ಬಿಜೆಪಿ-ಶಿವಸೇನೆ ಸೀಟು ಹಂಚಿಕೆ ಸೂತ್ರ ಅಂತಿಮ; ಡಿಸಿಎಂ ಅಭ್ಯರ್ಥಿಯಾಗಿ ಆದಿತ್ಯ ಠಾಕ್ರೆ

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹಾಗೂ ಶಿವಸೇನೆ ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡಿದ್ದು, ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಗುರುವಾರ ಮಹಾರಾಷ್ಟ್ರದ ಕೋರ್‌ ಕಮಿಟಿ ಜತೆ ಸಭೆ ನಡೆಸಿದರು. ಬಳಿಕ ಉದ್ಧವ್ ಠಾಕ್ರೆ ಜತೆ ಸಿಎಂ ದೇವೇಂದ್ರ ಫಡ್ನವಿಸ್‌ ಮಾತುಕತೆ ನಡೆಸಿದರು. ಅದರಂತೆ, 288 ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 126 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಲಿವೆ. ಮಿತ್ರಪಕ್ಷಗಳಿಗೆ 18 ಕ್ಷೇತ್ರಗಳನ್ನು ಬಿಟ್ಟು ಕೊಡಲಾಗುತ್ತದೆ. ಉಪ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಗೆ ನೀಡಲು ಬಿಜೆಪಿ ಸಮ್ಮತಿಸಿದೆ. ಇದೇ ಮೊದಲ ಬಾರಿಗೆ ಸ್ಪರ್ಧಾ ಅಖಾಡಕ್ಕೆ ಇಳಿಯಲಿರುವ ಆದಿತ್ಯ ಠಾಕ್ರೆ ಅವರನ್ನೇ ಪಕ್ಷ ಡಿಸಿಎಂ ಅಭ್ಯರ್ಥಿ ಎಂದು ಬಿಂಬಿಸುವುದು ಖಚಿತವಾಗಿದೆ. ಆದಿತ್ಯ ಅವರು ಮುಂಬಯಿಯ ವರ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಶಿವಸೇನೆ 126 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತು. ಆರಂಭದಲ್ಲಿ ಇದನ್ನೂ ತಿರಸ್ಕರಿಸಿದ್ದ ಅಮಿತ್‌ ಶಾ ಅವರು, 122 ಕ್ಷೇತ್ರ ಬಿಟ್ಟು ಕೊಡಲು ಒಪ್ಪಿದ್ದರು. ಅಂತಿಮವಾಗಿ 126 ಕ್ಷೇತ್ರಕ್ಕೆ ಒಪ್ಪಿಗೆ ನೀಡಿದರು ಎಂದು ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/2lXYkw9

ಚಾಮುಂಡಿಬೆಟ್ಟದಲ್ಲಿಇಂದು ನಿಷೇಧಾಜ್ಞೆ : ಮಹಿಷಾ ದಸರಾ ವಿರೋಧಕ್ಕೆ ಮುನ್ನೆಚ್ಚರಿಕೆ

ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.78 ಹುದ್ದೆ ಖಾಲಿ!

- ಅಶೋಕ್‌.ಆರ್‌.ಪಿ., ತುಮಕೂರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿಯೂ ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯೇ ಸಿಬ್ಬಂದಿ ಇಲ್ಲದೇ ಸೊರಗಿದೆ. ಶೇ. 78ರಷ್ಟು ಹುದ್ದೆಗಳು ಖಾಲಿ ಇವೆ. ರಾಜ್ಯದ ಪ್ರವಾಸೋದ್ಯಮ ಇಲಾಖೆಯಲ್ಲಿಒಟ್ಟು 278 ಹುದ್ದೆಗಳು ಮಂಜೂರಾಗಿದ್ದು, ಕೇವಲ 55 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಸಿಬ್ಬಂದಿ ಕೊರತೆಯಿಂದಾಗಿ ಪ್ರವಾಸೋದ್ಯಮ ಇಲಾಖೆ ಸೊರಗುತ್ತಿದೆ. ಯಾವುದೇ ಕಾರ್ಯಕ್ರಮವನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆ ಸಿಬ್ಬಂದಿಯೇ ಆಧಾರ: 2014ನೇ ಸಾಲಿನಲ್ಲಿರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬ ಹಾಗೂ ಕೇಂದ್ರ ಕಚೇರಿಗೆ ಒಬ್ಬ ಸೇರಿ ಒಟ್ಟು 32 ಮಂದಿ ಪ್ರವಾಸೋದ್ಯಮ ಸಮಾಲೋಚಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಈ ಸಮಾಲೋಚಕರು ಇಲಾಖೆಯ ಅಂಕಿ-ಅಂಶಗಳ ಸಂಗ್ರಹಣೆ, ಪ್ರವಾಸೋದ್ಯಮ ಕೇಂದ್ರಗಳ ಅಧ್ಯಯನ ಮತ್ತು ಅಲ್ಲಿನ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮತ್ತಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪ್ರವಾಸೋದ್ಯಮ ಸಮಾಲೋಚಕರನ್ನು ಕೆಪಿಎಸ್ಸಿ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂಬ ಬೇಡಿಕೆಗೂ ಮನ್ನಣೆ ದೊರೆತಿಲ್ಲ. ಒಟ್ಟಿನಲ್ಲಿಆದಾಯ ಗಳಿಕೆಯ ಒಂದು ಉತ್ತಮ ಅವಕಾಶವನ್ನು ರಾಜ್ಯ ಸರಕಾರ ಕೈಚೆಲ್ಲಿಕುಳಿತಿದೆ. ಕೋರ್ಸ್‌ ಇದೆ, ಕೆಲಸವಿಲ್ಲ: ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಧಾರವಾಡ ವಿವಿಗಳಲ್ಲಿಇರುವ ಪ್ರವಾಸೋದ್ಯಮ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿನೂರಾರು ವಿದ್ಯಾರ್ಥಿಗಳು ಪ್ರತಿ ವರ್ಷ ಜ್ಞಾನ ಪಡೆದು ಹೊರಬರುತ್ತಿದ್ದಾರೆ. ಆದರೆ, ಇನ್ನೂ ಒಬ್ಬರನ್ನೂ ಇಲಾಖೆಯಲ್ಲಿನೇಮಕ ಮಾಡಿಲ್ಲ!. ಇಲಾಖೆಯಲ್ಲಿಪ್ರವಾಸೋದ್ಯಮ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವ ಕಾಯಂ ಅಧಿಕಾರಿಗಳೇ ಇಲ್ಲ. ಇಲಾಖೆಯ ಅಂಗ ಸಂಸ್ಥೆಗಳಾದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ನಿ), ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್ ಮತ್ತು ಗೋಲ್ಡನ್‌ ಚಾರಿಯೇಟ್‌ಗಳಲ್ಲಿನೇಮಕ ಮಾಡಿಕೊಳ್ಳಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಆದ್ಯತೆ ಇಲ್ಲ: ಕೃಷಿ, ಅರಣ್ಯ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿಶೇ.75ರಷ್ಟು ಹುದ್ದೆಗಳನ್ನು ಇಲಾಖೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಕೋರ್ಸ್‌ ಅಧ್ಯಯನ ಮಾಡಿದವರಿಗೆ ಮೀಸಲಿಡಲಾಗಿದೆ. ಉಳಿದ ಶೇ.25ರಷ್ಟು ಹುದ್ದೆಗಳನ್ನು ಇತರೆ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆದರೆ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ 1974ರಲ್ಲಿಪ್ರವಾಸೋದ್ಯಮ ಇಲಾಖೆ ಪ್ರತ್ಯೇಕವಾದಾಗಿನಿಂದ ವೃಂದ ಮತ್ತು ನೇಮಕ ನಿಯಮದಲ್ಲಿಮಾಸ್ಟರ್‌ ಆಫ್‌ ಟೂರಿಸಂ ಅಡ್ಮಿನಿಸ್ಪ್ರೇಷನ್‌ ಮತ್ತು ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಪ್ರೇಷನ್‌ನಲ್ಲಿಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶವನ್ನೇ ನೀಡಿಲ್ಲ. ಮಾಸ್ಟರ್‌ ಆಫ್‌ ಟೂರಿಸಂ ಓದಿದ್ದರೂ ಪ್ರವಾಸೋದ್ಯಮ ಇಲಾಖೆಯಲ್ಲಿಈ ಕೋರ್ಸ್‌ ಓದಿದವರಿಗೆ ಒಂದೇ ಒಂದು ಹುದ್ದೆಯೂ ದೊರೆತಿಲ್ಲ. ನೇಮಕ ಎದುರು ನೋಡುತ್ತಿದ್ದೇವೆ. - ನೊಂದ ಅಭ್ಯರ್ಥಿ. ಉಳಿದ ಇಲಾಖೆಗಳಿಗಿಂತಲೂ ಪ್ರವಾಸೋದ್ಯಮ ಇಲಾಖೆಯಲ್ಲೇ ಹೆಚ್ಚು ಶೇ.81ರಷ್ಟು ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತರೆ ಖಾಲಿ ಇರುವ ಎಲ್ಲಾಹುದ್ದೆಗಳನ್ನು ಕೆಪಿಎಸ್ಸಿ ಸೇರಿದಂತೆ ಎಲ್ಲಾಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಥವಾ ನೇರನೇಮಕ ಮೂಲಕ ಭರ್ತಿ ಮಾಡಿಕೊಳ್ಳಲು ಸಿದ್ಧರಿದ್ದೇವೆ. -ಸಿ.ಟಿ ರವಿ, ಪ್ರವಾಸೋದ್ಯಮ ಸಚಿವ


from India & World News in Kannada | VK Polls https://ift.tt/2m1G2tZ

ಕೌಟುಂಬಿಕ ವೆಚ್ಚಗಳಿಗೆ ಬ್ಯಾಂಕ್‌ ಖಾತೆ ಬಳಸಲು ಭಯೋತ್ಪಾದಕ ಹಫೀಜ್‌ ಸಯೀದ್‌ಗೆ ಅನುಮತಿ

ತ್ರಿಪುರದಲ್ಲಿ ಮತ್ತೊಂದು ನಿರ್ಭಯಾ ಕೇಸ್: ಕಾರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

ಅಗರ್ತಲಾ: ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ನಿರ್ಭಯಾ ಪ್ರಕರಣ ಮಾದರಿಯಲ್ಲಿಯೇ ಮತ್ತೊಂದು ಭೀಕರ ಮತ್ತು ಅಮಾನವೀಯ ಪ್ರಕರಣ ವರದಿಯಾಗಿದೆ. ಆರು ವರ್ಷದ ಮಗಳ ಜತೆ ಅಗರ್ತಲಾ ವೈದ್ಯಕೀಯ ಕಾಲೇಜಿನಿಂದ ಹಿಂದಿರುಗುತ್ತಿದ್ದ ಮಹಿಳೆಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ 8 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ರಸ್ತೆ ಬದಿ ಎಸೆದು ಪರಾರಿಯಾಗಿರುವ ಘೋರ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಈ ಘೋರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಂತ್ರಸ್ತ ಮಹಿಳೆಯ ಪತಿ ಪೂರ್ವ ಅಗರ್ತಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 8 ಜನರ ಪೈಕಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ 7.30ರ ಸುಮಾರಿಗೆ ಸಂತ್ರಸ್ತ ಮಹಿಳೆ ಪರಿಚಿತರೊಬ್ಬರ ಆಟೋ ರಿಕ್ಷಾ ಹತ್ತಿ ಅಗರ್ತಲಾ ವೈದ್ಯಕೀಯ ಕಾಲೇಜಿನಿಂದ ಪುತ್ರಿ ಜತೆ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಚಾಲಕ ಮಾರ್ಗ ಬದಲಾಯಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ, ಬೇರೊಬ್ಬ ಪ್ರಯಾಣಿಕರನ್ನು ಸಹ ಪಿಕ್ ಮಾಡುವುದು ಇದೆ ಎಂದಿದ್ದಾನೆ. ಬಳಿಕ ಮಾರ್ಗ ಮಧ್ಯ ನಾಲ್ವರು ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿ ಮಹಿಳೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಸುಮಾರು 15 ಕಿ.ಮೀ ಸಾಗಿದ ಬಳಿಕ ಮತ್ತೆ ನಾಲ್ವರು ಜತೆ ಗೂಡಿದ್ದಾರೆ. ಇವರೆಲ್ಲರೂ ಮಹಿಳೆಯನ್ನು ಕಾರಿನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ಪೂರ್ವ ಅಗರ್ತಲಾ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಮುಮ್ತಾಜ್ ಹಸೀನಾ ತಿಳಿಸಿದ್ದಾರೆ. ಈ ಘೋರ ಘಟನೆಯನ್ನು ಖಂಡಿಸಿರುವ ಬಿಜೆಪಿ ಸಂಸದೆ ಪ್ರತಿಯಾ ಭೌಮಿಕ ಅವರು , ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/2nFs0hT

ದಶಕದ ಬಳಿಕ ಕರಾಚಿಯಲ್ಲಿಏಕದಿನ ಕದನ; ಪಾಕ್ ವಿರುದ್ಧ ಲಂಕಾ ಪೈಪೋಟಿ

ಕರಾಚಿ: ಬರೋಬ್ಬರಿ ಹತ್ತು ವರ್ಷಗಳ ಬಳಿಕ ಪಾಕಿಸ್ತಾನದ ನೆಲದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ವೇದಿಕೆ ನಿರ್ಮಾಣವಾಗಿದೆ. ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವೆ ಶುಕ್ರವಾರ ಕರಾಚಿಯ ನ್ಯಾಷನಲ್‌ ಸ್ಟೇಡಿಯಮ್‌ನಲ್ಲಿಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. 2009ರಲ್ಲಿ ಪ್ರವಾಸಿ ಶ್ರೀಲಂಕಾ ತಂಡದ ಬಸ್ಸಿನ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನದಲ್ಲಿಆಡಲು ಜಗತ್ತಿನ ಇತರ ತಂಡಗಳು ನಿರಾಕರಿಸಿದ್ದವು. ಹೀಗಾಗಿ ನಂತರದ ದಿನಗಳಲ್ಲಿಪಾಕಿಸ್ತಾನದ ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸುತ್ತಿತ್ತು. ಸುಮಾರು ಏಳು ವರ್ಷಗಳ ಬಳಿಕ ಅಂದರೆ 2015ರಲ್ಲಿಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿ ಟಿ20 ಪಂದ್ಯಗಳನ್ನು ಆಡಿತ್ತು. 2017ರಲ್ಲಿಶ್ರೀಲಂಕಾ ವಿರುದ್ಧವೂ ಟಿ20 ಪಂದ್ಯ ನಡೆದಿತ್ತು. ಆದರೆ, ಏಕದಿನ ಪಂದ್ಯಗಳು ನಡೆದಿರಲಿಲ್ಲ. ಕ್ರಿಕೆಟ್‌ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಪಾಕಿಸ್ತಾನಕ್ಕೆ ವಿದೇಶಿ ತಂಡವೊಂದನ್ನು ಕರೆಸಿ ಏಕದಿನ ಪಂದ್ಯ ಆಡಿಸಬೇಕು ಎಂಬುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಪಿಸಿಬಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಜತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿತ್ತು. ಆದರೆ, ಶ್ರೀಲಂಕಾದ 10 ಆಟಗಾರರು ಪಾಕ್‌ಗೆ ಹೋಗಲು ನಿರಾಕರಿಸಿದ್ದರು. ಕೊನೆಗೂ, ಅವರಿಗೆ ಭದ್ರತೆಯ ಭರವಸೆ ನೀಡಿ ಪಾಕ್‌ಗೆ ಕಳುಹಿಸಲಾಗಿದೆ. ಇದೀಗ ಸುಮಾರು 2000 ಭದ್ರತಾ ಸಿಬ್ಬಂದಿ ಶ್ರೀಲಂಕಾ ಕ್ರಿಕೆಟಿಗರಿಗೆ ರಕ್ಷಣೆ ನೀಡುತ್ತಿದ್ದಾರೆ. ಸೆಪ್ಟೆಂಬರ್‌ 27, 29 ಹಾಗೂ ಅಕ್ಟೋಬರ್‌ 2ರಂದು 3 ಏಕದಿನ ಪಂದ್ಯಗಳು ಹಾಗೂ ಅಕ್ಟೋಬರ್‌ 5, 7 ಹಾಗೂ 9ರಂದು 3 ಟಿ20 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ ಇಂತಿದೆ: ಏಕದಿನ ಸರಣಿ: ಮೊದಲ ಏಕದಿನ: ಸೆ.27, ಶುಕ್ರವಾರ, ಕರಾಚಿ ದ್ವಿತೀಯ ಏಕದಿನ: ಸೆ.29, ಭಾನುವಾರ, ಕರಾಚಿ ಅಂತಿಮ ಏಕದಿನ: ಅ.3, ಗುರುವಾರ, ಕರಾಚಿ ಟ್ವೆಂಟಿ-20 ಸರಣಿ: ಮೊದಲ ಟಿ20: ಅ.5, ಶನಿವಾರ, ಲಾಹೋರ್ ದ್ವಿತೀಯ ಟಿ20: ಅ.7, ಸೋಮವಾರ, ಲಾಹೋರ್ ಅಂತಿಮ ಟಿ20: ಅ.9, ಬುಧವಾರ, ಲಾಹೋರ್ ಏಕದಿನ ಹಾಗೂ ಟ್ವೆಂಟಿ-20 ತಂಡಗಳ ನಾಯಕರಾದ ದಿಮುತ್ ಕರುಣಾರತ್ನೆ ಹಾಗೂ ಲಸಿತ್ ಮಾಲಿಂಗ ಅನುಪಸ್ಥಿತಿಯಲ್ಲಿ ಸಿಂಹಳೀಯರ ತಂಡವನ್ನು ಅನುಕ್ರಮವಾಗಿ ಲಹಿರು ತಿರಿಮಣ್ಣೆ ಹಾಗೂ ದಸುನ್ ಶನಕ ಮುನ್ನಡೆಸಲಿದ್ದಾರೆ. ಶ್ರೀಲಂಕಾದ ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ, ಏಕದಿನ ನಾಯಕ ದಿಮುತ್ ಕರುಣಾರತ್ನೆ, ತಿಸಾರಾ ಪರೇರಾ, ಏಂಜಲೋ ಮ್ಯಾಥ್ಯೂಸ್, ನಿರೋಶನ್ ಡಿಕ್‌ವೆಲ್ಲ, ಕುಸಾಸ್ ಪರೇರಾ, ಧನಂಜಯ ಡಿ ಸಿಲ್ವ, ಅಕಿಲ ಧನಂಜಯ, ಸುರಂಗ ಲಕ್ಮಲ್ ಹಾಗೂ ದಿನೇಶ್ ಚಾಂದಿಮಾಲ್ ಪಾಕಿಸ್ತಾನಕ್ಕೆ ತೆರಳಲು ವಿಸಮ್ಮತಿಯನ್ನು ನಿರಾಕರಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2n2BsM8

ಪಟನಾ ಪೈರೇಟ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿಗೆ ವೀರೋಚಿತ ಗೆಲುವು

ಜೈಪುರ: ವಿಜಯ್‌ (13) ಮತ್ತು ನವೀನ್‌ ಕುಮಾರ್‌ (11) ದ್ವಯರ ಅದ್ಭುತ ರೇಡಿಂಗ್‌ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ 43-39 ಅಂಕಗಳ ಅಂತರದಿಂದ ಪಟನಾ ಪೈರೇಟ್ಸ್‌ ತಂಡಕ್ಕೆ ಸೋಲುಣಿಸಿದೆ. ಗುರುವಾರ ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ 108ನೇ ಪಂದ್ಯ ಜಿದ್ದಾಜಿದ್ದಿನಿಂದ ನಡೆಯಿತಾದರೂ, ಅಂತಿಮ ಹಂತದಲ್ಲಿಮೇಲುಗೈ ಸಾಧಿಸಿದ ಡೆಲ್ಲಿ, ಅಂಕಪಟ್ಟಿಯಲ್ಲಿಮೊದಲ ಸ್ಥಾನ ಕಾಪಾಡಿಕೊಳ್ಳುವಲ್ಲಿಯಶಸ್ವಿಯಾಯಿತು. ಪಂದ್ಯ ಮುಕ್ತಾಯದ ಮೊದಲಿನ ಮೂರು ನಿಮಿಷಗಳ ತನಕ ಮುನ್ನಡೆ ಕಾಪಾಡಿಕೊಂಡು ಬಂದಿದ್ದ ಪಟನಾ ತಂಡದ ಆಟಗಾರರು ಕೊನೆಯ ಹಂತದಲ್ಲಿರೇಡಿಂಗ್‌ಗೆ ಬಂದ ವಿಜಯ್‌ಗೆ ಐದು ಅಂಕಗಳನ್ನು ಬಿಟ್ಟು ಕೊಡುವ ಮೂಲಕ ಸೋಲಿನ ಹಾದಿ ಹಿಡಿಯಿತು. ಪಟನಾ ತಂಡದ ಸ್ಟಾರ್‌ ರೇಡರ್‌ ಪರ್ದೀಪ್‌ ನರ್ವಾಲ್‌ 19 ಅಂಕಗಳನ್ನು ಗಳಿಸಿ ತಂಡವನ್ನು ಗೆಲ್ಲಿಸಲು ಯತ್ನಿಸಿದರೂ ಅವರಿಗೆ ಸಾಫಲ್ಯ ದೊರೆಯಲಿಲ್ಲ. ಆಗಲೇ ಪ್ಲೇ ಆಫ್ ಪ್ರವೇಶಿಸಿರುವ ಈ ಗೆಲುವಿನೊಂದಿಗೆ ಆಡಿರುವ 18 ಪಂದ್ಯಗಳಲ್ಲಿ 14 ಗೆಲುವುಗಳೊಂದಿಗೆ ಒಟ್ಟು 77 ಅಂಕಗಳನ್ನು ಸಂಪಾದಿಸಿ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ. ಇನ್ನೊಂದೆಡೆ ಈ ಸೋಲಿನೊಂದಿಗೆ ಆಡಿರುವ 19 ಪಂದ್ಯಗಳಲ್ಲಿ 40 ಅಂಕ ಮಾತ್ರ ಸಂಪಾದಿಸಿರುವ ಒಂಬತ್ತನೇ ಸ್ಥಾನದಲ್ಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2nC2WIx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...