ಸತತ ಮೂರು ದಿನಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ : ಆಭರಣಪ್ರಿಯರಿಗೆ ಹೆಚ್ಚಿದ ಖುಷಿ

ಬೆಂಗಳೂರು: ಸೆಪ್ಟೆಂಬರ್‌ ತಿಂಗಳ ಆರಂಭದಲ್ಲಿ ಗಗನಮುಖಿಯಾಗಿ ಏರಿದ್ದ , ನಂತರದಲ್ಲಿ ಏರಿಳಿತ ಕಂಡಿದೆ. ಮೂರು ದಿನಗಳಿಂದೀಚೆಗೆ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದೆ. ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಬುಧವಾರ ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆ 34,850ರೂ. ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,100 ರೂಪಾಯಿ ಇದೆ. ನಿನ್ನೆಯ (ಮಂಗಳವಾರದ) ದರಕ್ಕೆ ಹೋಲಿಸಿದರೆ, ಚಿನ್ನದ ದರದಲ್ಲಿ 550 ರೂಪಾಯಿ ಮತ್ತು ಬೆಳ್ಳಿ ಬೆಲೆಯಲ್ಲಿ 400 ರೂಪಾಯಿಯಷ್ಟು ಇಳಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದಿಲ್ಲಿ ಹಾಗೂ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 36,200 ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,100 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, ದಿಲ್ಲಿಯಲ್ಲಿ ಚಿನ್ನದ ದರ 600 ರೂಪಾಯಿ ಕಡಿಮೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ? ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ 10 ಗ್ರಾಂ ಆಭರರಣ ಚಿನ್ನದ ಬೆಲೆ 36,500 ರೂಪಾಯಿ ಮತ್ತು ಬೆಳ್ಳಿ ದರ 48,100 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಚಿನ್ನದ ದರ 540 ರೂಪಾಯಿ ಕಡಿಮೆಯಾಗಿದೆ. ತಮಿಳುನಾಡಿನ ಚೆನ್ನೈನಲ್ಲಿ 35,450 ರೂಪಾಯಿ ಇದ್ದರೆ, ಒಂದು ಕೆ.ಜಿ. ಬೆಳ್ಳಿ ದರ 48,100ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, ಚಿನ್ನದ ದರ 580 ರೂಪಾಯಿ ಕಡಿಮೆಯಾಗಿದೆ. ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೆ, ಬೆಳ್ಳಿ ದರ ಒಂದೇ ರೀತಿಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.


from India & World News in Kannada | VK Polls https://ift.tt/2ooRAIA

ಮಂಗಳೂರಿನಲ್ಲಿದೆ ಏಕೈಕ ಗಾಂಧಿ ದೇವಾಲಯ: ರಾಷ್ಟ್ರಪಿತನಿಗೆ ನಿತ್ಯ ಪೂಜೆ, ಅಹಿಂಸೆಯ ಆರಾಧನೆ

ತನ್ನದೇ ಆದೇಶ ಹಿಂಪಡೆದು ಪರಿಶಿಷ್ಟ ಕಾಯಿದೆಗೆ ಮತ್ತೆ ಬಲ ತುಂಬಿದ ಸುಪ್ರೀಂ

ಬಿಹಾರ ಬಗ್ಗೆ ಪ್ರೀತಿ, ರಾಜ್ಯದ ಅನಾದರ ಆರೋಪ: ಮೋದಿ ಟ್ವೀಟ್‌ಗೆ ಟೀಕೆಗಳ ಪ್ರವಾಹ

ಪ್ಲಾಸ್ಟಿಕ್ ಬಿಟ್ಬಿಡಿ: ಮಹಾತ್ಮಗಾಂಧಿ 150ನೇ ಜಯಂತಿ ಸಂದರ್ಭ ದೇಶಾದ್ಯಂತ ಆಂದೋಲನ

ಉತ್ತರ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಅಭಿಯಾನ ಶುರು

ನಾನು ಗುಳ್ಳೆ ನರಿನೇ, ಅವರು ಹುಲಿ ಸಿಂಹಗಳಾಗಲಿ: ಎಂಟಿಬಿ ನಾಗರಾಜ್‌

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...