ಆಸ್ಪ್ರೇಲಿಯನ್‌ ಓಪನ್‌: ರಾಫೆಲ್‌ ನಡಾಲ್‌ಗೆ ಥೀಮ್‌ ಆಘಾತ

ಹೊಸದಿಲ್ಲಿ: ಅಗ್ರ ಶ್ರೇಯಾಂಕಿತ ಆಟಗಾರ ಸ್ಪೇನ್‌ನ ರಾಫೆಲ್‌ ನಡಾಲ್‌ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಎದುರು ಸೋತು 2020ನೇ ಸಾಲಿನ ಆಸ್ಪ್ರೇಲಿಯನ್‌ ಓಪನ್‌ ನಲ್ಲಿ ಹೋರಾಟ ಕೊನೆಗೊಳಿಸಿದ್ದಾರೆ. ರಾಡ್‌ ಲೇವರ್‌ ಅರೆನಾದಲ್ಲಿ ಬುಧವಾರ ನಡೆದ 4 ಗಂಟೆ 10 ನಿಮಿಷಗಳ ಮ್ಯಾರಥಾನ್‌ ಹೋರಾಟದಲ್ಲಿ 19 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಒಡೆಯ ರಾಫಾ 6ಧಿ-7(3/7), 6ಧಿ-7(4ಧಿ/7), 6ಧಿ-4, 6-7(6/8) ಧಿಸೆಟ್‌ಗಳಿಂದ ಐದನೇ ಶ್ರೇಯಾಂಕಿತ ಆಟಗಾರ ಥೀಮ್‌ಗೆ ಶರಣಾದರು. ಇದರೊಂದಿಗೆ ಮೆಲ್ಬೋರ್ನ್‌ ಅಂಗಣದಲ್ಲಿ ರೋಜರ್‌ ಫೆಡರರ್‌ ಅವರ 20 ಗ್ರ್ಯಾಮ್‌ ಸ್ಲಾಂ ಪ್ರಶಸ್ತಿಗಳ ದಾಖಲೆ ಸರಿಗಟ್ಟುವ ಅವಕಾಶವನ್ನು ನಡಾಲ್‌ ಕಳೆದುಕೊಂಡರು. 26 ವರ್ಷದ ಯುವ ಆಟಗಾರ ಥೀಮ್‌ ಹಿಂದಿನ ಎರಡು ಫ್ರೆಂಚ್‌ ಓಪನ್‌ ಫೈನಲ್‌ಗಳಲ್ಲಿ ನಡಾಲ್‌ಗೆ ಶರಣಾಗಿದ್ದರು. ಸೆಮಿಫೈನಲ್‌ ಪಂದ್ಯದಲ್ಲಿ ಥೀಮ್‌ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸವಾಲು ಎದುರಿಸಲಿದ್ದಾರೆ. ವಿಶೇಷ ಎಂದರೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಥೀಮ್‌ ಮತ್ತು ಜ್ವೆರೆವ್‌ ಸೆಮಿಫೈನಲ್‌ ಪ್ರವೇಶಿಸಿರುವುದು ಇದೇ ಮೊದಲು. ವಾವ್ರಿಂಕಾಗೆ ಸೋಲು: ಏಳನೇ ಶ್ರೇಯಾಂಕಿತ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮತ್ತೊಂದು ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ನಲ್ಲಿ ಮೂರು ಬಾರಿಯ ಗ್ರ್ಯಾನ್‌ ಸ್ಲಾಂ ಚಾಂಪಿಯನ್‌ ಸ್ವಿಜರ್ಲೆಂಡ್‌ನ ಸ್ಟಾನಿಸ್ಪ್ಯಾಸ್‌ ವಾವ್ರಿಂಕಾಗೆ ಸೋಲುಣಿಸಿ ಮೊದಲ ಬಾರಿಗೆ ನಾಲ್ಕರ ಘಟ್ಟ ತಲುಪಿದ್ದಾರೆ. 2 ಗಂಟೆ 19 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 22 ವರ್ಷದ ಜ್ವೆರೆವ್‌ 1-6, 6-3, 6-4, 6-2 ಸೆಟ್‌ ಗಳಿಂದ ಸ್ವಿಸ್‌ ಆಟಗಾರನಿಗೆ ಸೋಲುಣಿಸಿದರು. ಹ್ಯಾಲೆಪ್‌ಗೆ ಸುಲಭ ತುತ್ತಾದ ಕೊಂಟಾವೀಟ್‌: ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಸಿಮೋನಾ ಹ್ಯಾಲೆಪ್‌ 6-1, 6-4 ನೇರ ಸೆಟ್‌ ಗಳಿಂದ ಎಸ್ಟೋನಿಯಾದ ಅನೆಟ್‌ ಕೊಂಟಾವೀಟ್‌ ವಿರುದಟಛಿ ಗೆದ್ದು ಉಪಾಂತ್ಯ ತಲುಪಿದರು. ಫೈನಲ್‌ಗಾಗಿ ಹ್ಯಾಲೆಪ್‌ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರನ್ನು ಎದುರಿಸಲಿದ್ದಾರೆ. ಮುಗುರುಜಾ ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಅನಾಸ್ತಾಸಿಯಾ ವಿರುದಟಛಿ ಗೆದ್ದು ನಾಲ್ಕರ ಘಟ್ಟ ತಲುಪಿದ್ದಾರೆ. 50ನೇ ಬಾರಿ ಫೆಡರರ್‌-ಜೊಕೊವಿಕ್‌ ಮುಖಾಮುಖಿ: ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಮತ್ತು ಸರ್ಬಿಯಾ ಆಟಗಾರ ನೊವಾಕ್‌ ಜೊಕೊವಿಕ್‌ ಗುರುವಾರ 50ನೇ ಬಾರಿ ಪರಸ್ಪರ ಎದುರಾಗುತ್ತಿದ್ದಾರೆ. ಇಲ್ಲಿಯ ತನಕದ 49 ಪಂದ್ಯಗಳ ಪೈಕಿ 23ರಲ್ಲಿ ಫೆಡರರ್‌ ಗೆದ್ದರೆ, 26ರಲ್ಲಿ ಜೊಕೊವಿಕ್‌ ಜಯಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2U6Xsnn

ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ: ಹಳ್ಳಿಗೆ ಬರುವ ಡಿಸಿಗಳು ಮಾಡಿಕೊಡುವ 20 ಕೆಲಸಗಳಿವು!

ಬೆಂಗಳೂರು: ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸುವ ಉದ್ದೇಶದಿಂದ '' ಎಂಬ ಹೊಸ ಕಾರ್ಯಕ್ರಮವನ್ನು ರಾಜ್ಯ ಸರಕಾರ ರೂಪಿಸುತ್ತಿದೆ. ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳಿಗೆ ಹಳ್ಳಿ ವಾಸ್ತವ್ಯ ಹೂಡಿ, ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಗ್ರಾಮಸ್ಥರ ಸಂಕಷ್ಟಗಳನ್ನು ನೇರವಾಗಿ ಕೇಳಿ ಪರಿಹಾರ ನೀಡುವ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ. ಡಿಸಿಗಳ ಜೊತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ ಹಳ್ಳಿಗಳಿಗೆ ತೆರಳಲಿದ್ದಾರೆ. ಈ ಕಾರ್ಯಕ್ರಮದಡಿ ತಹಸೀಲ್ದಾರ್‌ ತಿಂಗಳಲ್ಲಿ 4 ದಿನ ಹಳ್ಳಿಗಳಿಗೆ ಭೇಟಿ ನೀಡುವ ವ್ಯವಸ್ಥೆ ಸೃಷ್ಟಿಸಬೇಕು ಎಂಬ ಉದ್ದೇಶವೂ ಇದೆ. 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಕಾರ್ಯಕ್ರಮದ ಕಾರ್ಯಗಳ ಪಟ್ಟಿ
  1. ಸರಕಾರಿ ಜಮೀನು ಒತ್ತುವರಿ ದೂರಿಗೆ ತಕ್ಷಣ ಕ್ರಮ.
  2. ಸಾರ್ವಜನಿಕ ಸ್ಮಶಾನಕ್ಕೆ ಸರಕಾರಿ ಜಮೀನು ಒದಗಿಸುವುದು.
  3. ಕುಡಿಯುವ ನೀರಿನ ಸಮಸ್ಯೆ ಪರಿಹಾರ.
  4. ಗ್ರಾಮದ ಶಾಲೆ, ಪಂಚಾಯಿತಿ, ಕಾಲೇಜು, ಅಂಗನವಾಡಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಮೂಲ ಸೌಕರ್ಯ ಸಮಸ್ಯೆ ಬಗೆಹರಿಸುವುದು.
  5. ಪಹಣಿ ಕಾಲಂ 3 ಮತ್ತು 9ರ ವ್ಯತ್ಯಾಸ ಪರಿಹರಿಸುವುದು. ಬಾಕಿ ಇರುವ 1,59,402 ಪಹಣಿ ತಿದ್ದುಪಡಿ ಪೂರ್ಣಗೊಳಿಸುವುದು.
  6. ಪೌತಿ ಖಾತೆ (ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ್ದು) ಬದಲಾವಣೆ
  7. ಸಾಮಾಜಿಕ ಭದ್ರತಾ ಯೋಜನೆಯಿಂದ ವಂಚಿತರಾದವರನ್ನು ಗುರುತಿಸುವುದು.
  8. ಪಡಿತರ ವ್ಯವಸ್ಥೆ ಪರಿಶೀಲನೆ.
  9. ಮತದಾರರ ಪಟ್ಟಿ ಪರಿಷ್ಕರಣೆ
  10. ಗುಡಿಸಲು ಮತ್ತೆ ಹಚ್ಚಿ ಪಕ್ಕಾ ಮನೆ ನಿರ್ಮಿಸುವುದು.
  11. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸುವುದು.
  12. ಸರಕಾರಿ ಜಾಗದಲ್ಲಿ ಸಸಿ ನೆಡುವುದು.
  13. ಬಾಲ್ಯ ವಿವಾಹ ನಿಷೇಧಕ್ಕೆ ಕ್ರಮ.
  14. ಆಧಾರ್‌ ಕಾರ್ಡ್‌ ಬಗ್ಗೆ ಅರಿವು ಮೂಡಿಸುವುದು.
  15. ರೈತರಿಗೆ ಬೆಳೆ ದರ್ಶಕದ ಬಗ್ಗೆ ಅರಿವು ಮೂಡಿಸುವುದು.
  16. ಆರೋಗ್ಯ ಜಾಗೃತಿ.
  17. ನವಜಾತ ಶಿಶು - ಬಾಣಂತಿ ಪೋಷಣೆಗೆ ಕ್ರಮ.
  18. ಕೇಂದ್ರ ಹಾಗೂ ರಾಜ್ಯ ಸರಕಾರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವುದು.
  19. ಕಂದಾಯ ಇಲಾಖೆಹೆ ಸಂಬಂಧಪಟ್ಟ 90% ಕಾರ್ಯ ಈ ಸಂದರ್ಭದಲ್ಲಿ ನಡೆಯಬೇಕು.
  20. ಬೇರೆ ಇಲಾಖೆಗೆ ಸಂಬಂಧಿಸಿದ ಅರ್ಜಿಯನ್ನು ಆಯಾ ಇಲಾಖೆಗೆ ಕಳುಹಿಸಬೇಕು.


from India & World News in Kannada | VK Polls https://ift.tt/38OaFpb

ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ: ಜನಸ್ನೇಹಿ ಆಡಳಿತಕ್ಕೆ ಸಚಿವ ಅಶೋಕ್‌ ವಿನೂತನ ಕ್ರಮ

ಬೆಂಗಳೂರು: ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸಲು ಸರಕಾರ ಮುಂದಾಗಿದ್ದು, ' ' ಎಂಬ ಹೊಸ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜನಸ್ಪಂದನ ಕಾರ್ಯಕ್ರಮದ ಮಾದರಿಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಮೂರನೇ ಶನಿವಾರ ತಮ್ಮ ಜಿಲ್ಲೆಯ ಯಾವುದಾದರೊಂದು ಹಳ್ಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ಸೌಲಭ್ಯಕ್ಕಾಗಿ ಜನರು ಅಲೆಯುವಂತಾಗಬಾರದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಅಧಿಕಾರಿಗಳಿಗೆ ಬುಧವಾರ ಸ್ಪಷ್ಟ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಜತೆಗೆ ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಅವರು, ''ಕಂದಾಯ ಇಲಾಖೆ ಜನಸ್ನೇಹಿಯಾಗಬೇಕಾದರೆ, ಜಿಲ್ಲಾಧಿಕಾರಿಗಳು ಹಳ್ಳಿಗೆ ಭೇಟಿ ನೀಡಬೇಕು. ನಿಮ್ಮ ಜತೆ ನಾನೂ ಒಂದು ಜಿಲ್ಲೆಯ ಹಳ್ಳಿಗೆ ಬರುತ್ತೇನೆ. ಎಸಿ ರೂಂನಲ್ಲಿ ಕುಳಿತು ಆಡಳಿತ ನಡೆಸುವ ಬದಲು ಹಳ್ಳಿಗೆ ತೆರಳಿ ಸಮಸ್ಯೆಗಳ ನೈಜ ಮಾಹಿತಿ ಪಡೆಯಿರಿ'' ಎಂದು ಜಿಲ್ಲಾಧಿಕಾರಿಗಳಿಗೆ ಚಾಟಿ ಬೀಸಿದರು.
  1. ಏನಿದು 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಕಾರ್ಯಕ್ರಮ?ಸುದ್ದಿಗಾರರ ಜತೆ ಮಾತನಾಡಿದ ಆರ್‌. ಅಶೋಕ್‌,''ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಹಳ್ಳಿಗೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ಜನರಿಂದ ನೇರವಾಗಿ ಅಹವಾಲು ಸ್ವೀಕರಿಸಬೇಕು. 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಎಂಬ ಈ ಕಾರ್ಯಕ್ರಮವನ್ನು ಪ್ರತಿ ತಿಂಗಳು ಮೂರನೇ ಶನಿವಾರ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿಸಿಗಳ ಜತೆಗೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ರು ತೆರಳಲಿದ್ದಾರೆ. ನಂತರದ ಹಂತದಲ್ಲಿ ಉಪ ವಿಭಾಗಾಧಿಕಾರಿಗಳು ತಿಂಗಳಿಗೆ ಎರಡು ದಿವಸ. ತಹಶೀಲ್ದಾರ್‌ರು 4 ದಿವಸ ಹಳ್ಳಿಗಳಿಗೆ ಭೇಟಿ ನೀಡುವ ವ್ಯವಸ್ಥೆ ಸೃಷ್ಟಿಸಬೇಕೆಂಬ ಉದ್ದೇಶವಿದೆ. ಈ ಬಗ್ಗೆ ಇನ್ನಷ್ಟೇ ಚರ್ಚೆ ನಡೆಸಬೇಕಿದೆ,'' ಎಂದು ವಿವರಿಸಿದರು.
  2. 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಕಾರ್ಯಕ್ರಮದ ಪ್ರಮುಖ ಕೆಲಸಗಳೇನು?ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವುದು, ಸ್ಮಶಾನಕ್ಕೆ ಜಾಗ ಮೀಸಲು, ಶಾಲೆ ಬಿಟ್ಟ ಮಕ್ಕಳ್ಳನ್ನು ಪುನಃ ಶಾಲೆಗೆ ಕರೆತರುವುದು, ಪೌತಿ ಖಾತೆ, ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಯೋಜನೆಗಳ ಪ್ರಗತಿ ಪರಿಶೀಲನೆ, ಕಂದಾಯ ಇಲಾಖೆಗೆ ಸಂಬಂಧಪಟ್ಟ 90% ಕಾರ್ಯ ಈ ಸಂದರ್ಭ ನಡೆಸಬೇಕು, ಬೇರೆ ಇಲಾಖೆಗೆ ಸಂಬಂಧಿಸಿದ ಅರ್ಜಿಯನ್ನು ಆಯಾ ಇಲಾಖೆಗೆ ಕಳುಹಿಸಬೇಕು.
  3. 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಕಾರ್ಯಕ್ರಮದ ಉದ್ದೇಶವೇನು?ಜನಸಾಮಾನ್ಯರ ಮನೆ ಬಾಗಿಲಿಗೆ ಸರಕಾರವನ್ನು ಒಯ್ಯುವುದು, ಕಂದಾಯ ಇಲಾಖೆ ಸೌಲಭ್ಯಕ್ಕಾಗಿ ಜನರ ಅಲೆದಾಟ ತಪ್ಪಿಸುವುದು
  4. 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಕಾರ್ಯಕ್ರಮದಷರತ್ತುಗಳೇನು?ಹಳ್ಳಿ ಭೇಟಿ ವೇಳೆ ಹೊಟೇಲ್‌ ಅಥವಾ ಐಬಿಗಳಲ್ಲಿ ವಾಸ ಮಾಡುವಂತಿಲ್ಲ, ಪಂಚಾಯಿತಿ ಸದಸ್ಯ ಅಥವಾ ಅಧ್ಯಕ್ಷರ ಮನೆಯಲ್ಲಿ ವಾಸ್ತವ್ಯ ಹೂಡಬೇಕು, ಹಳ್ಳಿಯ ಜನರು ಕುಡಿಯುವ ನೀರನ್ನೇ ಕುಡಿಯಬೇಕು, ಗ್ರಾಮಸ್ಥರ ಜತೆಯಲ್ಲೇ ಊಟ ಮಾಡಬೇಕು, ಜನಸಾಮಾನ್ಯರಂತೆ ಬದುಕು ಸಾಗಿಸಬೇಕು.
ಇದು ಆರಂಭ ಮಾತ್ರ ಆರಂಭದಲ್ಲಿ ಡಿಸಿ ಜತೆ ಎಸಿ ಮತ್ತು ತಹಸೀಲ್ದಾರರು ತೆರಳಲಿದ್ದಾರೆ. ಮುಂದಿನ ಹಂತದಲ್ಲಿ ತಿಂಗಳಿಗೆ 2 ದಿನ ಎಸಿ, 4 ದಿನ ತಹಸೀಲ್ದಾರ್‌ಗಳ ಹಳ್ಳಿ ಭೇಟಿ ಕಡ್ಡಾಯ ಮಾಡುವ ಉದ್ದೇಶವಿದ್ದು, ಇನ್ನಷ್ಟೇ ಚರ್ಚೆ ನಡೆಸಬೇಕಿದೆ ಎಂದು ಸಚಿವ ಅಶೋಕ್‌ ವಿವರಿಸಿದರು.


from India & World News in Kannada | VK Polls https://ift.tt/2O9HEfW

ಮಹಿಳೆಯರು ಮಸೀದಿ ಪ್ರವೇಶಿಸಬಹುದು, ಅವರು ಸ್ವತಂತ್ರರೆಂದ ಕಾನೂನು ಮಂಡಳಿ

ವಿಜಯ ಚೌಕದಲ್ಲಿ ರಾಷ್ಟ್ರಪತಿ, ಪ್ರಧಾನಿ ಸಮ್ಮುಖದಲ್ಲಿ ಬೀಟಿಂಗ್ ರಿಟ್ರೀಟ್ ಸಂಭ್ರಮ

ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು. ಇದಕ್ಕಾಗಿ ವಿಜಯ ಚೌಕದಲ್ಲಿ ಸಂಭ್ರಮ ಕಳೆಗಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಬೀಟಿಂಗ್ ರಿಟ್ರೀಟ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರೂ ಕೂಡಾ ವಿಜಯ ಚೌಕದಲ್ಲಿ ನಡೆದ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತೀಯ ಸೇನೆಯ ಎಲ್ಲಾ ಮೂರೂ ವಿಭಾಗಗಳೂ ಬೀಟಿಂಗ್ ರಿಟ್ರೀಟ್‌ನಲ್ಲಿ ಭಾಗಿಯಾಗಿದ್ದವು. ಭೂ ಸೇನೆ, ವಾಯು ಪಡೆ ಹಾಗೂ ನೌಕಾ ದಳದ ಮುಖ್ಯಸ್ಥರು ಹಾಗೂ ಯೋಧರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಕರ್ಷಕ ಪಥ ಸಂಚಲನ ಸೇರಿದಂತೆ ಭಾರತದ ರಕ್ಷಣಾ ಪಡೆಗಳ ಸಾಮರ್ಥ್ಯ ಇಲ್ಲಿ ಅನಾವರಣವಾಯ್ತು. ರಾಷ್ಟ್ರಪತಿ ಭವನವಿರುವ ರೈಸೀನಾ ಹಿಲ್ಸ್‌ನ ವಿಜಯ ಚೌಕದಲ್ಲಿ ನಡೆದ ಸಾಂಪ್ರದಾಯಿಕ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ, ಪ್ರತಿ ವರ್ಷ ಗಣರಾಜ್ಯೋತ್ಸವದ ನಾಲ್ಕನೇ ದಿನ ನಡೆಯುತ್ತಿದೆ. ಗಣರಾಜ್ಯೋತ್ಸವದ ನಾಲ್ಕು ದಿನಗಳ ಸಂಭ್ರಮಾಚರಣೆಯ ಕೊನೆಯ ಕಾರ್ಯಕ್ರಮವೇ ಬೀಟಿಂಗ್ ರಿಟ್ರೀಟ್. ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಡೆಯುವ ಬೀಟಿಂಗ್‌ ರಿಟ್ರೀಟ್‌ ಮೂಲಕ, ಗಣರಾಜ್ಯೋತ್ಸವದ ನಾಲ್ಕು ದಿನಗಳ ಸಂಭ್ರಮಾಚರಣೆಗೆ ಅಧಿಕೃತ ತೆರೆ ಬಿದ್ದಿದೆ.


from India & World News in Kannada | VK Polls https://ift.tt/38NhaIV

24 ವಾರಗಳ ಗರ್ಭಿಣಿಯರಿಗೆ ಗರ್ಭಪಾತಕ್ಕೆ ಅವಕಾಶ: ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ

ಹೊಸದಿಲ್ಲಿ: ದೇಶದಲ್ಲಿ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ ನೀಡುವ ಮಿತಿಯನ್ನು ಪ್ರಸ್ತುತ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲು ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಈ ಸಂಬಂಧದ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುವುದು ಎಂದು ತಿಳಿದುಬಂದಿದೆ. ಸದ್ಯ, ಭಾರತದ ಕಾನೂನು ಪ್ರಕಾರ ಗರ್ಭಿಣಿಗೆ 20 ವಾರಗಳೊಳಗೆ ಮಾತ್ರ ಮಾಡಿಸಿಕೊಳ್ಳಲು ಅವಕಾಶವಿದೆ. ಇದನ್ನು 24 ವಾರಗಳಿಗೆ ಅಂದರೆ ಸುಮಾರು 6 ತಿಂಗಳಿಗೆ ಹೆಚ್ಚಳ ಮಾಡಲು ಮುಂದಾಗಿದೆ. ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ಕಾಯ್ದೆ (1971)ಗೆ ತಿದ್ದುಪಡಿ ತರಲು ಹಾಗೂ ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ (ತಿದ್ದುಪಡಿ) ಮಸೂದೆ, 2020ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ. ಸಂಪುಟ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಗರ್ಭಪಾತಕ್ಕೆ ಅನುಮತಿ ನೀಡುವ ಮಿತಿಯನ್ನು ಪ್ರಸ್ತುತ 20 ವಾರಗಳಿಂದ 24 ವಾರಗಳವರೆಗೆ ಹೆಚ್ಚಿಸಲಾಗಿದೆ. ಇದರಿಂದ ಗರ್ಭಿಣಿಯ ಆರೋಗ್ಯ ಮತ್ತು ಅಂತಹ ಮಹಿಳೆಯರಿಗೆ ಅವರ ದೇಹದ ಮೇಲೆ ಸಂತಾನೋತ್ಪತ್ತಿ ಹಕ್ಕನ್ನು ನೀಡುತ್ತದೆ ಎಂದು ಅವರು ಹೇಳಿದರು. 24 ವಾರಗಳವರೆಗೆ ಮಹಿಳೆಗೆ ಗರ್ಭಪಾತಕ್ಕೆ ಅನುಮತಿ ನೀಡುತ್ತಿರುವುದರಿಂದ ಅತ್ಯಾಚಾರಕ್ಕೆ ಒಳಗಾದವರು, ವಿಕಲಾಂಗ ಬಾಲಕಿಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಸಹಾಯವಾಗುತ್ತದೆ. ಇಂತಹವರಿಗೆ ಕೆಲವೊಮ್ಮೆ ತಾವು ಗರ್ಭಿಣಿಯಾಗಿದ್ದಾರೆಂದು ಎಷ್ಟೋ ತಿಂಗಳವರೆಗೆ ತಿಳಿದಿರುವುದಿಲ್ಲ ಎಂದೂ ಪ್ರಕಾಶ್‌ ಜಾವ್ಡೇಕರ್ ಹೇಳಿದರು. ಪ್ರಗತಿಪರ ಸುಧಾರಣೆ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವ ಸಂಬಂಧ ಗರ್ಭಪಾತದ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲಾಗಿದೆ. ಏಕೆಂದರೆ ಮೊದಲ 5 ತಿಂಗಳಲ್ಲಿ ಸಂಬಂಧಪಟ್ಟ ತನಗೆ ಅರಿವಿಗೆ ಬರದಂತಹ ಅನೇಕ ಪ್ರಕರಣಗಳಿವೆ. ಇಂತಹ ಕೇಸ್‌ಗಳಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ಹಲವರ ಜತೆ ಚರ್ಚೆ ನಡೆಸಿರುವುದಾಗಿಯೂ ಪ್ರಕಾಶ್‌ ಜಾವಡೇಕರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಲ್ಲದೆ, ಇದರಿಂದ ತಾಯಿಯ ಮರಣ ಪ್ರಮಾಣ ಕಡಿಮೆ ಮಾಡುತ್ತದೆ ಎಂದೂ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ತಿಳಿಸಿದರು.


from India & World News in Kannada | VK Polls https://ift.tt/2GwFB1p

ಸೂಪರ್‌ ಓವರ್‌ನಲ್ಲಿ ಗೆಲ್ಲಲು ಟೀಮ್‌ ಇಂಡಿಯಾದ ಮಾಸ್ಟರ್‌ ಪ್ಲ್ಯಾನ್‌ ವಿವರಿಸಿದ ಹಿಟ್‌ಮ್ಯಾನ್‌

ಹ್ಯಾಮಿಲ್ಟನ್‌: ಅಬ್ಬಾ.. ಅದ್ಭುತ ಪಂದ್ಯ. ಕ್ಷಣ ಕ್ಷಣಕ್ಕೂ ವಿಜಯ ಲಕ್ಷ್ಮಿ ಅತ್ತಿಂದಿತ್ತ ಚಂಚಲೆಯಂತೆ ಓಡಾಡುತ್ತಿದ್ದ ಪಂದ್ಯದಲ್ಲಿ ಯಾರು ಗೆಲ್ಲುತ್ತಾರಪ್ಪಾ ಎಂದು ಅಭಿಮಾನಿಗಳು ಬಕ ಪಕ್ಷಿಗಳಂತೆ ಎದುರು ನೋಡುವಂತಾಗಿತ್ತು. ಮೊದಲಿಗೆ ಪಂದ್ಯದ ಅದ್ಭುತ ರೀತಿಯಲ್ಲಿ ಟೈ ಆದರೆ, ನಂತರದ ಫಲಿತಾಂಶಕ್ಕಾಗಿ ನಡೆದ ಸೂಪರ್‌ ಓವರ್‌ ಕಾದಾಟ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನಷ್ಟೇ ಅಲ್ಲ ವಿಶ್ವದ ವಿವಿಧ ಭಾಗಗಳಲ್ಲಿ ಟೆಲಿವಿಷನ್‌ ಮುಂದಿದ್ದ ವೀಕ್ಷಕರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಸೂಪರ್‌ ಓವರ್‌ನ ಕೊನೆಯ 2 ಎಸೆತಗಳಲ್ಲಿ ಭಾರತಕ್ಕೆ 10 ರನ್‌ ಬೇಕಿದ್ದ ಸಂದರ್ಭದಲ್ಲಿ ಸ್ಟ್ರೈಕ್‌ನಲ್ಲಿದ್ದ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಬಾರಿಸಿ ಭಾರತಕ್ಕೆ ಜಯ ತಂದುಕೊಡುತ್ತಾರೆಂದು ಯಾರೊಬ್ಬರೂ ಅಂದಾಜಿಸಿರಲಿಕ್ಕಿಲ್ಲ. ಅಂದಹಾಗೆ ಇಂಥದ್ದೊಂದ ಸಂದರ್ಭದಲ್ಲಿ ಭಾರತದ ಪರ ಟಿ20-ಐನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಹೊಂದಿರುವ ರೋಹಿತ್‌ ಸ್ಟ್ರೈಕ್‌ನಲ್ಲಿ ಇದ್ದದ್ದು ಟೀಮ್‌ ಇಂಡಿಯಾದ ಅದೃಷ್ಟವೇ ಸರಿ ಎನ್ನಬಹುದು. ಅಂದಹಾಗೆ ಪಂದ್ಯದಲ್ಲಿ ಇತ್ತಂಡಗಳು ತಮ್ಮ ಪಾಲಿನ 20 ಓವರ್‌ಗಳಲ್ಲಿ 179 ರನ್‌ಗಳನ್ನು ಗಳಿಸಿದ್ದರಿಂದ ಪಂದ್ಯ ಟೈ ಆದ ಸಂದರ್ಭದಲ್ಲಿ ಫಲಿತಾಂಶಕ್ಕಾಗಿ ಸೂಪರ್‌ ಓವರ್‌ ನಡೆಸಲಾಗಿತ್ತು ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 6 ಎಸೆತಗಳಲ್ಲಿ 17 ರನ್‌ ಬಾರಿಸಿ ಭಾರತಕ್ಕೆ 18 ರನ್‌ಗಳ ಕಠಿಣ ಗುರಿಯನ್ನೇ ನೀಡಿತ್ತು. ಆದರೆ, ಗುರಿ ಬೆನ್ನತ್ತಿದ ಭಾರತ ತಂಡ ರೋಹಿತ್‌ ಶರ್ಮಾ ಅವರ 4 ಎಸೆತಗಳಲ್ಲಿ ಅಜೇಯ 15 ರನ್‌ಗಳ ನೆರವಿನಿಂದ 6 ಎಸೆತಗಳಲ್ಲಿ 20 ರನ್‌ ಬಾರಿಸಿ ಜಯ ದಕ್ಕಿಸಿಕೊಂಡಿತು. ಅವರಿಗೆ (5*) ಉತ್ತಮ ಸಾಥ್‌ ನೀಡಿದರು. ಒತ್ತಡದ ಸಂದರ್ಭದಲ್ಲಿ ಸತತ 2 ಸಿಕ್ಸರ್‌ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟ ರೋಹಿತ್‌ ಶರ್ಮಾ, ಸೂಪರ್‌ ಓವರ್‌ನಲ್ಲಿ ಅನುಸರಿಸಿದ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ಪಂದ್ಯದ ಬಳಿಕ ವಿವರಿಸಿದರು. "ಸೂಪರ್‌ ಓವರ್‌ನಲ್ಲಿ ಈ ಹಿಂದೆ ಆಡಿಲ್ಲ. ಮೊದಲ ಎಸೆತದಿಂದಲೇ ಹೊಡೆಯಬೇಕೆ ಅಥವಾ ಸೂಕ್ತ ಎಸೆತಗಳಿಗೆ ಕಾಯಬೇಕೆ ಯಾವುದೂ ತಿಳಿಯಲಿಲ್ಲ. ಆದರೂ ಭದ್ರವಾಗಿ ನೆಲೆನಿಂತು ನನ್ನಿಂದ ಸಾಧ್ಯವಾದ ಪ್ರಯತ್ನ ನಡೆಸಲು ಪ್ರಯತ್ನಿಸಿದೆ ಅಷ್ಟೇ. ಬ್ಯಾಟಿಂಗ್‌ನಲ್ಲಿ ನೀಡಿದ ಪ್ರದರ್ಶನ ತೃಪ್ತಿ ನೀಡಿದೆ. ಆದರೆ ನನ್ನ ವಿಕೆಟ್‌ ಕೈಚೆಲ್ಲಿದ ರೀತಿ ಬೇಸರ ತಂದಿತು. ಇನ್ನು ಸ್ವಲ್ಪ ಹೊತ್ತು ಆಡಿದ್ದರೆ ಉತ್ತಮವಾಗಿರುತ್ತಿತ್ತು. ಸರಣಿಯ ಮೊದಲ 2 ಪಂದ್ಯಗಳಲ್ಲಿ ನಾನು ರನ್‌ ಗಳಿಸಿಲ್ಲ. ಆದರೆ ಇಂದು ಆಡಬೇಕೆಂದು ನಿರ್ಧರಿಸಿದ್ದೆ. ಇಂದು ಗೆದ್ದರೆ ಸರಣಿ ನಮ್ಮದು ಎಂಬುದನ್ನು ತಿಳಿದಿದ್ದೆವು. ಇಂತಹ ಮಹತ್ವದ ಪಂದ್ಯಗಳಲ್ಲಿ ತಂಡದ ಪ್ರಮುಖ ಆಟಗಾರರು ಉತ್ತಮವಾಗಿ ಆಡಬೇಕು," ಎಂದು ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂಕ್ಷಿಪ್ತ ಸ್ಕೋರ್‌ಭಾರತ: 20 ಓವರ್‌ಗಳಲ್ಲಿ 179/5 (ರೋಹಿತ್‌ ಶರ್ಮಾ 65, ಕೆಎಲ್‌ ರಾಹುಲ್‌ 27, ವಿರಾಟ್ ಕೊಹ್ಲಿ 38; ಹ್ಯಾಮಿಶ್‌ ಬೆನೆಟ್‌ 54ಕ್ಕೆ 3, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌ 13ಕ್ಕೆ 1). ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 179/6 (ಮಾರ್ಟಿನ್‌ ಗಪ್ಟಿಲ್‌ 31, ಕೇನ್‌ ವಿಲಿಯಮ್ಸನ್‌ 95; ಶಾರ್ದುಲ್‌ ಠಾಕೂರ್‌ 21ಕ್ಕೆ 2, ಮೊಹಮ್ಮದ್‌ ಶಮಿ 32ಕ್ಕೆ 2). ಸೂಪರ್‌ ಓವರ್‌ ವಿವರನ್ಯೂಜಿಲೆಂಡ್‌: 17/0 (ಕೇನ್‌ ವಿಲಿಯಮ್ಸನ್‌ 12*, ಮಾರ್ಟಿನ್‌ ಗಪ್ಟಿಲ್‌ 5*). ಭಾರತ: 20/0 (ರೋಹಿತ್‌ ಶರ್ಮಾ 15*, ಕೆಲ್‌ ರಾಹುಲ್‌ 5*).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38Stw2n

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...