Leopard Attack: ರಾಮನಗರದಲ್ಲಿ ಯುವಕನ ಮೇಲೆ ಚಿರತೆ ದಾಳಿ, ಗಂಭೀರ ಗಾಯ

ಯುವಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಯುವಕ ಗಂಭೀರ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಜೈಪುರ ಗೇಟ್ ಬಳಿ ನಡೆದಿದೆ. ಯುವಕ ಜೈಪುರದಿಂದ ರಾಮನಗರಕ್ಕೆ ಬರುತ್ತಿರುವಾಗ ಬುಧವಾರ ಈ ಘಟನೆ ನಡೆದಿದೆ. ದಿಲೀಪ್ ಕುಮಾರ್ ಎಂಬಾತ ಚಿರತೆ ದಾಳಿಗೆ ಒಳಗಾದ ಯುವಕ. ಈತ ರಾಮನಗರ ತಾಲೂಕಿನ ಜೈಪುರ ನಿವಾಸಿಯಾಗಿದ್ದು, ಬೆಳಗಿನ ಜಾವ ಬೈಕ್ ನಲ್ಲಿ ಬರುವಾಗ ಚಿರತೆ ದಾಳಿ ನಡೆಸಿದೆ. ದಿಲೀಪ್ ಮುಖ ಹಾಗೂ ಕೈ ಗೆ ಗಾಯವಾಗಿದ್ದು, ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

from India & World News in Kannada | VK Polls https://ift.tt/M9Awanh

ಸುಳ್ಯದಲ್ಲಿ ಹಿಂದೂ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಸ್ಲಿಂ ವಿದ್ಯಾರ್ಥಿಗೆ ಥಳಿತ; ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್

ಹಿಂದೂ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಸ್ಲಿಂ ವಿದ್ಯಾರ್ಥಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಹಿಗ್ಗಾಮುಗ್ಗ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದ್ದು, ಘಟನೆ ಸಂಬಂಧ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ

from India & World News in Kannada | VK Polls https://ift.tt/In09Ue3

Hubballi Eidgah Maidan: ಬಿಗಿ ಭದ್ರತೆ ನಡುವೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ

ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ ಕೆಲವೇ ಗಂಟೆಗಳ ನಂತರ, ಇತಿಹಾಸದಲ್ಲಿ ಮೊದಲ ಬಾರಿಗೆ ಬುಧವಾರ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಗಳು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿದ ಮರುದಿನವೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬುಧವಾರ ಬೆಳಗ್ಗೆ ಹಿಂದೂ ಮುಖಂಡರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿದ ಕೆಲವೇ ಗಂಟೆಗಳ ನಂತರ, ಹಿಂದೂ ಸಂಘಟನೆಗಳು ಮೈದಾನದಲ್ಲಿ ಪೆಂಡಾಲ್ ನಿರ್ಮಿಸಿ ಗಣೇಶ ಮೂರ್ತಿಯನ್ನು ಸ್ಥಾಪಿಸಿದ್ರು.

from India & World News in Kannada | VK Polls https://ift.tt/USBTLzq

HD Kumaraswamy | ಮಳೆ ನಿಂತ ಮೇಲೆ ಜೆಡಿಎಸ್‌ 'ಪಂಚರತ್ನ ರಥಯಾತ್ರೆ' ಆರಂಭ: ಎಚ್.ಡಿ.ಕುಮಾರಸ್ವಾಮಿ

ಮಳೆ ನಿಂತ ಮೇಲೆ ಸರಿಯಾದ ಮೂಹೂರ್ತ ನಿಗದಿ ಮಾಡಿ ಪಂಚರತ್ನ ಕಾರ್ಯಕ್ರಮ ಪ್ರಾರಂಭ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ಮುಂದಿನ ತಿಂಗಳು ಪಿತೃಪಕ್ಷ, ದಸರಾ ಇದೆ. ಒಮ್ಮೆ ಪ್ರಾರಂಭ ಮಾಡಿದರೆ 120-130 ಕ್ಷೇತ್ರಗಳಲ್ಲಿ ಯಾತ್ರೆ ಮಾಡುತ್ತೇವೆ.‌ ಹೀಗಾಗಿ ಸರಿಯಾದ ಸಮಯ ನೋಡಿಕೊಂಡು ಪ್ರಾರಂಭಿಸುವುದಾಗಿ ಹೇಳಿದ ಅವರು, ಪ್ರವಾಸದ ವೇಳೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಅಲ್ಲದೆ ಗ್ರಾಮ ವಾಸ್ತವ್ಯದಲ್ಲಿ 14-15 ಕಾರ್ಯಕ್ರಮಗಳು ಇರಲಿವೆ ಎಂದರು.

from India & World News in Kannada | VK Polls https://ift.tt/ZY7VcdL

Virat Kohli: ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ, ಹಿಟ್‌ಮ್ಯಾನ್‌ ದಾಖಲೆ ಸರಿಸಮ!

India vs Hong Kong Asia Cup Match Highlights: ನಿರೀಕ್ಷೆರಯಂತೇ ವಿರಾಟ್‌ ಕೊಹ್ಲಿ ತಮ್ಮ ಶ್ರೇಷ್ಠ ಲಯಕ್ಕೆ ಮರಳಿದ್ದಾರೆ. ಏಷ್ಯಾ ಕಪ್‌ ಟೂರ್ನಿಯಲ್ಲಿ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಕ್ರಿಕೆಟ್‌ ಕೂಸು ಹಾಂಕಾಂಗ್‌ ಎದುರು ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಟೀಮ್ ಇಂಡಿಯಾ ಪರ ಆಸರೆಯಾಗಿ ನಿಂತ ವಿರಾಟ್‌ ಕೊಹ್ಲಿ, ಅಜೇಯ 59 ರನ್‌ ಗಳಿಸಿದರು. ಇದರಲ್ಲಿ 3 ಸಿಕ್ಸರ್‌ಗಳು ಮೂಡಿಬಂದಿದ್ದು ವಿಶೇಷ. ಅಂದಹಾಗೆ ಟಿ20-ಐ ಕ್ರಿಕೆಟ್‌ನಲ್ಲಿ ವಿರಾಟ್‌ ಬಾರಿಸಿದ 31ನೇ ಅರ್ದಶತಕವಾಗಿದೆ. ಈ ಮೂಲಕ ರೋಹಿತ್‌ ಸಾಖಲೆ ಸರಿಗಟ್ಟಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/hN10TWr

PM Modi in Mangaluru: ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಕೆಎಸ್‌ಆರ್‌ಟಿಸಿ ಬಸ್‌ ಕಾರ್ಯಾಚರಣೆಯಲ್ಲಿ ವ್ಯತ್ಯಯ, ಸಂಚಾರ ಮಾರ್ಗಗಳಲ್ಲಿ ಬದಲಾವಣೆ

KSRTC bus shortage: ಮಂಗಳೂರು ತಾಲೂಕು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು, ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಭಟ್ಕಳ ವ್ಯಾಪ್ತಿಯಲ್ಲಿ ನಿಗಮದ ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹಕರಿಸುವಂತೆ ಕೋರಲಾಗಿದೆ. ನವ ಮಂಗಳೂರು ಬಂದರು ಪ್ರಾಧಿಕಾರದ 3800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಹಲವು ಮಾರ್ಗಗಳಲ್ಲಿ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

from India & World News in Kannada | VK Polls https://ift.tt/Yx3UTik

ಡ್ರಂಕ್ ಆ್ಯಂಡ್‌ ಡ್ರೈವ್‌ ಪತ್ತೆಗೆ ಆಲ್ಕೋ ಸ್ಕ್ಯಾನ್ ವ್ಯಾನ್: ಮದ್ಯ ಪ್ರಿಯರನ್ನು ಬಲೆಗೆ ಬೀಳಿಸಲು ಕೇರಳ ಪೊಲೀಸರ ಹೊಸ ಯೋಜನೆ

ಮದ್ಯ ಸೇವಿಸಿ ವಾಹನ ಚಾಲಾಯಿಸುವವರನ್ನು ಸೆರೆ ಹಿಡಿಯಲು ಕೇರಳ ಪೊಲೀಸರು ಆಲ್ಕೋ ಸ್ಕ್ಯಾನ್‌ ವ್ಯಾನ್‌ ಎಂಬ ಹೊಸ ವ್ಯವಸ್ಥೆ ಸಜ್ಜುಗೊಳಿಸಿದ್ದಾರೆ. ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಸೆರೆ ಹಿಡಿಯುವುದಲ್ಲದೆ, ಅಪಘಾತಗಳನ್ನು ತಡೆಯುವ ಗುರಿಯೊಂದಿಗೆ ಈ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ವಿದೇಶಗಳಲ್ಲಿ ಬಳಕೆಯಾಗುವ ಈ ವಾಹನವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ತಲುಪಿಸುವ ಯೋಜನೆ ರೂಪಿಸಲಾಗಿದೆ. ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ತಕ್ಷಣ ಸೆರೆಹಿಡಿಯಲು ಆಲ್ಕೋ ಸ್ಕ್ಯಾನ್‌ ವ್ಯಾನ್‌ ಪೊಲೀಸರಿಗೆ ಸಹಾಯ ಮಾಡಲಿದೆ. ವೈದ್ಯಕೀಯ ಪರೀಕ್ಷೆಗಳನ್ನು ಈ ವ್ಯಾನ್‌ನಲ್ಲೇ ತ್ವರಿತವಾಗಿ ಮಾಡಬಹುದಾಗಿದೆ.

from India & World News in Kannada | VK Polls https://ift.tt/6ZH1xLi

Kshemavana | ಸೆ.1ರಂದು ನೆಲಮಂಗಲಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌: ಧರ್ಮಸ್ಥಳದ ಕ್ಷೇಮವನ ಉದ್ಘಾಟನೆ

CM yogi adityanath to Nelamangala: ಮಹದೇವಪುರ ಗ್ರಾಮದ ಸಮೀಪ 20 ಎಕರೆಯಲ್ಲಿ 93 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಷೇಮವನ ಬೆಂಗಳೂರು ಹಾಗೂ ಸುತ್ತಮುತ್ತಲ ಹತ್ತಾರು ಜಿಲ್ಲೆಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಅನುಕೂಲವಾಗಲಿದೆ. ಇಂತಹ ವಿಶೇಷತೆ ಹೊಂದಿರುವ ಕ್ಷೇಮವನ ಸೆ. 1ರಂದು ಉದ್ಘಾಟನೆಯಾಗುತ್ತಿದ್ದು, ಕಾರ್ಯಕ್ರಮದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.

from India & World News in Kannada | VK Polls https://ift.tt/sUFedC0

ರಾಜ್ಯದಲ್ಲಿ ಮಳೆಯಿಂದ 7,647 ಕೋಟಿ ರೂ. ನಷ್ಟ: ಕೇಂದ್ರದಿಂದ 1,012 ಕೋಟಿ ರೂ. ನೆರವಿಗೆ ಮೊರೆ-ಆರ್‌.ಅಶೋಕ್‌

Karnataka Rains: ‘‘ರಾಜ್ಯದಲ್ಲಿ 27 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಮನಗರ, ಮಂಡ್ಯ ಮತ್ತು ಚಾಮರಾಜನಗರದಲ್ಲಿ ವರುಣಾಘಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ದಿನಗಳ ಈ ಮೂರು ಜಿಲ್ಲೆಗಳಲ್ಲಿ ಮಳೆ ಅವಾಂತರದಿಂದ 20 ಹಳ್ಳಿಗಳ 3,000ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ. 7 ಕಾಳಜಿ ಕೇಂದ್ರಗಳನ್ನು ಆರಂಭಿಸಿ, ಒಟ್ಟು 875 ಜನರನ್ನು ಸ್ಥಳಾಂತರಿಸಲಾಗಿದೆ,’’ ಎಂದು ಆರ್‌.ಅಶೋಕ್‌ ಹೇಳಿದರು.

from India & World News in Kannada | VK Polls https://ift.tt/YdvqNSy

Mysuru dasara | ಗಜಪಡೆಗೆ ಬುಧವಾರ ವಿಶೇಷ ಪೂಜೆ: ಗಣೇಶ ಹಬ್ಬದ ಅಂಗವಾಗಿ ತಾಲೀಮಿಗೆ ವಿರಾಮ

Jamboo savari: ಅರಮನೆ ಆವರಣದಲ್ಲಿನ ಶ್ರೀ ಕೋಡಿ ಸೋಮೇಶ್ವರ ದೇಗುಲ ಬಳಿ ಮೊದಲ ತಂಡದ 9 ಆನೆಗಳಿಗೆ ಬುಧವಾರ ಬೆಳಗ್ಗೆ 11ಕ್ಕೆ ಡಿಸಿಎಫ್‌ ಡಾ.ವಿ.ಕರಿಕಾಳನ್‌, ಅರ್ಚಕ ಎಸ್‌.ವಿ.ಪ್ರಹ್ಲಾದ್‌ರಾವ್‌ ಮತ್ತಿತರರು ಪೂಜೆ ನೆರವೇರಿಸುವರು. ಮುಂಜಾನೆಯಿಂದಲೇ ಆಯಾ ಆನೆಗಳ ಮಾವುತ, ಕಾವಾಡಿಗಳು ಗಜಗಳಿಗೆ ಸ್ನಾನ ಮಾಡಿಸಿ, ಹೂವು, ನಾನಾ ಆಭರಣಗಳೊಂದಿಗೆ ಅಲಂಕಾರ ಮಾಡಲಾಗುತ್ತದೆ.

from India & World News in Kannada | VK Polls https://ift.tt/dDJtbB2

ಹುಬ್ಬಳಿ-ಧಾರವಾಡ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಇಲ್ಲ ಅಡ್ಡಿ: ಪಾಲಿಕೆ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

Hubbali-Dharwad Idgah maidan: ಹುಬ್ಬಳ್ಳಿ-ಧಾರವಾಡದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಸರಕಾರ ಅವಕಾಶ ನೀಡಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಮಂಗಳವಾರ ರಾತ್ರಿ 10ಗಂಟೆಗೆ ಅರ್ಜಿಯ ವಿಚಾರಣೆ ನಡೆಯಿತು. ಬೆಂಗಳೂರಿನ ಚಾಮರಾಜಪೇಟೆ ಈಡ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಇಂದು ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್‌, ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.

from India & World News in Kannada | VK Polls https://ift.tt/LhnIVbc

Asia Cup 2022: ಮುಜೀಬ್‌ ಸ್ಪಿನ್‌ ಮೋಡಿಗೆ ಬಾಂಗ್ಲಾದೇಶ ತತ್ತರ: ಸೂಪರ್‌ 4ಕ್ಕೆ ಅಫಘಾನಿಸ್ತಾನ!

BAN vs AFG Match Highlights: ಮುಜೀಬ್‌ ಉರ್‌ ರೆಹಮಾನ್‌(16ಕ್ಕೆ 3) ಅವರ ಸ್ಪಿನ್‌ ಮೋಡಿಗೆ ನಲುಗಿದ ಬಾಂಗ್ಲಾದೇಶ ತಂಡ, 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧ 7 ವಿಕೆಟ್‌ ಸೋಲಿನ ಮುಖಭಂಗ ಅನುಭವಿಸಿತು. ಮೊಸಡೆಕ್‌ ಹುಸೇನ್ ಅಜೇಯ 48 ರನ್‌ ಹಳಿಸಿದ್ದು ಬಿಟ್ಟರೆ ಬಾಂಗ್ಲಾ ಅಗ್ರ ಕ್ರಮಾಂಕದಲ್ಲಿ ನಾಯಕ ಶಕಿಬ್‌ ಅಲ್‌ ಹಸನ್ ಸೇರಿದಂತೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ನಂತರ 128 ರನ್‌ ಗುರಿ ಹಿಂಬಾಲಿಸಿದ ಅಫಘಾನಿಸ್ಥಾನ ತಂಡ 18.3 ಓವರ್‌ಗಳಿಗೆ ಕೇವಲ 3 ವಿಕೆಟ್‌ ಕಳೆದುಕೊಂಡು 131 ರನ್‌ ಗಳಿಸಿ ಗೆಲುವಿನ ದಡ ಸೇರಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7CDS6su

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿಲ್ಲ: ಪ್ರತಾಪ್ ಸಿಂಹ

Bengaluru-Mysuru Highway: ಮಂಡ್ಯ, ರಾಮನಗರದಲ್ಲಿ ಇಷ್ಟು ಪ್ರಮಾಣದಲ್ಲಿ ಇತ್ತೀಚೆಗೆ ಮಳೆಯಾಗಿರಲಿಲ್ಲ. ಕಳೆದ ತಿಂಗಳು ರಾಮನಗರ ಪ್ರವೇಶದ ಬಳಿ ಬಂದ್‌ ಆಯಿತು. ಮೇಲಿನಿಂದ ಮೂರು ಕೆರೆ ಒಡೆ ದಿದ್ದೆ ಇದಕ್ಕೆ ಕಾರಣ. ಅಲ್ಲಿ ಬ್ರಿಡ್ಜ್‌ ಸಮಸ್ಯೆ ಇರಲಿಲ್ಲ. ನಿರ್ಮಾಣ ಹಂತದಲ್ಲಿರುವ ಎಲ್ಲಾ ರಸ್ತೆಗಳಲ್ಲಿಯೂ ಈ ರೀತಿ ಸಮಸ್ಯೆಗಳು ಸಾಮಾನ್ಯ. ಅದನ್ನು ಸರಿಪಡಿಸುವುದು ಕಾಮಗಾರಿ ಜವಾಬ್ದಾರಿ ಹೊತ್ತ ಏಜೆನ್ಸಿಯದ್ದಾಗಿದೆ. ಅವರಿಂದ ಆ ಕೆಲಸ ಮಾಡಿಸುತ್ತೇವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

from India & World News in Kannada | VK Polls https://ift.tt/FepcX20

ಗೌರಿಗಣೇಶ ಹಬ್ಬ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಬಳಕೆ ಕಡ್ಡಾಯ: ಆರೋಗ್ಯ ಇಲಾಖೆ ಸುತ್ತೋಲೆ

ಈ ಬಾರಿಯ ಗಣೇಶ ಹಬ್ಬದ ಸಂದರ್ಭದಲ್ಲಿ ಉತ್ಸವ, ಮೂರ್ತಿ ಪ್ರತಿಷ್ಠಾಪನೆಯನ್ನು ಹೊರಾಂಗಣ ಪ್ರದೇಶದಲ್ಲಿ ಆಯೋಜಿಸಲು ಪ್ರೋತ್ಸಾಹಿಸಬೇಕು. ಸ್ಥಳದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ಒಂದು ಮೀಟರ್‌ ಅಂತರ, ಮಾಸ್ಕ್‌ ಧರಿಸುವುದಕ್ಕೆ ಸೂಚಿಸಬೇಕು. ಸೋಂಕು ಲಕ್ಷಣ ಉಳ್ಳವರು ಉತ್ಸವಗಳಿಂದ ಅಂತರ ಕಾಯ್ದುಕೊಳ್ಳುವಂತೆ ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

from India & World News in Kannada | VK Polls https://ift.tt/kufCArI

Nandini milk | ಹಾಲು ಲೀಟರ್‌ಗೆ 3 ರೂ. ಹೆಚ್ಚಳಕ್ಕೆ ಸರಕಾರಕ್ಕೆ ಕೆಎಂಎಫ್‌ ಪ್ರಸ್ತಾವನೆ: 'ಸಿಎಂ ಸಕಾರಾತ್ಮಕ ಸ್ಪಂದನೆ'

KMF: ‘‘ರಾಜ್ಯದಲ್ಲಿ ದಿನಕ್ಕೆ 40 ಲಕ್ಷ ಲೀಟರ್‌ ಪ್ಯಾಕೆಟ್‌ ಹಾಲು ಮಾರಾಟವಾಗುತ್ತಿದೆ. ಹೈನೋದ್ಯಮ ನಿರ್ವಹಣೆ ಮತ್ತು ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಿದೆ. ಹೀಗಾಗಿ, ಹಾಲು ಮಾರಾಟ ದರ ಹೆಚ್ಚಿಸಿದರೆ ಹೈನೋದ್ಯಮಕ್ಕೆ ಅನುಕೂಲವಾಗುತ್ತದೆ. ಹಸು ಸಾಕಣೆಗೆ ರೈತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹಾಲಿನ ದರ ಹೆಚ್ಚಿಸಿದರೆ ಅದರ ಲಾಭವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸುತ್ತೇವೆ’’ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಹೇಳಿದರು.

from India & World News in Kannada | VK Polls https://ift.tt/dOh6Uaz

Asia Cup 2022: ಟಿ20 ಕ್ರಿಕೆಟ್‌ಗೆ ರಿಷಭ್‌ ಪಂತ್‌ ಲಾಯಕ್ಕಿಲ್ಲ ಎಂದ ಹರ್ಭಜನ್‌ ಸಿಂಗ್‌!

Harbhajan Singh on Rishabh pant: ಪಾಕಿಸ್ತಾನ ವಿರುದ್ಧ 2022ರ ಏಷ್ಯಾ ಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಿಷಭ್‌ ಪಂತ್ ಬದಲು ದಿನೇಶ್‌ ಕಾರ್ತಿಕ್‌ ಅವರನ್ನು ವಿಕೆಟ್‌ ಕೀಪರ್‌ ಆಗಿ ಆಡಿಸಿದ ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧಾರವನ್ನು ಭಾರತ ತಂಡದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಸ್ವಾಗತಿಸಿದ್ದಾರೆ. ರಿಷಭ್‌ ಪಂತ್‌ ಟೆಸ್ಟ್‌ ಹಾಗೂ ಒಡಿಐ ಕ್ರಿಕೆಟ್‌ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಆದರೆ, ಅವರು ಟಿ20 ಸ್ವರೂಪಕ್ಕೆ ಸರಿ ಹೊಂದುತ್ತಿಲ್ಲ. ಹಾಗಾಗಿ ಹಿರಿಯ ಆಟಗಾರ ದಿನೇಶ್‌ ಕಾರ್ತಿಕ್‌ ಅವರನ್ನು ಟಿ20 ತಂಡದಲ್ಲಿ ಮುಂದುವರಿಸಬೇಕೆಂದು ಹರ್ಭಜನ್‌ ಸಿಂಗ್‌ ಸಲಹೆ ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/kYW5fFX

ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗೋದಾದರೆ ನಾಳೆ ಬೆಳಿಗ್ಗೆ ರಾಜೀನಾಮೆ ಕೊಡ್ತೀನಿ: ಸಚಿವ ಉಮೇಶ್‌ ಕತ್ತಿ

ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲ. ಚಿರತೆ ಹಿಡಿಯಲು‌ ಉತ್ತರ ಕರ್ನಾಟಕ ‌ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು‌ ತಂದಿದ್ದೇವೆ. ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲ, ಚಿರತೆ ಇನ್ನೂ ಸಿಕ್ಕಿಲ್ಲ. ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ಅದು ಬೆಟ್ಟಕ್ಕೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಗಾಲ್ಫ್‌ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ. ಆದರೆ ಮೂರು ದಿನಗಳಿಂದ ಚಿರತೆ ಕಂಡು ಬಂದಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.

from India & World News in Kannada | VK Polls https://ift.tt/8F6liqW

KM Shivalinge Gowda | ರಾಗಿ ಕಳವು ಆರೋಪ: ಧರ್ಮಸ್ಥಳದಲ್ಲಿ ಶಾಸಕ ಶಿವಲಿಂಗೇಗೌಡ ಪ್ರಮಾಣ

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ನಿಕಟಪೂರ್ವ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್‌.ಆರ್‌.ಸಂತೋಷ್‌ ಕೆಲದಿನದ ಹಿಂದೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ರಾಗಿ ಕಳ್ಳತನದ ಆರೋಪ ಹೊರಿಸಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ರಾಜಕೀಯ ಆರೋಪ ಪ್ರತ್ಯಾರೋಪಗಳು ಸುಕ್ಷೇತ್ರ ಧರ್ಮಸ್ಥಳದ ಸನ್ನಿಧಿ ತಲುಪಿ ಮಂಜುನಾಥ ಸ್ವಾಮಿಯ ಮೇಲೆ ಕೆ.ಎಂ.ಶಿವಲಿಂಗೇಗೌಡ ಆಣೆ ಮಾಡಿದರು. ಸೋಮವಾರ 250ಕ್ಕೂ ಹೆಚ್ಚು ವಾಹನದಲ್ಲಿ 600ರಿಂದ 700 ಜನ ಶಾಸಕ ಶಿವಲಿಂಗೇಗೌಡ ಹಾಗೂ ಅವರ ಬೆಂಬಲಿಗರು ಅರಸೀಕೆರೆಯಿಂದ ಧರ್ಮಸ್ಥಳಕ್ಕೆ ತೆರಳಿ ಶಾಸಕರ ಪ್ರಮಾಣಕ್ಕೆ ಸಾಕ್ಷಿಯಾದರು.

from India & World News in Kannada | VK Polls https://ift.tt/9AMgC3s

‘ಮುರುಘಾ ಶ್ರೀಗಳ ವಿರುದ್ಧ ಆರೋಪಿಸಿದ್ದು ತಪ್ಪು, ಸಮಾಜ ತಿದ್ದಲು ಅವರು ಪ್ರಯತ್ನಿಸುತ್ತಿದ್ದಾರೆ’: ಉಮೇಶ್ ಕತ್ತಿ

ಸ್ವಾಮೀಜಿಗಳ ವಿರುದ್ಧ ಆರೋಪ ಮಾಡಿದ್ದು ತಪ್ಪು. ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಸಮಾಜ ತಿದ್ದಬೇಕೆಂದು ಅವರು ಪ್ರಯತ್ನ‌ ಮಾಡುತ್ತಿದ್ದಾರೆ​​. ಅಂಥ ಪ್ರಯತ್ನಗಳಿಗೆ‌ ಇಂಥ ಸಲ್ಲದ ಆರೋಪ ಮಾಡಿ ತೊಂದರೆಗೆ ಸಿಲುಕಿಸಬಾರದು.‌ ಸಮಾಜವನ್ನು ಬೇರೆ ದಿಕ್ಕಿನಲ್ಲಿ ಒಯ್ಯಬಾರದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಮನವಿ ಮಾಡಿದರು.

from India & World News in Kannada | VK Polls https://ift.tt/EPTk8Cn

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಗ್ರೀನ್ ಸಿಗ್ನಲ್: ಮೂರು ದಿನ ಮಾತ್ರ ಆಚರಣೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಿರ್ಧಾರದ ಕುರಿತು ಸುಧೀರ್ಘ ಸಭೆ ನಡೆಸಿ ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಆರು ಸಂಘಟನೆಗಳು ಅನುಮತಿ ಕೋರಿ ಮನವಿ ಸಲ್ಲಿಸಿದ್ದು, ಇದರಲ್ಲಿ ಒಂದನ್ನು ಆಯ್ಕೆ ಮಾಡಿ ಮೂರು ದಿನ ಗಣೇಶೋತ್ಸವ ಆಚರಣೆ ಮಾಡಲು ಅನುಮತಿ ನೀಡಲಾಗಿದೆ. ಯಾರಿಗೆ ಅನುಮತಿ ಕೊಡಬೇಕು ಎಂಬುವುದು ನಾಳೆ ತೀರ್ಮಾನವಾಗಲಿದೆ ಎಂದು ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದರು.

from India & World News in Kannada | VK Polls https://ift.tt/yOJ97Ev

ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಬಂದ್‌: ಮಂಡ್ಯದಿಂದ ಬದಲಿ ಮಾರ್ಗದಲ್ಲಿ ಬೆಂಗಳೂರು ಸೇರಿದ ವಾಹನಗಳು

Bengaluru-Mysuru highway: ಬೆಳಗ್ಗೆಯೇ ಮಂಡ್ಯದಿಂದ ಬೆಂಗಳೂರಿಗೆ ಹೊರಟಿದ್ದ ಒಂದಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ರಾಮನಗರಕ್ಕೆ ಹೋಗಿ, ವಾಪಸ್‌ ಬಂದವು. ಬಳಿಕ ಬೆಂಗಳೂರಿಗೆ ಬದಲಿ ಮಾರ್ಗಗಳಲ್ಲಿ ಬಸ್‌ಗಳನ್ನು ಕಳುಹಿಸಲಾಯಿತು. ಇದೇ ಮಾರ್ಗಗಳಲ್ಲಿ ಖಾಸಗಿ ವಾಹನಗಳು ಸಂಚರಿಸಿದವು. ಒಂದಷ್ಟು ಜನರು ಪ್ರಯಾಣವನ್ನೇ ಮುಂದೂಡಿದರು. ಮಂಡ್ಯದಿಂದ ಮದ್ದೂರು, ಭಾರತಿನಗರ, ಮಳವಳ್ಳಿ, ಹಲಗೂರು, ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ವಾಹನಗಳು ಓಡಾಡುತ್ತಿದ್ದವು.

from India & World News in Kannada | VK Polls https://ift.tt/zZh18Oa

ಪೊಲೀಸ್‌ ಹುದ್ದೆಗೇರಲು ಕೋಚಿಂಗ್‌ಗೆ ತೆರಳಿದ್ದ ಚಿತ್ತಾಪುರ ವಿದ್ಯಾರ್ಥಿ ಧಾರವಾಡದಲ್ಲಿ ನಾಪತ್ತೆ

Police exam: 1 ರಿಂದ 10 ನೇ ತರಗತಿಯವೆರೆಗೆ ಇಂಗಳಗಿಯಲ್ಲಿ ಶಿಕ್ಷಣ ಪೂರೈಸಿ, ಚಿತ್ತಾಪುರದಲ್ಲಿ ಪಿಯುಸಿ, ಡಿಗ್ರಿ ಪೂರ್ಣಗೊಳಿಸಿ, ಪೊಲೀಸ್‌ ಹುದ್ದೆಗೇರಲು ಧಾರವಾಡದಲ್ಲಿನ ಖಾಸಗಿ ಕೋಚಿಂಗ್‌ ಸೆಂಟರ್‌ನಲ್ಲಿ ಏ.24 ರಂದು ಪ್ರವೇಶ ಪಡೆದು ಅಲ್ಲಿಯೇ ಬಾಡಿಗೆ ರೂಮಿನಲ್ಲಿ ವಾಸವಿದ್ದ. ಆದರೆ, ಜು.29 ರಂದು ರಾತ್ರಿ ನಾಪತ್ತೆಯಾಗಿದ್ದಾನೆ. ಈ ಸುದ್ದಿ ತಿಳಿದು ಸಾಬಣ್ಣನ ಪೋಷಕರು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತಿದ್ದಾರೆ. ನಾಪತ್ತೆಯಾಗುವ ದಿನವೇ ಸಾಬಣ್ಣ ತನ್ನ ಪೋಷಕರೊಂದಿಗೆ ನಗುನಗುತ್ತಾ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಬೆಳಗ್ಗೆ ಸಾಬಣ್ಣ ನಾಪತ್ತೆಯಾಗಿರುವ ಸುದ್ದಿ ತಿಳಿದು ಕುಟುಂಬ ಕಂಗಾಲಾಗಿದೆ.

from India & World News in Kannada | VK Polls https://ift.tt/2UrjwN5

ನನ್ನ ಮೇಲಿನ ಹಗರಣ ಆರೋಪಕ್ಕೆ ದಾಖಲೆ ನೀಡಿದರೆ ಯಾವುದೇ ತನಿಖೆಗೆ ಸಿದ್ಧ: ಸುನೀಲ್‌ ಕುಮಾರ್‌

ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರಕ್ರಿಯೆಯಲ್ಲಿ ನಾನಾಗಲಿ, ನನ್ನ ಇಲಾಖೆಯ ಹಸ್ತಕ್ಷೇಪಕ್ಕೆ ಸಾಧ್ಯವೇ ಇಲ್ಲ. ಅಕ್ರಮಕ್ಕೆ ಯತ್ನಿಸಿದವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾಪಿ ಹೊಡೆಯುವ ಯತ್ನವೇ ವಿಫಲವಾಗಿದೆ ಎಂಬ ವರದಿಗಳಿದ್ದರೂ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಸಚಿವ ವಿ. ಸುನೀಲ್‌ ಕುಮಾರ್‌, ನನ್ನ ಮೇಲೆ ಹೊರಿಸಿರುವ ಆರೋಪಕ್ಕೆ ದಾಖಲೆ ಒದಗಿಸಿದರೆ ಯಾವುದೇ ತನಿಖೆಗೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.

from India & World News in Kannada | VK Polls https://ift.tt/TNWkyIJ

ನರೇಂದ್ರ ಮೋದಿ, ಅಮಿತ್ ಶಾ ಆಡಳಿತದಿಂದ ಅನ್ಯಕೋಮಿನವರ ದೌರ್ಜನ್ಯ ತಗ್ಗಿದೆ: ಡಿ.ಎನ್‌ ಜೀವರಾಜ್‌

ಕೆಪಿಸಿಸಿ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರುಗಳ ನಡುವಿನ ಗೊಂದಲಗಳಿಂದ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಸಲ್ಮಾನರಿರುವ ಪ್ರದೇಶದಲ್ಲಿ ಸಾವರ್ಕರ್‌ ಫೋಟೊ ಏಕೆ ಹಾಕಿದ್ರಿ ಎಂದರೆ ಏನು ಹೇಳೋಕೆ ಆಗುತ್ತೆ. ಫೋಟೊ ಹಾಕಿರುವುದು ಭಾರತದಲ್ಲಿ. ದೇಶ ವಿಭಜನೆಯಾಗಿರುವುದು ಜಾತಿ ಆಧಾರದ ಮೇಲೆ. ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ಎಂದು. ಇದು ಪಾಕಿಸ್ತಾನವಲ್ಲ, ಹಿಂದೂಸ್ಥಾನ ಎಂದು ಮಾಜಿ ಸಚಿವ ಡಿ.ಎನ್‌ ಜೀವರಾಜ್‌ ಹೇಳಿದರು.

from India & World News in Kannada | VK Polls https://ift.tt/KEYyiBL

Urvashi Rautela: ಭಾರತ-ಪಾಕ್ ಪಂದ್ಯ ವೀಕ್ಷಿಸಲು ಬಂದ ಊರ್ವಶಿ ರೌತೆಲಾ, ಆಡುವ ಅವಕಾಶ ಪಡೆಯದ ಪಂತ್!

India vs Pakistan Asia Cup 2022 Match Highlights: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಆಗಸ್ಟ್‌ 28) ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಹೈ-ವೋಲ್ಟೇಜ್‌ ಪಂದ್ಯ ಶುರುವಾಗಿ 10 ಓವರ್‌ಗಳು ಕಳೆಯುತ್ತಿದ್ದಂತೆಯೇ ವಿಐಪಿ ಬಾಕ್ಸ್‌ನಲ್ಲಿ ಬಾಲಿವುಡ್‌ ಬೆಡಗಿ ಊರ್ವರ್ಶಿ ರೌತೆಲಾ ಕಾಣಿಸಿಕೊಳ್ಳುತ್ತಿದ್ದಂತೆ ಟ್ವಿಟರ್‌ನಲ್ಲಿ ಮತ್ತೊಂದು ಭಾರಿ ಚರ್ಚೆ ಶುರುವಾಯಿತು. ರಿಷಭ್ ಪಂತ್‌ ತಮ್ಮನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದರು ಎಂಬ ಗಂಭೀರ ಆರೋಪದ ಮೂಲಕ ಊರ್ವಶಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/b6OYQGf

ಗುಲಾಂ ನಬಿ ಆಜಾದ್‌ ರಾಜೀನಾಮೆ ಕೋಮುವಾದಿ ಶಕ್ತಿಗಳಿಗೆ ಬಲ ತುಂಬುವ ಪ್ರಯತ್ನವಾಗಿದೆ : ಎಚ್‌ಕೆ ಪಾಟೀಲ

ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸುತ್ತಿರುವ ಈ ಸಮಯದಲ್ಲಿ ಬುದ್ಧನಿಗೆ ಜ್ಞಾನೋದಯ ಆದಂತೆ ಆಜಾದ್‌ ಅವರಿಗೆ ಜ್ಞಾನೋದಯವಾಗಿದೆ. ಸದ್ಯ ಪ್ರಜಾಪ್ರಭುತ್ವವನ್ನು ಅಶಕ್ತಗೊಳಿಸುವ, ಜನರ ಮನಸ್ಸು ಕೆಡಿಸುವ ಕೆಲಸ ಆಗುತ್ತಿವೆ. ಇದೇ ವೇಳೆ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಡುವ ಜತೆಗೆ ಕಾಂಗ್ರೆಸ್‌ ಭಾರತ ಜೋಡೊ ಬಿಟ್ಟು ಕಾಂಗ್ರೆಸ್‌ ಜೋಡೊ ಮಾಡುವುದು ಒಳಿತು ಎಂದಿದ್ದಾರೆ. ಆಜಾದ್‌ ರಾಜೀನಾಮೆಯಿಂದ ಪಕ್ಷ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

from India & World News in Kannada | VK Polls https://ift.tt/Axid6H5

ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಸಿನಿಮೀಯ ಶೈಲಿ ಕಾರು ಚೇಸ್‌: 3.6 ಕೋಟಿ ರೂ. ದರೋಡೆ

Pune-Solapur Highway Robbery: ಪುಣೆ ಸಮೀಪದ ಇಂದಾಪುರ ಬಳಿ ಕಾರನ್ನು ತಡೆಯಲು ನಾಲ್ವರು ಕಳ್ಳರು ಯತ್ನಿಸಿದರು. ರೋಡ್‌ ಹಂಪ್‌ ಬಳಿ ಕಾರು ನಿಧಾನ ಮಾಡಿದ ಚಾಲಕ ಬಳಿಕ ಶರವೇಗದಲ್ಲಿಅಲ್ಲಿಂದ ಕಾರು ಚಲಾಯಿಸಿಕೊಂಡು ಮುಂದೆ ಸಾಗಿದ್ದ. ಕೂಡಲೇ ಎರಡು ಕಾರು, ಎರಡು ಬೈಕ್‌ನಲ್ಲಿ ಹೊರಟ ದರೋಡೆಕೋರರು ಹಣ ಇದ್ದ ಕಾರನ್ನು ಸಿನಿಮೀಯ ಶೈಲಿಯಲ್ಲಿ ಚೇಸ್‌ ಮಾಡಿದರು. ಬೈಕ್‌ನಲ್ಲಿದ್ದ ಲೂಟಿಕೋರರು ಕಾರಿನ ಮೇಲೆ ಗಂಡು ಹಾರಿಸಿ ತಡೆದರು. ಬಳಿಕ ಕಾರಲ್ಲಿದ್ದ ಇಬ್ಬರನ್ನು ಥಳಿಸಿ, ಅವರ ಬಳಿಯಿದ್ದ 3.60 ಕೋಟಿ ನಗದು ಕಸಿದುಕೊಂಡು ಕತ್ತಲಲ್ಲಿಮಾಯವಾಗಿದ್ದಾರೆ.

from India & World News in Kannada | VK Polls https://ift.tt/JcF3Ob5

ಶಿಕ್ಷಣ ಇಲಾಖೆಯಲ್ಲೂ ಕಮಿಷನ್‌ ದಂಧೆ! ಪ್ರತಿ ಕೆಲಸಕ್ಕೂ 30-40% ಬೇಡಿಕೆ: ಖಾಸಗಿ ಶಾಲೆಗಳಿಂದ ಪ್ರಧಾನಿಗೆ ದೂರು

2 ವರ್ಷಗಳಿಂದ ಇದು ಹೆಚ್ಚಾಗಿದ್ದು, ಅಧಿಕಾರಿಗಳೇ ನೇರವಾಗಿ ಕಮಿಷನ್‌ ಕೇಳುತ್ತಾರೆ. ಪ್ರತಿ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡುವಂತೆ ಹೈಕೋರ್ಟ್‌ ಹೇಳಿದ್ದರೂ, ಇಲಾಖೆ ಮಾತ್ರ ಪ್ರತಿ ವರ್ಷ ಮಾಡುತ್ತದೆ. ಲಂಚ ನೀಡದಿದ್ದರೆ ಕ್ಷುಲ್ಲಕ ಕಾರಣ ಹೇಳಿ ಮಾನ್ಯತೆ ರದ್ದು ಮಾಡುತ್ತಾರೆ. ಈ ಭ್ರಷ್ಟಾಚಾರ ಕುರಿತು 8 ಅಂಶ ಉಲ್ಲೇಖಿಸಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಸಚಿವರನ್ನು ವಜಾ ಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ರುಪ್ಸಾ-ಕರ್ನಾಟಕ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದರು.

from India & World News in Kannada | VK Polls https://ift.tt/k7zdCAV

ಕಗ್ಗಲೀಪುರ ಸಮುದಾಯ ಆರೋಗ್ಯ ಕೇಂದ್ರ ಜಲಾವೃತ: 2 ದಿನ ಆಸ್ಪತ್ರೆ ಬಂದ್‌, 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ಹಾಳು

Kaggalipura Community Health Center: ಸಮುದಾಯ ಆರೋಗ್ಯ ಕೇಂದ್ರದ ಮಗ್ಗುಲಲ್ಲೇ ಸುವರ್ಣಮುಖಿ ಹೊಳೆ ಹರಿಯುತ್ತದೆ. ಆಸ್ಪತ್ರೆಗೆ ರಸ್ತೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದ್ದು, ಪೈಪ್‌ಗಳಲ್ಲಿ ಕಸ-ಕಡ್ಡಿ ತುಂಬಿಕೊಂಡು ಮಳೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಜೋರು ಮಳೆಯಿಂದಾಗಿ ಹೊಳೆ ಉಕ್ಕಿ ಹರಿದು ಆಸ್ಪತ್ರೆ ಮತ್ತು ಪಕ್ಕದಲ್ಲೇ ಇದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೂ ನೀರು ನುಗ್ಗಿದ್ದರಿಂದ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆಸ್ಪತ್ರೆಯನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಸೋಮವಾರದಿಂದ ಹೊರರೋಗಿಗಳ ವಿಭಾಗವಷ್ಟೇ ತೆರೆಯಲಾಗುತ್ತದೆ.

from India & World News in Kannada | VK Polls https://ift.tt/NYfzqx5

Asia Cup 2022: ಶ್ರೀಲಂಕಾ ತಂಡಕ್ಕೆ ಹೀನಾಯ ಸೋಲು; ಅಫಘಾನಿಸ್ತಾನ ಶುಭಾರಂಭ!

SL vs AFG: 2022ರ ಏಷ್ಯಾ ಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ 8 ವಿಕೆಟ್‌ಗಳಿಂದ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡ 19.4 ಓವರ್‌ಗಳಿಗೆ 105 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಅಫಘಾನಿಸ್ತಾನ ತಂಡ 10.1 ಓವರ್‌ಗಳಿಗೆ 106 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಅಫಘಾನಿಸ್ತಾನ ಪರ ಮಾರಕ ದಾಳಿ ನಡೆಸಿ ಮೂರು ವಿಕೆಟ್‌ ಕಬಳಿಸಿದ ಫಝಲಕ್‌ ಫರೂಕಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/BkqSPYy

ಚೆನ್ನೈ ಜೋಡಿಯ ಪ್ರೇಮ್ ಕಹಾನಿ: ಎರಡು ಮಕ್ಕಳ ತಾಯಿಯೊಂದಿಗೆ ಕಾರವಾರದಲ್ಲಿ ವಾಸವಿದ್ದ ಪ್ರಿಯಕರ, ಪ್ರೇಮಿಗಳು ಪೊಲೀಸ್‌ ವಶಕ್ಕೆ

Chennai lovers in karwar: ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶನಗರದ ಆಯಿಷಾ ಮತ್ತು ಆಕೆಯ ಪ್ರೇಮಿ ಬೀರ್‌ ಮೊಹಿದ್ದೀನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಆಯಿಷಾ ತನ್ನ ಸಂಬಂಧಿಯಾಗಿದ್ದ ಬೀರ್‌ ಮೊಹಿದ್ದೀನ್‌ನೊಂದಿಗೆ ಕಾರವಾರಕ್ಕೆ ಬಂದು ನೆಲೆಸಿದ್ದಳು ಎಂದು ಗೊತ್ತಾಗಿದೆ. ಬಿಇ ಎಂಜಿನಿಯರಿಂಗ್‌ ಮುಗಿಸಿರುವ ಮೊಹಿದ್ದೀನ್‌, ಗಾರೆ ಕೆಲಸ ಮಾಡಿಕೊಂಡಿದ್ದ. ಇಬ್ಬರೂ ಕಾರವಾರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಯಿಷಾ ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಫೆ.21ರಂದು ಪೊಲೀಸ್‌ ದೂರು ನೀಡಿದ್ದರು

from India & World News in Kannada | VK Polls https://ift.tt/FqHDGZJ

BS Yediyurappa | ರಾಜ್ಯಕ್ಕೆ ಹೈಕಮಾಂಡ್‌ ಹೆಚ್ಚು ಸಮಯ ಮೀಸಲು: ಪ್ರಧಾನಿ ಮೋದಿ, ನಡ್ಡಾ ಭೇಟಿ ಬಳಿಕ ಬಿಎಸ್‌ವೈ ಹೇಳಿ

BSY meet PM Narendra Modi: ಬಿಜೆಪಿಯ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಗಳಾದ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣೆ ಸಮಿತಿ ಸದಸ್ಯರಾಗಿ ಬಿಎಸ್‌ವೈ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದು ಯಡಿಯೂರಪ್ಪ ಅವರ ಈ ಪ್ರವಾಸದ ಉದ್ದೇಶ. ಆದರೆ, ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ಇರುವುದರಿಂದ ಈ ಸಂಬಂಧದಲ್ಲೂ ಚರ್ಚೆ ನಡೆದಿರುವ ನಿರೀಕ್ಷೆಯಿದೆ. ಇದಲ್ಲದೆ ರಾಜ್ಯ ಬಿಜೆಪಿಯಲ್ಲಿಸಂಘಟನಾತ್ಮಕವಾಗಿ ಮಹತ್ವದ ಬದಲಾವಣೆಯ ಅಪೇಕ್ಷೆ ಇರುವುದರಿಂದ ಈ ಬಗ್ಗೆ ವರಿಷ್ಠರು ಬಿಎಸ್‌ವೈ ಅಭಿಪ್ರಾಯ ಪಡೆದಿರುವ ಸಾಧ್ಯತೆಯಿದೆ.

from India & World News in Kannada | VK Polls https://ift.tt/ZCqYu5N

ಮಾಜಿ ಸಿಎಂ ಸಿದ್ದರಾಮಯ್ಯ ಕಿರಿಯ ಸಹೋದರ ವಿಧಿವಶ: ಸಿದ್ದರಾಮನ ಹುಂಡಿಯಲ್ಲಿ ಶನಿವಾರ ಅಂತ್ಯಕ್ರಿಯೆ

Siddaramana hundi: ಅನಾರೋಗ್ಯ ಕಾರಣದಿಂದ ರಾಮೇಗೌಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು‌. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶನಿವಾರ ನಡೆಯಲಿದೆ. ಸಿದ್ದರಾಮಯ್ಯ ಅವರು ತಮ್ಮನ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಾಮೇಗೌಡ ಅವರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ, ಸಿದ್ದರಾಮಯ್ಯ ಸೇರಿದಂತೆ ಇಬ್ಬರು ಸಹೋದರರನ್ನು ಅಗಲಿದ್ದಾರೆ.

from India & World News in Kannada | VK Polls https://ift.tt/g4W1KI3

CJI NV Ramana | ಸಿಜೆಐ ಎನ್‌.ವಿ.ರಮಣ ನಿವೃತ್ತಿ: ಕೊನೆಯ ಎರಡು ದಿನ ರಾಶಿ ರಾಶಿ ಕೇಸ್‌ ವಿಚಾರಣೆ

Supreme court of India: ಸಿಜೆಐ ಎನ್‌.ವಿ. ರಮಣ ಅವರಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರು, ‘‘ ನ್ಯಾ.ರಮಣ ಅತ್ಯಲ್ಪ ಕಾಲದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಉಚ್ಛ ನ್ಯಾಯಾಲಯದಲ್ಲಿ ಖಾಲಿ ಇದ್ದ 224 ಹುದ್ದೆ ಭರ್ತಿ ಮಾಡಿದ್ದಾರೆ. ನ್ಯಾಯಾಧೀಕರಣದಲ್ಲಿದ್ದ 100 ಜಡ್ಜ್‌ಗಳನ್ನು ನೇಮಿಸಿದ್ದಾರೆ. ಅಷ್ಟೇ ಅಲ್ಲ ಸುಪ್ರೀಂಕೋರ್ಟ್‌ನಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ 34 ನ್ಯಾಯಾಧೀಶರೊಂದಿಗೆ ಕೆಲಸ ಮಾಡಿದ ಕೀರ್ತಿ ಸಲ್ಲುತ್ತದೆ’’ ಎಂದು ಬಣ್ಣಿಸಿದರು.

from India & World News in Kannada | VK Polls https://ift.tt/YfZDjkS

Maharaja Trophy 2022: ಮಹಾರಾಜ ಟ್ರೋಫಿ ಮುಡಿಗೇರಿಸಿಕೊಂಡ ಗುಲ್ಬರ್ಗ ಮಿಸ್ಟಿಕ್ಸ್‌!

Gulbarga Mystics crowned champions of Maharaja Trophy 2022: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2022ರ ಮಹಾರಾಜ ಟ್ರೋಫಿ ಫೈನಲ್‌ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ದ 11 ರನ್‌ಗಳಿಂದ ಗೆಲುವು ಪಡೆದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 17 ಎಸೆತಗಳಲ್ಲಿ ಅಜೇಯ 41 ರನ್‌ ಸಿಡಿಸಿದ ಮನೀಶ್‌ ಪಾಂಡೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರೆ, 12 ಪಂದ್ಯಗಳಿಂದ 397 ರನ್‌ ಸಿಡಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡದ ಬ್ಯಾಟ್ಸ್‌ಮನ್‌ ರೋಹನ್‌ ಪಾಟೀಲ್‌ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/KzgC1uk

Khardung La Challenge: 'ಖರ್ದುಂಗ್‌ ಲಾ ಚಾಲೆಂಜ್‌'ಗೆ ಸಜ್ಜಾಗುತ್ತಿರುವ ಪುಷ್ಪಾ ಭಟ್‌!

Khardung La Challenge: ಸೆಪ್ಟಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಖರ್ದುಂಗ್‌ ಲಾ ಚಾಲೆಂಜ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಕರ್ನಾಟಕದ ಪುಷ್ಪಾ ಭಟ್‌ ಅವರು ಸಜ್ಜಾಗುತ್ತಿದ್ದಾರೆ. 'ಖರ್ದುಂಗ್‌ ಲಾ ಚಾಲೆಂಜ್‌' ಸಮುದ್ರ ಮಟ್ಟದಿಂದ 17,582 ಅಡಿ ಎತ್ತರದಲ್ಲಿ ನಡೆಯುವ ಅತ್ಯಂತ ಕಠಿಣ ಮ್ಯಾರಥಾನ್‌ ಆಗಿದೆ. ಈ ಕಠಿಣ ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ಬಹುತೇಕ ವೃತ್ತಿ ಪರ ಓಟಗಾರರಾಗಿರಬೇಕು. ಒಂದು ವೇಳೆ ಈ ಮ್ಯಾರಥಾನ್‌ ಅನ್ನು ಪುಷ್ಪಾ ಭಟ್‌ ಅವರು ಪೂರ್ಣಗೊಳಿಸಿದರೆ ಇತಿಹಾಸ ಬರೆಯಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Nu2OdaA

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸರಕಾರಕ್ಕೆ ಗುರುವಾಗಿ ಕೆಲಸ ಮಾಡಬೇಕು: ಬಸವರಾಜ ಬೊಮ್ಮಾಯಿ

Kannada sahitya parishat: ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ಹಾಗೂ ಆವರಣದ ನವೀಕೃತ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ನಾವೆಲ್ಲರೂ ಕನ್ನಡಿಗರ ಏಳಿಗೆಗೆ ನಿರಂತವಾಗಿ ಕೆಲಸ ಮಾಡಬೇಕು. ಕನ್ನಡ ಎನ್ನುವುದು ಅಭಿಮಾನ ಪ್ರದರ್ಶನದ ವಸ್ತುವಲ್ಲ, ಅದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೀಮಿತವಾಗದೆ ನಿತ್ಯ ನಿರಂತರವಾಗಬೇಕು. ಯುವಜನಾಂಗದ ಮನಸ್ಸನ್ನು ಅರ್ಥಮಾಡಿಕೊಂಡು ಅವರಲ್ಲಿ ಕನ್ನಡ ಪ್ರಜ್ಞೆ ಬೆಳಸಬೇಕು ಎಂದರು.

from India & World News in Kannada | VK Polls https://ift.tt/kxIcJt2

DK Shivakumar | ಡಿಕೆಶಿ-ಹಳ್ಳಿಹಕ್ಕಿ ಭೋಜನ ವಿರಾಮ: ಹಳೇ ಮೈಸೂರು ರಾಜಕೀಯದಲ್ಲಿ ತಿರುವು?

Mysuru: ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಎಂಎಲ್‌ಸಿ ವಿಶ್ವನಾಥ್ ಒಟ್ಟಿಗೆ ಊಟ ಮಾಡಿದರು. ಕಾಂಗ್ರೆಸ್‌ ನಾಯಕಿ ಪುಷ್ಪಾ ಅಮರನಾಥ್ ಮನೆಯಲ್ಲಿ ಉಭಯ ನಾಯಕರು ಬಿಸಿಬಿಸಿ ಮುದ್ದೆ ಸವಿದರು. 40 ವರ್ಷ ಕಾಂಗ್ರೆಸ್‌ನಲ್ಲಿದ್ದ ವಿಶ್ವನಾಥ್ ನಂತತ ಜೆಡಿಎಸ್‌ಗೆ ಹೋಗಿ ಈಗ ಬಿಜೆಪಿಯಲ್ಲಿ ಪರಿಷತ್ ಸದಸ್ಯರಾಗಿದ್ದಾರೆ. ಬಿಸಿ ಮುದ್ದೆ, ಸಾಂಬಾರ್ , ಸೊಪ್ಪಿನ ಪಲ್ಯ , ಚಿತ್ರಾನ್ನವನ್ನ ಡಿಕೆಶಿ ಹಾಗೂ ವಿಶ್ವನಾಥ್ ಒಟ್ಟಾಗಿ ತಿಂದರು. 40 ವರ್ಷ ಕಾಲ ಕಾಂಗ್ರೆಸ್‌ನಲ್ಲಿದ್ದ ವಿಶ್ವನಾಥ್ ತಮ್ಮ ಹಳೇ ದಿನಗಳನ್ನ ಮೆಲಕುಹಾಕಿದರು.

from India & World News in Kannada | VK Polls https://ift.tt/q7kFVyI

ಬಿಬಿಎಂಪಿ ಚುನಾವಣಾ ಪ್ರಕ್ರಿಯೆಗೆ ಚಾಲನೆ: ಕರಡು ಮತದಾರರ ಪಟ್ಟಿ ಪ್ರಕಟ, 7.86 ಲಕ್ಷ ಮತದಾರರ ಹೆಚ್ಚಳ!

ಬಿಬಿಎಂಪಿಗೆ 2015ರಲ್ಲಿ ಚುನಾವಣೆ ನಡೆದಿದ್ದ ಸಂದರ್ಭದಲ್ಲಿನ ಮತದಾರರ ಸಂಖ್ಯೆಗೆ ಹೋಲಿಸಿದರೆ ಈಗ 7,86,229 ಮತದಾರರು ಹೊಸದಾಗಿ ಕರಡು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 2015ರಲ್ಲಿ 71,22,165 ಮಂದಿ ಮತದಾರರಿದ್ದರು. ಈಗ ಪಾಲಿಕೆಯ 243 ವಾರ್ಡ್‌ಗಳ ವ್ಯಾಪ್ತಿಯಲ್ಲಿ 79,08,394 ಮಂದಿ ಮತದಾರರಿದ್ದಾರೆ. ಈ ಪೈಕಿ 41,09,496 ಮಂದಿ ಪುರುಷ, 37,97,497 ಮಂದಿ ಮಹಿಳಾ ಹಾಗೂ 1,401 ಮಂದಿ ಇತರೆ ಮತದಾರರು ಸೇರಿದ್ದಾರೆ.

from India & World News in Kannada | VK Polls https://ift.tt/c7XbYVR

ಜನನ-ಮರಣ ನೋಂದಣಿ ಕುರಿತ ಸರ್ಕಾರದ ವಿವಾದಿತ ತಿದ್ದುಪಡಿಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

ಬೀದರ್‌ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ.ಬಿರಾದಾರ್‌ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ.ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿತು. ಅಲ್ಲದೆ, ಪ್ರತಿವಾದಿಗಳಾದ ಸರಕಾರದ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಜಾರಿಗೊಳಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

from India & World News in Kannada | VK Polls https://ift.tt/ji19FRq

ಗೌರಿ-ಗಣೇಶ ಹಬ್ಬಕ್ಕೆ ಹೆಚ್ಚುವರಿ 500 ಕೆಎಸ್ಸಾರ್ಟಿಸಿ ಬಸ್‌ ಸಂಚಾರ: ಎಲ್ಲಿಂದೆಲ್ಲಿಗೆ ಕಾರ್ಯಾಚರಣೆ?

ಆ. 31ರಂದು ರಾಜ್ಯ ಮತ್ತು ಹೊರ ರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ ಸೇವೆ ಒದಗಿಸಲಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ಸಿಗಲಿದೆ. ಜತೆಗೆ ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲ ತಾಲೂಕು, ಜಿಲ್ಲಾ ಬಸ್‌ ನಿಲ್ದಾಣಗಳಿಂದಲೂ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚಿನ ಬಸ್‌ಗಳನ್ನು ಓಡಿಸಲಾಗುವುದು ಎಂದು ಕೆ ಎಸ್‌ ಆರ್‌ ಟಿ ಸಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

from India & World News in Kannada | VK Polls https://ift.tt/8sjhztw

ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರ: ರಾಜ್ಯ ಸಚಿವ ಸಂಪುಟ ನಿರ್ಧಾರ

ನಗರದ ಹೊರ ವಲಯದ ನಾಲ್ಕು ಕಡೆಗಳಲ್ಲಿ ತರಕಾರಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲು ಪ್ರಸ್ತಾಪಿಸಲಾಗಿದೆ. ಈಗಾಗಲೇ ಭೂಸ್ವಾಧೀನ ನಡೆದಿರುವ ಹಿನ್ನೆಲೆಯಲ್ಲಿ ಸಿಂಗೇನ ಅಗ್ರಹಾರದಲ್ಲಿ ಮೊದಲಿಗೆ ಹೈಟೆಕ್‌ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಕೋಲಾರ, ಮಾಗಡಿ ಭಾಗದಿಂದ ತರಕಾರಿ ಮಾರಾಟಕ್ಕೆ ಬರುವ ರೈತರ ಅನುಕೂಲಕ್ಕಾಗಿ ನಗರದ ಹೊರ ವಲಯದ ಬೇರೆ ಬೇರೆ ಕಡೆಗಳಲ್ಲೂ ಶೀಘ್ರ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

from India & World News in Kannada | VK Polls https://ift.tt/obJ5a3K

Covid-19 Updates: ರಾಜ್ಯದಲ್ಲಿ ಗುರುವಾರ 1286 ಮಂದಿಗೆ ಕೊರೊನಾ ಪಾಸಿಟಿವ್: 3 ಮಂದಿ ಮೃತ!

ಕರ್ನಾಟಕದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತೆ ಮುಂದುವರಿದಿದ್ದು, ಇಂದು 1286 ಮಂದಿಗೆ ಪಾಸಿಟಿವ್ ಕಂಡುಬಂದಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 8,700 ಇದ್ದು, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 03 ಆಗಿದೆ. ಜೊತೆಗೆ ರಾಜ್ಯದಾದ್ಯಂತ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,182ಕ್ಕೆ ಏರಿಕೆ ಆಗಿದೆ.

from India & World News in Kannada | VK Polls https://ift.tt/SN4YB32

'ಇಬ್ಬರು ವೇಗಿಗಳು ನನಗೆ ಸ್ಪಿನ್ನರ್‌ ರೀತಿ ಕಂಡರು': ಪಾಕ್‌ಗೆ ಬೆಂಡೆತ್ತಿದ ಘಟನೆ ನೆನೆದ ಸೆಹ್ವಾಗ್‌!

Virender Sehwag on 2004 Test match vs Pakistan: ಪಾಕಿಸ್ತಾನ ವಿರುದ್ಧ ಎಲ್ಲಾ ಸ್ವರೂಪದಲ್ಲಿಯೂ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಸಾಕಷ್ಟು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದ್ದಾರೆ. ಅದರಂತೆ ವೀರೇಂದ್ರ ಸೆಹ್ವಾಗ್‌ ಅವರು ಪಾಕಿಸ್ತಾನ ವಿರುದ್ಧ ತಮ್ಮ ನೆಚ್ಚಿನ ಸ್ಮರಣೀಯ ಇನಿಂಗ್ಸ್‌ ಯಾವುದೆಂದು ಬಹಿರಂಗಪಡಿಸಿದ್ದಾರೆ. 2004ರ ಮುಲ್ತಾನ್‌ ಟೆಸ್ಟ್‌ನಲ್ಲಿ 309 ರನ್‌ ಸಿಡಿಸಿದ್ದ ಇನಿಂಗ್ಸ್‌ ತಮ್ಮ ಪಾಲಿನ ಅತ್ಯಂತ ಸ್ಮರಣೀಯ ಇನಿಂಗ್ಸ್ ಎಂದು ಹೇಳಿಕೊಂಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/U8Xe0OF

ಬೆಳಗಾವಿ: ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ 'ಸ್ಮಾರ್ಟ್‌' ನಕಲಿ, ಅತಿಥಿ ಉಪನ್ಯಾಸಕ ಸೇರಿ ಮೂವರ ಬಂಧನ

KPTCL recruitment scam: ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಆದೇಶ್‌ ನಾಗನೂರಿ (26), ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಮಡಿವಾಳಪ್ಪ ತೋರಣಗಟ್ಟಿ (36) ಮತ್ತು ಹೊಸಕೋಟಿ ಗ್ರಾಮದ ಶಂಕರ ಉಣಕಲ್‌ (30) ಬಂಧಿತ ಆರೋಪಿಗಳು. ಶಂಕರ ಉಣಕಲ್‌ ಮತ್ತು ಮಡಿವಾಳಪ್ಪ ತೋರಣಗಟ್ಟಿ ಹುಕ್ಕೇರಿ ಪಟ್ಟಣದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ಆದೇಶ ನಾಗನೂರಿ ಜತೆ ಸೇರಿ ರಾಮದುರ್ಗ ಮತ್ತು ಚಿಕ್ಕೋಡಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳ ನಕಲಿಗೆ ಸಹಕಾರ ನೀಡಲು ಪ್ರಯತ್ನಿಸಿದ್ದರು.

from India & World News in Kannada | VK Polls https://ift.tt/cVB5oGR

ಪಕ್ಷದ ನಿಯಮ ಉಲ್ಲಂಘನೆ, ಕೆ.ಜಿ.ಎಫ್ ಬಾಬುಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್

KGF Babu: ಇತ್ತೀಚೆಗೆ ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ ಸುಮಾರು 350 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಗಳ ಪಟ್ಟಿಯನ್ನು ಮಾಡಿ ಪಕ್ಷದ ಹೈಕಮಾಂಡಿಗೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಮತಿ ಕೊಡಬೇಕೆಂದು ಜಾಹೀರಾತುಗಳ ಮುಖಾಂತರ ವಿನಂತಿಸಿರುತ್ತೀರಿ. ಈ ಜಾಹೀರಾತುಗಳ ಮುಖಾಂತರ ಪ್ರಚಾರವನ್ನು ಗಿಟ್ಟಿಸಿಕೊಂಡು ನಂತರ ಈ ಯೋಜನೆಗಳನ್ನು ಅನುಷ್ಠಾನಗೊಳಿಸದ ಪಕ್ಷದ ಮೇಲೆ ಗೂಬೆ ಕೂರಿಸುವ ಹುನ್ನಾರವಾಗಿ ಇದು ಕಂಡುಬರುತ್ತಿದೆ ಎಂದು ‌ಉಲ್ಲೇಖಿಸಲಾಗಿದೆ.

from India & World News in Kannada | VK Polls https://ift.tt/WMGmnPf

Covid-19 Karnataka Update: ರಾಜ್ಯದಲ್ಲಿಂದು 1,255 ಮಂದಿಗೆ ಕೊರೊನಾ ಪಾಸಿಟಿವ್!

ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 40,44,819 ಕ್ಕೆ ಏರಿಕೆಯಾಗಿದ್ದು, ಇಂದು 2,186 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು ಸಂಖ್ಯೆ 39,94,823ಗೆ ತಲುಪಿದೆ. ಇನ್ನು ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9,775 ಇದ್ದು, ಇಂದು ಮೂರು ಮಂದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

from India & World News in Kannada | VK Polls https://ift.tt/fQ8R0B3

ಸ್ವಾತಂತ್ರ್ಯ ವೀರ ಸಾವರ್ಕರ್‌ ಬಗ್ಗೆ ಚರ್ಚೆ ಮಾಡೋದೇ ದೇಶದ್ರೋಹ: ಕೆಎಸ್‌ ಈಶ್ವರಪ್ಪ

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಂಸಾಹಾರ ತಿನ್ನೋದು ದೇವಾಲಯಕ್ಕೆ ಹೋಗೋದು ಮಾಮೂಲು. ಇದೇನೂ ಮೊದಲಲ್ಲ. ಆದರೆ ಅವರ ಬಗ್ಗೆ ಒಂದು ಸಮಾಧಾನದ ವಿಷಯ ಎಂದರೆ ಕಾಗಿನೆಲೆ ಶ್ರೀಗಳ ಜೊತೆಗಿನ ವೈಮನಸ್ಸು ತೊಡೆದುಕೊಂಡರು. ರಂಭಾಪುರಿ ಸ್ವಾಮೀಜಿಗಳನ್ನ ಭೇಟಿ ಮಾಡಿದರು. ನನ್ನ ಒಂದು ಆಸೆ, ಉಡುಪಿಯ ಮಠಕ್ಕೆ ಸಿದ್ದರಾಮಯ್ಯ ಒಮ್ಮೆ ಹೋಗಬೇಕು ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದರು.

from India & World News in Kannada | VK Polls https://ift.tt/g59ezBd

Panchamasali Lingayat | ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ 'ಪಂಚಲಕ್ಷ ಪತ್ರ ಚಳವಳಿ' ಆರಂಭ

Reservation: ಈಗ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೆ ಮುಂಚೂಣಿಯಲ್ಲಿ ನಿಂತವರು ಸಮಾಜದ ಹಿರಿಯ ಮುಖಂಡರಾದ ಗಂಗಾಧರ ದೊಡ್ಡವಾಡ ಅವರು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಪ್ರಥಮ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಈಗ ಹೋರಾಟ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಹುಬ್ಬಳ್ಳಿಯಲ್ಲಿ ಪಂಚ ಲಕ್ಷ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆಯುವ ಮೂಲಕ ಸರ್ಕಾರದ ಕಣ್ಣು ತೆರೆಸಲು ಬುಧವಾರ ಈ ಚಳವಳಿ ಆರಂಭಕ್ಕೆ ಚಾಲನೆ ನೀಡಲಾಯಿತು.

from India & World News in Kannada | VK Polls https://ift.tt/pY2astG

ಕಾಂಗ್ರೆಸ್‌ನಲ್ಲಿ ದೇವರು, ರಾಷ್ಟ್ರ ಮತ್ತು ಜನರನ್ನು ನಂಬದ ವ್ಯಕ್ತಿಯಿದ್ದರೆ ಅದು ಸಿದ್ಧರಾಮಯ್ಯ: ನಳಿನ್‌ ಕುಮಾರ್

ಸ್ವಾತಂತ್ರ್ಯ ವೀರ ಸಾವರ್ಕರ್‌ ಕುರಿತ ಹೇಳಿಕೆಯ ವಿವಾದವನ್ನು ಮರೆಮಾಚಲು ಮಾಂಸ ಸೇವಿಸಿ ದೇವಸ್ಥಾನ ಭೇಟಿ ನೀಡಿದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ, ಇದು ಅವರ ಭಾವನೆ, ನಂಬಿಕೆಗೆ ಬಿಟ್ಟ ವಿಚಾರ. ಅಧಿಕಾರವಿಲ್ಲದೆ ಒದ್ದಾಡುತ್ತಿರುವ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್‌ ಎದುರು ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

from India & World News in Kannada | VK Polls https://ift.tt/WGkz0Zx

ದೇವನಹಳ್ಳಿ: 47 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಸುಧಾಕರ್‌ ಶಂಕುಸ್ಥಾಪನೆ

Devanahalli: ವಿವಿಧ ಕಾಮಗಾರಿಗಳು: ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕೀಯರ ವಸತಿ ನಿಲಯ, ಗರಡಿಮನೆ, ಗ್ರಂಥಾಲಯ, ಘನತ್ಯಾಜ್ಯ ಘಟಕ, ಅಂಗನವಾಡಿ ಕೇಂದ್ರ ಹಾಗೂ ಜಲಜೀವನ್‌ ಮಿಷನ್‌ ಯೋಜನೆಯಡಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ, ಸೇರಿದಂತೆ ವಿವಿದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು ತುರ್ತಾಗಿ ಕಾಮಗಾರಿಗಳು ಪ್ರಾರಂಭವಾಗಿ ಲೋಕಾರ್ಪಣೆಗೊಳ್ಳಲಿವೆ. ವಿದ್ಯಾರ್ಥಿನಿಲಯಕ್ಕೆ ಭೇಟಿ ಪರಿಶೀಲನೆ: ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

from India & World News in Kannada | VK Polls https://ift.tt/aLq2i5Q

'ಐಪಿಎಲ್‌ನಿಂದಾಗಿ ಕ್ರಿಕೆಟ್‌ ಅನ್ನು ದ್ವೇಷಿಸುವಂತಾಗಿದೆ': ತಂದೆಯನ್ನು ನೆನೆದು ಭಾವುಕರಾದ ಬೆನ್‌ ಸ್ಟೋಕ್ಸ್!

Ben Stokes admits IPL made him "hate cricket": ಹಿಂದೆ 2020ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಮುಗಿಸಿಕೊಂಡ ಇಂಗ್ಲೆಂಡ್‌ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ರಾಜಸ್ಥಾನ್‌ ರಾಯಲ್ಸ್‌ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಆಡಲು ನೇರವಾಗಿ ಯುಎಇಗೆ ಬಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ತಂದೆ ವಿಧಿವಶರಾಗಿದ್ದರು. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದ ಬೆನ್‌ ಸ್ಟೋಕ್ಸ್, ಅಂದು ನಾನು ಐಪಿಎಲ್‌ ಆಡಲು ಹೋಗಬಾರದಿತ್ತು, ಸಾಯುವ ಮುನ್ನ ನಮ್ಮ ತಂದೆಯ ಜೊತೆ ಇರಬೇಕಾಗಿತ್ತು ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/leOU7xo

ಕೋಲಾರ | ಜಿಲ್ಲೆಯಲ್ಲಿ ಶಾಂತಿ ಕದಡಲು ಬಿಡೆವು: ಗೃಹ ಸಚಿವ ಆರಗ ಜ್ಞಾನೇಂದ್ರ

Armed Reserve Force Office: ಕೆಜಿಎಫ್‌ನ ಡಿಎಆರ್‌ ಆವರಣದಲ್ಲಿ 2.85 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ, ಶಸ್ತ್ರಾಸ್ತ್ರಗಾರ ಮತ್ತು ಶ್ವಾನದಳ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೆಜಿಎಫ್‌ನ ಪೊಲೀಸ್‌ ಜಿಲ್ಲೆಇತಿಹಾಸ ಹೊಂದಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಮೊದಲು ಎಸ್ಪಿ ಕಂಡತಹ ನಗರ. ಈ ಪ್ರದೇಶದ ಜನರಿಗೆ ಎಸ್ಪಿ ಕಚೇರಿಯು ಭಾವನೆಗಳೊಂದಿಗೆ ಬೆಸೆದುಕೊಂಡಿರುವ ಹಿನ್ನೆಲೆಯಲ್ಲಿ ಕೆಜಿಎಫ್‌ ಪೊಲೀಸ್‌ ಜಿಲ್ಲೆಯನ್ನಾಗಿ ಮುಂದುವರಿಸಲಾಗುವುದೆಂದು ತಿಳಿಸಿದರು.

from India & World News in Kannada | VK Polls https://ift.tt/V2Si58E

ಸೆ.2ರಂದು ಮಂಗಳೂರಿಗೆ ಮೋದಿ ಆಗಮನ: ಕರಾವಳಿಯಲ್ಲಿ ಭರದ ಸಿದ್ಧತೆಗಳು ಆರಂಭ

ಬೆಳಗ್ಗೆ ಕೊಚ್ಚಿನ್‌ ಬಂದರು ಕಾರ್ಯಕ್ರಮ ಬಳಿಕ ಸಂಜೆ 3.45ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಲಿದ್ದು, ಎನ್‌ಎಂಪಿಎಗೆ ಭೇಟಿ ನೀಡಿ ಅಲ್ಲಿ ನಾನಾ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಿದ ಬಳಿಕ ಸಂಜೆ 5 ಗಂಟೆಗೆ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಎರಡು ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಲಿದೆ ಎಂದು ಮಂಗಳೂರು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

from India & World News in Kannada | VK Polls https://ift.tt/TbnU3FK

ಸಂತ ಸೇವಾಲಾಲ್‌ ಜನ್ಮಸ್ಥಳದಲ್ಲಿ ಆರೆಸ್ಸೆಸ್‌ ಶಿಬಿರ ವಿರೋಧಿಸಿ 53 ಬಂಜಾರ ಸಂಘಟನೆಗಳ ನಿರ್ಣಯ

ಸಂತ ಸೇವಾಲಾಲ್‌ ಜನ್ಮ ಸ್ಥಳದಲ್ಲಿ ಸೋಮವಾರ ನಡೆದ ಸ್ವಾಭಿಮಾನಿ ಬಂಜಾರರ ಸಮಾವೇಶದಲ್ಲಿ ರಾಜ್ಯದ 53 ಬಂಜಾರ ಸಂಘಟನೆಗಳ ಮುಖಂಡರು, ಸ್ವಾಮೀಜಿಗಳು, ಚಿಂತಕರು ಸಮಾವೇಶದಲ್ಲಿ ಭಾಗವಹಿಸಿದ್ದರು. ಮಹಾಮಠ ಸಮಿತಿಯ ಪರವಾಗಿ ಡಾ ಈಶ್ವರನಾಯ್ಕ ಸಮಾವೇಶದ ಹಕ್ಕೊತ್ತಾಯ ಸ್ವೀಕರಿಸಿ, ಭಾಯಾಗಡ್‌ ಮತ್ತು ಬಂಜಾರರ ಹಿತಾಸಕ್ತಿ ಮಹಾಮಠ ಸಮಿತಿ ಸಂರಕ್ಷಿಸುತ್ತದೆ ಆತಂಕಬೇಡ ಎಂದು ಭರವಸೆ ನೀಡಿದರು.

from India & World News in Kannada | VK Polls https://ift.tt/N7yKM5o

ರಾಹುಲ್‌ ಗಾಂಧಿ ನೇತೃತ್ವದ 'ಭಾರತ್‌ ಜೋಡೋ' ಯಾತ್ರೆ: ಕರ್ನಾಟಕದಲ್ಲಿ 21 ದಿನ, 510 ಕಿ.ಮೀ. ಪಾದಯಾತ್ರೆ

Bharat Jodo Yatra: ರಾಜ್ಯದಲ್ಲಿ 21 ದಿನಗಳ ಕಾಲ 510 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಇದರ ಉಸ್ತುವಾರಿಯನ್ನು ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರಿಗೆ ನೀಡಲಾಗಿದೆ. ಮೇಕೆದಾಟು ಪಾದಯಾತ್ರೆ ಹಾಗೂ 75ನೇ ಸ್ವಾತಂತ್ರ್ಯದ ಅಮೃತೋತ್ಸವ ಸಂಭ್ರಮದ ಅಂಗವಾಗಿ ನಡೆದ ‘ತಿರಂಗಾ ಯಾತ್ರೆ’ ಯಶಸ್ಸಿನ ಬಳಿಕ ‘ಭಾರತ್‌ ಜೋಡೋ’ ಯಾತ್ರೆಯನ್ನು ಅಭೂತಪೂರ್ವವಾಗಿ ಸಂಘಟಿಸಲು ಪ್ರಯತ್ನ ನಡೆದಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಸೇರಿದಂತೆ 8 ಜಿಲ್ಲೆಗಳನ್ನಷ್ಟೇ ಒಳಗೊಂಡ ಈ ಯಾತ್ರೆಗೆ ರಾಜ್ಯದ ಎಲ್ಲಭಾಗಗಳಿಂದಲೂ ಪಕ್ಷದ ಕಾರ್ಯಕರ್ತರನ್ನು ಸೇರಿಸಲು ನಿರ್ಧರಿಸಲಾಗಿದೆ.

from India & World News in Kannada | VK Polls https://ift.tt/0KV1pul

ದತ್ತಪೀಠ ವಿವಾದ: ಸೆ.5ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ

ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು ಮೆಮೊ ಸಲ್ಲಿಸಿ, 2021ರ ಅ.18ರ ಏಕ ಸದಸ್ಯ ಪೀಠದ ಆದೇಶದಂತೆ ಸರಕಾರ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು ಪ್ರಕರಣದ ಮರು ಪರಿಶೀಲನೆ ನಡೆಸಿ 2022ರ ಜು.30ರಂದು ವರದಿ ಸಲ್ಲಿಸಿತ್ತು. ಸಚಿವ ಸಂಪುಟವು ವರದಿ ಅನುಮೋದಿಸಿದೆ. ಸಚಿವ ಸಂಪುಟ ಉಪ ಸಮಿತಿಯ ವರದಿ ಆಧರಿಸಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜು.1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದರು.

from India & World News in Kannada | VK Polls https://ift.tt/ltimpjQ

ದೊಡ್ಡಬಳ್ಳಾಪುರ ಜಿಲ್ಲಾಕೇಂದ್ರಕ್ಕಾಗಿ ಬೃಹತ್‌ ಹೋರಾಟ: ಬಿಜೆಪಿ ಜನೋತ್ಸವ ನಡೆಸಲು ಬಿಡೆವು-ಹೋರಾಟಗಾರರ ಎಚ್ಚರಿಕೆ

District centre: ಜನರ ಅಭಿಪ್ರಾಯ, ವಸ್ತುಸ್ಥಿತಿ ಆಧರಿಸಿ ಜಿಲ್ಲಾಕೇಂದ್ರ ಘೋಷಣೆ ಮಾಡದಿದ್ದರೆ ಯಾವುದೇ ಕಾರಣಕ್ಕೂ ಸೆಪ್ಟೆಂಬರ್ 8ರಂದು ಬಿಜೆಪಿ ಜನೋತ್ಸವ ನಡೆಸಲು ಬಿಡೆವು. ಇಡೀ ತಾಲೂಕಿನಾದ್ಯಂತ ಅಂದು ಕರಾಳೋತ್ಸವ ಆಚರಿಸಿ, ಮನೆ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲಾಗುವುದು ಎಂದು ದೊಡ್ಡಬಳ್ಳಾಪುರ ಜಿಲ್ಲಾಕೇಂದ್ರ ಹೋರಾಟ ಸಮಿತಿಯ ಮುಖಂಡ ಹಾಗೂ ಕರವೇ (ಪ್ರವೀಣ್‌ ಶೆಟ್ಟಿ) ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

from India & World News in Kannada | VK Polls https://ift.tt/U9wKFIJ

ಕೊಲೆಯತ್ನ ಪ್ರಕರಣದ ಸ್ಥಳ ಮಹಜರು ವೇಳೆ ಖಾಕಿ ಮೇಲೆರಗಿದ ಕಿರಾತಕ: ಶೂಟೌಟ್ ಮಾಡಿ ವಶಕ್ಕೆ ಪಡೆದ ಪೊಲೀಸರು

ಮುಷ್ತಾಕ್‌ ಹಾಗೂ ಆಶಿಕ್‌ ಕ್ರಿಮಿನಲ್‌ ಹಿನ್ನೆಲೆಯವರಾಗಿದ್ದಾರೆ. ಮುಷ್ತಾಕ್‌ ಎಂಬಾತನನ್ನು ಬಂಧಿಸಿ, ಮಾರಾಕಾಯುಧ ಸಹಿತ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸೋಮವಾರ ಸಂಜೆ ವೇಳೆ ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್‌ ಜಾನ್ಸನ್‌ ಸೇರಿದಂತೆ ಇತರ ಸಿಬ್ಬಂದಿ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಆರೋಪಿ ಪೊಲೀಸರಿಗೆ ಹಲ್ಲೆಮಾಡಿ ಪರಾರಿಗೆ ಯತ್ನಿಸುತ್ತಾನೆ. ಈ ವೇಳೆ ಆತ್ಮರಕ್ಷಣೆಗಾಗಿ ವಿನಾಯಕ ಬಾವಿಕಟ್ಟೆಯವರು ಮೂರು ಸುತ್ತು(ಒಂದು ಸುತ್ತು ಗಾಳಿಯಲ್ಲಿ) ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಆರೋಪಿ ಕಾಲಿಗೆ ಗಾಯವಾಗಿದ್ದು, ಆತನನ್ನು ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

from India & World News in Kannada | VK Polls https://ift.tt/qucTNye

Flood victims: ಪ್ರವಾಹ ಪರಿಹಾರ ಮನೆ ನಿರ್ಮಾಣಕ್ಕೆ ಅತಿಬಲ; 2.08 ಲಕ್ಷ ಮನೆಗಳು ಆಯ್ಕೆ!

ರಾಜ್ಯದಲ್ಲಿ 2019ರಿಂದ ಈವರೆಗೆ ನಾಲ್ಕು ವರ್ಷದಲ್ಲಿ ಬರೋಬ್ಬರಿ ಎರಡು ಲಕ್ಷ ಮನೆಗಳು ವಿವಿಧ ಹಂತದ ಹಾನಿಗೆ (Flood )ಒಳಗಾಗಿವೆ. ಅದರಲ್ಲಿ ತೀವ್ರ ಹಾನಿಯಾದ ಮನೆಗಳ ಪೈಕಿ ಸುಮಾರು 47 ಸಾವಿರ ಮನೆಗಳ ಮರು ನಿರ್ಮಾಣಕ್ಕೆ ತಳಪಾಯ ಕಾಮಗಾರಿ ಆಗಿದೆ. ಈ ಪೈಕಿ 30 ಸಾವಿರ ಮನೆಗಳು ಚಾವಣಿ ಹಂತ ದಾಟಿವೆ ಎಂದು ಮನೆ ಪರಿಹಾರ ವ್ಯವಸ್ಥೆ ನಿರ್ವಹಿಸುವ ರಾಜೀವ್‌ಗಾಂಧಿ ವಸತಿ ನಿಗಮ ಪ್ರಕಟಿಸಿದೆ.

from India & World News in Kannada | VK Polls https://ift.tt/ZNMnU67

ತುಮಕೂರಿನಲ್ಲಿ ಶಿಶುಪಾಲನಾ ಕೇಂದ್ರ ಭಣ ಭಣ: ಮಕ್ಕಳನ್ನು ಕಳುಹಿಸಲು ಸರಕಾರಿ ನೌಕರರ ನಿರಾಸಕ್ತಿ

ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳನ್ನು ಬಿಡಲು ಸರಕಾರಿ ನೌಕರರು ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ತುಮಕೂರು ಜಿಲ್ಲಾಪಂಚಾಯಿತಿ ಮತ್ತು ಮಹಾನಗರ ಪಾಲಿಕೆಯಲ್ಲಿ ಸರಕಾರಿ ನೌಕರರ ಮಕ್ಕಳ ಆರೈಕೆಗೆಂದೇ ತೆರೆಯಲಾಗಿರುವ ಶಿಶುಪಾಲನಾ ಕೇಂದ್ರಗಳು ಮಕ್ಕಳಿಲ್ಲದೆ ಬಣಗುಡುತ್ತಿವೆ. ಜಿಲ್ಲಾಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯ ಹಳೆಯ ಕಟ್ಟಡದಲ್ಲಿರುವ ಶಿಶುಪಾಲನ ಕೇಂದ್ರಗಳಲ್ಲಿ ಒಟ್ಟು 8 ಮಕ್ಕಳು ಮಾತ್ರ ಇದ್ದಾರೆ. ವಿಪರ್ಯಾಸವೆಂದರೆ ನೋಂದಣಿ ಮಾಡಿಸಿರುವ ಸರಕಾರಿ ನೌಕರರು ಸಹ ತಮ್ಮ ಮಕ್ಕಳನ್ನು ಆರೈಕೆಗೆಂದು ಕೇಂದ್ರಕ್ಕೆ ಕಳುಹಿಸಿಲ್ಲ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಫಲ ಪಡೆಯಲು ಸರಕಾರಿ ನೌಕರರೇ ಆಸಕ್ತರಾಗದಿರುವುದು ವಿಶೇಷ.

from India & World News in Kannada | VK Polls https://ift.tt/wcuOy0Z

ವಿದೇಶದಿಂದ ಆಮದಾಗುತ್ತಿರುವ ಅಡಕೆಗೆ ನಿರ್ಬಂಧ ಹೇರುವಂತೆ ಶಿರಸಿಯಲ್ಲಿ ನಿಯೋಗದಿಂದ ಕೇಂದ್ರ ಸರ್ಕಾರಕ್ಕೆ ಮನವಿ

ವಿದೇಶದಿಂದ ಆಮದಾಗುತ್ತಿರುವ ಅಡಕೆಗೆ ನಿರ್ಬಂಧ ಹೇರಬೇಕು ಮತ್ತು ಅಡಕೆಯ ಕನಿಷ್ಟ ಆಮದು ಶುಲ್ಕ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ಹಾಗೂ ಅಡಿಕೆ ಮಾರಾಟ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳ ನಿಯೋಗವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ರಾಜ್ಯ ಗೃಹ ಸಚಿವ ಹಾಗೂ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನಿಯೋಗವು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

from India & World News in Kannada | VK Polls https://ift.tt/jF5Tm1A

ಹುಣಸೂರಿನಲ್ಲಿ ಏತ ನೀರಾವರಿ ಯೋಜನೆಗೆ ಅನುದಾನ ನೀಡಿ: ಸಚಿವರಿಗೆ ಶಾಸಕ ಮಂಜುನಾಥ್‌ ಮನವಿ

ಹುಣಸೂರು ತಾಲೂಕಿನ ಲಕ್ಷ್ಮಣತೀರ್ಥ ನದಿಯ ಮರದೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ನೀರಾವರಿ ಸಚಿವ ಗೋವಿಂದ ಕಾರಜೋಳರಿಗೆ ಶಾಸಕ ಎಚ್‌.ಪಿ.ಮಂಜುನಾಥರು ಮನವಿ ಮಾಡಿದ್ದಾರೆ. ಸಚಿವರ ಕೊಡಗು ಜಿಲ್ಲಾ ಪ್ರವಾಸದ ವೇಳೆ ಹಾರಂಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ರಾತ್ರಿ ಸಚಿವರನ್ನು ಭೇಟಿ ಮಾಡಿ ಶಾಸಕರು ಮನವಿ ಪತ್ರ ಸಲ್ಲಿಸಿದ್ರು. ಮರದೂರು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ತಾವು ಈಗಾಗಲೇ ವಿಧಾನಸೌಧ ಅಧಿವೇಶನದಲ್ಲಿ ಭರವಸೆ ನೀಡಿದ್ದಿರಿ, ಆದರೆ ಈವರೆಗೂ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ.

from India & World News in Kannada | VK Polls https://ift.tt/Fdg6lHf

ಸಚಿವ ಸಂಪುಟಕ್ಕೆ ಯಾವಾಗ ಯಾರನ್ನು ಸೇರಿಸಿಕೊಳ್ತೀವಿ ಅನ್ನೋದನ್ನು ಹೇಳೋಕಾಗಲ್ಲ: ಬೊಮ್ಮಾಯಿ

ಸಚಿವ ಸಂಪುಟಕ್ಕೆ ಯಾವಾಗ ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಮತ್ತು ನಿಗಮ ಮಂಡಳಿಗೆ ಯಾರಿಗೆಲ್ಲ ಅವಕಾಶ ನೀಡಲಾಗುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ ಸಿಎಂ ಬೊಮ್ಮಾಯಿ, ಪ್ರಚಲಿತ ವಿದ್ಯಮಾನಗಳು ಸರಕಾರಕ್ಕೆ ಕಪ್ಪು ಚುಕ್ಕೆ ಎನ್ನುವ ಪ್ರಶ್ನೆಯೇ ಉದ್ಭವಿಸದು. ಪರ ಮತ್ತು ವಿರೋಧಗಳ ಕುರಿತು ಸಾಮಾಜಿಕವಾಗಿ ಚರ್ಚೆ ಆಗುತ್ತಿವೆ. ಕೆಲವರು ಅವುಗಳ ಬಗ್ಗೆ ತಮಗೆ ಬೇಕಾದಂತೆ ವಿಶ್ಲೇಷಿಸುತ್ತ ಜನರನ್ನು ಗೊಂದಲಕ್ಕೀಡು ಮಾಡಿ ಮನಸ್ಸನ್ನು ಕೆಡಿಸುತ್ತಿದ್ದಾರೆ ಎಂದರು.

from India & World News in Kannada | VK Polls https://ift.tt/H0Q2raP

ಸರ್ಕಾರಿ ಕಚೇರಿಗಳಲ್ಲಿ ಕಾಸು ಬಿಚ್ಚದಿದ್ದರೆ ಕಡತ ಒಂದಿಂಚೂ ಮುಂದೆ ಕದಲದು: ಹೈಕೋರ್ಟ್‌ ಕಳವಳ

ಸರಕಾರದ ಇಲಾಖೆಗಳಲ್ಲಿ ಲಂಚ ಹೆಚ್ಚುತ್ತಿರುವುದರ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ಸರಕಾರಿ ಕಚೇರಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಲಂಚ ನೀಡದೆ ಯಾವುದೇ ಕಡತ ಮುಂದೆ ಹೋಗುವುದಿಲ್ಲ. ಹಾಗಾಗಿ, ಈ ಹಂತದಲ್ಲಿ ಅರ್ಜಿದಾರರು ಜಾಮೀನಿಗೆ ಅರ್ಹವಾಗಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.

from India & World News in Kannada | VK Polls https://ift.tt/fvwRC30

ಸಿದ್ದರಾಮಯ್ಯರ ಕಾರ್‌ ಮೇಲೆ ಮೊಟ್ಟೆ ಎಸೆದು ಅಗೌರವವಾಗಿ ನಡೆದುಕೊಂಡಿದ್ದು ಸರಿಯಲ್ಲ: ವಿ.ಸೋಮಣ್ಣ

ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇದಾವೆ. ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಆದರೆ ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು. ಈಗ ಆಗಿರುವುದರಿಂದ ಕಾನೂನು ಚೌಕಟ್ಟಿನಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅವುಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಇದು ಮುಗಿದ ಅಧ್ಯಾಯವಾಗಿದೆ. ಅಲ್ಲದೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳೂ ಸಹ ಹೆಚ್ಚಿನ ಭದ್ರತೆ ಕೊಟ್ಟಿದ್ದಾರೆ. ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದರು.

from India & World News in Kannada | VK Polls https://ift.tt/sPyw5YQ

ರಷ್ಯಾ ಅಧ್ಯಕ್ಷರ ಆಪ್ತ ಸಹಾಯಕ ಅಲೆಕ್ಸಾಂಡರ್ ಡುಗಿನ್ ಪುತ್ರಿ ಡಾರ್ಯ ಕಾರು ಬಾಂಬ್ ಸ್ಪೋಟದಲ್ಲಿ ಸಾವು

ರಷ್ಯಾದ ರಾಜಕೀಯ ತತ್ವಜ್ಞಾನಿ ಮತ್ತು ವಿಶ್ಲೇಷಕ ಅಲೆಕ್ಸಾಂಡರ್ ಡುಗಿನ್ ಅವರ ಪುತ್ರಿ ಕಾರು ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 29 ವರುಷ ವಯಸ್ಸಾಗಿತ್ತು. 29 ವರ್ಷದ ದುಗಿನಾ ಅವರು "ಟ್ರೆಡಿಷನ್" ಎಂಬ ಸಾಹಿತ್ಯ ಮತ್ತು ಸಂಗೀತ ಉತ್ಸವದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ರಷ್ಯಾದ ಮಾದ್ಯಮಗಳು ವರದಿ ಮಾಡಿದೆ.

from India & World News in Kannada | VK Polls https://ift.tt/nQAN5oV

ಮತದಾರರ ಚೀಟಿಗೆ ಆಧಾರ್‌ ಜೋಡಣೆ ಸವಾಲು; ನಕಲಿ ಮತದಾನ ಹಾವಳಿ ಆತಂಕ!

​ ವೋಟರ್‌ ಐಡಿ-ಆಧಾರ್‌ ಲಿಂಕ್‌ಗೆ ಮತದಾರರು ಕಚೇರಿ ಅಲೆಯಬೇಕಿಲ್ಲ. ತಮ್ಮ ಬಳಿ ಇರುವ ಮೊಬೈಲ್‌ ಮೂಲಕ ಸುಲಭವಾಗಿ ಲಿಂಕ್‌ ಮಾಡಬಹುದು. ವೋಟರ್ಸ್‌ ಹೆಲ್ಪ್‌ ಲೈನ್‌ ಆಪ್‌ ಮೂಲಕ ಮತದಾರರ ಚೀಟಿಗೆ ಆಧಾರ್‌ ಲಿಂಕ್‌ ಮಾಡಬಹುದು. ಆಪ್‌ ನಲ್ಲಿ ಫಾರ್ಮ್ -6ಬಿಯನ್ನು ಸೆಲೆಕ್ಟ್ ಮಾಡಿ ಫೋನ್‌ ನಂಬರ್‌ ಹಾಕಿ ನಂತರ ಆಧಾರ್‌ ನಂಬರ್‌ ಹಾಕಿದರೆ ಮತದಾರರ ಚೀಟಿಗೆ ಲಿಂಕ್‌ ಆಗುತ್ತದೆ. ಇದರ ಬಗ್ಗೆ ಮಾಹಿತಿಯೂ ಲಭ್ಯವಾಗುತ್ತದೆ.

from India & World News in Kannada | VK Polls https://ift.tt/kAfUF8H

ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ: ಭಾನುವಾರ, ಸೋಮವಾರ ಸಾಧಾರಣ ಮಳೆ; ಆ.23, 24ಕ್ಕೆ ಯೆಲ್ಲೊ ಅಲರ್ಟ್‌

ಆ.21 ಮತ್ತು ಆ.22ರಂದು ರಾಜ್ಯಾದ್ಯಂತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಆ.23ರಿಂದ ಮೂರು ದಿನ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ನೀಡಲಾಗಿದೆ.

from India & World News in Kannada | VK Polls https://ift.tt/Kn1oq5C

Huli Vesha | ಅಷ್ಟಮಿ, ವಿಟ್ಲಪಿಂಡಿ ಸಂಭ್ರಮ: ವೇಷಧಾರಿಗಳೊಂದಿಗೆ ಯುವತಿಯರ ನೃತ್ಯ ಕ್ರೇಜ್

ಶ್ರೀಕೃಷ್ಣನ ಭಕ್ತಿಗೆ ಎಣೆಯಿಲ್ಲದಂತೆ ನಂದಗೋಕುಲವಾದ ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ಸರತಿಯಲ್ಲಿ ಭಕ್ತರು ಪಡೆದರು. 10,000ಕ್ಕೂ ಅಧಿಕ ಮಂದಿಗೆ ಶ್ರೀಕೃಷ್ಣ ಪ್ರಸಾದ ವಿತರಣೆಯಾಗಿದ್ದು ಮಧ್ಯಾಹ್ನ ಬಳಿಕ ವಿಟ್ಲಪಿಂಡಿ, ಶ್ರೀಕೃಷ್ಣಲೀಲೋತ್ಸವದ ಸಂಭ್ರಮಕ್ಕೆ ಹುಲಿ ವೇಷ ತಂಡಗಳ ಸಹಿತ ನಾನಾ ವೇಷಗಳು ಮತ್ತಷ್ಟು ಮೆರುಗು ನೀಡಿದವು. ಶ್ರೀಕೃಷ್ಣ(ವಿಷ್ಣು) ಚಾತುರ್ಮಾಸ್ಯ ಕಾಲದಲ್ಲಿ ಶಯನೀಯನಾದ ಹಿನ್ನೆಲೆಯಲ್ಲಿಉತ್ಥಾನ ದ್ವಾದಶಿ ತನಕ ಉತ್ಸವಮೂರ್ತಿಯನ್ನು ಹೊರತೆಗೆಯದ ಕಾರಣಕ್ಕೆ ವಿಟ್ಲಪಿಂಡಿಯಲ್ಲಿ ಸ್ವರ್ಣ ರಥೋತ್ಸವದಲ್ಲಿ ಕಲಾವಿದ ಸೋಮನಾಥ್‌ ಅವರು ಮಣ್ಣಿನಿಂದ ರಚಿಸಿದ ಕೃಷ್ಣನ ಮೂರ್ತಿಯನ್ನಿಟ್ಟು ನೈಸರ್ಗಿಕ ಬಣ್ಣವನ್ನಷ್ಟೇ ಬಳಿದು ಉತ್ಸವ ನಡೆಸಲಾಗುತ್ತಿದೆ.

from India & World News in Kannada | VK Polls https://ift.tt/z6TcxZq

ಕುದೂರು | ಈಡೇರದ ವಕೀಲನಾಗುವ ಕನಸು, ಕಡಿಮೆ ಅಂಕದಿಂದಾಗಿ ಎಲ್‌ಎಲ್‌ಬಿಗೆ ಸಿಗದ ಪ್ರವೇಶ: ಯುವಕ ಆತ್ಮಹತ್ಯೆ

LLB seat: ಪಿಯುಸಿ ಹಾಗೂ ಐಟಿಐ ಮುಗಿಸಿ ವಕೀಲನಾಗುವ ಕನಸು ಕಟ್ಟಿಕೊಂಡಿದ್ದನು. ಆದರೆ ವಕೀಲನಾಗುವುದಕ್ಕೆ ಶೇಕಡವಾರು ಅಂಕ ಕಡಿಮೆ ಇದ್ದರಿಂದ ಎಲ್ಎಲ್‌ಬಿ ಪ್ರವೇಶ ಸಿಗಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೀವನದಲ್ಲಿ ಬೇಸರ ಆಗಿರುವುದಾಗಿ ಆತ್ಮಹತ್ಯೆಗೂ ಮುನ್ನ ಮೊಬೈಲ್‌ನಲ್ಲಿ ಈ ಯುವಕ ತಾನೆ ಸ್ವತಃ ಚಿತ್ರೀಕರಣ ಮಾಡಿಕೊಂಡಿದ್ದಾನೆ‌. ಚಿತ್ರೀಕರಣದ ವಿಡಿಯೋ ಅನ್ನು ತನ್ನ ಅಣ್ಣ ಹಾಗೂ ಸ್ನೇಹಿತರಿಗೆ ಕಳಿಸಿದ್ದಾನೆ ಎನ್ನಲಾಗಿದೆ.

from India & World News in Kannada | VK Polls https://ift.tt/VkjyXUx

ಡಿಕೆಶಿ ಅಂಥವರನ್ನು ಎಎಪಿ ದೂರ ಇಡಲಿದೆ, ಅಕ್ಟೋಬರ್‌ನಲ್ಲಿ ಕೇಜ್ರಿವಾಲ್‌ ಉತ್ತರ ಕರ್ನಾಟಕ ಪ್ರವಾಸ: ಪೃಥ್ವಿ ರೆಡ್ಡಿ

ಬೆಲೆ ಏರಿಕೆ, ನಿರುದ್ಯೋಗ, ಕುಟುಂಬ ರಾಜಕಾರಣ, ಭ್ರಷ್ಟಾಚಾರದಿಂದ ಕೂಡಿದ ಆಡಳಿತದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ರಾಜ್ಯದ ಮೂರು ರಾಜಕೀಯ ಪಕ್ಷಗಳು ತಾವು ಭ್ರಷ್ಟಾಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತಿಲ್ಲ. ಅದರ ಬದಲು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಶೇ. 40 ಹಾಗೂ ಶೇ.0 ಪರ್ಸೆಂಟ್ ಸರ್ಕಾರ ಇವೆರಡೂ ಜನರ ಮುಂದಿರುವ ಆಯ್ಕೆಯಾಗಿವೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಎದುರಾಳಿ ಎಂದು ಸಚಿವ ಆರ್. ಅಶೋಕ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.

from India & World News in Kannada | VK Polls https://ift.tt/IxGgmC2

ಕಲಬೆರಕೆ ಹಾಲಾಹಲ..! ಕೇರಳದಲ್ಲಿ ರಾಸಾಯನಿಕ ಮಿಶ್ರಿತ ಹಾಲು ಪತ್ತೆ; ಓಣಂ ಮೇಲೆ ಕಣ್ಣು

ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಗಾದೆಮಾತು ಈಗ ಕೇರಳದ ಮಾರುಕಟ್ಟೆಯಲ್ಲಿ ಲಭಿಸುವ ಹಾಲಿಗೂ ಅನ್ವಯವಾಗುತ್ತಿದೆ. ಕೇರಳದ ಓಣಂ ಮಾರುಕಟ್ಟೆಯನ್ನು ಗುರಿಯಾಗಿಸಿ ಕಲಬೆರಕೆ ದಂಧೆ ದೊಡ್ಡ ಮಟ್ಟಿನಲ್ಲಿ ನಡೆಯುತ್ತಿದ್ದು, ನೆರೆ ರಾಜ್ಯ ತಮಿಳುನಾಡಿನಿಂದ ಕೇರಳಕ್ಕೆ ಭಾರಿ ಪ್ರಮಾಣದ ಕಲಬೆರಕೆ ಹಾಲು ಪೂರೈಕೆಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ. ಮಾವಿನಹಣ್ಣು, ತರಕಾರಿಗಳು, ತೆಂಗಿನೆಣ್ಣೆ, ಇತರ ಅಡುಗೆ ತೈಲಗಳು, ಬೆಲ್ಲ ಹೀಗೆ ಹಲವಾರು ಆಹಾರ ವಸ್ತುಗಳಲ್ಲಿ ವಿಷಾಂಶ ಬೆರೆಸುವುದನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಈಗ ಹೊಸದಾಗಿ ಹಾಲಿನಲ್ಲಿ ಕಲಬೆರಕೆ ಪತ್ತೆಹಚ್ಚಲಾಗಿದೆ. ಇದರಿಂದ ಹಾಲು ಮಾರುಕಟ್ಟೆ ತಲ್ಲಣಗೊಂಡಿದೆ.

from India & World News in Kannada | VK Polls https://ift.tt/DIOHhwe

ಮನೀಶ್‌ ಪಾಂಡೆ ಅಬ್ಬರದ ಬ್ಯಾಟಿಂಗ್‌: ಗುಲ್ಬರ್ಗ ಮಿಸ್ಟಿಕ್ಸ್‌ಗೆ ಭರ್ಜರಿ ಜಯ!

Gulbarga Mystics vs Mangalore United Highlights: ಮನೀಶ್‌ ಪಾಂಡೆ ಸ್ಪೋಟಕ ಅರ್ಧಶತಕ ಹಾಗೂ ಸಿಎ ಕಾರ್ತಿಕ್‌(38 ರನ್‌, 2 ವಿಕೆಟ್‌) ಆಲ್‌ರೌಂಡ್‌ ಆಟದ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡಕ್ಕೆ 2022ರ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮಂಗಳೂರು ಯುಲೈಟೆಡ್‌ ತಂಡದ ವಿರುದ್ಧ 28 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಮನೀಶ್‌ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿತು. ಆಲ್‌ರೌಂಡ್‌ ಪ್ರದರ್ಶನ ತೋರಿದ ಸಿಎ ಕಾರ್ತಿಕ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/58CX406

ಪ್ರಿಯಕರನ ಜತೆಗಿನ ಸಾಂಗತ್ಯಕ್ಕೆ ಗಂಡನ ಹತ್ಯೆಗೆ ಸುಪಾರಿ; ಬದುಕುಳಿದ ಗಂಡ, ಜೀವಬಿಟ್ಟ ಪ್ರಿಯಕರ!

ಆರೋಪಿಗಳು ಎಣ್ಣೆ ಪಾರ್ಟಿ ಮಾಡುವಾಗ ನವೀನ್‌ ಕೂಡ ಜತೆಯಾಗಿದ್ದು, ಅವರಿಗೆ ಸ್ನೇಹಿತನಾಗಿಬಿಟ್ಟಿದ್ದ. ಹೀಗಾಗಿ ನವೀನ್‌ ಕೊಲ್ಲುವ ನಿರ್ಧಾರದಿಂದ ಆರೋಪಿಗಳು ಹಿಂದೆ ಸರಿದು ಸುಪಾರಿ ವಿಚಾರ ತಿಳಿಸಿದ್ದರು. ಆದರೆ, ಸುಪಾರಿಗೆ ಒಪ್ಪಿಕೊಂಡಿರುವ 1 ಲಕ್ಷ ರೂ. ಹಣ ಪಡೆದುಕೊಳ್ಳುತ್ತೇವೆ. ಹೀಗಾಗಿ ನೀನು ಸತ್ತವನಂತೆ ನಟನೆ ಮಾಡು. ನಾವು ಹಿಮವಂತ್‌ಗೆ ವಿಡಿಯೋ ಕರೆ ಮಾಡಿ ನಂಬಿಸುತ್ತೇವೆ ಎಂದು ತಿಳಿಸಿದ್ದರು. ಇದಕ್ಕೆ ನವೀನ್‌ ಒಪ್ಪಿಕೊಂಡಿದ್ದರು.

from India & World News in Kannada | VK Polls https://ift.tt/lu8OIvM

ಚಿಕ್ಕಬಳ್ಳಾಪುರದಲ್ಲಿ ಅವ್ಯವಸ್ಥೆಗಳ ಆಗರವಾದ ಜ್ಞಾನಮಂದಿರ: ಸುಸಜ್ಜಿತ ಕಟ್ಟಡವಿದ್ದರೂ ನಿರ್ವಹಣೆಯಿಲ್ಲ!

ಗರದ ಹೆಗ್ಗುರುತು ಎಂದರೆ ಅದು ಸರ್‌.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಬೃಹತ್‌ ಕಟ್ಟಡ. ಆದರೆ ಈ ಗ್ರಂಥಾಲಯದ ಒಳ ಹೊಕ್ಕರೆ ಹೆಜ್ಜೆ ಹೆಜ್ಜೆಗೂ ನೂರೆಂಟು ಸಮಸ್ಯೆಗಳು. ಗ್ರಂಥಾಲಯ ಎಂದರೆ ಎಲ್ಲ ಪುಸ್ತಕಗಳು ಸಿಗುವಂತಿರಬೇಕು. ಆದರೆ, 3 ಮಹಡಿಯ ಕಟ್ಟಡದಲ್ಲಿ ಪುಸ್ತಕಗಳಿಗೆ ಕೇವಲ ಒಂದೇ ಕೊಠಡಿ ಮೀಸಲಿಟ್ಟಿದ್ದು ಅವ್ಯವಸ್ಥೆಗಳ ಆಗರವಾಗಿದೆ. ಓದುಗರೇ ಪುಸ್ತಕಗಳನ್ನು ತಂದು ವ್ಯಾಸಂಗ ಮಾಡಿಕೊಳ್ಳಬೇಕಿದೆ. ಗ್ರಂಥಾಲಯದಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ದೊಡ್ಡದಿದೆ. ಮೊದಲನೆಯದಾಗಿ ಇರುವ ಒಂದು ಪುಸ್ತಕಗಳ ಕೊಠಡಿಯಲ್ಲಿ ಕ್ರಮಬದ್ಧವಾಗಿ ಪುಸ್ತಕಗಳನ್ನು ಜೋಡಿಸಿಲ್ಲ.

from India & World News in Kannada | VK Polls https://ift.tt/fKp0Z4B

BDA: ಅಪಾರ್ಟ್‌ಮೆಂಟ್‌ ನಿರ್ವಹಣಾ ಶುಲ್ಕ ರದ್ದು?: ಫ್ಲ್ಯಾಟ್‌ ನಿವಾಸಿಗಳ ಒತ್ತಾಯ; ಬಿಡಿಎ ಚಿಂತನೆ!

ಬಿಡಿಎ (BDA apartment)ಅಭಿವೃದ್ಧಿಪಡಿಸಿದ ಅಂಜನಾಪುರ, ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ನಾನಾ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಸಮಸ್ಯೆಗಳು ತಾಂಡವವಾಡುತ್ತಿವೆ. ಹೀಗಿರುವಾಗ ಹೆಚ್ಚುವರಿಯಾಗಿ ಏಕೆ ನಿರ್ವಹಣೆ ಶುಲ್ಕ ಪಾವತಿಸಬೇಕು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

from India & World News in Kannada | VK Polls https://ift.tt/kOgpZbX

ದಸರಾಕ್ಕೆ ಮೈಸೂರು, ದೀಪಾವಳಿಗೆ ಹಂಪಿ ಸಕ್ರ್ಯುಟ್‌ ಪ್ರವಾಸ: ಅಧಿಕಾರಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸಿಎಂ

Mysuru and Hampi tourism: ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ, ''ಮೈಸೂರು -ಬೇಲೂರು-ಹಳೇಬೀಡು ಒಳಗೊಂಡ ಮೈಸೂರು ಸರ್ಕು್ಯಟ್‌ ಹಾಗೂ ಹಂಪಿ -ಬಾದಾಮಿ -ಐಹೊಳೆ -ಪಟ್ಟದಕಲ್ಲುಪ್ರವಾಸೋದ್ಯಮ ಸರ್ಕು್ಯಟ್‌ಗಳು ಶೀಘ್ರ ಆರಂಭವಾಗಬೇಕು. ಸಾಹಸ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳನ್ನೂ ಈ ಸಕ್ರ್ಯುಟ್‌ಗಳಲ್ಲಿಸೇರ್ಪಡೆಗೊಳಿಸಬೇಕು,'' ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿರುವ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆ ದತ್ತು ಪಡೆಯುವ ಯೋಜನೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

from India & World News in Kannada | VK Polls https://ift.tt/E3BeAZz

ಶೇ.25 ಪಿಯು, ಶೇ.75 ಸಿಇಟಿ ಅಂಕ ಪರಿಗಣಿಸಲು ಸಾಧ್ಯವೇ?-ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

PUC and CET marks: ​​ಚಿಕ್ಕಮಗಳೂರಿನ ಆರ್‌.ಈಶ್ವರ್‌ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಏಳು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಆ ವೇಳೆ ಪಿಯುಸಿ, ಸಿಇಟಿ ಅಂಕ ಪರಿಗಣಿಸಿದರೆ ಎಲ್ಲರಿಗೂ ಸಹಮತದ ಸೂತ್ರವನ್ನು ಸರಕಾರ ಕಂಡುಕೊಳ್ಳಬಹುದು ಎಂದು ಹೇಳಿತು. ಅಲ್ಲದೆ, ಆ ಬಗ್ಗೆ ನಿರ್ಧಾರ ತಿಳಿಸಲು ಎಎಜಿ ಸಮಯ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಆ.22ಕ್ಕೆ ಮುಂದೂಡಿತು.

from India & World News in Kannada | VK Polls https://ift.tt/GrSL8iV

ಪುತ್ತೂರಿನಲ್ಲಿ ದೇಶದ ಮೊದಲ ‘ಸ್ವಾವಲಂಬಿ’ ಆಪ್: ಸರಕಾರದ ನೂತನ ಯೋಜನೆಯಿಂದ ಜನರಿಗೆ ವರದಾನ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ದೇಶದ ಮೊದಲ ಸ್ವಾವಲಂಬಿ ಆಪ್ ಬಳಸಿಕೊಂಡು ತಮ್ಮ ಜಮೀನಿನ ನಕ್ಷೆ ತಾವೇ ಮಾಡಿಕೊಂಡಿದ್ದು, ರಾಜ್ಯ ಸರಕಾರದ ಹೊಸ ಯೋಜನೆ ಜನರಿಗೆ ವರದಾನವಾಗಿದೆ. ಇಷ್ಟು ವರ್ಷಗಳಿಂದ ನಾಗರಿಕರು ತಮ್ಮ ಖಾಸಗಿ ಜಮೀನಿನ ನಕ್ಷೆಯನ್ನು ಅರ್ಜಿ ಸಲ್ಲಿಸಿದ ಬಳಿಕ ಸರಕಾರಿ ಅಥವಾ ಪರವಾನಗಿ ಪಡೆದ ಭೂಮಾಪಕರು ಸಿದ್ಧಪಡಿಸಿಕೊಡುತ್ತಿದ್ದರು. ರಾಜ್ಯದಲ್ಲಿ ಸೀಮಿತ ಭೂಮಾಪಕರಿದ್ದು, ಪ್ರತೀ ತಿಂಗಳು 1 ಲಕ್ಷಕ್ಕಿಂತ ಹೆಚ್ಚು ಅರ್ಜಿ ಸ್ವೀಕೃತವಾಗುತ್ತಿದೆ. ಹೆಚ್ಚುವರಿ 6 ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ಅಳತೆಗಾಗಿ ಬಾಕಿ ಇವೆ.

from India & World News in Kannada | VK Polls https://ift.tt/1qgSxa0

ಶಿವಮೊಗ್ಗದಲ್ಲಿ 8 ತಿಂಗಳಲ್ಲಿ ಮೂರು ಕೋಮುಗಲಭೆ: ಕಮರುತ್ತಿರುವ ಉದ್ಯಮ; ಸಂಘರ್ಷಕ್ಕೆ 300 ಕೋಟಿ ನಷ್ಟ!

ಇತ್ತೀಚೆಗೆ ಅಮೀರ್‌ ಅಹಮ್ಮದ್‌ ವೃತ್ತದಲ್ಲಿ ನಡೆದ ಗಲಾಟೆಯೂ ದುಡಿಯುವ ವರ್ಗವನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ಬರೀ ಈ ಮೂರು ದಿನಗಳಲ್ಲಿ ಅಂದಾಜು 30-35 ಕೋಟಿಯಷ್ಟು ನಷ್ಟವಾಗಿದೆ. ಶ್ರಾವಣ ಆರಂಭವಾಗಿದ್ದು ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಬಟ್ಟೆಗಳನ್ನು ಖರೀದಿಸುವ ಪ್ರಕ್ರಿಯೆ ಜೋರಾಗಿ ನಡೆಯಬೇಕಿತ್ತು. ಆದರೆ, ಅನಪೇಕ್ಷಿತ ಬಂದ್‌ ಜವಳಿ ಉದ್ಯಮದ ಮೇಲೆ ತಣ್ಣೀರು ಎರಚಿದೆ.

from India & World News in Kannada | VK Polls https://ift.tt/FCoYLXd

ಚಿಕ್ಕಮಗಳೂರಿನಲ್ಲಿ ಕುಂಭದ್ರೋಣ ಮಳೆಯಿಂದ 282 ಕೋಟಿ ರೂ.ನಷ್ಟ

ಸಕ್ತ ಸಾಲಿನ ಜೂನ್‌ 1ರಿಂದ ಈವರೆಗೆ ಜಿಲ್ಲೆಯಲ್ಲಿ ಸುರಿದ ತೀವ್ರ ಮಳೆಗೆ ಒಟ್ಟಾರೆ 282.51 ಕೋಟಿ ರೂ. ಕೋಟಿ ರೂ.ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಮಳೆಯಿಂದ ಉಂಟಾದ ಅನಾಹುತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದು, ಅವರಿಗೆ ತಲಾ 4 ಲಕ್ಷ ರೂ.ಗಳಂತೆ ಒಟ್ಟು 24 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. ಮಳೆಯಿಂದ ಮನೆಗೆ ನೀರು ನುಗ್ಗಿ 17 ಮನೆಗಳಲ್ಲಿ ಬಟ್ಟೆ, ಬರೆ ಹಾಗೂ ಪಾತ್ರೆಗಳು ಕೊಚ್ಚಿಹೋಗಿವೆ. ಪರಿಹಾರ ಕಾರ್ಯಾಚರಣೆ ಹಾಗೂ ಜನರ ಸ್ಥಳಾಂತರಕ್ಕೆ 4.7 ಲಕ್ಷ ರೂ. ವೆಚ್ಚ ಮಾಡಲಾಗಿದೆ.

from India & World News in Kannada | VK Polls https://ift.tt/AJZTSpC

‘ವಿಪಕ್ಷ ನಾಯಕರಿಗೆ ತನ್ನದೇ ಆದ ಗೌರವ ಇದೆ’: ಸಿದ್ದರಾಮಯ್ಯ ಕಾರ್‌ಗೆ ಮೊಟ್ಟೆ ಎಸೆದ ಕೃತ್ಯ ಖಂಡಿಸಿದ ಸಿಎಂ

ಮಾನ್ಯ ಸಿದ್ದರಾಮಯ್ಯ ಅವರು, ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

from India & World News in Kannada | VK Polls https://ift.tt/buHpoY0

Maharaja Trophy 2022: ದೇವದತ್‌ ಪಡಿಕ್ಕಲ್‌ ಆರ್ಭಟ, ಗುಲ್ಬರ್ಗ ಮೈಸ್ಟಿಕ್ಸ್‌ಗೆ 6 ವಿಕೆಟ್‌ ಜಯ!

Gulbarga Mystics vs Bengaluru Blasters match Highlights: ದೇವದತ್‌ ಪಡಿಕ್ಕಲ್‌(78*) ಅವರ ಅಜೇಯ ಅರ್ಧಶತಕ ಹಾಗೂ ವಿದ್ವತ್‌ ಕಾವೇರಪ್ಪ ಮತ್ತು ಮನೋಜ್‌ ಭಂಡಾಜೆ ಅವರ ಅತ್ಯುತ್ತಮ ಬೌಲಿಂಗ್‌ ಸಹಾಯದಿಂದ ಗುಲ್ಬರ್ಗ ಮೈಸ್ಟಿಕ್ಸ್‌ ತಂಡ 2022ರ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಬೆಂಗಳೂರು ನೀಡಿದ್ದ 145 ರನ್‌ ಗುರಿ ಹಿಂಬಾಲಿಸಿದ ಗುಲ್ಬರ್ಗ ಮೈಸ್ಟಿಕ್ಸ್‌ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಸಂಭ್ರಮಿಸಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7tJA1N5

ಕಾರವಾರ ಶಾಸಕಿ ರೂಪಾಲಿ ನಾಯ್ಕ್‌ ಜನ್ಮದಿನಕ್ಕೆ ಅಭಿಮಾನಿಗಳಿಂದ 250 ಕೆಜಿ ಸೇಬು ಹಣ್ಣಿನ ಮಾಲೆ!

Roopali Naik Birthday: ಕಳೆದ ಬಾರಿ ಶಾಸಕಿ ರೂಪಾಲಿ ತಮ್ಮ ಮಗನ ವಿವಾಹ ಮಹೋತ್ಸವವನ್ನ ಅದ್ಧೂರಿಯಾಗಿ ನೆರವೇರಿಸಿ, ಶಾಸಕರು- ಸಚಿವರುಗಳ ದಂಡನ್ನೇ ಕಾರವಾರಕ್ಕೆ ಕರೆಯಿಸಿ ಭಾರೀ ಸದ್ದು ಮಾಡಿದ್ದರು. ಇದು ರಾಜ್ಯದಾದ್ಯಂತ ಭಾರೀ ಸುದ್ದಿಯಾಗಿ ಎಲ್ಲರೂ ಹುಬ್ಬೇರಿಸುವಂತಾಗಿತ್ತು. ಇದೀಗ ತಮ್ಮ 48ನೇ ಜನ್ಮ ದಿನವನ್ನೂ ಬಹಳ ಅದ್ಧೂರಿಯಾಗಿ, ಸಂಭ್ರಮ- ಸಡಗರದಿಂದ ಅಭಿಮಾನಿಗಳಿಂದ ಶಾಸಕಿ ಆಚರಿಸಿಕೊಂಡಿದ್ದಾರೆ. ಜನ್ಮ ದಿನದ ಸಂಭ್ರಮದಲ್ಲಿರೋ ಶಾಸಕಿಗೆ ಅವರ ಅಭಿಮಾನಿಗಳು 250 ಕೆಜಿಯ ಸೇಬು ಹಣ್ಣಿನ ಹಾರ ಹಾಕಿ ಶುಭಾಶಯ ಕೋರಿದ್ದಾರೆ.

from India & World News in Kannada | VK Polls https://ift.tt/XnB3e6T

ಮಿತಿ ಮೀರಿದ ಬೀದಿನಾಯಿ, ಕೋತಿಗಳ ಹಾವಳಿಗೆ ಶ್ರೀನಿವಾಸಪುರದ ಜನ ಹೈರಾಣ

ಶ್ರೀನಿವಾಸಪುರ ಪಟ್ಟಣ ವ್ಯಾಪ್ತಿಯ ನಾನಾ ಬಡಾವಣೆಗಳಲ್ಲಿ ಬೀದಿ ನಾಯಿ ಮತ್ತು ಕೋತಿಗಳ ಹಾವಳಿ ಹೆಚ್ಚಾಗಿದೆ. ಪುರಸಭೆಯಿಂದ ಮಟನ್‌ ಅಂಗಡಿ ಪರವಾನಗಿಗೆ ಕಾನೂನು ಪಾಲನೆ ಇಲ್ಲದಿರುವುದೇ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಪಟ್ಟಣದ ತ್ಯಾಗರಾಜ ಬಡಾವಣೆ, ಆಜಾದ್‌ ರಾಜಾಜಿ ರಸ್ತೆ ರಾಮಕೃಷ್ಣಾ ಬಡಾವಣೆ, ಚೌಡೇಶ್ವರಿ ದೇವಸ್ಥಾನ ರಸ್ತೆ, ಜಾಕೀರ್‌ ಹುಸೇನ್‌ ಮೊಹಲ್ಲಾ, ಮಾರುತಿನಗರ, ವೆಂಕಟೇಶ್ವರ ಬಡಾವಣೆ, ಹಳೆಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿ ನೆಲೆಯೂರಿರುವ ಬೀದಿ ಶ್ವಾನಗಳು ಹಂದಿ, ಮೇಕೆಗಳು ಬಂದರೆ ಅವುಗಳನ್ನು ಅಟ್ಟಾಡಿಸಿ ಹಿಡಿದು ತಿನ್ನುತ್ತವೆ.

from India & World News in Kannada | VK Polls https://ift.tt/puHIrNx

ಓದು ಮುಂದುವರಿಸಿ ಎನ್ನುವುದು ಕ್ರೌರ್ಯ ಅಲ್ಲ: ಹೈಕೋರ್ಟ್‌

''ಪತಿ ಪತ್ನಿಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡು ಮತ್ತು ಉನ್ನತ ವ್ಯಾಸಂಗ ಮುಂದುವರಿಸು ಎಂದು ಸಲಹೆ ನೀಡಿದರೆ ಅದು ಹೇಗೆ ಮಾನಸಿಕ ಕ್ರೌರ್ಯವಾಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ'' ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅಲ್ಲದೆ, ''ಮದುವೆಗೆ ಮುನ್ನವೇ ಇಬ್ಬರ ನಡುವೆ ನಡೆದ ಮಾತುಕತೆಯಲ್ಲಿಮದುವೆ ಆದ ಮೇಲೆ ಅಮೆರಿಕದಲ್ಲಿಜತೆಗೂಡಿದ ನಂತರ ಶಿಕ್ಷಣ ಮುಂದುವರಿಸಿ ಸೂಕ್ತ ಉದ್ಯೋಗ ಹುಡುಕಿಕೋ ಎಂದು ಹೇಳಿದ್ದರೆಂದು ಪತ್ನಿಯೇ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಪತಿಯೇನೂ ಏಕಾಏಕಿ ಬಲವಂತವಾಗಿ ಕೆಲಸ ಹುಡುಕಿಕೋ ಎಂದು ಒತ್ತಾಯಿಸಿಲ್ಲ,'' ಎಂದು ನ್ಯಾಯಪೀಠ ಹೇಳಿದೆ.

from India & World News in Kannada | VK Polls https://ift.tt/Yui37tR

ತನ್ನ ಮಡಕೆ ನೀರು ಕುಡಿದ ದಲಿತ ಬಾಲಕನ ಕೊಂದ ಶಿಕ್ಷಕ: ಕೃತ್ಯ ಖಂಡಿಸಿ ಕಾಂಗ್ರೆಸ್‌ ಶಾಸಕ ರಾಜೀನಾಮೆ

ದಲಿತ ಬಾಲಕ ತಾನು ಕಲಿಯುವ ಖಾಸಗಿ ಶಾಲೆಯಲ್ಲಿ ಸವರ್ಣೀಯ ಶಿಕ್ಷಕ ತುಂಬಿಟ್ಟಿದ್ದ ನೀರು ಕುಡಿದಿದ್ದರಿಂದ ದಂಡನೆಗೆ ಒಳಗಾಗಿದ್ದ. ಮೇಲ್ವರ್ಗಕ್ಕೆ ಮೀಸಲಿಟ್ಟ ನೀರು ಅಪ್ಪಣೆ ಇಲ್ಲದೇ ಹೇಗೆ ಕುಡಿದೆ ಎಂದು ಶಾಲಾ ಶಿಕ್ಷಕ ಬಾಲಕನನ್ನು ಮನಬಂದಂತೆ ಥಳಿಸಿ, ಸಾವಿಗೆ ಕಾರಣನಾಗಿದ್ದ. ಈ ಕೃತ್ಯ ಖಂಡಿಸಿ ಬರಣ್‌-ಅತ್ರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪಾನ್‌ ಚಂದ್‌ ಮೇಘವಾಲ್‌, 'ಕಾಂಗ್ರೆಸ್‌ ಆಡಳಿತ ಇರೋ ರಾಜ್ಯದಲ್ಲೇ ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ಘಟನೆ ಸಂಭವಿಸಿ ತಿಂಗಳು ಕಳೆಯುತ್ತಿದ್ದರೂ ಸರಕಾರ ಮೃತನ ಕುಟುಂಬಕ್ಕೆ ಪರಿಹಾರ ನೀಡಿಲ್ಲ' ಎಂದು ಆರೋಪಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

from India & World News in Kannada | VK Polls https://ift.tt/ExNwHhU

ಕುಷ್ಟಗಿ: ಹೆಪ್ಪುಗಟ್ಟಿತ್ತು ಮಗನ ಸಾವಿನ ನೋವು, ಪುತ್ರನ ಕ್ರಿಯಾ ಕರ್ಮವೇಳೆ ಕುಸಿದು ಬಿದ್ದ ತಾಯಿ ಮತ್ತೆ ಏಳಲೇ ಇಲ್ಲ!

kushtagi: ಮಾಬಮ್ಮ ಕೆಂಗಾರಿ(70) ಮೃತರು. 9 ದಿನಗಳ ಹಿಂದೆ ಇವರ ಪುತ್ರ ಮೃತಪಟ್ಟಿದ್ದಾರೆ. ಮಗನ ಕ್ರಿಯಾಕರ್ಮಗಳನ್ನು ಬುಧವಾರ ನೆರವೇರಿಸಲಾಯಿತು. ಗಂಗೆ ಪೂಜೆ ವೇಳೆ ಏಕಾಏಕಿ ಕುಸಿದು ಬಿದ್ದ ಮಾಬಮ್ಮ ಅವರನ್ನು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ತಾಯಿಯ ಏಕಾಏಕಿ ಸಾವಿನಿಂದ ಅವರ ಮತ್ತೊಬ್ಬ ಪುತ್ರ ಗಜೇಂದ್ರಗಡದ ತಹಸೀಲ್ದಾರ್‌ ರಜನಿಕಾಂತ ಕೆಂಗಾರಿ ಅವರು ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

from India & World News in Kannada | VK Polls https://ift.tt/HaoF0Xz

21 ವರ್ಷಗಳ ಹಿಂದೆ ಕಾರು ಕದ್ದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಸ್ತಗಿರಿ ಮಾಡಿದ ಪುತ್ತೂರು ಪೊಲೀಸರು

2001ರ ಮಾರ್ಚ್ 8ರಂದು ಸುಧೀರ್‌ ಪ್ರಭು ಮತ್ತು ಬಿ.ಎಂ. ಹನೀಫ್‌ ಎಂಬವರು ಮಂಗಳೂರಿನ ಹಂಪನಕಟ್ಟೆಯಿಂದ ಜಯಂತ ಎಂಬವರ ಟಾಟಾ ಸುಮೋವನ್ನು ಬಾಡಿಗೆಗೆ ಪಡೆದುಕೊಂಡು ನಾನಾ ಕಡೆ ಸುತ್ತಾಡಿ ಚಾಲಕನಿಗೆ ಗೊತ್ತಿಲ್ಲದಂತೆ ಕಾರು ಕಳವು ಮಾಡಿದ್ದರು. ಇಪ್ಪತ್ತೊಂದು ವರ್ಷಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದ ಕಾರನ್ನು ಕಳವು ಮಾಡಿ ಸಿಕ್ಕಿ ಬಿದ್ದಿದ್ದರೂ, ಜಾಮೀನು ಪಡೆದುಕೊಂಡ ಮೇಲೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

from India & World News in Kannada | VK Polls https://ift.tt/jRzm5bM

ಶ್ರೀಕೃಷ್ಣ ಜನ್ಮಾಷ್ಟಮಿಗೆ ಬೆಂಗಳೂರಿನ ದೇವಾಲಯಗಳು ಸಜ್ಜು: ಇಸ್ಕಾನ್‌ನಲ್ಲಿ 1 ಲಕ್ಷ ಲಡ್ಡು, 10 ಟನ್‌ ಸಕ್ಕರೆ ಪೊಂಗಲ್‌ ಸಿದ್ಧ

Sri Krishna Janmashtami in ISKCON Temple: ಪ್ರತಿ ವರ್ಷದಂತೆ ಈ ಬಾರಿಯೂ ರಾಜಾಜಿನಗರದ ಇಸ್ಕಾನ್‌ ದೇವಾಲಯವು ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಒಂದು ಲಕ್ಷ ಲಡ್ಡುಗಳನ್ನು ಮತ್ತು 10 ಟನ್‌ ಸಕ್ಕರೆ ಪೊಂಗಲ್‌ಗೂ ಸಿದ್ಧತೆ ಮಾಡಿಕೊಂಡಿದೆ. ಎರಡೂ ದಿನ ಬೆಳಗ್ಗೆಯಿಂದಲೇ ಬರುವ ಭಕ್ತರಿಗೆ ಯಾವುದೇ ತೊಂದರೆಗಳಾಗದಂತೆ ಭದ್ರತಾ ಸಿಬ್ಬಂದಿ ನೇಮಕ, ಬ್ಯಾರಿಕೇಡ್‌ ಅಳವಡಿಕೆಯೊಂದಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಬುಧವಾರ ಇಸ್ಕಾನ್‌ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಕೃಷ್ಣ, ರುಕ್ಮಿಣಿ, ರಾಧೆಯರ ವೇಷದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

from India & World News in Kannada | VK Polls https://ift.tt/8cNRXlL

ಕಾನೂನು ಮಂತ್ರಿ ಆದವರು ಉಡಾಫೆ ಮಾತನಾಡಬಾರದು: ಮಾಧುಸ್ವಾಮಿಗೆ ರಾಜಣ್ಣ ಟಾಂಗ್

ಮಾಧುಸ್ವಾಮಿ ಅವರು ನಿರ್ದಾಕ್ಷಿಣ್ಯವಾಗಿ ಮಾತನಾಡುವ ಮನುಷ್ಯ ಅಂದು ಕೊಂಡಿದ್ದೇನೆ. ಆಡಿಯೋದಲ್ಲಿ ಹೇಳಿದಂತೆ ನಾನೂ ಕೂಡ ಕಾನೂನು ಮೀರಿದ ಬಡ್ಡಿ ಕಟ್ಟಿದ್ದೇನೆ ಅಂತಾ ಹೇಳ್ತಾರೆ. ಹಾಗಾದರೆ ಕಾನೂನು ಮಂತ್ರಿಯಾಗಿ ಕಾನೂನು ಮೀರಿ ಏಕೆ ಬಡ್ಡಿ ಕಟ್ಟಿ ರಸೀದಿ ತಂದಿದ್ದಾರೆ. ಕಾನೂನು ಮಂತ್ರಿಯಾಗಿರುವ ಮಾಧುಸ್ವಾಮಿ ಅವರು ಉಡಾಫೆ ಮಾತುಗಳನ್ನ ಆಡಬಾರದು ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಿಡಿಕಾರಿದರು.

from India & World News in Kannada | VK Polls https://ift.tt/1ORATsm

ಸ್ಥಳೀಯರಲ್ಲಿ ಭಯ ಮೂಡಿಸುವುದೇ ಪ್ರವೀಣ್‌ ಹತ್ಯೆ ಉದ್ದೇಶ! ಎನ್‌ಐಎ ಎಫ್‌ಐಆರ್‌ನಲ್ಲಿ ಉಲ್ಲೇಖ

ಪ್ರವೀಣ್‌ರನ್ನು ಕೊಲ್ಲಲೇಬೇಕೆಂಬ ಉದ್ದೇಶ ಹಂತಕರಿಗೆ ಮೊದಲು ಇರಲಿಲ್ಲ ಎಂಬ ಅನುಮಾನ ಇದೀಗ ಬಲವಾಗುತ್ತಿದೆ. ಬೆಳ್ಳಾರೆಯ ಕಳಂಜದಲ್ಲಿ ಮಸೂದ್‌ ಎಂಬ ಯುವಕನನ್ನು ಜುಲೈ 19ರಂದು ಕೊಲೆ ಮಾಡಿದ ಪ್ರಕರಣಕ್ಕೆ ಪ್ರತೀಕಾರ ತೀರಿಸುವುದು ಮತ್ತು ಸ್ಥಳೀಯ ಪರಿಸರದಲ್ಲಿ ದೊಡ್ಡ ಮಟ್ಟದ ಭಯ ಉಂಟು ಮಾಡುವುದು ಹಂತಕರ ಉದ್ದೇಶವಾಗಿತ್ತು. ಮೂಲಗಳ ಪ್ರಕಾರ ಮಸೂದ್‌ ಹತ್ಯೆಯಾದ 4 ದಿನಗಳಲ್ಲೇ ಪ್ರತೀಕಾರದ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಮಸೂದ್‌ ಕೊಲೆ ಆರೋಪಿಗಳೆಲ್ಲ ಬಂಧಿಸಲ್ಪಟ್ಟಿದ್ದ ಕಾರಣ ಅವರನ್ನು ಹಿಂಬಾಲಿಸುವ ಹಾಗಿರಲಿಲ್ಲ. ಹೀಗಾಗಿ ಹಿಂದೂ ಯುವಕನೊಬ್ಬನನ್ನು ಕೊಲೆ ಮಾಡಲು ಸ್ಕೆಚ್‌ ರೂಪಿಸಲಾಯಿತು.

from India & World News in Kannada | VK Polls https://ift.tt/3Kg6AQr

M-Sand | ಮರಳಿನ ಅಭಾವ ನಿವಾರಿಸಲು ಎಂ-ಸ್ಯಾಂಡ್‌ಗೆ ಉತ್ತೇಜನ, ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

Karnataka Sand Policy: ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ವಾರ್ಷಿಕ ಮರಳು ಬೇಡಿಕೆ 45 ದಶಲಕ್ಷ ಟನ್‌ನಷ್ಟಿದ್ದು, 35 ದಶಲಕ್ಷ ಟನ್‌ ಮರಳಷ್ಟೇ ಪೂರೈಕೆಯಾಗುತ್ತಿದೆ. ಹಾಗಾಗಿ ಉಳಿಕೆ ಬೇಡಿಕೆಯಷ್ಟು ಮರಳು ಪೂರೈಕೆಗೆ 'ಎಂ-ಸ್ಯಾಂಡ್‌'ಗೆ ಉತ್ತೇಜನ ನೀಡಲಾಗುವುದು,' ಎಂದು ತಿಳಿಸಿದರು. 'ಗುಣಮಟ್ಟದ ಆಧಾರದ ಮೇಲೆ ಪ್ರತಿ ಟನ್‌ಗೆ 700 ರೂ.ನಿಂದ 1000 ರೂ.ವರೆಗೆ 'ಎಂ- ಸ್ಯಾಂಡ್‌' ಲಭ್ಯವಿದೆ.

from India & World News in Kannada | VK Polls https://ift.tt/aiZudt7

MB Patil | ಮಠ, ಮಸೀದಿ, ಚರ್ಚ್‌ಗಳತ್ತ ಕಾಂಗ್ರೆಸ್‌ ಚಿತ್ತ: ಆ.19ರಿಂದ ಎಂ.ಬಿ.ಪಾಟೀಲ್‌ ರಾಜ್ಯ ಪ್ರವಾಸ

2023 Karnataka Assembly elections: 2023ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಾರಥ್ಯ ವಹಿಸಿಕೊಂಡು ಸುಮಾರು 6 ತಿಂಗಳ ಬಳಿಕ ಎಂ.ಬಿ. ಪಾಟೀಲ್‌ ಅಖಾಡಕ್ಕೆ ಎಂಟ್ರಿ ಪಡೆದಿದ್ದು, ಪ್ರಚಾರ ಸಮಿತಿಯ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿದರು. ಆ.19ರಂದು ಕಲ್ಯಾಣ ಕರ್ನಾಟಕ ಭಾಗದಿಂದ ಪ್ರವಾಸ ಆರಂಭಿಸಲಿರುವ ಅವರು, ಸೆ.10ರವರೆಗೆ ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಚಾರ ಸಮಿತಿಯ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು.

from India & World News in Kannada | VK Polls https://ift.tt/fT4cFYV

ಸುಖ ದಾಂಪತ್ಯಕ್ಕೆ ಪತ್ನಿಯ ನಕಾರ: ಮದುವೆ ವೇಳೆ ವಯಸ್ಸು ಮುಚ್ಚಿಟ್ಟ ಸಿಟ್ಟು! ಹೆಂಡತಿಯ ಕೊಂದು ಕಥೆ ಕಟ್ಟಿದ ಗಂಡ!

ಬಿಹಾರ ಮೂಲದ ಪೃಥ್ವಿರಾಜ್‌ ಮಡಿವಾಳದ ಮಾರುತಿ ನಗರದಲ್ಲಿ ಪತ್ನಿ ಜ್ಯೋತಿ ಕುಮಾರಿ ಜತೆ ನೆಲೆಸಿದ್ದ. ಎಲೆಕ್ಟ್ರಾನಿಕ್ಸ್‌ ವಸ್ತುಗಳ ಸರಬರಾಜು ವ್ಯವಹಾರ ನಡೆಸುತ್ತಿದ್ದ. ಆಗಸ್ಟ್‌ 5ರಂದು ಮಡಿವಾಳ ಠಾಣೆಗೆ ಆಗಮಿಸಿದ್ದ ಫೃಥ್ವಿರಾಜ್‌, 'ನನ್ನ ಪತ್ನಿ ಜ್ಯೋತಿ ಕುಮಾರಿ ಆಗಸ್ಟ್‌ 3ರಿಂದ ನಾಪತ್ತೆಯಾಗಿದ್ದು, ಆಕೆಯ ಮೊಬೈಲ್‌ ಸ್ವಿಚ್ಡ್‌ಆಫ್‌ ಆಗಿದೆ. ಆಕೆಯನ್ನು ಪತ್ತೆ ಮಾಡಿ ಕೊಡಿ' ಎಂದು ದೂರು ನೀಡಿ ಹೋಗಿದ್ದ. ಈ ಕುರಿತು ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು.

from India & World News in Kannada | VK Polls https://ift.tt/7R5CT3L

Airbus A380 | ಬೆಂಗಳೂರಿಗೂ ಬರಲಿದೆ ಎಮಿರೇಟ್ಸ್‌ನ ಜಂಬೋ ಜೆಟ್‌: 500ಕ್ಕೂ ಹೆಚ್ಚು ಸೀಟ್‌ಗಳು, ಬೋಯಿಂಗ್‌ ವಿಮಾನಕ್ಕಿಂತ ಶೇ 40ರಷ್ಟು ದೊಡ್ಡದು

Emirates Airlines jumbo jet: 2014ರಿಂದ ಭಾರತದ ವಾಣಿಜ್ಯ ರಾಜಧಾನಿ ಮುಂಬಯಿಗೆ ಸೇವೆ ನೀಡುತ್ತಿದ್ದ ಏರ್‌ಬಸ್‌-380 ಸೇವೆಯನ್ನು ಮತ್ತೊಂದು ನಗರಿಗೆ ವಿಸ್ತರಿಸಿದ್ದು, ಬೆಂಗಳೂರಿಗೂ ಅದರ ಸೇವೆ ದೊರಕಲಿದೆ. ದಕ್ಷಿಣ ಭಾರತದಲ್ಲಿ ಜಂಬೋ ಜೆಟ್‌ ವಿಮಾನ ಸೇವೆ ಪಡೆದ ನಗರಗಳಲ್ಲಿ ಬೆಂಗಳೂರು ಮೊದಲನೆಯದಾಗಿದೆ. ಜಂಬೋ ಜೆಟ್‌ ವಿಮಾನದಲ್ಲಿ ಮೂರು ವಿಧದ ಟಿಕೆಟ್‌ ವ್ಯವಸ್ಥೆ ರೂಪಿಸಲಾಗಿದೆ. ಮೊದಲೆಯದು ಪ್ರೀಮಿಯಂ ಕ್ಲಾಸ್‌, ಎರಡನೆಯದು ಬ್ಯುಸಿನೆಟ್‌ ಕ್ಲಾಸ್‌, ಮೂರನೆಯದು ಎಕನಾಮಿ ಕ್ಲಾಸ್‌ ಸೀಟ್‌ ವ್ಯವಸ್ಥೆ ಹೊಂದಿದೆ.

from India & World News in Kannada | VK Polls https://ift.tt/G35KJv6

ಹಂದಿಗೋಡು ಕಾಯಿಲೆಗೆ ಸಿಗದ ಪರಿಹಾರ, ಬಂದಗದ್ದೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

ಸಾಗರ ತಾಲೂಕಿನ ಬಂದಗದ್ದೆಯಲ್ಲಿ ಸೋಮವಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಸಂದರ್ಭ 'ನಿಜಾರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ' ಎಂದು ಬಿತ್ತಿಪತ್ರ ಪ್ರದರ್ಶಿಸಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಮಾಡಲಾಗಿದೆ. ದಲಿತ ಮುಖಂಡ, ಹಂದಿಗೋಡು ಕಾಯಿಲೆ ಸಂತ್ರಸ್ತ ಬಂದಗದ್ದೆ ರಾಜೇಂದ್ರ ಸೋಮವಾರ ಬೆಂಬಲಿಗ ಕೂಲಿಕಾರ್ಮಿಕರ ಜತೆಗೆ ಕಪ್ಪು ಬಾವುಟ ಪ್ರದರ್ಶಿಸಿ, ತಲೆಗೆ ಕಪ್ಪುಪಟ್ಟಿ ಕಟ್ಟಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ದಶಕಗಳಿಂದ ಬಾಧಿಸುತ್ತಿರುವ ಹಂದಿಗೋಡು ಕಾಯಿಲೆಗೆ ಈವರೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಸರಕಾರ ಮಾಡಿಲ್ಲ ಎಂದರು.

from India & World News in Kannada | VK Polls https://ift.tt/8tvo3S7

Covid-19 Karnataka Update | ರಾಜ್ಯದಲ್ಲಿ ತಗ್ಗಿದ ಕೋವಿಡ್‌: ಸಾವಿನ ಸಂಖ್ಯೆ ಶೂನ್ಯಕ್ಕೆ ಇಳಿಕೆ

ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಶೇ. 9.62ರಷ್ಟಿದ್ದು, ಇಪ್ಪತ್ತನಾಲ್ಕು ತಾಸುಗಳ ಅಂತರದಲ್ಲಿ ಸೋಂಕಿತರು ಸಾವಿಗೀಡಾಗಿಲ್ಲ. ಸದ್ಯ 40.32 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, ಮೃತರಾದವರ ಸಂಖ್ಯೆ 40,147ಕ್ಕೆ ಏರಿಕೆಯಾಗಿದೆ. ಆ.15ರಂದು 1,653 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 39.81 ಲಕ್ಷಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿ 870, ಮೈಸೂರು 60, ಚಿಕ್ಕಮಗಳೂರು 42, ಬಳ್ಳಾರಿ 38, ಬೆಳಗಾವಿಯಲ್ಲಿ 33 ಜನರು ಸೋಂಕಿಗೆ ಒಳಗಾಗಿದ್ದಾರೆ.

from India & World News in Kannada | VK Polls https://ift.tt/DwlWsri

ಭಾರತ್‌ ಬಯೋಟೆಕ್‌ನ ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆ: 3ನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಸಂಪೂರ್ಣ

Intranasal Covid vaccine: ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯು (ಬಿಬಿವಿ154) ಸುರಕ್ಷಿತ ಎಂಬ ವರದಿ ಬಂದಿದೆ ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಡೆಡ್‌ (ಬಿಬಿಐಎಲ್‌) ಸೋಮವಾರ ಹೇಳಿದೆ. ಬಿಬಿವಿ154 ಮೂಗಿನ ಲಸಿಕೆಯ ಆರಂಭಿಕ ಡೋಸ್‌ಗಳು (2 ಡೋಸ್‌) ಹಾಗೂ ಮೊದಲೆರಡು ಡೋಸ್‌ ಹಾಕಿಸಿಕೊಂಡವರಿಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಎರಡೂ ಟ್ರಯಲ್‌ಗಳನ್ನು ಪ್ರತ್ಯೇಕವಾಗಿ ಏಕಕಾಲದಲ್ಲಿ ನಡೆಸಲಾಗಿದೆ.

from India & World News in Kannada | VK Polls https://ift.tt/vfLypc3

ಗಾಂಧಿ ತಾತನಿಗೆ ಊಟ ಕೊಡ್ತಿದ್ದ ಪೋರಿ ಈಗ ಶತಾಯುಷಿ: ಸ್ವಾತಂತ್ರ್ಯ ಹೋರಾಟದಲ್ಲಿ ಅಳಿಲು ಸೇವೆ ಸಲ್ಲಿಸಿದ್ದ ಶಾಂತಮ್ಮ!

ಶತಾಯುಷಿ ಶಾಂತಾಬಾಯಿ ಮನೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.. ಸ್ವಾತಂತ್ರ್ಯದ ಹುಮ್ಮಸ್ಸಿನ ಕಥೆ ಕೇಳೋದಕ್ಕೆ ಅಜ್ಜಿ ಮನೆಯ ಎದ್ರು ಬರ್ತಿದಾರೆ.. ಅಜ್ಜಿ ಮೆರವಣಿಗೆ ಮಾಡ್ಬೇಕು ಅಂತಾ ಬಿಜೆಪಿ ನಾಯಕ ಅನಿಲ್ ನಿರ್ಧರಿಸಿದ್ರಂತೆ.. ಆದ್ರೆ, ಅಜ್ಜಿಗೆ ಕೂತಲ್ಲೆ ಕೂರೋದು ಕಷ್ಟ ಆಗುತ್ತಂತೆ ಹೀಗಾಗಿ, ಅಜ್ಜಿಗೆ ಸನ್ಮಾನ ಮಾಡಿ, ಆಶೀರ್ವಾದ ಪಡೆಯೋಣ ಅಂತಾ ಬಂದಿದ್ದೇವೆ ಅಂತಾರೆ ಅನಿಲ್ ಮೆಣಸಿನಕಾಯಿ.

from India & World News in Kannada | VK Polls https://ift.tt/JUmnsEw

ಹಿಂದೂ ಸಮಾಜಕ್ಕಾಗಿ ಹೋರಾಡುವ ನನಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ: ಮುತಾಲಿಕ್ ಬೇಸರ

ನಾನೂ ಸಾವರ್ಕರ್ ಎಂದು ಸಾವರ್ಕರ್ ಪೋಟೊ ಹಿಡಿದು ಗುಡುಗಿದ ಪ್ರಮೋದ್ ಮುತಾಲಿಕ್, ​​ಹಿಂದೂಗಳು ತಮ್ಮ ರಕ್ಷಣೆಗೆ ಮನೆಯಲ್ಲಿ‌ತಲವಾರ್ ಇಟ್ಟುಕೊಳ್ಳಬೇಕು. ಕ್ಷತ್ರೀಯ ಗುಣ ಬೆಳೆಸಿಕೊಳ್ಳಬೇಕು ಎಂದರಲ್ಲದೇ, ಸಾವರ್ಕರ್ ಬಗ್ಗೆ ಅರಿಯದ ಮುಸ್ಲಿಂ ಗೂಂಡಾಗಳು ಅವರನ್ನು ಅವಮಾನಿಸಿದ್ದಾರೆ. ಅಂತಹವರನ್ನು ಹುಡುಕಿ ಗುಂಡೇಟು ಹಾಕಬೇಕು ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದರು. ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಹೋಗಬೇಕು. ಬಿಜೆಪಿ ನಂಬಿ ಕೂತರೆ ಪ್ರಯೋಜನವಿಲ್ಲ. ಕಠಿಣ ಕ್ರಮ ಎಂಬ ಸರ್ಕಾರದ ಬೊಗಳೆ ನಂಬಲು ಜನರು ತಯಾರಿಲ್ಲ. ಸಾಥ್ ಕೊಟ್ಟರೆ ಕೊಡಿ, ಇಲ್ಲ ಒದ್ದು ಮುನ್ನಡೆಯುತ್ತೇವೆ ಎಂದರು.

from India & World News in Kannada | VK Polls https://ift.tt/LzPFfZn

ಬಾಗಲಕೋಟೆ: ಸ್ವಾತಂತ್ರ್ಯ ದಿನಾಚರಣೆಯಂದೇ ಜೈಲಿನಲ್ಲಿ ಕೈದಿ ಆತ್ಮಹತ್ಯೆ

ನಗರದ ಜಿಲ್ಲಾ ಕಾರಾಗೃಹದ ಕೈದಿ ಮಂಜುನಾಥ ಕುರಿ (28) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಜೈಲಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದಲ್ಲಿ ಮಂಜುನಾಥ ಭಾಗವಹಿಸಿದ್ದರ. ಕಾರ್ಯಕ್ರಮ ಮುಗಿದ ನಂತರ ಬ್ಯಾರೆಕ್‌ಗೆ ತೆರಳಿ, ಕಿಟಕಿಗೆ ಟವೆಲ್‌ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಧೋಳ ತಾಲೂಕಿನ ಮಲ್ಲಾಪೂರ ಗ್ರಾಮದ ಈತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕಳೆದ ಐದು ತಿಂಗಳಿನಿಂದ ಜೈಲಿನಲ್ಲಿದ್ದ ಈತ ಜಾಮೀನು ದೊರೆಯದ ಕಾರಣ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.

from India & World News in Kannada | VK Polls https://ift.tt/dTu9BYV

ಕ್ರಿಸ್ತ, ಪೈಗಂಬರ್ ದೇವದೂತರು, ಆದರೆ ದೇವರೇ ಹುಟ್ಟಿಬಂದ ಪ್ರದೇಶ ಭಾರತ ಬಿಟ್ರೆ ಬೇರೆಲ್ಲೂ ಇಲ್ಲ: ರಾಘವೇಶ್ವರ ಶ್ರೀ

ಭೌಗೋಳಿಕವಾಗಿ ನೋಡಿದರೆ ಕೂಡಾ ಭಾರತಕ್ಕೆ ಪರಿಪೂರ್ಣ ಸ್ವಾತಂತ್ರ‍್ಯ ಬಂದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ ಎಂದು ನಾವು ಹೇಳುತ್ತೇವೆ. ಆದರೆ ಕಾಶ್ಮೀರದ ಅರ್ಧಭಾಗ ನಮ್ಮ ವಶದಲ್ಲಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ. ಪಾಕಿಸ್ತಾನ ಕೂಡಾ ಭಾರತದ ಅಂಗವೇ ಆಗಿತ್ತು. ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಇನ್ನೊಂದು ಭಾಗ ಬಾಂಗ್ಲಾದೇಶ. ಇದು ಕೂಡಾ ಭಾರತವೇ. ಬರ್ಮಾ, ಶ್ರೀಲಂಕಾ, ಅಫ್ಘಾನಿಸ್ತಾನ ಕೂಡಾ ಭಾರತದ ಭಾಗವೇ ಆಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಹೇಳಿದರು.

from India & World News in Kannada | VK Polls https://ift.tt/zJq8LXd

ಸರಕಾರ ನೆಹರು ಫೋಟೋ ಉದ್ದೇಶ ಪೂರ್ವಕವಾಗಿ ಕೈಬಿಟ್ಟಿದ್ದರೂ ಸಂತೋಷದ ಸಂಗತಿ: ಕೆಎಸ್‌ ಈಶ್ವರಪ್ಪ

ಸರಕಾರಿ ಜಾಹೀರಾತಿನಲ್ಲಿ ನೆಹರು ಫೊಟೋ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆಎಸ್‌ ಈಶ್ವರಪ್ಪ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಸರಕಾರ ನೆಹರು ಫೋಟೋ ಉದ್ದೇಶ ಪೂರ್ವವಾಗಿ ಬಿಟ್ಟಿದ್ದರೂ ಆದು ಸಂತೋಷದ ಸಂಗತಿ. ನಾನು ಅದನ್ನು ಸ್ವಾಗತ ಮಾಡುತ್ತೇನೆ. ದೇಶವನ್ನ ತುಂಡು ಮಾಡಿದ ವ್ಯಕ್ತಿ ಫೊಟೋ ಹಾಕಿಕೊಂಡು ಅವರು ಇವರಿಗೆ ಮಾದರಿ ಅಂದ್ರೆ ನಾನೇನು ಮಾಡಲಿ. ನೆಹರು ಆದರ್ಶ ಅಲ್ಲ. ಕಾಂಗ್ರೆಸ್ ತುಂಡು ಮಾಡಲು ಹೊರಟವರಿಗೆ ನೆಹರೂನೇ ಅದರ್ಶ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

from India & World News in Kannada | VK Polls https://ift.tt/Jfsj4wL

ಮಾಗಡಿ | ಪತ್ರ ಬರೆದಿಟ್ಟು ಮಠ ತೊರೆದ ಕಿರಿಯ ಸ್ವಾಮೀಜಿ: ಪ್ರೀತಿಸಿದ ಯುವತಿಯೂ ಜೊತೆಗೆ?

2020 ಜೂನ್‌ 15ರಂದು ವೀರಾಪುರ ಗ್ರಾಮದ ಹರೀಶ್‌ ಸನ್ಯಾಸ ದೀಕ್ಷೆ ಸ್ವೀಕರಿಸಿ, ಶಿವಮಹಾಂತ ಸ್ವಾಮೀಜಿ ಆಗಿದ್ದರು. ಇದಾದ ಬಳಿಕ ಸ್ವಾಮೀಜಿ ದೀಕ್ಷೆಯ ನಿಯಮ ಕಟ್ಟು ಪಾಡುಗಳನ್ನು ಅಧ್ಯಯನ ಮಾಡಲು ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಯಾಗಿದ್ದರು. ಇದರ ಜತೆಗೆ ಇಂಗ್ಲಿಷ್‌ ವಿಷಯದಲ್ಲಿ ದ್ವಿತೀಯ ವರ್ಷದ ಎಂಎ ಕೂಡ ಅಧ್ಯಯನ ಮಾಡುತ್ತಿದ್ದರು.

from India & World News in Kannada | VK Polls https://ift.tt/gIw0RdQ

Covid-19 Karnataka Update: ಕರ್ನಾಟಕದಲ್ಲಿ ಭಾನುವಾರ 1,837 ಮಂದಿಗೆ ಕೊರೊನಾ ಪಾಸಿಟಿವ್‌!

Coronavirus Cases in Karnataka: ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 40,31,283 ಕ್ಕೆ ಏರಿಕೆಯಾಗಿದ್ದು, ಇಂದು 1,017 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 39,80,172 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 10,922ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು ಚಿಕಿತ್ಸೆ ಫಲಿಸದೇ ಮೂರು ಮಂದಿ ಸಾವನ್ನಪ್ಪಿದ್ದಾರೆ.

from India & World News in Kannada | VK Polls https://ift.tt/pWRaLcw

President Droupadi Murmu:'ನಾನಳಿವೆ ನೀನಳಿವೆ...'-ಕುವೆಂಪು ಸಾಲು ಪ್ರಸ್ತಾಪಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Poet Kuvempu: 2047ಕ್ಕೆ ನವಭಾರತವನ್ನು ನಿರ್ಮಿಸಲು ಹೊರಟಿರುವ ಯುವ ಜನರಿಗೆ ಕುವೆಂಪು ಅವರ ಕವನದ ಸಾಲುಗಳನ್ನು ಮುಂದಿಟ್ಟರು. 'ಕನ್ನಡ ಭಾಷೆಯ ಮೂಲಕ ಭಾರತದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ ಕುವೆಂಪು ಅವರು ಬರೆದಿದ್ದಾರೆ: 'ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ, ಮೂಡುವುದು ಮೂಡುವುದು ನವಭಾರತದ ಲೀಲೆ' ಎಂದು ಹೇಳಿ ಮುರ್ಮು ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಭಾನುವಾರ ತಮ್ಮ ಮೊದಲ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಕವಿ, ಕನ್ನಡದ ಕುವೆಂಪು ಅವರ ಸಾಲುಗಳನ್ನು ಪ್ರಸ್ತಾಪಿಸಿದರು.

from India & World News in Kannada | VK Polls https://ift.tt/6gci5JB

ಟಿಪ್ಪು ಸುಲ್ತಾನ್‌ ಭಾವಚಿತ್ರವಿರುವ ಫ್ಲೆಕ್ಸ್‌ ಹರಿದ ಪ್ರಕರಣ: ಪುನೀತ್‌ ಕೆರೆಹಳ್ಳಿ ಸೇರಿ ಮೂವರ ಬಂಧನ

ಟಿಪ್ಪು ಸುಲ್ತಾನ್‌ ಭಾವಚಿತ್ರವಿರುವ ಫ್ಲೆಕ್ಸ್‌ ಹರಿದು ಪುಂಡಾಟ ಮೆರೆದ ದೃಶ್ಯವನ್ನು ಆರೋಪಿಗಳೇ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಅದೇ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿ ಪುನೀತ್‌ ಕೆರೆಹಳ್ಳಿ, ಕಿರಣ್‌ ಮತ್ತು ಅನಂತ್‌ ರಾವ್‌ ಎಂಬುವರನ್ನು ಬಂಧಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಮತ್ತು ಉದ್ದೇಶಪೂರ್ವಕವಾಗಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

from India & World News in Kannada | VK Polls https://ift.tt/HG9zNKt

ತಿಪಟೂರು | 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ 24 ಸಾವಿರ ಕೋಟಿ ರೂಪಾಯಿ ಸಾಲ: ಸಚಿವ ಸೋಮಶೇಖರ್‌ ಘೋಷಣೆ

Zero interest loan for farmers: ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದ ಆವರಣದಲ್ಲಿ ಶನಿವಾರ ಮರ್ಚೆಂಟ್ಸ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯ 33 ಲಕ್ಷ ರೈತರಿಗೆ ಸಾಲ ಸವಲತ್ತುಗಳನ್ನು ನೀಡಲು ಮತ್ತು ನಿರ್ವಹಣೆ ಮಾಡಲು ಒಂದೇ ತಂತ್ರಾಂಶವನ್ನು ಕೇಂದ್ರ ಸರಕಾರದ ಸೂಚನೆಯಂತೆ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸಚಿವ ಅಮಿತ್‌ ಶಾ ರವರು 360 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

from India & World News in Kannada | VK Polls https://ift.tt/FjkIgSn

ಪಿಒಪಿ ಗಣೇಶ ವಿಗ್ರಹ ಮಾರಾಟ ನಿಷೇಧ: ಮಣ್ಣಿನ ಗಣಪನ ಪೂಜಿಸಲು ಮಾಲಿನ್ಯ ಮಂಡಳಿ ಮನವಿ

ವಿದ್ಯಾರಣ್ಯ ಯುವಕ ಸಂಘ (ಬೆಂಗಳೂರು ಗಣೇಶ ಉತ್ಸವ)ದ ಸಹಯೋಗದಲ್ಲಿ ಮಂಡಳಿ ವತಿಯಿಂದ ಭಾನುವಾರ (ಆ.28) ಮಧ್ಯಾಹ್ನ 3 ಗಂಟೆಗೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಒಂದೇ ಸೂರಿನಡಿ 10 ಸಾವಿರ ಗಣೇಶ ಮೂರ್ತಿ ತಯಾರಿಸಲು 'ಪರಿಸರ ಸ್ನೇಹಿ ಗಣೇಶ ಹಬ್ಬ-2022' ಕಾರ್ಯಕ್ರಮ ನಡೆಯಲಿದೆ. ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

from India & World News in Kannada | VK Polls https://ift.tt/XJtfbml

80 ವರ್ಷದ ವೃದ್ಧೆಯ ಕೈ ಕಾಲು ಕಟ್ಟಿ ಹಾಕಿ ಹತ್ಯೆ! ಚಿನ್ನಾಭರಣ, ನಗದು ದೋಚಿ ಪರಾರಿ

ಜಯಶ್ರೀ ಅವರನ್ನು ಉಸಿರುಗಟ್ಟಿಸಿ ಕೊಲೆಗೈದ ಕಿಡಿಗೇಡಿಗಳು ಅವರ ಮನೆಯ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ದುಷ್ಕರ್ಮಿಗಳು ಜಯಶ್ರೀ ಅವರನ್ನು ಕೊಲೆ ಮಾಡಿ ಅವರ ಮೈಮೇಲಿದ್ದ ಆಭರಣ, ಮನೆಯಲ್ಲಿದ್ದ ನಗದು ದೋಚಿರುವುದು ಸ್ಪಷ್ಟವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

from India & World News in Kannada | VK Polls https://ift.tt/EvRckwD

Ross Taylor: 'ಶೂನ್ಯಕ್ಕೆ ಔಟಾಗಿದ್ದಕ್ಕೆ ನನ್ನ ಕೆನ್ನೆಗೆ ಬಾರಿಸಿದ್ದರು'- ಆರ್‌ಆರ್‌ ವಿರುದ್ಧ ರಾಸ್‌ ಟೇಲರ್‌ ಗಂಭೀರ ಆರೋಪ!

Ross Taylor On his IPL Memories: ನ್ಯೂಜಿಲೆಂಡ್‌ ಮಾಜಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ತಾವು ಬರೆದಿರುವ ಆತ್ಮಚರಿತ್ರೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಾವು ಅನುಭವಿಸಿದ್ದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌(ಈಗಿನ ಪಂಜಾಬ್‌ ಕಿಂಗ್ಸ್‌) ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್‌ ಆಗಿದ್ದಕ್ಕೆ ರಾಜಸ್ಥಾನ್‌ ರಾಯಲ್ಸ್‌ ಮಾಲೀಕರೊಬ್ಬರು ತಮ್ಮ ಕೆನ್ನೆಗೆ 3-4 ಸಲ ಬಾರಿಸಿದ್ದರು ಎಂದು ಅಂಶವನ್ನು ರಿವೀಲ್‌ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/RuAzjDs

Rush in Tirumala | ಸಾಲು ರಜೆ, ತಿಮ್ಮಪ್ಪನ ದರ್ಶನಕ್ಕೆ ಉದ್ದದ ಸಾಲು: ದರ್ಶನಕ್ಕೆ ಬೇಕು ಎರಡು ದಿನ

Tirupati Sri Venkateswara Swamy Darshan: ಶನಿವಾರ ಭಕ್ತರ ಸಾಲು ಹಾವಿನ ಬಾಲದಂತೆ ಕಾಣುತ್ತಿದ್ದು, ಹೊರಗಿನ ರಿಂಗ್‌ ರಸ್ತೆಯವರೆಗೂ ವ್ಯಾಪಿಸಿದೆ. ಆಗಸ್ಟ್‌ 13ರಂದು ರಾತ್ರಿ 8ರ ವರೆಗೂ (ಒಂದೇ ದಿನ) 56,546 ಭಕ್ತರಾದಿಗಳು ದರ್ಶನ ಪಡೆದಿರುವುದಾಗಿ ತಿಳಿದು ಬಂದಿದೆ. ಈಗಾಗಲೇ ತಿರುಮಲದಲ್ಲಿರುವ ಜನರು ದರ್ಶನ ಪಡೆಯಲು ಕನಿಷ್ಠ ಎರಡು ದಿನ ಆಗಬಹುದೆಂದು ಅಂದಾಜಿಸಲಾಗಿದೆ. ಸಾಲು ರಜೆಯ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಒತ್ತಡ ಹೆಚ್ಚಿರುವುದರಿಂದ ಟಿಟಿಡಿ, ಬೆಟ್ಟಕ್ಕೆ ಬರುವುದನ್ನು ಮುಂದೂಡುವಂತೆ ಭಕ್ತರಲ್ಲಿ ಮನವಿ ಮಾಡಿದೆ.

from India & World News in Kannada | VK Polls https://ift.tt/R2ZzmoN

ಬೆಂಗಳೂರಿನಲ್ಲಿ ಉದ್ಯಮಿಗೆ ಮೆಸೇಜ್‌ ಮಾಡಿ ಬಲೆಗೆ ಕೆಡವಿದ ಲಲನೆ: 14.90 ಲಕ್ಷ ರೂ. ಸುಲಿಗೆ; ಅವಳಲ್ಲ ಅವನು!

ಉದ್ಯಮಿಯೊಬ್ಬರು ಯುವತಿ ಕಳುಹಿಸಿದ 'ಹಾಟ್‌' ಫೋಟೋಗಳಿಗೆ ಪ್ರತಿಕ್ರಿಯಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಯುವತಿಯ ಸ್ನೇಹಿತ ಪೊಲೀಸರ ಸೋಗಿನಲ್ಲಿ ಉದ್ಯಮಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ. ಆದರೆ ಆರೋಪಿ ಯುವರಾಜನೇ ಯುವತಿಯ ಹೆಸರಿನಲ್ಲಿ ಉದ್ಯಮಿಗೆ ಮೆಸೇಜ್‌ ಮಾಡಿರುವುದು, ಫೋಟೋ ಕಳುಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

from India & World News in Kannada | VK Polls https://ift.tt/LjbXi9w

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ; ಚಾಮರಾಜಪೇಟೆ ಸುತ್ತಮುತ್ತ ಪೊಲೀಸ್‌ ಸರ್ಪಗಾವಲು

ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೈದಾನದ ಸುತ್ತಮುತ್ತ ಮತ್ತು ಚಾಮರಾಜಪೇಟೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಹೀಗಾಗಿ, ಮೈದಾನದಿಂದ 3 ಕಿ.ಮೀ. ವ್ಯಾಪ್ತಿಯ ಟಿಪ್ಪುನಗರ, ವಾಲ್ಮೀಕಿನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರು, ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ), ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಆರ್‌) ಸಿಬ್ಬಂದಿ ಶುಕ್ರವಾರ ಪಥಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಧಾರ್ಮಿಕ ಕೇಂದ್ರಗಳ ಬಳಿ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

from India & World News in Kannada | VK Polls https://ift.tt/sbwzfDI

ಮೈಸೂರಿನಲ್ಲಿ ಹರಡುತ್ತಿದೆ ಎಚ್‌1ಎನ್‌1: ಗಾಬರಿ ಬೇಡ, ಮುನ್ನೆಚ್ಚರಿಕೆ ಅಗತ್ಯ ಎಂದ ವೈದ್ಯರು

ಮಳೆಗಾಲವಾದ್ದರಿಂದ ಕಳೆದ 15 ದಿನಗಳಿಂದ ಮೈಸೂರಿನಲ್ಲಿ ನಿರಂತರವಾಗಿ ಎಚ್‌1ಎನ್‌1(ಹಂದಿಜ್ವರ) ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹಾಗೆಂದು ನಾಗರಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ. ಕೇವಲ ಸಣ್ಣ ಪ್ರಮಾಣದ ತೊಂದರೆ(ಮೈಲ್ಡ್‌) ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆಯ ನಂತರ ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಮುಂಜಾಗ್ರತೆ ವಹಿಸಿದರೆ ಕಾಯಿಲೆಯಿಂದ ದೂರವಿರಬಹುದು. ಎಚ್‌1ಎನ್‌1 ಕಾಣಿಸಿಕೊಂಡ ಮಂದಿ ಕಳೆದ 15 ದಿನದಿಂದ ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈವರೆಗೆ ಅಂದಾಜು 40 ರಿಂದ 50 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಳೆಗಾಲವಾದ್ದರಿಂದ ಹಾಗೂ ಸದ್ಯ ಶೀತ ವಾತಾವರಣವಿರುವುದರಿಂದ ಈ ರೀತಿ ಕಾಯಿಲೆಗಳು ಹರಡುತ್ತವೆ.

from India & World News in Kannada | VK Polls https://ift.tt/Z4FyO5j

ಮಯಾಂಕ್‌ ಅಗರ್ವಾಲ್‌ ಸ್ಫೋಟಕ ಶತಕ: ಬೆಂಗಳೂರು ಬ್ಲಾಸ್ಟರ್ಸ್‌ಗೆ ಭರ್ಜರಿ ಜಯ!

Bengaluru Blasters 9-wicket win: ಶುಕ್ರವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ ನಡೆದಿದ್ದ 2022ರ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಅವರ ಭರ್ಜರಿ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ, ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು(ವಿಜೆಡಿ ನಿಯಮ) ಪಡೆಯಿತು. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಕೇವಲ 49 ಎಸೆತಗಳಲ್ಲಿ ಅಜೇಯ 102 ರನ್‌ ಸಿಡಿಸಿದ ಮಯಾಂಕ್‌ ಅಗರ್ವಾಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/PeRKHIr

ಅಳ್ನಾವರ | ಸ್ವಾತಂತ್ರ್ಯೋತ್ಸವ ಸಭೆಗೆ ಬಂದಿದ್ದ ಜನ ಪ್ರತಿನಿಧಿಗಳಿಗೆ ಗ್ರಾಮಸ್ಥರಿಂದ ಗೇರಾವ್: ಮೂಲಭೂತ ಸೌಲಭ್ಯಗಳಿಗಾಗಿ ಮೊರೆ

ಅಳ್ನಾವರ ವಿಧಾನಸಭಾ ಕ್ಷೇತ್ರದ ನಗಲಿ, ಚಿಕ್ಕ ಹುಬ್ಬರಿ, ಹೊಳ್ತಿಕೋಟಿ, ರಾಮಚಂದ್ರ ನಗರ, ಶಿವನಗರ, ಮಡಕಿಕೊಪ್ಪ, ನಿಂಗನಕೊಪ್ಪ, ಸಿಂಗಣಕೊಪ್ಪ, ಅಂಬೋಳಿ ಗ್ರಾಮಸ್ಥರು ಹಾಗೂ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಹವಳದ ಹಿಂಡಸಗೇರಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಸ್ವಾತಂತ್ರ್ಯ ಅಮೃತ ಮಹೋತ್ಸವ ತಯಾರಿಗೆ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‌ಗೆ ಬಂದಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕಲಘಟಗಿ ಶಾಸಕ ನಿಂಬಣ್ಣವರ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟು ತರಾಟೆಗೆ ತೆಗೆದುಕೊಂಡರು.

from India & World News in Kannada | VK Polls https://ift.tt/mpvZGUw

Mysuru Irwin Road | ಮೈಸೂರಿನ ಇರ್ವಿನ್ ರಸ್ತೆ ವಿಸ್ತರಣೆ ಕಾಮಗಾರಿ ಸುಗಮ: ಅಡ್ಡಿಯಾಗಿದ್ದ ಮಸೀದಿ ಗೋಡೆ ತೆರವು

Road Widening: ಇರ್ವಿನ್ ರಸ್ತೆ ವಿಸ್ತರಣೆಗೆ ಹಲವು ವರ್ಷಗಳಿಂದಲೂ ಪ್ರಯತ್ನ ನಡೆದಿತ್ತು. ಆದರೆ ಈ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡಗಳು ಮತ್ತು ಮಸೀದಿಯ ಗೋಡೆಯನ್ನು ಒಡೆಯಲು ತಡೆಯಾಜ್ಞೆ ಇದ್ದ ಕಾರಣ ಇಷ್ಟು ವರ್ಷಗಳವರೆಗೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರ ಹಲವು ರಾಜಕೀಯ ಮೇಲಾಟಕ್ಕೂ ಕೂಡ ಕಾರಣವಾಗಿತ್ತು. ನಾಯಕರ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಗಿತ್ತು. ಕಾಮಗಾರಿ ವಿರೋಧಿಸಿ ಮಸೀದಿ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲನ್ನು ಸಹ ಏರಿತ್ತು. ಹಲವು ಬಾರಿ ಸಂಧಾನ ಪ್ರಕ್ರಿಯೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ

from India & World News in Kannada | VK Polls https://ift.tt/MG4Bzk1

Shivamogga Subbanna:'ಕಾಡು ಕುದುರೆ ಓಡಿ ಬಂದಿತ್ತಾ' ಖ್ಯಾತಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಕಾಡು ಕುದುರೆ ಓಡಿ ಬಂದಿತ್ತಾ..' ಹಾಡಿನ ಮೂಲಕ ನಾಡಿನ ಮನೆಮಾತಾದ, ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಗುರುವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಸುಬ್ಬಣ್ಣ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.

from India & World News in Kannada | VK Polls https://ift.tt/dQHCblv

ಸಿಇಟಿ ಬಿಕ್ಕಟ್ಟು, ವಿದ್ಯಾರ್ಥಿಗಳಿಗೆ ಇಕ್ಕಟ್ಟು: ಶುಲ್ಕ ಮರುಪಾವತಿ ಗೊಂದಲ

ಇದೇ ಮೊದಲ ಬಾರಿಗೆ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ ಕೌನ್ಸೆಲಿಂಗ್‌ಗೂ ಮೊದಲೇ ಕಾಮೆಡ್‌ -ಕೆ ಕೌನ್ಸೆಲಿಂಗ್‌ ನಡೆಯುವುದು ಪಕ್ಕಾ ಆಗಿದೆ. ಈ ಮೂಲಕ ರಾಜ್ಯದ ಎಂಜಿನಿಯರಿಂಗ್‌ನಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಲ್ಲಿ ಗೊಂದಲ ಹೆಚ್ಚುವ ಜತೆಗೆ ಎಂಜಿನಿಯರಿಂಗ್‌ ಮೊದಲ ವರ್ಷದ ಆರಂಭಕ್ಕೂ ವಿಘ್ನ ಎದುರಾಗಿದೆ. ಪ್ರತಿ ವರ್ಷವೂ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಿಇಟಿ ಕೌನ್ಸೆಲಿಂಗ್‌ ಮೊದಲು ನಡೆಯುತ್ತಿತ್ತು. ಬಳಿಕ ಕಾಮೆಡ್‌ ಕೆ ಕೌನ್ಸೆಲಿಂಗ್‌ ನಡೆಯುತ್ತಿತ್ತು.

from India & World News in Kannada | VK Polls https://ift.tt/IFzxD1g

ಏಷ್ಯಾ ಕಪ್‌ ಮಾತ್ರವಲ್ಲ, ಟಿ20 ವಿಶ್ವಕಪ್‌ನಿಂದಲೂ ಬುಮ್ರಾ ಔಟ್‌!

Asia Cup 2022: ಬೆನ್ನು ನೋವಿನ ಗಾಯದ ಸಮಸ್ಯೆಗೆ ತುತ್ತಾಗಿರುವ ಭಾರತ ತಂಡದ ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ, ಮುಂಬರುವ ಎಷ್ಯಾ ಕಪ್‌ 2022 ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದು ಟೀಮ್ ಇಂಡಿಯಾಗೆ ಭಾರಿ ನಷ್ಟ ತಂದೊಡ್ಡಿದೆ. ಏಷ್ಯಾ ಕಪ್‌ಗೆ ಬುಮ್ರಾ ಅಲಭ್ಯ ಎಂದು ಟೀಮ್ ಇಂಡಿಯಾ ಅಭಿಮಾನಿಗಳೆಲ್ಲಾ ಭಾರಿ ಬೇಸರದಲ್ಲಿರುವ ಸಂದರ್ಭದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಬೆನ್ನು ನೋವಿನ ಸಮಸ್ಯೆ ಗಂಭೀರವಾಗಿರುವ ಕಾರಣ ಬುಮ್ರಾ ಟಿ20 ವಿಶ್ವಕಪ್‌ಗೂ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JgXQ6ek

IND vs ZIM: ಕೆ.ಎಲ್‌ ರಾಹುಲ್‌ ಫಿಟ್‌, ಜಿಂಬಾಬ್ವೆ ಪ್ರವಾಸದ ಭಾರತ ತಂಡಕ್ಕೆ ಕನ್ನಡಿಗನೇ ನಾಯಕ!

KL Rahul will lead India vs Zimbabwe: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್ ರಾಹುಲ್‌ ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ್ದಾರೆ. ಅದರಂತೆ ಬಿಸಿಸಿಐ ವೈದ್ಯಕೀಯ ತಂಡವೂ ಕೂಡ ಬಲಗೈ ಬ್ಯಾಟ್ಸ್‌ಮನ್‌ ಸಂಪೂರ್ಣ ಫಿಟ್‌ ಇದ್ದಾರೆಂದು ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಕೆ.ಎಲ್‌ ರಾಹುಲ್‌ ತೆರಳಲಿದ್ದು, ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೊದಲು ನಾಯಕನ್ನಾಗಿ ಪ್ರಕಟಿಸಿದ್ದ ಶಿಖರ್‌ ಧವನ್‌ ಇದೀಗ ಜಿಂಬಾಬ್ವೆ ಪ್ರವಾಸದಲ್ಲಿ ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Wnpv6yi

ರಾಷ್ಟ್ರಧ್ವಜಕ್ಕಿಂತ ಮೇಲೆ‌ ಕೇಸರಿ ಧ್ವಜ ಹಾರಾಟ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿರುದ್ಧ ದೂರು ದಾಖಲು

ತ್ರಿವರ್ಣ ಧ್ವಜದ ಮೇಲೆ‌ ಕೇಸರಿ ಬಾವುಟ ಹಾರಿಸಿದ್ದಕ್ಕೆ ಶಿಕ್ಷಣ ಸಚಿವ ಬಿ‌.ಸಿ.ನಾಗೇಶ್ ವಿರುದ್ಧ ದೂರು ದಾಖಲಾಗಿದೆ. ನಗರದಲ್ಲಿ ಬುಧವಾರ ಶಾಲಾ ಮಕ್ಕಳೊಂದಿಗೆ ಧ್ವಜ ಹಿಡಿದು ಮೆರವಣಿಗೆ ಮಾಡುವ ವೇಳೆ ಬಿ.ಸಿ.ನಾಗೇಶ್ ರಾಷ್ಟ್ರ ಧ್ವಜಕ್ಕೂ ಮೇಲೆ ಕೇಸರಿ ಬಾವುಟ ಹಿಡಿದಿದ್ದರು. ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು, ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

from India & World News in Kannada | VK Polls https://ift.tt/OtmfY3r

Asia Cup 2022: ಭಾರತ ವಿರುದ್ಧ ಸಾಮಾನ್ಯ ಪಂದ್ಯದಂತೆ ಆಡುತ್ತೇವೆಂದ ಬಾಬರ್‌ ಆಝಮ್‌!

Asia Cup 2022, Babar Azam: ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲಾ ನಾವು ಸಾಮಾನ್ಯ ಪಂದ್ಯದಂತೆ ಪರಿಗಣಿಸಿ ಆಡುತ್ತೇವೆ ಎಂದು ಪಾಕ್‌ ನಾಯಕ ಬಾಬರ್‌ ಆಝಮ್‌ ತಿಳಿಸಿದ್ದಾರೆ. ಆದರೆ, ಹೌದು ಭಾರತ ಹಾಗೂ ಪಾಕಿಸ್ತಾನದ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರಿಗೂ ವಿಭಿನ್ನ ಬಗೆಯ ಸವಾಲು ಇದ್ದೇ ಇರುತ್ತದೆ ಎಂದು ಹೇಳಿದರು. ಆಗಸ್ಟ್‌ 28 ರಂದು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ 10 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Rb8dwQH

Asia Cup 2022: ಏಷ್ಯಾ ಕಪ್‌ ಓಡಿಐ ಸ್ವರೂಪದಲ್ಲಿನ ಆಟಗಾರರ ದಾಖಲೆಗಳ ವಿವರ!

Players and teams Records in Asia cup: 1984ರಲ್ಲಿ ಆರಂಭವಾದ ಏಷ್ಯಾ ಕಪ್‌ ಟೂರ್ನಿಯು ಇಲ್ಲಿಯವರೆಗೂ ಒಟ್ಟು 14 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಸೆಣಸುವ ಪ್ರಮುಖ ತಂಡಗಳಾಗಿವೆ. ಅಂದಹಾಗೆ ಏಷ್ಯಾ ಕಪ್‌ ಓಡಿಐ ಸ್ವರೂಪದಲ್ಲಿ ಇಲ್ಲಿಯವರೆಗೂ ಅತಿ ಹೆಚ್ಚು ರನ್‌, ಅತಿ ಹೆಚ್ಚು ವಿಕೆಟ್‌, ವೈಯಕ್ತಿಕ ಗರಿಷ್ಠ ಮೊತ್ತ, ತಂಡದ ಗರಿಷ್ಠ ಮೊತ್ತ ಹಾಗೂ ಕಡಿಮೆ ಮೊತ್ತ ಸೇರಿದಂತೆ ಹಲವು ದಾಖಲೆಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/95hns8g

ಮಳೆಗೆ ನಲುಗಿದ ಬೆಳೆ: ಏರಿದ ತರಕಾರಿ ಬೆಲೆ, ಸೆಂಚುರಿ ದಾಟಿದ ಬೀನ್ಸ್‌, ಕ್ಯಾರಟ್‌

Vegetables Price Rise: 'ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಬೆಂಗಳೂರಿಗೆ ತರಕಾರಿಗಳು ಪೂರೈಕೆಯಾಗುತ್ತವೆ. ಅಷ್ಟೇ ಅಲ್ಲದೆ, ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದಿಂದಲೂ ಕೆಲವು ತರಕಾರಿಗಳು ಬೆಂಗಳೂರಿಗೆ ಬರುತ್ತವೆ. ಆದರೆ, ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಕೆಲವೆಡೆ ಮಳೆ ಹೆಚ್ಚಾಗಿ ಬೀಳುತ್ತಿರುವುದರಿಂದ ತರಕಾರಿ ಬೆಳೆಗಳಿಗೆ ಅಪಾರ ಹಾನಿ ಉಂಟಾಗಿದೆ. ಇರುವ ಅಲ್ಪಸ್ವಲ್ಪ ಬೆಳೆಯನ್ನು ಕಿತ್ತು ತರಲು ಮಳೆಯಿಂದ ತೊಂದರೆಯಾಗಿದೆ. ಹೀಗಾಗಿ, ಮಾರುಕಟ್ಟೆಗೆ ಬರುತ್ತಿರುವ ತರಕಾರಿ ಪ್ರಮಾಣ ಇಳಿಕೆಯಾಗಿದೆ,'

from India & World News in Kannada | VK Polls https://ift.tt/60cypxQ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಹಾಕಿಸಿ ಸರ್ಕಾರಿ ಹುದ್ದೆ ಕೊಡಿಸ್ತೀನಿ ಎಂದು ವಂಚಿಸಿದವ ಸೆರೆ

ನಿರುದ್ಯೋಗಿಯಾಗಿದ್ದ ಸಿದ್ದರಾಜು ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳನ್ನು ಗುರುತಿಸಿ ವಿಶ್ವಾಸ ಗಳಿಸುತ್ತಿದ್ದ. ನಗರದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಬಳಿ ಹೋಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದ. ಕೃತ್ಯದಲ್ಲಿ ಆತನ ಸ್ನೇಹಿತರು ಸಹ ಭಾಗಿಯಾಗಿದ್ದಾರೆ. ಸಿದ್ದರಾಜು ಮತ್ತು ಸ್ನೇಹಿತರು ಸಾಕಷ್ಟು ಮಂದಿಗೆ ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.

from India & World News in Kannada | VK Polls https://ift.tt/kaPJvti

Asia Cup Records: ಏಷ್ಯಾ ಕಪ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡ ಯಾವುದು?

Asia Cup all time teams Records: 1984ರಲ್ಲಿ ಆರಂಭವಾಗಿದ್ದ ಏಷ್ಯಾ ಕಪ್‌ ಟೂರ್ನಿಯು ಇಲ್ಲಿಯವರೆಗೂ 14 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಏಷ್ಯಾ ಕಪ್‌ ಕ್ರಿಕೆಟ್‌ ಇತಿಹಾಸದಲ್ಲಿಯೇ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಇಲ್ಲಿಯವರೆಗೂ ಟೀಮ್‌ ಇಂಡಿಯಾ ಒಟ್ಟು 7 ಬಾರಿ ಚಾಂಪಿಯನ್‌ ಆಗಿದೆ. ಇದರಲ್ಲಿ ಒಂದು ಟಿ20 ಸ್ವರೂಪದಲ್ಲಿ ಭಾರತ ಏಷ್ಯಾ ಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಐದು ಬಾರಿ ಪ್ರಶಸ್ತಿ ಗೆದ್ದಿರುವ ಶ್ರೀಲಂಕಾ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/j6s1a3C

ಕುಣಿಗಲ್‌-ಅಂಬಿ ಬಾಂಧವ್ಯ ನೆನೆದ ಸಂಸದೆ ಸುಮಲತಾ

Ambareesh and Kunigal: ಬೆಂಗಳೂರಿನಿಂದ ಕುಣಿಗಲ್‌ ಮಾರ್ಗವಾಗಿ ಬುಧವಾರ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಮಳೆಯಿಂದ ಸಂಭವಿಸಿರುವ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಸಂಸದೆ ಸುಮಲತಾ ಅವರನ್ನು ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್‌ ಬಳಿ ಅಂಬರೀಶ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಪುರಸಭಾ ಸದಸ್ಯ ಕೋಟೆನಾಗಣ್ಣ, ಅಂಬಿ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂ ಮಳೆ ಸುರಿದು ಅದ್ಧೂರಿಯಾಗಿ ಬರಮಾಡಿಕೊಂಡರು.

from India & World News in Kannada | VK Polls https://ift.tt/7OUtlVf

ಪರರ ದುಃಖಕ್ಕೂ ಸ್ಪಂದಿಸುವ ಭಾವ ಬೆಳೆಸಿಕೊಂಡು ದೈವತ್ವಕ್ಕೇರೋಣ: ರಾಘವೇಶ್ವರ ಶ್ರೀ ಕರೆ

ನಮಗೆ ಕೇಡು ಮಾಡಿದವರಲ್ಲೂ ಕನಿಕರ ಹೊಂದಿರುವವರು ದೇವರು ಮತ್ತು ಗುರುಗಳಿಗೆ ಮಾತ್ರ ಸಾಧ್ಯ ಎಂದ ರಾಘವೇಶ್ವರ ಶ್ರೀ ಅವರು, ಪರರಿಗೆ ದುಃಖವಾದಾಗ ನಮಗೂ ದುಃಖವಾಗುವುದು ಕಾರುಣ್ಯ. ನಮ್ಮ ತೊಂದರೆಗೆ ನಾವು ದುಃಖಿಸುವುದು ಎಲ್ಲರಿಗೂ ತಿಳಿದಿದೆ. ಆದರೆ ಇನ್ನೊಬ್ಬರಿಗೆ ದುಃಖವಾದಾಗ ನಾವು ದುಃಖಿಸುವುದು ಕರುಣೆ. ಆದರೆ ಇದು ತರ್ಕಕ್ಕೆ ನಿಲುಕದ್ದು. ಅದು ಒಂದು ಬಗೆಯ ಅದ್ವೈತ. ಮತ್ತೊಂದು ಜೀವದ ಜತೆಗೆ ಒಂದು ಸ್ತರದ ಅದ್ವೈತ ಅಥವಾ ಬೆಸುಗೆ ಬಂದಾಗ ಈ ಭಾವ ಪ್ರಕಟವಾಗುತ್ತದೆ ಎಂದು ವಿಶ್ಲೇಷಿಸಿದರು.

from India & World News in Kannada | VK Polls https://ift.tt/Tcy28g9

Narendra Modi: ಪ್ರಧಾನಿ ನರೇಂದ್ರ ಮೋದಿ ಬಳಿ ಇರೋದು 35 ಸಾವಿರ ರೂಪಾಯಿ ನಗದು, ಬಿಡಿಗಾಸಿನ ಸ್ಥಿರಾಸ್ತಿಯೂ ಇಲ್ಲ!

ಹಣದ ವ್ಯಾಮೋಹವೇ ಇಲ್ಲದ ರಾಜಕಾರಣಿ ಎನ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚರಾಸ್ತಿಯು ಒಂದು ವರ್ಷದ ಅವಧಿಯಲ್ಲಿ 26 ಲಕ್ಷ ರೂ.ಗಳಷ್ಟು ಹೆಚ್ಚಳ ಕಂಡಿದೆ. ಹಾಲಿ ಅವರ ಸಂಪತ್ತಿನ ಮೊತ್ತ 2.23 ಕೋಟಿ ರೂಪಾಯಿ. ಇದರಲ್ಲಿ ಬ್ಯಾಂಕ್‌ಗಳಲ್ಲಿಇರಿಸಿದ ನಿಶ್ಚಿತ ಠೇವಣಿಯದ್ದೇ ಸಿಂಹಪಾಲು. ಕಾರು, ಬಂಗಲೆಯಂತಹ ಯಾವುದೇ ಸ್ಥಿರಾಸ್ತಿ ಅವರ ಬಳಿ ಇಲ್ಲ. ಗುಜರಾತಿನಲ್ಲಿ ಇದ್ದ ತಮ್ಮ ಪಾಲಿನ ನಿವೇಶನ ಹಕ್ಕನ್ನು ಮೋದಿ ದಾನ ಮಾಡಿದ್ದಾರೆ. ಷೇರು, ಬಾಂಡ್‌, ಮ್ಯುಚುವಲ್‌ ಫಂಡ್‌ ಹೂಡಿಕೆ ಮಾಡಿಲ್ಲ. ಯಾವುದೇ ಸ್ವಂತ ವಾಹನ ಇಲ್ಲ.

from India & World News in Kannada | VK Polls https://ift.tt/ezRMthg

ಪಿಎಫ್‌ಐ, ಎಸ್‌ಡಿಪಿಐ ನಿಷೇಧದ ವಿಚಾರದಲ್ಲಿ ಸರಕಾರ ಪ್ರಯತ್ನದಲ್ಲಿದೆ: ಆರಗ ಜ್ಞಾನೇಂದ್ರ

ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರು ಕೇರಳದೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯಿದೆ. ಪಿಎಫ್‌ಐ, ಎಸ್‌ಡಿಪಿಐ ನಿಷೇಧದ ವಿಚಾರದಲ್ಲಿ ಸರಕಾರ ಪ್ರಯತ್ನದಲ್ಲಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

from India & World News in Kannada | VK Polls https://ift.tt/GD8nQKh

ಬಿಹಾರ ರಾಜಕೀಯ ಕಂಡು ಆ ದಿನಗಳನ್ನು ನೆನೆದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ: 'ಜನತಾ ದಳ' ರಾಷ್ಟ್ರ ರಾಜಕೀಯದ ಪರ್ಯಾಯವಾಗುವ ಭರವಸೆ

HD Devegowda and Janata Dal parivar: ಬಿಹಾರದಲ್ಲಿನ ಬೆಳವಣಿಗೆಗಳನ್ನು ಗಮನಿಸಿರುವ ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ (ಜೆಡಿಎಸ್‌) ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು, ದೇಶದಲ್ಲಿ 'ಜನತಾ ದಳ ಪರಿವಾರವು' ಪರ್ಯಾಯ ರಾಜಕೀಯ ಆಯ್ಕೆಯಾಗಿ ಮತ್ತೆ ಹೊರಹೊಮ್ಮುತ್ತಿರುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ನಿತೀಶ್‌ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ (ಜೆಡಿಯು) ಮತ್ತು ಲಾಲೂ ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಜನತಾ ದಳವು (ಆರ್‌ಜೆಡಿ) ಬಿಹಾರದ ಹೊಸ ಮೈತ್ರಿ ಸರಕಾರ ರಚಿಸಲು ಮುಂದಾಗಿವೆ.

from India & World News in Kannada | VK Polls https://ift.tt/9g2bzuA

Covid-19 Karnataka Update: ಬೆಂಗಳೂರಿನಲ್ಲೇ 1,098 ಹೊಸ ಪ್ರಕರಣಗಳು

Coronavirus Cases: ರಾಜ್ಯದಲ್ಲಿ ಅಲ್ಪ ಇಳಿಕೆ ಕಂಡಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಮಂಗಳವಾರ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲೇ 1,098 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು 1,608 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ, ಕೋವಿಡ್‌ ಕಾರಣಗಳಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿಇದುವರೆಗೆ 40.22 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 40,123 ಜನರು ಮೃತರಾಗಿದ್ದಾರೆ. ಆಗಸ್ಟ್ 9ರಂದು 2,068 ಜನರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 39.71 ಲಕ್ಷಕ್ಕೆ ಏರಿಕೆಯಾಗಿದೆ.

from India & World News in Kannada | VK Polls https://ift.tt/nfNpRuz

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ: ನಳಿನ್‌ ಕುಮಾರ್‌ ಕಟೀಲ್ ಸ್ಪಷ್ಟನೆ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹೋರಾಟ ಹೆಚ್ಚಾಗಿದೆ. ಅವರ ಇ.ಡಿ‌. ದಾಳಿ, ಒಳ ಜಗಳ, ಹಗರಣ, ಬೀದಿ ಜಗಳ, ಗೊಂದಲ, ಆಂತರಿಕ ಕಚ್ಛಾಟವನ್ನು ಮುಚ್ಚಿಡಲು ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿದೆ. ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ, ಹಿರಿಯರಾದ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಹೇಳಿದ್ದಾರೆ.

from India & World News in Kannada | VK Polls https://ift.tt/PXmo3OL

asia cup 2022: ಟೀಮ್ ಇಂಡಿಯಾ ಆಯ್ಕೆ ಸರಿಯಿಲ್ಲ ಎಂದ ಆಕಾಶ್ ಚೋಪ್ರಾ!

India Squad For Asia Cup 2022: ಆಗಸ್ಟ್ 27ರಂದು ಬಹುನಿರೀಕ್ಷಿತ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಟೂರ್ನಿ ಸಲುವಾಗಿ ತಂಡ ಪ್ರಕಟಿಸಲು ಆಗಸ್ಟ್ 8 ಕೊನೇ ದಿನವಾಗಿತ್ತು. ಅಂತೆಯೇ ಸೋಮವಾರ ಭಾರತೀಯ ಕ್ರಿಕೆಟ್‌ ನಿಯಂತ್ರಂಣ ಮಂಡಳಿ (ಬಿಸಿಸಿಐ) ತಂಡ ಪ್ರಕಟ ಮಾಡಿದೆ. ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಗಾಯದ ಸಮಸ್ಯೆ ಕಾರಣ ಮಹತ್ವದ ಟೂರ್ನಿಗೆ ಅಲಭ್ಯರಾಗಿರುವುದು ಭಾರತ ತಂಡಕ್ಕೆ ಬಹುದೊಡ್ಡ ಹಿನ್ನಡೆ ತಂದೊಡ್ಡಿದೆ, ಈ ಸಂದರ್ಭದಲ್ಲಿ ಭಾರತ ತಂಡದ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅಸಮಾಧಾನ ಹೊರಹಾಕಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CfIgTVt

Gold Rate Today: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ..! ಇಲ್ಲಿದೆ ನೋಡಿ ಈ ದಿನದ ಗೋಲ್ಡ್ ದರ ವಿವರ

gold and silver rates today: ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಇಂದು ಚಿನ್ನದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

from India & World News in Kannada | VK Polls https://ift.tt/l29epVX

ತುಮಕೂರಲ್ಲಿ ರಸ್ತೆ ಗುಂಡಿಗಳೇ ಇಲ್ಲವಂತೆ..! ಹೈಕೋರ್ಟ್‌ಗೆ ಮಹಾನಗರ ಪಾಲಿಕೆ ವರದಿ ಸಲ್ಲಿಕೆ

ಸ್ಮಾರ್ಟ್‌ಸಿಟಿ ತುಮಕೂರಲ್ಲಿ ರಸ್ತೆಗುಂಡಿಗಳೇ ಇಲ್ಲ! ಗುಂಡಿ ಮುಕ್ತ ಮಹಾನಗರ! ಹೀಗಂತ ಸ್ವತಃ ಮಹಾನಗರ ಪಾಲಿಕೆ ಘೋಷಿಸಿದೆ. ಇದು ಬರೀ ಘೋಷಣೆಯಲ್ಲ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿ! ಆದರೆ, ಮಹಾನಗರ ಪಾಲಿಕೆ ಒಮ್ಮೆ ಬಿಡುವು ಮಾಡಿಕೊಂಡು ನಗರ ಪರ್ಯಟನೆ ಮಾಡಿದರೆ ಗುಂಡಿಗಳ ದಿಗ್ದರ್ಶನವಾಗುತ್ತದೆ. ಆದರೂ ಯಾವ ಮಾನದಂಡದಡಿ ಬಣ್ಣ-ಬಣ್ಣ ಛಾಯಾಚಿತ್ರಗಳ ಸಹಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು ಎಂಬುದು ಪ್ರಶ್ನೆ. ಮಹಾನಗರ ಪಾಲಿಕೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಯಾವುದೇ ಗುಂಡಿಗಳು ಕಂಡುಬಂದರೆ ಸಾರ್ವಜನಿಕರು ಗಮನಕ್ಕೆ ತಂದರೆ ಕೂಡಲೇ ಬಗೆಹರಿಸುವುದಾಗಿ ಪಾಲಿಕೆ ಹೇಳಿದೆ.

from India & World News in Kannada | VK Polls https://ift.tt/Ps0Lgi3

ಮೈಸೂರಿನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ

Murder in Mysuru: ಅಗರಬತ್ತಿ ವ್ಯಾಪಾರದೊಂದಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಸಂಪತ್‌ ಕುಮಾರ್‌ ಮಾಡುತ್ತಿದ್ದರು. ಇವರ ಪತ್ನಿ ಗಾಯತ್ರಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. 16 ವರ್ಷದ ಪುತ್ರ ಖಾಸಗಿ ಕಾಲೇಜಿನಲ್ಲಿಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಸೋಮವಾರ ಬೆಳಗ್ಗೆ ಗಾಯತ್ರಿ ಅವರು ಎಂದಿನಂತೆ ಶಾಲೆಗೆ ತೆರಳಿದ್ದರು. ಕಾಲೇಜಿಗೆ ತೆರಳಿದ್ದ ಪುತ್ರ ಮನೆಗೆ ವಾಪಸ್ಸಾದ ಸಂದರ್ಭದಲ್ಲಿಈ ಘಟನೆ ನಡೆದಿದೆ.

from India & World News in Kannada | VK Polls https://ift.tt/a7AHDJi

IND vs WI: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿರುವ ಟೀಮ್ ಇಂಡಿಯಾ ಸ್ಪಿನ್ನರ್ಸ್‌!

India vs West Indies: ಟೀಮ್ ಇಂಡಿಯಾ ತನ್ನ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ನಡೆದ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಭಾರತ ತಂಡ 4-1 ಅಂತರದ ಜಯ ದಾಖಲಿಸಿದೆ. ಭಾನುವಾರ ನಡೆದ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಭಾರತ ತಂಡ 88 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಅಂದಹಾಗೆ ಈ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್‌ಗಳು ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಎದುರಾಳಿ ತಂಡದ ಎಲ್ಲಾ ಬ್ಯಾಟರ್‌ಗಳನ್ನು ಔಟ್‌ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/8x5TAzv

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಆಗಸ್ಟ್ 15ರಂದು ಧ್ವಜಾರೋಹಣಕ್ಕೆ ಸಿದ್ಧತೆ: ಸಿಹಿ ಹಂಚಿ ಸಂಭ್ರಮಾಚರಣೆ

Idgah Maidan: ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಸ್ವತ್ತು ಎಂದು ಬಿಬಿಎಂಪಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಚಾಮರಾಜಪೇಟೆಯ ನಾಗರಿಕರ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ಭಾನುವಾರ ಮೈದಾನದ ಬಳಿ ಸಮಾವೇಶಗೊಂಡು ಸರಕಾರದ ನಿರ್ಧಾರವನ್ನು ಸ್ವಾಗತಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದವು. ನಾಗರಿಕ ಸಂಘಟನೆಗಳ ಒಕ್ಕೂಟದ ಪದಾಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಬೀದಿಬದಿ ವ್ಯಾಪಾರಿಗಳು ಸರಕಾರ ಮತ್ತು ಬಿಬಿಎಂಪಿಗೆ ಕೃತಜ್ಞತೆ ಸಲ್ಲಿಸಿದರು.

from India & World News in Kannada | VK Polls https://ift.tt/rxGNLMb

Covid-19 Karnataka Update: ಕೋವಿಡ್‌ ಪ್ರಕರಣಗಳ ಸಂಖ್ಯೆ ಅಲ್ಪ ಇಳಿಕೆ, ಬೆಂಗಳೂರಿನಲ್ಲಿ 655 ಪ್ರಕರಣಗಳು

Coronavirus Cases: ರಾಜ್ಯದಲ್ಲಿ ಸೋಮವಾರ ಕೋವಿಡ್‌ ಪ್ರಕರಣಗಳ ಸಂಖ್ಯೆ ಅಲ್ಪ ಇಳಿಕೆಯಾಗಿದೆ. 1,019 ಜನರಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿಇದುವರೆಗೆ 40.21 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 40,121 ಜನರು ಮೃತರಾಗಿದ್ದಾರೆ. ಆಗಸ್ಟ್ 8ರಂದು 1,662 ಜನರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 39.69 ಲಕ್ಷಕ್ಕೆ ಏರಿಕೆಯಾಗಿದೆ.

from India & World News in Kannada | VK Polls https://ift.tt/2frHBU8

ಭಾರತದಲ್ಲಿ ₹12,000ಕ್ಕಿಂತ ಕಡಿಮೆ ಬೆಲೆಯ ಚೀನಾದ ಸ್ಮಾರ್ಟ್‌ಫೋನ್‌ಗಳ ನಿರ್ಬಂಧಕ್ಕೆ ಕ್ರಮ: ವರದಿ

Chinese Phones: ಜಗತ್ತಿನ ಎರಡನೇ ಅತಿ ದೊಡ್ಡ ಮೊಬೈಲ್‌ ಫೋನ್‌ ಮಾರುಕಟ್ಟೆಯಾಗಿರುವ ಭಾರತದಲ್ಲಿ ಕಡಿಮೆ ಬೆಲೆ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರಾಟದಿಂದ ಚೀನಾದ ಬೃಹತ್‌ ಕಂಪನಿಗಳನ್ನು ದೂರ ಸರಿಸಲು ಕ್ರಮವಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯವಾಗಿ ತಯಾರಿಸುವ ಫೋನ್‌ಗಳಿಗಿಂತ ಕಡಿಮೆ ದರದಲ್ಲಿ ರಿಯಲ್‌ಮಿ ಮತ್ತು ಟ್ರಾನ್ಸಿಷನ್‌ ಫೋನ್‌ಗಳು ಗ್ರಾಹಕರಿಗೆ ತಲುಪುತ್ತಿವೆ. ಇದರಿಂದಾಗಿಯೂ ಪ್ರಾದೇಶಿಕ ಕೈಗಾರಿಕೆಯ ಮೇಲೆ ಪರಿಣಾಮ ಬೀರಿದೆ.

from India & World News in Kannada | VK Polls https://ift.tt/oUFLayg

ಚಿಕ್ಕಬಳ್ಳಾಪುರ: ಒಡೆದ ಕೆರೆಕಟ್ಟೆಗೆ ಸಿಗದ ಕಾಯಕಲ್ಪ, ಎಂಟು ತಿಂಗಳಿಂದ ಕಡತಗಳಲ್ಲೇ ಇದೆ ಪರಿಹಾರ..!

ಮಳೆಗೆ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಮುಂದೆ ಏನಾದರೂ ಭಾರಿ ಮಳೆ ಬಿದ್ದು ಅವಾಂತರಗಳಾದರೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಏಕೆಂದರೆ ಕಳೆದ 8 ತಿಂಗಳ ಹಿಂದೆ ಬಿದ್ದ ಮಳೆಯಿಂದ ಆಗಿರುವ ಹಾನಿಗೆ ಪರಿಹಾರವೂ ಸಿಕ್ಕಿಲ್ಲ. ಒಡೆದ ಕಟ್ಟೆ, ಸೇತುವೆಗಳನ್ನೂ ಕಟ್ಟಿಲ್ಲ. ಕಳೆದ ವರ್ಷ ಜಿಲ್ಲಾದ್ಯಂತ ಭಾರಿ ಮಳೆ ಸುರಿದಿತ್ತು. ಹಲವೆಡೆ ಭಾರಿ ಮಳೆಯಿಂದ ಅನಾಹುತಗಳಾಗಿದ್ದವು. ಶಿಡ್ಲಘಟ್ಟ ತಾಲೂಕಿನ ಪಾಪಾಗ್ನಿ ನದಿ ಪಾತ್ರದ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗು ಚಿಕ್ಕಬಂದರಘಟ್ಟ ಕೆರೆಗಳು ಒಡೆದು ಈ ಭಾಗದ ಜಮೀನುಗಳಲ್ಲಿದ್ದ ಬೆಳೆಗಳೆಲ್ಲಾಕೊಚ್ಚಿ ಹೋಗಿದ್ದವು.

from India & World News in Kannada | VK Polls https://ift.tt/VYLzCo5

CWG 2022: ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಹರ್ಮನ್‌ಪ್ರೀತ್‌ ಕೌರ್ ಬಳಗ!

India Women's vs Australia Women's Match Highlights: ಇದೇ ಮೊದಲ ಬಾರಿ ಮಹಿಳಾ ಟಿ20 ಕ್ರಿಕೆಟ್‌ ಅನ್ನು ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸೇರ್ಪಡೆ ಮಾಡಲಾಗಿದ್ದು, ಭಾರತ ಮಹಿಳಾ ಕ್ರಿಕೆಟ್‌ ತಂಡವನ್ನು ಮುನ್ನಡೆಸಿದ ಹರ್ಮನ್‌ಪ್ರೀತ್ ಕೌರ್‌ ಐತಿಹಾಸಿಕ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ. ಭಾರತ ತಂಡ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಮೂಲಕ ಕೊನೆಗೆ 9 ರನ್‌ಗಳ ವೀರೋಚಿತ ಸೋಲನುಭವಿಸಿತು. ಹರ್ಮನ್‌ಪ್ರೀತ್‌ 65 ರನ್‌ ಸಿಡಿಸಿ ತಂಡಕ್ಕೆ ಜಯ ತಂದುಕೊಡ;ಉ ಸಕಲ ಪ್ರಯತ್ನ ನಡಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/WqJ4HlG

CWG 2022: 16 ವರ್ಷಗಳ ಬಳಿಕ ಪದಕ ಗೆದ್ದ ಭಾರತ ಮಹಿಳಾ ಹಾಕಿ ತಂಡ!

Commonwealth Games 2022: ಭಾರತ ಮಹಿಳಾ ಹಾಕಿ ತಂಡ ಐತಿಹಾಸಿಕ ಸಾಧನೆ ಮೆರೆದಿದೆ. ಸವಿತಾ ಪೂನಿಯಾ ಸಾರಥ್ಯದ ಭಾರತ ಮಹಿಳಾ ತಂಡ ಬರ್ಮಿಂಗ್‌ಹ್ಯಾಮ್‌ ಕಾಮನ್‌ವಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಸಾಧನೆ ಮೆರೆಯುವ ಮೂಲಕ, 16 ವರ್ಷಗಳ ಬಳಿಕ ಕೂಟದಲ್ಲಿ ಮೊದಲ ಪದಕ ಗೆದ್ದ ಸಾಧನೆ ಮಾಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ ತಂಡದ ಎದುರು 2-1 ಗೋಲ್‌ಗಳ ಅಂತರದಲ್ಲಿ ಮಣಿಸಿದ ಭಾರತ ತಂಡ ಅದ್ಭುತ ಜಯ ದಾಖಲಿಸಿತು. ಸ್ಟಾಪ್‌ ವಾಚ್‌ ಗೊಂದಲದ ನಡುವೆಯೂ ಗೆಲುವು ಭಾರತಕ್ಕೆ ಗೆಲುವು ಒಲಿಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lIOMYs9

Tejas aircraft | ಎಚ್‌ಎಎಲ್‌ನ 'ತೇಜಸ್‌'ಗೆ ಭಾರಿ ಬೇಡಿಕೆ: ವಿಮಾನ ಖರೀದಿಗೆ ಮುಗಿಬಿದ್ದಿರುವ ವಿವಿಧ ರಾಷ್ಟ್ರಗಳು

HAL Light Combat Aircraft: ಭಾರತದ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದೆ. ಬೆಂಗಳೂರಿನಲ್ಲಿರುವ ಹಿಂದೂಸ್ಥಾನ್‌ ಏರೋನಾಟಿಕಲ್‌ ಸಂಸ್ಥೆ (ಎಚ್‌ಎಎಲ್‌) ತಯಾರಿಸಿರುವ 'ತೇಜಸ್‌' ವಿಮಾನ ಖರೀದಿಸಲು ವಿವಿಧ ರಾಷ್ಟ್ರಗಳು ಮುಗಿಬಿದ್ದಿವೆ. ಮಲೇಷ್ಯಾ, ಅಮೆರಿಕ, ಅರ್ಜೆಂಟೀನಾ, ಆಸ್ಪ್ರೇಲಿಯಾ, ಇಂಡೋನೇಷ್ಯಾ. ಈಜಿಪ್ಟ್‌, ಫಿಲಿಪ್ಪೀನ್ಸ್‌ ಸೇರಿ ಹಲವು ರಾಷ್ಟ್ರಗಳಿಂದ ತೇಜಸ್‌ ವಿಮಾನಕ್ಕೆ ಬೇಡಿಕೆ ಹೆಚ್ಚಿದೆ. ಮೊದಲ ಹಂತವಾಗಿ ಮಲೇಷ್ಯಾ ಈಗಾಗಲೇ 18 ವಿಮಾನಗಳನ್ನು ಖರೀದಿಸಿದೆ ಎಂದು ಕೇಂದ್ರ ಸರಕಾರ ಸಂಸತ್‌ಗೆ ಲಿಖಿತ ಉತ್ತರ ನೀಡಿದೆ.

from India & World News in Kannada | VK Polls https://ift.tt/Z8wBmkf

ಜೆಡಿಎಸ್‌ನ 'ಪಂಚರತ್ನ'ಕ್ಕೆ ಆರಂಭದಲ್ಲೇ ವಿಘ್ನ: ಸಿದ್ಧವಾಗಿಲ್ಲ ಎಚ್‌ಡಿಕೆ ಪ್ರಯಾಣಿಸುವ ಕ್ಯಾರವಾನ್‌, ಯಾತ್ರೆ ಮಾರ್ಗಗಳಲ್ಲಿ ಪ್ರವಾಹ

Pancharatna Ratha Yatre: 2023ರ ಚುನಾವಣೆ ಜೆಡಿಎಸ್‌ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತೆ ನಿರ್ಣಾಯಕವಾಗಿದ್ದು, 80ರ ದಶಕದಲ್ಲಿಆಂಧ್ರದಲ್ಲಿ ಎನ್‌ಟಿಆರ್‌ ನಡೆಸಿದಂತೆ ಯಾತ್ರೆ ನಡೆಸಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸಿದ್ಧವಾಗಿರುವ ರೂಟ್‌ ಮ್ಯಾಪ್‌ನಂತೆ ಹಳೇ ಮೈಸೂರು, ಕರಾವಳಿ, ಬಯಲುಸೀಮೆ ಮತ್ತು ಉತ್ತರ ಕರ್ನಾಟಕದಲ್ಲಿ ಒಟ್ಟು 4 ಹಂತಗಳಲ್ಲಿ 3 ತಿಂಗಳ ಕಾಲ ಯಾತ್ರೆ ನಡೆಯಲಿದೆ. ನಿಗದಿಯಂತೆ ನಡೆದಿದ್ದರೆ ಆ.15ರಂದು ನಾಡದೇವತೆ ಮೈಸೂರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಬೇಕಿತ್ತು. ಆದರೆ, ಮಳೆ ಕಾರಣ ವಿಳಂಬ ಮಾಡಲು ನಿರ್ಧರಿಸಲಾಗಿದ್ದು, ಪುತ್ರ ನಿಖಿಲ್‌ ಸಿನಿಮಾವೊಂದರ ಸಿದ್ಧತೆಗಾಗಿ ಕುಮಾರಸ್ವಾಮಿ ಲಂಡನ್‌ಗೆ ತೆರಳಿದ್ದಾರೆ. ವಿದೇಶ ಪ್ರವಾಸದಿಂದ ಮರಳಿದ ಬಳಿಕ ಯಾತ್ರೆ ಆರಂಭದ ದಿನಾಂಕ ಮತ್ತು ರಥಯಾತ್ರೆಯ ಮಾರ್ಗನಕ್ಷೆ ಅಂತಿಮಗೊಳಿಸಲಿದ್ದಾರೆ.

from India & World News in Kannada | VK Polls https://ift.tt/i8tgrQJ

ಪರೇಶ ಮೇಸ್ತ ಸಾವು ಪ್ರಕರಣದಲ್ಲಿ ನಿರಪರಾಧಿಗಳಿದ್ದರೆ ಕೇಸ್‌ ವಾಪಸ್‌ ತೆಗೆದುಕೊಳ್ಳಲು ನಿರ್ಧಾರ: ಕೋಟ

ಕರಾವಳಿಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ ನೆಟ್ಟಾರ್ ಹತ್ಯೆ ನಂತರ ಬಿಜೆಪಿ ಕಾರ್ಯಕರ್ತರಲ್ಲಿ ಸಾತ್ವಿಕ ನೋವಾಗಿದ್ದು ನಿಜ. ಹಿಂದೆ ಬೇರೆ ಸರಕಾರ ಇದ್ದಾಗ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿತ್ತು. ಈಗ ಬಿಜೆಪಿ ಸರಕಾರವಿದ್ದರೂ ಆಗುತ್ತಿದೆ ಎಂಬುದು ಅವರ ಭಾವನೆ. ಪಕ್ಷದ ಸಂಘಟನೆಗೆ, ಸಿದ್ಧಾಂತಕ್ಕೆ ಮನೆಮಠ ಬಿಟ್ಟು ಹೋರಾಟ ಮಾಡಿದವರಿಗೆ ಹೀಗಾಗುತ್ತಿದೆ ಎಂದು ಅವರಿಗೆ ಅಸಮಾಧಾನ, ಆತಂಕ ವ್ಯಕ್ತವಾಗಿದೆ. ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ. ಎಲ್ಲೋ ತಪ್ಪಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

from India & World News in Kannada | VK Polls https://ift.tt/ERvS5tH

ಗೋವುಗಳ ಜತೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಂಡ್ಯ ಮೂಲದ ವಿಕೃತ ಕಾಮುಕನ ಬಂಧನ

ಆರೋಪಿಯು ಶಶಿಕುಮಾರ್‌ ಎಂಬುವರಿಗೆ ಸೇರಿದ ಹಸುಗಳ ಬಾಲ ಕತ್ತರಿಸಿ ಹಲವು ಬಾರಿ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಇದನ್ನು ಗಮನಿಸಿದ್ದ ಶಶಿಕುಮಾರ್‌, ಆರೋಪಿಯನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಂದ್ರಾಲೇಔಟ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

from India & World News in Kannada | VK Polls https://ift.tt/Yj4LJfN

ಕೊಟ್ಟಿಗೆಹಾರ: 24 ಗಂಟೆಯಲ್ಲಿ ಸಾಲುಸಾಲು ಅಪಘಾತ, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ

Accidents in national highway: ತಾಲೂಕು ಕೇಂದ್ರ ಮೂಡಿಗೆರೆಯ ಹ್ಯಾಂಡ್‌ ಪೂೕಸ್ಟ್‌ನಿಂದ ಕೊಟ್ಟಿಗೆಹಾರದವರೆಗೆ ಕಳೆದ 24 ಗಂಟೆಯಲ್ಲಿ ಸಾಲುಸಾಲು ಅಪಘಾತಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿಯ ಬಣಕಲ್‌ನ ಹೇಮಾವತಿ ನದಿ ಸೇತುವೆ ಸಮೀಪ ಎರಡು ಕಾರುಗಳು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿವೆ. ಅದೇ ಸ್ಥಳದಲ್ಲಿ ಸರಕಾರಿ ಬಸ್ಸು ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಣಕಲ್‌ನ ನಜರತ್‌ ಶಾಲೆಯ ಸಮೀಪ ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದ ಕಾರು ರಸ್ತೆ ಬದಿಗೆ ಪಲ್ಟಿಯಾಗಿದೆ.

from India & World News in Kannada | VK Polls https://ift.tt/92BJi5R

ಕೊಂಡಜ್ಜಿ ಹಳ್ಳದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ: 20 ಅಡಿ ನೀರಿನ ಆಳಕ್ಕಿಳಿದು ಕಾರಿಗೆ ಹಗ್ಗ ಕಟ್ಟಿದ ಸಾಹಸಿ

Kondajji Halla: ತಿಪಟೂರು ತಾಲೂಕಿನ ಗಡಬನಹಳ್ಳಿ ಸಹೋದರರು ಕಳೆದ ಬುಧವಾರ ರಾತ್ರಿ ಮದುವೆಗೆಂದು ಕೊಂಡಜ್ಜಿ-ಸೊಪ್ಪನಹಳ್ಳಿ ಬಳಿ ಇರುವ ಸೇತುವೆ ಮೂಲಕ ಕಾರಿನಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿತ್ತು. ಹಳ್ಳದಲ್ಲಿ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿರುವುದನ್ನು ಅರಿತು ಪಟ್ಟಸಿದ್ದಯ್ಯ ಕಾರಿನಿಂದ ಹೊರ ಜಿಗಿದು ಜೀವ ಉಳಿಸಿಕೊಂಡಿದ್ದರು. ಅದೇ ವೇಳೆ ಕಾರು ಸಹಿತ ಕೊಚ್ಚಿಹೋಗಿದ್ದ ಪಟೇಲ್‌ ಕುಮಾರಸ್ವಾಮಿಗಾಗಿ ಸತತ ಮೂರು ದಿನಗಳ ಕಾಲ ಶೋಧ ಕಾರ್ಯ ನಡೆದಿತ್ತು.

from India & World News in Kannada | VK Polls https://ift.tt/emBUuM6

ರೈತರ ಬಳಿಗೆ ಬರಲಿದೆ ಎಸ್ಕಾಂ ಸರ್ವೀಸ್! ‘ಡಿಸಿ ನಡೆ, ಹಳ್ಳಿ ಕಡೆ’ ಮಾದರಿಯಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ

ಎಸ್ಕಾಂಗಳಿಂದ ಹಳ್ಳಿ ಸರ್ವೀಸ್ ಆರಂಭವಾಗಿದ್ದು, ತಿಂಗಳಲ್ಲಿ ಒಂದು ದಿನ ‘ಡಿಸಿ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಮಾದರಿಯಲ್ಲಿ ಇಂಧನ ಇಲಾಖೆಯ ಅಧಿಕಾರಿಗಳು ಹಳ್ಳಿಗರ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಜೂ.18 ರಂದು ಚಾಲನೆ ಪಡೆದ ಈ ಕಾರ್ಯಕ್ರಮಕ್ಕೆ ಕಳೆದೆರಡು ತಿಂಗಳಲ್ಲಿ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಒಟ್ಟು 960 ಹಳ್ಳಿಗಳಿಗೆ ಎಸ್ಕಾಂಗಳ ಅಧಿಕಾರಿಗಳು ಭೇಟಿ ಮಾಡಿದ್ದಾರೆ.

from India & World News in Kannada | VK Polls https://ift.tt/9e574TD

CWG 2022: ಕುಸ್ತಿಯಲ್ಲಿ ರವಿ ಕುಮಾರ್‌ ದಹಿಯಾ, ವಿನೇಶ್‌ ಫೊಗಟ್‌, ನವೀನ್‌ಗೆ ಚಿನ್ನದ ಪದಕ!

Another hat-trick gold medals for India: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 9ನೇ ದಿನವಾದ ಶನಿವಾರ ಭಾರತೀಯ ಕುಸ್ತಿಪಟುಗಳು ಹ್ಯಾಟ್ರಿಕ್‌ ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ. ರವಿ ಕುಮಾರ್‌ ದಹಿಯಾ, ವಿನೇಶ್‌ ಫೊಗಟ್‌ ಹಾಗೂ ನವೀನ್ ಅವರು ಕುಸ್ತಿಯ ಪ್ರತ್ಯೇಕ ವಿಭಾಗಗಳ ಫೈನಲ್‌ ಪಂದ್ಯಗಳಲ್ಲಿ ಗೆದ್ದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಭಾರತದ ಚಿನ್ನದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ ಕುಸ್ತಿಯಲ್ಲಿ ಭಾರತಕ್ಕೆ 6 ಚಿನ್ನದ ಪದಕಗಳು ಸೇರ್ಪಡೆಯಾಗಿವೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/xw4Qyje

ಬೆಂಗಳೂರಿನಲ್ಲಿ 2.90 ಕೋಟಿ ರೂ. ಮೌಲ್ಯದ 2.38 ಎಕರೆ ಸರಕಾರಿ ಭೂಮಿ ವಶ: ಭೂಗಳ್ಳರಿಗೆ ಬಿಸಿ

land acquisition: ಬೆಂಗಳೂರು ನಗರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶನಿವಾರ ಸರಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತವು 2.90 ಕೋಟಿ ರೂ. ಮೌಲ್ಯದ 2.38 ಎಕರೆಯನ್ನು ವಶಪಡಿಸಿಕೊಂಡಿದೆ. ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡವು ಸರಕಾರಿ ಕೆರೆ, ಕಾಲು ದಾರಿ, ಗುಂಡು ತೋಪು, ರಾಜಕಾಲುವೆ, ಸರಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿ, ಭೂಗಳ್ಳರಿಗೆ ಬಿಸಿ ಮುಟ್ಟಿಸಿದೆ.

from India & World News in Kannada | VK Polls https://ift.tt/lwgvHz0

ಏರದಿರಲಿ ಏರ್‌ ಟ್ರಾಫಿಕ್‌: ಅಪಘಾತ ತಡೆಗೆ ಪರ್ಯಾಯ ನಿಲ್ದಾಣಗಳ ಅಭಿವೃದ್ಧಿಗೆ ಇಸ್ರೋ ಸಲಹೆ

ದೆಹಲಿ, ಮುಂಬಯಿ, ಬೆಂಗಳೂರು ವಿಮಾನ ನಿಲ್ದಾಣಗಳ ಮೇಲೆ ಅವಲಂಬನೆ ಹೆಚ್ಚುತ್ತಿದ್ದು, ನಿತ್ಯ 700ರಿಂದ ಸಾವಿರ ವಿಮಾನಗಳು ಈ ನಿಲ್ದಾಣಗಳಿಂದ ಸಂಚರಿಸುತ್ತಿವೆ. ಹೀಗಾಗಿ, ಏಕಕಾಲಕ್ಕೆ ಆಗಮಿಸುವ ಮತ್ತು ಹೊರಡುವ ವಿಮಾನಗಳ ನಿಯಂತ್ರಣ ವ್ಯವಸ್ಥೆಯಲ್ಲಿ ಒತ್ತಡ ಏರ್ಪಡುತ್ತಿದೆ. ಸಂಭವನೀಯ ಅಪಘಾತ ತಡೆಗಟ್ಟಲು ಪರ್ಯಾಯ ಏರ್‌ಪೋರ್ಟ್‌ಗಳಿಗೆ ಮಾರ್ಗ ಬದಲಿಸಲು ಇಸ್ರೋ ಸೂಚಿಸಿದೆ.

from India & World News in Kannada | VK Polls https://ift.tt/Q1ulDxf

ಹೊಸಪೇಟೆ: ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ದೇಶದ ಎತ್ತರದ ಧ್ವಜಸ್ತಂಭ ಪ್ರತಿಷ್ಠಾಪನೆ

Tallest National flag pole: ಹೊಸಪೇಟೆ ನಗರದ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ದೇಶದ ಅತಿ ಎತ್ತರದ 405 ಅಡಿ ಧ್ವಜಸ್ತಂಭವನ್ನು ಶನಿವಾರ ಸಂಜೆ ಪ್ರತಿಷ್ಠಾಪನೆ ಮಾಡುವ ಕಾರ್ಯ ಆರಂಭಿಸಲಾಯಿತು. ಧ್ವಜಸ್ತಂಭ ಸ್ಥಾಪನೆಯ ಕಟ್ಟೆಗೆ ಪೂಜೆ ಸಲ್ಲಿಸಿ, ಧ್ವಜಸ್ತಂಭದ ಪರಿಕರಗಳನ್ನು ಜೋಡಿಸುವ ಕಾರ್ಯ ಶುರು ಮಾಡಲಾಯಿತು. ಲಾರಿಯಲ್ಲಿದ್ದ ಬೃಹತ್ ಗಾತ್ರದ ಧ್ವಜಸ್ತಂಭದ ಕೆಳಭಾಗದಲ್ಲಿ ಮೊದಲ ಹಂತದ ಧ್ವಜಸ್ತಂಭದ ಭಾಗವನ್ನು ಬೃಹತ್ ಕ್ರೇನ್‌ಗಳ ಮೂಲಕ ಪ್ರತಿಷ್ಠಾಪಿಸಲಾಯಿತು.

from India & World News in Kannada | VK Polls https://ift.tt/QE5ZD1t

ನಾನು ಬ್ರಾಹ್ಮಣರ ಮನೇಲಿ ಹುಟ್ಟಿದ್ರೆ ನೀವು ನನ್ನ ಕಾಲಿಗೆ ಬೀಳ್ಬೇಕು, ಆದ್ರೆ ಸಂವಿಧಾನ ಬೇಡ ಎನ್ನುತ್ತೆ: ರಮೇಶ್‌ ಕುಮಾರ್

ನಾನು ಅಕಸ್ಮಾತಾಗಿ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರೆ ಸಾಯೋವರೆಗೂ ನೀವೆಲ್ಲಾ ನನ್ನ ಕಾಲಿಗೆ ನಮಸ್ಕಾರ ಮಾಡುತ್ತಲೇ ಇರಬೇಕು. ಏಕೆಂದರೆ ನಾನು ಬ್ರಾಹ್ಮಣ. ನಾನು ಏನು ಹಲ್ಕಾ ಕೆಲಸ ಮಾಡಿದರೂ ನೀವು ನನಗೆ ಬಗ್ಗಿ ನಮಸ್ಕಾರ ಮಾಡಬೇಕು. ಆದರೆ ಸಂವಿಧಾನ ಇದನ್ನು ಬೇಡ ಅಂತ ಹೇಳುತ್ತದೆ ಎಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಜಾತಿ ವ್ಯವಸ್ಥೆಯ ಕರಾಳತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

from India & World News in Kannada | VK Polls https://ift.tt/1E6ucsz

ಕತಾರ್ ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಂಗೀತ ಕಾರ್ಯಕ್ರಮ

ಕರ್ನಾಟಕ ಸಂಘ ಕತಾರ್ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಭಾರತೀಯ ಸಾಂಸ್ಕೃತಿಕ ಕೇಂದ್ರ, ಕತಾರ್ ನಡೆಸುತ್ತಿರುವ "ಆಜಾದಿ ಕಾ ಅಮೃತ್ ಮಹೋತ್ಸವ"ದ ಆಚರಣೆಯ ಅಂಗವಾಗಿ, ಕರ್ನಾಟಕ ಸಂಘ ಕತಾರ್ ಆಗಸ್ಟ್ 4, 2022 ರಂದು ಶಾಸ್ತ್ರೀಯ ನೃತ್ಯಹಾಗೂ ಗಾಯನ ಸಂಗೀತ ಆಯೋಜಿಸಿತು. ಕಾರ್ಯಕ್ರಮವು ನೆರೆದಿದ್ದ ಭಾರತೀಯ ಸಮುದಾಯದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಶ್ರೀಮತಿ ಸಂಜನ್ ಜೀವನ್ ಅವರ ಶಾಸ್ತ್ರೀಯ ನೃತ್ಯದೊಂದಿಗೆ ಪ್ರಾರಂಭವಾಯಿತು.

from India & World News in Kannada | VK Polls https://ift.tt/8gRe96f

ಬಂಟ್ವಾಳ ರೈಲ್ವೆ ಸ್ಟೇಷನ್‌, ಮಳೆ ಬಂದರೆ ಫುಲ್‌ ಟೆನ್ಶನ್‌..! ಹೈಟೆಕ್‌ನಂತೆ ಕಂಡರೂ ಒಳಹೊಕ್ಕರೆ ಬಂಡವಾಳ ಬಯಲು

ಪಶ್ಚಿಮ ಘಟ್ಟದ ರಸ್ತೆ ಪ್ರಯಾಣ ಅನಿಶ್ಚಿತ ಹೇಳುವ ಹೊತ್ತಿಗೆ ದ.ಕ.ಜಿಲ್ಲೆಯ ಪ್ರಯಾಣಿಕರಿಗೆ ರೈಲ್ವೆ ನೆನಪಾಗುತ್ತದೆ. ಈ ಮಳೆಗಾಲವಂತೂ ಪ್ರತಿದಿನವೂ ರೈಲು ಹೌಸ್‌ ಫುಲ್‌. ಆದರೆ, ಮೇಲ್ನೋಟಕ್ಕೆ ಹೈಟೆಕ್‌ನಂತೆ ಕಾಣುವ ರೈಲ್ವೆ ನಿಲ್ದಾಣ ಮಾತ್ರ ಅವ್ಯವಸ್ಥೆಯ ಆಗರವಾಗಿದೆ. ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಬಂಟ್ವಾಳ ರೈಲ್ವೆ ನಿಲ್ದಾಣ ನೋಡಲು ಸುಂದರವಾಗಿ ಹೈಟೆಕ್‌ ಆಗಿರುವಂತೆ ಕಂಡರೂ ಒಳಹೊಕ್ಕಾಗ ಬಂಡವಾಳ ಬಯಲಾಗುತ್ತದೆ. ಬಹುನಿರೀಕ್ಷಿತ ಬಂಟ್ವಾಳ ರೈಲ್ವೆ ನಿಲ್ದಾಣದ ಒಂದು ಪ್ಲಾಟ್‌ ಫಾರ್ಮಿನಿಂದ ಮತ್ತೊಂದಕ್ಕೆ ಸಾಗಲು ಅನುಕೂಲವಾಗುವಂತೆ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಕೆಲಕಾಲ ಸ್ಥಗಿತಗೊಂಡಿತ್ತು.

from India & World News in Kannada | VK Polls https://ift.tt/lqpoXnu

Minimum Wages | ಕಾರ್ಮಿಕರ ಕನಿಷ್ಠ ವೇತನ ಶೇ.10ರಷ್ಟು ಹೆಚ್ಚಳ: ಆಗಸ್ಟ್‌ನಿಂದಲೇ ಜಾರಿ, ಕಡಿಮೆ ಅಂದ್ರೂ ಎಷ್ಟು ಸಂಬಳ?

Labour department: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಮತ್ತು ಆ ವ್ಯಾಪ್ತಿಯ ಉದ್ದಿಮೆಗಳಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ವೇತನವನ್ನು ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಪರಿಷ್ಕರಿಸಿದೆ. ಕನಿಷ್ಠ ವೇತನ ಕಾಯಿದೆ- 1948ರಡಿ 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಿಸಲಾಗಿತ್ತು. ಹೀಗಾಗಿ, ಕನಿಷ್ಠ ವೇತನಕ್ಕೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು. ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಕರಡು ಪ್ರಸ್ತಾವನೆಯನ್ನು 2021ರ ಡಿ. 31ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿ, ಆಕ್ಷೇಪ ಆಹ್ವಾನಿಸಲಾಗಿತ್ತು.

from India & World News in Kannada | VK Polls https://ift.tt/CMXe5mk

ಕನ್ನಡ, ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ ಹಿಂದಿಮಯ: ಬಿಜೆಪಿ ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಕೇಂದ್ರ ಗೃಹ ಸಚಿವರು ಗುರುವಾರ ಬೆಂಗಳೂರಿನಲ್ಲಿಪಾಲ್ಗೊಂಡಿದ್ದ ಕಾರ್ಯಕ್ರಮವೂ ಹಿಂದಿಮಯವಾಗಿತ್ತು ಎಂದು ದೂರಿರುವ ಸಿದ್ದರಾಮಯ್ಯ, 'ಕೇಂದ್ರ ಸಚಿವ ಅಮಿತ್‌ ಶಾ ಅವರು ಭಾಗವಹಿಸಿದ್ದ ‘ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮದ ಬ್ಯಾನರ್‌ ಸಂಪೂರ್ಣ ಹಿಂದಿಮಯವಾಗಿತ್ತು. ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಜಾಲತಾಣದಲ್ಲಿಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ. ಬಿಜೆಪಿ ಸರಕಾರ ತನ್ನತನವನ್ನು ಅಡವಿಟ್ಟು ಹಿಂದಿ ಭಾಷೆಗೆ ಸಂಪೂರ್ಣ ಶರಣಾಗಿದೆ ಎಂಬುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣವೇ ಸಾಕ್ಷಿ. ಮೊದಲು ಈ ಜಾಲತಾಣದಿಂದ ಹಿಂದಿ ಕಿತ್ತೊಗೆದು ಕನ್ನಡಿಗರ ಸ್ವಾಭಿಮಾನ ಉಳಿಸಿ' ಎಂದು ಆಗ್ರಹಿಸಿದ್ದಾರೆ.

from India & World News in Kannada | VK Polls https://ift.tt/E4aFOPi

2 ಕೋಟಿ ರೂ. ಗಳಿಗೆ ತಮಿಳ್‌ ತಲೈವಾಸ್‌ ಸೇರಿದ ಪವನ್‌ ಕುಮಾರ್‌ ಶೆಹ್ರಾವತ್‌!

Pro Kabaddi Auction HIGHLIGHTS: ಮುಂಬರುವ 9ನೇ ಆವೃತ್ತಿಗೆ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪವನ್‌ ಕುಮಾರ್‌ ಅವರಿಗೆ ಅತ್ಯಧಿಕ್‌ ಬಿಡ್‌ ಸಲ್ಲಿಸುವ ಮೂಲಕ ತಮಿಳ್‌ ತಲೈವಾಸ್‌ ಅಚ್ಚರಿ ಮೂಡಿಸಿತು. ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತ ಎನಿಸಿದ 2.26 ಕೋಟಿ ರೂಪಾಯಿಗಳನ್ನು ಬೆಂಗಳೂರು ಬುಲ್ಸ್‌ ಮಾಜಿ ನಾಯಕ ಜೇಬಿಗಿಳಿಸಿಕೊಂಡರು. ವಿಕಾಸ್‌ ಖಂಡೋಲಾ (1.70 ಕೋಟಿ ರೂ.) ಮತ್ತು ಫಜಲ್‌ ಅತ್ರಾಚಲಿ (1.38 ಕೋಟಿ ರೂ.) ಶುಕ್ರವಾರ ಬಿಕರಿಯಾದ ಎರಡು ಮತ್ತು 3ನೇ ಮೌಲ್ಯಯುತ ಆಟಗಾರರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/QTphP5m

ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ವಿರೋಧ, ರಾಮ ಭಕ್ತರಿಗೆ ಅಪಮಾನ: ಯೋಗಿ ಆದಿತ್ಯನಾಥ್‌

Congress in black clothes:'2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿನ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಅದಕ್ಕೆ ವಿರೋಧ ಇರುವುದನ್ನು ಕಪ್ಪು ಉಡುಗೆ ತೊಟ್ಟು ಕಾಂಗ್ರೆಸ್‌ ಸೂಚಿಸಿದೆ. ಕೋಟ್ಯಂತರ ಜನರ ನಂಬಿಕೆಗಳೊಂದಿಗೆ ಬೆಸೆದುಕೊಂಡಿದ್ದ, 550 ವರ್ಷಗಳ ಹಳೆಯ ವಿವಾದವನ್ನು ಮೋದಿ ಅವರು ಶಾಂತಿಯುತವಾಗಿ ಬರೆಹರಿಸಿದರು. ಕಾಂಗ್ರೆಸ್‌ ಪ್ರತಿಭಟನೆಯ ಮೂಲಕ ಮಂದಿರ ನಿರ್ಮಾಣಕ್ಕೆ ವಿರೋಧವನ್ನು ಸೂಚಿಸುತ್ತಿದೆ. ಇ.ಡಿ ಕ್ರಮ ಹಾಗೂ ಬೆಲೆ ಏರಿಕೆ ವಿಚಾರಗಳು ನೆಪ ಮಾತ್ರವಾಗಿದೆ' ಎಂದು ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

from India & World News in Kannada | VK Polls https://ift.tt/u9MrLZD

CWG 2022: ಕುಸ್ತಿಯಲ್ಲಿ ಭಜರಂಗ್‌ ಪೂನಿಯಾ, ದೀಪಕ್‌ ಪೂನಿಯಾ, ಸಾಕ್ಷಿ ಮಲಿಕ್‌ಗೆ ಚಿನ್ನ!

Commonwealth Games 2022: ಪ್ರಸ್ತುತ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಎಂಟನೇ ದಿನವಾದ ಶುಕ್ರವಾರ ಭಾರತೀಯ ಕುಸ್ತಿಪಟುಗಳು ಪ್ರಾಬಲ್ಯ ಸಾಧಿಸಿದ್ದಾರೆ. ಪುರುಷರ 65 ಕೆ.ಜಿ ಕುಸ್ತಿ ವಿಭಾಗದಲ್ಲಿ ಭಜರಂಗ್‌ ಪೂನಿಯಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 62 ಕೆ.ಜಿ ಮಹಿಳೆಯರ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೆ ದೀಪಕ್ ಪೂನಿಯಾ ಪುರುಷರ 86 ಕೆ.ಜಿ ಫ್ರೀಸ್ಟೈಲ್ ಫೈನಲ್‌ ಹಣಾಹಣಿಯಲ್ಲಿ ಗೆಲುವು ಪಡೆದು ಚಿನ್ನದ ಪದಕವನ್ನು ಗೆದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7WT9eXg

ಯಾದಗಿರಿಯಲ್ಲಿ ಜವರಾಯನ ಅಟ್ಟಹಾಸ: ಒಂದೇ ಕುಟುಂಬದ ಆರು ಜನ ದಾರುಣ ಸಾವು

ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮರಳುವಾಗ ಜವರಾಯ ಅಟ್ಟಹಾಸ ಮೆರೆದಿದ್ದು, ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ದಾರುಣ ದುರ್ಘಟನೆ ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ತಡರಾತ್ರಿ ನಡೆದಿದೆ. ಮೃತರೆಲ್ಲರೂ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ತೆಲಂಗಾಣದ ಕೊಡಂಗಲ್ ನಲ್ಲಿರುವ ದರ್ಗಾದಲ್ಲಿ ಮತೃ ಮಗು ಉಮೇಜಾ ಜವಳ‌ ಕಾರ್ಯಕ್ರಮ ಮುಗಿಸಿಕೊಂಡ ವಾಪಸ್ಸಾಗುವಾಗ ಎದುರಿಗೆ ಬಂದ ಲಾರಿ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಮೂರು ಜನ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

from India & World News in Kannada | VK Polls https://ift.tt/poksLN4

ಕುಕ್ಕುಟೋದ್ಯಮ ಮಾರುಕಟ್ಟೆಗೆ ಹೊಡೆತ: ಏರುತ್ತಿದೆ ಉತ್ಪಾದನಾ ವೆಚ್ಚ, ಬೇಡಿಕೆಯಲ್ಲಿ ಕುಸಿತ..!

ಹೊರ ರಾಜ್ಯಗಳಲ್ಲಿ ಬ್ರಾಯ್ಲರ್‌ ಕೋಳಿ ದರ ಇಳಿಕೆಯಾಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಬೇಡಿಕೆ ಇಲ್ಲದಿದ್ದರೂ ಪೂರೈಕೆಯಲ್ಲಿ ದಿಢೀರ್‌ ಏರಿಕೆಯಾದ ಪರಿಣಾಮ ಕುಕ್ಕುಟೋದ್ಯಮ ವ್ಯವಹಾರ ತತ್ತರಿಸಿ ಹೋಗಿದೆ. ಉದ್ಯಮ ವಲಯದಲ್ಲಿ ಕಾಣಿಸಿಕೊಂಡಿರುವ ಈ ಅನಿರೀಕ್ಷಿತ ಬೆಳವಣಿಗೆ ಕುಕ್ಕುಟ ವ್ಯವಹಾರವನ್ನೇ ನಂಬಿದ ಉದ್ಯಮಿಗಳಿಗೆ ನೇರ ಹೊಡೆತ ನೀಡಿದೆ. ಮಹಾರಾಷ್ಟ್ರದಲ್ಲಿ ಬ್ರಾಯ್ಲರ್‌ ದರ ಕೆಜಿಯೊಂದಕ್ಕೆ 60 ರೂ.ನಿಂದ 80 ರೂ.ಗಳಿಗೆ ತಲುಪಿದೆ. ಮಳೆಯಿಂದ ಸಾಗಾಟ ಮಾಡಲಾಗದೇ ವ್ಯಾಪಾರಿಗಳು ಕಡಿಮೆ ದರಕ್ಕೆ ಅಲ್ಲಿ ಕೋಳಿಗಳ ಮಾರಾಟಕ್ಕೆ ಇಳಿದಂತೆ ಇದರ ನೇರ ಪರಿಣಾಮ ರಾಜ್ಯದ ಕುಕ್ಕುಟೋದ್ಯಮದಲ್ಲಿ ಕೂಡ ಕಾಣಿಸಿಕೊಂಡಿದೆ.

from India & World News in Kannada | VK Polls https://ift.tt/40HrYWz

ಮೈಸೂರು: 'ಹರ್‌ ಘರ್‌ ತಿರಂಗಾ'ಗೆ ಶಿಕ್ಷಣ ಇಲಾಖೆ ಸಾಥ್‌, ಜಿಲ್ಲೆಯ 20 ಸಾವಿರಕ್ಕೂ ಅಧಿಕ ಶಿಕ್ಷಕರು ಭಾಗಿ

'ಸಾಂಸ್ಕೃತಿಕ ನಗರಿ' ಮೈಸೂರಿನಲ್ಲಿ 'ಹರ್‌ ಘರ್‌ ತಿರಂಗಾ' ಕಳೆಗಟ್ಟುತ್ತಿದ್ದು, ಜಿಲ್ಲೆಯ 20 ಸಾವಿರಕ್ಕೂ ಅಧಿಕ ಶಿಕ್ಷಕರು, 4,10,815 ಮಕ್ಕಳು ಹಾಗೂ 5 ಸಾವಿರಕ್ಕೂ ಹೆಚ್ಚು ಎಸ್‌ಡಿಎಂಸಿ ಸದಸ್ಯರು ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಕಾರಣ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಾಡಬೇಕೆಂಬುದು ಪ್ರಧಾನಿ ಅವರ ಕನಸು. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ 'ಹರ್‌ ಘರ್‌ ತಿರಂಗಾ' ಅಭಿಯಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಾಥ್‌ ನೀಡಿದ್ದು, ಮಕ್ಕಳು ಹೇಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕೆಂಬ ಮಾಹಿತಿ ನೀಡುತ್ತಿದೆ.

from India & World News in Kannada | VK Polls https://ift.tt/gCAG8t7

ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ

ಕಲ್ಪತರು ನಾಡಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ಸನ್ನಿಧಾನ ಸಿರಿದೇವಿಗೆ ಮೀಸಲಾದ ಕರುನಾಡಿನ ಏಕೈಕ ಧಾರ್ಮಿಕ ಕ್ಷೇತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ. ಶ್ರಾವಣ ಮಾಸದ ಮೊದಲನೇ ಶುಭ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಪುಣ್ಯಕ್ಷೇತ್ರದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಜತೆಗೆ ತೀತಾ ಜಲಾಶಯ ತುಂಬಿ ಹರಿಯುತ್ತಿರುವ ಮನೋಹರ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇಶ ಮತ್ತು ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

from India & World News in Kannada | VK Polls https://ift.tt/493SA8G

ಕುಂಭದ್ರೋಣ ಮಳೆಗೆ ತತ್ತರಿಸಿದ ಸುಳ್ಯ: ಊರುಬೈಲಿನ 200ಕ್ಕೂ ಅಧಿಕ ಕುಟುಂಬಗಳ ಸಂಪರ್ಕ ಕಡಿತ!

ಬುಧವಾರ ರಾತ್ರಿಯಿಂದ ಗುರುವಾರ ಸಂಜೆತನಕ ಸುರಿದ ಭಾರಿ ಮಳೆಗೆ ಪಯಸ್ವಿನಿ ನದಿ ತುಂಬಿ ಹರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿ ನೀರಿನಿಂದ ಆವೃತ್ತವಾಗಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಗಂಟೆಗಳ ಕಾಲ ನೀರು ತುಂಬಿತ್ತು. ಇದರ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಪ್ರವಾಹದಿಂದ ಕಲ್ಲುಗುಂಡಿಯ ಕೆಲವು ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.

from India & World News in Kannada | VK Polls https://ift.tt/zoGhv29

Asia Cup 2022: 3ನೇ ಕ್ರಮಾಂಕಕ್ಕೆ ವಿರಾಟ್‌ ಕೊಹ್ಲಿ, ಟಿ20 ವಿಶ್ವಕಪ್‌ನಿಂದ ಆಲ್‌ರೌಂಡರ್‌ ಔಟ್‌! ವರದಿ

Asia Cup 2022: ಯುಎಇಯಲ್ಲಿ ಈ ತಿಂಗಳಾಂತ್ಯದಿಂದ ಆರಂಭವಾಗಲಿರುವ 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡುವುದು ಬಹತೇಕ ಖಚಿತವಾಗಿದೆ. ಆದರೆ, ಮುಂಬರುರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಸ್ಟಾರ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು ಆಯ್ಕೆದಾರರು ಪರಿಗಣಿಸುವುದಿಲ್ಲವೆಂದು ವರದಿಯಾಗಿದೆ. ವೆಸ್ಟ್ ಇಂಡೀಸ್‌ ವಿರುದ್ಧ 4 ಮತ್ತು 5ನೇ ಟಿ20 ಪಂದ್ಯಗಳ ಬಳಿಕ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/8nEKuXa

Money Laundering Act | ಇ.ಡಿಗೆ ಅಪರಿಮಿತ ಅಧಿಕಾರ, 'ಸುಪ್ರೀಂ' ತೀರ್ಪು ಅಪಾಯಕಾರಿ: 17ಕ್ಕೂ ಹೆಚ್ಚು ಪ್ರತಿಪಕ್ಷಗಳು ಕಳವಳ

Supreme Court: ಸಂಶಯಾಸ್ಪದ ಪ್ರಕರಣಗಳಲ್ಲಿ ತನಿಖೆ ನಡೆಸುವ, ಆರೋಪಿಗಳನ್ನು ಬಂಧಿಸುವ ವಿಷಯದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಶ್ನಾತೀತ ಎನ್ನುವ ಮಟ್ಟಿಗೆ ವರ್ತಿಸುತ್ತಿದ್ದು ಅದರಿಂದ ಅಪಾಯ ಎದುರಾಗಿದೆ. ''ಇಂತಹ ವ್ಯವಸ್ಥೆಯ ಆಳದ ಲೋಪವನ್ನು ಗ್ರಹಿಸುವಲ್ಲಿಅವಸರ ಮಾಡಿರುವ ಸುಪ್ರೀಂ ಕೋರ್ಟ್‌, ಇ.ಡಿ ಅಧಿಕಾರ ವ್ಯಾಪ್ತಿಯನ್ನು ಎತ್ತಿ ಹಿಡಿದಿದೆ. ಈ ಅಪಾಯಕಾರಿ ತೀರ್ಪು ಅಲ್ಪಾವಧಿ ಬದುಕಿರುತ್ತದೆ. ಸಾಂವಿಧಾನಿಕ ನಿರ್ಬಂಧಗಳು ಶೀಘ್ರವೇ ಮೇಲುಗೈ ಸಾಧಿಸುತ್ತವೆ ಎಂದು ಭಾವಿಸಿದ್ದೇವೆ,'' ಎಂದು ಕಾಂಗ್ರೆಸ್‌, ಟಿಎಂಸಿ, ಡಿಎಂಕೆ ಸೇರಿ 17ಕ್ಕೂ ಹೆಚ್ಚು ಪ್ರತಿಪಕ್ಷಗಳು ಹೇಳಿಕೆ ನೀಡಿವೆ.

from India & World News in Kannada | VK Polls https://ift.tt/UdiztwG

ಆಸ್ಟ್ರೇಲಿಯಾ, ದ. ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಳ ವೇಳಾಪಟ್ಟಿ ಪ್ರಕಟ!

BCCI announces schedule against Aus, SA: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಸೀಮಿತ ಓವರ್‌ಗಳ ತವರು ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಆ ಮೂಲಕ ಭಾರತ ತಂಡದ 2022-23ರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆವೃತ್ತಿ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡುವ ಭಾರತ ತಂಡ, ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಓಡಿಐ ಸರಣಿ ಆಡಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/mhsajpw

ಕೊಪ್ಪಳ: ತಾಯಿಯ ಕೈಗೆ ಸಿಮ್‌ ಇಲ್ಲದ ಮೊಬೈಲ್‌, ಖಾಲಿ ಹಾಳೆ ಕೊಟ್ಟು ಒಂಟಿಯಾಗಿ ಬಿಟ್ಟು ಮಗ ಪರಾರಿ

Koppal: ಹೆತ್ತ ತಾಯಿಯನ್ನೇ ಇಲ್ಲೊಬ್ಬ ಪುತ್ರ ಎರಡು ದಿನದ ಹಿಂದೆ ಒಂಟಿಯಾಗಿ ದೇವಸ್ಥಾನದ ಬಳಿ ಬಿಟ್ಟು ತೆರಳಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 80 ವರ್ಷ ವಯಸ್ಸಾಗಿದ್ದು ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಬಂದಿದ್ದಾರೆ. ಮಗ ಸಿಮ್‌ ಕಾರ್ಡ್‌ ಇಲ್ಲದ ಮೊಬೈಲ್‌ ಹಾಗೂ ತನ್ನ ಮೊಬೈಲ್‌ ನಂಬರ್‌ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆನ್ನಲಾಗಿದೆ.

from India & World News in Kannada | VK Polls https://ift.tt/cKeZTEo

ಚಿನ್ನದ ಅಂಗಡಿ ಮಾಲೀಕನ ಪತ್ನಿ ಹತ್ಯೆ ಪ್ರಕರಣ: ಮೂವರ ಬಂಧನ; ಚಿಕ್ಕಪ್ಪನ ಮಗನೇ ಪ್ರಮುಖ ಆರೋಪಿ!

ಮಂಜುಳಾ ಅವರ ಚಿಕ್ಕಪ್ಪನ ಮಗ ಸುನೀಲ್‌ಕುಮಾರ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ ರಾಜ್ಯದ ನಾನಾ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ ಎಂದು ಎಸ್‌ಪಿ ತಿಳಿಸಿದರು. ಪ್ರಕರಣಕ್ಕೆ ಮೂರು ದಿನ ಮುಂಚೆ ಆರೋಪಿಗಳು ನಗರಕ್ಕೆ ಬಂದಿದ್ದರು. ಮಂಜುಳಾ ಅವರ ಮನೆಯಲ್ಲಿ ಪ್ರತಿ ಶ್ರಾವಣ ಮಾಸದ ಮೊದಲ ದಿನ ಮನೆಯಲ್ಲಿ ಚಿನ್ನಾಭರಣ ಇಟ್ಟು ವಿಶೇಷ ಪೂಜೆ ಮಾಡುತ್ತಿದ್ದರು. ಇದು ಮೊದಲೇ ಸುನೀಲ್‌ಕುಮಾರ್‌ಗೆ ಗೊತ್ತಿದ್ದರಿಂದ ಜು.27 ರಂದು ಮಧ್ಯಾಹ್ನ ಇಬ್ಬರು ಮನೆಗೆ ಬಂದಿದ್ದಾರೆ.

from India & World News in Kannada | VK Polls https://ift.tt/Kvewxk7

Covid-19 Karnataka Update: 2,136 ಹೊಸ ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ 11,185ಕ್ಕೆ ಏರಿಕೆ

Coronavirus: ರಾಜ್ಯದಲ್ಲಿ ಬುಧವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ. 2,136 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಶೇ. 6.59ರಷ್ಟಿದ್ದು, ಸಾವಿನ ಪ್ರಮಾಣ ಶೇ. 0.09ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ 40.12 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 40,108 ಜನರು ಸಾವಿಗೀಡಾಗಿದ್ದಾರೆ.

from India & World News in Kannada | VK Polls https://ift.tt/Fcni3K5

ಏಷ್ಯಾ ಕಪ್‌ಗೆ ದಿನಗಣನೆ: ಕ್ಯಾಪ್ಟನ್‌ ರೋಹಿತ್‌ ಶರ್ಮಾಗೆ ಮತ್ತೆ ಗಾಯದ ಸಮಸ್ಯೆ!

India vs West Indies 3rd T20i Match Highlights: 2022ರ ಸಾಲಿನ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಅಧಿಕೃತ ವೇಳಾಪಟ್ಟಿ ಮಂಗಳವಾರ ಬಿಡುಗಡೆ ಆಗಿದ್ದು, ಮಹತ್ವದ ಟೂರ್ನಿಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಆತಂಕವೊಂದು ಎದುರಾಗಿದ್ದು, ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್‌ ಸರಣಿಯಲ್ಲಿ ನಾಯಕ ರೋಹಿತ್‌ ಶರ್ಮಾ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಮಂಗಳವಾರ ನಡೆದ ವಿಂಡೀಸ್‌ ವಿರುದ್ಧದ 3ನೇ ಪಂದ್ಯದ ವೇಳೆ ರೋಹಿತ್‌, ಬೆನ್ನು ನೋವಿಗೆ ತುತ್ತಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/GvYaojS

ಒಂದೇ ದಿನ 10 ಜೀವ ಹೊತ್ತೊಯ್ದ ವರುಣ: ಇನ್ನೂ ಮೂರು ದಿನ ಕರಾವಳಿಗೆ ರೆಡ್‌ ಅಲರ್ಟ್‌ ; ಮಳೆ ಮತ್ತಷ್ಟು ಬಿರುಸು!

ಮಳೆಯ ಅಬ್ಬರಕ್ಕೆ ಕರುನಾಡು ತತ್ತರಿಸಿದೆ. ಒಂದೇ ದಿನದಲ್ಲಿ 10 ಮಂದಿಯನ್ನು ಮಳೆ ಆಹುತಿ ತೆಗೆದುಕೊಂಡಿದೆ. ರಾಜ್ಯದ ಹಲವು ಕಡೆಗಳಲ್ಲಿ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಇನ್ನೂ ಮೂರು ದಿನ ಕರಾವಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

from India & World News in Kannada | VK Polls https://ift.tt/eAX620m

CWG 2022: ಭಾರತದಲ್ಲಿ ಲಾನ್‌ ಬೌಲ್ಸ್‌ ಹೆಚ್ಚು ಜನಪ್ರಿಯವಾಗಲಿ ಎಂದ ವನಿತೆಯರು!

India Bags Gold In Lawn Bowls Game: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಭಾರತದ ಮಹಿಳಾ ಲಾನ್‌ ಬೌಲ್ಸ್‌ ತಂಡ ಐತಿಹಾಸಿಕ ಸ್ವರ್ಣ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದಿದೆ. 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿ ಪಾಲ್ಗೊಂಡಿದ್ದ ಭಾರತದ ಮಹಿಳಾ ಪಡೆ ಸವರ್ಣ ಸಾಧನೆ ಮೆರೆಯುವ ಮೂಲಕ, ಪ್ರಸಕ್ತ ಕೂಟದಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಗೆದ್ದುಕೊಟ್ಟಿದೆ. ಇದರ ಬೆನ್ನಲ್ಲೇ ದೇಶದ ಗಣ್ಯಾತಿ ಗಣ್ಯರು ಟ್ವಿಟರ್‌ ಮೂಲಕ ಮೆಚ್ಚುಗೆಯ ಹೊಳೆಯನ್ನೇ ಹರಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ljRuPng

Siddaramotsava: ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಗೈರಾಗಲಿರುವ ಮಲ್ಲಿಕಾರ್ಜುನ ಖರ್ಗೆ! ಕಾರಣವೇನು?

ಬುಧವಾರದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಬೇಕಿತ್ತು. ಆದರೆ ದೆಹಲಿಯಲ್ಲಿ ಮಂಗಳವಾರ ನಡೆದ ಬೆಳವಣಿಗೆ ಹಿನ್ನಲೆಯಲ್ಲಿ ಅನಿವಾರ್ಯ ಕಾರಣಕ್ಕಾಗಿ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಖರ್ಗೆ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ಕುರಿತಾಗಿ ವಿಜಯ ಕರ್ನಾಟಕ ವೆಬ್‌ಗೆ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೂಡಾ ಸ್ಪಷ್ಟಪಡಿಸಿದ್ದಾರೆ.

from India & World News in Kannada | VK Polls https://ift.tt/7DGoZxN

Sniffer dog Rana | ಬಂಡೀಪುರ: ಕಾಡುಗಳ್ಳರಿಗೆ ಸಿಂಹ ಸ್ವಪ್ನವಾಗಿದ್ದ ಶ್ವಾನ 'ರಾಣಾ' ಇನ್ನಿಲ್ಲ

Bandipur Tiger Reserve: ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಅಪರಾಧ ಪತ್ತೆಯ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಶ್ವಾನ ರಾಣಾ ಮಂಗಳವಾರ ಬೆಳಗ್ಗೆ ಅನಾರೋಗ್ಯದ ಕಾರಣ ಮೃತಪಟ್ಟಿತು.ಜರ್ಮನ್‌ ಶಫರ್ಡ್‌ ತಳಿಯ 9 ವರ್ಷ ವಯಸ್ಸಿನ ರಾಣಾ ಕಳೆದ ಮೂರ್ನಾಲ್ಕು ದಿನದಿಂದ ಆರೋಗ್ಯ ಸಮಸೆಯಿಂದ ಬಳಲುತ್ತಿತ್ತು. ಸೋಮವಾರ ಗುಂಡ್ಲುಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ರಾತ್ರಿ ವಾಂತಿ ಭೇದಿ ಆಗಿ ಬೆಳಗ್ಗೆ ಮೃತಪಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

from India & World News in Kannada | VK Polls https://ift.tt/z5gK7p3

Siddaramotsava: ಸಿದ್ದರಾಮೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಏನೇನು ನಡೆಯಲಿದೆ? ಇಲ್ಲಿದೆ ಪೂರ್ಣ ಚಿತ್ರಣ

ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲ ತಯಾರಿಗಳೂ ಪೂರ್ಣಗೊಂಡಿದ್ದು, ಕೊನೇಕ್ಷಣದ ತಯಾರಿಗಳು ವೇದಿಕೆಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ಕಾರ್ಯಕರ್ತರು ನಿದ್ದೆಬಿಟ್ಟು ಕೆಲಸ ಮಾಡುತ್ತಿದ್ದಾರೆ. ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಏನೇನು ನಡೆಯಲಿದೆ ಅನ್ನೋ ಬಗ್ಗೆ ಸಾವಿರಾರು ಮಂದಿಗೆ ಕುತೂಹಲವಿದ್ದು, ಅದೀಗ ಬಹಿರಂಗಗೊಂಡಿದೆ.

from India & World News in Kannada | VK Polls https://ift.tt/Dk32zfg

Commonwealth Games 2022: ವೇಟ್‌ ಲಿಫ್ಟರ್ ವಿಕಾಸ್‌ ಠಾಕೂರ್‌ಗೆ ಬೆಳ್ಳಿ ಪದಕ!

Vikas Thakur Clinches silver medal: ಭಾರತೀಯ ವೇಟ್‌ ಲಿಫ್ಟರ್‌ ವಿಕಾಸ್‌ ಠಾಕೂರ್ ಪುರುಷರ 96 ಕೆ.ಜಿ ಫೈನಲ್‌ ಹಣಾಹಣಿಯಲ್ಲಿ ಒಟ್ಟಾರೆ 346 ಕೆಜಿ ತೂಕವನ್ನು ಎತ್ತುವ ಮೂಲಕ ಪ್ರಸ್ತುತ ನಡೆಯುತ್ತಿರುವ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಐದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಮೂರು ಕಂಚು ಸೇರಿದಂತೆ ಒಟ್ಟು 12 ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾಗಿವೆ. ಮಂಗಳವಾರ ಇದಕ್ಕೂ ಮುನ್ನ ಲಾನ್ ಬೌಲ್ಸ್‌ ಹಾಗೂ ಟೇಬಲ್ ಟೆನಿಸ್‌ ವಿಭಾಗಗಳಲ್ಲಿ ಭಾರತ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/qCO80jx

DK Shivakumar | ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐಗೆ ಹೈಕೋರ್ಟ್‌ ನೋಟಿಸ್‌ ಜಾರಿ

ಶಿವಕುಮಾರ್‌ ಪರ ವಕೀಲರಾದ ಬಿ.ವಿ.ಆಚಾರ್ಯ ಮತ್ತು ಸಿ.ಎಚ್‌.ಜಾಧವ್‌, ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳಲ್ಲಿಅನುಸರಿಸಬೇಕಾದ ನಿಯಮ ಮತ್ತು ಎಫ್‌ಐಆರ್‌ ದಾಖಲಿಸುವ ಮುನ್ನ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಕಲಂ 17 'ಎ' ಅನುಸಾರ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದಿಲ್ಲ. ಪರಿಶೀಲನಾ ಅವಧಿಯಲ್ಲಿನ (ಚೆಕ್‌ ಪೀರಿಯಡ್‌) ಅರ್ಜಿದಾರರ ಆದಾಯ, ಆಸ್ತಿ ಮತ್ತು ವೆಚ್ಚದ ಹೇಳಿಕೆಯ ವಿವರಗಳೇ ಇಲ್ಲ. ಪ್ರಾಥಮಿಕ ತನಿಖೆಯ ಅಂಶಗಳೇನು ಎಂಬುದನ್ನು ಎಫ್‌ಐಆರ್‌ನಲ್ಲಿ ಎಲ್ಲೂ ವಿವರಿಸಿಲ್ಲ. ಹಾಗಾಗಿ, ಸಿಬಿಐ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ, ಎಂದರು.

from India & World News in Kannada | VK Polls https://ift.tt/HQxc386

ಕಮ್‌ ಬ್ಯಾಕ್‌ ಬಳಿಕ ವಿರಾಟ್‌ ಕೊಹ್ಲಿಗೆ ಸಿಗುವ ಬ್ಯಾಟಿಂಗ್‌ ಕ್ರಮಾಂಕ ತಿಳಿಸಿದ ವಸೀಮ್‌ ಜಾಫರ್‌!

ವೃತ್ತಿಬದುಕಿನ ಅತ್ಯಂತ ಕಳಪೆ ಲಯದಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಕಳೆದ 3 ವರ್ಷಗಳಲ್ಲಿ ಒಂದು ಅರ್ಧಶತಕವನ್ನೂ ಬಾರಿಸಿಲ್ಲ. ಅತಿ ವೇಗವಾಗಿ 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ವಿಶ್ವ ದಾಖಲೆ ಹೊಂದಿರುವ ವಿರಾಟ್‌ ಕೊಹ್ಲಿ, 71ನೇ ಶತಕ ಸಲುವಾಗಿ ಭಗೀರತ ಪ್ರಯತ್ನ ನಡೆಸುತ್ತಿದ್ದಾರೆ. ಕಳಪೆ ಲಯದಿಂದ ಹೊರಬರುವ ಸಲುವಾಗಿ ಈಗ ವಿಶ್ರಾಂತಿ ಮೊರೆ ಹೋಗಿರುವ ವಿರಾಟ್‌, ಆಗಸ್ಟ್ನ ಕೊನೆಯ ವಾರದಲ್ಲಿ ನಡೆಯಲಿರುವ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೇವೆಗೆ ಹಾಜರಾಗಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/UxhnQd1

Karnataka Rains | ಮಂಗಳವಾರ ರಾಜ್ಯದಾದ್ಯಂತ ಭಾರಿ ಮಳೆ ಸಾಧ್ಯತೆ: 19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

Yellow alert: ರಾಜ್ಯದಲ್ಲಿ ಮಂಗಳವಾರ (ಆ.2) ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, 19 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್‌ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ನೀಡಲಾಗಿದೆ.

from India & World News in Kannada | VK Polls https://ift.tt/6IYXBok

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನೆ ಮೇಲೆ ಕುಸಿದ ಗುಡ್ಡ : ಇಬ್ಬರು ಮಕ್ಕಳು ಅಪಾಯದಲ್ಲಿ

ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ಹೊಳೆ ಉಕ್ಕಿ ಹರಿದ ಬೆನ್ನಲ್ಲೇ ಸೋಮವಾರ ರಾತ್ರಿ ಇಲ್ಲಿಗೆ ಸಮೀಪದ ಪರ್ವತಮುಖಿ ಎಂಬಲ್ಲಿ ಗುಡ್ಡವೊಂದು ಮನೆ ಮೇಲೆ ಕುಸಿದು ಬಿದ್ದ ಘಟನೆ ಸಂಭವಿಸಿದೆ.

from India & World News in Kannada | VK Polls https://ift.tt/VPMTZuh

ನಾಗಮಂಗಲ: ಕೌಟುಂಬಿಕ ಕಲಹ, ಹತ್ತು ತಿಂಗಳ ಮಗುವಿಗೂ ನೇಣು ಬಿಗಿದು ತಾಯಿ ಆತ್ಮಹತ್ಯೆ

suicide case: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ರ ಬರೆದಿಟ್ಟು ಮಗುವಿನೊಂದಿಗೆ ತಾಯಿಯು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹೊರವಲಯ ಬಿಂಡಿಗನವಿಲೆ ರಸ್ತೆಯ ಕೆಂಚೇಗೌಡನ ಕೊಪ್ಪಲಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಜಿ.ಪಂ.ಮಾಜಿ ಸದಸ್ಯೆ ಸುನಂದ ದೊರೆಸ್ವಾಮಿ ದಂಪತಿಯ ಪುತ್ರಿ ಬಿಂಧು(25) ತನ್ನ ಹತ್ತು ತಿಂಗಳ ಮಗುವಿನೊಂದಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

from India & World News in Kannada | VK Polls https://ift.tt/0WTkhv6

ಎಸಿಸಿ, ಅಂಬುಜಾ ಸಿಮೆಂಟ್ಸ್‌ ಖರೀದಿಸಲು ಅದಾನಿಗೆ ಬಾಚಿ ಬಾಚಿ ಸಾಲ ಕೊಟ್ಟ ವಿದೇಶಿ ಬ್ಯಾಂಕುಗಳು!

Adani: ಪ್ರಮುಖ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಅದಾನಿ ಗ್ರೂಪ್‌ ಬೆನ್ನಿಗೆ ನಿಂತಿದ್ದು, ಭಾರೀ ಪ್ರಮಾಣ ಸಾಲ ನೀಡಿವೆ. ಬ್ಯಾಂಕಿಂಗ್‌ ಮೂಲಗಳ ಪ್ರಕಾರ ಡಿಬಿಎಸ್‌ ಬ್ಯಾಂಕ್‌ ಎಮಿರೇಟ್ಸ್‌ ಎನ್‌ಬಿಡಿ ಬ್ಯಾಂಕ್‌, ಫಸ್ಟ್‌ ಅಬುಧಾಬಿ ಬ್ಯಾಂಕ್‌, ಐಎನ್‌ಜಿ ಬ್ಯಾಂಕ್‌, ಇಟಲಿಯ ಇನ್ಸ್‌ಟಿಯಾ ಸಾನ್‌ಪೋಲೋ, ಮಿಝಾವೋ ಬ್ಯಾಂಕ್‌, ಮಿತ್ಸುಬಿಷಿ ಯುಎಫ್‌ಜೆ ಹಣಕಾಸು ಗ್ರೂಪ್‌, ಸುಮಿಟೋಮೊ ಮಿಟುಷಿ ಬ್ಯಾಂಕ್‌ ಆಫ್‌ ಜಪಾನ್‌ ಹಾಗೂ ಕತಾರ್‌ ನ್ಯಾಷನಲ್‌ ಬ್ಯಾಂಕ್‌ ಮುಂತಾದ ಅಂತಾರಾಷ್ಟ್ರೀಯ ದಿಗ್ಗಜ ಬ್ಯಾಂಕುಗಳು ಅದಾನಿಗೆ ಸಾಲ ಒದಗಿಸಿವೆ.​​

from India & World News in Kannada | VK Polls https://ift.tt/EV65YLQ

kukke subramanya | ತುಂಬಿ ಹರಿದ ದರ್ಪಣ ತೀರ್ಥ ನದಿ: ಕುಕ್ಕೆ ಜಲಾವೃತ, ದೇಗುಲ ಪ್ರವೇಶಕ್ಕೆ ಭಕ್ತರಿಗೆ ಎರಡು ದಿನ ನಿರ್ಬಂಧ

kukke subramanya flood: ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿಯಿತು. ಇದರಿಂದಾಗಿ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿತು. ಶ್ರೀ ದೇವಳದ ಒಳಾಂಗಣ, ಹೊರಾಂಗಣವು ಜಲಾವೃತ್ತಗೊಂಡಿತ್ತು. ಅಲ್ಲದೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ಸಮೀಪ ಇರುವ ದರ್ಪಣ ತೀರ್ಥ ನದಿಯ ಸ್ನಾನ ಘಟ್ಟವು ಮುಳುಗಡೆಗೊಂಡಿದೆ. ಎರಡು ದಿನ ಕುಕ್ಕೆ ದೇಗುಲಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಭಕ್ತರು ಸಹಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕೋರಿದ್ದಾರೆ.

from India & World News in Kannada | VK Polls https://ift.tt/0rE2cKW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...