ಕೊಹ್ಲಿಗೆ ವಿಶ್ರಾಂತಿ; ರೋಹಿತ್ ಗಾಯಾಳು; ನಾಯಕತ್ವದಲ್ಲೂ ಮಿಂಚಿದ ರಾಹುಲ್

ಮೌಂಟ್‌ ಮಾಂಗ್ನುಯಿ: ನ್ಯೂಜಿಲೆಂಡ್ ವಿರುದ್ದ ನಡೆದ ಅಂತಿಮ ಟಿ20 ಪಂದ್ಯದಲ್ಲೂ ಏಳು ರನ್ ಅಂತರದ ಗೆಲುವು ಬಾರಿಸಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್‌ಗೈದಿದೆ. ಈ ಮೂಲಕ ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲುವು ದಾಖಲಿಸಿದೆ. ಈ ನಡುವೆ ಟೀಮ್ ಇಂಡಿಯಾಗೆ ವಿಚಿತ್ರ ಸನ್ನವೇಶವೊಂದು ನಿರ್ಮಾಣವಾಗಿತ್ತು. ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಹಂಗಾಮಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಆದರೆ ಭಾರತದ ಇನ್ನಿಂಗ್ಸ್ ನಡುವೆ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ತುತ್ತಾಗಿರುವುದು ಹಿನ್ನೆಡೆಗೆ ಕಾರಣವಾಯಿತು. ಪರಿಣಾಮ ನಿವೃತ್ತಿ ಹೊಂದಬೇಕಾಯಿತು. ಈ ಸಂದರ್ಭದಲ್ಲಿ ನಾಯಕತ್ವ ವಹಿಸಿದ ಕರ್ನಾಟಕದ , ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೂರು ವಿಕೆಟ್ ನಷ್ಟಕ್ಕೆ 163 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಆರಂಭಿಕ ಕೆಎಲ್ ರಾಹುಲ್ 45 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ನಾಯಕ ರೋಹಿತ್ ಶರ್ಮಾ ಜೊತೆಗೆ ದ್ವಿತೀಯ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವನ್ನು ನೀಡಿದರು. ಈ ಮಧ್ಯೆ 35 ಎಸೆತಗಳಲ್ಲೇ ಫಿಫ್ಟಿ ಬಾರಿಸಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ರೋಹಿತ್ ಶರ್ಮಾ ಕಾಲಿನ ಹಿಂಭಾಗದಲ್ಲಿ ಗಾಯದ ಸಮಸ್ಯೆಗೊಳಗಾದರು. ಪರಿಣಾಮ ಭಾರತದ ಇನ್ನಿಂಗ್ಸ್ ಮಧ್ಯೆ ನಿವೃತ್ತಿ ಪಡೆದರು. 41 ಎಸೆತಗಳನ್ನು ಎದುರಿಸಿದ ರೋಹಿತ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 60 ರನ್ ಗಳಿಸಿದರು. ಬಳಿಕ ಭಾರತೀಯ ಫೀಲ್ಡಿಂಗ್ ವೇಳೆಯಲ್ಲಿ ರೋಹಿತ್ ಮೈದಾನಕ್ಕಿಳಿಯಲಿಲ್ಲ. ಅಲ್ಲದೆ ನಾಯಕತ್ವದ ಸಂಪೂರ್ಣ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸಿದರು. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್, ನಿಖರ ನಿರ್ಣಯಗಳ ಮೂಲಕ ನಾಯಕತ್ವ ಜವಾಬ್ದಾರಿಗೂ ತಾವು ಸೈ ಎಂಬುದನ್ನು ನಿರೂಪಿಸಿದರು. ಅಲ್ಲದೆ ಪರಿಪೂರ್ಣ ಟೀಮ್ ಪ್ಲೇಯರ್ ಎಂಬುದನ್ನು ಮಗದೊಮ್ಮೆ ಸಾಬೀತು ಮಾಡಿದರು. ತಂಡ ಬಯಿಸಿದಾಗ, ಆರಂಭಿಕ, ಮಧ್ಯಮ ಕ್ರಮಾಂಕ ಹೀಗೆ ಬ್ಯಾಟಿಂಗ್ ವಿಭಾಗದಲ್ಲಿ ಅನೇಕ ಹೊಣೆಯನ್ನು ಹೊತ್ತಿರುವ ರಾಹುಲ್, ಬಳಿಕ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿದ್ದರು. ಪ್ರಸ್ತುತ ನಾಯಕತ್ವದಲ್ಲೂ ಮಿಂಚುವ ಮೂಲಕ, ಭವಿಷ್ಯದ ಮಹೇಂದ್ರ ಸಿಂಗ್ ಧೋನಿ ಎಂಬುದನ್ನು ಸಾರಿದ್ದಾರೆ. ಅಷ್ಟೇ ಯಾಕೆ ಕಿವೀಸ್ ಸರಣಿಯಲ್ಲಿ ಮಿಂಚಿರುವ ರಾಹುಲ್ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದಾರೆ. ಕಿವೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಅರ್ಧಶತಕಗಳು ಸೇರಿದಂತೆ ರಾಹುಲ್ 224 ರನ್ ಕಲೆ ಹಾಕಿದ್ದರು. ಈ ಮೂಲಕ ಉಭಯ ಸರಣಿವೊಂದರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಬ್ಯಾಟ್ಸ್‌ಮನ್ ಎಂದೆನಿಸಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (199) ದಾಖಲೆಯನ್ನು ಮುರಿದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2uTLnYc

ಶುಭಮನ್ ಗಿಲ್ ಭರ್ಜರಿ ದ್ವಿಶತಕ; ಕಿವೀಸ್ ಸರಣಿಗೂ ಮುನ್ನ ಸ್ಪಷ್ಟ ಸಂದೇಶ

ಕ್ರಿಸ್ಟ್‌ಚರ್ಚ್: ಪ್ರವಾಸಿ ಭಾರತ ಎ ಹಾಗೂ ನ್ಯೂಜಿಲೆಂಡ್ ಎ ನಡುವೆ ಇಲ್ಲಿನ ಕ್ರಿಸ್ಟ್‌ಚರ್ಚ್ ಮೈದಾನದಲ್ಲಿ ನಡೆದ ಮೊದಲ ಅನಧಿಕೃತ ಟೆಸ್ಟ್ ಪಂದ್ಯವು ಡ್ರಾ ಫಲಿತಾಂಶದಲ್ಲಿ ಅಂತ್ಯಕಂಡಿದೆ. ಈ ಮಧ್ಯೆ ಭಾರತ ಯುವ ಭರವಸೆಯ ಬ್ಯಾಟ್ಸ್‌ಮನ್ ಭರ್ಜರಿ ದ್ವಿಶತಕ ಬಾರಿಸುವ ಮೂಲಕ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳಿಗಾಗಿನ ಭಾರತ ತಂಡವನ್ನು ಇನ್ನಷ್ಟೇ ಆರಿಸಬೇಕಿದೆ. ಈ ನಡುವೆ ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲೂ ಗಿಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದ್ದರು. ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿತ್ತು. 279 ಎಸೆತಗಳನ್ನು ಎದುರಿಸಿದ ಗಿಲ್ 22 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿಂದ 204 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ನಾಯಕ ಹನುಮ ವಿಹಾರಿ ಸಹ ಅಜೇಯ ಶತಕ ಸಾಧನೆ ಮಾಡಿದರು. ಅಲ್ಲದೆ ಗಿಲ್ ಜೊತೆಗೆ ಮುರಿಯದ ನಾಲ್ಕನೇ ವಿಕೆಟ್‌ಗೆ 222 ರನ್‌ಗಳ ಅಮೋಘ ಜತೆಯಾಟ ನೀಡಿದರು. ಈ ಮೊದಲು ಪ್ರಿಯಾಂಕ್ ಪಂಚಾಲ್ ಸಹ ಅಮೋಘ ಶತಕ (115) ಸಾಧನೆ ಮಾಡಿದ್ದರು. ಆದರೆ ಕರ್ನಾಟಕದ ಮಯಾಂಕ್ ಅಗರ್ವಾಲ್ ಎರಡು ಇನ್ನಿಂಗ್ಸ್‌ಗಳಲ್ಲೂ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಇದಕ್ಕೂ ಮುನ್ನ ಭಾರತ ಎ ತಂಡದ 216 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ಎ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 562 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ವಿಕೆಟ್ ಕೀಪರ್ ಡೇನ್ ಕ್ಲೆವರ್ 196 ರನ್‌ಗಳ ಭರ್ಜರಿ ಇನ್ನಿಂಗ್ಸ್ ಕಟ್ಟಿದ್ದರು. ಮಾರ್ಕ್ ಚ್ಯಾಪ್‌ಮ್ಯಾನ್ ಸಹ ಸಮಯೋಚಿತ ಶತಕ (114) ಸಾಧನೆ ಮಾಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31jqRMP

ಭಾರತೀಯ ವನಿತೆಯರ ವಿರುದ್ದ ಆಸೀಸ್‌ಗೆ ರೋಚಕ ಗೆಲುವು

ಕ್ಯಾನ್ಬೆರಾ: ಬಹುನಿರೀಕ್ಷಿತ 2020 ಮಹಿಳಾ ಟ್ವೆಂಟಿ-20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿವು ಟಿ20 ತ್ರಿಕೋನ ಸರಣಿಯಲ್ಲಿ ಭಾರತೀಯ ವನಿತೆಯರ ತಂಡವು ಆತಿಥೇಯರ ವಿರುದ್ಧ ಸೋಲಿಗೆ ಶರಣಾಗಿದೆ. ಇಂಗ್ಲೆಂಡ್ ಮಹಿಳೆಯರ ತಂಡದ ವಿರುದ್ಧ ನಡೆದ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿಕೊಂಡಿರುವ ಹರ್ಮಮನ್‌ಪ್ರೀತ್ ಕೌರ್ ಪಡೆಗೆ ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಕಾಂಗರೂ ಪಡೆಯ ವಿರುದ್ಧ ನಾಲ್ಕು ವಿಕೆಟ್ ಅಂತರದ ಸೋಲಿಗೊಳಗಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತೀಯ ಮಹಿಳೆಯರ ತಂಡವು ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಒಂದು ಹಂತದಲ್ಲಿ 78 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ (35) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (28) ರನ್ ಗಳಿಸಿದ್ದನ್ನು ಬಿಟ್ಟರೆ ಇತರೆ ಯಾವುದೇ ಬ್ಯಾಟ್ಸ್‌ವುಮೆನ್‌ ಹೋರಾಟದ ಮನೋಭಾವ ತೋರಲಿಲ್ಲ. ಆಸೀಸ್ ಪರ ಎಲ್ಲೀಸ್ ಪೆರ್ರಿ ಕೇವಲ 13 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಅಷ್ಟೇ ರನ್ ನೀಡಿದ ಟೇಲಾ ವ್ಲೇಮಿಂಕ್ ಮೂರು ವಿಕೆಟ್ ಕಬಳಿಸಿ ಭಾರತ ತಂಡವನ್ನು ಮಾರಕವಾಗಿ ಕಾಡಿದರು. ಬಳಿಕ ಗುರಿ ಬೆನ್ನಟ್ಟಿದ ಆಸೀಸ್ ಇನ್ನು ಏಳು ವಿಕೆಟುಗಳು ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಬ್ಯಾಟಿಂಗ್‌ನಲ್ಲೂ ಮಿಂಚಿದ ಎಲ್ಲೀಸ್ ಪೆರ್ರಿ 47 ಎಸೆತಗಳಲ್ಲಿ 49 ರನ್ ಗಳಿಸಿ ಮಿಂಚಿದರು. ಈ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳು ಸೇರಿದ್ದವು. ಭಾರತದ ಪರ ರಾಜೇಶ್ವರಿ ಗಾಯಕ್‌ವಾಡ್ ಎರಡು ವಿಕೆಟ್ ಪಡೆದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36IIPcI

ವಿರಾಟ್‌ಗೆ ವಿಶ್ರಾಂತಿ; ರೋಹಿತ್‌ಗೆ ಸಾರಥ್ಯ; ಅಂತಿಮ ಟಿ20ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಮೌಂಟ್‌ ಮಾಂಗ್ನುಯಿ: ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯ ಭಾನುವಾರ ಮೌಂಟ್‌ ಮಾಂಗ್ನುಯಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ. ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ವಿರಾಟ್‌ಗೆ ವಿಶ್ರಾಂತಿ; ರೋಹಿತ್‌ಗೆ ಸಾರಥ್ಯ ವೆಲ್ಲಿಂಗ್ಟನ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿಉಪನಾಯಕ ರೋಹಿತ್‌ ಶರ್ಮಗೆ ವಿಶ್ರಾಂತಿ ನೀಡಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡಲಾಗಿತ್ತು. ಅದೇ ರೀತಿ ಅಂತಿಮ ಟಿ20 ಪಂದ್ಯದಲ್ಲಿ ಸ್ವತಃ ನಾಯಕ ವಿರಾಟ್‌ ಕೊಹ್ಲಿ ವಿಶ್ರಾಂತಿ ಪಡೆದು ರೋಹಿತ್‌ಗೆ ನಾಯಕ ಪಟ್ಟ ವಹಿಸಿಕೊಡಲಾಗಿದೆ. ಈ ಮೂಲಕ ಟೀಮ್‌ ಇಂಡಿಯಾದ ಹಂಗಾಮಿ ನಾಯಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಂಜು ಓಪನರ್, ರೋಹಿತ್ ಒನ್ ಡೌನ್... ಭಾರತ ತಂಡದಲ್ಲಿ ಏಕಮಾತ್ರ ಬದಲಾವಣೆ ತರಲಾಗಿದೆ. ಅಲ್ಲದೆ ಯುವ ಬ್ಯಾಟ್ಸ್‌ಮನ್‌ಗೆ ಸಂಜು ಸ್ಯಾಮ್ಸನ್‌ಗೆ ಮಗದೊಂದು ಅವಕಾಶ ನೀಡಲಾಗಿದೆ. ಅಲ್ಲದೆ ಕೆಎಲ್ ರಾಹುಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದರಿಂದಾಗಿ ನಾಯಕ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯಲಿದ್ದಾರೆ. ಆಡುವ ಬಳಗ ಇಂತಿದೆ: New Zealand (Playing XI): Martin Guptill, Colin Munro, Tim Seifert(w), Ross Taylor, Tom Bruce, Daryl Mitchell, Mitchell Santner, Scott Kuggeleijn, Tim Southee(c), Ish Sodhi, Hamish Bennett India (Playing XI): Lokesh Rahul(w), Sanju Samson, Rohit Sharma(c), Shreyas Iyer, Manish Pandey, Shivam Dube, Washington Sundar, Shardul Thakur, Navdeep Saini, Yuzvendra Chahal, Jasprit Bumrah ಕ್ಲೀನ್ ಸ್ವೀಪ್ ಗುರಿ... ಕಳೆದೆರಡು ಪಂದ್ಯಗಳಲ್ಲಿ ದೊರೆತ 'ಸೂಪರ್‌' ವಿಜಯ ಸೇರಿದಂತೆ ಇಲ್ಲಿಯ ತನಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿರುವ ಭಾರತ ಈ ಪಂದ್ಯವನ್ನೂ ಗೆದ್ದು ಕ್ಲೀನ್‌ ಸ್ವೀಪ್‌ ಮಾಡುವತ್ತ ಗಮನ ಹರಿಸಿದೆ. ಇದೇ ವೇಳೆ ಆತಿಥೇಯ ತಂಡ ಕೊನೆಯ ಪಂದ್ಯವನ್ನಾದರೂ ಗೆದ್ದು ಸ್ಥಳೀಯ ಪ್ರೇಕ್ಷಕರಿಗೆ ಕೊಂಚ ಸಮಾಧಾನ ನೀಡುವ ಪ್ರಯತ್ನ ಮಾಡಬಹುದು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ut75x9

ಕೊರೊನಾ Live ಅಪ್ಡೇಟ್ಸ್‌: ಚೀನಾದಿಂದ ಭಾರತಕ್ಕೆ ಬಂದ ಎರಡನೇ ಏರ್‌ ಇಂಡಿಯಾ ವಿಮಾನ

ಚೀನಾದಲ್ಲಿ 304 ಬಲಿ ಪಡೆದಿದೆ. ಅಲ್ಲದೆ, ಚೀನಾದಿಂದ ಹೊರಗೆ ಅಂದರೆ ಫಿಲಿಪ್ಪೀನ್ಸ್‌ನಲ್ಲೂ ಒಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಭೀತಿ ಹರಡುತ್ತಿದೆ. ಭಾರತದಲ್ಲೂ ಇಬ್ಬರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಧೃಡಪಟ್ಟಿದ್ದು, ಇನ್ನೂ ಹಲವರಿಗೆ ಪರೀಕ್ಷೆ ನಡೆಯುತ್ತಿದೆ. ರಾಜ್ಯದಲ್ಲೂ ಹಲವರಿಗೆ ಪರೀಕ್ಷೆ ಮಾಡಲಾಗಿದ್ದು, ಆದರೆ ಈವರೆಗೆ ಒಬ್ಬರಿಗೂ ಸೋಂಕು ತಗುಲಿಲ್ಲ ಎನ್ನುವುದು ಧೃಡಪಟ್ಟಿದೆ. ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.. - ಚೀನಾದ ವುಹಾನ್‌ನಿಂದ ಭಾರತೀಯರನ್ನು ಕರೆದೊಯ್ಯಲು ತೆರಳಿದ್ದ ಏರ್‌ ಇಂಡಿಯಾ ವಿಮಾನ ಹೊಸದಿಲ್ಲಿಯಲ್ಲಿ ಲ್ಯಾಂಡ್‌ ಆಗಿದೆ. ಈ ವಿಮಾನದಲ್ಲಿ 323 ಭಾರತೀಯರು ಹಾಗೂ 7 ಮಂದಿ ಮಾಲ್ಡೀವ್ಸ್ ನಾಗರಿಕರು ಇದ್ದರು. - ಕೇರಳದಲ್ಲಿ ಕೊರೊನಾ ವೈರಸ್‌ನ ಎರಡನೇ ಪ್ರಕರಣ ಧೃಡಪಟ್ಟಿದೆ. ಚೀನಾಗೆ ತೆರಳಿದ್ದ ವ್ಯಕ್ತಿಗೆ ಕೊರೊನಾ ವೈರಸ್‌ ತಗುಲಿದ್ದು, ಇದು ದೇಶದಲ್ಲೂ ಕೊರೊನಾ ವೈರಸ್‌ನ ಎರಡನೇ ಪ್ರಕರಣವಾಗಿದೆ. - ಕೇರಳದಲ್ಲಿ ಕೊರೊನಾ ವೈರಸ್‌ ಭೀತಿ ಹೆಚ್ಚಾಗಿದ್ದು, 1793 ಮಂದಿಗೆ ತಪಾಸಣೆ ಮಾಡಲಾಗಿದ್ದು, ಈ ಪೈಕಿ 70 ಮಂದಿಯನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿ ಇಡಲಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. - ಈ ನಡುವೆ ಕೊರೊನಾ ಸೋಂಕಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಿಯಬಿಟ್ಟು ಜನರಲ್ಲಿ ಭೀತಿ ಉಂಟುಮಾಡಲು ಪ್ರಯತ್ನಿಸಿದ ಕಾರಣಕ್ಕಾಗಿ ಕೇರಳದ ಸೈಬರ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. - ಚೀನಾದಲ್ಲಿ ಕೊರೊನಾ ವೈರಸ್‌ ಮತ್ತಷ್ಟು ಭೀತಿ ಸೃಷ್ಟಿಸಿದ್ದು, ಶನಿವಾರ ಒಂದೇ ದಿನ 45 ಜನರು ಬಲಿಯಾಗಿದ್ದು, 2,590 ಜನರಿಗೆ ಸೋಂಕು ಹರಡಿದೆ. ಈ ಮೂಲಕ ಸಾವಿನ ಸಂಖ್ಯೆ 304ಕ್ಕೆ ಏರಿಕೆಯಾಗಿದ್ದು, 14,380ಕ್ಕೂ ಅಧಿಕ ಜನರಿಗೆ ಕೊರನಾ ವೈರಸ್‌ ಸೋಂಕು ತಗುಲಿದರುವುದು ಧೃಡಪಟ್ಟಿದೆ. - ಫಿಲಿಪ್ಪೀನ್ಸ್‌ನಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಹೊರತುಪಡಿಸಿ ಇತರೆ ದೇಶಗಳಲ್ಲಿ ಕೊರೊನಾಗೆ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ. - ಚೀನಾದಿಂದ ಪ್ರಯಾಣಿಸುವ ವಿದೇಶಿಯರಿಗೆ ನ್ಯೂಜಿಲೆಂಡ್ ಪ್ರವೇಶ ನಿರಾಕರಿಸಿದೆ. - ವುಹಾನ್‌ನಿಂದ ಶನಿವಾರ ಭಾರತಕ್ಕೆ ಬಂದ 324 ಮಂದಿ ಪೈಕಿ ಒಬ್ಬರಿಗೂ ಈವರೆಗೆ ಕೊರೊನಾ ವೈರಸ್‌ ಸೋಂಕು ಧೃಡಪಟ್ಟಿಲ್ಲ.


from India & World News in Kannada | VK Polls https://ift.tt/2GRAOHH

ಕೊರೊನಾ ವೈರಸ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಕೇರಳದಲ್ಲಿ ಮೂವರ ಬಂಧನ

ತಿರುವನಂತಪುರಂ: ಪ್ರಪಂಚವನ್ನು ಬೆಚ್ಚಿಬೀಳಿಸಿರುವ ಕುರಿತಾಗಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೀನಾದಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ಗೆ 304 ಮಂದಿ ಬಲಿಯಾಗಿದ್ದಾರೆ. ನೆರೆ ರಾಜ್ಯ ಕೇರಳದಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕೃತವಾಗಿ ಕೇರಳ ಸರಕಾರ ತಿಳಿಸಿದೆ. ಆದರೆ ಕೊರೊನಾ ಸೋಂಕಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಿಯಬಿಟ್ಟು ಜನರಲ್ಲಿ ಭೀತಿ ಉಂಟುಮಾಡಲು ಪ್ರಯತ್ನಿಸಿದ ಕಾರಣಕ್ಕಾಗಿ ಇವರನ್ನು ಕೇರಳದ ಸೈಬರ್‌ ಪೊಲೀಸರು ಬಂಧಿಸಿದ್ದಾರೆ. ಸೋಂಕಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿದರೆ ಅಂತವರ ವಿರುದ್ಧ ಕೂಡಾ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಎಚ್ಚರಿಸಿದ್ದಾರೆ. ಚೀನಾದಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು ಭಾರತದಲ್ಲೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಚೀನಾದಲ್ಲಿರುವ ಭಾರತೀಯರ ಎರಡನೇ ತಂಡವನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲಾಗಿದೆ.


from India & World News in Kannada | VK Polls https://ift.tt/2Oml0Rs

ಭಾರತದಲ್ಲಿ ಮತ್ತೆ ಕೊರೊನಾ ಭೀತಿ; ಕೇರಳದಲ್ಲಿ ಮತ್ತೊಬ್ಬರಿಗೆ ಹರಡಿದ ಸೋಂಕು

ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಪ್ರಕರಣ ವರದಿಯಾಗಿದೆ. ಈ ಹಿಂದೆ ಚೀನಾಕ್ಕೆ ತೆರಳಿದ್ದ ವ್ಯಕ್ತಿಗೆ ಕೇರಳದಲ್ಲಿ ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ವ್ಯಕ್ತಿಗೆ ನೋವೆಲ್‌ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಧೃಡಪಟ್ಟಿದೆ. ಅವರನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ. ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಅವರ ಆರೋಗ್ಯದ ಬಗ್ಗೆ ಸೂಕ್ತ ನಿಗಾ ವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಭಾರತದ ಮೊದಲನೇ ಕೊರೊನಾ ವೈರಸ್‌ ಪ್ರಕರಣ ಸಹ ಕೇರಳದಲ್ಲೇ ವರದಿಯಾಗಿತ್ತು. ವುಹಾನ್‌ನಿಂದ ಬಂದ ವಿದ್ಯಾರ್ಥಿನಿಯೊಬ್ಬರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಧೃಡಪಟ್ಟಿತ್ತು. ಈ ಮೂಲಕ ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‌ ಸೋಂಕು ಭಾರತಕ್ಕೂ ಹರಡಿತ್ತು.


from India & World News in Kannada | VK Polls https://ift.tt/2RQlPV1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...