ಭಾರತ ಸರಣಿಯಿಂದ ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಔಟ್?

ಢಾಕಾ: ಭಾರತ ವಿರುದ್ಧ ನಡೆಯಲಿರುವ ಸರಣಿಗೆ ಟ್ವೆಂಟಿ-20 ಹಾಗೂ ಟೆಸ್ಟ್ ನಾಯಕ ಅಲಭ್ಯರಾಗುವ ಸಾಧ್ಯತೆಯಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟ್ವೆಂಟಿ-20 ಸರಣಿಯು ನವೆಂಬರ್ 3ರಂದು ಹೊಸದಿಲ್ಲಿಯಲ್ಲಿ ಆರಂಭವಾಗಲಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರದಿಂದಾಗಿ ಸರಣಿಗೂ ಮುನ್ನ ನಡೆದಿದ್ದ ಬಹುತೇಕ ಪೂರ್ವಾಭಾವಿ ಶಿಬಿರವನ್ನು ಶಕಿಬ್ ಮಿಸ್ ಮಾಡಿಕೊಂಡಿದ್ದರು. ಎರಡು ಅಭ್ಯಾಸ ಪಂದ್ಯಗಳು ಸೇರಿದಂತೆ ನಾಲ್ಕು ದಿನಗಳ ಪೂರ್ವಭಾವಿ ಶಿಬಿರದಲ್ಲಿ ಒಂದು ದಿನ ಮಾತ್ರ ಶಕಿಬ್ ಭಾಗವಹಿಸಿದ್ದರು. ಇದರಿಂದಾಗಿ ಅಕ್ಟೋಬರ್ 29ರಂದು ತಾಜಾ ತಂಡವನ್ನು ಘೋಷಿಸುವ ಸಾಧ್ಯತೆಯಿದ್ದು, ಶಕಿಬ್‌ರನ್ನು ಕೈಬಿಡುವುದು ಖಚಿತವೆನಿಸಿದೆ. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಕಾರ್ಯಾಚರಣೆಯ ಮುಖ್ಯಸ್ಥರಾದ ಅಕ್ರಮ್ ಖಾನ್ ಹೇಳಿಕೆಯನ್ನು ನೀಡಿದ್ದಾರೆ. ನಾವು ಅಕ್ಟೋಬರ್ 29ರಂದು ಹೊಸತಾದ ಟಿ20 ತಂಡವನ್ನು ಆರಿಸಲಿದ್ದೇವೆ. ಟೆಸ್ಟ್ ತಂಡದ ಆಯ್ಕೆಗೆ ಮತ್ತಷ್ಟು ಸಮಯದ ಅಗತ್ಯವಿದೆ. ಮೂರು ದಿನಗಳ ಬಳಿಕ ಟೆಸ್ಟ್ ತಂಡವನ್ನು ಆರಿಸಲಿದ್ದೇವೆ ಎಂದು ಹೇಳಿದ್ದಾರೆ. ಶೆರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಶಿಬಿರದ ಬಳಿಕ ಪ್ರಧಾನ ಕೋಚ್ ರಸೆಲ್ ಡೊಮಿಂಗೊ ಜತೆಗೆ ಆಯ್ಕೆದಾರರು ಸುದೀರ್ಘವಾದ ಚರ್ಚೆಯನ್ನು ನಡೆಸಿದ್ದಾರೆ. ಆಸಕ್ತಿದಾಯಕ ಸಂಗತಿಯೆಂದರೆ ಸವಾಲಿನಿಂದ ಕೂಡಿದ ಭಾರತ ಸರಣಿ ಬಗ್ಗೆ ಬಾಂಗ್ಲಾ ಮಂಡಳಿ ಅಧ್ಯಕ್ಷರಾದ ನಜ್ಮುಲ್ ಹಸನ್ ಕರೆದ ಸಭೆಯಲ್ಲಿ ಹಿರಿಯ ಆಟಗಾರರು ಉಪಸ್ಥಿತರಿದ್ದರು. ಆದರೆ ಶಕಿಬ್ ಅನುಪಸ್ಥಿ ಎದ್ದು ಕಾಣಿಸುತ್ತಿತ್ತು. ಟೆಲಿಕಾಂ ಸಂಸ್ಥೆಯೊಂದರ ಜತೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿರುವ ಬಾಂಗ್ಲಾದೇಶ ತಂಡದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ವಿರುದ್ಧ ಬಿಸಿಬಿ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಈ ಮೊದಲು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಾಂಗ್ಲಾದೇಶ ಆಟಗಾರರು ಮುಷ್ಕರ ಹಮ್ಮಕೊಂಡಿದ್ದರು. ಬಳಿಕ ಬಹುತೇಕ ಬೇಡಿಕೆಗಳನ್ನು ಮಂಡಳಿ ಈಡೇರಿಸಿತ್ತು. ನವೆಂಬರ್‌ 3ರಂದು ದಿಲ್ಲಿಯ ಅರುಣ್‌ ಜೇಟ್ಲಿಸ್ಟೇಡಿಯಮ್‌ನಲ್ಲಿ ಟಿ20 ಸರಣಿಗೆ ಚಾಲನೆ ದೊರೆಯಲಿದೆ. ನ.7 ಮತ್ತು 10ರಂದು ಕ್ರಮವಾಗಿ ರಾಜ್‌ಕೋಟ್‌ ಹಾಗೂ ನಾಗಪುರದಲ್ಲಿಸರಣಿಯ 2 ಮತ್ತು 3ನೇ ಪಂದ್ಯ ನಡೆಯಲಿವೆ. ನವೆಂಬರ್‌ 14ರಿಂದ 18ರವರೆಗೆ ಇಂದೋರ್‌ನಲ್ಲಿ ಮೊದಲ ಟೆಸ್ಟ್‌ ಹಾಗೂ ನ.22ರಿಂದ 26ರವರೆಗೆ ಕೋಲ್ಕೊತಾದಲ್ಲಿಎರಡನೇ ಟೆಸ್ಟ್‌ ನಿಗದಿಯಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3682TpT

ಜೈಲಿಂದ ಬಿಡುಗಡೆಯಾಗಿರುವ ಡಿ ಕೆ ಶಿವಕುಮಾರ್ ಟೆಂಪಲ್ ರನ್

ಪ್ರವಾಹ ಪರಿಹಾರ ಸಾಲಕ್ಕೆ ಜಮೆ ಇಲ್ಲ: ಆರ್ ಅಶೋಕ್

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಸನ್ನಿಹಿತವೇ? ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ ವಿದಾಯ ಸಂದೇಶ!

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಯಾವಾಗ ನಿವೃತ್ತಿ ಸಲ್ಲಿಸಲಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ನಿವೃತ್ತಿ ಸಲ್ಲಿಸುವ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಆದರೆ ಎಲ್ಲರನ್ನು ಅಚ್ಚರಿಗೊಳಿಸಿರುವ ಧೋನಿ, ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿ ಕ್ರಿಕೆಟ್‌ನಿಂದ ವಿರಾಮ ಪಡೆದುಕೊಂಡಿದ್ದರು. ಈ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ವಹಿಸುತ್ತಿರುವ ಧೋನಿ, ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ವಿಶ್ವಕಪ್ ಬಳಿಕ ನಡೆದ ವೆಸ್ಟ್‌ಇಂಡೀಸ್ ಪ್ರವಾಸ ಮತ್ತು ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಸರಣಿಗಳನ್ನು ಧೋನಿ ಮಿಸ್ ಮಾಡಿದ್ದಾರೆ. ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಆಯ್ಕೆಗೆ ಪರಿಗಣಿಸಿಲ್ಲ. ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದು, ನಾವು ಧೋನಿಯಿಂದ ಮುಂದಕ್ಕೆ ಸಾಗುತ್ತಿದ್ದು, ಯುವ ವಿಕೆಟ್ ಕೀಪರ್‌ಗಳಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದೇವೆ ಎಂದು ಸಾರಿದ್ದರು. ಇದರಿಂದಾಗಿ ಧೋನಿ ಕ್ರಿಕೆಟ್‌ಗೆ ಮರಳುವುದು ಅಸಾಧ್ಯ ಎಂಬ ಬಗ್ಗೆ ಮಾತುಗಳು ಹರಿದಾಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಸಹ, ಧೋನಿ ಭವಿಷ್ಯದ ಬಗ್ಗೆ ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಂತಿಮ ನಿರ್ಧಾರ ಏನೆಂಬುದು ಬಯಲಾಗಿಲ್ಲ. ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ, ಯಾವಾಗ ನಿವೃತ್ತಿ ಸಲ್ಲಿಸಬೇಕೆಂಬ ಹಕ್ಕು ಧೋನಿಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಕ್ರಿಕೆಟ್‌ಗೆ ಮರಳುವರೇ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಇವೆಲ್ಲದರ ನಡುವೆ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಅಭಿಮಾನಿಗಳು ವಿದಾಯದ ಸಂದೇಶ ಸಲ್ಲಿಸುತ್ತಿದ್ದಾರೆ. #Dhoniretires #ThankYouDhoni #NeverRetireDhoni ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಅಭಿಮಾನಿಗಳು ಧೋನಿ ಸಾಧನೆಯನ್ನು ಮೆಲುಕು ಹಾಕುತ್ತಿದ್ದರಲ್ಲದೆ ನಿವೃತ್ತಿ ವಿಚಾರದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ವಿಶ್ವಕಪ್ ಬಳಿಕವೂ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಇದೀಗ ಎರಡನೇ ಬಾರಿಗೆ ಧೋನಿ ನಿವೃತ್ತಿ ಊಹಾಪೋಹಗಳು ಹರಿದಾಡುತ್ತಿದೆ. ಇವೆಲ್ಲದಕ್ಕೂ ಧೋನಿ ಉತ್ತರ ಏನಾಗಿರಲಿದೆ ಎಂಬದನ್ನು ಕಾದು ನೋಡಬೇಕಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/367ZGGR

ಬೆಂಗಳೂರು ಎಫ್‌ಸಿ ಜಯ ಕಸಿದ ಕೊರೊಮಿನಾಸ್

ಮಾರ್ಗೊ: ಪಂದ್ಯದ ಕೊನೆ ಕ್ಷಣದಲ್ಲಿ (ಇಂಜುರಿ ಟೈಮ್) ಆಶಿಕ್ ಕುರುನಿಯನ್ ಎಸಗಿದ ಪ್ರಮಾದದಿಂದ ಪೆನಾಲ್ಟಿ ಮೂಲಕ ಗೋಲ್ ಬಿಟ್ಟುಕೊಟ್ಟ ಪ್ರಸಕ್ತ ಐಎಸ್‌ಎಲ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ವಿರುದ್ಧ ಗೆಲುವಿನ ಅವಕಾಶ ಕಳೆದುಕೊಂಡು ಕೇವಲ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತಗೊಂಡಿತು. ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಯವರೆಗೂ ಸಂಪೂರ್ಣ ಮೇಲುಗೈ ಸಾಧಿಸಿದ್ದ ಬಿಎಫ್‌ಸಿ ಅಂತಿಮ ಹಂತದಲ್ಲಿ ಎದುರಾಳಿ ತಂಡಕ್ಕೆ ಗೋಲ್ ಬಿಟ್ಟುಕೊಟ್ಟಿದ್ದರಿಂದ ಪಂದ್ಯ 1-1ರಲ್ಲಿ ಸಮಬಲದಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ಆಡಿದ ಎರಡು ಪಂದ್ಯಗಳಿಂದ ಎರಡು ಅಂಕ ಹೊಂದಿರುವ ಬಿಎಫ್‌ಸಿ, ತನ್ನ ಮುಂದಿನ ಪಂದ್ಯದಲ್ಲಿ ಜೆಮ್‌ಶೆಡ್ಪುರ ತಂಡವನ್ನು ಎದುರಿಸಲಿದೆ. ಬಿಎಫ್‌ಸಿ ಪರ ಉದಾಂತ ಸಿಂಗ್ (62ನೇ ನಿಮಿಷ) ಮತ್ತು ಗೋವಾ ಪರ ಪೆರಾನ್ ಕೊರೊಮಿನಾಸ್ ಇಂಜುರಿ ಸಮಯದಲ್ಲಿ ಗೋಲ್ ಬಾರಿಸಿದರು. 1-0 ಅಂತರದಲ್ಲಿ ಬಿಎಫ್‍‌ಸಿ ಮುನ್ನಡೆ ಗಳಿಸಿದ್ದರಿಂದ ಒತ್ತಡಕ್ಕೆ ಸಿಲುಕಿದ ಗೋವಾ, ಕೊನೆ 20 ನಿಮಿಷಗಳಲ್ಲಿ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು. 84 ಮ್ತತು 86ನೇ ನಿಮಿಷದಲ್ಲಿ ಗೋಲ್ ಗಳಿಕೆಯ ಯತ್ನ ಮಾಡಿತಾದರೂ ಬಿಎಫ್‌ಸಿ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಆದರೆ ಕೊನೆಯಲ್ಲಿ ಮಾಡಿದ ಎಡವಟ್ಟುಗಳ ತಂಡಕ್ಕೆ ಮುಳುವಾದವು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PtbDRm

ಫಲಿಸಲಿಲ್ಲ ಪ್ರಾರ್ಥನೆ, ಸಾವನ್ನು ಜಯಿಸಲಿಲ್ಲ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸುಜಿತ್

ತಿರುಚನಾಪಳ್ಳಿ: ದೇಶವೇ ಆ ಪುಟ್ಟ ಕಂದಮ್ಮನಿಗಾಗಿ ಪ್ರಾರ್ಥಿಸಿತ್ತು. ಸಾವ ಗೆದ್ದು ಬಾ ಪುಟಾಣಿ ಎಂದು ಹಾರೈಸಿತ್ತು. ಆದರೆ ಯಾರ ಪ್ರಾರ್ಥನೆ, ತಾಯ ಕರುಳ ಕೂಗು ದೇವರನ್ನು ತಲುಪಲೇ ಇಲ್ಲ. ಹಾಲುಗಲ್ಲದ ಮಗು ಮತ್ತೆ ಹಾಲುಣಲು ಜೀವಂತ ಬರಲೇ ಇಲ್ಲ. ನೀರು ಬಾರದೇ ಪಾಳು ಬಿದ್ದಿದ್ದ ಕೊಳವೆ ಬಾವಿಯೊಳಗೆ 2 ವರ್ಷದ ಸುಜಿತ್ ಅಲ್ಲೇ ಉಸಿರು ಬಿಟ್ಟಿದ್ದಾನೆ. ಆತನ ಬದುಕಿಗೆ ಪ್ರಾರ್ಥಿಸಿದ್ದ ಸಂಪೂರ್ಣ ತಮಿಳುನಾಡೀಗ ಸ್ತಬ್ಧವಾಗಿದೆ. ಮೂರು ದಿನಗಳ ಕಠಿಣ ಕಾರ್ಯಾಚರಣೆ ಬಳಿಕ ಮಂಗಳವಾರ ನಸುಕಿನ ಜಾವ ಮಗುವಿನ ದೇಹವನ್ನು ಮೇಲಕ್ಕೆತ್ತಿದ ಎನ್‌ಡಿಆರ್‌ಎಫ್ ಸಿಬ್ಬಂದಿ ಕೊಳೆತ ಸ್ಥಿತಿಯಲ್ಲಿದ್ದ ಮಗುವಿನ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತಮಿಳುನಾಡಿನ ತಿರುಚನಾಪಳ್ಳಿ ಜಿಲ್ಲೆಯ ಮಣಪ್ಪರೈ ಬಳಿಯ ನಡುಕಟ್ಟುಪಟ್ಟಿಯಲ್ಲಿ ಶುಕ್ರವಾರ ದಿನ ಈ ಘಟನೆ ನಡೆದಿತ್ತು. ಸುಜಿತ್‌ ವಿಲ್ಸನ್‌ ಹೆಸರಿನ ಮಗು ಶುಕ್ರವಾರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದಾಗ, ಪಾಳು ಬಿದ್ದಿದ್ದ 7 ವರ್ಷ ಹಳೆಯದಾದ ಕೊಳವೆ ಬಾವಿಗೆ ಬಿದ್ದಿದೆ. 600 ಅಡಿಯ ಕೊಳವೆ ಬಾವಿಯಲ್ಲಿ ಆಯತಪ್ಪಿ ಬಿದ್ದಿದ್ದ ಬಾಲಕ 26 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಕೂಡಲೇ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವಿನ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಮಗು ಉಸಿರಾಡಲೂ ಕಷ್ಟವಾಗುವ ಪರಿಸ್ಥಿತಿ ತಲುಪಿದ್ದ ಮಗುವಿಗೆ ವಿಶೇಷ ಉಪಕರಣ ಬಳಸಿ ಉಸಿರಾಡಲು ಅನುಕೂಲ ಮಾಡಿಕೊಡಲಾಗಿತ್ತು. ಸೋಮವಾರ ಕೂಡ ಮಗು ಬದುಕಿಗೆ ಎಂದು ಹೇಳಲಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಮತ್ತೂ ಆಳಕ್ಕೆ ಕುಸಿದು 88 ಅಡಿ ಆಳದಲ್ಲಿ ಸಿಲುಕಿಕೊಂಡ ಕಾರಣ ರಕ್ಷಣಾ ಕಾರ್ಯ ಮತ್ತಷ್ಟು ಸಂಕೀರ್ಣವಾಗಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮಗು ಬದುಕುಳಿಯಲಿಲ್ಲ. ಸೋಮವಾರ ರಾತ್ರಿ ಕೊಳವೆ ಬಾವಿಯಿಂದ ಕೊಳೆತ ವಾಸನೆ ಬರತೊಡಗಿತ್ತು. ಇಂದು ಮುಂಜಾನ ದೇಹನವನ್ನು ಹೊರಕ್ಕೆ ತೆಗೆಯಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಮ್ಮಲ ಮರುಗುತ್ತಿರುವ ನೆಟ್ಟಿಗರು ಬಾಲಕ ಹುಟ್ಟಿ ಬರಲೆಂದು ಪ್ರಾರ್ಥಿಸಿ ಟ್ವಿಟರ್ ಬಳಕೆದಾರರು ವ್ಯಾಪಕ ಟ್ವೀಟ್ ಮಾಡಿದ್ದರು. ಮತ್ತೀಗ ಆತನ ಸಾವಿಗೆ ಮರುಗುತ್ತ, ಆತ್ಮಕ್ಕೆ ಶಾಂತಿ ಕೋರಿ ಟ್ವೀಟ್ ಹರಿದು ಬರುತ್ತಿದೆ .ಆತ್ಮಕ್ಕೆ ಶಾಂತಿ ಸಿಗಲಿ ತಮಿಳುನಾಡಿಗೆ ಬ್ಲ್ಯಾಕ್ ಡೇ ನೀನು ನಮ್ಮ ಹೃದಯಲ್ಲಿರುತ್ತೀಯ ಕಂದ ಹಿರಿಯರ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಕಿರಿಯರು ಬಲಿ? ನೀರಿಗಾಗಿ ಕೊಳಬೆ ಬಾವಿ ಕೊರೆಯುತ್ತಾರೆ, ನೀರು ಬಂದಿಲ್ಲವೆಂದು ಅದನ್ನು ಮುಚ್ಚದೆ ಹಾಗೆ ಬಿಡುತ್ತಾರೆ. ಅದು ಪ್ರಾಣ ಘಾತಕವಾಗುವಷ್ಟು ದುರಂತ ಎಂಬ ಅರಿವಿದ್ದು ಇಂತಹ ಬೇಜವಾಬ್ದಾರಿ ತೋರುತ್ತಾರೆ. ಆಟವಾಡುತ್ತ ಇದರೊಳಗೆ ಜಾರುವ ಮಕ್ಕಳು ಒಳಗೆ ಅಸಹನೀಯ ಹಿಂಸೆ ಪಟ್ಟು ಸಾವನ್ನಪ್ಪುತ್ತಾರೆ. ' ಸಂಪೂರ್ಣ ಕತ್ತಲು. ಅಮ್ಮ ಎಂದು ಕಿರುಚಲೂ ಆಗದು. ಕೂಗಿದರೂ ಕೇಳದು. ಅಲ್ಲಾಡಲೂ ಆಗದ ಅಸಹನೀಯ ಹಿಂಸೆ. ಉಸಿರಾಡಲೂ ಗಾಳಿ ಇಲ್ಲ. ತಡೆಯಾಗದ ಹಸಿವು. ಇದೆಲ್ಲ ಏಕೆ ಹೀಗೆ, ನನಗೇನಾಯಿತು, ನಾನೆಲ್ಲಿದ್ದೇನೆ,ಎಂಬುದನ್ನು ಅರಿಯದ ಪುಟ್ಟ ಮಕ್ಕಳು, ಕೊನೆಗೆ ಅರ್ಥವಾಗದ ಸಾವಿನಲ್ಲಿ ಬದುಕು ಮುಗಿಸುತ್ತಾರೆ. ಮತ್ತವರನ್ನು ಹಡೆದವರು ನೋಡುವುದು ಹೆಣವಾಗಿಯೇ.. ಹಿರಿಯರೇ ಸಹಿಸಲಾಗದ ಈ ರವ ರವ ನರಕದಲ್ಲಿ ಪುಟ್ಟ ಮಕ್ಕಳು ನಲುಗಿ ಚಿರನಿದ್ರೆಗೆ ಜಾರುತ್ತಾರೆ..' ಇಂತಹ ದುರಂತಗಳು ಮರುಕಳಿಸದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವುದು ತುರ್ತು ಅಗತ್ಯ'..


from India & World News in Kannada | VK Polls https://ift.tt/2MVyHqk

ಸಕಾಲ ಅರ್ಜಿ ವಿಲೇವಾರಿ ವಿಳಂಬ; 7 ಸಾವಿರ ಅಧಿಕಾರಿಗಳಿಗೆ ದಂಡ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...