Asia Cup 2022: ಹಾಂಕಾಂಗ್‌ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ, ಭಾರತಕ್ಕೆ ಪಾಕ್‌ ಎದುರಾಳಿ!

PAK vs HK Match Highlights: ಮೊಹಮ್ಮದ್‌ ರಿಝ್ವಾನ್‌ (78*) ಆಕರ್ಷಕ ಅರ್ಧಶತಕ ಹಾಗೂ ಶದಾಬ್ ಖಾನ್‌(8ಕ್ಕೆ 4) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಪಾಕಿಸ್ತಾನ ತಂಡ, ಹಾಂಕಾಂಗ್‌ ವಿರುದ್ಧ 155 ರನ್‌ಗಳ ದಾಖಲೆಯ ಜಯ ಗಳಿಸಿತು. ಆ ಮೂಲಕ ಏಷ್ಯಾ ಕಪ್‌ ಟೂರ್ನಿಯಲ್ಲಿ ಸೂಪರ್‌-4ಕ್ಕೆ ಪ್ರವೇಶಿಸಿತು ಹಾಗೂ ಭಾನುವಾರ ಭಾರತ ತಂಡದ ಎದುರು ಸೆಣಸುವುದನ್ನು ಖಚಿತಪಡಿಸಿಕೊಂಡಿತು. 194 ರನ್‌ ಗುರಿ ಹಿಂಬಾಲಿಸಿದ ಹಾಂಕಾಂಗ್ ತಂಡ 10. 4 ಓವರ್‌ಗಳಿಗೆ ಕೇವಲ 38 ರನ್‌ ಗಳಿಗೆ ಆಲ್‌ಔಟ್‌ ಆಯಿತು. ಏಷ್ಯಾ ಕಪ್‌ ಟೂರ್ನಿಯ ಟಿ20 ಸ್ವರೂಪದಲ್ಲಿ ಅತ್ಯಂತ ಕಡಿಮೆ ಮೊತ್ತ ಇದಾಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/HtLwUz3

ಬೆಂಗಳೂರಿನ ಬೇಗೂರು ಕೆರೆ ಪ್ರದೇಶದಲ್ಲಿ 81 ಮಂದಿಯಿಂದ ಒತ್ತುವರಿ: 33 ಒತ್ತುವರಿ ಪೂರ್ಣ, ಹೈಕೋರ್ಟ್ ಗೆ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಕೆ

ಬೇಗೂರು ಕೆರೆ ಪ್ರದೇಶದಲ್ಲಿ ಒಟ್ಟು 81 ಒತ್ತುವರಿ ಜಾಗಗಳು ಪತ್ತೆಯಾಗಿದ್ದು, ಆ ಪೈಕಿ ಈಗಾಗಲೇ 33 ಒತ್ತುವರಿಗಳನ್ನು ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಗುರುವಾರ ಹೈಕೋರ್ಟ್‌ಗೆ ಪ್ರಮಾಣಪತ್ರದ ಮೂಲಕ ತಿಳಿಸಿದೆ. ಬೆಂಗಳೂರಿನ ಕೆರೆಗಳ ನಿರ್ವಹಣೆ ಹಾಗೂ ಸಂರಕ್ಷಣೆ ಸಂಬಂಧ 2014ರಲ್ಲಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಹಂಗಾಮಿ ಸಿಜೆ ಅಲೋಕ್‌ ಅರಾಧೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

from India & World News in Kannada | VK Polls https://ift.tt/eMrczPU

PM Modi Mangaluru Visit: ಮಂಗಳೂರಿಗೆ ಇಂದು ಪ್ರಧಾನಿ ಮೋದಿ; ಹೊಸ ನಿರೀಕ್ಷೆಯಲ್ಲಿ ಕರಾವಳಿ!

ಇಂದಿರಾ ಗಾಂಧಿ ಬಳಿಕ 47 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು (Prime Minister) ಮಂಗಳೂರಿನಲ್ಲಿ (Mangaluru) ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಎನ್‍ಎಂಪಿಟಿ, ಎಂಆರ್‌ಪಿಎಲ್, ರಾಜ್ಯ ಮೀನುಗಾರಿಕೆ ಇಲಾಖೆಯ ಯೋಜನೆಯ ಶಿಲಾನ್ಯಾಸ, ಲೋಕಾರ್ಪಣೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ನೆರವೇರಿಸಲಿದ್ದಾರೆ. ಬಿಜೆಪಿಯಿಂದ ಮಹಾಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಬೂತ್‌ಮಟ್ಟದ ತನಕ ಕಾರ್ಯಕರ್ತರನ್ನು ಕರೆತರಲು 1500 ಬಸ್‌, 200ರಷ್ಟು ಟೆಂಪೊ ಟ್ರಾವೆಲರ್‌ಗಳ ವ್ಯವಸ್ಥೆ ಮಾಡಲಾಗಿದೆ. 70 ಸಾವಿರದಷ್ಟು ಫಲಾನುಭವಿಗಳು ಸೇರಿದಂತೆ ಎರಡು ಲಕ್ಷಕ್ಕಿಂತ ಹೆಚ್ಚು ಜನರನ್ನು ಸೇರಿಸುವ ಭಾರಿ ಪ್ರಯತ್ನ ಮಾಡಲಾಗಿದೆ.

from India & World News in Kannada | VK Polls https://ift.tt/48xiwUl

PM Modi in Mangaluru | ಇಂದು ಕರಾವಳಿಗೆ 'ನಮೋ' ಭೇಟಿ: ತುಳು ಭಾಷೆ ಮಾನ್ಯತೆಗೆ 50 ಸಾವಿರಕ್ಕೂ ಅಧಿಕ ಟ್ವೀಟ್‌

ಪ್ರಧಾನಿ ನರೇಂದ್ರ ಮೋದಿ ಇಂದು (ಸೆ.2ರಂದು) ಮಂಗಳೂರಿಗೆ ಬರುವ ಸಂದರ್ಭದಲ್ಲಿ ತುಳುನಾಡಿನ ವಿವಿಧ ತುಳುಪರ ಸಂಘಟನೆಗಳು ಒಟ್ಟು ಸೇರಿ ಕಳೆದ ಮೂರು ದಿನಗಳಿಂದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆ ಹಾಗೂ ಸಂವಿಧಾನದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಾನಾ ತುಳು ಸಂಘಟನೆಗಳು 50 ಸಾವಿರಕ್ಕೂ ಅಧಿಕ ಟ್ವೀಟ್‌ ಮಾಡುವ ಮೂಲಕ ಸದ್ದು ಮಾಡಿದ್ದಾರೆ. ಆ.30, 31 ಮತ್ತು ಸೆ.1ರಂದು ಟ್ವೀಟ್‌ ತುಳುನಾಡ್‌ ಅಭಿಯಾನ ಹಮ್ಮಿಕೊಂಡಿತ್ತು. ತುಳುನಾಡ್‌ ಒಕ್ಕೂಟ, ತುಳುವೆರ್‌ ಕುಡ್ಲ, ಯುವ ತುಳುನಾಡ್‌, ತುಳುಪೀಡಿಯ, ತುಳುನಾಡು ನಿರ್ಮಾಣ ಸೇನೆ, ತುಳುವಾಸ್‌ ಕೌನ್ಸಿಲ್‌ ಅಭಿಯಾನದ ನೇತೃತ್ವ ವಹಿಸಿತ್ತು.

from India & World News in Kannada | VK Polls https://ift.tt/Az42JHg

ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿ ಕೊಡಗಿನಲ್ಲಿ ಪ್ರತಿಭಟನೆ

ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯಿತು. ನಗರದಲ್ಲೂ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ ಬೇಡಿಕೆಯ ಈಡೇರಿಕೆಗಾಗಿ ಆಗ್ರಹಿಸಿದರು.

from India & World News in Kannada | VK Polls https://ift.tt/cTE6Cjw

ಬಿಬಿಎಂಪಿ ಚುನಾವಣೆ: ಸೆ.22ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ: ಚುನಾವಣಾ ಆಯೋಗ ಮಾಹಿತಿ

ಮತದಾರರ ಅಂತಿಮ ಪಟ್ಟಿಯನ್ನು ಸೆ.22ಕ್ಕೆ ಪ್ರಕಟಿಸುವ ಸಾಧ್ಯತೆಯಿದೆ. ಅದಾದ ಬಳಿಕವಷ್ಟೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ನ್ಯಾಯಪೀಠಕ್ಕೆ ವಿವರಿಸಿದರು. ಈ ವೇಳೆ ಅರ್ಜಿದಾರರ ವಕೀಲರು, ನಿಯಮಗಳಿಗೆ ಅನುಸಾರವಾಗಿ ವಾರ್ಡ್‌ ಮರು ವಿಂಗಡಣೆ ಮಾಡಿಲ್ಲ. ಆದ್ದರಿಂದ ವಾರ್ಡ್‌ ಮರು ವಿಂಗಡಣೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದರು.

from India & World News in Kannada | VK Polls https://ift.tt/b2ku9mP

Asia Cup 2022: ಬಾಂಗ್ಲಾದೇಶ ಕನಸು ಭಗ್ನ, ಶ್ರೀಲಂಕಾ ತಂಡಕ್ಕೆ ಸೂಪರ್‌-4 ಟಿಕೆಟ್‌!

BAN vs SL Match Highlights: ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದ ಶ್ರೀಲಂಕಾ ತಂಡ 2022ರ ಏಷ್ಯಾ ಕಪ್‌ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಸೂಪರ್‌-4ರ ಹಂತಕ್ಕೆ ಪ್ರವೇಶ ಮಾಡಿತು. ಶ್ರೀಲಂಕಾ ಪರ ಅತ್ಯುತ್ತಮ ಬ್ಯಾಟ್‌ ಮಾಡಿಸ ಕುಸಾಲ್ ಮೆಂಡಿಸ್‌ 60 ರನ್‌ ಗಳಿಸಿದರೆ, ನಾಯಕ ದಸೂನ್‌ ಶನಕ 45 ರನ್‌ ಗಳಿಸಿದರು. ಕೊನೆಯಲ್ಲಿ ಕೇವಲ 3 ಎಸೆತಗಳಲ್ಲಿ ಅಜೇಯ 10 ರನ್‌ ಗಳಿಸಿ ಶ್ರೀಲಂಕಾ ತಂಡವನ್ನು ಆಶಿತ ಫರ್ನಾಂಡು ಗೆಲುವಿನ ದಡೆ ಸೇರಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/dxAekrJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...