ತಮ್ಮ ಖಾತೆಯಿಂದ '638781' ನಿಗೂಢ ಸಂಖ್ಯೆಯನ್ನು ಮಾತ್ರ ಟ್ವೀಟ್ ಮಾಡುವ ಮೂಲಕ ನಿನ್ನೆ ಸಚಿವೆ ಸುಷ್ಮಾ ಸ್ವರಾಜ್ ಸುದ್ದಿಯಾದರು. ಇದರ ಅರ್ಥವೇನೆಂದು ತಿಳಿಯದೆ ಟ್ವೀಟಿಗರು ಪೇಚಿಗೆ ಸಿಲುಕಿದರು. ಕೆಲವರು ಸಚಿವರನ್ನೇ ಅರ್ಥ ಕೇಳಿದರು. ಆದರೆ ಸುಷ್ಮಾ ಸ್ವರಾಜ್ ಯಾವುದಕ್ಕೂ ಪ್ರತಿಕ್ರಿಯಿಸದೆ ನಂತರ ಟ್ವೀಟನ್ನು ಡಿಲೀಟ್ ಮಾಡಿಬಿಟ್ಟರು. ಟ್ವಿಟರ್‌ನಲ್ಲಿ ಸುಷ್ಮಾ ಸ್ವರಾಜ್ ಬರೋಬ್ಬರಿ 1.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.
from India & World News in Kannada | VK Polls http://bit.ly/2ELa3Gc