ಹಲ್ಲೆ, ಕೊಲೆ ಯತ್ನ ಪ್ರಕರಣ; ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ

: ಹಲ್ಲೆ, ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಂಧನವಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೈವಾರ ಶ್ರೀನಿವಾಸ್ ಪಕ್ಕದ ಮನೆಯ ನಿವಾಸಿಗಳಾದ ನಾರಾಯಣಸ್ವಾಮಿ ಹಾಗೂ ಕುಟುಂಬಸ್ಥರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಕೈವಾರ ಶ್ರೀನಿವಾಸ್ ಹಾಗೂ ಆತನ ಇಬ್ಬರು ಸಹೋದರರು ಸೇರಿದಂತೆ ಒರ್ವ ಸ್ನೇಹಿತ ಸೇರಿ ಒಟ್ಟು ನಾಲ್ವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಏನಿದು ಪ್ರಕರಣ? ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದ ನಿವಾಸಿ ಕಸಾಪಾ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಪಕ್ಕದ ಮನೆಯವರಾದ ನಾರಾಯಣಸ್ವಾಮಿಯವರಿಗೂ ಜಮೀನು, ನಿವೇಶನ ಸಂಬಂಧ ವಿವಾದಗಳಿದ್ದು, ಈ ವಿವಾದ ಸಂಬಂಧ ಪದೇ ಪದೇ ಮಾತುಕತೆ, ವಾಗ್ವಾದ, ರಾಜೀ ಪಂಚಾಯತಿ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದೇ ವಿಚಾರವಾಗಿ ಎರಡೂ ಕುಟುಂಬಸ್ಥರ ನಡುವೆ ಗಲಾಟೆಯಾಗಿದ್ದು, ಕೈವಾರ ಶ್ರೀನಿವಾಸ್ ಕುಟುಂಬಸ್ಥರು ನಾರಾಯಣಸ್ವಾಮಿ ಹಾಗೂ ಆತನ ಸಹೋದರ ಅಶ್ವತ್ಥನಾರಾಯಣ ಹಾಗೂ ಪತ್ನಿ ಉಮಾದೇವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಹಲ್ಲೆಗೆ ಒಳಗಾಗಿರುವ ನಾರಾಯಣಸ್ವಾಮಿ ಆತನ ಸಹೋದರ ಹಾಗೂ ಪತ್ನಿ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೈವಾರ ಶ್ರೀನಿವಾಸ್ ಸಹ ದೂರು ನೀಡಿದ್ದು, ತನಿಖೆಯ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ


from India & World News in Kannada | VK Polls https://ift.tt/3uBcnqm

ರಾಜ್ಯದಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ: 3 ವರ್ಷದಲ್ಲಿ ಕೇವಲ ಶೇ. 20 ಪ್ರಗತಿ!

ಎಸ್. ಜಿ. ಕುರ್ಯ, ಉಡುಪಿ ಬೆಂಗಳೂರು: ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ (ಎಬಿ ಎಆರ್ ಕೆ) ಯೋಜನೆ ಜಾರಿಯಾದ ಮೂರು ವರ್ಷಗಳಲ್ಲಿ 1.47 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆಯಾಗಿದ್ದು ಕೇವಲ ಶೇ. 20ಪ್ರಗತಿ ಸಾಧನೆಯಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಗರಿಷ್ಠ 5ಲಕ್ಷ ರೂ., ಎಪಿಎಲ್ ಕಾರ್ಡ್‍ದಾರರಿಗೆ ಶೇ. 30(1.50ಲಕ್ಷ ರೂ.) ಉಚಿತ ಆರೋಗ್ಯ ಸೇವೆ ಲಭ್ಯವಿದ್ದು ರಾಜ್ಯದಲ್ಲಿ 7,07,97,358 ಜನಸಂಖ್ಯೆಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಗುರಿಯಿದೆ. ಸಾಮಾನ್ಯ ಮತ್ತು ದ್ವಿತೀಯ ಹಂತದ ಚಿಕಿತ್ಸೆ(294), ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆ(251), ತೃತೀಯ ಹಂತದ ಚಿಕಿತ್ಸೆ(934), ತೀವ್ರ ಮತ್ತು ಅಪಘಾತ(171)ಸಹಿತ ಒಟ್ಟು 1,658 ಚಿಕಿತ್ಸಾ ವೈವಿಧ್ಯವಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಚಿಕಿತ್ಸೆ ನೀಡಲಾಗುತ್ತಿದ್ದು ಟೈ ಅಪ್ ಮಾಡಿಕೊಂಡ 450 ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾತಿಗೆ ಸರಕಾರಿ ಆಸ್ಪತ್ರೆಗಳ ಶಿಫಾರಸಿನ ಅಗತ್ಯವಿದೆ. ಹೊಂದಿದವರು ಸರಕಾರಿ ಆಸ್ಪತ್ರೆಯ ಶಿಫಾರಸ್ಸಿಲ್ಲದೆ ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆವಲ್ಲಿ ಇರುವ ಅಡೆತಡೆ ನಿವಾರಿಸಲು ಸಂಸದರ ಸಹಿತ ಶಾಸಕರು, ವಿಧಾನಪರಿಷತ್ ಸದಸ್ಯರು ಸರಕಾರದ ಮುಂದಿಟ್ಟ ಬೇಡಿಕೆ ಈಡೇರಿಲ್ಲ. ಕಾರ್ಡ್ ಇದ್ದರೂ ಕಾನೂನಿನ ಕೊಕ್ಕೆಯಿಂದಾಗಿ ಸಾವಿರಾರು ಬಡವರು ಉಚಿತ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಕಾರ್ಡ್‍ನಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿರುವ ವ್ಯವಸ್ಥೆಯ ಸದ್ಬಳಕೆ ಜತೆಗೆ ಆದಾಯ ಗಳಿಕೆಯೂ ಸಾಧ್ಯವಾಗುತ್ತಿದೆ. ರಾಜ್ಯದ 10 ಜಿಲ್ಲೆಗಳಷ್ಟೇ ಶೇ. 27ಕ್ಕಿಂತ ಅಧಿಕ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ವಿತರಿಸಿವೆ. ರಾಯಚೂರು ಜಿಲ್ಲೆಯಲ್ಲಿ ಕೇವಲ ಶೇ. 10ಜನರಿಗಷ್ಟೇ ಆಯುಷ್ಮಾನ್ ಕಾರ್ಡ್ ತಲುಪಿದ್ದು 21ಜಿಲ್ಲೆಗಳಲ್ಲಿ ಕಾರ್ಡ್ ನೀಡಿಕೆ ಪ್ರಗತಿ ಶೇ. 27ಕ್ಕಿಂತ ಕಡಿಮೆಯಿದೆ. ಆಯುಷ್ಮಾನ್ ಕಾರ್ಡ್ ಇನ್ನೂ ಪಡೆಯದ ಶೇ. 80ರಷ್ಟು ಜನತೆ ಗ್ರಾಮ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿರುವ ಕಾಮನ್ ಸರ್ವೀಸ್ ಸೆಂಟರ್(ಸಿಎಸ್‍ಸಿ), ಸೇವಾ ಕೇಂದ್ರಗಳು ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಧಾರ್ ಸಹಿತ ದಾಖಲೆ ಸಲ್ಲಿಸಿ ಆಯುಷ್ಮಾನ್ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದು. ಜಿಲ್ಲಾ ಮಟ್ಟದಲ್ಲಿರುವ ಸೇವಾ ಸಿಂಧು ಕೇಂದ್ರವನ್ನು ಸಂಪರ್ಕಿಸಬಹುದು. ಕಾರ್ಡ್ ವಿತರಿಸಿದ ಟಾಪ್ ಟೆನ್ ಜಿಲ್ಲೆಗಳು ಜಿಲ್ಲೆ- ಜನಸಂಖ್ಯೆ(ಕಾರ್ಡ್ ವಿತರಣೆ) ಪ್ರಗತಿ
  • ಉಡುಪಿ -13,07,243-(8,37,686) -ಶೇ. 64
  • ಕೊಡಗು- 5,60,797-(3,25,635) -ಶೇ. 58
  • ಉತ್ತರ ಕನ್ನಡ- 15,16,250-(6,20,715)- ಶೇ. 41
  • ಮಂಡ್ಯ -18,51,525-(7,37,434) -ಶೇ. 40
  • ಶಿವಮೊಗ್ಗ- 18,64,370-(7,21,356) -ಶೇ. 39
  • ದಕ್ಷಿಣ ಕನ್ನಡ- 23,35,183-(8,62,028)- ಶೇ. 37
  • ಚಿಕ್ಕಮಗಳೂರು- 11,36,558-(3,90,415) -ಶೇ. 34
  • ಹಾಸನ- 18,40,223-(5,98,801) -ಶೇ. 33
  • ರಾಮನಗರ- 11,40,574-(3,69,975) -ಶೇ. 32
  • ಬೆಂಗಳೂರು ಗ್ರಾ. -11,39,694-(3,04,815) -ಶೇ. 27
ಶೇ. 100ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ಲಾಭ ದೊರಕಿಸಿಕೊಡಲು ಶಿಬಿರ ಆಯೋಜಿಸಲಾಗುತ್ತಿದೆ. ಮಾಹಿತಿ, ಅರಿವು ರೋಗಿಗಳ ಡೇಟಾ ಬೇಸ್ ನಿರ್ವಹಣೆ, ಚಿಕಿತ್ಸೆ ಮುಂದುವರಿಕೆ, ಚಿಕಿತ್ಸೆ ತೊರೆದವರ ಪತ್ತೆಗೆ ಕಾರ್ಡ್ ಅನುಕೂಲವಾಗಲಿದೆ. ಅರುಣ್ ಕುಮಾರ್, ಯೋಜನಾ ವ್ಯವಸ್ಥಾಪಕ, ಸೇವಾ ಸಿಂಧು, ಉಡುಪಿ ಜಿಲ್ಲೆ


from India & World News in Kannada | VK Polls https://ift.tt/3F8V0lx

ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ: ಒಂದೇ ಕುಟುಂಬ ಮೂವರ ಆತ್ಮಹತ್ಯೆ

ನೆಲಮಂಗಲ: ಬೆಂಗಳೂರಿನಲ್ಲಿ ಮತ್ತೊಂದು ದುರಂತ ನಡೆದಿದೆ. ನೆಲಮಂಗಲದ ಮಾದನಾಯಕನಹಳ್ಳಿ ಸಮೀಪದ ಪ್ರಕೃತಿ ಬಡಾವಣೆ ತಾಯಿ, ಮಗ ಮತ್ತು ಮಗಳು ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ. ಪತಿಯ ಸಾವಿನಿಂದ ಖಿನ್ನರಾಗಿದ್ದ ವಸಂತ (40), ಮಗ ಯಶವಂತ್ (15) ಮತ್ತು ನಿಶ್ಚಿತಾ (6) ಸಾವಿಗೆ ಶರಣಾದ ದುರ್ದೈವಿಗಳು. ಒಂದೇ ಕುಟುಂಬದ ಐವರು ಮೃತಪಟ್ಟ ಮನಕಲಕುವ ಘಟನೆ ಮಾಸುವ ಮುನ್ನವೇ ನಗರದಲ್ಲಿ ಈ ಘಟನೆ ವರದಿಯಾಗಿದೆ. ಪೀಣ್ಯ ಡಿಪೋದಲ್ಲಿ ಬಿಎಂಟಿಸಿ ನಿರ್ವಾಹಕ-ಚಾಲಕರಾಗಿದ್ದ ಪ್ರಸನ್ನ ಕುಮಾರ್ ಅವರು ಕಳೆದ ವರ್ಷ ಸೋಂಕಿನಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ಪತ್ನಿ ವಸಂತ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಜತೆಗೆ ಗಂಡ ಹೆಂಡತಿ ಇಬ್ಬರೂ ಬ್ಯಾಂಕ್ ಮತ್ತು ಕೈಸಾಲಗಳನ್ನು ಮಾಡಿ ಕನಸಿನ ಮನೆ ಕಟ್ಟಿಸಿದ್ದರು. ಪತಿ ಸಾವಿನ ಬಳಿಕ ದಿಕ್ಕೆಟ್ಟ ವಸಂತ ಅವರಿಗೆ ಸಾಲ ತೀರಿಸುವ ಮತ್ತು ಮಕ್ಕಳನ್ನು ಬೆಳೆಸುವ ದಾರಿ ತೋಚದೆ ಕಂಗಾಲಾಗಿದ್ದರು. ಮೈಸೂರಿನ ಪಿರಿಯಾಪಟ್ಟಣ ಮೂಲದ ಈ ಕುಟುಂಬ, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ಮನೆ ಕಟ್ಟಲು ಮಾಡಿದ್ದ ಲಕ್ಷಗಟ್ಟಲೆ ಸಾಲ ತೀರಿಸಲು ಮನೆ ಮಾರಾಟ ಮಾಡಲು ವಸಂತ ಉದ್ದೇಶಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರು ಮಾಡಿಕೊಂಡಿದ್ದಾರೆ. ಒಂದು ಕೊಠಡಿಯಲ್ಲಿ ವಸಂತ ಮತ್ತು ನಿಶ್ಚಿಕಾ ಮೃತದೇಹ ಕಂಡುಬಂದಿದ್ದರೆ, ಇನ್ನೊಂದು ಕೊಠಡಿಯಲ್ಲಿ ಯಶವಂತ್ ದೇಹ ಪತ್ತೆಯಾಗಿದೆ. ಪತಿ ಸಾವಿನ ಬಳಿಕ ಹತಾಶರಾಗಿದ್ದ ವಸಂತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಸರಘಟ್ಟ ಕೆರೆಗೆ ಹಾರಲು ಮಕ್ಕಳೊಂದಿಗೆ ತೆರಳಿದ್ದ ಅವರನ್ನು ಸ್ಥಳೀಯರು ತಡೆದು ಬುದ್ಧಿಮಾತು ಹೇಳಿದ್ದರು. ಇನ್ನೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಸಂಬಂಧಿಕರ ಮುಂದೆ ಹೇಳಿದ್ದರು ಎನ್ನಲಾಗಿದೆ. ಸಹೋದರಿಗೆ ಧೈರ್ಯ ಇರಲಿ ಎಂದು ವಸಂತ ಅವರ ತಮ್ಮ ನಂದೀಶ್, ತಾಯಿ ತಾಯಮ್ಮ ಅವರನ್ನು ಅಕ್ಕನ ಮನೆಯಲ್ಲಿಯೇ ಬಿಟ್ಟಿದ್ದರು. ಆದರೆ ತಾಯಮ್ಮ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರನ್ನು ನಂದೀಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ಬಳಿಕ ಪದೇ ಪದೇ ಕರೆ ಮಾಡಿದ್ದರೂ ಅಕ್ಕ ರಿಸೀವ್ ಮಾಡದೆ ಇದ್ದಿದ್ದರಿಂದ ಗಾಬರಿಗೊಂಡಿದ್ದರು. ರಾತ್ರಿ 9 ಗಂಟೆಗೆ ಮನೆ ಬಳಿ ಬಂದಾಗ ಒಳಗಿನಿಂದ ಬಾಗಿಲು ಹಾಕಿರುವುದು ಗೊತ್ತಾಯಿತು. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದರು. ಬಳಿಕ ಏಣಿ ಇಟ್ಟು ಮೇಲಿನ ಮಹಡಿ ಮೂಲಕ ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ವಸಂತ ಅವರು ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಯಾರಿಗೆ ಯಾರೂ ಇಲ್ಲ ಎನ್ನುವುದು ಗೊತ್ತಾಗಿದೆ. ನನ್ನ ಪತಿ ಇಲ್ಲದೆ ನಾನಿದ್ದರೂ ಸತ್ತಂತೆ, ಸಾಲ ಕೊಟ್ಟವರಿಗೆ ಮೋಸ ಆಗಬಾರದು ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಸಾಲದ ಜತೆಗೆ ಮಕ್ಕಳ ಜವಾಬ್ದಾರಿ ಇತ್ತು. ಆದರೆ ಪತಿ ಇಲ್ಲದೆ ಬದುಕಲು ಆಗುತ್ತಿಲ್ಲ ಎಂದು ಅದರಲ್ಲಿ ಬರೆದಿದ್ದಾರೆ. ಭಾವ ತೀರಿ ಹೋದ ಬಳಿಕ ಅಕ್ಕ ತುಂಬಾ ನೋವಿನಿಂದ ಇದ್ದಳು. ತನಗೆ ಬದುಕುವ ಆಸೆ ಇಲ್ಲ ಎಂದು ನಮ್ಮ ಬಳಿ ಕೂಡ ಹೇಳಿದ್ದಳು. ನಾವು ಅವಳಿಗೆ ಸಮಾಧಾನ ಹೇಳಿದ್ದೆವು. ನಾನು ಕೂಡ ಕೆಲಸ ಬಿಟ್ಟು ಐದು ತಿಂಗಳು ಅವರ ಜತೆಗಿದ್ದೆ. ಎಲ್ಲವೂ ಸಹಜವಾಗುತ್ತಿತ್ತು. ಆದರೆ ಎರಡು ತಿಂಗಳ ಹಿಂದೆಯಿಂದ ಮತ್ತೆ ಖಿನ್ನಳಾಗಿದ್ದಳು. ಸಾಲದ ಬಗ್ಗೆ ತುಂಬಾ ಯೋಚನೆಯಾಗಿತ್ತು. ಸಂಸ್ಥೆಯಿಂದ ಹೆಚ್ಚು ಪರಿಹಾರದ ಹಣ ಬಂದಿರಲಿಲ್ಲ ಎಂದು ಮೃತ ವಸಂತ ಅವರ ತಮ್ಮ ನಂದೀಶ್ ತಿಳಿಸಿದ್ದಾರೆ.


from India & World News in Kannada | VK Polls https://ift.tt/3mnYEQ2

ನಾಯಕನಾಗಿ ಈ ಸಂಗತಿಗಳು ನನ್ನನ್ನು ಕೊಲ್ಲುತ್ತಿವೆ ಎಂದ ಕೆ.ಎಲ್‌ ರಾಹುಲ್‌!

ದುಬೈ: ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಬಳಿಕ ಪ್ಲೇ ಆಫ್ಸ್‌ ಹಾದಿಯನ್ನು ಜೀವಂತವಾಗಿರಿಕೊಂಡಿದೆ. ಪಂದ್ಯದ ಗೆಲುವಿನ ಬಳಿಕ ಕೆಎಲ್‌ ರಾಹುಲ್‌ ಸಂತಸ ವ್ಯಕ್ತಪಡಿಸಿದ್ದು, ತಾವು ನಾಯಕನಾಗಿ ತಂಡದಲ್ಲಿ ಎದುರಿಸುತ್ತಿರುವ ಕಠಿಣ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ 166 ರನ್‌ ಗುರಿ ಹಿಂಬಾಲಿಸಿದ್ದ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಗೆಲುವು ಸಾಧಿಸಲು ಕೋಲ್ಕತಾ ನೈಟ್‌ ರೈಡರ್ಸ್ ಕೊನೆಯ ಓವರ್‌ವರೆಗೂ ಅವಕಾಶ ಮಾಡಿಕೊಡಲಿಲ್ಲ. ಪ್ರಸಕ್ತ ಟೂರ್ನಿಯಲ್ಲಿ ನಾಯಕ ಅವರ 5ನೇ ಅರ್ಧಶತಕ ಹಾಗೂ ಮಯಾಂಕ್‌ ಅಗರ್ವಾಲ್‌ ಅವರ 40 ರನ್‌ ಗಳಿಸಿದ ಹೊರತಾಗಿಯೂ ಪಂಜಾಬ್‌ ಕೊನೆಯ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ಮೂರು ಓವರ್‌ಗಳಲ್ಲಿ ಪಂಜಾಬ್‌ ಕಿಂಗ್ಸ್‌ಗೆ 24 ರನ್‌ ಅಗತ್ಯವಿತ್ತು. ಈ ವೇಳೆ ಕೇವಲ 9 ಎಸೆತಗಳಲ್ಲಿ ಶಾರೂಖ್‌ ಖಾನ್‌ ಎರಡು ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದ ರಾಹುಲ್‌ ನೆಮ್ಮದಿಯ ನೆಟ್ಟುಸಿರು ಬಿಡುವಂತಾಯಿತು. ಅಂದಹಾಗೆ ಯುಎಇ ಚರಣದಲ್ಲಿ ಶಾರೂಖ್‌ ಖಾನ್‌ ಅವರ ಮೊದಲ ಪಂದ್ಯ ಇದಾಗಿತ್ತು. ಆದರೂ ತಮಿಳುನಾಡಿನ ಯುವ ಬ್ಯಾಟ್ಸ್‌ಮನ್‌ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಬೇಸರ ಮೂಡಿಸಲಿಲ್ಲ. ಕೆ.ಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವೇಳೆ ಯುವ ಬ್ಯಾಟ್ಸ್‌ಮನ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. "ಬ್ಯಾಟಿಂಗ್‌ ಕೋಚ್‌ಗಳ ಬಳಿ ಸಾಕಷ್ಟು ಕೆಲಸ ಮಾಡಿದ್ದಾರೆ, ಅವರ ಬಳಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ. ಈ ಕಾರಣದಿಂದಾಗಿಯೇ ಆತ 170 ಅಥವಾ 180 ರನ್‌ಗಳ ವರೆಗೂ ಯಾವುದೇ ಅಪಾಯವಿಲ್ಲದೆ ಆಡಬಲ್ಲರು. ಆತ ದೊಡ್ಡ ದೊಡ್ಡ ಸಿಕ್ಸರ್‌ ಬಾರಿಸುತ್ತಾನೆಂದು ನಮಗೆ ತಿಳಿದಿದೆ. ಇದನ್ನೆ ಅವರು ತಮಿಳುನಾಡು ತಂಡದ ಪರ ಮಾಡಿದ್ದಾರೆ. ಆದರೆ, ಅವರು ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದು ರಾಹುಲ್‌ ಗುಣಗಾನ ಮಾಡಿದ್ದಾರೆ. "ಕೆಲವೊಮ್ಮೆ ನಾವು ನಮ್ಮ ಮೇಲೆ ಒತ್ತಡವನ್ನು ಹಾಕಿಕೊಳ್ಳುತ್ತೇವೆ. ನಮ್ಮದು ಉತ್ತಮ ತಂಡ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ನಮ್ಮ ಮೇಲೆ ನಾವು ಒತ್ತಡ ಹಾಕಿಕೊಳ್ಳುವುದು ತಂಡದ ಗೆಲುವಿಗೆ ಸಹಾಯವಾಗುವುದಿಲ್ಲ. ಯುಎಇಯಲ್ಲಿನ ಈ ನಾಲ್ಕು ಪಂದ್ಯಗಳು ಇದಕ್ಕೆ ಸೂಕ್ತ ಉದಾಹರಣೆ. ಯುವ ತಂಡವಾಗಿ ನಮಗೆ ಇದು ಅತ್ಯುತ್ತಮ ಕಲಿಕೆಯಾಗಿದೆ," ಎಂದು ತಿಳಿಸಿದರು ಪಂಜಾಬ್‌ ಕಿಂಗ್ಸ್ ನಾಯಕನಾಗಿ ತಾವು ಎದುರಿಸುತ್ತಿರುವ ಬಹು ದೊಡ್ಡ ಇಕ್ಕಟ್ಟಿನ ಪರಿಸ್ಥಿತಿಯನ್ನು ವಿವರಿಸಿದ ಕೆ.ಎಲ್‌ ರಾಹುಲ್, ಯುವ ಪ್ರತಿಭಾವಂತ ಆಟಗಾರನ್ನು ಕೈ ಬಿಡುತ್ತಿರುವುದು ಅತ್ಯಂತ ಕಠಿಣ ನಿರ್ಧಾರವಾಗಿದೆ. ಆದರೆ, ಕ್ರಿಸ್‌ ಗೇಲ್‌ ಟಿ20 ವಿಶ್ವಕಪ್‌ ಟೂರ್ನಿಗೆ ತಯಾರಿ ನಡೆಸಲು ಬಯೋ-ಬಬಲ್‌ ತೊರೆದಿರುವುದರಿಂದ ಯುವ ಆಟಗಾರರಿಗೆ ಅವಕಾಶ ಲಭಿಸಿದಂತಾಗಿದೆ ಎಂದಿದ್ದಾರೆ. "ಯುವ ಆಟಗಾರರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ನೀಡದೆ ಇರುವಂತಹ ಸಂಗತಿಗಳು ನಾಯಕನಾಗಿ ನನ್ನನ್ನು ಕೊಲ್ಲುತ್ತಿವೆ. ಕ್ರಿಸ್‌ ಗೇಲ್‌ ಬಯೋ-ಬಬಲ್‌ ತೊರೆದಿದ್ದಾರೆ. ಆದ್ದರಿಂದ ಹಲವು ಬದಲಾವಣೆಗಳೊಂದಿಗೆ ಅತ್ಯುತ್ತಮ ಪ್ಲೇಯಿಂಗ್‌ ಇಲೆವೆನ್‌ ಅನ್ನು ನಾವು ಕಟ್ಟಿದ್ದೇವೆ. ಶಾರ್ಜಾಗೆ ನಾವು ತೆರಳಲಿದ್ದು, ಅಲ್ಲಿ ಏನಾಗುತ್ತದೆ ನೋಡೋಣ," ಎಂದು ಕೆ.ಎಲ್‌ ರಾಹುಲ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mkxOrM

ಇಂದು ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮದಿನ; ಮೋದಿ ಸೇರಿದಂತೆ ಗಣ್ಯರಿಂದ ನಮನ

ಹೊಸದಿಲ್ಲಿ: ದೇಶಾದ್ಯಂತ ಇಂದು ಮಹಾತ್ಮ ಗಾಂಧೀಜಿ ಅವರ 152ನೇ ಜನ್ಮದಿನವನ್ನು ಮತ್ತು ಮಾಜಿ ಪ್ರಧಾನ ಮಂತ್ರಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ 117 ಜನ್ಮದಿನವನ್ನು ಆಚರಣೆ ಮಾಡಲಾಗ್ತಿದೆ. ಮಹಾತ್ಮ ಹಿನ್ನೆಲೆ ದೇಶಾದ್ಯಂತ ಇಂದು ಸ್ವಚ್ಛತಾ ಕಾರ್ಯಾಗರವನ್ನು ಹಮ್ಮಿಕೊಳ್ಳಲಾಗಿದ್ದು, ಗಾಂಧೀಜಿಗೆ ನಮನ ಸಲ್ಲಿಸುವ ಸಲುವಾಗಿ ಪ್ರಧಾನಿ ಟ್ವೀಟ್‌ ಮೂಲಕ ರಾ‍ಷ್ಟ್ರಪಿತನಿಗೆ ಗೌರವ ಸಮರ್ಪಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಅವರು, ‘ಮಹಾತ್ಮ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ವಿನಮ್ರ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ. ಬಾಪೂ ಅವರ ಜೀವನ ಮತ್ತು ಆದರ್ಶ ದೇಶದ ಪ್ರತಿಯೊಬ್ಬರೂ ಕರ್ತವ್ಯ ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡುತ್ತದೆ. ಗಾಂಧಿಯವರ ಆದರ್ಶ ತತ್ವಗಳು ಜಾಗತಿಕವಾಗಿ ಪ್ರಸ್ತುತವಾಗಿದ್ದು, ಕೋಟ್ಯಂತರ ಜನಕ್ಕೆ ಪ್ರೇರಣೆಯಾಗುತ್ತದೆ ಎಂದು ಕೊಂಡಾಡಿದ್ದಾರೆ. ಇನ್ನು ಮಾಜಿ ಪ್ರಧಾನಿ ಅವರನ್ನೂ ನೆನಪಿಸಿಕೊಂಡಿರುವ ಮೋದಿ, ‘ಮೌಲ್ಯಗಳು ಮತ್ತು ತತ್ವಗಳನ್ನಾದರಿಸಿದ ಶಾಸ್ತ್ರಿ ಅವರ ಜೀವನವು ದೇಶವಾಸಿಗಳಲ್ಲಿ ಸ್ಪೂರ್ತಿಯ ಸೆಲೆಯಾಗಿ ನಿಲ್ಲುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆ ಮಾಡಿ ಗಾಂಧೀಜಿ ಅವರಿಗೆ ನಮನ ಸಲ್ಲಿಸಿದ್ದಾರೆ. ಅಲ್ಲಿಂದ ವಿಜಯ್‌ ಘಾಟ್‌ನಲ್ಲಿರುವ ಮಾಜಿ ಪ್ರಧಾನ ಮಂತ್ರಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ತೆರಳಿ ಶಾಸ್ತ್ರಿ ಅವರಿಗೆ ನಮಿಸಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಬೆಳಗ್ಗೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆ ಮಾಡಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದ್ದಾರೆ. ಬಳಿಕ ವಿಜಯ್‌ ಘಾಟ್‌ನಲ್ಲಿರುವ ಮಾಜಿ ಪ್ರಧಾನ ಮಂತ್ರಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ತೆರಳಿ ಶಾಸ್ತ್ರಿ ಅವರಿಗೆ ವಂದಿಸಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಳಗ್ಗೆ ದೆಹಲಿಯ ರಾಜ್ ಘಾಟ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ವಿಜಯ್‌ ಘಾಟ್‌ಗೆ ತೆರಳಿ ಶಾಸ್ತ್ರಿ ಅವರಿಗೂ ನಮಿಸಿದ್ದಾರೆ. ಇದರ ಜೊತೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ದೇಶದ ಇಬ್ಬರು ಮಹಾನ್ ನಾಯಕರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದ್ದಾರೆ.


from India & World News in Kannada | VK Polls https://ift.tt/3A6qFjI

ರಾಮನಗರಕ್ಕೆ ಕಾದಿದೆ ಜಲಕ್ಷಾಮ; ನೀರಿನ ಘಟಕಗಳ ದುಡ್ಡು ಹೋಗುತ್ತಿರುವುದೆಲ್ಲಿಗೆ?!

ಆರ್‌.ಶ್ರೀಧರ್‌ ರಾಮನಗರ: ಮುಂದಿನ ಬೇಸಿಗೆಯಲ್ಲಿ ಮಾತ್ರವಲ್ಲ, ಕೆಲವೇ ದಿನಗಳಲ್ಲಿ ಜನರಿಗೆ ಹನಿ ನೀರಿಗೂ ಪರದಾಟ ಉಂಟಾಗಲಿದೆ. ಇದಕ್ಕೆ ಸರಕಾರಿ ಜಾಗಗಳಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳೇ ಕಾರಣ ಎನ್ನಬಹುದು. ಇನ್ನೂ ವಿಶೇಷವೆಂದರೆ ಈ ಶುದ್ದ ಕುಡಿವ ನೀರಿನ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವವರು ಯಾರು ಎಂಬ ಯಕ್ಷ ಪ್ರಶ್ನೆಯೂ ಉದ್ಭವವಾಗಿದೆ. ಕುಡಿವ ನೀರಿನ ಘಟಕದ ಹೆಸರಿನಲ್ಲಿ ನಡೆಯುತ್ತಿದ್ದ ಬೃಹತ್‌ ಅವ್ಯವಹಾರ ಬೆಳಕಿಗೆ ಬಂದಿದ್ದು ಬೆಸ್ಕಾಂ ಕೈಗೊಂಡಿರುವ ಕ್ರಮದಿಂದ. ಅಕ್ರಮ ವಿದ್ಯುತ್‌ ಸಂಪರ್ಕ ನಗರದೆಲ್ಲೆಡೆ ನಿರ್ಮಾಣಗೊಂಡಿರುವ 60ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಪಡೆದಿರುವ ವಿದ್ಯುತ್‌ ಸಂಪರ್ಕವೇ ಅಕ್ರಮ. ಇನ್ನು ಇವುಗಳ ವಿದ್ಯುತ್‌ ಶುಲ್ಕ ಪಾವತಿಸುವ ಮಾತು ಎಲ್ಲಿಂದ ಬಂತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ, ಕುಡಿವ ನೀರಿನ ಘಟಕಗಳ ಅಕ್ರಮ ವಿದ್ಯುತ್‌ ಸಂಪರ್ಕವನ್ನು ಮುಲಾಜಿಲ್ಲದೇ ಕಡಿತಗೊಳಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲ ಎರಡು ದಿನಗಳಿಂದ ನಾಲ್ಕೈದು ಬಡಾವಣೆಗಳಲ್ಲಿನ ಕುಡಿವ ನೀರಿನ ಘಟಕಗಳ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಿದೆ. ಫುಡಾರಿಗಳ ಕರಾಮತ್ತುರಾಮನಗರ ಟೌನ್‌ನಲ್ಲಿರುವ 60ಕ್ಕೂ ಹೆಚ್ಚು ಕುಡಿವ ನೀರಿನ ಘಟಕಗಳ ಪೈಕಿ ಹೆಚ್ಚಿನವುಗಳನ್ನು ಡಿಕೆಎಸ್‌ ಚಾರಿಟೇಬಲ್‌ ಟ್ರಸ್ಟ್‌ ಹೆಸರಿನಲ್ಲಿ ಸಂಸತ್‌ ಸದಸ್ಯರ ಅನುದಾನದಲ್ಲಿ ನಿರ್ಮಿಸಲಾಗಿದೆ. ಉಳಿದವುಗಳನ್ನು ಸ್ಥಳೀಯ ಶಾಸಕರ ಅನುದಾನ, ಬಮೂಲ್‌, ಟೊಯೋಟಾ ಕಂಪನಿಗಳ ಸಿಎಸ್‌ಆರ್‌ ನಿಧಿಯಿಂದ ನಿರ್ಮಿಸಲಾಗಿದೆ. ಸರಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಘಟಕಗಳ ನಿರ್ವಹಣೆ ಹೊಣೆಯನ್ನು ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಒಪ್ಪಿಸಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ‍್ಯಕರ್ತರೇ ಇವುಗಳನ್ನು ನಿರ್ವಹಿಸುತ್ತಿದ್ದಾರೆ. ಖಾಸಗಿ ಕಂಪನಿಗಳ ಸ್ಥಾಪಿಸಿಕೊಟ್ಟಿರುವ ಘಟಕಗಳನ್ನು ಆಯಾಯಾ ವಾರ್ಡ್‌ಗಳ ಪ್ರಭಾವಿಗಳು ಅನಧಿಕೃತವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ದುಡ್ಡು ದೋಚುತ್ತಿದ್ದಾರೆ ಈ ಘಟಕಗಳಲ್ಲಿ 20 ಲೀಟರ್‌ ನೀರಿಗೆ 5 ರೂ. ದರ ನಿಗದಿಪಡಿಸಲಾಗಿದೆ. ಇದರಿಂದ ಪ್ರತಿ ತಿಂಗಳೂ 20ರಿಂದ 25 ಸಾವಿರರೂ. ಆದಾಯ ಬರುತ್ತಿದ್ದು, ಅದನ್ನು ಮರಿ ಫುಡಾರಿಗಳ ಜೇಬಿಗಿಳಿಸುತ್ತಿದ್ದಾರೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೂಡ ಘಟಕಕ್ಕೂ ತನಗೂ ಏನೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಆದರೆ, ಪ್ರಭಾವಿಗಳಿಗೆ ಮಣಿದು ನೀರು ಪೂರೈಕೆ ಮಾಡುತ್ತಿದೆ. ಯಾರಿಗೂ ಗೊತ್ತಿಲ್ಲ 60 ಘಟಕಗಳಿಂದ ಬರುತ್ತಿರುವ ಆದಾಯ ಯಾರಿಗೆ ಸೇರುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತಿ ತಿಂಗಳೂ ಹಣವನ್ನು ಜೇಬಿಗಿಳಿಸಿಕೊಳ್ಳುವವರು, ಘಟಕದ ನಿರ್ವಹಣೆ ಹೊಣೆಯನ್ನು ಹೊತ್ತುಕೊಂಡಿಲ್ಲ. ನೀರಿನ ಬಿಲ್‌, ವಿದ್ಯುತ್‌ ಶುಲ್ಕ ಪಾವತಿಸಿಲ್ಲ. ಸರಕಾರಕ್ಕೆ ಹೊರೆ ಕುಡಿಯುವ ನೀರು ಹಾಗೂ ವಿದ್ಯುತ್‌ ಪುಕ್ಕಟೆಯಾಗಿ ಪೂರೈಕೆಯಾಗುತ್ತಿರುವುದರಿಂದ ಸರಕಾರಕ್ಕೆ ಲಕ್ಷಾಂತರ ರೂ.ನಷ್ಟವಾಗುತ್ತಿದೆ. ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳೂ ಹಿಂಜರಿಯುವಂತಾಗಿದೆ. ಗಟ್ಟಿ ನಿರ್ಧಾರಕ್ಕೆ ಬಂದ ಬೆಸ್ಕಾಂ ಲಕ್ಷಾಂತರ ರೂ. ವಿದ್ಯುತ್‌ ಶುಲ್ಕ ಬಾಕಿಯಿಂದ ಸಿಡಿದೆದ್ದಿರುವ ಬೆಸ್ಕಾಂ ಅಧಿಕಾರಿಗಳು ಈಗ, ಕುಡಿವ ನೀರಿನ ಘಟಕಗಳು ಅಕ್ರಮವಾಗಿ ಪಡೆದಿರುವ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದಾರೆ. ಕೆಲವು ಘಟಕಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಜನರಿಗೆ ತೊಂದರೆ ಒಟ್ಟಿನಲ್ಲಿ ಬೆಸ್ಕಾಂ ಕ್ರಮದಿಂದ ತೊಂದರೆ ಅನುಭವಿಸುವವರು ಮಾತ್ರ ಯಾವುದೇ ತಪ್ಪು ಮಾಡದ ನಗರದ ನಿವಾಸಿಗಳು. ಬೋರ್‌ವೆಲ್‌ ನೀರು ಕುಡಿಯಲು ಯೋಗ್ಯವಲ್ಲ. ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಶೇ.90ರಷ್ಟು ನಿವಾಸಿಗಳು ಕುಡಿಯಲು ಆರ್‌ಒ ಪ್ಲ್ಯಾಂಟ್‌ಗಳ ನೀರನ್ನೇ ಅವಲಂಭಿಸಿದ್ದಾರೆ. ಒಂದೊಮ್ಮೆ ವಿದ್ಯುತ್‌ ಸಂಪರ್ಕ ಕಡಿತಗೊಂಡು ಇವು ಬಂದ್‌ ಆದರೆ ತೊಂದರೆ ಅನುಭವಿಸುವವರು ಬಡಪಾಯಿ ಜನರು. ಜಿಲ್ಲಾಡಳಿತ ತುರ್ತು ಗಮನ ಹರಿಸಬೇಕುಅಕ್ರಮದ ವಿರುದ್ಧ ಬೆಸ್ಕಾಂ ಸಾರಿರುವ ಸಮರದಲ್ಲಿ ಜಿಲ್ಲಾಡಳಿತ ಕೈಜೋಡಿಸಬೇಕು. ಜೊತೆಗೆ ಈ ಎಲ್ಲಾ ಶುದ್ದ ಕುಡಿವ ನೀರಿನ ಘಟಕಗಳನ್ನೂ ಸಕ್ರಮಗೊಳಿಸಿ, ಅದನ್ನು ನಿರ್ವಹಣೆಯನ್ನು ಜವಾಬ್ದಾರಿ ಇರುವವರಿಗೆ ಒಪ್ಪಿಸಿ, ಜನರಿಗೆ ನೀರಿನ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಸರಕಾರದ ಖಜಾನೆಗೆ ಆಗುತ್ತಿರುವ ನಷ್ಟವನ್ನೂ ತಪ್ಪಿಸಬೇಕಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವ ವ್ಯಕ್ತಿಗಳು ನೀರಿಗೆ ಹಣ ಪಡೆಯುತ್ತಾರೆ. ಆದರೆ, ಘಟಕಕ್ಕೆ ಬಳಸಿದ ವಿದ್ಯುತ್‌ಗೆ ಬಿಲ್‌ ಕಟ್ಟಲು ತಯಾರಿಲ್ಲ. ಎಷ್ಟು ವಿದ್ಯುತ್‌ ಪೂರೈಕೆ ಆಗುತ್ತಿದೆ, ಎಷ್ಟು ಹಣ ಸಂಗ್ರಹವಾಗುತ್ತಿದೆ ಎಂಬುದರ ಲೆಕ್ಕ ಸಿಗುತ್ತಿಲ್ಲ. ಹೆಸರೇಳಲು ಇಚ್ಚಿಸದ ಬೆಸ್ಕಾಂ ಅಧಿಕಾರಿ


from India & World News in Kannada | VK Polls https://ift.tt/3l1kbOG

‘ಸಾಲ ಮರುಪಾವತಿಯಲ್ಲಿ ಮಹಿಳೆಯರೇ ಮೇಲುಗೈ; ಪುರುಷರಿಗೆ ಸಾಲ ನೀಡಿದರೆ ನಿರ್ಲಕ್ಷ್ಯ ಮಾಡುತ್ತಾರೆ’

ಚಿಕ್ಕಬಳ್ಳಾಪುರ: ಚೇಳೂರು ಗಡಿನಾಡ ಭಾಗಕ್ಕೆ ಡಿಸಿಸಿ ಬ್ಯಾಂಕ್‌ ಕಲ್ಪವೃಕ್ಷ ಇದ್ದಂತೆ. ಈ ಕಲ್ಪವೃಕ್ಷವನ್ನು ಉಳಿಸಿ ಬೆಳೆಸ ಬೇಕಾದ ಜವಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಸಾಲ ಪಡೆದು ಮರುಪಾವತಿ ಮಾಡಿ ಈ ಬ್ಯಾಂಕ್‌ ಅನ್ನದ ಅಕ್ಷಯ ಪಾತ್ರ ಇದ್ದಂತೆ ಎಂದು ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಹೋಬಳಿಯ ಚಾಕವೇಲು ಕೃಷಿ ಪತ್ತಿನ ಸೇವಾ ಸಹಕಾರ ಸಂಘ ಏರ್ಪಡಿಸಿದ್ದ ಶೂನ್ಯ ಬಡ್ಡಿ ದರದ ಸಾಲ ವಿತರಣಾ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಬೆಳೆಯ ಬೇಕಾದರೆ ನಮ್ಮ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಏಕೆಂದರೆ ಬ್ಯಾಂಕ್‌ಗಳು ನಂಬಿಕೆ ಮೇಲೆ ಸಾಲ ನೀಡುತ್ತವೆ. ಆ ನಂಬಿಕೆಯನ್ನು ಮಹಿಳಾ ಗುಂಪುಗಳು ಉಳಿಸಿಕೊಳ್ಳಬೇಕು. 168 ಮಹಿಳಾ ಫಲಾನುಭವಿಗಳಿಗೆ 1,52,23,000 ರೂ. ಸಾಲ ನೀಡಲಾಗುತ್ತಿದೆ. ಈಗ ಪಡೆಯುತ್ತಿ ರುವ ಸಾಲವನ್ನು ಚಿನ್ನಾಭ ರಣ, ಬಟ್ಟೆಗಳ ಖರೀದಿಗೆ ಬಳಸದೆ ಹೈನುಗಾರಿಕೆಯ ಉದ್ದೇಶಕ್ಕಾಗಿ ಬಳಸಿ ನಿಮ್ಮ ಜೀವನ ಅಭಿವೃದ್ಧಿಪಡಿಸಿಕೊಳ್ಳ ಬೇಕು. ಬ್ಯಾಂಕು ಗಳು ನಿಮ್ಮನ್ನು ನಂಬಿ ಕೋಟ್ಯಂತರ ರೂ. ಸಾಲ ನೀಡುತ್ತಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳಿಗೆ ಮೋಸ ಮಾಡಬಾರದು ಎಂದರು. ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಹೆಚ್‌.ವಿ. ನಾಗರಾಜ್‌, ತಾಪಂ ಮಾಜಿ ಅಧ್ಯಕ್ಷ ಕೆ.ಎಂ. ರಾಮರೆಡ್ಡಿ ಮಾತನಾಡಿ, ಇಡೀ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಾಲ ನೀಡಿರುವುದು ಕೋಲಾರ ಡಿಸಿಸಿ ಬ್ಯಾಂಕ್‌ ಮಾತ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ಯಾವತ್ತೂ ಡಿಸಿಸಿ ಬ್ಯಾಂಕ್‌ ನಿಮ್ಮ ಪರವಾಗಿ ನಿಲ್ಲುತ್ತದೆ. ನೀವು ಸಹ ಈ ಬ್ಯಾಂಕ್‌ಗೆ ಸಹಕಾರ ನೀಡಿದರೆ ಮಾತ್ರ ಮಹಿಳೆಯರಿಗೆ ಹೆಚ್ಚು ಸಾಲ ನೀಡಬಹುದು. ಮಹಿಳೆಯರು ಸಾಲ ಮರುಪಾವತಿ ಉತ್ತಮವಾಗಿರು ತ್ತದೆ. ಪುರುಷರಿಗೆ ಸಾಲ ನೀಡಿದರೆ ನಿರ್ಲಕ್ಷ್ಯ ಮಾಡುತ್ತಾರೆ. ಅದಕ್ಕಾಗಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಲಾಗುತ್ತಿದೆ. ಸಾಲ ಮನ್ನಾ ಆಗುತ್ತದೆ, ಸಾಲ ಕಟ್ಟಬೇಡಿ ಎಂಬ ಪುರುಷರ ಅಪಪ್ರಚಾರಕ್ಕೆ ಮರಳಾ ಗಬೇಡಿ ಎಂದರು. ಈ ಸಂದರ್ಭದಲ್ಲಿ ಚಾಕವೇಲು ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್‌.ವಿ. ಶ್ರೀರಾಮರೆಡ್ಡಿ, ನಿರ್ದೇಶಕರು, ತಾಪಂ ಮಾಜಿ ಸದಸ್ಯರಾದ ಕೆ.ಆರ್‌. ಸುಧಾಕರ್‌ರೆಡ್ಡಿ ಕೆಡಿಪಿ ಮಾಜಿ ಸದಸ್ಯ ಅಮರನಾಥರೆಡ್ಡಿ, ಕಾಂಗ್ರಸ್‌ ಮುಖಂಡ ರಾದ ಮಂತ್ರಾಲ ನಾರಾಯಣಸ್ವಾಮಿ, ಸೋಮಶೇಖರರೆಡ್ಡಿ, ಕೆ.ವಿ. ಶೇಖರ ರೆಡ್ಡಿ, ಕೆ.ವಿ. ಭಾಸ್ಕರ್‌ರೆಡ್ಡಿ, ಸ್ವಸಹಾಯ ಸಂಘಗಳ ಮಹಿಳೆಯರು, ಕಾಂಗ್ರೆಸ್‌ ಕಾರ್ಯಕರ್ತರು ಹಾಜರಿದ್ದರು.


from India & World News in Kannada | VK Polls https://ift.tt/3in94hC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...