ಮೇ 5ಕ್ಕೆ ಅಮಿತ್‌ ಶಾ ಬೆಂಗಳೂರಿಗೆ ಆಗಮನ; ನಗರದ ಹಲವೆಡೆ ವಾಹನ ನಿಲುಗಡೆ ನಿಷೇಧ!

ಕರ್ನಾಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇನ್ನೇನು ಒಂದು ವರ್ಷದೊಳಗೆ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಇದರ ಭಾಗವಾಗಿ ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ನಡೆಸಲು ಆರಂಭಿಸಿವೆ. ಈ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಮೇ 5ರಂದು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಗಣ್ಯರು ಸಂಚರಿಸುವ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.

from India & World News in Kannada | VK Polls https://ift.tt/gCOVmzG

ಮೋದಿ ಸೋಲುವುದರಿಂದ ಕಾಂಗ್ರೆಸ್‌ ಬಲಗೊಳ್ಳುವುದಿಲ್ಲ: ಪ್ರಶಾಂತ್‌ ಕಿಶೋರ್‌

ನರೇಂದ್ರ ಮೋದಿ ಅವರನ್ನು ಸೋಲಿಸುವುದರಿಂದ ಕಾಂಗ್ರೆಸ್ ಅನ್ನು ಬಲಗೊಳಿಸಲು ಸಾಧ್ಯವಿಲ್ಲ. ತಮ್ಮ ಮತ್ತು ಸೋನಿಯಾ ಗಾಂಧಿ ಅವರ ಭೇಟಿಯು ಕಾಂಗ್ರೆಸ್ ಸೇರುವ ಉದ್ದೇಶ ಆಗಿರಲಿಲ್ಲ. ಹಾಗೆಯೇ ಯಾವುದೇ ಪಕ್ಷದ ವಿರುದ್ಧ ಕೂಡ ಸಲಹೆ ನೀಡಿಲ್ಲ. ಬದಲಾಗಿ ಸ್ವಯಂ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳು ಏನು ಎಂಬ ಬಗ್ಗೆ ಮಾತ್ರ ಸಲಹೆ ನೀಡುವುದಾಗಿತ್ತು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

from India & World News in Kannada | VK Polls https://ift.tt/eKxMCQt

ಉಷ್ಣ ಮಾರುತಕ್ಕೆ ಅರ್ಧ ಭಾರತ ತತ್ತರ: ದಕ್ಷಿಣ ಭಾರತಕ್ಕೆ ಕೊಂಚ ಮಳೆಯ ಸಮಾಧಾನ

ದೇಶದ ಇತಿಹಾಸದಲ್ಲೇ ಸರಾಸರಿ ಗರಿಷ್ಠ ತಾಪಮಾನವು 2022ರ ಏಪ್ರಿಲ್‌ನಲ್ಲಿ ದಾಖಲಾಗಿದೆ. ಇದು 122 ವರ್ಷಗಳಲ್ಲೇ ಅತ್ಯಧಿಕ ತಾಪಮಾನವಾಗಿದೆ. ಮೇ ಅಂತ್ಯದವರೆಗೂ ದೇಶದಲ್ಲಿ ಸೆಖೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದಲ್ಲಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ.

from India & World News in Kannada | VK Polls https://ift.tt/OMBgIzu

ಮೋದಿ ಕುರಿತು ತಪ್ಪು ಭಾವನೆ ಮೂಡಿಸುವ ಪ್ರಯತ್ನ ಬೇಡ: ನಿವೃತ್ತ ಅಧಿಕಾರಿಗಳ ಪತ್ರ

ದೇಶದಲ್ಲಿ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಅಸಹಿಷ್ಣುತೆಯಿಂದ ನೆಮ್ಮದಿ ಕುಸಿಯುತ್ತಿದೆ. ಇದರಿಂದ ಸೌಹಾರ್ದತೆಗೆ ಪೆಟ್ಟಾಗಿ, ಒಟ್ಟಾರೆ ವ್ಯವಸ್ಥೆ ಕದಡಿದ ನೀರಿನಂತಾಗಿದೆ. ಇದನ್ನು ಸರಿಪಡಿಸುವ ದಿಸೆಯಲ್ಲಿ ಸರಕಾರ ಗಂಭೀರ ಪ್ರಯತ್ನ ಮಾಡಬೇಕು ಎಂದು ಪತ್ರ ಬರೆದಿದ್ದ ನಿವೃತ್ತ ಅಧಿಕಾರಿಗಳ ಕಳವಳಕ್ಕೆ ಪ್ರತಿಯಾಗಿ ನಿವೃತ್ತ ಅಧಿಕಾರಿಗಳ ಮತ್ತೊಂದು ತಂಡ ಕೂಡ ಪತ್ರ ಬರೆದಿದೆ. ಇದು ಪ್ರಧಾನಿ ಮೋದಿ ಸರಕಾರವನ್ನು ಸಮರ್ಥಿಸಿಕೊಂಡಿದೆ.

from India & World News in Kannada | VK Polls https://ift.tt/WLzEbqp

65 ತಾಸು, 25 ಕಾರ್ಯಕ್ರಮ: ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ

ವಿದೇಶಿ ಪ್ರವಾಸಕ್ಕೆ ಸುದೀರ್ಘ ವಿರಾಮ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಈ ವರ್ಷದ ಮೊದಲ ಪ್ರವಾಸ ಸೋಮವಾರದಿಂದ ಆರಂಭವಾಗಲಿದೆ. ಒಟ್ಟು 65 ಗಂಟೆಗಳ ಪ್ರವಾಸದಲ್ಲಿ ಅವರು ಮೂರು ದೇಶಗಳಿಗೆ ಅವರು ಭೇಟಿ ನೀಡಲಿದ್ದು, 25 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಅವರು ಹತ್ತಾರು ದೇಶಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ.

from India & World News in Kannada | VK Polls https://ift.tt/Hh4jTQ8

ಪಟಿಯಾಲ ಸಂಘರ್ಷ: ಪಂಜಾಬ್ ಪೊಲೀಸ್‌ ಅಧಿಕಾರಿಗಳ ಎತ್ತಂಗಡಿ

ಪಂಜಾಬ್‌ನ ಪಟಿಯಾಲದಲ್ಲಿ ಖಲಿಸ್ತಾನ ವಿರೋಧಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಶುಕ್ರವಾರ ಸಂಘರ್ಷ ನಡೆದ ಬಳಿಕ, ಇನ್ನೂ ಪರಿಸ್ಥಿತಿ ತಣ್ಣಗಾಗಿಲ್ಲ. ಸಂಘರ್ಷದ ಬೆನ್ನಲ್ಲೇ ಜನರಲ್ಲಿ ಭೀತಿ ಮೂಡಿದ್ದು, ಪ್ರಮುಖ ಬೀದಿಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಈ ಮಧ್ಯೆ ರಕಾರ ಭದ್ರತಾ ವೈಫಲ್ಯದ ಆರೋಪದ ಮೇರೆಗೆ ಮೂವರು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ದಿಢೀರ್‌ ಎತ್ತಂಗಡಿ ಮಾಡಿದೆ. ಗಲಭೆಗ್ರಸ್ತ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ವದಂತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.

from India & World News in Kannada | VK Polls https://ift.tt/uHwj70I

ರವೀಂದ್ರ ಜಡೇಜಾ ಯೂ ಟರ್ನ್‌; ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ!

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಸತತ ವೈಫಲ್ಯ ಅನುಭವಿಸಿರುವ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ತಂಡದ ನಾಯಕತ್ವವನ್ನು ಎಂಎಸ್‌ ಧೋನಿಗೆ ಬಿಟ್ಟುಕೊಟ್ಟಿದ್ದಾರೆ ಹಾಗೂ ಮುಂದಿನ ಪಂದ್ಯಗಳ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್‌ ಕಿಂಗ್ಸ್ ಟ್ವೀಟ್‌ ಮಾಡಿದೆ. ಅದರಂತೆ ರವೀಂದ್ರ ಜಡೇಜಾ ಅವರ ಮನವಿಯನ್ನು ಎಂಎಸ್‌ ಧೋನಿ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದ ಸಿಎಸ್‌ಕೆ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/hNYf0LV

ಪಿಎಸ್ ಐ ಹುದ್ದೆಗೆ ಮರು ಪರೀಕ್ಷೆ; ಅತಂತ್ರದಲ್ಲಿ ಅಭ್ಯರ್ಥಿಗಳು, ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಸಿದ್ಧತೆ!

ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಆಗಿರುವ ಅಕ್ರಮದ ಹಿನ್ನೆಲೆಯಲ್ಲಿ ಹುದ್ದೆಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಪರಿಣಾಮ ಅಭ್ಯರ್ಥಿಗಳು ಅತಂತ್ರದಲ್ಲಿ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.

from India & World News in Kannada | VK Polls https://ift.tt/D7nM6qg

ಪಿಎಸ್‌ಐ ಹುದ್ದೆಗೆ ಮರು ಪರೀಕ್ಷೆ: ಸರ್ಕಾರದಿಂದ ಡ್ಯಾಮೇಜ್ ಕಂಟ್ರೋಲ್‌ ತಂತ್ರವಷ್ಟೆ! ದಿನೇಶ್ ಗುಂಡೂರಾವ್

ಪಿಎಸ್‌ಐ ಹುದ್ದೆಗೆ ಮರು ಪರೀಕ್ಷೆ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್‌ ತಂತ್ರ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

from India & World News in Kannada | VK Polls https://ift.tt/tUsblq3

ನೆಲ್ಯಾಡಿ: ಮೇಯಲು ಬಿಟ್ಟಿದ್ದ ಕರುವನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಗುಂಪಿನಿಂದ ದಾಳಿ ಆರೋಪ!

ಏಪ್ರಿಲ್ 28ರ ಬೆಳಿಗ್ಗೆ ಮಹಿಳೆಯನ್ನು ವಿಚಾರಿಸಿದಾಗ ಮಹಿಳೆಯು ತನ್ನ ಕೆಲಸದಾಳು ಮೇಲೆ ನಡೆದ ಹಲ್ಲೆ ಹಾಗೂ ಕೊಕ್ಕಡದ ಯುವಕರ ತಂಡ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ತಿಳಿಸಿದ್ದು ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಯುವಕರ ತಂಡವನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಯುವಕರನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಯುವಕರ ತಂಡ ತಾವು ಯಾವುದೇ ರೀತಿ ಹಲ್ಲೆ ನಡೆಸಿಲ್ಲ. ಘಟನಾ ಸ್ಥಳದಲ್ಲಿ ಯಾವ ಮಹಿಳೆಯನ್ನು ನಾವು ನೋಡಿಲ್ಲ ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/XHDEn2Y

ಬೆಲೆ ಏರಿಕೆ ಎಫೆಕ್ಟ್‌: ಹೋಟೆಲ್‌ಗಳಲ್ಲಿ ಕರಿದ ಎಣ್ಣೆ ಮರುಬಳಕೆ; ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ

ಈ ಹಿಂದೆ ಕರಿದ ಹಾಗೂ ಅಥವಾ ಬಳಸಿದ ಎಣ್ಣೆಯನ್ನು ಚರಂಡಿಯಲ್ಲಿ ಸುರಿದು ಬಿಡುತ್ತಿದ್ದರು. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ಚರಂಡಿ ಸಚ್ಛಗೊಳಿಸಲು ನಗರಸಭೆ ಸಿಬ್ಬಂದಿ ಪರದಾಡುತ್ತಿದ್ದರು. ಯಾವ ಹೋಟೆಲ್‌ಗಳು ಬಳಸಿದ ಎಣ್ಣೆಯನ್ನು ಚೆಲ್ಲದೆ ಹಾಗೂ ನಗರಸಭೆ ತಾಜ್ಯ ಘಟಕಕ್ಕೆ ನೀಡದ ಪರಿಣಾಮ ಈ ಅನುಮಾನವು ವ್ಯಕ್ತವಾಗಿದೆ. ಆದರೆ ಇದೀಗ ಬಹುತೇಕ ಹೋಟೆಲ್‌ಗಳಲ್ಲಿ ಪದಾರ್ಥಗಳನ್ನು ಕರಿಯಲು ಬಳಸಿದ ಎಣ್ಣೆಯನ್ನೇ ಮರು ಬಳಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

from India & World News in Kannada | VK Polls https://ift.tt/Dkt9WIA

ಹುಬ್ಬಳ್ಳಿ ಗಲಭೆ ಆರೋಪಿಗಳ ಕುಟುಂಬಕ್ಕೆ ಧನ ಸಹಾಯ; ಜಮೀರ್ ನಡೆಯಿಂದ ಕಾಂಗ್ರೆಸ್‌ಗೆ ಮುಜುಗರ!

ಹುಬ್ಬಳ್ಳಿ ಗಲಭೆ ಆರೋಪಿಗಳ ಕುಟುಂಬಕ್ಕೆ ಧನ ಸಹಾಯ ನೀಡಲು ಮುಂದಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ನಡೆಯಿಂದ ಕಾಂಗ್ರೆಸ್‌ಗೆ ಮುಜುಗರಕ್ಕೊಳಗಾಗಿದೆ. ಈ ಕುರಿತಾಗಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

from India & World News in Kannada | VK Polls https://ift.tt/jKvhfXL

ಕಮಲದತ್ತ ಸುಮಲತಾ: ಮಗನ ರಾಜಕೀಯ ಭವಿಷ್ಯದ ಭದ್ರತೆಗೆ ಬಿಜೆಪಿ ಸೇರ್ತಾರಾ ಅಂಬರೀಷ್ ಪತ್ನಿ?

ಮಂಡ್ಯ ಜಿಲ್ಲೆಯ ರಾಜಕಾರಣದ ವಾತಾವರಣ ಬದಲಾಗುತ್ತಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಮುಂದಾಗಿರುವ ಬಿಜೆಪಿ, ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಇತರೆ ಪಕ್ಷಗಳ ಪ್ರಮುಖ ರಾಜಕೀಯ ನಾಯಕರು, ಉದ್ಯಮಿಗಳನ್ನು ಸೆಳೆದು ಪಕ್ಷವನ್ನು ಬಲಿಷ್ಠಗೊಳಿಸಲು ಕಾರ‍್ಯತಂತ್ರ ರೂಪಿಸಿದೆ.

from India & World News in Kannada | VK Polls https://ift.tt/JHS4IqC

ರಾಜಸ್ಥಾನದ ಹಾಲಿ ಸಿಎಂ ಶೀಘ್ರದಲ್ಲೇ ರಾಜೀನಾಮೆ ಸಾಧ್ಯತೆ; ಎಐಸಿಸಿಗೆ ಅಶೋಕ್‌ ಗೆಹ್ಲೋಟ್‌ ಸಾರಥ್ಯ?

ರಾಜಸ್ಥಾನದಲ್ಲೇ ಅಶೋಕ್ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಕುಸ್ತಿ ನಡೆಯುತ್ತಿದೆ. ತಮಗೆ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕೆಂದು ಪೈಲಟ್‌ ಬಿಗಿಪಟ್ಟು ಹಾಕಿದ್ದಾರೆ. ಈ ಹಿಂದೆಯೂ ಮುನಿಸಿಕೊಂಡಿದ್ದ ಪೈಲಟ್‌ ಪಕ್ಷ ತೊರೆಯುವ ಹಂತಕ್ಕೆ ಹೋಗಿದ್ದರು. ನಂತರ ಮನವೊಲಿಸಿ ಅವರನ್ನು ಉಳಿಸಿಕೊಳ್ಳಲಾಗಿತ್ತು. ಮಧ್ಯ ಪ್ರದೇಶದ ರಾಜಮನೆತನದ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದಿಂದ ಹೊರ ಹೋದ ಬಳಿಕ ಮತ್ತೊಬ್ಬ ಅಂತಹ ಯುವ ನಾಯಕನನ್ನು ಕಳೆದುಕೊಳ್ಳಲು ಕಾಂಗ್ರೆಸ್‌ ಸಿದ್ಧವಿಲ್ಲ. ಹಾಗಾಗಿ ರಾಜಸ್ಥಾನದ ವಿಚಾರದಲ್ಲಿ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

from India & World News in Kannada | VK Polls https://ift.tt/gik6bTv

ರಾಜಕೀಯದ ಕಿಡಿ ಹೊತ್ತಿಸಿದ ಕಲ್ಲಿದ್ದಲು; ಬಾಕಿ ಪಾವತಿ ಕುರಿತು ಕೇಂದ್ರಕ್ಕೆ ಮಹಾರಾಷ್ಟ್ರ ತಿರುಗೇಟು

Coal controversy: ಬೇಸಿಗೆ ಹಾಗೂ ಕಲ್ಲಿದ್ದಲು ದಾಸ್ತಾನು ಕೊರತೆಯಿಂದ ದೇಶಾದ್ಯಂತ ವಿದ್ಯುತ್‌ ಕೊರತೆಯುಂಟಾದ ಬೆನ್ನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಆರಂಭಿಸಲಾಗಿದೆ. ಸಿಐಎಲ್‌ನಲ್ಲಿ ಕಳೆದ ಬಾರಿಯ ಏಪ್ರಿಲ್‌ನಲ್ಲಿ ಇದ್ದ ಕಲ್ಲಿದ್ದಲು ಉತ್ಪಾದನೆಗಿಂತ ಈ ಬಾರಿ ಶೇ.27.2ರಷ್ಟು ಉತ್ಪಾದನೆ ಏರಿಕೆ ಮಾಡಲಾಗಿದೆ. ಹಾಗೆಯೇ, ಕಳೆದ ಬಾರಿಗಿಂತ ಈ ಬಾರಿ ಕಲ್ಲಿದ್ದಲು ಸಾಗಣೆಯನ್ನೂ ಶೇ.5.8ರಷ್ಟು ಏರಿಕೆ ಮಾಡಲಾಗಿದೆ.

from India & World News in Kannada | VK Polls https://ift.tt/rQjnDyi

ಡೆಲ್ಲಿ ಪರ ಡೇವಿಡ್‌ ವಾರ್ನರ್‌ ರನ್‌ ಗಳಿಸಿದಾಗಲೆಲ್ಲಾ ಸನ್‌ರೈಸರ್ಸ್‌ಗೆ ನೋವಾಗುತ್ತದೆ ಎಂದ ಸೆಹ್ವಾಗ್‌!

ಸನ್‌ರೈಸರ್ಸ್‌ ಹೈದರಾಬಾದ್‌ ತೊರೆದು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿಯವರೆಗೂ ಆಡಿರುವ 6 ಪಂದ್ಯಗಳಲ್ಲಿ 52.20ರ ಸರಾಸರಿಯಲ್ಲಿ 261 ರನ್‌ ಗಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಟೀಮ್‌ ಇಂಡಿಯಾ ಮಾಜಿ ಆರಂಭಿಕ ವಿರೇಂದ್ರ ಸೆಹ್ವಾಗ್‌, ಡೆಲ್ಲಿ ಕ್ಯಾಪಿಟಲ್ಸ್‌ ಪರ ಡೇವಿಡ್‌ ವಾರ್ನರ್‌ ರನ್‌ ಗಳಿಸಿದಾಗಲೆಲ್ಲಾ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ನೋವಾಗುತ್ತದೆ ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/DlVJNM4

Psi recruitment scam: ಮಾಸ್ಟರ್‌ಮೈಂಡ್ ದಿವ್ಯಾ ಹಾಗರಗಿ ವಿರುದ್ಧ ಇರುವ ಆರೋಪಗಳೇನು?

545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಬಂಧನ ಆಗಿದೆ. ಶುಕ್ರವಾರ ಸಿಐಡಿ ಅಧಿಕಾರಿಗಳು ಪುಣೆಯಲ್ಲಿ ಬಂಧನ ಮಾಡಿದ್ದಾರೆ. ಆದರೆ ದಿವ್ಯಾ ವಿರುದ್ಧ ಇರುವ ಆರೋಪಗಳೇನು?

from India & World News in Kannada | VK Polls https://ift.tt/5olMLVn

ಕಲ್ಲಿದ್ದಲಿನ ಕೊರತೆ: ರಾಜಧಾನಿಯಲ್ಲಿ ಮೆಟ್ರೋ, ಆಸ್ಪತ್ರೆಗಳಿಗೂ ವಿದ್ಯುತ್ ಕಡಿತದ ಭೀತಿ

ಪ್ರಸ್ತುತ ದಿಲ್ಲಿಯಲ್ಲಿನ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ ಶೇ 25-30ರಷ್ಟು ವಿದ್ಯುತ್ ಅನ್ನುದಾದ್ರಿ-II ಮತ್ತು ಉಂಚಹಾರ್ ವಿದ್ಯುತ್ ಸ್ಥಾವರಗಳು ಪೂರೈಕೆ ಮಾಡುತ್ತಿವೆ. ಆದರೆ ವ್ಯಾಪಕ ಕಲ್ಲಿದ್ದಲು ಅಭಾವದಿಂದ ಬಹುತೇಕ ಎಲ್ಲ ಘಟಕಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಇದರಿಂದ ಮೆಟ್ರೋ, ಆಸ್ಪತ್ರೆಯಂತಹ ಅತಿ ಪ್ರಮುಖ ವಿಭಾಗಗಳಿಗೆ ವಿದ್ಯುತ್ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ದಿಲ್ಲಿ ಸರ್ಕಾರ ಎಚ್ಚರಿಕೆ ನೀಡಿದೆ. ಉಷ್ಣ ವಿದ್ಯುತ್ ಘಟಕಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯತೆಯನ್ನು ನೋಡಿಕೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.

from India & World News in Kannada | VK Polls https://ift.tt/3pJTmh9

ನನ್ನ ಅಣ್ಣನಿಗೆ ಸಮಾನರಾದ ಈ ಬೌಲರ್‌ ಪರ್ಪಲ್‌ ಕ್ಯಾಪ್‌ ಗೆಲ್ಲಬೇಕೆಂದ ಕುಲ್ದೀಪ್ ಯಾದವ್‌!

ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸ್ಪಿನ್ನರ್ ಕುಲ್ದೀಪ್ ಯಾದವ್, ಇಲ್ಲಿಯವರೆಗೂ 17 ವಿಕೆಟ್‌ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗುರುವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 4 ವಿಕೆಟ್‌ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಕುಲ್ದೀಪ್‌ ಯಾದವ್‌ ತಮ್ಮ ಭಾರತ ತಂಡದ ಸಹ ಸ್ಪಿನ್ನರ್‌ ಯುಜ್ವೇಂದ್ರ ಚಹಲ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ln28MqW

RCB vs GT: ಗುಜರಾತ್ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಈ ಒಂದು ಬದಲಾವಣೆ ಅಗತ್ಯ!

ಸತತ ಎರಡು ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಹಾಗಾಗಿ ಶನಿವಾರ ಮುಂಬೈನ ಬ್ರಬೋರ್ನ್‌ ಸ್ಟೇಡಿಯಂನಲ್ಲಿ ಪಾಯಿಂಟ್ಸ್ ಟೇಬಲ್‌ ಟಾಪರ್‌ ಗುಜರಾತ್‌ ಟೈಟನ್ಸ್‌ ವಿರುದ್ಧ 2022ರ ಐಪಿಎಲ್‌ 43ನೇ ಪಂದ್ಯದಲ್ಲಿ ಆರ್‌ಸಿಬಿ ಸೆಣಸಲಿದೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಇನ್ನುಳಿದ ಐದೂ ಪಂದ್ಯಗಳು ಆರ್‌ಸಿಬಿ ಪಾಲಿಗೆ ನಿರ್ಣಾಯಕವಾಗಿದೆ. ಕನಿಷ್ಠ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಪಡೆಯಬೇಕಾದ ಅಗತ್ಯವಿದೆ. ಅದರಲ್ಲೂ ಅತ್ಯುತ್ತಮ ರನ್‌ರೇಟ್‌ನೊಂದಿಗೆ ಗೆಲುವು ಪಡೆಯಬೇಕಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/BO6RNZU

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕರೆಂಟ್‌ ಕಣ್ಣಾಮುಚ್ಚಾಲೆ! ಬೇಸಿಗೆ, ಕಲ್ಲಿದ್ದಲು ಕೊರತೆಯಿಂದ ಲೋಡ್‌ ಶೆಡ್ಡಿಂಗ್‌

ದೇಶದಲ್ಲಿ ಒಂದು ಕಡೆ ಬೇಸಿಗೆ ಹಾಗೂ ಬಿಸಿ ಗಾಳಿಯಿಂದ ಜನ ತತ್ತರಿಸಿದ್ದರೆ ಮತ್ತೊಂದೆಡೆ ವಿದ್ಯುತ್‌ ಬರ ಉಂಟಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತಿದ್ದು, ನಾಗರಿಕರು ಮನೆಯೊಳಗೆ ಇರಲೂ ಆಗದೆ, ಹೊರಗೂ ಬರಲಾಗದೆ ಪರದಾಡುವಂತಾಗಿದೆ.

from India & World News in Kannada | VK Polls https://ift.tt/zq4tBvS

ಟಿವಿಯಲ್ಲಿ ಕಾಣಿಸಿಕೊಳ್ಳಲು ಮನೆಬಿಟ್ಟ 4 ಬಾಲಕಿಯರು; ಚಾಲಕನ ಸಮಯ ಪ್ರಜ್ಞೆಯಿಂದ ಪೋಷಕರ ಮಡಿಲು ಸೇರಿದ್ರು

ಬಳ್ಳಾರಿ ಮೂಲದ 14 ವರ್ಷ, 10 ವರ್ಷದ ಇಬ್ಬರು ಹಾಗೂ 6 ವರ್ಷದ ಬಾಲಕಿ ಸೇರಿ ನಾಲ್ವರು ಏ.26ರಂದು ಮನೆಯಿಂದ ಏಕಾಏಕಿ ಕಾಣೆಯಾಗಿ ಆತಂಕ ಮೂಡಿಸಿದ್ದರು. ಈ ಕುರಿತು ಪಾಲಕರು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹರಿಬಿಡುವ ಮೂಲಕ ಬಾಲಕಿಯರ ಪತ್ತೆಗೆ ಮನವಿ ಮಾಡಿದ್ದರು. ಅಲ್ಲದೆ, ನಾನಾ ಭಾಗಗಳಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆ ಬಳಿಕ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು.

from India & World News in Kannada | VK Polls https://ift.tt/JR7LD5T

2022ರ ಐಪಿಎಲ್‌ ಟೂರ್ನಿ ತೊರೆಯುವಂತೆ ವಿರಾಟ್‌ ಕೊಹ್ಲಿಗೆ ರವಿ ಶಾಸ್ತ್ರಿ ಸಲಹೆ!

ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಮಹತ್ವದ ಸಲಹೆ ನೀಡಿದ್ದಾರೆ. ತಮ್ಮ ವೈಫಲ್ಯವನ್ನು ಮೆಟ್ಟಿ ನಿಂತು ಮುಂದಿನ 6 ರಿಂದ 7 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಬೇಕೆಂದು ಬಯಸಿದರೆ 2022ರ ಐಪಿಎಲ್‌ ಟೂರ್ನಿಯನ್ನು ತೊರೆಯಬೇಕೆಂದು ಶಾಸ್ತ್ರಿ ಸಲಹೆ ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/VaB32Jq

ಅಸೆಂಬ್ಲಿ ಎಲೆಕ್ಷನ್‌ಗೆ ಜೂನ್‌ನಿಂದಲೇ ಕಾಂಗ್ರೆಸ್‌ ಅಖಾಡ ಪ್ರವೇಶ: ರಾಜ್ಯದಲ್ಲಿ ನಡೆಯಲಿದೆ ಚಿಂತನ ಶಿಬಿರ

ಕಳೆದ ಲೋಕಸಭೆ ಚುನಾವಣೆ ಸೋಲಿನ ಬಳಿಕ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಬರಖಾಸ್ತುಗೊಳಿಸಲಾಗಿತ್ತು. ಅದಾದ ಬಳಿಕ ಹೊಸಬರ ನೇಮಕವೇ ಆಗಿರಲಿಲ್ಲ. ಕಡೆಗೂ ಕೆಪಿಸಿಸಿಗೆ ಹೊಸ ತಂಡವನ್ನು ಇತ್ತೀಚೆಗಷ್ಟೇ ಎಐಸಿಸಿ ನೇಮಿಸಿ ಕೊಟ್ಟಿತ್ತು. ಈ ಪದಾಧಿಕಾರಿಗಳೊಂದಿಗೆ ಪ್ರಥಮ ಬಾರಿಗೆ ನಡೆದ ಮುಖಾಮುಖಿ ಇದಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಳಿ ಬಿಟ್ಟು ಕೆಲಸ ಮಾಡುವಂತೆ ಪದಾಧಿಕಾರಿಗಳಿಗೆ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ತಾಕೀತು ಮಾಡಿದ್ದಾರೆ.

from India & World News in Kannada | VK Polls https://ift.tt/5Datrq9

ಅಧಿಕ ಬಡ್ಡಿ ವಸೂಲಿ: ಚೀನಾ ಮೂಲದ ಸಾಲದ ಆ್ಯಪ್‌ಗಳ 6.17 ಕೋಟಿ ರೂ. ಜಪ್ತಿ

ಚೀನಾ ಪ್ರಜೆಗಳ ಅನಧಿಕೃತ ವಹಿವಾಟಿಗೆ ಇಲ್ಲಿನ ಕೆಲವು ಚಾರ್ಟೆಡ್‌ ಅಕೌಂಟೆಂಟ್‌ಗಳು ಕೆವೈಸಿ ದಾಖಲೆಗಳನ್ನು ಒದಗಿಸುತ್ತಿದ್ದರು. ಇವುಗಳ ವಹಿವಾಟಿಗೆ ಚೀನಾದಿಂದ ಆರ್ಥಿಕ ನೆರವು ನೀಡಲಾಗುತ್ತಿತ್ತು. ಆ್ಯಪ್‌ಗಳ ಆಮಿಷಕ್ಕೆ ಸಿಲುಕಿ ಸಾಲ ಪಡೆದ ಬಳಿಕ ನಿಯಮಾವಳಿಗಳನ್ನು ಉಲ್ಲಂಘಿಸಿ ದುಪ್ಪಟ್ಟು ಬಡ್ಡಿ ದರ ವಸೂಲಿ ಮಾಡಲಾಗುತ್ತಿತ್ತು. ಈ ಇಡೀ ವ್ಯವಹಾರ ಚೀನಾ ಪ್ರಜೆಗಳ ನಿರ್ದೇಶನದಲ್ಲಿಯೇ ನಡೆಯುತ್ತಿತ್ತು. ಜತೆಗೆ ಎನ್‌ ಬಿ ಎ ಫ್‌ ಸಿ ನಿಯಮಗಳ ಉಲ್ಲಂಘನೆಯೂ ಆಗುತ್ತಿತ್ತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

from India & World News in Kannada | VK Polls https://ift.tt/MiTBqzp

ವ್ಯಾಕ್ಸಿನ್‌ ಬಗ್ಗೆ ಜನರ ಉದಾಸೀನ: ಮನೆಗೆ ತೆರಳಿ ಲಸಿಕೆ ಹಾಕಿಸಲು ಸಜ್ಜಾದ ಬಿಬಿಎಂಪಿ

ಬೆಂಗಳೂರಿನಲ್ಲಿ ಎರಡನೇ ಡೋಸ್‌ಗೆ ಅರ್ಹರಾದ 91 ಲಕ್ಷ ಜನರ ಪೈಕಿ, 89 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಪ್ರಸ್ತುತ ಬಿಬಿಎಂಪಿಯು ದಿನಕ್ಕೆ 3,000 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ದಿಲ್ಲಿ ನಂತರ, ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ದಿಲ್ಲಿಯಲ್ಲಿ 3,975 ಪ್ರಕರಣಗಳಿದ್ದರೆ, ಬೆಂಗಳೂರಿನಲ್ಲಿ 1,610 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಎರಡನೇ ಡೋಸ್‌ ಪಡೆಯದೇ ಇರುವವರ ಮನೆಗೆ ಹೋಗಿ ಲಸಿಕೆ ನೀಡುತ್ತಿದೆ.

from India & World News in Kannada | VK Polls https://ift.tt/fS05sJD

ವ್ಲಾಡಿಮಿರ್‌ ಪುಟಿನ್‌ಗೆ ಗಂಭೀರ ಕಾಯಿಲೆ ಶಂಕೆ! ಊದಿಕೊಂಡ ಮುಖ, ನಡುಗುತ್ತಿರುವ ಕೈ ವಿಡಿಯೋ ವೈರಲ್‌

ಉಕ್ರೇನ್‌ ಮೇಲೆ ಆಕ್ರಮಣಕ್ಕೆ ಆದೇಶಿಸಿ ಜಗತ್ತಿಗೇ ಆತಂಕ ತಂದೊಡ್ಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೀಗ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿವೆ. ಊದಿಕೊಂಡ ಮುಖ, ನಡುಗುತ್ತಿರುವ ಕೈ ವಿಡಿಯೋಗಳು ವೈರಲ್‌ ಆಗಿದ್ದು, ಸರ್ಜರಿ ಮಾಡಿಸಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

from India & World News in Kannada | VK Polls https://ift.tt/xoqDOkJ

ಥರ್ಡ್‌ ಪಾರ್ಟಿ ಆ್ಯಪ್‌ ಮೂಲಕ ವಂಚಿಸಲಿದ್ದಾರೆ ಸೈಬರ್‌ ಖದೀಮರು..! ಒಟಿಪಿ ಕದಿಯಲು ಕಳ್ಳ ಮಾರ್ಗ..!

ಥರ್ಡ್‌ ಪಾರ್ಟಿ ಆ್ಯಪ್‌ಗಳ ಮೂಲಕ ಮೊಬೈಲ್‌ ಅನ್ನು ಕಂಟ್ರೋಲ್‌ಗೆ ಪಡೆಯುವ ವಂಚಕರು, ಬಳಕೆದಾರರ ನೆಟ್‌ ಬ್ಯಾಂಕ್‌ ವಿವರ, ಆಧಾರ್‌ ನಂಬರ್‌ ಹಾಗೂ ಪಾನ್‌ ನಂಬರ್‌ ಪಡೆಯುತ್ತಾರೆ. ಅದನ್ನು ನಮೂದಿಸಿ ಬ್ಯಾಂಕ್‌ನಲ್ಲಿ ಹಣ ವರ್ಗಾವಣೆಗೆ ಮೊಬೈಲ್‌ ಒಟಿಪಿ ಕಳುಹಿಸುತ್ತಾರೆ. ಈ ಒಟಿಪಿಯನ್ನು ಬಳಕೆದಾರರ ಗಮನಕ್ಕೂ ಬಾರದಂತೆ ಪಡೆದು ನಂತರ ಅದನ್ನು ಡಿಲೀಟ್‌ ಮಾಡುತ್ತಾರೆ. ಬ್ಯಾಂಕ್‌ನಲ್ಲಿರುವ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ತಮ್ಮ ಖಾತೆಯಲ್ಲಿ ಹಣ ಕಡಿತವಾದ ಬಳಿಕ ಗ್ರಾಹಕ ಬ್ಯಾಂಕ್‌ಗೆ ತೆರಳಿ ವಿಚಾರಣೆ ನಡೆಸಿದಾಗಲೇ ತಾನು ವಂಚನೆಗೊಳಗಾಗಿರುವುದು ಗೊತ್ತಾಗುತ್ತದೆ.

from India & World News in Kannada | VK Polls https://ift.tt/pqXw0b2

ಕೋವಿಡ್ ಏರಿಕೆ ನಡುವೆ ಮತ್ತೊಂದು ಸೋಂಕು!: H3N8 ಹಕ್ಕಿ ಜ್ವರದ ಮೊದಲ ಮಾನವ ಪ್ರಕರಣ ಚೀನಾದಲ್ಲಿ ಪತ್ತೆ

ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಏರಿಕೆ ನಡುವೆ, ಎಚ್‌3ಎನ್8 ಹಕ್ಕಿ ಜ್ವರದ ತಳಿಯ ಮೊದಲ ಮಾನವ ಪ್ರಕರಣ ವರದಿಯಾಗಿದೆ. ಈವರೆಗೂ ಈ ತಳಿ ಸೋಂಕು ಮನುಷ್ಯರಲ್ಲಿ ಕಂಡುಬಂದಿರಲಿಲ್ಲ. ನಾಲ್ಕು ವರ್ಷದ ಬಾಲಕನಲ್ಲಿ ಸೋಂಕು ಪತ್ತಯಾಗಿದೆ. ಆದರೆ ಇದು ಮನುಷ್ಯರಲ್ಲಿ ಅಪಾಯಕಾರಿ ಪರಿಣಾಮ ಉಂಟುಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

from India & World News in Kannada | VK Polls https://ift.tt/0g9Ghsr

ರಾಜಸ್ಥಾನ್‌ ವಿರುದ್ಧ ಸೋತ ಆರ್‌ಸಿಬಿ ಪ್ಲೇಆಫ್ಸ್‌ ಪ್ರವೇಶಿಸಲು ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು?

ಮಂಗಳವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 29 ರನ್‌ಗಳ ಹೀನಾಯ ಸೋಲು ಅನುಭವಿಸಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 10 ಅಂಕಗಳೊಂದಿಗೆ 2022ರ ಐಪಿಎಲ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಇನ್ನುಳಿದ ಐದು ಪಂದ್ಯಗಳು ಆರ್‌ಸಿಬಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಪ್ಲೇಆಫ್ಸ್‌ ಪ್ರವೇಶಿಸಬೇಕೆಂದರೆ ಬೆಂಗಳೂರು ತಂಡ ಇನ್ನೂ ಮೂರು ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ. ಒಂದು ಇನ್ನುಳಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆದ್ದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸುವ ಸಾಧ್ಯತೆ ಇದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/VDOHMyW

ತಂಜಾವೂರಿನಲ್ಲಿ ಭೀಕರ ಅವಘಡ: ರಥೋತ್ಸವದ ವೇಳೆ ವಿದ್ಯುತ್ ಹರಿದು ಕನಿಷ್ಠ 11 ಮಂದಿ ದುರ್ಮರಣ

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಲಿಮೇಡುವಿನ ಅಪ್ಪಾರ್ ಮದಂ ದೇವಸ್ಥಾನದಲ್ಲಿ ರಥೋತ್ಸವ ವೇಳೆ ವಿದ್ಯುತ್ ತಂತಿ ತಗುಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ.

from India & World News in Kannada | VK Polls https://ift.tt/LtvxSgq

IPL 2022: ವಿರಾಟ್‌ ಕೊಹ್ಲಿಯನ್ನು ಕೈ ಬಿಡುವುದು ಸೂಕ್ತವೆಂದ ಆರ್‌ಪಿ ಸಿಂಗ್‌!

ಮಂಗಳವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ನ ಮೈದಾನದಲ್ಲಿ ನಡೆದಿದ್ದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯದಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೋಲು ಅನುಭವಿಸಿತ್ತು. ಅದರಲ್ಲೂ ವಿರಾಟ್‌ ಕೊಹ್ಲಿ 10 ಎಸೆತಗಳಲ್ಲಿ ಕೇವಲ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಬಗ್ಗೆ ಮಾತನಾಡಿದ ಮಾಜಿ ವೇಗಿ ಆರ್‌ಪಿ ಸಿಂಗ್‌, ಮುಂದಿನ ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರೆ, ಅವರನ್ನು ಬೆಂಚ್ ಕಾಯಿಸಬೇಕೆಂದು ಸಲಹೆ ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iJzL7Vj

ಆರ್‌ಸಿಬಿ vs ಆರ್‌ಆರ್‌ ಪಂದ್ಯದಲ್ಲಿ ಹರ್ಷಲ್ ಪಟೇಲ್‌-ರಿಯಾನ್ ಪರಾಗ್ ಕಿರಿಕ್!

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಿದ್ದಾಜಿದ್ದಿನ ಪೈಪೋಟಿ ನಡೆಸಿತು. ಮಂಗಳವಾರ ನಡೆದ ಲೋ ಸ್ಕೋರಿಂಗ್‌, ಹೈ-ವೋಲ್ಟೇಜ್‌ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯಬೇಕಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಆಸರೆಯಾಗಿ ನಿಂತ ಯುವ ಆಲ್‌ರೌಂಡರ್‌ ರಿಯಾನ್‌ ಪರಾಗ್‌, ತಮ್ಮ ಐಪಿಎಲ್‌ ವೃತ್ತಿಬದುಕಿನ ಶ್ರೇಷ್ಠ ಪ್ರದರ್ಶನ ಹೊರತಂದು 31 ಎಸೆತಗಳಲ್ಲಿ ಅಜೇಯ 56 ರನ್‌ಗಳನ್ನು ಚೆಚ್ಚಿದರು. ಅದರಲ್ಲೂ ಆರ್‌ಸಿಬಿ ವೇಗಿ ಹರ್ಷಲ್‌ ಪಟೇಲ್‌ ಎಸೆದ 20ನೇ ಓವರ್‌ ಒಂದರಲ್ಲೇ 18 ರನ್‌ ಸಿಡಿಸಿ, ತಂಡಕ್ಕೆ ಗೌರವದ ಮೊತ್ತ ತಂದುಕೊಟ್ಟರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/vjiNyTd

ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ಸುಗ್ಗಿ! 3 ರೂ.ನಲ್ಲಿ 2 ರೂ. ಹಾಲು ಉತ್ಪಾದಕರಿಗೆ ಎಂದ ಬಾಲಚಂದ್ರ ಜಾರಕಿಹೊಳಿ

ಹಾಲಿನ ದರ ಹೆಚ್ಚಳದ ಬಗ್ಗೆ ಕರ್ನಾಟಕದಲ್ಲಿ ಚರ್ಚೆಯಾಗುತ್ತಿದೆ. ಒಂದು ವೇಳೆ ಹಾಲಿನ ದರ ಹೆಚ್ಚಳವಾದರೆ ಹಾಲು ಉತ್ಪಾದಕರಿಗೆ ಲಾಭ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಪ್ರತಿ ಲೀಟರ್‌ ಹಾಲಿಗೆ 3 ರೂ. ಹೆಚ್ಚಳ ಮಾಡಿದರೆ ಹಾಲು ಉತ್ಪಾದಕರಿಗೆ 2 ರೂ. ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

from India & World News in Kannada | VK Polls https://ift.tt/SARv9yQ

IPL 2022: ಸಿಎಸ್‌ಕೆ ಸತತ ವೈಫಲ್ಯತೆಗೆ ಕಾರಣ ತಿಳಿಸಿದ ರವೀಂದ್ರ ಜಡೇಜಾ!

ರವಿಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದೆ. ಇಲ್ಲಿಯವರೆಗೂ ಆಡಿರುವ 8 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಇನ್ನುಳಿದ 6ರಲ್ಲಿ ಸೋಲು ಅನುಭವಿಸಿದೆ. ಸೋಮವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ 11 ರನ್‌ಗಳಿಂದ ಸಿಎಸ್‌ಕೆ ಸೋಲು ಅನುಭವಿಸಿತ್ತು. ಬಳಿಕ ಪ್ರತಿಕ್ರಿಯಿಸಿದ ರವೀಂದ್ರ ಜಡೇಜಾ, ಬ್ಯಾಟಿಂಗ್‌ ವಿಭಾಗವಾಗಿ ನಮಗೆ ಪವರ್‌ಪ್ಲೇನಲ್ಲಿ ಉತ್ತಮ ಆರಂಭ ದೊರೆಯುತ್ತಿಲ್ಲ. ಈ ಕಾರಣದಿಂದಲೇ ವೈಫಲ್ಯ ಅನುಭವಿಸುತ್ತಿದ್ದೇವೆಂದು ಹೇಳಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/BTdZ9p0

ಕೋವಿಡ್‌ ಬಳಿಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ

2020- 21ರಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ 4.62 ಲಕ್ಷದಷ್ಟಿದ್ದರೆ, ವಿದೇಶಿ ಪ್ರಯಾಣಿಕರ ಸಂಖ್ಯೆ 1.52 ಲಕ್ಷದಷ್ಟಿತ್ತು. ಈ ಎರಡೂ ವಿಭಾಗದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳಗೊಂಡಿದೆ. 2021-22ನೇ ಸಾಲಿನಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ 7.69 ಲಕ್ಷಕ್ಕೆ ಏರಿಕೆಯಾಗಿದ್ದರೆ, ವಿದೇಶಿ ಪ್ರಯಾಣಿಕರ ಸಂಖ್ಯೆ 2.43 ಲಕ್ಷಕ್ಕೆ ಹೆಚ್ಚಳಗೊಂಡಿದೆ. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕೆಲವು ಹೊಸ ಪ್ರದೇಶಗಳಿಗೆ ವಿಮಾನಯಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

from India & World News in Kannada | VK Polls https://ift.tt/Pae5qLl

ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆಯಲ್ಲಿ ಅಕ್ರಮ; ಮೈಸೂರಿನ ಅತಿಥಿ ಉಪನ್ಯಾಸಕಿಯ ಬಂಧನ

ಸೌಮ್ಯಾ ಮಾರ್ಚ್ 14 ರಂದು ಭೂಗೋಳ ಶಾಸ್ತ್ರ ವಿಷಯದ ಪರೀಕ್ಷೆ ನಡೆಯುವ ಎರಡು ಗಂಟೆಗಳ ಮುಂಚೆ ನೋಟ್‌ ಬುಕ್‌ನಲ್ಲಿ ಬರೆದಿದ್ದ 18 ಪ್ರಶ್ನೆಗಳು ಹಾಗೂ ಉತ್ತರವುಳ್ಳ ನಾಲ್ಕು ಫೋಟೊಗಳನ್ನು ತೆಗೆದು ಇನ್ನೊಬ್ಬರಿಗೆ ಕಳುಹಿಸಿದ್ದರು. ಆ ಸಂದೇಶ ಪಡೆದಿದ್ದ ಪರೀಕ್ಷಾರ್ಥಿಯೊಬ್ಬರು ಆ ಚಿತ್ರಗಳನ್ನು ಬೆಂಗಳೂರು ಮೂಲದ ಮತ್ತೊಬ್ಬರಿಗೆ ಕಳುಹಿಸಿದ್ದರು. ಆತ ಈ ಚಿತ್ರಗಳನ್ನು ಬಹಿರಂಗಪಡಿಸಿದ್ದ. ಸೌಮ್ಯಾ ಅವರ ಮೊಬೈಲ್‌ನಿಂದ ರವಾನೆಯಾಗಿದ್ದ ನಾಲ್ಕು ಇಮೇಜ್‌ನಲ್ಲಿದ್ದ 18 ಪ್ರಶ್ನೆಗಳು ಯಥಾವತ್ತಾಗಿ ಪರೀಕ್ಷೆ ಪತ್ರಿಕೆಯಲ್ಲಿ ಬಂದಿವೆ.

from India & World News in Kannada | VK Polls https://ift.tt/IhNBPcL

ಪಂಜಾಬ್‌ ವಿರುದ್ಧ ಸೋತ ಸಿಎಸ್‌ಕೆಗೆ ಪ್ಲೇಆಫ್ಸ್‌ ಚಾನ್ಸ್ ಇನ್ನೂ ಇದೆಯೇ? ಇಲ್ಲಿದೆ ಲೆಕ್ಕಾಚಾರ..

ಸೋಮವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 11 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್ ಹಾದಿ ಇನ್ನಷ್ಟು ಕಠಿಣವಾಗಿದೆ. ಪ್ರಸ್ತುತ 4 ಅಂಕಗಳನ್ನು ಕಲೆಹಾಕಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ಪ್ಲೇಆಫ್ಸ್‌ ಪ್ರವೇಶಿಸಬೇಕೆಂದರೆ ಇನ್ನುಳಿದ ಆರೂ ಪಂದ್ಯಗಳಲ್ಲಿ ಅತ್ಯುತ್ತಮ ರನ್‌ರೇಟ್‌ನೊಂದಿಗೆ ಗೆಲುವು ಪಡೆಯಬೇಕಾದ ಅಗತ್ಯವಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/O4aeoCM

ಬೆಂಗಳೂರು ಉಪನಗರ ರೈಲು ನಿರ್ಮಾಣ ಯೋಜನೆ ಕಾಮಗಾರಿ 6 ವರ್ಷಗಳಲ್ಲಿ ಮುಗಿಸಲು ಗಡುವು

ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಗೆ 2020ರ ಅಕ್ಟೋಬರ್‌ನಲ್ಲಿ ಕೇಂದ್ರ ಸರಕಾರ 15,767 ಕೋಟಿ ರೂ. ಮಂಜೂರು ಮಾಡಿತ್ತು. ಕೆಎಸ್‌ಆರ್‌ ಬೆಂಗಳೂರು ಸಿಟಿ ಸ್ಟೇಷನ್‌-ದೇವನಹಳ್ಳಿ ಕಾರಿಡಾರ್‌ ಯೋಜನೆಯನ್ನು ಚುರುಕು ಗೊಳಿಸಿ, ಮೂರು ವರ್ಷಗಳೊಳಗೆ ಪೂರ್ಣಗೊಳಿಸಬೇಕು. ಉಳಿದ ಮೂರು ಕಾರಿಡಾರ್‌ಗಳನ್ನು 6 ವರ್ಷಗಳಲ್ಲಿ ಮುಗಿಸಬೇಕೆಂದು ಕೇಂದ್ರ ಸರಕಾರ ಗಡುವು ನಿಗದಿಪಡಿಸಿದೆ. ಆದರೆ, ಈವರೆಗೆ ಕಾಮಗಾರಿ ಆರಂಭಗೊಂಡಿಲ್ಲ.

from India & World News in Kannada | VK Polls https://ift.tt/RA9QhVZ

‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡುವ ಕಾಲ ಸನ್ನಿಹಿತ! ಬಿಬಿಎಂಪಿಗೆ ಅಂದಾಜು 2,000 ಕೋಟಿ ಆದಾಯ ನಿರೀಕ್ಷೆ

ನಗರದಲ್ಲಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾಗಳನ್ನಾಗಿ ಪರಿವರ್ತಿಸುವುದರಿಂದ ಬಿಬಿಎಂಪಿಗೆ ಕೋಟ್ಯಂತರ ರೂ. ಆದಾಯ ಲಭಿಸಲಿದೆ. 6.16 ಲಕ್ಷ ಬಿ ಖಾತಾ ಸ್ವತ್ತುಗಳಿಂದ ಅಂದಾಜು 2 ಸಾವಿರ ಕೋಟಿ ರೂ. ನಿರೀಕ್ಷಿಸಲಾಗಿದೆ. ಇದರಿಂದ ಪಾಲಿಕೆಯ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಕಟ್ಟಡ ಅಥವಾ ಮನೆ ನಿರ್ಮಾಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗದೆ ಪರಿತಪಿಸುತ್ತಿರುವ ಆಸ್ತಿ ಮಾಲೀಕರಿಗೂ ಅನುಕೂಲವಾಗಲಿದೆ. ಚ.ಮೀ.ಗೆ 200- 250 ರೂ. ಶುಲ್ಕ: ಬಿ-ಖಾತಾ ಆಸ್ತಿ ಮಾಲೀಕರಿಂದ ಸುಧಾರಣಾ ಶುಲ್ಕ ಪಾವತಿಸಿಕೊಂಡು ಎ-ಖಾತೆ ನೀಡುವ ಕಾಲ ಸನ್ನಿಹಿತವಾಗಿದೆ.

from India & World News in Kannada | VK Polls https://ift.tt/BtI4kSv

ಸಿಎಸ್‌ಕೆ ಎದುರು ರಿಷಿ ಧವನ್‌ ವಿಶೇಷ ರಕ್ಷಣಾ ಕವಚ ತೊಡಲು ಇದೇ ಕಾರಣ!

ವಿಜಯ್‌ ಹಝಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮ ನಾಯಕತ್ವದಲ್ಲಿ ಹಿಮಾಚಲ ಪ್ರದೇಶ ತಂಡಕ್ಕೆ ಚಾಂಪಿಯನ್ಸ್‌ ಪಟ್ಟ ತಂದುಕೊಟ್ಟ ಅನುಭವಿ ಆಲ್‌ರೌಂಡರ್‌ ರಿಷಿ ಧವನ್‌ಗೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಆಡುವ ಮೊತ್ತ ಅವಕಾಶ ಸಿಕ್ಕಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ರಿಷಿ ಧವನ್‌, ಮುಖಕ್ಕೆ ವಿಶೇಷ ರಕ್ಷಣಾ ಕವಚ ತೊಟ್ಟು ಆಡುವ ಮೂಲಕ ಎಲ್ಲರ ಗಮನ ಸೆಳೆದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/0fagYPq

RCB vs RR: ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಈಗಾದರೂ ಅಗತ್ಯದ ಒಂದು ಬದಲಾವಣೆ ತಂದರೆ ಉತ್ತಮ!

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮಂಗಳವಾರ ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಮೈದಾನದಲ್ಲಿ ನಡೆಯುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 39ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿಯವರೆಗೂ 8 ಪಂದ್ಯಗಳಾಡಿರುವ ಆರ್‌ಸಿಬಿ 5ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಹಣಾಹಣಿಗಳಲ್ಲಿ ಸೋಲು ಅನುಭವಿಸಿದೆ. ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ರಾಜಸ್ಥಾನ್‌ ರಾಯಲ್ಸ್ 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/1bXYANZ

ಚುನಾಯಿತ ಪ್ರತಿನಿಧಿಗಳ ಪಕ್ಷಾಂತರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ; ಎಂ. ವೆಂಕಯ್ಯ ನಾಯ್ಡು

​ಸುದ್ದಿ ಮತ್ತು ಅಭಿಪ್ರಾಯಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗುತ್ತಿದೆ. ಅವುಗಳ ನಡುವೆ ಅಂತರ ಇರಬೇಕು. ಎರಡನ್ನೂ ಒಂದೇ ಎಂದು ಭಾವಿಸಿದ್ದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಲೋಕಸಭೆ ಕಲಾಪಗಳನ್ನು ಎಲ್ಲ ವಯೋಮಾನದವರು ವೀಕ್ಷಿಸುತ್ತಾರೆ. ಲೋಕಸಭೆಯಲ್ಲಿ ನಡೆಯುವ ಕೆಳಹಂತದ ಕೆಟ್ಟ ಸುದ್ದಿಗಳನ್ನೇ ಮಾಧ್ಯಮಗಳು ಕೇಂದ್ರೀಕರಿಸುತ್ತಿವೆ. ಉತ್ತಮ ಭಾಷಣಗಳನ್ನು ಪ್ರಸಾರ ಮಾಡುತ್ತಿಲ್ಲ. ಜನಪ್ರತಿನಿಧಿಗಳ ಉತ್ತಮ ಕಾರ್ಯಗಳನ್ನೂ ಪ್ರಕಟಿಸಬೇಕು. ಆದರೆ, ಮಿಡಿಯಾ ಹೆಡ್‌ಲೈನ್‌ಗಳು ಈಗ ಡೆಡ್‌ಲೈನ್‌ಗಳಾಗುತ್ತಿವೆ ಎಂದು ವೆಂಕಯ್ಯ ನಾಯ್ಡು ಖೇದ ವ್ಯಕ್ತಪಡಿಸಿದರು.

from India & World News in Kannada | VK Polls https://ift.tt/kqdKU4O

ಆಪರೇಷನ್ ಕಮಲ: ‘ಕಾಂಗ್ರೆಸ್‌-ಜೆಡಿಎಸ್‌ನ 10ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ’; ಕಟೀಲ್

‘ಬಿಜೆಪಿ ಸೇರ್ಪಡೆಗೆ ಉತ್ಸುಕರಾಗಿರುವ ಅನ್ಯಪಕ್ಷಗಳ ಶಾಸಕರ ವಿಚಾರದಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸ್ಥಳೀಯ ಸನ್ನಿವೇಶ, ಸಮಸ್ಯೆಗಳು ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳುತ್ತೇವೆ. ನಾವು ಕೈಗೊಳ್ಳುವ ನಿರ್ಣಯಕ್ಕೆ ವರಿಷ್ಠರು ಸಹಕಾರ ನೀಡಲಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಈ ಹೊತ್ತಿನಲ್ಲೇ ರಾಜ್ಯದಲ್ಲಿ ಮತ್ತೆ ವಲಸೆ ರಾಜಕಾರಣ ಪರ್ವದ ಚರ್ಚೆ ಮುನ್ನೆಲೆಗೆ ಬಂದಿದೆ.

from India & World News in Kannada | VK Polls https://ift.tt/bND5k7U

Hubble @32: 'ಗುರುತ್ವ ನೃತ್ಯ'ದಲ್ಲಿ ನಿರತವಾಗಿರುವ ಪಂಚ ಗ್ಯಾಲಕ್ಸಿಗಳ ವಿಹಂಗಮ ನೋಟ!

ಇಂದು ನಾಸಾದ ಹಬಲ್ ಸ್ಪೇಸ್ ಟೆಲಿಸ್ಕೋಪ್‌ಗೆ 32 ವರ್ಷಗಳ ಸಂಭ್ರಮ. ಸಾವಿರಾರು ಗ್ಯಾಲಕ್ಸಿ(ನಕ್ಷತ್ರಪುಂಜ)ಗಳನ್ನು ಮತ್ತು ನಕ್ಷತ್ರಗಳು ಗ್ರಹಗಳು ಮತ್ತು ಇತರ ಆಕಾಶಕಾಯಗಳ ಅಸ್ತಿತ್ವನ್ನು ಖಚಿತಪಡಿಸಿರುವ ಹಬಲ್, ಇದುವರೆಗೂ ಸುಮಾರು 50,000 ಖಗೋಳೀಯ ವಸ್ತುಗಳ 1.5 ಮಿಲಿಯನ್ ವೀಕ್ಷಣೆಗಳನ್ನು ಸೆರೆಹಿಡಿದಿದೆ.ಹಬಲ್‌ನ 32 ನೇ ಹುಟ್ಟುಹಬ್ಬದಂದು ನಾಸಾ 'ದಿ ಹಿಕ್ಸನ್ ಕಾಂಪ್ಯಾಕ್ಟ್ ಗ್ರೂಪ್ 40' ಎಂಬ ಐದು ಗ್ಯಾಲಕ್ಸಿಗಳ ಅದ್ಭುತ ಚಿತ್ರವೊಂದನ್ನು ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಅಸಾಮಾನ್ಯ ನಿಕಟ ಸಂಬಂಧ ಹೊಂದಿರುವ ಈ ಪಂಚ ಗ್ಯಾಲಕ್ಸಿಗಳು, ಪರಸ್ಪರ ಗುರತ್ವಾಕರ್ಷಣೆ ಬಲಕ್ಕೆ ಒಳಪಟ್ಟಿವೆ.

from India & World News in Kannada | VK Polls https://ift.tt/c3ANQwP

ಮುಂಬೈ ಎದುರು 2ನೇ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡು ಬಾರಿ ಡಕ್‌ಔಟ್‌ ಆಗಿರುವ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕ ಕೆಎಲ್‌ ರಾಹುಲ್‌, ಇದೀಗ ಒಂದೇ ಆವೃತ್ತಿಯಲ್ಲಿ ಎರಡು ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದೂ ಕೂಡ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ವಿರುದ್ಧವೇ ಎರಡು ಬಾರಿ ಮೂರಂಕಿಯ ಸ್ಕೋರ್‌ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಹೆಸರಲ್ಲಿದ್ದ ವಿಶೇಷ ದಾಖಲೆಯೊಂದನ್ನು ಕೆಎಲ್‌ ರಾಹುಲ್‌ ಸರಿಗಟ್ಟಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/oRgSXpl

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ದೊಡ್ಡ ಶಕ್ತಿ: ಕೆಟಿಆರ್ ವ್ಯಂಗ್ಯ!

ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರ ಅತ್ಯಂತ ಬಲಷ್ಠ ರಾಜಕೀಯ ಶಕ್ತಿ ಎಂದು ತೆಲಂಗಾಣದ ಟಿಆರ್‌ಎಸ್ ನಾಯಕ ಮತ್ತು ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮರಾವ್ ವ್ಯಂಗ್ಯವಾಡಿದ್ದಾರೆ. ದೇಶದಲ್ಲಿ ಬಿಜೆಪಿ ಇಷ್ಟು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಕಾಂಗ್ರೆಸ್‌ನ ತಪ್ಪು ರಾಜನೀತಿಯೇ ಕಾರಣ ಎಂದು ಕೆಟಿಆರ್ ಆರೋಪಿಸಿದ್ದಾರೆ. ಅಲ್ಲದೇ ಬಿಜೆಪಿ ದೇಶವನ್ನು ಕೋಮು ಹಿಂಸಾಚಾರದ ನೆಲೆಯಾಗಿ ಪರಿವರ್ತಿಸುತ್ತಿದೆ ಎಂದೂ ಕೆಟಿಆರ್ ಆರೋಪಿಸಿದ್ದಾರೆ.

from India & World News in Kannada | VK Polls https://ift.tt/YcB2U0x

ಪಿಎಸ್‌ಐ ನೇಮಕ ಅಕ್ರಮ: ಬ್ಲೂಟೂತ್‌ ಡಿವೈಸ್‌ ಬಳಸಿ ಸಹಾಯದ ಆರೋಪ; ಅಣ್ಣ-ತಮ್ಮ ಇಬ್ಬರೂ ಬಂಧನ

ಡಿಆರ್ ಪಾಟೀಲ್, ಅಫಜಲಪುರ ತಾಲೂಕು ಗೌರ್‌ ಬಿ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ. ಪಂಚಾಯ್ತಿಯಲ್ಲಿಯೇ 5 ಕೋಟಿ ರೂ.ಗಳನ್ನು ನುಂಗಿ ಹಾಕುವ ಮೂಲಕ ರಾಜ್ಯವ್ಯಾಪಿ ಕುಖ್ಯಾತಿ ಪಡೆದಿದ್ದ. ಜೈಲಿಗೂ ಹೋಗಿ ಬಂದಿದ್ದ. ಈ ಹಗರಣದ ಬಳಿಕ ಬೆಂಗಳೂರಿಗೆ ತೆರಳಿದ್ದ ಈತ, ಅಲ್ಲಲ್ಲಿ ಬ್ರೋಕರ್‌ ಕೆಲಸ ಮಾಡಿಕೊಂಡಿದ್ದ. ಕ್ರಮೇಣ ಸಂಪರ್ಕ ಸಾಧಿಸಿ ಕೆಪಿಎಸ್‌ಸಿ ಎಸ್‌ಡಿಸಿ, ಎಫ್‌ಡಿಸಿ ಹುದ್ದೆಗಳಿಗೆ ನೇಮಕಾತಿ ಮಾಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಗೆ ನಂಬಿಸಿ ಹಣ ಪಡೆಯುವ ಕೆಲಸ ಮಾಡಿಕೊಂಡಿದ್ದ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಬೇಕೆಂದು ಯೋಜನೆ ತಯಾರಿಸಿದ್ದ. ಅಷ್ಟರಲ್ಲಿಯೇ ಈ ಅಕ್ರಮದಲ್ಲಿ ಸಿಕ್ಕಿ ಬಿದ್ದಿದ್ದಾನೆ.

from India & World News in Kannada | VK Polls https://ift.tt/Gxn1CVL

ಖೇಲೋ ಇಂಡಿಯಾ 2022: ಮೊದಲ ದಿನವೇ ಮನಸೂರೆಗೊಂಡ ಮಲ್ಲಕಂಬ

"ವಿಶ್ವ ಯೂನಿವರ್ಸಿಟಿ ಗೇಮ್ಸ್‌ಗೆ ತಂಡಗಳನ್ನು ಕಳುಹಿಸಲು ಮೇ 22 ಕೊನೆಯ ದಿನಾಂಕವಾಗಿರುತ್ತದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಮೇ 3 ರಂದು ಕೊನೆಗೊಳ್ಳುತ್ತದೆ. ಕೆಲವು ಅಥ್ಲೀಟ್‌ಗಳು ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಇದ್ದ ಕಾರಣ ಯೂನಿವರ್ಸಿಟಿ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅದ್ದರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಮತ್ತು ಕೆಲ ದಿನಗಳ ಹಿಂದೆ ನಡೆದ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಸಾಧನೆಗಳನ್ನು ಪರಿಗಣಿಸಲಾಗುವುದು," ಎಂದು ಡಾ. ಬೀನು ಜಾರ್ಜ್‌ ವರ್ಗೀಸ್‌ ಹೇಳಿದ್ದರು

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pyxX8bS

ಅಮೆರಿಕ ಕಾಲೇಜಿನಲ್ಲಿ ಪೋರ್ನ್‌ ಕೋರ್ಸ್‌!: ಇದು 'ಬದುಕುವ ಕಲೆ' ಎಂದ ಆಡಳಿತ ಮಂಡಳಿ!

ಶಾಲಾ ಕಾಲೇಜುಗಳಲ್ಲಿ ಹೊಸ ಬಗೆಯ ಪಠ್ಯಕ್ರಮಗಳು, ಕೋರ್ಸ್‌ಗಳು ಅಳವಡಿಕೆ ಆಗುತ್ತಿರುತ್ತವೆ. ಜಗತ್ತು ಬದಲಾದಂತೆ, ಹೊಸ ತಂತ್ರಜ್ಞಾನ, ಆರ್ಥಿಕ ಮತ್ತು ಸಾಮಾಜಿಕ ಸನ್ನಿವೇಶ ಸೃಷ್ಟಿಯಾದಂತೆ ಶಿಕ್ಷಣದ ಅಗತ್ಯವೂ ಬದಲಾಗುತ್ತದೆ. ಆದರೆ ಅಮೆರಿಕದ ಕಾಲೇಜೊಂದು ನೀಲಿ ಚಿತ್ರಗಳಿಗೆಂದೇ ಕೋರ್ಸ್ ತೆರೆಯಲು ಮುಂದಾಗಿದೆ. ಇದು ಬದುಕುವ ಕಲೆ, ಇದರಲ್ಲಿ ಭಾರಿ ಲಾಭ ಇದೆ ಎಂದು ಅದು ಸಮರ್ಥನೆ ನೀಡಿದೆ.

from India & World News in Kannada | VK Polls https://ift.tt/jUhir3T

ಏಕಕಾಲಕ್ಕೆ 77 ಸಾವಿರ ಭಾರತೀಯರಿಂದ ರಾಷ್ಟ್ರಧ್ವಜ ಹಾರಾಟ: ಪಾಕ್ ದಾಖಲೆ ಭಗ್ನ!

ಏಕಕಾಲಕ್ಕೆ 77 ಸಾವಿರಕ್ಕೂ ಅಧಿಕ ಭಾರತೀಯರು ರಾಷ್ಟ್ರಧ್ವಜವನ್ನು ಹಾರಾಡಿಸುವ ಮೂಲಕ ಹೊಸ ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಇದು 18 ವರ್ಷಗಳ ಹಿಂದಿನ ಪಾಕಿಸ್ತಾನದ ದಾಖಲೆಯನ್ನುಮುರಿದು ಹಾಕಲಿದೆ. ರಾಜ ವೀರ್‌ ಕುನ್ವರ್‌ ಸಿಂಗ್‌ ಅವರ 164ನೇ ಪುಣ್ಯತಿಥಿಯ ಅಂಗವಾಗಿ ಜಗದೀಶ್‌ಪುರದಲ್ಲಿಸುಮಾರು 77,700 ಭಾರತೀಯರು ರಾಷ್ಟ್ರ ಧ್ವಜ ಹಾರಿಸಿದರು.

from India & World News in Kannada | VK Polls https://ift.tt/IvZ0aEO

ಪಾಕಿಸ್ತಾನದ ಉನ್ನತ ಶಿಕ್ಷಣಕ್ಕೆ ಭಾರತದಲ್ಲಿ ಮಾನ್ಯತೆಯಿಲ್ಲ!: ಯುಜಿಸಿ ಸುತ್ತೋಲೆ

ಭಾರತೀಯ ವಿದ್ಯಾರ್ಥಿಗಳು ಮತ್ತು ವಿದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಪಾಕಿಸ್ತಾನದಲ್ಲಿ ಪಡೆದ ಉನ್ನತ ಶಿಕ್ಷಣವನ್ನು ಭಾರತದಲ್ಲಿ ಉದ್ಯೋಗ ಪಡೆಯಲು ಮತ್ತು ಇನ್ನೂ ಹೆಚ್ಚಿನ ಶಿಕ್ಷಣ ಪಡೆಯಲು ಪರಿಗಣಿಸಲಾಗುವುದಿಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಜಂಟಿಯಾಗಿ ಸುತ್ತೋಲೆ ಹೊರಡಿಸಿವೆ.

from India & World News in Kannada | VK Polls https://ift.tt/qlh9z53

ಯೋಗಿ ಆಡಳಿತಕ್ಕೆ ಮೆಚ್ಚಿ ಪೊಲೀಸರಿಗೆ ಶರಣಾದ ಅಕ್ರಮ ಮದ್ಯ ತಯಾರಕರು

ಉತ್ತರ ಪ್ರದೇಶದಲ್ಲಿ ಅಕ್ರಮ ಮದ್ಯ ತಯಾರಿಕೆಯಲ್ಲಿ ತೊಡಗಿದ್ದ ಐವರು, ತಾವಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್‌ ಅವರ ಆಡಳಿತ ನೀತಿಗಳಿಂದ ಪ್ರಭಾವಿತರಾಗಿ ಅಕ್ರಮ ಕಾರ್ಯ ತ್ಯಜಿಸಿರುವುದಾಗಿ ಅವರು ಫಲಕ ಹಿಡಿದು ಪೊಲೀಸ್ ಠಾಣೆಗೆ ಬಂದಿದ್ದಾರೆ.

from India & World News in Kannada | VK Polls https://ift.tt/y72GE91

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಳ; ಮೂರು ತಿಂಗಳಲ್ಲಿ 10 ಯೋಧರು ಹುತಾತ್ಮ!

ಜನವರಿಯಿಂದ ಮಾರ್ಚ್ ಅವಧಿಯಲ್ಲಿ 10 ಯೋಧರು ಹುತಾತ್ಮರಾಗಿದ್ದಾರೆ. ಕಳೆದ ವರ್ಷದ ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ ಈ ಬಾರಿ ಹುತಾತ್ಮರಾಗಿರುವ ಯೋಧರ ಸಂಖ್ಯೆ ಶೇ.100ರಷ್ಟು ಹೆಚ್ಚಿದೆ. ಹಾಗೆಯೇ, ಗಾಯಗೊಂಡ ಯೋಧರ ಪ್ರಮಾಣವೂ ಶೇ.58ರಷ್ಟು ಏರಿಕೆಯಾಗಿದೆ. ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಗ್ರೆನೇಡ್‌ ದಾಳಿ, ಗುಂಡಿನ ದಾಳಿ ನಡೆಸಿ ಪರಾರಿಯಾಗುತ್ತಿರುವ ಪ್ರಕರಣ ಜಾಸ್ತಿಯಾದ ಕಾರಣ ಹೆಚ್ಚಿನ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

from India & World News in Kannada | VK Polls https://ift.tt/LG6cmvz

ನಿರ್ಮಾಣ ಉದ್ದಿಮೆಗೆ ಬೆಲೆ ಏರಿಕೆ ಬರೆ; ಸಿಮೆಂಟ್‌, ಸ್ಟೀಲ್‌ ದರ ಸಾರ್ವಕಾಲಿಕ ದಾಖಲೆ!

ಸದ್ಯ ನಾಗಾಲೋಟದಲ್ಲಿರುವ ಕಬ್ಬಿಣ, ಸಿಮೆಂಟ್‌ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಇತರ ವಸ್ತುಗಳ ಬೆಲೆಗಳ ಮೇಲೆ ನಿಯಂತ್ರಣ ಹೇರುವ ಅಧಿಕಾರ ಯಾರಿಗೂ ಇಲ್ಲ. ಸರಕಾರ ತೆರಿಗೆ ವಿಧಿಸಿ ಅದರಿಂದ ಬೊಕ್ಕಸ ತುಂಬಿಸಿಕೊಂಡು ಸುಮ್ಮನಿದೆ. ಯಾವುದೇ ವಸ್ತುಗಳ ಬೆಲೆ ನಿಯಂತ್ರಿಸುವ ಅಧಿಕಾರ, ಪ್ರಾಧಿಕಾರದ ವ್ಯವಸ್ಥೆ ನಮ್ಮ ದೇಶದಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಗೆ ನಿಯಂತ್ರಣ ಹಾಕುವ ಪ್ರಾಧಿಕಾರ ಬೇಕು ಎಂಬುದು ರಿಯಲ್‌ ಎಸ್ಟೇಟ್‌ ಉದ್ದಿಮೆದಾರರ ಬಹುಕಾಲದ ಬೇಡಿಕೆ.

from India & World News in Kannada | VK Polls https://ift.tt/UDnB7RC

ಪದಾಧಿಕಾರಿಗಳ ಪಟ್ಟಿಯಲ್ಲಿ ಹಲವರಿಗೆ ಅಸಮಾಧಾನ; ಹೆಚ್ಚುವರಿ ಪಟ್ಟಿಯೊಂದಿಗೆ ದಿಲ್ಲಿಗೆ ಹೊರಟ ಡಿಕೆಶಿ

ಕೆಲದಿನಗಳ ಹಿಂದೆ 40 ಉಪಾಧ್ಯಕ್ಷರು ಹಾಗೂ 109 ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಜಂಬೋ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿತ್ತು. ಆದರೆ, ಈ ಪಟ್ಟಿಯಲ್ಲಿ ಸುಮಾರು 3 ದಶಕಗಳಿಂದ ಪಕ್ಷದ ವೇದಿಕೆಯಲ್ಲಿ ಸ್ಥಾನ ಪಡೆದ ಹಳೆಯ ಮುಖಗಳೇ ಇವೆ ಎಂಬ ಅಸಮಾಧಾನ ಸೃಷ್ಟಿಯಾಗಿದೆ. 'ವಿಸಿಟಿಂಗ್‌ ಕಾರ್ಡ್‌'ಗೆ ಸೀಮಿತವಾಗುವ ಕೆಲವರ ಹೆಸರುಗಳು ಪದಾಧಿಕಾರಿಗಳ ಪಟ್ಟಿಯಲ್ಲಿರುವ ಬಗ್ಗೆ ಪಕ್ಷದ ಒಂದು ವರ್ಗದಲ್ಲಿ ಬೇಸರ ವ್ಯಕ್ತವಾಗಿದೆ. ಜತೆಗೆ, ಕೆಪಿಸಿಸಿ ಅಧ್ಯಕ್ಷರು ಬಯಸಿದ್ದ ಹಲವರ ಹೆಸರುಗಳು ಪಟ್ಟಿಯಲ್ಲಿಲ್ಲ ಎನ್ನಲಾಗಿದೆ.

from India & World News in Kannada | VK Polls https://ift.tt/lcJmKZv

ಈ ಬಾರಿ ಕೇಂದ್ರವೇ ಕ್ಷೇತ್ರವಾರು ಸಮೀಕ್ಷೆ ನಡೆಸಿ ಎಲೆಕ್ಷನ್‌ ಟಿಕೆಟ್‌ ನೀಡಲಿದೆ ; ಬಿಎಸ್ ಯಡಿಯೂರಪ್ಪ

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುವ ಜತೆಗೆ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದ ಬಿ.ಎಸ್‌ ಯಡಿಯೂರಪ್ಪ, ಈ ಬಾರಿ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸೀಟುಗಳನ್ನು ಗೆಲುವುದು ಖಚಿತವಾಗಿದೆ. ಕೇಂದ್ರ ಸರಕಾರವು ಕೋವಿಡ್‌ ಸಮಯದಲ್ಲಿ ಜನರಿಗೆ ಸಹಾಯ, ಮನೆ-ಮನೆಗೆ ಶೌಚಾಲಯ, ಕೃಷಿಕರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯ, ಜನ್‌ ಧನ್‌ ಯೋಜನೆ, ಬುಲೆಟ್‌ ರೈಲು, ಬಡವರಿಗೆ ಕಡಿಮೆ ದರದಲ್ಲಿ ವಿಮಾನ ಯಾನ, ಆಯುಷ್ಮಾನ್‌ ಭಾರತ್‌, ಗಂಗಾ ಶುದ್ಧೀಕರಣ ಯೋಜನೆಗಳನ್ನು ಹೇಳುತ್ತಾ ವಿದೇಶದಲ್ಲಿಯೂ ಮೋದಿಗೆ ಅಪಾರ ಗೌರವವಿದೆ ಎಂದರು.

from India & World News in Kannada | VK Polls https://ift.tt/Q6MnbkY

'ಅದು ನೋಬಾಲ್‌, ಇದು ಅನ್ಯಾಯ', ಫೀಲ್ಡ್‌ಗೆ ಇಳಿದು ಪ್ರತಿಭಟಿಸಿದ ಡೆಲ್ಲಿ ಕ್ಯಾಪಿಟಲ್ಸ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಡೆದ 34ನೇ ಲೀಗ್‌ ಪಂದ್ಯ ಭಾರಿ ವಿವಾದ ಸೃಷ್ಟಿಸಿತು. ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ತಂಡಗಳು 200ಕ್ಕೂ ಹೆಚ್ಚು ರನ್‌ ಗಳಿಸಿ ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಸಾಕಷ್ಟು ರೋಚಕ ಕ್ಷಣಗಳಿಂದ ಕೂಡದ್ದ ಪಂದ್ಯದಲ್ಲಿ ರಾಯಲ್ಸ್‌ ಪರ 19ನೇ ಓವರ್‌ ಎಸೆದ ಪ್ರಸಿಧ್‌ ಕೃಷ್ಣ ವಿಕೆಟ್‌ ಮೀಡಿನ್‌ ಸಾಧನೆ ಮೆರೆದರೆ, ಗೆಲುವಿಗೆ 6 ಎಸೆಸತಗಳಲ್ಲಿ 6 ಸಿಕ್ಸರ್‌ಗಳ ಅಗತ್ಯವಿದ್ದಾಗ ಡೆಲ್ಲಿ ಪರ ರೋವ್ಮನ್ ಪೊವೆಲ್‌ ಮೊದಲ ಮೂರು ಎಸೆಸತಗಳಲ್ಲಿ 3 ಸಿಕ್ಸರ್‌ ಸಿಡಿಸಿದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JWagXNs

ತಮ್ಮೊಟ್ಟಿಗೆ ಇನಿಂಗ್ಸ್‌ ಆರಂಭಿಸಲು ಇಬ್ಬರು ದಿಗ್ಗಜರನ್ನು ಆಯ್ಕೆ ಮಾಡಿದ ಜೋಸ್‌ ಬಟ್ಲರ್‌!

ಇಂಗ್ಲೆಂಡ್‌ನ ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌, ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಧೂಳೆಬ್ಬಿಸುತ್ತಿರುವ ಬಲಗೈ ಬ್ಯಾಟರ್‌ ತಮ್ಮ ಕಳೆದ 8 ಇನಿಂಗ್ಸ್‌ಗಳಲ್ಲಿ 4 ಐಪಿಎಲ್‌ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್‌ 2022 ಟೂರ್ನಿಯಲ್ಲಿ 3 ಶತಕ ಬಾರಿಸಿದ್ದು, ಇದರ ಜೊತೆಗೆ ಐಪಿಎಲ್‌ ಇತಿಹಾಸದಲ್ಲಿ ಬ್ಯಾಕ್‌ ಟು ಬ್ಯಾಕ್‌ ಸೆಂಚುರಿ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಯನ್ನೂ ಸಂಪಾದಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OTSzjdv

ತೇಜಸ್ವಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ನಿತೀಶ್ ಭಾಗಿ: ಬಿಹಾರದಲ್ಲಿ ಶುರುವಾಗಿದೆ ಅಂತೆ, ಕಂತೆಗಳ ಚರ್ಚೆ!

ಆರ್‌ಜೆಡಿ ಯುವ ನಾಯಕ ಹಾಗೂ ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ರಂಜಾನ್ ಪ್ರಯುಕ್ತ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗಿಯಾಗಿದ್ದಾರೆ. ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ನಿವಾಸದಲ್ಲಿ ಆಯೋಜನೆ ಮಾಡಲಾಗಿದ್ದ ಇಫ್ತಾರ್ ಕೂಟದಲ್ಲಿ, ಸಿಎಂ ನಿತೀಶ್ ಕುಮಾರ್ ಪಾಲ್ಗೊಂಡಿದ್ದರು.​​ ನಿತೀಶ್ ಅವರ ಈ ನಡೆ ಬಿಹಾರ ರಾಜಕೀಯದಲ್ಲಿ ಬದಲಾವಣೆ ಸಂಭವಿಸಲಿದೆ ಎಂಬ ತರಹೇವಾರಿ ರಾಜಕೀಯ ವಿಶ್ಲೇಷಣೆಗಳಿಗೆ ಎಡೆ ಮಾಡಿಕೊಟ್ಟಿದೆ.

from India & World News in Kannada | VK Polls https://ift.tt/QCi2LTt

ಆರಗ ಜ್ಞಾನೇಂದ್ರ ಬದಲಿಸಿ ಅನುಭವಿ ಆರ್ ಅಶೋಕ್‌ಗೆ ‘ಗೃಹ ಖಾತೆ’ ನೀಡುವಂತೆ ಬಿಜೆಪಿಯಲ್ಲಿ ಚರ್ಚೆ ಶುರು

ಆರ್ ಅಶೋಕ್ ಈ ಹಿಂದೆ ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ನಂತರ ಬಿಜೆಪಿ ಸರಕಾರದಲ್ಲಿ ಮೊದಲು ಸಾರಿಗೆ ಖಾತೆ ನಿಭಾಯಿಸಿದ್ದರು. ಬಳಿಕ ಗೃಹ ಸಚಿವರಾಗಿ ಬಡ್ತಿ ಪಡೆದು ಸಾರಿಗೆ ಖಾತೆಯನ್ನೂ ನಿರ್ವಹಿಸಿದ್ದರು. ಜಗದೀಶ್‌ ಶೆಟ್ಟರ್‌ ಸಂಪುಟದಲ್ಲಿ ಡಿಸಿಎಂ ಆಗಿದ್ದರು. ಹಾಲಿ ಸರಕಾರದಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಆಡಳಿತದಲ್ಲಿ ದಕ್ಷತೆಯ ಛಾಪು ಮೂಡಿಸಿದ್ದಾರೆ. ಹೀಗಾಗಿ ಅವರೇ ಸಮರ್ಥರು ಎಂಬ ಮಾತುಗಳು ಬಿಜೆಪಿ ಆಂತರಿಕ ವಲಯದಿಂದಲೇ ಕೇಳಿ ಬರುತ್ತಿವೆ.

from India & World News in Kannada | VK Polls https://ift.tt/SQ6TWB2

IPL 2022: ಎಂಎಸ್‌ ಧೋನಿ ಮುಂದೆ ನಮ್ಮ ಆಟ ನಡೆಯಲಿಲ್ಲವೆಂದ ರೋಹಿತ್‌ ಶರ್ಮಾ!

ಗುರುವಾರ ರಾತ್ರಿ ಮುಂಬೈನ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಮೂರು ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಟೇಷನ್‌ನಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, ಕೊನೆಯ ಎಸೆತದವರೆಗೂ ನಮ್ಮ ಬೌಲರ್‌ಗಳು ಕಠಿಣ ಹೋರಾಟ ನಡೆಸಿದ್ದರು. ಆದರೆ, ಎಂಎಸ್‌ ಧೋನಿ ಕೊನೆಯಲ್ಲಿ ಒತ್ತಡವನ್ನು ಶಾಂತ ಸ್ವಭಾವದಿಂದ ಮೆಟ್ಟಿ ನಿಂತು ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು ಎಂದು ಹೇಳಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/UojGDXW

‘ಬೆನ್ನಿಗೆ ಚೂರಿ ಹಾಕೋ ರಾಜಕಾರಣ ಮಾಡಬಾರದು’; ಸ್ವಪಕ್ಷದ ಶಾಸಕನ ವಿರುದ್ಧ ಎಚ್‌ಡಿಕೆ, ಎಚ್‌ಡಿಡಿ ಅಸಮಾಧಾನ!

‘ಶಿವಲಿಂಗೇಗೌಡ ತೆಂಗಿನ ಮರದ ಕೆಳಗೆ ಧರಣಿ ಕೂತಿದ್ರು. ಅಂದು ದೇವೇಗೌಡರು ಮೋದಿ ಹತ್ರ ಅವರನ್ನು ಕರೆದುಕೊಂಡು ಹೋದ್ರು. ಆಗ ಮೋದಿ ಹಣ ಕೊಟ್ರಾ?, ನಮ್ಮ ಸರಕಾರ ಬಂದ ನಂತರ 500 ಕೋಟಿ ಹಣ ಕೊಟ್ಟೆ. ಗೆದ್ದ ಮೇಲೆ ಸಿದ್ದರಾಮಯ್ಯರಿಂದ ನಾನು ಗೆದ್ದೆ ಎಂದ್ರು. ಚನ್ನರಾಯಪಟ್ಟಣಕ್ಕೆ ಕೊಡಬೇಕು ಎಂದು ಬಾಲಕೃಷ್ಣ ಕೇಳಿದ್ರು. ಆದ್ರೆ ನಾನು ಅರಸೀಕೆರೆ ತಾಲೂಕು ಹಿಂದುಳಿದಿದೆ ಎಂದು ಎಂಜಿನಿಯ ರಿಂಗ್‌ ಕಾಲೇಜು ಕೊಟ್ಟೆ. ನಾನು ಯಾರಿಗೂ ರಾಜಿ ಆಗೊಲ್ಲ, ಪುಣ್ಯಾತ್ಮ ಜನರಿಗೆ ಮಾತ್ರ ಎಂದು ಎಚ್‌ಡಿಕೆ ಹೇಳಿದರು.

from India & World News in Kannada | VK Polls https://ift.tt/oGzKbyW

ಅಂಗಾರಕನ ಅಂಗಳದಲ್ಲಿ ಸೂರ್ಯಗ್ರಹಣ: ಪುಟಾಣಿ ಫೋಬೋಸ್ ಸೆರೆಹಿಡಿದ ಮಾರ್ಸ್ ರೋವರ್!

ನಾಸಾದ ಪರ್ಸಿವೆರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿ ಸೂರ್ಯಗ್ರಹಣದ ಮೋಡಿ ಮಾಡುವ ದೃಶ್ಯವವೊಂದನ್ನು ಸೆರೆಹಿಡಿದಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಪ್ರಕಾರ, ಎಸ್‌ಯುವಿ ಗಾತ್ರದ ರೋವರ್‌ನಲ್ಲಿರುವ ಕ್ಯಾಮೆರಾ, ಮಂಗಳ ಗ್ರಹದ ನೈಸರ್ಗಿಕ ಉಪಗ್ರಹ ಫೋಬೋಸ್ ಸೂರ್ಯನ ಮುಂದೆ ಹಾದು ಹೋಗುವ ದೃಶ್ಯವನ್ನು ಸೆರೆಹಿಡಿದಿದೆ. ಇದರಿಂದಾಗಿ ಫೋಬೋಸ್‌ನ ಕಕ್ಷೆಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಸಹಾಯವಾಗಿದೆ. ಫೋಬೋಸ್‌ನ ಗುರುತ್ವ ಬಲ ಮಂಗಳ ಗ್ರಹದ ಮೇಲ್ಮೈ ಮೇಲೆ ಬೀರುವ ಪರಿಣಾಮಗಳ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ನಾಸಾ ಹೇಳಿದೆ.

from India & World News in Kannada | VK Polls https://ift.tt/jmQZgBu

ಎಂಎಸ್‌ ಧೋನಿ ಆಟಕ್ಕೆ ತಲೆ ಬಾಗಿದ ಸಿಎಸ್‌ಕೆ ಕ್ಯಾಪ್ಟನ್‌ ರವೀಂದ್ರ ಜಡೇಜಾ!

ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌, ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದೆ. ಆಡಿದ ಮೊದಲ 7 ಪಂದ್ಯಗಳಲ್ಲಿ ಎಲ್ಲವನ್ನೂ ಸೋತು ಕಂಗೆಟ್ಟಿರುವ ರೋಹಿತ್ ಶರ್ಮಾ ಬಳಗ ಪ್ಲೇ ಆಫ್ಸ್‌ ರೇಸ್‌ನಿಂದ ಬಹುತೇಕ ಹೊರಬೀಳುವ ಹಂತದಲ್ಲಿದೆ. ಇನ್ನೊಂದು ಸೋಲೆದುರಾದರೂ ಐಪಿಎಲ್‌ 2022 ಟೂರ್ನಿಯಲ್ಲಿ ಮುಂಬೈ ತಂಡದ ಸವಾಲು ಅಂತ್ಯ. ಗುರುವಾರ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಉತ್ತಮ ಅವಕಾಶ ಹೊಂದಿತ್ತಾದರೂ, ಎಂಎಸ್‌ ಧೋನಿ ಅಬ್ಬರಕ್ಕೆ ಸಿಲುಕಿ ನಲುಗಿಹೋಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Cal4bNi

ಕರ್ನಾಟಕದಲ್ಲಿ 100 ಹೊಸ ಕೊರೊನಾ ವೈರಸ್‌ ಪ್ರಕರಣ: ರಾಜಧಾನಿ ಬೆಂಗಳೂರಿನಲ್ಲೇ 91 ಕೇಸ್!

ಕರ್ನಾಟಕದಲ್ಲಿ ಇಂದು(ಏ.21-ಗುರುವಾರ) 100 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಬಹಳ ದಿನಗಳ ಬಳಿಕ ಹೊಸ ಪ್ರಕರಣಗಳ ಸಂಖ್ಯೆ 100 ಗಡಿ ದಾಟಿದೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ದೈನಂದಿನ ವರದಿಯಲ್ಲಿ, ರಾಜ್ಯದಲ್ಲಿ ಇಂದು 100 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಈ ಪೈಕಿ ರಾಜಧಾನಿ ಬೆಂಗಳೂರು ಒಂದರಲ್ಲೇ ಸುಮಾರು 91 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿರುವುದು ಅತಂಕಕ್ಕೆ ಕಾರಣವಾಗಿದೆ.

from India & World News in Kannada | VK Polls https://ift.tt/GzsVpEu

ಭಾರತ ಅತ್ಯಂತ ಶ್ರದ್ಧೆಯಿಂದ ಗುರುಗಳ ಆದರ್ಶ ಪಾಲಿಸುತ್ತಿದೆ: ಪ್ರಧಾನಿ ಮೋದಿ ಅಭಿಮತ!

ಭಾರತ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು, ಭಾರತ ಮುಂದಿನ ದಿನಗಳಲ್ಲಿ ವಿಶ್ವಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಿಖ್‌ರ ಧರ್ಮಗುರು ಶ್ರೀ ಗುರು ತೇಜ್ ಬಹಾದ್ದೂರ್ ಅವರ 400ನೇ ಪ್ರಕಾಶ ಪೂರಬ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು ಗುರುಗಳ ಮಾರ್ಗದಲ್ಲಿ ನಡೆದು ಭಾರತವನ್ನು ಅತ್ಯಂತ ಬಲಿಷ್ಠ ಮತ್ತು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

from India & World News in Kannada | VK Polls https://ift.tt/c8zyJ2Y

ದೇಶದ ಪ್ರಮುಖ ನಗರಗಳಲ್ಲಿ ಈ ದಿನ ಪೆಟ್ರೋಲ್-ಡೀಸೆಲ್ ಬೆಲೆ ಹೇಗಿದೆ? ಇಲ್ಲಿದೆ ವಿವರ

Petrol Price in Bengaluru: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ನಾಲ್ಕೂವರೆ ತಿಂಗಳ ಕಾಲ ಇಂಧನ ದರ ಪರಿಷ್ಕರಿಸಿರಲಿಲ್ಲ. ಮಾರ್ಚ್ 22ರಿಂದ ಪರಿಷ್ಕರಣೆ ಆರಂಭಿಸಿದ್ದವು. ಮಾರ್ಚ್ 22ರಿಂದ ಈವರೆಗೆ ಎರಡು ವಾರಗಳಲ್ಲಿ ಒಟ್ಟು 15 ಬಾರಿ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ತಲಾ ₹10 ರೂ. ಏರಿಕೆಯಾಗಿದೆ. ಆ ಬಳಿಕ 16 ದಿನಗಳಿಂದ ವ್ಯತ್ಯಯ ಕಂಡು ಬಂದಿಲ್ಲ.

from India & World News in Kannada | VK Polls https://ift.tt/c0eQkKV

ಕೆಎಸ್‌ಆರ್‌ಟಿಸಿ ಸೂಪರ್‌ ಡಿಲಕ್ಸ್‌ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ; ಚಾಲಕ ಕಮ್‌ ಕಂಡಕ್ಟರ್‌ ಅಮಾನತು

ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬರು ಶಹಜಹಾನ್‌ ವಿರುದ್ಧ ಕೆಎಸ್‌ಆರ್‌ಟಿಸಿ ಹಾಗೂ ವಿಜಿಲೆನ್ಸ್‌ಗೆ ಇ-ಮೇಲ್‌ ದೂರು ನೀಡಿದ್ದಾರೆ. ಶನಿವಾರ ಮುಂಜಾನೆ 3 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ತಮಿಳುನಾಡಿನ ಕೃಷ್ಣಗಿರಿ ಸಮೀಪ ತಲುಪಿದಾಗ ಸೈಡ್‌ ಗ್ಲಾಸ್‌ ಸರಿಸುವಂತೆ ವಿದ್ಯಾರ್ಥಿನಿ ಚಾಲಕನಲ್ಲಿ ವಿನಂತಿಸಿದ್ದು, ಗ್ಲಾಸ್‌ ಸರಿಸುವ ನೆಪದಲ್ಲಿ ಚಾಲಕ ಯುವತಿಯ ದೇಹವನ್ನು ಸ್ಪರ್ಷಿಸಿ ಕಿರುಕುಳ ನೀಡಿದ್ದಾಗಿ ದೂರು ನೀಡಲಾಗಿದೆ.

from India & World News in Kannada | VK Polls https://ift.tt/DRnpik9

ವಚನ ಜಾತ್ರೆ-2022: ಪಟ್ಟದ್ದೇವರ 23ನೆಯ ಸ್ಮರಣೋತ್ಸವಕ್ಕೆ ಸಜ್ಜಾದ ಭಾಲ್ಕಿ ಪಟ್ಟಣ

ಡಾ.ಚನ್ನಬಸವ ಪಟ್ಟದ್ದೇವರು ಬಸವಣ್ಣನವರ ತತ್ವ ಸಿದ್ಧಾಂತ ಮತ್ತು ವಚನಗಳು ಬಗ್ಗೆ ಬರೀ ಮಾತನಾಡಲಿಲ್ಲ. ಅದರಂತೆ ನಡೆದಿದ್ದರು. ಈ ಹಿನ್ನೆಲೆ ಅವರ ಸ್ಮರಣೋತ್ಸವ ನೆಪದಲ್ಲಿ ಬಸವಣ್ಣನವರ ಚಿಂತನೆ, ವಚನಗಳು ರಕ್ಷಿಸುವ ಉದ್ದೇಶದಿಂದ ವಚನ ಜಾತ್ರೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಹಿರೇಮಠ ಸಂಸ್ಥಾನ ಭಾಲ್ಕಿಯ ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು ಹೇಳಿದ್ದಾರೆ.

from India & World News in Kannada | VK Polls https://ift.tt/eUuVE1R

PSI ನೇಮಕ ಅಕ್ರಮ: ಜಾಮೀನು ಮೊರೆ ಹೋದ ದಿವ್ಯಾ ಹಾಗರಗಿ; ಬಂಧಿತ ಅರುಣ್ ಪಾಟೀಲ ABVP ಮುಖಂಡ

545 ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ ಸಿಐಡಿ ಅಧಿಕಾರಿಗಳು ಬಗೆದಷ್ಟು ಆಳವಾಗತೊಡಗಿದೆ. ಇದರೊಂದಿಗೆ ಎಬಿವಿಪಿ ಮುಖಂಡನೇ ಅಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೆ ಹಲವರನ್ನು ಕಿಂಗ್‌ಪಿನ್‌ ವ್ಯಕ್ತಿಗೆ ಪರಿಚಯಿಸಿರುವ ಸಾಧ್ಯತೆ ಇದೆ ಎನ್ನುವ ಸತ್ಯ ಕೊನೆಯ ಹಂತದ ವಿಚಾರಣೆಯಲ್ಲಿ ಬಯಲಾಗಿದೆ. ಪ್ರಮುಖ ಆರೋಪಿಯಾಗಿರುವ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ, ಶಾಲೆಯ ಮುಖ್ಯಗುರು ಕಾಶಿನಾಥ, ಸಹ ಶಿಕ್ಷಕಿ ಅಶ್ವಿನಿ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

from India & World News in Kannada | VK Polls https://ift.tt/t2Q306I

ಇನ್ಮುಂದೆ ಲಾಲ್‌ಬಾಗ್ ಒಳಗೆ ಕ್ಯಾಮೆರಾ ನಿಷೇಧ! ಕಣ್ತಪ್ಪಿಸಿ ಕೊಂಡೊಯ್ದರೆ ದಂಡ ಬೀಳೋದು ಪಕ್ಕಾ

ಲಾಲ್‌ಬಾಗ್‌ ಒಳಗೆ ಕ್ಯಾಮೆರಾಗಳನ್ನು ನಿಷೇಧಿಸಬೇಕು ಎಂದು ಹಿರಿಯ ವಕೀಲರಾದ ಅಮೃತೇಶ್ವರ್‌ ಅವರು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಲಾಲ್‌ಬಾಗ್‌ ಅಮ್ಯೂಸ್‌ಮೆಂಟ್‌ ಪಾರ್ಕ್ ಅಲ್ಲ. ಇದೊಂದು ಸಸ್ಯಕಾಶಿ (ಬಟಾನಿಕಲ್‌ ಗಾರ್ಡನ್‌). ಸಸ್ಯ ಸಂಕುಲಕ್ಕಾಗಲಿ, ಪಕ್ಷಿ ಸಂಕುಲಕ್ಕೆ ತೊಂದರೆಯಾಗಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು. ಈ ಬಗ್ಗೆ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್ ಅಡ್ವೈಸರಿ ಕಮಿಟಿ (ಸಲಹಾ ಸಮಿತಿ)ಯ ಮುಂದೆ ಪ್ರಸ್ತಾವ ಮುಂದಿಟ್ಟಿತ್ತು.

from India & World News in Kannada | VK Polls https://ift.tt/vgTyN9G

ಮೆಟ್ರೊ ಕಾಮಗಾರಿಗಾಗಿ ಒಟ್ಟು 1,342 ಮರಗಳನ್ನು ಕತ್ತರಿಸಲು ಅನುಮತಿ ನೀಡಿದ ಹೈಕೋರ್ಟ್‌!

ಮೆಟ್ರೊ ಪರ ವಕೀಲರು, 2022ರ ಮಾರ್ಚ್ 8ರ ಮರ ತಜ್ಞರ ಸಮಿತಿಯ ವರದಿ ಆಧರಿಸಿ ಕಸ್ತೂರಿನಗರ ಮತ್ತು ಕೆಂಪಾಪುರದ ಹೊರವರ್ತುಲ ರಸ್ತೆಯಲ್ಲಿನ ಮೆಟ್ರೊ ಮಾರ್ಗದಲ್ಲಿ ಬರುವ ಮರಗಳ ಸ್ಥಳಾಂತರ ಮತ್ತು ತೆರವಿಗೆ ಸಂಬಂಧಿಸಿದಂತೆ 2022ರ ಮಾ. 10ರಂದು ಮರಗಳ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಮರಗಳ ಸ್ಥಳಾಂತರಕ್ಕೆ ಅನುಮತಿ ನೀಡಿದ್ದಾರೆ. 2020ರ ಫೆಬ್ರವರಿ 9 ಮತ್ತು ಆನಂತರ 2021ರಲ್ಲಿ ಮರ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಮೆಟ್ರೊ ಮಾರ್ಗ ರೂಪಿಸಲು ಮರಗಳ ಸ್ಥಳಾಂತರ ಮತ್ತು ತೆರವಿಗೆ ನ್ಯಾಯಾಲಯ ಆದೇಶಿಸಿದೆ, ಎಂದರು.

from India & World News in Kannada | VK Polls https://ift.tt/Y8LaCiW

ಪಂಜಾಬ್‌ ವಿರುದ್ಧದ ಗೆಲುವಿನ ಬಳಿಕ ಹೃದಯವಂತಿಕೆ ಮೆರೆದ ಕುಲ್ದೀಪ್ ಯಾದವ್‌!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಭರ್ಜರಿ ಕಮ್‌ಬ್ಯಾಕ್‌ ಮಾಡಿದೆ. ಬ್ಯಾಟಿಂಗ್‌ ಬಲಿಷ್ಠ ಪಂಜಾಬ್‌ ಕಿಂಗ್ಸ್‌ ಎದುರು 9 ವಿಕೆಟ್‌ಗಳ ಅಮೋಘ ಜಯ ದಾಖಲಿಸಿದ ರಿಷಭ್ ಪಂತ್‌ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇದೀಗ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಐಪಿಎಲ್‌ 2022 ಟೂರ್ನಿಯಲ್ಲಿ ದಿಲ್ಲಿ ಪಡೆ ಈವರೆಗೆ ಆಡಿದ 6 ಪಂದ್ಯಗಳ ಪೈಕಿ, ತಲಾ ಮೂರು ಜಯ ಮತ್ತು ಸೋಲನುಭವಿಸಿದೆ. ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸ್ಪಿನ್ನರ್‌ಗಳು ಒಟ್ಟು 6 ವಿಕೆಟ್‌ಗಳನ್ನು ಕಿತ್ತು, ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/A2eHlmt

Planet Uranus ನಶೆ ಏರಿಸಿಕೊಂಡ ನಾಸಾ: ಶೀತ ಗ್ರಹದ ಅಂತರಂಗ ತಿಳಿಯಲು ಶೀಘ್ರದಲ್ಲೇ ನೌಕೆ ರವಾನೆ?

ಸೌರಮಂಡಲದ ಏಳನೇಯ ಮತ್ತು ಅತ್ಯಂತ ಶೀತ ಗ್ರಹ ಎಂಬ ಖ್ಯಾತಿ ಹೊಂದಿರುವ ಯುರೇನಸ್ ಗ್ರಹದ ಹೆಚ್ಚಿನ ಅಧ್ಯಯನಕ್ಕೆ ನಾಸಾ ಮನಸ್ಸು ಮಾಡಿದೆ. ಗ್ರಹ ವಿಜ್ಞಾನ ಮತ್ತು ಆಸ್ಟ್ರೋಬಯಾಲಜಿಗೆ ಸಂಬಂಧಿಸಿದ ಪ್ರಮುಖ ಆದ್ಯತೆಗಳನ್ನು ಪಟ್ಟಿ ಮಾಡಿರುವ ಹೊಸ ವರದಿಯಲ್ಲಿ, ಅಮೆರಿಕದ ರಾಷ್ಟ್ರೀಯ ಅಕಾಡೆಮಿಗಳ ತಜ್ಞರ ಸಮಿತಿಯು ಮುಂದಿನ ಒಂದು ದಶಕದ ಅವಧಿಯಲ್ಲಿ ಯುರೇನಸ್ ಗ್ರಹದ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವಂತೆ ನಾಸಾಗೆ ಸಲಹೆ ನೀಡಿದೆ. ಯುರೇನಸ್ ಆರ್ಬಿಟರ್ ಮತ್ತು ಪ್ರೋಬ್ (UOP) ಹೆಸರಿನ ಯೋಜನೆಯನ್ನು ನಾಸಾ ಕೈಗೆತ್ತಿಕೊಳ್ಳಲಿದೆ.

from India & World News in Kannada | VK Polls https://ift.tt/X2AOv1Z

IPL 2022: ವೈಯಕ್ತಿಕ ಕಾರಣಕ್ಕೆ ಸಿಎಸ್‌ಕೆ ಕ್ಯಾಂಪ್‌ ತೊರೆದ ಡೆವೋನ್‌ ಕಾನ್ವೇ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹಾಲಿ ಹಾಗೂ ನಾಲ್ಕು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಯಶಸ್ಸಿನ ಹಾದಿಯಲ್ಲಿ ನಡೆಯಲು ತಿಣುಕಾಡುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ನಾಯಕತ್ವದಲ್ಲಿ ಬದಲಾವಣೆಯಾಗಿ ಎಂಎಸ್‌ ಧೋನಿ ಜಾಗದಲ್ಲಿ ರವೀಂದ್ರ ಜಡೇಜಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಲ್‌ರೌಂಡರ್‌ ಜಡೇಜಾ ಸಾರಥ್ಯದಲ್ಲಿ ಸಿಎಸ್‌ಕೆ ಆಡಿದ 6 ಪಂದ್ಯಗಳಲ್ಲಿ 5 ಸೋಲುಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿಯುವಂತ್ತಾಗಿದೆ. ಇದರ ಬೆನ್ನಲ್ಲೇ ತನ್ನ ಸ್ಟಾರ್‌ ಓಪನರ್‌ ಡೆವೋನ್‌ ಕಾನ್ವೇ ಸೇವೆಯನ್ನೂ ಕಳೆದುಕೊಂಡಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/XAqymHf

ಬಿಜೆಪಿ ಸರಕಾರದಲ್ಲಿ ಉಸ್ತುವಾರಿ ಜಿಲ್ಲೆಗಳು ಅನಾಥ! ಸಚಿವರ ಸ್ವಕ್ಷೇತ್ರದ ಮೋಹದಿಂದ ಅಭಿವೃದ್ಧಿ ಕುಂಠಿತ

ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಬೀದರ್‌ ಜಿಲ್ಲೆಗೆ ಕೇವಲ ಮೂರು ಬಾರಿ ಮಾತ್ರ ಬಂದು ಹೋಗಿದ್ದಾರೆ. ಜ. 29 ರಂದು ಪರಿಚಯ ಸಭೆ ನಡೆಸಿದ್ದ ಸಚಿವರು, ಫೆ.11 ರಂದು ಕೆಲ ತಾಸು ಕೆಡಿಪಿ ಸಭೆ ಮಾಡಿದ್ದರು. ಏ. 9 ರಂದು ಬಸವಕಲ್ಯಾಣಕ್ಕೆ ಸಿಎಂ ಜತೆ ಬಂದು ಹೋಗಿದ್ದಾರೆ. ಬೇರೆ ಜಿಲ್ಲೆಗಳ ಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕೇಳುವವರೇ ಇಲ್ಲವಾಗಿದೆ. ರೈತರ ಕಬ್ಬಿನ ಬಾಕಿ ಹಣ ಬರಬೇಕಿದೆ. ಬಿಎಸ್‌ಎಸ್‌ಕೆ ಕಾರ್ಖಾನೆ ಪುನಶ್ಚೇತನಕ್ಕೆ ಯಾವುದೇ ಯತ್ನಗಳು ನಡೆದಿಲ್ಲ.

from India & World News in Kannada | VK Polls https://ift.tt/Z3OUBxe

‘ಇನ್ನೂ ಎಷ್ಟು ಜನ ಸಾಯಬೇಕು ಎಂದುಕೊಂಡಿದ್ದೀರಿ?’; ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿ ಗುತ್ತಿಗೆ ಹಣ ಪಾವತಿ ಸಂಬಂಧ ಬಿ.ಬಿ ಉಮೇಶ್‌ ಮತ್ತಿತರರು ಸಲ್ಲಿಸಿರುವ ಅರ್ಜಿ ಕುರಿತು ನ್ಯಾ ಕೃಷ್ಣ ಎಸ್‌ ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಆಗ ವಿಚಾರಣೆ ವೇಳೆ ನ್ಯಾಯಪೀಠ, ಗುತ್ತಿಗೆ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿನ ಪ್ರಕರಣವನ್ನು ಪ್ರಸ್ತಾಪಿಸಿತು.

from India & World News in Kannada | VK Polls https://ift.tt/HUnWFeb

ರಾಹುಲ್‌ ವಿಕೆಟ್‌ಗಾಗಿ 'ಡಿಆರ್‌ಎಸ್‌' ತೆಗೆದುಕೊಳ್ಳುವಂತೆ ಹೇಳಿದ್ದು ವಿರಾಟ್‌ ಕೊಹ್ಲಿ ಎಂದ ದಿನೆಶ್‌ ಕಾರ್ತಿಕ್!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 15ನೇ ಆವೃತ್ತಿಯಲ್ಲಿ 5ನೇ ಜಯ ದಾಖಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಂಕಪಟ್ಟಿಯ 2ನೇ ಸ್ಥಾನಕ್ಕೆ ಜಿಗಿದಿದೆ. ಅಪಾಯಕಾರಿ ಲಖನೌ ಸೂಪರ್‌ ಜಯಂಟ್ಸ್‌ ಎದುರು ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 18 ರನ್‌ಗಳ ಆಕರ್ಷಕ ಜಯ ದಕ್ಕಿಸಿಕೊಂಡಿತು. ಗೆಲ್ಲಲು 182 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಸೂಪರ್‌ ಜಯಂಟ್ಸ್‌ ತಂಡಕ್ಕೆ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ ಆಸರೆಯಾಗಿ ನಿಂತಿದ್ದರು. ಆದರೆ, ಹರ್ಷಲ್‌ ಪಟೇಲ್‌ ಬೌಲಿಂಗ್‌ನಲ್ಲಿ ಕೆಎಲ್‌ ರಾಹುಲ್‌ ವಿಕೆಟ್‌ ಕೈಚೆಲ್ಲಿದರು. ಈ ಸಲುವಾಗಿ ಆರ್‌ಸಿಬಿ ಅತ್ಯಂತ ಮಹತ್ವದ ಡಿಆರ್‌ಎಸ್‌ ತೆಗೆದುಕೊಂಡಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/rot8gew

ಕೋಮುಗಲಭೆ ವರದಿ ಮಾಡುವಾಗ ಸಂಯಮ ಅಗತ್ಯ: ಪತ್ರಕರ್ತರಿಗೆ ಎಡಿಟರ್ಸ್ ಗಿಲ್ಡ್ ಸಲಹೆ!

ಕೋಮುಗಲಭೆಗಳನ್ನು ವರದಿ ಮಾಡುವಲ್ಲಿ ಪತ್ರಕರ್ತರು ಅತ್ಯಂತ ಸಂಯಮದಿಂದ ವರ್ತಿಸಬೇಕು ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಒತ್ತಾಯಿಸಿದೆ. ಕಳೆದ ಕೆಲವು ವಾರಗಳಿಂದ ದೇಶದ ಹಲವಾರು ಭಾಗಗಳಲ್ಲಿ ಕೋಮು ಘರ್ಷಣೆಗಳು ನಡೆಯುತ್ತಿದ್ದು, ಈ ಬೆಳವಣಿಗೆಗಳ ಬಗೆಗೆ ವರದಿ ಮಾಡುವಾಗ, ವರದಿಗಾರರು ಅತ್ಯಂತ ಸಂಯಮದಿಂದ ವರ್ತಿಸುವ ಅವಶ್ಯಕತೆಯಿದೆ ಎಂದು ಎಡಿಟರ್ಸ್ ಗಿಲ್ಡ್ ಆಗ್ರಹಿಸಿದೆ. ಸಮುದಾಯಗಳ ನಡುವಿನ ಘರ್ಷಣೆಗಳ ವರದಿಗಳ ಮೌಲ್ಯಮಾಪನ ಮತ್ತು ಪ್ರಸ್ತುತಿಯಲ್ಲಿ ಶ್ರದ್ಧೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಆತಂಕ ವ್ಯಕ್ತಪಡಿಸಿದೆ.

from India & World News in Kannada | VK Polls https://ift.tt/xRlPigw

'ವಯಸ್ಸಲ್ಲ, ಸಾಮರ್ಥ್ಯ ನೋಡಿ', ಭಾರತ ತಂಡಕ್ಕೆ 'ಡಿ.ಕೆ'ನ ಆಯ್ಕೆ ಮಾಡಿ: ಸುನೀಲ್ ಗವಾಸ್ಕರ್!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 15ನೇ ಆವೃತ್ತಿಯಲ್ಲಿ ಭಾರಿ ಸದ್ದು ಮಾಡಿದ ಆಟಗಾರರ ಪೈಕಿ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಕೂಡ ಒಬ್ಬರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸುತ್ತಿರುವ ದಿನೇಶ್‌ ಕಾರ್ತಿಕ್‌ ಮೊದಲ 6 ಇನಿಂಗ್ಸ್‌ಗಳಲ್ಲಿ 197 ರನ್‌ ಸಿಡಿಸಿದ್ದರು. ಪ್ರಮುಖವಾಗಿ ಸ್ಲಾಗ್‌ ಓವರ್‌ಗಳಲ್ಲಿ 360 ಡಿಗ್ರಿ ಬ್ಯಾಟಿಂಗ್‌ ಮೂಲಕ ಆರ್‌ಸಿಬಿ ತಂಡದ ಪರ ಫಿನಿಷರ್‌ ಕೆಲಸವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಅವರ ಈ ಸಾಮರ್ಥ್ಯವನ್ನು ಟೀಮ್ ಇಂಡಿಯಾ ಪರವೂ ಬಳಕೆ ಮಾಡಿಕೊಳ್ಳಬೇಕು ಎಂದು ಸುನೀಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/eyE234G

ಕೋವಿಡ್‌ ಪಾಸಿಟಿವಿಟಿ ದರ ಮೂರು ಪಟ್ಟು ಏರಿಕೆ! ದಿಲ್ಲಿಯಲ್ಲಿ ಹರಡುತ್ತಲೇ ಇದೆ ಸೋಂಕು!

ವಿದಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಆತಂಕದ ನಡುವೆಯೇ ದಿಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಒಂದೇ ವಾರದಲ್ಲಿ ಪಾಸಿಟಿವಿಟಿ ಪ್ರಮಾಣವು ಮೂರು ಪಟ್ಟು ಏರಿಕೆ ಕಂಡಿದೆ. ಏ.11 ರಿಂದ 18ರ ಅವಧಿಯಲ್ಲಿ ಸೋಂಕಿತರ ಪ್ರಮಾಣವು ಗಣನೀಯ ಹೆಚ್ಚಳವಾಗಿದೆ ಎಂಬುದನ್ನು ದಿಲ್ಲಿ ಆರೋಗ್ಯ ಸಚಿವಾಲಯವೇ ದೃಢಪಡಿಸಿದೆ.

from India & World News in Kannada | VK Polls https://ift.tt/yFJNaSL

ಬಿಬಿಎಂಪಿ ಕಸದ ಲಾರಿಯ ಬೇಕಾಬಿಟ್ಟಿ ಚಾಲನೆಗೆ 1 ತಿಂಗಳ ಅವಧಿಯಲ್ಲಿ ಮೂವರ ದುರ್ಮರಣ!

ಬಿಬಿಎಂಪಿ ಕಸದ ಲಾರಿಯ ಬೇಜವಾಬ್ದಾರಿಯ ಚಾಲನೆಗೆ ನಗರದಲ್ಲಿ ಒಂದು ತಿಂಗಳ ಅವಧಿಯಲ್ಲಿ ಮೂವರು ಅಮಾಯಕ ಜೀವಗಳು ಬಲಿಯಾಗುವಂತಾಗಿದೆ. ಸೋಮವಾರ ನಾಯಂಡಹಳ್ಳಿ ರೈಲ್ವೆ ಕೆಳ ಸೇತುವೆ ಬಳಿ ಕಸದ ಲಾರಿ ಡಿಕ್ಕಿಯಾಗಿ ಪದ್ಮಿನಿ (40) ಎಂಬುವರು ಸಾವಿಗೀಡಾಗಿದ್ದಾರೆ. ಮಾ. 21ರಂದು ಹೆಬ್ಬಾಳದ ನಿವಾಸಿ ಬಿ.ನರಸಿಂಹಮೂರ್ತಿ ಅವರ ಪುತ್ರಿ ಅಕ್ಷಯಾ ಕಸದ ಲಾರಿಗೆ ಬಲಿಯಾಗಿದ್ದಳು. ಮಾ. 31ರಂದು ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ತಣಿಸಂದ್ರದ 60 ವರ್ಷದ ರಾಮಯ್ಯ ಎಂಬುವರು ಮೃತಪಟ್ಟಿದ್ದರು.

from India & World News in Kannada | VK Polls https://ift.tt/7O5IoZM

ಆಡಳಿತ ಯಂತ್ರಕ್ಕೆ ಸರ್ಜರಿ; ಮೌದ್ಗಿಲ್‌, ಕಳಸದ್‌ ಸೇರಿ 17 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮನೀಶ್‌ ಮೌದ್ಗಿಲ್‌, ಶಿವಯೋಗಿ ಕಳಸದ್‌ ಸೇರಿದಂತೆ ಒಟ್ಟು 17 ಐಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

from India & World News in Kannada | VK Polls https://ift.tt/mpnEokl

18 ತಿಂಗಳಲ್ಲಿ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಪೂರ್ಣ; ಹೈಕೋರ್ಟ್‌ಗೆ ಬೆಸ್ಕಾಂ ವರದಿ ಸಲ್ಲಿಕೆ

ಬೆಸ್ಕಾಂ ಪರ ವಾದ ಮಂಡಿಸಿದ ನ್ಯಾಯವಾದಿ ಶ್ರೀರಂಗ, ‘ನ್ಯಾಯಾಲಯದ ನಿರ್ದೇಶನದಂತೆ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳನ್ನೊಳಗೊಂಡ ಸಮಿತಿ ಅಧ್ಯಯನ ನಡೆಸಿ ಸ್ಥಳಾಂತರಿಸಬೇಕಾದ 8659 ಟ್ರಾನ್ಸ್‌ ಫಾರ್ಮರ್‌ಗಳನ್ನು ಗುರುತಿಸಿದೆ. ಆ ಪೈಕಿ 3000 ಟ್ರಾನ್ಸ್‌ ಫಾರ್ಮರ್‌ಗಳನ್ನು ಈಗಾಗಲೇ ಸ್ಥಳಾಂತರ ಮತ್ತು ಎತ್ತರದ ಸ್ಥಳಕ್ಕೆ ಏರಿಸಲಾಗಿದೆ. ಉಳಿದ 5000 ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಬಗ್ಗೆ ಕೋರ್ಟ್‌ಗೆ ವಿವರವಾದ ವರದಿ ಸಲ್ಲಿಸಲಾಗಿದೆ’ ಎಂದರು.

from India & World News in Kannada | VK Polls https://ift.tt/IcXqJjK

'ಕೋವಿಡ್‌-19 ಪಾಸಿಟಿವ್', ಆಸ್ಪತ್ರೆಗೆ ದಾಖಲಾದ ಮಿಚೆಲ್‌ ಮಾರ್ಷ್‌!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗೂ ಕೋವಿಡ್‌-19 ಸೋಂಕಿನ ಅಡಚಣೆಯ ಭೀತಿ ಶುರುವಾಗಿದೆ. ಟೂರ್ನಿಯನ್ನು ಮುಂಜಾಗ್ರತೆ ನಿಟ್ಟಿನಲ್ಲಿ ಮಹಾರಾಷ್ಟ್ರದ ನಾಲ್ಕು ಕ್ರೀಡಾಂಗಣಗಳಲ್ಲಿ ನಿರ್ಮಿಸಲಾಗಿರುವ ಬಯೋ ಬಬಲ್‌ ಒಳಗೆ ಆಡಿಸಲಾಗುತ್ತಿದೆ. ಆದರೂ ಕೂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕ್ಯಾಂಪ್‌ನಲ್ಲಿ ಎರಡು ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಮೊದಲಿಗೆ ತಂಡದ ಫಿಸಿಯೋ ಪ್ಯಾಟ್ರಿಕ್‌ ಫರಾನ್‌ ಅವರಲ್ಲಿ ಸೋಂಕು ಪತ್ತೆಯಾಗಿತ್ತು. ಈಗ ತಂಡದ ಸ್ಟಾರ್‌ ಆಲ್‌ರೌಂಡರ್‌ ಮಿಚೆಲ್‌ ಸ್ಟಾರ್ಕ್‌ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ದೃಢಪಡಿಸಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/taY2h6L

ಸೋನಿಯಾ ನೇತೃತ್ವದ ಸಭೆಯಲ್ಲಿ ಪ್ರಶಾಂತ್ ಕಿಶೋರ್: ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜು?

2024ರ ಲೋಕಸಭೆ ಚುನಾವಣೆಗಾಗಿ ತಯಾರಿ ನಡೆಸಿರುವ ಕಾಂಗ್ರೆಸ್, ಇದಕ್ಕಾಗಿ ಸಾಗಬೇಕಾದ ಹಾದಿಯ ಹುಡುಕಾಟದಲ್ಲಿದೆ. ಪಮಚರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಎಚ್ಚೆತ್ತಿರುವ ಕಾಂಗ್ರೆಸ್, ಈಗಿನಿಂದಲೇ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ ಇಂದು(ಏ.18-ಸೋಮವಾರ) ಸೋನಿಯಾ ಗಾಂಧಿ ಅಧ್ಯಕತೆಯಲ್ಲಿ ಕಾಂಗ್ರೆಸ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಭಾಗವಹಿಸಿದ್ದರು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಚರ್ಚೆಯ ನಡುವೆಯೇ, ಇಂದಿನ ಸಭೆಯಲ್ಲಿ ಅವರು ಭಾಗಿಯಾಗಿದ್ದು ಕುತೂಹಲ ಕೆರಳಿಸಿದೆ.

from India & World News in Kannada | VK Polls https://ift.tt/ZYF7jQD

ಒಂದೇ ದಿನದಲ್ಲಿ ಶೇ.90ರಷ್ಟು ಹೆಚ್ಚಿದ ಕೋವಿಡ್‌ ಕೇಸ್‌! ಬರಲಿದೆಯೇ 4ನೇ ಅಲೆ?

ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಯಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,183 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾನುವಾರಕ್ಕೆ ಹೋಲಿಸಿದರೆ ಒಂದೇದಿನದಲ್ಲಿಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.89.8ರಷ್ಟು ಏರಿಕೆಯಾಗಿದೆ. ದಿಲ್ಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ.

from India & World News in Kannada | VK Polls https://ift.tt/NFbhc6w

ಮಾಸಾಂತ್ಯದೊಳಗೆ ಸರ್ಜರಿ ಖಾತ್ರಿ: 'ಎಲೆಕ್ಷನ್‌ ಸಂಪುಟ'ಕ್ಕೆ ತಯಾರಿ

ಸಂಪುಟ ಸರ್ಜರಿಯ ಸುಳಿವನ್ನು ನೀಡಿದಂತಾಗಿದೆ. ಆದರೆ, ಸಂಪುಟ ವಿಸ್ತರಣೆಯೋ ಅಥವಾ ಪುನರ್‌ರಚನೆಯೋ ಎನ್ನುವುದು ದಿಲ್ಲಿ ಸಭೆ ಬಳಿಕವೇ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

from India & World News in Kannada | VK Polls https://ift.tt/Gr20VP7

ಪಾಪರ್ ಪಾಕಿಸ್ತಾನದ ಅಸಲಿ ಚಹರೆ: ಮನೆಗಳಿಗೆ, ಕೈಗಾರಿಕೆಗಳಿಗೆ ಪವರ್ ಸಪ್ಲೈ ಕಟ್!

ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಕೊಳ್ಳಲು ಹಣವಿಲ್ಲದೇ, ಪಾಕಿಸ್ತಾನದ ಬಹುತೇಕ ವಿದ್ಯುತ್ ಸ್ಥಾವರಗಳು ಕೆಲಸ ನಿಲ್ಲಿಸಿವೆ. ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಮನೆಗಳಿಗೆ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಸ್ಪಾಟ್ ಮಾರುಕಟ್ಟೆಯಿಂದ ಇಂಧನವನ್ನು ಸಂಗ್ರಹಿಸಲು ಪಾಕಿಸ್ತಾನ ಹೆಣಗುತ್ತಿದ್ದು, ಕೈಗಾರಿಕೆಗಳಿಗೆ ಮತ್ತು ಮನೆಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ವಿದ್ಯುತ್ ವೆಚ್ಛ 15 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಏರಿಕೆಯಾಗಿದ್ದು, ಹೆಚ್ಚುವರಿ ವಿದ್ಯುತ್ ಖರೀದಿ ಮಾಡಲು ದಿವಾಳಿಯಾಗಿರುವ ರಾಷ್ಟ್ರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

from India & World News in Kannada | VK Polls https://ift.tt/APmcByi

ರಾತ್ರೋರಾತ್ರಿ ಭಗವಾಧ್ವಜ ಕಟ್ಟೆ ನೆಲಕ್ಕುರುಳಿಸಿ ಹಾನಿ! ಕಿಡಿಗೇಡಿಗಳಿಗೆ ಹರೀಶ್ ಪೂಂಜಾ ಎಚ್ಚರಿಕೆ

ಕೊಕ್ಕಡದಿಂದ ಪಟ್ರಮೆಗೆ ತೆರಳುವ ಮಾರ್ಗದಲ್ಲಿರುವ ಉಪ್ಪಾರಪಳಿಕೆ ಜಂಕ್ಷನ್‌ ಬಳಿ ಇತ್ತೀಚೆಗೆ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಅದರಲ್ಲಿ ಕೇಸರಿ ಧ್ವಜ ಪ್ರತಿಷ್ಠಾಪಿಸಿದ್ದರು. ಆದರೆ ಶನಿವಾರ ರಾತ್ರಿ ಈ ಭಗವಾಧ್ವಜ ಹಾಗೂ ಅದರ ಕಂಬ ಬುಡ ಸಮೇತ ಮುರಿದು ರಸ್ತೆಗೆ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಇದೊಂದು ಉದ್ದೇಶಪೂರ್ವಕ ಕೃತ್ಯ ವೆಂದು ಆರೋಪಿಸಿದ್ದಾರೆ.

from India & World News in Kannada | VK Polls https://ift.tt/45NkZnv

ಪಿಎಸ್‌ಐ ನೇಮಕಾತಿ ಅಕ್ರಮ; ಕಲಬುರಗಿಯ ಬಿಜೆಪಿ ಮುಖಂಡೆ ನಿವಾಸಕ್ಕೆ ಸಿಐಡಿ ದಾಳಿ! ಪಕ್ಷಕ್ಕೆ ಮುಜುಗರ

ದಿವ್ಯಾ ಹಾಗರಗಿಗೆ ಸೇರಿದ ಜ್ಞಾನಜ್ಯೋತಿ ಇಂಗ್ಲಿಷ್‌ ಮೀಡಿಯಂ ಶಾಲೆಯಲ್ಲಿ ಪಿಎಸ್‌ಐ ನೇಮಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ ನಡೆರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಪರೀಕ್ಷಾರ್ಥಿ ಮತ್ತು ಈ ಶಾಲೆಯಲ್ಲಿ ಪರೀಕ್ಷಾ ಮೇಲ್ವಿಚಾರಕರಾಗಿ ಕೆಲಸ ಮಾಡಿದ ಮೂವರು ಸೇರಿ ಒಟ್ಟು ಆರು ಜನರನ್ನು ಬಂಧಿಸಲಾಗಿತ್ತು. ಈಗ ದಿವ್ಯಾ ಮನೆ ಮೇಲೆ ದಾಳಿ ನಡೆದಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

from India & World News in Kannada | VK Polls https://ift.tt/bajqgQI

ರಾಜ್ಯದಲ್ಲಿ ಮತ್ತೆ ಅಧಿಕಾರ ಗ್ರಹಣಕ್ಕೆ ಜೆಪಿ ನಡ್ಡಾ ತ್ರಿಸೂತ್ರ; ಮಿಷನ್-150ಗೆ ಈಗಿಂದಲೇ ಟಾಸ್ಕ್ ಶುರು

ರಾಜ್ಯದಲ್ಲಿ ಸದ್ಯಕ್ಕೆ ವಾತಾವರಣ ಹೇಗಿದೆ ಎಂಬುದಾಗಿ ಕೋರ್‌ ಕಮಿಟಿ ಸದಸ್ಯರನ್ನು ಪ್ರಶ್ನಿಸಿದ ಜೆ ಪಿ ನಡ್ಡಾ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಪಕ್ಷದ ಮೇಲಾಗುತ್ತಿರುವ ಪರಿಣಾಮದ ಬಗ್ಗೆಯೂ ಚರ್ಚಿಸಿದ್ದಾರೆ. ಮೂರು ತಂಡಗಳ ರಾಜ್ಯ ಪ್ರವಾಸದಲ್ಲಿ ಕಾರ್ಯಕರ್ತರ ಕಡೆಯಿಂದ ಬಂದಿರುವ ಸ್ಪಂದನೆ ಬಗ್ಗೆಯೂ ಕೇಳಿದ್ದಾರೆ. ಜತೆಗೆ ಚುನಾವಣೆ ದೃಷ್ಟಿಯಿಂದ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು ಇದಕ್ಕೆ ಹೈಕಮಾಂಡ್‌ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

from India & World News in Kannada | VK Polls https://ift.tt/8ITk2GL

'ಕೊನೇ 5 ಓವರ್‌ಗಳಲ್ಲಿ ನಮ್ಮ ಯೋಜನೆ ಮಣ್ಣು ಪಾಲಾಯಿತು' : ರವೀಂದ್ರ ಜಡೇಜಾ!

ಗುಜರಾತ್‌ ಟೈಟನ್ಸ್ ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 29ನೇ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಪಡೆದ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ 3 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಸೋಲಿನ ಬಳಿಕ ಮಾತನಾಡಿದ ರವೀಂದ್ರ ಜಡೇಜಾ, ಕೊನೆಯ ಐದು ಓವರ್‌ಗಳಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಗುಜರಾತ್‌ ಟೈಟನ್ಸ್‌ ತಂಡದ ಗೆಲುವಿನ ಶ್ರೇಯ ಡೇವಿಡ್‌ ಮಿಲ್ಲರ್‌ಗೆ ಸಲ್ಲಬೇಕು ಎಂದು ಗುಣಗಾನ ಮಾಡಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ZH2RCJ

ಮಂಗಳೂರು ಎಸ್‌ಇಝೆಡ್‌ ವ್ಯಾಪ್ತಿಯ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: 3 ಸಾವು; 5 ಗಂಭೀರ!

ಮೀನಿನ ತ್ಯಾಜ್ಯಕ್ಕೆ ಬಳಕೆ ಮಾಡುವ ವಿಷಾನಿಲ ಸೋರಿಕೆಯಾಗಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಆದರೆ ಘಟನೆಯ ಸರಿಯಾದ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ. ಅವಘಡ ನಡೆದ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ರಾಸಾಯನಿಕ ಸೋರಿಕೆಯಾದ ಮಾಹಿತಿ ಸಿಗುತ್ತಿದ್ದಂತೆ ನಗರ ಪೊಲೀಸರು ಆಸ್ಪತ್ರೆ, ಫ್ಯಾಕ್ಟರಿಗೆ ದೌಡಾಯಿಸಿದ್ದಾರೆ. ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಆಸ್ಪತ್ರೆಗೆ ಭೇಟಿ ಅನಾರೋಗ್ಯಕ್ಕೀಡಾದವರ ಯೋಗಕ್ಷೇಮ ವಿಚಾರಿಸಿದ್ದಾರೆ.

from India & World News in Kannada | VK Polls https://ift.tt/DoMhEQF

ನೂತನ ಸಿಡಿಎಸ್‌ಗಾಗಿ ಸೇವಾನಿರತ ಮತ್ತು ನಿವೃತ್ತ ಅಧಿಕಾರಿಗಳಿಗಾಗಿ ಕೇಂದ್ರದ ಶೋಧ!

ಭಾರತದ ಮೊಟ್ಟ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಮರಣದಿಂದಾಗಿ ತೆರವಾಗಿರುವ ಸ್ಥಾನ ತುಂಬಲು, ಸೇವಾನಿರತ ಮತ್ತು ಸೇವೆಯಿಂದ ನಿವೃತ್ತರಾಗಿರುವ ಸೇನಾಧಿಕಾರಿಗಳಿಗಾಗಿ ಕೇಂದ್ರ ಸರ್ಕಾರ ಹುಡುಕಾಟ ನಡೆಸುತ್ತಿದೆ. ತೆರವಾಗಿರುವ ಸಿಡಿಎಸ್ ಸ್ಥಾನ ತುಂಬಲು ಸೇವಾನಿರತ ಅಥವಾ ಸೇವೆಯಿಂದ ನಿವೃತ್ತರಾಗಿರುವ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರ ಹುಡುಕಾಟ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಆಯ್ಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಲಾಗಿದೆ ಎನ್ನಲಾಗಿದೆ. ಮೂರು ಅಥವಾ ನಾಲ್ಕು ಸ್ಟಾರ್‌ ಮಟ್ಟದ ಅಧಿಕಾರಿಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎನ್ನಲಾಗಿದೆ.

from India & World News in Kannada | VK Polls https://ift.tt/GgFVKLD

'ವಿದೇಶಿ ಪಿತೂರಿ' ಪತ್ರ ತನಿಖೆ ಮಾಡದ ನ್ಯಾಯಾಂಗದ ವಿರುದ್ಧ ಇಮ್ರಾನ್ ಖಾನ್ ಬೇಸರ!

ತಮ್ಮ ಸರ್ಕಾರ ಉರುಳಿಸಲು ವಿದೇಶಿ ಪಿತೂರಿ ನಡೆಸಲಾಗಿತ್ತು ಎಂದು ಆರೋಪಿಸುತ್ತಲೇ ಇರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಇದೀಗ ವಿದೇಶಿ ಪಿತೂರಿಗೆ ಸಂಬಂಧಿಸಿದ ಪತ್ರದ ಬಗ್ಗೆ ತನಿಖೆ ಮಾಡದ ನ್ಯಾಯಾಂಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಾಚಿಯ ಬಾಗ್-ಎ-ಜಿನ್ನಾ' ಗ್ರೌಂಡ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ತಮ್ಮ ಸರ್ಕಾರ ಉರುಳಿಸಲು ನಡೆದಿದ್ದ ವಿದೇಶಿ ಪಿತೂರಿ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಕೂಡ ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/V3i97Py

ಕೌಂಟಿ ಕ್ರಿಕೆಟ್‌: ಪದಾರ್ಪಣೆ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಚೇತೇಶ್ವರ್‌ ಪೂಜಾರ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುವ ಅವಕಾಶ ಸಿಗದೇ ಇರುವ ನಿಟ್ಟಿನಲ್ಲಿ ಬಿಡುವಿನ ಸಮಯದಲ್ಲಿ ಶ್ರೇಷ್ಠ ಲಯಕ್ಕೆ ಮರಳಿ ಭಾರತ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವುದನ್ನು ಎದುರು ನೋಡುತ್ತಿರುವ ಅನುಭವಿ ಬ್ಯಾಟರ್‌ ಚೇತೇಶ್ವರ್‌ ಪೂಜಾರ, ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್‌ ತಂಡದ ಪರ ಪದಾರ್ಪಣೆಯ ಪಂದ್ಯದಲ್ಲೇ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಫಾಲೋ ಆನ್‌ ಪಡೆದು ಸೋಲಿನ ಸುಳಿಯಲ್ಲಿದ್ದ ಸಸೆಕ್ಸ್‌ ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ಮಹಾಗೋಡೆಯಂತೆ ನಿಂತ ಪೂಜಾರ, ಕ್ಯಾಪ್ಟನ್‌ ಟಾಮ್‌ ಹೈನೆಸ್‌ ಜೊತೆಗಿನ ಜುಗಲ್ಬಂದಿಯೊಂದಿಗೆ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/o0Yt8Zn

'ಭಾರತದ ಪರ ವಿಶೇಷ ಸಾಧನೆ ಮಾಡುವುದೇ ನನ್ನ ಗುರಿ' ಎಂದ ದಿನೇಶ್‌ ಕಾರ್ತಿಕ್!

ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್‌ ತಮ್ಮ ಕ್ರಿಕೆಟ್‌ ವೃತ್ತಿಬದುಕಿನ ಶ್ರೇಷ್ಠ ಲಯ ಕಂಡುಕೊಂಡಿದ್ದಾರೆ. ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 200ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುತ್ತಿರುವ ದಿನೇಶ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನೂತನ ಫಿನಿಷರ್‌ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಡಿಕೆ, 66* ರನ್‌ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಬಗ್ಗೆ ಮಾತನಾಡಿ ತಮ್ಮ ಬಹುದೊಡ್ಡ ಗುರಿ ಏನೆಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Vz8Ruft

ಬಿಜೆಪಿ ಕಾರ್ಯಕಾರಿಣಿ ಸಭೆ: ಚುನಾವಣಾ ರಣತಂತ್ರದ ಚರ್ಚೆ; ನಡ್ಡಾ ನೀಡಲಿರುವ ಸಲಹೆ ಸೂಚನೆಗಳೇನು?

ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಲಿದ್ದಾರೆ.

from India & World News in Kannada | VK Polls https://ift.tt/oVCl8n5

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಖುದ್ದು ಹಾಜರಾತಿಯಿಂದ ವಿ. ಸೋಮಣ್ಣಗೆ ವಿನಾಯಿತಿ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಖುದ್ದು ಹಾಜರಾತಿಯಿಂದ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿನಾಯಿತಿ ನೀಡಿದೆ. ಸಂಪುಟ ದರ್ಜೆ ಸಚಿವರಾಗಿರುವುದರಿಂದ ಹಾಗೂ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದು ಅಗತ್ಯವಾಗಿರುವುದರಿಂದ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಿಲ್ಲ. ಹಾಗಾಗಿ, ವಿನಾಯಿತಿ ನೀಡಬೇಕೆಂದು ಸೋಮಣ್ಣ ಮನವಿ ಮಾಡಿದ್ದರು.

from India & World News in Kannada | VK Polls https://ift.tt/jGVatRL

ಮಳೆ ನಡುವೆಯೂ 'ಕರಗ'ದ ಉತ್ಸಾಹ: ವಿಜೃಂಭಣೆಯಿಂದ ನಡೆದ ಕರಗ ಉತ್ಸವ

ಕಳೆದ ಎರಡು ವರ್ಷಗಳಿಂದ ಕೊರೊನಾ ವೈರಸ್ ಕಾರಣದಿಂದ ಕರಗದ ಸಂಭ್ರಮವನ್ನು ಕಾಣುವ ಅವಕಾಶ ಕಳೆದುಕೊಂಡಿದ್ದ ಬೆಂಗಳೂರು ನಗರದ ಜನರಿಗೆ ಈ ಬಾರಿ ಮಳೆರಾಯ ಉತ್ಸಾಹಕ್ಕೆ ತಣ್ಣೀರೆರಚಿದ್ದಾನೆ. ಅದರ ನಡುವೆಯೂ ಸಾವಿರಾರು ಭಕ್ತರು ಕರಗ ಉತ್ಸವ ಸಂಭ್ರಮದಲ್ಲಿ ಭಾಗವಹಿಸಿದರು.

from India & World News in Kannada | VK Polls https://ift.tt/xue17Ct

Russia-Ukraine Crisis: ಉಕ್ರೇನ್ ಪ್ರತಿರೋಧಕ್ಕೆ ಮತ್ತಷ್ಟು ಕ್ರೋಧಗೊಂಡ ರಷ್ಯಾ: ಹೆಚ್ಚಿದ ದಾಳಿ

ತನ್ನ ಪ್ರಮುಖ ಯುದ್ಧ ನೌಕೆಯ ಮೇಲೆ ಉಕ್ರೇನ್ ಸೇನೆ ದಾಳಿ ನಡೆಸಿ ಹಾನಿ ಮಾಡಿದ ಬಳಿಕ ರಷ್ಯಾದ ಕ್ರೋಧ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ತನ್ನ ವಶದಲ್ಲಿದ್ದ ಪಟ್ಟಣಗಳಲ್ಲಿ ನರಮೇಧಗಳನ್ನು ನಡೆಸಿರುವ ರಷ್ಯಾ, ಮತ್ತಷ್ಟು ಹಾನಿ ನಡೆಸುವ ಸೂಚನೆ ನೀಡಿದೆ.

from India & World News in Kannada | VK Polls https://ift.tt/57sxpf6

ಕೊರಾನಾ ನಿಯಂತ್ರಣಕ್ಕೆ ಬೆಂಗಳೂರು ಲಸಿಕೆ: 100 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ ಕೆಡದ ಸಾಮರ್ಥ್ಯ

ನಾಲ್ಕು ವಾರಗಳ ಕಾಲ ಸಾಮಾನ್ಯ ತಾಪಮಾನದಿಂದ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಿಸಬಹುದಾದ ಲಸಿಕೆಯನ್ನು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಸ್ಟಾರ್ಟಪ್‌ ಕಂಪನಿ 'ಮಿನ್‌ವ್ಯಾಕ್ಸ್‌' ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಸುಮಾರು 90 ನಿಮಿಷಗಳವರೆಗೆ ಗರಿಷ್ಠ 100 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಲಸಿಕೆಯು ತನ್ನ ಶಕ್ತಿಯನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಅಭಿವೃದ್ಧಿಪಡಿಸಲಾಗಿದೆ. ಕೊರೊನಾ ನಿರೋಧಕ ಲಸಿಕೆಗಳ ದೀರ್ಘಾವಧಿ ಸಂಗ್ರಹ ಮತ್ತು ಸ್ಥಳಾಂತರಕ್ಕೆ ಪ್ರಮುಖ ಸವಾಲಾಗಿರುವ 'ಕೋಲ್ಡ್‌ ಸ್ಟೊರೇಜ್‌' ವ್ಯವಸ್ಥೆಯ ಅಗತ್ಯವೇ ಇಲ್ಲದಂತಹ ಲಸಿಕೆ ದಾಗಿದೆ.

from India & World News in Kannada | VK Polls https://ift.tt/jvM4E0o

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣದ ತನಿಖೆ ಸಿಬಿಐಗೆ ವಹಿಸಲಿ: ದ.ಕ ಕಾಂಗ್ರೆಸ್‌

ಶಿವಮೊಗ್ಗ ಕೋಮು ಗಲಭೆಯಲ್ಲಿ ಕೊಲೆಯಾದ ಹರ್ಷನಿಗೆ ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳು ನೆರವು ನೀಡಿದ್ದವು. ಆದರೆ ಆತ್ಮಹತ್ಯೆಗೈದ್ದ ಬಿಜೆಪಿ ಕಾರ್ಯಕರ್ತನಾದ ಸಂತೋಷ್‌ ಪಾಟೀಲ್‌ಗೆ ಯಾರೂ ಪರಿಹಾರ ಘೋಷಿಸಿಲ್ಲ ಯಾಕೆ? ಈ ತಾರತಮ್ಯದ ಉದ್ದೇಶವೇನು? ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಿನೇಶ್‌ಗೂ ಸರಿಯಾದ ಪರಿಹಾರ ನೀಡಿಲ್ಲ ಎಂದು ಹರೀಶ್ ಕುಮಾರ್ ದೂರಿದರು.

from India & World News in Kannada | VK Polls https://ift.tt/WiMJFbP

ಹೆಂಡತಿ ಗರ್ಭಿಣಿಯಾಗಲು ಕೈದಿಗೆ 15 ದಿನ ಪೆರೋಲ್‌ ನೀಡಿದ ರಾಜಸ್ಥಾನದ ನ್ಯಾಯಾಲಯ

ಈ ಆದೇಶ ಹೊರಡಿಸುವ ಸಂದರ್ಭದಲ್ಲಿ ಕೋರ್ಟ್‌, ಋುಗ್ವೇದ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನೂ ಉಲ್ಲೇಖಿಸಿದೆ. ಜುದಾಯಿಸಂ, ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಧರ್ಮದ ತತ್ವಗಳನ್ನು ಉಲ್ಲೇಖಿಸಿ, ಆತನ ಪತ್ನಿ ತನ್ನ ಅಪೇಕ್ಷೆಯಂತೆ ಗರ್ಭಿಣಿಯಾಗಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಷೋಡಶ ಸಂಸ್ಕಾರಗಳಲ್ಲಿ ಮಗುವನ್ನು ಹೆರುವುದು ಮಹಿಳೆಯ ಮೊದಲ ಹಕ್ಕು ಎಂದೂ ಕೋರ್ಟ್‌ ಒತ್ತಿ ಹೇಳಿದೆ. ವಂಶದ ಸಂರಕ್ಷಣೆಯ ಉದ್ದೇಶಕ್ಕೆ ಸಂತತಿ ಹೊಂದುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಧಾರ್ಮಿಕ ತತ್ವಗಳು, ಭಾರತೀಯ ಸಂಸ್ಕೃತಿ ಮತ್ತು ವಿವಿಧ ನ್ಯಾಯ ಘೋಷಣೆಗಳ ಮೂಲಕ ಅದು ಗುರುತಿಸಲ್ಪಟ್ಟಿದೆ ಎಂದೂ ನ್ಯಾಯಾಲಯ ಹೇಳಿದೆ.

from India & World News in Kannada | VK Polls https://ift.tt/U03erlW

ಪಾಲಿಕೆಯಿಂದ ಅನುಮತಿ ಪಡೆದು ಹೊಗೆರಹಿತ ಹುಕ್ಕಾ ಸೇವನೆಗೆ ಸ್ಮೋಕಿಂಗ್‌ ಝೋನ್‌ ರಚನೆ ಮಾಡಬೇಕು- ಹೈಕೋರ್ಟ್

ನ್ಯಾಯಬದ್ಧವಾಗಿ ನಾವು ನಡೆಸುತ್ತಿರುವ ಚಟುವಟಿಕೆಗಳಲ್ಲಿ ಪ್ರತಿವಾದಿ ಪೊಲೀಸರು ಹಸ್ತಕ್ಷೇಪ ಮಾಡದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿರುವ ನ್ಯಾಯಾಲಯ, ‘ಹಿಂದೆ ಹೈಕೋರ್ಟ್‌ ಇದೇ ವಿಚಾರದ ಸಂಬಂಧ 2015 ಮತ್ತು 2017ರಲ್ಲಿ ತೀರ್ಪುಗಳನ್ನು ನೀಡಿದೆ. ಅವುಗಳಲ್ಲಿ ಹುಕ್ಕಾ ಮೂಲಕ ತಂಬಾಕು ಸೇವನೆಗೆ ಅವಕಾಶ ಇರುವುದರಿಂದ ಹುಕ್ಕಾ ಯಂತ್ರಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ ಹುಕ್ಕಾವನ್ನು ಬೇರೆ ಅಕ್ರಮ ಉದ್ದೇಶಕ್ಕೆ ಬಳಸಿದರೆ ಖಂಡಿತಾ ಆಗ ಪೊಲೀಸರು ಮಧ್ಯೆಪ್ರವೇಶ ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

from India & World News in Kannada | VK Polls https://ift.tt/5ozgnOX

ವಿಶ್ವ ಸಮರ ಶುರುವಾಗಿದೆ: ರಷ್ಯಾದ ಅಧಿಕೃತ ಟಿವಿ ವಾಹಿನಿ ಘೋಷಣೆಯಿಂದ ಗಲಿಬಲಿ!

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಮೂರನೇ ಮಹಾಯುದ್ಧ ಆರಂಭವಾಗುವ ಆತಂಕ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಅಂತದ್ದರಲ್ಲಿ ರಷ್ಯಾದ ಅಧಿಕೃತ ಟಿವಿ ವಾಹಿನಿ, ಈಗಾಗಲೇ ವಿಶ್ವ ಸಮರ ಶುರುವಾಗಿದೆ ಎಂದು ಘೋಷಿಸಿರುವುದು ಗಲಿಬಿಲಿಗೆ ಕಾರಣವಾಗಿದೆ. ರಷ್ಯಾದ ಅತ್ಯಾಧುನಿಕ ಯುದ್ಧ ನೌಕೆಯಾದ ಮೊಸ್ಕ್ವಾವನ್ನು ಉಕ್ರೇನ್ ಹೊಡೆದುರುಳಿದ ಮರುಕ್ಷಣದಿಂದಲೇ ಮೂರನೇ ಮಹಾಯುದ್ಧ ಆರಂಭವಾಗಿದೆ ಎಂದು ರಷ್ಯಾ 1 ವಾಹಿನಿಯ ನಿರೂಪಕ ​ಓಲ್ಗಾ ಸ್ಕಬೇಯೆವಾ​ ಲೈವ್‌ನಲ್ಲೇ ಘೋಷಣೆ ಮಾಡಿದ್ದಾರೆ. ರಷ್ಯಾ ಟಿವಿ ವಾಹಿನಿಯ ನಿರೂಪಕನ ಈ ಮಾತುಗಳು ಆತಂಕಕ್ಕೆ ಕಾರಣವಾಗಿದೆ.

from India & World News in Kannada | VK Polls https://ift.tt/8FK4Ejq

'ಡೆಬ್ಯೂ ಟೈಮ್‌', ಐಪಿಎಲ್‌ಗೆ ಅರ್ಜುನ್‌ ತೆಂಡೂಲ್ಕರ್‌ ಪದಾರ್ಪಣೆ ಸಾಧ್ಯತೆ!

ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್ ಕ್ರಿಕೆಟ್‌ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಮುಂಬೈ ತಂಡದ ಪರ ಟಿ20 ಕ್ರಿಕೆಟ್‌ ಆಡಿ ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆದಿದ್ದ 23 ವರ್ಷದ ಆಟಗಾರನನ್ನು, ಐಪಿಎಲ್ 2022 ಟೂರ್ನಿ ಸಲುವಾಗಿ ನಡೆದ ಆಟಗಾರರ ಮೆಗಾ ಆಕ್ಷನ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಬರೋಬ್ಬರಿ 30 ಲಕ್ಷ ರೂ ಖರ್ಚುಮಾಡಿ ಖರೀದಿ ಮಾಡಿತ್ತು. ಐಪಿಎಲ್ 2021 ಟೂರ್ನಿಯಲ್ಲೂ 20 ಲಕ್ಷ ರೂ. ಬೆಲೆಯ ಮೂಲ ಬೆಲೆಗೆ ಮುಂಬೈ ತಂಡದಲ್ಲಿ ಇದ್ದರಾದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೀಗ ಐಪಿಎಲ್‌ ಆಡುವ ಸಮಯ ಬಂದಂತ್ತಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ADKm0tY

ಇಶಾನ್‌ ಕಿಶನ್ 15 ಕೋಟಿ ರೂ. ಪಡೆಯುವಷ್ಟು ಯೋಗ್ಯ ಆಟಗಾರನಲ್ಲ: ಶೇನ್ ವಾಟ್ಸನ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ನಡೆದ ಮೆಗಾ ಆಕ್ಷನ್‌ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಮುಂಬೈ ಇಂಡಿಯನ್ಸ್‌ನ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌. ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹರಾಜಿನಲ್ಲಿ ತನ್ನ ಆಟಗಾರನಿಗೆ 15.25 ಕೋಟಿ ರೂ.ಗಳ ಭಾರಿ ಬೆಲೆ ನೀಡಿ ಮರಳಿ ಖರೀದಿ ಮಾಡಿತ್ತು. ಆದರೆ, ಐಪಿಎಲ್ 2022 ಇದಕ್ಕೆ ತಕ್ಕ ಆಟ ಹೊರತರುವಲ್ಲಿ ಇಶಾನ್‌ ಕಿಶನ್‌ ವಿಫಲರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಶೇನ್‌ ವಾಟ್ಸನ್‌, ಅಷ್ಟು ದೊಡ್ಡ ಬೆಲೆ ಕೊಡುವಷ್ಟು ಕಿಶನ್ ಯೋಗ್ಯ ಆಟಗಾರನಲ್ಲ ಎಂಬ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/MkWuiJD

ಆರ್‌ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಕ್ಯಾಪಿಟಲ್ಸ್‌ಗೆ ಆತಂಕ, ಫರಾನ್‌ ಪ್ಯಾಟ್ರಿಕ್‌ಗೆ ಕೋವಿಡ್‌-19!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮಿಶ್ರ ಫಲ ಕಂಡಿರುವ ರಿಷಭ್ ಪಂತ್‌ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಮೊದಲ ನಾಲ್ಕು ಪಂದ್ಯಗಳಲ್ಲಿ ತಲಾ 2 ಸೋಲು ಮತ್ತು ಗೆಲುವಿನ ರುಚಿ ನೋಡಿದೆ. ಇದೀಗ ತನ್ನ ಐದನೇ ಪಂದ್ಯದಲ್ಲಿ ಅಪಾಯಕಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪೈಪೋಟಿ ನಡೆಸಲು ಎದುರು ನೋಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೋವಿಡ್‌-19 ಭೀತಿ ಎದುರಿಸುವಂತ್ತಾಗಿದೆ. ತಂಡದ ಫಿಸಿಯೋ ಪ್ಯಾಟ್ರಿಕ್‌ ಫರಾತ್‌ ಅವರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಐಪಿಎಲ್‌ ಆಡಳಿತ ಮಂಡಳಿ ಹದ್ದಿನ ಕಣ್ಣಿಟ್ಟಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pjf26hC

RCB vs DC: ಡೆಲ್ಲಿ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 27ನೇ ಪಂದ್ಯದಲ್ಲಿ ಸೆಣಸಲಿದೆ. ಇಲ್ಲಿಯವರೆಗೂ ಆಡಿರುವ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಪಡೆದಿರುವ ಆರ್‌ಸಿಬಿ, ಇನ್ನುಳಿದ ಎರಡರಲ್ಲಿ ಸೋಲು ಅನುಭವಿಸಿದೆ. ಒಟ್ಟು 6 ಅಂಕ ಕಲೆ ಹಾಕಿರುವ ಫಾಫ್‌ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/hc5fyBA

ಕೆಎಸ್‌ ಈಶ್ವರಪ್ಪ ಪ್ರಕರಣದಿಂದ ಚುನಾವಣಾ ತಯಾರಿಯ ಮೊದಲ ಹೆಜ್ಜೆಯಲ್ಲಿಯೇ ಬಿಜೆಪಿಗೆ ತೊಡಕು

ಭರ್ಜರಿ ಪ್ರಚಾರದಿಂದ ಹೊಸ ಹುರುಪಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡು ಮೂರು ವಿಭಾಗದಲ್ಲಿ ಉದ್ಘಾಟನೆಯಾಯಿತು. ಆದರೆ, ಅಷ್ಟರಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಭೆಯ ದಿಕ್ಕುದೆಸೆ ತಪ್ಪುವಂತೆ ಮಾಡಿತು. ವಿಶೇಷ ಎಂದರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌ ಈಶ್ವರಪ್ಪ ಮೈಸೂರು ವಿಭಾಗೀಯ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ತಂಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡ ಇದ್ದರು. ಆತ್ಮಹತ್ಯೆ ಪ್ರಕರಣ ಭಾರಿ ವಿವಾದ ಎಬ್ಬಿಸುತ್ತಿದ್ದಂತೆ ಸಭೆಯಿಂದ ಹೊರ ಬಂದ ಈಶ್ವರಪ್ಪ ದೂರವಾಣಿಯಲ್ಲಿ ಹಲವರಿಂದ ಮಾಹಿತಿ ಪಡೆದುಕೊಂಡರು.

from India & World News in Kannada | VK Polls https://ift.tt/Ngdzhnm

ವಿವಾದಗಳ ಜತೆಜತೆಗೆ ಬೆಳೆದು ಬಂದ ಪಕ್ಷ ನಿಷ್ಠ, ಸಂಘನಿಷ್ಠ ನಾಯಕ ಕೆಎಸ್‌ ಈಶ್ವರಪ್ಪರನ್ನು ಬೆಂಬಿಡದ ಸಂಕಷ್ಟ!

ಬಿಜೆಪಿಯ ಕಟ್ಟಾ ನಿಷ್ಠರು, ಸಂಘ ಪರಿವಾರದಿಂದ ಪ್ರಬಲ ನಾಯಕರೂ ಆದ ಕೆಎಸ್ ಈಶ್ವರಪ್ಪ, ಶಿವಮೊಗ್ಗ ಜಿಲ್ಲೆ ರಾಜಕಾರಣದಲ್ಲಿ ಬಿಎಸ್‌ವೈ ಜತೆ ಜತೆಗೇ ಗುರುತಿಸಿಕೊಂಡು ಬಂದವರು. ಜತೆಗೆ 2 ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈಶ್ವರಪ್ಪ ಅವರಿಗೂ ವಿವಾದಕ್ಕೂ ಬಿಡದ ನಂಟು. ಅದಕ್ಕೆ ಇತ್ತೀಚಿನ ನಿದರ್ಶನವೆಂದರೆ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಸಮಯ ಬರಬಹುದು ಎಂಬ ಹೇಳಿಕೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಧ್ವಜದ ಕಂಬದ ಮೇಲೆ ಕೇಸರಿ ಬಾವುಟ ಹಾರಿಸಿದ್ದು ಸುದ್ದಿಯಾಗಿತ್ತು. ಇದನ್ನು ಪ್ರತಿಪಕ್ಷ ಕಾಂಗ್ರೆಸ್‌ ಟೀಕಿಸಿತ್ತು.

from India & World News in Kannada | VK Polls https://ift.tt/sa6TqzC

ಯುದ್ಧದ ನಡುವೆಯೂ ರಷ್ಯಾದಿಂದ ಭಾರತಕ್ಕೆ ಸರಾಗವಾಗಿ ರಕ್ಷಣಾ ಉಪಕರಣ ರಫ್ತು: ಆದರೆ..!

ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲೂ, ಭಾರತಕ್ಕೆ ರಕ್ಷಾಣಾ ಉಪಕರಣಗಳನ್ನು ರಫ್ತು ಮಾಡುವ ತನ್ನ ವಾಗ್ದಾನವನ್ನು ರಷ್ಯಾ ಮುಂದುವರೆಸಿದ್ದು, ಭಾರತೀಯ ವಾಯುಸೇನೆ ಹೊಸದಾಗಿ ಯುದ್ಧ ವಿಮಾನಗಳ ಬಿಡಿಭಾಗಗಳನ್ನು ಸ್ವೀಕರಿಸಿದೆ. ಸಮುದ್ರ ಮಾರ್ಗದ ಮೂಲಕ ಈ ರಕ್ಷಣಾ ಉಪಕರಣಗಳು ಭಾರತ ತಲುಪಿವೆ. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣಕ್ಕೆ ರಷ್ಯಾದ ಬ್ಯಾಂಕ್‌ಗಳ ಮೇಲೆ ಜಾಗತಿಕವಾಗಿ ನಿರ್ಬಂಧಗಳನ್ನು ಹೇರಲಾಗಿದೆ. ಹೀಗಾಗಿ ಭಾರತಕ್ಕೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುವ ರಷ್ಯನ್ ಕಂಪನಿಗಳಿಗೆ ಪೇಮೆಂಟ್ ಮಾಡಲು ಹಲವು ತೊಡಕುಗಳನ್ನು ಭಾರತ ಎದುರಿಸುತ್ತಿದೆ.

from India & World News in Kannada | VK Polls https://ift.tt/SXA7HIj

ಇಮ್ರಾನ್ ಖಾನ್ ಅವರ 'ವಿದೇಶಿ ಪಿತೂರಿ'ಯ ತುತ್ತೂರಿ ಊದಲು ತಯಾರಿಲ್ಲ ಎಂದ ಪಾಕ್ ಸೇನೆ!

ತಮ್ಮ ನೇತೃತ್ವದ ಸರ್ಕಾರ ಉರುಳಿಸಲು ವಿದೇಶಿ ಪಿತೂರಿ ನಡೆಸಲಾಗಿತ್ತು ಎಂಬ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಾದವನ್ನು, ಪಾಕಿಸ್ತಾನದ ಸೇನೆ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ(ಐಎಸ್‌ಪಿಆರ್), ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಲು ವಿದೇಶಿ ಪಿತೂರಿ ನಡೆದಿತ್ತು ಎಂಬ ವಾದದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಅಲ್ಲದೇ ಇಮ್ರಾನ್ ಖಾನ್ ಸರ್ಕಾರ ಉರುಳಿಸುವಲ್ಲಿ ಸೇನೆಯ ಪಾತ್ರವೂ ಇದೆ ಎಂಬ ಆರೋಪವನ್ನೂ ನಿರಾಕರಿಸಿದೆ.

from India & World News in Kannada | VK Polls https://ift.tt/3NyGwuc

'ಸಚಿನ್‌ ತೆಂಡೂಲ್ಕರ್‌ ಕಾಲಿಗೆ ಬಿದ್ದ ಜಾಂಟಿ ರೋಡ್ಸ್‌', ವಿಡಿಯೋ ವೈರಲ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸತತ ಐದನೇ ಪಂದ್ಯ ಸೋತಿದೆ. ಐದು ಬಾರಿಯ ಚಾಂಪಿಯನ್ಸ್‌ ಈ ಬಾರಿ ಖಾತೆ ತೆರೆಯಲು ಸಾಧ್ಯವಾಗದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯುವಂತ್ತಾಗಿದೆ. ಬುಧವಾರ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಅವಕಾಶ ಇತ್ತಾದರೂ, ಸ್ಲಾಗ್‌ ಓವರ್‌ಗಳಲ್ಲಿ ಪ್ರಮುಖ ವಿಕೆಟ್‌ಗಳನ್ನು ಕೈಚೆಲ್ಲಿ ನಿರಾಶೆ ಅನುಭವಿಸಿತು. ಪಂದ್ಯದಲ್ಲಿ ಮುಂಬೈ 12 ರನ್‌ಗಳಿಂದ ಸೋಲನುಭವಿಸಿತು. ಅಂದಹಾಗೆ ಈ ಪಂದ್ಯದ ಬಳಿಕ ನಡೆದ ಅಚ್ಚರಿಯ ಬೆಳವಣಿಗೆಯೊಂದು ಈಗ ಭಾರಿ ಸದ್ದು ಮಾಡಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/qHewTPu

IPL 2022: 'ನಾವು ಅತ್ಯುತ್ತಮ ಕ್ರಿಕೆಟ್‌ ಆಡುತ್ತಿಲ್ಲ'- ಸತತ 5ನೇ ಸೋಲಿನ ಬಗ್ಗೆ ರೋಹಿತ್ ಶರ್ಮಾ ಬೇಸರ!

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ನಾವು ಅತ್ಯುತ್ತಮ ಕ್ರಿಕೆಟ್‌ ಆಡುವಲ್ಲಿ ವಿಫಲರಾಗಿದ್ದೇವೆ. ಈ ಕಾರಣದಿಂದಲೇ ನಾವು ಸೋಲಿನ ತಂಡವಾಗಿ ಉಳಿದಿದ್ದೇವೆಂದು ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ 12 ರನ್‌ಗಳಿಂದ ಸೋಲು ಅನುಭವಿಸಿತು. ಪ್ರಸಕ್ತ ಟೂರ್ನಿಯಲ್ಲಿ ಮುಂಬೈಗೆ ಸತತ ಐದನೇ ಸೋಲು ಇದಾಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/H1hGvNs

ಕೋವಿಡ್ ಆಪತ್ಕಾಲದಲ್ಲಿ ಸೇವೆಗೈದ ಆರೋಗ್ಯ ಸಿಬ್ಬಂದಿಗೆ ಭತ್ಯೆಯೇ ನೀಡದೆ ಕೆಲಸದಿಂದ ತೆರವುಗೊಳಿಸಿದ ಸರ್ಕಾರ!

ಇದೇ ವರ್ಷ ಮಾ.31ರಂದು ಈ ಎಲ್ಲಾ ಸಿಬ್ಬಂದಿಯನ್ನು ಕೆಲಸದಿಂದ ಕೂಡ ಬಿಡುಗಡೆ ಮಾಡಲಾಗಿದೆ. ಅತ್ತ ಕೆಲಸ ಇಲ್ಲದೆ ಸಂಬಳವೂ ಇಲ್ಲ. ಅಪಾಯ ಭತ್ಯೆ ಕೂಡ ಇಲ್ಲದೆ ಸಿಬ್ಬಂದಿ ಸ್ಥಿತಿ ಅತಂತ್ರವಾಗಿದೆ. 23 ತಜ್ಞರು, 289 ವೈದ್ಯಾಧಿಕಾರಿಗಳು, 1,615 ಶೂಶ್ರೂಷಕರು, 1151 ಪ್ರಯೋಗ ಶಾಲಾ ತಂತ್ರಜ್ಞರು, 490 ಫಾರ್ಮಾಸಿಸ್ಟ್‌, 1967 ಗ್ರೂಪ್‌ 'ಡಿ' , 319 ಕಿರಿಯ ಆರೋಗ್ಯ ಸಹಾಯಕರು, 510 ಡಾಟಾ ಎಂಟ್ರಿ ಆಪರೇಟರ್‌, 40 ನಾನ್‌ ಕ್ಲಿನಿಕಲ್‌ ಸಿಬ್ಬಂದಿಗಳೂ ಸೇರಿದಂತೆ ಒಟ್ಟು 6,463 ನೌಕರರಿಗೆ ಅಪಾಯ ಭತ್ಯೆ ನೀಡಬೇಕಿದೆ.

from India & World News in Kannada | VK Polls https://ift.tt/AaVwUZR

ಈಶ್ವರಪ್ಪ ಪಕ್ಷ ನಿಷ್ಠೆ, ಹಿರಿತನಕ್ಕೆ ಬಿಜೆಪಿ ಹೈಕಮಾಂಡ್‌ ಸಾಫ್ಟ್‌ ನಿಲುವು ತಾಳುತ್ತಾ, ತಲೆ ದಂಡ ನೀಡುತ್ತಾ?

​​ಈಶ್ವರಪ್ಪ ಅವರು ಮೂಲತಃ ಆರ್‌ಎಸ್‌ಎಸ್‌ ಹಿನ್ನೆಲೆಯವರು. ಜತೆಗೆ ಸಂಘ, ಪಕ್ಷ ನಿಷ್ಠರು. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಜತೆಯಲ್ಲೇ ಪಕ್ಷ ಸಂಘಟಿಸಿದವರು. ಹಿರಿಯ ಅನುಭವಿ ರಾಜಕಾರಣಿ ಮಾತ್ರವಲ್ಲದೆ ಪಕ್ಷದ ಪ್ರಭಾವಿ ಹಿಂದುಳಿದ ವರ್ಗಗಳ ನಾಯಕರು.

from India & World News in Kannada | VK Polls https://ift.tt/ASdOsPr

ಹಲವು ಜಿಲ್ಲೆಗಳಲ್ಲಿ ತಂಪೆರೆದ ವರ್ಷಧಾರೆ; ಇನ್ನೂ 5 ದಿನ ಮಳೆ ಸಾಧ್ಯತೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್!

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವು ತಂಪಾದ ಅನುಭವ ನೀಡಿತು. ಸಂಜೆ ವೇಳೆಗೆ ಭಾರಿ ಗಾಳಿಯೊಂದಿಗೆ ಸುರಿದ ಮಳೆಯು ಜನರಿಗೆ ತಂಪೆರಿಯಿತು. ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಪರದಾಡಿದರೂ ಬೇಸಿಗೆಯ ಬೇಕೆ ಕೊಂಚ ತಣ್ಣಗಾಯಿತು. ತಮಿಳು ನಾಡು ತೀರ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಸೈಕ್ಲೋನ್‌ ಪ್ರಭಾವದಿಂದಾಗಿ ಕರ್ನಾಟಕದ ಕರಾವಳಿ ಹಾಗೂ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.

from India & World News in Kannada | VK Polls https://ift.tt/lKZCpGx

'ವಿದೇಶಿ ಪಿತೂರಿ'ಯ ಸಂಸದೀಯ ತನಿಖಾ ಸಮಿತಿಯ ಭಾಗವಾಗದಿರಲು ಪಿಟಿಐ ನಿರ್ಧಾರ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಲು ನಡೆದಿದೆ ಎನ್ನಲಾದ ವಿದೇಶಿ ಪಿತೂರಿ ಬಗ್ಗೆ, ರಾಷ್ಟ್ರೀಯ ಭದ್ರತೆಯ ಸಂಸದೀಯ ಸಮಿತಿ ನಡೆಸಲಿರುವ ತನಿಖಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಪಕ್ಷ ಘೋಷಿಸಿದೆ. ಸಂಸದೀಯ ಸಮಿತಿ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಿಟಿಐ, ಈ ಸಮಿತಿಯ ಭಾಗವಾಗದಿರಲು ನಿರ್ಧರಿಸಿದೆ. ಅಲ್ಲದೇ ಈ ವಿದೇಶಿ ಪಿತೂರಿ ಬಗ್ಗೆ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಬೇಕು ಎಂದು ಪಿಟಿಐ ಆಗ್ರಹಿಸಿದೆ.

from India & World News in Kannada | VK Polls https://ift.tt/WP8OBAX

IPL 2022: ರಾಹುಲ್‌ ದ್ರಾವಿಡ್‌ಗೆ ಸಡ್ಡು ಹೊಡೆದ ಮಯಾಂಕ್‌ ಅಗರ್ವಾಲ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕ್ಯಾಪ್ಟನ್ಸಿ ಅಭಿಯಾನ ಕೂಡ ಆರಂಭಿಸಿರುವ ಮಯಾಂಕ್‌ ಅಗರ್ವಾಲ್‌, ಈವರೆಗೆ ಟ್ರೋಫಿ ಗೆಲ್ಲದೇ ಉಳಿದಿರುವ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬುಧವಾರ ನಡೆದ ಮುಂಬೈ ಇಂಡಿಯನ್ಸ್‌ ಎದುರು ಕೇವಲ 32 ಎಸೆತಗಳಲ್ಲಿ 52 ರನ್‌ ಸಿಡಿಸಿದ ಮಯಾಂಕ್‌ ಅಗರ್ವಾಲ್‌, ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಬ್ಬರು ದಿಗ್ಗಜರಿಗೆ ಸಡ್ಡು ಹೊಡೆದಿದ್ದಾರೆ. ಅಂದಹಾಗೆ ಐಪಿಎಲ್ 2022 ಟೂರ್ನಿಯಲ್ಲಿ ಮಯಾಂಕ್ ತಮ್ಮ ಮೊದಲ ಫಿಫ್ಟಿ ದಾಖಲಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/9VwMEBS

ಬೆಂಗಳೂರಿನ ಕಾರಂತ ಬಡಾವಣೆಯ 1,475 ಕಟ್ಟಡ ಸಕ್ರಮ..! ಮನೆ ಮಾಲೀಕರು ನಿರಾಳ..

ಉದ್ದೇಶಿತ ಬಡಾವಣೆ ವ್ಯಾಪ್ತಿಯಲ್ಲಿ ಈಗಾಗಲೇ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 7,161 ಅರ್ಜಿಗಳು ಬಂದಿವೆ. ಈ ಪೈಕಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಮೊದಲ ಹಂತದಲ್ಲಿ 1,475 ಕಟ್ಟಡಗಳ ಸಕ್ರಮಕ್ಕೆ ಸೂಚಿಸಲಾಗಿದೆ. ಉಳಿದ ಕಟ್ಟಡಗಳ ಪರಿಶೀಲನೆ ನಡೆಯುತ್ತಿದೆ. ಪರಿಶೀಲನೆ ನಂತರ ಅವು ಸಕ್ರಮಕ್ಕೆ ಅರ್ಹವಿದ್ದರೆ ಅಂತಹ ಕಟ್ಟಡಗಳಿಗೆ ಅನುಮೋದನೆ ನೀಡಲಾಗುವುದು. ಜತೆಗೆ, ಬದಲಿ ನಿವೇಶನ ಕೋರಿ 2,248 ಅರ್ಜಿಗಳು ಬಂದಿವೆ. ಸಂಬಂಧಪಟ್ಟವರಿಂದ 2022ರ ಏಪ್ರಿಲ್‌ 8ರವರೆಗೆ ಹೆಲ್ಪ್‌ ಡೆಸ್ಕ್‌ ಸೆಂಟರ್‌ ಹಾಗೂ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಯಿತು.

from India & World News in Kannada | VK Polls https://ift.tt/eXq0kmr

ಹಿಂದೂ - ಮುಸ್ಲಿಂ ಧರ್ಮ ಸಂಘರ್ಷದಲ್ಲಿ ಇಕ್ಕಟ್ಟಿಗೆ ಸಿಲುಕಿದ ಮಾವು ಬೆಳೆಗಾರ..!

ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿದ ಮಾವಿನ ಹೆಚ್ಚಿನ ಪ್ರಮಾಣ ಮುಂಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಇರುವ ಪಲ್ಪ್‌ ಫ್ಯಾಕ್ಟರಿಗಳಿಗೆ ಮಾರಾಟವಾಗುತ್ತದೆ. ಉಳಿದಂತೆ ಕೆಲವು ರೈತರು ಆನ್‌ ಲೈನ್‌ ಮೂಲಕವೇ ಮಾರಾಟ ಮಾಡುತ್ತಿದ್ದರೆ, ಒಂದಿಷ್ಟು ರೈತರು ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಆದರೆ ಹೆಚ್ಚಿನ ರೈತರು ಚನ್ನಪಟ್ಟಣ ಮತ್ತು ರಾಮನಗರ ಎಪಿಎಂಸಿ ಆವರಣದಲ್ಲಿರುವ ವರ್ತಕರನ್ನೇ ನಂಬಿದ್ದಾರೆ. ​​ಈ ವರ್ತಕರಲ್ಲಿ 90% ಮುಸ್ಲಿಂ ಸಮುದಾಯವರೇ ಇದ್ದು, ಇತ್ತೀಚಿಗೆ ಎದ್ದಿರುವ ವಿವಾದದಿಂದ ರೈತರನ್ನು ಕಂಗಾಲಾಗಿಸಿದೆ.

from India & World News in Kannada | VK Polls https://ift.tt/pHtgo7m

ಮಲೆನಾಡಿನಲ್ಲಿ ಕೃಷಿಕರನ್ನು ಕಾಡುತ್ತಿವೆ ಕಾಡಾನೆಗಳು..! ಹಗಲಿನಲ್ಲೇ ತಿರುಗಾಡಲು ಭಯ..!

ಹತ್ತಾರು ಹಿಂಡುಗಳಾಗಿ ಆನೆಗಳು ನಡೆಸುತ್ತಿರುವ ದಾಳಿಯಿಂದ ತೋಟ ಗದ್ದೆಗಳಲ್ಲಿ ಅಪಾರ ಪ್ರಮಾಣದ ಕಾಫಿ, ಅಡಕೆ, ಮೆಣಸು, ಬಾಳೆ, ಏಲಕ್ಕಿ ನಷ್ಟ ಉಂಟಾಗಿದೆ. ಅನೇಕರು ಜಮೀನುಗಳಲ್ಲಿ ಅಳವಡಿಸಿದ್ದ ನೀರಿನ ಪಂಪ್‌ ಸೆಟ್‌ಗಳು, ಪೈಪುಗಳು ಹಾಗೂ ಇತರೆ ಕೃಷಿ ಯಂತ್ರೋಪಕರಣಗಳನ್ನು ಹಾನಿ ಮಾಡಿವೆ. ಕೆಲವರ ಮನೆಯೊಳಗೆ ಇಟ್ಟ ದಾಸ್ತಾನುಗಳು, ವಾಹನಗಳಿಗೆ ಹಾನಿ ಮಾಡುತ್ತಿರುವ ಪ್ರಕರಣಗಳು ವರದಿಯಾಗಿದೆ. ಈ ರೀತಿಯ ದಾಳಿಯಿಂದ ತೋಟ ಗದ್ದೆಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರು ಕೃಷಿ ಕೆಲಸ ಕಾರ್ಯಗಳನ್ನು ಮಾಡುವುದೇ ಕಷ್ಟವಾಗಿದೆ.

from India & World News in Kannada | VK Polls https://ift.tt/8Q5XOah

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ..? ಮೇ ತಿಂಗಳಲ್ಲಿ ನಡೆಯೋದು ಡೌಟ್..!

​​ಸಮ್ಮೇಳನಕ್ಕೆ ಎರಡರಿಂದ ಮೂರು ತಿಂಗಳು ಮೊದಲೇ ದಿನಾಂಕ ಘೋಷಿಸಬೇಕಾದ ಸರಕಾರವು ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಲ್ಲದೆ, ಗುಜರಾತ್‌ - ಕರ್ನಾಟಕ ವಿಧಾನಸಭಾ ಚುನಾವಣೆ (ಈ ವರ್ಷಾಂತ್ಯ, ಮುಂದಿನ ವರ್ಷಾರಂಭ) ಇರುವುದರಿಂದ ಈಗಲೇ ಸಮ್ಮೇಳನ ಮಾಡಿದರೆ ಜನ ಮರೆತು ಬಿಡುತ್ತಾರೆ. ಹೀಗಾಗಿ, ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಮಾಡಿದರೆ ಅದು ಚುನಾವಣೆಗೂ ಒಂದು ರೀತಿ ಪ್ರಚಾರದ ಬ್ಯಾನರ್‌ ಆಗಲಿದೆ ಎಂಬ ಲೆಕ್ಕಾಚಾರವಿದೆ. ಚುನಾವಣೆ ಸಮೀಪಿಸುವ ಸಮಯದಲ್ಲಿ ನುಡಿ ಜಾತ್ರೆ ಮಾಡಿದರೆ ಸರಕಾರಕ್ಕೆ ಹೆಸರು ಬರುತ್ತದೆ.

from India & World News in Kannada | VK Polls https://ift.tt/v6BOJhu

ಸಪ್ತಸಾಗರದಾಚೆಗೂ ಪಸರಿಸಲಿದೆ ಬಿಜೆಪಿ ಸಿದ್ಧಾಂತ: ರಾಯಭಾರಿಗಳೊಂದಿಗೆ ಚರ್ಚೆಯ ವಿನೂತನ ವಿಧಾನ!

ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ), ಇದೀಗ ತನ್ನ ಸಿದ್ಧಾಂತವನ್ನು ವಿಶ್ವದ ಇತರ ದೇಶಗಳಿಗೂ ತಲುಪಿಸಲು ಸಜ್ಜಾಗಿದೆ. ಜನಸಂಘದಿಂದ ಹಿಡಿದು ಬಿಜೆಪಿವರೆಗಿನ ಹಾದಿ, ರಾಷ್ಟ್ರ ನಿರ್ಮಾಣದ ಬಗೆಗಿನ ಬಿಜೆಪಿಯ ನಿಲುವೆನು ಎಂಬುದನ್ನು ಜಗತ್ತಿಗೆ ತಿಳಿಸುವುದು ಬಿಜೆಪಿಯ ಉದ್ದೇಶಾಗಿದೆ. ವಿಶ್ವದ ಸುಮಾರು 150 ದೇಶಗಳ ರಾಯಭಾರಿಗಳೊಂದಿಗೆ ಈ ಕುರಿತು ಚರ್ಚಿಸಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿಯ ವಿದೇಶಾಂಗ ವ್ಯವಹಾರ ವಿಭಾಗ ಈ ಕೆಲಸದಲ್ಲಿ ನಿರತವಾಗಿದೆ.

from India & World News in Kannada | VK Polls https://ift.tt/q1T8bMQ

ಕೊಹ್ಲಿ-ಆಝಮ್‌ ನಡುವೆ ಉತ್ತಮ ಕವರ್‌ ಡ್ರೈವ್‌ ಹೊಡೆಯಬಲ್ಲ ಆಟಗಾರನನ್ನು ಆರಿಸಿದ ಫಿಂಚ್‌!

ಇತ್ತೀಚೆಗೆ ಕೋಲ್ಕತಾ ನೈಟ್‌ ರೈಡರ್ಸ್ ಅಭಿಮಾನಿಗಳಿಗಾಗಿ ಆರೋನ್‌ ಫಿಂಚ್‌ ಪ್ರಶ್ನೋತ್ತರ ಅವಧಿಯನ್ನು ಏರ್ಪಡಿಸಿದ್ದರು. ಈ ವೇಳೆ ಅಭಿಮಾನಿಗಳು ಫಿಂಚ್‌ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಇದರಲ್ಲಿ ಅಭಿಮಾನಿಯೊಬ್ಬ ಆಧುನಿಕ ಬ್ಯಾಟಿಂಗ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಬಾಬರ್‌ ಆಝಮ್‌ ನಡುವೆ ಅತ್ಯುತ್ತಮ ಕವರ್‌ ಡ್ರೈವ್‌ ಹೊಡೆಯಬಲ್ಲ ಬ್ಯಾಟ್ಸ್‌ಮನ್‌ ಅನ್ನು ಆಯ್ಕೆ ಮಾಡಿ ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಆರೋನ್‌ ಫಿಂಚ್‌, ವಿರಾಟ್‌ ಕೊಹ್ಲಿ ಹಾಗೂ ಬಾಬರ್‌ ಆಝಮ್‌ ಇಬ್ಬರೂ ಎಂದು ಹೇಳಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/utengKI

ಕಮ್‌ಬ್ಯಾಕ್‌ ಸಲುವಾಗಿ ಮುಂಬೈ ಮಾಡಬೇಕಾದ ಮೊದಲ ಕೆಲಸ ತಿಳಿಸಿದ ಜಸ್‌ಪ್ರೀತ್‌ ಬುಮ್ರಾ!

ಸತತ ನಾಲ್ಕು ಸೋಲಿನೊಂದಿಗೆ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿರುವ ಮುಂಬೈ ಇಂಡಿಒಯನ್ಸ್‌ ತಂಡ, ಇದೀಗ ತನ್ನ ಐದನೇ ಲೀಗ್‌ ಪಂದ್ಯದಲ್ಲಿ ಅಪಾಯಕಾರಿ ಪಂಜಾಬ್‌ ಕಿಂಗ್ಸ್‌ ಎದುರು ಪೈಪೋಟಿ ನಡೆಸಲಿದೆ. ಅಂದಹಾಗೆ ಲೀಗ್‌ ಆರಂಭದಲ್ಲೇ ಮುಂಬೈ ಈ ರೀತಿ ಸತತ ಸೋಲನುಭವಿಸಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದೆ. ಐಪಿಎಲ್‌ ಟೂರ್ನಿಯಲ್ಲಿ ಅಂಥದ್ದೇ ಕಮ್‌ಬ್ಯಾಕ್‌ ಸಲುವಾಗಿ ಮುಂಬೈ ಮಾಡಬೇಕಾದ ಮೊದಲ ಕೆಲಸದ ಬಗ್ಗೆ ಜಸ್‌ಪ್ರೀತ್‌ ಬುಮ್ರಾ ಮಾತನಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/WXRvYI6

5 ಗೋಣಿ ಚೀಲಗಳಲ್ಲಿ ತುಂಬಿ ಗೂಡ್ಸ್‌ ವಾಹನದಲ್ಲಿ ಉಡುಪಿಗೆ ಸಾಗಿಸುತ್ತಿದ್ದ ₹4 ಕೋಟಿ ದರೋಡೆ!

ಕೊಲ್ಲಾಪುರದ ಲಕ್ಷ್ಮೀ ಗೋಲ್ಡ್‌ ಬಂಗಾರದ ಅಂಗಡಿಯಲ್ಲಿ ವ್ಯಾಪಾರ ಮಾಡಿದ 4,97,30,000 ರೂ.ಗಳನ್ನು ಬೊಲೆರೊ ಗೂಡ್ಸ್‌ ಗಾಡಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಿಂದ ಉಡುಪಿಗೆ ಸಾಗಿಸಲಾಗುತ್ತಿತ್ತು. ಒಟ್ಟು ಹಣದಲ್ಲಿ 27.30 ಲಕ್ಷ ರೂ.ಗಳನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಪ್ಯಾಕ್‌ ಮಾಡಲಾಗಿದ್ದರೆ ಉಳಿದ 4 ಕೋಟಿ 70 ಲಕ್ಷ ರೂ. ಹಣವನ್ನು 5 ಗೋಣಿ ಚೀಲಗಳಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಈ ಘಟನೆ ಏ. 8ರಂದು ನಡೆದಿದ್ದು ಭಾನುವಾರ ರಾತ್ರಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

from India & World News in Kannada | VK Polls https://ift.tt/fe6nPoC

ಅತ್ತೆ, ಮಾವ ವಿರುದ್ಧದ ಸುಳ್ಳು ಕೇಸ್‌ಗಳನ್ನು ಮೂಲದಲ್ಲೇ ಚಿವುಟಿ ಹಾಕಿ; ಹೈಕೋರ್ಟ್‌

‘ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ಮುಂದುವರಿಸುವುದು ನ್ಯಾಯದಾನದ ದುರುಪಯೋಗ ಆಗುತ್ತದೆ’ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ‘ಸುಪ್ರೀಂ ಕೋರ್ಟ್‌ ಸೇರಿದಂತೆ ಹಲವು ನ್ಯಾಯಾಲಯಗಳು ದೂರುದಾರರ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ಮತ್ತು ಕಿರುಕುಳ ನೀಡದ ಪತಿಯ ಕುಟುಂಬದ ಸದಸ್ಯರು, ಕ್ರಿಮಿನಲ್‌ ವಿಚಾರಣೆ ಎದುರಿಸುವ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿವೆ. ಹಾಗಾಗಿ, ಈ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ’ ಎಂದು ಆದೇಶಿಸಿದೆ.

from India & World News in Kannada | VK Polls https://ift.tt/KZeXUht

‘ಈ ಸವಾಲನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ’; ಎಚ್‌ಡಿ ಕುಮಾರಸ್ವಾಮಿ

‘ಹಲಾಲ್‌, ಜಟ್ಕಾ ವಿಷಯ ಬೇಡ ನಾನು ಹಲಾಲ್‌, ಜಟ್ಕಾ ವಿಚಾರದ ಮೂಲಕ ಜನರ ಮುಂದೆ ಹೋಗುತ್ತಿಲ್ಲ. ನೀರಾವರಿ ಮೂಲಕ ಜನರ ಬಳಿ ಹೋಗುತ್ತೇನೆ. ಬಿಜೆಪಿ ಸರಕಾರ ಧಾರ್ಮಿಕ ವಿಚಾರಗಳನ್ನು ಕೆದಕುವ ಮೂಲಕ ಸಂಪೂರ್ಣ ವೈಫಲ್ಯ ಕಂಡಿದೆ. ಅಥಣಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ನೀಡುತ್ತೇವೆ ಎಂದಿದ್ದ ಬಿಜೆಪಿ ಸರಕಾರ ಈಗ ಒಂದು ಲಕ್ಷ ನೀಡಿದೆ. ಕೆಲವರಿಂದ ನೀಡಿದ್ದ ಹಣವನ್ನು ವಾಪಸ್‌ ಪಡೆದುಕೊಂಡಿವೆ’ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ದೂರಿದರು.

from India & World News in Kannada | VK Polls https://ift.tt/eDGjpAV

IPL 2022: ಸಿಎಸ್‌ಕೆ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ಸಾಧ್ಯತೆ!

ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆಯುವ ಮೂಲಕ ವಿಶ್ವಾಸದಲ್ಲಿರುವ ಫಾಫ್‌ ಡು ಪ್ಲೆಸಿಸ್‌ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಆರ್‌ಸಿಬಿ ಇಲ್ಲಿಯವರೆಗೂ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದಿದ್ದು, ಇನ್ನುಳಿದ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಮತ್ತೊಂದೆಡ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಸೋತು ಕಂಗಾಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/foMslp3

ಶೆಹಬಾಜ್ ಷರೀಫ್‌ಗೆ ಮೋದಿ ಅಭಿನಂದನೆ: ಪ್ರಾದೇಶಿಕ ಶಾಂತಿಗಾಗಿ ಕೊನೆಗಾಣಲಿ ಭಯೋತ್ಪಾದನೆ!

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಸಮಸ್ಯೆಗಳ ಇತ್ಯರ್ಥಕ್ಕೆ ಪಾಕ್‌ನ ನೂತನ ಪ್ರಧಾನಿಯ ಸಹಕಾರದ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಯೋತ್ಪಾದನೆಯನ್ನು ಕೊನೆಗಾಣಿಸುವಲ್ಲಿ ಪಾಕ್‌ನ ನೂತನ ಪ್ರಧಾನಿ ಸಹಕರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ದೇಶಿಕ ಶಾಂತಿ ಮತ್ತು ಸ್ಥಿರತೆ ಅತ್ಯಂತ ಅವಶ್ಯ ಎಂಬುದನ್ನು ಪ್ರಧಾನಿ ಮೋದಿ ಪುನರುಚ್ಛಿಸಿದ್ದಾರೆ.

from India & World News in Kannada | VK Polls https://ift.tt/suRGleZ

ರಷ್ಯಾ-ಉಕ್ರೇನ್ ಯುದ್ಧ ಪರಿಣಾಮಗಳ ನಿರ್ವಹಣೆಗೆ ಒತ್ತು: ಮೋದಿ-ಬೈಡನ್ ವಿಡಿಯೋ ಕಾನ್ಫರೆನ್ಸ್!

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಉದ್ಭವವಾಗಿರುವ ಜಾಗತಿಕ ಪರಿಣಾಮಗಳನ್ನು, ಭಾರತ ಹಾಗೂ ಅಮೆರಿಕ ಜಂಟಿಯಾಗಿ ನಿಭಾಯಿಸಲಿವೆ ಎಂಬ ವಿಶ್ವಾಸ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಉಕ್ರೇನ್‌ಗೆ ಮಾನವೀಯ ನೆರವು ಒದಗಿಸುವುದು ಭಾರತದ ಮೊದಲ ಪ್ರಾಶಸ್ತ್ಯ ಎಂದು ಹೇಳಿದರು. ವಿಶ್ವಶಾಂತಿಗಾಗಿ ಎರಡು ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಜೋ ಬೈಡನ್ ಕೂಡ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

from India & World News in Kannada | VK Polls https://ift.tt/vxICkg7

'ಸಿಕ್ಸರ್‌ಗಳ ಶತಕ', ವಿಶೇಷ ದಾಖಲೆ ತಮ್ಮದಾಗಿಸಿಕೊಂಡ ಹಾರ್ದಿಕ್ ಪಾಂಡ್ಯ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೊದಲ ಬಾರಿ ಕ್ಯಾಪ್ಟನ್‌ ಆಗಿ ಅಭಿಯಾನ ಆರಂಭಿಸಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಹೊಸ ಫ್ರಾಂಚೈಸಿ ಗುಜರಾತ್‌ ಟೈಟನ್ಸ್‌ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ತಂಡ ಲೀಗ್‌ ಹಂತದಲ್ಲಿ ಆಡಿದ ಮೊದಲ ಮೂರೂ ಪಂದ್ಯಗಳನ್ನು ಗೆದ್ದು ಬೀಗಿತ್ತು. ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಸೋಮವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಸೋಲಿನ ಆಘಾತಕ್ಕೊಳಗಾದರೂ, ತಂಡದ ಪರ ನಾಯಕ ಹಾರ್ದಿಕ್‌ ಪಾಂಡ್ಯ ಜವಾಬ್ದಾರಿಯುತ ಫಿಫ್ಟಿ ಬಾರಿಸಿ ಗಮನ ಸೆಳೆದರು. ಈ ಹೋರಾಟದ ಇನಿಂಗ್ಸ್‌ ವೇಳೆ ವಿಶೇಷ ದಾಖಲೆ ಒಂದನ್ನೂ ಬರೆದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XELYBM

'ಫುಟ್ಬಾಲ್‌ ಆಟದಂತೆ,' ರಿಟೈರ್ಡ್ ಔಟ್‌ ನಿರ್ಧಾರದ ಬಗ್ಗೆ ಆರ್‌ ಅಶ್ವಿನ್‌ ಮಾತು!

ಕ್ರಿಕೆಟ್‌ನಲ್ಲಿ ರಿಟೈರ್ಡ್‌ ಔಟ್‌ ನಿರ್ಧಾರ ಹೊಸದೇನಲ್ಲ. ಸಾಮಾನ್ಯವಾಗಿ ಅಭ್ಯಾಸ ಪಂದ್ಯಗಳಲ್ಲಿ ಶತಕ ಅಥವಾ ಅರ್ಧಶತಕ ಬಾರಿಸಿದ ಬಳಿಕ ಬ್ಯಾಟ್ಸ್‌ಮನ್‌ಗಳು ಮುಂದಿನ ಬ್ಯಾಟರ್‌ಗಳಿಗೆ ಆಡುವ ಅವಕಾಶ ಮಾಡಿಕೊಡಲು ರಿಟೈರ್ಡ್‌ ಔಟ್‌ ಆಗುತ್ತಾರೆ. ಆದರೆ, ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಇಂಥದ್ದೊಂದು ಉದಾಹರಣೆ ಬಹಳಾ ಕಡಿಮೆ. ಸೂಕ್ತ ಕಾರಣ ಇಲ್ಲದ ಕಾರಣ ಬ್ಯಾಟ್ಸ್‌ಮನ್‌ಗಳು ಈ ನಿರ್ಧಾರಕ್ಕೆ ಬರಲಾರರು. ಹಾಗಾಗಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಈ ಹಿಂದಿನ 14 ಆವೃತ್ತಿಗಳಲ್ಲಿ ಒಮ್ಮೆಯೂ ಕೂಡ ರಿಟೈರ್ಡ್‌ ಔಟ್‌ ಕಾಣಲು ಸಿಕ್ಕಿಲ್ಲ. ಆದರೆ, ಈ ನಿಯಮದ ಸದ್ಬಳಕೆ ಮಾಡಿ ಆರ್‌ ಅಶ್ವಿನ್‌ ಈಗ ಭಾರಿ ಸುದ್ದಿಯಲ್ಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/A1C5SgU

IPL 2022: 'ಒಂದು ಕೆಟ್ಟ ಪಂದ್ಯದಿಂದ ನಮ್ಮ ಸಂಗತಿಗಳು ಬದಲಾಗಲ್ಲ'- ಕೆ.ಎಲ್‌ ರಾಹುಲ್!

ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಲಖನೌ ಸೂಪರ್‌ ಜಯಂಟ್ಸ್‌ ತಂಡ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಕೇವಲ 3 ರನ್‌ಗಳ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಲಖನೌ ಸೂಪರ್‌ ಜಯಂಟ್ಸ್‌ ನಾಯಕ ಕೆ.ಎಲ್‌ ರಾಹುಲ್, ಈ ಒಂದೇ ಒಂದು ಕೆಟ್ಟ ಪಂದ್ಯದಿಂದ ನಮ್ಮ ಸಂಗತಿಗಳು ಬದಲಾಗುವುದಿಲ್ಲ ಹಾಗೂ ಇದರಿಂದ ಇನ್ನಷ್ಟು ಕಲಿಯುತ್ತೇವೆ ಎಂದು ಹೇಳಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iGmoX5Z

ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಬಿಜೆಪಿಯಿಂದ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆ: ನಲಪಾಡ್‌

‘ಧಾರವಾಡದ ನುಗ್ಗಿಕೇರಿಯ ಹನುಮಂತ ದೇವಸ್ಥಾನದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಬಡ ವ್ಯಾಪಾರಿಯೊಬ್ಬರ ಹಣ್ಣುಗಳನ್ನು ರಸ್ತೆಗೆ ಸುರಿದು ಹಾನಿ ಮಾಡಿರುವುದು ಖಂಡನೀಯ. ಆತನನ್ನು ಒಬ್ಬ ಮುಸ್ಲೀಮನಾಗಿ ನೋಡಬೇಡಿ, ಅವನು ಒಬ್ಬ ಕನ್ನಡಿಗ, ಭಾರತೀಯ, ನಮ್ಮಲ್ಲಿ ಒಬ್ಬ ಎಂಬ ಭಾವನೆಯಿಂದ ನೋಡಿ. ಹಲಾಲ್‌, ಹಿಜಾಬ್‌, ಆಜಾನ್‌ ಇವು ನಿನ್ನೆ ಮೊನ್ನೆಯಿಂದ ಶುರುವಾಗಿಲ್ಲ. ಮೊದಲಿನಿಂದಲೂ ಇವೆ. ಆದರೆ ಬಿಜೆಪಿ ಅವುಗಳನ್ನು ಮುಂದೆ ಇಟ್ಟುಕೊಂಡು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ’ ಎಂದು ನಲಪಾಡ್ ಅಸಮಾಧಾನ ವ್ಯಕ್ತಪಡಿಸಿದರು.

from India & World News in Kannada | VK Polls https://ift.tt/OUy7bio

ಕೊರೊನಾ ಬೂಸ್ಟರ್‌ ಡೋಸ್‌ ನೀಡಲು ಖಾಸಗಿ ಆಸ್ಪತ್ರೆಗಳ ಹಿಂದೇಟು

​​ಭಾರಿ ಪ್ರಮಾಣದ ದಾಸ್ತಾನು ಇರುವುದು ತಲೆನೋವಾಗಿ ಪರಿಣಮಿಸಿದೆ. ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ತಯಾರಕ ಕಂಪನಿಗಳು ಡೋಸ್‌ಗೆ 225 ರೂ.ನಂತೆ ಒದಗಿಸಲು ಮುಂದಾಗಿದ್ದು, ಸೇವಾ ಶುಲ್ಕ, ತೆರಿಗೆ ಸೇರಿ ಗರಿಷ್ಠ 386 ರೂ. ಪಡೆಯಬಹುದು ಎಂದು ಸೂಚಿಸಿದೆ.

from India & World News in Kannada | VK Polls https://ift.tt/ZN7OY5k

ಚುನಾವಣೆ ಸಮೀಪಿಸುತ್ತಿದ್ದಂತೆ ಮೈಕೊಡವಿ ಎದ್ದ ಕಾಂಗ್ರೆಸ್‌; ಸರಣಿ ಸಭೆ, ಸಂಭಾವ್ಯರ ಆಯ್ಕೆಗೆ ಚರ್ಚೆ

ಏಪ್ರಿಲ್‌ 11, 12, 13ರಂದು ಬೆಂಗಳೂರು ವಿಭಾಗದ ಜಿಲ್ಲೆಗಳ ಶಾಸಕರು, ಮುಖಂಡರು, ಡಿಸಿಸಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಇನ್ನಿತರ ಪ್ರಮುಖರೊಂದಿಗೆ ಸಭೆ ನಡೆಸಲಾಗುತ್ತಿದೆ. ಏಪ್ರಿಲ್‌ 18, 19, 20ರಂದು ಕಲಬುರ್ಗಿ ವಿಭಾಗದ ಸಭೆ ನಡೆಯಲಿದೆ. ಬೆಳಗಾವಿ ಹಾಗೂ ಮೈಸೂರು ವಿಭಾಗದ ಸಭೆಯ ದಿನಾಂಕ ನಿಗದಿಯಾಗಬೇಕಿದೆ. ಕಾಂಗ್ರೆಸ್‌ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಐವರು ಕಾರ್ಯಾಧ್ಯಕ್ಷರು, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್‌ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

from India & World News in Kannada | VK Polls https://ift.tt/XIPoLps

ಮುಷ್ಕರ ವೇಳೆ ವಜಾಗೊಂಡಿದ್ದ ಬಿಎಂಟಿಸಿ ನೌಕರರ ಮರು ನೇಮಕಕ್ಕೆ ಆದೇಶ

BMTC: ಬಿಎಂಟಿಸಿಯು 736 ಕಾಯಂ, 230 ಪ್ರೊಬೇಷನರಿ, 360 ಮಂದಿ ತರಬೇತಿ ಸಿಬ್ಬಂದಿಯನ್ನು ವಜಾ ಮಾಡಿತ್ತು. ಪ್ರೊಬೆಷನರಿ ಮತ್ತು ತರಬೇತಿ ಸಿಬ್ಬಂದಿಯ ಹಿಂದಿನ ಸೇವೆಯನ್ನು ಪರಿಗಣಿಸದೆ, ಮರು ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ, ಕಾಯಂ ಸಿಬ್ಬಂದಿಗೆ 2 ವೇತನ ಬಡ್ತಿ ಹಾಗೂ ಸೇವಾ ಅವಧಿಯಲ್ಲಿ ಯಾವುದೇ ಮುಷ್ಕರದಲ್ಲಿ ಭಾಗವಹಿಸಬಾರದೆಂಬ ಷರತ್ತು ವಿಧಿಸಿ ಮರು ನೇಮಕಾತಿ ಆದೇಶ ನೀಡಲಾಗುತ್ತಿದೆ.

from India & World News in Kannada | VK Polls https://ift.tt/vaqx9Yj

IPL 2022: 'ರಿಟೈರ್‌ ಔಟ್‌', ಇತಿಹಾಸದ ಪುಟ ಸೇರಿದ ರವಿಚಂದ್ರನ್‌ ಅಶ್ವಿನ್‌!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡುತ್ತಿರುವ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌, ಭಾನುವಾರ ನಡೆದ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಅಪರೂಪದ ನಡೆಯೊಂದಿಗೆ ಐಪಿಎಲ್‌ ಇತಿಹಾಸದ ಪುಟ ಸೇರಿದ್ದಾರೆ. ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ 23 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 28 ರನ್‌ ಗಳಿಸಿದ್ದ ಅಶ್ವಿನ್‌ ರಿಟೈರ್‌ ಔಟ್‌ ಆದರು. ಈ ಮೂಲಕ ಇಂಡಿಯನ್ ಪ್ರೀಮಿಯರ್‌ ಲೀಗ್ ಇತಿಹಾಸದಲ್ಲೇ ಈ ನಿರ್ಧಾರ ತೆಗೆದುಕೊಂಡ ಮೊದಲ ಬ್ಯಾಟ್ಸ್‌ಮನ್‌ ಎಂದು ವಿಶೇಷ ದಾಖಲೆಯ ಪುಟ ಸೇರಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ljuHneb

ಮೂಲ ಮಾಲೀಕರಿಗೆ ಗೊತ್ತಿಲ್ಲದಂತೆ ಭೂ ದಾಖಲೆ ಮಾರ್ಪಾಡು: ವಂಚನೆ ತಡೆಯಲು ಹೈಕೋರ್ಟ್‌ ಮಾರ್ಗಸೂಚಿ

​​ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಇತ್ತೀಚೆಗೆ ವಿಚಾರಣಾ ನ್ಯಾಯಾಲಯಗಳಲ್ಲಿನ ಆಸ್ತಿ ವಿವಾದಗಳಲ್ಲಿನಕಲಿ ದಾಖಲೆ ಆಧರಿಸಿ ರಾಜಿ ತೀರ್ಪುಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ವಂಚನೆ ಅಗಿರುವ ಕುರಿತು ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

from India & World News in Kannada | VK Polls https://ift.tt/1d6mbAy

ಸರಕಾರದಿಂದ ನಿರ್ದೇಶನ ಬಂದಿಲ್ಲ, ಸದ್ಯ ಆಸ್ಪತ್ರೆಯಲ್ಲಿ ಕೊರೊನಾ ಬೂಸ್ಟರ್‌ ಡೋಸ್‌ ಸಿಗಲ್ಲ

ಕೇಂದ್ರ ಸರಕಾರ ಏ. 10ರ ಭಾನುವಾರದಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 4.89 ಕೋಟಿ ಜನರು ಬೂಸ್ಟರ್‌ ಡೋಸ್‌ ಪಡೆಯುವುದಕ್ಕೆ ಅರ್ಹರಾಗಿದ್ದಾರೆ.

from India & World News in Kannada | VK Polls https://ift.tt/7486vjM

ಮಿಡ್‌ನೈಟ್‌ ವಿಶ್ವಾಸ ಪರೀಕ್ಷೆಯಲ್ಲಿ ಸೋತ ಇಮ್ರಾನ್‌ ಖಾನ್‌, ಪಿಟಿಐ ಸರಕಾರ ಪತನ

​​​ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಕೊನೆಗೂ ವಿಫಲರಾಗಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆ ರಾತ್ರಿ 11.58ಕ್ಕೆ ನಡೆದ ಅವಿಶ್ವಾಸ ನಿರ್ಣಯದ ಮತದಾನದಲ್ಲಿ ಸೋಲು ಅನುಭವಿಸಿದ್ದಾರೆ.

from India & World News in Kannada | VK Polls https://ift.tt/LM2N41d

ರಷ್ಯಾದಿಂದ ತೈಲ ಖರೀದಿ ಕುರಿತು ಭಾರತಕ್ಕೆ ಎಚ್ಚರಿಕೆ ಕೊಟ್ಟಿಲ್ಲ: ಅಮೆರಿಕ ಸ್ಪಷ್ಟನೆ

ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸದಂತೆ ಭಾರತಕ್ಕೆ ಯಾವುದೇ ಎಚ್ಚರಿಕೆ ನೀಡಿಲ್ಲ. ಈ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕು ಭಾರತಕ್ಕಿದೆ ಎಂದು ಅಮೆರಿಕ ಹೇಳಿದೆ. ''ರಷ್ಯಾದಿಂದ ತೈಲ ಖರೀದಿಸದಂತೆ ನಾವು ಯಾವ ರಾಷ್ಟ್ರಕ್ಕೂ ಎಚ್ಚರಿಕೆ ಕೊಟ್ಟಿಲ್ಲ. ಒತ್ತಡ ತಂತ್ರವನ್ನೂ ಹೇರಿಲ್ಲ. ಇದಕ್ಕೆ ಭಾರತವೂ ಹೊರತಲ್ಲ. ಖರೀದಿ ನಿರ್ಧಾರ ಅದರ ಸ್ವತಂತ್ರ ಆಯ್ಕೆ. ಈ ವಿಚಾರದಲ್ಲಿ ಗೊಂದಲ ಬೇಡ,'' ಎಂದು ಶ್ವೇತಭವನದ ಪತ್ರಿಕಾ ಕಾರ‍್ಯದರ್ಶಿ ಜೆನ್‌ ಸಾಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/ZKAFuQj

ಪಾಕಿಸ್ತಾನದಲ್ಲಿ ನಿಲ್ಲದ ರಾಜಕೀಯ ಹೈಡ್ರಾಮಾ: ಮಧ್ಯರಾತ್ರಿಯೂ ತೆರೆದ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್ ಆದೇಶದಂತೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಶನಿವಾರ ಅವಿಶ್ವಾಸ ನಿರ್ಣಯದ ಮೇಲಿನ ಮತಕ್ಕೆ ಒಳಪಡಬೇಕಿತ್ತು. ಆದರೆ ಮಧ್ಯರಾತ್ರಿಯವರೆಗೂ ಅವಿಶ್ವಾಸ ನಿರ್ಣಯದ ಮತ ನಡೆದಿಲ್ಲ. ಇದು ನ್ಯಾಯಾಂಗ ನಿಂದನೆಯಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ತಾವು ರಾಜೀನಾಮೆ ನೀಡುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

from India & World News in Kannada | VK Polls https://ift.tt/t8mjdST

ರಾಮನಗರದಲ್ಲಿ ದಾರುಣ ಘಟನೆ: ಹದಿನೈದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಅಪಘಾತಕ್ಕೆ ಬಲಿ

ಹದಿನೈದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಮೃತಪಟ್ಟ ಮನಕಲಕುವ ದುರಂತ ರಾಮನಗರದ ಮಾಗಡಿ ತಾಲೂಕಿನಲ್ಲಿ ಶನಿವಾರ ನಡೆದಿದೆ. ಶನಿವಾರ ಸಂಜೆ ಬೆಂಗಳೂರಿನಿಂದ ಕೆಲಸ ಮುಗಿಸಿ ಬಂದ ಈಕೆ, ತಿಪ್ಪಸಂದ್ರ ಹ್ಯಾಂಡ್‌ ಪೋಸ್ಟ್‌ ಬಳಿ ರಸ್ತೆ ದಾಟುತ್ತಿದ್ದಳು. ಈ ವೇಳೆ ಕುಣಿಗಲ್‌ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಐ10 ಕಾರು ಡಿಕ್ಕಿ ಹೊಡೆದಿದೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

from India & World News in Kannada | VK Polls https://ift.tt/gy2R1Xq

ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಬಳಕೆ: ಅಮಿತ್ ಶಾ ಹೇಳಿಕೆಗೆ ಭಾರಿ ವಿರೋಧ

ದೇಶದ ರಾಜ್ಯಗಳು ಸಂವಹನ ಭಾಷೆಯಾಗಿ ಇಂಗ್ಲಿಷ್‌ ಬದಲಾಗಿ ಹಿಂದಿ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ರಾಜಕೀಯ ಆಕ್ರೋಶ ಮುಂದುವರಿದಿದೆ. ತಮಿಳುನಾಡಿನ ಎಐಎಡಿಎಂಕೆ ಹಿರಿಯ ನಾಯಕ ಒ. ಪನ್ನೀರ್‌ಸೆಲ್ವಂ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌, ತಮಿಳಿನ ಖ್ಯಾತ ಚಿತ್ರ ಸಾಹಿತಿ ವೈರಮುತ್ತು, ತೆಲಂಗಾಣದ ಸಚಿವ ಕೆ.ಟಿ. ರಾಮರಾವ್‌ ಸೇರಿ ಹಲವರು ಅಮಿತ್ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

from India & World News in Kannada | VK Polls https://ift.tt/OHgFe47

ಮುಂಬಯಿ ದಾಳಿಕೋರ ಹಫೀಜ್‌ ಪುತ್ರ 'ಜಾಗತಿಕ ಉಗ್ರ' ನೆಂದು ಘೋಷಣೆ

ಮುಂಬಯಿ ದಾಳಿಯ ಸಂಚುಕೋರ ಹಾಗೂ ಲಷ್ಕರ್ ಇ ತಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಸ್ಥಾಪಕ ಹಫೀಜ್‌ ಸಯೀದ್‌ನ ಪುತ್ರ ಹಫೀಜ್‌ ತಾಲ್ಹಾ ಸಯೀದ್‌ನನ್ನು ಜಾಗತಿಕ ಉಗ್ರ ಎಂದು ಕೇಂದ್ರ ಸರಕಾರ ಘೋಷಿಸಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ ಎರಡು ಪ್ರಕರಣಗಳಲ್ಲಿ ಒಟ್ಟು 32 ವರ್ಷಗಳವರೆಗೆ ಜೈಲು ಶಿಕ್ಷೆಗೆ ಹಫೀಜ್‌ ಸಯೀದ್‌ನನ್ನು ಗುರಿಯಾಗಿಸಿ ಪಾಕಿಸ್ತಾನದ ಲಾಹೋರ್ ಕೋರ್ಟ್ ಆದೇಶ ನೀಡಿದ ಮರುದಿನವೇ ಕೇಂದ್ರ ಸರಕಾರ ಈ ಘೋಷಣೆ ಮಾಡಿದೆ.

from India & World News in Kannada | VK Polls https://ift.tt/mnae1Ph

ರಾಜ್ಯದ ಇತರ ಜಿಲ್ಲೆಗಳಲ್ಲಿ ಮಂಗಳೂರು ಮಾದರಿ ಕನ್ನಡ ಕಲಿಕೆ ಅನುಷ್ಠಾನಕ್ಕೆ ಕ್ರಮ: ಟಿಎಸ್‌ ನಾಗಾಭರಣ

kannada: ‘ಕನ್ನಡ ಕಾಣಿಸಿ-ಕನ್ನಡ ಕೇಳಿಸಿ’ ಧ್ಯೇಯ ವಾಕ್ಯದಡಿ ಕನ್ನಡ ಪಸರಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬ್ಯಾಂಕ್‌, ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ದಾಖಲೆ, ವಹಿವಾಟು ಪುಸ್ತಕ, ಗ್ರಾಹಕರ ಚೀಟಿಯಲ್ಲಿ ಕನ್ನಡ ಕಡ್ಡಾಯ ಇರಲೇಬೇಕು. ಕನ್ನಡ ಅನುಷ್ಠಾನದ ಹೊಣೆ ಆಯಾ ಜಿಲ್ಲಾಡಳಿತದ್ದಾಗಿದ್ದು, ಆಡಳಿತ ವರ್ಗ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಕನ್ನಡ ಬಳಕೆ ಕಷ್ಟವೇನಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಹೇಳಿದ್ದಾರೆ.

from India & World News in Kannada | VK Polls https://ift.tt/ZlygJ6p

ಯಾವ ಸೂಪರ್‌ ಪವರ್‌ ದೇಶದಿಂದಲೂ ಭಾರತವನ್ನು ಅಲ್ಲಾಡಿಸಲು ಸಾಧ್ಯವಿಲ್ಲ- ಇಮ್ರಾನ್‌ ಖಾನ್‌ ಗುಣಗಾನ

ಭಾರತವು ಒಂದು ಸೂಪರ್‌ ಪವರ್‌ ರಾಷ್ಟ್ರವಾಗಿದ್ದು, ಆ ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಯಾವ ದೇಶದಿಂದಲೂ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಹಾಡಿ ಹೊಗಳಿದ್ದಾರೆ.

from India & World News in Kannada | VK Polls https://ift.tt/DKek3VP

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ ಆರಂಭ; ಹಲವೆಡೆ ಇಂಟರ್‌ನೆಟ್ ಸ್ಥಗಿತ!

ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಶನಿವಾರ ಮುಂಜಾನೆ ಈ ಕಾಳಗ ನಡೆದಿದ್ದು, ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಅನಂತ್‌ನಾಗ್ ಜಿಲ್ಲೆಯ ಸಿರ್ಹಾಮಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದಾಗ ಭಯೋತ್ಪಾದಕರು ಭದ್ರತಾ ಪಡೆಗಳ ತಂಡದೆಡೆಗೆ ಗುಂಡು ಹಾರಿಸಿದ್ದಾರೆ. ಈ ವೇಳೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಜಮ್ಮು ಕಾಶ್ಮೀರ ಝೋನ್ ಪೊಲೀಸರು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/JNKUX9z

IPL 2022: ಮುಂಬೈ ಇಂಡಿಯನ್ಸ್ ಆರಂಭಿಕ ವೈಫಲ್ಯತೆಗೆ 4 ಕಾರಣಗಳು!

ಮುಂಬೈ: ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. ಇಲ್ಲಿಯವರೆಗೂ ಆಡಿದ ಮೂರೂ ಪಂದ್ಯಗಳಲ್ಲಿ ರೋಹಿತ ಶರ್ಮಾ ನಾಯಕತ್ವದ ಮುಂಬೈ ಸೋತು ಮಂಕಾಗಿದೆ.2021ರ ಐಪಿಎಲ್‌ ಟೂರ್ನಿಯಲ್ಲಿಯೂ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿರಲಿಲ್ಲ. ಆದರೆ ಯುಎಇ ಲೆಗ್‌ನಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ್ದರ ಹೊರತಾಗಿಯೂ ಪ್ಲೇ ಆಫ್ಸ್‌ಗೆ ತಲುಪುವಲ್ಲಿ ವಿಫಲವಾಗಿತ್ತು. ಇದೀಗ ಕಳೆದ ಆವೃತ್ತಿಯಂತೆ ಈ ಬಾರಿಯೂ ಮುಂಬೈ ಕಳಪೆ ಆರಂಭವನ್ನು ಪಡೆದುಕೊಂಡಿದೆ.ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 4 ವಿಕೆಟ್‌ಗಳಿಂದ ಸೋತಿದ್ದ ಮುಂಬೈ, ತನ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 23 ರನ್‌ಗಳಿಂದ ಪರಾಭವಗೊಂಡಿತ್ತು. ನಂತರ ಮೂರನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋತು ಹ್ಯಾಟ್ರಿಕ್‌ ಮುಖಭಂಗ ಅನುಭವಿಸಿತ್ತು. ಅಂದಹಾಗೆ ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಆರಂಭಕ್ಕೆ 4 ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/KTlH4cA

ಕೇರಳಕ್ಕಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡೀಸೆಲ್ ದರ ಕಡಿಮೆ! ಗಡಿ ಭಾಗದಲ್ಲಿ ಸೊರಗಿದ ಕೇರಳದ ಬಂಕ್‌ಗಳು

ಕರ್ನಾಟಕದಿಂದ ಕೇರಳ ಪ್ರವೇಶ ಮಾಡುವ ಮೊದಲೇ ಟ್ರಕ್‌, ಲಾರಿಗಳು ಡೀಸೆಲ್‌ ತುಂಬಿಸುತ್ತದೆ. ಅದಾದ ಬಳಿಕ ಮತ್ತೆ ಮಾಹೆಯಲ್ಲಿ ಡೀಸೆಲ್‌ ತುಂಬಿಸುತ್ತದೆ. ಕೇರಳದಲ್ಲಿ ಯಾವುದೇ ಡೀಸೆಲ್‌ ಖರೀದಿಸುವುದಿಲ್ಲ. ಇದು ತೆರಿಗೆಯಲ್ಲಿ ಕೇರಳಕ್ಕೆ ಭಾರಿ ಹೊಡೆತವಾಗಿದೆ. ಇವುಗಳಲ್ಲದೆ ಬೋರ್‌ವೆಲ್‌ ರಿಗ್‌ಗಳು ಸಹ ಕರ್ನಾಟಕದಿಂದಲೇ ತುಂಬಿಸಿಕೊಳ್ಳುತ್ತಿದ್ದಾರೆ. ಟ್ರಕ್‌ ಮೌಂಟೆಡ್‌ ರಿಗ್‌ಗಳು ಒಮ್ಮೆಗೆ 1,500ರಿಂದ 2 ಸಾವಿರ ಲೀಟರ್‌ ಡೀಸೆಲ್‌ ಖರೀದಿಸುತ್ತವೆ. ಒಂದು ಬೋರ್‌ವೆಲ್‌ ಕೊರೆಯಲು ಸುಮಾರು 300 ಲೀ. ಡೀಸೆಲ್‌ ಅಗತ್ಯವಿದೆ. ಅವರೆಲ್ಲರೂ ಗಡಿಯ ಕರ್ನಾಟಕದ ಬಂಕ್‌ಗಳಿಂದಲೇ ತುಂಬಿಸಿಕೊಳ್ಳುತ್ತಾರೆ.

from India & World News in Kannada | VK Polls https://ift.tt/VyujGSk

ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನ ಭಾರತೀಯರಿಗೆ ನಿಜವಾದ ಧರ್ಮಗ್ರಂಥ : ನ್ಯಾ. ನಾಗಮೋಹನ ದಾಸ್‌

ಸಾಂಸ್ಕೃತಿಕ ದಿವಾಳಿತನದಿಂದಾಗಿ ಅರಾಜಕತೆ ಹುಟ್ಟಿ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಮೂಲಭೂತವಾದ, ಕೋಮುವಾದ ರಾರಾಜಿಸುತ್ತಿದೆ. ಯಾವ ದೇಶದಲ್ಲಿ ಅಲ್ಪ ಸಂಖ್ಯಾತರಿಗೆ ರಕ್ಷಣೆ ಇರುವುದಿಲ್ಲವೋ, ಅಂತಹ ದೇಶದಲ್ಲಿ ಸರಕಾರವೇ ಇಲ್ಲ. ಸಂವಿಧಾನದ ಓದು, ಗ್ರಹಿಕೆ, ತಿಳಿವಿನಿಂದ ಇದನ್ನೆಲ್ಲ ಪ್ರಶ್ನಿಸಬೇಕು. ಇಂದಿನ ಸವಾಲಿನ ಸನ್ನಿವೇಶದಲ್ಲಿ ದೇಶದ ಬಹುತ್ವ ಪರಂಪರೆಯನ್ನು ಪೊರೆಯುವ, ಅಸಮಾನತೆ ತೊಲಗಿಸಿ, ಸಮಾನತೆ ಕಟ್ಟುವ, ಸಾಮಾಜಿಕ ನ್ಯಾಯ ನೀಡುವ ಆಶಯವನ್ನು ಹೊಂದಿರುವ ಸಂವಿಧಾನದ ಅರಿವು, ಗ್ರಹಿಕೆ ಮುಖ್ಯ ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್‌ ಹೇಳಿದರು.

from India & World News in Kannada | VK Polls https://ift.tt/CA0pT2N

ಗುಡ್‌ ನ್ಯೂಸ್‌: ವಾಹನ ಖರೀದಿಸಿದ ಒಂದೆರಡು ತಾಸಿನಲ್ಲೇ ಸಿಗಲಿದೆ ನೋಂದಣಿ ಸಂಖ್ಯೆ

​​ಸಾರಿಗೆ ಇಲಾಖೆಯು ಶೀಘ್ರದಲ್ಲೇ ಡೀಲರ್‌ ಕೇಂದ್ರಿತ ನೋಂದಣಿ ಸೇವೆ (ಡಿಪಿಆರ್‌) ಅನುಷ್ಠಾನಗೊಳಿಸುತ್ತಿದೆ. ಇದು ಸಂಪೂರ್ಣ ಕಾಂಟ್ಯಾಕ್ಟ್ಲೆಸ್‌ ಮತ್ತು ಫೇಸ್‌ಲೆಸ್‌ ಆಗಿರಲಿದೆ. ಆನ್‌ಲೈನ್‌ನಲ್ಲಿ ನೋಂದಣಿ ಶುಲ್ಕ, ತೆರಿಗೆ ಪಾವತಿಸಬಹುದು.

from India & World News in Kannada | VK Polls https://ift.tt/uh1Akzw

ನವಾಜ್ ಷರೀಫ್‌ ಅಧ್ಯಕ್ಷ, ಸೋದರ ಶಹಬಾಜ್‌ ಪಾಕಿಸ್ತಾನದ ನೂತನ ಪ್ರಧಾನಿ? ಇದು ವಿಪಕ್ಷಗಳ ತಂತ್ರ!

ನವಾಜ್‌ ಷರೀಫ್‌ ಜತೆಗೆ ಮಾಜಿ ವಿತ್ತ ಸಚಿವ ಇಶಕ್‌ ದರ್‌ ಅವರನ್ನು ಕೂಡಲೇ ಪಾಕಿಸ್ತಾನಕ್ಕೆ ಕರೆತಂದು ಸುರಕ್ಷಿತವಾಗಿ ಇರಿಸಲು ಅಗತ್ಯ ನಿರ್ಣಯಗಳನ್ನು ನೂತನ ಪ್ರಧಾನಿ ಆದೇಶಿಸಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ , ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ತಂಗಿರುವ ನವಾಜ್‌ ಷರೀಫ್‌ಗೆ ಕೋರ್ಟ್‌ ನೀಡಿದ್ದ ಜಾಮೀನು ಅವಧಿ ಮುಕ್ತಾಯಗೊಂಡಿದೆ. ಭ್ರಷ್ಟಾಚಾರ ಹಗರಣದಲ್ಲಿ ಜೈಲು ಪಾಲಾಗುವ ಬದಲು ಕುಟುಂಬ ಸಮೇತ ಪರಾರಿಯಾಗಿರುವ ನವಾಜ್‌, ಬ್ರಿಟನ್‌ ಪೌರತ್ವ ದ ಲಾಭ ಪಡೆದು ಅಲ್ಲಿಯೇ ತಂಗಿದ್ದಾರೆ.

from India & World News in Kannada | VK Polls https://ift.tt/ZNvBO3L

ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೈಕೋರ್ಟ್‌ಗೆ ಅರ್ಜಿ!

ಮುಸ್ಲಿಂ ಸಮುದಾಯದ ವಿರುದ್ಧ ​​ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವ ಕೆ.ಎಸ್‌. ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಎಂ.ಪಿ. ರೇಣುಕಾಚಾರ್ಯ, ಸಿ.ಟಿ.ರವಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ​ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮೊಹಮ್ಮದ್‌ ಖಲೀವುಲ್ಲಾ ಎಂಬವರು ಅರ್ಜಿ ಸಲ್ಲಿಸಿದ್ದಾರೆ.

from India & World News in Kannada | VK Polls https://ift.tt/jNVJU2d

ಶಸ್ತ್ರಾಸ್ತ್ರ ಕೊಡಿ.. ರಷ್ಯಾವನ್ನು ನಾವು ನೋಡಿಕೊಳ್ಳುತ್ತೇವೆ: ನ್ಯಾಟೋ ದೇಶಗಳಿಗೆ ಉಕ್ರೇನ್‌ ಮನವಿ

​​ ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೊ ಕುಲೇಬಾ, 'ರಷ್ಯಾ ವಿರುದ್ಧ ಹೋರಾಡಲು ನಮಗೆ ಕೇವಲ ಮೂರು ದಾರಿಗಳಿವೆ. ಅವು ಶಸ್ತ್ರಾಸ್ತ್ರ... ಶಸ್ತ್ರಾಸ್ತ್ರ.. ಶಸ್ತ್ರಾಸ್ತ್ರಗಳೇ ಆಗಿವೆ. ಹಾಗಾಗಿ ನ್ಯಾಟೊ ನಮಗೆ ಶಸ್ತ್ರಾಸ್ತ್ರ ನೆರವು ನೀಡಬೇಕು,' ಎಂದು ಮನವಿ ಮಾಡಿಕೊಂಡಿದ್ದಾರೆ.

from India & World News in Kannada | VK Polls https://ift.tt/ASRVt9c

ಕೌಲ್ಟರ್‌ ನೈಲ್ ಬದಲು ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಬಲ್ಲ ಟಾಪ್‌ 3 ಆಲ್‌ರೌಂಡರ್ಸ್‌!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ 2 ಜಯದೊಂದಿಗೆ ಭರ್ಜರಿ ಆರಂಭ ಕಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡ ಇದೀಗ ತನ್ನ ಸ್ಟಾರ್‌ ಆಲ್‌ರೌಂಡರ್‌ ನೇಥನ್‌ ಕೌಲ್ಟರ್‌ ನೈಲ್‌ ಅವರ ಸೇವೆಯನ್ನು ಕಳೆದುಕೊಂಡಿದೆ. ಮೀನಖಂಡದ ಗಾಯದ ಸಮಸ್ಯೆಗೆ ತುತ್ತಾಗಿರುವ ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್‌ ಐಪಿಎಲ್ 2022 ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದಿದ್ದಾರೆ. ಈಗ ಅವರ ಜಾಗದಲ್ಲಿ ರಾಯಲ್ಸ್‌ ತಂಡ ಸೇರುವ ಅವಕಾಶ ಹೊಂದಿರುವ 2 ಆಲ್‌ರೌಂಡರ್‌ಗಳ ವಿವರ ಇಲ್ಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/eJULjFq

ಬಾದಾಮಿ ಬಿಡ್ತಾರಾ ಸಿದ್ದರಾಮಯ್ಯ..? ವಿದಾಯ ಭಾಷಣದಂತಿದೆ ಪ್ರತಿಪಕ್ಷ ನಾಯಕನ ಮಾತುಗಳು!

ಬಾದಾಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೋಡೋಣ.. ಎಲೆಕ್ಷನ್‌ಗೆ ಇನ್ನೂ ಒಂದು ವಷ೯ ಇದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿಕೊಳ್ಳೋಕ್ಕೆ ಆಗುತ್ತಾ? ಆದರೆ ಬಾದಾಮಿ ದೂರ ಅನ್ನೋದು ಬಿಟ್ಟರೆ, ಬಾದಾಮಿ ಜನ ಬಹಳ ಒಳ್ಳೆಯವರು. ಕೇವಲ ಶಾಸಕನಾಗಿದ್ರೆ ವಾರದಲ್ಲಿ ಎರಡು ದಿನ ಬಂದು ಜನರ ಸಮಸ್ಯೆ ಕೇಳಬಹುದಾಗಿತ್ತು. ನಾನು ಬರೀ ಎಂಎಲ್ ಎ ಅಲ್ಲ. ವಿಧಾನ ಸಭೆ ವಿಪಕ್ಷ ನಾಯಕ. ಹೀಗಾಗಿ ಬೇರೆ ಬೇರೆ ಕಡೆ ಹೋಗಬೇಕಾಗುತ್ತೆ. ಟೂರ್ ಮಾಡಬೇಕಾಗುತ್ತೆ ಎಂದು ಕ್ಷೇತ್ರ ಬಿಡುವ ಸೂಚನೆ ನೀಡಿದ್ದಾರೆ.

from India & World News in Kannada | VK Polls https://ift.tt/bXLPVaB

ಸಾರ್ವಕಾಲಿಕ ಓಡಿಐ ಶ್ರೇಯಾಂಕದಲ್ಲಿ ಸಚಿನ್‌ ಹಿಂದಿಕ್ಕಿದ ಬಾಬರ್‌ ಆಝಮ್‌!

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯವಾಗಿದ್ದ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 276 ರನ್‌ ಗಳಿಸಿದ್ದ ಪಾಕಿಸ್ತಾನ ನಾಯಕ ಬಾಬರ್‌ ಆಝಮ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಐಸಿಸಿ ಸಾರ್ವಕಾಲಿಕ ಓಡಿಐ ಶ್ರೇಯಾಂಕದಲ್ಲಿ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿ 15ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ ವಾರ ಈ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು 887 ಅಂಕಗಳೊಂದಿಗೆ 15ನೇ ಸ್ಥಾನದಲ್ಲಿದ್ದರು. ಇದೀಗ ಅವರು 16ನೇ ಸ್ಥಾನಕ್ಕೆ ಇಳಿದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/GBfZOyb

ಸೋಷಿಯಲ್‌ ಮೀಡಿಯಾದಲ್ಲಿ ವಿಷ ಬಿತ್ತಿದರೆ ಕಠಿಣ ಕ್ರಮ

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಉತ್ತಮವಾಗಿದೆ. ಶಾಂತಿ ಸುವ್ಯವಸ್ಥೆ ಭಂಗ ತರುವವರ ವಿರುದ್ಧ ಹಿಂದೆ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣ, ಇತರೆ ಮಾರ್ಗಗಳ ಮೂಲಕ ವಿಷ ಬೀಜ ಬಿತ್ತುವ ಶಕ್ತಿಗಳ ವಿರುದ್ಧ ತನಿಖೆ ನಡೆಸುತ್ತಿದ್ದೇವೆ.

from India & World News in Kannada | VK Polls https://ift.tt/WuUvQGY

ದೇಶದಲ್ಲೇ ಮೊದಲ ಬಾರಿಗೆ ಕಂಡಕ್ಟರ್‌ ರಹಿತ ಸಾರಿಗೆ ವ್ಯವಸ್ಥೆಯತ್ತ ಹೆಜ್ಜೆ ಇಟ್ಟ ಬಿಎಂಟಿಸಿ!

‘ಡಿಜಿಟಲ್‌ ಪಾಸ್‌ ವ್ಯವಸ್ಥೆಯಿಂದಾಗಿ ಪ್ರಯಾಣಿಕರು ಪಾಸ್‌ ಖರೀದಿಗೆ ಬಸ್‌ ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಆನ್‌ಲೈನ್‌ನಲ್ಲಿಯೇ ಟಿಕೆಟ್‌ ಖರೀದಿ ಮಾಡಬಹುದಾಗಿದೆ. ಸದ್ಯ ತಿಂಗಳ ಆರಂಭ ಮತ್ತು ಅಂತ್ಯದಲ್ಲಿ ಮಾಸಿಕ ಪಾಸ್‌ ಖರೀದಿಸಲು ಅವಕಾಶವಿದೆ. ಮುಂಬರುವ ದಿನಗಳಲ್ಲಿ ತಿಂಗಳಲ್ಲಿ ಯಾವಾಗ ಬೇಕಾದರೂ ಪಾಸ್‌ ಖರೀದಿಸಲು ಅನುವು ಮಾಡಿಕೊಡಲಾಗುವುದು. ಹೀಗೆ ಖರೀದಿಸುವ ಪಾಸ್‌ಗಳ ಮಾನ್ಯತಾ ಅವಧಿಯು 30 ದಿನಗಳವರೆಗೆ ಚಾಲ್ತಿಯಲ್ಲಿರಲಿದೆ’ ಎಂದು ಬಿಎಂಟಿಸಿ ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ ವಿ ಸೂರ್ಯಸೇನ್‌ ಹೇಳಿದರು.

from India & World News in Kannada | VK Polls https://ift.tt/IMrKpRV

ಸ್ನೇಹಿತನ ಬರ್ತ್‌ಡೇಗೆ ಹೋದವನು ಶವವಾಗಿ ಬಂದ: ಜೆಜೆ ನಗರದಲ್ಲಿ ಕೊಲೆಯಾದ ಚಂದ್ರು ತಾಯಿಯ ಕಣ್ಣೀರು!

ಐಟಿಐ ಮುಗಿಸಿದ್ದ ನನ್ನ ಮಗ ಯಾರ ತಂಟೆಗೂ ಹೋಗದೇ ತನ್ನ ಕೆಲಸವಷ್ಟೇ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಅಂಪ್ರೆಟಿಸ್‌ ರೈಲ್ವೆ ಇಲಾಖೆ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದ. ಆತನಿಗೆ ರಾತ್ರಿ ಪಾಳಿಯಲ್ಲಿಕೆಲಸಕ್ಕೆ ನಿಯೋಜಿಸಿದ್ದರಿಂದ ಏನಾದರೂ ತೊಂದರೆಯಾಗಬಹುದು ಎಂದು ಕೆಲಸ ಬಿಡಿಸಿದ್ದು, ಹತ್ತು ದಿನಗಳಿಂದ ಮನೆಯಲ್ಲಿದ್ದ ಎಂದು ಹೇಳಿದರು.

from India & World News in Kannada | VK Polls https://ift.tt/fwQHWt6

ಅಧ್ಯಕ್ಷರು ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ: ಲಂಕಾದಲ್ಲಿ ಉರಿಯುತ್ತಿರುವ ಬೆಂಕಿಗೆ ಸರ್ಕಾರದಿಂದಲೇ ತುಪ್ಪ!

ಆರ್ಥಿಕ ಬಿಕ್ಕಟ್ಟು ನಿಭಾಯಿಸುವಲ್ಲಿಎಡವಿದ ಸರಕಾರದ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಜನರು ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆಹಾರ, ಅಗತ್ಯ ಔಷಧ, ಪೆಟ್ರೋಲ್‌, ಡೀಸೆಲ್‌ ಖರೀದಿಸಲು ಪರಿತಪಿಸುವಂತಾಗಿದ್ದು, ಆಕ್ರೋಶದ ಕಟ್ಟೆಯೊಡೆದು ಹಿಂಸಾಚಾರಕ್ಕೆ ಇಳಿದಿದ್ದಾರೆ. ರಾಜಕೀಯ ಅಸ್ಥಿರತೆ ತೀವ್ರವಾಗಿದ್ದರೂ ರಾಜಪಕ್ಸ ಮಾತ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದು, ಅಲ್ಲಿನ ಜನರ ಆಕ್ರೋಶ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

from India & World News in Kannada | VK Polls https://ift.tt/P2mS8Zp

ರೇಷ್ಮೆಗೂ ತಟ್ಟಿದ ಕೋಮು ವೈಷಮ್ಯ: ಮುಸ್ಲಿಂ ವ್ಯಾಪಾರಿಗಳಿಗೆ ಗೂಡು ಮಾರಬೇಡಿ ಎಂದು ಹೊಸ ಅಭಿಯಾನ!

ರಾಜ್ಯದಲ್ಲೇ ಅತೀ ಹೆಚ್ಚು ರೇಷ್ಮೆ ಬೆಳೆಯುವ ಜಿಲ್ಲೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಕೋಲಾರದಲ್ಲಿ ಇದೀಗ ರೇಷ್ಮೆ ಗೂಡುಗಳನ್ನು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡಬೇಕು ಎನ್ನು ಅಭಿಯಾನ ಆರಂಭವಾಗಿದೆ. ಹಿಜಾಬ್, ಮುಸ್ಲಿಂ ಅಂಗಡಿಗಳ ವ್ಯಾಪಾರ ಬಹಿಷ್ಕಾರ, ಹಲಾಲ್ ಕಟ್, ಮಸೀದಿಗಳ ಮೇಲಿನ ಧ್ವನಿವರ್ಧಕ, ಮಾವಿನ ವ್ಯಾಪಾರದ ಬಳಿಕ ಇದೀಗ ರೇಷ್ಮೆ ವ್ಯಾಪಾರಕ್ಕೂ ಕೋಮುವಾದ ವಕ್ಕರಿಸಿದ್ದೆದು, ರೇಷ್ಮೆ ಗೂಡು ಸಾಕಾಣಿಕೆ ದಾರರಿಗೆ ಆತಂಕಕ್ಕೆ ಎದುರಾಗಿದೆ.

from India & World News in Kannada | VK Polls https://ift.tt/7gDAcIn

IPL 2022: ರಿಯಾನ್ ಕುರಿತ ಅನಗತ್ಯ ಕಾಮೆಂಟ್‌ಗೆ ಕ್ಷಮೆ ಕೇಳಿದ ಸೈಮನ್ ಡುಲ್‌!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವೀಕ್ಷಕ ವಿವರಣೆ ನಿಭಾಯಿಸುತ್ತಿರುವ ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್‌ ಸೈಮನ್‌ ಡುಲ್‌, ಅನಗತ್ಯ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಸೈಮನ್‌, ಕಳಪೆ ಪ್ರದರ್ಶನ ನೀಡುತ್ತಿರುವ ರಾಯಲ್ಸ್‌ ತಂಡದ ಯುವ ಆಲ್‌ರೌಂಡರ್‌ ರಿಯಾನ್‌ ಪರಾಗ್‌ ಅವರನ್ನು ಟೀಕಿಸುವ ಭರದಲ್ಲಿ ಸೋಷಿಯಲ್‌ ಮೀಡಿಯಾ ಸ್ಟಾರ್‌ ಎಂದು ಕರೆದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CfS8L03

ಕುಡಿಯುವ ನೀರಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ದೇವೇಗೌಡ

ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಆದರೆ ನಾನು ಅದನ್ನು ಪ್ರಸ್ತಾಪಿಸಲು ಹೋಗುವುದಿಲ್ಲ. ಬೆಂಗಳೂರು ನಗರಕ್ಕೆ ಕುಡಿಯಲು ನೀರು ಕೊಡಿ ಎಂಬುದಷ್ಟೇ ನನ್ನ ಬೇಡಿಕೆ. ನಮ್ಮ ದುರದೃಷ್ಟವಶಾತ್‌ ಕುಡಿಯುವ ನೀರಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.

from India & World News in Kannada | VK Polls https://ift.tt/xHqCMV5

ಸದ್ದಿಲ್ಲದೇ ವಾಹನ ನೋಂದಣಿ, ಎಫ್‌ಸಿ ನವೀಕರಣ ಶುಲ್ಕ ಹತ್ತಾರು ಪಟ್ಟು ಹೆಚ್ಚಳ: ಏಪ್ರಿಲ್‌ 1ರಿಂದಲೇ ಜಾರಿ!

​​ಹೊಸ ದ್ವಿಚಕ್ರ ವಾಹನಗಳ ನೋಂದಣಿಗೆ 300 ರೂ., 15 ವರ್ಷದ ಹಳೆಯ ವಾಹನಕ್ಕೆ 1,000 ರೂ., ತ್ರಿಚಕ್ರ ವಾಹನಗಳ ಹೊಸ ನೋಂದಣಿಗೆ 600 ರೂ., ನವೀಕರಣಕ್ಕೆ 2500 ರೂ., ಹೊಸ ಕಾರುಗಳ ನೋಂದಣಿಗೆ 600 ರೂ. ಮತ್ತು ನವೀಕರಣಕ್ಕೆ 5 ಸಾವಿರ ರೂ. ನಿಗದಿಪಡಿಸಲಾಗಿದೆ. ​​ಆಮದು ಮಾಡಿ-ಕೊಳ್ಳಲಾದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಹೊಸ ನೋಂದಣಿಗೆ 2,500 ರೂ. ಮತ್ತು ನವೀಕರಣಕ್ಕೆ 10 ಸಾವಿರ ರೂ., ಕಾರುಗಳಿಗೆ 5,000 ರೂ. ಮತ್ತು ನವೀಕರಣಕ್ಕೆ 40 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ.

from India & World News in Kannada | VK Polls https://ift.tt/ET0SaYG

ದುಂದು ವೆಚ್ಚ ನಿಲ್ಲಿಸಲು ಹಲವು ಇಲಾಖೆಗಳ ವಿಲೀನಕ್ಕೆ ತೀರ್ಮಾನ : ಆಯಕಟ್ಟಿನ ಜಾಗದಲ್ಲಿ ಕುಳಿತ ಅಧಿಕಾರಿಗಳಿಗೆ ಬಿಸಿ

​​ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಒಂದುಗೂಡಿಸಿ ಅನಗತ್ಯ ಖರ್ಚಿಗೆ ಕಡಿವಾಣ ಹಾಕಲಾಗುತ್ತಿದೆ. ಮಲೆ ನಾಡು ಜಿಲ್ಲೆಹೊರತುಪಡಿಸಿ ಬಯಲು ಸೀಮೆ ಜಿಲ್ಲೆಗಳಲ್ಲಿಈಗಿರುವ ಮೂರ್ನಾಲ್ಕು ಜಿಲ್ಲಾ ಅರಣ್ಯಾಧಿಕಾರಿಗಳನ್ನು ತೆಗೆದುಹಾಕ ಲಾಗುತ್ತಿದೆ. ಇದೇ ಮಾದರಿ ಯಲ್ಲಿಸರಕಾರದ ಎಲ್ಲಇಲಾಖೆಗಳಲ್ಲೂ ಅನಗತ್ಯ ಹುದ್ದೆ ವಿಸರ್ಜಿಸಲಾಗುತ್ತಿದ್ದು, ಈ ಸಂಬಂಧ ಸಚಿವ ಸಂಪುಟ ಉಪ ಸಮಿತಿಯು ಸದ್ಯದಲ್ಲೇ ಸರಕಾರಕ್ಕೆ ವರದಿ ಸಲ್ಲಿಸಲಿದೆ. ದುಂದುವೆಚ್ಚಕ್ಕೆ ಕಡಿವಾಣ, ಅನಗತ್ಯ ಹುದ್ದೆಗಳ ವಿಸರ್ಜನೆ ಮತ್ತು ನಿಷ್ಕ್ರೀಯ ಇಲಾಖೆಗಳ ವಿಲೀನಗೊಳಿಸಿ ಬೊಕ್ಕಸಕ್ಕಾಗುವ ನಷ್ಟ ನಿಯಂತ್ರಿಸಲು ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

from India & World News in Kannada | VK Polls https://ift.tt/TdKO9AS

ಮುಸ್ಲಿಮರಿಂದ ಮಾವು ಖರೀದಿ ಮಾಡಬೇಡಿ ಎನ್ನುವವರು ದೇಶದ್ರೋಹಿಗಳು: ಎಚ್‌ಡಿ ಕುಮಾರಸ್ವಾಮಿ ಕಿಡಿಕಿಡಿ

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಸಲ್ಮಾನರ ಬಳಿ ಮಾವಿನ ಹಣ್ಣು ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ರಾಷ್ಟ್ರ ದ್ರೋಹ ಬೇರೆ ಇಲ್ಲ. ಹೀಗೆ ಮುಂದುವರೆದರೆ ಜನರು ಶೀಘ್ರ ಬಿಜೆಪಿ ವಿರುದ್ಧ ತಿರುಗಿಬೀಳುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇದೆಲ್ಲ ಹೇಗಿದೆ ಎಂದರೆ, ಕಳ್ಳಕಾಕರು ಬರುತ್ತಿದ್ದಾರೆ, ಅವರನ್ನು ಓಡಿಸ್ತಾ ಇರಿ ಎಂದು ಹೇಳಿದ ಹಾಗೆ ಆಯಿತು. ಇದಕ್ಕೆಲ್ಲ ಒಂದು ಅಂತ್ಯ ಇದ್ದೇ ಇರುತ್ತದೆ. ಹಿಂದುಗಳೇ ಜನರೇ ತಿರುಗಿಬೀಳುತ್ತಾರೆ, ನೋಡುತ್ತೀರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

from India & World News in Kannada | VK Polls https://ift.tt/IRtibg8

ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ಗೆ ಎದೆನೋವು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ!

​ಆರೆಸ್ಸೆಸ್ ಮುಖಂಡ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಆರೋಗ್ಯದಲ್ಲಿ ಸಣ್ಣಮಟ್ಟಿನ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಮನೆಯಲ್ಲಿದ್ದ ಪ್ರಭಾಕರ್ ಭಟ್ ಅವರಿಗೆ ಕಡಿಮೆ ರಕ್ತದೊತ್ತಡ ಕಾರಣದಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಜತೆಗೆಸಣ್ಣ ಪ್ರಮಾಣದಲ್ಲಿ ಎದೆನೋವಿನ ಲಕ್ಷಣ ಕೂಡ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

from India & World News in Kannada | VK Polls https://ift.tt/XQNJ37t

ರಾಜಸ್ಥಾನದಿಂದ ಅಯೋಧ್ಯೆ ತಲುಪಿದ ಗುಲಾಬಿ ಶಿಲೆಗಳು: ರಾಮ ಮಂದಿರ ನಿರ್ಮಾಣ ಕೆಲಸಕ್ಕೆ ವೇಗ!

ಈ ಗುಲಾಬಿ ಶಿಲೆಗಳನ್ನು ದೇಗುಲದ ಗೋಡೆಗಳಲ್ಲಿ ಬಳಸಲಾಗುತ್ತದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್‌​ ಈಗಾಗಲೇ ಮಾಹಿತಿ ನೀಡಿದೆ. ಇದರ ಅಳವಡಿಕೆ ಜೂನ್‌ ಅಂತ್ಯದ ವೇಳೆ ಪೂರ್ಣಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 15 ಟ್ರಸ್ಟಿಗಳ ಪೈಕಿ ಓರ್ವರಾಗಿರುವ ಅನಿಲ್‌ ಮಿಶ್ರಾ ಅವರು ಹೇಳಿದ್ದಾರೆ.​​​ ಈ ಗುಲಾಬಿ ಶಿಲೆಗಳನ್ನು ತಾಮ್ರದ ಪಟ್ಟಿಗಳ ಮೂಲಕ ಜೋಡಿಸಲಾಗುತ್ತದೆ. ಇದಕ್ಕಾಗಿ ಹಿಂದೂಸ್ಥಾನ್‌ ಕಾಪರ್‌ ಲಿಮಿಟೆಡ್‌ನಿಂದ 35 ಸಾವಿರ ತಾಮ್ರದ ಪಟ್ಟಿಗಳನ್ನು ಖರೀದಿ ಮಾಡಲಾಗಿದ್ದು, ಅವುಗಳೂ ಮಂದಿ ನಿರ್ಮಾಣದ ಸ್ಥಳಕ್ಕೆ ತಲುಪಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

from India & World News in Kannada | VK Polls https://ift.tt/2NKDsZL

ಹಿಜಾಬ್ ವಿವಾದದ ಮಧ್ಯೆಯೂ 98% ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರ್‌; ಬಿ.ಸಿ ನಾಗೇಶ್

hijab controversy: ‘ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಮುಸ್ಲಿಂ ವಿದ್ಯಾರ್ಥಿನಿಯರ ಹಾಜರಾತಿ ಪ್ರಮಾಣ ಶೇ. 0.4ರಷ್ಟು ಹೆಚ್ಚಿದೆ. ಇನ್ನು ಇದುವರೆಗೆ ಯಾರೂ ಪರೀಕ್ಷಾ ಹಾಗೂ ತರಗತಿ ಕೊಠಡಿಯಲ್ಲಿ ಹಿಜಾಬ್‌ ಹಾಕಿ ಬಂದಿಲ್ಲ. ಮೊದಲ ದಿನ ಗೊಂದಲ ಇತ್ತು. 14 ಜಿಲ್ಲೆಗಳಲ್ಲಿ ಮುಸ್ಲಿಂ ಹಾಗೂ ಮುಸ್ಲೀಮೇತರ ವಿದ್ಯಾರ್ಥಿನಿಯರ ಹಾಜರಾತಿ ಪರಿಶೀಲಿಸಲಾಗಿದೆ. ಬಹುತೇಕ ಎಲ್ಲ ವಿದ್ಯಾರ್ಥಿನಿಯರೂ ಸರಕಾರದ ಆದೇಶಕ್ಕೆ ಬೆಲೆ ನೀಡಿ ಪರೀಕ್ಷೆ ಬರೆದಿದ್ದಾರೆ’ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಂತಸ ವ್ಯಕ್ತಪಡಿಸಿದರು.

from India & World News in Kannada | VK Polls https://ift.tt/cW4Lmvb

ಕೋವಿಡ್‌ ಸೋಂಕು, ಸಾವು ಗಣನೀಯ ಇಳಿಕೆ; ರಾಜ್ಯದಲ್ಲೂ ಶೀಘ್ರದಲ್ಲೇ ಮಾಸ್ಕ್‌ಗೆ ಗುಡ್‌ಬೈ

Covid Rules: ಏಪ್ರಿಲ್‌ 1ರಿಂದ ಜಾರಿಯಾಗುವಂತೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ದಿಲ್ಲಿ, ಹರಿಯಾಣದಲ್ಲಿ ಕಡ್ಡಾಯ ಮಾಸ್ಕ್‌ (Mask) ನಿಯಮವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಜನರು ಸ್ವಯಿಚ್ಛೆಯಿಂದ ಬೇಕಾದರೆ ಮಾಸ್ಕ್‌ ಹಾಕಬಹುದು. ಕೇಂದ್ರ ಸರಕಾರದ ಸೂಚನೆ ಮೇರೆಗೆ ದಿಲ್ಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಎಲ್ಲಾ ಕೋವಿಡ್‌ ನಿರ್ಬಂಧಗಳು (Covid Rules) ಮತ್ತು ಮಾಸ್ಕ್‌ ಕಡ್ಡಾಯ (Mask Compulsory) ನಿಯಮವನ್ನು ಸಂಪೂರ್ಣ ರದ್ದುಗೊಳಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಕ್ರಮ ಕೈಗೊಳ್ಳಲು ಮುಂದಾಗಿದೆ.

from India & World News in Kannada | VK Polls https://ift.tt/1lAkpbN

ಪ್ರಾರ್ಥನೆಗೆ ವಿರೋಧವಿಲ್ಲ. ಮಸೀದಿಗಳಲ್ಲಿ ಬಳಸುವ ಲೌಡ್‌ ಸ್ಪೀಕರ್‌ಗೆ ವಿರೋಧವಿದೆ: ಪ್ರಮೋದ್ ಮುತಾಲಿಕ್.

ಕಳೆದ ಸುಮಾರು ಹದಿನಾರು ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟ್ ಧ್ವನಿ ವರ್ಧಕ ತೆರವು ಮಾಡುವ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ಆದರೆ ಅದನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿ ತರುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಈ ವಿಚಾರವನ್ನು ಕೆಲವರು ಈಗ ಏಕೆ ಏಳೆದು ತರುತ್ತಿದ್ದಾರೆ ಎಂದು ಕೇಳಬಹುದು. ನಾವು ಈ ಹಿಂದಿನಿಂದಲೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮನವಿ‌‌ ನೀಡುತ್ತಾ ಬಂದಿದ್ದೇವೆ. ಈಗ ಅಧಿಕಾರಿಗಳು ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ‌ ಮಾಡಬೇಕು ಎಂದು ಅವರು ಅಗ್ರಹಿಸಿದರು.

from India & World News in Kannada | VK Polls https://ift.tt/By9tKCA

2022ರ ಐಪಿಎಲ್‌ ಆಡಲು ಆರ್‌ಸಿಬಿಗೆ ಸೇರ್ಪಡೆಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌!

ಆಸ್ಟ್ರೇಲಿಯಾದಿಂದ ಭಾರತಕ್ಕೆ ಆಗಮಿಸಿರುವ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವಲ್‌ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡುವ ಸಲುವಾಗಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಆರ್‌ಸಿಬಿ ತಂಡದ ಜೊತೆ ಅಭ್ಯಾಸ ನಡೆಸಿರುವ ಮ್ಯಾಕ್ಸ್‌ವೆಲ್‌, ಮಾಜಿ ಸಹ ಆಟಗಾರ ಹಾಗೂ ಆರ್‌ಆರ್‌ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಅವರೊಂದಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಆರ್‌ಸಿಬಿ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಬೆಂಗಳೂರು ತಂಡ ಸೆಣಸಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lorTi5u

ತುರ್ತು ಪರಿಸ್ಥಿತಿಗೂ ಬಗ್ಗದ ಲಂಕಾ ಪ್ರಜೆಗಳು: ಕೊಲಂಬೋದ ಬೀದಿಗಳಲ್ಲಿ ಆಕ್ರೋಶದ ಹೊಳೆ, ಪೊಲೀಸರು ಹೈರಾಣ

ಸೋಮವಾರ ರಾತ್ರಿಯೂ ಪ್ರತಿಭಟನಾಕಾರರು ಬೀದಿಗೆ ಇಳಿದಿದ್ದು, ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಅಧಿಕೃತ ನಿವಾಸವನ್ನು ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ಅಧ್ಯಕ್ಷರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪ್ರತಿಭಟನಾಕಾರರು ಬಂದ್‌ ಮಾಡಿದ್ದು, ಲಂಕಾ ಸರ್ಕಾರ, ರಾಜಪಕ್ಸ ಕುಟುಂಬದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೈ ಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದ ಪ್ರತಿಭಟನಾಕಾರರು ಆರ್ಥಿಕ ಬಿಕ್ಕಟ್ಟು ನಿರ್ವಹಿಸಲು ವಿಫಲವಾದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಧಾನಿಯಾದ್ಯಂತ ಜನರ ದಂಡೇ ಇದ್ದು, ಸರ್ಕಾರದ ವಿರುದ್ದ ಅಕ್ಷರಶಃ ಕೆಂಡ ಕಾರುತ್ತಿದ್ದಾರೆ.

from India & World News in Kannada | VK Polls https://ift.tt/3XBz2Tu

ಜೀವಮಾನದ ಆಸ್ತಿಯನ್ನೆಲ್ಲಾ ರಾಹುಲ್‌ ಗಾಂಧಿ ಹೆಸರಿಗೆ ಬರೆದುಕೊಟ್ಟ ವೃದ್ಧೆ..! ಕಾರಣ ಏನು ಗೊತ್ತಾ?

ಸೋಮವಾರ ಡೆಹ್ರಾಡೂನ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಪುಷ್ಪಾಮುಜಿಯಾಲ್‌ ಅವರು ತಮ್ಮ ಆಸ್ತಿಯನ್ನು ರಾಹುಲ್‌ ಗಾಂಧಿ ಅವರ ಹೆಸರಿಗೆ ವಿಲ್‌ ಬರೆಸಿದ್ದಾರೆ. ಬಳಿಕ ಆ ವಿಲ್‌ ಅನ್ನು ಡೆಹ್ರಾಡೂನ್‌ ಕಾಂಗ್ರೆಸ್‌ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದ್ದಾಳೆ. ವೃದ್ಧೆಯ ಈ ಆಸ್ತಿ ಹಸ್ತಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೆಹ್ರಾಡೂನ್‌ ನಗರ ಕಾಂಗ್ರೆಸ್‌ ಅಧ್ಯಕ್ಷ ಲಾಲ್‌ ಚಂದ್ ಶರ್ಮಾ, ಮುಜಿಯಾಲ್‌ ಅವರು ರಾಹುಲ್‌ ಗಾಂಧಿ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ. ಹೀಗಾಗಿ ಅವರು ತಮ್ಮ ಆಸ್ತಿಯನ್ನು ರಾಹುಲ್‌ ಗಾಂಧಿ ಅವರ ಹೆಸರಿಗೆ ಬರೆದಿದ್ದಾರೆ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/FBHkS4p

ಕೆಲಸಗಾರರಿಗೆ ಸಂಬಳ ಪಾವತಿಸಲು ಕಾರ್‌ನಲ್ಲಿ ತೆರಳಿದ್ದ ಬಿಬಿಎಂಪಿ ಮಾಜಿ ಸದಸ್ಯೆಯ ಪತಿ ಕಾಣೆ!

ಮಾರ್ಚ್ 28ರಂದು ಕೆಲಸಗಾರರಿಗೆ ಸಂಬಳ ಪಾವತಿಸಲು ಹಣದೊಂದಿಗೆ ಬೆಂಗಳೂರಿನಿಂದ ಲೋಹಿತ್‌ ಹೊರಟಿದ್ದರು. 'ನಂದಗುಡಿಯ ಅರಣ್ಯದ ಬಳಿ ಕಾರು ಪಂಕ್ಚರ್‌ ಆಗಿದ್ದು, ಚಕ್ರ ಬದಲಿಸಿಕೊಂಡು ನಂದಗುಡಿಗೆ ಹೋಗಿ ಬರಲು ತಡವಾಗುತ್ತದೆ' ಎಂದು ಕುಟುಂಬಸ್ಥರಿಗೆ ಅಂದು ಸಂಜೆ 7 ಗಂಟೆ ಸಮಯದಲ್ಲಿ ಕರೆ ಮಾಡಿ ತಿಳಿಸಿದ್ದರು. ನಂತರ ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ. ಲೋಹಿತ್‌ ಕುಟುಂಬಸ್ಥರ ಮಾಹಿತಿ ಮೇರೆಗೆ ಮಾರ್ಚ್ 29ರ ಬೆಳಗ್ಗೆ ಕೆಲಸಗಾರ ನಿತಿನ್‌, ಮಾಲೀಕರಿಗಾಗಿ ಹುಡುಕಾಡಿ ಕಾರು ನಿಂತ ಸ್ಥಳಕ್ಕೆ ತೆರಳಿದ್ದರು. ಕಾರಿನಲ್ಲಿ ರಕ್ತದ ಕಲೆಗಳನ್ನು ಕಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

from India & World News in Kannada | VK Polls https://ift.tt/YNf8He1

'ವಿಂಟೇಜ್‌ ಎಂಎಸ್‌ ಧೋನಿ', ಮಿಂಚಿನ ರನ್‌ಔಟ್‌ಗೆ ಫ್ಯಾನ್ಸ್‌ ಫಿದಾ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕ್ಯಾಪ್ಟನ್ಸಿ ಬಿಟ್ಟಿರುವ ಎಂಎಸ್‌ ಧೋನಿ, ಐಪಿಎಲ್‌ 2022 ಟೂರ್ನಿಯಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 15ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಬ್ಯಾಟ್‌ ಮೂಲಕ ಭಾರಿ ಸದ್ದು ಮಾಡಿದ ಎಂಎಸ್‌ಡಿ, ಇದೀಗ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಮಿಂಚಿನ ರನ್‌ಔಟ್‌ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪಂಜಾಬ್‌ ಕಿಂಗ್ಸ್‌ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್‌ ಭಾನುಕ ರಾಜಪಕ್ಸ ಅವರನ್ನು ಧೋನಿ ಅದ್ಭುತವಾಗಿ ರನ್‌ ಔಟ್‌ ಮಾಡಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/27xS8fN

ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಈ ವರ್ಷವೇ ಆರಂಭ! ಬಜೆಟ್‌ನಲ್ಲಿ 100 ಕೋಟಿ ರೂ. ಇದೆ ಎಂದ ಬೊಮ್ಮಾಯಿ

ಕೊಪ್ಪಳದ ಆನೆಗುಂದಿ ಬಳಿಯಿರುವ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆಸಕ್ತಿ ತೋರಿದೆ. ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕೆಲಸ ಈ ವರ್ಷವೇ ಪ್ರಾರಂಭವಾಗಲಿದೆ ಎಂದು ಹೇಳಿದ್ದು, ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿದೆ ಎಂದಿದ್ದಾರೆ.

from India & World News in Kannada | VK Polls https://ift.tt/BtbXo1W

ಮಂಗಳವಾರ ದಿಲ್ಲಿಗೆ ಬಸವರಾಜ ಬೊಮ್ಮಾಯಿ? ಮತ್ತೆ ಜೋರಾದ ಸಂಪುಟ ಸರ್ಜರಿ ಚರ್ಚೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ರಾಷ್ಟ್ರ ರಾಜಧಾನಿ ದಿಲ್ಲಿಗೆ ತೆರಳುತ್ತಿದ್ದಾರೆ. ಮಂಗಳವಾರ ಸಿಎಂ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಮತ್ತೆ ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಅದಲ್ಲದೇ ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚಿಸುವ ಸಂಭವ ಇದೆ.

from India & World News in Kannada | VK Polls https://ift.tt/RKdQfVj

ವಿಶ್ವಕಪ್: ಗಿಲ್‌ಕ್ರಿಸ್ಟ್‌-ಪಾಂಟಿಂಗ್‌ ದಾಖಲೆ ನುಚ್ಚು ನೂರು ಮಾರಿದ ಅಲಿಸಾ ಹೇಯ್ಲೀ!

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ಆಟಗಾರ್ತಿ ಅಲಿಸಾ ಹೇಯ್ಲೀ, ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಆಸೀಸ್‌ ದಿಗ್ಗಜ ಆಡಮ್‌ ಗಿಲ್‌ಕ್ರಿಸ್ಟ್‌ ಅವರ ಹೆಸರಲ್ಲಿದ್ದ ಬಹುದೊಡ್ಡ ಬ್ಯಾಟಿಂಗ್‌ ದಾಖಲೆಯನ್ನು ನುಚ್ಚು ನೂರು ಮಾಡಿದ್ದಾರೆ. ಭಾನುವಾರ ನಡೆದ ಬದ್ಧ ಎದುರಾಳಿ ಇಂಗ್ಲೆಂಡ್‌ ವಿರುದ್ಧದ ಅಕ್ಷರಶಃ ಅಬ್ಬರಿಸಿದ ಅಲಿಸಾ ಹೇಲೀ ಮನಮೋಹಕ 170 ರನ್‌ಗಳನ್ನು ಸಿಡಿಸಿ ಮಿಂಚಿದರು. ಈ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ ದಾಖಲಿಸಿದ ವಿಶ್ವದಾಖಲೆಯನ್ನು ಬಲಗೈ ಬ್ಯಾಟರ್‌ ಅಲಿಸಾ ತಮ್ಮದಾಗಿಸಿಕೊಂಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ZDKPFGT

Pakistan Politics: ಇಮ್ರಾನ್ ಖಾನ್ ನಾಟೌಟ್! ವಿಪಕ್ಷಗಳ ಕಡೆಗೆ ಬೌನ್ಸರ್ ಎಸೆದ ಪಾಕ್ ಪ್ರಧಾನಿ!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುವ ಪ್ರಕ್ರಿಯೆಯಲ್ಲಿ ಭಾನುವಾರ ನಾಟಕೀಯ ಬೆಳವಣಿಗೆ ನಡೆದಿದೆ. ಅವಿಶ್ವಾಸ ನಿರ್ಣಯದ ಮೇಲಿನ ಮತ ಚಲಾವಣೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೋಲಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಸೆಂಬ್ಲಿ ಸ್ಪೀಕರ್, ಈ ನಿರ್ಣಯವನ್ನೇ ವಜಾಗೊಳಿಸಿದ್ದಾರೆ. ಹೀಗಾಗಿ ದೇಶದಲ್ಲಿನ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಅತ್ತ ಸಂಸತ್ ಅನ್ನು ವಿಸರ್ಜಿಸಿ ಚುನಾವಣೆಗೆ ಹೋಗಲು ಇಮ್ರಾನ್ ಖಾನ್ ಸಿದ್ಧತೆ ನಡೆಸಿದ್ದಾರೆ.

from India & World News in Kannada | VK Polls https://ift.tt/hzkLVG8

ದಿಲ್ಲಿಯಲ್ಲಿ ಡಿಎಂಕೆ ಕಚೇರಿ ಉದ್ಘಾಟನೆ: ವಿರೋಧ ಪಕ್ಷಗಳಿಂದ ಒಗ್ಗಟ್ಟು ಪ್ರದರ್ಶನ

2024ರ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವಿರೋಧ ಪಕ್ಷಗಳು, ಶನಿವಾರ ಇದಕ್ಕೆ ಮೊದಲ ಹೆಜ್ಜೆ ಎಂಬಂತೆ ಒಟ್ಟಿಗೆ ಕಾಣಿಸಿಕೊಂಡಿವೆ. ದಿಲ್ಲಿಯಲ್ಲಿ ಡಿಎಂಕೆ ಕಚೇರಿ ಆರಂಭವಾಗಿದ್ದು, ಅದರ ಉದ್ಘಾಟನೆ ಸಮಾರಂಭದಲ್ಲಿ ಸೋನಿಯಾ ಗಾಂಧಿ, ಎಂಕೆ ಸ್ಟಾಲಿನ್, ಅಖಿಲೇಶ್ ಯಾದವ್ ಹಾಗೂ ಇತರೆ ವಿಪಕ್ಷಗಳ ನಾಯಕರು ಹಾಜರಿದ್ದರು.

from India & World News in Kannada | VK Polls https://ift.tt/ZLqsWSD

​​ಕರ್ನಾಟಕ ಸರ್ಕಾರದ ಅಸಡ್ಡೆಯಿಂದ ಶ್ರೀಶೈಲಂನಲ್ಲಿ ಭಕ್ತರಿಗೆ ಕಿರಿಕಿರಿ: ದೇವಸ್ಥಾನ ಸಮಿತಿ ಜೊತೆ ಸಂಘರ್ಷ..!

ಶ್ರೀಶೈಲದಲ್ಲಿ 1970ರ ದಶಕದಲ್ಲಿ ವಾರ್ಷಿಕ ನೆಲ ಬಾಡಿಗೆಯ ಗುತ್ತಿಗೆ ಆಧಾರದಲ್ಲಿ ಅಲ್ಲಿನ ಸರಕಾರ ನೀಡಿದ 2.68 ಎಕರೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಛತ್ರ ನಿರ್ಮಾಣ ಮಾಡಲಾಗಿದೆ. ಆನಂತರ ಅಲ್ಲಿ ಲಭ್ಯವಿರುವ ಜಾಗವನ್ನು ಸರಿಯಾಗಿ ಕರ್ನಾಟಕ ಸರಕಾರ ಬಳಸಿಕೊಳ್ಳದಿರುವುದು ದೇವಸ್ಥಾನ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದೆ. ಖಾಲಿ ಬಿಟ್ಟಿರುವ ಛತ್ರದ ಜಾಗವನ್ನು ತನ್ನ ವಶಕ್ಕೆ ಪಡೆಯುವ ತಂತ್ರಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ. ಈ ಗೊಂದಲಗಳ ಮಧ್ಯೆ ರಾಜ್ಯ ಸರಕಾರ ಶ್ರೀಶೈಲಂನಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಒದಗಿಸಿದೆ.

from India & World News in Kannada | VK Polls https://ift.tt/oZ6kRbM

ಬೆಂಗಳೂರಿನಲ್ಲಿ 74 ಕಿ. ಮೀ. ಉದ್ದದ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಬಿಡಿಎ ಟೆಂಡರ್‌

ಭೂ ಸ್ವಾಧೀನ ಮತ್ತು ಅನುದಾನದ ಕೊರತೆಯ ಕಾರಣ ಯೋಜನೆ ಎರಡು ದಶಕಗಳಿಂದ ಬರೀ ಘೋಷಣೆಯಾಗಿಯೇ ಉಳಿದಿತ್ತು. ಯೋಜನೆಯ ಭೂ ಸ್ವಾಧೀನ ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು. ಅಗತ್ಯವಿರುವ ಭೂಮಿ ಸ್ವಾಧೀನ ಮಾಡಿಕೊಂಡು ಯೋಜನೆ ಆರಂಭಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಈ ಯೋಜನೆ ತಾಂತ್ರಿಕ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ಕೆಲವು ದಿನಗಳ ಹಿಂದೆ ಎರಡು ಬಾರಿ ಸಭೆ ನಡೆಸಿತ್ತು. ಈ ಯೋಜನೆಯ ಒಟ್ಟು ವೆಚ್ಚ 21,091 ಕೋಟಿ ರೂ. ಆಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.

from India & World News in Kannada | VK Polls https://ift.tt/QO2jPzr

Russia-Ukraine Crisis: ಉಕ್ರೇನ್‌ನಲ್ಲಿ ರಷ್ಯಾದ ಕ್ರೌರ್ಯ: 280 ಮೃತದೇಹಗಳ ಸಾಮೂಹಿಕ ಸಮಾಧಿ

ಉಕ್ರೇನ್‌ ರಾಜಧಾನಿ ಕೀವ್ ಸುತ್ತಮುತ್ತಲಿನ ಕೆಲವು ಪಟ್ಟಣಗಳಿಂದ ರಷ್ಯಾ ಪಡೆಗಳು ವಾಪಸಾಗಿದ್ದು, ಉಕ್ರೇನ್ ಸೇನೆ ಅವುಗಳನ್ನು ಮರಳಿ ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಿವೆ. ಬುಚಾ ಪಟ್ಟಣದಲ್ಲಿ ರಷ್ಯಾ ಪಡೆಗಳ ಭಯಾನಕ ಹಿಂಸಾಚಾರ ಈಗ ಬೆಳಕಿಗೆ ಬರುತ್ತಿದೆ. ಒಂದೇ ಪಟ್ಟಣದಲ್ಲಿ 280 ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ. ಇನ್ನೂ ಅನೇಕ ಬೀದಿಗಳಲ್ಲಿ ಶವಗಳು ಬಿದ್ದಿವೆ.

from India & World News in Kannada | VK Polls https://ift.tt/pBZ1Ttr

Sri Lanka Crisis: ಶ್ರೀಲಂಕಾದಲ್ಲಿ ಕರ್ಫ್ಯೂ; ಟ್ವಿಟ್ಟರ್, ಫೇಸ್‌ಬುಕ್ ಕೂಡ ಬಂದ್

ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ದೇಶವ್ಯಾಪಿ ಕರ್ಫ್ಯೂ ಜಾರಿಗೆ ತರಲಾಗಿದೆ. ಇದರ ನಡುವೆ ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಜನರಿಗೆ ಕರೆ ನೀಡುವ ಪೋಸ್ಟ್‌ಗಳು ಹರಿದಾಡುತ್ತಿರುವುದರಿಂದ ಭಾನುವಾರ ಮಧ್ಯರಾತ್ರಿಯಿಂದಲೇ ಸಾಮಾಜಿಕ ಮಾಧ್ಯಮಗಳನ್ನು ಕೂಡ ನಿರ್ಬಂಧಿಸಲಾಗಿದೆ.

from India & World News in Kannada | VK Polls https://ift.tt/sNOKaYt

Viral Video: ಆಕಾಶದಲ್ಲಿ ಬೆಳಕಿನ ಹಬ್ಬ!: ಉಲ್ಕೆಗಳು ಬಿಡಿಸಿದ ಚಿತ್ತಾರ ಕಂಡು ಬೆರಗಾದ ಜನರು

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ವಿವಿಧ ಸ್ಥಳಗಳಲ್ಲಿ ಶನಿವಾರ ರಾತ್ರಿ ಆಕಾಶದಲ್ಲಿ ಬಳಕಿನ ವಿಸ್ಮಯ ಕಂಡುಬಂದಿದೆ. ಇದರ ವಿಡಿಯೋ ವೈರಲ್ ಆಗಿದೆ. ವಸ್ತುವೊಂದು ವೇಗವಾಗಿ ಚಲಿಸುತ್ತಿದ್ದು, ಅದು ದಪ್ಪನೆಯ ಬೆಳಕನ್ನು ಆಕಾಶದಲ್ಲಿ ಮೂಡಿಸಿದೆ. ಇದು ಸಹಜ ಉಲ್ಕಾಪಾತದ ದೃಶ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

from India & World News in Kannada | VK Polls https://ift.tt/bxUAtpf

Russia-Ukraine Crisis: ರಷ್ಯಾ ಪಡೆಗಳು ತೊರೆದ ಪಟ್ಟಣದ ಒಂದೇ ಬೀದಿಯಲ್ಲಿ 20 ಶವಗಳು ಪತ್ತೆ

ಉಕ್ರೇನ್ ರಾಜಧಾನಿ ಕೀವ್ ಸಮೀಪದ ಕೆಲವು ಪಟ್ಟಣಗಳಿಂದ ರಷ್ಯಾ ಪಡೆಗಳು ಹಿಂದಕ್ಕೆ ಸರಿದಿವೆ. ಅವುಗಳಲ್ಲಿ ಬುಚಾ ಎಂಬ ಪಟ್ಟಣದಲ್ಲಿನ ಒಂದೇ ಬೀದಿಯಲ್ಲಿ ಕನಿಷ್ಠ 20 ಶವಗಳು ಪತ್ತೆಯಾಗಿವೆ. ಇವರೆಲ್ಲರೂ ಸಾಮಾನ್ಯ ನಾಗರಿಕರು ಎಂದು ಹೇಳಲಾಗಿದೆ. ಇದು ರಷ್ಯಾ ದಾಳಿಯ ಬರ್ಬರ ಕೃತ್ಯವನ್ನು ಸೂಚಿಸುತ್ತಿದೆ.

from India & World News in Kannada | VK Polls https://ift.tt/WG16DP0

IPL 2022: 'ಆಂಡ್ರೆ ರಸೆಲ್‌ ಅಬ್ಬರ ನೋಡಿ ನನಗೆ 2 ಬಾರಿ ಹೆದರಿಕೆಯಾಯ್ತು ಎಂದ ಬಿಲ್ಲಿಂಗ್ಸ್‌!

ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂಜಾಬ್‌ ಕಿಂಗ್ಸ್‌ ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿತು. ಗೆಲುವಿನ ಬಳಿಕ ಮಾತನಾಡಿದ ಕೆಕೆಆರ್‌ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸ್ಯಾಮ್‌ ಬಿಲ್ಲಿಂಗ್ಸ್ ಸಹ ಆಟಗಾರ ಆಂಡ್ರೆ ರಸೆಲ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಕೇವಲ 31 ಎಸೆಗಳನ್ನು ಎದುರಿಸಿದ್ದ ರಸೆಲ್‌ ಎಂಟು ಸಿಕ್ಸರ್ ಹಾಗೂ ಎರಡು ಬೌಂಡರಿಯೊಂದಿಗೆ ಅಜೇಯ 70 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/0Nt5WHX

IPL 2022: 'ಪಂಜಾಬ್‌ ಕಿಂಗ್ಸ್ ಬ್ಯಾಟಿಂಗ್‌ ನೋಡಿ ಸ್ಟನ್‌ ಆದೆ'-ಶ್ರೇಯಸ್‌ ಅಯ್ಯರ್!

ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂಜಾಬ್‌ ಕಿಂಗ್ಸ್‌ ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿತು. ಗೆಲುವಿನ ಬಳಿಕ ಮಾತನಾಡಿದ ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌, 31 ಎಸೆತಗಳಲ್ಲಿ ಅಜೇಯ 70 ರನ್‌ ಸಿಡಿಸಿದ ಆಂಡ್ರೆ ರಸೆಲ್‌ ಸೇರಿದಂತೆ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/d6Qc2rR

ಬೆಂಗಳೂರು ವಿವಿ ಆವರಣದಲ್ಲಿ ಪ್ರತಿಭಟನೆ ನಿಷೇಧ; ವಿದ್ಯಾರ್ಥಿಗಳಿಂದ ತೀವ್ರ ಆಕ್ಷೇಪ

‘ಬೆಂಗಳೂರು ನಗರದ ಹೃದಯ ಭಾಗದಲ್ಲಿ ಹೋರಾಟಗಳಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಸುಮೋಟೋ ಪ್ರಕರಣವನ್ನು ಪಿಐಎಲ್‌ ಮೂಲಕ ಪ್ರಶ್ನೆ ಮಾಡಲಾಗಿದ್ದು, ಈ ಸಂಬಂಧ ಮಾತ್ರ ಹೈಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ಫ್ರೀಡಂ ಪಾರ್ಕ್ ಹೊರತುಪಡಿಸಿ ನಗರದ ಯಾವುದೇ ಭಾಗದಲ್ಲಿ ಪ್ರತಿಭಟನೆ ಅಥವಾ ರ್ಯಾಲಿಗಳನ್ನು ನಡೆಸದಂತೆ ಸರಕಾರ ಇದುವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಆದರೂ, ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆಗೆ ನಿರ್ಬಂಧವೇಕೆ?’ ಎಂದು ಒಕ್ಕೂಟ ಪ್ರಶ್ನಿಸಿದೆ.

from India & World News in Kannada | VK Polls https://ift.tt/y1tfJRz

ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ, ಪ್ರಚೋದನಾಕಾರಿ ಹೇಳಿಕೆ; ತುರ್ತು ವಿಚಾರಣೆಗೆ ಹೈಕೋರ್ಟ್‌ ನಕಾರ

ಶುಕ್ರವಾರ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್‌.ಜಿ ಪಂಡಿತ್‌ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲ ರೆಹಮತ್‌-ಉಲ್ಲಾ-ಕೊತ್ವಾಲ್‌, ‘ಅರ್ಜಿಯನ್ನು ವಿಚಾರಣೆಗೆ ತುರ್ತಾಗಿ ಪರಿಗಣಿಸಬೇಕು’ ಎಂದು ಕೋರಿದರು. ಅದಕ್ಕೆ ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ತುರ್ತಾಗಿ ಪರಿಗಣಿಸುವ ಅಗತ್ಯವಿಲ್ಲ. ನಿಗದಿತ ಕ್ರಮದಲ್ಲೇ ಅರ್ಜಿಯು ವಿಚಾರಣೆಗೆ ಬರಲಿ ಎಂದು ಸೂಚನೆ ನೀಡಿತು. ಮುಸ್ಲಿಂ ಸಮದಾಯದ ವಿರುದ್ಧ ದ್ವೇಷ ಬಿತ್ತುವ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡುವವರ ಬಿಜೆಪಿ ಶಾಸಕರು ಮತ್ತು ಸಂಸದರ ವಿರುದ್ಧ, ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಅಲ್ಲದೇ, ಕಾನೂನು ಕ್ರಮ ಜರುಗಿಸುವಂತೆ ಸರಕಾರಕ್ಕೆ ಆದೇಶಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

from India & World News in Kannada | VK Polls https://ift.tt/LPymQri

IPL 2022: ಮುಂಬೈ ಕ್ರೀಡಾಂಗಣವನ್ನು 'ನಯಾಗ್ರ ಫಾಲ್ಸ್‌' ಎಂದ ಸ್ಟೀಫನ್ ಫ್ಲೆಮಿಂಗ್!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇತಿಹಾಸದಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇದೇ ಮೊದಲ ಬಾರಿ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿದೆ. ಅದರಲ್ಲೂ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ 210 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದರೂ ಕೂಡ 6 ವಿಕೆಟ್‌ಗಳ ಹೀನಾಯ ಸೋಲನುಭವಿಸಿತು. ಈ ಬಗ್ಗೆ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಸ್‌ಕೆ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಸೋಲಿಗೆ ಮುಖ್ಯ ಕಾರಣ ತಿಳಿಸಿದ್ದಾರೆ. ಜೊತೆಗೆ ಮುಂಬೈ ಕ್ರೀಡಾಂಗಣದಲ್ಲಿನ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/YZSl4aA

ಇದೇ ಮೊದಲ ಬಾರಿಗೆ ವಿವಾದಿತ ಆಫ್‌ಸ್ಪಾ ಕಾಯಿದೆಯನ್ನು ಭಾಗಶಃ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಬ್ರಿಟಿಷ್‌ ಆಡಳಿತಾವಧಿಯಲ್ಲಿ ಜಾರಿಗೊಂಡ ಈ ವಿವಾದಾಸ್ಪದ ಕಾಯಿದೆ, ಸ್ವಾತಂತ್ರ್ಯ ನಂತರವೂ ಉಳಿದುಕೊಂಡಿತ್ತು. ಹತ್ತಾರು ಸಣ್ಣಪುಟ್ಟ ಬಂಡುಕೋರ ಗುಂಪುಗಳು ಈಶಾನ್ಯ ರಾಜ್ಯಗಳಲ್ಲಿ ದಶಕಗಳಿಂದಲೂ ಸಕ್ರಿಯವಾಗಿದ್ದು, ಕಾಲಕಾಲಕ್ಕೆ ಅಶಾಂತಿ ಹುಟ್ಟುಹಾಕುವ ದುಷ್ಕೃತ್ಯ ನಡೆಸುತ್ತಲೇ ಬಂದಿವೆ. ಇವುಗಳನ್ನು ಮಣಿಸುವುದಕ್ಕಾಗಿಯೇ ಆಫ್‌ಸ್ಪಾ ಮುಂದುವರಿಸಲಾಗಿತ್ತು. ಆದರೆ, ಕಳೆದ ವರ್ಷ ನಡೆದ ಘೋರ ಘಟನೆಯಿಂದ ಕಾಯಿದೆಯ ಪ್ರಾಮಾಣಿಕತೆ ಬಗ್ಗೆ ದಟ್ಟ ಸಂಶಯ ಮೂಡಿತ್ತು.

from India & World News in Kannada | VK Polls https://ift.tt/y5Eb3mg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...