ಫಲಿಸಲಿಲ್ಲ ಪ್ರಾರ್ಥನೆ, ಸಾವನ್ನು ಜಯಿಸಲಿಲ್ಲ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸುಜಿತ್

ತಿರುಚನಾಪಳ್ಳಿ: ದೇಶವೇ ಆ ಪುಟ್ಟ ಕಂದಮ್ಮನಿಗಾಗಿ ಪ್ರಾರ್ಥಿಸಿತ್ತು. ಸಾವ ಗೆದ್ದು ಬಾ ಪುಟಾಣಿ ಎಂದು ಹಾರೈಸಿತ್ತು. ಆದರೆ ಯಾರ ಪ್ರಾರ್ಥನೆ, ತಾಯ ಕರುಳ ಕೂಗು ದೇವರನ್ನು ತಲುಪಲೇ ಇಲ್ಲ. ಹಾಲುಗಲ್ಲದ ಮಗು ಮತ್ತೆ ಹಾಲುಣಲು ಜೀವಂತ ಬರಲೇ ಇಲ್ಲ. ನೀರು ಬಾರದೇ ಪಾಳು ಬಿದ್ದಿದ್ದ ಕೊಳವೆ ಬಾವಿಯೊಳಗೆ 2 ವರ್ಷದ ಸುಜಿತ್ ಅಲ್ಲೇ ಉಸಿರು ಬಿಟ್ಟಿದ್ದಾನೆ. ಆತನ ಬದುಕಿಗೆ ಪ್ರಾರ್ಥಿಸಿದ್ದ ಸಂಪೂರ್ಣ ತಮಿಳುನಾಡೀಗ ಸ್ತಬ್ಧವಾಗಿದೆ. ಮೂರು ದಿನಗಳ ಕಠಿಣ ಕಾರ್ಯಾಚರಣೆ ಬಳಿಕ ಮಂಗಳವಾರ ನಸುಕಿನ ಜಾವ ಮಗುವಿನ ದೇಹವನ್ನು ಮೇಲಕ್ಕೆತ್ತಿದ ಎನ್‌ಡಿಆರ್‌ಎಫ್ ಸಿಬ್ಬಂದಿ ಕೊಳೆತ ಸ್ಥಿತಿಯಲ್ಲಿದ್ದ ಮಗುವಿನ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತಮಿಳುನಾಡಿನ ತಿರುಚನಾಪಳ್ಳಿ ಜಿಲ್ಲೆಯ ಮಣಪ್ಪರೈ ಬಳಿಯ ನಡುಕಟ್ಟುಪಟ್ಟಿಯಲ್ಲಿ ಶುಕ್ರವಾರ ದಿನ ಈ ಘಟನೆ ನಡೆದಿತ್ತು. ಸುಜಿತ್‌ ವಿಲ್ಸನ್‌ ಹೆಸರಿನ ಮಗು ಶುಕ್ರವಾರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದಾಗ, ಪಾಳು ಬಿದ್ದಿದ್ದ 7 ವರ್ಷ ಹಳೆಯದಾದ ಕೊಳವೆ ಬಾವಿಗೆ ಬಿದ್ದಿದೆ. 600 ಅಡಿಯ ಕೊಳವೆ ಬಾವಿಯಲ್ಲಿ ಆಯತಪ್ಪಿ ಬಿದ್ದಿದ್ದ ಬಾಲಕ 26 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಕೂಡಲೇ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವಿನ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಮಗು ಉಸಿರಾಡಲೂ ಕಷ್ಟವಾಗುವ ಪರಿಸ್ಥಿತಿ ತಲುಪಿದ್ದ ಮಗುವಿಗೆ ವಿಶೇಷ ಉಪಕರಣ ಬಳಸಿ ಉಸಿರಾಡಲು ಅನುಕೂಲ ಮಾಡಿಕೊಡಲಾಗಿತ್ತು. ಸೋಮವಾರ ಕೂಡ ಮಗು ಬದುಕಿಗೆ ಎಂದು ಹೇಳಲಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಮತ್ತೂ ಆಳಕ್ಕೆ ಕುಸಿದು 88 ಅಡಿ ಆಳದಲ್ಲಿ ಸಿಲುಕಿಕೊಂಡ ಕಾರಣ ರಕ್ಷಣಾ ಕಾರ್ಯ ಮತ್ತಷ್ಟು ಸಂಕೀರ್ಣವಾಗಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮಗು ಬದುಕುಳಿಯಲಿಲ್ಲ. ಸೋಮವಾರ ರಾತ್ರಿ ಕೊಳವೆ ಬಾವಿಯಿಂದ ಕೊಳೆತ ವಾಸನೆ ಬರತೊಡಗಿತ್ತು. ಇಂದು ಮುಂಜಾನ ದೇಹನವನ್ನು ಹೊರಕ್ಕೆ ತೆಗೆಯಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಮ್ಮಲ ಮರುಗುತ್ತಿರುವ ನೆಟ್ಟಿಗರು ಬಾಲಕ ಹುಟ್ಟಿ ಬರಲೆಂದು ಪ್ರಾರ್ಥಿಸಿ ಟ್ವಿಟರ್ ಬಳಕೆದಾರರು ವ್ಯಾಪಕ ಟ್ವೀಟ್ ಮಾಡಿದ್ದರು. ಮತ್ತೀಗ ಆತನ ಸಾವಿಗೆ ಮರುಗುತ್ತ, ಆತ್ಮಕ್ಕೆ ಶಾಂತಿ ಕೋರಿ ಟ್ವೀಟ್ ಹರಿದು ಬರುತ್ತಿದೆ .ಆತ್ಮಕ್ಕೆ ಶಾಂತಿ ಸಿಗಲಿ ತಮಿಳುನಾಡಿಗೆ ಬ್ಲ್ಯಾಕ್ ಡೇ ನೀನು ನಮ್ಮ ಹೃದಯಲ್ಲಿರುತ್ತೀಯ ಕಂದ ಹಿರಿಯರ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಕಿರಿಯರು ಬಲಿ? ನೀರಿಗಾಗಿ ಕೊಳಬೆ ಬಾವಿ ಕೊರೆಯುತ್ತಾರೆ, ನೀರು ಬಂದಿಲ್ಲವೆಂದು ಅದನ್ನು ಮುಚ್ಚದೆ ಹಾಗೆ ಬಿಡುತ್ತಾರೆ. ಅದು ಪ್ರಾಣ ಘಾತಕವಾಗುವಷ್ಟು ದುರಂತ ಎಂಬ ಅರಿವಿದ್ದು ಇಂತಹ ಬೇಜವಾಬ್ದಾರಿ ತೋರುತ್ತಾರೆ. ಆಟವಾಡುತ್ತ ಇದರೊಳಗೆ ಜಾರುವ ಮಕ್ಕಳು ಒಳಗೆ ಅಸಹನೀಯ ಹಿಂಸೆ ಪಟ್ಟು ಸಾವನ್ನಪ್ಪುತ್ತಾರೆ. ' ಸಂಪೂರ್ಣ ಕತ್ತಲು. ಅಮ್ಮ ಎಂದು ಕಿರುಚಲೂ ಆಗದು. ಕೂಗಿದರೂ ಕೇಳದು. ಅಲ್ಲಾಡಲೂ ಆಗದ ಅಸಹನೀಯ ಹಿಂಸೆ. ಉಸಿರಾಡಲೂ ಗಾಳಿ ಇಲ್ಲ. ತಡೆಯಾಗದ ಹಸಿವು. ಇದೆಲ್ಲ ಏಕೆ ಹೀಗೆ, ನನಗೇನಾಯಿತು, ನಾನೆಲ್ಲಿದ್ದೇನೆ,ಎಂಬುದನ್ನು ಅರಿಯದ ಪುಟ್ಟ ಮಕ್ಕಳು, ಕೊನೆಗೆ ಅರ್ಥವಾಗದ ಸಾವಿನಲ್ಲಿ ಬದುಕು ಮುಗಿಸುತ್ತಾರೆ. ಮತ್ತವರನ್ನು ಹಡೆದವರು ನೋಡುವುದು ಹೆಣವಾಗಿಯೇ.. ಹಿರಿಯರೇ ಸಹಿಸಲಾಗದ ಈ ರವ ರವ ನರಕದಲ್ಲಿ ಪುಟ್ಟ ಮಕ್ಕಳು ನಲುಗಿ ಚಿರನಿದ್ರೆಗೆ ಜಾರುತ್ತಾರೆ..' ಇಂತಹ ದುರಂತಗಳು ಮರುಕಳಿಸದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವುದು ತುರ್ತು ಅಗತ್ಯ'..


from India & World News in Kannada | VK Polls https://ift.tt/2MVyHqk

ಸಕಾಲ ಅರ್ಜಿ ವಿಲೇವಾರಿ ವಿಳಂಬ; 7 ಸಾವಿರ ಅಧಿಕಾರಿಗಳಿಗೆ ದಂಡ

ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಕೊಡದ್ದಕ್ಕೆ ಪಾಕ್ ಉಗ್ರರೆಂದು ನಿಂದಿಸಿ ಚಿತ್ರಮಂದಿರದಿಂದ ಔಟ್‌!

ಕೃಷಿಗೆ ಅಕ್ರಿಟೆಕ್ ಸೆಂಟರ್‌: ಉಪಮುಖ್ಯಮಂತ್ರಿ ಡಾ ಸಿ.ಎನ್ ಅಶ್ವತ್ಥ ನಾರಾಯಣ ಭರವಸೆ

ಗೆದ್ದ ಮೇಲೆ ಪಕ್ಷಾಂತರ ಸರಿಯಲ್ಲ: ಶಿವಸೇನಾ ಶಾಸಕರಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ

ಮೋದಿ ಭೇಟಿಯಾದ ಯುರೋಪ್‌ ನಿಯೋಗ; ಅ.29 ರಂದು ಜಮ್ಮು ಕಾಶ್ಮೀರಕ್ಕೂ ಭೇಟಿ

ಯುರೋಪ್ ಸಂಸತ್‌ನ 28 ಮಂದಿ ಸಂಸದರ ಸಮಿತಿ ಅಕ್ಟೋಬರ್‌ 29(ಮಂಗಳವಾರ) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಜಮ್ಮು ಕಾಶ್ಮೀರದಲ್ಲಿನ ಪ್ರಸ್ತುತ ಸ್ಥಿತಿಗತಿಗಳ ಕುರಿತು ಸಂಸತ್‌ ಸಮಿತಿಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ನಿಯೋಗದ ಭೇಟಿಯ ವೇಳೆ ಉಪಸ್ಥಿತರಿದ್ದರು. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ, ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಪರಿಸ್ಥಿತಿ ಹಾಗೂ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಈ ವೇಳೆ ಮಾಜಿ ಸಿಎಂ ಮೆಹೆಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ, ತಾಯಿಯ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದ್ದಾರೆ. ನಿಯೋಗಕ್ಕೆ ಅಲ್ಲಿನ ಜನರೊಂದಿಗೆ ಮಾತನಾಡುವ ಅವಕಾಶ ಸಿಕ್ಕುವ ವಿಶ್ವಾಸವಿದೆ. ಸ್ಥಳೀಯ ಜನರು, ವೈದ್ಯರು, ಮಾಧ್ಯಮದವರೊಂದಿಗೆ ನಿಯೋಗ ಭೇಟಿ ಮಾಡಬೇಕಿದೆ. ಜಗತ್ತಿಗೆ ತೋರ್ಪಡಿಸುತ್ತಿರುವ ಕಾಶ್ಮೀರ ಹಾಗೂ ನೈಜತೆಯ ನಡುವಿನ ಪರದೆ ಕಳಚಿ, ಸತ್ಯ ಸಂಗತಿ ಜಗತ್ತಿಗೆ ತಿಳಿಯಬೇಕಿದೆ. ಅಂತೆಯೇ ಇಂತಹ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿರುವ ಸರಕಾರವೇ ಇದಕ್ಕೆ ನೇರ ಹೊಣೆಯಾಗಲಿದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ಸಂಪರ್ಕಕ್ಕೆ ತೀವ್ರವಾದ ನಿಷೇಧ ಹೇರಲಾಗಿತ್ತು. ಆರ್ಟಿಕಲ್‌ 370 ರದ್ದುಗೊಳಿಸಿದ ಸುಮಾರು 2 ತಿಂಗಳ ಬಳಿಕ ಪೋಸ್ಟ್‌ ಪೇಯ್ಡ್‌ ಸೇವೆ ಹಾಗೂ ಲ್ಯಾಂಡ್‌ಲೈನ್‌ ಸೇವೆಯನ್ನು ಪುನರರಾಂಭಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗದಲ್ಲಿ ಇನ್ನೂ ನಿಷೇಧಾಜ್ಞೆ ವಿಧಿಸಲಾಗಿದೆ. ಕೇಂದ್ರ ಸರಕಾರ ಜಮ್ಮು ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧನೆಗಳನ್ನು ಸಡಿಲಗೊಳಿಸಲಾಗಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಇಲ್ತಿಜಾ ದೂರಿದ್ದಾರೆ. ಸ್ಥಳೀಯ ಮಾಧ್ಯಮ ಸಂಸ್ಥೆಗಳನ್ನು ಬೆದರಿಸಲಾಗುತ್ತಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಏತನ್ಮಧ್ಯೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ನಿಯೋಗದ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕಣಿವೆ ರಾಜ್ಯದಲ್ಲಿ ಎಲ್ಲವೂ ಸುಗಮವಾಗಿದೆ. ಸಾಮಾನ್‌ಯ ಜೀವನ ಸಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.


from India & World News in Kannada | VK Polls https://ift.tt/2WkNsGd

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌-ಚಿರಾಗ್‌ ಜೋಡಿ ರನ್ನರ್ಸ್‌ಅಪ್‌

ಪ್ಯಾರಿಸ್‌: ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತದ ಮತ್ತು , ಇಲ್ಲಿ ನಡೆದ ಫ್ರೆಂಚ್‌ ಓಪನ್‌ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ನಿರಾಸೆ ಅನುಭವಿಸಿ ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಟೂರ್ನಿಯಲ್ಲಿ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದಿದ್ದ ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿ, ಭಾನುವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ 18-21, 16-21 ಅಂತರದ ಗೇಮ್‌ಗಳಿಂದ ಅಗ್ರ ಶ್ರೇಯಾಂಕಿತ ಮಾರ್ಕಸ್‌ ಫರ್ನಾಂಲ್ಡಿ ಮತ್ತು ಕೆವಿನ್‌ ಸುಕಮುಲ್ಜೊ ವಿರುದ್ಧ ಸೋಲೊಪ್ಪಿಕೊಂಡರು. ವಿಶ್ವದ ಡಬಲ್ಸ್‌ ಶ್ರೇಯಾಂಕ ಪಟ್ಟಿಯಲ್ಲಿ ಸತತವಾಗಿ 121 ವಾರಗಳ ಕಾಲ ಅಗ್ರಸ್ಥಾನದಲ್ಲೇ ಉಳಿದಿರುವ ಇಂಡೊನೇಷ್ಯಾದ ಜೋಡಿ ಭಾರತೀಯ ಜೋಡಿ ವಿರುದ್ಧ ಈ ಪಂದ್ಯಕ್ಕೂ ಮುನ್ನ 6-0 ಅಂತರದ ಮುಖಾಮುಖಿ ದಾಖಲೆ ಹೊಂದಿದ್ದರು. ಎರಡು ತಿಂಗಳ ಹಿಂದಷ್ಟೇ ಥಾಯ್ಲೆಂಡ್‌ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಚೊಚ್ಚಲ ಬಿಡಬ್ಲ್ಯುಎಫ್‌ ಸೂಪರ್‌ 500 ಟ್ರೋಫಿ ಮುಡಿಗೇರಿಸಿಕೊಂಡಿದ್ದ ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿಗೆ ಅಂಗಣದಲ್ಲಿ ಸೂಪರ್‌ 750 ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿತ್ತು. ಪಾರ್ತೊ ಗಂಗೂಲಿ ಮತ್ತು ವಿಕ್ರಮ್‌ ಸಿಂಗ್‌ ಫ್ರೆಂಚ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಕೊನೆಯ ಭಾರತೀಯ ಜೋಡಿ ಆಗಿದೆ. 1983ರಲ್ಲಿ ಪಾರ್ತೊ-ವಿಕ್ರಮ್‌ ಜೋಡಿ ಪ್ರಶಸ್ತಿ ಮುಡಿಗೇರಿಸಿತ್ತು. ಸಿಂಗಲ್ಸ್‌ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್‌ 2017ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ತಲುಪಿದ ಏಕಮಾತ್ರ ಭಾರತೀಯ ಆಟಗಾರ್ತಿ ಎಂಬ ಕೀರ್ತಿ ಸೈನಾ ನೆಹ್ವಾಲ್‌ ಅವರದ್ದು. 2012ರಲ್ಲಿ ಅವರು ಈ ಸಾಧನೆ ಮಾಡಿದ್ದರು. ನಂ.1 ಜೋಡಿಎ ಎದುರು ಹೋರಾಟ ಸೆಮಿಫೈನಲ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತದ ಜೋಡಿ, ಫೈನಲ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲಿಗೆ 1-7 ಅಂತರದಲ್ಲಿ ಇಂಡೊನೇಷ್ಯಾದ ತಾರೆಯರ ಎದುರು ಹಿಂದೆ ಬಿದ್ದ ಸಾತ್ವಿಕ್‌-ಚಿರಾಗ್‌, ಬಳಿಕ ಚೇತರಿಕೆ ತಂದುಕೊಳ್ಳುವ ಮೂಲಕ 17-17ರಲ್ಲಿ ಸಮಬಲ ಸಾಧಿಸಿದರು. ಈ ಹಂತದಲ್ಲಿ ತಾವು ನಂ.1 ಜೋಡಿ ಎಂಬುದನ್ನು ಸಾಬೀತು ಪಡಿಸಿದ ಮಾರ್ಕಸ್‌ ಮತ್ತು ಕೆವಿನ್‌ ಸತತ ಮೂರು ಅಂಕಗಳನ್ನು ಗಳಿಸಿ ಹಿಡಿತ ತಮ್ಮದಾಗಿಸಿಕೊಂಡರು. ಭಾರತೀಯರು ಒಂದು ಅಂಕ ಗಳಿಸಿದರೂ 21-18 ಅಂತರದಲ್ಲಿ ಗೇಮ್‌ ಎದುರಾಳಿ ಪಾಲಾಗಿತ್ತು. ಎರಡನೇ ಗೇಮ್‌ನಲ್ಲು ಆರಂಭದಲ್ಲೇ 6-6ರ ಸಮಬಲವಿತ್ತು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಈ ಹಣಾಹಣಿಯಲ್ಲಿ ಬಳಿಕ 10-10ರ ಸಮಬಲ ಮೂಡಿಬಂದಿತ್ತು. ವಿರಾಮಕ್ಕೂ ಮುನ್ನ ಇಂಡೊನೇಷ್ಯಾ ಜೋಡಿ 11-10ರ ಅಲ್ಪ ಮುನ್ನಡೆ ತಮ್ಮದಾಗಿಸಿಕೊಂಡರು. ವಿರಾಮದ ಬಳಿಕ ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಆದ್ಯತೆ ಕೊಟ್ಟ ಮಾರ್ಕಸ್‌-ಕೆವಿನ್‌ ಸತತ ಅಂಕಗಳನ್ನು ಬಾಚಿಕೊಂಡು 18-13ರಲ್ಲಿ ಪ್ರಾಬಲ್ಯ ಮೆರೆದರು. ಸಾತ್ವಿಕ್‌-ಚಿರಾಗ್‌ ಪ್ರತಿ ಹೋರಾಟ ನಡೆಸಿದರೂ 21-16ರಲ್ಲಿ ಸೋಲಿನ ಅಂತರವನ್ನಷ್ಟೇ ತಗ್ಗಿಸಲು ಶಕ್ತರಾದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WkjWAo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...