‘ಬಜೆಟ್‌ ರೈತರು, ಯುವಕರಿಗೆ ಆಶಾದಾಯಕವಾಗಿಲ್ಲ’ ಸಿದ್ದರಾಮಯ್ಯ ಟೀಕೆ

ಮೈಸೂರು: ಕೇಂದ್ರ ಬಜೆಟ್‌ 2020 ರೈತರು ಹಾಗೂ ಯುವಕರ ಪಾಲಿಗೆ ಆಶಾದಾಯಕವಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಘೋಷಣೆಯಾಗಿರುವ 16 ಅಂಶಗಳ ಕಾರ್ಯಕ್ರಮಗಳ ಪೈಕಿ ಒಂಬತ್ತು ಅಂಶಗಳು ಕಾರ್ಪೋರೇಟರ್‌ ಫಾರ್ಮಿಂಗ್‌ಗೆ ಸಂಬಂಧಿಸಿದವು. ಈ ಮೂಲಕ ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಈ ನಿಟ್ಟಿನಲ್ಲಿ ನೋಡುವುದಾದರೆ ಬಜೆಟ್‌ 2020 ಖಾಸಗಿ ಕಂಪನಿಗಳಿಗೆ ಅನುಕೂಲವೇ ಹೊರತು ರೈತರು ಹಾಗೂ ಯುವಕರ ಪಾಲಿಗಲ್ಲ ಎಂದಿದ್ದಾರೆ. ಸರ್ವಜನಾಂಗದ ಏಳಿಗೆಗೆ ಈ ಬಜೆಟ್ -ಡಿಸಿಎಂ ಕಾರಜೋಳ ಕೇಂದ್ರ ಬಜೆಟ್‌ ಸರ್ವ ಜನಾಂಗದ ಏಳಿಗೆಗೆ ಒತ್ತು ಕೊಟ್ಟಿದೆ ಎಂದು ಡಿಸಿಎಂ ಗೋವಿಂದ್‌ ಕಾರಜೋಳ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಕಣ್ಣೊರೆಸುವ ಬಜೆಟ್ ಅಲ್ಲ, ಕಣ್ಣು ತೆರೆಸುವ ಬಜೆಟ್ ಎಂದು ಬಣ್ಣಿಸಿದ್ದಾರೆ. ದೇಶದ 130 ಕೋಟಿ ಜನರು ಹೆಮ್ಮೆ ಪಡುವ ಬಜೆಟ್ ಆಗಿದೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ದಲಿತರ ಕಲ್ಯಾಣಕ್ಕಾಗಿ ಅತಿ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಯೋಜನೆ 3.70 ಲಕ್ಷ ಕೋಟಿ ಅನುದಾನ ಹಾಗೂ ಬೆಂಗಳೂರು ಸಬ್- ಅರ್ಬನ್ ರೈಲು ಯೋಜನೆಗೂ 60 ಶೇ ಅನುದಾನ ಕೇಂದ್ರದಿಂದ ಸಿಕ್ಕಿರುವುದು ಸಂತಸ ತಂದಿದೆ ಎಂದರು.


from India & World News in Kannada | VK Polls https://ift.tt/3b4pplK

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿಯಿಂದಲೂ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಔಟ್‌!

ಮುಂಬೈ: ನ್ಯೂಜಿಲೆಂಡ್‌ ಪ್ರವಾಸದಲ್ಲಿ ಭಾರತ ತಂಡ ಆಡಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದಲೂ ಸ್ಟಾರ್‌ ಆಲ್‌ರೌಂಡರ್‌ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ತಿಳಿಸಿದೆ. "ಹಾರ್ದಿಕ್‌, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಪ್ರಧಾನ ಫಿಸಿಯೋ ಆಶೀಶ್‌ ಕೌಶಿಕ್‌ ಅವರೊಟ್ಟಿಗೆ ಲಂಡನ್‌ಗೆ ಪ್ರಯಾಣ ಬೆಳೆಸಿ ಬೆನ್ನುಮೂಳೆಯ ಸರ್ಜನ್‌ ಡಾ. ಜೇಮ್ಸ್‌ ಅಲ್ಲೀಬೋನ್‌ ಅವರನ್ನು ಭೇಟಿಯಾಗಲಿದ್ದಾರೆ. ಪಾಂಡ್ಯ ಸಂಪೂರ್ಣ ಫಿಟ್ನೆಸ್‌ಗೆ ಮರಳುವ ವರೆಗೂ ಎನ್‌ಸಿಎ ಪುನರ್‌ ವಸತಿ ಶಿಬಿರದಲ್ಲಿ ಮುಂದುವರಿಯಲಿದ್ದಾರೆ," ಎಂದು ಬಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಫಿಟ್ನೆಸ್‌ ಪರೀಕ್ಷೆಗೆ ಒಳಪಟ್ಟಿದ್ದ 26 ವರ್ಷದ ಹಾರ್ದಿಕ್‌ ಪಾಂಡ್ಯ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ನ್ಯೂಜಿಲೆಂಡ್ ಪ್ರವಾಸದ ಭಾರತ 'ಎ' ತಂಡದಿಂದಲೂ ಸೆಲೆಕ್ಟರ್‌ಗಳು ಕೈಬಿಟ್ಟಿದ್ದರು. ಪಾಂಡ್ಯ ಸ್ಥಾನದಲ್ಲಿ ತಮಿಳುನಾಡಿನ ವಿಜಯ್‌ ಶಂಕರ್‌ ಸ್ಥಾನ ಪಡೆದಿದ್ದರು. ಕಿವೀಸ್‌ ಪ್ರವಾಸದಲ್ಲಿ ಭಾರತ 'ಎ' ತಂಡ 50 ಓವರ್‌ಗಳ 2 ಅಭ್ಯಾಸ ಪಂದ್ಯ ಮತ್ತು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಮತ್ತು 4 ದಿನಗಳ ಎರಡು ಟೆಸ್ಟ್‌ ಪಂದ್ಯಗಳನ್ನು ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಆಡಲು ಯೋಜಿಸಲಾಗಿತ್ತು. ಇದೇ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಾತನಾಡಿ, ಹಾರ್ದಿಕ್‌ ಪಾಂಡ್ಯ ಪಂದ್ಯಗಳನ್ನಾಡಲು ಬೇಕಿರುವ ಸಂಪೂರ್ಣ ಫಿಟ್ನೆಸ್‌ ಕಂಡುಕೊಂಡಿಲ್ಲ. ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಕಾರಣ ಅವರು ಸಂಪೂರ್ಣವಾಗಿ ಚೇತರಿಸಲು ಇನ್ನು ಸಮಯ ಬೇಕಿದೆ ಎಂದು ಹೇಳಿದ್ದರು. "ಪಾಂಡ್ಯ ಈಗ ಆಡಲು ಸಾಧ್ಯವಿಲ್ಲ. ಸಂಪೂರ್ಣ ಫಿಟ್ನೆಸ್‌ಗೆ ಮರಳಲು ಸಮಯ ಬೇಕಾಗುತ್ತದೆ," ಎಂದು ಗಂಗೂಲಿ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಭಾರತ ತಂಡದ ಕೊನೆಯ ಬಾರಿ ಕಾಣಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಾಡಿದ್ದರು. ಭಾರತ ತಂಡದ ನ್ಯೂಜಿಲೆಂಡ್‌ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಬಳಿಕ 3 ಪಂದ್ಯಗಳ ಒಡಿಐ ಮತ್ತು ಅಂಗವಾಗಿ 2 ಪಂದ್ಯಗಳ ಸರಣಿಯನ್ನಾಡಲಿದೆ. ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ಮತ್ತು 2ನೇ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36MUXtd

‘ಉದ್ಯೋಗ ಸೃಷ್ಟಿಗೆ ಯಾವುದೇ ಕಾರ್ಯತಂತ್ರವಿಲ್ಲ’ ಮೋದಿ ಬಜೆಟ್‌ಗೆ ರಾಹುಲ್ ಟೀಕೆ

ಹೊಸದಿಲ್ಲಿ: ದೇಶದಲ್ಲಿ ಉದ್ಯೋಗ ಸಮಸ್ಯೆ ವ್ಯಾಪಕವಾಗಿದ್ದು ಕೇಂದ್ರ ಯಲ್ಲಿ ನಿರುದ್ಯೋಗ ನಿವಾರಣೆಗೆ ಯಾವುದೇ ಕಾರ್ಯತಂತ್ರವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಬಜೆಟ್‌ ಕುರಿತಾಗಿ ಪ್ರತಿಕ್ರಿಯಿಸಿದ ರಾಹುಲ್, ಇದೊಂದು ಸುದೀರ್ಘ ಬಜೆಟ್‌ ಆಗಿದೆಯೇ ಹೊರತು ಯುವಕರಿಗೆ ಉದ್ಯೋಗ ನೀಡುವ ನಿಟ್ಟಿಯಲ್ಲಿ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ದೇಶದಲ್ಲಿ ತಲೆಧೋರಿರುವ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಸ್ಪಷ್ಟ ಕಲ್ಪನೆ ಇದ್ದ ಹಾಗಿಲ್ಲ ಎಂದು ಟೀಕಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಕೂಡಾ ಕೇಂದ್ರ ಬಜೆಟನ್ನು ಟೀಕಿಸಿದ್ದು ಬಜೆಟ್‌ 2020ಯಲ್ಲಿ ದೂರದೃಷ್ಟಿಯ ಕೊರತೆ ಇದೆ. ಬಜೆಟ್‌ನಲ್ಲಿ ಹೂಡಿಕೆಗಳ ಸಮಸ್ಯೆಯನ್ನು ಬಗೆಹರಿಸಿಲ್ಲ. ಬಜೆಟ್‌ ನಲ್ಲಿ ಘೋಷಣೆ ಮಾಡಿರುವ ಮೂಲಸೌಕರ್ಯ ಪ್ರಕಟನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕೇಂದ್ರದ ಬಜೆಟ್‌ಗೆ ಬಿಜೆಪಿ ಪ್ರಶಂಸೆ ಬಜೆಟ್‌ 2020 ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದು ರೈತಪರ ಹಾಗೂ ಅಭಿವೃದ್ದಿಪರವಾದ ಬಜೆಟ್‌ ಎಂದು ಕೊಂಡಾಡಿದ್ದಾರೆ. ಕೇಂದ್ರ ಬಜೆಟ್‌ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ತೆರಿಗೆದಾರರು ದೇಶದ ಆರ್ಥಿಕತೆಯ ಬೆನ್ನೆಲುವಾಗಿದ್ದು ಕೇಂದ್ರ ಸರಕಾರದ ಬಜೆಟ್‌ನಲ್ಲಿ ತೆರಿಗೆದಾರರಿಗೆ ರಿಯಾಯಿತಿ ಸಿಕ್ಕಿರುವುದು ಖುಷಿಯ ವಿಚಾರ ಎಂದಿದ್ದಾರೆ. ಸಚಿವ ಕೆ.ಎಸ್ ಈಶ್ವರಪ್ಪ ಕೂಡಾ ಬಜೆಟ್‌ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಂಗಳೂರು ಅರ್ಬನ್ ರೈಲು ಯೋಜನೆಗೆ ಅನುಮೋದನೆ ಸಿಕ್ಕಿರುವುದು ಹಾಗೂ ಗ್ರಾಮೀಣಾಭಿವೃದ್ಧಿ ಗೆ ಆದ್ಯತೆ ನೀಡಿರುವ ದೂರದೃಷ್ಟಿಯ ಬಜೆಟ್‌ ಎಂದಿದ್ದಾರೆ.


from India & World News in Kannada | VK Polls https://ift.tt/2RLCqck

ನಿರ್ಭಯಾ ಹಂತಕರಿಂದ ವಿಳಂಬ ತಂತ್ರ: ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಮತ್ತೋರ್ವ ಅಪರಾಧಿ

ಹೊಸದಿಲ್ಲಿ: 2012ರ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ಬೆಳಗ್ಗೆ ತಿರಸ್ಕರಿಸಿದ ಬೆನ್ನಲ್ಲೇ ಇನ್ನೋರ್ವ ಅಪರಾಧಿ ಅಕ್ಷಯ್ ಠಾಕೂರ್ ಸಿಂಗ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾನೆ. ಅಕ್ಷಯ್ ಠಾಕೂರ್ ಸಿಂಗ್ ಈ ಹಿಂದೆ ಸುಪ್ರೀಂ ಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಆದರೆ ಆ ಪತ್ರವನನ್ನು ನಿನ್ನೆ ಸಂಜೆ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇದೀಗ ಅಪರಾಧಿ ರಾಷ್ಟ್ರಪತಿಗಳ ಮೊರೆ ಹೋಗಿದ್ದಾನೆ. 2012ರ ಡಿಸೆಂಬರ್ 16ರಂದು ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯನ್ನು ನಾಲ್ವರು ಚಲಿಸುತ್ತಿದ್ದ ಬಸ್ ನಲ್ಲಿ ಅತ್ಯಾಚಾರ ನಡೆಸಿದ್ದರು. ಸದ್ಯ ನಾಲ್ವರು ಆರೋಪಿಗಳಾದ ಮುಖೇಶ್ ಸಿಂಗ್, ಪವನ್ ಕುಮಾರ್ ಗುಪ್ತಾ, ಅಕ್ಷಯ್ ಥಾಕೂರ್ ಮತ್ತು ವಿನಯ್ ಶರ್ಮಾಗೆ ಗಲ್ಲು ಶಿಕ್ಷೆಗೆ ಆದೇಶಿಸಲಾಗಿದೆ. ಫೆಬ್ರವರಿ 1ರಂದು ಗಲ್ಲು ನಿಗದಿಯಾಗಿತ್ತು. ಆದರೆ ವಿನಯ್ ಶರ್ಮ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಬಗ್ಗೆ ರಾಷ್ಟ್ರಪತಿಗಳು ಶುಕ್ರವಾರ ತನಕ ಯಾವುದೇ ನಿರ್ಧಾರ ಪ್ರಕಟಿಸದ ಕಾರಣಕ್ಕೆ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ. ಇಂದು ಮುಂಜಾನೆ ರಾಷ್ಟ್ರಪತಿಗಳು ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾಧಾನ ಪತ್ರವನ್ನು ವಜಾ ಮಾಡಿದ್ದರು. ಅದರ ಬೆನ್ನಲ್ಲೇ ಇದೀಗ ಅಕ್ಷಯ್ ಠಾಕೂರ್ ಕೂಡ ಸಲ್ಲಿಸಿದ್ದಾನೆ ಎಂದು ರಾಷ್ಟ್ರಪತಿಗಳು ಕಾರ್ಯಾಲಯ ಮಾಹಿತಿ ನೀಡಿದೆ.


from India & World News in Kannada | VK Polls https://ift.tt/36PaKaM

ಕೃಷಿ ಕ್ಷೇತದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಣೆಯಾದ 16 ಅಂಶಗಳ ಯೋಜನೆಗಳಿವು

ಹೊಸದಿಲ್ಲಿ: ಕೃಷಿಕರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ '16 ಅಂಶಗಳ ಯೋಜನೆ'ಯನ್ನು ಕೇಂದ್ರ ಬಜೆಟ್‌ 2020ರಲ್ಲಿ ಘೋಷಣೆ ಮಾಡಿದೆ. ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ , ಕೃಷಿ ವಲಯದ ಅಭಿವೃದ್ಧಿಗೆ 2.83 ಲಕ್ಷ ಕೋಟಿ ರೂ. ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದರು.
  1. ಕೃಷಿ ವಲಯ ಮತ್ತು ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗೆ ಒಟ್ಟು 2.83 ಕೋಟಿ ರೂ. ಮೀಸಲು
  2. 2016ರ ಮಾದರಿಯ ಕೃಷಿ ಭೂಮಿ ಗುತ್ತಿಗೆ, 2017ರ ಕೃಷಿ ಉತ್ಪನ್ನ, ಜಾನುವಾರ ಮತ್ತು ಮಾರಾಟ ಕಾಯಿದೆ ಹಾಗೂ 2018ರ ಜಾನುವಾರುಗಳನ್ನು ಒಳಗೊಂಡ ಕೃಷಿ ಮತ್ತು ಕೃಷಿ ಉತ್ಪನ್ನ ಕಾಯಿದೆಗಳಿಗೆ ಉತ್ತೇಜನ
  3. ಕೃಷಿಕರಿಗೆ ಸಾಲ ಸೌಲಭ್ಯ ಕಲ್ಪಿಸಲು 15 ಲಕ್ಷ ಕೋಟಿ ರೂ.
  4. ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯ ವಿಸ್ತರಣೆ. 20 ಲಕ್ಷ ಕೃಷಿಕರಿಗೆ ಸೋಲಾರ್‌ ಪಂಪ್‌ಸೆಟ್‌ಗಳ ವಿತರಣೆ.
  5. ಬರಡು ಭೂಮಿ ಹೊಂದಿರುವ ರೈತರಿಗೆ ಸೌರ ವಿದ್ಯುತ್‌ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಸಹಾಯ
  6. ಪಂಪ್‌ಸೆಟ್‌ನಲ್ಲಿ ಅಳವಡಿಸಲಾದ ಸೋಲಾರ್‌ ಗ್ರಿಡ್‌ನಿಂದ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ ಖರೀದಿಸಲು ನಿರ್ಧಾರ
  7. ಮಹಿಳಾ ಕೃಷಿಕರ ಉತ್ತೇಜನಕ್ಕೆ ಧಾನ್ಯಲಕ್ಷ್ಮೀ ಯೋಜನೆ
  8. ಕೃಷಿ ಉತ್ಪನ್ನಗಳ ಸಾಗಣೆಗೆ ಕಿಸಾನ್‌ ರೈಲು
  9. ಕೃಷಿ ಉತ್ಪನ್ನಗಳ ಸಾಗಣೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಉಡಾನ್‌ ಸೇವೆ. ಪ್ರಮುಖವಾಗಿ ಈಶಾನ್ಯ ಜಿಲ್ಲೆಗಳಿಗೆ ಅನುಕೂಲ.
  10. ಇ-ನ್ಯಾಷನಲ್‌ ಅಗ್ರಿಕಲ್ಚರ್‌ ಮಾರ್ಕೆಟ್‌ ಸ್ಥಾಪನೆ
  11. ನಬಾರ್ಡ್‌ ಯೋಜನೆ ವಿಸ್ತರಣೆ. ರೈತರಿಗೆ ವಾರ್ಷಿಕ ಕೃಷಿ ಸಾಲ ನೀಡಲು 15 ಲಕ್ಷ ಕೋಟಿ ರೂ.
  12. ಹಾಲು ಉತ್ಪಾದನೆ ದುಪ್ಪಟ್ಟು, 2025ರ ವೇಳೆಗೆ 53.5 ದಶಲಕ್ಷ ಟನ್‌ನಿಂದ 108 ದಶಲಕ್ಷ ಟನ್‌ಗೆ ಏರಿಕೆ.
  13. 2022-23ರ ವೇಳೆಗೆ 200 ಲಕ್ಷ ಟನ್‌ಗಳ ಮೀನು ಉತ್ಪಾದನೆ ಗುರಿ.
  14. ಸಾಗರ್ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಘಗಳ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ.
  15. 500 ಮೀನುಗಾರರ ಸಂಘಗಳ ಸ್ಥಾಪನೆ
  16. ದೀನ್‌ ದಯಾಳ್‌ ಅಂತ್ಯೋದಯ ಯೋಜನೆ ಮೂಲಕ 58 ಲಕ್ಷ ಸ್ವಸಹಾಯ ಸಂಘಗಳ ಆರಂಭಿಸಿ ಬಲವರ್ಧನೆ.


from India & World News in Kannada | VK Polls https://ift.tt/2SbRnTY

ಸುದೀರ್ಘ ಬಜೆಟ್‌; ತನ್ನದೇ ದಾಖಲೆ ಮುರಿದ ನಿರ್ಮಲಾ !

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುದೀರ್ಘ 2 ಗಂಟೆ 44 ನಿಮಿಷಗಳ ಕಾಲ ಬಜೆಟ್‌ ಮಂಡನೆ ಮಾಡುವ ಮೂಲಕ ತಮ್ಮದೇ ಆದ ಹಳೆ ದಾಖಲೆಯನ್ನು ಮುರಿದರು. ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆ ಮಾಡಲು ಆರಂಭಿಸಿದ ಮಂಡನೆ ಪೂರ್ಣಗೊಳಿಸುವಾಗ ಬರೋಬ್ಬರಿ 2 ಗಂಟೆ 44 ನಿಮಿಷಗಳ ಕಾಲಾವಕಾಶವನ್ನು ತೆಗೆದುಕೊಂಡರು. ನಿರ್ಮಲಾ ಸೀತಾರಾಮನ್ ಇದು ಎರಡನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದು ಕಳೆದ ಬಾರಿ 2 ಗಂಟೆ 17 ನಿಮಿಷಗಳಲ್ಲಿ ಬಜೆಟ್‌ ಪೂರ್ಣಗೊಳಿಸಿದ್ದರು. ಆದರೆ ಈ ಬಾರಿ 27 ನಿಮಿಷ ಹೆಚ್ಚುವರಿ ಸಮಯವನ್ನು ಬಜೆಟ್‌ ಮಂಡನೆ ಮಾಡಲು ತೆಗೆದುಕೊಂಡರು. ಕೊನೆಯಲ್ಲಿ ಬಜೆಟ್‌ ಓದುವಾಗ ಸ್ವಲ್ಪ ಸುಸ್ತಾದಂತೆ ಕಂಡುಬಂದರು. ಪಕ್ಕದಲ್ಲೇ ಕುಳಿತಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದರು. ಕೇವಲ ಎರಡು ಪುಟಗಳು ಬಾಕಿ ಉಳಿದಿದ್ದು ಓದಿ ಪೂರ್ಣಗೊಳಿಸುತ್ತೇನೆ ಎಂದ ನಿರ್ಮಲಾ ಸೀತರಾಮನ್ ನೀರು ಕುಡಿದು ಲಘು ಆಹಾರವನ್ನು ತೆಗೆದುಕೊಂಡರು.


from India & World News in Kannada | VK Polls https://ift.tt/2Sc85Tz

ಅತಿ ಹೆಚ್ಚು ಟೆಸ್ಟ್‌ ಆಡಿದವರಿಗೆ ಚೀಫ್‌ ಸೆಲೆಕ್ಟರ್‌ ಪಟ್ಟ: ಬಿಸಿಸಿಐ ಬಾಸ್‌

ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ, ತನ್ನ ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಮಾಜಿ ಕ್ರಿಕೆಟಿಗರಾದ ಮದನ್‌ ಲಾಲ್‌, ರುದ್ರಪ್ರತಾಪ್‌ ಸಿಂಗ್‌ ಮತ್ತು ಮಹಿಳಾ ತಂಡದ ಮಾಜಿ ಆಟಗಾರ್ತಿ ಸುಲಕ್ಷಣಾ ನಾಯಕ್‌ ಅವರನ್ನು ಶುಕ್ರವಾರ ನೇಮಕ ಮಾಡಿದೆ. ಈ ಮೊದಲು ಮದನ್‌ ಲಾಲ್‌, ಸುಲಕ್ಷಣಾ ನಾಯಕ್‌ ಮತ್ತು ಗೌತಮ್‌ ಗಂಭೀರ್‌ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಮುಂದಾಗಲಾಗಿತ್ತು. ಆದರೆ ಗಂಭೀರ್‌ ಸಂಸದರಾಗಿರುವ ಕಾರಣ ಅವರಿಗೆ ಬಿಸಿಸಿಐನಲ್ಲಿ ಯಾವುದೇ ಹುದ್ದೆ ಹೊಂದಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆ ಸ್ಥಾನಕ್ಕೆ ಮಾಜಿ ವೇಗದ ಬೌಲರ್‌ ಆರ್‌ಪಿ ಸಿಂಗ್‌ ಅವರನ್ನು ಆಯ್ಕೆ ಮಾಡಿ ನೂತನ ರಚಿಸಲಾಗಿದೆ. ಇದೀಗ ಸಿಎಸಿ ಭಾರತ ಕ್ರಿಕೆಟ್‌ ತಂಡದ ಸದಸ್ಯರ ಆಯ್ಕೆ ಸಲುವಾಗಿ ಸಂದರ್ಶನ ಕಾರ್ಯ ನಡೆಸಿಕೊಡಲಿದ್ದಾರೆ. ಚೀಫ್‌ ಸೆಲೆಕ್ಟರ್‌ ಎಂಎಸ್‌ಕೆ ಪ್ರಸಾದ್‌ ಮತ್ತು ಕೇಂದ್ರ ವಲಯದ ಸೆಲೆಕ್ಟರ್‌ ಗಗನ್‌ ಖೋಡಾ ಅವರ ಅಧಿಕಾರಾವಧಿ ಮುಗಿದ್ದಿದ್ದು, ಅವರಿಬ್ಬರ ಸ್ಥಾನಕ್ಕೆ ಮುಂದಿನ 4 ವರ್ಷಗಳ ಅವಧಿಗೆ ನೂತನ ಸೆಲೆಕ್ಟರ್‌ಗಳ ಆಯ್ಕೆಯಾಗಲಿದೆ. ಇದೇ ವೇಳೆ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಸ್ಪಷ್ಟ ಮಾಹಿತಿ ನೀಡಿರುವ ಅಧ್ಯಕ್ಷ ಯಾರು ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿರುತ್ತಾರೋ ಅವರಿಗೆ ಮುಖ್ಯಸ್ಥನ ಸ್ಥಾನ ಲಭ್ಯವಾಗಲಿದೆ ಎಂದಿದ್ದಾರೆ. ಆದರೆ, ನಿಯಮಗಳ ಪ್ರಕಾರ ಆಯ್ಕೆ ಸಮಿತಿಯ ನಾಲ್ಕು ಮಂದಿ ಸದಸ್ಯರಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡಿದ ಅತ್ಯಂತ ಹಿರಿಯನಿಗೆ ಮುಖ್ಯಸ್ಥನ ಸ್ಥಾನ ಸಿಗಬೇಕೆಂದಿದೆ. ಆದರೆ, ಗಂಗೂಲಿ ಅತಿ ಹೆಚ್ಚು ಟೆಸ್ಟ್‌ ಆಡಿದವರಿಗೆ ಮುಖ್ಯಸ್ಥನ ಸ್ಥಾನ ನೀಡಲಾಗುವುದು ಎಂದಿದ್ದಾರೆ. ಮಾಜಿ ಕ್ರಿಕೆಟಿಗರಾದ ಲಕ್ಷ್ಮಣ್‌ ಶಿವರಾಮಕೃಷ್ಣನ್‌, ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ಚೌಹಾಣ್‌, ನಯನ್‌ ಮೋಂಗ್ಯಾ, ಚೇತನ್‌ ಚೌಹಾಣ್‌, ನಿಖಿಲ್‌ ಚೋಪ್ರ ಮತ್ತು ಅಬೇ ಕುರುವಿಲ್ಲ ನ್ಯಾಷನಲ್‌ ಸೆಲೆಕ್ಟರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತ ಟೆಸ್ಟ್‌ ತಂಡದ ಪರ 9 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಮಾಜಿ ಲೆಗ್‌ ಸ್ಪಿನ್ನರ್‌ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಸಮಿತಿಗೆ ಆಯ್ಕೆಯಾದರೆ ನಿಯಮಾನುಸಾರ ಅತಿ ಹಿರಿಯ ಟೆಸ್ಟ್‌ ಆಟಗಾರ ಎಂಬ ಆಧಾರದ ಮೇರೆಗೆ ಮುಖ್ಯಸ್ಥನ ಸ್ಥಾನ ಸಿಗಲಿದೆ. ಗಂಗೂಲಿ ಪ್ರಕಾರ ವೆಂಕಟೇಶ್‌ ಪ್ರಸಾದ್‌ (33 ಟೆಸ್ಟ್‌) ಮತ್ತು ಅಜಿತ್‌ ಅಗರ್ಕರ್‌ (26 ಟೆಸ್ಟ್‌) ಕೂಡ ಅಷ್ಟೇ ಅರ್ಹ ಅರ್ಜೀದಾರರಾಗಿದ್ದಾರೆ ಎಂದಿದ್ದಾರೆ. ವೆಂಕಟೇಶ್‌ ಪ್ರಸಾದ್‌, ಈಗಾಗಲೇ ರಾಷ್ಟ್ರೀಯ ಕಿರಿಯರ ತಂಡದ ಆಯ್ಕೆ ಸಮಿತಿಯಲ್ಲಿ ಕಳೆದ ಒಂದೂವರೆ ವರ್ಷ ಸೇವೆ ಸಲ್ಲಿಸಿದ್ದು, ನ್ಯಾಷನಲ್‌ ಸೆಲೆಕ್ಟರ್‌ ಆಗಿ 4 ವರ್ಷಗಳ ಸೇವೆಗೆ ಅವರು ಲಭ್ಯರಾಗುವುದಿಲ್ಲ. ಒಟ್ಟಾರೆ ಟೀಮ್‌ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥರು ಯಾರಾಗುತ್ತಾರೆ? ಎಂಎಸ್‌ಕೆ ಪ್ರಸಾದ್‌ ಹುದ್ದೆ ಅಲಂಕರಿಸುವವರು ಯಾರು? ಎಂಬ ಕುತೂಹಲ ಮುಂದುವರಿದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38Z7ECQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...