ಗೋಡ್ಸೆ ಮತ್ತು ಮೋದಿ ಸಿದ್ಧಾಂತ ಒಂದೇ: ಕೇರಳದಲ್ಲಿ ರಾಹುಲ್‌ ಕಿಡಿ

ವಯನಾಡ್‌: ಪ್ರಧಾನಿ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ಒಂದೇ ಸಿದ್ಧಾಂತವನ್ನು ನಂಬಿದವರು. ವ್ಯತ್ಯಾಸವೆಂದರೆ ತಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳಲು ನರೇಂದ್ರ ಮೋದಿಗೆ ಧೈರ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ಕಿಡಿಕಾರಿದರು. ಹುತಾತ್ಮರ ದಿನದಂದು ತಮ್ಮ ಲೋಕಸಭಾ ಕ್ಷೇತ್ರ ವಯನಾಡಿನ ಕಲ್ಪೆಟ್ಟದಲ್ಲಿ 'ಸಂವಿಧಾನ ಉಳಿಸಿ' ಜಾಥಾದಲ್ಲಿ ಪಾಲ್ಗೊಂಡ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "ನಾಥುರಾಮ್‌ ಗೋಡ್ಸೆ ಯಾರನ್ನೂ ಇಷ್ಟಪಡುತ್ತಿರಲಿಲ್ಲ, ಆತನಿಗೆ ಯಾರ ಬಗ್ಗೆಯೂ ಕಾಳಜಿ ಇರಲಿಲ್ಲ, ತನ್ನನ್ನೇ ತಾನು ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆತ ಮಹಾತ್ಮ ಗಾಂಧಿಯನ್ನು ಕೊಂದ. ಇದೇ ರೀತಿ ನಮ್ಮ ಪ್ರಧಾನಿ ಕೂಡ; ಅವರನ್ನು ಮಾತ್ರ ಪ್ರೀತಿಸುತ್ತಾರೆ, ಅವರನ್ನು ಮಾತ್ರ ನಂಬುತ್ತಾರೆ,” ಎಂದು ದೂರಿದರು. “ನೀವು ಗಮನಿಸಿ, ನರೇಂದ್ರ ಮೋದಿಗೆ ನಿರುದ್ಯೋಗ ಮತ್ತು ಉದ್ಯೋಗದ ಬಗ್ಗೆ ಏನೇ ಪ್ರಶ್ನೆಗಳನ್ನು ಕೇಳಿ ಅವರು ತಕ್ಷಣ ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಎನ್‌ಆರ್‌ಸಿ ಮತ್ತು ಸಿಎಎಯಿಂದ ಉದ್ಯೋಗ ಸಿಗುವುದಿಲ್ಲ. ಕಾಶ್ಮೀರದ ಪರಿಸ್ಥಿತಿ ಮತ್ತು ಹೊತ್ತಿ ಉರಿಯುತ್ತಿರುವ ಅಸ್ಸಾಂನಿಂದ ನಮ್ಮ ಯುವ ಜನರಿಗೆ ಉದ್ಯೋಗ ಸಿಗಲಾರದು,” ಎಂದು ಅವರು ವಿವಿರಿಸಿದರು. “‘ಭಾರತೀಯರು, ನಾವು ಭಾರತದವರು ಎಂದು ನಿರೂಪಿಸಬೇಕಾಗಿ ಬಂದಿದೆ. ನಾನು ಭಾರತೀಯ ಹೌದೋ ಅಲ್ಲವೋ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಯಾರು ಭಾರತೀಯರು, ಯಾರು ಅಲ್ಲ ಎಂದು ನಿರ್ಧರಿಸಲು ಅವರಿಗೆ ಲೈಸನ್ಸ್‌ ನೀಡಿದ್ದು ಯಾರು? ನನಗೆ ಗೊತ್ತು ನಾನು ಭಾರತೀಯ ಎಂದು ನಾನು ಇದನ್ನು ಯಾರ ಮುಂದೆಯೂ ಸಾಬೀತು ಮಾಡಬೇಕಾಗಿಲ್ಲ,” ಎಂದು ರಾಹುಲ್‌ ಗಾಂಧಿ ಹರಿಹಾಯ್ದರು.


from India & World News in Kannada | VK Polls https://ift.tt/2U51xbP

''ಭಾರತದ ಯುವಕರು ಹಿಂದೂಸ್ತಾನವನ್ನು ಮಾತ್ರವಲ್ಲ, ದೇಶವನ್ನೂ ಬದಲಾಯಿಸಬಹುದು'' ಎಂದಿದ್ದರೇ ರಾಹುಲ್‌ ಗಾಂಧಿ?

ಹರಿದಾಡುತ್ತಿದ್ದ ಸುದ್ದಿ ಏನು? 'ಪುಷ್ಪೇಂದ್ರ ಕುಲಶ್ರೇಷ್ಠ ಫ್ಯಾನ್ಸ್ ಕ್ಲಬ್' ಎಂಬ ಹೆಸರಿನ ಫೇಸ್‌ಬುಕ್ ಅಕೌಂಟೊಂದು 6 ಸೆಕೆಂಡುಗಳ ಉದ್ದದ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿ, ರಾಹುಲ್ ಗಾಂಧಿ ಭಾಷಣದ ವೇಳೆ ಮತ್ತೆ ತಪ್ಪು ಮಾಡಿದ್ದಾರೆ. ಅವರು ಮತ್ತೆ ನಶೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ವೀಡಿಯೊದಲ್ಲಿ, ಪ್ರಪಂಚ ಎಂಬ ಹಿಂದಿ ಪದ ಬಳಸುವ ಬದಲು ರಾಷ್ಟ್ರ ಎಂಬ ಹಿಂದಿ ಪದ ಬಳಸಿದ್ದಾರೆ. 'ಪೊಲಿಟಿಕಲ್ ಕೀಡಾ' ಎಂದು ಲೋಗೋ ಇರುವ ವಿಡಿಯೋವನ್ನು ಇವರು ಶೇರ್‌ ಮಾಡಿಕೊಂಡಿದ್ದರು. ಇದೇ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್ ಹ್ಯಾಂಡಲ್ 'ಹ್ಯೂಮರ್_ಸಿಲ್ಲಿ' ಎಂಬುವರು ಈ ವಿಡಿಯೋ ಕ್ಲಿಪ್‌ ಹಂಚಿಕೊಂಡಿದ್ದು, "ಹಿಂದೂಸ್ತಾನ - ದೇಶ ಎರಡೂ ಬೇರೆ ಬೇರೆಯೇ ಅಂದರೆ, ಭಾರತ ಮತ್ತು ರಾಷ್ಟ್ರ, ಈ ಎರಡು ಪರಸ್ಪರ ಭಿನ್ನವಾಗಿವೆ ಎಂದೂ ಹೇಳಿಕೊಂಡಿದ್ದಾರೆ. ಟ್ವೀಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ. ಇದೇ ವೀಡಿಯೊವನ್ನು ವಾಟ್ಸಾಪ್‌ನಲ್ಲಿಯೂ ವ್ಯಾಪಕವಾಗಿ ಹರಡಲಾಗುತ್ತಿದೆ. ಸತ್ಯ ಆರು ಸೆಕೆಂಡುಗಳ ವೀಡಿಯೊ ಕ್ಲಿಪ್ ದೀರ್ಘ ವಿಡಿಯೋದ ಟ್ರಿಮ್ ಮಾಡಿದ ಆವೃತ್ತಿಯಾಗಿದೆ. ರಾಹುಲ್‌ ಗಾಂಧಿ ತಪ್ಪು ಮಾತಾಡಿದ್ದನ್ನು ಮಾತ್ರ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ, ರಾಹುಲ್‌ ಗಾಂಧಿ ತನ್ನ ತಪ್ಪನ್ನು ತಕ್ಷಣದ ಒಂದು ಸೆಕೆಂಡಿನೊಳಗೆ ಸರಿಪಡಿಸಿಕೊಳ್ಳುತ್ತಾರೆ ಮತ್ತು ಆ ಭಾಗವನ್ನು ವಿಡಿಯೋದಲ್ಲಿ ತೋರಿಸಲಾಗುವುದಿಲ್ಲ. ಪರಿಶೀಲನೆ ಮತ್ತು ವಿಧಾನ '28 ಜನವರಿ 'ಯಂದು ರಾಹುಲ್‌ ಗಾಂಧಿ ಈ ಭಾಷಣ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸೂಚನೆಯನ್ನು ತೆಗೆದುಕೊಂಡು, ನಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೂರ್ಣ ಭಾಷಣದ ವಿಡಿಯೋವನ್ನು ಹುಡುಕಿದೆವು. ರಾಜಸ್ಥಾನದ ಜೈಪುರದ ರಾಮ್ ನಿವಾಸ್ ಬಾಗ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಯುವ ಅಕ್ರೋಶ್ ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಮಾತನಾಡುತ್ತಿದ್ದರು. 'ಶ್ರೀ ರಾಹುಲ್ ಗಾಂಧಿ ರಾಜಸ್ಥಾನದ ಜೈಪುರದಲ್ಲಿ ಯುವ ಆಕ್ರೋಶ್ ರ‍್ಯಾಲಿಯನ್ನು ಉದ್ದೇಶಿಸಿ' ಎಂಬ ಶೀರ್ಷಿಕೆಯೊಂದಿಗೆ, 2020 ರ ಜನವರಿ 28 ರಂದು ಚಾನೆಲ್‌ಗೆ ಅಪ್‌ಲೋಡ್ ಮಾಡಿದ ಮೂಲ ವಿಡಿಯೋದಲ್ಲಿ, ಸಂಬಂಧಿತ ಭಾಗವು 2.40 - 2.53 ನಿಮಿಷಗಳಲ್ಲಿ ಈ ತಪ್ಪು ಮಾತನ್ನಾಡಿದ್ದಾರೆ. ಭಾರತದ ಯುವಕರು ಹಿಂದೂಸ್ತಾನವನ್ನು ಮಾತ್ರವಲ್ಲ, ರಾಷ್ಟ್ರವನ್ನೂ ಬದಲಾಯಿಸಬಹುದು ಎಂದು ರಾಹುಲ್‌ ಗಾಂಧಿ ಹೇಳಿದ್ದನ್ನು ಕೇಳಬಹುದು. ಮತ್ತು ತಕ್ಷಣವೇ ತನ್ನ ತಪ್ಪನ್ನು ಸರಿಪಡಿಸಿಕೊಂಡಿರುವ ರಾಹುಲ್‌ ಗಾಂಧಿ, ಜಗತ್ತನ್ನು ಬದಲಾಯಿಸಬಹುದು.. ಕ್ಷಮಿಸಿ. ರಾಷ್ಟ್ರವಲ್ಲ, ಅವರು ಜಗತ್ತನ್ನೇ ಬದಲಾಯಿಸಬಹುದು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಇಲ್ಲಿ ನೋಡಿ.. ತೀರ್ಮಾನ ಯುವ ಆಕ್ರೋಶ್ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ನೀಡಲು ಟ್ರಿಮ್ ಮಾಡಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ. ರಾಹುಲ್‌ ಗಾಂಧಿ ತಪ್ಪು ಮಾಡಿರುವುದು ನಿಜವಾಗಿದ್ದರೂ, ಮುಂದಿನ ಸೆಕೆಂಡಿನಲ್ಲಿ ತನ್ನ ತಪ್ಪನ್ನು ಸರಿಪಡಿಸುವುದನ್ನು ಮೂಲ, ದೀರ್ಘ ವಿಡಿಯೋ ತೋರಿಸುತ್ತದೆ.


from India & World News in Kannada | VK Polls https://ift.tt/31436YS

ವರನ ತಂದೆ ಜೊತೆ ವಧುವಿನ ತಾಯಿ ಪರಾರಿ: 16 ದಿನಗಳ 'ಹನಿಮೂನ್‌' ಬಳಿಕ ಮರಳಿದ 'ಒಲವಿನ' ಜೋಡಿ!

ಗಾಂಧಿನಗರ: ಮಕ್ಕಳ ಮದುವೆಗೆ ಏರ್ಪಾಡಿನ ನಡುವೆ ಸದ್ದಿಲ್ಲದೆ ಓಡಿ ಹೋಗಿದ್ದ ಪೋಷಕರು 16 ದಿನಗಳ ನಂತರ ವಾಪಾಸಾಗಿದ್ದಾರೆ. ವರನ ತಂದೆ ಮತ್ತು ವಧುವಿನ ತಾಯಿ ಇಬ್ಬರು ಮಕ್ಕಳ ಮದುವೆಯ ಚಿಂತೆ ಬಿಟ್ಟು ತಮ್ಮ ಯೌವನದ ಪ್ರೀತಿ ನೆನೆದು ಓಡಿಹೋಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಓಡಿ ಹೋಗಿದ್ದ ಪೋಷಕರ ಜೋಡಿ ಮರಳಿ ಬಂದಿರುವ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಗಿರೀಶ್‌ ಪಾಂಡೆ, ''ಫೆಬ್ರವರಿಯಲ್ಲಿ ರಾಕೇಶ್‌ ಅವರ ಮಗ ಮತ್ತು ಸ್ವಾತಿ ಅವರ ಮಗಳ ಜೊತೆ ವಿವಾಹ ನಿಕ್ಕಿಯಾಗಿತ್ತು. ಆದರೆ ಜನವರಿ 10 ರಂದು ರಾಕೇಶ್‌ ಹಾಗೂ ಸ್ವಾತಿ ಕಾಣೆಯಾಗಿದ್ದರು. ಜನವರಿ 26ರಂದು ಇವರಿಬ್ಬರು ಮನೆ ಸೇರಿದ್ದಾರೆ. ಇವರಿಬ್ಬರು ಮಧ್ಯ ಪ್ರದೇಶದ ಉಜ್ಜೈನ್‌ನಲ್ಲಿ ನೆಲೆಸಿದ್ದರು. ಸ್ವಾತಿ ಅವರನ್ನು ಪತಿ ಮನೆಗೆ ಸೇರಿಸಿಕೊಳ್ಳಲು ಒಪ್ಪದಿದ್ದ ಕಾರಣ ತವರು ಮನೆ ಸೇರಿಕೊಂಡಿದ್ದಾರೆ'' ಎಂದು ತಿಳಿಸಿದರು. ರಾಕೇಶ್ ಹಾಗೂ ಸ್ವಾತಿ ಬಹುಕಾಲದ ಗೆಳೆಯರು ಎಂಬುದು ನಾಪತ್ತೆಯಾದ ನಂತರ ಎರಡೂ ಮನೆಯವರಿಗೆ ಅರಿವಿಗೆ ಬಂದಿತ್ತು. ಇಬ್ಬರೂ ಪರಸ್ಪರ ಮಾತನಾಡಿಕೊಂಡೇ ಓಡಿ ಹೋಗಿದ್ದಾರೆ ಎಂದು ತನಿಖೆ ವೇಳೆ ಬಯಲಾಯ್ತು. ಎರಡೂ ಮನೆಯವರು ಒಂದೇ ಸಮುದಾಯಕ್ಕೆ ಸೇರಿದ್ದ ಕಾರಣ, ಘರ್ಷಣೆಗೆ ಅವಕಾಶ ಕೊಡದಂತೆ ಮಾತುಕತೆ ನಡೆಸಲಾಯ್ತು. ವಧುವಿನ ತಾಯಿ ಸ್ವಾತಿ ಜೊತೆ ಓಡಿಹೋದ ವರನ ತಂದೆ ರಾಕೇಶ್, ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಜವಳಿ ಉದ್ಯಮಿಯಾಗಿ ಹೆಸರು ಮಾಡಿರುವಾತ. ರಾಜಕೀಯ ಪಕ್ಷವೊಂದರ ನಾಯಕ ಕೂಡಾ ಆಗಿದ್ದಾರೆ. ಇಬ್ಬರ ಪತ್ತೆಗೆ ಪೊಲೀಸರು ದೇಶಾದ್ಯಂತ ಬಲೆ ಬೀಸಿದ್ದರು.


from India & World News in Kannada | VK Polls https://ift.tt/2ObccOx

ಕಿವೀಸ್ ಆಟಗಾರರ ಕ್ರೀಡಾಸ್ಫೂರ್ತಿಗೆ ಮನಸೋತ ರೋಹಿತ್ ಶರ್ಮಾ

ಹೊಸದಿಲ್ಲಿ: ಕ್ರಿಕೆಟ್ ಆಡುವ ದೇಶಗಳ ಪೈಕಿ ಆಟಗಾರರು ಅತಿ ಹೆಚ್ಚು ಕ್ರೀಡಾಸ್ಫೂರ್ತಿಯನ್ನು ಮೆರೆಯುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ಮಾದರಿಯ ಆಟವೇ ಆಗಿರಲಿ. ನ್ಯೂಜಿಲೆಂಡ್ ಆಟಗಾರರು ಎಲ್ಲೇ ಮೀರುವುದಿಲ್ಲ. ಇದೇ ಕಾರಣಕ್ಕಾಗಿ ಜಗತ್ತಿನಾದ್ಯಂತ ಹೆಚ್ಚಿನ ಜನಪ್ರಿಯತೆ ಹಾಗೂ ಗೌರವಕ್ಕೆ ಪಾತ್ರವಾಗಿದ್ದಾರೆ. ಇದೀಗ ಕಿರಿಯರ ವಿಶ್ವಕಪ್‌ನಲ್ಲೂ ನ್ಯೂಜಿಲೆಂಡ್ ಜೂನಿಯರ್ ಆಟಗಾರರು ಅತ್ಯುತ್ತಮ ಕ್ರೀಡಾ ಸ್ಫೂರ್ತಿಯನ್ನು ಮೆರೆಯುವ ಮೂಲಕ ಗಮನ ಸೆಳೆದಿದ್ದಾರೆ. ತೀವ್ರ ಗಾಯದಿಂದ ಬಳಲುತ್ತಿದ್ದ ಎದುರಾಳಿ ತಂಡದ ಆಟಗಾರನಿಗೆ ಹೆಗಲು ಕೊಟ್ಟು ಎತ್ತಿಕೊಂಡು ಮೈದಾನಕ್ಕೆ ಹೊರಕ್ಕೆ ಸಾಗಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಅಂಡರ್ 19 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಹಾಗೂ ವೆಸ್ಟ್‌ಇಂಡೀಸ ನಡುವಣ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಸ್ಪೂರ್ತಿದಾಯಕ ವಿಡಿಯೋ ದರ್ಶನವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್‌ಇಂಡೀಸ್ ಕಿರ್ಕ್ ಮೆಕೆಂಝಿ ಅಮೋಘ ಬ್ಯಾಟಿಂಗ್ ನೆರವಿನ ಹೊರತಾಗಿಯೂ 47.5 ಓವರ್‌ಗಳಲ್ಲಿ 238 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಸ್ನಾಯು ಸೆಳೆತಕ್ಕೊಳಗಾಗಿರುವ ಮೆಕೆಂಝಿ ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು. ಈ ಹಂತದಲ್ಲಿ ಮೆಕೆಂಝಿಗೆ ನಡೆದಾಡಲು ಸಾಧ್ಯವಾಗಿರುತ್ತಿರಲಿಲ್ಲ. ಅಲ್ಲದೆ ಪೆವಿಲಿಯನ್‌ಗೆ ಹಿಂತಿರುಗಲು ಪರದಾಡುತ್ತಿದ್ದರು. ಈ ವೇಳೆಯಲ್ಲಿ ಕಿವೀಸ್ ಆಟಗಾರರು ಹೆಗಲು ಕೊಟ್ಟು ವಿಂಡೀಸ್ ಆಟಗಾರರನ್ನು ಎತ್ತಿಕೊಂಡು ಪೆವಿಲಿಯನ್‌ನತ್ತ ಸಾಗಿಸಿದರು. ಪ್ರಸ್ತುತ ಕಿವೀಸ್ ಆಟಗಾರರ ಕ್ರೀಡಾ ಮನೋಭಾವಕ್ಕೆ ವಿಶ್ವದೆಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯ ಆಟಗಾರರು ಇದರಿಂದ ಹೊರತಾಗಿಲ್ಲ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಗುರುವಾರವಷ್ಟೇ ನ್ಯೂಜಿಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಸೂಪರ್ ಸರಣಿ ಗೆಲುವಿಗೆ ಕಾರಣವಾಗಿರುವ ಹಿಟ್‌ಮ್ಯಾನ್ ಖ್ಯಾತಿಯ , ಕಿವೀಸ್ ಆಟಗಾರರ ಕ್ರೀಡಾಸ್ಫೂರ್ತಿಗೆ ಮನಸೋತಿದ್ದಾರೆ. 'ಈ ವಿಡಿಯೋ ನೋಡಲು ತುಂಬಾನೇ ಖುಷಿಯಾಗುತ್ತಿದೆ. ಸ್ಪಿರಿಟ್ ಆಫ್ ಕ್ರಿಕೆಟ್ ತನ್ನ ಉತ್ತುಂಗದಲ್ಲಿದೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಪೈಕಿ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿಕೆಯು ಇನ್ನು ಹೆಚ್ಚಿನ ಗಮನ ಸೆಳೆದಿದೆ. 'ಮಾನವಿಯತೆಯು ಹೆಚ್ಚು ನಮ್ರತೆಯಿಂದ ಪ್ರಾರಂಭವಾಗುತ್ತದೆ. ಅತ್ಯುತ್ತಮ ಪರಂಪರೆಯನ್ನು ನ್ಯೂಜಿಲೆಂಡ್ ಮುಂದಿನ ಪೀಳಿಗೆಯ ಆಟಗಾರರು ಸುಂದರವಾಗಿ ಮುಂದಕ್ಕೆ ಸಾಗಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ನಮ್ಮ ಕಾಲದಲ್ಲಿ ಅತಿ ಹೆಚ್ಚು ಪ್ರೀತಿಗೆ ಪಾತ್ರವಾಗಿರುವ ತಂಡವೆನಿಸಿದೆ' ಎಂದು ಹಾಡಿ ಹೊಗಳಿದ್ದಾರೆ. ಇತ್ತಿಚೇಗಷ್ಟೇ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. 'ಏಕದಿನ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಿವೀಸ್ ಆಟಗಾರರನ್ನು ನೋಡಿದಾಗ ಅಂತಹ ಭಾವನೆಯೇ ಮೂಡುವುದಿಲ್ಲ. ಅವರು ಅಷ್ಟೊಂದು ಒಳ್ಳೆಯ ವ್ಯಕ್ತಿಗಳಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ನಿದರ್ಶನವನ್ನು ಬರೆದಿದ್ದಾರೆ' ಎಂದು ನುಡಿದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RCr1eQ

ಕಿವೀಸ್ ವಿರುದ್ಧ ಗೆಲ್ಲಲು ಭಾರತ ಅರ್ಹವಲ್ಲವೇ? ವಿಲಿಯಮ್ಸನ್‌ಗಾಗಿ ಮಿಡಿದ ಹೃದಯ

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ದ 'ಟೈ'ನಲ್ಲಿ ಅಂತಗೊಂಡ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಬಾರಿಸಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೆರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೊದಲು ಆಕ್ಲೆಂಡ್‌ನಲ್ಲಿ ನಡೆದ ಮೊದಲೆರಡು ಟಿ20 ಪಂದ್ಯಗಳಲ್ಲೂ ಭಾರತ ಗೆಲುವು ಬಾರಿಸಿತ್ತು. ಮೂರನೇ ಟಿ20 ಪಂದ್ಯದಲ್ಲೂ ವಿಜಯ ಗಳಿಸುವಲ್ಲಿ ಭಾರತ ಯಶಸ್ವಿಯಾಗಿರಬಹುದು. ಆದರೆ ಎದುರಾಳಿ ತಂಡವು ತೋರಿರುವ ಹೋರಾಟ ಮನೋಭಾವವನ್ನು ಭಾರತ ತಂಡದ ನಾಯಕ ಮೆಚ್ಚಿದ್ದಾರೆ. ವಿಶೇಷವಾಗಿಯೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ ಅವರಿಗಾಗಿ ಕೊಹ್ಲಿ ಹೃದಯ ಮಿಡಿಯಿತು. 'ನನಗನಿಸುತ್ತದೆ ಒಂದು ಹಂತದಲ್ಲಿ ನಮ್ಮ ಕೈಯಿಂದ ಪಂದ್ಯ ಕೈ ಜಾರಿತು ಎಂದು ಅಂದುಕೊಂಡಿದ್ದೆ. ನಮ್ಮ ಕೋಚ್ ಬಳಿಯೂ ಎದುರಾಳಿಗಳು ಗೆಲುವಿಗೆ ಅರ್ಹವಾಗಿದ್ದಾರೆ ಎಂದೇ ನುಡಿದಿದ್ದೆ. 95 ರನ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ ಅವರಿಗಾಗಿ ಬೇಸರ ಅನಿಸುತ್ತಿದೆ. ಫಲಿತಾಂಶಗಳು ನಿಮ್ಮ ಪರವಾಗಿಲ್ಲದಿದ್ದಾಗ ಅಂತಹ ಇನ್ನಿಂಗ್ಸ್ ಭಾವನೆಗಳನ್ನು ಅರಿತುಕೊಳ್ಳಬಲ್ಲೆ' ಎಂದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ರೋಹಿತ್ ಶರ್ಮಾ ಅರ್ಧಶತಕದ (65) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 179 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ನಾಯಕ ವಿಲಿಯಮ್ಸನ್ ಅದ್ಭುತ ಆಟದಿಂದ ಇನ್ನೇನು ಗೆದ್ದೇ ಬಿಟ್ಟಿತು ಎಂದು ಅಂದುಕೊಂಡಿದ್ದೆವು. ಆದರೆ ಮೊಹಮ್ಮದ್ ಶಮಿ ಅಂತಿಮ ಓವರ್‌ನಲ್ಲಿ ವಿಲಿಯಮ್ಸನ್ ವಿಕೆಟ್ ಒಪ್ಪಿಸುವುದರೊಂದಿಗೆ ಪಂದ್ಯದ ಚಿತ್ರಣವು ಬದಲಾಯಿತು. ಅಂತಿಮವಾಗಿ ರೋಚಕ ಟೈನಲ್ಲಿ ಪಂದ್ಯ ಅಂತ್ಯಗೊಂಡಿತು. ವಿರೋಚಿತ ಹೋರಾಟ ನೀಡಿದ ವಿಲಿಯಮ್ಸನ್ 48 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಆರು ಸಿಕ್ಸರ್‌ಗಳಿಂದ 95 ರನ್ ಗಳಿಸಿದರು. ಇದರಿಂದ ಸರಣಿ ಸೋಲಿನ ಮುಖಭಂಗಕ್ಕೊಳಗಾದರು. ಅದೇ ಹೊತ್ತಿಗೆ ಕೊನೆಯ ಎಸೆತವನ್ನು ನೇರವಾಗಿ ವಿಕೆಟ್‌ಗೆ ದಾಳಿ ಮಾಡಲು ಮೊಹಮ್ಮದ್ ಶಮಿ ಜೊತೆಗೆ ಮಾತುಕತೆ ನಡೆಸಿರುವುದಾಗಿ ಕೊಹ್ಲಿ ಗೇಮ್ ಪ್ಲ್ಯಾನ್ ವಿವರಿಸಿದರು. ಯಾಕೆಂದರೆ ಬೇರೆ ಯಾವುದೇ ದಾಳಿಯನ್ನು ಪ್ರಯತ್ನಿಸಿದರೂ ಕನಿಷ್ಠ ಸಿಂಗಲ್ಸ್ ದೊರಕುವ ಅವಕಾಶವಿತ್ತು ಎಂದು ಹೇಳಿದರು. ಪಂದ್ಯದ ಅಂತಿಮ ಎಸೆತದಲ್ಲಿ ರಾಸ್ ಟೇಲರ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31gr2IV

ರೈತರ ಹಕ್ಕು ರಕ್ಷಿಸದ ಬೀಜ ಮಸೂದೆ ಬೇಡ: ರೈತರು, ತಜ್ಞರಿಂದ ಹೋರಾಟದ ಎಚ್ಚರಿಕೆ

ಬೆಂಗಳೂರು: ಕೇಂದ್ರದ ಉದ್ದೇಶಿತ ಬೀಜ ಮಸೂದೆಯು ರೈತರ ಹಿತಾಸಕ್ತಿ ಕಾಪಾಡದಿದ್ದಲ್ಲಿ ಅಂತಹ ಕಾನೂನು ರೂಪಿಸುವ ಅಗತ್ಯ ಇಲ್ಲ. ಬೀಜ ಉತ್ಪಾದಿಸುವ ಹಕ್ಕನ್ನು ಅನ್ನದಾತರಿಂದ ಕಸಿಯಲು ಯತ್ನಿಸಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕೃಷಿ ತಜ್ಞರು ಎಚ್ಚರಿಸಿದರು. ಗಾಂಧಿ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರ ಆಯೋಜಿಸಿದ್ದ 'ಬೀಜ ಮಸೂದೆ-2019' ವಿಚಾರ ಸಂಕಿರಣದಲ್ಲಿ ರೈತ ಮುಖಂಡರ ಒತ್ತಾಯಕ್ಕೆ ಕೃಷಿ ತಜ್ಞರು ಕೂಡ ಸಾಥ್‌ ನೀಡಿದರು. ಉತ್ತಮ ಗುಣಮಟ್ಟದ ಬೀಜ ಹಾಗೂ ತಂತ್ರಜ್ಞಾನ ಆಧರಿತ ಬಿಜೋತ್ಪಾದನೆ ಇಳುವರಿಗೆ ರಹದಾರಿಯಾಗಲಿದೆ. ಇದರಿಂದ ರೈತರ ಆದಾಯ ವೃದ್ಧಿಸಲಿದೆ. ಆದರೆ, ರೈತರ ಹೆಸರಿನಲ್ಲಿಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ನೀಡುವಂತಿದ್ದಲ್ಲಿ ಅಂತಹ ಮಸೂದೆಯನ್ನು ಜಾರಿ ಮಾಡುವ ದುಸ್ಸಾಹಸಕ್ಕೆ ಸರಕಾರ ಕೈ ಹಾಕಬಾರದು ಎಂಬ ಒಟ್ಟಾಭಿಪ್ರಾಯ ಕೇಳಿಬಂತು. ಕೃಷಿ ತಜ್ಞ ಡಾ.ಪ್ರಕಾಶ್‌ ಕಮ್ಮರಡಿ ಮಾತನಾಡಿ, ''ಉದ್ದೇಶಿತ ಬೀಜ ಮಸೂದೆ ಮೇಲ್ನೋಟಕ್ಕೆ ರೈತರ ಪರ ಎನ್ನುವಂತಿದ್ದರೂ ಒಳಹೊಕ್ಕು ನೋಡಿದರೆ ಕೃಷಿಕರಿಗೆ ಮಾರಕದಂತಿದೆ. ಒಂದು ದೇಶಕ್ಕೆ ಬೇಕಾದ ಬೀಜವನ್ನು ಒಂದೇ ಕಂಪನಿಯಿಂದ ಮಾರಾಟ ಮಾಡುವ ವ್ಯವಸ್ಥೆ ಅನುಮಾನ ಹುಟ್ಟಿಸುತ್ತದೆ. ಹಿಂದಿನ ಮಸೂದೆಗಳು ಹಾಗೂ ಕಾನೂನುಗಳನ್ನು ಮೂಲೆಗುಂಪು ಮಾಡಿರುವ ಬೀಜ ವ್ಯಾಖ್ಯಾನವು ಹಾಸ್ಯಾಸ್ಪದವಾಗಿದೆ. ಗೊಂದಲದ ಗೂಡಾಗಿರುವ ಮಸೂದೆ ಕುರಿತು ಸಂಸತ್ತಿನಲ್ಲಿ ಸವಿಸ್ತಾರವಾಗಿ ಚರ್ಚಿಸದಿದ್ದಲ್ಲಿ ಕಾಯಿದೆ ಆಗಲು ಅರ್ಹವಲ್ಲ,'' ಎಂದು ಪ್ರತಿಪಾದಿಸಿದರು. ''ಬೀಜ ಮಸೂದೆ-2019ನ್ನು ಆತುರವಾಗಿ ಜಾರಿಗೆ ತರುವ ಅಗತ್ಯ ಇಲ್ಲ. 2001ರಲ್ಲಿ ಕೇಂದ್ರ ಸರಕಾರ ಒಪ್ಪಿದ್ದ 'ಬೆಳೆ ವೈವಿಧ್ಯ ರಕ್ಷಣೆ ಹಾಗೂ ರೈತರ ಹಕ್ಕು (ಪಿವಿಪಿಎಫ್‌ಆರ್‌) ಕಾಯಿದೆ ಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. 2004ರ ಬೀಜ ನೀತಿಯಲ್ಲಿನ ಅಂಶಗಳು ಕಡತ ಬಿಟ್ಟು ಮುಂದೆ ಹೋಗಿಲ್ಲ. 1986ರ ನೋಂದಣಿ ಕಾಯಿದೆಯಂತೆ ದೇಶದ 22 ಬೆಳೆ ವೈವಿಧ್ಯತಾ ವಲಯಗಳ ರಕ್ಷಣೆಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡ ನಂತರವೇ ಸರಕಾರ ರೈತರ ವಿಶ್ವಾಸ ಪಡೆದು ಮಸೂದೆಗೆ ಅಂಗೀಕಾರ ಪಡೆಯಲಿ,'' ಎಂದು ವಿಶ್ಲೇಷಿಸಿದರು. ರೈತರ ಬೀಜ ಹಕ್ಕು ಮೊಟಕಾಗ ಬಾರದು: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ''ಬೀಜೋತ್ಪಾದನೆ ಭೂಮಿಯಿಂದಲೇ ಆರಂಭವಾಗುತ್ತದೆ. ಇದನ್ನು ರೈತ ಹೊಲದಲ್ಲಿದ್ದುಕೊಂಡೇ ಮಾಡಬೇಕು. ಈ ಸತ್ಯವನ್ನು ಅರಿಯುವ ತಿಳಿವಳಿಕೆ ತಜ್ಞರು ಹಾಗೂ ಸರಕಾರಕ್ಕೆ ಇರಬೇಕು. ಏನೇ ತಿದ್ದುಪಡಿ ಆದಲ್ಲಿ ರೈತನ ಬೀಜ ಹಕ್ಕು ಮೊಟಕು ಆಗಬಾರದು,'' ಎಂದರು. ''ಉದ್ದೇಶಿತ ಮಸೂದೆಯಲ್ಲಿಕೆಲವು ಅಂಶಗಳು ರೈತ ಪರವಾಗಿವೆ. ಆದರೆ, ಇಡೀ ದೇಶಕ್ಕೆ ಒಂದೇ ಬೀಜ ವಿತರಣೆ ಕಂಪನಿ ಏಕಿರಬೇಕು? ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡದಿರುವುದು ಏಕೆ? ರೈತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ ಎಂಬ ಗ್ಯಾರಂಟಿ ಏನು? ಇತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವವರೆಗೂ ಮಸೂದೆಗೆ ಒಪ್ಪಿಗೆ ನೀಡಬಾರದು,'' ಎಂದು ಅವರು ಒತ್ತಾಯಿಸಿದರು. ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ.ಎಂ.ಕೆ.ರಮೇಶ್‌ ಅವರು 'ಬೀಜ ಮಸೂದೆ ಹಾಗೂ ಕಾನೂನು' ವಿಷಯದ ಕುರಿತು ರೈತರಿಗೆ ಮಾಹಿತಿ ಒದಗಿಸಿದರು. ಮಾರಕ ಅಂಶ ವಿರೋಧಿಸಿ: ಬೀಜ ಪರಿಣಿತ ಡಾ.ಶರಣ್‌ ಅಂಗಡಿ ಮಾತನಾಡಿ, "ಉದ್ದೇಶಿತ ಮಸೂದೆಯಿಂದ ಬೀಜದ ಮೇಲೆ ರೈತನಿಗಿರುವ ಹಕ್ಕಿಗೆ ಚ್ಯುತಿ ಆಗದು. ರೈತರು ಬೀಜಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದ್ದು, ಮಾರಾಟ ಮಾಡುವಂತಿದ್ದಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಗ್ರಾಹಕ ಕೋರ್ಟ್‌ ಮೊರೆ ಹೋಗಲು ಅವಕಾಶ ಸಿಗಲಿದೆ. ರೈತರಿಗೆ ಮಾರಕವಾಗುವ ಅಂಶಗಳಿದ್ದಲ್ಲಿ ಅವುಗಳನ್ನು ಮಸೂದೆಯಿಂದ ಕೈಬಿಡಬೇಕೆಂಬ ಒತ್ತಾಯ ಮಾತ್ರ ಇರಲಿ,'' ಎಂದು ಸಲಹೆ ನೀಡಿದರು. ಕಂಪನಿಯಿಂದ ಪಡೆದ ಬೀಜದಿಂದ ಫಸಲು ಬಾರದೆ ನಷ್ಟವುಂಟಾದಲ್ಲಿ ರೈತರಿಗೆ ಪರಿಹಾರ ಸಿಗಬೇಕು. ಈ ಅಂಶವನ್ನು ಮಸೂದೆಯಲ್ಲಿ ಅಡಕಗೊಳಿಸದ ಹೊರತು ರೈತರಿಗೆ ನ್ಯಾಯ ಸಿಗದು. - ಎಚ್‌.ಆರ್‌. ಬಸವರಾಜ, ರೈತ ಮುಖಂಡ ಬೀಜ ಉತ್ಪಾದಿಸುವವನು ಭೂಮಿಯ ಒಡೆಯನಾಗಿರಬೇಕೆಂಬ ಮಸೂದೆಯ ಅಂಶವನ್ನು ಪರಿಗಣಿಸಿದರೆ ನಾಲ್ಕು ಎಕರೆ ಉಳ್ಳ ಖಾಸಗಿ ಕಂಪನಿ ಮಾಲೀಕನನ್ನೂ ರೈತ ಎಂದು ಒಪ್ಪಿಕೊಳ್ಳಬೇಕೆ? - ಡಾ. ಪ್ರಕಾಶ್‌ ಕಮ್ಮರಡಿ, ಕೃಷಿ ತಜ್ಞ


from India & World News in Kannada | VK Polls https://ift.tt/2Oc0RgX

ಇಂದು ಹುತಾತ್ಮರ ದಿನ: ದೇಶದಾದ್ಯಂತ ನಮನ, ಗಾಂಧೀಜಿಯನ್ನು ನೆನೆದು ಮೋದಿ ಟ್ವೀಟ್

ಭಾರತ ದೇಶದ ರಕ್ಷ ಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜವಾನರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು ಇವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಇಂದು ಅವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷ ಣೆಗಾಗಿ ಬಲಿದಾನ ಕೊಟ್ಟಿದ್ದಾರೆ. ಇವರನ್ನು ಸ್ಮರಿಸಲು ಕೂಡಾ ಒಂದು ದಿನವಿದೆ. ಅದುವೇ ಜನವರಿ 30. ಈ ದಿನವನ್ನು ಭಾರತದಲ್ಲಿ ಅಥವಾ ಸರ್ವೋದಯ ದಿನವೆಂದು ಆಚರಿಸಲಾಗುತ್ತದೆ. ಆ ದಿನ ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತದೆ. ಮೂಲತಃ ಈ ದಿನ ಭಾರತದ ಪಿತಾಮಹ ಮಹಾತ್ಮಾ ಗಾಂಧೀಜಿ ಅವರು ನಾಥುರಾಮ್‌ ಗೋಡ್ಸೆ ಅವರಿಂದ ಹತರಾದ ದಿನವೂ ಹೌದು. ಗಾಂಧೀಜಿಯವರ ಪುಣ್ಯತಿಥಿಯ ನೆನಪಿಗಾಗಿಯೂ ಈ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಪ್ರಧಾನ ಮಂತ್ರಿ ಮತ್ತು ವಿವಿಧ ಸೇನಾ ದಳಗಳ ಮುಖ್ಯಸ್ಥರು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಹುತಾತ್ಮರಿಗೆ ಗೌರವವನ್ನು ಸಲ್ಲಿಸುತ್ತಾರೆ. ಎರಡು ನಿಮಿಷಗಳ ಮೌನಾಚರಣೆಯ ಮಾಡಿ ಪ್ರಾರ್ಥಿಸುತ್ತಾರೆ. ಇಂದು ಗಾಂಧೀಜಿ ಅವರ 72 ನೇ ಪುಣ್ಯತಿಥಿಯಾಗಿದ್ದು, ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ " ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಿಂದು ಅವರಿಗೆ ಕೋಟಿ ಕೋಟಿ ನಮನ. ಪೂಜ್ಯ ಬಾಪು ಅವರ ವ್ಯಕ್ತಿತ್ವ, ಆಲೋಚನೆಗಳು ಮತ್ತು ಆದರ್ಶಗಳು ಹೊಸ ಭಾರತ ನಿರ್ಮಾಣಕ್ಕೆ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ" ಎಂದು ಬರೆದುಕೊಂಡಿದ್ದಾರೆ.


from India & World News in Kannada | VK Polls https://ift.tt/2u5lSmL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...