ಜಮ್ಮು-ಕಾಶ್ಮೀರ ಕುರಿತ ರಾಹುಲ್‌ ಮಾತಿನಿಂದ ಪಾಕ್‌ಗೆ ನೆರವು: ಅಮಿತ್ ಶಾ ತರಾಟೆ

ಸಿಲ್ವಾಸಾ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅವರನ್ನು ಕೇಂದ್ರ ಗೃಹಸಚಿವ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನೇ ಪಾಕಿಸ್ತಾನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ. ಭಾರತದ ವಿರುದ್ಧವೇ ಬಳಸಿಕೊಳ್ಳಲು ಪಾಕಿಸ್ತಾನಕ್ಕೆ ನೆರವಾಗುವಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಾಂಗ್ರೆಸಿಗರಿಗೆ ನಾಚಿಕೆಯಾಗಬೇಕು ಎಂದು ಶಾ ಟೀಕಿಸಿದರು. ದಾದ್ರಾ ಮತ್ತು ನಗರ್‌ ಹವೇಲಿಯ ಸಿಲ್ವಾಸಾದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಶಾ, ನಾಯಕರ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ನಾಯಕರು 'ಕ್ಷುದ್ರ ರಾಜಕೀಯದಿಂದ' ಮೇಲೆದ್ದೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಮೋದಿ ನೇತೃತ್ವದ ಸರಕಾರದ ಕ್ರಮವನ್ನು ಬೆಂಲಿಸಬೇಕು ಎಂದು ಆಗ್ರಹಿಸಿದರು. 370ನೇ ವಿಧಿ ರದ್ದತಿಯನ್ನು ಕಾಂಗ್ರೆಸ್ ವಿರೋಧಿಸಿದೆ. ಇಂದಿಗೂ ರಾಹುಲ್ ಗಾಂಧಿ ಯಾವುದಾದರೂ ಹೇಳಿಕೆ ನೀಡಿದರೆ ಪಾಕಿಸ್ತಾನ ತಕ್ಷಣ ಸ್ವಾಗತಿಸುತ್ತದೆ. ಪಾಕಿಸ್ತಾನದ ಮನವಿಯಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನೂ ಸೇರಿಸಿಕೊಳ್ಳಲಾಗಿದೆ. ಕಾಂಗ್ರೆಸಿಗರಿಗೆ ನಾಚಿಕೆಯಾಗಬೇಕು' ಎಂದು ಶಾ ಟೀಕಿಸಿದರು. ಮೋದಿ ಸರಕಾರ ತನ್ನ ಮೊದಲ ಸಂಸತ್ ಅಧಿವೇಶನದಲ್ಲೇ 370ನೇ ವಿಧಿಯನ್ನು ರದ್ದುಪಡಿಸುವ ದಿಟ್ಟ ನಿರ್ಧಾರ ಕೈಗೊಂಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಜತೆ ಏಕೀಕರಣಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿದೆ ಎಂದು ಶಾ ಶ್ಲಾಘಿಸಿದರು.


from India & World News in Kannada | VK Polls https://ift.tt/2PxicUM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...