ಗುಲಾಬ್‌ ಚಂಡಮಾರುತ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರು: ಪೂರ್ವ ಕರಾವಳಿಯಲ್ಲಿ ಉಂಟಾದ ಗುಲಾಬ್‌ ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮುಂದಿನ ಐದು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಹಾವೇರಿ, ರಾಯಚೂರು, ಬೆಳಗಾವಿ, ಕೊಪ್ಪಳ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಕಲಬರುಗಿ, ಬೀದರ್‌, ಬೆಂಗಳೂರು ಜಿಲ್ಲೆಗಳ ಕೆಲವು ಕಡೆ ಮುಂದಿನ ಐದು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿದ್ದು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ 28 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರಲಿದೆ ಎಂದು ಇಲಾಖೆ ತಿಳಿಸಿದೆ. ಮಂಗಳವಾರ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ವಿಶೇಷವಾಗಿ ಕಲಬರುಗಿ ಜಿಲ್ಲೆ ಖಜೂರು ಮತ್ತು ಕಮಲಾಪುರದಲ್ಲಿ 9 ಸೆಂ.ಮೀ, ಉಡುಪಿ ಜಿಲ್ಲೆ ಕೋಟಾದಲ್ಲಿ 7 ಸೆಂ. ಮೀ. ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ 3 ದಿನ ಸಾಧಾರಣೆ ಮಳೆ ಸಾಧ್ಯತೆ ಕೊಡಗು ಜಿಲ್ಲೆಯಾದ್ಯಂತ ಮುಂದಿನ ಮೂರು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಮೂನ್ಸೂಚನೆ ನೀಡಿದೆ. ರೈತರು ಸಸ್ಯ ಸಂರಕ್ಷಣೆಗೆ ಬಳಸುವ ಪೀಡೆನಾಶಕಗಳ ಸಿಂಪರಣೆಯನ್ನು ಮುಂದೂಡಬೇಕು ಮತ್ತು ಕೃಷಿ ಚಟುವಟಿಕೆಗಳಲ್ಲಿ ಮುಂಜಾಗೃತಾ ಕ್ರಮ ವಹಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿ ಹವಾಮಾನ ಘಟಕ ಕೊಡಗು ಸೂಚಿಸಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 6.24 ಮಿ.ಮೀ ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 2.82 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 13.53 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 2.36 ಮಿ.ಮೀ ಆಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1939.61 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1657.05 ಮಿ.ಮೀ. ಮಳೆಯಾಗಿತ್ತು. ಕರಾವಳಿಯಲ್ಲಿಸಾಧಾರಣ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ 7 ಮಿ.ಮೀ ಮಳೆ ಸುರಿದಿದೆ. ವಿಶೇಷವಾಗಿ ಮೂಡುಬಿದಿರೆ ಹಾಗೂ ಬೆಳ್ತಂಗಡಿ ಭಾಗದಲ್ಲಿ ಕೊಂಚ ಮಳೆ ಜಾಸ್ತಿಯಾಗಿದ್ದು, 13 ಮಿ.ಮೀ ಮಳೆಯಾಗಿದೆ. ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆಯವರೆಗೆ ಬಂಟ್ವಾಳದಲ್ಲಿ 3 ಮಿ.ಮೀ, ಮಂಗಳೂರು 7 ಮಿ.ಮೀ, ಪುತ್ತೂರಿನಲ್ಲಿ 2 ಮಿ.ಮೀ, ಸುಳ್ಯದಲ್ಲಿ 2 ಮಿ.ಮೀ, ಕಡಬದಲ್ಲಿ 4 ಮಿ.ಮೀ ಮಳೆಯಾಗಿದೆ. ಇನ್ನೆರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿಯಲ್ಲಿ ಸರಾಸರಿ 38.6ಮಿ. ಮೀ. ಮಳೆ, 5.68 ಲಕ್ಷ ರೂ. ನಷ್ಟ ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 38.6ಮಿ. ಮೀ. ಮಳೆ ದಾಖಲಾಗಿದ್ದು ಹನ್ನೊಂದು ಮನೆಗಳಿಗೆ ಒಟ್ಟು 5.68 ಲಕ್ಷ ರೂ. ಹಾನಿಯಾಗಿದೆ. ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಧನುಷ್‌ ನಾಯಕ್‌ (25,000 ರೂ.), ಮರೀನಾ (28,000 ರೂ.), ಕಂದಾವರ ಗ್ರಾಮದ ರಾಘವೇಂದ್ರ ಶೆಟ್ಟಿಗಾರ್‌ (15,000 ರೂ.), ಬಳ್ಕೂರು ಗ್ರಾಮದ ತಿಲಕ್‌ ಕುಮಾರ್‌ (1,50,000 ರೂ.), ಬೇಬಿ ಭಂಡಾರ್ತಿ (50,000 ರೂ.), ಚಿಕ್ಕು (80,000 ರೂ.), ಜ್ಯೋತಿ ಗಾಣಿಗ (30,000 ರೂ.) ಬೈಂದೂರು ತಾಲೂಕಿನ ಹಡವು ಗ್ರಾಮದ ಕಾವೇರಿ (50,000 ರೂ.), ಜಡ್ಕಲ್‌ ಗ್ರಾಮದ ರಾಜನ್‌ (50,000 ರೂ.), ಪಿ. ಕೆ. ಲೀಲಾ (50,000 ರೂ.), ಕೊಲ್ಲೂರು ಗ್ರಾಮದ ಸುಜಾತಾ ಶೆಟ್ಟಿ (40,000 ರೂ.) ಮನೆ ಗಾಳಿ, ಮಳೆಯಿಂದಾಗಿ ಹಾನಿಗೊಳಗಾಗಿದೆ. ಉಡುಪಿ: 14.7 ಮಿ. ಮೀ., ಬ್ರಹ್ಮಾವರ: 19 ಮಿ.ಮೀ., ಕಾಪು: 10.7 ಮಿ. ಮೀ., ಕುಂದಾಪುರ: 62.8 ಮಿ. ಮೀ., ಬೈಂದೂರು: 59 ಮಿ.ಮೀ., ಕಾರ್ಕಳ: 18.7 ಮಿ. ಮೀ., ಹೆಬ್ರಿ: 44.6 ಮಿ. ಮೀ. ಮಳೆ ದಾಖಲಾಗಿದೆ.


from India & World News in Kannada | VK Polls https://ift.tt/3F5tBkv

ಶೀಘ್ರ ನೂತನ ನವೀಕರಿಸಬಹುದಾದ ಇಂಧನ ನೀತಿ ಜಾರಿ, 10,000 ಮೆ.ವ್ಯಾ. ಉತ್ಪಾದನೆ ಗುರಿ - ಸುನಿಲ್‌ ಕುಮಾರ್‌

ಪಾವಗಡ (ತುಮಕೂರು): ರಾಜ್ಯದಲ್ಲಿ 10,000 ಮೆಗಾ ವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ನೂತನ ನವೀಕರಿಸಬಹುದಾದ ಇಂಧನ ನೀತಿ ಜಾರಿಗೊಳಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. ಪಾವಗಡದ ನಾಗಲಮಡಿಕೆಯ ತಿರುಮಣಿ ಸೋಲಾರ್‌ ಪಾರ್ಕ್‌ಗೆ ಬುಧವಾರ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, "2022ರ ವೇಳೆಗೆ 175 ಗಿಗಾ ವ್ಯಾಟ್‌ಗೆ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 10,000 ಮೆಗಾವ್ಯಾಟ್‌ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ," ಎಂದರು. "ಪಾವಗಡ ಸೋಲರ್‌ ಪಾರ್ಕ್‌ನಿಂದ ರಾಜ್ಯಕ್ಕೆ 1,850 ಮೆಗಾ ವ್ಯಾಟ್‌ ವಿದ್ಯುತ್‌ ಲಭ್ಯವಾಗುತ್ತಿದೆ. 200 ಮೆಗಾ ವ್ಯಾಟ್‌ ಅನ್ನು ಹೊರ ರಾಜ್ಯಕ್ಕೆ ಪೂರೈಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 377.43 ದಶ ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ,'' ಎಂದು ಮಾಹಿತಿ ನೀಡಿದರು. ಪಾವಗಡ ಸೋಲಾರ್‌ ಪಾರ್ಕ್‌ಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿರುವ ರೈತರಿಗೆ ವಾರ್ಷಿಕ 21 ಸಾವಿರ ರೂ ನೀಡಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಇಂಗ್ಲಿಷ್‌ ಜಾಗಕ್ಕೆ ಕನ್ನಡ ಬರಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ವಿ. ಸುನಿಲ್‌ ಕುಮಾರ್‌ ಅವರು, ಪಾವಗಡ ಸೋಲರ್‌ ಪಾರ್ಕ್‌ಗೆ ಭೇಟಿ ನೀಡಿದ ವೇಳೆ ಕನ್ನಡಾಭಿಮಾನ ಮೆರೆದರು. ಪಾರ್ಕ್‌ನಲ್ಲಿನ ಇಂಗ್ಲಿಷ್‌ ನಾಮ ಫಲಕಗಳನ್ನು ಗಮನಿಸಿದ ಅವರು, ಕೂಡಲೇ ಈ ನಾಮ ಫಲಕಗಳನ್ನು ತೆರವುಗೊಳಿಸಿ ಕನ್ನಡ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು. ಇಂಧನ ಸಚಿವ ವಿ. ಸುನೀಲ್‌ ಕಮಾರ್‌ ಬುಧವಾರ ಪಾವಗಡದಲ್ಲಿನ ಸೋಲಾರ್‌ ಪಾರ್ಕ್‌ಗೆ ಭೇಟಿ ನೀಡಿದ ವೇಳ ಶಾಸಕ ವೆಂಕಟರಮಣಪ್ಪ ಮತ್ತಿತರರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3uoOBNV

ಮಹಿಳೆಯರಿಗೆ ಮಣೆ ಹಾಕಲು ಜೆಡಿಎಸ್‌ ಪ್ಲ್ಯಾನ್‌: ನಾರಿ ಶಕ್ತಿಗೆ ದಳಪತಿಗಳ ಸಂಕಲ್ಪ

ಬಿಡದಿ: ಮಹಿಳೆಯರಿಗೆ ಶೇ.33 ಮೀಸಲು ಧ್ವನಿಗೆ ಜೀವ ತುಂಬಲು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 30 ರಿಂದ 35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಲಿದೆ ಎಂದು ವರಿಷ್ಠರೂ ಆದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ಜನತಾ ಪರ್ವ 1.0 ಹಾಗೂ ಮಿಷನ್‌-123 ಗುರಿಯೊಂದಿಗೆ ಬಿಡದಿಯ ತೋಟದ ಮನೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಗಾರದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಜಿ ಪ್ರಧಾನಿ ದೇವೇಗೌಡರು ಮಹಿಳೆಯರಿಗೆ ಚುನಾವಣೆಯಲ್ಲಿ ಶೇ.33 ರಷ್ಟು ಮೀಸಲು ಕೊಡಬೇಕು ಅಂತ ಧ್ವನಿ ಎತ್ತಿದ್ದರು. ಆದರೆ ಕಾಂಗ್ರೆಸ್‌, ಬಿಜೆಪಿ ಸರಕಾರಗಳು ಜಾರಿ ಮಾಡಲಿಲ್ಲ. ಹೀಗಾಗಿ ಜೆಡಿಎಸ್‌ ಪಕ್ಷದಲ್ಲಿ ಮಹಿಳೆಯರಿಗೆ ಮೀಸಲು ನೀಡುವ ಮೂಲಕ ಕರ್ನಾಟಕದಿಂದಲೇ ಮಹಿಳಾ ಮೀಸಲು ಧ್ವನಿ ಎತ್ತುವ ಕೆಲಸ ಮಾಡುತ್ತೇವೆ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 33% ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ'' ಎಂದು ಕುಮಾರಸ್ವಾಮಿ ಹೇಳಿದರು. ''ಈಗಾಗಲೇ ಮೊದಲ ಹಂತದಲ್ಲಿ 7-8 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟು ಮೀಸಲಿಟ್ಟಿದ್ದೇವೆ. ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಈಗ ಈ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಪ್ರಾರಂಭ ಮಾಡುತ್ತೇವೆ'' ಎಂದರು. ಮಹಿಳೆಯರಿಗೂ ಟಾಸ್ಕ್‌ ಮಹಿಳಾ ಘಟಕಕ್ಕೆ ಶಕ್ತಿ ಹೆಚ್ಚಿಸಲು ಬೂತ್‌ ಮಟ್ಟದಿಂದ ಟಾಸ್ಕ್‌ ಕೊಡಲಾಗುವುದು. ನಾಯಕಿಯರಿಗೆ ಸೂಕ್ತ ತರಬೇತಿ ಕೊಡುವ ಜತೆಗೆ ಪ್ರತಿ ಕ್ಷೇತ್ರದಲ್ಲಿ ಸುಮಾರು 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನೂ ನೀಡಲಾಗುತ್ತದೆ. 30 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ,'' ಎಂದು ತಿಳಿಸಿದರು. ಮಹಿಳಾ ಕಾರ್ಯಾಗಾರಕ್ಕೆ ಚಾಲನೆ ಇದೇ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಮಹಿಳಾ ಜೆಡಿಎಸ್‌ ರಾಜ್ಯಾಧ್ಯಕ್ಷೆ ಲೀಲಾದೇವಿ ಆರ್‌.ಪ್ರಸಾದ್‌ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿದರು. ಜೆಡಿಎಸ್‌ ಮಹಿಳಾ ನಾಯಕಿ ಕೆ. ಷರೀಫಾ ಅವರು ಮಹಿಳೆಯರನ್ನು ಕುರಿತು ಪ್ರಧಾನ ಭಾಷಣ ಮಾಡಿದರು. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲೀಲಾದೇವಿ ಆರ್‌. ಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವದುರ್ಗದ ಅಭ್ಯರ್ಥಿ ಕರಿಯಮ್ಮ, ಬೆಂಗಳೂರು ನಗರ ಘಟಕದ ಅಧ್ಯಕ್ಷೆ ರುತ್‌ ಮನೋರಮಾ ವೇದಿಕೆಯಲ್ಲಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳ ಮಹಿಳಾ ಪ್ರತಿನಿಧಿಗಳು ಭಾಗಿ ಕಾರ್ಯಾಗಾರದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಆಗಮಿಸಿದ್ದರು. ಪುರಸಭೆ, ನಗರಸಭೆ, ಪಾಲಿಕೆ ಸದಸ್ಯರು, ಅಧ್ಯಕ್ಷೆ-ಉಪಾಧ್ಯಕ್ಷೆಯರು, ಗ್ರಾಪಂ ಅಧ್ಯಕ್ಷರು, ಜಿಪಂ ಮತ್ತು ತಾಪಂ ಮಾಜಿ ಸದಸ್ಯರು ಸೇರಿದಂತೆ ಪ್ರತಿ ವಿಧಾನಸಭೆ ಕ್ಷೇತ್ರದಿಂದ ತಲಾ ಇಬ್ಬರು ಸಂಭಾವ್ಯ ಮಹಿಳಾ ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.


from India & World News in Kannada | VK Polls https://ift.tt/3ukQrQ4

ಹಾಲು ಉತ್ಪಾದಕರ ಬ್ಯಾಂಕ್‌ ಸ್ಥಾಪನೆಗೆ ಬೊಮ್ಮಾಯಿ ಸೂಚನೆ, 100 ಕೋಟಿ ರೂ. ಬಂಡವಾಳದ ಭರವಸೆ

ಬೆಂಗಳೂರು: ಹಾಲು ಉತ್ಪಾದಕರ ಆರ್ಥಿಕ ಸದೃಢತೆಗೆ ಆರಂಭಿಸುವಂತೆ ಕರ್ನಾಟಕ ಹಾಲು ಮಹಾಮಂಡಳಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಲ್ಲದೇ, ಬ್ಯಾಂಕ್‌ಗೆ ಹೂಡಿಕೆ ಬಂಡವಾಳವಾಗಿ 100 ಕೋಟಿ ರೂ. ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದೂ ಘೋಷಿಸಿದ್ದಾರೆ. ಕರ್ನಾಟಕ ಹಾಲು ಮಹಾಮಂಡಳವು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10 ನೂತನ ಯೋಜನೆಗಳನ್ನು ಸಿಎಂ ಉದ್ಘಾಟಿಸಿದರು. ಇದೇ ವೇಳೆ, 130 ವಿಧದ ನಂದಿನಿ ಹಾಲು ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. "ಬ್ಯಾಂಕ್‌ ಆರಂಭಿಸುವುದರಿಂದ ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಸೃಷ್ಟಿಯಾಗಿ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ. ಜತೆಗೆ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೂ ಸಹಕಾರಿಯಾಗಲಿದೆ,'' ಎಂದು ಸಿಎಂ ಅಭಿಪ್ರಾಯಪಟ್ಟರು. ಮಂಡಳಿಗಳಲ್ಲಿರುವ 39 ಸಾವಿರ ಕೆಲಸಗಾರರಿಗೆ ಈ ಮೊದಲಿದ್ದ ಲೀ. ಹಾಲಿಗೆ 20 ಪೈಸೆ ಪ್ರೋತ್ಸಾಹ ಧನ ನೀಡುವ ಯೋಜನೆ ಪುನಃ ಆರಂಭಿಸಲು ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ನೀಡುವುದಾಗಿ ಸಿಎಂ ಘೋಷಿಸಿದರು. ಗೋ-ರಕ್ಷಣೆಗೆ ಕೈಜೋಡಿಸಿ ಪ್ರತಿ ಜಿಲ್ಲೆಗೆ ಒಂದರಂತೆ ಗೋ ಶಾಲೆ ಆರಂಭಿಸಲು ಸರಕಾರ ತೀರ್ಮಾನಿಸಿದೆ. ಈ ಕಾರ್ಯಕ್ಕೆ ಕೈಜೋಡಿಸಬೇಕು. ಗೋವುಗಳಿಗೆ ಅಗತ್ಯವಿರುವ ಔಷಧ, ಮೇವು ಸೇರಿ ಎಲ್ಲವನ್ನೂ ಸರಕಾರ ಒದಗಿಸುತ್ತದೆ. 'ನೊ ಫ್ರಾಫಿಟ್‌- ನೋ ಲಾಸ್‌' ತತ್ವದಡಿ ಒಂದಾಗಿ ಕೆಲಸ ಮಾಡೋಣ. ಈ ಕಾರ್ಯದಿಂದ ನಮ್ಮ ಮುಂದಿನ ಪೀಳಿಗೆಗೆ ಪುಣ್ಯ ಬರುತ್ತದೆ," ಎಂದು ಸಿಎಂ ಸೂಚಿಸಿದರು. ''ತಲಾ 10 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ನಿರ್ಮಿಸಲಾಗುವುದು,'' ಎಂದು ಸಚಿವ ಪ್ರಭು ಚವ್ಹಾಣ್‌ ಹೇಳಿದರು. ಸಹಕಾರ ಸಚಿವ ಎಸ್‌.ಟಿ. ಶೋಮಶೇಖರ್‌ ಮಾತನಾಡಿ ''ಕೋವಿಡ್‌ ಸಂದರ್ಭದಲ್ಲಿ ಹಾಲಿನ ಸದ್ಬಳಕೆಗೆ ಅಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಂಡು ಉತ್ಪಾದಕರ ಬೆಂಬಲಕ್ಕೆ ನಿಂತಿದ್ದರು. 2 ಕೋಟಿಗೂ ಹೆಚ್ಚು ಜನರಿಗೆ ಉಚಿತ ಹಾಲು ವಿತರಿಸಿದ್ದರು,'' ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಸಂಸದ ಡಾ. ಉಮೇಶ್‌ ಜಾಧವ್‌ ಪಾಲ್ಗೊಂಡಿದ್ದರು. 'ಸುವರ್ಣ ಪಥದತ್ತ ಕರ್ನಾಟಕ ಹಾಲು ಮಹಾಮಂಡಳ' ಸ್ಮರಣ ಸಂಚಿಕೆ, ಪಶು ಸಂಗೋಪನಾ ಇಲಾಖೆಯ ಸಾಧನೆಗಳ ಸ್ಮರಣ ಸಂಚಿಕೆಯನ್ನು ಸಿಎಂ ಬಿಡುಗಡೆ ಮಾಡಿದರು. ಪ್ರೋತ್ಸಾಹ ಧನ ಹೆಚ್ಚಿಸಿ: ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು ಲೀಟರ್‌ ಹಾಲಿಗೆ 6 ರೂ.ಗೆ ಹೆಚ್ಚಿಸಲು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು. ಹಿಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಉತ್ಪಾದಕರ ಮನವಿಗೆ ಸ್ಪಂದಿಸಿ ಪ್ರೋತ್ಸಾಹಧನ ಹೆಚ್ಚಿಸಿದ್ದರು. ಬೆಲೆ ಹೆಚ್ಚಳದಿಂದ ಹೈರಾಣಾಗಿರುವ ಹಾಲು ಉತ್ಪಾದಕರಿಗೆ ಪ್ರೋತ್ಸಾಧನ ಹೆಚ್ಚಿಸುವಂತೆ ವೇದಿಕೆಯಲ್ಲೇ ಮನವಿ ಮಾಡಿದರು. ''ಸದ್ಯಕ್ಕೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ,'' ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಉದ್ಘಾಟನೆಗೊಂಡ 12 ಯೋಜನೆಗಳು: * ಹೈಟೆಕ್‌ ಮೆಗಾ ಹಾಲಿನಿ ಪುಡಿ ಉತ್ಪಾದನಾ ಘಟಕ - ರಾಮನಗರ ಜಿಲ್ಲೆ * ಪಶು ಆಹಾರ ಉತ್ಪಾದನಾ ಘಟಕ- ಧಾರವಾಡ ಮತ್ತು ಗುಬ್ಬಿ * ಬುಲ್‌ ಮದರ್‌ ಫಾರಂ ಮತ್ತು ಮೇವು ಅಭಿವೃದ್ಧಿ ಕೇಂದ್ರ - ಬೆಂಗಳೂರು * ಕೇಂದ್ರೀಯ ಪ್ರಯೋಗಾಲಯ - ಬೆಂಗಳೂರು * ಕೆಎಂಎಫ್‌ ತರಬೇತಿ ಕೇಂದ್ರ - ಕಲಬುರಗಿ * ಗೋದಾಮು, ಆಡಳಿತ ಕಚೇರಿ - ಹಾಸನ ಮತ್ತು ರಾಜಾನಕುಂಟೆ * ಕಾಕಂಬಿ ಶೇಖರಣಾ ಟ್ಯಾಂಕ್‌ - ಶಿಕಾರಿಪುರ * ಬೆಣ್ಣೆ ದಾಸ್ತಾನಿನ ಡೀಪ್‌ ಫ್ರೀಜರ್‌ ಘಟಕ - ಬೆಂಗಳೂರು


from India & World News in Kannada | VK Polls https://ift.tt/3zU3byi

ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ಹರ್ಷಲ್!

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗದ ಬೌಲರ್‌ ಹರ್ಷಲ್‌ ಪಟೇಲ್‌, ಹದಿನಾಲ್ಕನೇ ಆವೃತ್ತಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಟೇಕರ್‌ ಆಗಿ ಪರ್ಪಲ್‌ ಕ್ಯಾಪ್‌ ಸಂಪಾದಿಸಿರುವ ಹರ್ಷಲ್‌ ಪಟೇಲ್‌, ಬುಧವಾರ ನಡೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಮೊದಲ ಮೂರು ಓವರ್‌ಗಳಲ್ಲಿ 10ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿದರೂ ತಮ್ಮ 4ನೇ ಹಾಗೂ ಅಂತಿಮ ಓವರ್‌ನಲ್ಲಿ 3 ವಿಕೆಟ್‌ ಕಿತ್ತು ಮಿಂಚಿದ್ದಾರೆ. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹರ್ಷಲ್‌ ಪವಾಡವನ್ನೇ ಮಾಡಿದರು. ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ರಿಯಾನ್‌ ಪರಾಗ್‌ ಮತ್ತು ಕ್ರಿಸ್‌ ಮಾರಿಸ್‌ ಅವರನ್ನು ಪೆವಿಲಿಯನ್‌ಗೆ ಸೇರಿಸಿ ಕೊನೇ ಎಸೆತದಲ್ಲಿ ಚೇತನ್‌ ಸಾಕರಿಯ ಅವರ ವಿಕೆಟ್‌ ಕೂಡ ಪಡೆದರು. ತಮ್ಮ ಮಂದಗತಿಯ ಎಸೆತಗಳನ್ನು ಅದ್ಭುತವಾಗಿ ಬಳಕೆ ಮಾಡಿ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಒಂದು ಹಂತದಲ್ಲಿ 180ರಿಂದ 200 ರನ್‌ ಗಳಿಸುವಂತ್ತಿದ್ದ ರಾಜಸ್ಥಾನ್‌ ರಾಯಲ್ಸ್ ತಂಡ ಹಠಾತ್ ಕುಸಿತ ಕಂಡು 149/9 ರನ್‌ಗಳಿಗೆ ತೃಪ್ತಿಪಟ್ಟಿತು. ದಾಖಲೆ ಬರೆದ ಹರ್ಷಲ್ಈ ಭರ್ಜರಿ ಬೌಲಿಂಗ್‌ ಪ್ರದರ್ಶನದೊಂದಿಗೆ ಹರ್ಷಲ್‌ ವಿಶೇಷ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಒಂದು ಪರವಾದರೆ, ಮತ್ತೊಂದು ವೈಯಕ್ತಿಕ ದಾಖಲೆ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ರಾಯಲ್ಸ್‌ ಎದುರು 3 ವಿಕೆಟ್‌ ಪಡೆದು ಲೀಗ್‌ನಲ್ಲಿ ತಮ್ಮ ಒಟ್ಟು ವಿಕೆಟ್‌ಗಳ ಗಳಿಕೆಯನ್ನು 26 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಇದು ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಬೌಲರ್‌ ಒಬ್ಬ ಒಂದೇ ಆವೃತ್ತಿಯಲ್ಲಿ ಗಳಿಸಿದ ಅತಿ ಹೆಚ್ಚು ವಿಕೆಟ್‌ಗಳ ಸಾಧನೆ ಆಗಿದೆ. ಇದಕ್ಕೂ ಮುನ್ನ 2015ರಲ್ಲಿ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ 23 ವಿಕೆಟ್‌ಗಳನ್ನು ಪಡೆದದ್ದು ಆರ್‌ಸಿಬಿ ಪರ ಶ್ರೇಷ್ಠ ಸಾಧನೆಯ ದಾಖಲೆ ಆಗಿತ್ತು. ಈಗ ಈ ದಾಖಲೆ ಹರ್ಷಲ್‌ ಪಾಲಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಹರ್ಷಲ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಕೂಡ ಮಾಡಿದ್ದಾರೆ. ಬ್ರಾವೋ ದಾಖಲೆ ಸನಿಹ ಹರ್ಷಲ್ಐಪಿಎಲ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ ಹೆಸರಲ್ಲಿದೆ. 2013ರ ಆವೃತ್ತಿಯಲ್ಲಿ ಬ್ರಾವೋ ಒಟ್ಟು 32 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದರು. ಈಗ ಈ ದಾಖಲೆ ಮುರಿಯಲು ಹರ್ಷಲ್‌ಗೆ ಕೇವಲ 7 ವಿಕೆಟ್‌ಗಳ ಅಗತ್ಯವಿದೆ. ಲೀಗ್‌ನಲ್ಲಿ ಇನ್ನು ಮೂರು ಪಂದ್ಯ ಬಳಿಕ ನಾಕ್‌ಔಟ್‌ ಪಂದ್ಯಗಳಲ್ಲಿ ಹರ್ಷಲ್‌ಗೆ ಈ ದಾಖಲೆ ಮುರಿಯುವ ಅತ್ಯುತ್ತಮ ಅವಕಾಶ ಸಿಕ್ಕಿದೆ. ಸಂಕ್ಷಿಪ್ತ ಸ್ಕೋರ್‌ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 149 ರನ್‌ (ಎವಿನ್‌ ಲೂಯಿಸ್‌ 58, ಯಶಸ್ವಿ ಜೈಸ್ವಾಲ್ 31, ಸಂಜು ಸ್ಯಾಮ್ಸನ್‌ 18, ಕ್ರಿಸ್‌ ಮಾರಿಸ್‌ 14; 34ಕ್ಕೆ 3, ಯುಜ್ವೇಂದ್ರ ಚಹಲ್ 18ಕ್ಕೆ 3, ಶಹಬಾಝ್ ಅಹ್ಮದ್ 10ಕ್ಕೆ 2). ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್ (ವಿರಾಟ್‌ ಕೊಹ್ಲಿ 25, ದೇವದತ್ ಪಡಿಕ್ಕಲ್ 22, ಶ್ರೀಕರ್‌ ಭರತ್ 44, ಗ್ಲೆನ್ ಮ್ಯಾಕ್ಸ್‌ವೆಲ್‌ 50*; ಮುಸ್ತಾಫಿಝುರ್ ರೆಹಮಾನ್ 20ಕ್ಕೆ 2). ಪಂದ್ಯಶ್ರೇಷ್ಠ: ಯುಜ್ವೇಂದ್ರ ಚಹಲ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AT7D1C

'ಕಾಂಗ್ರೆಸ್ಸಿಗೆ ಚುನಾಯಿತ ಅಧ್ಯಕ್ಷರೇ ಇಲ್ಲ' ಎಂದಿದ್ದ ಸಿಬಲ್‌ ಕಾರು ಜಖಂಗೊಳಿಸಿದ ಯುವ ಕಾರ್ಯಕರ್ತರು!

ಹೊಸದಿಲ್ಲಿ: ಪಂಜಾಬ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಬಳಿಕ ಉಲ್ಬಣಿಸಿರುವ ಪಕ್ಷದ ಅರಾಜಕತೆ ಕುರಿತು 'ಜಿ-23' ಬಂಡಾಯ ಬಣದ ಆಕ್ರೋಶ ಹೊರಹಾಕಿದ್ದು, ''ಕಾಂಗ್ರೆಸ್ಸಿನಲ್ಲಿ ಆಯ್ಕೆಯಾದ ಅಧ್ಯಕ್ಷರೇ ಇಲ್ಲ,'' ಎಂದಿದ್ದಾರೆ. ಆ ಮೂಲಕ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಯವರಿಗೆ ಮತ್ತೊಮ್ಮೆ ಪರೋಕ್ಷ ಟಾಂಗ್‌ ನೀಡಿದ್ದಾರೆ. ಈ ಬೆಳವಣಿಗೆ ಬನ್ನಲ್ಲೇ ಕಾರ್ಯಕರ್ತರ ಆಕ್ರೋಶಕ್ಕೆ ಅವರು ಗುರಿಯಾಗಿದ್ದಾರೆ. ಸಿಬಲ್‌ ಹೇಳಿಕೆ ಬೆನ್ನಲ್ಲೇ ಅವರ ಮನೆ ಹೊರಗೆ ಪ್ರತಿಭಟನೆ ಆರಂಭಿಸಿದ ಯುವ ಕಾಂಗ್ರೆಸ್‌ನ ಕಾಲಾಳುಗಳು ಟೊಮೆಟೋ ತೋರಿದ್ದಾರೆ. ಘಟನೆಯಲ್ಲಿ ಸಿಬಲ್‌ ಕಾರು ಜಖಂಗೊಂಡಿದೆ. ಗೆಟ್‌ ವೆಲ್‌ ಸೂನ್ (ಶೀಘ್ರ ಚೇತರಿಸಿಕೊಳ್ಳಿ) ಪ್ಲೇಕಾರ್ಡ್‌ಗಳನ್ನು ಹಿಡಿದಿದ್ದ ಕಾರ್ಯಕರ್ತರು, ಪಕ್ಷ ಬಿಡಿ, ರಾಹುಲ್‌ ಗಾಂಧಿ ಜಿಂದಾಬಾದ್‌ ಘೋಷಣೆಗಳನ್ನೂ ಕೂಗಿದ್ದಾರೆ. ಘಟನೆ ಬಳಿಕ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕಪಿಲ್‌ ಸಿಬಲ್‌, "ಈ ನಾಟಕದಿಂದ ನಾನು ಗಲಿಬಿಲಿಗೊಳ್ಳುವುದಿಲ್ಲ, ನಾನು ತುಂಬಾ ಜಾಗರೂಕನಾಗಿ ಈ ಮಾತುಗಳನ್ನು ಹೇಳಿದ್ದೇನೆ," ಎಂದು ಖಾರವಾಗಿ ಹೇಳಿದ್ದಾರೆ. ಕಪಿಲ್‌ ಸಿಬಲ್‌ ಹೇಳಿದ್ದೇನು? ''ಕಾಂಗ್ರೆಸ್ಸಿನಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ಅಧ್ಯಕ್ಷರೇ ಇಲ್ಲ. ಬಿಕ್ಕಟ್ಟುಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಯಾರು? ಪಕ್ಷದಲ್ಲಿ ಯಾರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ,'' ಎಂದು ಪಕ್ಷದ ಹಿರಿಯ ನಾಯಕರೂ ಆಗಿರುವ ಸಿಬಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ಯಾಕೆ ನಾಯಕರು ಪಕ್ಷ ತೊರೆಯುತ್ತಿದ್ದಾರೆ? ನಾವು ಎಲ್ಲಿ ಎಡವಿದ್ದೇವೆ? ಮೊದಲು ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ. ಆತ್ಮ ವಿಮರ್ಶೆ ಜತೆಗೆ ಬದಲಾವಣೆ ತರುವ ಅನಿವಾರ್ಯವಿದೆ. ಇದಕ್ಕಾಗಿ ಮೊದಲು ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ನಡೆಯಬೇಕು. ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳಿಗೂ ಇತಿಶ್ರೀ ಹಾಡಬೇಕು,'' ಎಂದು ಒತ್ತಾಯಿಸಿದ್ದಾರೆ. ಸೋನಿಯಾ ಗಾಂಧಿ, ಪಕ್ಷದ ನಾಯಕ ರಾಹುಲ್‌ ಗಾಂಧಿ ಹೆಸರು ಉಲ್ಲೇಖಿಸದೆಯೇ ಕುಟುಕಿದ ಸಿಬಲ್‌, ''ಯಾರು ಪಕ್ಷದ ನಾಯಕರಿಗೆ ಆಪ್ತರಾಗಿದ್ದಾರೋ, ಅವರೇ ಪಕ್ಷ ತೊರೆಯುತ್ತಿದ್ದಾರೆ. ಯಾರು ಆಪ್ತರಾಗಿ ಇಲ್ಲವೋ ಅವರೇ ಉಳಿಯುತ್ತಿದ್ದಾರೆ. ಹಾಗಾಗಿ ಪಕ್ಷದಲ್ಲಿಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ,'' ಎಂದು ಹೇಳಿದ್ದಾರೆ. ಕಾಂಗ್ರೆಸ್‌ ನಾಯಕತ್ವ ಕುರಿತು ಬೇಸರಗೊಂಡಿರುವ ನಾಯಕರೆಲ್ಲರೂ ಸೇರಿ 'ಗ್ರೂಪ್‌-23' ಎಂಬ ತಂಡ ಕಟ್ಟಿದ್ದು, ಈಗಾಗಲೇ ನಾಯಕತ್ವ ಕುರಿತು ಇದರ ಹಲವು ನಾಯಕರು ಆಕ್ರೋಶ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಪಂಜಾಬ್‌ನಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಆಂತರಿಕ ಭಿನ್ನಮತವೇ ಶಾಪವಾಗುತ್ತಿರುವ ಕಾರಣ ಕಪಿಲ್‌ ಸಿಬಲ್‌ ಆಕ್ರೋಶ ಹೊರಹಾಕಿದ್ದಾರೆ. ಜಿ ಹುಜೂರ್‌ ಸಂಸ್ಕೃತಿ ನಮ್ಮದಲ್ಲ ನಾಯಕರು ಹೇಳಿದ್ದೆಲ್ಲ ಸರಿ ಎನ್ನುವ, ಅವರ ಮಾತಿಗೆ ಮರು ಮಾತಾಡದೆ ಮಗುಮ್ಮಾಗಿ ಇರುವ 'ಜಿ ಹುಜೂರ್‌' ಸಂಸ್ಕೃತಿ ಜಿ-23 ನಾಯಕರದ್ದಲ್ಲ ಎಂದು ಸಿಬಲ್‌ ಹೇಳಿದ್ದಾರೆ. ''ಜಿ-23 ನಾಯಕರು ಪಕ್ಷ ತೊರೆಯುವುದಿಲ್ಲ. ನಾವು ಯಾವಾಗಲೂ ಪಕ್ಷದ ಒಳಿತನ್ನೇ ಯೋಚಿಸುತ್ತೇವೆ. ಹಾಗಂತ ಜಿ ಹುಜೂರ್‌ ಎಂದುಕೊಂಡು ಕೂರುವವರಲ್ಲ. ಪಕ್ಷದ ಹುಳುಕುಗಳನ್ನು ನಾವು ಪ್ರಶ್ನಿಸುತ್ತಲೇ ಇರುತ್ತೇವೆ. ಪಕ್ಷದ ಹಿತಕ್ಕಾಗಿ ದುಡಿಯುವುದೇ ನಮ್ಮ ಧ್ಯೇಯ,'' ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/39OEUyV

ಮುಂದಿನ ಚುನಾವಣೆಯಲ್ಲಿ 30-35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಖಚಿತ: ಎಚ್‌ಡಿಕೆ ಭರವಸೆ

ರಾಮನಗರ: 2023ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 30-35 ಸ್ಥಾನಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು ಇಡುವುದಾಗಿ ಮಾಜಿ ಮುಖ್ಯಮಂತ್ರಿ, ನಾಯಕ ಘೋಷಿಸಿದ್ದಾರೆ. ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಮಹಿಳಾ ಘಟಕದ ಕಾರ್ಯಾಗಾರಕ್ಕೆ ಬುಧವಾರ ಜೆಡಿಎಸ್ ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ ಕುಮಾರಸ್ವಾಮಿ, ಪಕ್ಷವು ಮಹಿಳಾ ಅಭ್ಯರ್ಥಿಗಳಿಗೆ ಮನ್ನಣೆ ನೀಡುವುದಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೆ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು ಮಹಿಳೆಯರಿಗೆ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ‌ಪಡಿಸುವ ಕೆಲಸ ಮಾಡುತ್ತೇವೆ. ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತಿದ್ದೇವೆ. ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಕೆಲಸ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. 3 ದಿನ‌ಗಳ ಕಾರ್ಯಾಗಾರದಲ್ಲಿ ಮಹಿಳಾ ಘಟಕದ ಸದಸ್ಯರಿಗೆ ಮಹತ್ವದ್ದಾಗಿದೆ. 30 ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರೋ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಇದ್ದಾರೆ. 2023ರ ಚುನಾವಣೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಇಂದು ಚರ್ಚೆ ಮಾಡುತ್ತೇವೆ. ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನು ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ದೇವೇಗೌಡರು ಶೇ 33 ಮಹಿಳೆಯರಿಗೆ ಚುನಾವಣೆಯಲ್ಲಿ ಮೀಸಲಾತಿ ಕೊಡಬೇಕು ಅಂತ ಧ್ವನಿ ಎತ್ತಿದ್ದರು. ಆದ್ರೆ ಕಾಂಗ್ರೆಸ್- ಬಿಜೆಪಿ ಸರ್ಕಾರ ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಶೇ 33 ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3F4jaxg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...