ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ದೊಡ್ಡ ಮೊತ್ತದ ಹಣದ ಪ್ರವಾಹವೇ ಹರಿದು ಬರುತ್ತದೆ. ಪಕ್ಷಗಳ ವಾರ್ಷಿಕ ಸಂಗ್ರಹವನ್ನು ಆಯಾ ವರ್ಷದ ಕೊನೆಯಲ್ಲಿ ಸಲ್ಲಿಸಲಾಗುತ್ತದೆ. ಹಾಗೆ 2017-18ರ ಸಾಲಿನಲ್ಲಿ ಆರು ದೊಡ್ಡ ರಾಜಕೀಯ ಪಕ್ಷಗಳ ಖಜಾನೆಯಲ್ಲಿ ಸಂಗ್ರಹವಾದ ಹಣದ ವಿವರ ಇಲ್ಲಿದೆ. ದೊಡ್ಡ ಹಣದ ಮೂಲಗಳನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂಬುದು ಚುನಾವಣಾ ಆಯೋಗದ ಸೂಚನೆ. 2017-18ರಲ್ಲಿ ಆರು ರಾಜಕೀಯ ಪಕ್ಷಗಳ ಒಟ್ಟಾರೆ ಆದಾಯ 1293.05 ಕೋಟಿ ರೂ.ಗಳಷ್ಟಿದೆ. ಇದರಲ್ಲಿ 700 ಕೋಟಿ ರೂ.ಗಳಷ್ಟು ಆದಾಯ ಅಜ್ಞಾತ ಮೂಲಗಳಿಂದ ಬಂದಿದೆ. ಇದರಲ್ಲಿ ಬಿಜೆಪಿಯೇ ಅತ್ಯಧಿಕ ಹಣವನ್ನು ಪಡೆದಿದೆ.
from India & World News in Kannada | VK Polls https://ift.tt/2UkzIwt