ನಾಯಕತ್ವ ಹೆಸರಿನ ಮುಂದಿರುವ 'ಸಿ' ಅಕ್ಷರ ಮಾತ್ರವಾಗಿದೆ: ವಿರಾಟ್ ಕೊಹ್ಲಿ

ಕಿಂಗ್‌ಸ್ಟನ್: ವೆಸ್ಟ್‌ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ 257 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದ ವೈಟ್‌ವಾಶ್‌ಗೈದಿದೆ. ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿದಿರುವ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಪಟ್ಟ ಆಲಂಕರಿಸಿದ್ದಾರೆ. ಈ ಬಗ್ಗೆ ಖುಷಿಯನ್ನು ಹಂಚಿಕೊಂಡಿರುವ ನಾಯಕ ಕೊಹ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾಯಕತ್ವ ಹೆಸರಿನ ಮುಂದಿರುವ ಸಿ ಅಕ್ಷರ ಮಾತ್ರವಾಗಿದೆ ಎಂದಿದ್ದಾರೆ. ಇದೊಂದು ಸಮಗ್ರ ಪ್ರಯತ್ನವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಈ ಗುಣಮಟ್ಟದ ತಂಡದ ಉತ್ಪನ್ನವಾಗಿದೆ. ನಮ್ಮಲ್ಲಿರುವ ಗುಣಮಟ್ಟದ ಬೌಲರ್‌ಗಳು ಇಲ್ಲದಿರುತ್ತಿದ್ದರೆ, ಇಂತಹ ಫಲಿತಾಂಶಗಳು ಸಾಧ್ಯವಾಗಬಹುದೆಂದು ನನಗನಿಸುತ್ತಿಲ್ಲ ಎಂದರು. ಟೆಸ್ಟ್ ಕ್ರಿಕೆಟ್ ಮೇಲೆ ಟೀಮ್ ಇಂಡಿಯಾ ಹೊಂದಿರುವ ಒಟ್ಟಾರೆ ದೃಷ್ಟಿಕೋನದ ಬಗ್ಗೆಯೂ ಕೊಹ್ಲಿ ಮನಬಿಚ್ಚಿ ಮಾತನಾಡಿದರು. ನಮ್ಮ ಮೇಲೆ ಒತ್ತಡವನ್ನು ಹೇರಿದಾಗ ಅದರಿಂದ ಹೊರಬರಲು ಪ್ರಯತ್ನಿಸುತ್ತೇವೆ. ಅಲ್ಲಿಂದ ತಂಡವನ್ನು ಅಪಾಯದಿಂದ ಹೊರತಂದು ಬಳಿಕ ಎದುರಾಳಿಗಳ ಮೇಲೆ ಒತ್ತಡವನ್ನು ಹೇರುತ್ತೇವೆ. ನನಗನಿಸುತ್ತದೆ ನಾವದನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೇವೆ ಎಂದು ವಿವರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2zJyzmj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...