ಬೆಂಗಳೂರು ಮೂಲದ ಫರ್ನೀಚರ್ ಕಂಪನಿ 'ವೇಕ್‌ಫಿಟ್' (Wakefit) ಎಂಬ ಸ್ಟಾರ್ಟಪ್ ಕಂಪನಿ ಕೆಲಸದ ವೇಳೆಯಲ್ಲಿ ತನ್ನ ಉದ್ಯೋಗಿಗಳಿಗೆ ನಿದ್ರಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಆ ಮೂಲಕ ಭಾರತೀಯ ಕಂಪನಿಗಳು ಕೂಡ ಪಶ್ಚಾತ್ಯ ಕಂಪನಿಗಳ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿವೆ. ಈ ಬಗ್ಗೆ ಕಂಪನಿಯ ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಉದ್ಯೋಗಿಗಳಿಗೆ ಈ ಮೇಲ್ ರವಾನೆ ಮಾಡಿದ್ದು, 'ಕಚೇರಿಯಲ್ಲಿ ನಿದ್ರಿಸುವ ಸಮಯ' ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನಿದ್ದೆ ಮಾಡುವುದು ಉದ್ಯೋಗಿಗಳ ಹಕ್ಕು ಎಂದು ಅವರು ಈ ಮೇಲ್‌ನಲ್ಲಿ ಹೇಳಿದ್ದಾರೆ.
from India & World News in Kannada | VK Polls https://ift.tt/q2LWN6z