ಗ್ಯಾರಂಟಿ ಯೋಜನೆಗಳ ಜಾರಿ ವೇಳೆ ಯಾರಾದರೂ ಲಂಚ ಕೇಳಿದರೆ ನನಗೆ ನೇರವಾಗಿ ಪತ್ರ ಬರೆಯಿರಿ -ಡಿಕೆ ಶಿವಕುಮಾರ್‌

DK Shivakumar In kanakapur : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ಗ್ಯಾರಂಟಿ ಯೋಜನೆಗಳನ್ನು ನೀಡಲು ಲಂಚ ಕೇಳಿದರೆ ಅಂತಹವರ ಕುರಿತು ನನಗೆ ಪತ್ರ ಬರೆಯಿರಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/LSnoOfk

ತಳ ತಲುಪಿದ ನೀರು ಕುಡಿಯಲು ಯೋಗ್ಯವಲ್ಲ- ರೋಗ ಹರಡುವ ಅಪಾಯ

Fear Of Disease Spread: ಹಲವು ಪ್ರದೇಶಗಳಲ್ಲಿ ಈಗಲೂ ನದಿಗೆ ಚರಂಡಿಯ ನೀರು ಹೋಗುತ್ತದೆ. ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಕುಡಿಯುವ ಸಲುವಾಗಿ ಈ ನೀರನ್ನು ಹಾಗೆಯೇ ಲಿಫ್ಟ್ ಮಾಡಿದರೆ ಸಮಸ್ಯೆ ಖಚಿತ. ಮಳೆ ಆರಂಭ ಎಂದರೆ ರಸ್ತೆ ರಿಪೇರಿ, ಟ್ರೀ ಕಟ್ಟಿಂಗ್, ಪ್ರವಾಹ ಬಂದರೆ ಏನು ಮಾಡುವುದು ಎಂಬ ಬಗ್ಗೆ ಚಿಂತೆ ಮಾಡುವುದಷ್ಟೇ ಅಲ್ಲ, ಸಾಂಕ್ರಾಮಿಕ ರೋಗಗಳು ಬಂದರೆ ಅದನ್ನು ನಿಯಂತ್ರಿಸುವುದು ಹೇಗೆ ಮತ್ತು ಅವುಗಳು ಉಂಟಾಗಲು ಏನು ಕಾರಣ ಎಂಬುದನ್ನು ಅರಿತಿರಬೇಕು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/4lPsxz9

ಮಹಿಳೆಯರಿಗೆ ಉಚಿತ ಪ್ರಯಾಣ- ಖಾಸಗಿ ಬಸ್‌ ಉದ್ಯಮಕ್ಕೆ ಆದಾಯ ಕುಸಿತದ ಆತಂಕ

Free Travel For Women In Govt Buses: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹಿನ್ನೆಲೆ, ಖಾಸಗಿ ಬಸ್‌ಗಳಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಸುಮಾರು 9 ಸಾವಿರ ಖಾಸಗಿ ಬಸ್‌ಗಳಿವೆ.. ಇದೀಗ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ಮಹಿಳೆಯರು ಸಹಜವಾಗಿ ಸರಕಾರಿ ಬಸ್‌ಗಳತ್ತ ಮುಖ ಮಾಡಲಿದ್ದಾರೆ. ಮತ್ತೊಂದೆಡೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ದುಡಿಯುವ ವರ್ಗದ ಮಹಿಳೆಯರು ಸಹ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸಲಿದ್ದಾರೆ. ಭವಿಷ್ಯದಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/z1nAEQ5

ವಿದ್ಯುತ್‌ ಉಚಿತ ಎಂದು ಬೇಕಾಬಿಟ್ಟಿ ಬಳಸಿದರೆ ಜೋಕೆ! ಕಟ್ಟಬೇಕಾಗುತ್ತದೆ ದುಂದು ವೆಚ್ಚಕ್ಕೆ ಶುಲ್ಕ; ಬಾಡಿಗೆ ಮನೆಯವರಿಗೂ ಫ್ರೀ

Conditions For Free Electricity : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ. ಉಚಿತ ಎಂದು ಬೇಕಾಬಿಟ್ಟಿ ಬಳಸುವುದಕ್ಕೆ ಮಿತಿ ಹಾಕಿದೆ. ಪ್ರಮುಖವಾಗಿ ಎಲ್ಲರಿಗೂ 200 ಯೂನಿಟ್‌ ವಿದ್ಯುತ್‌ ಉಚಿತವಲ್ಲ. ಸದ್ಯ ಸರಾಸರಿ ಬಳಕೆ ಮಾಡುತ್ತಿರುವ ವಿದ್ಯುತ್‌ ಅಂದಾಜಿಸಿ ಅದರ ಮೇಲೆ ಶೇ 10 ರಷ್ಟು ವಿದ್ಯುತ್‌ ಅನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/1IprDin

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಸಾವಿರ ಯುವಕರಿಗೆ ಉದ್ಯೋಗ: ರಾಜ್ಯಸಭೆಯಲ್ಲಿ ರಾಜರ್ಷಿ ಬಿಡುಗಡೆಗೊಳಿಸಿ ಡಾ ವೀರೇೆಂದ್ರ ಹೆಗ್ಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಧರ್ಮಾಧಿಕಾರಿ ಮತ್ತು ರಾಜ್ಯಸಭೆ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ 'ರಾಜ್ಯಸಭೆಯಲ್ಲಿ ರಾಜರ್ಷಿ' ಕೃತಿ ಬಿಡುಗಡೆಗೊಳಿಸಿದರು. ಈ ವೇಳೆ ರಾಜ್ಯಸಭೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು ರಾಜ್ಯಸಭೆಯಲ್ಲಿ ಭಾಗವಹಿಸಲು ಆಳವಾದ ಅಧ್ಯಯನದ ಅಗತ್ಯವಿದೆ. ಜೊತೆಗೆ ಕಲಾಪಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಆಳ ಹಾಗೂ ಗಂಭೀರ ಚರ್ಚೆಗಳು ನಡೆದು ಉತ್ತರ ಸಿಗುತ್ತದೆ ಎಂದು ತಿಳಿಸಿದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/3C9LYiJ

ಒಡಿಶಾದಲ್ಲಿ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 50ಕ್ಕೂ ಅಧಿಕ ಮಂದಿ ಸಾವು!

Odisha Train Accident : ಒಡಿಶಾದ ಬಾಲಸೋರ್‌ ಬಳಿ ಗೂಡ್ಸ್‌ ರೈಲಿಗೆ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/BXPytxD

SL vs AFG: ಒಡಿಐ ಇತಿಹಾಸದಲ್ಲಿ ಶ್ರೀಲಂಕಾ ಎದುರು 3ನೇ ಒಡಿಐ ಗೆದ್ದ ಅಫಘಾನಿಸ್ತಾನ!

Sri Lanka vs Afghanistan, 1st ODI Highlights: ಮುಂಬರುವ ಏಷ್ಯಾ ಕಪ್‌ ಮತ್ತು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಿಗೆ ಪೂರ್ವ ಸಿದ್ಧತೆಯ ಸಲುವಾಗಿ ಅಫಘಾನಿಸ್ತಾನ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಜೂನ್‌ 2ರಂದು ಹಂಬನತೋಟದ ಮಹಿಂದಾ ರಾಜಪಕ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿ, ಪ್ರವಾಸಿ ಪಡೆ ಅಧಿಕಾರಯುತ ಪ್ರದರ್ಶನ ನೀಡುವ ಮೂಲಕ ಸ್ಮರಣೀಯ ಜಯ ದಕ್ಕಿಸಿಕೊಂಡಿದೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/nV2chQz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...