'ವಾಟ್ಸಪ್ ಕದ್ದಾಲಿಕೆ' ಒಳಸುಳಿಗೆ ಸಿಲುಕಿದ ಕೇಂದ್ರ ಸರ್ಕಾರ: ರಫೇಲ್ ವಿವಾದಕ್ಕೆ ಹೋಲಿಸಿದ ರಾಹುಲ್

ಹೊಸ ದಿಲ್ಲಿ: ಭಾರತದ ಪತ್ರಕರ್ತರು, ದಲಿತ ಮುಖಂಡರು ಹಾಗೂ ಮಾನವಹಕ್ಕು ಕಾರ್ಯಕರ್ತರ ಸಂದೇಶಗಳನ್ನು ಇಸ್ರೇಲಿ ಮೂಲದ ಬೇಹುಗಾರರು ಮಾಡುತ್ತಿರುವ ವಿಚಾರ, ಇದೀಗ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಅತ್ತ ಅಮೆರಿಕ ನ್ಯಾಯಾಲಯದಲ್ಲಿ ವಾಟ್ಸಪ್ ಸಂಸ್ಥೆ ಇಸ್ರೇಲಿ ಬೇಹುಗಾರರ ವಿರುದ್ಧ ಕೇಸ್ ದಾಖಲಿಸುತ್ತಿದ್ದಂತೆಯೇ, ಇತ್ತ ಭಾರತದಲ್ಲೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನಾಯಕ ರಾಹುಲ್ ಗಾಂಧಿ, ವಾಟ್ಸಪ್ ವಿವಾದವನ್ನು ರಫೇಲ್ ವಿವಾದಕ್ಕೆ ಹೋಲಿಸಿದ್ಧಾರೆ. ‘ಭಾರತದ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲು ಯಾರು ಸಂಚು ರೂಪಿಸಿದರು ಎಂದು ಕೇಂದ್ರ ಸರ್ಕಾರ ವಾಟ್ಸಪ್ ಸಂಸ್ಥೆಯನ್ನು ಕೇಳುತ್ತಿದೆ, ಈ ಬೆಳವಣಿಗೆಯನ್ನು ನೋಡಿದ್ರೆ, ಭಾರತ ರಫೇಲ್ ಜೆಟ್ ಖರೀದಿ ವೇಳೆ ಯಾರು ದುಡ್ಡು ಮಾಡಿಕೊಂಡರು ಎಂದು ಡಸಾಲ್ಟ್ ಸಂಸ್ಥೆಯನ್ನು ಪ್ರಧಾನಿ ಮೋದಿ ಕೇಳಿದಂತಿದೆ’ ಎಂದು ಕುಟುಕಿದ್ದಾರೆ. ಪ್ರಧಾನಿ ಮೋದಿ ಸರ್ಕಾರವೇ ವಾಟ್ಸಪ್ ಕದ್ದಾಲಿಕೆಗೆ ಹೊಣೆ ಎಂದು ಆರೋಪಿಸಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರ ಜನತೆಯ ಖಾಸಗಿತನದ ಮೇಲೇ ದಾಳಿ ಮಾಡಿದೆ ಎಂದು ಕಿಡಿಕಾರಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಎಷ್ಟೋ ನ್ಯಾಯಾಧೀಶರು ಹಾಗೂ ರಾಜಕೀಯ ನಾಯಕರ ವಾಟ್ಸಪ್ ಸಂದೇಶಗಳ ಕದ್ದಾಲಿಕೆ ಆಗಿರಬಹುದು ಎಂದು ಶಂಕಿಸಿದ್ದಾರೆ. ಟ್ವಿಟ್ಟರ್‌ನಲ್ಲಂತೂ #WhatsAppSpywareRow ಎಂಬ ಹ್ಯಾಷ್‌ಟ್ಯಾಗ್ ಸಖತ್ ಟ್ರೆಂಡಿಂಗ್ ಆಗಿಬಿಟ್ಟಿದೆ. ನೆಟ್ಟಿಗರು ಹಾಸ್ಯದ ಹೊನಲನ್ನೇ ಹರಿಸುತ್ತಿದ್ದಾರೆ.


from India & World News in Kannada | VK Polls https://ift.tt/2PBxWEA

ಮೆಲ್ಬೋರ್ನ್‌ನಲ್ಲಿ ಟ್ವೆಂಟಿ-20 ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ಕರೀನಾ ಕಪೂರ್

ಹೊಸದಿಲ್ಲಿ: ನಟಿ , ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮುಂಬರುವ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಈ ಬಗ್ಗೆ ಐಸಿಸಿ ಟ್ವೆಂಟಿ-20 ವಿಶ್ವಕಪ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರವನ್ನು ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂಬರುವ ಮಹಿಳಾ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವಂತೆಯೇ ಎಂಸಿಜೆಯಲ್ಲಿ ಕ್ರೀಡಾಂಗಣದಲ್ಲಿ ಭಾರತೀಯ ನಟಿ ಕರೀನಾ ಕಪೂರ್ ಟ್ರೋಫಿ ಅನಾವರಣಗೊಳಿಸಿದರು. 2020 ಮಹಿಳಾ ಟ್ವೆಂಟಿ-20 ವಿಶ್ವಕಪ್‌ಗೆ ಫೆಬ್ರವರಿ 21ರಂದು ಚಾಲನೆ ದೊರಕಲಿದೆ. 2018ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ವೇಳೆಯಲ್ಲಿ ಅಗ್ರ ಎಂಟು ಸ್ಥಾನಗಳನ್ನು ಪಡೆದ ಎಂಟು ತಂಡಗಳು 2020 ವಿಶ್ವಕಪ್‌ಗೆ ನೇರ ಅರ್ಹತೆಯನ್ನು ಪಡೆದಿತ್ತು. ಆತಿಥೇಯ ಆಸ್ಟ್ರೇಲಿಯಾ ಜತೆಗೆ ಭಾರತ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು 'ಎ' ಗುಂಪಿನಲ್ಲಿ ಕಾಣಸಿಕೊಂಡಿದೆ. ಇನ್ನೊಂದೆಡೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ಪಾಕಿಸ್ತಾನ ಮತ್ತು ಥಾಯ್ಲೆಂಡ್ 'ಬಿ' ಗುಂಪಿನಲ್ಲಿದೆ. ಫೆಬ್ರವರಿ 21ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ಅಂದ ಹಾಗೆ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಬಳಿಕ 2020ನೇ ಸಾಲಿನಲ್ಲೇ ಆಸ್ಟ್ರೇಲಿಯಾದಲ್ಲಿ ಪುರುಷ ಟ್ವೆಂಟಿ-20 ವಿಶ್ವಕಪ್ ಸಹ ಆಯೋಜನೆಯಾಗಲಿದೆ. ಇದು ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಆಯೋಜನೆಯಾಗಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಸವಾಲನ್ನು ಎದುರಿಸಲಿದೆ. ಅದೇ ದಿನದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2N56QnL

ಭಾರತೀಯ ಪುರುಷ, ಮಹಿಳಾ ಹಾಕಿ ತಂಡಕ್ಕೆ ಸಿಗುವುದೇ ಟೋಕಿಯೋ ಒಲಿಂಪಿಕ್ ಟಿಕೆಟ್?

ಭುವನೇಶ್ವರ: ಭಾರತದ ಪುರುಷರು ಮತ್ತು ಮಹಿಳೆಯರ ಹಾಕಿ ತಂಡಗಳು ಶುಕ್ರವಾರ ಇಲ್ಲಿ ಆರಂಭವಾಗುವ ಎಫ್‌ಐಎಚ್ ಒಲಿಂಪಿಕ್ ಕ್ವಾಲಿಫೈಯರ್ಸ್‌ನ ಅಂತಿಮ ಸುತ್ತಿನಲ್ಲಿ ಕ್ರಮವಾಗಿ ರಷ್ಯಾ ಮತ್ತು ಅಮೆರಿಕ ತಂಡಗಳ ವಿರುದ್ಧ ಸೆಣಸಲಿದೆ. ಇದು ಎರಡು ಚರಣಗಳ ಟೂರ್ನಿಯಾಗಿದ್ದು, ಮನ್‌ಪ್ರೀತ್ ಸಿಂಗ್ ಮತ್ತು ರಾಣಿ ರಾಮ್‌ಪಾಲ್ ಸಾರಥ್ಯದ ಭಾರತ ತಂಡಗಳು ಶುಕ್ರವಾರ ಮತ್ತು ಶನಿವಾರ ಬೆನ್ನು ಬೆನ್ನಿಗೆ ರಷ್ಯಾ ಮತ್ತು ಅಮೆರಿಕ ತಂಡಗಳ ವಿರುದ್ಧ ಸೆಣಸಲಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಹಾದಿಯಲ್ಲಿ ಉಭಯ ತಂಡಗಳ ಪಾಲಿಗೆ ಈ ಪಂದ್ಯಗಳು ನಿರ್ಣಾಯಕ ಪಾತ್ರ ವಹಿಸಲಿದೆ. ಎರಡು ಪಂದ್ಯಗಳ ಬಲಿಕ ಸರಾಸರಿ ಗೆಲುವಿನ ಆಧಾರದ ಮೇಲೆ ತಲಾ ಒಂದು ತಂಡ 2020ರ ಟೋಕಿಯೋ ಒಲಿಪಿಂಕ್ಸ್‌ಗೆ ಅರ್ಹತೆ ಪಡೆಯಲಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ 12 ತಂಡಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಹೋರಾಡಲಾಗಿದೆ. ಈ ಪೈಕಿ ಎಂಟು ತಂಡಗಳು ಈಗಾಗಲೇ ತನ್ನ ಸ್ಥಾನಗಳನ್ನು ಖಚಿತಪಡಿಸಿದ್ದು, ಉಳಿದ ನಾಲ್ಕು ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಕದನ ಏರ್ಪಟ್ಟಿದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಭಾರತೀಯ ಪುರುಷ ಹಾಕಿ ತಂಡವು 2012 ಹಾಗೂ 2016ನೇ ಇಸವಿಯಲ್ಲಿ ಅನುಕ್ರಮವಾಗಿ 12 ಹಾಗೂ ಎಂಟನೇ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. 2020 ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ತಂಡಗಳು: ಪುರುಷ ವಿಭಾಗ: ಮಹಿಳಾ ವಿಭಾಗ: ಜಪಾನ್ (ಆತಿಥೇಯ) ಅರ್ಜೇಂಟೀನಾ ಆಸ್ಟ್ರೇಲಿಯಾ ಚೀನಾ ಹಾಲೆಂಡ್ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ಸ್ಪೇನ್ ಪುರುಷ ವಿಭಾಗ: ಜಪಾನ್ (ಆತಿಥೇಯ) ಅರ್ಜೇಂಟೀನಾ ಆಸ್ಟ್ರೇಲಿಯಾ ಬೆಲ್ಜಿಯಂ ಕೆನಡಾ ಹಾಲೆಂಡ್ ದಕ್ಷಿಣ ಆಫ್ರಿಕಾ ಸ್ಪೇನ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34lfnIQ

​ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನ ಆಟಗಾರ

ಹೊಸದಿಲ್ಲಿ: ಪಾಕಿಸ್ತಾನದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಳೆದ ವರ್ಷವಷ್ಟೇ ಪ್ರಕರಣದಲ್ಲಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿರುವ ಶೆಹಜಾದ್‌ಗೆ ಮಗದೊಮ್ಮೆ ಕಂಟಕ ಎದುರಾಗಿದೆ. ಪಾಕಿಸ್ತಾನದ ದೇಶೀಯ ಕ್ರಿಕೆಟ್ ಟೂರ್ನಿ ಕ್ವಾಯಿದ್ ಇ ಅಜಾಮ್ ಟ್ರೋಫಿಯಲ್ಲಿ ಸೆಂಟ್ರಲ್ ಪಂಜಾಬ್ ಹಾಗೂ ಸಿಂಧ್ ನಡುವಣ ಪಂದ್ಯದ ವೇಳೆಯಲ್ಲಿ ಚೆಂಡು ವಿರೂಪಗೊಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರಕಣೆ ಹೊರಡಿಸಿರುವ ಪಿಸಿಬಿ ಮೀಡಿಯಾ, ಸೆಂಟ್ರಲ್ ಪಂಜಾಬ್ ನಾಯಕರಾಗಿರುವ ಅಹ್ಮದ್ ಶೆಹಜಾದ್ ಮೇಲೆ ಚೆಂಡಿನ ಸ್ಥಿತಿ ಬದಲಾಯಿಸಲು ಪ್ರಯತ್ನಿಸಿರುವುದರ ಬಗ್ಗೆ ಆರೋಪವನ್ನು ಎದುರಿಸುತ್ತಿದ್ದು, ಶುಕ್ರವಾರದಂದು ತೀರ್ಪನ್ನು ಹೊರಡಿಸಲಾಗುವುದು ಎಂದಿದೆ. ಫೈಸಲಾಬಾದ್‌ನ ಇಕ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಿಂಧ್ ಇನ್ನಿಂಗ್ಸ್ ವೇಳೆ ಘಟನೆ ನಡೆದಿತ್ತು. ಮ್ಯಾಚ್ ರೆಫರಿ ನದೀಂ ಈ ಬಗ್ಗೆ ಶೆಹಜಾದ್‌ಗೆ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ತೀರ್ಪನ್ನು ಕಾಯ್ದಿರಿಸಲಾಗಿದೆ. ಪಿಸಿಬಿ ಡೋಪಿಂಗ್ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ 2018ರಲ್ಲಿ ಶೆಹಜಾದ್ ಮೇಲೆ ನಾಲ್ಕು ತಿಂಗಳುಗಳ ನಿಷೇಧವನ್ನು ಹೇರಲಾಗಿತ್ತು. ಬಳಿಕ ಕಳೆದ ಶ್ರೀಲಂಕಾ ವಿರುದ್ಧದ ಸರಣಿಯ ವೇಳೆ ತಂಡವನ್ನು ಸೇರಿಕೊಂಡರೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಂದ ಹಾಗೆ ಅಹ್ಮದ್ ಶೆಹಜಾದ್, 13 ಟೆಸ್ಟ್, 81 ಏಕದಿನ ಹಾಗೂ 59 ಟ್ವೆಂಟಿ-20 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JGHiLo

ಬಗ್ದಾದಿ ಹತ್ಯೆಯಿಂದ ಐಸಿಸ್‌ ನಾಶವಾಗಿಲ್ಲ, ಆತನ ಸ್ಥಾನಕ್ಕೆ ಮತ್ತೊಬ್ಬ ಉಗ್ರನ ಎಂಟ್ರಿ!

ಕನ್ನಡ ರಾಜ್ಯೋತ್ಸವ ಶುಭಾಶಯ ಹೇಳಲು ಈ ಸಂದೇಶಗಳನ್ನು ಬಳಸಿ! ಇಲ್ಲಿವೆ ಕನ್ನಡ ಕಟ್ಟಾಳುಗಳ ಹಿತನುಡಿ

ಕನ್ನಡ, ಕರ್ನಾಟಕ, ಕರುನಾಡು ಬರೀ ನೆಲವಲ್ಲ, ಕೇವಲ ಭಾಷೆಯಲ್ಲ.. ಅದೊಂದು ಭಾವನೆ, ಅದೊಂದು ಬಾಂಧವ್ಯ. ರಾಜ್ಯೋತ್ಸವದ ವೇಳೆ ಕನ್ನಡದ ಹಿರಿಮೆ-ಗರಿಮೆಗಳನ್ನು ನೆನಪಿಸಿಕೊಳ್ಳುವ ‘ನವೆಂಬರ್‌ ಕನ್ನಡಿಗರು’ ನಾವಾಗಬೇಕಿಲ್ಲ. ಕನ್ನಡ ನಮ್ಮ ನಿತ್ಯೋತ್ಸವವಾಗಬೇಕು ಅನ್ನೋದು ಕವಿಮನದ ಆಶಯ. ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಹಲವು ಹಿರಿಜೀವಗಳ ಹೆಬ್ಬಯಕೆಯದು. ಭಾರತ ದೇಶ ಸ್ವಾತಂತ್ರ್ಯವಾಗುವ ಜೊತೆಜೊತೆಯಲ್ಲೇ, ಕನ್ನಡ ಮನಗಳನ್ನೂ ಒಂದೆಡೆ ಸೇರಿಸಬೇಕೆಂದು ದುಡಿದವರನ್ನು ನೆನೆಯುವ ದಿನವಿದು. ಈ ದಿನದ ಅಂಗವಾಗಿ ನಾಡು ಕಂಡ ಹಿರಿಯ ಸಾಹಿತಿಗಳು, ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಹಾಗೂ ಕನ್ನಡತನದ ಬಗ್ಗೆ ಆಡಿರುವ ಒಂದಷ್ಟು ಮಾತುಗಳು ಇಲ್ಲಿವೆ. "ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ, ಭ್ರಾಮಕ ಕಲ್ಪನೆಗಳನ್ನು ಬಿಟ್ಟುಬಿಡೋಣ; ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕ ಆರ್ಯಸಂಸ್ಕೃತಿಯನ್ನು ನಾನು ಉದ್ಧರಿಸದೆ ಇನ್ನಾರು ಉದ್ಧರಿಸುವರು?" - ಆಲೂರು ವೆಂಕಟರಾವ್. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು- ಹುಯಿಲಗೋಳ ನಾರಾಯಣರಾವ್. ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ಕನ್ನಡದ ನೆಲದ ಕಲ್ಲೆನಗೆ ಶಾಲಗ್ರಮ ಶಿಲೆ ಕನ್ನಡ ದೈವಮೈ - ಸಾಲಿ ರಾಮಚಂದ್ರರಾಯ ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ - ಎಂ ಗೋವಿಂದ ಪೈ ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ ಕನ್ನಡವೆಯೆನಗಾಯ್ತು ಕಣ್ಣು ಕಿವಿ ಬಾಯಿ - ಬೆನಗಲ್ ರಾಮರಾವ್ ಕನ್ನಡ ಉಳಿಸಿ - ಕನ್ನಡ ಬೆಳಸಿ ಕನ್ನಡವನೆ ಬಳಸಿ - ಪು.ತಿ.ನರಸಿಂಹಾಚಾರ್ ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ಎಲ್ಲಿದ್ದರೆ ಏನ್? ಎಂತಿದ್ದರೆ ಏನ್? ಎಂದೆಂದಿಗೂ ತಾನ್- ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯಾ! - ಕುವೆಂಪು ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ ನಮ್ಮ ಉಸುರು, ನಮ್ಮ ಕಸುವು ಕನ್ನಡ ನಮ್ಮ ಹೆಸರು, ನಮ್ಮ ಕಸುಬು ಕನ್ನಡ ಕನ್ನಡವಿದು ಕನ್ನಡ ಬನ್ನಿ ನಮ್ಮ ಸಂಗಡ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸಿರಿಗನ್ನಡಂ ಗೆಲ್ಗೆ, ಹಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಬಾಳ್ಗೆ ಕನ್ನಡದ ತಾಯ್ ಗೆಲ್ಗೆ, ಬಾಳ್ಗೆ ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ನೀವು ಇಲ್ಲಿ ನೋಡಿದ, ಓದಿದ ಎಲ್ಲಾ ಗೀತೆಗಳನ್ನೂ ವಾಟ್ಸಪ್, ಫೇಸ್‌ಬುಕ್ ಸಂದೇಶಗಳ ಮಾದರಿಯಲ್ಲಿ ನಿಮ್ಮ ಸ್ನೇಹಿತರು, ಬಂಧುಬಾಂಧವರ ಜೊತೆ ಹಂಚಿಕೊಳ್ಳಬಹುದು. ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿಮ್ಮ ವಿಜಯಕರ್ನಾಟಕದಿಂದ ಪುಟ್ಟ ಕಾಣಿಕೆಯಿದು.



from India & World News in Kannada | VK Polls https://ift.tt/34hUaj4

ಭಾರತದ ಮಾಜಿ ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್‌ಗೆ ಹುಟ್ಟುಹಬ್ಬದ ಸಂಭ್ರಮ!

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕಲಾತ್ಮಕ ಬ್ಯಾಟ್ಸ್‌ಮನ್ 45ನೇ ಹರೆಯಕ್ಕೆ ಕಾಲಿರಿಸಿದ್ದಾರೆ. 1974ನೇ ಇಸವಿಯ ನವೆಂಬರ್ 1ರಂದು ಜನಿಸಿರುವ ಲಕ್ಷ್ಮಣ್, ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಪಾಲಿಗೆ 'ವೆರಿ ವೆರಿ ಸ್ಪೆಷಲ್' ಎನಿಸಿದ್ದಾರೆ. ಹಲವಾರು ಮ್ಯಾಚ್ ವಿನ್ನಿಂಗ್ ಹಾಗೂ ಮ್ಯಾಚ್ ಸೇವಿಂಗ್ ಇನ್ನಿಂಗ್ಸ್ ಕಟ್ಟುವ ಮೂಲಕ ವಿವಿಎಸ್ ಲಕ್ಷ್ಮಣ್ 'ಮಿಸ್ಟರ್ ಡಿಪೆಂಡಬಲ್' ಎಂದೆನಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸಿಗಿಳಿಯುವ ಲಕ್ಷ್ಮಣ್ ಬಾಲಂಗೋಚಿಗಳ ಜತೆ ಸೇರಿ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಕಟ್ಟಿದ್ದಾರೆ. ಈ ಮೂಲಕ ಕ್ರಿಕೆಟ್ ಲೆಜೆಂಡ್‌ಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. 2001ನೇ ಇಸವಿಯಲ್ಲಿ ಈಡನ್ ಗಾರ್ಡನ್ ಮೈದಾನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 281 ರನ್‌ ಪೇರಿಸಿರುವುದು ಇಂದಿಗೂ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಪರಿಣಾಮ ಫಾಲೋ ಆನ್‌ಗೆ ತುತ್ತಾಗಿರುವ ಭಾರತ ಪುಟಿದೆದ್ದು ಐತಿಹಾಸಿಕ ಗೆಲುವು ಬಾರಿಸಿತ್ತು. ಅಲ್ಲದೆ ಇದು ಅಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. 2001ನೇ ಇಸವಿಯಲ್ಲಿ ವಿವಿಎಸ್ ಲಕ್ಷ್ಮಣ್ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಶ್ರೀಗೆ ಭಾಜನವಾಗಿದ್ದರು. ಏಕದಿನ ವಿಶ್ವಕಪ್ ಆಡದೇ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆಲವೇ ಕೆಲವು ಆಟಗಾರರಲ್ಲಿ ಲಕ್ಷ್ಮಣ್ ಕೂಡಾ ಓರ್ವರಾಗಿದ್ದಾರೆ. 1996ನೇ ಇಸವಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿರುವ ವಿವಿಎಸ್ ಲಕ್ಷ್ಮಣ್, 16 ವರ್ಷಗಳ ಸುದೀರ್ಘ ಕೆರಿಯರ್ ಬಳಿಕ 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈ ಅವಧಿಯಲ್ಲಿ 134 ಟೆಸ್ಟ್ ಪಂದ್ಯಗಳನ್ನಾಡಿರುವ ಲಕ್ಷ್ಮಣ್ 45.5ರ ಸರಾಸರಿಯಲ್ಲಿ 8781 ರನ್ ಪೇರಿಸಿದ್ದಾರೆ. ಇದರಲ್ಲಿ 17 ಶತಕ ಹಾಗೂ ಎರಡು ದ್ವಿಶತಕಗಳು ಸೇರಿವೆ. ಈ ಪೈಕಿ 2434 ರನ್‌ಗಳನ್ನು ಅತ್ಯಂತ ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿರುವುದು ಗಮನಾರ್ಹವೆನಿಸುತ್ತದೆ. ಇನ್ನೊಂದೆಡೆ ಏಕದಿನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ಲಕ್ಷ್ಮಣ್ 86 ಪಂದ್ಯಗಳಲ್ಲಿ 30.76ರ ಸರಾಸರಿಯಲ್ಲಿ 2338 ರನ್ ಗಳಿಸಿದ್ದರು. ಏಕದಿನದಲ್ಲೂ 6 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಟಸ್ಕರ್ಸ್ ಕೇರಳ ಪ್ರತಿನಿಧಿಸಿರುವ ವಿವಿಎಸ್ ಲಕ್ಷ್ಮಣ್ 20 ಪಂದ್ಯಗಳಲ್ಲಿ 282 ರನ್ ಗಳಿಸಿದ್ದಾರೆ. ಕ್ರಿಕೆಟ್ ಜೀವನದ ಬಳಿಕ ವೀಕ್ಷಕಾ ವಿವರಣೆಗಾರನಾಗಿ ವಿವಿಎಸ್ ಲಕ್ಷ್ಮಣ್ ಸಕ್ರಿಯವಾಗಿ ಕಾರ್ಯ ನಿರತವಾಗಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಮುಂದುವರಿದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34l1CtE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...