ಕೃಷ್ಣನ ಪಾದ ಸೇರಿದ ಪೇಜಾವರ ಶ್ರೀ : ರಾಹುಲ್ ಗಾಂಧಿ ಸಂತಾಪ

ಹೊಸದೆಹಲಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನಿಧನಕ್ಕೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ ಅವರು ಸ್ವಾಮೀಜಿ ನಿಧನ ದುಖಃ ತಂದಿದೆ ಎಂದಿದ್ದಾರೆ. “ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನಿಧನದ ಸುದ್ದಿ ಕೇಳಿ ಅಘಾತವಾಯಿತು. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಈ ದುಖಃವನ್ನು ಭರಿಸುವ ಶಕ್ತಿ ಪ್ರಪಂಚದಾದ್ಯಂತ ಇರುವ ಅವರ ಭಕ್ತಾಧಿಗಳಿಗೆ ನೀಡಲಿ” ಎಂದು ಟ್ವೀಟ್ ಮಾಡಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ವಿಧಿವಶರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಂತ್ಯಸಂಸ್ಕಾರ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ತಯಾರಿಗಳನ್ನು ಮಾಡಲಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಗಳ ಅಂತ್ಯ ಸಂಸ್ಕಾರ ಬೆಂಗಳೂರಿನ ವಿದ್ಯಾಪೀಠದಲ್ಲಿ ನೆರವೇರಲಿದೆ.


from India & World News in Kannada | VK Polls https://ift.tt/39fy7Nc

ನನ್ನ ಮಾತನ್ನು ಸಂದರ್ಭಾತೀತವಾಗಿ ಬಳಸಲಾಗಿದೆ: ಶೋಯೆಬ್ ಅಖ್ತರ್

ಲಾಹೋರ್: ಹಿಂದೂ ಎಂಬ ಕಾರಣಕ್ಕೆ ಮಾಜಿ ಲೆಗ್ ಸ್ಪಿನ್ನರ್ ಮೇಲೆ ತಾರತಮ್ಯ ಎಸಗಲಾಗುತ್ತಿತ್ತು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ವೇಗದ ಬೌಲರ್ ಮತ್ತಷ್ಟು ಸ್ಪಷ್ಟನೆಯೊಂದಿಗೆ ಮುಂದೆ ಬಂದಿದ್ದಾರೆ. ಅಲ್ಲದೆ ತಮ್ಮ ಮಾತನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದು ಹೇಳಿದ್ದಾರೆ. ಕಳೆದೆರಡು ದಿನಗಳಲ್ಲಿ ತಮ್ಮ ಹೇಳಿಕೆಗಳ ಬಗ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಗಮನಿಸುತ್ತಲೇ ಇದ್ದೇನೆ. ಆದರೆ ಧರ್ಮದ ಆಧಾರದಲ್ಲಿ ಆಟಗಾರರನ್ನು ತಾರತಮ್ಯ ಮಾಡುವ ಸಂಸ್ಕೃತಿ ತಂಡದಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಕಳೆದ ಗುರುವಾರ ಖಾಸಗಿ ಸಂದರ್ಶನವೊಂದರಲ್ಲಿ ದನೀಶ್ ಕನೇರಿಯಾ ಹಿಂದೂ ಆಗಿರುವ ಕಾರಣ ತಾರತಾಮ್ಯ ಎಸಗಲಾಗಿತ್ತು ಎಂದು ಹೇಳಿದ್ದರು. ಆದರೆ ಕೆಲವು ಆಟಗಾರರು ಮಾತ್ರ ಈ ರೀತಿಯ ವರ್ತನೆ ಮಾಡಿದ್ದರು. ಅಂತಹ ಆಟಗಾರರನ್ನು ತಂಡದಿಂದ ತೆಗೆದು ಹೊರಹಾಕುವೆ ಎಂದಿದ್ದೆ ಎಂದು ಅಖ್ತರ್ ತಿಳಿಸಿದರು. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಖ್ತರ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೂ ನಾವು ಗೌರವ ಸಲ್ಲಿಸಬೇಕು. ಆದರೆ ಕೆಲವು ಆಟಗಾರರು ತಾರತಮ್ಯ ತೋರಿದ್ದರು. ಇದು ನಮ್ಮ ತಂಡದ ನಡವಳಿಕೆಯ ವಿರುದ್ಧವಾಗಿತ್ತು. ಒಂದಿಬ್ಬರು ಆಟಗಾರರು ತಾರತಮ್ಯ ತೋರಿದ್ದರು. ಇಂತಹ ಆಟಗಾರರು ವಿಶ್ವದೆಲ್ಲೆಡೆ ಇರುತ್ತಾರೆ ಎಂದು ವಿವರಿಸಿದರು. ಸಮಾಜದ ಭಾಗವಾಗಿ ನಾವಿದ್ದನ್ನು ತೆಗೆದು ಹಾಕಬೇಕು. ಇಂತಹ ಮಾತುಗಳನ್ನು ಆಡಿದರೆ ತೆಗೆದು ಹೊರಗೆಸೆಯುವೆ ಎಂದು ನಾನು ಹೇಳಿದ್ದೆ. ಯಾಕೆಂದರೆ ಇದು ನಮ್ಮ ತಂಡದ ಸಂಸ್ಕೃತಿಯ ಭಾಗವಾಗಿರಲಿಲ್ಲ. ನಾವೊಂದು ರಾಷ್ಟ್ರದ ಭಾಗವಾಗಿ ಇಂತಹ ತಾರತಮ್ಯಗಳಿಗೆ ಆಸ್ಪದ ನೀಡಲಿಲ್ಲ. ಇದು 15 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದು, ಅಲ್ಲಿಗೆ ವಿರಾಮ ಹಾಕಿದ್ದೆ ಎಂದು ಹೇಳಿದರು. ದನೀಶ್ ಕನೇರಿಯಾ ಪಾಕಿಸ್ತಾನಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪರ 10 ವರ್ಷಗಳಷ್ಟು ಕಾಲ ಆಡಿದ್ದಾರೆ. ಅವರನ್ನು ತಂಡದಿಂದ ಪಾಕಿಸ್ತಾನ ಹೊರದಬ್ಬಲಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸ್ಪಾಟ್ ಫಿಕ್ಸಿಂಗ್ ಸಂಬಂಧ ಆಜೀವ ನಿಷೇಧ ಹೇರಿತ್ತು ಎಂದು ಅಖ್ತರ್ ಸೇರಿಸಿದರು. ಈ ಮೊದಲು ಅಖ್ತರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದನೀಶ್ ಕನೇರಿಯಾ, ಶೋಯೆಬ್‌ ಅಖ್ತರ್‌ ಮಾಡಿರುವ ಆರೋಪದಲ್ಲಿಸತ್ಯಾಂಶವಿದೆ. ಆದರೆ, ಈ ವಿಷಯಕ್ಕೆ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಹೇಳಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Q5OHrl

ಸಚಿನ್ ಮೊದಲ ವಿಕೆಟ್; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪೀಟರ್ ಸಿಡ್ಲ್ ನಿವೃತ್ತಿ

ಮೆಲ್ಬೋರ್ನ್: ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲರ್‌ಗಳಲ್ಲಿ ಓರ್ವರಾಗಿರುವ ಆಸ್ಟ್ರೇಲಿಯಾದ , ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35ರ ಹರೆಯದ ಸಿಡ್ಲ್ 67 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 221 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗಿದ್ದರೂ ಅಯ್ದ ಟ್ವೆಂಟಿ-20 ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ವಿಕ್ಟೋರಿಯಾ ಪರ ಆಡುವುದನ್ನು ಸಿಡ್ಲ್ ಮುಂದುವರಿಸಲಿದ್ದಾರೆ. ಹಾಗೆಯೇ ಇಂಗ್ಲಿಷ್ ಕೌಂಟಿಯಲ್ಲಿ ಎಸ್ಸೆಕ್ಸ್ ತಂಡದ ಪರ ತಮ್ಮ ಸೇವೆಯನ್ನು ನೀಡಲಿದ್ದಾರೆ. 2008ರಲ್ಲಿ ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿರುವ ಸಿಡ್ಲ್, ಅಂದಿನ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೊರದಬ್ಬುವ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಸಾಧನೆ ಮಾಡಿದ್ದರು. 2010ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಆ್ಯಶಸ್ ಟೆಸ್ಟ್ ಸರಣಿಯ ಪಂದ್ಯದಲ್ಲಿ ತಮ್ಮ 26ನೇ ಹುಟ್ಟುಹಬ್ಬದಂದೇ ಸಿಡ್ಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನ ಆಲಿಸ್ಟಾರ್ ಕುಕ್, ಮ್ಯಾಟ್ ಪ್ರಯರ್ ಹಾಗೂ ಸ್ಟುವರ್ಟ್ ಬ್ರಾಡ್ ಹೊರದಬ್ಬಿದ ಸಿಡ್ಲ್, ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಒಂಬತ್ತನೇ ಬೌಲರ್ ಎಂಬ ಹಿರಿಮೆಗೆ ಭಾಜನವಾದರು. ಟೆಸ್ಟ್ ಸ್ಪೆಷಲಿಸ್ಟ್ ಬೌಲರ್ ಎನಿಸಿಕೊಂಡಿರುವ ಸಿಡ್ಲ್, ಸುದೀರ್ಘ ಸ್ಪೆಲ್ ಎಸೆಯುವುದರಲ್ಲಿ ಹೆಸರು ವಾಸಿಯಾಗಿದ್ದರು. ಆದರೂ ಇತರೆ ವೇಗಿಗಳಂತೆಯೇ ಗಾಯದ ಸಮಸ್ಯೆಯು ಪದೇ ಪದೇ ಕಾಡಿತ್ತು. ಗ್ಲೆನ್ ಮೆಕ್‌ಗ್ರಾಥ್ ಮುಂತಾದ ದಿಗ್ಗಜರ ನಿವೃತ್ತಿಯ ಬಳಿಕ ಟೆಸ್ಟ್‌ನಲ್ಲಿ ಆಸೀಸ್ ವೇಗದ ಪಡೆದ ಜವಾಬ್ದಾರಿಯನ್ನು ವಹಿಸಿದ್ದರು. ಆದರೆ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಪ್ರಗತಿಯ ಬಳಿಕ ನಿಧಾನವಾಗಿ ಮೂಲೆಗುಂಪಾಗಿದ್ದರು. ಪೀಟರ್ ಸಿಡ್ಲ್ ವೃತ್ತಿ ಜೀವನ ಟೆಸ್ಟ್: ಪಂದ್ಯ: 67 ಇನ್ನಿಂಗ್ಸ್: 94 ರನ್: 1164 ಗರಿಷ್ಠ: 51 ಅರ್ಧಶತಕ: 2 ವಿಕೆಟ್: 221 ಅತ್ಯುತ್ತಮ ಬೌಲಿಂಗ್: 54/6 5 ವಿಕೆಟ್: 8 ಏಕದಿನ: ಪಂದ್ಯ: 20 ರನ್: 31 ವಿಕೆಟ್: 17 ಅತ್ಯುತ್ತಮ ಬೌಲಿಂಗ್: 55/3 ಪೀಟರ್ ಸಿಡ್ಲ್ ಹ್ಯಾಟ್ರಿಕ್ ಸಾಧನೆ: ಇಲ್ಲಿದೆ ವೀಡಿಯೋ ಪೀಟರ್ ಸಿಡ್ಲ್ ಗುಡ್ ಬೈ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QubRqj

ನಿವೃತ್ತಿ ಬಗ್ಗೆ ಮಹೇಂದ್ರ ಸಿಂಗ್ ಧೋನಿ ಜತೆ ಸೌರವ್ ಗಂಗೂಲಿ ಚರ್ಚೆ ನಡೆಸಿಲ್ಲವಂತೆ!

ಹೊಸದಿಲ್ಲಿ: ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌‌ಮನ್ , ಪುನರಾಗಮನ ಮಾಡುವರೇ? ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುವರೇ? ಎಂಬುದು ಬಹಳಷ್ಟು ವದಂತಿಗಳಿಗೆ ಕಾರಣವಾಗಿದೆ. ಈ ಎಲ್ಲದರ ಮಧ್ಯೆ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷರಾದ ಬಳಿಕ ಪದೇ ಪದೇ ಇದೇ ಪ್ರಶ್ನೆಗಳು ಪುನರಾವರ್ತನೆಯಾಗುತ್ತಿದೆ. ಈ ಬಗ್ಗೆ ಮಗದೊಮ್ಮೆ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಇವೆಲ್ಲವೂ ಧೋನಿಗೆ ಬಿಟ್ಟ ನಿರ್ಧಾರ. ವೈಯಕ್ತಿಕ ನಿರ್ಣಯ. ನನಗೆ ಗೊತ್ತಿಲ್ಲ. ನಾನು ಅವರ ಜತೆ ಮಾತುಕತೆ ನಡೆಸಿಲ್ಲ. ಆದರೆ ಅವರೊಬ್ಬ ಚಾಂಪಿಯನ್ ಆಟಗಾರ" ಎಂದು ಗಂಗೂಲಿ ಅಭಿಪ್ರಾಯಪಟ್ಟರು. "ನಾಯಕನ ಜತೆಗೆ ಧೋನಿ ಸಂಪರ್ಕದಲ್ಲಿದ್ದಾರೆ. ಆಯ್ಕೆ ಸಮಿತಿ ಜತೆಗೂ ಸಂಪರ್ಕದಲ್ಲಿದ್ದಾರೆ ಎಂದು ಭಾವಸಿದ್ದೇನೆ. ಈ ಬಗ್ಗೆ ಈ ವೇದಿಕೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ" ಎಂದು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಗಂಗೂಲಿ ತಿಳಿಸಿದರು. "ಮಹೇಂದ್ರ ಸಿಂಗ್ ಧೋನಿ ಚಾಂಪಿಯನ್ ಆಟಗಾರ. ಭಾರತೀಯ ಕ್ರಿಕೆಟ್‌ಗೆ ಮಗದೊಬ್ಬ ಎಂಎಸ್ ಧೋನಿ ಬೇಗನೇ ಸಿಗಲಾರದು. ಆದರೆ ಆಡಬೇಕೇ ಬೇಡವೇ ಎಂಬುದು ಅವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಚಾರ" ಎಂದು ಸೇರಿಸಿದರು. ಈ ಹಿಂದೆ ಸಂದರ್ಶನವೊಂದರಲ್ಲಿ 38ರ ಹರೆಯದ ಧೋನಿ ಕೂಡಾ ಜನವರಿ (2020) ವರೆಗೂ ಏನನ್ನೂ ಪ್ರಶ್ನಿಸಬಾರದು ಎಂದು ಹೇಳಿದ್ದರು. ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಪಾಲಿಗೆ ನಿರ್ಣಾಯಕವೆನಿಸಲಿದೆ. ಈ ಬಗ್ಗೆ ಕೋಚ್ ರವಿ ಶಾಸ್ತ್ರಿ ಕೂಡಾ ಹೇಳಿಕೆ ನೀಡಿದ್ದರು. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ಧೋನಿ ಭವಿಷ್ಯದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದರು. ಇದೀಗ ಧೋನಿ ಭವಿಷ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. ಆದರೂ ಧೋನಿ ಭವಿಷ್ಯದ ಬಗ್ಗೆ ಆಯ್ಕೆ ಸಮಿತಿ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್, ಕೋಚ್ ಹಾಗೂ ನಾಯಕನಿಗೆ ಸ್ಪಷ್ಟತೆಯಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SCjKg2

ನಿಖತ್ ಜರೀನ್‌ಗೆ ಪಂಚ್ ನೀಡಿದ ಚಾಂಪಿಯನ್ ಮೇರಿ ಕೋಮ್‌ ಒಲಿಂಪಿಕ್ ಕ್ವಾಲಿಫೈಯರ್‌ಗೆ ಲಗ್ಗೆ!

ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಭಾರತದ ಹೆಮ್ಮೆಯ , ಮುಂದಿನ ವರ್ಷ ನಡೆಯಲಿರುವ ಕ್ವಾಲಿಫೈಯರ್‌ಗೆ ಅರ್ಹತೆಯನ್ನು ಪಡೆದಿದ್ದಾರೆ. ಮೆರಿ ಕೋಮ್ ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿದ್ದಕ್ಕಾಗಿ ಕೋಪಿಸಿಕೊಂಡಿದ್ದ , ಚಾಂಪಿಯನ್ ಆಟಗಾರ್ತಿಯ ವಿರುದ್ಧ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಭಾರತ ಬಾಕ್ಸಿಂಗ್ ಫೇಡರ‌ೇಷನ್‌ನಲ್ಲಿ ಕೋರಿಕೊಂಡಿದ್ದರು. ಇದರಂತೆ ನಿಖತ್ ಜರೀನ್ ಆಸೆಯು ಈಡೇರಿದೆ. ಒಲಿಂಪಿಕ್ ಕ್ವಾಲಿಫೈಯರ್ಸ್ ಬಾಕ್ಸಿಂಗ್ ಟ್ರಯಲ್ಸ್‌ನ ಫೈನಲ್ ಮುಖಾಮುಖಿಯಲ್ಲಿ ಮೇರಿ ಕೋಮ್, 9-1ರ ಅಂತರದಲ್ಲಿ ನಿಖತ್ ಜರೀನ್ ವಿರುದ್ಧ ಗೆಲುವು ಬಾರಿಸಿದರು. ಈ ಮೂಲಕ 2020ರ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯಾ/ಒಷೇನಿಯಾ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೊದಲು ಶುಕ್ರವಾರ ನಡೆದ 51 ಕೆ.ಜಿ ವಿಭಾಗದ ಹಣಾಹಣಿಗಳಲ್ಲಿ ಮೇರಿ ಕೋಮ್ ಅವರು ರೀತು ಗುರೇವಾಲ್ ವಿರುದ್ಧ ಮತ್ತು ನಿಖರ್ ಜರೀನ್ ಅವರು ರಾಷ್ಟ್ರೀಯ ಚಾಂಪಿಯನ್ ಜ್ಯೋತಿ ಗುಲಿಯಾ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದರು. ಏತನ್ಮಧ್ಯೆ ಪಂದ್ಯ ಮುಗಿದ ಬಳಿಕ ನಿಖತ್ ಜರೀನ್ ಜತೆಗೆ ಹಸ್ತಲಾಘವ ಮಾಡಲು ಮೇರಿ ಕೋಮ್ ನಿರಾಕರಿಸಿದರು. "ನಾನ್ಯಾಕೆ ಆಕೆಯ ಜತೆ ಶೇಕ್ ಹ್ಯಾಂಡ್ ಮಾಡಲಿ? ಹಾಗೊಂದು ವೇಳೆ ಅವಳನ್ನು ಗೌರವಿಸಬೇಕೆಂದು ಅವಳು ಬಯಸಿದರೆ ಮೊದಲು ಅವಳು ಇತರರನ್ನು ಗೌರವಿಸಬೇಕು. ಇಂತಹ ವ್ಯಕ್ತಿತ್ವದ ವ್ಯಕ್ತಿಗಳನ್ನು ನನಗಿಷ್ಟವಿಲ್ಲ. ನಿಮ್ಮ ಸಾಮರ್ಥ್ಯವನ್ನು ರಿಂಗ್‌ನೊಳಗೆ ಸಾಬೀತು ಮಾಡಬೇಕು, ಹೊರಗಡೆಯಲ್ಲ" ಎಂದು ಆಕ್ರೋಶಭರಿತವಾಗಿ ನುಡಿದರು. "ನಾನು ಸ್ವಲ್ಪ ಕೋಪಗೊಂಡಿದ್ದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಈಗ ಎಲ್ಲವೂ ಮುಗಿದಿದೆ. ನಾನು ಮುಂದುವರಿದಿದ್ದೇನೆ. ನಾನು ಹೇಳುವುದೇನೆಂದರೆ ಪ್ರದರ್ಶನ ನೀಡಿದ ಮೇಲೆ ಮಾತನಾಡು. ಅದಕ್ಕಿಂತಲೂ ಮೊದಲಲ್ಲ. ನೀವು ರಿಂಗ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂಬುದನ್ನು ಪ್ರತಿಯೊಬ್ಬರೂ ನೋಡುತ್ತಿದ್ದಾರೆ" ಎಂದರು. ಇನ್ನೊಂದೆಡೆ ಮೇರಿ ಕೋಮ್ ಅವರ ನಡವಳಿಕೆಯಿಂದ ನೋವಾಗಿದೆ ಎಂದಿರುವ ನಿಖರ್ ಜರೀನ್, ರಿಂಗ್‌ನೊಳಗೆ 'ಫೌಲ್ ಭಾಷೆ' ಬಳಕೆ ಮಾಡಿದ್ದರು ಎಂದು ಆರೋಪಿಸಿದರು. "ನಿರ್ಧಾರವನ್ನು ಘೋಷಿಸಿದಾಗ ನಾನು ಆಕೆಯನ್ನು ತಬ್ಬಿಕೊಳ್ಳಲು ಬಯಸಿದ್ದೆ. ಆದರೆ ಅವಳು ನನ್ನನ್ನು ತಬ್ಬಿಕೊಳ್ಳಲಿಲ್ಲ. ಕಿರಿಯಳಾಗಿ ಹಿರಿಯರು ಕಿರಿಯರನ್ನು ಗೌರವಿಸಬೇಕೆಂದು ಬಯಸುತ್ತೇನೆ. ಆಕೆ ನನ್ನನ್ನು ತಬ್ಬಿಕೊಳ್ಳಲಿಲ್ಲ. ಇದರಿಂದ ನೋವಾಗಿದೆ" ಎಂದು ಹೇಳಿದರು. ರೆಫರಿ ತೀರ್ಪಿನ ವಿರುದ್ಧ ತೆಲಂಗಾಣ ಫೆಡರೇಷನ್ ಆಫ್ ಇಂಡಿಯಾ ವ್ಯಾಪಕ ಪ್ರತಿಭಟನೆಯನ್ನು ನಡೆಸಿತ್ತು. ಇಂತಹ ರಾಜಕೀಯ ನಡದರೆ ಬಾಕ್ಸಿಂಗ್ ಬೆಳವಣಿಗೆ ಸಾಧಿಸಲು ಹೇಗೆ ಸಾಧ್ಯ ಎಂದು ಪ್ರತಿನಿಧಿ ಎಪಿ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಪರಿಸ್ಥಿತಿ ನಿಯಂತ್ರಿಸಿದ ಬಾಕ್ಸಿಂಗ್ ಫೇಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಅಜಯ್ ಸಿಂಗ್, ಕೋರ್ಟ್ ಬಿಟ್ಟು ತೆರಳುವಂತೆ ಸೂಚಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZvIfNm

ಭಾರತ ಧರ್ಮಾಧಾರಿತ ರಾಷ್ಟ್ರವಾದರೆ ಅಸ್ಪೃಶ್ಯರ ಪಾತ್ರವೇನು? ಆರ್ ಬಿ ತಿಮ್ಮಾಪುರ ಬಹಿರಂಗ ಪ್ರಶ್ನೆ

ಬಾಗಲಕೋಟೆ: ಭಾರತವನ್ನು ಧರ್ಮ ಆಧಾರಿತ ರಾಷ್ಟ್ರ ಮಾಡುವುದಾದರೆ, ಇಲ್ಲಿ ಅಸ್ಪೃಶ್ಯರ ಪಾತ್ರವೇನು‌‌? ಎಂದು ಮಾಜಿ ಸಚಿವ ಅವರು ಆರ್‌ಎಸ್ಎಸ್ ಮತ್ತು ಬಿಜೆಪಿಗೆ ಬಹಿರಂಗ ಪ್ರಶ್ನೆ ಹಾಕಿದ್ದಾರೆ. ಬಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಉಡುಪಿ ಮಠದಲ್ಲಿ ಪ್ರಧಾನಿ ಮತ್ತು ರಾಜ್ಯದ ಸಿಎಂ ಅವರು ಸಾಧ್ಯವಾದರೆ ಸಹಪಂಕ್ತಿ ಭೋಜನ ಮಾಡಿಸಲಿ. ಆರ್‌ಎಸ್‌ಎಸ್‌ ಸಹಪಂಕ್ತಿ ಭೋಜನ ಮಾಡಿಸಲಿ ಎಂದು ಸವಾಲು ಹಾಕಿದರು. ಹಿಂದೂ ರಾಷ್ಟ್ರ ಮಾಡೋದಾದರೆ, ಅಸ್ಪೃಶ್ಯತೆಯನ್ನು ಎಂದು ಹೋಗಲಾಡಿಸ್ತೀರಿ? ನೀವೆಲ್ಲ ಧರ್ಮದ ಹೆಸರಿನಲ್ಲಿ ಒಡೆದು ಆಳುವ ನೀತಿ ಅನುಸರಿಸ್ತೀದ್ದಿರಿ ಎಂದು ಆರ್ ಎಸ್ ಎಸ್ ಮತ್ತು ಬಿಜೆಪಿಗೆ ತಿಮ್ಮಾಪುರ ಅವರು ಟಾಂಗ್ ನೀಡಿದರು. ಯೇಸು ಕ್ರಿಸ್ತನ ಮೂರ್ತಿ ಪ್ರತಿಷ್ಠಾಪಿಸಿದ್ರೆ ಇವರಿಗೇನು ನಷ್ಟ? ರಾಮಮಂದಿರ ಕಟ್ಟಿದ್ರೆ ನಮಗೇನು ಲಾಭ? ನಾವು (ದಲಿತರು) ಊರು ಹೊರಗೆ ಇರೋರು ನಮಗೇನು ಲಾಭ? ಎಷ್ಟೋ ಜಾತಿಗಳಿಗೆ ರಾಮಮಂದಿರದಿಂದಾಗುವ ಲಾಭವೇನು? ಧರ್ಮದಲ್ಲಿ ಜಾತಿಯ ಸ್ಥಾನಮಾನ ಸರಿದೂಗಿಸದಿದ್ರೆ ಗುಂಡೂರಾವ್ ಮಾತು ನಿಜವಾಗುತ್ತೆ? ಮೂರು ಸಾವಿರಮಠ ಮೂರು ಮಠ ಆಗುತ್ತೆ ಅಂತ ಗುಂಡೂರಾವ್ ಹೇಳಿದ್ರು. ಆರ್ ಎಸ್ ಎಸ್ ನವರು ಎಲ್ಲಾ ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗ್ಬೇಕು. ಆರ್ ಎಸ್ ಎಸ್ ನವರು ನಕಲಿ ದೇಶಭಕ್ತರು. ಆರ್ ಎಸ್ ಎಸ್ ನವರು ದೇಶಭಕ್ತರಲ್ಲ, ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧೀಜಿ ಫೋಟೋಗೆ ಗುಂಡು ಹಾಕಿದ ಎಂಪಿಗಳಿಗೆ ಏನು ಕ್ರಮಕೈಗೊಂಡಿಲ್ಲ. ಮಹಾತ್ಮಾ ಗಾಂಧಿ ಗಿಂತ ನಾಥೂರಾಮ್ ಗೋಡ್ಸೆ ಶ್ರೇಷ್ಠ ಎಂದವರ ಮೇಲೂ ಕ್ರಮ ಇಲ್ಲ. ಸಂವಿಧಾನದ ಬಗ್ಗೆ ಮಾತನಾಡಿದವರ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಅಸ್ಪೃಶ್ಯತೆ ಹೋಗಲಾಡಿಸಲು ಆರ್ ಎಸ್ ಎಸ್ ಪಾತ್ರವೇನು ಮೋಹನ್ ಭಾಗವತ್ ಸ್ಪಷ್ಟ ಪಡಿಸಲಿ. ಮಂದಿರದ ಹೊರಗಿದ್ದು ಹಿಂದೂ ಅಂತ ಹೇಳುವ ನಾನು ಶ್ರೇಷ್ಠ. ಹಿಂದೂ ಎಂದು ನಕಲಿ ಹಿಂದೂಗಳಾಗಿ ಮೋಡಿಮಾಡ್ತಿದ್ದೀರಿ. ಸಹಪಂಕ್ತಿ ಭೋಜನ ಸಂಬಂಧ ರಾಜ್ಯದಲ್ಲಿ ಅನೇಕ ಮಠಗಳಿವೆ. ಉಡುಪಿ ಮಠದ ಶ್ರೀಗಳು ಅನಾರೋಗ್ಯದಲ್ಲಿದ್ದಾರೆ. ಸಹಪಂಕ್ತಿ ಭೋಜನದಲ್ಲಿ ದೇಶದ ಪ್ರಧಾನಿ, ಸಿಎಂ ಹೊರಗಿಡುವ ಮೂಢನಂಬಿಕೆ ಇದೆ. ಇದಕ್ಕೆ ಮೋಹನ್ ಭಾಗವತ್ ಏನು ಹೇಳ್ತಾರೆ. ಎಂದು ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/364rgEd

ಚಳಿಗೆ ನಡುಗಿದ ದಿಲ್ಲಿ: 26 ವರ್ಷದ ಬಳಿಕ ಅತೀ ಕನಿಷ್ಠ ಉಷ್ಣಾಂಶ ದಾಖಲೆ!

ಹೊಸದಿಲ್ಲಿ: 2019ಕ್ಕೆ ವಿದಾಯ ಹೇಳುವ ಹೊತ್ತಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಹೊಸ ದಾಖಲೆಯಾಗಿದೆ. ಶನಿವಾರ ಈ ಬಾರಿಯ ಅತ್ಯಂತ ಕಡಿಮೆ ಉಷ್ಣಾಂಶದ ದಿನವಾಗಿ ದಾಖಲಾಗಿದೆ. ಬೆಳಗಿನ ಜಾವ 8.30ರ ವೇಳೆಗೆ ದಿಲ್ಲಿಯ ಲೋಧಿ ರಸ್ತೆಯ ಭಾಗದಲ್ಲಿ ಅತ್ಯಂತ ಕನಿಷ್ಠ 1.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಡಿ.15ರ ಬಳಿಕ ದಿಲ್ಲಿ ಕೊರೆಯುವ ಚಳಿಗಾಳಿಗೆ ಸಾಕ್ಷಿಯಾಗಿದ್ದು, ಉಷ್ಣಾಂಶ ಒಮ್ಮಿಂದೊಮ್ಮೆಲೇ ಇಳಿಕೆಯಾಗಿದೆ. ದಿಲ್ಲಿಯ ಸಫ್‌ದರ್ಗಂಜ್‌ ಎಂಕ್ಲೇವ್‌, ಅಯಾ ನಗರದಲ್ಲಿ ಚಳಿಗಾಲದ ಈ ವರೆಗಿನ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಗ್ಗೆ 10 ಗಂಟೆಯಲ್ಲೂ ಮುಂಜಾನೆಯ ವಾತಾವರಣವಿದ್ದು, 7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. 1992ರ ಬಳಿಕ ಇದೇ ಮೊದಲ ಬಾರಿಗೆ ಸಫ್‌ದರ್ಗಂಜ್‌ ಎಂಕ್ಲೇವ್‌ನ ಪ್ರದೇಶದಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದೆ. 1930ರಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು ಈ ವರೆಗಿನ ಅತ್ಯಂತ ಕನಿಷ್ಠ ಉಷ್ಣಾಂಶದ ದಾಖಲೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಳಿಗಾಳಿಯಲ್ಲೂ ದಾಖಲೆ 1997ರ ಬಳಿಕ ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಸತತ 11 ದಿನಗಳ ಕಾಲ ಚಳಿಗಾಳಿ ಬೀಸುತ್ತಿದ್ದು, ಚಿಲ್‌ ಡೇಸ್‌ ಎಂದೇ ಪ್ರತೀತಿ ಪಡೆದುಕೊಂಡಿದೆ. 22 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ದಿನಗಳ ಕಾಲ ಅತೀ ಚಳಿಯ ದಿನಗಳು ಈ ಬಾರಿ ದಾಖಲಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ. ದಿನದಲ್ಲಿ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆಯಲ್ಲೇ ಇದ್ದಲ್ಲಿ ಆ ದಿನವನ್ನು ಕೋಲ್ಡ್‌ ಡೇ ಕಂಡಿಷನ್‌ ಎಂದು ಘೋಷಿಸಲಾಗುತ್ತದೆ. ಹೊಸ ವರ್ಷಕ್ಕೆ ವರ್ಷಧಾರೆ ಮುನ್ಸೂಚನೆ!2019ರ ಬೀಳ್ಕೊಡುಗೆಯ ಹೊತ್ತಿಗೆ ಮಳೆ ಬರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿ.31ರ ಬಳಿಕ ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್‌ ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆಗಳಿವೆ. ಜ.3 ರ ವರೆಗೆ ಇದೇ ರೀತಿ ಮಳೆ ಹಾಗೂ ಚಳಿಯ ವಾತಾವರಣ ಇರುವ ಸಾಧ್ಯತೆಗಳಿವೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಡಿ. 13ರ ಬಳಿಕ ಶ್ರೀನಗರ, ಉತ್ತರಾಖಂಡ, ಮಸೂರಿ ಸೇರಿದಂತೆ ಉತ್ತರದ ಅನೇಕ ಭಾಗಗಳಲ್ಲಿ ವರ್ಷದ ಪ್ರಥಮ ಹಿಮಪಾತ ಉಂಟಾಗಿತ್ತು.


from India & World News in Kannada | VK Polls https://ift.tt/2F3T7IM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...