'ಈ ಸಲ ಕಪ್‌ ನಮ್ದೆ': ಆರ್‌ಸಿಬಿ ನೂತನ ನಾಯಕ ಡು'ಪ್ಲೆಸಿಸ್‌ಗೆ ಎಬಿಡಿ ವಿಶೇಷ ಸಂದೇಶ!

ಬೆಂಗಳೂರು: ಮುಂಬರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕನಾಗಿ ನೇಮಕಗೊಂಡಿರುವ ಮಾಜಿ ಸಹ ಆಟಗಾರ ಹಾಗೂ ಗೆಳೆಯ ಫಾಫ್‌ ಡು'ಪ್ಲೆಸಿಸ್‌ಗೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ರವಾನಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಫಾಫ್‌ ಡು'ಪ್ಲೆಸಿಸ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮಹತ್ವದ ವಿಷಯವನ್ನು ಬೆಂಗಳೂರು ಫ್ರಾಂಚೈಸಿ ಬಹಿರಂಗಪಡಿಸಿತ್ತು. ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್, "ಹೊಸ ಐಪಿಎಲ್‌ ಆವೃತ್ತಿಯು ಹೊಸ ಸವಾಲು ಹಾಗೂ ಹೊಸ ಅವಕಾಶವನ್ನು ತಂದೊಡ್ಡಲಿದೆ. ಈ ಋತುವಿನಲ್ಲಿ ನಾವೆಲ್ಲರೂ ಎದುರು ನೋಡಬಹುದಾದ ಕೆಲವು ರೋಚಕ ಬದಲಾವಣೆಗಳೂ ಇವೆ. ಇವುಗಳಲ್ಲಿ ದೊಡ್ಡ ಸಂಗತಿ ಏನೇಂದರೆ, ನೂತನ ನಾಯಕತ್ವ. ನನ್ನ ಸ್ನೇಹಿತ ಫಾಫ್‌ ಡುಪ್ಲೆಸಿಸ್‌ಗಿಂತ ಉತ್ತಮರು ಯಾರು," ಎಂದಿದ್ದಾರೆ. "ಈ ಪ್ರಕಟಣೆಯಿಂದ ನನಗೆ ಯಾವುದೇ ಅಚ್ಚರಿಯಾಗಿಲ್ಲ. ಏಕೆಂದರೆ ಮೆಗಾ ಹರಾಜಿನಲ್ಲಿಯೇ ಬೆಂಗಳೂರು ಫ್ರಾಂಚೈಸಿ ಅವರನ್ನು ಆಯ್ಕೆ ಮಾಡಿತ್ತು. ಅವರು ಅದ್ಭುತ ನಾಯಕ ಹಾಗೂ ಕಾರ್ಯನಿರ್ವಹಣೆಗೆ ಅವರು ಸೂಕ್ತ ವ್ಯಕ್ತಿ. ಅಷ್ಟೇ ಅಲ್ಲದೆ ಅತ್ಯುತ್ತಮ ತಾಂತ್ರಿಕ ಮನೋಭಾವವನ್ನು ಅವರು ಹೊಂದಿದ್ದಾರೆ. ಇದರ ಜೊತೆಗೆ ಅವರು ತಮ್ಮ ಸುತ್ತಮುತ್ತ ಬೆಂಬಲಿತ ವಾತಾವರಣವನ್ನು ರೂಪಿಸಲಿದ್ದಾರೆ," ಎಂದು ಹೇಳಿದರು. " ಕುಟುಂಬದಲ್ಲಿ ಫಾಫ್‌ ಡು'ಪ್ಲೆಸಿಸ್‌ ಅದ್ಭುತ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಈ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ. ನನ್ನ ಆತ್ಮೀಯ ಗೆಳೆಯ ಹಾಗೂ ನನ್ನ ಅತ್ಯುತ್ತಮ ತಂಡ ಆರ್‌ಸಿಬಿಗೆ ಶುಭವಾಗಲಿ. ಈ ಸಲ ಕಪ್‌ ನಮ್ದೆ," ಎಂದು ಎಬಿ ಡಿವಿಲಿಯರ್ಸ್ ಶುಭಹಾರೈಸಿದ್ದಾರೆ. ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆದಿದ್ದ ಹದಿನೈದನೇ ಆವೃತ್ತಿಯ ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ ಫಾಫ್‌ ಡು ಪ್ಲೆಸಿಸ್‌ ಅವರನ್ನು ಬೆಂಗಳೂರು ಫ್ರಾಂಚೈಸಿ 7 ಕೋಟಿ ರೂ. ಗಳಿಗೆ ಖರೀದಿಸಿತ್ತು. ಶನಿವಾರ ಆರ್‌ಸಿಬಿ ನಾಯಕನಾಗುವ ಮೂಲಕ ಡುಪ್ಲೆಸಿಸ್‌ ಅವರು ವಿರಾಟ್‌ ಕೊಹ್ಲಿ ಸ್ಥಾನವನ್ನು ತುಂಬಿದರು. ಎಬಿಡಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ: ಆರ್‌ಸಿಬಿ ನಾಯಕನಾದ ಬೆನ್ನೆಲ್ಲೆ ಮಾತನಾಡಿದ ಫಾಫ್‌ ಡು ಪ್ಲೆಸಿಸ್‌ ಅವರು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ. ನಾನಷ್ಟೇ ಅಲ್ಲ, ಇಡೀ ವಿಶ್ವದಲ್ಲಿಯೇ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದರು. "ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ನಾನು ಮತ್ತು ಎಬಿ ಡಿವಿಲಿಯರ್ಸ್ ಜೊತೆಯಾಗಿ ಆಡಿದ್ದೇವೆ ಹಾಗೂ ನಮ್ಮ ನಡುವೆ ಸಾಕಷ್ಟು ಒಡನಾಟವಿದೆ. ಅವರು ಆರ್‌ಸಿಬಿ ಕುಟುಂಬದಲ್ಲಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ಈಗಿನ ಸಮಯ ಅಷ್ಟೊಂದು ಚೆನ್ನಾಗಿಲ್ಲ. ಅನಿರೀಕ್ಷಿತವಾಗಿ ನಾವು ಜೊತೆಯಾಗಿ ಆಡಲು ಆಗುತ್ತಿಲ್ಲ. ಆದರೆ ಬೇರೆ ಜವಾಬ್ದಾರಿಯೊಂದಿಗೆ ಅವರು ತಂಡಕ್ಕೆ ಆಗಮಿಸಿದರೆ ಚೆನ್ನಾಗಿರುತ್ತದೆ," ಎಂದು ಫಾಫ್‌ ಡು ಪ್ಲೆಸಿಸ್ ತನ್ನ ಸ್ನೇಹಿತ ಡಿವಿಲಿಯರ್ಸ್ ಅವರನ್ನು ಸ್ಮರಿಸಿಕೊಂಡರು. ಮಾರ್ಚ್‌ 26 ರಿಂದ ಟೂರ್ನಿ ಆರಂಭ: 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 26 ರಿಂದ ಆರಂಭವಾಗಲಿದೆ. ಮಾರ್ಚ್‌ 27ರಂದು ಪಂಜಾಬ್‌ ಕಿಂಗ್ಸ್ ವಿರುದ್ಧ ಸೆಣಸುವ ಮೂಲಕ ಆರ್‌ಸಿಬಿ ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಅಭಿಯಾನವನ್ನು ಆರಂಭಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/vGLQMnd

ವಾಹನ ಸವಾರರಿಗೆ ಮುಗಿಯದ ಗೋಳು: ಪೀಣ್ಯ ಫ್ಲೈಓವರ್‌ ಮೇಲೆ ಮತ್ತೆ ರಾತ್ರಿ ಸಂಚಾರ ನಿರ್ಬಂಧ

ಬೆಂಗಳೂರು: ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಎರಡು ತಿಂಗಳು ಮುಚ್ಚಲಾಗಿದ್ದ ಪೀಣ್ಯ ಫ್ಲೈ ಓವರ್‌ ಮೇಲೆ ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ. ಶನಿವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಪೀಣ್ಯ ಮೇಲುಸೇತುವೆಯ ಎರಡು ಕಡೆಗಳಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೇಲುಸೇತುವೆಯ 102 ಮತ್ತು 103 ಪಿಲ್ಲರ್‌ಗಳ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್‌ ಬಂಕ್‌ ಬಳಿಯ ಫ್ಲೈಓವರ್‌ಗೆ ಅಳವಡಿಸಿರುವ ಕೇಬಲ್‌ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ (ಪೀಣ್ಯ ಎಲಿವೇಟೆಡ್‌ ಕಾರಿಡಾರ್‌)ಯಲ್ಲಿ ಫೆ.16ರಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮೇಲುಸೇತುವೆ ಬಳಿ ಮೂರು ಪಾಳಿಗಳಲ್ಲಿ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರೂ ಭಾರಿ ಇದೇ ಸೇತುವೆ ಮೇಲೆ ಚಲಿಸಲು ಯತ್ನಿಸುತ್ತಿದ್ದವು. ಇದರಿಂದಾಗಿ ಎರಡೂ ಕಡೆಗಳಲ್ಲಿ ಭಾರಿ ವಾಹನ ಸಂಚಾರ ನಿಯಂತ್ರಿಸಲು ಅಳವಡಿಸಿದ್ದ ಹೈಟ್‌ ರಿಸ್ಟ್ರಿಕ್ಷನ್‌ ಗ್ಯಾಂಟ್ರಿಗಳಿಗೆ ಭಾರಿ ವಾಹನಗಳು ತಗುಲಿ ಬಾಗಿವೆ. ಹಾಗಾಗಿ, ಮೇಲ್ಸೇತುವೆಯ ಕೆನ್ನಮೆಟಲ್‌ ಮೀಡಿಯಾ ಅಪ್ಪರ್‌ ರಾಂಪ್‌ನಿಂದ ಎಸ್‌ಆರ್‌ಎಸ್‌ ಡೌನ್‌ ರಾಂಪ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ರಾತ್ರಿ 12ರಿಂದ ಬೆಳಗ್ಗೆ 5ರವರೆಗೆ ಲಘು ವಾಹನ ಸಂಚಾರ ಸೇರಿ ಎಲ್ಲ ಬಗೆಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಕೆನ್ನಮೆಟಲ್‌ ವೀಡಿಯಾ ಅಪ್ಟರ್‌ ರಾಂಪ್‌ನಿಂದ ಎಸ್‌ಆರ್‌ಎಸ್‌ ಡೌನ್‌ ರಾಂಪ್‌ ಕಡೆಗೆ ಸಾಗುವ ವಾಹನಗಳು ಕೆನ್ನಮೆಟಲ್‌ ವೀಡಿಯಾದಿಂದ ಸರ್ವೀಸ್‌ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, ಪೀಣ್ಯ ಪೊಲೀಸ್‌ ಠಾಣೆ ವೃತ್ತ, ಎಸ್‌ಆರ್‌ಎಸ್‌ ಜಂಕ್ಷನ್‌ ಮೂಲಕ ಗೊರಗುಂಟೆ ಪಾಳ್ಯ ತಲುಪಬಹುದು. ಅದೇ ರೀತಿಯಲ್ಲಿ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್‌ ಮೀಡಿಯಾ ತಲುಪಲು ಸರ್ವೀಸ್‌ ರಸ್ತೆಯಲ್ಲಿ ಎಸ್‌ಆರ್‌ಎಸ್‌ ಜಂಕ್ಷನ್‌, ಪೀಣ್ಯ ಪೊಲೀಸ್‌ ಠಾಣೆ ವೃತ್ತ, ಜಾಲಹಳ್ಳಿ ಕ್ರಾಸ್‌, ದಾಸರಹಳ್ಳಿ, 8ನೇ ಮೈಲಿ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ನೈಸ್‌ ರಸ್ತೆ ಮೂಲಕ ಬೆಂಗಳೂರು ಪ್ರವೇಶ ಗೊರಗುಂಟೆ ಪಾಳ್ಯದಿಂದ ಮೇಲುಸೇತುವೆ ಮೂಲಕ ಸಾಗುವ ವಾಹನಗಳು ವರ್ತುಲ ರಸ್ತೆ ಮೂಲಕ ಸಾಗಲು ಹಾಗೂ ತುಮಕೂರು ಕಡೆಯಿಂದ ಬೆಂಗಳೂರು ನಗರ ಪ್ರವೇಶಿಸುವ ವಾಹನಗಳು ಮಾದಾವರ ಬಳಿ ನೈಸ್‌ ರಸ್ತೆ ಮೂಲಕ ಬೆಂಗಳೂರು ನಗರಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ತಡರಾತ್ರಿ ಟ್ರಾಫಿಕ್‌ ಜಾಮ್‌ ಸಾಧ್ಯತೆ ತುಮಕೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣಕ್ಕೆ ರಾತ್ರಿ ವೇಳೆ ಸರಕು ಸಾಗಣೆಯ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಾರು ಸೇರಿದಂತೆ ಲಘು ವಾಹನಗಳು ಫ್ಲೈಓವರ್‌ ಮೇಲೆ ಸಂಚರಿಸಲು ಅವಕಾಶ ಇಲ್ಲ. ಈಗ ಕೆಳಭಾಗದಲ್ಲಿ ಸಂಚರಿಸಬೇಕಾಗಿರುವುದರಿಂದ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/2ZLB0kG

ಬಿಜೆಪಿಗೆ ಹಿಂದೂ ಬಲ, ಎಸ್‌ಪಿಗೆ ಮುಸ್ಲಿಂ ಬೆಂಬಲ: ಸಮೀಕ್ಷೆಯಿಂದ ಬಹಿರಂಗ

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಈ ಸಲ ಹಿಂದೂಗಳು ಬೆನ್ನಿಗೆ ಅಚಲವಾಗಿ ನಿಂತಿದ್ದರೆ, ಸಮುದಾಯ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದತ್ತ ವಾಲಿದೆ. ಸಿಎಸ್‌ಡಿಎಸ್‌-ಲೋಕನೀತಿ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಒಟ್ಟು ಮತದಾರರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ಬಿಜೆಪಿ ಪರ ನಿಂತಿದ್ದಾರೆ. ಮುಸ್ಲಿಂ ಮತದಾರರಲ್ಲಿ ಮೂರನೇ ಎರಡರಷ್ಟು ಮಂದಿ ಸಮಾಜವಾದಿ ಪಾರ್ಟಿಗೆ ಬೆಂಬಲ ನೀಡಿದ್ದಾರೆ. ಆದರೆ, ಬಿಜೆಪಿಯನ್ನು ಬೆಂಬಲಿಸಿದ ಮುಸ್ಲಿಂ ಮತದಾರರ ಸಂಖ್ಯೆಯೂ ಹೆಚ್ಚಳವಾಗಿದೆ ಹಾಗೂ ಎಸ್‌ಪಿಗೆ ಮತ ನೀಡಿದ ಹಿಂದೂಗಳ ಪ್ರಮಾಣದಲ್ಲಿಯೂ ಏರಿಕೆ ಕಂಡುಬಂದಿದೆ. ಮತದಾರರ ಪೈಕಿ ಶೇ. 57ರಷ್ಟು ಹಿಂದೂಗಳು ಬಿಜೆಪಿ ಬೆನ್ನಿಗೆ ನಿಂತಿದ್ದಾರೆ. 2017ರ ಚುನಾವಣೆಯಲ್ಲಿ ಈ ಪ್ರಮಾಣ ಶೇ. 47ರಷ್ಟಿತ್ತು. ಹಾಗೆಯೇ, ಹಿಂದಿನ ಚುನಾವಣೆಯಲ್ಲಿ ಶೇ.3ರಷ್ಟು ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸಿದ್ದರೆ, ಈ ಬಾರಿ ಆ ಪ್ರಮಾಣ ಶೇ. 8ಕ್ಕೆ ಏರಿಕೆಯಾಗಿದೆ. ಮುಸ್ಲಿಂ ಮತದಾರರ ಪೈಕಿ ಶೇ. 79ರಷ್ಟು ಮಂದಿ ಸಮಾಜವಾದಿ ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಕಳೆದ ಬಾರಿ ಈ ಪ್ರಮಾಣ ಶೇ. 46ರಷ್ಟಿತ್ತು. ಹಿಂದಿನ ಚುನಾವಣೆಯಲ್ಲಿ ಶೇ.18ರಷ್ಟು ಹಿಂದೂಗಳು ಎಸ್‌ಪಿಯನ್ನು ಬೆಂಬಲಿಸಿದ್ದರೆ, ಈ ಸಲ ಆ ಪ್ರಮಾಣ ಶೇ. 26ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌ ಅನ್ನು ಶೇ. 2ರಷ್ಟು ಹಿಂದೂಗಳು, ಬಿಎಸ್‌ಪಿಯನ್ನು ಶೇ. 14ರಷ್ಟು ಹಿಂದೂಗಳು ಬೆಂಬಲಿಸಿದ್ದಾರೆ. ಬಿಜೆಪಿ ಯಾವೊಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್‌ ನೀಡಿರಲಿಲ್ಲ. ಅದರ ಮಿತ್ರಪಕ್ಷವಾದ ಅಪ್ನಾ ದಳ (ಎಸ್‌) ಸೌರ್‌ ಕ್ಷೇತ್ರದಲ್ಲಿಎಸ್‌ಪಿ ಮುಖಂಡ ಅಜಂ ಖಾನ್‌ ಅವರ ಪುತ್ರ ಅಬ್ದುಲ್ಲಾ ಅಜಂ ವಿರುದ್ಧ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ, ಅವರು ಸೋತಿದ್ದಾರೆ. ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ 87, ಕಾಂಗ್ರೆಸ್‌ 75 ಹಾಗೂ ಎಸ್‌ಪಿ 64 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದವು. ಆ ಪೈಕಿ ಎಸ್‌ಪಿಯ 31 ಹಾಗೂ ಮೂವರು ಎಸ್‌ಪಿ ಮಿತ್ರಪಕ್ಷವಾದ ಆರ್‌ಎಲ್‌ಡಿಗೆ ಸೇರಿದವರು, ಅಂದರೆ ಗೆದ್ದ ಮುಸ್ಲಿಂ ಅಭ್ಯರ್ಥಿಗಳೆಲ್ಲ ಸಮಾಜವಾದಿ ಪಾರ್ಟಿ ಹಾಗೂ ಅದರ ಮಿತ್ರಪಕ್ಷದವರು ಎನ್ನುವುದು ವಿಶೇಷ. ಅರ್ಧಕ್ಕಿಂತ ಹೆಚ್ಚು ಅಂಚೆ ಮತ ಪಡೆದ ಎಸ್‌ಪಿಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಅಂಚೆ ಮತಗಳ ಪೈಕಿ ಅರ್ಧಕ್ಕಿಂತ ಹೆಚ್ಚು (ಶೇ. 51.5) ಮತಗಳನ್ನು ಸಮಾಜವಾದಿ ಪಾರ್ಟಿ ನೇತೃತ್ವದ ಮೈತ್ರಿಕೂಟ ಪಡೆದಿದೆ. ಆ ಮೂಲಕ, ''ಅಂಚೆ ಮತಗಳು ಬಿಜೆಪಿ ಪರವಾಗಿಯೇ ಇರುತ್ತವೆ,'' ಎಂಬ ಸಾಮಾನ್ಯ ನಂಬಿಕೆಯನ್ನು ಮೈತ್ರಿಕೂಟ ಹುಸಿಗೊಳಿಸಿದೆ. ಚಲಾವಣೆಯಾದ 4,42,341 ಮತಗಳ ಪೈಕಿ ಎಸ್‌ಪಿ 1,99,567 (ಶೇ. 45.1), ಅದರ ಮಿತ್ರಪಕ್ಷಗಳಾದ ಆರ್‌ಎಲ್‌ಡಿ ಶೇ. 3.5, ಎಸ್‌ಬಿಎಸ್‌ಪಿ ಶೇ. 2.4, ಅಪ್ನಾ ದಳ-ಕೆ ಶೇ. 0.5 ಪಡೆದಿವೆ. ಬಿಜೆಪಿ ನೇತೃತ್ವದ ಮೈತ್ರಿಕೂಟವು ಶೇ. 33.3ರಷ್ಟು ಮತ ಪಡೆದಿದೆ. ಇದರಲ್ಲಿ ಬಿಜೆಪಿಯು 1,47,148 (ಶೇ. 31.9), ಮಿತ್ರಪಕ್ಷಗಳಾದ ಅಪ್ನಾ ದಳ-ಎಸ್‌ ಶೇ. 0.8 ಹಾಗೂ ನಿಶಾದ್‌ಪಾರ್ಟಿ ಶೇ.05ರಷ್ಟು ಅಂಚೆ ಮತ ಪಡೆದಿವೆ. ಬಿಎಸ್‌ಪಿ ಶೇ.11.1, ಕಾಂಗ್ರೆಸ್‌ ಶೇ.2, ಇತರರು ಶೇ. 2.2ರಷ್ಟು ಅಂಚೆ ಮತ ಪಡೆದಿದ್ದಾರೆ. ಉತ್ತರ ಪ್ರದೇಶದ 49 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವಿನ ಅಂತರ 5,000ಕ್ಕಿಂತ ಕಡಿಮೆ ಇದೆ.


from India & World News in Kannada | VK Polls https://ift.tt/hX8HlyF

IND vs SL: ನೂತನ ದಾಖಲೆ ಬರೆಯುವ ಸನಿಹದಲ್ಲಿ ರವೀಂದ್ರ ಜಡೇಜಾ!

ಬೆಂಗಳೂರು: ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ತೋರಿದ್ದ ಸ್ಟಾರ್‌ ಆಲ್‌ರೌಂಡರ್‌ ಶನಿವಾರದಿಂದ ಆರಂಭವಾಗುವ ಎರಡನೇ ಹಾಗೂ ಡೇ-ನೈಟ್‌ ಟೆಸ್ಟ್ ಪಂದ್ಯದಲ್ಲಿ ನೂತನ ಮೈಲುಗಲ್ಲು ಸ್ಥಾಪಿಸುವ ಹೊಸ್ತಿಲಲ್ಲಿದ್ದಾರೆ. ಮೊಹಾಲಿ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟ್‌ ಮಾಡಿದ್ದ ರವೀಂದ್ರ ಜಡೇಜಾ ಅವರು ಅಜೇಯ 175 ರನ್ ಗಳಿಸಿದ್ದರು. ನಂತರ ಬೌಲಿಂಗ್‌ನಲ್ಲಿಯೂ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್‌, ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಜಡೇಜಾ ಅವರ ಆಲ್‌ರೌಂಡರ್‌ ಪ್ರದರ್ಶನದ ಸಹಾಯದಿಂದ ಭಾರತ ತಂಡ ಇನಿಂಗ್ಸ್ ಹಾಗೂ 222 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಇದರ ಸಹಾಯದಿಂದ 406 ಅಂಕಗಳನ್ನು ಕಲೆ ಹಾಕಿದ್ದ ರವೀಂದ್ರ ಜಡೇಜಾ ಅವರು ಐಸಿಸಿ ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದರು. ಆ ಮೂಲಕ ಆರ್‌ ಅಶ್ವಿನ್‌ ಮತ್ತು ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಅವರನ್ನು ಹಿಂದಿಕ್ಕಿದ್ದರು. ಇದೀಗ ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಜಡೇಜಾ ಮತ್ತೊಂದು ಮೈಲುಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. ಅಗ್ರ ಸ್ಥಾನದಲ್ಲಿರುವ ಆರ್‌ ಅಶ್ವಿನ್‌: ಡೇ-ನೈಟ್‌ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ 9 ವಿಕೆಟ್‌ ಕಬಳಿಸಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 250 ವಿಕೆಟ್‌ಗಳನ್ನು ಕಬಳಿಸಿದ ಮೂರನೇ ಭಾರತೀಯ ಬೌಲರ್‌ ಎನಿಸಿಕೊಳ್ಳಲಿದ್ದಾರೆ. ಶನಿವಾರದ ಪಂದ್ಯ ರವೀಂದ್ರ ಜಡೇಜಾ ಪಾಲಿಗೆ 59ನೇ ಟೆಸ್ಟ್‌ ಆಗಿದೆ. ಈ ಪಟ್ಟಿಯಲ್ಲಿ ಆರ್‌ ಅಶ್ವಿನ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 45 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಅವರು 55 ಟೆಸ್ಟ್‌ ಪಂದ್ಯಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದರು. ಈ ಪಟ್ಟಿಯಲ್ಲಿ ಇವರು ಎರಡನೇ ಸ್ಥಾನದಲ್ಲಿದ್ದಾರೆ. ಬಿಷನ್ ಸಿಂಗ್‌ ಬೇಡಿ(60 ಟೆಸ್ಟ್), ಹರ್ಭಜನ್‌ ಸಿಂಗ್‌(61 ಟೆಸ್ಟ್‌) ಹಾಗೂ ಕಪಿಲ್‌ ದೇವ್‌ (65 ಟೆಸ್ಟ್‌) ಅವರು ಈ ಪಟ್ಟಿಯಲ್ಲಿ ನಂತರದ ಮೂರು ಸ್ಥಾನಗಳಲ್ಲಿದ್ದಾರೆ. 9 ವಿಕೆಟ್‌ ಕಿತ್ತರೆ ಜಡೇಜಾಗೆ 5ನೇ ಸ್ಥಾನ: ಟೆಸ್ಟ್‌ ಕ್ರಿಕೆಟ್‌ನಲ್ಲಿ 250ಕ್ಕೂ ಹೆಚ್ಚು ವಿಕೆಟ್‌ ಹಾಗೂ 2000ಕ್ಕೂ ಹೆಚ್ಚಿನ ರನ್‌ ಗಳಿಸಿರುವ ಭಾರತೀಯ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ, ಕಪಿಲ್‌ ದೇವ್, ಹರ್ಭಜನ್‌ ಸಿಂಗ್‌ ಹಾಗೂ ಆರ್‌ ಅಶ್ವಿನ್ ಸೇರಿ ನಾಲ್ವರು ಇದ್ದಾರೆ. ಈ ಪಂದ್ಯದಲ್ಲಿ ಜಡೇಜಾ 9 ವಿಕೆಟ್‌ ಕಿತ್ತರೆ ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಲಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ಮೂರು ಟೆಸ್ಟ್‌ ಪಂದ್ಯಗಳಿಂದ 20.60ರ ಸ್ಟ್ರೈಕ್‌ ರೇಟ್‌ನಲ್ಲಿ 17 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಅಂಗಣದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ಜಡೇಜಾ ಭರ್ಜರಿ ಕಮ್‌ಬ್ಯಾಕ್‌: ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಬಳಿಕ ರವಿಂದ್ರ ಜಡೇಜಾ ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಮೂರು ಟಿ20 ಪಂದ್ಯಗಳು ಹಾಗೂ ಒಂದು ಟೆಸ್ಟ್‌ ಪಂದ್ಯದಿಂದ 245 ರನ್‌ ಗಳಿಸಿದ್ದಾರೆ. ಇದರ ಜೊತೆಗೆ 10 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2012ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೂ ಜಡೇಜಾ 58 ಟೆಸ್ಟ್‌ ಪಂದ್ಯಗಳಾಡಿದ್ದಾರೆ. ಇದರಲ್ಲಿ ಅವರು 2,370 ರನ್‌ ಹಾಗೂ 241 ವಿಕೆಟ್‌ಗಳನ್ನು ಕಬಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7Hl2Eah

ಕಾಂಗ್ರೆಸ್‌ ನಾಯಕರು ತಮ್ಮದೇ ತಪ್ಪುಗಳಿಂದ ಎಂದಿಗೂ ಪಾಠ ಕಲಿಯುವುದಿಲ್ಲ: ಅಮರಿಂದರ್‌ ಕಿಡಿ

ಚಂಡೀಗಢ: ಪಂಜಾಬ್‌ನಲ್ಲಿ ಪಕ್ಷದ ಸೋಲಿಗೆ ಕಳೆದ ನಾಲ್ಕೂವರೆ ವರ್ಷಗಳ ಆಡಳಿತ ವಿರೋಧಿ ಅಲೆ ಕಾರಣ ಎಂದು ಹೇಳಿರುವ ಕಾಂಗ್ರೆಸ್‌ ನಾಯಕರನ್ನು ಮಾಜಿ ಮುಖ್ಯಮಂತ್ರಿ ಕ್ಯಾ. ಅಮರಿಂದರ್‌ ಸಿಂಗ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕಾಂಗ್ರೆಸ್‌ ನಾಯಕರು ತಮ್ಮದೇ ತಪ್ಪುಗಳಿಂದ ಎಂದಿಗೂ ಪಾಠ ಕಲಿಯುವುದಿಲ್ಲ’ ಎಂದು ಟ್ವೀಟ್‌ ಮೂಲಕ ಹೇಳಿರುವ ಅವರು, ಯಾವತ್ತಿಗೂ ಕಾಂಗ್ರೆಸ್‌ ಹೈಕಮಾಂಡ್‌ ಬುದ್ಧಿ ಕಲಿಯೋದಿಲ್ಲ. ಪಂಜಾಬ್‌ನಲ್ಲಿ ಸೋಲಿಗೆ ನನ್ನ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್ಸಿಗರು ಉತ್ತರ ಪ್ರದೇಶದಲ್ಲಿ ಹೀನಾಯವಾಗಿ ಸೋತಿದ್ದು ಯಾರಿಂದ, ಯಾಕೆ? ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾಗಳಲ್ಲಿ ಏನಾಯಿತು? ಈ ಪ್ರಶ್ನೆಗಳಿಗೆ ದಪ್ಪ ಅಕ್ಷರಗಳಲ್ಲಿ ಗೋಡೆ ಮೇಲೆ ಉತ್ತರವಿದೆ. ಆದರೆ ಕಾಂಗ್ರೆಸ್‌ ನಾಯಕರು ಅದನ್ನು ಓದುವುದನ್ನು ಉದ್ದೇಶ ಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಾರೆ’ ಎಂದು ಲೇವಡಿ ಮಾಡಿದ್ದಾರೆ. ತಮ್ಮ ತಪ್ಪು ಕಾಣಿಸದು: ಕಾಂಗ್ರೆಸ್‌ ಹೈಕಮಾಂಡ್‌ ಯಾವಾಗಲೂ ಜಾಣ ಕುರುಡುತನ ಪ್ರದರ್ಶಿಸುತ್ತದೆ. ದಪ್ಪ ಅಕ್ಷರಗಳಲ್ಲಿ ಬರೆಯಲಾದ ನೈಜ ಕಾರಣಗಳನ್ನು ಕಣ್ತಿಪ್ಪಿಸಿ, ಇತರರ ಮೇಲೆ ಗೂಬೆ ಕೂರಿಸುತ್ತದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಾಡಿದ ನಾಯಕತ್ವ ಗೊಂದಲ, ಅನರ್ಹರಿಗೆ ದೊಡ್ಡ ಪಟ್ಟ ನೀಡಿದ್ದೇ ಪಕ್ಷದ ಹೀನಾಯ ಸೋಲಿಗೆ ಪ್ರಮುಖ ಕಾರಣ ಎಂದು ಅಮರಿಂದರ್‌ ಕಿಡಿಕಾರಿದ್ದಾರೆ. ನವಜೋತ್‌ ಸಿಂಗ್‌ ಸಿಧು ಒತ್ತಡಕ್ಕೆ ಮಣಿದ ಕಾಂಗ್ರೆಸ್‌ ಹೈಕಮಾಂಡ್‌ ಕಳೆದ ವರ್ಷ ಕ್ಯಾ.ಅಮರಿಂದರ್‌ ಸಿಂಗ್‌ ಅವರನ್ನು ಪದಚ್ಯುತಗೊಳಿಸಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ಪಟ್ಟ ಕಟ್ಟಿತ್ತು. ಜತೆಗೆ, ಕ್ಯಾಪ್ಟನ್‌ ವಿರೋಧಿಯಾಗಿರುವ ಸಿಧು ಅವರನ್ನು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿತ್ತು. ಪಂಜಾಬ್‌ನಲ್ಲಿ ಪಕ್ಷದ ಹೀನಾಯ ಸೋಲಿಗೆ ಅಮರಿಂದರ್ ಸಿಂಗ್ ನೇತೃತ್ವದ ಆಡಳಿತ ವಿರೋಧಿ ಅಲೆ ಕಾರಣ ಎಂದು ಕಾಂಗ್ರೆಸ್ ಹೇಳಿತ್ತು. ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು, ‘ಅಮರಿಂದರ್‌ ಸಿಂಗ್‌ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್‌ ಸೋತಿದೆ. ಹಾಗಾಗಿ ಜನರು ಬದಲಾವಣೆ ಬಯಸಿದರು” ಎಂದು ಹೇಳಿದ್ದರು.


from India & World News in Kannada | VK Polls https://ift.tt/mrbioW4

ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅಸಮಾಧಾನ

ಬೆಂಗಳೂರು: ತಮ್ಮದೇ ಸರ್ಕಾರದ ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕ ಉಮಾನಾಥ್ ಎ ಕೋಟ್ಯಾನ್‌ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ‘ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಸಚಿವರ ಬಳಿ ಹತ್ತಾರು ಸಲ ತೆರಳಿದರೂ ಒಂದೂ ನಿಮಿಷವೂ ಮಾತನಾಡಲ್ಲ. ನೋಡೋಣ ಎಂದು ಹೇಳಿ ಕಳುಹಿಸುತ್ತಾರೆ. ಹೀಗಾದರೆ ಹೇಗೆ ಅಧ್ಯಕ್ಷರೇ?’ ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ , ‘ಬಜ್ಪೆ ಪಟ್ಟಣ ಪಂಚಾಯಿತಿಗೆ 40 ಹುದ್ದೆಗಳು ಮಂಜೂರಾಗಿದ್ದು, ಹೊರ ಗುತ್ತಿಗೆ, ಗುತ್ತಿಗೆ ನೌಕರರು ಸೇರಿದಂತೆ 18 ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂಜಿನಿಯರ್‌ ಇಲ್ಲದೆ ಕಾಮಗಾರಿಗಳು ನಡೆಯುತ್ತಿಲ್ಲ. ನಿಯೋಜಿಸಿದ ಕಿರಿಯ ಎಂಜಿನಿಯರ್‌ ತಿಂಗಳಿಗೊಮ್ಮೆ ಬರುತ್ತಾರೆ. ಇಂತಹ ಸಮಸ್ಯೆ ಚರ್ಚಿಸಲು ಸಚಿವರ ಬಳಿ ಹೋದರು ನಿಮಿಷವೂ ಮಾತನಾಡಲ್ಲ ಎಂದು ಕಿಡಿಕಾರಿದರು. ಆಗ ಎದ್ದು ನಿಂತ ಸಚಿವ ಎಂಟಿಬಿ ನಾಗರಾಜ ‘ನೂರು ಸಲ ಬಂದಿದ್ದೆ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ಒಂದೆರಡು ಬಾರಿ ಬಂದಿರಬಹುದು. ಶಾಸಕರು ಬಂದ ತಕ್ಷಣ ಗೌರವ ಕೊಟ್ಟು ಕೆಲಸ ಮಾಡಿಕೊಡುತ್ತೇನೆ. ಸುಮ್ಮನೆ ತಪ್ಪು ಮಾಹಿತಿ ನೀಡಬೇಡಿ’ ಎಂದು ಹೇಳಿದರು. ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ಬಂಡಾಯದ ಧ್ವನಿಪಿರಿಯಾಪಟ್ಟಣ: ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮೈ.ವಿ.ರವಿಶಂಕರ್‌ಗೆ ಬಿಜೆಪಿ ಟಿಕೆಟ್‌ ಘೋಷಿಸಿದ ಬೆನ್ನಲ್ಲೇ, ಬಂಡಾಯದ ಧ್ವನಿ ಎದ್ದಿದೆ. ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎನ್‌.ಎಸ್‌.ವಿನಯ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ‘ಪಕ್ಷ ನಿಷ್ಠೆಯಿಂದ ಸಂಘಟನೆ ಮಾಡಿದ ನನಗೆ ಬಿಜೆಪಿ ಟಿಕೆಟ್‌ ನೀಡದೆ ಕಳೆದ ಬಾರಿ ಸೋಲು ಅನುಭವಿಸಿದ ವ್ಯಕ್ತಿಗೆ ಮತ್ತೆ ಟಿಕೆಟ್‌ ನೀಡಿರುವುದರಿಂದ ನನಗೆ ಅನ್ಯಾಯವಾಗಿದೆ. ನಾನು ಸ್ವತಂತ್ರವಾಗಿ ಸ್ಪರ್ಧೆ ನಡೆಸುತ್ತೇನೆ’ ಎಂದು ವಿನಯ್‌ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಕಳೆದ ಒಂದೂವರೆ ವರ್ಷದಿಂದ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಓಡಾಟ ನಡೆಸಿ 48,884 ಮತದಾರರನ್ನು ನೋಂದಣಿ ಮಾಡಿ, ನೇರವಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದೇನೆ. ಅಲ್ಲದೆ, ತಲಾ 1 ಲಕ್ಷ ವಿಮೆಯನ್ನು 28 ಸಾವಿರ ಮಂದಿಗೆ ನೀಡಿದ್ದೇನೆ. ಈ ಬಗ್ಗೆ ಬಿಜೆಪಿ ವರಿಷ್ಠರ ಗಮನಕ್ಕೂ ತಂದಿದ್ದೇನೆ’ ಎಂದರು. ‘ಕಳೆದ ಬಾರಿ ಸೋತ ನಂತರ ದಕ್ಷಿಣ ಪದವೀಧರರ ಸಂಪರ್ಕವನ್ನೇ ಮಾಡದ ಮೈ.ವಿ.ರವಿಶಂಕರ್‌ಗೆ ಮತ್ತೆ ಟಿಕೆಟ್‌ ನೀಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಾಗಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಮತ್ತು ಯಾವುದೇ ಒತ್ತಡಕ್ಕೂ ಮಣಿಯವುದಿಲ್ಲ. 4 ಜಿಲ್ಲೆಯಲ್ಲಿ ಮತದಾರರು ನನ್ನ ಕೈ ಹಿಡಿಯುವ ಭರವಸೆ ಇದೆ’ ಎಂದರು. ಮುಖಂಡರಾದ ಮಂಜಣ್ಣ, ಸೋಮು, ಕೆ.ಪಿ.ಪವನ್‌ಕುಮಾರ್‌ ಹಾಜರಿದ್ದರು.


from India & World News in Kannada | VK Polls https://ift.tt/9ElcTuN

'ಕಳಪೆ ಪಿಚ್', ಆಸ್ಟ್ರೇಲಿಯಾ ಎದುರು ದಶಕದ ಬಳಿಕ ಟೆಸ್ಟ್ ಆಯೋಜಿಸಿದ ಪಾಕಿಸ್ತಾನಕ್ಕೆ ಮುಖಭಂಗ!

ಕರಾಚಿ: ಆತಿಥೇಯ ಮತ್ತು ಪ್ರವಾಸಿ ನಡುವಣ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ನೀರಸ ಡ್ರಾ ಫಲಿತಾಂಶ ಕಂಡಿತು. ರಾವಲಪಿಂಡಿಯಲ್ಲಿ ನಡೆದ 3 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಪರ ನಾಲ್ಕು ಶತಕಗಳು ಮೂಡಿಬಂದವು. ಪಂದ್ಯದುದ್ದಕ್ಕೂ ಬ್ಯಾಟ್ಸ್‌ಮನ್‌ಗಳ ಅಬ್ಬರ ನಡೆದು, ಬೌಲರ್‌ಗಳು ಬಳಲಿ ಬೆಂಡಾದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಪಿಚ್‌ ಪರಿಶೀಲನೆ ಮಾಡಿದ (ಐಸಿಸಿ) ಅಧಿಕಾರಿಗಳು 'ಕಳಪೆ ಪಿಚ್‌' ಎಂದು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಕ್ರೀಡಾಂಗಣಕ್ಕೆ ಒಂದು ಡೀಮೆರಿಟ್‌ ಅಂಕವನ್ನೂ ಕೊಟ್ಟಿದ್ದಾರೆ. ಐಸಿಸಿ ಮ್ಯಾಚ್‌ ರೆಫ್ರಿ ಪಿಚ್‌ ಕಳಪೆ ಎಂದು ವರದಿ ಮಾಡಿದ್ದೇ ಆದರೆ, ಆ ಕ್ರೀಡಾಂಗಣಕ್ಕೆ ಐಸಿಸಿ ಒಂದು ಡೀಮೆರಿಟ್‌ ಅಂಕವನ್ನು ನೀಡುತ್ತದೆ. ಕಳಪೆ ಪಿಚ್‌ ಒದಗಿಸುವ ಕ್ರೀಡಾಂಗಣಗಳಿಗೆ ಡೀಮೆರಿಟ್‌ ಅಂಕಗಳನ್ನು ನೀಡುವ ನಿಯಮವನ್ನು ಐಸಿಸಿ 2018ರಲ್ಲಿ ಜಾರಿಗೆ ತಂದಿತ್ತು. ತೀರಾ ಕಳಪೆಯಾಘಿದ್ದರೆ ಗರಿಷ್ಠ 3 ಡೀಮೆರಿಟ್‌ ಅಂಕ ಕೊಡಬಹುದಾಗಿದೆ. ರಾವಲಪಿಂಡಿಯಲ್ಲಿ ಇರುವ ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದ ಪಿಚ್‌ ಕಳಪೆ ಗುಣಮಟ್ಟದ್ದಾಗಿದೆ ಎಂದು ಮ್ಯಾಚ್‌ ರೆಫ್ರಿ ರಂಜನ್‌ ಮದುಗಲೆ ನಿರ್ಧರಿಸಿದ್ದಾರೆ. "ಐದು ದಿನಗಳ ಆಟದಲ್ಲಿ ಪಿಚ್‌ನ ಗುಣ ಹೆಚ್ಚೇನು ಬದಲಾವಣೆ ಆಗಲೇ ಇಲ್ಲ. ಬೌನ್ಸ್‌ ಕೊಂಚ ಕಡಿಮೆ ಆಯಿತು ಎಂಬುದನ್ನು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಆಗಲಿಲ್ಲ. ವೇಗದ ಬೌಲರ್‌ಗಳಿಗೆ ಆಗಲಿ, ಸ್ಪಿನ್ನರ್‌ಗಳಿಗೆ ಆಗಲಿ ಪಿಚ್‌ನಿಂದ ಯಾವುದೇ ಬೆಂಬಲ ಸಿಗಲಿಲ್ಲ. ಹೀಗಾಗಿ ಬ್ಯಾಟ್‌ ಮತ್ತು ಬಾಲ್‌ ನಡುವೆ ಯಾವುದೇ ಪೈಪೋಟಿ ಇಲ್ಲದಂತ್ತಾಯಿತು. ಐಸಿಸಿ ನೀತಿ ನಿಯಮಗಳನ್ನು ಗಮನದಲ್ಲಿಟ್ಟು ಈ ಪಿಚ್‌ ಕಳೆಪೆ ಎಂದು ತೀರ್ಮಾನಿಸುತ್ತಿದ್ದೇನೆ," ಎಂದು ರಂಜನ್‌ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. 5 ವರ್ಷಗಳ ಕಾಲ ಉಳಿಯಲಿರುವ ಅಂಕಕಳಪೆ ಪಿಚ್‌ ಎಂದು ನೀಡಲಾಗುವ ಡೀಮೆರಿಟ್‌ ಅಂಕಗಳು 5 ವರ್ಷಗಳ ಕಾಲ ಉಳಿಯಲಿದೆ. ಈ ಅವಧಿಯಲ್ಲಿ ಒಟ್ಟು 5 ಡೀಮೆರಿಟ್‌ ಅಂಕಗಳು ಆ ಕ್ರೀಡಾಂಗಣಕ್ಕೆ ಲಭ್ಯವಾದರೆ, 12 ತಿಂಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವಂತ್ತಿಲ್ಲ. ಒಂದು ವೇಳೆ 5 ವರ್ಷ ಅವಧಿಯಲ್ಲಿ 10 ಡೀಮೆರಿಟ್‌ ಅಂಕ ಲಭ್ಯವಾದರೆ, 24 ತಿಂಗಳು ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವಂತ್ತಿಲ್ಲ. ನೀರಸ ಡ್ರಾ ಕಂಡ ಪಂದ್ಯ ಪ್ರಥಮ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿತ್ತು. ಓಪನರ್‌ ಇಮಾಮ್‌ ಉಲ್‌ ಹಕ್ (157) ಮತ್ತು ಮಾಜಿ ನಾಯಕ ಅಝರ್‌ ಅಲಿ (185) ಬಾರಿಸಿದ ದೈತ್ಯ ಶತಕಗಳ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 162 ಓವರ್‌ಗಳಲ್ಲಿ 476/4 ರನ್‌ಗಳನ್ನು ದಾಖಲಿಸಿ ಡಿಕ್ಲೇರ್ ಮಾಡಿತು. ಇದಕ್ಕುತ್ತರವಾಗಿ 140.1 ಓವರ್‌ಗಳಳಲ್ಲಿ 459 ರನ್‌ಗಳಿಸಿ ಆಲ್‌ಔಟ್‌ ಆಯಿತು. ನಂತರ ಎರಡನೇ ಇನಿಂಗ್ಸ್‌ ಆರಂಭಿಸಿದ ಪಾಕ್‌, 77 ಓವರ್‌ಗಳಲ್ಲಿ ವಿಕೆಟ್‌ ನಿಷ್ಟವಿಲ್ಲದೆ 252 ರನ್‌ ಗಳಿಸಿತು. ಆರಂಭಿಕರಾದ ಇಮಾಮ್‌ ಉಲ್‌ ಹಕ್‌ (111*) ಮತ್ತು ಅಬ್ದುಲ್ಲ ಶಫೀಕಿ (136*) ಶತಕ ಬಾರಿಸಿ ಆಸೀಸ್‌ ಬೌಲರ್‌ಗಳನ್ನು ದಣಿಯುವಂತೆ ಮಾಡಿದರು. ಪರಿಣಾಮ ಪಂದ್ಯ ಡ್ರಾ ಫಲಿತಾಂಶದಲ್ಲಿ ಅಂತ್ಯಗೊಂಡಿತು. ಸರಣಿಯ ಎರಡನೇ ಪಂದ್ಯ ಕರಾಚಿಯ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಾ.12-16ರವರೆಗೆ ನಡೆಯಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gFr2k3X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...