ಉಡುಪಿಯಲ್ಲಿ ಕೊನೆ ಪ್ರವಚನ: ಸ್ವರ್ಗದ ಕಥೆ ಹೇಳಿ ಕೃಷ್ಣನಲ್ಲಿ ಲೀನವಾದ ಪೇಜಾವರ ಶ್ರೀ

ತೀವ್ರ ಅನಾರೋಗ್ಯ ತುತ್ತಾಗುವ ಮುನ್ನ ಪೇಜಾವರ ಶ್ರೀಗಳು ಪ್ರವಚನದಲ್ಲಿ ತೊಡಗಿದ್ದರು. ಅದರಲ್ಲೂ ಸ್ವರ್ಗದಲ್ಲಿ ನಮ್ಮ ಸ್ಥಾನ ಗಟ್ಟಿಗೊಳಿಸುವುದು ಹೇಗೆ? ಯಾವ ಕೈಂಕರ್ಯದಲ್ಲಿ ತೊಡಗಿದರೆ ಸ್ವರ್ಗದಲ್ಲಿ ಶಾಶ್ವತ ಸ್ಥಾನ ಲಭ್ಯವಾಗುತ್ತದೆ ಎಂಬ ಬಗ್ಗೆ ಶ್ರೀಗಳು ಕಥೆಯ ಮೂಲಕ ಪ್ರವಚನದಲ್ಲಿ ತಿಳಿಸಿದ್ದರು. ಈ ಪ್ರವಚನವೇ ಅವರ ಆಶೀರ್ವಚನವನ್ನು ಆಲಿಸುವ ಕೊನೆ ಮಾತುಗಳು! ಉಡುಪಿಯ ರಾಜಾಂಗಣದಲ್ಲಿ ಡಿ.19ರಂದು ಪೇಜಾವರ ಶ್ರೀಗಳು 2 ಪ್ರೇರಣಾತ್ಮಕ ಕಥೆಗಳ ಮೂಲಕ ಲೌಖಿಕ ಜೀವನದಲ್ಲಿ ಅನುಸರಿಸಲೇ ಬಾರದ ಆಚಾರಗಳನ್ನು ವಿವರಿಸಿದ್ದರು. ಅದರಲ್ಲೂ ಕೊನೆಯ ಕಥೆ ಸ್ವರ್ಗದಲ್ಲಿ ಶಾಶ್ವತ ಸ್ಥಾನಗಳಿಸುವುದು ಯಾವಾಗ ಎಂಬುದನ್ನು ವಿವರಿಸಿದ್ದರು. ಪ್ರವಚನದ ಕಳೆದು 10 ದಿನಗಳಲ್ಲಿ ಪೇಜಾವರ ಶ್ರೀ ಕೃಷ್ಣನಲ್ಲಿ ಐಕ್ಯರಾಗಿದ್ದಾರೆ. ಆಸ್ಪತ್ರೆಗೆ ಸೇರುವ ಮುನ್ನಾದಿನ ಅವರ ಪ್ರವಚನದ ಸಾರ ಇಲ್ಲಿದೆ. ಇಂದ್ರದ್ಯುನ್ಮ ಎಂಬ ರಾಜ ತನ್ನ ಆಯಸ್ಸು ಮುಗಿದು ಮರಣಿಸುತ್ತಾನೆ. ಮಾಡಿದ ಸತ್ಕರ್ಮಗಳ ಫಲವಾಗಿ ಅವನು ಸ್ವರ್ಗಸ್ತನಾಗುತ್ತಾನೆ. ಸ್ವರ್ಗದಲ್ಲಿ ಎಲ್ಲ ಸುಖವನ್ನೂ ಅನುಭವಿಸುತ್ತಿರು ಸಂದರ್ಭದಲ್ಲಿ, ಈ ರಾಜನ ಎಲ್ಲ ಪುಣ್ಯಗಳು ಖರ್ಚಾಗಿ ಹೋಗಿವೆ. ಇನ್ನು ಸ್ವರ್ಗದಲ್ಲಿ ಇರಲು ಅವಕಾಶವಿಲ್ಲ. ಮತ್ತೆ ಭೂಮಿಗೆ ತೆರಳಬೇಕು ಎಂಬುದಾಗಿ ದೇವತೆಗಳು ಆಜ್ಞೆ ಮಾಡಿದರಂತೆ! ಆದೇಶದಂತೆಯೇ ಮತ್ತೆ ಭೂಮಿಗೆ ಬಿದ್ದ ರಾಜ, ತನ್ನ ಪರಿಚಯ ಯಾರಿಗಾದರೂ ಇದೆಯೇ ಎಂದು ಕೇಳಿಕೊಂಡು ಹೊರಟ. ಮೊದಲು ಕಾಣಸಿಕ್ಕ, ಗೂಬೆಯೊಂದರಲ್ಲಿ ತನ್ನ ಪರಿಚಯ ಮಾಡಿಕೊಂಡ ರಾಜ, ತನ್ನ ಬಗ್ಗೆ ನಿನಗೆ ಗೊತ್ತಿದೆಯೇ ಎಂದು ಕೇಳುತ್ತಾನೆ. ಆದರೆ ರಾಜನ ಹೆಸರೂ ಅದಕ್ಕೆ ಗೊತ್ತಿರುವುದಿಲ್ಲ. ಆದರೆ ತನಗಿಂತ ಹೆಚ್ಚು ವಯಸ್ಸಾದ ಬಕಪಕ್ಷಿಯೊಂದಿದೆ, ಅದರಲ್ಲಿ ಕೇಳೋಣ ಎಂದು ರಾಜನನ್ನು ಕರೆದೊಯ್ಯುತ್ತದೆ. ಆದರೆ ಬಕಪಕ್ಷಿಯೂ ರಾಜನನ್ನು ಗುರುತಿಸಿಲ್ಲ. ಬಕಪಕ್ಷಿ, ಹತ್ತಿರದ ಸರೋವರದಲ್ಲಿ ಆಮೆ ಇದೆ. ಅದರ ಬಳಿ ಕೇಳೋಣ ಎಂದು ಕರೆದೊಯ್ಯುತ್ತದೆ. ಆಮೆ ರಾಜನನ್ನು ಗುರುತಿಸುತ್ತದೆ. ಈ ಸರೋವರ ನಿರ್ಮಾಣ ಮಾಡಿದ್ದೇ ನೀನಲ್ಲವೇ ರಾಜ, ನಿನ್ನಿಂದಲೇ ಅನೇಕರ ಬಾಳು ಹಸನಾಗಿದೆ. ಕೃಷಿ ಚಟುವಟಿಕೆ ಸೇರಿ ಅನೇಕ ಜೀವಸಂಕುಲಗಳಿಗೆ ಸರೋವರ ಆಸರೆಯಾಗಿದೆ ಎಂದಿತು. ಆಮೆ ಕಣ್ಣೀರಿಟ್ಟು ರಾಜನ ಮಹಾತ್ಕಾರ್ಯವನ್ನು ಕೊಂಡಾಡಿತು!

ಅಷ್ಟರಲ್ಲಿ, ದೇವತೆಗಳು ಪ್ರತ್ಯಕ್ಷವಾಗಿ, ನಿನ್ನ ಪುಣ್ಯ ಇನ್ನೂ ಮುಗಿದಿಲ್ಲ ಎಂದು ಮತ್ತೆ ರಾಜನನ್ನು ಸ್ವರ್ಗಕ್ಕೇ ಒಯ್ದರು... ಭೂಮಿಯಲ್ಲಿ ಜನರು ನಮ್ಮನ್ನು ಸ್ಮರಿಸುವ ವರೆಗೆ ನಮಗೆ ಸ್ವರ್ಗದಲ್ಲಿ ಭದ್ರ ಸ್ಥಾನವಿರುತ್ತದೆ. ಧರ್ಮಾಚರಣೆ ಮಾಡಿ, ಮುಂದಿನ ಪೀಳಿಗೆಗೂ ಅದರ ಸ್ಮರಣೆ ಇರುವಂತ ಕಾರ್ಯ ಮಾಡಿದಲ್ಲಿ ಸ್ವರ್ಗದಲ್ಲಿ ಭದ್ರ ಸ್ಥಾನ ಎಂಬುದೇ ಈ ಪ್ರೇಕರ ಕಥೆಯ ಸಾರ ಎಂದು ಹೇಳಿ ಪೇಜಾವರ ಶ್ರೀ ತಮ್ಮ ಪ್ರವಚನ ಮುಕ್ತಾಯಗೊಳಿಸಿದ್ದರು...


from India & World News in Kannada | VK Polls https://ift.tt/2Q67O4v

ಯುವ ಜನತೆಗೆ ವರ್ಷದ ಕೊನೆಯ 'ಮನ್‌ ಕೀ ಬಾತ್‌' ಮೀಸಲಿಟ್ಟ ಪ್ರಧಾನಿ

ಹೊಸದಿಲ್ಲಿ: ಪ್ರಧಾನಿ ಭಾನುವಾರ ಈ ವರ್ಷದ ಕೊನೆಯ ಮನ್‌ ಕೀ ಬಾತ್‌ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಅವರ 60ನೇ ಕಾರ್ಯಕ್ರಮ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಸಾರವಾಯಿತು. ತಮ್ಮ ಮನದಾಳದ ಮಾತುಗಳಲ್ಲಿ ಯುವಜನರಿಗೆ ಒತ್ತು ನೀಡಿದ ಅವರು, “ಮುಂದಿನ ದಶಕದಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ಯುವ ಭಾರತ ಪ್ರಮುಖ ಪಾತ್ರ ವಹಿಸುತ್ತದೆ,” ಎಂದರು. ಇದೇ ವೇಳೆ ಅವರು, “ನಮ್ಮ ಯುವಕರು ಅರಾಜಕತೆ, ಅಸ್ಥಿರತೆ ಮತ್ತು ಅವ್ಯವಸ್ಥೆಯನ್ನು ದ್ವೇಷಿಸುತ್ತಾರೆ ಮತ್ತು ಜಾತಿವಾದ ಮತ್ತು ಸ್ವಜನಪಕ್ಷಪಾತವನ್ನು ಇಷ್ಟಪಡುವುದಿಲ್ಲ,” ಎಂದರು. ಪ್ರಧಾನಿ ಮನ್‌ ಕೀ ಬಾತ್‌ನ ಪ್ರಮುಖ ಹೇಳಿಕೆಗಳು ಹೀಗಿವೆ, * ಮುಂಬರುವ ದಶಕದಲ್ಲಿ ಯುವ ಭಾರತ ಪ್ರಮುಖ ಪಾತ್ರ ವಹಿಸಲಿದೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ ಮತ್ತು ವ್ಯಾಪಕವಾದ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ಒಂದು ದೊಡ್ಡ ವಿಷಯ ಎಂದು ನಾನು ಪರಿಗಣಿಸುತ್ತೇನೆ. * ಇಂದಿನ ಯುವಜನರು ಅಸ್ಥಿರತೆ, ಅವ್ಯವಸ್ಥೆ, ಸ್ವಜನಪಕ್ಷಪಾತವನ್ನು ಇಷ್ಟಪಡುವುದಿಲ್ಲ. * ಭಾರತದ ಯುವಕರು ಮುಂದಿನ ದಶಕದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. * ಭಾರತವು ಪ್ರತಿಭಾವಂತ ಯುವಕರ ಗುಂಪನ್ನು ಹೊಂದಿದೆ, ಅವರು ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದಾರೆ. ಅವರು ವ್ಯವಸ್ಥೆಯನ್ನು ಪ್ರಶ್ನಿಸುವುದರಲ್ಲಿ ನಂಬಿಕೆ ಹೊಂದಿದ್ದು, ಅವರ ಈ ನಡವಳಿಕೆ ಅತ್ಯಧ್ಭುತವಾದುದು. * ಹಳೆಯ ವಿದ್ಯಾರ್ಥಿಗಳ ಭೇಟಿಯು ಸಮಯವನ್ನು ಹಿಂದಕ್ಕೆ ಕೊಂಡೊಯ್ಯುವುದು. ಈ ವೇಳೆ ವಿದ್ಯಾರ್ಥಿ ಜೀವನದ ಉತ್ತಮ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅನೇಕ ಹಳೆಯ ವಿದ್ಯಾರ್ಥಿಗಳ ಬ್ಯಾಚ್‌ಗಳು ತಮ್ಮ ಶಾಲೆ ಮತ್ತು ಕಾಲೇಜುಗಳ ಕಲ್ಯಾಣಕ್ಕೆ ಸಹಕರಿಸುತ್ತಿವೆ. * ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮತ್ತು ರಾಷ್ಟ್ರಕ್ಕಾಗಿ ಕನಸು ಕಂಡವರನ್ನು ನಾನು ಗೌರವಿಸುತ್ತೇನೆ. * ಕಳೆದ ಆರು ತಿಂಗಳುಗಳು ಉತ್ಪಾದಕ ಸಂಸದೀಯ ಅಧಿವೇಶನಗಳಿಗೆ ಸಾಕ್ಷಿಯಾಗಿವೆ. * ಭಾರತವು ಖಗೋಳಶಾಸ್ತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.


from India & World News in Kannada | VK Polls https://ift.tt/366ONET

ಮಗಳು ಆತಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಚಿತ್ರಕ್ಕೆ ಕಾಮೆಂಟ್ ಹಾಕಿದ ಸುನಿಲ್ ಶೆಟ್ಟಿ

ಮುಂಬಯಿ: ಕಳೆದ ಕೆಲವು ಸಮಯಗಳಿಂದ ಭಾರತ ಕ್ರಿಕೆಟ್ ತಂಡದ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಾಲಿವುಡ್ ನಟಿ ಹಾಗೂ ಅವರ ಪುತ್ರಿ ಆತಿಯಾ ಶೆಟ್ಟಿ ನಡುವಣ ಡೇಟಿಂಗ್ ಗಾಸಿಪ್‌ಗಳು ಹರಿದಾಡುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ಕೆಎಲ್ ರಾಹುಲ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿದ್ದಾರೆ. ಬಾಲಿವುಡ್‌ನ ಜನಪ್ರಿಯ 'ಹೇರಾ ಫೇರಿ' ಚಿತ್ರದಲ್ಲಿನ ರಂಗವೊಂದನ್ನು ಕೆಎಲ್ ರಾಹುಲ್ ನಕಲು ಮಾಡಿದ್ದಾರೆ. ಹಲೋ ದೇವಿ ಪ್ರಸಾದ್ ? ಎಂಬ ಚಿತ್ರದಲ್ಲಿರುವ ಡೈಲಾಗ್ ಅನ್ನು ಉಲ್ಲೇಖಿಸಿದ್ದಾರೆ. ಹಳೆಯ ಟೆಲಿಫೋನ್ ಬೂತ್‌ನಲ್ಲಿ ನಟನಾ ಗಾಂಭೀರ್ಯವನ್ನು ಬೀರಿರುವ ರಾಹುಲ್ ಬಳಿಯಲ್ಲಿ ಆತಿಯಾ ನಗುಮುಖದೊಂದಿಗೆ ಕಾಣಿಸಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಸ್ವತ: ಸುನಿಲ್ ಶೆಟ್ಟಿ ಅವರೇ ಕಾಮೆಂಟ್ ಮಾಡಿದ್ದಾರೆ. ನಗುವನ್ನು ತಡೆಯಲು ಸಾಧ್ಯವಾಗದ ಸುನಿಲ್ ಶೆಟ್ಟಿ, ನಗುಮುಖದ ಇಮೋಜಿಗಳನ್ನು ಹಂಚಿದ್ದಾರೆ. ಕೆಲ್ ರಾಹುಲ್ ಸಹ ಆಟಗಾರ ಹಾಗೂ ಗೆಳೆಯ ಹಾರ್ದಿಕ್ ಪಾಂಡ್ಯ ಕೂಡಾ 'ಕ್ಯೂಟ್' ಎಂಬ ಕಾಮೆಂಟ್ ಹಾಕಿದ್ದಾರೆ. ಹಿಂದೊಮ್ಮೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರುವ ಪಾಂಡ್ಯ ಹಾಗೂ ರಾಹುಲ್ ದಂಡನೆಗೊಳಗಾಗಿದ್ದರು. ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಶಿಖರ್ ಧವನ್ ಕೂಡಾ 'ಗುಡ್ ಒನ್ ಬ್ರೋ' ಎಂದು ಉಲ್ಲೇಖಿಸಿದ್ದಾರೆ. ಕೆಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ನಡುವೆ ಪ್ರೇಮಾಂಕುರ ಆಗಿದೆಯೇ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಇವರಿಬ್ಬರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಏತನ್ಮಧ್ಯೆ ಭಾರತ ಕ್ರಿಕೆಟ್ ತಂಡಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಕೆಎಲ್ ರಾಹುಲ್, ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪತ್ನಿ ಜತೆ ಜಾಲಿ ಮೂಡ್‌ನಲ್ಲಿ ವಿರಾಟ್ ಕೊಹ್ಲಿ ಸದ್ಯ ಜಾಲಿ ಮೂಡ್‌ನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜತೆಗೆ ಸ್ವಿಜರ್ಲೆಂಡ್‌ನಲ್ಲಿ ಸಂತೋಷದ ಸಮಯಗಳನ್ನು ಕಳೆದಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗಾಗಿ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ವರ್ಷಾಂತ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಇದೀಗ ಹೊಸ ವರ್ಷಾರಂಭದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಜತೆಗೆ ಎರಡು ಪ್ರತ್ಯೇಕ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾಗವಹಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2FeSI6N

ಪೇಜಾವರ ಯತಿ ಶ್ರೇಷ್ಠರ ಜೀವನದ ಪ್ರಮುಖ ಮೈಲಿಗಲ್ಲುಗಳು...

*ಬಿಹಾರದಲ್ಲಿ1966 ರಲ್ಲಿಭೀಕರ ಬರಗಾಲ ಬಂದಾಗ ಪರರ ನೆರವಿಗೆ ಧಾವಿಸಬೇಕೆನ್ನುವ ಸಮಾಜ ಮನೋಧರ್ಮ ಮೂಡಿಸಲು ಬರಗಾಲ ಮುಗಿಯುವ ತನಕ ಕೇವಲ ಒಂದು ಹಿಡಿ ಅಕ್ಕಿಯಲ್ಲಿಮಾಡಿದ ಅನ್ನ ಮಾತ್ರ ಸ್ವೀಕರಿಸಿದ್ದರು. *1963 ರಲ್ಲಿಕಲಬುರ್ಗಿಯಲ್ಲೂಭೀಕರ ಕ್ಷಾಮ. ಜಿಲ್ಲೆಯನ್ನು ಹಲವು ಬಾರಿ ಸುತ್ತಿ ಅನ್ನದಾನ ಕೇಂದ್ರ ಆರಂಭಿಸಿದರು. ವಿಜಯಪುರ, ಬೆಳಗಾವಿ, ರಾಯಚೂರಿನಲ್ಲೂ ಅನ್ನದಾನ ಕೇಂದ್ರ ತೆರೆದು ಸಂತ್ರಸ್ಥರಿಗೆ ಗಂಜಿ, ರೊಟ್ಟಿ, ಅನ್ನ ಉಣಿಸುವ ಕಾರ್ಯದಲ್ಲಿತೊಡಗಿದರು. *ಚಿಂಚೋಳಿಯಲ್ಲಿ1,000 ಗೋವುಗಳಿಗೆ ಮೇವು ಪೂರೈಸುವ ಗೋ ಕೇಂದ್ರ ಆರಂಭಿಸಿದರು. 1977 ರಲ್ಲಿಆಂಧ್ರದ ಕೃಷ್ಣ ಜಿಲ್ಲೆಯ ಅವನಿಗುಡ ಪ್ರದೇಶದಲ್ಲಿಭೀಕರ ಚಂಡಮಾರುತ. ವಿಹಿಂಪ ಕಾರ್ಯಕರ್ತರ ನೆರವಿನಿಂದ ಕೃಷ್ಣಸಾಗರ ಸಂಗಮದ ಸಮೀಪವಿರುವ ಹಂಸಲದೀವಿ ಗ್ರಾಮದಲ್ಲಿಪರಿಹಾರ ಕಾರ್ಯದಲ್ಲಿತೊಡಗಿದರು.

*1984 ರಲ್ಲಿಉತ್ತರ ಕರ್ನಾಟಕದಲ್ಲಿ ಬರ. ಬಾಗಲಕೋಟೆಯಲ್ಲಿಗೋ ಕೇಂದ್ರ ತೆರೆದು ಗದುಗಿನ ಸಮೀಪದ ಕುರುಡಗಿ ಗ್ರಾಮದಲ್ಲಿಕೆರೆ ಹೂಳೆತ್ತಲಾಯಿತು.1993 ರಲ್ಲಿಮಹಾರಾಷ್ಟ್ರದ ಲಾತೂರಿನಲ್ಲಿಭೂಕಂಪ ಪೀಡಿತ ಹಳ್ಳಿಗಳ ಭೇಟಿ, ಸ್ಥಳೀಯ ಸೇವಾ ಸಂಸ್ಥೆಗಳು ಮತ್ತು ಆಡಳಿತಕ್ಕೆ ಪರಿಹಾರ ಕಾರ್ಯದ ವ್ಯವಸ್ಥೆಗೆ ನೆರವಿನ ವ್ಯವಸ್ಥೆ ಮಾಡಿದ್ದರು. *ವಿಜಯಪು ಜಿಲ್ಲೆಯ ಇಂಡಿ ತಾಲೂಕಿನ ಭೀಮಾ ನದಿ ತೀರದ ಗೋವಿಂದಪುರದಲ್ಲೂಭೂಕಂಪ ಪೀಡಿತರಿಗಾಗಿ ಪರಿಹಾರ ಕೇಂದ್ರ. 60 ಮನೆ ನಿರ್ಮಾಣ. *1985 ರಲ್ಲಿಪಂಜಾಬ್‌ ಯುವಕರು ಸ್ವತಂತ್ರ ಸಿಖ್‌ ರಾಜ್ಯ ಸ್ಥಾಪನೆಗಾಗಿ ಭಯೋತ್ಪಾದಕ ಚಟುವಟಿಕೆಯಲ್ಲಿತೊಡಗಿದಾಗ ಶಾಂತಿ ಸ್ಥಾಪನೆ ನಿಟ್ಟಿನಲ್ಲಿಶ್ರೀವಿಶ್ವೇಶತೀರ್ಥ ಶ್ರೀಪಾದರು ವಿಹಿಂಪ ನೇತೃತ್ವದಲ್ಲಿಪಂಜಾಬಿನ ಪ್ರಮುಖ ನಗರಗಳಲ್ಲಿಶಾಂತಿ ಯಾತ್ರೆ ಮಾಡಿದರು. ಹಿಂದೂಗಳು ಬೇರೆ, ಸಿಖ್ಖರು ಬೇರೆ ಎನ್ನುವ ಭಾವನೆ ಬೇಡವೆಂದು ಪಂಜಾಬಿನ ಜನರಲ್ಲಿಮನವಿ ಮಾಡಿದರು. ಅಮೃತಸರದ ಸುವರ್ಣ ಮಂದಿರದಲ್ಲಿನಡೆದ ಸಿಖ್‌ ಧಾರ್ಮಿಕ ನಾಯಕರು ಮತ್ತು ದೇಶದ ಪ್ರಮುಖರ ಸಂತರ ಜತೆ ನಡೆದ ಮಾತುಕತೆಯಲ್ಲಿನಿರ್ಣಾಯಕ ಪಾತ್ರವನ್ನೂ ಶ್ರೀಪಾದರು ವಹಿಸಿದ್ದರು.


from India & World News in Kannada | VK Polls https://ift.tt/2MBxuns

ದಿನ ನಿತ್ಯವೂ ಸರಳ ಆಸನಗಳನ್ನು ಮಾಡುತ್ತಿದ್ದರು ಪೇಜಾವರ ಶ್ರೀ

ಬೆಂಗಳೂರು: "ಯೋಗ ಯಾರೋ ಒಬ್ಬರಿಗೆ, ಅಥವಾ ಅನಾರೋಗ್ಯ ಪೀಡಿತರಿಗೆ ಸೀಮಿತವಾದುದಲ್ಲ. ಇದು ಅತ್ಯಂತ ದೊಡ್ಡ ತಪ್ಪು ಕಲ್ಪನೆ. ಜಗತ್ತಿನ ಸಕಲರೂ ಅನುಸರಿಸಬೇಕಾದ ಒಂದು ಮಾರ್ಗ." ಯತಿ ಶ್ರೇಷ್ಠ ಶ್ರೀ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮಾತುಗಳಿವು. ಸದಾ ಚಟುವಟಿಕೆಯಿಂದಲೇ ಇರುತ್ತಿದ್ದ ಸ್ವಾಮೀಜಿ, ದಿನ ನಿತ್ಯ ಬೆಳಗ್ಗೆ ಯೋಗಾಭ್ಯಾಸ ಮಾಡುವುದನ್ನು ಎಂದೂ ಬಿಟ್ಟವರಲ್ಲ. ಜಳಕ, ಅನುಷ್ಠಾನಗಳ ಜತೆಗೆ ಸರಳ ಆಸನ, ಪ್ರಾಣಾಯಾಮಗಳನ್ನು ಮಾಡುತ್ತಿದ್ದರು. ಸಮಾಜಿಕ ಕೈಂಕರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಪೇಜಾವರ ಶ್ರೀ, ಇತ್ತೀಚೆಗೆ ಗುರುಪೂರ್ಣಿಮೆಯ ದಿನದಂದು ದಿಲ್ಲಿಗೆ ತೆರಳಿದ್ದರು. ಅನಾರೋಗ್ಯಕ್ಕೆ ತುತ್ತಾಗುವ ವರೆಗೂ ಅವರು ದಿನ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದರು. ಐತಿಹಾಸಿಕ ಪರ್ಯಾಯದಲ್ಲೂ ದಿನ ನಿತ್ಯ ಯೋಗಾಭ್ಯಾಸ2017ರಲ್ಲಿ ಪೇಜಾವರ ಶ್ರೀ ಐತಿಹಾಸಿಕ ತಮ್ಮ ಐದನೇ ಪರ್ಯಾಯ ನಡೆಸುವ ವೇಳೆಯೂ ಒಂದು ದಿನವೂ ಯೋಗಭ್ಯಾಸ ಬಿಟ್ಟವರಲ್ಲ. ಆಧ್ಯಾತ್ಮಿಕ, ಶಾರೀರಿಕ ದೃಷ್ಟಿಯಿಂದ ಯೋಗಾಭ್ಯಾಸ ಮುಖ್ಯ. ದೇಹದಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು, ಸದಾ ಲವಲವಿಕೆಯಿಂದಿರಲು ಯೋಗಾಭ್ಯಾಸ ಸಹಕಾರಿ ಎಂಬುದು ಶ್ರೀಗಳ ನಂಬಿಕೆಯಾಗಿತ್ತು. ಹೀಗಾಗಿಯೇ ಪರ್ಯಾಯದ ವೇಳೆ ಯತಿಗಳು ಮಾಡಬೇಕಾದ ಹಲವಾರು ಅನುಷ್ಠಾನಗಳಿರುತ್ತದೆ. ರಾತ್ರಿ ಎಷ್ಟೇ ತಡವಾಗಿ ಮಲಗಿದರೂ, ಮರುದಿನ ಬೆಳಗ್ಗೆ ಯೋಗಾಭ್ಯಾಸ ನಿತ್ಯ ಅನುಷ್ಠಾನದ ಒಂದು ಭಾಗವಾಗಿತ್ತು. ಯೋಗ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಪ್ರತಿಯೊಬ್ಬರಿಗೂ ಯೋಗಭ್ಯಾಸದಿಂದ ಅತ್ಯುತ್ತಮ ಆರೋಗ್ಯ ಲಭ್ಯವಾಗುತ್ತದೆ ಎಂದು ಶ್ರೀಗಳು ಆಗಾಗ್ಗೆ ಮಠದ ಭಕ್ತರಲ್ಲಿ ಹೇಳಿಕೊಳ್ಳುತ್ತಿದ್ದರು.

ಮಠದ ಯುವ ಶಿಷ್ಯರಿಗೆ ಪ್ರೇರಣಾಮಯಿಪೇಜಾವರ ಶ್ರೀಗಳು ಎಲ್ಲರ ಮುಂದೆ ಯೋಗಾಭ್ಯಾಸ ಮಾಡುತ್ತಿರಲಿಲ್ಲ. ಮುಂಜಾನೆ 3.30ರ ಸುಮಾರಿಗೇ ಎದ್ದು, ನಿತ್ಯ ಅನುಷ್ಠಾನಗಳಲ್ಲಿ ತೊಡಗಿಕೊಳ್ಳುತ್ತಿದ್ದ ಅವರು, ತಮ್ಮ ಕೊಠಡಿಯಲ್ಲಿ ಹದಿನೈದು-ಇಪ್ಪತ್ತು ನಿಮಿಷ ಯೋಗಾಭ್ಯಾಸ, ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ಇದು ಮಠದ ಎಲ್ಲ ಶಿಷ್ಯರಿಗೆ ತಿಳಿದಿರುವ ವಿಚಾರವೇ! 88 ಹರೆಯದ ಪೇಜಾವರ ಶ್ರೀಗಳು ವಿವಿಧ ಬಗೆಯ ಆಸನಗಳನ್ನು ಮಾಡುವುದು ಮಠದ ಯುವ ಶಿಷ್ಯರೆಲ್ಲರಿಗೆ ಪ್ರೇರಣಾದಾಯಕವಾಗಿತ್ತು. ಒಂದು ಧರ್ಮಕ್ಕೆ ಸೀಮಿತವಲ್ಲ ಅನ್ನುತ್ತಿದ್ದರು...ಎಲ್ಲ ಭಾರತೀಯರು ಯೋಗಾಭ್ಯಾಸದಲ್ಲಿ ತೊಡಗಬೇಕು. ಯೋಗ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಯೋಗಾಸನದ ವೇಳೆ ಓಂ ಹೇಳಲೇಬೇಕೆಂದೂ ಇಲ್ಲ. ಅದರ ಬದಲು ಅವರವರ ಧರ್ಮದ ಮಂತ್ರವನ್ನೂ ಜಪಿಸಬಹುದು. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವೂ ಆಗಬಾರದು. ಮನಸ್ಸು, ಶರೀರ ಸದೃಢಗೊಳ್ಳಲು ಯೋಗ ಸಹಕಾರಿ ಎನ್ನುತ್ತಿದ್ದರು ಪೇಜಾವರ ಶ್ರೀ.


from India & World News in Kannada | VK Polls https://ift.tt/2Q5Cym7

ಮೈದಾನದಲ್ಲೇ ವಾಗ್ವಾದಕ್ಕಿಳಿದ ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್

ಸೆಂಚುರಿಯನ್: ಆತಿಥೇಯ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ , ಮೈದಾನದ ಒಳಗೆ ಬಿಸಿ ಬಿಸಿ ಸನ್ನವೇಶ ಎದುರಿಸುವಂತಾಗಿದೆ. 2019ನೇ ಸಾಲಿನಲ್ಲಷ್ಟೇ ವಿಶ್ವಕಪ್ ಗೆಲುವು ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಆಂಗ್ಲರ ಪಡೆ ವರ್ಷಾಂತ್ಯದ ಪಂದ್ಯದಲ್ಲಿ ಅತೀವ ಒತ್ತಡಕ್ಕೊಳಗಾಗಿದೆ. ಎದುರಾಳಿ ಆಟಗಾರರ ವಿರುದ್ಧ ಜಟಾಪಟಿಗೊಳಗಾಗುವುದು ಸಾಮಾನ್ಯ ಕಂಡುಬರುತ್ತಿರುವ ದೃಶ್ಯವಾಗಿದೆ. ಆದರೆ ಇಂಗ್ಲೆಂಡ್ ಒಳಜಗಳ ತಾರಕ್ಕೇರುತ್ತಿದೆಯೇ ಎಂಬದು ಅನುಮಾನಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಘಟನೆ ನಡೆದಿತ್ತು. ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ ವೇಳೆಯಲ್ಲಿ ಇಂಗ್ಲೆಂಡ್ ಉಪನಾಯಕ ಹಾಗೂ ಅನುಭವಿ ವೇಗದ ಬೌಲರ್ ಪರಸ್ಪರ ವಾಗ್ವಾದಕ್ಕಿಳಿದಿದ್ದರು. ಘಟನೆಯ ಹಿಂದಿನ ನೈಜ ಕಾರಣ ತಿಳಿದು ಬಂದಿಲ್ಲ. ಇದೀಗ ವೈರಲ್ ಆಗುತ್ತಿರುವ ವೀಡಿಯೋ ತುಣುಕುನಲ್ಲಿ ಸ್ಟುವರ್ಟ್ ಬ್ರಾಡ್ ಅಭಿಪ್ರಾಯ ಮಂಡಿಸುತ್ತಿರುವುದು ದರ್ಶನವಾಗುತ್ತಿದೆ. ಈ ವೇಳೆಯಲ್ಲಿ ಕುಪಿತಗೊಳ್ಳುವ ಬೆನ್ ಸ್ಟೋಕ್ಸ್ ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ ಗುಂಪಿನಿಂದ ಹೊರ ನಡೆಯುತ್ತಾರೆ. ವೀಕ್ಷಕ ವಿವರಣೆಗಾರರಾದ ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್ ಹಾಗೂ ವೆಸ್ಟ್‌ಇಂಡೀಸ್ ಮಾಜಿ ದಿಗ್ಗಜ ಮೈಕಲ್ ಹೋಲ್ಡಿಂಗ್ ಈ ಬಗ್ಗೆ ಮೆಲುಕು ಹಾಕುತ್ತಾರೆ. ಆದರೆ ತದಾ ಬಳಿಕ ಇಬ್ಬರು ಆಟಗಾರರು ಕೈ ಮಿಲಾಯಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯುತ್ತಾರೆ. ವಾಗ್ವಾದದ ವೇಳೆಯಲ್ಲಿ ನಾಯಕ ಜೋ ರೂಟ್ ಸೇರಿದಂತೆ ತಂಡದ ಪ್ರಮುಖ ಆಟಗಾರರು ಸಮೀಪದಲ್ಲೇ ಇರುತ್ತಾರೆ. ಆದರೆ ಯಾರೂ ಕೂಡಾ ಮಧ್ಯೆ ಪ್ರವೇಶ ಮಾಡದೇ ಇರುವುದು ಹೆಚ್ಚಿನ ಗೊಂದಲ ಸೃಷ್ಟಿಸುವಂತಿದೆ. ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ತಂಡವು ಹಿನ್ನಡೆ ಎದುರಿಸುತ್ತಿದ್ದಾಗ ಆಟಗಾರರ ಮಧ್ಯೆ ಇಂತಹ ಸನ್ನಿವೇಶಗಳು ಎದುರಾಗುವುದು ಸಾಮಾನ್ಯವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ME3uaD

ದ್ವಿತೀಯ ಟೆಸ್ಟ್‌ನಲ್ಲಿ 247 ರನ್ ಅಂತರದ ಗೆಲುವು; ಕಿವೀಸ್ ವಿರುದ್ಧ ಆಸೀಸ್‌ಗೆ ಸರಣಿ ಗೆಲುವು

ಮೆಲ್ಬೋರ್ನ್: ಇಲ್ಲಿನ ವಿಶ್ವ ಪ್ರಖ್ಯಾತ ಎಂಸಿಜಿ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವು ವಿರುದ್ಧ 247 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. 137/4 ಎಂಬಲ್ಲಿದ್ದ ನಾಲ್ಕನೇ ದಿನದಾಟ ಮುಂದುವರಿಸಿದ ಆಸೀಸ್, 54.2 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಕಿವೀಸ್ ಪರ ನೀಲ್ ವ್ಯಾಗ್ನರ್ ಮೂರು ವಿಕೆಟ್ ಕಬಳಿಸಿದರು. ಬಳಿಕ 488 ರನ್‌ಗಳ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ಕಿವೀಸ್ ಪಾಲಿಗೆ ಪಂದ್ಯ ಗೆಲ್ಲುವುದು ಅಸಾಧ್ಯದ ಸವಾಲಾಗಿತ್ತು. ಆರಂಭಿಕ ಟಾಮ್ ಬ್ಲಂಡೆಲ್ ಶತಕದ (121) ಹೊರತಾಗಿಯೂ 71 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಈ ಪೈಕಿ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದಿರಲಿಲ್ಲ. ಏಕಾಂಗಿ ಹೋರಾಟ ನೀಡಿದ ಬ್ಲಂಡಲ್ 210 ಎಸೆತಗಳಲ್ಲಿ 15 ಬೌಂಡರಿಗಳಿಂದ 121 ರನ್ ಗಳಿಸಿದರು. ಅಲ್ಲದೆ ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಖಾತೆ ತೆರೆಯಲು ವಿಫಲರಾದ ನಾಯಕ ಕೇನ್ ವಿಲಿಯಮ್ಸನ್ ವಿವಾದತ್ಮಾಕ ತೀರ್ಪಿಗೆ ಬಲಿಯಾದರು. ಟಾಮ್ ಲೇಥಮ್ (8), ರಾಸ್ ಟೇಲರ್ (2) ಸಹ ಪ್ರಭಾವಿ ಎನಿಸಿಕೊಳ್ಳಲಿಲ್ಲ. ಹೆನ್ರಿ ನಿಕೋಲಸ್ (33), ಬಿಜೆ ವಾಟ್ಲಿಂಗ್ (22) ಹಾಗೂ ಮಿಚೆಲ್ ಸ್ಟಾರ್ಕ್ (27) ಅಲ್ಪ ಹೋರಾಟ ನೀಡಿದರು. ಆಸೀಸ್ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಥನ್ ಲಯನ್ ನಾಲ್ಕು ಹಾಗೂ ಜೇಮ್ಸ್ ಪ್ಯಾಟಿನ್ಸನ್ ಮೂರು ವಿಕೆಟ್ ಕಿತ್ತು ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಾಧನೆ ಮಾಡಿರುವ (114) ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರು. ಪರ್ತ್‌ನಲ್ಲಿ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲೂ ಆಸೀಸ್ 296 ರನ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಇದೀಗ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಜನವರಿ 3ರಿಂದ 7ರ ವರೆಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಆಸೀಸ್ ಇದೀಗ ಕ್ಲೀನ್ ಸ್ವೀಪ್ ಗೆಲುವನ್ನು ಗುರಿಯಾಗಿಸಿದೆ. ಸಂಕ್ಷಿಪ್ತ ಸ್ಕೋರ್ ಪಟ್ಟಿ ಇಂತಿದೆ: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 467ಕ್ಕೆ ಆಲೌಟ್ (ಟ್ರಾವಿಸ್ ಹೆಡ್ 114, ಸ್ಟೀವ್ ಸ್ಮಿತ್ 85, ಟೀಮ್ ಪೈನ್ 79, ಮಾರ್ನಸ್ ಲ್ಯಾಬುಚಾಗ್ನೆ 63, ಡೇವಿಡ್ ವಾರ್ನರ್ 41, ನೀಲ್ ವ್ಯಾಗ್ನರ್ 83/4) ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 148ಕ್ಕೆ ಆಲೌಟ್ (ಟಾಮ್ ಲೇಥಮ್ 50, ಪ್ಯಾಟ್ ಕಮಿನ್ಸ್ 28/5) ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ 168/5 ಡಿಕ್ಲೇರ್ ( ಡೇವಿಡ್ ವಾರ್ನರ್ 38, ನೀಲ್ ವ್ಯಾಗ್ನರ್ 50/3) ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್ 240ಕ್ಕೆ ಆಲೌಟ್ (ಟಾಮ್ ಬ್ಲಂಡಲ್ 121, ನಥನ್ ಲಯನ್ 81/4) ಕೇನ್ ವಿಲಿಯಮ್ಸನ್ ವಿವಾದತ್ಮಾಕ ತೀರ್ಪಿಗೆ ಬಲಿ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37ng7i3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...