gold and silver rates today: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಇಂದು ಗುರುವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.
from India & World News in Kannada | VK Polls https://ift.tt/ksV6L0p
ಮೈಸೂರಿನ ಈ ಮಹಲ್‌ಗೆ 'ವಸಂತ' ಯಾವಾಗ?: ನಿರ್ವಹಣೆ ಇಲ್ಲದೆ ನಲುಗಿದ 180 ವರ್ಷದ ಅರಮನೆ ಪಾರಂಪರಿಕ ಕಟ್ಟಡ
ಕಟ್ಟಡ ಹಿಂಭಾಗ ಸಂಪೂರ್ಣ ಶಿಥಿಲಗೊಂಡಿದೆ. ಜತೆಗೆ ಕೆಲ ಕೊಠಡಿಗಳ ಮೂಲೆಗಳಲ್ಲಿ ನೀರು ಸೋರಿಕೆಯಾಗಿ ಮಡ್ಡಿ ಹಾಗೂ ಬಣ್ಣ ಹಾಳಾಗಿದೆ. ಇನ್ನೂ ಮೊದಲ ಅಂತಸ್ತಿನ ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ವಿಶೇಷ ವಾಸ್ತುಶಿಲ್ಪ ಹೊಂದಿರುವ ಕಟ್ಟಡದ ಮೆಟ್ಟಿಲುಗಳು ಮುರಿದು ದುಸ್ಥಿತಿ ತಲುಪಿವೆ. ಜತೆಗೆ ನೆಲ ಅಂತಸ್ತಿನ ಮೂರು ಕೊಠಡಿಗಳ ಗೋಡೆ ಬಿರುಕುಬಿಟ್ಟು, ಚಾವಣಿ ಕುಸಿಯುವ ಆತಂಕ ಇರುವುದರಿಂದ ಬಳಕೆಯನ್ನು ನಿಲ್ಲಿಸಲಾಗಿದೆ. ತೀವ್ರ ದುಸ್ಥಿತಿಯಲ್ಲಿರುವ ಕಟ್ಟಡದ ದುರಸ್ತಿಗಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಅಂದಾಜು ಪಟ್ಟಿ ಸಿದ್ಧಪಡಿಸಲು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗಿತ್ತು.
from India & World News in Kannada | VK Polls https://ift.tt/DYlS8JU
from India & World News in Kannada | VK Polls https://ift.tt/DYlS8JU
55 ವರ್ಷಗಳಲ್ಲೇ ಗರಿಷ್ಠ ಚಿನ್ನ ಮಾರಾಟ: ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳಿಂದ 673 ಟನ್ ಬಂಗಾರ ಖರೀದಿ
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕೂಡ ತನ್ನ ಚಿನ್ನದ ಸಂಗ್ರಹವನ್ನು ಹೆಚ್ಚಿಸಿದೆ. ಕಳೆದ ಜುಲೈನಲ್ಲಿ 13 ಟನ್ ಮತ್ತು ಸೆಪ್ಟೆಂಬರ್‌ನಲ್ಲಿ 4 ಟನ್ ಚಿನ್ನವನ್ನು ಖರೀದಿಸಿದೆ. ಭಾರತದ ಚಿನ್ನದ ಸಂಗ್ರಹ 785 ಟನ್‌ಗೆ ತಲುಪಿದೆ. ಈ ಅವಧಿಯಲ್ಲಿ ಟರ್ಕಿಯ ಕೇಂದ್ರ ಬ್ಯಾಂಕ್ ಗರಿಷ್ಠ 31 ಟನ್ ಚಿನ್ನವನ್ನು ಖರೀದಿಸಿದೆ. ಇದರೊಂದಿಗೆ, ಅದರ ಚಿನ್ನದ ಮೀಸಲು 489 ಟನ್ ತಲುಪಿದೆ. ಇತ್ತೀಚೆಗೆ ಚಿನ್ನದ ಬೆಲೆ ಇಳಿಕೆಯಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು, ಇದು ಚಿನ್ನದ ದರ ಇಳಿಕೆಗೆ ಮೂಲ ಕಾರಣ.
from India & World News in Kannada | VK Polls https://ift.tt/LBfkrW4
from India & World News in Kannada | VK Polls https://ift.tt/LBfkrW4
Namma Metro | ಮೆಟ್ರೋದಲ್ಲಿ ಶೀಘ್ರ ಮೊಬಿಲಿಟಿ ಕಾರ್ಡ್ ಜಾರಿ: ಫೆಡೆಕ್ಸ್ ನಿಂದ ಪರಿಶೀಲನೆಯಷ್ಟೇ ಬಾಕಿ
'ಒನ್ ನೇಷನ್ ಒನ್ ಕಾರ್ಡ್' ಘೋಷಣೆಯಂತೆ ಕೇಂದ್ರ ಸರಕಾರ ಜಾರಿಗೊಳಿಸಿದ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' ಯೋಜನೆ ಮೆಟ್ರೋದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಎನ್‌ಸಿಎಂಸಿ ಕಾರ್ಡ್ ಅನ್ನು ಕೇವಲ ನಮ್ಮ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಬಳಸಬಹುದಾಗಿದೆ. ಈ ಕಾರ್ಡ್‌ನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ. ದಿಲ್ಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲಿ ಎನ್‌ಸಿಎಂಸಿ ಕಾರ್ಡ್ ಬಳಕೆಗೆ ಚಾಲನೆ ನೀಡಲಾಗಿದೆ.
from India & World News in Kannada | VK Polls https://ift.tt/bCcHuep
from India & World News in Kannada | VK Polls https://ift.tt/bCcHuep
IND vs BAN: ಬಾಂಗ್ಲಾ ವಿರುದ್ಧದ ಗೆಲುವಿನಲ್ಲಿ ಕನ್ನಡಿಗನ ಅಳಿಲು ಸೇವೆ, ಅಭಿಮಾನಿಗಳ ಮನಗೆದ್ದ ರಘು!
India vs Bangladesh Highlights: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಸ್ ಕಡೆಗೆ ದಾಪುಗಾಲಿಟ್ಟಿದೆ. ಸೂಪರ್-12 ಹಂತದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಡಿದ ತನ್ನ ನಾಲ್ಕನೇ ಪಂದ್ಯದಲ್ಲಿ ಅಪಾಯಕಾರಿ ಬಾಂಗ್ಲಾದೇಶ ವಿರುದ್ಧ 5 ರನ್‌ಗಳ ರೋಚಕ ಜಯ ದಾಖಲಿಸಿತು. ಅಂದಹಾಗೆ ಭಾರತ ತಂಡದ ಈ ಗೆಲುವಿನ ಹಿಂದೆ ಅಳಿಲು ಸೇವೆಯೊಂದಿಗೆ ಕನ್ನಡಿಗ ಹಾಗೂ ಟೀಮ್ ಇಮಡಿಯಾ ಸೈಡ್ ಆರ್ಮ್ ಬೌಲರ್ ರಘು ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pF6Wi9w
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pF6Wi9w
Inspector Nandish Death Case | ಇನ್‌ಸ್ಪೆಕ್ಟರ್ ನಂದೀಶ್ ಸಾವಿನ ಪ್ರಕರಣ: ಗೃಹ ಸಚಿವ, ಕಮಿಷನರ್ ವಿರುದ್ಧ ದೂರು
KR Puram police station: ಪಿಐ ನಂದೀಶ್ (Inspector Nandish) ಅವರು ಹೃದಯಾಘಾತದಿಂದ ಸಾವನ್ನಪ್ಪಲು ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಭೈರತಿ ಬಸವರಾಜು ಅವರ ಸಂಬಂಧಿಕರಾದ ಗಣೇಶ್, ಚಂದ್ರು, ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್‌ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಆರೋಪಿಸಿದ್ದಾರೆ. ನಂದೀಶ್ ಸಾವಿಗೆ ಪರೋಕ್ಷವಾಗಿ ಕಾರಣರಾದ ಸಚಿವರು, ಕಮಿಷನರ್, ಎಸಿಪಿ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆ.ಆರ್.ಪುರ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.
from India & World News in Kannada | VK Polls https://ift.tt/cHsDZE3
from India & World News in Kannada | VK Polls https://ift.tt/cHsDZE3
Manne village | ಕೆಂಪೇಗೌಡರ ಮೃತ್ತಿಕೆ ಸಂಗ್ರಹ ರಥಯಾತ್ರೆ: ಗಂಗರ ನಾಡು ಮಣ್ಣೆಯ ಮಣ್ಣು ಸಂಗ್ರಹ
Sacred Mud Collection: ನಾಡಿನ ಹೆಮ್ಮೆಯ ಸಂಕೇತವಾದ ನಾಡಪ್ರಭುವಿನ ಪ್ರತಿಮೆ ನಿರ್ಮಾಣಕ್ಕೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಮೃತ್ತಿಕೆ ಸಂಗ್ರಹ ಅಭಿಯಾನದ ರಥ ಯಾತ್ರೆಗೆ ಪ್ರತಿ ಗ್ರಾಮಗಳಲ್ಲಿಯೂ ಮಾವಿನ ತೋರಣ ಹಾಗು ಬಾಳೆಕಂದುಗಳನ್ನು ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಿದ್ದರು. ರಥವನ್ನು ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹಾಗೂ ಮಂಗಳ ವಾದ್ಯದೊಂದಿಗೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಗ್ರಾಮದ ಯುವ ಸಮುದಾಯ ರಥದ ಮುಂಭಾಗದಲ್ಲಿನೃತ್ಯ ಮಾಡುವ ಮೂಲಕ ಕೆಂಪೇಗೌಡರಿಗೆ ಜೈಕಾರ ಹಾಕಿದರು.
from India & World News in Kannada | VK Polls https://ift.tt/6KzZebE
from India & World News in Kannada | VK Polls https://ift.tt/6KzZebE
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...