ಪಿ. ಚಿದಂಬರಂಗೆ ಸದ್ಯಕ್ಕಿಲ್ಲ ತಿಹಾರ್‌ ಜೈಲಿನಿಂದ ಮುಕ್ತಿ: ಮಾಜಿ ಹಣಕಾಸು ಸಚಿವರಿಗೆ ಶಾಕ್‌ ನೀಡಿದ ಏಮ್ಸ್‌ ವರದಿ!

ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿರುವ ಕೇಂದ್ರ ಮಾಜಿ ಹಣಕಾಸು ಸಚಿವ ಚಿದಂಬರಂಗೆ ದಿಲ್ಲಿ ಹೈಕೋರ್ಟ್‌ ಶಾಕ್‌ ನೀಡಿದೆ. ಪಿ.ಚಿದಂಬರಂ ಆರೋಗ್ಯ ಚೆನ್ನಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಏಮ್ಸ್ ವರದಿಯನ್ನಾಧರಿಸಿ ದಿಲ್ಲಿ ಹೈಕೋರ್ಟ್‌ಗೆ ಸಾಲಿಸಿಟರ್ ಜನರಲ್‌ ಮಾಹಿತಿ ನೀಡಿದ ಹಿನ್ನೆಲೆ ಕೋರ್ಟ್‌ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಚಿದಂಬರಂ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ನೀಡಲು ದಿಲ್ಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಏಮ್ಸ್ ಮೆಡಿಕಲ್‌ ಬೋರ್ಡ್‌ ನೀಡಿದ ವರದಿಯನ್ನು ಓದಿದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ಕಾಂಗ್ರೆಸ್‌ ನಾಯಕನಿಗೆ ಸ್ವಚ್ಛ ಪರಿಸರದ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಚಿದಂಬರಂ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಜಸ್ಟೀಸ್‌ ಸುರೇಶ್‌ ಕೈಟ್‌, 74 ವರ್ಷದ ಕಾಂಗ್ರೆಸ್‌ ನಾಯಕನಿಗೆ ತಿಹಾರ್‌ ಜೈಲಲ್ಲಿ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣವನ್ನು ಕಲ್ಪಿಸುವಂತೆ ತಿಹಾರ್‌ ಜೈಲು ಸೂಪರಿಟೆಂಡೆಂಟ್‌ಗೆ ನಿರ್ದೇಶಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಬೇಯಿಸಿದ ಆಹಾರ, ಖನಿಜಯುಕ್ತ ನೀರು, ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕವನ್ನು ನೀಡುವಂತೆಯೂ ನಿರ್ದೇಶಿಸಿದ್ದಾರೆ. ಜತೆಗೆ, ಚಿದಂಬರಂ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸುವಂತೆಯೂ ಸೂಚಿಸಿದ್ದಾರೆ. ಕೋರ್ಟ್ ಈ ನಿರ್ದೇಶನಗಳನ್ನು ನೀಡಿದ ಬಳಿಕ ಹೆಚ್ಚಿನ ನಿರ್ದೇಶನ ಅಗತ್ಯವಿಲ್ಲ ಎಂದು ಚಿದಂಬರಂ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಕೇಂದ್ರ ಮಾಜಿ ಹಣಕಾಸು ಸಚಿವ ನೀಡಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ವಿಲೇವಾರಿ ಮಾಡಿದ್ದು, ಜೈಲಿನಲ್ಲೇ ಸ್ವಚ್ಛ ವಾತಾವರಣ ಕಲ್ಪಿಸುವಂತೆ ಜೈಲು ಆಡಳಿತಾಧಿಕಾರಿಗಳಿಗೆ ಸೂಚಿಸಿದೆ. ಇನ್ನೊಂದೆಡೆ, ನವೆಂಬರ್ 4 ರಂದು ಚಿದಂಬರಂ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಆಗಸ್ಟ್ 21ರಂದು ಬಂಧನವಾಗಿದ್ದ ಚಿದಂಬರಂಗೆ ನವೆಂಬರ್ 13 ರವರೆಗೆ ನ್ಯಾಯಾಲಯ ತಿಹಾರ್ ಜೈಲಿಗೆ ಕಳಿಸಿತ್ತು.


from India & World News in Kannada | VK Polls https://ift.tt/2q97N5o

ಸಂಖ್ಯೆ ಹೊಂದಿಸಬಲ್ಲೆವು, ಮಹಾರಾಷ್ಟ್ರಕ್ಕೆ ಶಿವಸೇನೆಯವರೇ ಸಿಎಂ: ಸಂಜಯ್‌ ರಾವತ್‌

ಮುಂಬಯಿ: ಬಿಜೆಪಿ ಮತ್ತು ನಡುವೆ ಮಹಾರಾಷ್ಟ್ರದಲ್ಲಿ ತಲೆದೋರಿರುವ ಅಧಿಕಾರ ಹಂಚಿಕೆ ಬಿಕ್ಕಟ್ಟು ಸದ್ಯಕ್ಕೆ ಬಗೆ ಹರಿಯುವಂತೆ ಕಾಣಿಸುತ್ತಿಲ್ಲ. ಕಾರಣ ಮುಖ್ಯಮಂತ್ರಿ ಕುರ್ಚಿಗಾಗಿ ಮತ್ತು ಸಮಾನ ಅಧಿಕಾರ ಹಂಚಿಕೆಗಾಗಿ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಹಿಡಿದಿರುವ ಪಟ್ಟು ಸಡಿಲಿಸುತ್ತಿಲ್ಲ. ಶುಕ್ರವಾರ ಹೇಳಿಕೆ ನೀಡಿರುವ ಶಿವಸೇನಾ ವಕ್ತಾರ , ಮಹಾರಾಷ್ಟ್ರಕ್ಕೆ ಶಿವಸೇನೆಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸರಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವೆ ಇಲ್ಲಿಯವರೆಗೆ ಯಾವುದೇ ಮಾತುಕತೆಗಳಾಗಿಲ್ಲ ಎಂದು ತಿಳಿಸಿದ್ದಾರೆ. “ಸರಕಾರ ರಚನೆ ಸಂಬಂಧ ಬಿಜೆಪಿಗೆ ಯಾವುದೇ ಕೊನೆಯ ಬೇಡಿಕೆ ಇಲ್ಲ. ಅವರು ದೊಡ್ಡ ಜನರು,” ಎಂಬುದಾಗಿ ರಾಜ್ಯಸಭಾ ಸದಸ್ಯರೂ ಆಗಿರುವ ರಾವತ್‌ ವ್ಯಂಗ್ಯವಾಡಿದ್ದಾರೆ. ಜೊತೆಗೆ ಮನಸ್ಸು ಮಾಡಿದರೆ ಸ್ಥಿರ ಸರಕಾರ ರಚನೆಗೆ ಬೇಕಾದ ಸಂಖ್ಯೆಯನ್ನು ಶಿವಸೇನೆ ಹೊಂದಬಲ್ಲುದು ಎಂದು ತಿಳಿಸಿದ್ದಾರೆ. 50:50ರ ಸೂತ್ರದಂತೆ ಸರಕಾರ ರಚಿಸಲು ಜನರು ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂಬುದಾಗಿ ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ 288 ಸ್ಥಾನಗಳಲ್ಲಿ ಬಿಜೆಪಿ 105 ಮತ್ತು ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಳಿಕ ಸರಕಾರ ರಚನೆ ಕಸರತ್ತು ನಡೆಯುತ್ತಿದೆ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ 2.5 ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಕೇಳುತ್ತಿದೆ ಮತ್ತು ಸಚಿವ ಸ್ಥಾನ ಹಂಚಿಕೆಯಲ್ಲೂ ಸಮಾನ ಪಾಲು ಬೇಕು ಎನ್ನುತ್ತಿದೆ. ಆದರೆ ಎರಡೂ ಬೇಡಿಕೆಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಬದಲಿಗೆ ಮುಂದಿನ ಐದೂ ವರ್ಷ ಅವಧಿಗೆ ದೇವೇಂದ್ರ ಫಡ್ನವೀಸ್‌ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಹೇಳಿದೆ.


from India & World News in Kannada | VK Polls https://ift.tt/2r3uubI

ಹೊಗೆ ಗೂಡಾದ ದಿಲ್ಲಿಯಲ್ಲಿ 'ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ

ಹೊಸದಿಲ್ಲಿ: ದೀಪಾವಳಿ ನಂತರ ದಿಲ್ಲಿ ಅಕ್ಷರಶಃ ಗೂಡಿನಂತಾಗಿದೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯೊಂದು ದಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಸಿಎಂ ಕೇಜ್ರಿವಾಲ್ ಕೂಡ ಶಾಲಾ ಮಕ್ಕಳು ಮತ್ತು ನಿವಾಸಿಗಳಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಪರಿಸರ ಮಾಲಿನ್ಯ (ನಿಯಂತ್ರಣ ಮತ್ತು ತಡೆ) ಪ್ರಾಧಿಕಾರ (ಇಪಿಸಿಎ) ನವೆಂಬರ್ 5ರವರೆಗೆ ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡದಂತೆ ಆದೇಶಿಸಿದೆ. ಜತೆಗೆ ಚಳಿಗಾಲದಲ್ಲಿ ಪಟಾಕಿ ಸಿಡಿಸುವುದನ್ನು ಕೂಡ ಕಡ್ಡಾಯವಾಗಿ ನಿಷೇಧಿಸಿದೆ. ದೆಹೆಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟವು ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಲ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಇದನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿಯಾಗಿ ಪರಿಗಣಿಸಬೇಕು. ವಾಯು ಮಾಲಿನ್ಯ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಪಿಸಿಎ ಅಧ್ಯಕ್ಷ ಭೂರಿ ಲಾಲ್‌ ಅವರು ತಿಳಿಸಿದ್ದಾರೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ ಈ ಕುರಿತು ಪತ್ರ ಬರೆದಿದ್ದಾರೆ. ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (SAFAR)ಪ್ರಕಾರ ಶುಕ್ರವಾರ ಬೆಳಗ್ಗೆ 11:30 ರ ವೇಳೆಗೆ () 480ಕ್ಕೆ ಕುಸಿದಿದೆ. ಅಂದ್ರೆ ತೀವ್ರ ಕಳಪೆ (ವೆರಿ ಪೂರ್‌) ಮಟ್ಟಕ್ಕೆ ಕುಸಿದಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಮಾಡಿರುವ ಅಪಾಯಕಾರಿ ಮಟ್ಟಕ್ಕಿಂತಲೂ ಹಲವು ಪಟ್ಟು ಹೆಚ್ಚಿದೆ. ದೆಹಲಿಯ ಹಲವಾರು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕುಸಿದೆ. ಪೂಸಾ ಬಳಿ 480, ಲೂದಿ ರಸ್ತೆ 436, ವಿಮಾನನಿಲ್ದಾಣ ಟರ್ಮಿನಲ್‌ ಟಿ3 460, ನೋಯ್ಡಾ 668, ಮಥುರಾ ರಸ್ತೆ 413, ಆಯಾನಗರ್‌ 477, ದೆಹಲಿ ಐಐಟಿ 483, ಧೀರ್‌ಪುರ 553ರಷ್ಟಿದೆ. ಎಕ್ಯೂಐ ಎಂದರೇನು ? ಎಕ್ಯೂಐ ಎಂದರೆ ವಾಯು ಗುಣಮಟ್ಟವನ್ನು ಅಳೆಯುವ ಸೂಚಕ. ಇದು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಾಯು ಮಾಲಿನ್ಯಗಳ ಬಗ್ಗೆ ಮಾನಿಟರ್ ಮಾಡುತ್ತದೆ. ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಲ್ಫರ್ ಸಂಯುಕ್ತಗಳಂತ ಮಾಲಿನ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ವಾಯು ಗುಣಮಟ್ಟದ ಹಂತಗಳು ಉತ್ತಮ : 0-50 ತೃಪ್ತಿದಾಯಕ : 51-100 ಕಲುಷಿತ : 101-200 ಕಳಪೆ: 201-300 ತೀವ್ರ ಕಳಪೆ: 301-400 ಗಂಭೀರ: 401-500 ಗಂಭೀರ ತುರ್ತು ಪರಿಸ್ಥಿತಿ: 500ಕ್ಕಿಂತ ಹೆಚ್ಚು


from India & World News in Kannada | VK Polls https://ift.tt/36q9ITV

'ಶಿಕ್ಷೆಆಗೋದಕ್ಕಿಂತಾ ವಿಚಾರಣೆ ವೇಳೆ ಉತ್ತರ ಕೊಡೋದೇ ಟೆನ್ಶನ್ನು'! ಭ್ರಷ್ಟರ ನಾಡಿಮಿಡಿತ ಅರಿತಿದ್ರು ವೆಂಕಟಾಚಲ!

ಬೆಂಗಳೂರು: ಕಳೆದ ಬುಧವಾರವಷ್ಟೇ (30-10-2019) ಇಹಲೋಕ ತ್ಯಜಿಸಿದ ನ್ಯಾ. ವೆಂಕಟಾಚಲ, ಎಂದೆಂದಿಗೂ ಜನಮಾನಸದಲ್ಲಿ ಹಸಿರಾಗಿರುತ್ತಾರೆ. ಭ್ರಷ್ಟರ ವಿರುದ್ಧದ ಖಡಕ್ ನಿಲುವು, ಅವ್ಯವಸ್ಥೆ ವಿರುದ್ಧದ ಹೋರಾಟ, ಜನಪರ, ಜೀವಪರ ಕಾಳಜಿಗಳನ್ನು ಹೊಂದಿದ್ದ ಅವರ ಬಗ್ಗೆ ಬೆಳಕು ಚೆಲ್ಲುವಂಥಾ ಲೇಖನವೊಂದು ಇಲ್ಲಿದೆ. ನ್ಯಾ. ವೆಂಕಟಾಚಲ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ನಿವೃತ್ತ ಅಧಿಕಾರಿ ಜೆಬಿಆರ್ ಸ್ವಾಮಿಯವರು, ಹತ್ತಿರದಿಂದ ಕಂಡ ತಮ್ಮ ಅನುಭವಗಳನ್ನು ಲೇಖನವನ್ನಾಗಿಸಿದ್ದಾರೆ. ಅದು 2005. ಲೋಕಾಯುಕ್ತರಾಗಿದ್ದ ಶ್ರೀ ಎನ್. ವೆಂಕಟಾಚಲ ಅವರು ತುರುವೇಕೆರೆಗೆ ಭೇಟಿ ನೀಡಿದ್ದರು. ನಾನಾಗ ತುಮಕೂರು ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದೆ. ಸಾರ್ವಜನಿಕ ಸಭೆಗೆ ಮೊದಲು, ಅಲ್ಲಿಯ ಐಬಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಚಿಕ್ಕ ಸಭೆ ನಡೆಯಿತು. ಆ ದಿನಗಳಲ್ಲಿ ಅತ್ಯಂತ ಸೆನ್ಸೇಷನಲ್ ಆಗಿದ್ದ ಒಂದು ರೇಡ್ ಪ್ರಕರಣದಲ್ಲಿ ಅಪರಾಧಿಗೆ ಜಾಮೀನು ನೀಡಿತ್ತು. ಜೊತೆಗೆ, ವಶಪಡಿಸಿಕೊಂಡಿದ್ದ ಆಭರಣ ಮತ್ತು ನಗದು ಹಣದಲ್ಲಿ ಕೆಲವನ್ನು ವಾಪಸ್ ಕೊಡುವಂತೆ ಆದೇಶ ನೀಡಿತ್ತು. ಮಾಧ್ಯಮಗಳು ಅದನ್ನು ವೈಭವೀಕರಿಸಿ, ಆತ ನಿರಪರಾಧಿ ಎಂಬಂತೆ ಬಿಂಬಿಸಿದ್ದವು. ತನಿಖೆ ನಡೆಸಿದ್ದ ಅಧಿಕಾರಿಗೆ ತಪ್ಪಿತಸ್ತ ಭಾವ ಕಾಡುತ್ತಿತ್ತು. ವಶಪಡಿಸಿಕೊಳ್ಳಲಾಗಿದ್ದ ವಸ್ತುಗಳನ್ನು ಕೋರ್ಟ್ ಬಿಡುಗಡೆ ಮಾಡಿದೆ ಎಂದರೆ, ತಾನು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಲೋಕಾಯುಕ್ತರು ಎಲ್ಲಿ ಛೀಮಾರಿ ಹಾಕುತ್ತಾರೋ ಎಂಬ ಹೆದರಿಕೆಯಲ್ಲಿ ಆ ಅಧಿಕಾರಿ ಇದ್ದರು. ‘ನಾವು ಎಲ್ಲ ರೀತಿಯ ಆಕ್ಷೇಪಣೆಗಳನ್ನೂ ಸಲ್ಲಿಸಿದ್ದೆವು ಸಾರ್. ಆದರೂ ಕೋರ್ಟ್ ಹೀಗೆ ಆರ್ಡರ್ ಮಾಡಿಬಿಟ್ಟಿದೆ ಸರ್’ ಎಂದರು. ಸಮಾಧಾನಿಸುವ ದನಿಯಲ್ಲಿ ಲೋಕಾಯಕ್ತರು ಹೇಳಿದರು: ‘ಇರಲಿ ಬಿಡಿ. ಕಾನೂನು ಹೋರಾಟದಲ್ಲಿ ಇವೆಲ್ಲವೂ ಆಗುತ್ತವೆ. ಅಪರಾಧಿಗೆ ಶಿಕ್ಷೆ ಆಗೋದಕ್ಕಿಂತ, ಈ ತನಿಖೆಯ ಹೆಜ್ಜೆ ಹೆಜ್ಜೆಯಲ್ಲಿ ಎಲ್ಲವುದಕ್ಕೂ ಅವನು ಉತ್ತರ ಕೊಡಬೇಕಲ್ಲಾ? ಆ ಪ್ರಕ್ರಿಯೆ ಶಿಕ್ಷೆಗಿಂತ ದೊಡ್ಡದು. ಈ ಕೇಸಿನಲ್ಲಿ ನೀವು ನಾಲ್ಕು ವರ್ಷ ತನಿಖೆ ಮಾಡಿದ್ದೀರಾ? ಈ ನಾಲ್ಕು ವರ್ಷದ ಅವಧಿಯಲ್ಲಿ ಅವನ ವಿಚಾರಣೆ, ಆಸ್ತಿ ಪಾಸ್ತಿಗಳಿಗೆ ಸರಿಯಾದ ಲೆಕ್ಕ ಕೊಡಬೇಕು. ಈ ಟೆನ್ಷನ್‌ನಲ್ಲಿಯೇ ಹೈರಾಣಾಗಿರುತ್ತಾನೆ. ಅದೇ ದೊಡ್ಡ ಶಿಕ್ಷೆ ಬಿಡಿ’ ಅಂದರು. ‘ಹೌದು ಸರ್. ನಾವು ರೈಡ್ ಮಾಡಿದ್ದ ಕಾಲದಲ್ಲಿ ಅವನು ಭಾರೀ ರೋಫ್ ದಾರಿಕೆ ಮನುಷ್ಯನಾಗಿದ್ದ. ಹಡಬಿಟ್ಟಿ ದುಡ್ಡಿನ ಹಮ್ಮು ವಿಪರೀತ ಇತ್ತು. ಈಗ ಹೈ ಬಿಪಿ, ಶುಗರ್, ಕಿಡ್ನಿ ಫೆಲ್ಯೂರ್ ಹೀಗೆ ಏನೇನೋ ಖಾಯಿಲೆಗಳು ಮುತ್ತಿಕೊಂಡಿವೆ. ಗಡ್ಡ ಮೀಸೆ ಬಿಟ್ಟಕೊಂಡು ಭಿಕಾರಿ ಥರಾ ಆಗಿ ಬಿಟ್ಟಿದ್ದಾನೆ. ಎಲ್ಲೂ ಹೊರಗಡೆ ಓಡಾಡೋದೂ ಇಲ್ಲವಂತೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಟಾಚಲ ಅವರು, ‘ಹೌದೂರಿ. ಅಂತಿಮವಾಗಿ ಕೋರ್ಟ್ ನೀಡುವ ಶಿಕ್ಷೆಗಿಂತ, ತನಿಖೆಯ ವೇಳೆ ಅವನ ವಹಿವಾಟುಗಳ ಬಗ್ಗೆ ತನಿಖಾಧಿಕಾರಿ ಹಾಕುವ ಪ್ರಶ್ನೆಗಳೇ ಅಗ್ನಿಕುಂಡವಾಗಿರುತ್ತದೆ. ಆದ್ದರಿಂದ, ಆರೋಪಿಗಳಿಗೆ ಪ್ರಶ್ನೆಗಳನ್ನು ಕೇಳುವಾಗ ಸರಿಯಾಗಿ ಸಿದ್ಧತೆ ಮಾಡಿಕೊಂಡಿರಬೇಕು. ಉತ್ತರ ಕೊಡುವುದಕ್ಕೆ ಅಪರಾಧಿ ತಡಬಡಾಯಿಸಿ, ಇನ್ನು ಹೇಳದಿದ್ದ ವಿಧಿಯಿಲ್ಲ ಅನ್ನಿಸಬೇಕು. ಹಾಗೆ ನಿಮ್ಮ ಪ್ರಶ್ನೆಗಳಿರಬೇಕು. ನಿಮಗೆಲ್ಲ ಒಂದು ಮಾತನ್ನು ಇನ್ನೊಮ್ಮೆ ಹೇಳ್ತೀನಿ. ಪ್ರತಿ ತಿಂಗಳು ಇಂತಿಷ್ಟೇ ಕೇಸುಗಳನ್ನು ಹಾಕಲೇ ಬೇಕು ಅನ್ನುವ ಅಂಕಿ ಅಂಶಗಳು ನನಗೆ ಬೇಕಾಗಿಲ್ಲ.‌ ಅದು ನ್ಯಾಯವಾದ ಕೇಸೇ ಅನ್ನೋದನ್ನು FIR ರಿಜಿಸ್ಟರ್ ಮಾಡುವ ಮೊದಲು ಖಚಿತ ಪಡಿಸಿಕೊಳ್ಳಿ. ಸರ್ಕಾರದ ಕೆಲಸ ಮಾಡಿಕೊಡುವ ಸಲುವಾಗಿಯೇ ಆತ ಲಂಚಕ್ಕಾಗಿ ಒತ್ತಾಯ ಮಾಡಿದ್ದಾನೆ ಎಂಬುದು ದೃಢಪಡಬೇಕು. ಅದನ್ನು ಸರಿಯಾಗಿ ನಿಮಗೋಸ್ಕರ ವೆರಿಫೈ ಮಾಡಿಕೊಳ್ಳಿ. ಪ್ರತಿ ಕೇಸಿಗೂ ನೀವೇ ಮೊದಲ ಜಡ್ಜ್. ನಿಮಗೆ ನ್ಯಾಯಸಮ್ಮತ ಅನ್ನಿಸಿದ ಮೇಲೆ ಎಸ್‌ಪಿ, ಐಜಿಪಿ ಗಮನಕ್ಕೆ ತನ್ನಿ. ಅವರು ಓಕೆ ಅಂದ ಮೇಲೆ ಮುಂದುವರೆಯಿರಿ. ಯಾವುದೇ ಕಾರಣಕ್ಕೂ ಅನ್ಯಾಯದ ಕೇಸು ಹಾಕಕೂಡದು. ಹುಷಾರ್’ ಎಂದು ಖಡಕ್ ಎಚ್ಚರಿಕೆ ನೀಡಿದರು. ಲೋಕಾಯುಕ್ತರ ಮಾತು ಎಂದರೆ ಸಾಮಾನ್ಯವೇ? He himself is the moving court! ‌ಅವರ ಮಾತೇ ಕೋರ್ಟ್ ಆರ್ಡರ್! ಸಾರ್ವಜನಿಕ ಅಹವಾಲುಗಳನ್ನು ಜನರು ಇದ್ದಲ್ಲಿಗೇ ಹೋಗಿ ಪಡೆದು ವಿಚಾರಣೆ ಮಾಡುವ ಪರಿಪಾಠವನ್ನು ಅವರು ಆರಂಭಿಸಿದರು. ಲೋಕಾಯುಕ್ತದ ಐದಾರು ನ್ಯಾಯಾಧೀಶರುಗಳು, ಸಿಬ್ಬಂದಿ ಅವರ ಜೊತೆಗಿರುತ್ತಿದ್ದರು. ಯಾವುದೇ ಇಲಾಖೆಯಲ್ಲಿ ವಿಳಂಬ, ಕಿರುಕುಳ ಆಗುತ್ತಿದ್ದರೆ ಜನ ನೇರವಾಗಿ ಲೋಕಾಯುಕ್ತರ ಬಳಿ ಸಭೆಯಲ್ಲಿ ದೂರು ಹೇಳಬಹುದಿತ್ತು. ಆಯಾ ಇಲಾಖೆಯ ಮುಖ್ಯಾಧಿಕಾರಿಗಳನ್ನು ಕರೆಸಿ ಅಲ್ಲೇ ತೀರ್ಮಾನವನ್ನು ನೀಡುತ್ತಿದ್ದರು. ಇಂತಿಷ್ಟು ದಿನದಲ್ಲಿ ಕೆಲಸ ಮಾಡಿಕೊಡುವಂತೆ ಗಡುವು ವಿಧಿಸುತ್ತಿದ್ದರು. ಕಿರುಕುಳ ನೀಡಿದ್ದ ಸರ್ಕಾರಿ ನೌಕರನನ್ನು ಸಭೆಗೇ ಕರೆಸಿ ಛೀಮಾರಿ ಹಾಕಿ, ಆ ಕ್ಷಣವೇ ನೊಂದವರ ಕೆಲಸ ಮಾಡಿ, ವರದಿ ಮಾಡುವಂತೆ ತಾಕೀತು ಮಾಡುತ್ತಿದ್ದರು. ಅವರ ಕ್ಯಾಂಪ್ ಮುಗಿಯುವುದರೊಳಗೆ ಬಹುತೇಕ ನೊಂದವರ ಕೆಲಸಗಳು ಆಗಿರುತ್ತಿದ್ದವು. ಲೋಕಾಯುಕ್ತರು ಒಂದು ಊರಿಗೆ ಭೇಟಿ ನೀಡುತ್ತಾರೆ ಎಂದರೆ ಸಾಕು ಸರ್ಕಾರಿ ಕಛೇರಿಗಳೆಲ್ಲವೂ ಕರೆಂಟ್ ಹೊಡೆದಂತೆ ನಡುಗುತ್ತಿದ್ದವು. ಕಛೇರಿಗಳ ಕಡತಗಳು ತಂತಾನೇ ಧೂಳು ಕೊಡವಿಕೊಂಡು ಸ್ವಚ್ಛವಾಗುತ್ತಿದ್ದವು. ಜಸ್ಟೀಸ್ ವೆಂಕಟಾಚಲ ಅವರದ್ದು ತಿದ್ದುವ ಮನೋಭಾವ. ಶಿಕ್ಷಿಸುವುದು ಕಡಿಮೆ. ಕೆಲಸ ಆಗುವುದು ಮುಖ್ಯ. ತಪ್ಪಿತಸ್ಥ ಅಧಿಕಾರಿಗಳನ್ನು ಅಲ್ಲಲ್ಲೇ ಗದರಿಸಿ ಕೆಲಸ ತೆಗೆಯುತ್ತಿದ್ದರೇ ಹೊರತು ಶಿಕ್ಷಿಸಿದ್ದು ಕಡಿಮೆ. ಬಹುಶಃ ಭಾರತದಲ್ಲಿ ಈ ಬಗೆಯ ಮುಕ್ತ ವಿಚಾರಣೆ ನಡೆಸಿ, ಅಲ್ಲಲ್ಲಿಯೇ ಪರಿಹಾರ ಕೊಡುತ್ತಿದ್ದ ಸಭೆಗಳನ್ನು ನಡೆಸಿದವರಲ್ಲಿ ಅವರೇ ಮೊದಲಿಗರಿರಬೇಕು. ತುಮಕೂರಿನಲ್ಲಿ ಇಂಥಾದೊಂದು ಸಭೆ ನಡೆಯುತ್ತಿದ್ದಾಗ, ಹಿಂದುಳಿದ ವರ್ಗಗಳ ಹಾಸ್ಟೆಲ್ ಅವ್ಯವಹಾರ, ಅವ್ಯವಸ್ಥೆಯ ಬಗ್ಗೆ ದೂರಿದರು. ‘ಈ ತಕ್ಷಣವೇ ನೀವು ಅಲ್ಲಿಗೆ ಹೋಗಿ ನೋಡಿ ಪರಿಶೀಲಿಸಿ. ನಾನೂ ಬರ್ತೇನೆ’ ಎಂದು ತಿಳಿಸಿದರು. ಅಲ್ಲಿ ನೋಡಿದರೆ ಹಳೆಯ ಕೊಳೆತ ತರಕಾರಿಗಳು, ಮುಸುರೆ ಉಳಿದು ನಾರುತ್ತಿದ್ದ ಪಾತ್ರೆಗಳು, ಎಲ್ಲವೂ ಗಲೀಜು. ಅಲ್ಲಿದ್ದ ಸಿಬ್ಬಂದಿಗಳನ್ನು ಅಲ್ಲೇ ಕುಕ್ಕರುಬಡಿಸಿ (ಕುಕ್ಕರುಗಾಲಿನಲ್ಲಿ ಕೂರಿಸಿ) ಕಾಯತೊಡಗಿದೆ. ಸಭೆ ಮುಗಿಸಿ, ಊಟವನ್ನೂ ಮಾಡದೆ ನೇರ ಅಲ್ಲಿಗೇ ಬಂದರು. ಅದಾಗಲೇ ಮಧ್ಯಾಹ್ನ ಮೂರೂವರೆ ಗಂಟೆ. ಹಾಸ್ಟೆಲ್‌ನ ಅವ್ಯವಸ್ಥೆ ನೋಡಿ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು. ಇಲಾಖೆಯ ಮುಖ್ಯಾಧಿಕಾರಿಯೇ ಬಂದು ವಿದ್ಯಾರ್ಥಿಗಳಿಗೆ ಉತ್ತಮ ಸ್ವಚ್ಛ ಆಹಾರ ಕೊಡುವುದನ್ನು ಮೇಲ್ವಿಚಾರಣೆ ಮಾಡತಕ್ಕದ್ದೆಂದು ತಿಳಿಸಿದರು. ಅಲ್ಲಿ ನಡೆದಿರುವ ಅವ್ಯವಸ್ಥೆಯ ಬಗ್ಗೆ ಕೇಸು ದಾಖಲಿಸುವಂತೆ ನನಗೆ ಹೇಳಿದ್ದಷ್ಟೇ ಅಲ್ಲ, ಪ್ರತಿವಾರವೂ ಆ ಹಾಸ್ಟೆಲ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸುವಂತೆ ಆದೇಶಿಸಿದರು. ಅದೊಂದು ಭೇಟಿಯಿಂದಾಗಿ ಹಾಸ್ಟೆಲ್ ವ್ಯವಸ್ಥೆ ಬದಲಾಗಿ ವಿದ್ಯಾರ್ಥಿಗಳಿಗೆ ಉತ್ತಮ ಊಟ, ವಸತಿ ಸಿಕ್ಕುವಂತಾಯಿತು. ಜಸ್ಟೀಸ್ ಶ್ರೀ ಎನ್. ವೆಂಕಟಾಚಲ ಅವರ ಕೈಕೆಳಗೆ ಬರೋಬ್ಬರಿ ನಾಲ್ಕೂವರೆ ವರ್ಷ ಕೆಲಸ ಮಾಡಿದ್ದೆ. ಅದಾಗಲೇ ಎಪ್ಪತ್ತೈದು ವರ್ಷ ಮೀರಿದ್ದ ಹಿರಿಯ ಜೀವ ಅದು. ಲೋಕಾಯುಕ್ತ ಕಛೇರಿಯಲ್ಲಿ ಲಿಫ್ಟ್ ಇದ್ದರೂ, ನಾಲ್ಕಂತಸ್ತಿನ ಮೆಟ್ಟಿಲುಗಳನ್ನು ಹತ್ತಿ ಬರುತ್ತಿದ್ದ ಗಟ್ಟಿ ಮನುಷ್ಯ. ಒಂದೊಂದು ಅಂತಸ್ತಿನ ಕಛೇರಿಗಳನ್ನೂ ಒಮ್ಮೆ ಇಣುಕಿ ಹೋಗುತ್ತಿದ್ದರು. ಇಡೀ ಲೋಕಾಯುಕ್ತ ಕಛೇರಿ ತಲ್ಲಣಿಸಿ ಹೋಗುತ್ತಿತ್ತು. ಅವರೆಲ್ಲಿ ಬಂದಾರೋ ಎಂದು ಅಧಿಕಾರಿ, ಸಿಬ್ಬಂದಿ ವರ್ಗ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಕೆಲಸಗಳು ಸುಸೂತ್ರವಾಗಿ ಸಾಗುತ್ತಿದ್ದವು. ಮೇಲಧಿಕಾರಿ ಚುರುಕಾಗಿದ್ದರೆ ಸಿಬ್ಬಂದಿಯೂ ಹೇಗೆ ಚುರುಕಾಗುತ್ತಾರೆಂಬುದಕ್ಕೆ ವೆಂಕಟಾಚಲರ ಆಡಳಿತ ಸಾಕ್ಷಿ. ಅವರಿಂದಾಗಿ ಕರ್ನಾಟಕ ಲೋಕಾಯುಕ್ತ ಹೊಸ ಕಾಯಕಲ್ಪ ಪಡೆಯಿತು. ಭ್ರಷ್ಟರು ಕನಸಿನಲ್ಲಿಯೂ ಬೆಚ್ಚುವಂತಾಯಿತು. ಭ್ರಷ್ಟರನ್ನು ಬಲಿ ಹಾಕಬಲ್ಲ ಅಂಥಾದೊಂದು ಬಲಿಷ್ಟ ಸಂಸ್ಥೆ ಇದೆ ಎಂಬುದೇ ಜನ ಸಾಮಾನ್ಯರಿಗೆ ಅದುವರೆಗೆ ತಿಳಿದಿರಲಿಲ್ಲ.‌ ಜಸ್ಟೀಸ್ ವೆಂಕಟಾಚಲ ಅವರು ಹಾಕಿಕೊಟ್ಟ ಅಡಿಪಾಯದಿಂದಾಗಿ, ಮುಂದೆ ಜಸ್ಟೀಸ್ ಶ್ರೀ ಸಂತೋಷ್ ಹೆಗ್ಡೆಯವರು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಯಿತು. ನೆನಪಾಗುವ ಅವರ ಇನ್ನೊಂದು ಮಾತು: ‘ಒಬ್ಬ ಸರ್ಕಾರಿ ನೌಕರ ಒಂದು ಒಳ್ಳೆಯ ಮನೆ ಕಟ್ಟಿದ್ದಾನೆ ಅಂದರೆ ಕಟ್ಟಿಕೊಳ್ಳಲಿ ಬಿಡ್ರೀ. ಸ್ವಂತ ಮನೆಯಲ್ಲಿ ಆರಾಮಾಗಿ ಚೆನ್ನಾಗಿ ಬದುಕಲಿ. ಆದರೆ, ನಾಲ್ಕಾರು ಕಾಂಪ್ಲೆಕ್ಸ್‌ಗಳನ್ನು ಕಟ್ಟಿ ಮೆರೆಯುತ್ತಿದ್ದಾನೆ ಅಂದರೆ ಒಂದು ಕಣ್ಣಿಡಿ’ ಇಂತಹ ಅದೆಷ್ಟೋ ಮಾತುಗಳು, ಸ್ವಚ್ಛತೆ ಮತ್ತು ಕೊಳಕುಗಳ ನಡುವೆ ಮಾನವೀಯ ಅಂತಃಕರಣ ಹಾಗೂ ನ್ಯಾಯಪರತೆ ಇಟ್ಟುಕೊಂಡಿದ್ದವರು ನ್ಯಾ. ವೆಂಕಟಾಚಲ.


from India & World News in Kannada | VK Polls https://ift.tt/36plLRi

ಮಯಾಂಕ್, ಗಿಲ್ ಶತಕದಬ್ಬರ; ಜಲಜ್ ಮಿಂಚಿನ ದಾಳಿ; ಭಾರತ 'ಎ' ಹೊರದಬ್ಬಿದ ಭಾರತ 'ಸಿ' ಫೈನಲ್‌ಗೆ ಲಗ್ಗೆ

ರಾಂಚಿ: 2019ನೇ ಸಾಲಿನ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 'ಎ' ವಿರುದ್ಧ 232 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಭಾರತ 'ಸಿ' ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿರುವ ಹನುಮ ವಿಹಾರಿ ನೇತೃತ್ವದ ಭಾರತ 'ಎ' ತಂಡವು ಕೂಟದಿಂದಲೇ ಹೊರನಡೆದಿದೆ. ಇದೀಗ ಸೋಮವಾರ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ನೇತೃತ್ವದ ಭಾರತ 'ಸಿ' ತಂಡವು ಪಾರ್ಥಿವ್ ಪಟೇಲ್ ಮುಂದಾಳತ್ವದ ಭಾರತ 'ಬಿ' ತಂಡದ ಸವಾಲನ್ನು ಎದುರಿಸಲಿದೆ. ಈ ಮೊದಲು ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 'ಬಿ' ತಂಡವು ಭಾರತ 'ಎ' ವಿರುದ್ಧ ಗೆಲುವು ದಾಖಲಿಸಿತ್ತು. ಹಾಗೆಯೇ ಶನಿವಾರ ಭಾರತ 'ಬಿ' ಹಾಗೂ ಭಾರತ 'ಸಿ' ನಡುವಣ ಪಂದ್ಯವು ಫೈನಲ್‌ಗೂ ಮೊದಲು ನಡೆಯಲಿರುವ ಅಭ್ಯಾಸ ಪಂದ್ಯ ಎಂಬ ಪ್ರತೀತಿ ಪಡೆದಿದೆ. ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 'ಎ', ಆರಂಭಿಕರಾದ (120) ಹಾಗೂ ನಾಯಕ ಶುಭಮನ್ ಗಿಲ್ (143) ಸಿಡಿಲಬ್ಬರದ ಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 366 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 111 ಎಸೆತಗಳನ್ನು ಎದುರಿಸಿದ ಮಯಾಂಕ್ 15 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 120 ರನ್ ಗಳಿಸಿದರು. ಇನ್ನೊಂದೆಡೆ ಗಿಲ್ 142 ಎಸೆತಗಳಲ್ಲಿ 10 ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 143 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಸೂರ್ಯ ಕುಮಾರ್ ಯಾದವ್ ಕೇವಲ 29 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ಅಜೇಯ 72 ರನ್ ಚಚ್ಚಿದರು. ಬಳಿಕ ಗುರಿ ಬೆನ್ನಟ್ಟಿದ ಭಾರತ 'ಎ' ತಂಡವು, ಸ್ಪಿನ್ನರ್ (41ಕ್ಕೆ 7 ವಿಕೆಟ್) ಮಾರಕ ದಾಳಿಗೆ ತತ್ತರಿಸಿ 29.5 ಓವರ್‌ಗಳಲ್ಲೇ 134 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ನಾಯಕ ಹನುಮ ವಿಹಾರಿ ಖಾತೆ ತೆರೆಯುವಲ್ಲಿ ವಿಫಲವಾದರು. ಇದು ಇತಿಹಾಸದಲ್ಲೇ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಇದರೊಂದಿಗೆ ನಿರಂತರವಾಗಿ ತಮ್ಮನ್ನು ಕಡೆಗಣಿಸುತ್ತಲೇ ಬರುತ್ತಿರುವ ಆಯ್ಕೆ ಸಮಿತಿಗೆ ಜಲಜ್ ಸಕ್ಸೇನಾ ದಿಟ್ಟ ಉತ್ತರವನ್ನೇ ನೀಡಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PDyv0S

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ರಾಜ್ಯೋತ್ಸವ ಕಲರವ: ಎಲ್ಲೆಲ್ಲೂ ಕನ್ನಡ ಗೀತೆಗಳ ರಿಂಗಣ

ಜ್ಞಾನಪೀಠಮೈಸೂರು: ರಸ್ತೆ ತುಂಬಾ ಕನ್ನಡ ಬಾವುಟಗಳ ಹಾರಾಟ. ಅರಮನೆ ಅಂಗಳದ ತುಂಬಾ ಕನ್ನಡ ಗೀತೆಗಳ ರಿಂಗಣ. ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮಕ್ಕಳು ಹಿರಿಯರು, ಕನ್ನಡ ಕಾರ್ಯಕರ್ತರಿಂದ ಮೆರವಣಿಗೆ ಏಕಕಾಲದಲ್ಲೇ ಮೇಳೈಸಿದವು. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಘೋಷವಾಕ್ಯ! ಮೊಳಗುವ ಮೂಲಕ ಅಕ್ಷರಶಃ ಇಡೀ ವೇದಿಕೆ ಕನ್ನಡಮಯವಾಗಿ ಮಾರ್ಪಟ್ಟಿತ್ತು. ಶುಕ್ರವಾರ ಬೆಳಗ್ಗೆ ಎಳೆಬಿಸಿಲು ಅಂಬಾವಿಲಾಸ ಅರಮನೆಯನ್ನು ಆವರಿಸಿಕೊಳ್ಳುತ್ತಿದ್ದಂತೆ ಇತ್ತ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಕಟ್ಟಿತ್ತು. ಅರಮನೆಯ ಬಲರಾಮ ದ್ವಾರದ ಮುಂಭಾಗ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲಿಗೆ ರಾಜ್‌ಕುಮಾರ್ ಉದ್ಯಾನದಲ್ಲಿದ್ದ ವರನಟ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಅರಮನೆ ಮುಂಭಾಗದಲ್ಲಿ ರಾಷ್ಟ್ರಧ್ವಜ ಹಾಗೂ ನಾಡ ಬಾವುಟದ ಧ್ವಜಾರೋಹಣ ನೆರವೇರಿಸಿದರು. ಕಲಾತಂಡಗಳ ವೈಭವ: ಕನ್ನಡ ರಾಜ್ಯೋತ್ಸವದ ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಿತು. ಕಲಾತಂಡಗಳ ವೈಭವ ರಾಜ್ಯೋತ್ಸವ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ‘ಬಾರಿಸು ಕನ್ನಡ ಡಿಂ ಡಿಮವಾ’ ಎಂಬ ಘೋಷಣೆ ಕನ್ನಡ ಕಾರ್ಯಕರ್ತರಿಂದ ಕೇಳಿ ಬಂತು. ಕಂಸಾಳೆ, ನಂದಿಧ್ವಜ ಕುಣಿತ, ವೀರಗಾಸೆ ಜಾನಪದ ಸಂಸ್ಕೃತಿಯನ್ನು ನೆನಪಿಸಿದವು. ವಿಭಿನ್ನ ರೀತಿಯಲ್ಲ ಆಚರಣೆ: ಜಗದೀಶ್ ಎಂಬ ಕೆಎಸ್‌ಆರ್‌ಟಿಸಿ ಚಾಲಕ ತಮ್ಮ ಬಸ್ ಅನ್ನು ಸಿಂಗರಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಂಟಿಸಿ ಗಮನ ಸೆಳೆದರು. ಅಲ್ಲದೆ, ಭುವನ್ ಎಂಬ ಬಾಲಕ ಸೈಕಲ್ ಮೂಲಕ ಪ್ಲಾಸ್ಟಿಕ್ ತ್ಯಜಿಸಿ ಎಂಬ ಸಂದೇಶ ಸಾರಿದನು. ಜತೆಗೆ ಕನ್ನಡದ ಕಲಿಗಳ ಭಾವಚಿತ್ರವನ್ನು ತನ್ನ ಸೈಕಲಿಗೆ ಅಂಟಿಸಿಕೊಂಡು ನಗರ ಪ್ರದಕ್ಷಿಣೆ ಹಾಕಿದನು. ರಾಜೀವ್ ನಗರದ ಲಲಿತ ಎಂಬ ಮಹಿಳೆ ತಾಯಿ ಭುವನೇಶ್ವರಿ ವೇಷಭೂಷಣದಿಂದ ಕಂಗೊಳಿಸಿದರೆ, ರಮೇಶ್ ಶೆಟ್ಟಿ ಎಂಬುವವರು ತಮ್ಮ ದ್ವಿಚಕ್ರ ವಾಹನಕ್ಕೆ ಕನ್ನಡ ಬಾವುಟ, ಕನ್ನಡ ಹೋರಾಟಗಾರರ ಚಿತ್ರಗಳನ್ನು ಹಾಕಿಕೊಂಡು ಕನ್ನಡಪರ ಜಾಗೃತಿ ಮೂಡಿಸಿದರು. ಮೆರವಣಿಗೆ: ಪೊಲೀಸ್ ಬ್ಯಾಂಡ್‌ನೊಂದಿಗೆ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಚಾಮರಾಜ ಒಡೆಯರ್ ಸರ್ಕಲ್‌ನಿಂದ ಶುರುವಾಗಿ ಕೆಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆಘಿ, ಕೆಆರ್ ಆಸ್ಪತ್ರೆ ಸರ್ಕಲ್, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಟೌನ್‌ಹಾಲ್‌ನಲ್ಲಿ ಸಮಾಪ್ತಿಯಾಯಿತು. ಬೆಮೆಲ್ ನೌಕರರ ಭುವನೇಶ್ವರಿ ಸ್ತಬ್ಧಚಿತ್ರ ಇದಕ್ಕೆ ಸಾಥ್ ನೀಡಿತು. ಅಖಂಡ ಕರ್ನಾಟಕಕ್ಕೆ ಯುವ ಪೀಳಿಗೆ ಪಾಲುದಾರರು! ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ಕರುನಾಡಿನ ಇತಿಹಾಸ ಮತ್ತು ಪರಂಪರೆ ಶ್ರೀಮಂತ ಮತ್ತು ಸಮೃದ್ಧವಾಗಿದ್ದುಘಿ, ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು ಎಂದು ಕಿವಿಮಾತು ಹೇಳಿದರು. 64ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸುದೀರ್ಘ ಹೋರಾಟದ ಲವಾಗಿ 1956 ರ ನ.1 ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ರಾಜ್ಯದಲ್ಲಿ ಒಂದುಗೂಡಿದವು. ಬಳಿಕ 1973 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು, ಎಂದು ಕರ್ನಾಟಕ ಏಕೀಕರಣ ಹೋರಾಟವನ್ನು ಸ್ಮರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಹಾಭಾರತದ ಭೀಷ್ಮಪರ್ವದಲ್ಲಿ ‘ಕರ್ನಾಟಕ’ದ ಉಲ್ಲೇಖವಿದೆ. ಇದು ನಮ್ಮ ನಾಡಿನ ಪ್ರಾಚೀನತೆಯ ಬಗ್ಗೆ ತಿಳಿಸಿಕೊಡುತ್ತದೆ, ಎಂದರು. ಯುವಜನರು ನಾಡಿನ ಬಗ್ಗೆ ಆಳವಾದ ಅಧ್ಯಯನ ಹಾಗೂ ವ್ಯಾಸಂಗದ ಜತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಎಂದು ಸಲಹೆ ನೀಡಿದರು. ಧ್ವಜಾರೋಹಣಕ್ಕೂ ಮುನ್ನ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಪೊಲೀಸ್ ಇಲಾಖೆಯ ವಿವಿಧ ಘಟಕಗಳಿಂದ ಹಾಗೂ ನಾನಾ ಶಾಲಾ ವಿದಾರ್ಥಿಗಳಿಂದ ಆಕರ್ಷಕ ಪಥಸಂಚನ ನಡೆಯಿತು. ಮಹಾತ್ಮ ಗಾಂಧಿಯವರ 150ನೇ ಜನ್ಮೋತ್ಸವದ ಅಂಗವಾಗಿ ಸರಕಾರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಎಂಬ ಮಹತ್ತರವಾದ ಯೋಜನೆ ಜಾರಿಗೊಳಿಸಲಾಗಿದೆ. ನಗರಕ್ಕೆ 150 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಸ್ವಚ್ಚ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಹಿರಿಮೆ ಹೆಚ್ಚಿಸಲು ಈ ಅನುದಾನ ನೆರವಾಗಲಿದೆ. - ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ


from India & World News in Kannada | VK Polls https://ift.tt/2N9kIgR

ದಿಲ್ಲಿಯಲ್ಲಿ ಮುಂದುವರಿದ ನಾಟಕೀಯ ಬೆಳವಣಿಗೆ; ಬಾಂಗ್ಲಾ ಆಟಗಾರರಿಂದ ಮುಖವಾಡ ಧರಿಸಿ ಅಭ್ಯಾಸ

ಹೊಸದಿಲ್ಲಿ: ಭಾರತ ಹಾಗೂ ಪ್ರವಾಸಿ ಬಾಂಗ್ಲಾದೇಶ ನಡುವೆ ನವೆಂಬರ್ 3 ಭಾನುವಾರದಂದು ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯ ಆಯೋಜನೆಯಾಗಲಿರುವಂತೆಯೇ ನಗರದಲ್ಲಿ ಗಣನೀಯವಾಗಿ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರವೂ ಮುಖವಾಡ ಧರಿಸಿ ಬಾಂಗ್ಲಾ ಆಟಗಾರರು ಅಭ್ಯಾಸ ನಡೆಸಿರುವುದು ಮತ್ತಷ್ಟು ಗೊಂದಲಗಳಿಗೆ ಎಡೆಮಾಡಿ ಕೊಟ್ಟಿದೆ. ಗುರುವಾರದಂದು ಬಾಂಗ್ಲಾ ಬ್ಯಾಟ್ಸ್‌ಮನ್ ಲಿಟನ್ ದಾಸ್ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ್ದರು. ಇದೀಗ ಶುಕ್ರವಾರದಂದು ಮತ್ತಷ್ಟು ಆಟಗಾರರು ಮುಖವಾಡ ಧರಿಸಿ ಅಭ್ಯಾಸ ನಡೆಸಿರುವುದು ಚಿಂತೆಗೆ ಕಾರಣವಾಗಿದೆ. ದೀಪಾವಳಿ ಹಬ್ಬದ ಬೆನ್ನಲ್ಲೇ ದಿಲ್ಲಿ ವಾಯು ಮಾಲಿನ್ಯ ಮಟ್ಟ ಗಗನಕ್ಕೇರಿದೆ. ವಾಯು ಗುಣಮಟ್ಟ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಪರಿಸರವಾದಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳಿಂದ ಬಲವಾದ ಬೇಡಿಕೆ ಕೇಳಿಬಂದಿತ್ತು. ದಿಲ್ಲಿಯಲ್ಲಿ ಪಂದ್ಯ ಆಯೋಜನೆಗಿಂತಲೂ ಮಿಗಿಲಾಗಿ ವಾಯು ಗುಣಮಟ್ಟ ಕಾಯ್ದುಕೊಳ್ಳುವುದರತ್ತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಸಹ ಅಭಿಪ್ರಾಯಪಟ್ಟಿದ್ದರು. ಆದರೆ ವಿವಾದಗಳಿಗೆ ತೆರೆ ಎಳೆದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊನೆ ಕ್ಷಣದಲ್ಲಿ ಪಂದ್ಯ ಸ್ಥಳಾಂತರ ಸಾಧ್ಯವಿಲ್ಲ. ಪಂದ್ಯಕ್ಕಾಗಿ ಸಂಪೂರ್ಣ ಸಿದ್ಧತೆ ನಡೆದಿದ್ದು, ಪೂರ್ವ ನಿಗದಿಯಂತೆ ಅರುಣ್ ಜೇಟ್ಲಿ ಮೈದಾನದಲ್ಲೇ ಪಂದ್ಯ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು. ಬಾಂಗ್ಲಾ ಆಟಗಾರರು ಮುಖವಾಡ ಧರಿಸುವುದರ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ಪಷ್ಟನೆಯನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ಇದು ಆಟಗಾರಿರಿಗೆ ಬಿಟ್ಟ ವಿಚಾರ. ಆಟಗಾರರು ಮಾಸ್ಕ್ ಧರಿಸಲು ಬಯಸಿದರೆ ಅದವರ ಆಯ್ಕೆ ಎಂದಷ್ಟೇ ಉತ್ತರಿಸಿದೆ. ಈ ಮೊದಲು ಪ್ರತಿಕ್ರಿಯೆ ನೀಡಿರುವ ಲಿಟನ್ ದಾಸ್, ನನ್ನ ಆರೋಗ್ಯ ಉತ್ತಮವಾಗಿರಲಿಲ್ಲ. ಆದ್ದರಿಂದ ಮಾಸ್ಕ್ ಧರಿಸಿದ್ದೆ ಎಂದು ಹೇಳಿದ್ದರು. ಒಟ್ಟಾರೆಯಾಗಿ ದಿಲ್ಲಿ ಕದನಕ್ಕೂ ಮುನ್ನ ಹಲವಾರು ನಾಟಕೀಯ ಬೆಳವಣಿಗೆಗಳು ಕಂಡುಬಂದಿದೆ. ಇದು ಪಂದ್ಯದ ಮೇಲೆ ಮತ್ತಷ್ಟು ಕಾರ್ವೋಡ ಕವಿಯುವಂತೆ ಮಾಡಿದೆ. ಇನ್ನೇನು ಬಾಂಗ್ಲಾದೇಶ ಭಾರತ ಪ್ರವಾಸ ಕೈಗೊಳ್ಳಲಿದೆ ಎನ್ನುವಷ್ಟರಲ್ಲಿ ಮ್ಯಾಚ್ ಫಿಕ್ಸಿಂಗ್ ಸಂಬಂಧ ಬುಕ್ಕಿಗಳು ಸಂಪರ್ಕಿಸಿದ ವಿಚಾರವನ್ನು ಗೌಪ್ಯವಾಗಿರಿಸಿದ್ದ ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಮೇಲೆ ಐಸಿಸಿ ಎರಡು ವರ್ಷಗಳ ನಿಷೇಧವನ್ನು ಹೇರಿತ್ತು. ಪರಿಣಾಮ ಭಾರತ ಸರಣಿಗೆ ಬಾಂಗ್ಲಾದೇಶ ತಾಜಾ ತಂಡವನ್ನು ಘೋಷಿಸಿತ್ತು. ಅಲ್ಲದೆ ಮಹಮುದುಲ್ಲಾಗೆ ಟಿ20 ನಾಯಕ ಪಟ್ಟ ವಹಿಸಿತ್ತು. ಏತನ್ಮಧ್ಯೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಾಯು ಮಾಲಿನ್ಯ ಆತಂಕವನ್ನು ತಳ್ಳಿ ಹಾಕಿದ್ದಾರೆ. ನಾವು ದಿಲ್ಲಿಗೆ ಆಗಮಿಸಿದ್ದು, ಪಂದ್ಯ ನಿಗದಿಯಂತೆ ನಡೆಯಲಿದೆ ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2oANXj0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...