್ತ್ರಿ ಸ್ಥಾನಕ್ಕೂ ಕಂಟಕ!

ಹೊಸದಿಲ್ಲಿ: ಆಯ್ಕೆ ಸಲುವಾಗಿ ರಚಿಸಲಾಗಿದ್ದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ವಿರುದ್ಧವೂ ಇದೀಗ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಅವರನ್ನು ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಮರು ನೇಮಕ ಮಾಡುವು ಪ್ರಮೇಯ ಎದುರಾಗುವ ಸಾಧ್ಯತೆ ಇದೆ. ಮಾಜಿ ನಾಯಕ ಕಪಿಲ್‌ ದೇವ್‌ ಸಾರಥ್ಯದಲ್ಲಿ ಮಾಜಿ ಕ್ರಿಕೆಟಿಗ ಅನ್ಷುಮಾನ್‌ ಗಾಯಕ್ವಾಡ್‌ ಮತ್ತು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಅವರನ್ನೊಂಗೊಂಡ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯು, 2021ರ ಟಿ20 ವಿಶ್ವಕಪ್‌ ವರೆಗೆ ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಲ್ಲಿ ರವಿ ಶಾಸ್ತ್ರಿ ಮುಂದುವರಿಯಲು ಗ್ರೀನ್‌ ಸಿಗ್ನಲ್‌ ನೀಡಿದ್ದರು. ಲೋಧಾ ಸಮಿತಿಯ ಶಿಫಾರಸಿನ ಅನುಗುಣವಾಗಿ ಒಬ್ಬ ವ್ಯಕ್ತಿ ಒಂದು ಹುದ್ದೆಯನ್ನಷ್ಟೇ ಅಲಂಕರಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರಿಕೆಟ್‌ ಆಡಳಿತ ಸಮಿತಿಯ ಸದಸ್ಯರು ನಿಯಮ ಉಲ್ಲಂಘಿಸಿ ಬಹು ಹುದ್ದೆಗಳನ್ನು ಹೊಂದುವ ಮೂಲಕ ಎದುರಾಗುವಂತೆ ಮಾಡಿದ್ದಾರೆಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯರಾದ ಸಂಜೀವ್‌ ಗುಪ್ತಾ ದೂರು ದಾಖಲಿಸಿದ್ದಾರೆ. ದೂರಿನ ವಿಚಾರಣೆ ಕೈಗೊಂಡಿರುವ ಡಿ.ಕೆ ಜೈನ್‌, ಈ ವಿಚಾರವಾಗಿ ಸಿಎಸಿನ ಮೂವರು ಸದಸ್ಯರುಗಳಿಗೆ ನೋಟೀಸ್‌ ಜಾರಿಗೊಳಿಸಿ ಅಕ್ಟೋಬರ್‌ 10ರ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು ಹಿತಾಸಕ್ತಿ ಸಂಘರ್ಷದ ಗೊಂದಲದಿಂದಾಗಿ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ ತಮ್ಮ ಹುದ್ದೆಗೆ ಮರಳಿ ನೇಮಕವಾಗುವ ಪೀಕಲಾಟ ಎದುರಿಸಲಿದ್ದಾರೆ ಎಂದು ಹೇಳಿದ್ದಾರೆ. 2014-16ರಲ್ಲಿ ಟೀಮ್‌ ಇಂಡಿಯಾದ ಡೈರೆಕ್ಟರ್‌ ಆಗಿ ಕಾರ್ಯ ನಿರ್ವಹಿಸಿದ್ದ ರವಿ ಶಾಸ್ತ್ರಿ ಅವರನ್ನು 2017-2019ರ ಅವಧಿಗೆ ಭಾರತ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಬಳಿಕ 2021ರ ಟಿ20 ವಿಶ್ವಕಪ್‌ ಅವರೆಗೆ ಕೋಚ್‌ ಸ್ಥಾನದಲ್ಲಿ ಮುಂದುವರಿಯಲು ಮರಳಿ ಆಯ್ಕೆ ಮಾಡಲಾಗಿದೆ. "ಕ್ರಿಕೆಟ್‌ ಸಲಹಾ ಸಮಿತಿ ಸದಸ್ಯರು ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದರೆ ಅವರು ನೇಮಕ ಮಾಡಿರುವ ಮುಖ್ಯ ಕೋಚ್‌ ರವಿ ಶಾಸ್ತ್ರಿ ಕೂಡ ಮರಳಿ ನೇಮಕವಾಗುವ ಪ್ರಸಂಗ ಎದುರಾಗುತ್ತದೆ. ಬಳಿಕ ಬಿಸಿಸಿಐನ ನೂತನ ಸಂವಿಧಾನದ ಅನುಗುಣವಾಗಿಯೇ ನೇಮಕಾತಿ ನಡೆಯಬೇಕಿದೆ. ಇದರರ್ಥ ಮತ್ತೊಮ್ಮೆ ಕ್ರಿಕೆಟ್‌ ಸಲಹಾ ಸಮಿತಿ ರಚಿಸಿ ಕೋಚ್‌ ನೇಮಕಾತಿ ನಡೆಸುವಂತಾಗುತ್ತದೆ," ಎಂದಿದ್ದಾರೆ. ರಾಜೀನಾಮೆ ನೀಡಿದ ಶಾಂತಾ ರಂಗಸ್ವಾಮಿ!ಹಿತಾಸಕ್ತಿ ಸಂಘರ್ಷದ ನೋಟೀಸ್‌ ಸ್ವೀಕರಿಸುತ್ತಿದ್ದಂತೆಯೇ ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ, ಕ್ರಿಕೆಟ್‌ ಸಲಹಾ ಸಮಿತಿ ಮತ್ತು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ)ಯ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. "ನನ್ನ ಯೋಜನೆಗಳು ಬೇರೆಯದ್ದೇ ಇದೆ. ಹೀಗಾಗಿ ನನ್ನ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇನೆ. ಅಂದಹಾಗೆ ಸಿಎಸಿ ಕೆಲಸ ವರ್ಷದಲ್ಲಿ ಒಮ್ಮೆ ಅಥವಾ ಎರಡು ವರ್ಷಕ್ಕೆ ಒಮ್ಮೆ ನಡೆಯುವಂಥದ್ದು. ಇದರಲ್ಲಿ ಹಿತಾಸಕ್ತಿ ಸಂಘರ್ಷ ಎದುರಾಗುವುದಾದರೂ ಹೇಗೆ ಎಂಬುದು ನನಗೆ ಅರ್ಥವಾಗಲಿಲ್ಲ. ಸಿಎಸಿಯಲ್ಲಿ ಕೆಲಸ ಮಾಡಿದ್ದು ಗೌರವದ ಸಂಗತಿ," ಎಂದು ಶಾಂತಾ ರಂಗಸ್ವಾಮಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 1983ರಲ್ಲಿ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌, ಸಿಎಸಿ ಮುಖ್ಯಸ್ಥರಲ್ಲದೆ, ಕ್ರಿಕೆಟ್‌ ಕಾಮೆಂಟೇಟರ್‌, ಫ್ಲಡ್‌ಲೈಟ್‌ ಸಂಸ್ಥೆಯ ಮಾಲೀಕ ಮತ್ತು ಇಂಡಿಯನ್‌ ಕ್ರಿಕೆಟರ್ಸ್‌ ಅಸೋಸಿಯೇಷನ್‌ನ ಸದಸ್ಯರೂ ಆಗುವ ಮೂಲಕ ಹಿತಾಸಕ್ತಿ ಸಂಘರ್ಷ ಎದುರಿಸುವಂತಾಗಿದೆ. ಮತ್ತೊಂದೆಡೆ ಅನ್ಷುಮಾನ್‌ ಗಾಯಕ್ವಾಡ್‌ ಕೂಡ ಕ್ರಿಕೆಟ್‌ ಅಕಾಡೆಮಿ ಹೊಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ocPivN

ಶತಕ ಸಿಡಿಸಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಅಪರೂಪದ ವಿಶ್ವ ದಾಖಲೆ ಬರೆದ ನೇಪಾಳ ಕ್ಯಾಪ್ಟನ್‌!

ಸಿಂಗಾಪುರ: ಮೌಂಟ್‌ ಎವರೆಸ್ಟ್‌ನ ತವರೂರು ನೇಪಾಳ ಪರ ಕ್ರಿಕೆಟ್‌ನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ದಾಖಲೆ ನಾಯಕ ಮುಡಿಗೇರಿದೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ 9 ವಿಕೆಟ್‌ ಜಯ ತಂದುಕೊಟ್ಟ ಖಾಕ್ಡಾ, ಪಂದ್ಯದಲ್ಲಿ ರನ್‌ ಚೇಸಿಂಗ್‌ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನೂ ಬರೆದಿದ್ದಾರೆ. ಶನಿವಾರ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಸಿಂಗಾಪುರ ತನ್ನ ಪಾಲಿನ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 151 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ನೇಪಾಳ ತಂಡ 16 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟದಲ್ಲಿ 154 ರನ್‌ಗಳನ್ನು ಚೆಚ್ಚಿ ವಿಜಯೋತ್ಸವ ಆಚರಿಸಿತು. ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಅನುಭವಿ ಬ್ಯಾಟ್ಸ್‌ಮನ್‌ ಖಾಕ್ಡಾ, ಕೇವಲ 52 ಎಸೆತಗಳಲ್ಲಿ ಅಜೇಯ 106 ರನ್‌ಗಳನ್ನು ಸಿಡಿಸಿ ವಿಶ್ವ ದಾಖಲೆಯೊಂದಿಗೆ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅವರ ಈ ಅದ್ಭುತ ಇನಿಂಗ್ಸ್‌ನಲ್ಲಿ 7 ಫೋರ್‌ ಮತ್ತು ಬರೋಬ್ಬರಿ 9 ಸಿಕ್ಸರ್‌ಗಳು ಮೂಡಿಬಂದವು. ಇದೇ ವೇಳೆ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿದ ಖಾಕ್ಡಾ, ಏಷ್ಯಾದ ನಾಲ್ಕನೇ ಅತ್ಯಂತ ವೇಗದ ಶತಕದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದೇ ವರ್ಷ ಆರಂಭದಲ್ಲಿ ನೇಪಾಳ ತಂಡದ ಯುವ ಪ್ರತಿಭೆ ರೋಹಿತ್‌ ಪೌದೆಲ್‌ (16 ವರ್ಷ, 146 ದಿನಗಳು), ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕದ ಬಾರಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಪಾಕಿಸ್ತಾನದ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ರೋಹಿತ್‌ ಈ ಸಾಧನೆ ಮಾಡಿದ್ದರು. ಸಂಕ್ಷಿಪ್ತ ಸ್ಕೋರ್‌ ಸಿಂಗಾಪುರ: 20 ಓವರ್‌ಗಳಲ್ಲಿ 151/3 (ಸುರೇಂದ್ರನ್‌ ಚಂದ್ರಮೋಹನ್‌ 35, ಟಿಮ್‌ ಡೇವಿಡ್‌ ಔಟಾಗದೆ 64, ಜಾನಕ್‌ ಪ್ರಕಾಶ್‌ ಔಟಾಗದೆ 25; ಕರಣ್‌ ಕೆಸಿ 34ಕ್ಕೆ 2). ನೇಪಾಳ: 16 ಓವರ್‌ಗಳಲ್ಲಿ 154/1 (ಪರಾಸ್‌ ಖಾಕ್ಡಾ ಅಜೇಯ 106, ಆರಿಫ್‌ ಶೇಖ್‌ 39, ಜಾನಕ್‌ ಪ್ರಕಾಶ್‌ 10ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2nCqBIW

'ಮಹಿಳಾ ಸಾಧಕಿಯರೇ ಮಹಾಲಕ್ಷ್ಮಿ'! ದೀಪಾವಳಿ ಲಕ್ಷ್ಮಿಪೂಜೆ ವೇಳೆ ಸಾಧಕಿಯರ ಸನ್ಮಾನಿಸಿ: ಮೋದಿ ಕರೆ

ಹೊಸ ದಿಲ್ಲಿ: ' ಬೇಟಿ ಬಚಾವೋ, ಬೇಟಿ ಪಡಾವೋ' ಬಳಿಕ ಇದೀಗ ಪ್ರಧಾನಿ ಹೊಸ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆ. ‘ಸೆಲ್ಫಿ ವಿತ್ ಡಾಟರ್’ ಅಭಿಯಾನದ ರೀತಿಯಲ್ಲೇ ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮೆರೆದ ಹೆಣ್ಣು ಮಕ್ಕಳನ್ನು ಗೌರವಿಸಲು, ಸನ್ಮಾನಿಸಲು ಪ್ರಧಾನಿ ಮೋದಿ ಕರೆ ನೀಡಿದ್ಧಾರೆ. ಈ ಬಾರಿಯ ದೀಪವಾಳಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಉಡುಗೊರೆ ಹಾಗೂ ಸಿಹಿಯನ್ನು ನೀಡಿ ಅವರ ಸಂತಸ ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಬ್ಬದಂದು ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸುವ ಸಂಪ್ರದಾಯವಿದೆ. ಸುಖ, ಸಮೃದ್ಧಿಯನ್ನು ನೀಡುವ ದೀಪಾವಳಿ ಹಬ್ಬದಂದು ಆರ್ಥಿಕವಾಗಿ ದುರ್ಬಲವಾಗಿರುವ ಹೆಣ್ಣು ಮಕ್ಕಳಿಗೆ ಉಡುಗೊರೆ ಹಾಗೂ ಸಿಹಿಯನ್ನು ಹಂಚಿದರೆ ಅವರಿಗೂ ಸಂತಸವಾಗುತ್ತದೆ ಎಂದು ಪ್ರಧಾನಿ ಆಶಿಸಿದ್ದಾರೆ. ಮಗಳನ್ನು ಲಕ್ಷ್ಮಿಯ ಅವತಾರ ಎಂದು ನಮ್ಮ ಸಂಪ್ರದಾಯ ಹೇಳುತ್ತದೆ. ಸಾಧನೆ ಮೆರೆದ ಮನೆಯ ಮಹಾಲಕ್ಷ್ಮಿಗೆ ನಿಮ್ಮ ಹಳ್ಳಿಗಳಲ್ಲಿ, ನಗರ-ಪಟ್ಟಣಗಳಲ್ಲಿ ಸಾರ್ವಜನಿಕ ಸಮಾರಂಭವೊಂದನ್ನು ಮಾಡಿ ಅವರನ್ನು ಗೌರವಿಸಲು ಸಾಧ್ಯವಿಲ್ಲವೇ ಎಂದು ಪ್ರಧಾನಿ ಮೋದಿ ತಮ್ಮ ‘ಮನ್ ಕಿ ಬಾತ್‌’ನಲ್ಲಿ ಪ್ರಶ್ನಿಸಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ರೇಡಿಯೋ ಮೂಲಕ ಪ್ರಸಾರಗೊಳ್ಳುವ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಈ ಕರೆ ನೀಡಿದ್ದಾರೆ. ನಮ್ಮ ಸಮಾಜದಲ್ಲಿ ಸಾಕಷ್ಟು ಮಹಿಳೆಯರು ತಮ್ಮ ಬುದ್ದಿಶಕ್ತಿಯಿಂದ, ಕೌಶಲ್ಯದಿಂದ ಸಾಧನೆ ಮೆರೆದಿದ್ದಾರೆ, ಅವರನ್ನು ಗೌರವಿಸಿ ಎಂದು ದೇಶದ ಜನತೆಗೆ ಮೋದಿ ಹೇಳಿದ್ದಾರೆ. ನಿಮ್ಮ ಸುತ್ತಲೂ ಹಲವಾರು ಹೆಣ್ಣು ಮಕ್ಕಳಿದ್ದಾರೆ. ಅವರು ನಿಮ್ಮ ಮಗಳಾಗಿರಬಹುದು, ಸೊಸೆ ಆಗಿರಬಹುದು. ಕೆಲವರು ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ, ಕೆಲವರು ಆರೋಗ್ಯ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ, ಎಷ್ಟೋ ಮಹಿಳೆಯರು ವೈದ್ಯರು, ಇಂಜಿನಿಯರ್‌ಗಳಿದ್ದಾರೆ. ವಕೀಲರಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ ಇರುವ ಇಂಥಾ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. 'ಭಾರತ್ ಕಿ ಲಕ್ಷ್ಮಿ' ಎಂಬ ಹ್ಯಾಷ್ ಟ್ಯಾಗ್ ಬಳಸಿ ನಿಮ್ಮ ಸುತ್ತಲೂ ಇರುವ ಮಹಿಳಾ ಸಾಧಕಿಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಹಿಂದೆ ಕರೆ ನೀಡಿದ್ದ‘ಸೆಲ್ಫಿ ವಿತ್ ಡಾಟರ್’ ಅಭಿಯಾನ ಯಶಸ್ಸು ಕಂಡ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಭಾರತ್ ಕಿ ಲಕ್ಷ್ಮಿ ಅರ್ಥಾತ್ ಭಾರತದ ಲಕ್ಷ್ಮಿಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ದೇಶ ಯಶಸ್ಸಿನ ಹಾದಿಯಲ್ಲಿ ಸಾಗಲಿದೆ ಎಂದು ಪ್ರಧಾನಿ ಆಶಿಸಿದ್ದಾರೆ.


from India & World News in Kannada | VK Polls https://ift.tt/2m2jTeR

ಟೀಮ್‌ ಇಂಡಿಯಾ ವಿರುದ್ಧದ ಟೆಸ್ಟ್‌ ಕದನಕ್ಕೆ ರಣತಂತ್ರ ವಿವರಿಸಿದ ದ. ಆಫ್ರಿಕಾದ ವೇಗಿ!

ವಿಜಯನಗರ (ಆಂದ್ರ ಪ್ರದೇಶ): ಎದುರು ಅಕ್ಟೋಬರ್‌ 2ರಂದು ಆರಂಭವಾಗಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ತಂಡದ ಪರ ಹಿರಿಯ ಆಟಗಾರರು ಬಲಿಷ್ಠ ಆತಿಥೇಯರಿಗೆ ಭಾರಿ ಹೊಡೆತ ನೀಡಬೇಕೆಂದು ವೇಗದ ಬೌಲರ್‌ ಅಭಿಪ್ರಾಯ ಪಟ್ಟಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾ ತಂಡ ಅಖಾಡಕ್ಕೆ ಕಾಲಿಡಲಿದೆ. ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿರುವ ವಿರಾಟ್‌ ಕೊಹ್ಲಿ ಬಳಗ ಈಗಾಗಲೇ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನ ಆರಂಭಿಸಿದ್ದು, ಅಂಕಪಟ್ಟಿಯ ಅಗ್ರಸ್ಥಾನವನ್ನೂ ಪಡೆದುಕೊಂಡಿದೆ. ವಿಶಾಖಪಟ್ಟಣದ ವಿಡಿಸಿಎ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 3ರಂದು ಮೊದಲ ಟೆಸ್ಟ್‌ ಆರಂಭವಾಗಲಿದೆ. "ಭಾರತ ವಿರುದ್ಧ ಅವರದ್ದೇ ಅಂಗಣದಲ್ಲಿ ಆಡುವುದು ಬಹಳ ಕಷ್ಟ. ಟೆಸ್ಟ್‌ ಚಾಂಪಿಯನ್‌ಷಿಪ್‌ ಆರಂಭಿಸಲು ದಕ್ಷಿಣ ಆಫ್ರಿಕಾಕ್ಕೆ ಇದಕ್ಕಿಂತಲೂ ಕಠಿಣ ಸವಾಲು ಎದುರಾಗಲಾರದು. ಅತ್ಯಂತ ಬಲಿಷ್ಠ ತಂಡವನ್ನು ಅವರದ್ದೇ ಅಂಗಣದಲ್ಲಿ ಎದುರಿಸುವುದು ಅಷ್ಟು ಸುಲಭವಲ್ಲ. ಆದರೆ, ಈ ಕಠಿಣ ಸವಾಲನ್ನು ಎದುರಿಸಲು ಎಲ್ಲರೂ ಎದುರು ನೋಡುತ್ತಿದ್ದೇವೆ. ಇಲ್ಲಿ ಹಲವು ಶ್ರೇಷ್ಠ ಆಟಗಾರರನ್ನೂ ನಾವು ಎದುರಸಬೇಕಿದೆ," ಎಂದು ಫಿಲ್ಯಾಂಡರ್‌ ಸವಾಲನ್ನು ವಿವರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ದೈತ್ಯ ಪ್ರತಿಭೆಗಳಾದ ಹಶೀಮ್‌ ಆಮ್ಲಾ ಮತ್ತು ಡೇಲ್‌ ಸ್ಟೇನ್‌ ನಿವೃತ್ತಿ ಘೋಷಿಸಿದ ಬಳಿಕ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ಟೆಸ್ಟ್‌ ಪಂದ್ಯವನ್ನಾಡಲು ಮುಂದಾಗುತ್ತಿದೆ. "ತಂಡದಲ್ಲಿನ ಅನುಭವಿ ಆಟಗಾರರು ದಿಟ್ಟ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆತಿಥೇಯ ಭಾರತ ತಂಡಕ್ಕೆ ಮೊದಲ ಹೊಡೆತ ನೀಡುವ ಜವಾಬ್ದಾರಿ ಅನುಭವಿಗಳ ಮೇಲಿದೆ. ಭಾರತ ಖಂಡಿತವಾಗಿಯೂ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸಲಿದೆ. ನಮ್ಮ ತಂಡ ಸದಾ ಮಂದಗತಿಯ ಆರಂಭ ಪಡೆಯುವುದಕ್ಕೆ ಹೆಸರುವಾಸಿ. ಆದರೆ, ಈ ಬಾರಿ ಉತ್ತಮ ಆರಂಭವನ್ನೇ ಪಡೆಯುವ ವಿಶ್ವಾಸವಿದೆ," ಎಂದು ವಿಜಯನಗರದಲ್ಲಿ ನಡೆದ ಅಭ್ಯಾಸ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಫಿಲ್ಯಾಂಡರ್‌ ಟೆಸ್ಟ್‌ ಸರಣಿಯಲ್ಲಿ ತಮ್ಮ ತಂಡ ಅನುಸರಿಸಲಿರುವ ರಣತಂತ್ರದ ಕುರಿತಾಗಿ ಮಾತನಾಡಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಫಿಲ್ಯಾಂಡರ್‌ ಟೆಸ್ಟ್‌ ಸರಣಿಯಲ್ಲಿ ಒಟ್ಟು 18 ವಿಕೆಟ್‌ಗಗಳನ್ನು ಉರುಳಿಸಿದ್ದರು. ಆದರೆ ಸರಣಿಯಲ್ಲಿ ಹರಿಣ ಪಡೆ 0-3 ಅಂತರದ ಸೋಲುಂಡಿತ್ತು. ಈ ಮೂಲಕ 2006ರ ಬಳಿಕ ಮೊದಲ ಬಾರಿ ವಿದೇಶಿ ನೆಲದಲ್ಲಿ ಟೆಸ್ಟ್‌ ಸರಣಿ ಸೋಲಿನ ಆಘಾತಕ್ಕೊಳಗಾಗಿತ್ತು. "ನಮ್ಮ ತಂಡ ಕೆಲ ಅನುಭವಿ ಆಟಗಾರರನ್ನು ಕಳೆದುಕೊಂಡಿದ್ದೇವೆ. ಅಂತೆಯೇ ಕೆಲ ಹೊಸ ಆಟಗಾರರು ತಂಡಕ್ಕೆ ಆಗಮಿಸುತ್ತಿದ್ದಾರೆ. ಈ ಆಟಗಾರರು ಬಹುಬೇಗನ ಟೆಸ್ಟ್‌ ಕ್ರಿಕೆಟ್‌ ತಂತ್ರಗಳನ್ನು ಕಲಿತುಕೊಳ್ಳಲಿ ಎಂದು ಆಶಿಸುತ್ತಿದ್ದವೇ. ಇದಕ್ಕೆ ತಂಡದ ಅನುಭವಿ ಆಟಗಾರು ನೆರವಿಗೆ ಬರಲಿದ್ದು, ಭವಿಷ್ಯದಲ್ಲಿ ಉತ್ತಮ ಟೆಸ್ಟ್‌ ತಂಡವಾಗಿ ಮೂಡಿಬರುವುದನ್ನು ಎದುರು ನೋಡುತ್ತಿದ್ದೇವೆ," ಎಂದಿದ್ದಾರೆ. 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 34 ವರ್ಷದ ಬಲಗೈ ವೇಗಿ ಫಿಲ್ಯಾಂಡರ್‌, 21.64ರ ಸರಾಸರಿಯಲ್ಲಿ ಒಟ್ಟು 214 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇನ್ನು ಅಭ್ಐಆಸ ಪಂದ್ಯದಲ್ಲಿ 2 ವಿಕೆಟ್‌ ಪಡೆದರಲ್ಲದೆ, 48 ರನ್‌ಗಳನ್ನು ಕೂಡ ಗಳಿಸಿ ಉತ್ತಮ ತಾಲೀಮು ಕೈಗೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2mzFdZD

ಸೋಮವಾರದಿಂದ ಉಪ್ಪಿ ಪ್ರಜಾಕೀಯ ಪಾರ್ಟ್-2 ಶುರು!: ಅಭ್ಯರ್ಥಿಗಳ ಇಂಟರ್‌ವ್ಯೂ ಮಾಡ್ತಾರೆ ರಿಯಲ್ ಸ್ಟಾರ್

ಬೆಂಗಳೂರು: ಪ್ರಜಾಕೀಯದ ಮತ್ತೊಂದು ಅಧ್ಯಾಯ ಸೋಮವಾರದಿಂದ ಶುರುವಾಗಲಿದೆ. ಮುಂಬರುವ ಚುನಾವಣೆಗಳಿಗೆ ಸ್ಪರ್ಧಿಸಲು ಇಚ್ಛಿಸುವ ಸ್ಪರ್ಧಿಗಳಿಂದ ನಟ, ನಿರ್ದೇಶಕ ಕಮ್ ರಾಜಕಾರಣಿ ಉಪೇಂದ್ರ, ಅರ್ಜಿ ಆಹ್ವಾನಿಸಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಸಲ್ಲಿಸಲು ಬಯಸುವ ಎಲ್ಲಾ ‘ಪ್ರಜಾ’ ಪ್ರತಿನಿಧಿಗಳಿಗೆ ಸಂದರ್ಶನವೂ ಇದೆ. ಸೋಮವಾರದಿಂದಲೇ ಆರಂಭವಾಗಲಿದೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರಕಟಣೆ ಹೊರಡಿಸಿದ್ಧಾರೆ.

ಸೋಮವಾರದಿಂದಲೇ ನಿರಂತರವಾಗಿ ಸಂದರ್ಶನಗಳು ನಡೆಯುತ್ತಿರುತ್ತವೆ ಎಂದು ಪ್ರಕಟಿಸಿರುವ ಉಪೇಂದ್ರ, ಇದಕ್ಕಾಗಿ ತಮ್ಮ ಪಕ್ಷದ ವೆಬ್‌ಸೈಟ್ ವಿಳಾಸವನ್ನೂ ನೀಡಿದ್ದಾರೆ. ಅರ್ಜಿದಾರರಿಗೆ ಏನಾದರೂ ಗೊಂದಲಗಳಿದ್ದರೆ ಬಗೆಹರಿಸಿಕೊಳ್ಳಲು ಮೊಬೈಲ್ ಸಂಖ್ಯೆಗಳನ್ನೂ ನೀಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಉಪೇಂದ್ರ ಟ್ವಿಟರ್ ಪ್ರಕಟಣೆ ಹೊರಡಿಸಿದ್ದಾರೆ. ಮುಗೀತು.. ಈಗ ಹವಾ..! ಹಾಗೆ ನೋಡಿದ್ರೆ, ಇದು ಉಪೇಂದ್ರ ಅವರ 2ನೇ ರಾಜಕೀಯ ಅಧ್ಯಾಯ. 2015ರಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು ಮಹೇಶ್ ಗೌಡ ಎಂಬುವರು ಸ್ಥಾಪಿಸಿದ್ದರು. ಈ ಪಕ್ಷವನ್ನು 2017ರ ಅಕ್ಟೋಬರ್ 31ರಂದು ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತವಾಗಿ ಉದ್ಘಾಟನೆ ಮಾಡಿ ತಮ್ಮ ಪಕ್ಷ ಎಂದು ಘೋಷಿಸಿದ್ದರು. ಚುನಾವಣಾ ಆಯೋಗದಿಂದ ನೋಂದಣಿಯೂ ಆಗಿತ್ತು. ಆದರೆ, ಕೆಲವು ಭಿನ್ನಾಭಿಪ್ರಾಯಗಳಿಂದ ಉಪೇಂದ್ರ ಕೆಪಿಜೆಪಿಯಿಂದ ಹೊರನಡೆದಿದ್ದರು. ತಮ್ಮದೇ ಆದ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದರು. ಉಪ್ಪಿ ಹೊರಹೋದರೂ ಕೆಪಿಜೆಪಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು. ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ ಪಕ್ಷದ ಅಡಿಯಿಂದ ಸ್ಪರ್ಧಿಸಿದ್ದ ಆರ್. ಶಂಕರ್, ಅಚ್ಚರಿಯ ಗೆಲುವು ಸಾಧಿಸಿದ್ದರು. ಮಾಜಿ ಸ್ಪೀಕರ್ ಕೋಳಿವಾಡ ಅವರನ್ನೇ ಶಂಕರ್ ಸೋಲಿಸಿದ್ದರು. ಬಳಿಕ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ವಿಲೀನಗೊಳಿಸಿ ಸಚಿವ ಪಟ್ಟ ಗಿಟ್ಟಿಸಿದ್ದರು. ಕೆಪಿಜೆಪಿ ಪಕ್ಷದ ಮೊದಲ ಶಾಸಕನೇ ಅನರ್ಹ..! 2019ರ ಆಗಸ್ಟ್‌ನಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್, ದೋಸ್ತಿ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ಗೈರು ಹಾಜರಾಗಿದ್ದರು. ಹೀಗಾಗಿ, ಆರ್. ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಸ್ಪೀಕರ್ ಅನರ್ಹಗೊಳಿಸಿದ್ದರು. ಇದೀಗ ಆರ್. ಶಂಕರ್ ಪ್ರತಿನಿಧಿಸಿದ್ದ ರಾಣೆಬೆನ್ನೂರು ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 5ಕ್ಕೆ ಮತದಾನ, ಡಿಸೆಂಬರ್ 11ಕ್ಕೆ ಮತ ಎಣಿಕೆ ಇದೆ. ಆದರೆ, ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ಆರ್. ಶಂಕರ್, ಸುಪ್ರೀಂ ಕೋರ್ಟ್‌ನಲ್ಲಿ ಗೆಲ್ಲಬೇಕಿದೆ.


from India & World News in Kannada | VK Polls https://ift.tt/2m20Npb

ಬೈಲಹೊಂಗಲ ಬಳಿ ಐವರ ಮೇಲೆ ಹರಿದ ಕಾರು: ಸ್ಥಳೀಯರ ಆಕ್ರೋಶ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಐವರ ಮೇಲೆ ಕಾರು ಹರಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಮಹೇಶ್ ರೇವಣ್ಣವರ (21), ಸಂಜು ಮುರಗೋಡ (35), ವಿನೋದ್ ಕುಂಬಾರ (14), ಸಿದ್ಧಾರೋಡ ಗುಗ್ಗರಿ (24) ಮತ್ತು ಮಲ್ಲಪ್ಪ ಉಡಿಕೇರಿ (45) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಯರಗಟ್ಟಿ ನಿವಾಸಿ ರಾಮಪ್ಪ ಗಂಗಪ್ಪ ಹುಲುಕುಂದ ಎಂಬಾತನನ್ನು ದೊಡ್ಡವಾಡ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಅಪಘಾತದ ಬಳಿಕ ಕಾರು ಚಾಲಕನ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಿತ್ತೂರು ಸಿಪಿಐ ತೋಟಗಿ ಅವರು ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.


from India & World News in Kannada | VK Polls https://ift.tt/2m1FS5E

ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರ್ತಿದ್ದ ಗಂಡ: ಬಡಿದು ಬಿಸಾಕಿದ ಹೆಂಡತಿ!

ಬೆಂಗಳೂರು: ಜೊತೆ ಜಗಳ ಆಡ್ತಿದ್ದ ಎಂದು ಟ್ಯಾಕ್ಸಿ ಚಾಲಕನೊಬ್ಬನಿಗೆ ಆತನ ಮಾವನ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೊಡ್ಡಬೊಮ್ಮಸಂದ್ರ ನಿವಾಸಿ 36 ವರ್ಷದ ಚಂದ್ರಶೇಖರ್, ತಿಂದ ಟ್ಯಾಕ್ಸಿ ಚಾಲಕ. ಚಂದ್ರಶೇಖರ್ ಪತ್ನಿ ಹೇಮಾವತಿ ತನ್ನ ತವರು ಮನೆಯವರಿಗೆ ಗಂಡನ ವರ್ತನೆ ಬಗ್ಗೆ ದೂರು ಕೊಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಹೇಮಾವತಿ ಸಹೋದರರು ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ನಡುರಸ್ತೆಯಲ್ಲೇ ರಾಡ್‌ನಿಂದ ಥಳಿಸಿದ್ದಾರೆ. ಚಂದ್ರಶೇಖರ್‌ನ ಕಾರನ್ನು ತಡೆದು ನಡುರಸ್ತೆಯಲ್ಲೇ ರಾಡ್‌ನಿಂದ ಥಳಿಸಿದ ಮೇಲೂ ಹೇಮಾವತಿಯ ಸಹೋದರರಿಗೆ ತೃಪ್ತಿಯಾಗಲಿಲ್ಲ. ಬಳಿಕ ಅವರು ತಮ್ಮ ಮನೆಗೆ ಚಂದ್ರಶೇಖರನನ್ನು ‘ಎತ್ತಾಕಿಕೊಂಡು’ ಹೋಗಿದ್ದಾರೆ. ಅಲ್ಲಿ ಚಂದ್ರಶೇಖರ್ ಖುದ್ದು ಆತನ ಪತ್ನಿಯೇ ತನ್ನ ಸಹೋದರರ ಜೊತೆ ಸೇರಿಕೊಂಡು ಥಳಿಸಿದ್ದಾರೆ. ಇವರಿಂದ ಹೇಗೇ ತಪ್ಪಿಸಿಕೊಂಡು ಬಂದ ಚಂದ್ರಶೇಖರ್, ಕೊನೆಗೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರ ಮೊರೆ ಹೋಗಿದ್ದಾರೆ. ‘ನನ್ನ ಪತ್ನಿ, ಆಕೆಯ ಮನೆಯವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಚಂದ್ರಶೇಖರ್ ದೂರು ನೀಡಿದ್ದಾರೆ. ಆದರೆ, ಇದು ಕೌಟುಂಬಿಕ ವಿಚಾರವಾದ ಕಾರಣ, ಸ್ವಲ್ಪ ಕಾಲಾವಕಾಶ ನೀಡಿ ಎಂದು ಚಂದ್ರಶೇಖರ್ ಪತ್ನಿ ಹೇಮಾವತಿಯವರ ಮನೆಯವರು ಪೊಲೀಸರಿಗೆ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/2nwAKqB

ಮನೆ ಯಜಮಾನನ ಸಾವು: ನೊಂದ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

ಬಂಟ್ವಾಳ (): ಕುಟುಂಬದ ಯಜಮಾನ ಸಾವನ್ನಪ್ಪಿರುವ ದುಃಖ ಭರಿಸಲಾಗದೆ ಇಡೀ ಕುಟುಂಬವೇ ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ.ರೋಡಿನ ನೇತ್ರಾವತಿ ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ. ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಕಡಂಗ ಎಂಬಲ್ಲಿಯ ನಿವಾಸಿಗಳಾದ ಸದ್ಯ ಮೈಸೂರಿನ ಪಿ.ಎಸ್.ನಗರದಲ್ಲಿ ವಾಸ ಮಾಡುತ್ತಿದ್ದ ಕೌಶಿಕ್ ಮಂದಣ್ಣ (22), ಕಲ್ಪಿತಾ ಮಂದಣ್ಣ (20) ನೀರುಪಾಲಾಗಿದ್ದರೆ, ಅವರ ತಾಯಿ ಕವಿತಾ ಮಂದಣ್ಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 10.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತದೇಹಗಳ ಶೋಧ ಕಾರ್ಯವನ್ನು ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಪಟುಗಳು ನಡೆಸುತ್ತಿದ್ದಾರೆ. ಏನಾಯಿತು? ಕೊಡಗು ಜಿಲ್ಲೆ ವೀರಾಜಪೇಟೆಯ ಬಳ್ಳಚಂಡ ಕುಟುಂಬಸ್ಥರಾದ ಕಡಂಗ ಮೂಲದ ಮೈಸುರು ನಿವಾಸಿ ಕೃಷಿಕ ಕಿಶನ್ ಮಂದಣ್ಣ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಶನಿವಾರ ಅವರ ಮೃತದೇಹ ಮೈಸೂರು ಬಳಿ ಲಭಿಸಿತ್ತು. ಈ ಘಟನೆಯಿಂದ ಆಘಾತಗೊಂಡ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕೊಂಡುಹೋದ ವೇಳೆ ಕುಟುಂಬ ಮಂಗಳೂರು ಕಡೆಗೆ ಮಾರುತಿ ಇಕೋ ವಾಹನದಲ್ಲಿ ಅಗಮಿಸಿತ್ತು. ಸಂಜೆಯ ವೇಳೇ ಬಿ.ಸಿ.ರೋಡ್ ಆಸುಪಾಸಿನಲ್ಲಿ ತಿರುಗಾಡುತ್ತಿದ್ದ ಕುಟುಂಬ ವಾಹನ ಸಂಚಾರ ವಿರಳವಾದ ಸಂದರ್ಭ, ಸುಮಾರು 10.30ರಿಂದ 10.45ರ ವೇಳೆಗೆ ತಮ್ಮ ಪ್ರೀತಿಯ ನಾಯಿ ಜೊತೆ ನದಿಗೆ ಹಾರಿದ್ದಾರೆ. ಸ್ಥಳೀಯ ಆಟೊ ಚಾಲಕರೊಬ್ಬರು ಇದನ್ನು ನೋಡಿ, ಸ್ಥಳೀಯರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗೂಡಿನಳಿ ಹಳೇ ಸೇತುವೆ ಬಳಿ ಕವಿತಾ ಮತ್ತು ನಾಯಿಯನ್ನು ರಕ್ಷಿಸಲಾಯಿತಾದರೂ ಮಧ್ಯರಾತ್ರಿ ಕವಿತಾ ಮೃತಪಟ್ಟಿದ್ದಾರೆ. ಉಳಿದಿಬ್ಬರ ಶೋಧ ಕಾರ್ಯ ಭಾನುವಾರ ಬೆಳಗ್ಗೆಯೂ ಮುಂದುವರಿದಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಬೇಟಿ ತನಿಖೆ ನಡೆಸುತ್ತಿದ್ದಾರೆ.


from India & World News in Kannada | VK Polls https://ift.tt/2mK7lsY

ಇಂದಿನಿಂದ ನಾಡಹಬ್ಬ ದಸರಾ ವೈಭವ: 10 ದಿನಗಳ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಸಕಲ ಸಜ್ಜು

ಮೈಸೂರು: ಐತಿಹಾಸಿಕ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾನುವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಚಾಲನೆ ದೊರೆಯಲಿದೆ. ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಬೆಳಗ್ಗೆ 9.39 ರಿಂದ 10.25 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ದಸರಾ ಉತ್ಸವವನ್ನು ಉದ್ಘಾಟಿಸುವರು. ಸಿಎಂ ಬಿ.ಎಸ್.ಯಡಿಯೂರಪ್ಪಘಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಘಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೇಯರ್ ಪುಷ್ಪಲತಾ ಜಗನ್ನಾಥ್ ಉಪಸ್ಥಿತರಿರುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು. ಹತ್ತು ದಿನಗಳ ಮೈಸೂರು ದಸರಾ ಉತ್ಸವವು ಸೆ.29 ರಿಂದ ಆರಂಭವಾಗಿ ಅ.8ರಂದು ವಿಜಯದಶಮಿಯ ದಿನ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತುನೊಂದಿಗೆ ತೆರೆ ಬೀಳಲಿದೆ. ಮೈಸೂರಿನಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ದಸರಾ ಸಿದ್ದತೆಗಳು ಭರದಿಂದ ಸಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ದಸರಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ವೈಭವ, ಆಟೋಟಗಳು, ಕುಸ್ತಿ ಪಂದ್ಯಾವಳಿ, ಸಾಹಸ ಕ್ರೀಡೆಗಳು, ಮಕ್ಕಳ ದಸರಾ, ಮಹಿಳಾ ದಸರಾ, ಯೋಗ ದಸರಾ, ರೈತ ದಸರಾ, ಕವಿಗೋಷ್ಠಿ, ಚಲನಚಿತ್ರೋತ್ಸವ, ಆಹಾರ ಮೇಳ, ಹೆಲಿ ರೈಡ್, ವಿಂಟೇಜ್ ಕಾರು ರ್ಯಾಲಿ, ಓಪನ್ ಬಸ್ ಪ್ರವಾಸ, ಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ ಹೀಗೆ ನಾನಾ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಅರಮನೆ ಆವರಣ ಹಾಗೂ ಯುವ ದಸರಾದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಲಿದ್ದಾರೆ. ಮೈಸೂರಿನಲ್ಲಿ ಒಟ್ಟು 9 ವೇದಿಕೆಗಳಲ್ಲಿ 200 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ. ಪೌರಕಾರ್ಮಿಕರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಇದೇ ಮೊದಲ ಬಾರಿಗೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಕೆಆರ್‌ಎಸ್ ಹಿನ್ನೀರಿನಲ್ಲಿ ರ್ಯಾಫ್ಟಿಂಗ್, ಜೆಟ್ ಸ್ಕೀ ಸೇರಿದಂತೆ ಸಾಹಸೋತ್ಸವವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ. ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ದೀಪಾಲಂಕಾರವು ಹೊಸಲೋಕವನ್ನೇ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ದೀಪಾಲಂಕಾರವು ಬಹುತೇಕ ಗೋಲ್ಡನ್ ಕಲರ್‌ನಲ್ಲಿದೆ. ಪಾರಂಪರಿಕ ಮೆರುಗು ನೀಡಲು ಈ ಕ್ರಮ ಅನುಸರಿಸಲಾಗಿದೆ. ಅರಮನೆ ದೀಪಾಲಂಕಾರವು ಮೊದಲಿನಿಂದಲೂ ಹೊಂಬಣ್ಣದಲ್ಲಿ ಕಂಗೊಳಿಸುತ್ತಿದೆ. ಈ ಬಾರಿ ಮೈಸೂರು ನಗರದ ಶೇ.90ರಷ್ಟು ದೀಪಾಲಂಕಾರವು ಹೊಂಬಣ್ಣದಲ್ಲಿ ಜಗಮಗಿಸಲಿದೆ. ಒಟ್ಟು 90 ವೃತ್ತಗಳು, 75 ಕಿ.ಮೀ.ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ. ಮೈಸೂರು ದಸರಾ ಉತ್ಸವಕ್ಕೆ ರಾಜ್ಯ ಸರಕಾರ 19 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದೆ. ಇದರಲ್ಲಿ ಸುಮಾರು 1 ಕೋಟಿ ರೂ.ಗಳನ್ನು ದಸರಾ ದೀಪಾಲಂಕಾರಕ್ಕೆ ವೆಚ್ಚ ಮಾಡಲಾಗಿದೆ. ಮೈಸೂರಿಗೆ ದಸರಾ ವೇಳೆ ದೇಶ-ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಸೆ.29 ರಿಂದ ಅ.9ರ ವರೆಗೆ ಹೊರ ರಾಜ್ಯಗಳಿಂದ ಮೈಸೂರು ಜಿಲ್ಲೆಗೆ ಪ್ರವೇಶಿಸುವ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅರಮನೆಯಲ್ಲಿ ಭಾನುವಾರದಿಂದ ನವರಾತ್ರಿಯ ಆಚರಣೆ ನಡೆಯಲಿದೆ. ಯದುವಂಶದ ರಾಜಮನೆತನದವರು ಶಾಸೋಕ್ತವಾಗಿ ನವರಾತ್ರಿಯಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸುವರು. ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರು ನಡೆಸುವರು. ದಸರಾ ಮತ್ತು ಚುನಾವಣಾ ನೀತಿ ಸಂಹಿತೆ ಹುಣಸೂರು ವಿಧಾನಸಭೆಗೆ ಉಪ ಚುನಾವಣೆ ಮೊದಲು ಘೋಷಣೆಯಾದಾಗ ಚುನಾವಣಾ ನೀತಿ ಸಂಹಿತೆ ಇಡೀ ಮೈಸೂರು ಜಿಲ್ಲೆಗೆ ಅನ್ವಯಿಸುವುದಿಲ್ಲ ಎಂದು ದಸರಾ ಸಿದ್ಧತೆಗೆ ನೀತಿ ಸಂಹಿತೆಯ ಬಿಸಿ ತಟ್ಟಿರಲಿಲ್ಲಘಿ. ಅನಂತರ ಚುನಾವಣಾ ಆಯೋಗದ ಸೂಚನೆಯಂತೆ ನೀತಿ ಸಂಹಿತೆಯನ್ನು ಇಡೀ ಮೈಸೂರು ಜಿಲ್ಲೆಗೆ ಜಾರಿಗೊಳಿಸಿದ್ದರಿಂದ ಸಚಿವರು, ಶಾಸಕರು, ಜನಪ್ರತಿನಿಧಿಗಳು ದಸರಾ ಸಿದ್ಧತೆಯಿಂದಲೇ ದೂರ ಉಳಿದರು. ಅನಂತರ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಚುನಾಯಿತ ಪ್ರತಿನಿಧಿಗಳು ದಸರಾ ಸಿದ್ಧತೆಯಲ್ಲಿ ಮತ್ತೆ ತೊಡಗಿಸಿಕೊಂಡರು. ಉಪ ಚುನಾವಣೆ ದಿನಾಂಕ ಮತ್ತೆ ಘೋಷಣೆಯಾಗಿದ್ದರೂ ಚುನಾವಣಾ ನೀತಿ ಸಂಹಿತೆ ಇನ್ನೂ ಜಾರಿಗೆ ಬಂದಿಲ್ಲಘಿ. ದಸರಾದಲ್ಲಿ ನಸುಳಿದ ರಾಜಕೀಯ ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಲಕ್ಷಾಂತರ ಜನರು ಸಂಕಷ್ಟದಲ್ಲಿರುವಾಗ ಈ ಬಾರಿಯ ಮೈಸೂರು ದಸರಾ ಉತ್ಸವವನ್ನು ಸರಳವಾಗಿ ಆಚರಿಸಬೇಕೆಂಬ ಒತ್ತಾಯವು ಕೇಳಿ ಬಂದಿತ್ತುಘಿ. ಇದೇ ವೇಳೆ ಎಂದಿನಂತೆ ದಸರಾ ಆಚರಿಸಬೇಕೆಂಬ ಕೂಗು ಇತ್ತು. ರಾಜ್ಯ ಸರಕಾರ ಎಂದಿನಂತೆಯೇ ದಸರಾ ಆಚರಿಸುತ್ತಿದೆ. ರಾಜ್ಯ ಸರಕಾರ ಅದ್ದೂರಿಯಾಗಿ ದಸರಾ ಆಚರಿಸುತ್ತಿರುವುದನ್ನು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಬಲವಾಗಿ ಆಕ್ಷೇಪಿಸಿದ್ದಾರೆ. ನೆರೆಯಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಂದಿ ಸಂಕಷ್ಟದಲ್ಲಿರುವಾಗ ಕುಣಿದು ಕುಪ್ಪಳಿಸುವ ಯುವ ದಸರಾ ಹಾಗೂ ತಿಂದು ತೇಗುವ ಆಹಾರ ಮೇಳದಂತಹ ಕಾರ್ಯಕ್ರಮ ದಸರಾದಲ್ಲಿ ಅಗತ್ಯವಿತ್ತೇಘಿ? ಎಂದು ಶ್ರೀನಿವಾಸಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದ್ದೂರಿಯ ದಸರಾ ಅಗತ್ಯ ಇರಲಿಲ್ಲಘಿ. ಊರು ತುಂಬಾ ದೀಪಾಲಂಕಾರ ಬೇಕಿರಲಿಲ್ಲ. ಸಂಪ್ರದಾಯದಂತೆ ದಸರಾ ನಡೆಯಲಿ. ಅದ್ದೂರಿ ದಸರಾಕ್ಕೆ ನನ್ನ ಬೆಂಬಲ ಇಲ್ಲ ಎಂದು ಹೇಳಿದ್ದು ಬಿಜೆಪಿಯವರಿಗೆ ಅಚ್ಚರಿ ಮೂಡಿಸಿತು. ಶ್ರೀನಿವಾಸಪ್ರಸಾದ್ ಅವರ ಅಳಿಯ ನಂಜನಗೂಡಿನ ಬಿಜೆಪಿ ಶಾಸಕ ಬಿ.ಹರ್ಷವರ್ಧನ್ ದಸರಾ ಸಿದ್ದತೆಯ ಕಾರ್ಯಕ್ರಮಗಳಿಂದಲೇ ದೂರ ಉಳಿದಿದ್ದಾರೆ. ಸಂಸದ ಪ್ರತಾಪ ಸಿಂಹ ಅವರ ಅಭಿಪ್ರಾಯವನ್ನೇ ಎಲ್ಲದ್ದಕ್ಕೂ ಪಡೆಯುವುದಾದರೆ ನಾವೇಕೆ ಇರಬೇಕು? ಇದು ಮೈಸೂರು ಸಂಸದರ ದಸರಾ ಎಂದು ಹರ್ಷವರ್ಧನ್ ತೀಕ್ಷ್ಣವಾಗಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಶಾಸಕ ಎಸ್.ಎ.ರಾಮದಾಸ್ ಪ್ರಾರಂಭದಲ್ಲಿ ದಸರಾ ಸಿದ್ದತೆಗಳಿಂದ ದೂರ ಉಳಿದರು. ಅನಂತರ ಕೆಲವು ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.


from India & World News in Kannada | VK Polls https://ift.tt/2mJJvO2

'ಸಾರಿ ವಾಕ್‌ ಆ್ಯಂಡ್‌ ರನ್‌ ಸ್ಪರ್ಧೆ'ಯಲ್ಲಿ ಮಿಂಚಿದ ಮಂಗಳೂರು ಮಹಿಳೆಯರು

ಮಂಗಳೂರು: ಮೆಡಿಮೇಡ್‌ ಸೊಲ್ಯೂಷನ್ಸ್‌ ಸಂಸ್ಥೆ, ವಿಜಯ ಕರ್ನಾಟಕ, ಲಯನ್ಸ್‌ ಕ್ಲಬ್‌ , ಇನ್ನರ್‌ ವ್ಹೀಲ್ ಕ್ಲಬ್‌ ಮತ್ತು ನಾನಾ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ' ಸ್ಪರ್ಧೆ'ಗೆ ಚಾಲನೆ ಸಿಕ್ಕಿದೆ. ವೆನ್ಲಾಕ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್ವರಿ, ಮಹಾನಗರಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್‌, ಆಸರೆ ಚಾರಿಟೆಬಲ್‌ ಟ್ರಸ್ಟ್‌ನ ಮುಖ್ಯಸ್ಥೆ ಡಾ. ಆಶಾಜ್ಯೋತಿ ರೈ, ಕನ್ನಡ ಚಿತ್ರ ನಟಿ ತನುಜಾ ಪವಾರ್‌, ಕನ್ನಡ ಮತ್ತು ತುಳು ಚಿತ್ರನಟಿ ನವ್ಯಾ ಪೂಜಾರಿ, ಸುಕನ್ಯಾ, ಮಿಸ್‌ ಯುನಿವರ್ಸ್‌ ಸುದೀಕ್ಷಾ ಕಿರಣ್‌, ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್‌ ನಾಯಕ್‌ ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮಹಿಳೆಯರಿಗೆ ಸ್ಫೂರ್ತಿದಾಯಕ ಮಾದರಿ ಕಾರ್ಯಕ್ರಮ ಎಂದು ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ಪ್ರಶಂಸಿಸಿದ್ದಾರೆ. ಶನಿವಾರ ನಗರದ ಎಂಜಿ ರಸ್ತೆಯ ದೀಪಾ ಕಂಫರ್ಟ್‌ ಹೋಟೆಲ್‌ನ 'ಸಾರಿ ವಾಕ್‌ ಆ್ಯಂಡ್‌ ರನ್‌' ಸ್ಪರ್ಧೆಯ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಂತಾರಾಮ ಶೆಟ್ಟಿ, ಮಹಿಳೆಯರು ಆರೋಗ್ಯ ಬಗ್ಗೆ ಕಾಳಜಿ ವಹಿಸುವ ದೃಷ್ಟಿಕೋನದೊಂದಿಗೆ ಜಾಗೃತಿಗಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮೂಲಕ ಗೃಹಿಣಿಯರಿಗೆ ಹೊಸತನದೊಂದಿಗೆ ಆತ್ಮಸ್ಥೈರ್ಯ ತುಂಬಿಸುವ ಕಾರ್ಯಕ್ರಮ ಎಂದರು. ಗಮನ ಸೆಳೆದ ಪ್ರದರ್ಶನ ಶನಿವಾರ ನಡೆದ ಕಿಟ್‌ ವಿತರಣಾ ಕಾರ್ಯಕ್ರಮದ ಸಂದರ್ಭ ಏರ್ಪಡಿಸಲಾಗಿದ್ದ ನಾನಾ ಉತ್ಪನ್ನಗಳ ಮಾರಾಟ ಮಳಿಗೆ ಮಹಿಳೆಯರನ್ನು ಸೆಳೆದವು. ಕೌಪತಿ ಎನ್ನುವ ಗೋವಿನ ಪಂಚಗವ್ಯಗಳನ್ನೇ ಉಪಯೋಗಿಸಿ ತಯಾರಿಸಿದ ಸೋಪು, ಮೂಗಿ ಡ್ರಾಪ್‌, ಅಗರಬತ್ತಿಗಳು, ಸೆಗಣಿ ಹಾಗೂ ಆವೆ ಮಣ್ಣಿನಿಂದ ತಯಾರಿಸಿದ ಹಣತೆ, ಗೋವು ಜನನಿ ಫಾಮ್‌ರ್‍ನ ಕಾಡು ಜೇನು, ಜೇನುಗೂಡಿನ ದೀಪಗಳು, ಧೂಪದ ಬತ್ತಿ, ರೋಸ್‌ ವಾಟರ್‌, ತೆಂಗಿನ ಎಣ್ಣೆ, ಸಿರಿ ಮಳಿಗೆ ದೇಸಿ ಉತ್ಪನ್ನಗಳು ಉಡುಪು ಹಾಗೂ ಡಿಟರ್ಜೆಂಟ್‌ ಸೋಪುಗಳು ಸೇರಿದಂತೆ ಸೌಂದರ್ಯ ವರ್ಧಕ ಉತ್ಪನ್ನಗಳು ಮಹಿಳಾಮಣಿಗಳ ಮನ ಸೆಳೆದವು.


from India & World News in Kannada | VK Polls https://ift.tt/2obdBKx

ಇಂದು ವಿಶ್ವ ಹೃದಯ ದಿನ: ಬೆಳಗಾವಿ ಜಿಲ್ಲೆಯ ಶೇ.30ರಷ್ಟು ಜನರಿಗಿದೆ ಹೃದ್ರೋಗ

ಪಾಣೆಮಂಗಳೂರು: ನೇತ್ರಾವತಿ ಸೇತುವೆಯಿಂದ ಹಾರಿದ ಮಹಿಳೆ ಸಹಿತ ಮೂವರು ಸಾವು

'ನೀವ್ ಕ್ರಮ ಜರುಗಿಸದಿದ್ರ, ನಾ ಬಡ್ಯಾಂವ್‌': ಗೋಕಾಕ ಪೊಲೀಸರಿಗೆ ಸತೀಶ್‌ ಜಾರಕಿಹೊಳಿ ಆವಾಜ್‌

ಉಗ್ರಪೋಷಕರು ನಮ್ಮ ಬಗ್ಗೆ ಮಾತನಾಡಲು ಯೋಗ್ಯರಲ್ಲ: ವಿಶ್ವ ವೇದಿಕೆಯಲ್ಲಿ ಇಮ್ರಾನ್‌ ಜಾತಕ ಜಾಲಾಡಿದ ಮೈತ್ರಾ

ಕೇಂದ್ರ ಸರಕಾರದ ದಿಟ್ಟ ಕ್ರಮ: ಔಷಧ ಬೆಲೆ ಇನ್ನಷ್ಟು ಅಗ್ಗ?

ನೆರೆರಾಷ್ಟ್ರ ಭಾರತದ ಬಲ ಅರಿಯಲಿ: ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ

ಟಿ20ಗೆ ರಿಸ್ಟ್ ಸ್ಪಿನ್ನರ್‌ಗಳನ್ನು ಕರೆ ತರಲು ಬಯಸಿದ ಮಾಜಿ ಯಶಸ್ವಿ ನಾಯಕ

ಹೊಸದಿಲ್ಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಆಟಗಾರರ ಸಂಯೋಜನೆಯ ಹುಡುಕಾಟದಲ್ಲಿರುವ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದೆ. ಪ್ರಮುಖವಾಗಿಯೂ ಬ್ಯಾಟಿಂಗ್ ವಿಭಾಗದಲ್ಲಿ ಮತ್ತಷ್ಟು ಡೆಪ್ತ್ ಕಂಡುಕೊಳ್ಳುವ ನಿಟ್ಟಿನಲ್ಲಿ ರಿಸ್ಟ್ ಸ್ಪಿನ್ನರ್‌ಗಳಾದ ಹಾಗೂ ಚೈನಾಮನ್ ಖ್ಯಾತಿಯ ಕುಲ್‌ದೀಪ್ ಯಾದವ್‌ರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಇದರ ಪರಿಣಾಮ ದಕ್ಷಿಣ ಆಫ್ರಿಕಾ ವಿರುದ್ದ ಬೆಂಗಳೂರಿನಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಹೀನಾಯ ಸೋಲನುಭವಿಸಿತು. ಈ ಮಧ್ಯೆ ಹೇಳಿಕೆ ನೀಡಿರುವ ಭಾರತದ ಮಾಜಿ ಯಶಸ್ವಿ ನಾಯಕ , ರಿಸ್ಟ್ ಸ್ಪಿನ್ನರ್‌ಗಳನ್ನು ತಂಡಕ್ಕೆ ವಾಪಸ್ ಕರೆಯಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಕೆಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿರುವ ಯುಜ್ವೇಂದ್ರ ಹಾಗೂ ಕುಲ್‌ದೀಪ್ ಹೆಚ್ಚಿನ ಯಶಸ್ಸನ್ನು ಸಂಪಾದಿಸಿದ್ದಾರೆ. 'ಕುಲ್ಚಾ' ಎಂದೇ ಖ್ಯಾತಿಗೆ ಪಾತ್ರವಾಗಿರುವ ಈ ಸ್ಪಿನ್ ಜೋಡಿ ಪಂದ್ಯದ ಮಧ್ಯಂತರ ಅವಧಿಯಲ್ಲಿ ವಿಕೆಟ್‌ ಕಬಳಿಸುವ ಮೂಲಕ ಎದುರಾಳಿಗಳ ಮೇಲೆ ನಿರಂತರ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ವಿದೇಶದಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಕುಲ್‌ದೀಪ್ ಹಾಗೂ ಚಹಲ್ ನಿರ್ವಹಣೆಯು ನಿರ್ಣಾಯಕವೆನಿಸಿತು. ಆದರೆ ಏಕದಿನ ವಿಶ್ವಕಪ್ ಬಳಿಕ ಹೊಸ ಸಂಯೋಜನೆಯ ಹುಡುಕಾಟದಲ್ಲಿರುವ ಟೀಮ್ ಇಂಡಿಯಾ ಕುಲ್‌ದೀಪ್ ಹಾಗೂ ಚಹಲ್ ಬದಲು, ಸ್ಪಿನ್ ಬೌಲಿಂಗ್ ಸಾಮರ್ಥ್ಯದ ಯುವ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತಿದೆ. ದೇಶೀಯ ಪ್ರದರ್ಶನದ ಆಧಾರದಲ್ಲಿ ಕೃಣಾಲ್ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ಜತೆಗೆ ಅನುಭವಿ ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳ ಅಗತ್ಯವಿಲ್ಲ ಎಂಬದನ್ನು ಬೊಟ್ಟು ಮಾಡಿರುವ ಗಂಗೂಲಿ, ಟಿ20ನಲ್ಲಿ ಚಹಲ್ ಹಾಗೂ ಕುಲ್‌ದೀಪ್‌ರನ್ನು ಕರೆ ತರಬೇಕು. ವಿಶೇಷವಾಗಿಯೂ ಚಹಲ್ ಸಾನಿಧ್ಯ ಅತ್ಯಗತ್ಯ ಎಂದು ವಿವರಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2mkJa4h

ಡಿಕೆಶಿಗೆ ಥರ್ಡ್‌ ಗ್ರೇಡ್‌ ಟ್ರೀಟ್ಮೆಂಟ್ : ಮಾನವ ಹಕ್ಕು ಆಯೋಗಕ್ಕೆ ಲಿಂಗಪ್ಪ ದೂರು

ರಾಮನಗರ: ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಥರ್ಡ್‌ ಗ್ರೇಡ್‌ ಟ್ರೀಟ್ಮೆಂಟ್ ಕೊಡಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಗಂಭೀರ ಅರೋಪ ಮಾಡಿದ್ದಾರೆ. ರಾಮನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಸಿ.ಎಂ.ಲಿಂಗಪ್ಪ ಸುದ್ದಿಗೋಷ್ಟಿಯಲ್ಲಿ ಹೀಗೊಂದು ಅಚ್ಚರಿಯ ಮಾಹಿತಿ ಹರಿಬಿಟ್ಟಿದ್ದಾರೆ. ಡಿಕೆ ಶಿವಕುಮಾರ್‌ ಅವರನ್ನು 2 ಗಂಟೆಗಳ ಕಾಲ ಕತ್ತಲೆ ಕೋಣೆಯಲ್ಲಿ ಬಂಧಿಸಿದ್ದಾರೆ. ಕೆಲ ಅಧಿಕಾರಿಗಳು ಡಿಕೆಶಿ ಗೆ ಹೊಡೆದಿದ್ದಾರೆ. ಆದರೆ, ಯಾರು ಹೊಡೆದಿದ್ದಾರೆಂದು ಗೊತ್ತಾಗದಂತೆ ಸಂಚು ಮಾಡಲಾಗಿದೆ. ಅವರಿಗೆ ಕೊಡಬಾರದ ಕಿರುಕುಳ ಕೊಡಲಾಗುತ್ತಿದೆ. ಕೋರ್ಟ್ ಹಾಲ್ ನಲ್ಲಿ ಕೂರಲು ಅವಕಾಶ ಕೊಟ್ಟಿಲ್ಲ. ನಂತರ ಸುಸ್ತಾಗಿ ಶಿವಕುಮಾರ್ ಕೆಳಗೆ ಬಿದ್ದಿದ್ದಾರೆ. ಆಗ ನ್ಯಾಯಾಧೀಶರು ಶಿವಕುಮಾರ್ ಅವರಿಗೆ ಕುರ್ಚಿ ವ್ಯವಸ್ಥೆ ಮಾಡಿದ್ದಾರೆ. ಒಬ್ಬ ನಟೋರಿಯಸ್ಅಪರಾಧಿಯ ರೀತಿಯಲ್ಲಿ ಶಿವಕುಮಾರ್ ಅವರನ್ನ ನಡೆಸಿಕೊಳ್ಳಲಾಗುತ್ತಿದೆ ಎಂದು ಸಿ.ಎಂ.ಲಿಂಗಪ್ಪ ಅವರು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಿವಕುಮಾರ್‌ ಅವರಿಗೆ ತಲೆದಿಂಬು ಕೂಡ ಕೊಟ್ಟಿಲ್ಲ. ಆದರೆ ಅವರು ವಿಚಾರಣಾಧೀನ ಖೈದಿ ಅಷ್ಟೇ. ಅವರಿಗೆ ಕುರ್ಚಿಯಿಲ್ಲ, ತಲೆದಿಂಬಿಲ್ಲ, ಹಾಸಿಗೆಯಿಲ್ಲ. ಅವರನ್ನ ಬಹಳ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾನು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇನೆ. ತನಿಖಾಧಿಕಾರಿ ಮೋನಿಕಾ ಶರ್ಮಾ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿದ್ದೇನೆ. ಶಿವಕುಮಾರ್ ಗೆ ನ್ಯಾಯ ಸಿಗಬೇಕು, ಹಾಗಾಗಿ ದೂರು ಕೊಟ್ಟಿದ್ದೇನೆ ಎಂದು ರಾಮನಗರದ ಪ್ರವಾಸಿ ಮಂದಿರದಲ್ಲಿ ಸಿ.ಎಂ.ಲಿಂಗಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.


from India & World News in Kannada | VK Polls https://ift.tt/2nrwFUM

ಹೆಲ್ಮೆಟ್‌ ಇದ್ರೆ ಮಾತ್ರ ಪೆಟ್ರೋಲ್‌: ಬಾಗಲಕೋಟೆಯಲ್ಲಿ ಇಂದಿನಿಂದ ಹೊಸ ನಿಯಮ ಜಾರಿ

: ಹೆಲ್ಮೆಟ್‌ ಹಾಕಿಕೊಳ್ಳದೇ ಪೆಟ್ರೋಲ್‌ ಬಂಕ್‌ಗೆ ಹೋಗಿ ಆನ್‌ಲೈನ್‌ ಪೇಮೆಂಟ್‌ ಮಾಡ್ತೇನೆ ಎಂದರೂ ಸಾಧ್ಯವಿಲ್ಲ, ಜಿಲ್ಲೆಯಲ್ಲಿ ಇಂದಿನಿಂದ ಹೆಲ್ಮೆಟ್‌ ಇದ್ದರೆ ಮಾತ್ರ ಬೈಕ್‌ ಓಡಿಸಲು ಸಾಧ್ಯ!. ಹೌದು, ಹಾಕದಿದ್ದರೆ ವಾಹನಕ್ಕೆ ಇಲ್ಲ ಎಂಬ ನಿಯಮವನ್ನು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಇಂದಿನಿಂದ ಜಾರಿಗೊಳಿಸಿದೆ. ಬೆಳಗ್ಗೆಯಿಂದ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಪೆಟ್ರೋಲ್ ನೀಡುತ್ತಿಲ್ಲ‌. ಪೊಲೀಸರು ಬಂಕ್‌ಗಳಲ್ಲಿದ್ದು ಹೆಲ್ಮೆಟ್ ಇರದ ಸವಾರರಿಗೆ ದಂಡ ವಿಧಿಸಲಿದ್ದಾರೆ. ಶಾಲೆ, ಕಾಲೇಜುಗಳಿಗೆ ಬೈಕ್ ತರುವ ವಿದ್ಯಾರ್ಥಿಗಳು, ಶಿಕ್ಷಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿದ್ದರೆ ಮಾತ್ರ ಪ್ರವೇಶ ಎಂಬ ನಿಯಮವೂ ಪ್ರಾಯೋಗಿಕ ವಾಗಿ ಜಾರಿಯಾಗಿದೆ. ಶಿರಸ್ತ್ರಾಣ ಬೇಕು ಹೊಸ ಐಡಿಯಾ ಮೂಲಕ ಬೈಕ್‌ ಸವಾರರ ಲ್ಲಿಹೆಲ್ಮೆಟ್‌ ಬಳಕೆ ಕಡ್ಡಾಯಗೊಳಿಸಲು ಚಿಂತಿಸಿರುವ ಎಸ್‌ಪಿ ಲೋಕೇಶ ಜಗಲಾಸರ್‌ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತೀಚೆಗಷ್ಟೇ ಪೆಟ್ರೋಲ್‌ ಬಂಕ್‌ ಮಾಲೀಕರೊಂದಿಗೆ ಸಭೆ ನಡೆಸಿ ಹೆಲ್ಮೆಟ್‌ ಕಡ್ಡಾಯಕ್ಕೆ ಹೊಸ ಸೂತ್ರ ರೆಡಿ ಮಾಡಿದ್ದಾರೆ. ಸೆ.28 ರಿಂದ ಜಿಲ್ಲೆಯ ಎಲ್ಲ ಬಂಕ್‌ಗಳಲ್ಲಿ ಪೆಟ್ರೋಲ್‌ ಬೇಕು ಎಂದರೆ ಹೆಲ್ಮೆಟ್‌ ಧರಿಸಿರಲೇಬೇಕು. ನಗದು ನೀಡಿದರೂ ಅಷ್ಟೇ, ಆನ್‌ಲೈನ್‌ನಲ್ಲಿಹಣ ನೀಡುತ್ತೇವೆ ಎಂದರೂ ಪ್ರಯೋಜನವಿಲ್ಲ. ಹೆಲ್ಮೆಟ್‌ ಇಲ್ಲದಿದ್ದರೆ ನಿಮ್ಮ ಬೈಕ್‌ನ ಟ್ಯಾಂಕ್‌ ಖಾಲಿಯಾಗಿಯೇ ಇರುವುದು ನಿಶ್ಚಿತ. ಬಹುತೇಕ ಬಂಕ್‌ಗಳಲ್ಲಿ ಶನಿವಾರದಿಂದ ಪೊಲೀಸರು ನಿಗಾ ವಹಿಸಲಿದ್ದಾರೆ. ಹೆಲ್ಮೆಟ್‌ ಧರಿಸದವರಿಗೆ ದಂಡ ವಿಧಿಸುವುದಕ್ಕಾಗಿಯೇ ಕಾನ್‌ಸ್ಟೇಬಲ್‌ಗಳು ನಿಯೋಜನೆಗೊಳ್ಳಲಿದ್ದಾರೆ. ಆಯಾ ಠಾಣೆಗಳ ಪಿಎಸ್‌ಐಗಳು ಹೆಲ್ಮೆಟ್‌ ಧರಿಸದ ಸವಾರರಿಗೆ ದಂಡ ವಿಧಿಸಲು ಸಜ್ಜಾಗಿದ್ದಾರೆ. ಹೆಲ್ಮೆಟ್‌ ಧರಿಸದೇ ಬಂಕ್‌ಗೆ ಬಂದರೆ ಪೊಲೀಸರು ದಂಡದ ರಸೀದಿ ನೀಡುವುದು ಖಚಿತ. ಪೆಟ್ರೋಲ್‌ ಬಂಕ್‌ ಅಸೋಸಿಯೇಶನ್‌ ಕೂಡ ಅಭಿಯಾನಕ್ಕೆ ಸಾಥ್‌ ನೀಡಿದ್ದು, ಯಾವುದೇ ಕಾರಣಕ್ಕೂ ಹೆಲ್ಮೆಟ್‌ ರಹಿತ ಸವಾರರಿಗೆ ಪೆಟ್ರೋಲ್‌ ನೀಡುವುದಿಲ್ಲಎಂದು ತಿಳಿಸಿದ್ದಾರೆ. ಜತೆಗೆ ಸೀಟ್‌ ಬೆಲ್ಟ್‌ ಧರಿಸದ ಕಾರ್‌ ಸೇರಿದಂತೆ ಇತರ ವಾಹನಗಳ ಚಾಲಕರಿಗೂ ಇಂಧನ ದೊರೆಯುವುದಿಲ್ಲ. ಗೇಟ್‌ನಲ್ಲೇ ತಪಾಸಣೆ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಲ್ಮೆಟ್‌ ಬಳಕೆ ಬಗ್ಗೆ ಅರಿವು ಮೂಡಿಸಲು ಕೂಡ ಪೊಲೀಸ್‌ ಇಲಾಖೆ ಮುಂದಾಗಿದೆ. ಸೆ.28 ರಿಂದ ಜಿಲ್ಲೆಯ ಎಲ್ಲಶಾಲೆ, ಕಾಲೇಜ್‌ ಆವರಣಗಳಿಗೆ ಹೆಲ್ಮೆಟ್‌ ಧರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಮೊದಲು ವಿದ್ಯಾರ್ಥಿಗಳಲ್ಲಿಹೆಲ್ಮೆಟ್‌ ಬಳಕೆ ಬಗ್ಗೆ ಎಚ್ಚರಿಕೆ ನೀಡಿ ಶಿಕ್ಷಣ ಸಂಸ್ಥೆಗಳು ಅರಿವು ಮೂಡಿಸಲಿವೆ. ಹೆಲ್ಮೆಟ್‌ ಧರಿಸದೇ ಬಂದರೆ ಪ್ರವೇಶವಿಲ್ಲಎನ್ನುವ ನಿಯಮ ಅನುಸರಿಸಲಿವೆ. ಹೀಗಾಗಿ ಶನಿವಾರದಿಂದ ಬೈಕ್‌ ಸವಾರರು ಇಂಧನ ಟ್ಯಾಂಕ್‌ ಚೆಕ್‌ ಮಾಡುವ ಮೊದಲು ಹೆಲ್ಮೆಟ್‌ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಶಾಲೆ, ಕಾಲೇಜ್‌ಗಳ ವಿದ್ಯಾರ್ಥಿಗಳು ಹೆಲ್ಮೆಟ್‌ ಇದ್ದರೆ ಮಾತ್ರ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯ !. ಬಂಕ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಹೆಲ್ಮೆಟ್‌ ಧರಿಸದ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ಅಧಿಕಾರಿಗಳು, ಸಿಬ್ಬಂದಿ ಬಂಕ್‌ಗಳಲ್ಲಿದ್ದು ಹೆಲ್ಮೆಟ್‌ ಬಳಕೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ- ಲೋಕೇಶ ಜಗಲಾಸರ್‌, ಎಸ್‌ಪಿ ನಮ್ಮ ಸಂಸ್ಥೆಯ ಶಾಲೆ, ಕಾಲೇಜ್‌ಗಳ ಮುಖ್ಯಸ್ಥರ ಸಭೆ ನಡೆಸಿ ಸೂಚನೆ ನೀಡಲಾಗುತ್ತದೆ. ಭದ್ರತಾ ಸಿಬ್ಬಂದಿ ಗೇಟ್‌ ಬಳಿ ವಿದ್ಯಾರ್ಥಿಗಳನ್ನು ತಡೆದು ಹೆಲ್ಮೆಟ್‌ ಧರಿಸುವ ಬಗ್ಗೆ ಅರಿವು ಮೂಡಿಸಲಿದ್ದಾರೆ- ಅಶೋಕ ಸಜ್ಜನ, ಕಾರ್ಯಾಧ್ಯಕ್ಷ, ಬವಿವ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಜಿಲ್ಲೆಯ ಎಲ್ಲ ಬಂಕ್‌ಗಳ ಮಾಲೀಕರು ಹೆಲ್ಮೆಟ್‌ ಇಲ್ಲದಿದ್ದರೆ ಪೆಟ್ರೋಲ್‌ ಇಲ್ಲಎನ್ನುವ ನಿಯಮ ಅನುಸರಿಸಲಿದ್ದಾರೆ. ಸುರಕ್ಷಿತ ಚಾಲನೆಗಾಗಿ ಹೆಲ್ಮೆಟ್‌ ಅವಶ್ಯಕ. ಎಲ್ಲಬೈಕ್‌ ಸವಾರರು ಈ ನಿಯಮ ಪಾಲಿಸಬೇಕು - ಶಿವಪ್ಪ ಅಕ್ಕಿಮರಡಿ, ಅಧ್ಯಕ್ಷ, ಜಿಲ್ಲಾಪೆಟ್ರೋಲ್‌ ಬಂಕ್‌ ಮಾಲೀಕರ ಸಂಘಟನೆ


from India & World News in Kannada | VK Polls https://ift.tt/2mk9ETv

ಅಬ್ಬಬ್ಬಾ! ಭಾರತದ ಪ್ರತಿಯೊಬ್ಬನ ಮೇಲಿನ ಸಾಲ ರೂ. 6.2 ಲಕ್ಷಕ್ಕಿಂತಲೂ ಹೆಚ್ಚು!

ಭಾರತ ಸರಕಾರದ ಒಟ್ಟು ಸಾಲ ಕಳೆದ ಜೂನ್‌ ಅಂತ್ಯಕ್ಕೆ 88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಇಲಾಖೆಯ ತ್ರೈಮಾಸಿಕ ವರದಿ ತಿಳಿಸಿದೆ. ಆರ್ಥಿಕ ಹಿಂಜರಿತ, ಕುಸಿತ, ನಿರುದ್ಯೋಗ ಹೆಚ್ಚಳದಂತಹ ಪ್ರಮುಖ ಸಮಸ್ಯೆಗಳ ಜತೆಗೆ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಭಾರತದ ಜನಸಂಖ್ಯೆ ಸುಮಾರು 136 ಕೋಟಿ ಇದೆ. ಅಂದರೆ ಭಾರತದ ಪ್ರತಿಯೊಬ್ಬ ಪ್ರಜೆಯ ಮೇಲೆ ಸುಮಾರು 6.2 ಲಕ್ಷ ರೂ.ಗಿಂತ ಹೆಚ್ಚಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 84.6 ಲಕ್ಷ ಕೋಟಿ ರೂ. ಇತ್ತು. ಭಾರತದ ಒಟ್ಟು ಉತ್ತರದಾಯಿತ್ವದಲ್ಲಿ ಸಾರ್ವಜನಿಕ ಸಾಲ ಶೇ.89.4ರಷ್ಟು ಇದೆ. ಈ ವರ್ಷ ಮತ್ತೆ ಸಾಲ ಹೆಚ್ಚಳವಾಗಿದ್ದೇಕೆ? ಇಲ್ಲಿದೆ ವಿವರ.


from India & World News in Kannada | VK Polls https://ift.tt/2o1EmkB

ಪಿಂಚಣಿ ಕೊಟ್ಟು ಉಗ್ರರ ಸಾಕುತ್ತಿರುವುದನ್ನು ಒಪ್ಪಲಿದೆಯೇ ಪಾಕ್‌?: ಪಟ್ಟು ಹಾಕಿದ ಭಾರತ

ಹೊಸದಿಲ್ಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸುಮಾರು ೫೦ ನಿಮಿಷಗಳ ಕಾಲ ಪಾಕ್‌ ಪ್ರಧಾನಿ ಭಾರತದ ಮೇಲೆ ಹಲವು ಆರೋಪಗಳನ್ನು ಹೊರಿಸಿದ್ದರು. ಈ ಆರೋಪಗಳಿಗೆ ಭಾರತ ತಕ್ಕ ಉತ್ತರ ನೀಡಿದೆ. ಪಟ್ಟಿ ಮಾಡಿರುವ ಅಲ್-ಖೈದಾ ಹಾಗೂ ಇತರರ ಸಂಘಟನೆಯ 130 ಉಗ್ರರಿಗೆ ಪಿಂಚಣಿ ನೀಡುತ್ತಿರುವ ಏಕೈಕ ರಾಷ್ಟ್ರ ಎಂದು ಪಾಕಿಸ್ತಾನ ಒಪ್ಪಿಕೊಳ್ಳಲಿದೆಯೇ? ಎಂದು ಪಾಕಿಸ್ತಾನಕ್ಕೆ ಭಾರತ ಪ್ರಶ್ನೆ ಮಾಡಿದೆ. ವಿಶ್ವಸಂಸ್ಥೆಯ ಶಾಶ್ವತ ಮಿಷನ್‌ನ ಮೊದಲ ಭಾರತದ ಕಾರ್ಯದರ್ಶಿ , ಇಮ್ರಾನ್‌ ಖಾನ್‌ ಅವರ ಪ್ರತಿಯೊಂದು ಆರೋಪಗಳಿಗೂ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನದ ಕುತಂತ್ರಗಳ ಮೇಲೆ ಬೆಳಕು ಚೆಲ್ಲುವ ಗಂಭೀರ ಪ್ರಶ್ನೆಗಳನ್ನು ಕೇಳುವ ಮೂಲಕ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಲಿಬಿಲಿ ಉಂಟಾಗುವಂತೆ ಮಾಡಿದ್ದಾರೆ. ಭಾತದ ಪ್ರಶ್ನೆಗಳು
  • ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಅಲ್-ಖೈದಾ ಹಾಗೂ ಇತರೆ 25 ಉಗ್ರ ಸಂಘಟನೆಯ 130 ಉಗ್ರರಿಗೆ ಪಿಂಚಣಿ ನೀಡುತ್ತಿರುವ ರಾಷ್ಟ್ರ ಎಂದು ಪಾಕಿಸ್ತಾನ ಒಪ್ಪಿಕೊಳ್ಳಲಿದೆಯೇ?
  • ವಿಶ್ವ ಸಂಸ್ಥೆ ಪಟ್ಟಿ ಮಾಡಿರುವ ಉಗ್ರರಿಗೆ ಪಿಂಚಣಿ ನೀಡಿ ಸಲಹುತ್ತಿರುವ ಏಕಯಕ ರಾಷ್ಟ್ರ ಪಾಕಿಸ್ತಾನ ಎಂದು ಅಧಿಕೃತವಾಗಿ ಘೋಷಣೆ ಮಾಡಲಿದೆಯೇ?
  • ಪಾಕಿಸ್ತಾನದ ಪ್ರಮುಖ ಬ್ಯಾಂಕಾದ ಹಬೀಬ್‌ ಬ್ಯಾಂಕಿಗೆ, ಉಗ್ರರ ಸಂಘಟನೆ ಹಣಕಾಸು ನೆರವು ನೀಡುತ್ತಿದೆ ಎಂಬ ಕಾರಣಕ್ಕೆ ಮಿಲಿಯನ್‌ಗಟ್ಟಲೆ ದಂಡ ವಿಧಿಸಲಾಗಿದೆ. ಇದಾದ ನಂತರ ಅಮೆರಿಕದ ನ್ಯೂಯಾರ್ಕ್‌ನಲ್ಲಿದ್ದ ಹಬೀಬ್‌ ಬ್ಯಾಂಕ್‌ ಶಾಖೆಯನ್ನು ಮುಚ್ಚಿದ್ದು ಏಕೆ? ಈ ಕುರಿತು ಪಾಕಿಸ್ತಾನ ವಿವರಣೆ ನೀಡಲಿದೆಯೇ?
  • ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆ () ಪಾಕಿಸ್ತಾನವನ್ನು ಬೂದು ಪಟ್ಟಿಗೆ (ಗ್ರೇ ಲಿಸ್ಟ್‌) ಸೇರಿಸಿತ್ತು. ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ '27 ಅಂಶಗಳ ಕಾರ್ಯಯೋಜನೆ' ಸಿದ್ದಪಡಿಸಿತ್ತು. ಈ 27 ಮಾನದಂಡಗಳ ಪೈಕಿ 20 ಮಾನದಂಡಗಳ ಉಲ್ಲಂಘನೆಯಾಗಿವೆ. ಈ ಕುರಿತು ವಿವರಣೆ ನೀಡಲಿದೆಯೇ ಪಾಕಿಸ್ತಾನ?
ಈ ಮೇಲಿನ ಪ್ರಶ್ನೆಗಳನ್ನು ಕೇಳುವ ಮೂಲಕ ಪಾಕಿಸ್ತಾನವನ್ನು ಗಲಿಬಿಲಿಗೊಳಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಮಾತನಾಡಿದ್ದ ಇಮ್ರಾನ್ ಖಾನ್ ಯುದ್ಧೋನ್ಮಾದ ತೋರಿದ್ದರು. ಇದಕ್ಕೆ ವಿದೇಶಾಂಗ ಸಚಿವಾಲಯದ ಮೊದಲ ಕಾರ್ಯದರ್ಶಿ ವಿಧಿಶಾ ಮೈತ್ರಾ ತಿರುಗೇಟು ನೀಡಿದ್ದಾರೆ. ಇಮ್ರಾನ್ ಖಾನ್‌ ಅವರು ಆರ್ಎಸ್ಎಸ್ ಮತ್ತು ಮೋದಿ ಮೇಲೆ ಖಾನ್ ವೈಯಕ್ತಿಕ ದಾಳಿ ನಡೆಸಿದ್ದರು. ಭಾರತಕ್ಕಿಂತ ಏಳು ಪಟ್ಟು ಗಾತ್ರದಲ್ಲಿ ಚಿಕ್ಕದಿರುವ ಪಾಕ್ ಎದುರು ಭಾರತ ಯುದ್ಧ ಮತ್ತು ಶರಣಾಗತಿಯ ಆಯ್ಕೆ ಇಟ್ಟರೆ ನಾವು ಯುದ್ಧವನ್ನೇ ಆರಿಸುತ್ತೇವೆ. ಇದರ ಪರಿಣಾಮವನ್ನು ಇಡಿ ವಿಶ್ವವೇ ಎದುರಿಸಬೇಕು ಎಂದು ವಿಧಿಶಾ ಮೈತ್ರಾ ಎಚ್ಚರಿಕೆ ನೀಡಿದ್ದಾರೆ. ಅಣ್ವಸ್ತ್ರಶಕ್ತ ರಾಷ್ಟ್ರಗಳ ನಡುವೆ ಯುದ್ಧ ನಡೆದ ಅದರ ಪರಿಣಾಮವನ್ನು ಇಡೀ ವಿಶ್ವವೇ ಅನುಭವಿಸಬೇಕು ಎನ್ನುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.


from India & World News in Kannada | VK Polls https://ift.tt/2nrvjZS

ಸರಕಾರದ ಬೊಕ್ಕಸಕ್ಕೆ ಪೆಟ್ಟು, ಮದ್ಯ ಮಾರಾಟಕ್ಕೆ ಟಾರ್ಗೆಟ್ : ಲೈಸೆನ್ಸ್‌ ದಾರರಿಗೆ ಸಂಕಷ್ಟ

16ರ ಮಗಳ ತಾಯಿ, ಬೆಂಗಳೂರು ಮಹಿಳೆ ಆದ್ಲು ಬಾಡಿ ಬಿಲ್ಡಿಂಗ್ ಚಾಂಪಿಯನ್..!

ಹೊಸದಿಲ್ಲಿ: ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮಟ್ಟ ಕಡಿಮೆಯಾಗಿರುತ್ತದೆ. ಇನ್ನು ವಿವಾಹದ ಬಳಿಕವಂತೂ ಎಲ್ಲ ಕ್ಷೇತ್ರದಂತೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವವರ ಮಹಿಳೆಯರ ಸಂಖ್ಯೆ ತುಂಬಾನೇ ಕಡಿಮೆ. ಹಾಗಿರಬೇಕೆಂದರೆ ಮೂಲದ ಮಹಿಳೆಯೊಬ್ಬಾಕೆ ಬಾಡಿ ಬಿಲ್ಡಿಂಗ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮಾದರಿಯಾಗಿದ್ದಾರೆ. 16 ವರ್ಷದ ಮಗಳ ತಾಯಿಯಾಗಿರುವ 41ರ ಹರೆಯದ , ಕೆೋರಮಂಗಲದಲ್ಲಿ ನಡೆದ ಇಂಡಿಯನ್ ಮತ್ತು ಫಿಟ್ನೆಸ್ ಚಾಂಪಿಯನ್‌ಶಿಪ್‌ನಲ್ಲಿ ಫಿಗರ್ ಹಾಗೂ ಫಿಟ್ನೆಸ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ದೈಹಿಕ ಜತೆಗೆ ಮಾನಸಿಕ ಮನೋಬಲದಿಂದ ಮಾತ್ರ ಇದು ಸಾಧ್ಯವಾಯಿತು ಎಂದು ಬೆಂಗಳೂರು ಮಹಿಳೆ ತಾವು ಪಟ್ಟಿರುವ ಪರಿಶ್ರಮವನ್ನು ವಿವರಿಸಿದ್ದಾರೆ. ದೈನಂದಿನ ಬೆಳಗ್ಗೆ ಐದು ಗಂಟೆಗೆ ಎದ್ದೇಳುವ ಜೋತ್ಸ್ನಾ, ತಮ್ಮ ಪ್ರೀತಿಯ ಆಹಾರವನ್ನು ದೂರವಿರಿಸಿ ಫಿಟ್ನೆಸ್‌ಗಾಗಿ ಪೈಪೋಟಿ ನಡೆಸುತ್ತಾರೆ. ಜಿಮ್‌ನಲ್ಲಿ ನಾಲ್ಕು ತಾಸುಗಳಷ್ಟು ಹೊತ್ತು ಕಸರತ್ತು ನಡೆಸುವ ಈಕೆ, ಬಾಡಿ ಬಿಲ್ಡಿಂಗ್‌ನಲ್ಲಿ ಅವಿರತ ಪ್ರಯತ್ನದ ಮೂಲಕ ಸಾಧನೆ ಮಾಡಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಬಾಡಿ ಬಿಲ್ಡಿಂಗ್ ವೃತ್ತಿಯಾಗಿ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅಂತವರಿಗಾಗಿ ಪ್ರೇರಣೆಯಾಗಲು ಜಿವಿ ಫಿಟ್ನೆಸ್ ಮತ್ತು ಗ್ರೂಮಿಂಗ್ ಎಕ್ಸ್‌ಪರ್ಟ್ಸ್ ಆರಂಭಿಸಿದ್ದಾರೆ. ಈ ಮೂಲಕ ಇತರೆ ಮಹಿಳೆಯರಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಉತ್ತಮ ವೇದಿಕೆವೊದಗಿಸಿದ್ದಾರೆ. ತಾಯ್ತನದ ನೆನಪುಗಳನ್ನು ವಿವರಿಸಿರುವ ಜೋತ್ಸ್ನಾ, ಹೆರಿಗೆಯ ಬಳಿಕ 25 ಕೆ.ಜಿ.ಗಳಷ್ಟು ತೂಕ ವೃದ್ಧಿಸಿಕೊಂಡಿದ್ದರು. ಒಂದು ಹಂತದಲ್ಲಿ ದೇಹದ ತೂಕವು 78 ಕೆ.ಜಿ.ಗಳಷ್ಟಾಗಿತ್ತು. ಆದರೆ ಸಕ್ರಿಯ ಜಿವನಶೈಲಿಯೊಂದಿಗೆ ಸಮತೋಲಿತ ಆಹಾರ ಕ್ರಮವನ್ನು ಅನುಸರಿಸಲು ಪ್ರಾರಂಭಿಸಿದರೆ ಫಿಟ್ ಆಗಿರಬಹುದು ಎಂದು ತಿಳಿಸುತ್ತಾರೆ. ಅಲ್ಲಿಂದ ಬಳಿಕ ನಿರಂತರ ಹೋರಾಟ ಆರಂಭವಾಯಿತು. ಕಟ್ಟುನಿಟ್ಟಿನ ಆಹಾರ ಕ್ರಮ ಕಠಿಣ ಅಭ್ಯಾಸದಿಂದ ಫಿಟ್ನೆಸ್ ಮರಳಿ ಪಡೆಯಲು ಸಾಧ್ಯವಾಯಿತು ಎಂದು ವಿವರಿಸಿದರು. ಅಷ್ಟಕ್ಕೂ ಮುಂದಿನ ಒಂಬತ್ತು ತಿಂಗಳ ಬಳಿಕ ನಡೆಯಿಲಿರುವ ಅಂತಾರಾಷ್ಟ್ರೀಯ ಫಿಟ್ನೆಸ್ ಸ್ಪರ್ಧೆಯಲ್ಲಿ ಭಾಗವಹಿಸುವುದು ಜೋತ್ಸ್ನಾ ಮುಂದಿನ ಕನಸಾಗಿದೆ. ಜಾಗತಿಕ ಮಟ್ಟದಲ್ಲೂ ಭಾರತದ ಕೀರ್ತಿ ಪತಾಕೆ ಹಾರಿಸಲಿ ಎಂದು ನಾವೆಲ್ಲರೂ ಹಾರೈಸೋಣ!


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2nqOwLe

ಎಲ್ಲ ದೇಶಗಳ ಬಾಗಿಲು ತಟ್ಟುವ ಪಾಕ್‌ ವ್ಯಂಗ್ಯಚಿತ್ರಕ್ಕೆ ವಿಷಯವಾಗ್ತಿದೆ: ರಾಜನಾಥ್ ಸಿಂಗ್

ಹೊಸದಿಲ್ಲಿ: ಪಾಕಿಸ್ತಾನ ಪ್ರಧಾನಿ ವಿಶ್ವದ ಎಲ್ಲ ರಾಷ್ಟ್ರಗಳ ಬಾಗಿಲು ತಟ್ಟುತ್ತಿದ್ದು, ವ್ಯಂಗ್ಯಚಿತ್ರಗಳಿಗೆ ವಿಷಯ ಹುಟ್ಟುಹಾಕುತ್ತಿದೆ ಎಂದು ಕೇಂದ್ರ ರಕ್ಷಣಾ ಮಂತ್ರಿ ಹೇಳಿದ್ದಾರೆ. ಮುಂಬೈನ ಮಜಗಾವ್‌ ಡಾಕ್‌ಯಾರ್ಡ್ನಲ್ಲಿ ದೇಶದ ಎರಡನೇ ಸ್ಕಾರ್ಪೀನ್‌ ದರ್ಜೆ ಜಲಾಂತರ್ಗಾಮಿಗೆ ನೌಕಾಸೇನೆಗೆ ನಿಯೋಜಿಸಿ ಮಾತನಾಡಿದರು. ಮುಂಬೈ ದಾಳಿ ಮಾದರಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಲಾಗಿದೆ . ಆದರೆ, ಅದು ಅವರಿಂದ (ಉಗ್ರರಿಂದ) ಸಾಧ್ಯವಿಲ್ಲ. ಪಾಕಿಸ್ತಾನ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಅತ್ಯಂತ ಬಲಿಷ್ಠವಾಗಿದೆ. ಸಸಶಸ್ತ್ರ ದಳವನ್ನು ಮತ್ತಷ್ಟು ಬಲಗೊಳಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದರು. ದೇಶದ ಎರಡನೇ ಸ್ಕಾರ್ಪಿಯನ್‌ ಶ್ರೇಣಿಯ ಅತ್ಯಾಧುನಿಕ 'ಐಎನ್‌ಎಸ್‌ ಖಂಡೇರಿ' ಜಲಾಂತರ್ಗಾಮಿಯು ಇಂದು (ಸೆ.28) ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಧಿಕೃತವಾಗಿ ನೌಕಾಪಡೆಯ ಸೇವೆಗೆ ಸಮರ್ಪಿಸಿದ್ದಾರೆ. 'ಐಎನ್‌ಎಸ್‌ ಖಂಡೇರಿ' ಜಲಾಂತರ್ಗಾಮಿಯು ಯುದ್ಧ ನೌಕೆಗಳನ್ನು ಹೊಡೆದುರುಳಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಇನ್ನು, 2020ರಲ್ಲಿಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿರುವ ಫ್ರಾನ್ಸ್‌ನ ರಫೇಲ್‌ ಯುದ್ಧ ವಿಮಾನಗಳಲ್ಲಿಸ್ಕಾಲ್ಪ್‌ ಹಾಗೂ ಮೆಟೋರ್‌ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ. ಸ್ಕಾಲ್ಪ್‌ ಕ್ಷಿಪಣಿ ಅಳವಡಿಸಲಾಗಿರುವ ರಫೇಲ್‌ ಮೂಲಕ ಪಾಕಿಸ್ತಾನದ ಗುರಿಗಳನ್ನು ಸುಲಭವಾಗಿ ಧ್ವಂಸಗೊಳಿಸಬಹುದಾಗಿದೆ. ಖಂಡೇರಿ ವಿಶೇಷತೆ: ಫ್ರಾನ್ಸ್‌ ಜತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಡಿ 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಈಣಶ ಖಂಡೇರಿ ಕೂಡ ಒಂದು. ಮುಂಬೈನ ಮಝಗಾಂ ಹಡಗು ಕಟ್ಟೆಯಲ್ಲಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ. ಒಟ್ಟು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕಾರ್ಪೀನ್‌ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.


from India & World News in Kannada | VK Polls https://ift.tt/2nVvvAT

ಕ್ರಾಂತಿಕಾರಿ ಭಗತ್ ಸಿಂಗ್ 112ನೇ ಜನ್ಮದಿನ, ತಿಳಿಯಲೇಬೇಕಾದ ವಿಚಾರಗಳಿವು.....

ಇಂದು ಬ್ರಿಟಿಷರ ಎದೆ ನಡುಗಿಸಿದ , ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಅವರ 112ನೇ . ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತಿದೆ. ಸೆಪ್ಟಂಬರ್ 27, 1907ರಂದು ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಭಗತ್ ಸಿಂಗ್ ರವರ ಜನನವಾಯಿತು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ. ಇವರ ತಾಯಿ ವಿದ್ಯಾವತಿ, ತಂದೆ ಕಿಶನ್ ಸಿಂಗ್ ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. "ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು" ಎಂಬುದು ಭಗತ್ ಸಿಂಗ್ ಅವರ ಮಾತುಗಳು. ಇಂತಹ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23ರಂದು ಸಂಜೆ 7 ಗಂಟೆ 33 ನಿಮಿಷಗಳ ಸಮಯದಲ್ಲಿ ತನ್ನಿಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ರವರ ಜೊತೆ ಗಲ್ಲಿಗೇರಿಸಲಾಯ್ತು. ಈ ಧೀಮಂತ ನಾಯಕನಿಗೆ ಆಗ ಕೇವಲ 23 ವರ್ಷ! ಭಗತ್ ಸಿಂಗ್ ಬಗೆಗಿನ ವಿಚಾರಗಳಿವು: * ಮಹಾತ್ಮಾ ಗಾಂಧಿಯವರ ಅಹಿಂಸಾವಾದದ ಬಗ್ಗೆ ಭಗತ್ ಸಿಂಗ್‌ಗೆ ಹೆಚ್ಚು ನಂಬಿ ಇಟ್ಟಿರಲಿಲ್ಲ. ಮದುವೆಯಾಗಲು ನಿರಾಕರಿಸಿದ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. *ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಅವರು ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಕುವುದೇ ಭಗತ್, ಮತ್ತು ಅವರ ಗೆಳೆಯರ ಉದ್ದೇಶವಾಗಿತ್ತು. ಹೀಗಾಗಿ, ರಿವಾಲ್ವಾರ್ ಎಸೆದು, ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡದೆ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು. *ಬಾಂಬ್ ಎಸೆದ ಬಳಿಕ "ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ನಾವು ಬ್ರಿಟೀಷ್ ಸರಕಾರಕ್ಕೆ ಬಾಂಬ್ ಹಾಕಿದ್ದೆವು" ಎಂದು ಸಿಂಗ್ ಹೇಳಿದ್ದರು. *ಇನ್ಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಹುಟ್ಟು ಹಾಕಿದ್ದೇ ಭಗತ್ ಸಿಂಗ್. ಇದು ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು. * ಸಮಾಜವಾದ ಮತ್ತು ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಅವರು ಅತೀ ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ್ದ ಓದಿನ ಪ್ರೀತಿ ಬದುಕಿನ ಕೊನೆ ಕ್ಷಣದವರೆಗೂ ಇತ್ತು. *ಭಗತ್ ಸಿಂಗ್ ಪರ ವಕೀಲ ಪ್ರಾಣನಾಥ್ ಮೆಹ್ತಾ, ಕೊನೆಯದಾಗಿ ಭೇಟಿಯಾದಾಗ ಭಗತ್ ‘ನಾನು ಹೇಳಿದ್ದ ‘The Revolutionary lenin’ ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ್ದರು. ಪುಸ್ತಕ ಕೈಗೆ ಬರುತ್ತಿದ್ದಂತೆ ಓದಲು ಕುಳಿತೇ ಬಿಟ್ಟರು! ನಾಳೆ ನೇಣಿಗೆ ಕೊರಳುಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೋಮಾಂಚನಗೊಂಡ ಮೆಹ್ತಾ, ‘ದೇಶವಾಸಿಗಳಿಗೆ ನಿಮ್ಮ ಸಂದೇಶವೇನು?’ ಎಂದು ಕೇಳಿದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಶಾಹಿಗೆ ಧಿಕ್ಕಾರ, ಇನ್ಕ್ವಿಲಾಬ್ ಜಿಂದಾಬಾದ್ - ಈ ಎರಡು ಘೋಷಣೆಗಳನ್ನು ಜನತೆಗೆ ತಿಳಿಸಿ’ ಎಂದರು. * ಬ್ರಿಟಿಷ್ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪದ ಮೇಲೆ ಅವರಿಗೆ ನೇಣು ಶಿಕ್ಷೆ ವಿಧಿಲಾಗಿತ್ತು. ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. *ಆದರೆ ಸಿಂಗ್ ಗೆ ವಿಧಿಸಿರುವ ಶಿಕ್ಷೆಯನ್ನು ರದ್ಧು ಮಾಡಬೇಕೆಂದು ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಮಿಕ್ಕಿ ಜನ ಪ್ರತಿಭಟನೆಯನ್ನು ಹಮ್ಮಿಕೊಂಡದ್ದನ್ನು ಅರಿತ ಬ್ರಟೀಷರು ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, 7.30ಕ್ಕೆ ಗಲ್ಲಿಗೇರಿಸಿದರು. *ಗಲ್ಲಿಗೇರುವುದಕ್ಕೂ ಮುನ್ನ ಭಗತ್ ತನ್ನ ತಾಯಿಗೆ "ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ನೀನು ಯಾವುದೇ ಕಾರಣಕ್ಕೂ ಕಣ್ಣಿರಿಡಬಾರದು. ನಿನ್ನ ಕಣ್ಣೀರು ನೋಡಿ ಭಗತ್ ಸಿಂಗ್ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ ಎಂದು ಬ್ರಿಟೀಷರು ಆಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ ಎಂದು ಧೈರ್ಯ ತುಂಬಿದ್ದರು. ಆ ತಾಯಿ ಕಣ್ಣೀರಿನ ಜೊತೆ ಹೂಂ ಎಂದು ಮಾತುಕೊಟ್ಟಳು. * ನಿಗದಿಪಡಿಸಿದ ವೇಳೆಗಿಂತ 1 ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು. *ಉತ್ತಮ ನಟರೂ ಆಗಿದ್ದ ಭಗತ್ ಕಾಲೇಜಿನಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಬಾಲ್ಯದಲ್ಲಿ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲ ಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಹೇಳುತ್ತಿದ್ದರು. *ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ 'ಹುತಾತ್ಮ'ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ 'ಹುತಾತ್ಮ' ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡಬೇಕೆಂದು ಒತ್ತಾಯಿಸಿ ಹೋರಾಡುತ್ತಲೇ ಇದೆ.


from India & World News in Kannada | VK Polls https://ift.tt/2nn2mhX

ಬಳ್ಳಾರಿ ವಿಭಜನೆ ವಿರುದ್ಧ ಮತ್ತೆ ಧ್ವನಿ ಎತ್ತಿದ ಸೋಮಶೇಖರ ರೆಡ್ಡಿ

: ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆಯನ್ನು ಪ್ರತ್ಯೇಕವಾಗಿ ರಚಿಸುವ ಪ್ರಸ್ತಾವಕ್ಕೆ ಶಾಸಕ ಸೋಮಶೇಖರ್ ರೆಡ್ಡಿ ಮತ್ತೊಮ್ಮೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ವಿಜಯನಗರ ಜಿಲ್ಲೆ ಆಗಬೇಕೆಂದು ಆನಂದ್ ಸಿಂಗ್ ಒಬ್ಬರು ರಾಜೀನಾಮೆ ಕೊಟ್ಟಿದ್ದಾರೆ ಅಂತ ಹಾಗೆ ಮಾಡೋಕೆ ಹೋಗುವುದು ಸರಿಯಲ್ಲ. ಇಬ್ಭಾಗಕ್ಕೆ ವಿರೋಧಿಸಿ ನಾವು ಜಿಲ್ಲೆಯ ನಾಲ್ಕು ಜನ ಬಿಜೆಪಿ ಶಾಸಕರು ರಾಜೀನಾಮೆ ಕೊಟ್ಟರೆ? ಎಂದು ಅವರು ಪ್ರಶ್ನೆ ಮಾಡಿದರು. ಆನಂದ್ ಸಿಂಗ್ ರಾಜೀನಾಮೆಗೆ ನೀಡಿದ್ದಕ್ಕೆ, ಸರಕಾರ ಹೊಸ ಜಿಲ್ಲೆ ಘೋಷಣೆ ಮಾಡಬಾರದು. ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ನಮ್ಮನ್ನ ಕರೆದು ಸಿಎಂ ಬಿಎಸ್ ವೈ ಚರ್ಚೆ ನಡೆಸಬೇಕು. ಈಗಾಗಲೇ ಸಿಎಂಗೆ ಸಲಹೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ವಿಜಯನಗರ ಜಿಲ್ಲೆ ಘೋಷಣೆ ಮಾಡಬಾರದು. ಅಖಂಡ ಜಿಲ್ಲೆಯಾಗಿ ಇರಬೇಕು ಎಂದವರು ಒತ್ತಾಯಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಲಕ್ಷ್ಮಣ ಸವದಿ ಜೊತೆ ಈ ಸಂಬಂಧ ಚರ್ಚೆ ನಡೆಸುತ್ತೇವೆ. ಈ ಹಿಂದೆ ಹಂಪಿ ಉತ್ಸವ ಆಚರಣೆ ಗಾಗಿ ಪ್ರತಿಭಟನೆ ನಡೆಸಿದ್ದೆವು. ಈಗಲೂ ಹಂಪಿ ಉತ್ಸವ ಆಚರಣೆ ಮಾಡದಿದ್ರೆ ಹೋರಾಟ ಮಾಡುತ್ತೇವೆ, ಎಂದವರು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ ಹಾಗೂ ಯಡಿಯೂರಪ್ಪ ಮೂಲೆಗುಂಪು ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ರೆಡ್ಡಿ ಈ ಹಿಂದೆ ಕೂಡ ಜಿಲ್ಲೆಯ ವಿಭಜನೆಗೆ ವಿರೋಧ ವ್ಯಕ್ತ ಪಡಿಸಿದ್ದರು. ಶ್ರೀರಾಮುಲು ಕೂಡ ಅವರ ಜತೆ ದನಿಗೂಡಿಸಿದ್ದಾರೆ.


from India & World News in Kannada | VK Polls https://ift.tt/2nXwH6N

ವಿಶ್ವಕಪ್ ಹೀರೊ ಯುವರಾಜ್ ಸಿಂಗ್‌ಗೆ ಎದುರಾದ ಕಹಿ ಘಟನೆಯಿದು!

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಎರಡು ಬಾರಿಯ ವಿಶ್ವಕಪ್ ವಿಜೇತ ಹೀರೊ ಆಗಿರುವ ಮಾಜಿ ಆಲ್‌ರೌಂಡರ್ , ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅತಿ ಹೆಚ್ಚು ಬೇಸರ ತರಿಸಿದ ಘಟನೆ ಬಗ್ಗೆ ವಿವರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ಗಾಗಿನ ಟೀಮ್ ಇಂಡಿಯಾದಲ್ಲಿ ಆಯ್ಕೆಯಾಗದಿರುವುದು ಕಹಿ ಅನುಭವವಾಗಿದ್ದು ಎಂದು ಹೇಳಿದ್ದಾರೆ. ಹೌದು, 2019 ಏಕದಿನ ವಿಶ್ವಕಪ್‌ನಲ್ಲಿ ಆಡಲು ಬಯಸಿದ್ದೆ. 2015ನೇ ಆವೃತ್ತಿಯಲ್ಲೂ ವಿಶ್ವಕಪ್ ಮಿಸ್ ಆದಾಗ ಬೇಸರವಾಗಿತ್ತು. ಆ ವೇಳೆಯಲ್ಲಿ ರಣಜಿ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸುತ್ತಿದ್ದೆ. ಆದರೆ ನಾನು ಹೇಳಲಾಗದ ಅನೇಕ ಅಂಶವಗಳಿವೆ. 2019ರ ವೇಳೆಯಾಗುವಾಗ ನಾನು 37ರ ಹರೆಯನಾಗಿದ್ದೆ. ಅನೇಕ ಅಂಶಗಳು ನನ್ನ ಪರವಾಗಿರಲಿಲ್ಲ ಎಂದರು. 2015ರಲ್ಲಿ ವಿಶ್ವಕಪ್ ತಂಡದಿಂದ ಕೈಬಿಟ್ಟಾಗಲೂ ನಿರೀಕ್ಷೆ ಕೈಬಿಡದ ಯುವಿ, ಭಾರತಕ್ಕಾಗಿ ಮಗದೊಂದು ವಿಶ್ವಕಪ್ ಆಡುವ ಕನಸನ್ನು ಹೊತ್ತುಕೊಂಡಿದ್ದರು. ಈ ನಿಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ನಿರ್ಧರಿಸಿದ್ದರು. ಆದರೂ ಆಯ್ಕೆ ಸಮಿತಿ ಗಮನ ಸೆಳೆಯಲು ವಿಫಲವಾಗಿದ್ದರು. ಏನೇ ಆದರೂ ಇದುವರೆಗೆ ಆಡಿರುವ ಕ್ರಿಕೆಟ್‌ಗೆ ಕೃತಜ್ಞನಾಗಿದ್ದೇನೆ. ಇದರ ಬದಲು ವಿಶ್ವಕಪ್ ನಷ್ಟವಾಗಿರುವುದರ ಬಗ್ಗೆ ಹೆಚ್ಚು ಯೋಚಿಸಲಾರೆ. ಸರಿಯಾದ ಸಂದರ್ಭಕ್ಕೆ ನಿವೃತ್ತಿ ಸಲ್ಲಿಸಿರುವುದರ ಬಗ್ಗೆಯೂ ಖುಷಿಯಿದೆ ಎಂದು ವಿವರಿಸಿದರು. 2007ರಲ್ಲಿ ಭಾರತದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವುಗಳಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. ಆದರೂ ಚಾಂಪಿಯನ್ ಆಟಗಾರ ಮುಂದಿನ ಎರಡೂ ವಿಶ್ವಕಪ್‌ಗಳಲ್ಲಿ ಆಡುವ ಅವಕಾಶದಿಂದ ವಂಚಿತವಾಗಿದ್ದರು. ಈ ಮೊದಲು ಟೀಮ್ ಮ್ಯಾನೇಜ್‌ಮೆಂಟ್ ಹಿರಿಯ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಯುವರಾಜ್ ಸಿಂಗ್ ಟೀಕೆ ಮಾಡಿದ್ದರು. ತಮಗಾಗಲಿ, ವೀರೇಂದ್ರ ಸೆಹ್ವಾಗ್ ಅಥವಾ ಜಹೀರ್ ಖಾನ್ ಬಳಿ ಭವಿಷ್ಯದ ಬಗ್ಗೆ ಚರ್ಚಿಸಿರಲಿಲ್ಲ ಎಂದು ಸತ್ಯಾಂಶವನ್ನು ಬಿಚ್ಚಿಟ್ಟಿದ್ದರು. 2017ರಲ್ಲಿ ಯೊ-ಯೊ ಫಿಟ್ನೆಸ್ ಪರೀಕ್ಷೆಯನ್ನು ತೇರ್ಗೆಡೆ ಹೊಂದಿರುವ ಹೊರತಾಗಿಯೂ ತಂಡದಿಂದ ಕೈಬಿಡಲಾಗಿತ್ತುಎಂದು ಬೇಸರ ತೋಡಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2nXsn7z

ದಸರಾ ಚಲನಚಿತ್ರೋತ್ಸವದಲ್ಲಿ 57 ಸಿನಿಮಾ ಪ್ರದರ್ಶನ

ಹೊಸ ರಂಗಿನಲ್ಲಿ ಮಿಂಚಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಮುಂಬಯಿ: 'ಇಂಡಿಯನ್ ಸ್ಪೋರ್ಟ್ಸ್ ಹಾನರ್' ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಪತ್ನಿ ಬಾಲಿವುಡ್ ನಟಿ ಹೊಸ ಉಡುಗೆಯಲ್ಲಿ ಎಲ್ಲರ ಆಕರ್ಷಣೆಗೆ ಪಾತ್ರವಾಗಿದ್ದಾರೆ. ಶುಕ್ರವಾರ (ಸೆ.27) ರಾತ್ರಿ ಮುಂಬಯಿನ ಎಸ್‌ವಿಪಿ ಸ್ಟೇಡಿಯಂನಲ್ಲಿ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವು ಆಯೋಜನೆಯಾಗಿತ್ತು. ಪ್ರಸ್ತುತ ಚಿತ್ರಗಳನ್ನು ತಮ್ಮ ಅಭಿಮಾನಿಗಳ ಜತೆಗೆ ವಿರಾಟ್ ಹಾಗೂ ಅನುಷ್ಕಾ ಹಂಚಿದ್ದಾರೆ. 11 ವಿಭಿನ್ನ ಕ್ರೀಡಾ ವಿಭಾಗಗಳಲ್ಲಾಗಿ ಪ್ರಶಸ್ತಿಯನ್ನು ಹಂಚಲಾಗಿದೆ. ಭಾರತೀಯ ಕ್ರೀಡೆಯ ಮಾಜಿ ದಿಗ್ಗಜರನ್ನು ಒಳಗೊಂಡಿರುವ ತೀರ್ಪುಗಾರರ ಸಮಿತಿಯು ವಿವಿಧ ವಿಭಾಗದ ಕ್ರೀಡೆಯಲ್ಲಿ ಪ್ರಶಸ್ತಿಯನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಪುಲ್ಲೇಲಾ ಗೋಪಿಚಂದ್, ಸರ್ದಾರ್ ಸಿಂಗ್, ಮಹೇಶ್ ಭೂಪತಿ, ಪಿಟಿ ಉಷಾ ಹಾಗೂ ಅಂಜಲಿ ಭಾಗವತ್ ಒಳಗೊಂಡಿದ್ದಾರೆ. ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟದ 200ರಷ್ಟು ಪತ್ರಕರ್ತರು ಸಲ್ಲಿಸಿದ ಆಯ್ದ ಪಟ್ಟಿಯಿಂದ ಪ್ರಶಸ್ತಿಗಾಗಿ ಕ್ರೀಡಾಳುಗಳ ನಾಮನಿರ್ದೇಶನ ಸಲ್ಲಿಸಲಾಗಿತ್ತು. ಕ್ರಿಕೆಟ್ ರಂಗದಿಂದ ಅಜಿಂಕ್ಯ, ಸ್ಮೃತಿ ಮಂಧಾನಾ, ಜಹೀರ್ ಖಾನ್ ಹಾಗೂ ಯುವರಾಜ್ ಸಿಂಗ್ ಕುಟುಂಬ ಸಮೇತ ಭಾಗವಹಿಸಿ ಗಮನ ಸೆಳೆದಿದ್ದರು. ಈ ವೇಳೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿರಾಟ್, ಪ್ರತಿಯೊಬ್ಬನ ವೈಯಕ್ತಿಕ ಬದುಕಿನಲ್ಲೂ ಕ್ರೀಡೆ ಅವಿಭಾಜ್ಯ ಅಂಗವಾಗಿದೆ ಎಂದು ನಂಬಿದ್ದೇನೆ. ಇದು ಶಾಲಾ ಜೀವನದಿಂದಲೇ ಆರಂಭವಾಗುತ್ತದೆ. ಈ ಪ್ರಶಸ್ತಿಗಳು ಕ್ರೀಡಾಳುಗಳನ್ನು ಮತ್ತಷ್ಟು ಹುರಿದುಂಬಿಸುವ ನಂಬಿಕೆಯಿದೆ ಎಂದಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ ವಿರಾಟ್ ಕೊಹ್ಲಿ ಫೌಂಡೇಷನ್ ಜತೆಗಾರಿಕೆಯಲ್ಲಿ ಆರ್‌ಪಿ-ಸಂಜೀವ್ ಗೋಯೆಂಕಾ ಸಂಸ್ಥೆಯು ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ ಪ್ರಶಸ್ತಿಯನ್ನು ಆಯೋಜಿಸುತ್ತಿದೆ. 2017ರಲ್ಲಿ ಇದನ್ನು ಆರಂಭಿಸಲಾಯಿತು. ಈ ಮೂಲಕ ಭಾರತೀಯ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸುವಲ್ಲಿ ವಿರಾಟ್ ಕೊಹ್ಲಿ ತಮ್ಮದೇ ಆದ ಪಾತ್ರವನ್ನು ನಿಭಾಯಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ns9zNt

ಯು ಮುಂಬಾ ಮುಂದೆ ಬೆಂಗಳೂರು ಬುಲ್ಸ್‌ ವಿಕ್ರಮ

ಜೈಪುರ: ಪವನ್‌ ಶೆಹ್ರಾವತ್‌ ಸಂಘಟಿಸಿದ ಅಮೋಘ ರೇಡಿಂಗ್‌ ನೆರವಿನಿಂದ ಮಿಂಚಿದ ಬೆಂಗಳೂರು ಬುಲ್ಸ್‌ 35-33 ಅಂಕಗಳ ಅಂತರದಿಂದ ಯು. ಮುಂಬಾ ತಂಡಕ್ಕೆ ಸೋಲುಣಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 109ನೇ ಪಂದ್ಯದಲ್ಲಿಗೆಲುವಿನ ಗೆಲುವಿನ ನಗೆ ಬೀರಿದ ಬುಲ್ಸ್‌, ಅಂಕ ಪಟ್ಟಿಯಲ್ಲಿನಾಲ್ಕನೇ ಸ್ಥಾನ ಕಾಪಾಡಿಕೊಂಡಿತು. 17-11 ಅಂತರದಲ್ಲಿಪ್ರಥಮಾರ್ಧವನ್ನು ಮುಕ್ತಾಯಗೊಳಿಸಿದ್ದ ಬೆಂಗಳೂರು ಬುಲ್ಸ್‌ ಆಟಗಾರರು ದ್ವಿತೀಯಾರ್ಧದಲ್ಲಿಒಮ್ಮಿಂದೊಮ್ಮೆಲೇ ಸ್ಥಿರತೆ ಕಳೆದುಕೊಂಡು ಎದುರಾಳಿಗೆ ಬರೋಬ್ಬರಿ ಅಂಕಗಳನ್ನು ನೀಡಿದರು. ಇದರಿಂದಾಗಿ ಕೊನೆಯ ನಿಮಿಷದಲ್ಲಿ ಪಂದ್ಯ ರೋಚಕ ರೂಪ ತಾಳಿತಾದರೂ, ಅಂತಿಮವಾಗಿ ಬುಲ್ಸ್‌ ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು. ಬುಲ್ಸ್‌ ಪರ ಪವನ್‌ ಶೆಹ್ರಾವತ್‌ 10 ಅಂಕಗಳನ್ನು ಸಂಪಾದಿಸಿದರೆ, ಸೌರಭ್‌ ನಂದಾಲ್‌ 9 ಅಂಕ ಗಿಟ್ಟಿಸಿದರು. ಮುಂಬಾದ ಅಭಿಷೇಕ್‌ ಸಿಂಗ್‌ ಗಳಿಸಿದ 10 ಅಂಕ ಪ್ರಯೋಜನಕ್ಕೆ ಬರಲಿಲ್ಲ. ಈ ಗೆಲುವಿನೊಂದಿಗೆ ಆಡಿರುವ 19 ಪಂದ್ಯಗಳಲ್ಲಿ 10 ಗೆಲುವುಗಳನ್ನು ದಾಖಲಿಸಿರುವ ಒಟ್ಟು 58 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದೆಡೆ 18 ಪಂದ್ಯಗಳಲ್ಲಿ ಒಂಬತ್ತು ಗೆಲುವು ದಾಖಲಿಸಿರುವ 54 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅಗ್ರ ಎರಡು ಸ್ಥಾನದಲ್ಲಿರುವ ದಬಾಂಬ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಈಗಾಗಲೇ ಪ್ಲೇಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ. ಸದ್ಯ ಮೂರನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ 17 ಪಂದ್ಯಗಳಲ್ಲಿ 11 ಗೆಲುವಿನೊಂದಿಗೆ 59 ಅಂಕಗಳನ್ನು ಪಡೆದಿದೆ. ಜೈಪುರದ ವಿರುದ್ಧ ಭರ್ಜರಿಯಾಗಿ ಗೆದ್ದ ಟೈಟನ್ಸ್‌- ಪ್ರಸಕ್ತ ಟೂರ್ನಿಯಲ್ಲಿಇದುವರೆಗೆ ನಿರಾಶಾದಾಯಕ ಪ್ರದರ್ಶನ ನೀಡಿದ್ದ ತೆಲುಗು ಟೈಟನ್ಸ್‌ ತಂಡ ಏಕಾಏಕಿ ಚೇತೋಹಾರಿ ಪ್ರದರ್ಶನ ನೀಡಿತಲ್ಲದೆ, ಆತಿಥೇಯ ಜೈಪುರ ತಂಡದ ವಿರುದ್ಧ 51-31 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ಟೈಟನ್ಸ್‌ ತಂಡದ ಪರ ಸಿದ್ಧಾರ್ಥ ದೇಸಾಯಿ 22 ಅಂಕಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇಂದಿನ ಪಂದ್ಯಗಳು ಹರಿಯಾಣ ಸ್ಟೀಲರ್ಸ್‌ vs ಯು.ಪಿ. ಯೋಧಾ, ರಾತ್ರಿ 7.30ಕ್ಕೆ ಗುಜರಾತ್‌ ಫಾರ್ಚೂನ್‌ಜಯಂಟ್ಸ್‌ vs ತಮಿಳ್‌ ತಲೈವಾಸ್‌, ರಾತ್ರಿ 8.30ಕ್ಕೆ ತಾಣ: ತಾವು ದೇವಿಲಾಲ್‌ ಕ್ರೀಡಾ ಸಂಕೀರ್ಣ ಪಂಚಕುಲ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2mwHggK

ಬಿಜೆಪಿ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ: ಬೊಮ್ಮಾಯಿ

ಹೃದ್ರೋಗಕ್ಕೆ ವಾಯುಮಾಲಿನ್ಯವೂ ಕಾರಣ: ಜಯದೇವ ಹೃದೋಗ ಸಂಸ್ಥೆ ಅಧ್ಯಯನದಿಂದ ಬಹಿರಂಗ

ಸಾಳ್ವೆಗೆ 1 ರೂ ಗೌರವಧನ ಪಾವತಿಸಿ ಅಮ್ಮನ ಕೊನೆಯಾಸೆ ನೆರವೇರಿಸಿದ ಸುಷ್ಮಾ ಸ್ವರಾಜ್ ಪುತ್ರಿ

ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಮುತ್ಸದ್ಧಿ ಮೋದಿ, ಇಮ್ರಾನ್‌ ಉಗ್ರಾವತಾರ

ಉ.ಪ್ರ, ತೆಲಂಗಾಣದಲ್ಲಿ ಮಳೆಯ ಅಬ್ಬರಕ್ಕೆ 45ಕ್ಕೂ ಹೆಚ್ಚು ಮಂದಿ ದುರ್ಮರಣ

ವಿಶ್ವಕ್ಕೆ ಹೊಸ ದಾರಿ ದೀಪ ಭಾರತ: ವಿಶ್ವಸಂಸ್ಥೆಯಲ್ಲಿ ನರೇಂದ್ರ ಮೋದಿ

ಸಿದ್ದು, ನನ್ನಿಂದ ಪಕ್ಷವಲ್ಲ; ಪಕ್ಷದಿಂದ ನಾವೆಲ್ಲರೂ: ಜಿ ಪರಮೇಶ್ವರ್

ಕಾಂಗ್ರೆಸ್‌ನಲ್ಲಿ ಭಟ್ಟಂಗಿಗಳು, ಚಾಡಿಕೋರರೇ ಹೆಚ್ಚು !: ದಿನೇಶ್‌ ಗುಂಡೂರಾವ್‌

ಕಾಂಗ್ರೆಸ್‌ ಆಂತರಿಕ ಸಂಘರ್ಷ ತಾರಕಕ್ಕೆ: ಸಿದ್ದು, ಗುಂಡೂರಾವ್ ಪದಚ್ಯುತಿ ಸಾಧ್ಯತೆ

ಶಿಕ್ಷಣ ಸಚಿವರ ದಸರಾ ಉಡುಗೊರೆ: ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರ

ಬೆಂಗಳೂರು: ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರ ಒದಗಿಸುವ ಕುರಿತಂತೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಪಷ್ಟೀಕರಣ ನೀಡಿದ್ದು, ಈ ಸಾಲಿನಲ್ಲೇ ಎರಡನೇ ಸೆಟ್ ಸಮವಸ್ತ್ರ ಪೂರೈಸಲು ಪೂರಕ ಕ್ರಮ ಅನುಸರಿಸಲಾಗುತ್ತಿದೆಯೆಂದು ತಿಳಿಸಿದ್ದಾರೆ. ನಿನ್ನೆಯಷ್ಟೇ (ಗುರುವಾರ) ರಾಜ್ಯದ ಸರಕಾರಿ ಶಾಲೆಗಳಲ್ಲಿ1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಈ ವರ್ಷವೂ ಎರಡನೇ ಜೊತೆ ಸಮವಸ್ತ್ರ ನೀಡಲಾಗುವುದಿಲ್ಲ ಎಂದು ಹೇಳಿದ್ದರು. ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದಿದ್ದರೆ. ಆದರೆ, ಇಂದು ತಮ್ಮ ಹೇಳಿಕೆ ಹಾಗೂ ಸಮವಸ್ತ್ರ ವಿತರಿಸುವ ಕುರಿತಂತೆ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲೇ (2019-20) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡನೇ ಸೆಟ್‌ ಸಮವಸ್ತ್ರ ದೊರೆಯಲಿದೆ. ಗುರುವಾರ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ ಕಚೇರಿಯ ಸಭಾಂಗಣದಲ್ಲಿ ನಡೆದ ಖಾಸಗಿ ಅನುದಾನರಹಿತ ಶಾಲಾ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು. ''ಈ ನಡುವೆ, ಕೇಂದ್ರದಿಂದ ಬರುವ ಅನುದಾನ ಕಡಿತಗೊಂಡಿರುವುದರಿಂದ ರಾಜ್ಯ ಸರಕಾರದಿಂದಲೇ ಮಕ್ಕಳಿಗೆ 2ನೇ ಜೊತೆ ಸಮವಸ್ತ್ರ ವಿತರಿಸುವಂತೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೂಡ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ, ಈ ವರ್ಷ 2ನೇ ಜೊತೆ ಸಮವಸ್ತ್ರ ವಿತರಿಸಲು ಕಷ್ಟ,'' ಎಂದಿದ್ದರು. ಹೈಕೋರ್ಟ್‌ ಆದೇಶ: ಸರಕಾರಿ ಶಾಲೆಗಳ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ, ಒಂದು ಜೋಡಿ ಶೂ ಹಾಗೂ ಎರಡು ಜೊತೆ ಸಾಕ್ಸ್‌ ಗಳನ್ನು ಎರಡು ತಿಂಗಳಲ್ಲಿಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆಗಸ್ಟ್‌ 28ರಂದು ಸರಕಾರಕ್ಕೆ ಆದೇಶಿಸಿತ್ತು.


from India & World News in Kannada | VK Polls https://ift.tt/2n4szSa

ರಾಹುಲ್ ದ್ರಾವಿಡ್ ವೈಯಕ್ತಿಕ ಹಿತಾಸಕ್ತಿ ಸಂಘರ್ಘ ಪ್ರಕರಣದಲ್ಲಿ ಶೀಘ್ರದಲ್ಲೇ ತೀರ್ಪು ಹೊರಡಿಸಲಿರುವ ಬಿಸಿಸಿಐ ಒಂಬುಡ್ಸ್‌ಮನ್

ಮುಂಬಯಿ: ವೈಯಕ್ತಿಕ ಹಿತಾಸಕ್ತಿ ಸಂಘರ್ಷದ ಆರೋಪವನ್ನು ಎದುರಿಸುತ್ತಿರುವ ಭಾರತದ ಮಾಜಿ ನಾಯಕ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೇಮಿತ ನೀತಿ ಸಂಹಿತೆ ಅಧಿಕಾರಿ ನಿವೃತ್ತ ನ್ಯಾ. ಡಿಕೆ ಜೈನ್‌ ಅತಿ ಶೀಘ್ರದಲ್ಲೇ ತೀರ್ಪನ್ನು ಹೊರಡಿಸಲಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿ ಆಯ್ಕೆಯಾದ ಬೆನ್ನಲ್ಲೇ ದ್ರಾವಿಡ್ ಮೇಲೆ ವೈಯಕ್ತಿಕ ಹಿತಾಸಕ್ತಿ ಸಂಘರ್ಷದ ಆರೋಪಗಳು ಕೇಳಿ ಬಂದಿದ್ದವು. ರಾಹುಲ್ ದ್ರಾವಿಡ್, ಐಪಿಎಲ್‌ ಫ್ರಾಂಚೈಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲೀಕತ್ವದ ಇಂಡಿಯಾ ಸಿಮೆಂಟ್‌ ಗ್ರೂಪ್‌ನಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ. ಗುರುವಾರದಂದು (ಸೆ. 26) ವಿಚಾರಣೆಗೆ ಹಾಜರಾಗಿರುವ ರಾಹುಲ್ ದ್ರಾವಿಡ್, ತಮ್ಮ ಹುದ್ದೆಗೆ ಸಂಬಂಧಿಸಿದಂತೆ ವಿವರಣೆಯನ್ನು ನೀಡಿದ್ದಾರೆ. ನಾನು ದ್ರಾವಿಡ್ ಹೇಳಿಕೆಗಳನ್ನು ಪಡೆದಿದ್ದು, ನನ್ನ ತೀರ್ಪನ್ನು ಕಾಯ್ದಿರಿಸಿದ್ದೇನೆ. ಅತಿ ಶೀಘ್ರದಲ್ಲೇ ನನ್ನ ತೀರ್ಪು ಹೊರಡಿಸಲಿದ್ದೇನೆ ಎಂದಿದ್ದಾರೆ. ಈ ಮೊದಲು 46ರ ಹರೆಯದ ದ್ರಾವಿಡ್ ವೈಯಕ್ತಿಕ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಲಿಖಿತ ವಿವರಣೆಯನ್ನು ನೀಡಿದ್ದರು. ಇಷ್ಟಾದರೂ ದ್ರಾವಿಡ್‌ಗೆ ನೋಟಿಸ್ ಜಾರಿ ಮಾಡಿರುವ ಬಿಸಿಸಿಐ ಒಂಬುಡ್ಸ್‌ಮನ್ ಡಿಕೆ ಜೈನ್, ಮೌಖಿಕವಾಗಿ ವಿವರಣೆಯನ್ನು ಕೇಳಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಬಿಸಿಸಿಐ ಉದ್ಯೋಗಿಯು ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ಹುದ್ದೆಯನ್ನು ಹೊಂದಿರುವಂತಿಲ್ಲ. ಭಾರತದ ಕಿರಿಯ ಹಾಗೂ ಎ ತಂಡದ ನಾಯಕರಾಗಿರುವ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರಾಗಿ, ಬಿಸಿಸಿಐ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಆಡಳಿತಗಾರರ ಸಮಿತಿಯು ನೇಮಕಗೊಳಿಸಿತ್ತು. ಇಂಡಿಯಾ ಸಿಮೆಂಟ್ಸ್‌ನಲ್ಲಿ ದೀರ್ಘ ರಜೆ ಹಾಕಿರುವ ಹಿನ್ನಲೆಯಲ್ಲಿ ದ್ರಾವಿಡ್ ನೇಮಕವನ್ನು ಬಿಸಿಸಿಐ ಕಾನೂನು ತಂಡವು ಅನುಮೋದನೆಯನ್ನು ನೀಡಿತು. ಇದೀಗ ಬಿಸಿಸಿಐ ನೀತಿ ಸಂಹಿತೆ ಅಧಿಕಾರಿಯ ತೀರ್ಪಿನ ಮೇಲೆ ದ್ರಾವಿಡ್ ಭವಿಷ್ಯ ನಿರ್ಧಾರವಾಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2n460x2

ಯೊ-ಯೊ ಟೆಸ್ಟ್ ತೇರ್ಗಡೆ ಹೊಂದಿಯೂ ತಂಡಕ್ಕೆ ಆಯ್ಕೆಯಾಗಿಲ್ಲ: ಕೊರಗಿದ ಯುವಿ

ಹೊಸದಿಲ್ಲಿ: ಟೀಮ್ ಇಂಡಿಯಾದಿಂದ ಸುದೀರ್ಘ ಸಮಯದಿಂದ ಹೊರದಲ್ಪಟ್ಟಿರುವ ಕೊನೆಗೂ 2019 ಜೂನ್ 10ರಂದು ತಮ್ಮ ನಿವೃತ್ತಿಯನ್ನು ಸಲ್ಲಿಸಿದ್ದರು. ಇದೀಗ ಹಳೆಯ ನೆನಪುಗಳನ್ನು ಕೆದಕಿರುವ ಯುವಿ, 2017ನೇ ಸಾಲಿನಲ್ಲಿ ಯೊ-ಯೊ ಫಿಟ್ನೆಸ್ ಪರೀಕ್ಷೆ ತೇರ್ಗಡೆ ಹೊಂದಿಯೂ ಪರ ಆಡಲು ಅವಕಾಶ ದೊರಕಿರಲಿಲ್ಲ ಎಂದು ಕೊರಗಿದ್ದಾರೆ. 2007ರ ಚೊಚ್ಚಲ ಟ್ವೆಂಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವುಗಳಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೂ ಯುವಿ ಟೀಮ್ ಇಂಡಿಯಾ ಪರ ಆಡುವ ಮೂಲಕ ಅಪಾರ ದೇಶಪ್ರೇಮವನ್ನು ಮೆರೆದಿದ್ದರು. 2011ರ ವಿಶ್ವಕಪ್ ಬಳಿಕ ಚಿಕಿತ್ಸೆ ಪಡೆದಿದ್ದ ಯುವಿ ಕ್ಯಾನ್ಸರ್ ಗೆದ್ದು ಬಂದು ಟೀಮ್ ಇಂಡಿಯಾಕ್ಕೆ ರಿ ಎಂಟ್ರಿ ಕೊಟ್ಟಿದ್ದರು. ಈ ಮಧ್ಯೆ ಕೆರಿಯರ್ ಉದ್ದಕ್ಕೂ ಅನೇಕ ಏಳು-ಬೀಳುಗಳನ್ನು ಕಂಡಿದ್ದರು. 2017ರಲ್ಲೂ ವೆಸ್ಟ್‌ಇಂಡೀಸ್ ಸರಣಿಯ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಈ ವೇಳೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಯೊ-ಯೊ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು. 2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಆಡಲಾದ 8-9 ಪಂದ್ಯಗಳಲ್ಲಿ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ಬಳಿಕಯೂ ತಂಡದಿಂದ ಕೈಬಿಡಲಾಗುತ್ತಿದೆ ಎಂಬುದನ್ನು ಯೋಚಿಸಿಯೇ ಇರಲಿಲ್ಲ ಎಂದು ಯುವಿ ತಿಳಿಸಿದರು. ನಾನು ಗಾಯಕ್ಕೊಳಗಾದ ಸಂದರ್ಭದಲ್ಲಿ ಶ್ರೀಲಂಕಾ ಸರಣಿಗೆ ಸಜ್ಜಾಗುವಂತೆ ಸೂಚಿಸಲಾಗಿತ್ತು. ಏಕಾಏಕಿ ಯೊ-ಯೊ ಪರೀಕ್ಷೆಯನ್ನು ಆಳವಡಿಸಲಾಯಿತು. ಇದು ನನ್ನ ಆಯ್ಕೆಯಲ್ಲಿ ಯೂ-ಟರ್ನ್ ಹೊಡೆಯಿತು. 36ರ ಹರೆಯದಲ್ಲಿ ನಾನು ಯೊ-ಯೊ ಟೆಸ್ಟ್ ಕೂಡಾ ತೇರ್ಗಡೆ ಹೊಂದಬೇಕಿತ್ತು ಎಂದು ಸೇರಿಸಿದರು. ಯೊ-ಯೊ ಟೆಸ್ಟ್ ಪಾಸ್ ಮಾಡಿದ ಹೊರತಾಗಿಯೂ ನನಗೆ ದೇಶೀಯ ಕ್ರಿಕೆಟ್ ಆಡುವಂತೆ ಸೂಚಿಸಲಾಯಿತು. ನನ್ನ ಈ ವಯಸ್ಸಲ್ಲಿ ಯೊ-ಯೊ ಟೆಸ್ಟ್ ಪಾಸ್ ಮಾಡಲು ಸಾಧ್ಯವಿಲ್ಲವೆಂದು ಅವರು ಅಂದುಕೊಂಡಿದ್ದರು. ಅಲ್ಲಿಂದ ಬಳಿಕ ನನ್ನನ್ನು ಕಡೆಗಣಿಸಲು ಸುಲಭವಾಯಿತು. ಕಾರಣ ಹುಡುಕಲು ಇದೊಂದು ಕಾರಣವಾಯಿತು ಎಂದು ವಿವರಿಸಿದರು. ಭಾರತವನ್ನು 304 ಏಕದಿನ ಹಾಗೂ 58 ಟ್ವೆಂಟಿ-20 ಪಂದ್ಯಗಳಲ್ಲಿ ಮುನ್ನಡೆಸಿರುವ ಯುವರಾಜ್ ಸಿಂಗ್, ಅನುಕ್ರಮವಾಗಿ 8701 ಹಾಗೂ 1177 ರನ್ ಗಳಿಸಿದ್ದಾರೆ. 2017 ಜನವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ತವರಿನ ಸರಣಿಯಲ್ಲಿ 127 ಎಸೆತಗಳಲ್ಲಿ 150 ರನ್ ಚಚ್ಚುವ ಮೂಲಕ ಭರ್ಜರಿ ಪುನರಾಗಮನವನ್ನು ಸಾರಿದ್ದರು. ಚಾಂಪಿಯನ್ ಟ್ರೋಫಿಯಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 35ರ ಸರಾಸರಿಯಲ್ಲಿ 105 ರನ್ ಗಳಿಸಿದ್ದರು. ಅಲ್ಲಿಂದ ಬಳಿಕ ವಿಂಡೀಸ್ ಸರಣಿಗೆ ಆಯ್ಕೆ ಮಾಡಿದ್ದರೂ ಕೆಟ್ಟ ಫಾರ್ಮ್‌ನಿಂದಾಗಿ ಕೈಬಿಡಲಾಗಿತ್ತು. ತಂಡದಿಂದ ಕೈಬಿಡುವುದರ ಬಗ್ಗೆ ಎಂದಿಗೂ ಸೂಚಿಸದೇ ಇರುವುದು ಹಾಗೂ ತಂಡದಿಂದ ಹೊರದಬ್ಬಿದ ರೀತಿಯು ಅತೀವ ನೋವನ್ನುಂಟು ಮಾಡಿತು ಎಂದು ಯುವಿ ಹೇಳಿದ್ದಾರೆ. 15ರಿಂದ 17 ವರ್ಷಗಳಷ್ಟು ಕ್ರಿಕೆಟ್ ಆಡಿದ ಕ್ರಿಕೆಟಿಗನ ಜತೆಗೆ ಚರ್ಚಿಸದಿರುವುದು ದುರದೃಷ್ಟಕರ. ನನಗೆ ಆಗಲೀ, ವೀರಂದ್ರ ಸೆಹ್ವಾಗ್ ಅಥವಾ ಜಹೀರ್ ಖಾನ್ ಯಾರಲ್ಲಿಯೂ ಚರ್ಚಿಸಿಲ್ಲ ಎಂದು ಯುವಿ ಕೊರಗಿದರು. ಯಾವನೇ ಆಟಗಾರನಾಗಲಿ, ಅಧಿಕಾರದಲ್ಲಿರುವವರು ಕುಳಿತು ಚರ್ಚೆ ನಡೆಸಬೇಕು. ನಾವು ಯುವ ಆಟಗಾರನ ಹುಡುಕಾಟದಲ್ಲಿದ್ದು, ಹಾಗಾಗಿ ಇಂತಹದೊಂದು ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಆರಂಭದಲ್ಲಿ ಇದು ಬೇಸರ ತರಿಸಿದರೂ ಕನಿಷ್ಠ ಸತ್ಯವನ್ನು ಅರಿಯಬಹದು. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಹೀಗೆ ಸಂಭವಿಸುವುದಿಲ್ಲ ಎಂದು ಬೇಸರ ತೋಡಿಕೊಂಡರು. ಎಂದಿಗೂ ಹೀಗಾಗುವುದನ್ನು ನೋಡಿದ್ದೇನೆ. ದಿಗ್ಗಜರಿಗೂ ಹೀಗಾಗಿದೆ. ಈಗ ಎಲ್ಲದರಿಂದ ಮುಂದುವರಿದಿದ್ದೇನೆ ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2lYzYSZ

ಮೈಸೂರು ದಸರಾ ಪಂಜಿನ ಕವಾಯತಿಗೆ ಮಾಲಿನ್ಯ ರಹಿತ ಪೈರೋಟೆಕ್ನಿಕ್‌ ಪಟಾಕಿ

ನಾಲ್ಕು ಎಕರೆ ಜಾಗದಲ್ಲಿ ದಸರಾ ವಸ್ತು ಪ್ರದರ್ಶನ : 24 ಅಡಿ ಎತ್ತರದ ಪ್ರಕೃತಿ ಮಾತೆ ಕೇಂದ್ರಬಿಂದು

ಪ್ಲೇ ಆಫ್ ಗುರಿ; ಬೆಂಗಳೂರು ಬುಲ್ಸ್‌ಗೆ ಯು ಮುಂಬಾ ಸವಾಲು

ಜೈಪುರ: ಏಳನೇ ಆವೃತ್ತಿಯ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಶುಕ್ರವಾರ ನಡೆಯುವ 109ನೇ ಪಂದ್ಯದಲ್ಲಿ ತಂಡವು ಪ್ರಬಲ ಸವಾಲನ್ನು ಎದುರಿಸಲಿದೆ. ಪ್ಲೇ-ಆಫ್ ಹಂತವನ್ನು ಗುರಿಯಾಗಿಸಿರುವ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಕ್ಕೆ, ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಅತ್ಯಂತ ಮಹತ್ವದೆನಿಸಿದೆ. ಸದ್ಯ ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ಸಮಾನ 53 ಅಂಕಗಳನ್ನು ಹಂಚಿಕೊಂಡಿದೆ. ಆದರೆ ಬುಲ್ಸ್‌ಗಿಂತಲೂ ಒಂದು ಪಂದ್ಯ ಕಡಿಮೆ ಆಡಿರುವ ಯು ಮುಂಬಾ 17 ಪಂದ್ಯಗಳಲ್ಲಿ ಒಂಬತ್ತು ಗೆಲುವು ದಾಖಲಿಸಿದೆ. ಇನ್ನೊಂದೆಡೆ ಬೆಂಗಳೂರು ಬುಲ್ಸ್ 18 ಪಂದಗಳಲ್ಲಿ ಅಷ್ಟೇ ಗೆಲುವನ್ನು ದಾಖಲಿಸಿದೆ. ಇದರಿಂದಾಗಿ ಬೆಂಗಳೂರು ಪಾಲಿಗೆ ಈ ಪಂದ್ಯವು ಅತ್ಯಂತ ನಿರ್ಣಾಯಕವೆನಿಸಿದೆ. ಹಾಗಾಗಿ ಬೆಂಗಳೂರು ಹಾಗೂ ಮುಂಬಾ ನಡುವಣ ಪಂದ್ಯವು ಮತ್ತಷ್ಟು ರೋಚಕತೆಯನ್ನು ಮನೆ ಮಾಡಿದೆ. ಲೀಗ್ ಹಂತದ ಮುಕ್ತಾಯದ ವೇಳೆಯಲ್ಲಿ ಅಂಕಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್ ಹಂತಕ್ಕೆ ತೇರ್ಗಡೆಯನ್ನು ಹೊಂದಲಿದೆ. ಈ ಪೈಕಿ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಈಗಾಗಲೇ ಪ್ಲೇ-ಆಫ್ ಹಂತವನ್ನು ಪ್ರವೇಶಿಸಿದೆ. ಪ್ರಸಕ್ತ ಸಾಲಿನಲ್ಲೂ ಬೆಂಗಳೂರು ಪರ ಸ್ಟಾರ್ ರೇಡರ್ ಎನಿಸಿಕೊಂಡಿರುವ ಪವನ್ ಸೆಹ್ರಾವತ್ ಈಗಾಗಲೇ 232 ರೇಡಿಂಗ್ ಪಾಯಿಂಟ್‌ಗಳನ್ನು ಕಲೆ ಹಾಕಿದ್ದಾರೆ. ಹಾಗೆಯೇ ರಕ್ಷಣಾ ವಿಭಾಗದಲ್ಲಿ ಭದ್ರಕೋಟೆ ನಿರ್ಮಿಸಿರುವ ಮಣಿಂದರ್ ಸಿಂಗ್ 46 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ನಾಯಕ ರೋಹಿತ್ ಕುಮಾರ್ ತಂಡವನ್ನು ಉತ್ತಮ ರೀತಿಯಲ್ಲೇ ಮುನ್ನಡೆಸಿದ್ದು, ಸಾಂಘಿಕ ಹೋರಾಟ ನೀಡುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಆದರೂ ಕೊನೆಯ ಎರಡು ಪಂದ್ಯಗಳಲ್ಲಿ ನಿಕಟ ಅಂತರದಲ್ಲಿ ಸೋಲನುಭವಿಸಿರುವುದು ಹಿನ್ನಡೆಗೆ ಕಾರಣವಾಗಿದೆ. ಹಾಗಾಗಿ ಆದಷ್ಟು ಬೇಗನೇ ತಪ್ಪನ್ನು ತಿದ್ದಿಕೊಂಡು ಪಂದ್ಯವನ್ನು ಫಿನಿಶ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ತಾಜಾ ಅಂಕಪಟ್ಟಿ ಇಂತಿದೆ: (108ನೇ ಪಂದ್ಯದ ಅಂತ್ಯದ ವೇಳೆಗೆ) ಪ್ಲೇ-ಆಫ್‌ಗೆ ತೇರ್ಗಡೆ ಹೊಂದಿದ ತಂಡಗಳು: 1. ದಬಾಂಗ್ ಡೆಲ್ಲಿ: ಪಂದ್ಯ: 18, ಗೆಲುವು: 14, ಒಟ್ಟು ಅಂಕ: 72 2. ಬೆಂಗಾಲ್ ವಾರಿಯರ್ಸ್: ಪಂದ್ಯ: 19, ಗೆಲುವು: 12, ಒಟ್ಟು ಅಂಕ: 73 ಪ್ಲೇ-ಆಫ್‌ನತ್ತ ಹೆಜ್ಜೆಯನ್ನಿಟ್ಟಿರುವ ತಂಡಗಳು: 3. ಹರಿಯಾಣ ಸ್ಟೀಲರ್ಸ್: ಪಂದ್ಯ: 17, ಗೆಲುವು: 11, ಒಟ್ಟು ಅಂಕ: 59 4. ಯು ಮುಂಬಾ: ಪಂದ್ಯ: 17, ಗೆಲುವು: 9, ಒಟ್ಟು ಅಂಕ: 53 5. ಬೆಂಗಳೂರು ಬುಲ್ಸ್: ಪಂದ್ಯ: 18, ಗೆಲುವು: 9, ಒಟ್ಟು ಅಂಕ: 53 6. ಯುಪಿ ಯೋಧಾ: ಪಂದ್ಯ: 17, ಗೆಲುವು: 9, ಒಟ್ಟು ಅಂಕ: 53 ಪ್ಲೇ-ಆಫ್‌ನತ್ತ ಪೈಪೋಟಿ ನಡೆಸುತ್ತಿರುವ ತಂಡಗಳು: 7. ಜೈಪುರ ಪಿಂಕ್ ಪ್ಯಾಂಥರ್ಸ್: ಪಂದ್ಯ: 19, ಗೆಲುವು: 8, ಒಟ್ಟು ಅಂಕ: 52 8. ಪುಣೇರಿ ಪಲ್ಟನ್: ಪಂದ್ಯ: 19, ಗೆಲುವು: 6, ಒಟ್ಟು ಅಂಕ: 42 9. ಪಟನಾ ಪೈರೇಟ್ಸ್: ಪಂದ್ಯ: 19, ಗೆಲುವು: 6, ಒಟ್ಟು ಅಂಕ: 40 10. ಗುಜರಾತ್ ಫಾರ್ಚೂನ್ ಜಯಂಟ್ಸ್: ಪಂದ್ಯ: 18, ಗೆಲುವು: 5, ಒಟ್ಟು ಅಂಕ: 39 11. ತೆಲುಗು ಟೈಟನ್ಸ್: ಪಂದ್ಯ: 17, ಗೆಲುವು: 4, ಒಟ್ಟು ಅಂಕ: 34 12. ತಮಿಳ್ ತಲೈವಾಸ್: ಪಂದ್ಯ: 18, ಗೆಲುವು: 3, ಒಟ್ಟು ಅಂಕ: 30


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2lAZ6is

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...