ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ಸರಕಾರಗಳು ಜಂಟಿ ಕಾರ್ಯಾಚರಣೆ ನಡೆಸಿ ಹಿಂದೂ ಯುವತಿಯರನ್ನು ಶೀಘ್ರವೇ ರಕ್ಷಿಸುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಇಮ್ರಾನ್ ಖಾನ್ ನಿರ್ದೇಶನ ನೀಡಿದ್ದಾರೆ. 'ಅಲ್ಪಸಂಖ್ಯಾತರು ಪಾಕ್ ಧ್ವಜದ ಬಿಳಿ ಬಣ್ಣದ ಸಂಕೇತ. ನಮ್ಮ ಧ್ವಜದ ಎಲ್ಲ ಬಣ್ಣಗಳೂ ನಮಗೆ ಅಮೂಲ್ಯ. ನಮ್ಮ ರಾಷ್ಟ್ರಧ್ವಜದ ರಕ್ಷಣೆಯಷ್ಟೇ ಅಲ್ಪಸಂಖ್ಯಾತರ ರಕ್ಷಣೆಯೂ ಮುಖ್ಯ. ಅದಕ್ಕೆ ನಾವು ಎಲ್ಲ ಕ್ರಮ ಕೈಗೊಳ್ಳುತ್ತೇವೆ' ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಚೌಧರಿ ತಿಳಿಸಿದರು.
from India & World News in Kannada | VK Polls https://ift.tt/2JPdPSj