ಕೊರೊನಾ ವೈರಸ್‌ಗೆ ಚೀನಾದಲ್ಲಿ 304 ಮಂದಿ ಬಲಿ; ಫಿಲಿಪ್ಪೀನ್ಸ್‌ನಲ್ಲೂ ಒಬ್ಬರ ಸಾವು

ಬೀಜಿಂಗ್‌: ವೈರಸ್‌ ಜಗತ್ತಿನಾದ್ಯಂತ ಹರಡುತ್ತಿದ್ದು, ಜನರಲ್ಲಿ ಭೀತಿ ಸೃಷ್ಟಿಸುತ್ತಿದೆ. ಈ ನಡುವೆ ಚೀನಾದಲ್ಲಿ ಶನಿವಾರ ಒಂದೇ ದಿನ 30 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 304ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಚೀನಾದ ವುಹಾನ್‌ನಿಂದ ಫಿಲಿಪ್ಪೀನ್ಸ್‌ಗೆ ತೆರಳಿದ ಚೀನಾದ ವುಹಾನ್‌ ಮೂಲದ 44 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ನಿಂದ ಬಲಿಯಾಗಿದ್ದಾರೆ. ಈ ಹಿನ್ನೆಲೆ ಚೀನಾದ ಹೊರಗೆ ಕೊರೊನಾ ವೈರಸ್‌ಗೆ ಮೃತಪಟ್ಟಿರುವ ಮೊದಲ ವ್ಯಕ್ತಿ ಇವರು ಎಂಬ ಕುಖ್ಯಾತಿಗೆ ಗುರಿಯಾಗಿದ್ದಾರೆ. ಒಟ್ಟಾರೆ ವಿಶ್ವಾದ್ಯಂತ ಕೊರೊನಾ ವೈರಸ್‌ಗೆ 305 ಜನ ಮೃತಪಟ್ಟಿದ್ದಾರೆ. ಇನ್ನು, ಚೀನಾದಲ್ಲಿ 14,300ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಶನಿವಾರ ಒಂದೇ ದಿನ 2,590 ಜನರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. 24 ಗಂಟೆಗಳಲ್ಲಿ 45 ಜನರು ಮೃತಪಟ್ಟಿದ್ದು, 2,590 ಜನರಿಗೆ ಸೋಂಕು ತಗುಲಿರುವುದನ್ನು ಸರಕಾರವೇ ಧೃಡೀಕರಿಸಿದೆ. ಭಾರತೀಯರ ಮತ್ತೊಂದು ತಂಡ ವಾಪಸ್‌! ಭಾರತೀಯರ ಮತ್ತೊಂದು ತಂಡ ಚೀನಾದಿಂದ ತೆರಳಿದ್ದು, ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಚೀನಾದ ವುಹಾನ್‌ನಿಂದ ಏರ್‌ ಇಂಡಿಯಾ ವಿಮಾನದಲ್ಲಿ 323 ಭಾರತೀಯರು ಹಾಗೂ 7 ಮಾಲ್ಡೀವ್ಸ್ ನಾಗರಿಕರು ಇದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಒಂದು ವಿಮಾನದಲ್ಲಿ ಅನೇಕರನ್ನು ವುಹಾನ್‌ನಿಂದ ಭಾರತಕ್ಕೆ ಕರೆತರಲಾಗಿದೆ.


from India & World News in Kannada | VK Polls https://ift.tt/36Iuw80

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಇಬ್ಬರ ಸಾವು; ಇಬ್ಬರಿಗೆ ತೀವ್ರ ಗಾಯ

ಫ್ಲೋರಿಡಾ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿಯಾಗಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಫ್ಲೋರಿಡಾದ ವಿಕ್ಟೋರಿಯಾ ಚರ್ಚ್‌ನಲ್ಲಿ ಈ ಘಟನೆ ನಡೆದಿದೆ. ಕಾಲಮಾನದಲ್ಲಿ ಶನಿವಾರ ಫೆಬ್ರವರಿ 1, 2020ರಂದು ಈ ನಡೆದಿದೆ. ಫ್ಲೋರಿಡಾದ ವಿಕ್ಟೋರಿಯಾ ಚರ್ಚ್‌ ಬಳಿಯ ರಿವಿಯೆರಾ ಬೀಚ್‌ನಲ್ಲಿ ಅಂತ್ಯಕ್ರಿಯೆ ಬಳಿಕ ಚರ್ಚ್‌ಗೆ ತೆರಳಿದ್ದವರ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಯ ವೇಳೆ 15 ವರ್ಷದ ಬಾಲಕ ಹಾಗೂ ಪುರುಷರೊಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ರಿವಿಯೆರಾ ಬೀಚ್‌ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸುದ್ದಿ ಓದಿ: ದಾಳಿಕೋರರು 13 ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ:


from India & World News in Kannada | VK Polls https://ift.tt/36NZiMS

ನಾಲ್ಕನೇ ಟಿ20ಯಲ್ಲಿ ಎಸಗಿದ ಪ್ರಮಾದಕ್ಕೆ ದಂಡ ತೆತ್ತ ಟೀಮ್‌ ಇಂಡಿಯಾ!

ವೆಲ್ಲಿಂಗ್ಟನ್‌: ಆತಿಥೇಯ ನ್ಯೂಜಿಲೆಂಡ್‌ ಎದುರು ಟೀಮ್‌ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಸೂಪರ್‌ ಓವರ್‌ ಗೆಲುವೇನೋ ದಾಖಲಿಸಿತು, ಆದರೆ ಅದೇ ಪಂದ್ಯದಲ್ಲಿ ಎಸಗಿದ ಪ್ರಮಾದಕ್ಕೆ ಭಾರಿ ದಂಡ ತೆತ್ತಿದೆ. ಇಲ್ಲಿನ ವೆಸ್ಟ್‌ಪ್ಯಾಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐದು ಪಂದ್ಯಗಳ ಸರಣಿಯ ನಾಲ್ಕನೇ ಹಣಾಹಣಿಯಲ್ಲಿ ಭಾರತ ತಂಡದ 20 ಓವರ್‌ಗಳನ್ನು ಎಸೆಯಲು ನೀಡಲಾಗಿದ್ದ ಸಮಯದ ಮುಕ್ತಾಯಕ್ಕೆ ಇನ್ನು 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಈ ಕಾರಣಕ್ಕೆ ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ಪಂದ್ಯದ ಸಂಭಾವನೆಯಲ್ಲಿನ ಶೇ.40 ರಷ್ಟು ದಂಡವಾಗಿ ತೆರುವಂತೆ ಸೂಚಿಸಿದ್ದಾರೆ. "ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್‌ 2.22 ನಿಯಮದ ಅನುಗುಣವಾಗಿ ನಿಧಾನಗತಿಯಲ್ಲಿ ಓವರ್‌ಗಳನ್ನು ಎಸೆದ ಕಾರಣಕ್ಕೆ ಕನಿಷ್ಠ ಕ್ರಮವಾಗಿ ತಂಡದ ಎಲ್ಲಾ ಆಟಗಾರರಿಗೂ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಪೂರ್ಣ 20 ಓವರ್‌ಗಳನ್ನು ಎಸೆಯುವಲ್ಲಿ ಟೀಮ್‌ ಇಂಡಿಯಾ ವಿಫಲವಾಗಿದೆ," ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆನ್‌ಫೀಲ್‌ ಅಂಪೈರ್‌ಗಳಾದ ಕ್ರಿಸ್‌ ಬ್ರೌನ್‌ ಮತ್ತು ಶಾನ್‌ ಹೇಗ್‌ ಹಾಗೂ ಥರ್ಡ್‌ ಅಂಪೈರ್‌ ಆಷ್ಲೇ ಮೆಹ್ರೊಟಾ ಟೀಮ್‌ ಇಂಡಿಯಾ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ ಮಂದಗತಿಯ ಬೌಲಿಂಗ್‌ ಪ್ರಮಾದವನ್ನು ಕ್ಯಾಪ್ಟನ್‌ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿಲ್ಲ. ಪಂದ್ಯದಲ್ಲಿ 166 ರನ್‌ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ತಂಡ 165 ರನ್‌ ಗಳಿಸುವಷ್ಟಕ್ಕೆ ಶಕ್ತವಾಗಿ ಸರಣಿಯಲ್ಲಿ 2ನೇ ಬಾರಿ ಸೂಪರ್‌ ಓವರ್‌ ಆಡುವಂತಾಯಿತು. ಸೋಲುವಂತಿದ್ದ ಪಂದ್ಯದಲ್ಲಿ ಗೆಲ್ಲಲು ಮತ್ತೊಂದು ಅವಕಾಶ ಪಡೆದುಕೊಂಡ ಭಾರತ ಸೂಪರ್‌ ಓವರ್‌ನಲ್ಲಿ ಕಿವೀಸ್‌ ನೀಡಿದ 14 ರನ್‌ಗಳ ಗುರಿ ಎದುರು 16 ರನ್‌ ಚಚ್ಚಿ ಪಂದ್ಯ ಗೆದ್ದುಕೊಂಡಿರು. ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಟಿ20 ಪಂದ್ಯ ಮೌಂಟ್‌ ಮೌಂಗಾನುಯ್‌ನ ಬೇ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ (ಫೆ.02) ನಡೆಯಲಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ 5-0 ಅಂತರದಲ್ಲಿ ಸರಣಿ ವೈಟ್‌ವಾಷ್‌ ಮಾಡುವ ಗುರಿ ಹೊಂದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OivCRv

‘ಜನರ ಜೇಬಿಗೆ ಹೆಚ್ಚಿನ ಹಣ ಹಾಕೋ ಉದ್ದೇಶ’ ಬಜೆಟ್‌ 2020 ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

ಹೊಸದಿಲ್ಲಿ: ಜನರ ಜೇಬಿಗೆ ಹೆಚ್ಚಿನ ಹಣ ಹಾಕಲು ನಾವು ಬಯಸುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಜೆಟ್‌ ಮಂಡನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಹಣವನ್ನು ಜನರ ಕೈಯಲ್ಲಿ ಇಡಲು ಬಯಸಿದ್ದೇವೆ, ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರ ಕೈಯಲ್ಲಿ ಹಣ ಇರಬೇಕು ಎಂಬುವುದು ನಮ್ಮ ಗುರಿ ಎಂದರು. ತೆರಿಗೆ ಪಾವತಿದಾರರು ತೆರಿಗೆ ಪಾವತಿಸಲು ಹಳೇ ಪದ್ದತಿಯನ್ನು ಆರಿಸಬಹುದು ಅಥವಾ ಹೊಸ ಪದ್ದತಿಯನ್ನು ಆರಿಸಬಹುದು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೆರಿಗೆ ಪದ್ದತಿಯನ್ನು ಸರಳಗೊಳಿಸಿದ್ದೇವೆ ಎಂದಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹೆಚ್ಚುವರಿ ಬಂಡವಾಳವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದ ಅವರು, ತೆರಿಗೆದಾರರ ಚಾರ್ಟರ್‌ ಪ್ರಕ್ರಿಯೆ ಒಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ ಅವರು, ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಸರಕಾರ ಗೌರವಿಸುತ್ತದೆ ಎಂದಿದ್ದಾರೆ.


from India & World News in Kannada | VK Polls https://ift.tt/36IU3Od

ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ನಿರ್ಮಲಾ ಸೀತಾರಮನ್‌ ಬಜೆಟ್‌ ಕೊಡುಗೆ ಏನು?

ಹೊಸದಿಲ್ಲಿ: ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಈ ಬಾರಿ 99,300 ಕೋಟಿ ರೂ. ಮೀಸಲಿಡಲಾಗಿದ್ದು, ಕೌಶಲ್ಯ ಅಭಿವೃದ್ಧಿ ವಲಯಕ್ಕೆ 3,000 ಕೋಟಿ ರೂ.ಗಳ ಕೊಡುಗೆಯನ್ನು ನೀಡಲಾಗಿದೆ. ಸಂಸತ್ತಿನಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2020-21ರ ಮುಂಗಡ ಪತ್ರದಲ್ಲಿ ಹೊಸ ನೀತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ತಿಳಿಸಿದರು. ಪ್ರಮುಖ ಅಂಶಗಳು
  • ವಿಜ್ಞಾನ, ವಿಧಿವಿಜ್ಞಾನ ಮತ್ತು ಸೈಬರ್‌-ವಿಧಿವಿಜ್ಞಾನ ಕ್ಷೇತ್ರಗಳ ಬಲವರ್ಧನೆಗೆ ರಾಷ್ಟ್ರೀಯ ಪೊಲೀಸ್‌ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ.
  • ನ್ಯಾಷನಲ್‌ ಯೂನಿವರ್ಸಿಟಿ ರ್ಯಾಂಕಿಂಗ್‌ ಫ್ರೇಮ್‌ವರ್ಕ್ ಅಡಿ ಕಾರ್ಯ ನಿರ್ವಹಿಸುತ್ತಿರುವ 100 ಪ್ರಮುಖ ಸಂಸ್ಥೆಗಳಲ್ಲಿ ಸುಸಜ್ಜಿತ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿ.
  • ಕೆಲಸಕ್ಕೆ ಸೇರುವ ಮುನ್ನ ಇಂಜಿನಿಯರಿಂಗ್‌ ಪದವಿದರರಿಗೆ ಪಟ್ಟಣದ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ವರ್ಷದ ವರೆಗೆ ಇಂಟರ್ನ್‌ಶಿಪ್‌.
  • ಆರೋಗ್ಯ ಇಲಾಖೆ ಮತ್ತು ಕೌಶಲ್ಯಾಭಿವೃದ್ಧಿ ವಿಭಾಗಗಳಿಗೆ ವಿಶೇಷ ವಿನ್ಯಾಸಿತ ಕೋರ್ಸ್‌ಗಳು
  • ಅ) ಶಿಕ್ಷಕರು, ನರ್ಸ್‌ಗಳು, ಅರೆವೈದ್ಯಕೀಯ ನರ್ಸ್‌ಗಳು ಮತ್ತು ವಿದೇಶದಲ್ಲಿ ಆರೈಕೆ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವವರ ಕೊರತೆ ನೀಗಿಸಲು ಕ್ರಮ. ಆ) ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವೆ ಸಮನಾಂತರ ಕೌಶಲ್ಯ ಅಭಿವೃದ್ಧಿ.
  • ಮಾರ್ಚ್‌ 2021ರ ವೇಳೆಗೆ 150 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯರ್ಥಿಗಳಿಗೆ ಕೌಶ್ಯಲ್ಯ ವೃದ್ಧಿ ನಿಟ್ಟಿನಲ್ಲಿ ಅಪ್ರೆಂಟೈಸ್‌ಶಿಪ್‌.
  • ಸ್ಟಡಿ ಇನ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಸ್ಕೊಲಾಸ್ಟಿಕ್‌ ಆಪ್ಟಿಟ್ಯೂಡ್‌ ಟೆಸ್ಟ್‌.


from India & World News in Kannada | VK Polls https://ift.tt/2GIpCgP

ಕೆನಿನ್‌ಗೆ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ: ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಮುಗ್ಗರಿಸಿದ ಮುಗುರುಜಾ

ಮೆಲ್ಬೋರ್ನ್‌: ಅಮೆರಿಕದ ಯುವ ಪ್ರತಿಭೆ 21 ವರ್ಷದ ಸೋಫಿಯಾ ಕೆನಿನ್‌, ಪ್ರಸಕ್ತ ಸಾಲಿನ ಮೊತ್ತ ಮೊದಲ ಟೆನಿಸ್‌ ಟೂರ್ನಿ ಆಸ್ಟ್ರೇಲಿಯನ್‌ ಓಪನ್‌ನ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿನ ರಾಡ್‌ ಲೇವರ್‌ ಅರೆನಾದಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ 14ನೇ ಶ್ರೇಯಾಂಕಿತೆ ಸೋಫಿಯಾ, ಎರಡೂವರೆ ಗಂಟೆಗಳ ಕಾಲ ನಡೆದ ಮೂರು ಸೆಟ್‌ಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಸ್ಪೇನ್‌ನ ಅವರನ್ನು 4-6, 6-2, 6-2 ಅಂತರದಲ್ಲಿ ಮಣಿಸಿದರು. ಅಮೆರಿಕದ ಯುವ ಪ್ರತಿಭೆ ಇದಕ್ಕೂ ಮುನ್ನ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ 4ನೇ ಸುತ್ತು (2019ರಲ್ಲಿ) ಪ್ರವೇಶಿಸಿರುವುದು ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಇದೀಗ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಮುಡಿಗೇರಿಸಿಕೊಂಡಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವದ ಹಾಲಿ ನಂ.1 ಆಟಗಾರ್ತಿ ಆಷ್ಲೇ ಬಾರ್ಟಿಗೆ ಸೋಲುಣಿಸಿ ಪ್ರಶಸ್ತಿ ಸುತ್ತು ತಲುಪಿದ್ದರು. ಮತ್ತೊಂದೆಡೆ 2016ರಲ್ಲಿ ಫ್ರೆಂಚ್‌ ಓಪನ್‌ ಮತ್ತು 2017ರಲ್ಲಿ ವಿಂಬಲ್ಡನ್‌ ಗೆದ್ದ ಸಾಧನೆ ಮಾಡಿರುವ 26 ವರ್ಷದ ಆಟಗಾರ್ತಿ ಮುಗುರುಜಾ, ಗಾಯದ ಸಮಸ್ಯೆಯಿಂದ ಚೇತರಿಸಿ ಕಮ್‌ಬ್ಯಾಕ್‌ ಮಾಡಿದ್ದರಲ್ಲದೇ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಶ್ರೇಯಾಂಕ ರಹಿತರಾಗಿ ಕಣಕ್ಕಿಳಿದಿದ್ದರು. ಮುಗುರುಜಾ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಇದೇ ಮೊದಲ ಬಾರಿ ಫೈನಲ್‌ ತಲುಪಿದ ಸಾಧನೆ ಮಾಡಿದ್ದರು. ಇನ್ನು ಭಾನುವಾರ ನಡೆಯಲಿರು ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ 7 ಬಾರಿಯ ಚಾಂಪಿಯನ್‌ ಸರ್ಬಿಯಾದ ಮತ್ತು ಆಸ್ಟ್ರಿಯಾ ತಾರೆ ಹಾಗೂ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಗೆಲ್ಲುವತ್ತ ಕಣ್ಣಿಟ್ಟಿರುವ ಡಾಮಿನಿಕ್‌ ಥೀಮ್‌ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ನೊವಾಕ್‌ ಸೆಮಿಫೈನಲ್‌ನಲ್ಲಿ 6 ಬಾರಿಯ ಚಾಂಪಿಯನ್‌ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಅವರ ಸವಾಲು ಗೆದ್ದರೆ, ಥೀಮ್‌ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ರಾಫೆಲ್‌ ನಡಾಲ್‌ಗೆ ಸೋಲುಣಿಸಿ ಮತ್ತು ಸೆಮಿಫೈನಲ್‌ನಲ್ಲಿ 7ನೇ ಶ್ರೇಯಾಂಕಿತ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಮಣಿಸಿ ಮೊತ್ತ ಮೊದಲ ಬಾರಿ ಫೈನಲ್‌ ತಲುಪಿದ್ದಾರೆ. 32 ವರ್ಷದ ಅನುಭವಿ ಆಟಗಾರ ನೊವಾಕ್‌ ಜೊಕೊವಿಚ್‌ 16 ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳನ್ನು ಗೆದ್ದಿದ್ದು, ಮತ್ತೊಂದೆಡೆ 26 ವರ್ಷದ ಡಾಮಿನಿಕ್‌ ಥೀಮ್‌ 2018 ಮತ್ತು 2019ರಲ್ಲಿ ಫ್ರೆಂಚ್‌ ಓಪನ್‌ ರನ್ನರ್‌ಅಪ್‌ ಸ್ಥಾನ ಪಡೆದಿರುವುದು ಅವರ ಶ್ರೇಷ್ಠ ಪ್ರದರ್ಶನವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31hTGZP

‘ಬಜೆಟ್‌ ರೈತರು, ಯುವಕರಿಗೆ ಆಶಾದಾಯಕವಾಗಿಲ್ಲ’ ಸಿದ್ದರಾಮಯ್ಯ ಟೀಕೆ

ಮೈಸೂರು: ಕೇಂದ್ರ ಬಜೆಟ್‌ 2020 ರೈತರು ಹಾಗೂ ಯುವಕರ ಪಾಲಿಗೆ ಆಶಾದಾಯಕವಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಘೋಷಣೆಯಾಗಿರುವ 16 ಅಂಶಗಳ ಕಾರ್ಯಕ್ರಮಗಳ ಪೈಕಿ ಒಂಬತ್ತು ಅಂಶಗಳು ಕಾರ್ಪೋರೇಟರ್‌ ಫಾರ್ಮಿಂಗ್‌ಗೆ ಸಂಬಂಧಿಸಿದವು. ಈ ಮೂಲಕ ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಈ ನಿಟ್ಟಿನಲ್ಲಿ ನೋಡುವುದಾದರೆ ಬಜೆಟ್‌ 2020 ಖಾಸಗಿ ಕಂಪನಿಗಳಿಗೆ ಅನುಕೂಲವೇ ಹೊರತು ರೈತರು ಹಾಗೂ ಯುವಕರ ಪಾಲಿಗಲ್ಲ ಎಂದಿದ್ದಾರೆ. ಸರ್ವಜನಾಂಗದ ಏಳಿಗೆಗೆ ಈ ಬಜೆಟ್ -ಡಿಸಿಎಂ ಕಾರಜೋಳ ಕೇಂದ್ರ ಬಜೆಟ್‌ ಸರ್ವ ಜನಾಂಗದ ಏಳಿಗೆಗೆ ಒತ್ತು ಕೊಟ್ಟಿದೆ ಎಂದು ಡಿಸಿಎಂ ಗೋವಿಂದ್‌ ಕಾರಜೋಳ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಕಣ್ಣೊರೆಸುವ ಬಜೆಟ್ ಅಲ್ಲ, ಕಣ್ಣು ತೆರೆಸುವ ಬಜೆಟ್ ಎಂದು ಬಣ್ಣಿಸಿದ್ದಾರೆ. ದೇಶದ 130 ಕೋಟಿ ಜನರು ಹೆಮ್ಮೆ ಪಡುವ ಬಜೆಟ್ ಆಗಿದೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ದಲಿತರ ಕಲ್ಯಾಣಕ್ಕಾಗಿ ಅತಿ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಯೋಜನೆ 3.70 ಲಕ್ಷ ಕೋಟಿ ಅನುದಾನ ಹಾಗೂ ಬೆಂಗಳೂರು ಸಬ್- ಅರ್ಬನ್ ರೈಲು ಯೋಜನೆಗೂ 60 ಶೇ ಅನುದಾನ ಕೇಂದ್ರದಿಂದ ಸಿಕ್ಕಿರುವುದು ಸಂತಸ ತಂದಿದೆ ಎಂದರು.


from India & World News in Kannada | VK Polls https://ift.tt/3b4pplK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...