ಗುಜರಾತ್ ಟೈಟನ್ಸ್ ವಿರುದ್ಧ ಶುಕ್ರವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೇವಲ 5 ರನ್‌ಗಳ ರೋಚಕ ಗೆಲುವು ಸಾಧಿಸಿತು. ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಡೇನಿಯಲ್ ಸ್ಯಾಮ್ಸ್, ಕೊನೆಯ ಓವರ್‌ನಲ್ಲಿ 9 ರನ್ ಅಗತ್ಯವಿದ್ದ ವೇಳೆ ಪರಿಸ್ಥಿತಿಗಳು ಬ್ಯಾಟ್ಸ್‌ಮನ್‌ಗಳ ಪರವಾಗಿತ್ತು. ಈ ವೇಳೆ ಅತ್ಯುತ್ತಮ ಎಸೆತಗಳನ್ನು ಪ್ರಯೋಗ ಮಾಡಿದ್ದೆ. ಅದರಂತೆ ಇದು ತಮ್ಮ ಕೈ ಹಿಡಿಯಿತು ಎಂದು ಹೇಳಿದರು. ಕೊನೆಯ ಓವರ್‌ನಲ್ಲಿ 9 ರನ್ ಅಗತ್ಯವಿದ್ದ ವೇಳೆ ಡೇನಿಯಲ್ ಸ್ಯಾಮ್ಸ್ ಕೇವಲ 3 ರನ್ ನೀಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/O0VB462