ಐಎನ್‌ಎಸ್ ವಿಕ್ರಮಾದಿತ್ಯ ಕಾರವಾರದ ನೌಕಾನೆಲೆ ಪ್ರವೇಶಿಸುವ ವೇಳೆಗೆ ಈ ದುರಂತ ಸಂಭವಿಸಿದೆ. ಲೆಫ್ಟಿನೆಂಟ್ ಕಮೊಡೋರ್ ಡಿ.ಎಸ್ ಚೌಹಾಣ್ ಅವರು ಬೆಂಕಿ ನಂದಿಸುವ ಯತ್ನದಲ್ಲಿದ್ದಾಗ ಭಾರೀ ಹೊಗೆ ಮತ್ತು ಜ್ವಾಲೆಯಿಂದಾಗಿ ಉಸಿರುಗಟ್ಟಿ ಪ್ರಜ್ಞಾಹೀನರಾದರು. ಕೂಡಲೇ ಅವರನ್ನು ಕಾರವಾರದ ನೌಕಾಪಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚೇತರಿಸಿಕೊಳ್ಳಲಿಲ್ಲ ಎಂದು ನೌಕಾಪಡೆ ಪ್ರಕಟಣೆ ತಿಳಿಸಿದೆ.
from India & World News in Kannada | VK Polls http://bit.ly/2DxXThs