ಮೆಗಾ ಆಕ್ಷನ್‌ನಲ್ಲಿ ಫಾಫ್‌ಗೆ ಕನಿಷ್ಠ 11 ಕೋಟಿ ರೂ. ಸಿಗಲಿದೆ ಎಂದ ಹಾಗ್‌!

ಬೆಂಗಳೂರು: ಹದಿನೈದನೇ ಆವೃತ್ತಿಯ ಟೂರ್ನಿ ಸಲುವಾಗಿ ಬೃಹತ್‌ ಮಟ್ಟದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆ.12-13ರಂದು ನಡೆಯಲಿದ್ದು, ಈ ಬಾರಿ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್‌ ಬಹುಬೇಡಿಕೆ ಬ್ಯಾಟ್ಸ್‌ಮನ್‌ ಆಗಲಿದ್ದಾರೆ ಎಂದು ಆಸೀಸ್‌ನ ಮಾಜಿ ಬೌಲರ್‌ ಭವಿಷ್ಯ ನುಡಿದಿದ್ದಾರೆ. ತಂಡದ ಸ್ಟಾರ್‌ ಓಪನರ್‌ ಖರೀದಿ ಸಲುವಾಗಿ ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌, ಕೆಕೆಆರ್‌ ಮತ್ತು ಸಿಎಸ್‌ಕೆ ತಂಡಗಳು ಹಣದ ಹೊಳೆ ಹರಿಸುವ ಸಾಧ್ಯತೆ ಇದೆ ಎಂದು ಮಾಜಿ ಚೈನಾಮನ್‌ ಸ್ಪಿನ್ನರ್‌ ಹಾಗ್‌ ಹೇಳಿದ್ದಾರೆ. ಕಳೆದ ವರ್ಷ ಸಿಎಸ್‌ಕೆ ತಂಡದ ತನ್ನ 4ನೇ ಟ್ರೋಫಿ ಗೆಲ್ಲುವಲ್ಲಿ ಫಾಫ್‌ ಬಹುಮುಖ್ಯ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಎರಡನೇ ಅತ್ಯಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದರು. 37 ವರ್ಷದ ಅನುಭವಿ ಆಟಗಾರ ಫಾಫ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಯ್ಕೆ ಸಮಿತಿಯ ಅವಕೃಪೆಗೆ ಗುರಿಯಾಗಿದ್ದಾರೆ. ಇನ್ನು ಸಿಎಸ್‌ಕೆ ತಂಡ ಟೂರ್ನಿ ಸಲುವಾಗಿ ರವೀಂದ್ರ ಜಡೇಜಾ, ಎಂಎಸ್‌ ಧೋನಿ, ಮೊಯೀನ್‌ ಅಲಿ ಮತ್ತು ಋತುರಾಜ್‌ ಗಾಯಕ್ವಾಡ್‌ ಅವರನ್ನು ಉಳಿಸಿಕೊಂಡು ಫಾಫ್‌ ಡು'ಪ್ಲೆಸಿಸ್‌ ಅವರನ್ನು ಹರಾಜಿಗೆ ಬಿಟ್ಟುಕೊಟ್ಟಿತ್ತು. "ಈ ಬಾರಿ ಮೆಗಾ ಆಕ್ಷನ್‌ನಲ್ಲಿ ಡು'ಪ್ಲೆಸಿಸ್‌ ಬಹು ಬೇಡಿಕೆಯ ಬ್ಯಾಟ್ಸ್‌ಮನ್‌ ಆಗಿರಲಿದ್ದಾರೆ. ಏಕೆಂದರೆ ಅವರಲ್ಲಿ ಉತ್ತಮ ಕ್ಯಾಪ್ಟನ್‌ ಕೂಡ ಇದ್ದಾರೆ. ಪಂಜಾಬ್‌, ಬೆಂಗಳೂರು, ಕೋಲ್ಕತಾ ಮತ್ತು ಚೆನ್ನೈ ತಂಡಗಳಿಗೆ ಅವರ ಅಗತ್ಯವಿದೆ. ಅಗ್ರ ಕ್ರಮಾಂಕದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್‌. ಅವರಿಗೆ ಹರಾಜಿನಲ್ಲಿ 7-11 ಕೋಟಿ ರೂ. ಲಭ್ಯವಾಗುವುದು ಖಚಿತ. ಏಕೆಂದರೆ ಕಳೆದ ಬಾರಿ ಅಷ್ಟು ಭರ್ಜರಿ ಪ್ರದರ್ಶನ ನೀಡಿದ್ದಾರೆ," ಎಂದು ಹಾಗ್‌ ಹೇಳಿದ್ದಾರೆ. ಶ್ರೇಯಸ್‌ಗಾಗಿ ಬೆಂಗಳೂರು-ಪಂಜಾಬ್‌ ಪೈಪೋಟಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಬಿಡುಗಡೆ ಆಗಿರುವ ಶ್ರೇಯಸ್‌ ಅಯ್ಯರ್‌ ಅವರನ್ನು ಖರೀದಿಸಲು ಬೆಂಗಳೂರು ಮತ್ತು ಪಂಜಾಬ್‌ ತಂಡಗಳು ಪೈಪೋಟಿ ನಡೆಸಲಿವೆ ಎಂದು ಹಾಗ್‌ ಹೇಳಿದ್ದಾರೆ. "ಶ್ರೇಯಸ್‌ ಅಯ್ಯರ್‌ ಅಯ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಲ್ಲಿ ಒಬ್ಬರು. ಜೊತೆಗೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಅವರಲ್ಲಿದೆ. ಹೀಗಾಗಿ ಆರ್‌ಸಿಬಿ ಮತ್ತು ಪಿಬಿಕೆಎಸ್‌ ತಂಡಗಳು ಅವರನ್ನು ಖರೀದಿಸಲು ಪೈಫೋಟಿ ನಡೆಸಲಿವೆ. ಕೆಕೆಆರ್‌ ಕೂಡ ಪ್ರಯತ್ನ ನಡೆಸಬಹುದು. ಅವರಿಗೆ ಕನಿಷ್ಠ 4 ಕೋಟಿ ರೂ. ಆದರೂ ಸಿಗಲಿದೆ. ಇನ್ನು ಇನಿಂಗ್ಸ್‌ನ ಕೊನೇ ಓವರ್‌ಗಳಲ್ಲಿ ಅಪಾಯಕಾರಿ ಬೌಲಿಂಗ್‌ ಪ್ರದರ್ಶನ ನೀಡುವ ಕಗಿಸೊ ರಬಾಡಗೆ 4-5 ಕೋಟಿ ರೂ. ಸಿಗುವ ಸಾಧ್ಯತೆ ಇದೆ. ಅನುಭವಿ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ಗೆ 5-7 ಕೋಟಿ ರೂ. ಸಿಗಲಿದೆ," ಎಂದಿದ್ದಾರೆ. ಬೆಂಗಳೂರಿನಲ್ಲಿ ಫೆ.12-13ರಂದು ನಡೆಯಲಿರುವ ಐಪಿಎಲ್‌ 2022 ಟೂರ್ನಿಯ ಆಟಗಾರರ ಹರಾಜಿನಲ್ಲಿ ಒಟ್ಟಾರೆ 590 ಆಟಗಾರರು ಪಾಲ್ಗೊಳ್ಳಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/RVGrgCKvo

'ಮರಳುವ ಬಗ್ಗೆ ವಿಶ್ವಾಸವಿಲ್ಲ' ಆರ್‌ಸಿಬಿ ಫ್ಯಾನ್ಸ್‌ಗೆ ಕಹಿ ಸುದ್ದಿ ನೀಡಿದ ಚಹಲ್‌!

ಹೊಸದಿಲ್ಲಿ: ಸತತ ಎಂಟು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ತಂಡವನ್ನು ಪ್ರನಿಧಿಸಿರುವ ಹಿರಿಯ ಲೆಗ್‌ ಸ್ಪಿನ್ನರ್‌ ಮುಂಬರುವ 2022ರ ಆವೃತ್ತಿಗೆ ಯಾವುದೇ ತಂಡದಲ್ಲಿ ಆಡಲು ಸಿದ್ದ ಎಂದು ಹೇಳಿದ್ದಾರೆ. 2021ರ ಐಪಿಎಲ್‌ ಟೂರ್ನಿಯ ಬಳಿಕ ಹದಿನೈದನೇ ಆವೃತ್ತಿ ಆಟಗಾರರ ಹರಾಜಿಗೆ ಬೆಂಗಳೂರು ಫ್ರಾಂಚೈಸಿ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅವರನ್ನು ಉಳಿಸಿಕೊಂಡಿದೆ. ಆದರೆ ಯುಜ್ವೇಂದ್ರ ಚಹಲ್‌ ಸೇರಿದಂತೆ ಇನ್ನುಳಿದ ಆಟಗಾರರನ್ನು ಮೆಗಾ ಹರಾಜಿಗೆ ಬಿಡಗಡೆ ಮಾಡಿದೆ. ಬಹುನಿರೀಕ್ಷಿತ 2022ರ ಐಪಿಎಲ್‌ ಟೂರ್ನಿಯ ಆಟಗಾರರ ಮೆಗಾ ಹರಾಜು ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹರಾಜಿನಲ್ಲಿ ಒಟ್ಟು 590 ಆಟಗಾರರು ಕಾಣಿಸಿಕೊಳ್ಳಲಿದ್ದು, ದುಬಾರಿ ಮೊತ್ತ ಜೇಬಿಗಿಳಿಸಿಕೊಳ್ಳಲಿರುವ ಆಟಗಾರರ ಪೈಕಿ ಯುಜ್ವೇಂದ್ರ ಚಹಲ್‌ ಕೂಡ ಒಬ್ಬರಾಗಲಿದ್ದಾರೆ. ರವಿಚಂದ್ರನ್‌ ಅಶ್ವಿನ್‌ ಅವರ "ಡಿಆರ್‌ಎಸ್ ವಿಥ್‌ ಆಶ್‌" ಯೂಟ್ಯೂಬ್‌ ಶೋನಲ್ಲಿ ಮಾತನಾಡಿದ ಯುಜ್ವೇಂದ್ರ ಚಹಲ್‌ ಎಂಟು ವರ್ಷಗಳ ಕಾಲ ಸತತವಾಗಿ ತಂಡದಲ್ಲಿ ಆಡಿದ್ದೇನೆ. ಹಾಗಾಗಿ ಈ ಬಾರಿ ಅವರು ನನ್ನನ್ನು ಮತ್ತೊಮ್ಮೆ ಕರೆಸಿಕೊಳ್ಳುತ್ತಾರೆಂಬ ವಿಶ್ವಾಸ ನನಗಿಲ್ಲ. ಆದರೆ ನನ್ನ ಹೃದಯದಲ್ಲಿ ಬೆಂಗಳೂರು ಇದೆ. ಯಾವುದೇ ತಂಡಕ್ಕೆ ಹೋಗಲು ನಾನು ಸಿದ್ದನಿದ್ದು, ಶೇ. 100 ರಷ್ಟು ಪ್ರಯತ್ನವನ್ನು ಹಾಕುತ್ತೇನೆ ಎಂದಿದ್ದಾರೆ. "ಬೇರೆ ಯಾವುದೇ ತಂಡಕ್ಕೆ ಹೋಗಬಹುದೆಂದು ನನಗೆ ಈ ಬಾರಿ ಅನಿಸುತ್ತಿದೆ. ಏಕೆಂದರೆ ಈ ಬಾರಿ ನನ್ನನ್ನು ಆರ್‌ಸಿಬಿ ಮರಳಿ ಕರೆಸಿಕೊಳ್ಳುವುದು ಅನುಮಾನ. 2018ರ ಹರಾಜಿನಲ್ಲಿ ಆರ್‌ಟಿಎಂ ಮೂಲಕ ತಮ್ಮನ್ನು ಖರೀದಿಸುತ್ತೇವೆಂದು ಬೆಂಗಳೂರು ಫ್ರಾಂಚೈಸಿ ಸ್ಪಷ್ಟವಾಗಿ ತಿಳಿಸಿತ್ತು. ಆದರೆ ಈ ಬಾರಿ ನಮ್ಮ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ. ಹಾಗಾಗಿ ಒಬ್ಬ ವೃತ್ತಿಪರ ಆಟಗಾರನಾಗಿ ಈ ಬಾರಿ ಯಾವುದೇ ತಂಡಕ್ಕೆ ಹೋಗಲು ಸಿದ್ದನಿದ್ದೇನೆ," ಎಂದು ಹೇಳಿದರು. "ಆರ್‌ಸಿಬಿಗೆ ಮರಳಬೇಕೆಂದು ನಾನು ನಿಸ್ಸಂಶಯವಾಗಿ ಬಯಸುತ್ತೇನೆ. ಏಕೆಂದರೆ 8 ವರ್ಷಗಳ ಕಾಲ ಈ ತಂಡವನ್ನು ಪ್ರತಿನಿಧಿಸಿದ್ದೇನೆ. ಆದರೆ ಈ ಬಾರಿ ಆರ್‌ಸಿಬಿ ನನ್ನನ್ನು ಮತ್ತೆ ಖರೀದಿಸುತ್ತದೆ ಎಂಬ ಬಗ್ಗೆ ಅನುಮಾನವಿದೆ. ಏಕೆಂದರೆ ಈ ಬಾರಿ ಎರಡು ಹೊಸ ತಂಡಗಳು ಪ್ರವೇಶ ಮಾಡುತ್ತಿವೆ. ಮತ್ತೊಂದೆಡೆ ಮೆಗಾ ಹರಾಜು ನಡೆಯುತ್ತಿದೆ. ಯಾವುದೇ ತಂಡಕ್ಕೆ ಹೋದರೂ ನಾನು ಅಲ್ಲಿ ಶೇ. 100 ಪ್ರಯತ್ನವನ್ನು ಹಾಕುತ್ತೇನೆ. ಆದರೆ ಹೊಸ ಫ್ರಾಂಚೈಸಿಗೆ ಹೊಂದಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಗಬಹುದು," ಎಂದರು. ನೂತನ ಫ್ರಾಂಚೈಸಿ ಸೇರಲು ಹರಾಜಿನಲ್ಲಿ ಎಷ್ಟು ಮೊತ್ತವನ್ನು ನಿರೀಕ್ಷಿಸುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಹಲ್‌, 15 ಕೋಟಿ ರೂ. ಗಳನ್ನು ನಾನು ನಿರೀಕ್ಷಿಸುತ್ತಿಲ್ಲ. ಆದರೆ ನನಗೆ 8 ಕೋಟಿ ಸಿಕ್ಕರೆ ಸಾಕು ಎಂದು ಹೇಳಿದರು. "ನೂತನ ಫ್ರಾಂಚೈಸಿಯಲ್ಲಿ 15 ಕೊಟಿ ಬೇಕು ಅಥವಾ 17 ಕೋಟಿ ರೂ ಬೇಕು ಎಂದು ನಾನು ಹೇಳುವುದಿಲ್ಲ. 8 ಕೋಟಿ ರೂ. ನನಗೆ ಸಾಕು," ಎಂದರು. ಐಪಿಎಲ್‌ ಟೂರ್ನಿಯಲ್ಲಿ ಇಲ್ಲಿಯವರೆಗೂ ವಿವಿಧ ಫ್ರಾಂಚೈಸಿಗಳ ಪರ 114 ಪಂದ್ಯಗಳಾಡಿರುವ ಯುಜ್ವೇಂದ್ರ ಚಹಲ್‌ 139 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಶ್ರೀಮಂತ ಫ್ರಾಂಚೈಸಿ ಲೀಗ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಬೌಲರ್‌ಗಳ ಪಟ್ಟಿಯಲ್ಲಿ ಚಹಲ್ 9ನೇ ಸ್ಥಾನದಲ್ಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/LtSFT8q96

ಪ್ರೇಮಿಗಳ ದಿನಾಚರಣೆಗೆ ಈ ವರ್ಷವೂ ಗುಲಾಬಿ ರಫ್ತಿಗೆ ಹೊಡೆತ! ಸಂಕಷ್ಟದಲ್ಲಿ ಬೆಳೆಗಾರರು

ಬೆಂಗಳೂರು: ಕೋವಿಡ್‌ ಪ್ರಕರಣಗಳು ಕಡಿಮೆಯಾಗಿವೆ. ವಿಮಾನಗಳ ಸಂಚಾರ ಆರಂಭವಾಗಿದೆ. ಸರಕಾರ ಕೂಡ ಕೋವಿಡ್‌ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದೆ. ಹೀಗಿದ್ದರೂ ಈ ಬಾರಿ ಪ್ರೇಮಿಗಳ ದಿನ (ಫೆ.14)ಕ್ಕೆ ಹೊರ ರಾಷ್ಟ್ರಗಳಿಗೆ ಕರುನಾಡ ಗುಲಾಬಿ ಹೆಚ್ಚು ರಫ್ತಾಗುತ್ತಿಲ್ಲ. ಈ ಬಾರಿ ವಿಮಾನ ದರ ಶೇ.30ರಷ್ಟು ಏರಿಕೆಯಾದ ಪರಿಣಾಮ ಕೆಂಗುಲಾಬಿಗಳ ರಫ್ತು ಪ್ರಮಾಣ ಕುಸಿದಿದೆ. ಈಗಾಗಲೇ ಡಚ್‌ ಗುಲಾಬಿಗಳಿಗೆ ಹೊರ ರಾಷ್ಟ್ರಗಳಿಂದ ಬೇಡಿಕೆ ಬರಬೇಕಿತ್ತು. ಆದರೆ, ಈ ಬಾರಿ ರಫ್ತುದಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಪ್ರತಿ ವರ್ಷ 40-50 ಲಕ್ಷ ಗುಲಾಬಿ ರಫ್ತಾಗುತ್ತಿದ್ದರೆ, ಈ ವರ್ಷ ಸುಮಾರು 15-16 ಲಕ್ಷ ರಫ್ತಾದರೆ ಹೆಚ್ಚು ಎನ್ನುವಂತಾಗಿದೆ. ಈ ಹಿಂದೆ ಒಂದು ಗುಲಾಬಿ ಹೂವನ್ನು ಹೊರದೇಶಕ್ಕೆ ಕಳುಹಿಸಲು 15 ರೂ. ವೆಚ್ಚ ತಗಲುತ್ತಿತ್ತು. ಅದೇ ಹೂವಿಗೆ ಇಂದು ದುಪ್ಪಟ್ಟು(35-40 ರೂ.) ದರ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯೇ ವಿಮಾನ ದರ ಏರಿಕೆಗೆ ಪ್ರಮುಖ ಕಾರಣ. ಜತೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿಮಾನ ಸಂಚಾರವಿಲ್ಲದೆ ನಷ್ಟ ಅನುಭವಿಸಲಾಗಿತ್ತು. ಹೀಗಾಗಿ ದರ ಹೆಚ್ಚಾಗಿದ್ದು ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ. ಜತೆಗೆ ವಿದೇಶಗಳಲ್ಲಿಈ ಹಿಂದಿನಂತೆ ಪ್ರೇಮಿಗಳ ದಿನ ಆಚರಣೆಯಲ್ಲಿ ಸಂಭ್ರಮದ ವಾತಾವರಣ ಇಲ್ಲದಿರುವುದರಿಂದ ಈ ವರ್ಷವೂ ರಫ್ತು ಪ್ರಮಾಣ ಕುಸಿದಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸುಮಾರು 10-15 ಲಕ್ಷ ಗುಲಾಬಿ ಹೂಗಳು ಹೊರ ರಾಷ್ಟ್ರಗಳಿಗೆ ರಫ್ತಾಗಿದ್ದವು. ಈ ಬಾರಿ ಶೇ.10ರಷ್ಟು ಹೆಚ್ಚು ಹೂ ರಫ್ತಾಗಲಿದೆ ಎನ್ನುತ್ತಾರೆ ಸೌತ್‌ ಇಂಡಿಯಾ ಫ್ಲೋರಿಕಲ್ಚರ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಪಿ.ಜಗನ್ನಾಥ ರಾಜು. ಸ್ಥಳೀಯ ಮಾರುಕಟ್ಟೆಯಲ್ಲಿ ಗುಲಾಬಿಗೆ ಬೇಡಿಕೆ:ಈ ಬಾರಿ ಸ್ಥಳೀಯ ಮಾರುಕಟ್ಟೆಯಲ್ಲಿ ಗುಲಾಬಿ ಹೂವುಗಳಿಗೆ ಹೆಚ್ಚು ಬೇಡಿಕೆಯಿದೆ. ಇದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಅಲ್ಲ. ಬದಲಿಗೆ ಕಳೆದ ಕೆಲವು ತಿಂಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳು ನಡೆದಿಲ್ಲ. ಇದೀಗ ಫೆಬ್ರವರಿಯಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು, ವೇದಿಕೆಗಳ ಅಲಂಕಾರಕ್ಕಾಗಿ ಹೆಚ್ಚಿನ ಡಚ್‌ ಗುಲಾಬಿ ಹೂಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್‌. ಎಲ್ಲೆಲ್ಲಿಗೆ ?ದುಬೈ, ಮಲೇಷಿಯಾ, ಸಿಂಗಾಪುರ, ಆಸ್ಪ್ರೇಲಿಯಾಗಳಿಂದ ಈಗಾಗಲೇ ಬೇಡಿಕೆ ಬಂದಿದೆ. ನ್ಯೂಜಿಲೆಂಡ್‌, ಶ್ರೀಲಂಕಾ, ಈಜಿಪ್ಟ್‌, ಒಮನ್‌, ಫ್ರಾನ್ಸ್‌, ಇಂಡೋನೇಷ್ಯಾ, ನೆದರ್‌ಲ್ಯಾಂಡ್‌, ಜಪಾನ್‌ ಮತ್ತಿತರ ರಾಷ್ಟ್ರಗಳಿಗೂ ಗುಲಾಬಿ ರಫ್ತಾಗಲಿವೆ. ಫೆ.10ರವರೆಗೆ ರಫ್ತು ಪ್ರಕ್ರಿಯೆ ನಡೆಯಲಿದೆ.


from India & World News in Kannada | VK Polls https://ift.tt/WG1H32eqU

ಹಿಜಾಬ್‌ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಟಿ.ಸಿ ಕೊಟ್ಟು ಒದ್ದು ಮನೆಗೆ ಕಳಿಸಿ; ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಹಿಜಾಬ್‌ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ. ಸರಕಾರ ವಿಳಂಬ ಮಾಡದೆ ಅವಿಧೇಯತೆ ತೋರವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಒತ್ತಾಯಿಸಿದ್ದಾರೆ. ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ತಾವು ವಿದ್ಯಾಕೇಂದ್ರಕ್ಕೆ ಬರುತ್ತಿದ್ದೆವೋ ಅಥವಾ ಧಾರ್ಮಿಕ ಕೇಂದ್ರಕ್ಕೆ ಬರುತ್ತಿದ್ದೆವೋ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ವಿದ್ಯಾಸಂಸ್ಥೆಯಲ್ಲಿ ಎಲ್ಲರಿಗೂ ಒಂದೇ ನಿಯಮ ಇರುತ್ತದೆ. ಅದನ್ನು ಪಾಲಿಸಬೇಕಾದ ಕರ್ತವ್ಯ ವಿದ್ಯಾರ್ಥಿಗಳ ಮೇಲಿದೆ’ ಎಂದರು. ‘ಉಡುಪಿ ಸರಕಾರಿ ಮಹಿಳಾ ಕಾಲೇಜಿನ ಹಿಜಾಬ್‌ ವಿವಾದವನ್ನು ಎಳೆದಾಡುವ ಅಗತ್ಯವಿಲ್ಲ, ಇವತ್ತು ಹಿಜಾಬ್‌ ಬೇಕು ಎನ್ನುತ್ತಾರೆ, ನಾಳೆ ಬುರ್ಖಾ ಬೇಕು ಎನ್ನುತ್ತಾರೆ, ನಾಡಿದ್ದು ಮಸೀದಿ, ಮೈಕ್ ಬೇಕು ಎನ್ನುತ್ತಾರೆ. ಹಿಜಾಬ್‌ನ ಈ ವಿಷಯ ಭಯೋತ್ಪಾದನೆ ತನಕ ಕೊಂಡೊಯ್ಯುವ ಮಾನಸಿಕತೆ ಇದೆ. ಇದು ಬಹಳ ಅಪಾಯಕಾರಿ. ಈ ವಿಷಯದಲ್ಲಿ ವಿನಾಕಾರಣ ವಿವಾದ ಸೃಷ್ಟಿಸುವುದು ಸರಿಯಲ್ಲ. ಅಷ್ಟಕ್ಕೂ ಹಿಜಾಬ್‌ ಧರಿಸಿಯೇ ಬರುತ್ತೇವೆ ಎಂದಾದರೆ ಅಂಥವರು ಪಾಕಿಸ್ತಾನಕ್ಕೆ ಹೋಗಲಿ. ಅಂಥ ವಿದ್ಯಾರ್ಥಿಗಳ ಮನವಿ ಆಲಿಸಿ ಕಾಲಹರಣ ಮಾಡುವ ಬದಲು ಚರ್ಚೆಗೆ ಅವಕಾಶ ಮಾಡಿಕೊಡದೆ ಅವರಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳುಹಿಸಬೇಕು’ ಎಂದರು. ಜಾತ್ರೆಗೆ ನಿರ್ಬಂಧ ಸರಿಯಲ್ಲ: ‘ಈಗಾಗಲೇ ಎಲ್ಲೆಡೆ ಕೋವಿಡ್‌ ನಿಯಮಾವಳಿ ಸಡಿಲಿಕೆ ಮಾಡಲಾಗಿದೆ. ಬಾರ್‌, ಕ್ಲಬ್‌, ಪಬ್‌ಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಹಿಂದೂಗಳ ಜಾತ್ರೆಗೆ ನಿರ್ಬಂಧ ಹೇರುವುದು ಸರಿಯಲ್ಲ. ಈ ಕೂಡಲೆ ಸರಕಾರ ಕ್ರಮ ಕೈಗೊಂಡು ಜಾತ್ರೆ, ಹಬ್ಬ ಹರಿದಿನಕ್ಕೆ ಅನುಮತಿ ನೀಡಬೇಕು. ಫೆ. 4ರೊಳಗೆ ಸೂಕ್ತ ತೀರ್ಮಾನ ಪ್ರಕಟಿಸಬೇಕು. ಬೇಡಿಕೆ ಈಡೇರದಿದ್ದಲ್ಲಿ ಫೆ. 4ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ ಕಚೇರಿಗಳಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ಸಂಘಟನೆ ಕಾರ್ಯದರ್ಶಿ ಮಂಜುನಾಥ ಕಾಟಕರ, ಜಿಲ್ಲಾಧ್ಯಕ್ಷ ಅಣ್ಣಪ್ಪ ದೀವಟಗಿ, ಹುಬ್ಬಳ್ಳಿ ಅಧ್ಯಕ್ಷ ಬಸವರಾಜ ದುರ್ಗದ ಇದ್ದರು.


from India & World News in Kannada | VK Polls https://ift.tt/q3DjOoVNa

ವಿದೇಶಕ್ಕೆ ತೆರಳಲು ನಿರ್ಬಂಧ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಬಿಟ್‌ಕಾಯಿನ್‌ ಆರೋಪಿ ಹ್ಯಾಕರ್ ಶ್ರೀಕೃಷ್ಣ

ಬೆಂಗಳೂರು: ಬಿಟ್‌ ಕಾಯಿನ್‌ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ಭಟ್‌ಗೆ ವಿದೇಶಕ್ಕೆ ತೆರಳಲು ವಿಧಿಸಿರುವ ನಿರ್ಬಂಧ ಪ್ರಶ್ನಿಸಿದ ಅರ್ಜಿಯ ಸಂಬಂಧ ಕೇಂದ್ರ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಉದ್ಯೋಗದ ನಿಮಿತ್ತ ನೆದರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲು ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಭಟ್‌ಗೆ ಅನುಮತಿ ನೀಡುವಂತೆ ಕೋರಿ ಆತನ ಸಹೋದರ ಸುದರ್ಶನ್‌ ರಮೇಶ್‌ ಸಲ್ಲಿಸಿರುವ ಅರ್ಜಿಯ ಕುರಿತು ನ್ಯಾ. ಕೃಷ್ಣ ದೀಕ್ಷಿತ್‌ ಅವರಿದ್ದ ಏಕ ಸದಸ್ಯ ಪೀಠವು ವಿಚಾರಣೆ ನಡೆಸಿತು. ಕೇಂದ್ರ ಸರಕಾರ, ಜಾರಿ ನಿರ್ದೇಶನಾಲಯ ಮತ್ತು ಬ್ಯುರೊ ಆಫ್‌ ಇಮಿಗ್ರೇಷನ್‌ಗೆ ನೋಟಿಸ್‌ ಜಾರಿ ಮಾಡಿ, ಉತ್ತರ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲರು ‘ಶ್ರೀಕಿಯು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿ ಬಿಟ್‌ ಕಾಯಿನ್‌ ಹಗರಣದ ಅವಧಿಯಲ್ಲಿ ಭಾರತದಲ್ಲಿ ಇರಲೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಸದ್ಯ ಅರ್ಜಿದಾರರ ತಂದೆ ಅನಾರೋಗ್ಯದಿಂದ ಕೋಮಾ ಸ್ಥಿತಿಯಲ್ಲಿದ್ದಾರೆ. ಅವರ ಚಿಕಿತ್ಸೆ ಗೆ ಹಣದ ಅವಶ್ಯಕತೆ ಇದೆ. ಉದ್ಯೋಗಕ್ಕಾಗಿ ನೆದರ್‌ಲ್ಯಾಂಡ್‌ಗೆ ತೆರಳುವ ವೇಳೆ ಜ.13ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುತ್ತಿರುವಾಗ ಇಮಿಗ್ರೇಷನ್‌ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ. ಪಾಸ್‌ಪೋರ್ಟ್‌ ಅನ್ನು ನಿರ್ಬಂಧಿಸಿದ್ದಾರೆ. ಅಧಿಕಾರಿಗಳ ಆದೇಶ ರದ್ದುಪಡಿಸ ಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ. ಏನಿದು ಪ್ರಕರಣ?ಶ್ರೀಕೃಷ್ಣ ಭಟ್‌ ಅಲಿಯಾಸ್‌ ಶ್ರೀಕಿ ಸರಕಾರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಕೋಟ್ಯಂತರ ರೂ. ವಂಚನೆ ಮಾಡಿ ಆ ಹಣದಲ್ಲಿ ಬಿಟ್‌ ಕಾಯಿನ್‌ ಖರೀದಿಸಿದ್ದ. ಈ ಬಿಟ್‌ಕಾಯಿನ್‌ ಬಳಸಿ ವಿದೇಶಗಳಿಂದ ಡ್ರಗ್ಸ್‌ ತರಿಸುತ್ತಿದ್ದ. ಈ ಮಾಹಿತಿ ಮೇರೆಗೆ ಎರಡು ವರ್ಷಗಳ ಹಿಂದೆ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್‌ಕಾಯಿನ್‌ ವ್ಯವಹಾರದಲ್ಲಿ ರಾಜಕೀಯ ಮುಖಂಡರು ಮತ್ತು ಕೆಲವು ಸರಕಾರಿ ಅಧಿಕಾರಿಗಳು ಮತ್ತು ನಿವೃತ್ತ ಪೊಲೀಸ್‌ ಅಧಿಕಾರಿಗಳ ಹೆಸರು ಕೇಳಿ ಬಂದಿದೆ. ಈ ಪ್ರಕರಣದಲ್ಲಿ ನಾಲ್ವರು ಪ್ರಮುಖ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್‌ ನಾಯಕರು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಟ್‌ ಕಾಯಿನ್‌ ಪ್ರಕರಣವನ್ನು ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಕಳೆದ ನವೆಂಬರ್ ತಿಂಗಳಲ್ಲಿ ಹೇಳಿದ್ದರು. ಬಳಿಕ ಈ ಪ್ರಕರಣ ತಣ್ಣಗಾಗಿದೆ.


from India & World News in Kannada | VK Polls https://ift.tt/W8woO1JqH

ಉತ್ತರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕನ್ಹಯ್ಯಾ ಕುಮಾರ್‌ ಮೇಲೆ ಮಸಿ ದಾಳಿ

ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣಾ ರಂಗು ದಿನೇ ದಿನೆ ಕಾವೇರುತ್ತಿದ್ದು, ಈ ಮಧ್ಯೆ ಕಾಂಗ್ರೆಸ್‌ ನಾಯಕ ಹಾಗೂ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್‌ ಮೇಲೆ ಮಸಿಯಿಂದ ದಾಳಿ ನಡೆಸಲಾಗಿದೆ. ವಿಧಾನಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಲಖನೌಗೆ ಬಂದಿದ್ದರು. ಕಾಂಗ್ರೆಸ್‌ ಪಕ್ಷದ ಮನೆ ಬಾಗಿಲಿಗೆ ತೆರಳುವ ಅಭಿಯಾನದಲ್ಲಿ ಭಾಗಿಯಾಗಿದ್ದ ಕನ್ಹಯ್ಯಾ , ಪಕ್ಷದ ಕಚೇರಿಯ ಹೊರಗಡೆ ನಿಂತಿದ್ದಾಗ ಅವರ ಮೇಲೆ ಮಸಿಯನ್ನು ಎರಚಲಾಗಿದೆ. ಸ್ವಲ್ಪದರಲ್ಲೇ ಪಾರಾದ ಕನ್ಹಯ್ಯಾ ಅವರು, ಕೂಡಲೇ ಕಚೇರಿ ಒಳಗೆ ದೌಡಾಯಿಸಿದರು. ಕೂಡಲೇ ಎಚ್ಚೆತ್ತ ಯುವ ಕಾಂಗ್ರೆಸ್‌ ಕಾರ್ಯಕರ್ತರು ಮಸಿ ಎಸೆದ ಕಿಡಿಗೇಡಿ ದೇವಾಂಶ್‌ ಬಾಜ್‌ಪೇಯಿ ಎಂಬಾತನನ್ನು ಹಿಡಿದು ಥಳಿಸಿದ್ದಾರೆ. ಆದರೆ ಆತ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬಳಿಕ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕಿಡಿಗೇಡಿ ದೇವಾಂಶ್‌ ಬಾಜ್‌ಪೇಯಿನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಯುವ ಸಂಸತ್‌ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಲು ಸಿದ್ಧತೆ ನಡೆಸುತ್ತಿದ್ದಾಗಲೇ ಈ ಘಟನೆ ಜರುಗಿದೆ. ಘಟನೆಯನ್ನು ಕಾಂಗ್ರೆಸ್‌ ಮುಖಂಡರು ಖಂಡಿಸಿದ್ದರು, ‘ಕನ್ಹಯ್ಯಾ ಕುಮಾರ್ ಅವರ ಮೇಲೆ ಎಸೆದದ್ದು ಮಸಿ ಅಲ್ಲ, ಅದು ಒಂದು ರೀತಿಯ ಆಸಿಡ್. ಆರೋಪಿಗಳು ಕನ್ಹಯ್ಯಾ ಕುಮಾರ್ ಮೇಲೆ ಆಸಿಡ್ ಎಸೆಯಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಯಿತು. ಆದರೆ, ಕೆಲವು ಹನಿಗಳು ಸಮೀಪದಲ್ಲಿ ನಿಂತಿದ್ದ 3-4 ಯುವಕರ ಮೇಲೆ ಬಿದ್ದಿದೆ’ ಎಂದು ಹೇಳಿದ್ದಾರೆ. ಮಸಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಯುವ ಮುಖಂಡ ಕನ್ಹಯ್ಯಾ ಕುಮಾರ್, ‘ಹತ್ರಾಸ್, ಉನ್ನಾವ್ ಮತ್ತು ಲಖೀಂಪುರ ಖೇರಿ ಘಟನೆ ನಡೆದಾಗಿನಿಂದ ಕಾಂಗ್ರೆಸ್ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದೆ. ದೇಶವನ್ನು ಕಟ್ಟದವರು ದೇಶವನ್ನು ಮಾರುತ್ತಿದ್ದಾರೆ, ಕಾಂಗ್ರೆಸ್ ಭಾರತವನ್ನು ನಿರ್ಮಿಸಿದೆ, ಆದ್ದರಿಂದ ದೇಶವನ್ನು ಮಾರುತ್ತಿರುವವರಿಂದ ದೇಶವನ್ನು ಉಳಿಸುತ್ತಿದೆ’ ಎಂದು ಹೇಳಿದ್ದಾರೆ. 2018ರಲ್ಲಿ ‘ಸಂವಿಧಾನ ಬಚಾವೋ’ ಪ್ರತಿಭಟನೆಯ ಭಾಗವಾಗಿ ಗ್ವಾಲಿಯರ್‌ನ ಚೇಂಬರ್ ಆಫ್ ಕಾಮರ್ಸ್ ಭವನದಲ್ಲಿ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರ ಮೇಲೂ ಗ್ವಾಲಿಯರ್‌ನಲ್ಲಿ ಮಸಿ ಬಳಿಯುವ ಯತ್ನ ನಡೆದಿತ್ತು.


from India & World News in Kannada | VK Polls https://ift.tt/zHjFbR1mf

ಕೊಹ್ಲಿ ಬ್ಯಾಟಿಂಗ್‌ನಲ್ಲಿ ಹಿಂದಿದ್ದ ಖದರ್‌ ಉಳಿದಿಲ್ಲ ಎಂದ ಚೋಪ್ರಾ!

ಹೊಸದಿಲ್ಲಿ: ತಮ್ಮ ವೃತ್ತಿ ಬದುಕಿನ ಮೊದಲ ದಶಕದಲ್ಲಿ ಶತಕ ಗಳಿಸುವುದನ್ನು ಹವ್ಯಾಸವನ್ನಾಗಿ ಮೂಗೂಡಿಸಿಕೊಂಡಿದ್ದ ಮಾಜಿ ನಾಯಕ , ವರ್ಷಕ್ಕೆ ಏನಿಲ್ಲಾ ಅಂದರೂ ಕನಿಷ್ಠ5-6 ಶತಕಗಳನ್ನು ಸಿಡಿಸುತ್ತಿದ್ದರು. ಆದರೆ, 2019ರ ಬಳಿಕ ಕಿಂಗ್‌ ಕೊಹ್ಲಿ ಬ್ಯಾಟ್‌ನಿಂದ ಯಾವುದೇ ಸೆಂಚುರಿ ಹೊರಬಂದಿಲ್ಲ. ವಿರಾಟ್‌ ವೃತ್ತಿಬದುಕಿನ ದಾಖಲೆಯ 71ನೇ ಅಂತಾರಾಷ್ಟ್ರೀಯ ಶತಕ ಸಲುವಾಗಿ ಅಭಿಮಾನಿಗಳಷ್ಟೇ ಅಲ್ಲ ಖುದ್ದಾಗಿ ಕೊಹ್ಲಿಯೇ ಬಕ ಪಕ್ಷಿಯಂತೆ ಕಾಯುವಂತ್ತಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದವರ ಪೈಕಿ ಕೇವಲ ರಿಕಿ ಪಾಂಟಿಂಗ್‌ (71) ಮತ್ತು ಸಚಿನ್‌ ತೆಂಡೂಲ್ಕರ್‌ (100) ಮಾತ್ರವೇ ಕೊಹ್ಲಿಗಿಂತಲೂ ಮುಂದಿದ್ದಾರೆ. ಕೊಹ್ಲಿಗೆ 100 ಕ್ಕಿಂತಲೂ ಹೆಚ್ಚು ಶತಕಗಳನ್ನು ಬಾರಿಸುವ ಅತ್ಯುತ್ತಮ ಅವಕಾಶವಿದೆ. ಅಂದಹಾಗೆ ಕೊಹ್ಲಿ ತಮ್ಮ ಕೊನೆಯ ಶತಕ ಬಾರಿಸಿರುವುದು 2019ರಲ್ಲಿ. ಆ ವರ್ಷ ನವೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಮನಮೋಹಕ ಸೆಂಚುರಿ ಬಾರಿಸಿದ್ದರು. ಇದಾದ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಹಾಫ್‌ ಸೆಂಚುರಿ ಬಾರಿಸುತ್ತಿದ್ದಾರಾದರೂ ಶತಕ ದಾಖಲಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾತನಾಡಿರುವ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ, 33 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಕಳಪೆ ಲಯದಲ್ಲಿ ಏನೂ ಇಲ್ಲ. ಏಕೆಂದರೆ ಈಗಲೂ ರನ್‌ ಗಳಿಸುತ್ತಿದ್ದಾರೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ಈ ಮೊದಲು ಇದ್ದ ಖದರ್‌ ಈಗ ಉಳಿದಿಲ್ಲ ಎಂದಿದ್ದಾರೆ. "ವೈಯಕ್ತಿಕ ದೃಷ್ಟಿಕೋನದಿಂದ ಹೇಳುವುದಾದದರೆ, ಆ 50 ರನ್‌ಗಳನ್ನು ನೀವು 100 ರನ್‌ಗಳನ್ನಾಗಿ ಪರಿವರ್ತಿಸಬೇಕು. ಖಂಡಿತಾ ವಿರಾಟ್‌ ತಮ್ಮ ವೃತ್ತಿಬದುಕಿನ ಅತ್ಯಂತ ಕಠಿಣ ಕಾಲಘಟ್ಟದಲ್ಲಿದ್ದಾರೆ. ಅವರ ಬ್ಯಾಟಿಂಗ್‌ ಗಮನಿಸಿದರೆ ರನ್‌ ಗಳಿಸುತ್ತಿದ್ದಾರೆ ನಿಜ, ಆದರೆ ಈ ಹಿಂದೆ ವಿರಾಟ್‌ ಅವರಲ್ಲಿದ್ದ ಖದರ್‌ ಖಾನಿಸುವುದಿಲ್ಲ," ಎಂದು ಆಕಾಶ್‌ ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. "ಅವರಲ್ಲಿ ಆಕ್ರಮಣಕಾರಿ ಆಟ ಕಾಣಿಸುತ್ತಿಲ್ಲ. ಅಲ್ಲಲ್ಲಿ ರನ್‌ ಗಳಿಸುತ್ತಿದ್ದಾರೆ. ಕಳಪೆ ಲಯದಲ್ಲೂ ರನ್‌ ಗಳಿಸುವ ಸಾಮರ್ಥ್ಯ ಶ್ರೇಷ್ಠ ಆಟಗಾರರಿಗೆ ಇದ್ದೇ ಇರುತ್ತದೆ. ಸಚಿನ್‌-ರಾಹುಲ್‌ ಎಲ್ಲರೂ ಇದೇ ಇರೀತಿ ರನ್‌ ಗಳಿಸಿರುವುದನ್ನು ನೋಡಿದ್ದೇವೆ. ಆದರೆ, ವಿರಾಟ್‌ ಆ ರೀತಿ ಆಟ ಆಡುವವರಲ್ಲ. ಅವರು ಅಧಿಕಾರಯುತ ಪ್ರದರ್ಶನ ನೀಡುವ ಬ್ಯಾಟ್ಸ್‌ಮನ್‌. ಸದ್ಯಕ್ಕೆ ಅವರಿಂದ ಇದು ಸಾಧ್ಯವಾಗುತ್ತಿಲ್ಲ ಅಷ್ಟೆ," ಎಂದಿದ್ದಾರೆ. "ಈಗ ತಮ್ಮ ಶೈಲಿಯನ್ನು ತಂಡಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ವಿರಾಟ್‌ ಕೊಹ್ಲಿ ಇದಕ್ಕೆ ಹೊಂದಿಕೊಳ್ಳಬೇಕು. ಅಂದಹಾಗೆ ಕೊಹ್ಲಿ ಮತ್ತು ರೋಹಿತ್‌ ಆಲೋಚನೆ ಸಂಪೂರ್ಣ ವಿಭಿನ್ನ. ತಂಡಕ್ಕಾಗಿ ರನ್‌ ಗಳಿಸಬೇಕು ಅಷ್ಟೇ. ನಾವೆಲ್ಲರೂ ಇದನ್ನೇ ಮಾಡುತ್ತಾ ಬಂದಿದ್ದೇವೆ," ಎಂದಿದ್ದಾರೆ. "55 ಎಸೆತಗಳಲ್ಲಿ 50 ರನ್‌ ಗಳಿಸುತ್ತಿದ್ದರೆ ಪ್ರಯೋಜನವಿಲ್ಲ. ವಿರಾಟ್‌ ಕೊಹ್ಲಿ ದೊಡ್ಡ ಶತಕಗಳನ್ನು ಬಾರಿಸಿ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡಬೇಕು. ಹಿಂದೆ ಇದನ್ನೇ ಮಾಡಿದ್ದಾರೆ. ಆದರೆ ಈಗ ಇದನ್ನು ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಇದು ಅವರೊಬ್ಬರ ಕೆಲಸವಾಗಿ ಉಳಿದಿಲ್ಲ. ಅವರ ಪಾತ್ರ ಈಗ ಬದಲಾಗಿದೆ," ಎಂದು ಹೇಳಿದ್ದಾರೆ. ಭಾರತ ತಂಡ ಫೆಬ್ರವರಿಯಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರು ತಲಾ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನು ಆಡಲಿದೆ. ವಿರಾಟ್‌ ಕೊಹ್ಲಿ ಈ ಸರಣಿಗಳಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಅಡಿಯಲ್ಲಿ ಮೊತ್ತ ಮೊದಲ ಬಾರಿ ಆಡಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/GYuKwOM2m

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...