ಲಕ್ಷ್ಮೇಶ್ವರ ಬಿಜೆಪಿ ಸಮಾವೇಶ: ಕೂಲ್ ಡ್ರಿಂಕ್ಸ್ ವ್ಯಾಪಾರಿ ಸಮೀರ್ ನಷ್ಟ ಭರಿಸಿದ ಪ್ರತಾಪ್ ಸಿಂಹ

Karnataka Assembly Elections 2023 - ಗದಗದ ಲಕ್ಷ್ಮೇಶ್ವರದಲ್ಲಿ ಏ. 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕೂಲ್ ಡ್ರಿಂಕ್ಸ್ ಮಾರಲು ಬಂದಿದ್ದ ಸಮೀರ್ ಎಂಬಾತ ತನ್ನ ಟ್ರಕ್ ಅನ್ನು ಸಮಾರಂಭದಲ ಬಳಿ ತರುತ್ತಲೇ, ನೂರಾರು ಜನರು ಟ್ರಕ್ ಮೇಲೆ ಮುಗಿಬಿದ್ದಿದ್ದರು. ಕೂಲ್ ಡ್ರಿಂಕ್ಸ್ ಅನ್ನು ಕುಡಿದು ಖಾಲಿ ಮಾಡಿದ್ದರು. ಇದರಿಂದ ವ್ಯಾಪಾರಿಗೆ 35,000 ರೂ. ನಷ್ಟವಾಗಿತ್ತು. ಇ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ನಷ್ಟವನ್ನು ಭರಿಸಿದ್ದಾಗಿ ಟ್ವೀಟ್ ಮಾಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/oFfkqTd

ಮೈಸೂರು ಜಿಲ್ಲೆಯಲ್ಲಿ ಒಟ್ಟು 26.5 ಲಕ್ಷ ಮತದಾರರು; ನವಮತದಾರರ ಸಂಖ್ಯೆ 1.66 ಲಕ್ಷ

karnataka assembly elections 2023 - ಮೈಸೂರು ಜಿಲ್ಲೆಯಲ್ಲಿ ಈ ಬಾರಿ 26,55,988 ಮತದಾರರಿದ್ದಾರೆ. ಅವರಲ್ಲಿ 1,66,633 ಮತದಾರರು ನವಮತದಾರರಾಗಿದ್ದು, ಇದೇ ಮೊದಲ ಬಾರಿಗೆ ತಮ್ಮ ಅಧಿಕಾರ ಚಲಾಯಿಸಲಿದ್ದಾರೆ. ಇನ್ನು, ಜಿಲ್ಲೆಯ 11 ಕ್ಷೇತ್ರಗಳಿಂದ 26,55,988 (ಪುರುಷರು-13,17,121, ಮಹಿಳೆಯರು-13,38,637, ತೃತೀಯಲಿಂಗಿಗಳು -230) ಮತದಾರರು ಇದ್ದಾರೆ. ಒಟ್ಟು 11 ಕ್ಷೇತ್ರಗಳಿಂದ ಒಟ್ಟು 2905 ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಲ್ಲಿಯೂ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಹಲವು ಕನಿಷ್ಠ ಮೂಲ ಸೌಕರ್ಯಗಳು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಂದ ಮಾಹಿತಿ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/0r19yCm

Asia Championships: 58 ವರ್ಷಗಳ ಬಳಿಕ ಭಾರತಕ್ಕೆ ಚಿನ್ನ, ಇತಿಹಾಸ ಸೃಷ್ಟಿಸಿದ ಸಾತ್ವಿಕ್‌-ಚಿರಾಗ್‌!

Satwik-Chirag Create History: 2018 ಮತ್ತು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ, ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್ಸ್‌ನಲ್ಲಿ 58 ವರ್ಷಗಳ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಒಂಗ್ ಯೂ ಸಿನ್ ಮತ್ತು ಟಿಯೋ ಈ ಯಿ ಮಲೇಷ್ಯಾ ಜೋಡಿ ವಿರುದ್ಧ ಗೆದ್ದು ಭಾರತ ಜೋಡಿ ಈ ಸಾಧನೆ ಮಾಡಿತು. 1965ರಲ್ಲಿ ದಿನೇಶ್ ಖನ್ನಾ ಅವರು ಕೊನೆಯ ಬಾರಿ ಸಿಂಗಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lF5a1jL

ಮೋದಿ ಅದ್ಧೂರಿ ರೋಡ್‌ ಶೋ; ಹಾದಿಯುದ್ದಕ್ಕೂ ಪ್ರಧಾನಿಗೆ ಹೂಮಳೆ

Karnataka Assembly Elections 2023 - ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು. ಗನ್‌ಹೌಸ್‌ನಿಂದ ಏ. 30ರ ಸಂಜೆ 6.30ರಿಂದ ಆರಂಭವಾದ ರೋಡ್ ಶೋ, ಸಂಸ್ಕೃತ ಪಾಠಶಾಲೆ, ಮೈಸೂರು ಮಹಾನಗರಪಾಲಿಕೆ ಕಚೇರಿ, ಕೆ.ಆರ್‌.ಸರ್ಕಲ್‌, ಆಯುರ್ವೇದ ಕಾಲೇಜು ಸರ್ಕಲ್‌, ಆರ್‌ಎಂಸಿ ಮೂಲಕ ಸಾಗಿ ಹೈವಿ ಸರ್ಕಲ್‌ನಲ್ಲಿ ಅಂತ್ಯಗೊಂಡಿತು. ಮೋದಿಯವರು ಜನರತ್ತ ಕೈ ಬೀಸುತ್ತಿದ್ದರೆ ಅವರ ಮೇಲೆ ಹೂಮಳೆ ಸುರಿಸಲಾಯಿತು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/c7QMot8

MI vs RR: 'ಜೂನಿಯರ್ ಪೊಲಾರ್ಡ್'-ಟಿಮ್ ಡೇವಿಡ್ ಸ್ಪೋಟಕ ಆಟಕ್ಕೆ ಫ್ಯಾನ್ಸ್‌ ಮೆಚ್ಚುಗೆ!

Fans Praised Tim David's match-winning performance: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 1000ನೇ ಪಂದ್ಯದಲ್ಲಿ ರನ್ ಸುರಿಮಳೆಯೇ ಸುರಿದಿದೆ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 213 ರನ್‌ಗಳ ಕಠಿಣ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ಅವಿಸ್ಮರಣೀಯ ಗೆಲುವು ಸಾಧಿಸಿತು. 20ನೇ ಓವರ್‌ನಲ್ಲಿ ಸತತ 3 ಸಿಕ್ಸರ್ ಸಿಡಿಸಿ ಆತಿಥೇಯರ ಗೆಲುವಿಗೆ ಕಾರಣರಾದ ಸ್ಫೋಟಕ ಬ್ಯಾಟ್ಸ್‌ಮನ್‌ ಟಿಮ್ ಡೇವಿಡ್ ಅವರನ್ನು ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iLWK7f4

ಚುನಾವಣೆ ಎಫೆಕ್ಟ್: ಕೇರಳಕ್ಕೆ ಸಂಚರಿಸುವ ಪ್ಯಾಸೆಂಜರ್‌ ರೈಲಿನಲ್ಲಿ ಕಂಪಾರ್ಟ್‌ಮೆಂಟ್‌ಗಳ ಕೊರತೆ

ಕರ್ನಾಟಕ ಚುನಾವಣೆಗಳ ಎಫೆಕ್ಟ್ ಕೇರಳ ಸಂಚರಿಸುವ ರೈಲುಗಳ ಮೇಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಮಂಗಳೂರು- ಕಣ್ಣೂರು ಪ್ಯಾಸೆಂಜರ್ ರೈಲುಗಳ ಬೋಗಿಗಳಲ್ಲಿ ಕಡಿತ ಮಾಡಲಾಗಿದ್ದು ಇವುಗಳನ್ನು ಚುನಾವಣೆ ಸಂದರ್ಭ ರಾಜ್ಯದ ವಿವಿಧೆಡೆ ಹೋಗುವ ರೈಲುಗಳಿಗೆ ಜೋಡಿಸಲಾಗುತ್ತಿದೆ ಎನ್ನಲಾಗಿದೆ. ಇದರಿಂದ ರೈಲಿನಲ್ಲಿ ವಿಪರೀತ ಜನದಟ್ಟಣೆಯಾಗುತ್ತಿದ್ದು ರೈಲಿನ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗಡಿಭಾಗದಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿದೆ. ಇದು ಅಪಾಯಕಾರಿಯೂ ಆಗಿರುವುದರಿಂದ ಈ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/zFRc9QO

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಗೀಳು! 30 ಲಕ್ಷ ರೂ. ಕಳೆದುಕೊಂಡ ಬಳಿಕ ನಿಮ್ಹಾನ್ಸ್ ಪಾಲು!

Stock Market Addiction: ಇದೊಂದು ಅಪರೂಪದ ಸಮಸ್ಯೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡೋದೂ ಒಂದು ಖಾಯಿಲೆ ಆಗಬಹುದಾ? ಆದ್ರೆ, ಇದು ಸತ್ಯ. ಇಂಥಾದ್ದೊಂದು ಅಪರೂಪದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡೋದನ್ನೇ ಹವ್ಯಾಸ ಮಾಡಿಕೊಂಡಿದ್ದ ಈತ ಲಕ್ಷಾಂತರ ರೂಪಾಯಿ ಹಣವನ್ನೂ ಕಳೆದುಕೊಂಡಿದ್ದಾರೆ. ಈತನ ಕೃತ್ಯಗಳಿಂದ ನೊಂದು ಹೋದ ಕುಟುಂಬಸ್ಥರು ಕೊನೆಗೆ ಈತನನ್ನು ಸರಿ ಮಾಡಿ ಎಂದು ನಿಮ್ಹಾನ್ಸ್ ತಜ್ಞರ ಮೊರೆ ಹೋಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/tGNuk5o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...