SL vs AFG: ಒಡಿಐ ಇತಿಹಾಸದಲ್ಲಿ ಶ್ರೀಲಂಕಾ ಎದುರು 3ನೇ ಒಡಿಐ ಗೆದ್ದ ಅಫಘಾನಿಸ್ತಾನ!

Sri Lanka vs Afghanistan, 1st ODI Highlights: ಮುಂಬರುವ ಏಷ್ಯಾ ಕಪ್‌ ಮತ್ತು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಿಗೆ ಪೂರ್ವ ಸಿದ್ಧತೆಯ ಸಲುವಾಗಿ ಅಫಘಾನಿಸ್ತಾನ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಜೂನ್‌ 2ರಂದು ಹಂಬನತೋಟದ ಮಹಿಂದಾ ರಾಜಪಕ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿ, ಪ್ರವಾಸಿ ಪಡೆ ಅಧಿಕಾರಯುತ ಪ್ರದರ್ಶನ ನೀಡುವ ಮೂಲಕ ಸ್ಮರಣೀಯ ಜಯ ದಕ್ಕಿಸಿಕೊಂಡಿದೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/nV2chQz

(ಸಿಎಂ ಜಿಲ್ಲಾವಲೋಕನ) ತಿ.ನರಸೀಪುರ ಪ್ರವಾಸೋದ್ಯಮಕ್ಕೆ ಬೇಕಿದೆ ಒತ್ತು

Tourist Places in Mysuru District - ಮೈಸೂರು ಜಿಲ್ಲೆಯಲ್ಲಿ ಟಿ. ನರಸೀಪುರ ಪುಣ್ಯಕ್ಷೇತ್ರಗಳನ್ನು, ಹತ್ತು ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಕ್ಷೇತ್ರ. ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ಇದನ್ನು ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿ ಮಾಡಬಹುದು. ಇಲ್ಲಿನ ತಲಕಾಡಿನ ಪಂಚಲಿಂಗೇಶ್ವರ ದೇವಸ್ಥಾನ, ವೈದ್ಯನಾಥೇಶ್ವರ ದೇವಸ್ಥಾನಗಳಿಗೆ ದೇಶ- ವಿದೇಶಗಳ ಭಕ್ತರಿದ್ದಾರೆ. ಆದರೆ, ಇಲ್ಲಿ ಮೂಲಸೌಕರ್ಯಗಳಿಲ್ಲ. ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳಿದ್ದಾರೆ ಅವರಿಗೂ ಮೂಲಸೌಕರ್ಯ ಕಲ್ಪಿಸಬೇಕಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/EsTSBr1

Udupi: ಕುಸಿದ ಜೆಟ್ಟಿಗೆ ಸಿಕ್ಕಿಲ್ಲ ದುರಸ್ತಿ ಭಾಗ್ಯ-ಸಂಕಷ್ಟದಲ್ಲೇ ಋತು ಮುಗಿಸಿದ ಮೀನುಗಾರರು

Fishing Jetty: ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಬಂದರಿನಲ್ಲಿ ಕುಸಿದ ಜೆಟ್ಟಿಯ ದುರಸ್ಥಿ ಕಾರ್ಯ ಇನ್ನೂ ಮುಗಿದಿಲ್ಲ, ದುರಸ್ತಿಗೆ ಒತ್ತಾಯಿಸಿ ಮೀನುಗಾರರು ಹೋರಾಟ ನಡೆಸಿದ್ದರು. ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದ್ದರು. ಜೆಟ್ಟಿ ಕುಸಿದ ಕಾರಣ, ಮೀನುಗಾರಿಕಾ ಬಂದರಿನಲ್ಲಿ ಬೋಟ್ ನಿಲುಗಡೆಗೆ ಸಂಕಷ್ಟ ಎದುರಾಗಿತ್ತು. ಸಂಕಷ್ಟದಲ್ಲೇ ಒದ್ದಾಟ ನಡೆಸಿದ ಮೀನುಗಾರರು ಈ ವರ್ಷದ ಮೀನುಗಾರಿಕೆ ಋುತು ಮುಗಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/AFCz140

Shivamogga: ನಿವೇಶನ ಖರೀದಿಸಬೇಕಾದರೆ ಹುಷಾರ್‌! ನಕಲಿ ದಾಖಲೆ ಸೃಷ್ಟಿಸಿ ಮೋಸದ ದಂಧೆ

Property Fraud: ನಿವೇಶನ ಖರೀದಿಯಲ್ಲಿ ನಕಲಿ ದಾಖಲೆಗಳ ಹಾವಳಿ ಹೆಚ್ಚಾಗಿದೆ. ಕಡಿಮೆ ದರದಲ್ಲಿ ನಗರದ ಹೃದಯ ಭಾಗದಲ್ಲಿ ನಿವೇಶನ ಸಿಗುತ್ತದೆಂಬ ಆಸೆಯಿಂದ ಜನರು ಯಾರದೋ ಬಳಿ ನಿವೇಶನ ಖರೀದಿಸಿ ಪೇಚಿಗೆ ಬೀಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 2021ರಿಂದ 2023ರ ವರೆಗೆ ನಿವೇಶನ ಖರೀದಿಸಿ ಮೋಸ ಹೋದ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬಹುಪಾಲು ನಕಲಿ ದಾಖಲೆ ಸೃಷ್ಟಿ, ಹಣ ಪಡೆದು ನಿವೇಶನ ನೀಡದೇ ಮೋಸ ಮಾಡಿರುವ ಪ್ರಕರಣಗಳೇ ಹೆಚ್ಚು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/3FKTgB1

ಕೃಷಿ ಚಟುವಟಿಕೆ ಚುರುಕು- ಗದಗದ ಎಪಿಎಂಸಿಯಲ್ಲಿ ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರು

Agricultural Produce Market Committee: ಮುಂಗಾರು ಮಳೆಯಾದ ಕಾರಣ ಅನ್ನದಾತನ ಮುಖದಲ್ಲಿ ಖುಷಿ ಅರಳಿದೆ. ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ಚರುಕುಗೊಂಡಿದ್ದು, ಕೃಷಿ ಇಲಾಖೆಯಿಂದ ರೈತರಿಗೆ ಬೀಜ ವಿತರಿಸಲಾಗುತ್ತಿದೆ. ರೈತರು ಹೆಸರುಕಾಳು, ಗೋವಿನಜೋಳ ಹಾಗೂ ಸಜ್ಜೆ ಮತ್ತಿತರ ಬಿತ್ತನೆ ಬೀಜ ಪಡೆಯುತ್ತಿಯುತ್ತಿದ್ದು, ರೈತರಿಗೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಬಿತ್ತನೆ ಬೀಜಗಳನ್ನು ಖರೀದಿಸುವಲ್ಲಿ ಉಂಟಾದ ನೂಕು ನುಗ್ಗಲು ನಿಯಂತ್ರಸಲು ಇಲಾಖೆಯ ಅಧಿಕಾರಿಗಳು ಹರಸಾಹಸ ನಡೆಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/cE5GNhO

ವಿಮಾನ ನಿಲ್ದಾಣಕ್ಕಿಲ್ಲ ಮೆಮು ರೈಲು ಸೇವೆ - ಪ್ರಯಾಣಿಕರ ಕೊರತೆ ನೆಪದಲ್ಲಿ10 ರೈಲುಗಳು ದಿಢೀರ್‌ ರದ್ದು!

Bengaluru Airport Memu Train Service cancel : ಬೆಂಗಳೂರು ನಗರದಿಂದ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಲಭ್ಯವಿದ್ದ ಮೆಮು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಇದರಿಂದ ದುಬಾರಿ ದರ ಪಾವತಿಸಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/mzZSjYy

ಮುಂಬೈನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ!

MS Dhoni's Knee Injury Update: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ದಾಖಲೆಯ ಐದನೇ ಟ್ರೋಫಿ ಗೆದ್ದುಕೊಟ್ಟ ಬೆನ್ನಲ್ಲೇ ನಾಯಕ ಎಂಎಸ್‌ ಧೋನಿ, ಮುಂಬೈನಲ್ಲಿ ತಮ್ಮ ಮಂಡಿ ನೋವಿನ ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದಿದ್ದಾರೆ. ಐಪಿಎಲ್‌ 2023 ಟೂರ್ನಿಯುದ್ದಕ್ಕೂ ಮಂಡಿನೋವಿನ ನಡುವೆಯೇ ಧೋನಿ ಆಟ ಮುಂದುವರಿಸಿದ್ದರು. 41 ವರ್ಷದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಇದೀಗ ಚೇತರಿಕೆ ಕಡೆಗೆ ಗಮನ ನೀಡಲಿದ್ದು, ಮುಂದಿನ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ನಿವೃತ್ತಿಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/0XDR5Yw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...