IND vs NZ: 'ಪಾಪ..ಸಂಜು ಸ್ಯಾಮ್ಸನ್‌ ಇನ್ನೆಷ್ಟು ಸಹಿಸಿಕೊಳ್ಳಬೇಕು?'-ಬಿಸಿಸಿಐ ವಿರುದ್ಧ ದಾನಿಶ್‌ ಕನೇರಿಯಾ ಆಕ್ರೋಶ!

Danish Kaneria on Sanju samson: ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಟಿ20 ಹಾಗೂ ಏಕದಿನ ಸರಣಿ ಬುಧವಾರ ಅಂತ್ಯವಾಗಿದೆ. ಟಿ20 ಸರಣಿಯನ್ನು 1-0 ಅಂತರದಲ್ಲಿ ಭಾರತ ಗೆದ್ದುಕೊಂಡರೆ, 1-0 ಅಂತರದಲ್ಲಿ ಏಕದಿನ ಸರಣಿಯನ್ನು ನ್ಯೂಜಿಲೆಂಡ್‌ ಮುಡಿಗೇರಿಸಿಕೊಂಡಿತು. ಅಂದಹಾಗೆ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಸತತ ವೈಫಲ್ಯ ಅನುಭವಿಸಿದರೂ ರಿಷಭ್‌ ಪಂತ್ ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಸಂಜು ಸ್ಯಾಮ್ಸನ್‌ಗೆ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಪಾಕಿಸ್ತಾನ ಮಾಜಿ ಸ್ಪಿನ್ನರ್‌ ದಾನಿ ಶ್‌ ಕನೆರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/YoXZp2d

Karnataka Assemble Election 2023:ಕೃಷ್ಣನ ಕೋಟೆಯಲ್ಲಿ ಕಮಲಪಡೆಯ ಫೈಟ್‌: ಹೈವೋಲ್ಟೇಜ್‌ ಕ್ಷೇತ್ರ ಬ್ಯಾಟರಾಯನಪುರ

Karnataka Assemble Election 2023: ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಪರ್ಕ, ಒಡನಾಟ ಕಡಿಮೆ ಎಂಬುದು ಕಾಂಗ್ರೆಸ್‌ನ ಮೈನಸ್‌ ಪಾಯಿಂಟ್‌. ಸ್ಥಳೀಯ ನಾಯಕರ ನಡುವಿನ ಗುಂಪುಗಾರಿಕೆಯೇ ಪ್ರತಿಸಲವೂ ಗೆಲುವಿನ ಸನಿಹದಲ್ಲಿ ಪಕ್ಷಕ್ಕೆ ಕೈಕೊಡುತ್ತಿದೆ ಎಂಬುದು ಬಿಜೆಪಿ ಸಮಸ್ಯೆ. 2008, 2013 ಹಾಗೂ 2018 ಈ ಮೂರು ಚುನಾವಣೆಗಳಲ್ಲೂ ಹಾವು-ಏಣಿ ಆಟದಂತೆ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಹಣಾಹಣಿ ಹೋರಾಟದ ಈ ಕ್ಷೇತ್ರದ ರಾಜಕೀಯ ಚಿತ್ರಣ ಈ ಸಲವೂ ಬದಲಾಗಿಲ್ಲ.

from India & World News in Kannada | VK Polls https://ift.tt/NYT8wpP

Mangaluru Blast- ಶಾರಿಕ್‌ ಖಾತೆಗೆ ವಿದೇಶದಿಂದ ಹಣ?: ಜಾರ್ಖಂಡ್‌, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಪೊಲೀಸರಿಂದ ತನಿಖೆ

ಡಾರ್ಕ್ ವೆಬ್ ಮೂಲಕ ಶಾರಿಕ್‌ ಖಾತೆ ತೆರೆದಿದ್ದ. ವಿದೇಶದಿಂದ ಡಾಲರ್‌ಗಳ ಮೂಲಕ ಜಮೆ ಮಾಡಿದ ಹಣ ಆತನ ಖಾತೆಗೆ ವರ್ಗಾವಣೆಯಾಗಿದೆ. ಅದನ್ನು ಆತ ಮೈಸೂರಿನಲ್ಲಿ ಕೆಲವರ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿದ್ದ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಮೈಸೂರಿನಲ್ಲಿ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

from India & World News in Kannada | VK Polls https://ift.tt/RGAW794

Shivaji Statue Controversy - ಸಾವರ್ಕರ್ ವೃತ್ತದ ಬಳಿಕ ಇದೀಗ ಮಂಗಳೂರಿನಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ಜಟಾಪಟಿ

ಸುರತ್ಕಲ್ ನಲ್ಲಿ ವೀರ ಸಾವರ್ಕರ್ ವೃತ್ತ ನಿರ್ಮಾಣ ವಿಚಾರ ಇನ್ನೂ ತಣ್ಣಗಾಗುವ ಮೊದಲೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೀಗ ಶಿವಾಜಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ಜಟಾಪಟಿ ಏರ್ಪಟ್ಟಿದೆ. ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಭಾರಿ ಚರ್ಚೆ ನಡೆದು ಕೊನೆಗೆ ಪ್ರತಿಪಕ್ಷ ಕಾಂಗ್ರೆಸ್‌ನ ಆಕ್ಷೇಪ ದಾಖಲಿಸಲಾಯಿತು.ಇನ್ನೊಂದೆಡೆ ಅಲ್ಲಿ ಮಹಾರಾಷ್ಟ್ರದವರು ನಮ್ಮ ಬಸ್‌ಗಳಿಗೆ ಮಸಿ ಬಳಿಯುತ್ತಿದ್ದಾರೆ. ಹಾಗಾಗಿ ಇಲ್ಲಿ ಶಿವಾಜಿ ಪ್ರತಿಮೆಯ ಅಗತ್ಯವಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದರೆ, ಬಿಜೆಪಿ ಸದಸ್ಯರು ಹಿಂದೂ ನಾಯಕರನ್ನು ಯಾವಾಗಲೂ ಆಕ್ಷೇಪಿಸುತ್ತೀರಿ. ಶಿವಾಜಿ ಅವರನ್ನು ಮಹಾರಾಷ್ಟ್ರಕ್ಕೆ ಸೀಮಿತ ಮಾಡಬೇಡಿ ಎಂದು ಹೇಳಿದರು.

from India & World News in Kannada | VK Polls https://ift.tt/AubsTdB

BBL 2022-23: ಪರ್ತ್‌ ಸ್ಕಾರ್ಚರ್ಸ್‌ ಪರ ಬ್ಯಾಟ್‌ ಬೀಸಲಿರುವ ಆರ್‌ಸಿಬಿ ನಾಯಕ ಫಾಫ್‌ ಡು'ಪ್ಲೆಸಿಸ್‌!

Big Bash League 2022-23: ಬಿಗ್‌ ಬ್ಯಾಷ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಅಂದರೆ ನಾಲ್ಕು ಬಾರಿ ಟ್ರೋಫಿ ಗೆದ್ದು ಬೀಗಿರುವ ಪರ್ತ್‌ ಸ್ಕಾರ್ಚರ್ಸ್‌ ತಂಡ ಇದೀಗ 5ನೇ ಬಾರಿ ಟ್ರೋಫಿ ಗೆಲ್ಲಲು ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಜನಪ್ರಿಯ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಫಾಫ್‌ ಡು'ಪ್ಲೆಸಿಸ್‌ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ. ತಂಡ ಡಿಸೆಂಬರ್‌ 17ರಂದು ತನ್ನ ಅಭಿಯಾನ ಆರಂಭಿಸಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/hEXO7rY

Ugrappa criticize Modi-ಮೋದಿ ರಾಮಾಯಣವನ್ನೇ ಓದಿಲ್ಲ, ಹೆಂಡತಿಗೆ ಕೊಟ್ಟ ವಾಗ್ದಾನ ಈಡೇರಿಸಿಲ್ಲ, ರಾಮನಿಗೆ ದ್ರೋಹ ಮಾಡಿದ ವ್ಯಕ್ತಿ ಮೋದಿ: ಉಗ್ರಪ್ಪ ಕಿಡಿ

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯನ್ನು ರಾವಣನಿಗೆ ಹೋಲಿಸಿದ ಬಳಿಕ ಇದೀಗ ಉಗ್ರಪ್ಪ ಅವರು ರಾಮಾಯಣದ ವಿಚಾರಗಳನ್ನು ಇಟ್ಟುಕೊಂಡು ಟೀಕಾಪ್ರಹಾರ ನಡೆಸಿದ್ದಾರೆ. , ​​​​ಪ್ರಧಾನಿ ಮೋದಿ ರಾಮಾಯಣವನ್ನೇ ಓದಿಲ್ಲ. ಅವರ ಹೆಂಡತಿಗೆ ಕೊಟ್ಟ ವಾಗ್ದಾನ ಈಡೇರಿಸಿಲ್ಲ. ಸ್ವಂತ ಪತ್ನಿಗೆ ಅವರು ಒಳ್ಳೆ ಬದುಕು ಕೊಡಲಿಲ್ಲ. ಕೇಂದ್ರ ಸರ್ಕಾರದಲ್ಲಿ ಮೋದಿ ಕೊಟ್ಟ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಿಲ್ಲ. ಪದೇ ಪದೇ ರಾಮನ ಬಗ್ಗೆ ಮಾತಾನಾಡುತ್ತಾರೆ. ರಾಮನಿಗೆ ನಿಜವಾಗಿ ದ್ರೋಹ ಮಾಡಿದ ವ್ಯಕ್ತಿ ಈ ದೇಶದಲ್ಲಿ ಇದ್ದರೆ ಅದರಲ್ಲಿ ನಂಬರ್ ಒನ್ ಮೋದಿ ಎಂದು ಗುಡುಗಿದ್ದಾರೆ.

from India & World News in Kannada | VK Polls https://ift.tt/xgdC5iV

ನಿಗದಿತ ಜಾಗವಿಲ್ಲದ್ದಕ್ಕೆ ರಸ್ತೆ ಮೇಲೆಯೇ ಸಂತೆ; ಜೀವಭಯದಲ್ಲಿ ಸಾಗುವ ವಾಹನ ಸವಾರರು

ಪಾದಚಾರಿ ರಸ್ತೆಯಲ್ಲಿ ವ್ಯಾಪಾರ, ಅದರ ಮುಂಭಾಗವೇ ವಾಹನಗಳ ನಿಲುಗಡೆ ಮಾಡುತ್ತಿರುವ ಪರಿಣಾಮ ಈ ಮಾರ್ಗದಲ್ಲಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ರಸ್ತೆಯಲ್ಲಿಮಾತ್ರವಲ್ಲ, ಇಸ್ರೋ ಸಂಸ್ಥೆಯ ಬಾಹ್ಯಕಾಶ ನಿಯಂತ್ರಣ ಕೇಂದ್ರಕ್ಕೆ ತೆರಳುವ ಸಾಲಗಾಮೆ ರಸ್ತೆಯ ಜಿಲ್ಲಾಕ್ರೀಡಾಂಗಣ ಮುಂಭಾಗದ ರಸ್ತೆ ಬದಿಯಲ್ಲೂಇದೇ ರೀತಿ ಸಂತೆ ನಡೆಯುತ್ತದೆ.

from India & World News in Kannada | VK Polls https://ift.tt/5BLjtrg

IND vs NZ 3rd ODI Live Cricket Score: ಭಾರತ ತಂಡಕ್ಕೆ ಶಿಖರ್‌ ಧವನ್ ಆಸರೆ!

India vs New Zealand Live score Updates: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ ಮೈದಾನದಲ್ಲಿ ಇಂದು ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತೆ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಈಗಾಗಲೇ ಏಕದಿನ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿರುವ ಭಾರತ ತಂಡ, ಈ ಪಂದ್ಯ ಗೆದ್ದು ಸರಣಿಯನ್ನು ಡ್ರಾ ಸಾಧಿಸಲು ಎದುರು ನೋಡುತ್ತಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iCXsoF4

IND vs NZ 3rd ODI Live Score commentary: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್‌!



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/y3YQSmw

Karnataka Assembly Election 2023: ಸಿಎಂ ಹುದ್ದೆಗಾಗಿ ಜಾತಿ ಪೈಪೋಟಿ:ಕೂಸು ಹುಟ್ಟುವ ಮುನ್ನವೇ ಜೋಗುಳ ಜೋರು

Karnataka Assembly Election 2023: ಸಿಎಂ ಕುರ್ಚಿಗೆ ಈಗಾಗಲೇ ಸಾಕಷ್ಟು ಬೇಡಿಕೆಗಳು ಕೇಳಿ ಬರುತ್ತಿವೆ. ಜಾತಿ ಸಮಾವೇಶಗಳ ಪಡಸಾಲೆಯಲ್ಲಿ‘ನಮ್ಮವರೇ ಸಿಎಂ ಆಗಬೇಕು’ ಎಂಬ ವರಾತ ಸಾಮಾನ್ಯವಾಗಿದೆ. ಬಹಳ ಮುಖ್ಯವಾಗಿ ಧಾರ್ಮಿಕ ಮುಖಂಡರೇ ಇಂಥದೊಂದು ಹಕ್ಕೊತ್ತಾಯ ಸಲ್ಲಿಸುತ್ತಿದ್ದಾರೆ. ಪ್ರತಿಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕಾಂಗ್ರೆಸ್‌ ಮರಳಿ ಅಧಿಕಾರಕ್ಕೇರಿದರೆ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಇದ್ದಾರೆ. ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ ಅನುಮಾನವೇ ಬೇಡ. ಕುಮಾರಸ್ವಾಮಿ ಅವರೇ ಪಟ್ಟಕ್ಕೇರುತ್ತಾರೆ.

from India & World News in Kannada | VK Polls https://ift.tt/6ADfi5E

Basavaraj Bommai: ಕರ್ನಾಟಕದ ಯೋಜನೆಗಳಿಗೆ ಡಬಲ್‌ ಇಂಜಿನ್‌ ವೇಗ; ಸಹಕರಿಸಲು ಕೇಂದ್ರ ಸಚಿವರಿಗೆ ಬೊಮ್ಮಾಯಿ ಮನವಿ

ರಾಷ್ಟ್ರ ರಾಜಧಾನಿ ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದ ಯೋಜನೆಗಳಿಗೆ ಡಬಲ್‌ ಇಂಜಿನ್‌ ವೇಗ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಮಂಗಳವಾರ ಕೇಂದ್ರ ಸಚಿವರಾದ ಪಿಯೂಷ್‌ ಗೋಯೆಲ್‌, ಭೂಪೇಂದ್ರ ಯಾದವ್‌ ಹಾಗೂ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ರಾಜ್ಯದ ನಾನಾ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ.

from India & World News in Kannada | VK Polls https://ift.tt/XDr0jgt

Hubballi-Dharwad Corporation-ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿ ಸಾವಿರಾರು ಮಂದಿಗೆ ಭರ್ಜರಿ ಬಾಡೂಟ: ಸಾರ್ವಜನಿಕರ ಕೆಂಗಣ್ಣಿಗೆ ಪಾಲಿಕೆ ವಿಪಕ್ಷ ನಾಯಕ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಪಾಲಿಕೆ ನೌಕರರೂ ಸೇರಿದಂತೆ ಸಾವಿರಾರು ಜನರು ಮಂಗಳವಾರ ಭರ್ಜರಿ ಬಾಡೂಟ ಸವಿದರು. ಇಂಥದ್ದೊಂದು ಬಾಡೂಟವನ್ನು ಪಾಲಿಕೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ಕಾರ್ಪೋರೇಟರ್‌ ದೊರಾಜು ಮನಿಕುಂಟ್ಲಆಯೋಜಿಸಿದ್ದರು. ಸರಕಾರಿ ಕಚೇರಿ ಆವರಣದಲ್ಲಿ ಬಾಡೂಟ ತಯಾರಿಸಿ ಸಾವಿರಾರು ಜನರಿಗೆ ವಿತರಣೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

from India & World News in Kannada | VK Polls https://ift.tt/3GFvxi9

ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ: ಶಾಸಕಿ ಅನಿತಾ ಕುಮಾರಸ್ವಾಮಿ

ಹಾರೋಹಳ್ಳಿ ಪಟ್ಟಣದ ಕೆಪಿಎಸ್‌ ಶಾಲೆಯ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿರುವ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕಿ ಅನಿತು ಕುಮಾರಸ್ವಾಮಿ, ಆರೋಗ್ಯ, ವಸತಿ, ಶಿಕ್ಷಣ ಸೇರಿದಂತೆ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಅವುಗಳೆಲ್ಲವೂ ಸಾಕಾರವಾಗಲಿವೆ. ಈಗಾಗಲೆ ಪಂಚರತ್ನ ರಥ ಯಾತ್ರೆಯು ಕೋಲಾರ ಸೇರಿದಂತೆ ಇನ್ನಿತರೆಡೆ ಸಂಚರಿಸಿದ್ದು ಇಂದಿನಿಂದ ಬೆಂಗಳೂರು ಗ್ರಾಮಾಂತರದಾದ್ಯಂತ ಸಂಚರಿಸಲಿದೆ. ಎಲ್ಲೆಡೆ ಜನತೆ ಮೆಚ್ಚಿ ಹಾರೈಸುತ್ತಿದ್ದಾರೆ ಎಂದರು.

from India & World News in Kannada | VK Polls https://ift.tt/FrP9D0c

ಸಿಎಂ 1 ಲಕ್ಷ ವಸತಿ ಯೋಜನೆ ಅರ್ಜಿದಾರರಿಗೆ ಸಿಹಿ ಸುದ್ದಿ : ಪರಿಶಿಷ್ಟರಿಗೆ 6 ಲಕ್ಷಕ್ಕೆ ಮನೆ

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಮನೆ ಖರೀದಿ ಮೊತ್ತವನ್ನು ಮತ್ತಷ್ಟು ಇಳಿಕೆ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ. ಪ್ರತಿ ಮನೆಗೆ ಸಾಮಾನ್ಯ ವರ್ಗದವರಿಗೆ 6.5 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ನಿಗದಿಯಾದ 7.10 ಲಕ್ಷ ರೂ. ಮೊತ್ತವನ್ನು 6 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದೆ.

from India & World News in Kannada | VK Polls https://ift.tt/Lbt43gj

ರಾಮನಗರ: ತಾತ್ಕಾಲಿಕ ಸಂಪರ್ಕ ಸೇತುವೆ ಭರವಸೆಗೆ ಸೀಮಿತ; ಬದಲಿ ವ್ಯವಸ್ಥೆಗೆ ಮುಂದಾದ ಗ್ರಾಮಸ್ಥರು

ಮಹಾಮಳೆಯಿಂದಾಗಿ ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಹೆಚ್ಚಿನ ಸೇತುವೆಗಳು ಹಾನಿಗೊಂಡಿವೆ. ಸೇತುವೆಯ ಜತೆಗೆ, ಬೆಳೆ ಹಾನಿ, ಸರಕಾರಿ ಕಟ್ಟಡ, ರಸ್ತೆಗಳು ಹಾನಿಗೀಡಾಗಿದ್ದವು. ಅತಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಕೊಚ್ಚಿ ಹೋಗಿದ್ದವು. ಇದರಿಂದಾಗಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹತ್ತಾರು ಕಿಲೋ ಮೀಟರ್‌ ಸುತ್ತಾಡಿ ಗ್ರಾಮ ತಲುಪುವಂತಾಗಿದೆ. ಸಂಪರ್ಕ ಸೇತುವೆಗಳ ಆಶ್ವಾಸನೆ ಹುಸಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮಸ್ಥರು ತಾವೇ ಖುದ್ದಾಗಿ ಬದಲಿ ಮಾರ್ಗಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

from India & World News in Kannada | VK Polls https://ift.tt/KPkx5tq

Karnataka Assembly Election 2023: ಹಳೆ ಹುಲಿಗಳ ವಿರುದ್ಧ ಸೆಣೆಸಲು ಕೈ ಪಡೆಯ ಚಿಕ್ಕನಾಯಕ ಯಾರು?

Karnataka Assembly Election 2023: ಬಿಜೆಪಿ- ಜೆಡಿಎಸ್‌ ನಡುವೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇದೆ. ಮಾಧುಸ್ವಾಮಿಗೆ ಜೆಡಿಎಸ್‌ನ ಸಿ.ಬಿ. ಸುರೇಶ್‌ ಬಾಬು ಟಕ್ಕರ್‌ ಕೊಡಲು ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್‌ ರಿಯಲ್‌ ಫೈಟ್‌ ನೀಡಿದರೆ ಈ ತ್ರಿಕೋನ ಸ್ಪರ್ಧೆಯ ಫಲಿತಾಂಶ ಯಾರಿಗೆ ವರವಾಗಲಿದೆ? ಎಂಬ ಕುತೂಹಲವೂ ಇದೆ.

from India & World News in Kannada | VK Polls https://ift.tt/0JfZlqx

Amaregowda Bayyapura- ಸಿದ್ದರಾಮಯ್ಯ ಕುಷ್ಟಗಿಯಿಂದ ಸ್ಪರ್ಧಿಸಲು ಬಯಸಿದಲ್ಲಿ ಕ್ಷೇತ್ರ ಬಿಟ್ಟುಕೊಡುವೆ: ಶಾಸಕ ಅಮರೇಗೌಡ ಬಯ್ಯಪುರ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಷ್ಟಗಿಯಿಂದ ಸ್ಪರ್ಧಿಸಲು ಬಯಸಿದಲ್ಲಿ ಕ್ಷೇತ್ರವನ್ನು ಬಿಟ್ಟು ಕೊಡುವೆ ಮತ್ತು ಅವರನ್ನು ಗೆಲ್ಲಿಸಿಕೊಂಡು ಬರುವೆ ಎಂದು ಹಾಲಿ ಶಾಸಕ ಅಮರೇಗೌಡ ಬಯ್ಯಪುರ ಹೇಳಿದ್ದಾರೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಖಂಡನೀಯ ಎಂದಿರುವ ಅವರು, ನಾವೂ ಹಿಂದುಗಳಲ್ಲವಾ? ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಹಿಂದುಗಳಲ್ಲವಾ ? ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಪ್ರಮುಖವಾಗಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

from India & World News in Kannada | VK Polls https://ift.tt/sr0hdV6

Riyan Parag: ಕೊನೆಗೂ ಅಬ್ಬರಿಸಿದ ರಿಯಾನ್ ಪರಾಗ್‌, 116 ಎಸೆತಗಳಲ್ಲಿ 174 ರನ್‌ ಚಚ್ಚಿದ ಯುವ ತಾರೆ!

Vijay Hazare Trophy 2022: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹೊರಹೊಮ್ಮಿದ ಸ್ಪೋಟಕ ಯುವ ಬ್ಯಾಟ್ಸ್‌ಮನ್‌ಗಳ ಪೈಕಿ ಅಸ್ಸಾಂನ ಆಟಗಾರ ರಿಯಾನ್‌ ಪರಾಗ್‌ ಕೂಡ ಒಬ್ಬರು. ಐಪಿಎಲ್‌ 2022 ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಆಡಿದ್ದ ರಿಯಾನ್‌ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಹೊಡಿ ಬಡಿ ಆಟದಿಂದಲೇ ಹೆಚ್ಚು ಜನಪ್ರಿಯ. ಆದರೆ, ಅವರಿಂದ ಹೇಳಿಕೊಳ್ಳುವ ದೊಡ್ಡ ಇನಿಂಗ್ಸ್‌ ಈವರೆಗೆ ಬಂದಿರಲಿಲ್ಲ. ಆದರೆ, ಹಾಲಿ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಧೂಳೆಬ್ಬಿಸಿರುವ ರಿಯಾನ್‌ ಪರಾಗ್‌ ಕ್ವಾರ್ಟರ್‌ ಫೈನಲ್ಸ್‌ನಲ್ಲಿ 174 ರನ್ ಚಚ್ಚಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/kR7WiCQ

DK Shivakumar- ಶ್ರೀರಾಮುಲು ಮೊದಲು ಬಳ್ಳಾರಿ ಇಂಟರ್ನಲ್ ಸರಿಮಾಡಿಕೊಳ್ಳಲಿ: ಡಿ.ಕೆ.ಶಿವಕುಮಾರ್ ಟಾಂಗ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರಿಸ್ಥಿತಿ ಒಂದು ರೀತಿ ಚಿರತೆಗಳಂತೆ ಆಗಿಬಿಟ್ಟಿವೆ. ಅವರಿಬ್ಬರಿಗೆ ಒಂದೇ ಚಿಂತೆ. ಅದು ಮುಖ್ಯಮಂತ್ರಿ ಖುರ್ಚಿಯ ಚಿಂತೆ. ಎರಡು ಚಿರತೆಗಳಿಗೆ ಪೈಪೋಟಿ ನಡೆಸಿವೆ ಎಂy ಸಾರಿಗೆ ಸಚಿವ ಶ್ರೀರಾಮುಲು ವ್ಯಂಗ್ಯಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಚಿವ ಶ್ರೀರಾಮುಲು ಅವರು ಬಳ್ಳಾರಿ ಇಂಟರ್ನಲ್ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

from India & World News in Kannada | VK Polls https://ift.tt/MW6UA14

BDA Site: ಕಾರಂತ ಬಡಾವಣೆ ಸೈಟ್‌ ಹಂಚಿಕೆ ಸನ್ನಿಹಿತ: ರೈತರಿಗೆ ಮೊದಲ ಆದ್ಯತೆ

BDA Site: ಕಾರಂತ ಬಡಾವಣೆಯಲ್ಲಿ 2,600 ಎಕರೆ ಭೂಮಿ ಬಿಡಿಎಗೆ ಸಿಕ್ಕಿದೆ. 1,270 ಕೋಟಿ ರೂ. ಅಂದಾಜು ಮೊತ್ತದೊಂದಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಬಿಡಿಎ ಹೊಂದಿದೆ. ಈ ಜಾಗವನ್ನು ಅಭಿವೃದ್ಧಿಪಡಿಸಿ, ಇದರಲ್ಲಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶವಿದ್ದು, ಹೀಗೆ ನಿವೇಶನ ಹಂಚಿಕೆ ಮಾಡುವಾಗ ಬಡಾವಣೆ ನಿರ್ಮಾಣಕ್ಕಾಗಿ ಭೂಮಿಯನ್ನು ಪಡೆದ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

from India & World News in Kannada | VK Polls https://ift.tt/vR1oxqi

ಮೆಟ್ರೊದ ಕೆ.ಆರ್‌.ಪುರಂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಹೆಚ್ಚುವರಿ ಎರಡು ನಿಲ್ದಾಣ

ಕೆ.ಆರ್‌.ಪುರ-ಹೆಬ್ಬಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟು ಉದ್ದ 38. 44 ಕಿ. ಮೀ ಆಗಿದೆ. ಈ ರೈಲು ಮಾರ್ಗದ ಒಟ್ಟು ವೆಚ್ಚ ಸುಮಾರು 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಹೆಚ್ಚುವರಿಯಾಗಿ ಎರಡು ನಿಲ್ದಾಣಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ. ಹೀಗಾಗಿ ಜಕ್ಕೂರು ಪ್ಲಾಂಟೇಶನ್‌, ಚಿಕ್ಕಜಾಲ ಮತ್ತು ಯಲಹಂಕ ಏರ್‌ಪೋರ್ಸ್‌ ಬೇಸ್‌ ಬಳಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

from India & World News in Kannada | VK Polls https://ift.tt/Cgnw154

Karnataka Assembly Election 2023: ನಾಗಮಂಗಲದಲ್ಲಿ‘ತ್ರಿ’ಟಾಟೋಪ !-ಹೈವೋಲ್ಟೇಜ್‌ ಕ್ಷೇತ್ರ

ಕ್ಷೇತ್ರ ಪುನರ್‌ವಿಂಗಡನೆಗೂ ಮೊದಲು ಸಾಧಾರಣ ಕ್ಷೇತ್ರದಂತಿದ್ದ ನಾಗಮಂಗಲ 2008ರ ಚುನಾವಣೆಯಲ್ಲಿ ಸಂಪೂರ್ಣ ಬದಲಾಯಿತು. ಬರದ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಹಣದ ಹೊಳೆ ಹರಿದು 36 ವರ್ಷಗಳ ಬಳಿಕ ಕಾಂಗ್ರೆಸ್‌ ಜಯ ಗಳಿಸಿತ್ತು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸುರೇಶ್‌ಗೌಡ ಸಚಿವರಾಗಿದ್ದ ಚೆಲುವರಾಯಸ್ವಾಮಿಯವರಿಗೆ ಸೋಲಿನ ರುಚಿ ತೋರಿಸಿದ್ದರು. ಹಾಗಾಗಿ ಹಳೆಯ ವೈರತ್ವ ವರ್ಷಗಳು ಕಳೆದಂತೆ ತೀವ್ರಗೊಂಡಿದ್ದು ಈ ಬಾರಿಯ ಚುನಾವಣೆಯಲ್ಲೂ ತಾರಕಕ್ಕೇರುವ ಲಕ್ಷಣ ಕಾಣುತ್ತಿದೆ.

from India & World News in Kannada | VK Polls https://ift.tt/h7V8q2B

ಶ್ರೀರಂಗಪಟ್ಟಣ ಪ್ರವೇಶಿಸಲು ಪ್ರವಾಸಿಗರ ಪರದಾಟ; ಬದಲಿ ಮಾರ್ಗಕ್ಕೆ ಒತ್ತಾಯ

ಶ್ರೀರಂಗಪಟ್ಟಣವನ್ನು ನಾಲ್ಕು ದಿಕ್ಕಿನಿಂದ ಕಾವೇರಿ ನದಿ ಸುತ್ತುವರಿದಿರುವುದರಿಂದ ಪಟ್ಟಣದೊಳಗೆ ಹೋಗಲು ಇವೆರಡೂ ರಸ್ತೆಗಳ ಹೊರತಾಗಿ ಬೇರೆ ರಸ್ತೆ ಮಾರ್ಗಗಳಿಲ್ಲ. ಆದರೆ, ಈ ರಸ್ತೆಗಳಲ್ಲಿವಾಹನಗಳ ದ್ವಿಮುಖ ಸಂಚಾರಕ್ಕೆ ಅವಕಾಶವಿದೆ. ಇದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಹೆಚ್ಚು ಮಂದಿ ಪ್ರವಾಸಿಗರು ಬಸ್‌, ಟಿಟಿ ವಾಹನ, ಕಾರುಗಳಲ್ಲಿ ಆಗಮಿಸುತ್ತಾರೆ. ಎಲ್ಲರೂ ಒಂದೇ ಮಾರ್ಗದಲ್ಲಿಶ್ರೀರಂಗಪಟ್ಟಣ ಪ್ರವೇಶ ಮಾಡಬೇಕು. ಸಂಚಾರಿ ನಿಯಮಗಳ ಸೂಕ್ತ ಅಳವಡಿಕೆ ಇಲ್ಲದ ಪರಿಣಾಮ ಕೋಟೆ ರಸ್ತೆಯಲ್ಲಿ ಸಂಚರಿಸಲು ಹೈರಾಣಾಗುವ ಪರಿಸ್ಥಿತಿ ವಾಹನಗಳ ಚಾಲಕರದ್ದು.

from India & World News in Kannada | VK Polls https://ift.tt/fMFpPD4

Vadaghatta Lake - ವಡಾಘಟ್ಟ ಕೆರೆಗೆ ವಿಷಪೂರಿತ ಔಷಧ ಸಿಂಪಡಿಸಿದ ದುಷ್ಕರ್ಮಿಗಳು:5 ಲಕ್ಷ ಮೀನು ಮರಿಗಳ ಮಾರಣ ಹೋಮ

ರಾಜಕೀಯ ದ್ವೇಷಕ್ಕೆ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನಿನ ಮರಿಗಳ ಮಾರಣಹೋಮ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ವಡಾಘಟ್ಟ ಗ್ರಾಮದಲ್ಲಿ ನಡೆದಿದೆ. ಜೋಡಿಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಚೈತ್ರ ಪತಿ ವಡಾಘಟ್ಟ ಗ್ರಾಮದ ಚಂದನ್‌ ಮೀನು ಕಳೆದುಕೊಂಡ ವ್ಯಕ್ತಿ.ಅವರು ಸುಮಾರು ಎಂಟೂವರೆ ಲಕ್ಷ ಹಣ ಖರ್ಚು ಮಾಡಿ ಐದೂವರೆ ಲಕ್ಷ ಮೀನಿನ ಮರಿಗಳನ್ನು ನೀರಿಗೆ ಬಿಟ್ಟಿದ್ದರು.

from India & World News in Kannada | VK Polls https://ift.tt/DGMPYch

Dog Show in Hassan- ಹಾಸನದಲ್ಲಿ 300ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ

ಹಾಸನ ನಗರದ ಸರಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಹಾಸನ್‌ ಕೆನಲ್‌ ಕ್ಲಬ್‌ನಿಂದ ಆಯೋಜಿಸಲಾಗಿದ್ದ ಸ್ವದೇಶಿ ಮತ್ತು ವಿದೇಶಿ ಶ್ವಾನ ಪ್ರದರ್ಶನವನ್ನು ಹಾಸನ ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ವಾನ ಪ್ರದರ್ಶನಕ್ಕೆ ಮಾಡಲಾಗಿದ್ದ ಮೈದಾನದಲ್ಲಿಸ್ವದೇಶಿ ಮತ್ತು ವಿದೇಶಿ ತಳಿಯ ಒಟ್ಟು 300ಕ್ಕೂ ಹೆಚ್ಚಿನ ಶ್ವಾನಗಳು ಪ್ರದರ್ಶನದಲ್ಲಿಪಾಲ್ಗೊಂಡಿದ್ದವು. ಉತ್ತಮ ಶ್ವಾನಗಳ ಮಾಲೀಕರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

from India & World News in Kannada | VK Polls https://ift.tt/g6y7cLN

ಜ್ವರ, ನೆಗಡಿಗೆ ಆ್ಯಂಟಿಬಯೋಟಿಕ್ಸ್‌ ಬೇಡ: ಐಸಿಎಂಆರ್‌ ಸಲಹೆ

ಕಡಿಮೆ ಪ್ರಮಾಣದ ಜ್ವರ ಮತ್ತು ಸೋಂಕು ಸ್ವರೂಪದ ಶ್ವಾಸಕೋಶ ಉರಿಯೂತ ಇದ್ದಾಗ ಅವಸರ ಮಾಡಬಾರದು. ಅಂಥ ರೋಗಿಗಳಿಗೆ ಆ್ಯಂಟಿಬಯೋಟಿಕ್‌ ಕೊಡಲೇಬಾರದು ಎಂದು ಮಾರ್ಗಸೂಚಿ ತಿಳಿಸಿದೆ. ರೋಗ ಪತ್ತೆ ಪರೀಕ್ಷೆಗಳು ಸರಿಯಾದ ಔಷಧ ಬಳಕೆಗೆ ನೆರವಾಗುತ್ತವೆ. ಪ್ರಯೋಗಾಲಯದ ಮಾದರಿಯೇ ಪಡೆಯದೇ ಕಣ್ಣುಮುಚ್ಚಿ ಆ್ಯಂಟಿಬಯೋಟಿಕ್ಸ್‌ ಬರೆಯುವುದು ತಪ್ಪು ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ.

from India & World News in Kannada | VK Polls https://ift.tt/d2A9GPW

IND vs NZ 2nd ODI Live Score and Commentary: ಪಂದ್ಯಕ್ಕೆ ವರುಣನಿಂದ ಅಡಚಣೆ!



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/rSwQl7e

ಹಳೇ ಹುಡುಗಿ ಕಾಟ, ಓಡಿ ಹೋದ ಯುವಕ! ಮೊದ್ಲು ಚೆನ್ನಾಗಿಲ್ಲ ಅಂತ ರಿಜೆಕ್ಟ್ ಮಾಡಿದ್ದೋಳು ಮದ್ವೆ ಆಗು ಅಂತ ಹಿಂದೆ ಬಿದ್ಲು!!

ಮೂಲತಃ ಜೇವರ್ಗಿ ತಾಲೂಕಿನ ಹರವಾಳದ ನಿವಾಸಿ ಮರೆಪ್ಪ(32) ಕಾಣೆಯಾದ ಯುವಕ. ಈತ ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲಿ ನರೇಗಾ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದ. ಹುಡುಗಿಯೊಬ್ಬಳ ಜತೆ ನಿಶ್ಚಿತಾರ್ಥ ನಡೆದಿದ್ದರಿಂದ ಮನೆಯಲ್ಲಿಮದುವೆ ತಯಾರಿಯೂ ನಡೆಸಿದ್ದರು. ಈ ವೇಳೆ ಹಳೆ ಹುಡುಗಿಯ ಹೊಸ ಕಾಟಕ್ಕೆ ಬೇಸತ್ತು ನ.13ರಿಂದ ಮನೆ ಬಿಟ್ಟು ಪರಾರಿಯಾಗಿದ್ದಾನೆ. ನಿಶ್ಚಿತಾರ್ಥ ಮುರಿದುಕೊಂಡು ಮದುವೆ ಮಾಡಿಕೊಳ್ಳುವಂತೆ ಮರೆಪ್ಪನನ್ನು ದುಂಬಾಲು ಬಿದಿದ್ದಳು ಎಂದು ಮರೆಪ್ಪ ಮನೆಯಲ್ಲಿ ಬರೆದಿಟ್ಟ 5 ಪುಟಗಳ ಪತ್ರದಲ್ಲಿತಿಳಿಸಿದ್ದಾನೆ.

from India & World News in Kannada | VK Polls https://ift.tt/gDdzSKc

ನಿವೇಶನ ಹಂಚಿಕೆಗೆ 826 ಎಕರೆ ಭೂಮಿ: ಚಿಕ್ಕಬಳ್ಳಾಪುರದಲ್ಲಿ ಆರ್‌. ಅಶೋಕ್‌ ಘೋಷಣೆ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಜರಬಂಡ ಹಳ್ಳಿಯಲ್ಲಿ ಜಿಲ್ಲಾಡಳಿತ ಶನಿವಾರ ಆಯೋಜಿಸಿದ್ದ 'ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ' ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ, ತಾಲೂಕಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ಪ್ರಕಟಿಸಿದರು. ​​​​​ಮಂಚೇನಹಳ್ಳಿ ತಾಲೂಕು ಆಡಳಿತ ಕಚೇರಿ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಕ್ಷೇತ್ರದ ಬಡವರಿಗೆ ವಸತಿ ಹಾಗೂ ನಿವೇಶನ ಹಂಚಿಕೆ ಮಾಡಲು 826 ಎಕರೆ ಜಮೀನು ಮೀಸಲಾಗಿರಿಸುತ್ತದೆ ಎಂದರು. ಜೊತೆಗೆ, ಜರಬಂಡಹಳ್ಳಿ ಗ್ರಾಪಂಗೆ 1 ಕೋಟಿ ರೂ. ಅನುದಾನವನ್ನು ಸಚಿವರು ಪ್ರಕಟಿಸಿದರು.

from India & World News in Kannada | VK Polls https://ift.tt/viqN1ft

ಸಾಗರ ಬಳಿ ಶರಾವತಿ ಹಿನ್ನೀರಿಗೆ ಜಾರಿ ಬಿದ್ದ ಬಸ್‌: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಹಿನ್ನೀರಿಗೆ ಜಾರಿ ಬಿದ್ದಿರುವ ಘಟನೆ ಶಿವಮೊಗ್ಗದ ಸಾಗರ ಬಳಿ ನಡೆದಿದ್ದು ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಹಿಚಾಚಿ ಸಹಾಯದಿಂದ ಬಸ್ ಅನ್ನು ಹೊರ ತೆಗೆಯಲಾಗಿದೆ. ಇದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಸಿಗಂಧೂರಿಗೆ ತೆರಳುವ ದಾರಿಯಲ್ಲಿ ಸಂಭವಿಸಿದೆ. ಫ್ಲಾಟ್‌ಫಾರಂ ಅವ್ಯವಸ್ಥೆ ಬಗ್ಗೆ 'ವಿಜಯ ಕರ್ನಾಟಕ' ನ. 15ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈ ಬಗ್ಗೆ ಸೇತುವೆ ನಿರ್ಮಾಣದ ಗುತ್ತಿಗೆದಾರರು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

from India & World News in Kannada | VK Polls https://ift.tt/CrfqiD4

Selfie Craze - ಜಲಪಾತದ ಬಳಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬೆಳಗಾವಿಯ ನಾಲ್ವರು ಯುವತಿಯರು ನೀರುಪಾಲು: ಮಹಾರಾಷ್ಟ್ರದ ಕಿತ್ವಾಡ್ ಫಾಲ್ಸ್ ನಲ್ಲಿ ದುರ್ಘಟನೆ

ಜಲಪಾತದ ಬಳಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಕಿತ್ವಾಡ್ ಫಾಲ್ಸ್ ನಲ್ಲಿ ಶನಿವಾರ ನಡೆದಿದೆ. ಮೃತಪಟ್ಟವರೆಲ್ಲರೂ ಬೆಳಗಾವಿಯ ಕಾಮತ್ ನಗರದ ಮದರಸಾ ಧಾರ್ಮಿಕ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿಯರಾಗಿದ್ದು ಪ್ರವಾಸಕ್ಕೆಂದು ಆಗಮಿಸಿದ್ದರು. ಘಟನೆಯಲ್ಲಿ ಒಬ್ಬ ಯುವತಿ ಗಾಯಾಳುವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

from India & World News in Kannada | VK Polls https://ift.tt/1koIV3S

Cyber Fraud - ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 7 ಲಕ್ಷ ರೂ. ಪಂಗನಾಮ!

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಗೊಂಡ ವ್ಯಕ್ತಿಯೊಬ್ಬ ಕಾಸರಗೋಡಿನ ಮಹಿಳೆಯೊಬ್ಬರಿಗೆ 7 ಲಕ್ಷಕ್ಕೂ ಅಧಿಕ ಹಣ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ರಾಯ್‌ ಬರೇಲಿ ನಿವಾಸಿ ಮೊಹಮ್ಮದ್‌ ಶಾರೀಕ್‌ (19) ಎಂಬ ಆರೋಪಿಯ ಎಲ್ಲ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು , ವಂಚನಾ ಜಾಲದಲ್ಲಿ ನೈಜೀರಿಯದ ಆನ್‌ಲೈನ್‌ ವಂಚಕರ ತಂಡ ಒಳಗೊಂಡಿರುವ ಸಂಶಯ ವ್ಯಕ್ತಪಡಿಸಿದ ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಆರಂಭಿಸಿದ್ದಾರೆ.

from India & World News in Kannada | VK Polls https://ift.tt/MY8gP2v

Shivamogga: ಅಡಕೆ ಗಿಡಗಳ ನರ್ಸರಿ ಜೊತೆಗೆ ಚೆಂಡು ಹೂವು ಬೆಳೆದು ಲಾಭ ಗಳಿಸುತ್ತಿರುವ ರೈತ



from India & World News in Kannada | VK Polls https://ift.tt/P5NJ2RV

FIFA World Cup: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ, ಪೋರ್ಚುಗಲ್‌ ಶುಭಾರಂಭ!

Cristiano Ronaldo create History: ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ 'ಎಚ್' ವಿಭಾಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಪೋರ್ಚುಗಲ್ ಹಾಗೂ ಘಾನಾ ನಡುವಿನ ಪಂದ್ಯದಲ್ಲಿ ಫುಟ್ಬಾಲ್ ಜಗತ್ತಿನ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ ಬರೆದರು. ಇವರ ಕೌಶಲಭರಿತ ಆಟದಿಂದಾಗಿ ಪೋರ್ಚುಗಲ್ ತಂಡ 3-2 ಅಂತರದಿಂದ ಗೆದ್ದು, ಮಹತ್ವದ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ 5 ವಿಭಿನ್ನ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಬರೆದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/20uYHcl

Border Dispute: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಬೊಮ್ಮಾಯಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ

Maharashtra- Karnataka Border Dispute: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

from India & World News in Kannada | VK Polls https://ift.tt/dJFLj9V

Delhi Murder: ಹರಿಯಾಣದ ಅರಣ್ಯದಲ್ಲಿ ದೇಹದ ಭಾಗ ಇರುವ ಸೂಟ್‌ಕೇಸ್‌ ಪತ್ತೆ; ಶ್ರದ್ಧಾ ವಾಕರ್‌ ಹತ್ಯೆಗೆ ಸಂಪರ್ಕ ಇದ್ಯಾ?

ಹರಿಯಾಣದ ಸೂರಜ್‌ಕುಂಡ್‌ನಲ್ಲಿ ದೇಹದ ಭಾಗ ಇರುವ ಸೂಟ್‌ಕೇಸ್‌ ಪತ್ತೆಯಾಗಿದೆ. ಫರಿದಾಬಾದ್‌ ಬಳಿಯ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೇವಲ ಮುಂಡ ಮಾತ್ರ ಪತ್ತೆಯಾಗಿದ್ದು, ದಿಲ್ಲಿಯ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧ ಇದೆಯಾ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

from India & World News in Kannada | VK Polls https://ift.tt/74fmGdY

Abu Dhabi T10 League: ಅಬುಧಾಬಿ ಟಿ10 ಲೀಗ್‌ ಟೂರ್ನಿಯಲ್ಲಿ ಆಡುತ್ತಿರುವ ಭಾರತದ ತಾರೆಯರು!

Abu Dhabi T10 League 2022: ಅಬುಧಾಬಿ ಟಿ10 ಕ್ರಿಕೆಟ್ ಲೀಗ್ ಟೂರ್ನಿಯ 6ನೇ ಆವೃತ್ತಿ ಈಗಾಗಲೇ ಶುರುವಾಗಿದೆ. ವಿದೇಶಿ ಸ್ಟಾರ್ ಆಟಗಾರರು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತದ ಮಾಜಿ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಸೇರಿದಂತೆ 5 ಮಂದಿ ವಿವಿಧ ತಂಡಗಳ ಪರ ಆಡಲು ಸಜ್ಜಾಗುತ್ತಿದ್ದಾರೆ. ನವೆಂಬರ್ 23 ರಿಂದ ಡಿಸೆಂಬರ್ 4 ವರೆಗೂ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/eyrIV9C

FIFA World Cup: ಫಿಫಾ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಮೂಡಿ ಬಂದಿರುವ ಅಚ್ಚರಿ ಫಲಿತಾಂಶಗಳು!

FIFA World Cup 2022: ಕತಾರ್‌ನಲ್ಲಿ ನಡೆಯುತ್ತಿರುವ 2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2 -1 ರಿಂದ ಗೆಲುವು ಪಡೆದಿದೆ. ಆ ಮೂಲಕ ಲಿಯೋನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನ್‌ ತಂಡಕ್ಕೆ ಆಘಾತ ಉಂಟಾಗಿದೆ. ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇಂಥಾ ಅಚ್ಚರಿ ಫಲಿತಾಂಶಗಳು ಸಾಕಷ್ಟು ಬಾರಿ ಮೂಡಿ ಬಂದಿವೆ. ಬ್ರೆಜಿಲ್, ಫ್ರಾನ್ಸ್, ಇಟಲಿ, ಇಂಗ್ಲೆಂಡ್ ತಂಡಗಳು ಕೂಡ ಕೆಲ ಪುಟ್ಟ ದೇಶಗಳ ವಿರುದ್ಧ ಸೋತು ಮುಖಭಂಗ ಅನುಭವಿಸಿರುವ ಉದಾಹರಣೆಗಳಿವೆ. ಇಂತಹ ಫಲಿತಾಂಶಗಳ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/jldKiA2

ಭರದಿಂದ ಸಾಗುತ್ತಿದೆ ಸಿಗಂದೂರು ಸೇತುವೆ ನಿರ್ಮಾಣ

424 ಕೋಟಿ ರೂ. ವೆಚ್ಚದಲ್ಲಿ2.14 ಕಿಲೋ ಮೀಟರ್‌ ಉದ್ದ, 16 ಮೀಟರ್‌ ಅಗಲದ ಸೇತುವೆಗೆ 36.5 ಪೌಂಡೇಶನ್‌ ತಲೆ ಎತ್ತಿವೆ. ಕೆಲಸ ಚುರುಕಿನಿಂದ ನೆಡೆಯತ್ತಿದ್ದು 17 ಬಿಎರ್‌ 2 ಅವೆರ್‌ಮೆಂಟ್‌ ಮೇಲೆ ನಿರ್ಮಾಣಗೊಳ್ಳುವ ಇದು ರಾಜ್ಯದ ಪ್ರಥಮ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸೇತುವೆ ಕಾಮಗಾರಿಯನ್ನು ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡ್‌ ಕಾನ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 2019ರಲ್ಲಿಕಾಮಗಾರಿ ಆರಂಭವಾಗಿದ್ದು, 2024 ಮಾರ್ಚ್ ಅಂತ್ಯಕ್ಕೆ ಮುಗಿಯುವ ನಿರಿಕ್ಷೆಯಿದೆ. ಮುಂದಿನ 10 ವರ್ಷ ಗುತ್ತಿಗೆದಾರರೆ ಸೇತುವೆ ನಿರ್ವಹಣೆಯನ್ನು ನಿರ್ವಹಿಸಲಿದ್ದಾರೆ.

from India & World News in Kannada | VK Polls https://ift.tt/lY2ZSmk

Gujarat Polls: ಗುಜರಾತ್‌ನಲ್ಲಿ ಬಿಜೆಪಿ ಹಳೇ ಹುಲಿಗಳಿಗೆ ಕಠಿಣ ಸವಾಲು; ಮೋದಿ ಪ್ರಚಾರದ ನಡುವೆಯೂ ಸೋಲಿನ ಆತಂಕ

ಗುಜರಾತ್‌ ವಿಧಾನಸಭಾ (Gujarat Assembly Elections 2022) ಚುನಾವಣೆ ರಂಗೇರುತ್ತಿದ್ದು, ಗುಜರಾತ್‌ನಲ್ಲಿ ಬಿಜೆಪಿಯ ಹಳೇ ಹುಲಿಗಳಿಗೆ ಸೋಲಿನ ಆತಂಕ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ನಡುವೆಯೂ ಬಿಜೆಪಿಗೆ ಕ್ಲಿಷ್ಟ ಹಾದಿ ಇದ್ದು, ಆಪ್‌ ಎಂಟ್ರಿಯಿಂದ ಹಳೆ ಕಲಿಗಳಿಗೆ ಸೋಲಿನ ಭಯ ಕಾಡುತ್ತಿದೆ. ಇನ್ನು, ಕಾಂಗ್ರೆಸ್‌ ಅದೃಷ್ಟವನ್ನು ನೆಚ್ಚಿಕೊಂಡಿದೆ.

from India & World News in Kannada | VK Polls https://ift.tt/ymSUp6h

(ವಿಶೇಷ ವರದಿ) ಮೈಸೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ತಪ್ಪದ ಅಲೆದಾಟ

ಆಸ್ಪತ್ರೆಯಲ್ಲಿ ಎರಡು ಶಸ್ತ್ರಚಿಕಿತ್ಸೆ ಕೊಠಡಿಗಳಿದ್ದು, ಸೂಕ್ತ ಉಪಕರಣಗಳಿಲ್ಲದೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳತ್ತ ರೋಗಿಗಳು ಮುಖ ಮಾಡುವಂತಾಗಿದೆ. ಇಎಸ್‌ಐನಿಂದ ಹಣ ಬರುವುದು ವಿಳಂಬವಾಗುತ್ತದೆ. ಹೀಗಾಗಿ ಮೊದಲು ನೀವು ಬಿಲ್‌ ಪಾವತಿಸಿ ಡಿಸ್ಚಾಜ್‌ರ್‍ ಆಗಿ'' ಎಂದು ಖಾಸಗಿ ಆಸ್ಪತ್ರೆಗಳವರು ಪಟ್ಟು ಹಿಡಿಯುತ್ತಾರೆ ಎಂಬುದು ರೋಗಿಗಳ ಅಳಲು. ಆಸ್ಪತ್ರೆಯಲ್ಲಿ36 ಡಿ ಗ್ರೂಪ್‌ ನೌಕರರು, ನರ್ಸ್‌ಗಳು, ಪ್ರಥಮ ದರ್ಜೆ ಸಹಾಯಕರ ಅವಶ್ಯಕತೆ ಇದ್ದು, ಸದ್ಯ 17 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಸೂಕ್ತ ರೀತಿಯ ಶುಶ್ರೂಷೆ, ಸೌಲಭ್ಯ ಸಿಗದಂತಾಗಿದೆ.

from India & World News in Kannada | VK Polls https://ift.tt/Tyq3DQm

ಸರಕಾರಿ ನೌಕರರಿಗೆ ಸಿಹಿ ಸುದ್ದಿ: ಹೊಸ ವರ್ಷದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್‌ ಚಿಕಿತ್ಸೆ

ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆದ ವಿ.ಕ. ಸಂವಾದದಲ್ಲಿ ಪಾಲ್ಗೊಂಡಿದ್ದ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಸರಕಾರಿ ನೌಕರರು ಹಾಗೂ ಕುಟುಂಬದವರು ಆರೋಗ್ಯ ಸಮಸ್ಯೆ, ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಮಾಡಿದ ವೆಚ್ಚ ಮರುಪಾವತಿ ಪಡೆಯಲು ಹರಸಾಹಸ ಪಡಬೇಕಿತ್ತು. ಅಲ್ಲದೆ ಚಿಕಿತ್ಸೆಗೆ ನಿಗದಿಪಡಿಸಿರುವ ಮೊತ್ತವೂ ಕಡಿಮೆ ಇತ್ತು. ಅವೆಲ್ಲವನ್ನು ನಿವಾರಿಸಿ ನಗದುರಹಿತವಾಗಿ ಚಿಕಿತ್ಸೆ ವ್ಯವಸ್ಥೆಗಾಗಿ ಸಂಘ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ 'ನೌಕರಸ್ನೇಹಿ' ಯೋಜನೆ ಜಾರಿಯಾಗುತ್ತಿದೆ'' ಎಂದು ಹೇಳಿದರು.

from India & World News in Kannada | VK Polls https://ift.tt/Z8sEzbu

HD Kumaraswamy-ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕ್ಯಾನ್ಸರ್ ಕಾರಕ ಕೆಸಿ ವ್ಯಾಲಿ ನೀರು ಸ್ಥಗಿತ: ಎಚ್ ಡಿ ಕುಮಾರಸ್ವಾಮಿ ಘೋಷಣೆ

ಕೋಲಾರ- ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗಳಿಗೆ ಪೂರೈಕೆಯಾಗುತ್ತಿರವ ಕೆಸಿ ವ್ಯಾಲಿ ನೀರಿನ ಯೋಜನೆ ಬಗ್ಗೆಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.

from India & World News in Kannada | VK Polls https://ift.tt/uBIcOsE

ಏಪ್ರಿಲ್‌ನಿಂದಲೇ ವೇತನ ಪರಿಷ್ಕರಣೆ ವಿಶ್ವಾಸ: ಉತ್ತಮ ನೌಕರರಿಗೆ ಇನ್‌ಸೆಂಟಿವ್‌!

7ನೇ ರಾಜ್ಯ ವೇತನ ಆಯೋಗದ ವೇತನ ಪರಿಷ್ಕರಣೆ ಬಗ್ಗೆ ಮಾತನಾಡಿ, ಮುಖ್ಯವಾಗಿ ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸಮಾನವಾಗಿ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ನೀಡಬೇಕು. ಎ,ಬಿ,ಸಿ,ಡಿ ಶ್ರೇಣಿ ನಗರಕ್ಕೆ ತಕ್ಕಂತೆ ಮನೆ ಬಾಡಿಗೆ ಭತ್ಯೆ ಹೆಚ್ಚಳ, ನಗರ ಪರಿಹಾರ ಭತ್ಯೆ ಏರಿಕೆಯಾಗಬೇಕು ಎಂಬುದು ಸಂಘದ ಒತ್ತಾಯ. ಇತಿಹಾಸದಲ್ಲೇ ಪ್ರಥಮ ಬಾರಿಗೆ ಐದು ವರ್ಷ ಪೂರೈಸುವು ಮುನ್ನವೇ 7ನೇ ವೇತನ ಆಯೋಗ ರಚಿಸಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು,ಎಂದರು.

from India & World News in Kannada | VK Polls https://ift.tt/6yFMYUV

Farmers Protest - 17 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸ್ಥಳಕ್ಕಾಗಮಿಸದ ಸಚಿವ ಗೋಪಾಲಯ್ಯ: ನಾಪತ್ತೆ ಪೋಸ್ಟರ್ ಹಾಕಿ ಹೋರಾಟಗಾರರಿಂದ ಆಕ್ರೋಶ

ಕಬ್ಬಿಗೆ ಬೆಂಬಲ ಬೆಲೆ, ಹಾಲಿನ ದರ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಕಳೆದ 17 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದಾರೆ. ಆದರೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಗೋಪಾಲಯ್ಯ ಆಗಮಿಸಿ ಹೋರಾಟಗಾರ ರೈತರ ಸಮಸ್ಯೆ ಆಲಿಸಿಲ್ಲ. ಇದರಿಂದ ರೊಚ್ಚಿಗೆದ್ದಿರುವ ಹೋರಾಟಗಾರ ರೈತರು ಇಂದು ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿ ಹಲವು ಕಡೆ ಬ್ಯಾನರ್ ಅಳವಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

from India & World News in Kannada | VK Polls https://ift.tt/7IhwAiy

ಸಾಲ ಕೊಡಿಸುವುದಾಗಿ ವಂಚಿಸಿದವನ ಕೊಂದು ಪೊಲೀಸ್ ಠಾಣೆಗೆ ಮೃತದೇಹ ತಂದ !

ಸಾಲ ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ. ಪಡೆದು ವಂಚಿಸಿದವನನ್ನು ಕೊಂದ ಬಳಿಕ ಆರೋಪಿಯೇ ಮೃತದೇಹವನ್ನು ಕಾರಿನಲ್ಲಿಟ್ಟುಕೊಂಡು ಬಂದು ಪೊಲೀಸ್ ಠಾಣೆಗೆ ಶರಣಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ಮಧ್ಯರಾತ್ರಿ ನಡೆದ ಈ ಘಟನೆಗೆ ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

from India & World News in Kannada | VK Polls https://ift.tt/k3cXrav

Karnataka Assembly Election 2023: ಕಲ್ಯಾಣದಲ್ಲಿ ಮತ್ತೆ ಕಮಲ ವಿಜಯ: ಶಾಸಕ ಶರಣು ಸಲಗರ್‌

Karnataka Assembly Election 2023: ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೆ ಕಮಲದ ಬಾವುಟ ಹಾರಲಿದೆ ಎಂದು ಶಾಸಕ ಶರಣು ಸಲಗರ್‌ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಟೀಕಿಸಿದ ಅವರು, ಶಾಸಕರಾಗಿ ಕೇವಲ 18 ತಿಂಗಳಲ್ಲಿಯೇ ಬಸವಕಲ್ಯಾಣದಲ್ಲಿಅನೇಕ ಅಭಿವೃದ್ದಿ ಕಾರ್ಯಗಳು ಕೈಗೊಳ್ಳಲಾಗಿದೆ. ನೂತನ ಅನುಭವ ಮಂಟಪ ಕಾಮಗಾರಿ ಜರುಗುತ್ತಿದೆ. ಸಾಕಷ್ಟು ಬಸವ ಭಕ್ತರ ಆಸೆಯಂತೆಯೇ 20 ಕೋಟಿ ವೆಚ್ಚದಲ್ಲಿ ಪರುಷ ಕಟ್ಟೆ ಜೋರ್ಣೋದ್ದಾರ ಕೆಲಸ ಆಗುತ್ತಿದೆ ಎಂದರು.

from India & World News in Kannada | VK Polls https://ift.tt/Zn73bJt

Karnataka Highcourt - ದತ್ತು ಮಕ್ಕಳೂ ಅನುಕಂಪದ ಉದ್ಯೋಗಕ್ಕೆ ಅರ್ಹರು: ತಿರಸ್ಕರಿಸಿದರೆ ದತ್ತು ಮಗು ಉದ್ದೇಶಕ್ಕೆ ಅರ್ಥವಿಲ್ಲಎಂದು ಹೈಕೋರ್ಟ್‌ ಮಹತ್ವದ ತೀರ್ಪು

ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರು ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಸ್ವತಃ ಮಗ ಅಥವಾ ಮಗಳಾಗಲಿ ಹಾಗೂ ದತ್ತು ಮಗ ಅಥವಾ ಮಗಳಾಗಲಿ, ಅವರು ಮಕ್ಕಳೇ ಆಗಿರುತ್ತಾರೆ. ಅದರಲ್ಲಿ ತಾರತಮ್ಯವಿದೆ ಎಂದು ಒಪ್ಪಿಕೊಂಡರೆ, ದತ್ತು ಸ್ವೀಕಾರದ ಉದ್ದೇಶವೇ ಈಡೇರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

from India & World News in Kannada | VK Polls https://ift.tt/YauAq8L

IND vs BAN: ಬಾಂಗ್ಲಾದೇಶ ಪ್ರವಾಸದಿಂದ ರವೀಂದ್ರ ಜಡೇಜಾಗೆ ಕೊಕ್‌!

India vs Bangladesh: 2022ರ ಏಷ್ಯಾ ಕಪ್‌ ಟೂರ್ನಿಯ ಮಧ್ಯದಲ್ಲೇ ಮಂಡಿ ನೋವಿನ ಗಂಭೀರ ಗಾಯದ ಸಮಸ್ಯೆಗೆ ತುತ್ತಾದ ಟೀಮ್ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌, ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇದೇ ಕಾರಣಕ್ಕೆ ಅವರು ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಗಿರಬೇಕಾಯಿತು. ಮುಂಬರುವ ಭಾರತ ತಂಡದ ಬಾಂಗ್ಲಾದೇಶ ಪ್ರವಾಸದಲ್ಲಿ ನಡೆಯಲಿರುವ ಟೆಸ್ಟ್‌ ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳಿಗೆ ಜಡೇಜಾ ಆಯ್ಕೆಯಾಗಿದ್ದರೂ, ಸರಣಿಯಿಂದ ಆಲ್‌ರೌಂಡರ್‌ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐಗೆ ಹತ್ತಿರದ ಮೂಲಗಳು ಮಾಹಿತಿ ಹೊರಹಾಕಿವೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/1B2QKW0

IND vs NZ: ಸಂಜು -ಉಮ್ರಾನ್‌ ಆಯ್ಕೆ ಮಾಡದೇ ಇರುವುದಕ್ಕೆ ಕಾರಣ ಕೊಟ್ಟ ಕ್ಯಾಪ್ಟನ್‌ ಹಾರ್ದಿಕ್ ಪಾಂಡ್ಯ!

India vs New Zealand T20 Series Highlights 2022: ಆತಿಥೇಯ ನ್ಯೂಜಿಲೆಂಡ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಜಯ ದಾಖಲಿಸಿದೆ. ಸರಣಿಯ ಮೊದಲ ಹಾಗೂ ಮೂರನೇ ಪಂದ್ಯ ಮಳೆ ಕಾರಣ ರದ್ದಾಗಿ ಫಲಿತಾಂಶ ಕಾಣದೇ ಹೋಯಿತು. ಆದರೆ ಎರಡನೇ ಪಂದ್ಯದಲ್ಲಿ 65 ರನ್‌ಗಳ ಭರ್ಜರಿ ಜಯ ದಾಖಲಿಸಿದ ಭಾರತ ತಂಡ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿದೆ. ಅಂದಹಾಗೆ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ, ತಮ್ಮ ಟೀಮ್‌ ಸೆಲೆಕ್ಷನ್‌ ಬಗ್ಗೆ ಮಾತನಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/uYoi4PE

Mangaluru Blast - ಶಂಕಿತ ಉಗ್ರನ ಮೊಬೈಲ್ ರಿಪೇರಿ ಮಾಡುತ್ತಿದ್ದವ ಸೇರಿ ಮೂವರು ಪೊಲೀಸ್ ವಶಕ್ಕೆ

ಮೈಸೂರಿನ ತಿ. ನರಸೀಪುರದ ವ್ಯಕ್ತಿ, ಮಂಡಿ ಮೊಹಲ್ಲಾದ ವ್ಯಕ್ತಿ ಹಾಗೂ ಮನೆ ಮಾಲೀಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಮಂಗಳೂರಿಗೆ ಕರೆದೊಯ್ದಿರುವ ಪೊಲೀಸರು. ಆರೋಪಿ ಮೈಸೂರಿನಲ್ಲಿ ವಾಸಿಸುತ್ತಿದ್ದ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೈಸೂರಿನಲ್ಲಿಯೂ ಹೈ ಅಲರ್ಟ್‌ ಘೋಷಿಸಲಾಗಿದೆ. ನಗರದ ಜನ ನಿಬಿಡ ಪ್ರದೇಶಗಳಾದ ಮೃಗಾಲಯ, ಅರಮನೆ, ಚಾಮುಂಡಿ ಬೆಟ್ಟ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಪೊಲೀಸರು, ಕಣ್ಗಾವಲು ಹೆಚ್ಚಿಸಿದ್ದಾರೆ.

from India & World News in Kannada | VK Polls https://ift.tt/ftjnh98

Karnataka Weather Report - ಬಾದಾಮಿಯಲ್ಲಿ ಕನಿಷ್ಠ ಉಷ್ಣಾಂಶ ದಾಖಲು: ಕೇವಲ 10 ಡಿಗ್ರಿ ಸೆಲ್ಸಿಯಸ್!

Karnataka Weather Report - ಈ ಬಾರಿ ರಾಜ್ಯದಲ್ಲಿ ದಾಖಲೆಯ ಮಳೆಯಾಗಿದೆ. ಇದರಿಂದ ಎಲ್ಲ ನದಿ, ಕೆರೆ ಕಟ್ಟೆಗಳು ಭರ್ತಿಯಾಗಿವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಷ್ಟೇ ಅಲ್ಲದೆ ನಗರ ಪ್ರದೇಶದಲ್ಲೂ ಚಳಿ ಹೆಚ್ಚಿದೆ. ಇದರಿಂದ ಜನರು ಬಹುಬೇಗನೆ ಮನೆ ಸೇರುವಂತಾಗಿದೆ. ಸೂರ್ಯೋದಯ ಆದರೂ ಚಳಿಯ ಅನುಭವ ಹೆಚ್ಚಾಗಿದೆ. ಬಾದಾಮಿಯಲ್ಲೂ ಚಳಿ ಹೆಚ್ಚಾಗಿದ್ದು, ಬೆಳಗ್ಗೆ ಎದ್ದು ದಿನನಿತ್ಯಗಳಲ್ಲಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ಜನರು, ತಡವಾಗಿ ಏಳಲು ಶುರು ಮಾಡಿದ್ದಾರೆ. ಬೆಳಗ್ಗೆ ವಾಕಿಂಗ್ ಹೋಗುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಚಳಿ ಇರುವ ವೇಳೆಗಳಲ್ಲಿ ಜನರ ಓಡಾಟವೂ ಕಡಿಮೆಯಾಗಿದೆ.

from India & World News in Kannada | VK Polls https://ift.tt/SdnK31F

ಮಲೆಮಹದೇಶ್ವರ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ; ಸಾವಿರಾರು ಭಕ್ತರ ಸಮಾಗಮ

ಪ್ರಾಧಿಕಾರ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ದ್ವಿತೀಯ ದರ್ಜೆ ಸಹಾಯಕ ಮಹಾದೇವಸ್ವಾಮಿ, ದೇವಾಲಯದ ಪ್ರಧಾನ ಆರ್ಚಕರಾದ ಕರವೀರಸ್ವಾಮೀಜಿ ಹಾಗೂ ದೇವಾಲಯದ ಆರ್ಚಕ ವೃಂದ ಹಾಗೂ ಸಿಬ್ಬಂದಿ ಹಾಜರಿದ್ದರು. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಧಿಕಾರದ ಅಧಿಕಾರಿಗಳು ಕ್ರಮಕೈಗೊಂಡಿದ್ದರು. ಇಡೀ ದಿನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

from India & World News in Kannada | VK Polls https://ift.tt/CAahHrL

CM Bommai - ಬೆಳಗಾವಿ ಗಡಿ ವಿವಾದ:ಸುಪ್ರೀಂನಲ್ಲಿ ವಾದಿಸಲು ರಾಜ್ಯದಿಂದ ಸಮರ್ಥ ಕಾನೂನು ತಂಡ ರೆಡಿ ಎಂದ ಸಿಎಂ ಬೊಮ್ಮಾಯಿ

​​ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಸರ್ವಪಕ್ಷ ಸಭೆ ನಡೆಸಿರುವ ಬೆನ್ನಲ್ಲೇ ಸೋಮವಾರ ಸಂಜೆ ಸಿಎಂ ಬೊಮ್ಮಾಯಿ ತುರ್ತು ಸಭೆ ನಡೆಸಿದ್ದಾರೆ. ಗಡಿ ವಿವಾದ ಕುರಿತಂತೆ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಲು ಬಲಿಷ್ಠ ಕಾನೂನು ತಂಡ ರಚಿಸಲಾಗಿದೆ. ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಶಾಮ್‌ ದಿವಾನ್‌, ಉದಯ್‌ ಹೊಳ್ಳ ಹಾಗೂ ಮಾರುತಿ ಜಿರಲೆ ಅವರು ತಂಡದಲ್ಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/rfzBu4F

ENG vs IRA: 'ಗೋಲ್‌ ಸುರಿಮಳೆ', ಇರಾನ್‌ ಪಡೆಯನ್ನು ಬಗ್ಗುಬಡಿದ ಇಂಗ್ಲೆಂಡ್‌!

England vs Iran Highlights in Fifa World Cup 2022: ಅರಬ್ಬರ ನಾಡು ಕತಾರ್‌ನಲ್ಲಿ ನಡೆಯುತ್ತಿರುವ 2022ರ ಸಾಲಿನ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ಸ್‌ ಇಂಗ್ಲೆಂಡ್‌ ಶುಭಾರಂಭ ಮಾಡಿದೆ. ಸೋಮವಾರ ನಡೆದ 'ಬಿ' ಗುಂಪಿನ ಮೊದಲ ಹಣಾಹಣಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಇಂಗ್ಲೆಂಡ್‌ ತಂಡ ಗೋಲ್‌ಗಳ ಸುರಿಮಳೆ ಹರಿಸಿತು. ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಂಡ ಹ್ಯಾರಿ ಕೇನ್‌ ಸಾರಥ್ಯದ ಇಂಗ್ಲೆಂಡ್‌ ತಂಡದ 6-2 ಅಂತರದಲ್ಲಿ ಅಪಾಯಕಾರಿ ಇರಾನ್‌ ತಂಡದ ಎದುರು ಭರ್ಜರಿ ಜಯ ದಾಖಲಿಸಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OPGCW0b

ಹಾವೇರಿ: ಕೈಗಾರಿಕಾ ಕಾರಿಡಾರ್‌ಗೆ ರೈತರ ಜಮೀನು, ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ



from India & World News in Kannada | VK Polls https://ift.tt/hSn4F1d

ನಾನು ಇಲ್ಲಿಯವನೇ ಟೆರರಿಸ್ಟ್ ಕೂಡ ಇಲ್ಲಿಯವನೇ ಎಂಬುದು ದುರಂತ: ಆರಗ ಜ್ಞಾನೇಂದ್ರ



from India & World News in Kannada | VK Polls https://ift.tt/uC0t1hZ

ತ್ರಾಸಿ- ಮರವಂತೆ ಬೀಚ್‌ಗೆ ಹೈಟೆಕ್‌ ಲುಕ್‌ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ: 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

ರಾಜ್ಯದ 320 ಕಿ.ಮೀ. ಕಡಲ ಕಿನಾರೆಯ ಪೈಕಿ ಪ್ರಮುಖ ಕಡಲ ಕಿನಾರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ದರ್ಜೆಗೇರಿಸುವ ಸರಕಾರದ ನಿರ್ಧಾರದಡಿ ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆ, ಒತ್ತಿನೆಣೆ, ಇತರೆ ಕಡಲ ತೀರ 10 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಗೆ ಮುಂದಾಗಿದೆ. ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ ಯೋಜನೆ ಅನುಷ್ಠಾನಗೊಳಿಸಲಿದೆ. ಬೈಂದೂರಿನ ಬೆಸುಗೆ ಫೌಂಡೇಶನ್ ನ ವೆಂಕಟೇಶ್ ಕಿಣಿ ಮಾತನಾಡಿ, ಪ್ರವಾಸಿಗರು ಅತಿ ಹೆಚ್ಚು ಆಗಮಿಸುವ ಬೈಂದೂರು ಕ್ಷೇತ್ರದಲ್ಲಿಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆಗಳಿಗೆ ಸರಕಾರ ವೇಗ ನೀಡಬೇಕು ಎಂದಿದ್ದಾರೆ.

from India & World News in Kannada | VK Polls https://ift.tt/oSvZ8rV

ಸಹಕಾರ ತತ್ವದಿಂದ ಜೀವನ ಮಟ್ಟ ಸುಧಾರಣೆ: ವಿಶ್ವೇಶ್ವರ ಕಾಗೇರಿ

ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಂಗಳೂರು ವಿಭಾಗದ 9 ಜಿಲ್ಲೆಗಳ 54 ಸಹಕಾರಿಗಳಿಗೆ 'ಸಹಕಾರ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ ಮಾತನಾಡಿದರು. ​​​"ಸಹಕಾರ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರ. ಇಲ್ಲಿನ ವ್ಯವಹಾರ ಕಾನೂನಿಗಿಂತ ಮಿಗಿಲಾಗಿ ಪ್ರೀತಿ-ವಿಶ್ವಾಸದ ಮೇಲೆ ಬೆಳೆಯುವುದು. ಸಹಕಾರ ತತ್ವದ ಅರ್ಥವೇ ಸಹಕಾರ ನೀಡುವುದು'' ಎಂದರು.

from India & World News in Kannada | VK Polls https://ift.tt/ET2zmPe

Mandya Road Potholes - ಮಂಡ್ಯ ನಗರಸಭೆ ರಸ್ತೆಗುಂಡಿಗಳಗೆ ಡಾಂಬರ್ ಹಾಕದಿದ್ದರೆ ನಾನೇ ಮಾಡಿಸುತ್ತೇನೆ:ಮಹಾಲಿಂಗೇಗೌಡ

ರಸ್ತೆಗುಂಡಿಗೆ ಬಿದ್ದು ಮಾಜಿ ಯೋಧ ಕುಮಾರ್‌ ಮೃತಪಟ್ಟ ಬೆನ್ನಲ್ಲೇ ಯೋಧನ ತಂದೆಯ ನೋವಿನ ಮಾತುಗಳು ರಸ್ತೆ ಗುಂಡಿಗಳನ್ನು ಮುಚ್ಚಲು ನನ್ನನ್ನು ಪ್ರೇರೇಪಿಸಿತು.ನಗರ ವ್ಯಾಪ್ತಿಯ ಎಲ್ಲಗುಂಡಿಗಳನ್ನು ಸ್ವಂತ ಖರ್ಚಿನಲ್ಲಿ ಮುಚ್ಚಿಸುತ್ತೇನೆ. ಅವುಗಳಿಗೆ ತ್ವರಿತಗತಿಯಲ್ಲಿ ನಗರಸಭೆ ಡಾಂಬರೀಕರಣ ಮಾಡಿಸಬೇಕು. ಇಲ್ಲದಿದ್ದರೆ ನಾನೇ ಗುಂಡಿಗಳಿಗೆ ಸ್ವಂತ ಖರ್ಚಿನಲ್ಲಿ ಡಾಂಬರೀಕರಣ ಮಾಡಿಸುತ್ತೇನೆ ಎಂದು ಜಿಲ್ಲಾ ಜೆಡಿಎಸ್‌ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ತಿಳಿಸಿದ್ದಾರೆ.

from India & World News in Kannada | VK Polls https://ift.tt/ZPksflV

CM Bommai - ಬಸವನಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪಾರಂಪರಿಕ ಪಾರ್ಕ್ ನಿರ್ಮಾಣ:ಬಸವರಾಜ ಬೊಮ್ಮಾಯಿ

ಬೆಂಗಳೂರಿನ ಬಸವನಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪಾರಂಪರಿಕ ಪಾರ್ಕ್ ನಿರ್ಮಾಣವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. “ ಬೆಂಗಳೂರು ಪಾರಂಪರಿಕ ಕಡಲೆಕಾಯಿ ಪರಿಷೆ”ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಂಗಳೂರಿನ ಇತಿಹಾಸ, ಪರಂಪರೆ ಹೇಳುವ ಈ ಕುರುಹುಗಳನ್ನು ನಾವು ಹುಡುಕಿ ಅಭಿವೃದ್ಧಿಗೊಳಿಸಲು ಅಡಾಫ್ಟ್ ದಿ ಮಾನ್ಯುಮೆಂಟ್ ಕಾರ್ಯಕ್ರಮ ರೂಪಿಸಿದ್ದು, ಇಚ್ಛೆಯಿದ್ದವರು ಒಂದೊಂದು ಸ್ಮಾರಕವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಅವಕಾಶವಿದೆ ಎಂದರು.

from India & World News in Kannada | VK Polls https://ift.tt/CNdHQcM

IND vs NZ Live Score and Commentary: ಟಾಸ್‌ ಸೋತ ಭಾರತ ಬ್ಯಾಟಿಂಗ್!



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gqOv24Z

Bulldozer: ಆರೋಪಿ ಮನೆ ಧ್ವಂಸ ಗ್ಯಾಂಗ್‌ವಾರ್‌ಗೆ ಸಮ: 'ಬುಲ್ಡೋಜರ್' ಕ್ರಮಕ್ಕೆ ಕೋರ್ಟ್ ಚಾಟಿ

Bulldozer Action Against Accused: ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವವರ ಮನೆಗಳನ್ನು ಧ್ವಂಸಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳುವ ಸರ್ಕಾರದ 'ಬುಲ್ಡೋಜರ್' ನಿರ್ಧಾರದ ವಿರುದ್ಧ ಅಸ್ಸಾಂನ ಗುವಾಹಟಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

from India & World News in Kannada | VK Polls https://ift.tt/VP2ApSD

Mangaluru Blast: ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಅಪಘಾತವಲ್ಲ, ಉಗ್ರ ಕೃತ್ಯ: ಡಿಜಿಪಿ

Mangaluru Blast: ಶನಿವಾರ ಸಂಜೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಒಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಆಟೋ ರಿಕ್ಷಾ ಡ್ರೈವರ್ ಕೂಡಾ ಇದ್ದಾರೆ. ಆಟೋ ರಿಕ್ಷಾ ಚಲಿಸುತ್ತಿರುವಾಗಲೇ ಸ್ಫೋಟ ಸಂಭವಿಸಿತ್ತು. ಹೀಗಾಗಿ, ಆಟೋ ಚಲಾಯಿಸುತ್ತಿದ್ದ ಡ್ರೈವರ್ ಹಾಗೂ ಮತ್ತೊಬ್ಬರು ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ಧಾರೆ. ಇದೀಗ ಈ ಘಟನೆಗೆ ಉಗ್ರ ಕೃತ್ಯದ ಲಿಂಕ್ ಸಿಕ್ಕಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.

from India & World News in Kannada | VK Polls https://ift.tt/K9Pt57T

BL Santhosh: ಟಿಆರ್‌ಎಸ್ ಶಾಸಕರಿಗೆ ಲಂಚ ಆರೋಪ: ಬಿಎಲ್ ಸಂತೋಷ್‌ಗೆ ಬಂಧನದಿಂದ ರಕ್ಷಣೆ

SIT Investigation of BL Santhosh: ತೆಲಂಗಾಣದ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಬಿಜೆಪಿಗೆ ಸೆಳೆಯಲು ಲಂಚ ನೀಡಲು ಪ್ರಯತ್ನಿಸಿದ ಆರೋಪ ಪ್ರಕರಣದಲ್ಲಿ ಹಿರಿಯ ನಾಯಕ ಬಿಎಲ್ ಸಂತೋಷ್ ಅವರನ್ನು ಬಂಧಿಸದಂತೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ.

from India & World News in Kannada | VK Polls https://ift.tt/ptg0uyY

Pratap Simha: ಸಂಸದ ಪ್ರತಾಪ್‌ ಸಿಂಹ ಮನೆ ಮುಂದೆ ಪ್ರತಿಭಟನೆ ಎಚ್ಚರಿಕೆ

‘‘ಮೈಸೂರು-ಬೆಂಗಳೂರು ಹೆದ್ದಾರಿ​ ದುರಸ್ಥಿಗೆ ಕಲ್ಲು, ಮಣ್ಣು ಕಚ್ಚಾವಸ್ತು ಸಾಗಾಣೆಯಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ರಸ್ತೆಗಳು ಅಧ್ವಾನಗೊಂಡಿದೆ. ‘‘ರಸ್ತೆ ನಿರ್ಮಾಣದ ವೇಳೆ ಲಾರಿಗಳನ್ನು ತಡೆದಂತಹ ಸಂದರ್ಭದಲ್ಲಿ ಮೈಸೂರು ಸಂಸದ ಪ್ರತಾಪ್‌ ಸಿಂಹ ನನಗೆ ದೂರವಾಣಿ ಕರೆ ಮಾಡಿ ಅಣ್ಣ ಲಾರಿ ಸಂಚಾರದಿಂದ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದರೂ ಈವರೆಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ, ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

from India & World News in Kannada | VK Polls https://ift.tt/9DCZaXl

R Ashok - ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ: ಎಚ್.ಡಿ.ಕೋಟೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ ಸಚಿವ ಅಶೋಕ್

ಹಳ್ಳಿಯ ಕಡೆ ಕಾರ್ಯಕ್ರಮ ಶನಿವಾರ ರಾಜ್ಯದ ವಿವಿಧೆಡೆ ನಡೆದಿದ್ದು ಕಂದಾಯ ಸಚಿವ ಆರ್. ಅಶೋಕ್ ಅವರು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ವಾಸ್ತವ್ಯ ಹೂಡಿದರು. ಭೀಮನಕೊಲ್ಲಿಯ ಮಹದೇಶ್ವರ ದೇವಸ್ಥಾನದ ಬಳಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಶನಿವಾರ ಬೆಳಗ್ಗೆ ಆಗಮಿಸಿದ ಸಚಿವರಿಗೆ ನೂರಾರು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ರಾತ್ರಿ ಗಿರಿಜನ ಶಾಲೆಯ ಮಕ್ಕಳೊಂದಿಗೆ ಸಮಯ ಕಳೆದ ಸಚಿವರು ಅಲ್ಲೇ ಭೋಜನ ಸ್ವೀಕರಿಸಿ ನಿದ್ರೆಗೆ ಜಾರಿದರು. ಏತನ್ಮಧ್ಯೆ ಅವರು ಜಾಗನಕೋಟೆ ಹಾಡಿಯ ಬೆಟ್ಟ ಕುರುಬರೊಂದಿಗೆ ಜಾನಪದ ನೃತ್ಯದಲ್ಲಿ ಪಾಲ್ಗೊಂಡರು.

from India & World News in Kannada | VK Polls https://ift.tt/DmFK0ih

ಕೆ.ಆರ್‌.ಆಸ್ಪತ್ರೆಗೆ ಶೀಘ್ರವೇ ದುರಸ್ತಿ ಭಾಗ್ಯ; 89 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲು ನಿರ್ಧಾರ

ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆ.ಆರ್‌.ಆಸ್ಪತ್ರೆ, ಚೆಲುವಾಂಬ ಮಕ್ಕಳ ಆಸ್ಪತ್ರೆ, ಪಿಕೆಟಿಬಿ ಆಸ್ಪತ್ರೆ, ಶುಷ್ರೂಷಕಿಯರ ಹಾಸ್ಟೆಲ್‌ ದುರಸ್ತಿ ಸೇರಿದಂತೆ ಒಟ್ಟು 89 ಕೋಟಿ ರೂ.ಗಳ 14 ಕಾಮಗಾರಿಗಳು ಮುಂದಿನ ಡಿಸೆಂಬರ್‌ 8 ರಿಂದಲೇ ಆರಂಭವಾಗಲಿವೆ. ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ನೇತೃತ್ವದ ಪಾರಂಪರಿಕ ಸಮಿತಿಯಿಂದ ಕಾಮಗಾರಿ ಕೈಗೊಳ್ಳುವ ಬಗ್ಗೆ ಸೂಕ್ತ ಸಲಹೆ ಪಡೆದು ಅದರಂತೆ ಕಾಮಗಾರಿ ಆರಂಭಿಸಲಾಗುವುದು.ಮೈಸೂರು ಹಾಗೂ ಸುತ್ತಲ ಜಿಲ್ಲೆಗಳಲ್ಲಿ ‘ದೊಡ್ಡಾಸ್ಪತ್ರೆ’ ಎಂದೇ ಹೆಸರುವಾಸಿಯಾಗಿರುವ 1050 ಹಾಸಿಗೆಯ ಕೆ.ಆರ್‌. ಆಸ್ಪತ್ರೆಯು 1927ರಲ್ಲಿ ಆರಂಭವಾಗಿತ್ತು.

from India & World News in Kannada | VK Polls https://ift.tt/V3yDmng

IPL 2023: 'ಆರ್‌ಸಿಬಿ ಒಮ್ಮೆ ಚಾಂಪಿಯನ್‌ ಆದ್ರೆ, 2 ರಿಂದ 4 ಪ್ರಶಸ್ತಿ ಬೇಗ ಗೆಲ್ಲುತ್ತೆ', ಎಬಿ ಡಿ ವಿಲಿಯರ್ಸ್!

Ab De Villiers inputs to break the trophy jinx About Rcb: ಪ್ರತಿ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌f ಟೂರ್ನಿ ಆರಂಭಕ್ಕೂ ಮುನ್ನ "ಈ ಬಾರಿ ಕಪ್ ನಮ್ಮದೇ" ಎಂದು ಭರವಸೆ ಮೂಡಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ತಂಡದ ಮಾಜಿ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್, ಆರ್‌ಸಿಬಿ ಒಂದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ವೇಗವಾಗಿ 2 ರಿಂದ 4 ಬಾರಿ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/z6LqUMW

ಶಿಕ್ಷಕರ ನೇಮಕದಲ್ಲಿ ನಕಲಿ ವಿಶೇಷಚೇತನರು: ಕೆಲಸ ಸಿಕ್ಕಕೂಡಲೇ ವೈಕಲ್ಯ ಮಾಯ!

ನಕಲಿ ವಿಶೇಷಚೇತನ ಶಿಕ್ಷಕರ ವಿರುದ್ಧವಾಗಿ ಎಲ್ಲೆಡೆಯಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ವಿಶೇಷಚೇತನ ಕೋಟಾದಡಿ ಕೆಲಸ ಪಡೆದಿರುವ ಶಿಕ್ಷಕರು ಜಿಲ್ಲಾ ವೈದ್ಯಕೀಯ ಮಂಡಳಿಯ ಎದುರು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಆದೇಶಿಸಿದ್ದರು. ಆದರೆ, ಬಹುತೇಕ ನಕಲಿ ವಿಶೇಷಚೇತನ ಶಿಕ್ಷಕರು ಜಿಲ್ಲಾವೈದ್ಯಕೀಯ ಮಂಡಳಿಯ ಎದುರು ಹಾಜರಾಗಿಲ್ಲ. ಬದಲಿಗೆ, ಉದ್ಯೋಗಕ್ಕೆ ಸೇರುವ ಸಂದರ್ಭದಲ್ಲಿ ಸಲ್ಲಿಸಿದ ನಕಲಿ ದಾಖಲೆಗಳನ್ನೇ ಮತ್ತೊಮ್ಮೆ ಇಲಾಖೆಗೆ ಸಲ್ಲಿಸಿದ್ದಾರೆಂಬ ಶಂಕೆಗಳು ವ್ಯಕ್ತವಾಗುತ್ತಿವೆ.

from India & World News in Kannada | VK Polls https://ift.tt/6MwYt1A

Teachers Recuitment 2023 - ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ; 13,363 ಅಭ್ಯರ್ಥಿಗಳು ಆಯ್ಕೆ

ನೇಮಕಾತಿಯ ಫಲಿತಾಂಶವನ್ನು ಶಿಕ್ಷಣ ಇಲಾಖೆಯು ಶುಕ್ರವಾರ ಬಿಡುಗಡೆ ಮಾಡಿದೆ. ಇದು ತಾತ್ಕಾಲಿಕ ಅಂತಿಮ ಪಟ್ಟಿಯಾಗಿದೆ. ಈ ಮಾಸಾಂತ್ಯಕ್ಕೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಬಹುತೇಕ ಇದೇ ಅಂತಿಮ ಪಟ್ಟಿಯಾಗಿದ್ದು, ಅಲ್ಪ-ಸ್ವಲ್ಪ ಬದಲಾವಣೆಯಾಗಲಿದೆ. ಇದರಿಂದಾಗಿ ಆಯ್ಕೆಯಾಗಿರುವವರಿಗೆ ಶುಕ್ರವಾರವೇ ಮನೆಗೆ ಲಕ್ಷ್ಮೀ ಬಂದಂತಾಗಿದೆ. ಅಲ್ಲಿಗೆ, ನೇಮಕಾತಿ ಅಧಿಸೂಚನೆ ಹೊರಡಿಸಿದ 9 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಿದಂತಾಗಿದೆ. ಇದೇ ಮೊದಲ ಬಾರಿಗೆ, 15 ಸಾವಿರ ಹುದ್ದೆಗಳಿಗೆ 13,363 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಸಚಿವ ನಾಗೇಶ್ ಸಂತಸ ವ್ಯಕಪಡಿಸಿದರು.

from India & World News in Kannada | VK Polls https://ift.tt/REPS759

ಮತಪಟ್ಟಿ ಅಕ್ರಮ: ಚಿಲುಮೆ ಮೇಲೆ ದಾಳಿ, ನಾಲ್ವರು ವಶಕ್ಕೆ

ಮತದಾರರ ಮಾಹಿತಿ ಸಂಗ್ರಹ ಮತ್ತು ಗುರುತಿನ ಚೀಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿಅಕ್ರಮ ನಡೆದಿರುವ ಆರೋಪದ ಹಿನ್ನಲೆ ​​ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರ ದೂರು ಆಧರಿಸಿ ಚಿಲುಮೆ ಸಂಸ್ಥೆಯ ಸಿಬ್ಬಂದಿ ರೇಣುಕಾ ಪ್ರಸಾದ್‌, ಸುಧಾಕರ್‌, ಧರ್ಮೇಶ್‌ ಮತ್ತು ರಕ್ಷಿತ್‌ ಎಂಬುವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಚಿಲುಮೆ ಸಂಸ್ಥೆಯ ಕೆ.ಎಂ.ಲೋಕೇಶ್‌ ತಲೆಮರೆಸಿ ಕೊಂಡಿದ್ದಾರೆ.

from India & World News in Kannada | VK Polls https://ift.tt/2swQv1N

7 ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಆರು ತಿಂಗಳ ಒಳಗಾಗಿ ಶಿಫಾರಸು ನಿರೀಕ್ಷೆ

7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ, ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡಲು ರಚನೆಗೆ ಅನುಮೋದನೆ ನೀಡಲಾಗಿದೆ.

from India & World News in Kannada | VK Polls https://ift.tt/k9pmNXn

ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ವಿಜಯಪುರದ ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ. 20 ಮತ್ತು 21 ರಂದು , ಐಇಇಇ ಫ್ಲ್ಯಾಗಶಿಪ್ ಇವೆಂಟ್ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.

from India & World News in Kannada | VK Polls https://ift.tt/v9MH2gR

ಗಗನಸಖಿಯರ ಜೊತೆ ವಿಮಾನ ಯಾನ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 85

ಅಂಕಣಕಾರ ಶ್ರೀನಾಥ್ ಭಲ್ಲೆ ಅವರು ತಮ್ಮ ಅಮೆರಿಕ ಅನುಭವ ಕಥಾನಕವನ್ನು ವಿಜಯ ಕರ್ನಾಟಕ ವೆಬ್ ಓದುಗರ ಮುಂದಿಡುತ್ತಿದ್ದಾರೆ. ಈ ಭಾಗದಲ್ಲಿ ಭಲ್ಲೆ ಅವರು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಅನುಭವ ಹಾಗೂ ಗಗನ ಸಖಿಯರ ಕುರಿತಾಗಿ ವಿವರಿಸಿದ್ದಾರೆ.

from India & World News in Kannada | VK Polls https://ift.tt/nz0kwDa

ಚಾಮರಾಜ ನಗರ: ಐಕ್ಯತಾ ಸಮಾವೇಶದ ಪೋಸ್ಟರ್‌ ಬಿಡುಗಡೆ

ಈ ಸಂದರ್ಭ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಎಂ.ನಾಗರಾಜು ಮಾತನಾಡಿ, '' ದೇಶದಲ್ಲಿಆಡಳಿತ ನಡೆಸುತ್ತಿರುವ ಪಕ್ಷಗಳು ಜನರ ಹಿತಾಶಕ್ತಿ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದ ದೇಶದಲ್ಲಿಅನ್ಯಾಯ, ಅಶಾಂತಿ ಹೆಚ್ಚಾಗಿ ದೇಶ ಅಧೋಗತಿಗೆ ತಲುಪುತ್ತಿದೆ. ಈ ಹಿನ್ನೆಲೆ ವಿವಿಧ ದಲಿತ ಸಂಘಟನೆಗಳು ಒಂದಾಗಿ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಒಗ್ಗೂಡಿ ಏಕತಾ ಸಮಾವೇಶ ನಡೆಸಲಾಗುವುದು. ಜಿಲ್ಲೆಯ ವಿವಿಧ ಗ್ರಾಮಗಳಿಂದ ದಲಿತ ಸಂಘಟನೆಗಳು, ರೈತರು, ಮಹಿಳೆಯರು, ದಲಿತ ಆದಿವಾಸಿ, ಅಲೆಮಾರಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿಸಮಾವೇಶಕ್ಕೆ ಹಾಜರಾಗಬೇಕು'' ಎಂದು ಮನವಿ ಮಾಡಿದರು.

from India & World News in Kannada | VK Polls https://ift.tt/5pGwqEl

Pennar River: ದಕ್ಷಿಣ ಪಿನಾಕಿನಿ ನೀರಿಗೆ ನ್ಯಾಯಾಧೀಕರಣ ಕರ್ನಾಟಕಕ್ಕೆ ಮರಣ ಶಾಸನ: ಎಚ್‌ಡಿ ಕುಮಾರಸ್ವಾಮಿ ಆಕ್ರೋಶ

ದಕ್ಷಿಣ ಪಿನಾಕಿನಿ ನದಿ ನೀರಿನ ವಿಚಾರಕ್ಕೆ ಹೊಸ ನ್ಯಾಯಾಧೀಕರಣ ರಚನೆಯ ವಿಚಾರ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ನ್ಯಾಯಾಧೀಕರಣ ರಚನೆಯ ನಿರ್ಧಾರ ಕರ್ನಾಟಕಕ್ಕೆ ಮರಣ ಶಾಸನವಾಗುತ್ತದೆ. ಇದನ್ನು ರಾಜ್ಯ ಸರ್ಕಾರ ಮುಲಾಜಿಲ್ಲದೇ ವಿರೋಧಿಸಬೇಕು ಎಂದು ಆಗ್ರಹಿಸಿದ್ದಾರೆ.

from India & World News in Kannada | VK Polls https://ift.tt/M8QNwWc

ಹೈಟೆಕ್ ಸಿಟಿ ಯೋಜನೆಯಲ್ಲಿ ಬೆಳಗಾವಿ ಕಡೆಗಣನೆ; ಸಾರ್ವಜನಿಕರ ಅಸಮಾಧಾನ

ಮಾಧ್ಯಮಮಗಳೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ನಾಯಕರು, ಅಭಿವೃದ್ಧಿ ವಿಚಾರದಲ್ಲಿ ಸೊಲ್ಲೆತ್ತದ ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧವೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಕಠಿಣ ಮಾತುಗಳ ಮೂಲಕ ಚಾಟಿ ಬೀಸಿದ್ದಾರೆ. ನಮ್ಮ ಜಿಲ್ಲೆಗೆ 'ಕೆಲಸ ಮಾಡುವ' ಮತ್ತು 'ಕೆಲಸ ಮಾಡಿಸಿಕೊಂಡು ಬರುವ' ಅತ್ಯಂತ ಪ್ರಭಾವಿ ರಾಜಕಾರಣಿಗಳ ಅಗತ್ಯವಿದೆ ಎಂದಿರುವ ನೆಟ್ಟಿಗರು, ''ಸ್ಥಳೀಯ ಶಾಸಕರು ಈಗಲಾದರೂ ಸರಕಾರವನ್ನು ಪ್ರಶ್ನಿಸಿ ಹೈಟೆಕ್‌ ಸಿಟಿ ಸಹಿತ ಅಭಿವೃದ್ಧಿ ಯೋಜನೆಗಳನ್ನು ಬೆಳಗಾವಿಗೆ ತರುವಂತಾಗಲಿ'' ಎಂದು ಆಶಿಸಿದ್ದಾರೆ.

from India & World News in Kannada | VK Polls https://ift.tt/1nZQExF

ಶಾಸಕರ ನಿಧಿಯಿಂದ ಕರ್ನಾಟಕದ ರಸ್ತೆಗುಂಡಿಗಳಿಗೆ ಮುಕ್ತಿ; 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ರಿಪೇರಿ

ಕರ್ನಾಟಕದಾದ್ಯಂತ ಭಾರೀ ಮಳೆಯಿಂದ ಗುಂಡಿಗಳು ಬಿದ್ದಿರುವ ರಸ್ತೆಗಳಿಗೆ ಶಾಸಕರ ನಿಧಿಯಿಂದ ಮುಕ್ತಿ ನೀಡಲಾಗುತ್ತಿದೆ. ಸುಮಾರು 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಇದರಲ್ಲಿ ಸಿಎಂ ವಿವೇಚನಾ ಕೋಟಾದಡಿ ಶಾಸಕರಿಗೆ ನೀಡಿದ 4,750 ಕೋಟಿ ರೂ. ವಿಶೇಷ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಮಾರ್ಚ್ ವೇಳೆಗೆ ರಸ್ತೆಗಳು ಸುಸ್ಥಿತಿಗೆ ಬರಲಿವೆ ಎನ್ನಲಾಗಿದೆ.

from India & World News in Kannada | VK Polls https://ift.tt/0cgJoFY

Rajiv Gandhi Assassination ರಾಜೀವ್ ಹಂತಕರ ಬಿಡುಗಡೆ ತೀರ್ಪು ಮರುಪರಿಶೀಲಿಸಲು ಸುಪ್ರೀಂಗೆ ಕೇಂದ್ರ ಮೇಲ್ಮನವಿ: ಘನ ಸರ್ಕಾರ ನೀಡುತ್ತಿರುವ ಕಾರಣಗಳೇನು?

ತಮಿಳುನಾಡಿನ ಜೈಲಿನಲ್ಲಿ ಕಳೆದ 3 ದಶಕಗಳಿಂದ ಸೆರೆ ವಾಸ ಅನುಭವಿಸುತ್ತಿರುವ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವಂತೆ ಕಳೆದ ವಾರವಷ್ಟೇ ತೀರ್ಪು ನೀಡಿತ್ತು. ಆದರೆ ಆ ತೀರ್ಪನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ತೀರ್ಪು ದೇಶದ ಸಹಜ ಕಾನೂನಿನ ತತ್ವಗಳ ಉಲ್ಲಂಘನೆ, ಕಾನೂನಿನ ವಿಫಲತೆಗೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ಮೇಲ್ಮನವಿಯಲ್ಲಿ ತಿಳಿಸಿದೆ.

from India & World News in Kannada | VK Polls https://ift.tt/Tr4axRs

Murugha Shree Case: ಮುರುಘಾ ಶ್ರೀ ಪ್ರಕರಣ: ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಒಡನಾಡಿ ದೂರು

Murugha Shree Case: ಮುರುಘಾ ಮಠದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟ ಬಾಲಕಿಯ ಪ್ರಕರಣದಲ್ಲಿ ಹಣದ ಆಮಿಷ ಒಡ್ಡಿ ಮುಚ್ಚಿಹಾಕಲು ಯತ್ನಿಸಲಾಗ್ತಿದೆ ಎಂದು ದೂರಿರುವ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಆಯೋಗದ ಮೂಲಕ ಒಂದು ವಿಶೇಷ ತನಿಖಾ ಸಮಿತಿಯನ್ನು ರಚಿಸಿ ಚಿತ್ರದುರ್ಗ ಸಿಡಬ್ಲ್ಯೂಸಿ ಯ ಅಧ್ಯಕ್ಷರನ್ನು, ಸಿಬ್ಬಂದಿಯನ್ನು, ಶೋಷಣೆಗೊಳಪಟ್ಟ ಮಕ್ಕಳನ್ನು ಹಾಗೂ ಆ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪನನ್ನು ವಿಚಾರಣೆಗೊಳಪಡಿಸಬೇಕು,’’ ಎಂದು ಒತ್ತಾಯಿಸಿದ್ದಾರೆ.

from India & World News in Kannada | VK Polls https://ift.tt/qE2sQfL

Piles Problem: ವಿಶ್ವ ಪೈಲ್ಸ್‌ ದಿನಾಚರಣೆ, ಮಂಡ್ಯ ಜಿಲ್ಲೆಯೊಂದರಲ್ಲೇ ತಿಂಗಳಿಗೆ 300ಕ್ಕೂ ಹೆಚ್ಚು ಪೈಲ್ಸ್‌ ಶಸ್ತ್ರಚಿಕಿತ್ಸೆಗಳು

Piles Problem: ನಗರ ಪ್ರದೇಶ ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲೂ ಬದಲಾದ ಜೀವನಶೈಲಿಯಿಂದ ಪೈಲ್ಸ್‌ ಉಂಟಾಗುತ್ತಿದೆ. ‘ಮಂಡ್ಯ ಜಿಲ್ಲೆಯೊಂದರಲ್ಲೇ ಪೈಲ್ಸ್‌, ಫಿಷರ್‌ ಮತ್ತು ಪಿಸ್ತುಲಾ ರೋಗಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ನಾನೊಬ್ಬನೇ ಈವರೆಗೆ 3.50 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, 28,000 ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇನೆ,’’ ಎಂದು ಡಾ.ಸಿ.ಎಂ.ಪರಮೇಶ್‌ ತಿಳಿಸಿದರು.

from India & World News in Kannada | VK Polls https://ift.tt/1kaGpIm

ಕಾಂಗ್ರೆಸ್ ನಾಯಕರ ಮಧ್ಯರಾತ್ರಿ ಸಭೆ: ಕುತೂಲಹ ಮೂಡಿಸಿದ ಬೆಳವಣಿಗೆ

ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಅನೇಕ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ನಲ್ಲೂ ಹಲವಾರು ವಿದ್ಯಮಾನಗಳು ನಡೆಯುತ್ತಿದ್ದು, ಈಗಾಗಲೇ ಆ ಪಕ್ಷ ಟಿಕೆಟ್ ಹಂಚಿಕೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ನಾಯಕರು, ಅ. 16ರ ಮಧ್ಯರಾತ್ರಿ ಸಭೆ ಸೇರಿ ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅಚಾನಕ್ ಆಗಿ ನಡೆಸಿರುವ ಈ ಸಭೆಯಿಂದಾಗಿ ಮಾಧ್ಯಮಗಳಿಗೂ ಈ ಬಗ್ಗೆ ಅಧಿಕೃತ ಆಹ್ವಾನವಾಗಲೀ, ಮಾಹಿತಿಯಾಗಲೀ ಇರಲಿಲ್ಲ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಹಲವಾರು ಹಿರಿಯ ನಾಯಕರು ಭಾಗಿಯಾಗಿದ್ದರು.

from India & World News in Kannada | VK Polls https://ift.tt/bwvty0a

ಪರೇಶ ಮೇಸ್ತ ಸಾವಿನ ನೈಜತೆ, ಬಿಜೆಪಿ ನೈಜ ಬಣ್ಣ ತೆರೆದಿಡಲು 24ಕ್ಕೆ ಕುಮಟಾದಲ್ಲಿ ರಾಜ್ಯ ಮಟ್ಟದ ಬೃಹತ್‌ ಕಾಂಗ್ರೆಸ್ ಸಮಾವೇಶ: ಐವನ್ ಡಿಸೋಜ

ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಅಧಿಕಾರದ ಸೂತ್ರ ಹಿಡಿಯಿತು. ಬಿಜೆಪಿಯ ಸುಳ್ಳಿನ ಪ್ರಚಾರದಿಂದ ಅನೇಕ ಯುವಕರ ಕುಟುಂಬಗಳು ಬೀದಿ ಪಾಲಾಗಿವೆ. ಇವೆಲ್ಲವನ್ನೂ ಜನರ ಮುಂದಿಟ್ಟು ಬಿಜೆಪಿ ನೈಜ ಬಣ್ಣ ತೆರೆದಿಡಲು ಕುಮಟಾದಲ್ಲಿ ರಾಜ್ಯ ಮಟ್ಟದ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಸುವುದಾಗಿ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ತಿಳಿಸಿದ್ದಾರೆ.

from India & World News in Kannada | VK Polls https://ift.tt/HXRxi2u

ಪ್ರಗತಿಪರರು ಅಯೋಗ್ಯರು, ಅಲೆಮಾರಿ ಸಿದ್ದರಾಮಯ್ಯ ಅರ್ಜಿನೇ‌ ಹಾಕಿಲ್ಲ: ಕೆ.ಎಸ್.ಈಶ್ವರಪ್ಪ



from India & World News in Kannada | VK Polls https://ift.tt/Kg0CTZD

IPL: 2023ರ ಟೂರ್ನಿಯ ಬಳಿಕ ಐಪಿಎಲ್‌ ವೃತ್ತಿ ಜೀವನಕ್ಕೆ ಎಂಎಸ್‌ ಧೋನಿ ವಿದಾಯ?

MS Dhoni set to be given big role by BCCI: 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ. 2023ರ ಏಕದಿನ ಹಾಗೂ 2024ರ ಟಿ20 ವಿಶ್ವಕಪ್ ಟೂರ್ನಿಗಳಿಗೆ ತಂಡವನ್ನು ಬಲಿಷ್ಠಗೊಳಿಸಲು ಬಿಸಿಸಿಐ ನಿರ್ಧರಿಸಿದ್ದು, ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಭಾರತ ತಂಡದಲ್ಲಿ ಹೊಸ ಜವಾಬ್ದಾರಿ ನೀಡಲು ಹೊರಟಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/sQtmPv2

ಚಿಕ್ಕಮಗಳೂರಿನ ಮೆಡಿಕಲ್‌ ಕಾಲೇಜಿಗೆ ಬಸ್ ದಾನ ಮಾಡಿದ ಉದ್ಯಮಿ ಕಿಶೋರ್: ಸಿ.ಟಿ. ರವಿ ಶ್ಲಾಘನೆ

ನಗರದ ಲೈಫ್‌ಲೈನ್‌ ಫೀಡ್ಸ್‌ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, "ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಈ ವರ್ಷದಿಂದ ಆರಂಭವಾಗಲಿದೆ. ಇದರಿಂದಾಗಿ, ಜಿಲ್ಲೆಯ ಜನತೆಯ ಬಹುದಿನದ ಕನಸು ನನಸಾಗಿದೆ. ಈ ಸಂಸ್ಥೆಗೆ ಆರಂಭಿಕವಾಗಿ ಮೂಲಸೌಕರ್ಯ ಸಮಸ್ಯೆ ಎದುರಾದಾಗ ನಗರದ ದಾನಿ ಕಿಶೋರ್‌ ಕುಮಾರ್‌ ಹೆಗ್ಡೆ 30 ಲಕ್ಷ ರೂ. ವೆಚ್ಚ ಮಾಜಿ ಉಚಿತವಾಗಿ ಬಸ್‌ ನೀಡಿದ್ದಾರೆ. ಅದೇ ರೀತಿ ತರಗತಿ ನಡೆಸಲು ತಾತ್ಕಾಲಿಕ ಕೊಠಡಿ ವ್ಯವಸ್ಥೆ ಮಾಡಲು ಆದಿಚುಂಚನಗಿರಿ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ'' ಎಂದರು.

from India & World News in Kannada | VK Polls https://ift.tt/qDf346k

ವಿವಾದಿತ ಬಸ್‌ ತಂಗುದಾಣಗಳ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲಿ: ಶಾಸಕ ರಾಮದಾಸ್

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಮದಾಸ್, ಮೈಸೂರು- ಊಟಿ ಮಾರ್ಗದ ಬಸ್‌ ತಂಗುದಾಣವನ್ನು ಪಾರಂಪರಿಕವಾಗಿ ಕಾಣುವ ದೃಷ್ಟಿಯಿಂದ ನಿರ್ಮಿಸಲಾಗಿದೆ. ಅನುಮಾನಗಳಿದ್ದರೆ, ಈ ಬಗ್ಗೆ ತಜ್ಞರ ಸಮಿತಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿ, ವರದಿ ಆಧರಿಸಿ ಬದಲಾವಣೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ. ಅರಮನೆಯ ಮಾದರಿಯಲ್ಲಿಇರುವ ಈ ಬಸ್‌ ತಂಗುದಾಣವನ್ನು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿಮಸೀದಿ ರೀತಿಯಲ್ಲಿನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಯ ಗುತ್ತಿಗೆದಾರ ಒಬ್ಬ ಮುಸ್ಲಿಂ ಆಗಿದ್ದರಿಂದ ಈ ಅಪಪ್ರಚಾರ ನಡೆಸಲಾಗಿದೆ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/xfWTRyA

ಅರೋಗ್ಯ ಇಲಾಖೆಯ ಮಹಿಳಾ ಅಧಿಕಾರಿ, ಸಿಬ್ಬಂದಿ ಮಕ್ಕಳ ಪಾಲನೆಗೆ ಆರೋಗ್ಯಸೌಧದಲ್ಲಿ `ಡೇ-ಕೇರ್ ಸೆಂಟರ್' ಗೆ ಚಾಲನೆ

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮಕ್ಕಳ ಲಾಲನೆ, ಪಾಲನೆಗಾಗಿ ಡೇ ಕೇರ್ ಸೆಂಟರ್ ಆನ್ನು ನಿರ್ಮಿಸಲಾಗಿದ್ದು ಮಂಗಳವಾರದಂದು ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಇಲ್ಲಿ ಗರಿಷ್ಠ 20 ಮಕ್ಕಳ ಪಾಲನೆಗೆ ಅವಕಾಶವಿದೆ. ಇದನ್ನು ಮಾದರಿ ಕೇಂದ್ರವಾಗಿ ನಿರ್ಮಿಸಲಾಗಿದೆ. ಮಕ್ಕಳಿಗೆ ಅಗತ್ಯವಾಗಿರುವ ಆಟದ ಪರಿಕರಗಳು ಮತ್ತಿತರ ಸೌಲಭ್ಯವನ್ನು ಒದಗಿಸಲಾಗಿದೆ.

from India & World News in Kannada | VK Polls https://ift.tt/yh2K7tE

IPL 2023: ಹತ್ತು ತಂಡಗಳು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ!

All Teams Retained & Released Players List For IPL 2023: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ಇದೇ ವರ್ಷ ಡಿಸೆಂಬರ್‌ 23ರಂದು ಕೊಚ್ಚಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಲುವಾಗಿ ಎಲ್ಲ ಫ್ರಾಂವೈಸಿಗಳು ನವೆಂಬರ್‌ 15ರಂದು ತಾವು ಉಳಿಸಿಕೊಂಡ ಆಟಗಾರರು ಹಾಗೂ ಹರಾಜಿಗೆ ಬಿಟ್ಟುಕೊಟ್ಟ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಎಲ್ಲಾ ಹತ್ತು ಫ್ರಾಂಚೈಸಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/DnkwZKs

Kannada Rajyotsava: ಸ್ಕಾಟ್ಲೆಂಡ್‌ನಲ್ಲಿ ಕನ್ನಡ ರಾಜ್ಯೋತ್ಸವ; ಎಡಿನ್‌ಬರ್ಗ್‌ನಲ್ಲಿ ಮೊಳಗಿದ ಕನ್ನಡ ಡಿಂಡಿಮ

ಸ್ಕಾಟ್ಲೆಂಡ್‌ನಲ್ಲಿ ಕನ್ನಡ ಡಿಂಡಿಮದ ಸದ್ದು ಜೋರಾಗಿಯೇ ಮೊಳಗಿದೆ. ನವೆಂಬರ್‌ 12ರಂದು ಎಡಿನ್‌ಬರ್ಗ್‌ನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದ್ದು, ಸೇಂಟ್ ಕಥಬರ್ಟ್ಸ್ ಚರ್ಚ್‌ನಲ್ಲಿ ಸಂಪೂರ್ಣ ಕನ್ನಡಮಯವಾಗಿತ್ತು. ಹೊಸಬಟ್ಟೆ ಧರಿಸಿ ಸಂಭ್ರಮದಿಂದ ಭಾಗವಹಿಸಿದ್ದ ಕನ್ನಡಿರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

from India & World News in Kannada | VK Polls https://ift.tt/5XRcOlH

ಮಡಿಕೇರಿ: ಪ್ರವಾಸಿಗರ ದಟ್ಟಣೆ ಇರುವಾಗಲೇ ನಿಸರ್ಗಧಾಮ ಬಂದ್‌, ಅಪಾಯಕಾರಿ ಸ್ಥಳದಲ್ಲಿ ಬದಲಿ ಸಂಪರ್ಕ ಸೇತುವೆ



from India & World News in Kannada | VK Polls https://ift.tt/lrOUiCR

ಕರಾವಳಿಯನ್ನು ಕಾಡುತ್ತಿದೆ ಕಣ್ಣು ನೋವು: ಸಮಸ್ಯೆಯಿದ್ದವರು ಶಾಲೆ-ಕಾಲೇಜಿಗೆ ಬರದಿರಲು ಸೂಚನೆ

ಫಾದರ್‌ ಮುಲ್ಲರ್ಸ್ ಆಸ್ಪತ್ರೆ ಹಾಗೂ ನೇತ್ರಾ ಜ್ಯೋತಿ ರೆಟಿನಾ ಸೆಂಟರ್‌ನ ವೈದ್ಯ ಡಾ.ಶ್ರೀಪತಿ ಕಾಮತ್‌ ಅವರು ಹೇಳುವಂತೆ ಈ ಸಮಸ್ಯೆ ಕಣ್ಣಿನ ಸರ್ಜರಿ ಆಗಿರುವವರು ಹಾಗೂ ಮಧುಮೇಹಿಗಳ ವಿಚಾರದಲ್ಲಿ ಕೊಂಚ ಜಾಗ್ರತೆ ಅಗತ್ಯ. ಉಳಿದಂತೆ ಇದಕ್ಕೆ ಬೇಕಿರುವ ಡ್ರಾಪ್ಸ್ ಹಾಕಿದರೆ ಐದು ದಿನಗಳಲ್ಲಿ ಸರಿಹೋಗುತ್ತದೆ. ಮುಖ್ಯವಾಗಿ ಕಣ್ಣಿನ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಕೆಲವೊಂದು ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಿಂದ ಕಾರ್ನಿಯಾದ ಕಡೆಗೂ ವೈರಸ್‌ ದಾಳಿ ನಡೆಸುತ್ತದೆ.

from India & World News in Kannada | VK Polls https://ift.tt/0m1zgsG

4 ವರ್ಷ ಉತ್ತಮ ಕೆಲಸ ಮಾಡಿದ ಸಾರ್ಥಕತೆ: ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್

ವಿಶ್ವವಿದ್ಯಾಲಯದ ಆವರಣದಲ್ಲಿರುವ ಕ್ರಾಫರ್ಡ್‌ ಹಾಲ್‌ನಲ್ಲಿ ತಮಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕುಲಪತಿಗಳಾದ ಡಾ. ಹೇಮಂತ್ ಕುಮಾರ್, ''ಜೆಎಸ್‌ಎಸ್‌ ಸಂಸ್ಥೆಯಲ್ಲಿನಾನು ಪ್ರೌಢಶಾಲೆ ಶಿಕ್ಷಕನಾಗಿ ವೃತ್ತಿ ಆರಂಭಿಸಿದೆ. ಮೈವಿವಿಯಲ್ಲೇ ಓದಿದೆ, ಉಪನ್ಯಾ ಸಕನಾದೆ. ಡೀನ್‌ ಆದೆ. ಕುಲಪತಿ ಯಾಗಿಯೂ ಕಾರ‍್ಯ ನಿರ್ವಹಿಸಿದೆ. ಈ ಸಂದರ್ಭದಲ್ಲಿನನ್ನ ಏಳಿಗೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ'' ಎಂದರು. ''ನಾನು ಮೈಸೂರು ವಿವಿ ಕಂಪ್ಯೂಟರ್‌ ಸೈನ್ಸ್‌ ಮೊದಲ ಬ್ಯಾಚ್‌ನ ವಿದ್ಯಾರ್ಥಿ. ಕಂಪ್ಯೂಟರ್‌ ಸೈನ್ಸ್‌ನಲ್ಲಿಪಿಎಚ್‌.ಡಿ ಪಡೆದ ಮೊದಲ ವಿದ್ಯಾರ್ಥಿ'' ಎಂದು ಹೇಳಿದರು.

from India & World News in Kannada | VK Polls https://ift.tt/hTYIDC4

Train to Sabarimala - ಅಯ್ಯಪ್ಪ ಭಕ್ತರಿಗೆ ಮತ್ತೊಂದು ಸಿಹಿಸುದ್ದಿ:ಬೆಳಗಾವಿ, ಹುಬ್ಬಳ್ಳಿಯಿಂದಲೂ ಶಬರಿಮಲೈಗೆ ಪ್ರತ್ಯೇಕ ರೈಲು ಸೇವೆ

ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಕೆಲ ದಿನಗಳ ಹಿಂದಷ್ಟೇ ವಿಜಯಪುರ-ಕೊಟ್ಟಾಯಂ ರೈಲು ಓಡಿಸಲು ನಿರ್ಧರಿಸಿದ್ದ ನೈರುತ್ಯ ರೈಲ್ವೆ ಇದೀಗ ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದಲೂ ಪ್ರತ್ಯೇಕವಾಗಿ ಶಬರಿಮಲೈಗೆ ರೈಲು ಓಡಿಸಲು ನಿರ್ಧರಿಸಿದೆ. ಡಿಸೆಂಬರ್‌ನಿಂದ ಜನವರಿ ತಿಂಗಳಲ್ಲಿ ಹೆಚ್ಚು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಾರೆ. ಅಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ್ದನ್ನು ಮನಗಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಿಶೇಷವಾದ ರೈಲು ಬಿಡುವಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದರು.

from India & World News in Kannada | VK Polls https://ift.tt/T0SQYO6

AUS vs SA: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

South Africa vs Australia Test Series 2022: ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಎರಡನೇ ಆವೃತ್ತಿಯ ಭಾಗವಾಗಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರು ಪೈಪೋಟಿ ನಡೆಸಲಿದೆ. ಈ ಸಲುವಾಗಿ ಡೀನ್‌ ಎಲ್ಗರ್‌ ಸಾರಥ್ಯದ ಬಲಿಷ್ಠ ತಂಡವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಸೋಮವಾರ ಪ್ರಕಟ ಮಾಡಿದೆ. ಹರಿಣ ಪಡೆಗೆ ಪರಿಣತ ಬ್ಯಾಟರ್‌ ತೆನೂಯಿಸ್‌ ಡೆ ಬ್ರೂಯ್ನ್‌ ಕಮ್‌ಬ್ಯಾಕ್‌ ಮಾಡಿದ್ದು, ಇದೇ ಮೊದಲ ಬಾರಿ ಗೆರಾಲ್ಡ್‌ ಕೋಟ್ಜೆ ದಕ್ಷಿಣ ಆಫ್ರಿಕಾದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gsFpwEt

Milk Price Hike-ನ.20 ರ ನಂತರ ಹಾಲಿನ ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡಲಾಗುವುದು: ಕೆಎಂಎಫ್ ದರ ಹೆಚ್ಚಳ ಪ್ರಕಟಿಸಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಹೇಳಿಕೆ

ಕೆಎಂಎಫ್ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಪ್ರಕಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ನ.20ರ ನಂತರ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ. ​ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯ.ಮಂತ್ರಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/o0PLjHF

T20 World Cup: ಚಾಂಪಿಯನ್ಸ್‌ ಇಂಗ್ಲೆಂಡ್‌ ಸೇರಿ ಎಲ್ಲಾ ತಂಡಗಳಿಗೆ ಸಿಕ್ಕ ನಗದು ಬಹುಮಾನದ ವಿವರ!

ICC T20 world Cup Prize money Details: ಭಾನುವಾರ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಇಂಗ್ಲೆಂಡ್‌ ತಂಡ 2022ರ ಐಸಿಸಿ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡಿತು. ಆ ಮೂಲಕ ಸೀಮಿತ ಓವರ್‌ಗಳ ಸ್ವರೂಪದ ಎರಡೂ ವಿಶ್ವಕಪ್‌ ಪ್ರಶಸ್ತಿಗಳನ್ನು ತನ್ನಲ್ಲಿಯೇ ಉಳಿಸಿಕೊಂಡ ಖ್ಯಾತಿಗೆ ಇಂಗ್ಲೆಂಡ್‌ ಭಾಜನವಾಯಿತು. ಅಂದಹಾಗಿ ಚಾಂಪಿಯನ್ಸ್‌ ಇಂಗ್ಲೆಂಡ್‌ ಹಾಗೂ ರನ್ನರ್‌ ಅಪ್‌ ಪಾಕಿಸ್ತಾನ ಸೇರಿದಂತೆ ಟೂರ್ನಿಯ ಅಂತ್ಯಕ್ಕೆ ಎಲ್ಲಾ ತಂಡಗಳು ಸ್ವೀಕರಿಸಿದ ನಗದು ಬಹುಮಾನದ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/sEm3hQw

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ, ಒಬಿಸಿ ಸ್ಥಾನಮಾನ ನೀಡಿ: ಸಿದ್ದಗಂಗಾ ಮಠದಲ್ಲಿ ನಡೆದ ಸಮಾವೇಶದಲ್ಲಿ ನಿರ್ಧಾರ

ಸಮ್ಮೇಳನದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಡಾ ಶಾಮನೂರು ಶಿವಶಂಕರಪ್ಪ,''ಎಲ್ಲಾ ಸಮುದಾಯದವರು ಇಂದು ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಪುರಸ್ಕಾರಕ್ಕೆ ಮಹಾಸಭಾವೂ ಒಂದು ಕೋಟಿ ರೂ. ಮೀಸಲಿರಿಸಿದೆ. ಮುಂದಿನ ದಿನಗಳಲ್ಲಿ ಮಹಾಸಭಾದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುವುದು'' ಎಂದರು.

from India & World News in Kannada | VK Polls https://ift.tt/5SIFuR6

ENG vs PAK: 'ಇದೇ ಕರ್ಮಾ' ಪಾಕ್‌ ಸೋಲಿನ ಬೆನ್ನಲ್ಲೇ ಶೊಯೇಬ್‌ ಅಖ್ತರ್‌ನ ಟ್ರೋಲ್‌ ಮಾಡಿದ ಮೊಹಮ್ಮದ್ ಶಮಿ!

England vs Pakistan Highlights in T20 World Cup 2022 Final: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ. ನವೆಂಬರ್‌ 13ರಂದು ನಡೆದ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ಪಾಕ್‌ನ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಅವರನ್ನು ಟೀಮ್ ಇಂಡಿಯಾ ಸ್ಟಾರ್‌ ಬೌಲರ್‌ ಮೊಹಮ್ಮದ್‌ ಶಮಿ ಟ್ರೋಲ್‌ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/0uXgcC9

ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡರ ಆಹ್ವಾನಿಸದ್ದಕ್ಕೆ ಮುಂದುವರಿದ ಜೆಡಿಎಸ್ ಟ್ವೀಟ್ ವಾರ್

ದೇವನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನುಆಹ್ವಾನಿಸಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ಟೀಕಾಪ್ರಹಾರ ಮುಂದುವರಿಸಿದೆ. ಶಿಷ್ಟಾಚಾರ ಲೋಪವೆಸಗಿದ ಬಗ್ಗೆ ಸಿಎಂ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ. ಅಷ್ಟಕ್ಕೂ ಅದು ಕೇಶವಕೃಪಾದ ಕಾರ್ಯಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

from India & World News in Kannada | VK Polls https://ift.tt/swH6Sxh

Tipu Sultan - ಪಾರ್ಲಿಮೆಂಟ್‌ನಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸಿ: ವಾಟಾಳ್‌ ನಾಗರಾಜ್ ಆಗ್ರಹ

ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತೋಷವೇ, ಆದರೆ ನನ್ನ ಪ್ರಕಾರ ಟಿಪ್ಪು ಪ್ರತಿಮೆ ಪಾರ್ಲಿಮೆಂಟ್‌ನಲ್ಲಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್. ಇದೇ ವೇಳೆ ಟಿಪ್ಪುವಿನ ಇತಿಹಾಸವನ್ನು ತಿರುಚುವ ಕೆಲಸ ಬಿಜೆಪಿ, ಆರ್‌ಎಸ್‌ಎಸ್‌ ಅವರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

from India & World News in Kannada | VK Polls https://ift.tt/rj9Y6Jw

Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸು ನರಬಲಿಗೆ ಯತ್ನ

Human Sacrifice in Delhi: ಮೃತಪಟ್ಟಿದ್ದ ತಂದೆಯನ್ನು, ಮಗು ಬಲಿ ಕೊಟ್ಟರೆ ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ ಮಹಿಳೆಯೊಬ್ಬಳು ಎರಡು ತಿಂಗಳ ಹಸುಗೂಸನ್ನು ಅಪಹರಿಸಿ ಬಲಿ ಕೊಡಲು ತಯಾರಿ ನಡೆಸಿದ್ದಾಗ ಬಂಧಿಸಲಾಗಿದೆ.

from India & World News in Kannada | VK Polls https://ift.tt/X7ZWBGl

Cubbon Park: ಕಬ್ಬನ್‌ ಪಾರ್ಕ್‌ನಲ್ಲಿ ಹಾರ್ನ್‌ ಮಾಡಿದರೆ ಹುಷಾರ್‌!

ಕಬ್ಬನ್ ಉದ್ಯಾನವು ಬಹು ಹಿಂದಿನಿಂದಲೂ ಹತ್ತಾರು ಬಗೆಯ ಪಕ್ಷಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಕರ್ಕಶ ಹಾರ್ನ್‌ನಿಂದಾಗಿ ಪಕ್ಷಿಗಳು ಭಯದಿಂದ ಹಾರಿ ಹೋಗುತ್ತವೆ. ಹೀಗಾಗಿ ಉದ್ಯಾನದ ಕೆಲವು ಭಾಗಗಳನ್ನಾದರೂ ನಿಶ್ಯಬ್ದವಾಗಿಡಲು 16 ನಿಗದಿತ ಜಾಗಗಳಲ್ಲಿ'ನಿಶ್ಯಬ್ದ ವಲಯ' ಎಂದು ಫಲಕಗಳನ್ನು ಹಾಕಲಾಗಿದೆ.

from India & World News in Kannada | VK Polls https://ift.tt/y2RJKHo

ಕುಂಬಳೆ-ಮುಳ್ಳೇರಿಯ ರಸ್ತೆ ಅಗಲೀಕರಣ ಕಾಮಗಾರಿ: ನಿಧಾನಗತಿಯಲ್ಲಿ ಸಾಗುತ್ತಿದೆ ಡಾಮರೀಕರಣ

ಕುಂಬಳೆಯಿಂದ ಮುಳ್ಳೇರಿಯ ತನಕ ಇರುವ ಅನೇಕ ತಿರುವುಗಳನ್ನು ತೆರವುಗೊಳಿಸುವ ಕಾರ್ಯ ನಡೆದು ರಸ್ತೆ ಅಗಲಗೊಳಿಸಲಾಗಿದೆ. ವಿವಿಧ ಕಡೆಗಳಲ್ಲಿ ಆಳೆತ್ತರ ತಡೆಗೋಡೆಗಳನ್ನೂ ನಿರ್ಮಿಸಲಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ತಡೆಗೋಡೆ ನಿರ್ಮಾಣ ನಡೆಯುತ್ತಿದೆ. ಕನ್ನೆಪ್ಪಾಡಿಯಿಂದ ಬದಿಯಡ್ಕ ನಡುವೆ ರಸ್ತೆಯ ಬದಿಯಲ್ಲಿ ಹೆಚ್ಚಿನ ಕಡೆಗಳಲ್ಲಿ ಸಿಮೆಂಟಿನ ಗೋಡೆ ನಿರ್ಮಾಣಗೊಂಡಿದೆ. ಇಳಿಜಾರು ಪ್ರದೇಶಕ್ಕೆ, ಹಾಗೂ ಮೇಲ್ಭಾಗದಿಂದ ಮಣ್ಣು ಕುಸಿದು ಬೀಳದಂತೆ ತಡೆಗೋಡೆ ನಿರ್ಮಿಸಲಾಗಿದೆ.

from India & World News in Kannada | VK Polls https://ift.tt/du9Gb4y

ಕನ್ನಡಕ್ಕೆ ಕಿಟ್ಟೆಲ್‌ ಕೊಡುಗೆ ಅಪೂರ್ವ: ಮಂಗಳೂರಿನಲ್ಲಿ ಪ್ರತಿಮೆ ಅನಾವರಣಗೊಳಿಸಿದ ಫ್ರೆಡ್ರಿಕ್‌ ಬಿರ್ಗೆಲೆನ್‌

ಕಿಟ್ಟೆಲ್‌ ಅವರ ಬದುಕು ಬರಹ ಅಂತರ್‌ ಸಾಂಸ್ಕೃತಿಕ ಅಧ್ಯಯನ ವಿಷಯವಾಗಿದೆ. ಮಿಷನರಿ ಕೆಲಸಕ್ಕಿಂತ ಹೆಚ್ಚಾಗಿ ಎರಡು ದೇಶಗಳ ಮಧ್ಯೆ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಮುಂದಿನ ತಲೆಮಾರಿಗೆ ಅಧ್ಯಯನ ಯೋಗ್ಯವಾದುದು. ಕಿಟ್ಟೆಲ್‌ ಅವರ ಮರಿಮಗಳು ಜರ್ಮನಿಯ ಅಲ್ಮುಥ್‌ ಬಾರ್ಬರಾ ಎಲೆನೊರೆ ಮೈಯರ್‌ ಮಾತನಾಡಿ, ಜರ್ಮನಿಯಿಂದ ಮಂಗಳೂರಿಗೆ ಬಂದಿಳಿದಾಗ ಭಾವುಕಳಾದೆ. ನಮ್ಮ ಮುತ್ತಜ್ಜ ಓಡಾಡಿದ ಸ್ಥಳವಿದು. ನಮ್ಮ ಅಜ್ಜಿ ಹುಟ್ಟಿದ ಜಾಗವಿದು. ನಮ್ಮನ್ನು ನೆನಪಿಸಿ ಕರೆದವರಿಗೆ ಆಭಾರಿಯಾಗಿದ್ದೇವೆ. ಇದು ಜೀವನದ ಅಪೂರ್ವ ಕ್ಷಣ ಎಂದರು.

from India & World News in Kannada | VK Polls https://ift.tt/YIGj4nM

Hd Kumaraswamy - ರಾಮನಗರ, ಚನ್ನಪಟ್ಟಣಗಳಲ್ಲಿ ನನ್ನನ್ನು ಕಟ್ಟಿಹಾಕಲು ಕಾಂಗ್ರೆಸ್‌, ಬಿಜೆಪಿ ಕುತಂತ್ರ:ಎಚ್.ಡಿ.ಕುಮಾರಸ್ವಾಮಿ

ಮುಸ್ಲಿಂ ಮತದಾರರ ಬಳಿ ನಮ್ಮ ಪಕ್ಷವನ್ನು ಬಿಜೆಪಿಯ ಬಿ ಟೀಮ್‌ ಎಂದು ಹೇಳುವ ಕಾಂಗ್ರೆಸ್ಸಿಗರು, ರಾಮನಗರ, ಚನ್ನಪಟ್ಟಣದಲ್ಲಿ ನನ್ನನ್ನು ಸೋಲಿಸಲು ಕುತಂತ್ರ ನಡೆಸುತ್ತಿವೆ. ಇದ್ಯಾವುದೂ ನಡೆಯುವುದಿಲ್ಲ ಎಂದು ಎಂದಿದ್ದಾರೆ ಎಚ್.ಡಿ.ಕುಮಾರಸ್ವಾಮಿ. ಇದೊಂದು ಚುನಾವಣೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

from India & World News in Kannada | VK Polls https://ift.tt/FclPvYr

ಬೇರ್ಪಡಲು ಹೊರಟಿದ್ದ 17 ಜೋಡಿಗಳನ್ನು ಮತ್ತೆ ಒಂದು ಮಾಡಿದ ಧಾರವಾಡ ಕೋರ್ಟ್!

​ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ ಕೋರ್ಟ್ ನಲ್ಲಿ ಮನಸ್ಸು ಬದಲಾಯಿಸಿ ಮತ್ತೆ ಒಂದಾಗಿ ಜೀವಿಸುವ ತೀರ್ಮಾನಕ್ಕೆ ಬರುವುದು ವಿಶೇಷವೇನಲ್ಲ. ಅದರೆ ಧಾರವಾಡ ಕೋರ್ಟಿನಲ್ಲಿ ​ಯಾವುದೇ ಒಂದು ಕಾರಣಕ್ಕೆ ವಿಚ್ಛೇದನಕ್ಕೆ ಬಂದ ಬರೊಬ್ಬರಿ 17 ಜೋಡಿಗಳು ಮತ್ತೆ ಇದೀಗ ಹೊಸ ಜೀವನ ಕಂಡುಕೊಂಡಿದ್ದಾರೆ. ಮಕ್ಕಳೊಂದಿಗೆ ವಾತ್ಸವ್ಯದಿಂದ ಬಾಳುವ ಸಂಕಲ್ಪ ತೊಟ್ಟಿದ್ದಾರೆ. ಇದೆಲ್ಲ ಒಂದೇ ದಿನದಲ್ಲಿ!

from India & World News in Kannada | VK Polls https://ift.tt/YxyPnVW

ಊಟಿಯಂತಾದ ಮೈಸೂರು; ಎಲ್ಲೆಲ್ಲೂ ಚುಮುಚುಮು ಚಳಿ, ಅಲ್ಲಲ್ಲಿ ತುಂತುರು ಮಳೆ

ಮೈಸೂರಿನ ಓವಲ್‌ ಗ್ರೌಂಡ್‌, ಚಾಮುಂಡಿಬೆಟ್ಟ, ಕುಕ್ಕರಹಳ್ಳಿಕೆರೆ, ಲಿಂಗಾಬುಧಿಕೆರೆ ಸೇರಿದಂತೆ ವಿವಿಧೆಡೆ ಸಾರ್ವಜನಿಕರು ಬೆಳಗ್ಗೆ, ಸಂಜೆ ವಾಕಿಂಗ್‌ ಹೋಗುತ್ತಾರೆ. ಇಲ್ಲೆಲ್ಲಾ ಮಂಜಿನ ಹೊದಿಕೆ ಆಕರ್ಷಣೆ ಉಂಟು ಮಾಡಿದೆ. ಸೈಕ್ಲಿಂಕ್‌ ಮಾಡುವವರಂತೂ ಹಿಮದಿಂದ ಆವೃತ್ತವಾಗಿರುವ ರಸ್ತೆ, ಅರಮನೆ, ಬೆಟ್ಟದ ಸೊಬಗನ್ನು ಹೆಚ್ಚು ಆಸ್ವಾದಿಸುತ್ತಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನ ಹಸಿರು ಮರಗಳು ಮಂಜಿನಿಂದ ಆವೃತ್ತಗೊಂಡಿದ್ದು, ಮಲೆನಾಡಿನ ವಾತಾವರಣವನ್ನು ನೆನಪಿಸುತ್ತಿದೆ. ಬಂಗಾಳಕೊಲ್ಲಿಯ ಮೇಲ್ಮೈನಲ್ಲಿ ಬೀಸುತ್ತಿರುವ ಸುಳಿಗಾಳಿಯ ಪರಿಣಾಮವೂ ಮೈಸೂರಿನಲ್ಲಿ ಚಳಿ ಹೆಚ್ಚಲು ಕಾರಣ.

from India & World News in Kannada | VK Polls https://ift.tt/EQO8ln4

ಶುದ್ಧೀಕರಿಸಿದ ನೀರು ಪೋಲು: ಕಾಸರಗೋಡಿನ ಅಡ್ಕಸ್ಥಳ ಟ್ಯಾಂಕ್ ನಿಂದ ನೀರು ಮತ್ತೆ ತೋಡಿಗೆ

ಜಲ ಪ್ರಾಧಿಕಾರ ಗೇಟ್‌ವಾಲ್‌ ತೆರೆದ ಸಂದರ್ಭ ಅಡ್ಕಸ್ಥಳ ಪೇಟೆಯಲ್ಲೂ ಹೊರಚಿಮ್ಮುವ ನೀರು ರಸ್ತೆಯಲ್ಲೇ ಹರಿದು ಭಾರಿ ಪ್ರಮಾಣದಲ್ಲಿ ಪೋಲಾಗುತ್ತಿದೆ. ರಸ್ತೆ ತುಂಬಾ ನೀರು ಹರಿಯುತ್ತಿದ್ದು, ವಾಹನಗಳಿಗೆ ತೊಂದರೆಯಾಗುತ್ತಿದೆ. ಅಡ್ಕಸ್ಥಳ ಪ್ರಯಾಣಿಕರ ಬಸ್‌ ತಂಗುದಾಣದ ಸುತ್ತಲೂ ಆವರಿಸಿದ ನೀರು ಬಸ್‌ ಪ್ರಯಾಣಿಕರಿಗೂ, ದಾರಿಹೋಕರಿಗೂ ಸಮಸ್ಯೆಯಾಗುತ್ತಿದೆ. ವಾಹನ ಸಂಚಾರದ ವೇಳೆ ರಸ್ತೆಯಲ್ಲಿ ಹರಿಯುವ ಕೆಸರು ನೀರು ಆಟೋ ಸ್ಟ್ಯಾಂಡ್‌ನಲ್ಲಿ ನಿಲುಗಡೆಗೊಳಿಸಿದ ಆಟೋ ರಿಕ್ಷಾ ಚಾಲಕರು, ದ್ವಿಚಕ್ರ ವಾಹನಗಳು, ಪಾದಚಾರಿಗಳ ಮೇಲೆ ಎರಚುತ್ತಿದೆ.

from India & World News in Kannada | VK Polls https://ift.tt/kR9sBIC

ಯುಎಇ ಕನ್ನಡ ಸಮುದಾಯದ 'ಕನ್ನಡ ರತ್ನ' ಪ್ರಶಸ್ತಿ ಸ್ವೀಕರಿಸುತ್ತಿಲ್ಲ ಎಂದ ಯದುವೀರ ಒಡೆಯರ್

ಮೈಸೂರಿನ ಒಡೆಯರ್ ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಯುಎಇ ಕನ್ನಡ ಸಮುದಾಯ ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನನಗೆ ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂಬ ಸುದ್ದಿ ಮುದ್ರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಈ ಸಮಯದಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಸೂಕ್ತವೆಂದೆನಿಸುತ್ತಿಲ್ಲ'' ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/w9ipqmO

ವಸತಿ ಪ್ರದೇಶದಲ್ಲಿಅನಧಿಕೃತ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ:ಹೈಕೋರ್ಟ್‌ಗೆ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಕೆ

BBMP: ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ಅಂಗಡಿಗಳು, ಸಾರ್ವಜನಿಕರ ಅತ್ಯವಶ್ಯಕ ಸೇವೆಗೆ ಮಾತ್ರ ಅವಕಾಶವಿರಲಿದೆ. ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಹಾಗೆಯೇ, ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಸ್ತಾಪಿಸಿರುವ ಪ್ರಮಾಣಪತ್ರವನ್ನು ಬಿಬಿಎಂಪಿ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದರು.

from India & World News in Kannada | VK Polls https://ift.tt/hgNnzuB

T20 world cup: ರೋಹಿತ್‌ ಶರ್ಮಾ ಟಿ20 ತಂಡದ ನಾಯಕತ್ವಕ್ಕೆ ಕಂಟಕ! ಹಾರ್ದಿಕ್‌ಗೆ ಸಿಗಬಹುದಾ ನಾಯಕತ್ವ?

T20 World Cup 2022: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 10 ವಿಕೆಟ್‌ಗಳಿಂದ ಸೋಲು ಕಂಡಿದೆ. ಈ ಸೋಲಿನಿಂದ ಟೀಮ್‌ ಇಂಡಿಯಾ ಫೈನಲ್ ಟಿಕೆಟ್ ಕಳೆದುಕೊಂಡಿತು. ಸೋಲಿನ ಬೆನ್ನಲ್ಲೇ ರೋಹಿತ್‌ ಶರ್ಮಾ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ರೋಹಿತ್ ಶರ್ಮಾ ಅವರ ನಂತರ ಭಾರತ ಟಿ20 ತಂಡದ ಮುಂದಿನ ನಾಯಕರು ಯಾರು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/kpyDKt6

Fight Over Biriyani: ಬಿರಿಯಾನಿಗಾಗಿ ಕಿತ್ತಾಟ: ಬೆಂಕಿಗೆ ಆಹುತಿಯಾದ ವೃದ್ಧ ದಂಪತಿ

Couple Fight Over Biriyani: ಹೋಟೆಲ್‌ನಿಂದ ತಂದಿದ್ದ ಬಿರಿಯಾನಿಯನ್ನು ಹಂಚಿ ತಿನ್ನುವ ವಿಚಾರದಲ್ಲಿ ವೃದ್ಧ ದಂಪತಿ ಮಧ್ಯೆ ಜಗಳ ನಡೆದಿದ್ದು, ಅದು ಇಬ್ಬರ ಸಾವಿನಲ್ಲಿ ದುರಂತ ಅಂತ್ಯ ಕಂಡಿದೆ. ತಮಿಳುನಾಡಿನ ಚೆನ್ನೈನಲ್ಲಿ ಈ ಘಟನೆ ನಡೆದಿದೆ.

from India & World News in Kannada | VK Polls https://ift.tt/wKerkDc

ಗ್ರಾಹಕರಿಗೆ ಮತ್ತೊಂದು ಬರೆ: ಹಾಲು ಖರೀದಿ ದರ 2 ರೂ. ಏರಿಸಿದ ಕೋಮುಲ್‌

ಹಾಲಿನ ಶೇಖರಣೆಯನ್ನು ವೃದ್ಧಿಸಲು ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಿಸಲು ಪ್ರಸ್ತುತ ಹಾಲಿನ ಖರೀದಿ ದರವನ್ನು ಸಂಘದಿಂದ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2 ರೂ.ಗಳನ್ನು ನ. 16ರ ಬೆಳಗ್ಗೆಯಿಂದ ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು. ಕೋಮುಲ್‌ 2 ರೂ. ಹೆಚ್ಚಿಸಿದ ನಂತರದಲ್ಲಿರೈತರಿಂದ ಖರೀದಿ ಮಾಡುವ ಹಾಲಿನ ಪ್ರತಿ ಲೀಟರ್‌ ದರ ನ. 16ರಿಂದ 29.90 ರೂ. ಆಗಲಿದ್ದು, ಒಕ್ಕೂಟದಿಂದ ಸಂಘಕ್ಕೆ ಪ್ರತಿ ಲೀಟರ್‌ಗೆ 31.15ರೂ. ಪಾವತಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿ ಸಲಾಯಿತು.

from India & World News in Kannada | VK Polls https://ift.tt/Pk6cDRg

Crop Insurance: ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ನಿಮ್ಮ ಕೈ ಸೇರಲಿದೆ ಮುಂಗಾರು ಪೂರ್ವ ಬೆಳೆ ವಿಮೆ!

​​ಬಹಳಷ್ಟು ವಿಮೆ ಫಲಾನುಭವಿ ರೈತರ ಆಧಾರ್‌ ಕಾರ್ಡ್‌ಗಳು ಇನ್ನೂ ಲಿಂಕ್‌ ಆಗದಿರುವುದನ್ನು ಗಮನಿಸಿದ ಸಚಿವರು''ಆಧಾರ್‌ ಸಂಖ್ಯೆ ಸರಿಯಾಗಿ ಲಿಂಕ್‌ ಆಗಿದೆಯೇ ಎಂಬುದನ್ನು ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ವಿಮೆ ಮಾಡಿಸಿದ್ದಾಯಿತು ಎಂದು ಕೈಕಟ್ಟಿ ಕೂರಬಾರದು. ವಿಮಾ ಕಂಪೆನಿಗಳೂ ಅರ್ಹ ರೈತನಿಗೆ ನಿಯಮಬದ್ಧವಾಗಿ ಪರಿಹಾರ ಒದಗಿಸಲೇಬೇಕು. ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ಇತ್ಯರ್ಥ-ವಾಗುವಂತೆ ಕೃಷಿ ಅಧಿಕಾರಿಗಳು ಕಂಪೆನಿ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಬೇಕು,'' ಎಂದು ತಾಕೀತು ಮಾಡಿದರು.

from India & World News in Kannada | VK Polls https://ift.tt/1kpyfbx

ಕರಾವಳಿ ಜನರ ಬಹುದಿನದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ: ಪಡಿತರ ವ್ಯವಸ್ಥೆಯಲ್ಲಿ ಅವರು ಕೇಳಿದ್ದ ಈ ಪದಾರ್ಥ ಹೊಸ ವರ್ಷದಿಂದ ವಿತರಣೆ

ವಿಧಾನಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ​​​''ಕರಾವಳಿ ಭಾಗದ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಲಕ್ಕಿ ವಿತರಣೆ ಮಾಡುವಂತೆ ಜನರಿಂದ ಬೇಡಿಕೆ ಇತ್ತು. ಆದರೆ, ಅದಕ್ಕೆ ಅಗತ್ಯವಾದ ಭತ್ತ ಖರೀದಿ ಸಮಸ್ಯೆಯಾಗಿತ್ತು. ನಮ್ಮ ಸರ್ಕಾರ ನಿಗದಿಪಡಿಸಿರುವ 2,040 ರೂ. ದರದಲ್ಲಿ ಭತ್ತ ಸಿಗದೆ ತೊಂದರೆಯಾಗಿತ್ತು. ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿ 500 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಹೀಗಾಗಿ, ಭತ್ತದ ಲಭ್ಯತೆ ಹೆಚ್ಚಿ ಕುಚ್ಚಲಕ್ಕಿ ವಿತರಣೆ ಸುಲಭವಾಗಲಿದೆ'' ಎಂದರು.

from India & World News in Kannada | VK Polls https://ift.tt/aQTJYSU

ಶಾಲೆ ಸೇರದ ಮಕ್ಕಳು: ತುಮಕೂರಿನಲ್ಲಿ ವಲಸೆ ಕುಟುಂಬಗಳ ಮಕ್ಕಳು ಈಗಲೂ ಶಿಕ್ಷಣದಿಂದ ವಂಚಿತ

ವಲಸೆ ಕಾರ್ಮಿಕರು ವಾಸಿಸುತ್ತಿರುವ ಸ್ಥಳದಲ್ಲಿರುವ ಮಕ್ಕಳ ಬಗ್ಗೆ ಮಾಹಿತಿ ಪಡೆದು, ತಕ್ಷಣಕ್ಕೆ ಆರೋಗ್ಯ ಇಲಾಖೆ, ಅಂಗನವಾಡಿ ಸಿಬ್ಬಂದಿ, ಪೌಷ್ಟಿಕ ಆಹಾರ ಸೇವನೆ ಕುರಿತಾಗಿ ಮತ್ತು ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಜತೆಗೆ ಶಿಕ್ಷಣ ಇಲಾಖೆಯಿಂದ ಮಕ್ಕಳನ್ನು ತಕ್ಷಣವೇ ತಮ್ಮ ಗ್ರಾಮದ ಶಾಲೆಗಳಿಗೆ ಕಳುಹಿಸಿ, ಮಗು ಶಾಲೆಗೆ ಹಾಜರಾಗಿರುವ ಬಗ್ಗೆ ಮಾಹಿತಿ ನೀಡಲೇಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಸೂಚಿಸಿದ್ದರು.

from India & World News in Kannada | VK Polls https://ift.tt/FsiYbcv

ಚನ್ನಪಟ್ಟಣಕ್ಕೆ ಹೋಗಲು ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಿಲ್ಲ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣದ ಶಾಸಕ ಎಚ್‌ಡಿ ಕುಮಾರಸ್ವಾಮಿ, ಅವರ ಮಗ ನಿಖಿಲ್‌ ಕುಮಾರಸ್ವಾಮಿ ಅಲ್ಲ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿರುವ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣಕ್ಕೆ ಹೋಗಲು ಯಾವ ದೊಣೆ ನಾಯಕನ ಅಪ್ಪಣೆ ಕೇಳಬೇಕಿಲ್ಲ ಎಂದಿದ್ದಾರೆ. ಪಂಚರತ್ನ ಯೋಜನೆಯ ನಿಮಿತ್ತ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾನು ನಮ್ಮ ಪಕ್ಷದ ಕಾರ್ಯಕರ್ತನಾಗಿ ತಾಲೂಕಿನ ಜನತೆಯ ಕಷ್ಟ ಕೇಳುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/9q1FzHM

Kane Williamson: ಕಿವೀಸ್‌ ತಂಡದಿಂದ ಕೇನ್ ವಿಲಿಯಮ್ಸನ್‌ನ ಕೈಬಿಡುವ ಸಮಯ ಬಂದಾಗಿದೆ ಎಂದ ಭಜ್ಜಿ!

Pakistan vs New Zealand Highlights in ICC T20 World Cup 2022: ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಸತತವಾಗಿ ನಾಕ್‌ಔಟ್‌ ಹಂತಕ್ಕೇರುತ್ತಿರುವ ನ್ಯೂಜಿಲೆಂಡ್‌ ತಂಡ ಟ್ರೋಫಿ ಗೆಲ್ಲಲು ವಿಫಲವಾಗುತ್ತಿದೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೂಪರ್‌-12 ಹಂತದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಕಾಲಿಟ್ಟಿತ್ತು. ಆದರೆ, ಅಂತಿಮ ನಾಲ್ಕರ ಘಟ್ಟದಲ್ಲಿ ಪಾಕಿಸ್ತಾನ ಎದುರು 7 ವಿಕೆಟ್‌ಗಳ ಹೀನಾಯ ಸೋಲುಂಡು ಸ್ಪರ್ದೆಯಿಂದ ಹೊರಬಿದ್ದಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/XVyA0KH

ಸಾರಾ ಸಂಧಾನದ ಬಳಿಕವೂ ಪಟ್ಟು ಬಿಡದ ಶ್ರೀನಿವಾಸ್: ಮತ್ತೆ ಜೆಡಿಎಸ್ ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದ ಗುಬ್ಬಿ ಶಾಸಕ

ಮಾಜಿ ಸಚಿವ ಸಾ.ರಾ.ಸಂಧಾನದ ಬಳಿಕವೂ ಜೆಡಿಎಸ್ ಬಗೆಗಿನ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮುನಿಸು ಕಡಿಮೆಯಾದಂತೆ ಕಾಣುತ್ತಿಲ್ಲ. ಸ್ನೇಹಿತರು ಮತ್ತೆ ಜೆಡಿಎಸ್‌ಗೆ ಬನ್ನಿ ಎಂದು ಕರೆಯುತ್ತಿರುವುದು ಸಹ ಸತ್ಯವೇ. ಆದರೆ ನಾನು ಜೆಡಿಎಸ್‌ನಿಂದ ಬಹಳಷ್ಟು ದೂರದಲ್ಲಿದ್ದು, ಮತ್ತೆ ಹೋಗುವಂತಹ ಪ್ರಮೇಯ ಬರುವುದಿಲ್ಲಎಂದು ಅವರು ಸ್ಪಷ್ಟಪಡಿಸಿದ್ದಾರೆ.

from India & World News in Kannada | VK Polls https://ift.tt/UoB1Dje

Gujarat Elections 2022: ಗುಜರಾತ್‌ನಲ್ಲಿ ಬಿಜೆಪಿಯ 20+ ಶಾಸಕರಿಗೆ ಟಿಕೆಟ್‌ ನೀಡದಿರಲು ನಿರ್ಧಾರ; ಹೊಸ ಮುಖಗಳಿಗೆ ಮಣೆ

ಗುಜರಾತ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಭಾರೀ ಯೋಜನೆ ರೂಪಿಸಿದ್ದು, 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ನೀಡದಿರಲು ನಿರ್ಧರಿಸಿದೆ. ಸಾಧನೆ ಶೂನ್ಯ ಹಳಬರಿಗೆ ಟಿಕೆಟ್‌ ನೀಡದಿರಲು ನಿರ್ಧರಿಸಿರುವ ಬಿಜೆಪಿ, ಆಡಳಿತ ವಿರೋಧಿ ಅಲೆ ಜೋರಾಗಿರುವ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕುತ್ತಿದೆ. ಶೀಘ್ರ 182 ಅಭ್ಯರ್ಥಿಗಳ 2 ಪಟ್ಟಿಗಳನ್ನು ಬಿಜೆಪಿ ಬಿಡುಗಡೆ ಮಾಡಲಿದೆ.

from India & World News in Kannada | VK Polls https://ift.tt/kULht9H

IPL 2023: ಡಿಸೆಂಬರ್‌ 23ಕ್ಕೆ ಕೊಚ್ಚಿಯಲ್ಲಿ ಐಪಿಎಲ್‌ ಆಟಗಾರರ ಮಿನಿ ಹರಾಜು!

Indian Premier League Player Auction 2022: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಭಾರತದ ಆತಿಥ್ಯದಲ್ಲಿ ಹಾಗೂ ಎಂದಿನಂತೆ ಹೋಮ್‌ ಅಂಡ್‌ ಅವೇ ಮಾದರಿಯಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಗಲೇ ಶುಭ ಸುದ್ದಿ ನೀಡಿತ್ತು. ಈಗ ಐಪಿಎಲ್‌ 2023 ಟೂರ್ನಿ ಸಲುವಾಗಿ ಸಣ್ಣ ಪ್ರಮಾಣದ ಆಟಗಾರರ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಜ್ಜಾಗಿದ್ದು, ಇದಕ್ಕಾಗಿ ಕೊಚ್ಚಿಯನ್ನು ಆಯ್ಕೆ ಮಾಡಿಕೊಂಡಿದೆ. ಕೇರಳದ ರಾಜಧಾನಿಯಲ್ಲಿ ಡಿಸೆಂಬರ್‌ 23ರಂದು ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಜರುಗಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/YO6XAcs

ಆನೆ- ಮಾನವ ಸಂಘರ್ಷದ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದ ಅರಣ್ಯಾಧಿಕಾರಿಗಳ ತಂಡಕ್ಕೆ ಪ್ರತಿಭಟನೆ ಬಿಸಿ

​​​ಸಭೆಯ ಆರಂಭದಲ್ಲಿ ಗ್ರಾಮಸ್ಥರು, ಬೆಳೆಗಾರರು, ರೈತಾಪಿ ವರ್ಗ ದವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ''ಕಾಟಾಚಾರಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆ ನಡೆಯುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ನೀಡಿಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳ ದಾಳಿಯಿಂದ ನಷ್ಟ ಅನುಭವಿಸಿದವರು ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ,'' ಎಂದು ಆಕ್ರೋಶ ವ್ಯಕಪಡಿಸಿದರು. ಇದೇ ಸಂದರ್ಭ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚುರಂಜನ್‌ ಮಾತನಾಡಿ, ''ಸಮಯದ ಅಭಾವದಿಂದ ತುರ್ತಾಗಿ ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ. ಸಭೆ ಬಗ್ಗೆ ತನಗೂ ತಡವಾಗಿ ಮಾಹಿತಿ ಲಭಿಸಿದೆ'' ಎಂದು ಸಮಾಧಾನಪಡಿಸಿದರು.

from India & World News in Kannada | VK Polls https://ift.tt/ON0aptf

ನಂಜನಗೂಡಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಪೂಜೆ

ಹುಣ್ಣಿಮೆ ಪ್ರಯುಕ್ತ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಆಗಮಿಕ ಜೆ. ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಬೆಳಗ್ಗೆ 4ರ ಸಮಯದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ ಹಾಗೂ ಮಹಾನ್ಯಾಸಪೂರ್ವಕ ರುದ್ರಾಭಿಷೇಕ ನೆರವೇರಿಸಿ ಬಳಿಕ ವಿವಿಧ ಬಗೆಯ ಪುಷ್ಪಗಳು ಹಾಗೂ ಬಿಲ್ವಪತ್ರೆಯಿಂದ ಸರ್ವಾಲಂಕೃತಗೊಳಿಸಿ ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

from India & World News in Kannada | VK Polls https://ift.tt/tmNbeDW

ಕಡಲೆಕಾಯಿ ಪರಿಷೆಗೆ ತೆಪ್ಪೋತ್ಸವದ ಮೆರುಗು: ಕಡೇ ಕಾರ್ತಿಕ ಸೋಮವಾರಕ್ಕೂ ಮುನ್ನ ಪರಿಷೆಗೆ ಚಾಲನೆ

ಈ ವರ್ಷ ರಾಮನಗರ, ಮಾಗಡಿ, ಕನಕಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಕಡ್ಲೆಕಾಯಿ ಬೆಳೆಯುವ ಪ್ರದೇಶಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ ಸಾಧ್ಯತೆಯಿದೆ. 'ಸಾಮ್ರಾಟ್‌, ಗಡಂಗ್‌, ಬಾದಾಮಿ...' ಇಂತಹ ಹತ್ತಾರು ಜಾತಿಯ ಕಡಲೆಕಾಯಿಗಳು ಬಸವನಗುಡಿಯ ಬುಲ್‌ಟೆಂಪಲ್‌ ರೋಡ್‌ಗೆ ಆಗಮಿಸಲಿವೆ. ರುಚಿ ಮತ್ತು ಗಾತ್ರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿರಲಿದ್ದು, ಕೆಲವು ಮೂರು ಬೀಜದ ಕಾಯಿಗಳಾದರೆ, ಮತ್ತೆ ಕೆಲವು ಎರಡು, ಮತ್ತೆ ಕೆಲವು ಕಾಯಿಗಳು ಒಂದು ಬೀಜದೊಂದಿಗೆ ಕಡ್ಲೆಕಾಯಿ ಪ್ರಿಯರನ್ನು ಸೆಳೆಯಲಿವೆ.

from India & World News in Kannada | VK Polls https://ift.tt/wjN7QVS

ಮಳೆ ಕಡಿಮೆಯಾಗುತ್ತಿದ್ದಂತೆ ಅರ್ಧಕ್ಕರ್ಧ ಇಳಿದಿದೆ ತರಕಾರಿ, ಸೊಪ್ಪಿನ ದರ

ಮಳೆ ನಿಂತ ನಂತರ ಕೋಲಾರ ಜಿಲ್ಲೆಯ ಕೆಜಿಎಫ್ ಮಾರುಕಟ್ಟೆಯಲ್ಲಿ ತರಕಾರಿ ಆವಕ ಹೆಚ್ಚಳವಾಗಿದ್ದು, ಧಾರಣೆ ಸಾಕಷ್ಟು ಪ್ರಮಾಣದಲ್ಲಿಇಳಿದಿದೆ. ಮುಂದಿನ ಒಂದೆರಡು ವಾರಗಳಲ್ಲಿ ಮತ್ತಷ್ಟು ತಗ್ಗಲಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಹಣ್ಣುಗಳ ಬೆಲೆ ಮಾತ್ರ ಹೆಚ್ಚುತ್ತಾ ಸಾಗಿದೆ.

from India & World News in Kannada | VK Polls https://ift.tt/oZCe8yT

Gold smuggling-ವಿದೇಶದಿಂದ ಕೇರಳಕ್ಕೆ ಅಕ್ರಮ ಚಿನ್ನಸಾಗಣೆ: 10 ವರ್ಷದಲ್ಲಿ3,171 ಮಂದಿ ಭಾಗಿ, ಜೈಲು ಸೇರಿದ್ದು 14 ಮಂದಿಯಷ್ಟೇ!

1 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಿದರೆ ಕಾನೂನು ಕ್ರಮ ಜರುಗಿಸದಿರುವುದು ಕಸ್ಟಮ್ಸ್‌ ಪರಿಪಾಠವಾಗಿದೆ. ಇದನ್ನು ತಿಳಿದ ಚಿನ್ನ ಕಳ್ಳ ಸಾಗಾಟ ಮಾಫಿಯಾ ವಾಹಕರಿಗೆ ಅಮಿಷ ಒಡ್ಡಿ ಕೇವಲ 99 ಲಕ್ಷ ರೂ. ಮೌಲ್ಯದವರೆಗಿನ ಚಿನ್ನ ಹಸ್ತಾಂತರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕೇರಳದಲ್ಲಿ2012ರಿಂದ 2022ರವರೆಗೆ ಒಟ್ಟು 3,171 ಮಂದಿ ಆರೋಪಿಗಳಾಗಿದ್ದಾರೆ. ಆದರೆ ಈ ಪೈಕಿ ಕೇವಲ 14 ಮಂದಿ ಮಾತ್ರ ಜೈಲು ಸೇರಿದ್ದಾರೆ.

from India & World News in Kannada | VK Polls https://ift.tt/iIyCLXS

G20 ವೇದಿಕೆಯಲ್ಲಿ ಮೋದಿ ಐಕ್ಯತೆ ಮಂತ್ರ; 2023ರ ಭಾರತದ ಜಿ20 ಅಧ್ಯಕ್ಷತೆಗೆ ಲೋಗೊ ಅನಾವರಣ

2023ರ ಸೆಪ್ಟೆಂಬರ್‌ನಲ್ಲಿ ನಡೆಯುವ ಜಿ20 ಒಕ್ಕೂಟದ ಶೃಂಗಸಭೆ ಅಧ್ಯಕ್ಷತೆಯನ್ನು ಭಾರತ ವಹಿಸಲಿದ್ದು, ಶೃಂಗಸಭೆಯ ಲೋಗೋವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಬಿಡುಗಡೆ ಮಾಡಿದರು. ಏಳು ಕಮಲದ ದಳಗಳ ಮೇಲೆ ಅರಳುತ್ತಿರುವ ವಿಶ್ವವನ್ನು ಚಿತ್ರಿಸಿರುವುದು ವಿಶೇಷವಾಗಿದ್ದು, ವಸುದೈವ ಕುಟುಂಬಕಂ ಎಂಬ ಸಂದೇಶ ಸಾರಲಾಗಿದೆ.

from India & World News in Kannada | VK Polls https://ift.tt/T4Pq6ru

ರೈತರಿಗೆ ಮಂದಹಾಸ ನೀಡದ ಏಣೇಲು ಬೆಳೆ: ಏರಿಕೆಯಾದ ಕಾರ್ಮಿಕರ ವೇತನ

ಮುಕ್ಕ ಬಳಿಯ ರೈತರೊಬ್ಬರು ಸುಮಾರು 2.5 ಎಕರೆಯಲ್ಲಿ ಭತ್ತದ ಏಣೇಲು ಬೆಳೆ ಬೆಳೆಸಿದ್ದು ಅವರಿಗೆ ಸುಮಾರು 20ರಿಂದ 25 ಮುಡಿ ಅಕ್ಕಿಯಷ್ಟು ಇಳುವರಿ ದೊರೆತಿದೆ. ನೇಜಿ, ಗೊಬ್ಬರ, ಉಳುಮೆ, ನಾಟಿ ಮೆಶಿನ್‌ನಿಂದ ಕಠಾವಿಗೆ ಇತ್ಯಾದಿಗೆ 40 ಸಾವಿರ ರೂ. ಗೂ ಮಿಕ್ಕಿ ವೆಚ್ಚ ಮಾಡಿದ್ದಾರೆ. ಸದ್ಯದ ದರ ಪ್ರಕಾರ ಅಕ್ಕಿಗೆ ಕೆಜಿಗೆ 43 ರೂ. ನಂತೆ ಲೆಕ್ಕ ಹಾಕಿದರೆ ಅವರಿಗೆ ದೊರೆಯುವ ಗಳಿಕೆಯೂ 40 ಸಾವಿರ ರೂ. ಆಸುಪಾಸಿನಲ್ಲಿಯೇ ಇದೆ.

from India & World News in Kannada | VK Polls https://ift.tt/GMlynYZ

ಬಿಜೆಪಿಯವರು ಜನಸಂಕಲ್ಪ ಯಾತ್ರೆಗಿಂತ ಹಣ ಸಂಗ್ರಹ ಯಾತ್ರೆ ಮಾಡುತ್ತಿದ್ದಾರೆ: ಸಲೀಂ ಅಹ್ಮದ್

ಬಿಜೆಪಿಯವರು ಜನಸಂಕಲ್ಪಯಾತ್ರೆಗಿಂತ ಹಣ ಸಂಗ್ರಹ ಮಾಡುವ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಈಗ ಜನರ ಬಳಿ ಹೋಗಬೇಕು ಎಂಬ ಜ್ಞಾನೋದಯವಾಗಿದೆ. ಬಿಜೆಪಿಯವರು ಜನಸಂಕಲ್ಪ ಯಾತ್ರೆಗಿಂತ ಕ್ಷಮೆಯಾತ್ರೆ ಮಾಡಬೇಕು. ಜನರ ಬಳಿ ಹೋಗಿ ಕ್ಷಮೆ ಕೋರುವ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

from India & World News in Kannada | VK Polls https://ift.tt/IbkvOhY

Gujarat Elections 2022: ಗುಜರಾತ್‌ನಲ್ಲಿ ಬಿಜೆಪಿ-ಕಾಂಗ್ರೆಸ್‌ ಏಳುಬೀಳಿನ ಪಯಣ! ಸತತವಾಗಿ ಕುಸಿಯುತ್ತಿದೆ ಕೇಸರಿ ಶಕ್ತಿ

ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‌ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಗೆ ಏಳುಬೀಳಿನ ಹಾದಿ ತೋರಿಸಿದೆ. 1998 ರಿಂದ 2017ರವರೆಗೂ ನಡೆದ ಚುನಾವಣೆಗಳಲ್ಲಿ 2002 ಬಿಟ್ಟರೆ ಉಳಿದೆಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಸಂಖ್ಯಾಬಲ ಕುಸಿದಿದ್ದು, ಕಾಂಗ್ರೆಸ್‌ ಬಲ ಹಿಗ್ಗಿದೆ. ಈ ಹಿನ್ನೆಲೆ 27 ವರ್ಷದಿಂದ ಗುಜರಾತ್‌ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಈ ಬಾರಿಯ ಚುನಾವಣೆ ಬಹಳ ಮಹತ್ವದ್ದಾಗಿದೆ.

from India & World News in Kannada | VK Polls https://ift.tt/AwzoYM5

IND vs ENG: ಭಾರತ-ಇಂಗ್ಲೆಂಡ್‌ ನಡುವಣ ಸೆಮಿಫೈನಲ್‌ಗೆ ಆಯ್ಕೆಯಾದ ಬೆಸ್ಟ್‌ ಅಂಪೈರ್ಸ್‌ ಇವರೇ!

India vs England in ICC T20 World Cup 2022: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಸ್‌ ಹಂತಕ್ಕೆ ಕಾಲಿಟ್ಟಿದೆ. ಸೂಪರ್‌-12 ಹಂತದಲ್ಲಿ 'ಬಿ' ಗುಂಪಿನಲ್ಲಿ ಆಡಿದ್ದ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡ ಆಡಿದ 5 ಪಂದ್ಯಗಳಲ್ಲಿ 4 ಗೆಲುವಿನಿಂದಿಗೆ 8 ಅಂಕಗಳನ್ನು ಪಡೆದು ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ ತಲುಪಿದ್ದು, ಫೈನಲ್‌ ಅರ್ಹತೆಯಾಗಿ 'ಎ' ಗುಂಪಿನ ಎರಡನೇ ಸ್ಥಾನಿ ಇಂಗ್ಲೆಂಡ್‌ ಎದುರು ಪೈಪೋಟಿ ನಡೆಸಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/mgu52sO

Shivaram Hebbar - ನಾವೇನೂ ಕಾಂಗ್ರೆಸ್ ಗೆ ಅಪ್ಲಿಕೇಶನ್ ಹಾಕಿಲ್ಲ, ಅನಿವಾರ್ಯತೆಯೂ ಇಲ್ಲ:ಸಚಿವ ಶಿವರಾಂ ಹೆಬ್ಬಾರ್ ಸ್ಪಷ್ಟನೆ

ಕ್ಷವನ್ನು ಬಿಟ್ಟು ಹೋದವರು ಮತ್ತೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವುದಿದ್ದರೆ ಮನವಿ ಸಲ್ಲಿಸಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಹ್ವಾನವನ್ನು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಳ್ಳಿಹಾಕಿದ್ದಾರೆ. ನಾವೇನೂ ಅಪ್ಲಿಕೇಷನ್ ಹಾಕಿಲ್ಲ, ಹಾಕುವ ಅನಿವಾರ್ಯವೂ ಬಂದಿಲ್ಲ. ಹಾಗಾಗಿ ಈ ವಿಷಯದ ಬಗ್ಗೆ ಅವರು ಚರ್ಚೆ ಮಾಡಿಕೊಳ್ಳಲಿ, ನಾವು ಮಾತನಾಡೋದಿಲ್ಲ ಎಂದಿದ್ದಾರೆ.

from India & World News in Kannada | VK Polls https://ift.tt/hPZtEvc

ಸತೀಶ್‌ ಜಾರಕಿಹೊಳಿಯ ಮನಸ್ಥಿತಿ ಬಗ್ಗೆ ವಿಷಾದವಿದೆ, ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡ್ತಾರೆ: ಶಶಿಕಲಾ ಜೊಲ್ಲೆ

ರಾಜ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾದ ಶಾಸಕ ಸತೀಶ್‌ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತಾಗಿ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿವೆ ಶಶಿಕಲಾ ಜೊಲ್ಲೆ, ಒಂದು ಪಕ್ಷದ ಸಿದ್ದಾಂತಗಳನ್ನು ವಿರೋಧಿಸುವ ಭರದಲ್ಲಿ ಹಿಂದೂಗಳನ್ನು ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇಂತಹ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವ ಅವರು ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

from India & World News in Kannada | VK Polls https://ift.tt/7rpCyNJ

ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನ ನೀಡಿ ಗೌರವ

ಎಸ್‌ಟಿಜಿ ಪಬ್ಲಿಕ್‌ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಿಯುಸಿ ವಿಭಾಗದಲ್ಲಿ ಯು.ಪುನೀತ್‌ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕಗಳಿಸಿದ ಅಸ್ರಾ ಮಾಹೀನ್‌ ವಿದ್ಯಾರ್ಥಿಗೆ ಚಿನ್ನ ನೀಡಿ ಗೌರವಿಸಿದರು. ಜತೆಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 118 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಹ ಅಭಿನಂದಿಸಲಾಯಿತು. ಇವರಲ್ಲಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು 62, ಕನ್ನಡದಲ್ಲಿ 4, ಭೌತಶಾಸ್ತ್ರದಲ್ಲಿ 2, ಜೀವಶಾಸ್ತ್ರದಲ್ಲಿ 7, ರಸಾಯನಶಾಸ್ತ್ರದಲ್ಲಿ 14 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

from India & World News in Kannada | VK Polls https://ift.tt/NrRtjcm

ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ತಲೆ ಎತ್ತಲಿದೆ ನಾಲ್ಕಂತಸ್ತಿನ ಕಟ್ಟಡ: ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ

ಮೆಜೆಸ್ಟಿಕ್‌ ನಿಲ್ದಾಣವು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಮೆಟ್ರೋವನ್ನು ಬದಲಾಯಿಸಲು ಒಂದು ಲಕ್ಷಕ್ಕೂ ಹೆಚ್ಚು ಜನರು ನಿಲ್ದಾಣವನ್ನು ಬಳಸುತ್ತಿದ್ದಾರೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ನೇರಳೆ ಮಾರ್ಗವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್‌ ಸಿದ್ಧವಾಗಿರುವುದರಿಂದ ಮೆಟ್ರೋಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಮೆಜೆಸ್ಟಿಕ್‌ ನಿಲ್ದಾಣವು 2017 ರಿಂದ ಕಾರ್ಯನಿರ್ವಹಿಸುತ್ತಿದೆ.

from India & World News in Kannada | VK Polls https://ift.tt/TeCbxdA

ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ: ಎಂಟಿಬಿ ನಾಗರಾಜ್

ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಬರುವ ಎಲ್ಲರಿಗೂ ಸ್ವಾಗತ ಎಂದು ಹೇಳಿದ್ದಾರೆ. ಆದರೆ, ನಾನು ಈಗಾಗಲೆ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದು ಮಂತ್ರಿ ಸಹ ಆಗಿದ್ದೆನೆ. ಪದೇಪದೆ ಪಕ್ಷ ಬದಲಾವಣೆ ಮಾಡುವ ಜಾಯಮಾನ ನನ್ನದಲ್ಲ. ನಾನೇನಿದ್ದರೂ ಇನ್ನು ಬಿಜೆಪಿ ಪಕ್ಷದಲ್ಲೆಇರ್ತೇನೆ ಎಂದಿದ್ದಾರೆ ಸಚಿವ ಎಂಚಿಬಿ ನಾಗರಾಜ್ ತಿಳಿಸಿದ್ದಾರೆ.

from India & World News in Kannada | VK Polls https://ift.tt/tm58ysg

HD Kumaraswamy-ಜೆಡಿಎಸ್ ಅಧಿಕಾರಕ್ಕೆ ಬಂದರೆ ಗ್ರಾಪಂಗೊಂದು ಸುಸಜ್ಜಿತ ಸರಕಾರಿ ಆಸ್ಪತ್ರೆ:ಎಚ್.ಡಿ.ಕುಮಾರಸ್ವಾಮಿ ಭರವಸೆ

ತುಮಕೂರು ಜಿಲ್ಲಾಸ್ಪತ್ರೆಯಲ್ಲಿಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂತಹ ಘಟನೆ ಎಲ್ಲಿಯೂ ಪುನರಾವರ್ತನೆ ಆಗಬಾರದು ಎಂದು ಹೇಳಿದ್ದಾರೆ. ಹಾಗಾಗಿ ರಾಜ್ಯದಲ್ಲಿ 2023ಕ್ಕೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಜನತೆಗೆ ಗ್ರಾಮೀಣ ಪ್ರದೇಶದಲ್ಲೇ ಉಚಿತವಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಬೇಕೆಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಸುಸಜ್ಜಿತವಾದ 30 ಹಾಸಿಯುಳ್ಳ ಆಸ್ಪತ್ರೆ ಸ್ಥಾಪಿಸಿ, ಅಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

from India & World News in Kannada | VK Polls https://vijaykarnataka.com/news/tumakuru/if-jds-comes-to-power-will-built-government-hospital-in-every-village-panchayath-promises-hd-kumaraswamy/articleshow/95341995.cms

Kanva River | ಚನ್ನಪಟ್ಟಣ: ನಗರಸಭೆ ತ್ಯಾಜ್ಯದಿಂದ ಕಣ್ವ ನದಿ ಮಲಿನ, ತಿಪ್ಪೆಗುಂಡಿಯಾದ ನದಿ ಪಾತ್ರ

Garbage Dumping to Kanva River: ಚನ್ನಪಟ್ಟಣದ (channapatna) 1ನೇ ವಾರ್ಡ್‌ನ ಚಿಕ್ಕಮಳೂರಿನಲ್ಲಿ (Chikkamalur) ನಗರಸಭೆ ಸಿಬ್ಬಂದಿಗಳು ಕಣ್ವ ನದಿಯಲ್ಲಿ ತ್ಯಾಜ್ಯವನ್ನು ಸುರಿಯುತ್ತಿದ್ದು ಇದರಿಂದಾಗಿ ನದಿ ಮಲಿನಗೊಳ್ಳುತ್ತಿದೆ. ಚಿಕ್ಕಮಳೂರು ಗ್ರಾಮದ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇವಾಲಯದ ಪಕ್ಕ ನದಿಗೆ ಇಳಿದು ಹೋಗಲು ಜಾಗವಿದೆ. ಹಿಂದೆ ಈ ಸ್ಥಳದಲ್ಲಿ ಕಿರು ಉದ್ಯಾನವನ ನಿರ್ಮಿಸಲಾಗಿತ್ತು. ಆದರೆ, ಕೆಲ ದಿನಗಳಿಂದ ಈ ಭಾಗದ ಕಸವನ್ನೆಲ್ಲಾ ತಂದು ನದಿಗೆ ಸುರಿಯುತ್ತಿದ್ದು, ಇಡೀ ನದಿ ಪಾತ್ರ ತಿಪ್ಪೆಗುಂಡಿಯಾಗಿ ಪರಿಣಮಿಸಿದೆ.

from India & World News in Kannada | VK Polls https://ift.tt/5qhLe1f

ಕರಾವಳಿ ಉತ್ಸವದ ದಿನಾಂಕ ಬದಲಿಸಲು ಜಿಲ್ಲಾಧಿಕಾರಿಗೆ ಮನವಿ: ಡಿ.17, 18ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿ

Kannada Sahitya Sammelana: ಭಾನುವಾರ ದಾಂಡೇಲಿಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳನ್ನು ಪ್ರವಾಸಿಗೃಹದಲ್ಲಿ ಭೇಟಿಯಾಗಿ ಚರ್ಚಿಸಿದ ಬಿ.ಎನ್‌.ವಾಸರೆಯವರು ಡಿಸೆಂಬರ್‌ 17 ಮತ್ತು 18ರಂದು ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿದೆ. ಸಮ್ಮೇಳನದ ತಯಾರಿಯೂ ನಡೆಯುತ್ತಿದೆ. ಈ ನಡುವೆ ಶನಿವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಸಭೆ ನಡೆದು ಕರಾವಳಿ ಉತ್ಸವವನ್ನು (Karavali Utsav) ಡಿಸೆಂಬರ 16, 17, 18ರಂದು ನಿಗದಿಪಡಿಸಿರುವ ಮಾಹಿತಿ ಲಭ್ಯವಾಗಿದೆ ಎಂಬುದರ ಬಗ್ಗೆ ಗಮನ ಸೆಳೆದರು.

from India & World News in Kannada | VK Polls https://ift.tt/mtiJDC1

ಅಡಕೆಗೆ ಎಲೆಚುಕ್ಕಿ ರೋಗ ಭೀತಿ: ಮಲವಂತಿಗೆ ಗ್ರಾಮದಲ್ಲಿ ಕೃಷಿಕರು ಕಂಗಾಲು

ಚಿಕ್ಕಮಗಳೂರು ಜಿಲ್ಲೆಗೆ ಸಮೀಪವಿರುವ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಬಡಾಮನೆ, ಗುತ್ಯಡ್ಕ, ಬಂಗಾರ ಪಲ್ಕೆ ಮೊದಲಾದ ಪರಿಸರಗಳಲ್ಲಿ 150 ರಿಂದ 200 ಎಕರೆಗೂ ಅಧಿಕ ಭೂ ಭಾಗದ ಅಡಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗದ ಕಾಟ ಇದ್ದು, ಪರಿಸರದ ಅಡಕೆ ಕೃಷಿ ಸಂಪೂರ್ಣ ನಾಶವಾಗುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿಂದ 6 ಕಿ.ಮೀ. ದೂರದ ಕೆಳಭಾಗದಲ್ಲಿರುವ ದಿಡುಪೆ ಸಮೀಪದ ಒಣಕೆರೆ, ಕೆಮ್ಮಟೆ, ಕೂರ ಪ್ರದೇಶದ ಸುಮಾರು 25 ಕೃಷಿಕರ 40 ಎಕರೆ ಕೃಷಿ ಭೂಮಿಯಲ್ಲಿ ಇದೀಗ ಎಲೆ ಚುಕ್ಕಿ ರೋಗದ ಲಕ್ಷಣ ಕಂಡು ಬಂದಿದೆ.

from India & World News in Kannada | VK Polls https://ift.tt/5MrEY81

ತುಮಕೂರು ಘಟನೆ ಮಾಸುವ ಮುನ್ನವೇ ಶಹಾಪುರದಲ್ಲಿ ವೈದ್ಯರಿಂದ ನಿರ್ಲಕ್ಷ್ಯ; ಹೆರಿಗೆ ವಿಳಂಬ, ನವಜಾತ ಶಿಶು ಸಾವು

ಅಪ್ಸರಾ ಬೇಗಂ ಎಂಬುವರು ಅ. 28ರಂದು ಅ ಹೆರಿಗೆಗಾಗಿ ಶಹಾಪುರ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಅಂದು ಬೆಳಗ್ಗೆಯೇ ಅವರನ್ನು ಆಸ್ಪತ್ರೆಗೆ​​​ ದಾಖಲಿಸಿಕೊಂಡರಾದರೂ, ಅಂದು ಸಂಜೆಯವರೆಗೂ ತಪಾಸಣೆ ಮಾಡದೇ ನರ್ಸ್‌ ಮತ್ತು ಆರೋಗ್ಯ ಸಹಾಯಕರು ವಿಳಂಬ ಮಾಡಿದ್ದಾರೆ. ನಂತರ ರಾತ್ರಿ ಯಾದಗಿರಿ ಜಿಲ್ಲಾಸ್ಪತ್ರೆಗೆ 108 ವಾಹನದಲ್ಲಿ ಹೆರಿಗೆಗಾಗಿ ಕಳುಹಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೂ ಚಿಕಿತ್ಸೆ ಮಾಡದೇ ಅಲ್ಲಿನ ವೈದ್ಯರು ಕಲಬುರಗಿಗೆ ಕಳಿಸುವುದಾಗಿ ಹೇಳಿ ಕೊನೆಗೆ ಹೆರಿಗೆ ಮಾಡಿದ್ದಾರೆ. ಹೆರಿಗೆ ತಡವಾಗಿದ್ದರಿಂದ ತೀವ್ರ ಅನಾರೋಗ್ಯಗೊಂಡ ಶಿಶು ಮೃತಪಟ್ಟಿದೆ ಎಂದು ಅಪ್ಸರಾ ಬೇಗಂ ಆರೋಪಿಸಿದ್ದಾರೆ.

from India & World News in Kannada | VK Polls https://ift.tt/J2874KR

ರೈತರ ಖಾತೆಗೇ ಡೀಸೆಲ್‌ ಸಬ್ಸಿಡಿ: ಬಿ.ಸಿ. ಪಾಟೀಲ್ ಭರವಸೆ

ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಲಾಗಿರುವ ಕೃಷಿ ಮೇಳ -2022ರ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ, ಪಾಟೀಲ್, "ಸಾಮಾನ್ಯವಾಗಿ ರೈತರಿಗೆ ಟ್ರ್ಯಾಕ್ಟರ್‌ನಲ್ಲಿ ಒಂದು ಎಕರೆ ಭೂಮಿ ಉಳುಮೆ ಮಾಡಲು 20 ಲೀಟರ್‌ ಡೀಸೆಲ್‌ ಬೇಕಾಗುತ್ತದೆ. ಈ ಪೈಕಿ ತಲಾ ಲೀಟರ್‌ಗೆ 25 ರೂ. ನಂತೆ 10 ಲೀಟರ್‌ಗೆ 250 ರೂ. ಸಬ್ಸಿಡಿ ನೀಡಲಾಗುವುದು. ಐದು ಎಕರೆ ಭೂಮಿ ಹೊಂದಿರುವವರಿಗೆ ಗರಿಷ್ಠ 1,250 ರೂ. ಸಬ್ಸಿಡಿ ಕೊಡಲಾಗುತ್ತದೆ'' ಎಂದು ತಿಳಿಸಿದರು.

from India & World News in Kannada | VK Polls https://ift.tt/duAlRmF

ಆ್ಯಪ್‌ ಆಧಾರಿತ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ದರ ನಿಗದಿ: ಹೈಕೋರ್ಟ್‌ಗೆ ಪರಿಷ್ಕೃತ ದರ ನಿಗದಿ ವಿವರ ಸಲ್ಲಿಸಲಿರುವ ಹೈಕೋರ್ಟ್

ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಕಂಪನಿಗಳು ತಾವು ನೀಡುತ್ತಿರುವ ಆಟೋರಿಕ್ಷಾ ಸೇವೆಗಳಿಗೆ ಪ್ರಯಾಣಿಕರಿಂದ ನಿಗದಿಗಿಂತ ಅಧಿಕ ದರ ವಸೂಲು ಮಾಡುತ್ತಿರುವ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಯನ್ನು ಅನಧಿಕೃತ ಮತ್ತು ಅಕ್ರಮ ಎಂದು ಪ್ರಕಟಿಸಿತ್ತಲ್ಲದೆ, ತಕ್ಷಣವೇ ಸ್ಥಗಿತಗೊಳಿಸುವಂತೆ ಕಂಪನಿಗಳಿಗೆ ಸೂಚನೆ ನೀಡಿತ್ತು.

from India & World News in Kannada | VK Polls https://ift.tt/2u5dDCq

Cricket Betting | ಕ್ರಿಕೆಟ್‌ ಬೆಟ್ಟಿಂಗ್‌ ಹುಚ್ಚು ತಂದ ಆಪತ್ತು: ವೃದ್ಧೆಗೆ ಇರಿದು ಆಭರಣ ದೋಚಿದ ಉಪನ್ಯಾಸಕ

MBA holder crime: ಎಂಬಿಎ ಪೂರ್ಣಗೊಳಿಸಿದ ಬಳಿಕ ಸುರೇಶ ಆರು ವರ್ಷಗಳ ಹಿಂದೆ ರಾಜಾಜಿನಗರದ ಕಾಲೇಜಿನಲ್ಲಿ ಉಪನ್ಯಾಸಕನಾಗಿ (Lecturer) ಕೆಲಸಕ್ಕೆ ಸೇರಿದ್ದ. ಅದೊಂದು ದಿನ ಆತನ ಮೊಬೈಲ್‌ಗೆ ಕ್ರಿಕೆಟ್‌ ಬೆಟ್ಟಿಂಗ್‌ ಆ್ಯಪ್‌ನ ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್‌ ತೆರೆದು ಲಾಗಿನ್‌ ಆಗಿ ಸುಲಭವಾಗಿ ದುಡ್ಡು ಗಳಿಸಬಹುದು ಎಂದು ಬೆಟ್ಟಿಂಗ್‌ ಆಡಲು ಶುರುಮಾಡಿದ. ಈ ಹುಚ್ಚು ವಿಪರೀತವಾಗಿ ಸ್ನೇಹಿತರು, ಸಂಬಂಧಿಕರು, ವಿದ್ಯಾರ್ಥಿಗಳಿಂದಲೂ ಸಾಲ ಮಾಡಿ ಬೆಟ್ಟಿಂಗ್‌ ಆಡಿದ. ಪರಿಣಾಮ, ಸಾಲದ ಹೊರೆ ಜಾಸ್ತಿಯಾಯಿತು.

from India & World News in Kannada | VK Polls https://ift.tt/azW0uQp

ರಸ್ತೆಗಳಲ್ಲಿ ಗುಂಡಿ-ಹೊಂಡಗಳು, ಜನರ ಮನಸ್ಸುಗಳಲ್ಲಿ ತಗ್ಗು-ದಿಣ್ಣೆಗಳು ಸರಿಯಾಗಬೇಕಿದೆ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Dr Shivamurthy Shivacharya swamiji: ಪೋಷಕರು ತಮ್ಮ ಮಕ್ಕಳಲ್ಲಿನ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಕೊಡಿಸುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ಸಾಕಷ್ಟು ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಏರಲು ಬಯಸುತ್ತಾರೆ. ಅದನ್ನು ಬಿಟ್ಟು ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿದಾಗ ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಎಲ್ಲಾ ಮಕ್ಕಳಿಗೂ ತಾಯಿಯೇ ಮೊದಲ ಗುರುವಾಗಿರುವುದರಿಂದ ಅದೇ ರೀತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವೂ ಒತ್ತಾಯ ಆಗಬಾರದು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

from India & World News in Kannada | VK Polls https://ift.tt/XGvmnfW

IND vs ZIM: ಡಿ.ಕೆ ಔಟ್‌-ಪಂತ್‌ ಇನ್‌? ಜಿಂಬಾಬ್ವೆ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!

Indis predicted playing XI va Zimbabwe: ಬಾಂಗ್ಲಾದೇಶ ವಿರುದ್ಧ ಕಳೆದ ಪಂದ್ಯದಲ್ಲಿ ಕೇವಲ 5 ರನ್‌ ರೋಚಕ ಗೆಲುವು ಪಡೆದಿದ್ದ ಭಾರತ ತಂಡ ಭಾನುವಾರ ಜಿಂಬಾಬ್ವೆ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಈ ಪಂದ್ಯಕ್ಕೆ ಮೆಲ್ಬೋರ್ನ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ವೇದಿಕೆ ಸಿದ್ದವಾಗಿದೆ. ಈ ಪಂದ್ಯದಲ್ಲಿ ಗೆದ್ದು 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಆದರೆ, ಜಿಂಬಾಬ್ವೆ ತಂಡ ಈಗಾಗಲೇ ಸೆಮಿಫೈನಲ್‌ ರೇಸ್‌ನಿಂದ ಹೊರ ನಡೆದಿರುವ ಹಿನ್ನೆಲೆಯಲ್ಲಿ ಈ ಪಂದ್ಯ ಅಷ್ಟೊಂದು ಮುಖ್ಯವಾಗಿಲ್ಲ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Dhc7RUJ

ಮಂಗಳೂರಿನಲ್ಲಿ ಆಟೋ ರಿಕ್ಷಾ ದರ ಪರಿಷ್ಕರಣೆ: 1.5 ಕಿ.ಮೀ ವ್ಯಾಪ್ತಿಗೆ 35, ನಂತರ ಕಿ.ಮೀ.ಗೆ 17 ರೂ.

ಪರಿಷ್ಕರಣೆಯಂತೆ 1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ 3 ಮಂದಿ ಪ್ರಯಾಣಿಕರು), ನಂತರ ಪ್ರತೀ ಕಿ.ಮೀ.ಗೆ 17 ರೂ. (ಗರಿಷ್ಠ 3 ಮಂದಿ ಪ್ರಯಾಣಿಕರು) ನಿಗದಿಪಡಿಸಲಾಗಿದೆ. ಕಾಯುವ ದರ ಮೊದಲ 15 ನಿಮಿಷ ಉಚಿತ. ನಂತರ 15 ನಿಮಿಷದವರೆಗೆ 5 ರೂ. ಇರಲಿದೆ. ಪ್ರಯಾಣಿಕರ ಸರಕಿಗೆ (ಲಗೇಜ್) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜತೆಗೆ ಇರಬೇಕು. ಮೊದಲ 20 ಕೆ.ಜಿಗಳಿಗೆ ಉಚಿತ ಮತ್ತು ನಂತರ 5 ರೂ. ಹಾಗೂ ಭಾಗದಂತೆ ನಿರ್ಧರಿಸಲಾಗಿದೆ.

from India & World News in Kannada | VK Polls https://ift.tt/wT6QpVe

ಮಗ ದೂರದ ರೋಮ್‍ನಲ್ಲಿದ್ರೆ, ಆಸ್ಪತ್ರೆಯ ಐಸಿಯು ವೆಂಟಿಲೇಟರ್ ನಲ್ಲಿ ಮಲಗಿದ್ದ ತಾಯಿ: ವೃದ್ಧೆಯ ಕೊನೆಯಾಸೆ ನೆರವೇರಿಸಿದ ವೈದ್ಯರು

ಇಲ್ಲಿ ತಾಯಿ ಆಸ್ಪತ್ಪೆಯ ಐಸಿಯುನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ಅತ್ತ ಅವರ ಪುತ್ರ ರೋಮ್ ನಲ್ಲಿದ್ದಾರೆ. ತಾವು ಆಸ್ಪತ್ರೆಯಲ್ಲಿ ಐಸಿಯು ಬೆಡ್ ನಲ್ಲಿ ಮಲಗಿದ್ರೂ ಆ ತಾಯಿಗೆ ತನ್ನ ಮಗನದ್ದೇ ಚಿಂತೆ. ತಾನು ಸಾಯುವ ಮುನ್ನ ಮಗನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾರೆ. ಕೈ ಸನ್ನೆಗಳ ಮೂಲಕ ತನ್ನ ಪುತ್ರನಲ್ಲಿ ಮಾತನಾಡಿಸುವಂತೆ ಮನವಿ ಮಾಡುತ್ತಾರೆ. ರೋಗಿಯ ಕೈ ಸನ್ನೆಗಳಿಂದ ಅರಿತ ವೈದ್ಯರು ಕೂಡಲೇ ರೋಮ್ ನಲ್ಲಿರುವ ಆಕೆಯ ಪುತ್ರನಿಗೆ ವಿಡಿಯೋ ಕಾಲ್ ಮಾಡುತ್ತಾರೆ.

from India & World News in Kannada | VK Polls https://ift.tt/jRDxX7e

ತುರ್ತು ಚಿಕಿತ್ಸೆಗೆ ಯಾವುದೇ ದಾಖಲೆ ಕೇಳುವಂತಿಲ್ಲ: ತುಮಕೂರಿನಲ್ಲಿ ತಾಯಿ, ಅವಳಿ ಮಕ್ಕಳ ಸಾವಿನಿಂದ ಎಚ್ಚೆತ್ತ ಸರಕಾರ

ತುರ್ತು ಆರೋಗ್ಯ ಸೇವೆ ನೀಡುವುದು ಆರೋಗ್ಯ ಕೇಂದ್ರಗಳ ಕರ್ತವ್ಯವಾಗಿದೆ. ದಾಖಲೆ ಇಲ್ಲದಿದ್ದರೂ ಚಿಕಿತ್ಸೆ ನೀಡಬೇಕು. ಆರೋಗ್ಯ ಸೇವೆ ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ನೋಡುವ ಅಗತ್ಯವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ಸಂಕಟವನ್ನುನಿವಾರಿಸುವುದು ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿಯ ಆದ್ಯ ಕರ್ತವ್ಯ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಸಂದರ್ಭದಲ್ಲಿ ರೋಗಿಯ ಯಾವುದೇ ತರಹದ ದಾಖಲೆಗಳನ್ನು ಒದಗಿಸಲು ಒತ್ತಾಯಿಸಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

from India & World News in Kannada | VK Polls https://ift.tt/jGhKIuY

Accident in Bidar -ಬೀದರ್ ನ ಚಿಟಗುಪ್ಪ ಬಳಿ ಭೀಕರ ಅಪಘಾತ: ಆರು ಮಂದಿ ಸಾವು, ಮೂವರು ಗಂಭೀರ

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನಲ್ಲಿ ಶುಕ್ರವಾರ ಸಂಜೆ ಐಶರ್ ಮತ್ತು ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮಹಿಳೆಯರೂ ಸೇರಿದಂತೆ ಒಟ್ಟು6 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದರೆ, 8 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

from India & World News in Kannada | VK Polls https://ift.tt/rKCSx6m

T20 World Cup: ಪಾಕ್ ತಂಡದ ಬ್ಯಾಟಿಂಗ್‌ನಲ್ಲಿ ಆಗಬಹುದಾದ ದೊಡ್ಡ ಬದಲಾವಣೆ ವಿವರಿಸಿದ ವೀರೇಂದ್ರ ಸೆಹ್ವಾಗ್‌!

ICC T20 World Cup 2022: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ಸ್‌ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ಜಿಂಬಾಬ್ವೆ ಮತ್ತು ಭಾರತ ವಿರುದ್ಧ ಮುಗ್ಗರಿಸಿದ್ದ ಸಂಕಷ್ಟಕ್ಕೆ ಸಿಲುಕಿದ್ದ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ತಂಡ, ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು 33 ರನ್‌ಗಳ ಭರ್ಜರಿ ಜಯ ದಾಖಲಿಸಿ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಹರಿಣಗಳ ವಿರುದ್ಧದ ಪಂದ್ಯದಲ್ಲಿ ಆಡಿದ ಯುವ ಆಟಗಾರ ಮೊಹಮ್ಮದ್‌ ಹ್ಯಾರಿಸ್‌ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/x1YOaKn

High Court: ಹೈಕೋರ್ಟ್‌ ಮಹತ್ವದ ತೀರ್ಪು:ಎಂಎಲ್‌ಸಿ ಎಂ.ಕೆ. ಪ್ರಾಣೇಶ್‌ ಸದ್ಯಕ್ಕೆ ಸೇಫ್‌

High Court: ಕಾನೂನು ಬಾಹಿರವಾಗಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದರಿಂದ ಆ ಮತಗಳ ಆಧಾರದ ಮೇಲೆ ಎಂ.ಕೆ.ಪ್ರಾಣೇಶ್‌ ಗೆಲುವು ಸಾಧಿಸಿದ್ದಾರೆ, ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

from India & World News in Kannada | VK Polls https://ift.tt/AzPFN8s

Krushi Mela 2022: ಬಂದಿದೆ... ನೆಟ್ಟ ಒಂದೇ ವರ್ಷಕ್ಕೆ ಫಸಲು ನೀಡುವ ನೆದರ್ಲೆಂಡ್‌ ಹಲಸು!

ಈ ಹಲಸು ಕಡಿಮೆ ಎತ್ತರದಲ್ಲಿ ಪೊದೆಯಾಕಾರದಲ್ಲಿ ಹರಡಿಕೊಳ್ಳುವುದು ವಿಶೇಷ. ನರ್ಸರಿಗಳಲ್ಲಿಸುಮಾರು ಒಂದು ವರ್ಷ ಕಾಲ ಬೆಳೆಸಿಟ್ಟ ಸಸಿಗಳನ್ನು ರೈತರು ನೆಟ್ಟರೆ ಒಂದು ವರ್ಷದಲ್ಲಿಇದು ಕಾಯಿ ಬಿಡಲಾರಂಭಿಸುತ್ತದೆ. ಇದರ ಜೊತೆಗೆ, ಈ ಬಾರಿಯ ಕೃಷಿ ಮೇಳದಲ್ಲಿ ಕೃಷಿ ಮೇಳಕ್ಕೆ ಹುಣಸೆಕಾಯಿ ಮಾದರಿಯಲ್ಲಿ'ಐಸ್‌ಕ್ರೀಂ ಬೀನ್ಸ್‌' ಹಣ್ಣು ಬಂದಿದೆ. ಇದು ಥೇಟ್‌ ಹುಣಸೆಕಾಯಿ ಆಕಾರದಲ್ಲಿದ್ದು, ಹಣ್ಣಿನ ಒಳಗಡೆ ಐಸ್‌ಕ್ರೀನಂತೆ ಸಿಹಿಯಾದ ತಿರುಳು ಇರುತ್ತದೆ. ಇದು ಕೂಡ ಹೇರಳ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಎಲ್ಲಾವರ್ಗದವರೂ ತಿನ್ನಬಹುದು. ಹುಣಸೆಕಾಯಿಯಂತೆ ಕಂಡರೂ ಇದು ತರಕಾರಿಯಲ್ಲ.

from India & World News in Kannada | VK Polls https://ift.tt/Bk2mLqY

ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರು ಪತ್ರ ನೀಡುವಂತೆ ವಿಧಾನಸೌಧ ಚಲೋ

ಬಗರ್‌ಹುಕುಂ ಸಾಗುವಳಿ ರೈತರ ಗೋಳು ಹೇಳತೀರದಾಗಿದ್ದು ಯಾವುದೇ ವಿದ್ಯೆ, ಕೌಶಲವಿಲ್ಲದೇ ಎರಡೊತ್ತಿನ ತುತ್ತಿಗಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಉಪಯೋಗವಿಲ್ಲದೆ ಬೀಳು ಬಿದ್ದಿದ್ದ ಅರಣ್ಯದಂಚಿನ ಭೂಮಿ ಸೇರಿದಂತೆ ಸರಕಾರಿ ಭೂಮಿಯನ್ನು ಹಗಲು ರಾತ್ರಿ ಬೆವರು ಸುರಿಸಿ, ಭೂಮಿ ಹಸನು ಮಾಡಿ, ಅದನ್ನು ಕೃಷಿಯೋಗ್ಯವನ್ನಾಗಿಸಿಕೊಂಡಿದ್ದಾರೆ. ಆದರೆ ಅಧಿಕಾರ ನಡೆಸಿದ ಎಲ್ಲಸರಕಾರಗಳೂ ಬಡರೈತರಿಗೆ ಭೂಮಿಯ ಮೇಲಿನ ಹಕ್ಕನ್ನು ದೊರಕಿಸಿಕೊಡಲು ಯಾವ ಕಾಳಜಿಯನ್ನೂ ವಹಿಸಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

from India & World News in Kannada | VK Polls https://ift.tt/iPJW3x4

Ricky Ponting: ಟಿ20 ವಿಶ್ವಕಪ್‌ ಫೈನಲ್‌ ತಲುಪುವ ನೆಚ್ಚಿನ ತಂಡಗಳನ್ನು ಹೆಸರಿಸಿದ ರಿಕಿ ಪಾಂಟಿಂಗ್‌!

ICC T20 World Cup 2022: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌, 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ತಲುಪುವ ಎರಡು ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಆತಿಥ್ಯದಲ್ಲೇ ನಡೆಯುತ್ತಿರುವ ಟೂರ್ನಿ ಸೂಪರ್-12 ಹಂತದ ಪಂದ್ಯಗಳು ಬಹುತೇಕ ಅಂತ್ಯಗೊಳ್ಳುವ ಹಂತದಲ್ಲಿದೆ. ಆದರೆ, ಈವರೆಗೆ ಯಾವುದೇ ತಂಡ ಅಧಿಕೃತವಾಗಿ ಸೆಮಿಫೈನಲ್ಸ್‌ಗೆ ಕಾಲಿಟ್ಟಿಲ್ಲ. ಆದರೆ, ಈಗಾಗಗಲೇ ಫೈನಲ್‌ ಬಗ್ಗೆ ಆಲೋಚಿಸಿರುವ ಪಂಟರ್‌, ತಮ್ಮ ಆಯ್ಕೆಯ ಎರಡು ತಂಡಗಳನ್ನು ಹೆಸರಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/cwL4RHQ

PAK vs SA: ದ. ಆಫ್ರಿಕಾ ವಿರುದ್ಧ ಗೆದ್ದ ಪಾಕ್‌ ಸೆಮಿಫೈನಲ್ಸ್‌ ಆಸೆ ಬಲಪಡಿಸಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ

ICC T20 World Cup 2022 Semifinals Qualification Scenarios: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸೂಪರ್‌-12 ಹಂತದ ಬಹುಪಾಲು ಪಂದ್ಯಗಳು ಮುಗಿದಿದ್ದರೂ ಕೂಡ ಈವರೆಗೆ ಸೆಮಿಫೈನಲ್‌ ಹಂತಕ್ಕೆ ಒಂದು ತಂಡವೂ ಕೂಡ ಅಧಿಕೃತವಾಗಿ ಕಾಲಿಟ್ಟಿಲ್ಲ. ಟೀಮ್ ಇಂಡಿಯಾ 'ಬಿ' ಗುಂಪಿನಲ್ಲಿ ಪೈಪೋಟಿ ನಡೆಸುತ್ತಿದೆ. ಸದ್ಯಕ್ಕೆ ಅಗ್ರಸ್ಥಾನದಲ್ಲಿದ್ದರೂ ಅಂತಿಮ ನಾಲ್ಕರ ಘಟಕ್ಕೆ ಅರ್ಹತೆ ಸಿಕ್ಕಿಲ್ಲ. ಈಗಲೂ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುತ್ತಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/cSaAV6v

ಬಾಣಂತಿ ಜತೆ ಅವಳಿ ಶಿಶು ಸಾವು: ಆಧಾರ್, ತಾಯಿಕಾರ್ಡ್ ಇಲ್ಲವೆಂದು ಚಿಕಿತ್ಸೆ ನಿರಾಕರಿಸಿದರೇ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು?

ಬಾಣಂತಿ ಮತ್ತು ನವಜಾತ ಅವಳಿ ಶಿಶುಗಳು ಮೃತ ಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು ಜಿಲ್ಲಾಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ದುರ್ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆ ವೈದ್ಯರು ಹೆರಿಗೆ ಮಾಡಲು ನಿರಾಕರಿಸಿ ಹಿಂದಕ್ಕೆ ಕಳುಹಿಸಿ ಅಮಾನವೀಯವಾಗಿ ವರ್ತಿಸಿದ್ದಾರೆಂದು ಹೇಳಲಾಗಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಗುರುವಾರ ರಾತ್ರಿ ಆರೋಗ್ಯ ಸಚಿವ ಡಾ.ಸುಧಾಕರ್ ತುಮಕೂರು ಜಿಲ್ಲಾಸ್ಪತ್ರೆಗೆ ತೆರಳಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡದಿದ್ದಾರೆ.

from India & World News in Kannada | VK Polls https://ift.tt/xXWqwb7

Gold Rate Today | ಗುರುವಾರದಂದು ಚಿನ್ನ ಖರೀದಿಸಲು ನಿರ್ಧರಿಸಿದವರಿಗೆ ಶಾಕ್! ಬಂಗಾರದ ಬೆಲೆಯಲ್ಲಿ ಏರಿಕೆ

gold and silver rates today: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಇಂದು ಗುರುವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

from India & World News in Kannada | VK Polls https://ift.tt/ksV6L0p

ಮೈಸೂರಿನ ಈ ಮಹಲ್‌ಗೆ 'ವಸಂತ' ಯಾವಾಗ?: ನಿರ್ವಹಣೆ ಇಲ್ಲದೆ ನಲುಗಿದ 180 ವರ್ಷದ ಅರಮನೆ ಪಾರಂಪರಿಕ ಕಟ್ಟಡ

ಕಟ್ಟಡ ಹಿಂಭಾಗ ಸಂಪೂರ್ಣ ಶಿಥಿಲಗೊಂಡಿದೆ. ಜತೆಗೆ ಕೆಲ ಕೊಠಡಿಗಳ ಮೂಲೆಗಳಲ್ಲಿ ನೀರು ಸೋರಿಕೆಯಾಗಿ ಮಡ್ಡಿ ಹಾಗೂ ಬಣ್ಣ ಹಾಳಾಗಿದೆ. ಇನ್ನೂ ಮೊದಲ ಅಂತಸ್ತಿನ ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ವಿಶೇಷ ವಾಸ್ತುಶಿಲ್ಪ ಹೊಂದಿರುವ ಕಟ್ಟಡದ ಮೆಟ್ಟಿಲುಗಳು ಮುರಿದು ದುಸ್ಥಿತಿ ತಲುಪಿವೆ. ಜತೆಗೆ ನೆಲ ಅಂತಸ್ತಿನ ಮೂರು ಕೊಠಡಿಗಳ ಗೋಡೆ ಬಿರುಕುಬಿಟ್ಟು, ಚಾವಣಿ ಕುಸಿಯುವ ಆತಂಕ ಇರುವುದರಿಂದ ಬಳಕೆಯನ್ನು ನಿಲ್ಲಿಸಲಾಗಿದೆ. ತೀವ್ರ ದುಸ್ಥಿತಿಯಲ್ಲಿರುವ ಕಟ್ಟಡದ ದುರಸ್ತಿಗಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಅಂದಾಜು ಪಟ್ಟಿ ಸಿದ್ಧಪಡಿಸಲು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗಿತ್ತು.

from India & World News in Kannada | VK Polls https://ift.tt/DYlS8JU

55 ವರ್ಷಗಳಲ್ಲೇ ಗರಿಷ್ಠ ಚಿನ್ನ ಮಾರಾಟ: ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳಿಂದ 673 ಟನ್‌ ಬಂಗಾರ ಖರೀದಿ

ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) ಕೂಡ ತನ್ನ ಚಿನ್ನದ ಸಂಗ್ರಹವನ್ನು ಹೆಚ್ಚಿಸಿದೆ. ಕಳೆದ ಜುಲೈನಲ್ಲಿ 13 ಟನ್‌ ಮತ್ತು ಸೆಪ್ಟೆಂಬರ್‌ನಲ್ಲಿ 4 ಟನ್‌ ಚಿನ್ನವನ್ನು ಖರೀದಿಸಿದೆ. ಭಾರತದ ಚಿನ್ನದ ಸಂಗ್ರಹ 785 ಟನ್‌ಗೆ ತಲುಪಿದೆ. ಈ ಅವಧಿಯಲ್ಲಿ ಟರ್ಕಿಯ ಕೇಂದ್ರ ಬ್ಯಾಂಕ್‌ ಗರಿಷ್ಠ 31 ಟನ್‌ ಚಿನ್ನವನ್ನು ಖರೀದಿಸಿದೆ. ಇದರೊಂದಿಗೆ, ಅದರ ಚಿನ್ನದ ಮೀಸಲು 489 ಟನ್‌ ತಲುಪಿದೆ. ಇತ್ತೀಚೆಗೆ ಚಿನ್ನದ ಬೆಲೆ ಇಳಿಕೆಯಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್‌ ರಿಸರ್ವ್ ಬ್ಯಾಂಕ್‌ ಬಡ್ಡಿ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು, ಇದು ಚಿನ್ನದ ದರ ಇಳಿಕೆಗೆ ಮೂಲ ಕಾರಣ.

from India & World News in Kannada | VK Polls https://ift.tt/LBfkrW4

Namma Metro | ಮೆಟ್ರೋದಲ್ಲಿ ಶೀಘ್ರ ಮೊಬಿಲಿಟಿ ಕಾರ್ಡ್‌ ಜಾರಿ: ಫೆಡೆಕ್ಸ್ ನಿಂದ ಪರಿಶೀಲನೆಯಷ್ಟೇ ಬಾಕಿ

'ಒನ್‌ ನೇಷನ್‌ ಒನ್‌ ಕಾರ್ಡ್‌' ಘೋಷಣೆಯಂತೆ ಕೇಂದ್ರ ಸರಕಾರ ಜಾರಿಗೊಳಿಸಿದ 'ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌' ಯೋಜನೆ ಮೆಟ್ರೋದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಎನ್‌ಸಿಎಂಸಿ ಕಾರ್ಡ್‌ ಅನ್ನು ಕೇವಲ ನಮ್ಮ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಬಳಸಬಹುದಾಗಿದೆ. ಈ ಕಾರ್ಡ್‌ನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ. ದಿಲ್ಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲಿ ಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಚಾಲನೆ ನೀಡಲಾಗಿದೆ.

from India & World News in Kannada | VK Polls https://ift.tt/bCcHuep

IND vs BAN: ಬಾಂಗ್ಲಾ ವಿರುದ್ಧದ ಗೆಲುವಿನಲ್ಲಿ ಕನ್ನಡಿಗನ ಅಳಿಲು ಸೇವೆ, ಅಭಿಮಾನಿಗಳ ಮನಗೆದ್ದ ರಘು!

India vs Bangladesh Highlights: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಸ್‌ ಕಡೆಗೆ ದಾಪುಗಾಲಿಟ್ಟಿದೆ. ಸೂಪರ್‌-12 ಹಂತದಲ್ಲಿ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಡಿದ ತನ್ನ ನಾಲ್ಕನೇ ಪಂದ್ಯದಲ್ಲಿ ಅಪಾಯಕಾರಿ ಬಾಂಗ್ಲಾದೇಶ ವಿರುದ್ಧ 5 ರನ್‌ಗಳ ರೋಚಕ ಜಯ ದಾಖಲಿಸಿತು. ಅಂದಹಾಗೆ ಭಾರತ ತಂಡದ ಈ ಗೆಲುವಿನ ಹಿಂದೆ ಅಳಿಲು ಸೇವೆಯೊಂದಿಗೆ ಕನ್ನಡಿಗ ಹಾಗೂ ಟೀಮ್ ಇಮಡಿಯಾ ಸೈಡ್‌ ಆರ್ಮ್‌ ಬೌಲರ್‌ ರಘು ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pF6Wi9w

Inspector Nandish Death Case | ಇನ್‌ಸ್ಪೆಕ್ಟರ್‌ ನಂದೀಶ್‌ ಸಾವಿನ ಪ್ರಕರಣ: ಗೃಹ ಸಚಿವ, ಕಮಿಷನರ್‌ ವಿರುದ್ಧ ದೂರು

KR Puram police station: ಪಿಐ ನಂದೀಶ್‌ (Inspector Nandish) ಅವರು ಹೃದಯಾಘಾತದಿಂದ ಸಾವನ್ನಪ್ಪಲು ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಭೈರತಿ ಬಸವರಾಜು ಅವರ ಸಂಬಂಧಿಕರಾದ ಗಣೇಶ್‌, ಚಂದ್ರು, ನಗರ ಪೊಲೀಸ್‌ ಆಯುಕ್ತ ಸಿ.ಎಚ್‌. ಪ್ರತಾಪ್‌ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಆರೋಪಿಸಿದ್ದಾರೆ. ನಂದೀಶ್‌ ಸಾವಿಗೆ ಪರೋಕ್ಷವಾಗಿ ಕಾರಣರಾದ ಸಚಿವರು, ಕಮಿಷನರ್‌, ಎಸಿಪಿ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆ.ಆರ್‌.ಪುರ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.

from India & World News in Kannada | VK Polls https://ift.tt/cHsDZE3

Manne village | ಕೆಂಪೇಗೌಡರ ಮೃತ್ತಿಕೆ ಸಂಗ್ರಹ ರಥಯಾತ್ರೆ: ಗಂಗರ ನಾಡು ಮಣ್ಣೆಯ ಮಣ್ಣು ಸಂಗ್ರಹ

Sacred Mud Collection: ನಾಡಿನ ಹೆಮ್ಮೆಯ ಸಂಕೇತವಾದ ನಾಡಪ್ರಭುವಿನ ಪ್ರತಿಮೆ ನಿರ್ಮಾಣಕ್ಕೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಮೃತ್ತಿಕೆ ಸಂಗ್ರಹ ಅಭಿಯಾನದ ರಥ ಯಾತ್ರೆಗೆ ಪ್ರತಿ ಗ್ರಾಮಗಳಲ್ಲಿಯೂ ಮಾವಿನ ತೋರಣ ಹಾಗು ಬಾಳೆಕಂದುಗಳನ್ನು ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಿದ್ದರು. ರಥವನ್ನು ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹಾಗೂ ಮಂಗಳ ವಾದ್ಯದೊಂದಿಗೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಗ್ರಾಮದ ಯುವ ಸಮುದಾಯ ರಥದ ಮುಂಭಾಗದಲ್ಲಿನೃತ್ಯ ಮಾಡುವ ಮೂಲಕ ಕೆಂಪೇಗೌಡರಿಗೆ ಜೈಕಾರ ಹಾಕಿದರು.

from India & World News in Kannada | VK Polls https://ift.tt/6KzZebE

ಬೆಂಗಳೂರು ವಿವಿಯಲ್ಲಿ ಕನ್ನಡ ಭಾಷೆಗೆ ಬೇಡಿಕೆ: ಐದು ವರ್ಷಗಳಲ್ಲಿ 411 ವಿದ್ಯಾರ್ಥಿಗಳ ವ್ಯಾಸಂಗ

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಸಿದ್ಧತೆ ನಡೆಸುತ್ತಿದ್ದಾರೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಮತ್ತು ಐಚ್ಛಿಕ ಕನ್ನಡ ಭಾಷೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ, ಭಾಷೆ ಕುರಿತಾಗಿಯೇ ಹೆಚ್ಚಿನ ಪ್ರಶ್ನೆಗಳು ಇರುತ್ತವೆ. ಅಲ್ಲದೆ, ಸಾಮಾನ್ಯ ಜ್ಞಾನದ ರೀತಿಯಲ್ಲಿ ಸಾಮಾನ್ಯ ಕನ್ನಡ ಎಂಬ ಪ್ರತ್ಯೇಕ ಪತ್ರಿಕೆಯೇ ಇರುತ್ತದೆ. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆ ಆಯ್ದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.

from India & World News in Kannada | VK Polls https://ift.tt/NHCvckD

ಕೇರಳದಲ್ಲಿ 31,256 ಮಂದಿ ಅರಣ್ಯದಲ್ಲೇ ಜೀವನ: ಪುರಾತನ ಜೀವನಶೈಲಿಯಲ್ಲೇ ಬದುಕುತ್ತಿವೆ ಸಾವಿರಾರು ಕುಟುಂಬ

ವಯನಾಡು ವನ್ಯಜೀವಿ ಧಾಮದ ರಕ್ಷಿತಾರಣ್ಯದಲ್ಲೇ 11,433 ಮಂದಿ ವಾಸವಿದ್ದಾರೆ. ಇಡುಕ್ಕಿ ಡಿವಿಜನ್‌ನಲ್ಲಿ 2,400 ಮಂದಿ, ಕೊಲ್ಲಂ ಸತೇನ್‌ ಸರ್ಕಲ್‌ ಸಹಿತ ತಿರುವನಂತಪುರದಲ್ಲಿ 5,247 ಮಂದಿ ಕುಟುಂಬ ಸಮೇತ ವಾಸವಿದ್ದಾರೆ. ರಾಣಿಯಲ್ಲಿ 1,063 ಮಂದಿ, ಮುನ್ನಾರ್‌ನಲ್ಲಿ 1,110 ಮಂದಿ, ಮರಯೂರಿನಲ್ಲಿ 582 ಮಂದಿ, ಮಲಯಾಟೂರ್‌ನಲ್ಲಿ 898 ಮಂದಿ, ಮಣ್ಣಾರ್‌ಕ್ಕಾಡ್‌ನಲ್ಲಿ 998 ಮಂದಿ, ನಿಲಂಬೂರಿನಲ್ಲಿ 432 ಮಂದಿ, ಕಣ್ಣೂರು ನಾರ್ತನ್‌ ಸರ್ಕಲ್‌ನಲ್ಲಿ 1345 ಮಂದಿ ಕಾಡಿನೊಳಗೆ ವಾಸವಿದ್ದಾರೆ.

from India & World News in Kannada | VK Polls https://ift.tt/qJdxYH3

ನಾನೇಕೆ ರಾಜೀನಾಮೆ ನೀಡಲಿ?: ಕಾಂಗ್ರೆಸ್‌ ಆರೋಪಕ್ಕೆ ಸಚಿವ ಎಂಟಿಬಿ ನಾಗರಾಜ್‌ ಪ್ರಶ್ನೆ

ನಂದೀಶ್‌ ಮೃತಪಟ್ಟಿರುವ ಮಾಹಿತಿ ತಿಳಿದು ನೋಡಲು ಹೋಗುತ್ತಿದ್ದೆ. ಆ ಸಂದರ್ಭದಲ್ಲಿಯಾಕೆ? ಏನಾಯಿತು ಎಂದು ಕೇಳಿದಕ್ಕೆ, 60-70 ಲಕ್ಷ ರೂಪಾಯಿ ವೆಚ್ಚ ಮಾಡಿ ಒತ್ತಡದಲ್ಲಿದ್ದರು. ಅದ್ದರಿಂದ ಹೃದಯಘಾತವಾಗಿದೆ ಎಂದು ಜತೆಗಿದ್ದ ಪೊಲೀಸರು ತಿಳಿಸಿದರು. ಇದರಿಂದ ಅಷ್ಟೊಂದು ದುಡ್ಡು ವೆಚ್ಚ ಮಾಡಿ ಇಲ್ಲಿಗೆ ಯಾಕೆ ಬರಬೇಕಿತ್ತು ಎಂದು ಹೇಳಿದೆ ಅಷ್ಟೇ. ಇದಕ್ಕೆ ವಿರೋಧ ಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆ. ನಾನು ಯಾಕೆ ರಾಜಕೀನಾಮೆ ನೀಡಲಿ ಎಂದು ಗುಡುಗಿದ್ದಾರೆ ಸಚಿವ ಎಂಟಿಬಿ ನಾಗರಾಜ್.

from India & World News in Kannada | VK Polls https://ift.tt/U9encia

ಸಂಪುಟ ವಿಸ್ತರಣೆ ಬಗ್ಗೆ ಸಿಎಂಗೆ ಆಸಕ್ತಿಯಿಲ್ಲ, 6 ತಿಂಗಳು ಆರಾಮವಾಗಿ ಕಳೆಯಬೇಕೆಂದಿದ್ದಾರೆ: ಯತ್ನಾಳ್ ಟೀಕೆ

ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆಯನ್ನು ನಾನು ಹೊಂದಿಲ್ಲ. ಏಕೆಂದರೆ ಬೊಮ್ಮಾಯಿ ಅವರಿಗೂ ವೈಯಕ್ತಿಕವಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಆಸಕ್ತಿಯಿಲ್ಲ. ಅಸಮಾಧಾನ ಮತ್ತು ಭಿನ್ನಮತದ ಸಹವಾಸವೇ ಬೇಡ. ಮುಂದಿನ ಆರು ತಿಂಗಳನ್ನು ಆರಾಮವಾಗಿ ಕಳೆಯಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅವರ ಯೋಚನೆಯಂತೆಯೇ ಆಗಲಿ. ಆದರೆ ವಿಜಯಪುರ ಜಿಲ್ಲೆಗೆ ಒಳ್ಳೆಯ ಉಸ್ತುವಾರಿ ಸಚಿವರನ್ನು ನೀಡಿ ಎಂದು ಅವರಲ್ಲಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ ವಿಜಯಪುರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್.

from India & World News in Kannada | VK Polls https://ift.tt/LIBNjCG

ಬಾಗೇಪಲ್ಲಿಗೆ ಭಾಗ್ಯನಗರವಾಗಿ ಮರುನಾಮಕರಣ: ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಘೋಷಣೆ

Bagepalli to rename as Bhagyanagara: ಈಗಾಗಲೇ ಭಾಗ್ಯನಗರವನ್ನಾಗಿ ಮರು ನಾಮಕರಣಗೊಳಿಸುವಂತೆ ಕನ್ನಡ ಸಂಘಟನೆಗಳ ಒತ್ತಾಯ ಮೇರೆಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದು ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಆದಷ್ಟು ಬೇಗ ಭಾಗ್ಯನಗರವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ. ಆಂಧ್ರ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ತೆಲುಗು ಭಾಷೆ ಹೆಚ್ಚಾಗಿ ಆಡು ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ.

from India & World News in Kannada | VK Polls https://ift.tt/iG83fVv

IND vs BAN: ಭಾರತ-ಬಾಂಗ್ಲಾ ಪಂದ್ಯ ಮಳೆಯಲ್ಲಿ ಕೊಚ್ಚಿಹೋದರೆ ಸೆಮಿಫೈನಲ್ಸ್‌ ಲೆಕ್ಕಾಚಾರವೇನು?

India vs Bangladesh In ICC T20 World Cup 2022: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೂಪರ್‌-12 ಹಂತದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಸೆಮಿಫೈನಲ್ಸ್‌ ಹಂತಕ್ಕೇರುವ ತಂಡಗಳು ಯಾವುವು? ಎಂದು ಭಾರಿ ಕುತೂಹಲ ಕೆರಳಿದೆ. 'ಬಿ' ಗುಂಪಿನಲ್ಲಿ ಫೇವರಿಟ್‌ ಆಡಿದ್ದ ಟೀಮ್ ಇಂಡಿಯಾ ತನ್ನ 3ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿ, ಈಗ ತನ್ನ ಪಾಲಿನ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/If7EG0a

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...